UNIVERSAL
LIBRARY
Ne
OU 19871
೬೬11೬೮1]
IVSHAINN
OUP—1700—8-11-77—7,000.
OSMANIA UNIVERSITY LIBRARY
Call No. Kol A Accession Ry d 27 |
Author ಓತ ನ. 6 ೭೮ 50ನಾಸ್ರ) ©)
Title LAOS aie ನಗಿ ಔನ
This book ಕೆ be returned on ೦ before the date last marked
ಮ್ಯುಸೂರು ವಿಶ್ವವಿದ್ಯಾನಿಲಯ ಕವ್ಮಡ ಗ್ರಂಥಮಾಲೆ. ೨೬
ಪ್ರಧಾನ ಸಂಪಾದಕ
ಹೆ. ವಿ. ಪುಟ್ಟಿ ಪ್ರ» ಎಂ.ಎ.
ಭಾರತೀಯ ಕಾವ್ಯನಿಾಮಾಂಸೆ
ತೀ. ನಂ. ಶ್ರೀಕಂಠಯ್ಯ, ಎಂ.ಎ.
ಮೈಸೂರ ಃ
ಮೈಸೂರು ಏಿಶ್ವವಿರ್ಯ್ಯಾ
|
೧೯೫೩
ಎಲ್ಲ ಹೆಕ್ಕುಗಳನ್ನೂ ಕಾದಿರಿಸಿದೆ
ಬೆ೦ಗಳೂರು :
5 ಮುದ್ರಣಾಲಯದ ಡೈರೆಕ್ಟರವರಿಂದ
:ದ್ರಿಸಲ್ಪ ಟ್ಟಿ ತು
111
ಊರ್ಧ್ವೋರ್ಧ್ವಮಾರುಹ್ಯ ಯದರ್ಥತತ್ತ್ಯಂ
ದೀಃ ಪಶ್ಯತಿ ಶ್ರಾಂತಿಮವೇದಯಂತ್ರೀ |
ಫಲಂ ತದಾದೆೈ್ಯ್ಕಃ ಪರಿಕಲ್ಪಿತಾನಾಂ
ವಿಷೇಕಸೋಪಾನಪರಂಪರಾಣ್‌ಂ ॥
(ಅಭಿನವಗುಪ್ತ)
[ಮೇಲುಮೇಲಕ್ಕೇರಿ ಅರ್ಥತತ್ತ್ವವನಿದೋ
ಬಳಲಿಕೆಯನರಿಯದೆಯೆ ಬುದ್ಧಿ ಕಾಣುತಿದೆ !
ಫಲಸಿದ್ದಿಯದು ಮೊದಲ ಸೂರಿಗಳು ನಿರ್ಮಿಸಿದ
ಸುವಿಚಾರಸೋಪಾನ ಸರಣಿಗಳಿಗೆ.]
ಜೇ
ತೇ ತೆ
ಸರಭಸತೆಯಿಂ ಮತ್ತೊಂ೦ದಜ್ಞಾ ನದಿಂದುಚಿತ್ಲೋಕ್ತಿಯೊಳ್
ಪೊರೆಯದಿದು ತಾನಿನ್ನೊ೦ಂದೇನಾನುಮಾದೊಡಮಿಲ್ಲಿ ಮ- ।
ತ್ಸರವಿರಪಿತರ್ ಪೌರೋಭಾಗ್ಯವ್ಯಪೇತಮನಸ್ಕರ_
ಕೃರಿಗರಧಿಕಪ್ರಜ್ಞರ್ ಕಯ್ಕೊ೦ಡು ತಿರ್ದುಗೆ ದೋಪಮಂ೦ |
(ನಾಗರ್ಮ)
೨೧೫೬ ಟರಿ
PPR
vE
'೧೦
೧೧
೧೨
೧೩
೧೪
ವಿಸಯಸೂಚಿಕೆ
ಮುನ್ನುಡಿ
ಅರಿಕೆ
ಸಂಕ್ಷಿಪ್ತಗಳು
ಕೆಲವು ಅಚ್ಚಿನ ತಪ್ಪುಗಳು
ಮೊದಲನೆಯ ಭಾಗ : ಶಾಸ್ತ್ರದ ಬೆಳೆವಳಿಗೆ
ಅವತರಣಿಕೆ
ಭರತನ ನಾಟ್ಯಶಾಸ್ತ್ರ)
ಅಲಂಕಾರ- ರೀತಿ ಪ್ರಸ್ಥಾನಗಳು
ಧ್ವನಿ ಪ್ರಸ್ಥಾನ ಜ್
ಧ್ರನಿವಿರೋಧಿಗಳು, ಅ೦ತರ್ಭಾವ ವಾದಿಗಳು
ಪರಿಷ್ಕಾರ ಯುಗೆ
ವಿಶೇಷ ವಿಚಾರ
ಎರಡನೆಯ ಭಾಗ: ಕವಿ-ಕಾವ್ಯ-ಸಹೃ ದಯ
ವಿಷಯ ಪ್ರವೇಶ
ಕಾವ್ಯ ಲಕ್ಷಣಗಳು /
ಕವಿತೆಯ ಅಕರ `/ ಆ
ಕವಿತೆಯ ಪರಿಕರಗಳು
ಕವಿಸೃಪ್ಟಿ
ಸಹೈದಯ '
ಕಾವ್ಯಪ್ರಯೋಜನ 3,
ಮೂರನೆಯ ಭಾಗ: ರಸ-ಧ್ಯನಿ
ಶಬ್ದ ಅರ್ಥ
ಧ್ಯನಿಪ್ರಭೇದಗಳು 1.4
ವ್ಯ೦ಜಕಸಾಮಗ್ರಿ
ಗುಣೀಭೂತವ್ಯಂಗ್ಯ, ಚಿತ್ರ
ವ್ಯ೦ಜನಾ ಎಚಾರ
ಭಾವ, ವಿಭಾವ, ಅನುಭಾ್
eee
vil
Xi
XIX
XX
೧೦೯
೧೨೧
೧೩.೨
೧೪೫
೧೬೫.
೧೮೧
೧೯೯
೨೦ಒ.
೨೨೧
೨೪೪
೨೬೪
೨೮೪
೨೯೫
೩೧೫
{9
[6
೨೪
೨೫
vi
ರಸಾನುಭವ_೧
ರಸಾನುಭವ-.೨
ರೆಸಪ್ರಭೇದಗಳು
ಶಾಂತರಸ
ಔಚಿತ್ಯ
1.
ಪರಿಶಿಷ್ಟ
ಕನ್ನಡದಲ್ಲಿ ಕಾವ್ಯಲಕ್ಕಣಗ್ರಂಥಗಳು
ಲಾಕ್ಷಣಿಕರು ಮತ್ತು ಲಕ್ಷಣಗ್ರ೦ಥಗಳು
ಉಪಯುಕ್ತ ಲೇಖನಾವಳಿ
೪೭೭
೪೭೭
೪೮೨
ಮುನ್ನುಡಿ
ಕನ್ನಡ ಸಾಪಿತ್ಯನವೋದೆಯ ತನ್ನ ಹಲವು ಶಾಖೆಗಳಲ್ಲ ಚಿಗುರಿ ಬೆಳೆದು
ಮುಂಬರಿಯುತ್ತಿದೆ. ಆದರೆ, ಕಾವ್ಯಮೀಮಾಂಸೆಯ ಮತ್ತು ಸಾಹಿತ್ಯವಿಮರ್ಶೆಯೆ
ಶಾಖೆಗಳು ಅಲ್ಲಲ್ಲಿ ಕಣ್ಣಿ ಡೆದಂತೆ ತೋರಿದರೂ ಒಟಿ ನಲ್ಲಿ ಬರಲು ಬರಲಾಗಿಯೆ
ತೋರುತ್ತಿವೆ. ಅಖೆರಲ್ಲ ಯೂ ಸಾಹಿತ್ಯ ವಿಮರ್ಶೆಯ ಭಾಗಕ್ಕಿಂತಲೂ ಕಾವ್ಯ
ಮಾಮಾಂಸೆಯ ಭಾಗ ತುಂಬ ರಿತ್ತಸಿ ಯಲ್ಲಿದೆ.
ಸಾಹಿತ್ಯವಿಮರ್ಶೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು:
ಒಂದು, ಸಂಶೋಧನಾತ್ಮಕ ; ಎರಡು, ವರ್ಣನಾತ್ಮಕ ; ಮೂರು,” ದರ್ಶನಾತ್ಮಕ.
ಸ೦ಶೋಧನಾತ್ಮಕವಾದ ವಿಮರ್ಶೆ ಕನಿಯ ಕಾಲ ದೇಶ ಮತ ಇತ್ಯಾದಿ ರೂಪ
ವಾದದ್ದು ನಮ್ಮಲ್ಲಿ ತಕ್ಕಮಟ್ಟಿಗೆ ವಿಪುಲವಾಗಿಯೆ ಜೆಳೆದಿದೆಯೆಂದು .ಹೇಳಬಹುದು.
ಅ ತೆರನ ವಿಮರ್ಶೆಗೆ ಎಪ್ಪೆರಮಟ್ಟಿನ ಮನ್ಮಣಿಯಿದೆಯೆಂದರೆ ಅನೇಕರ. ಮನಸ್ಸಿನಲ್ಲಿ
ವಿದ್ವತ್ತಿನ ಮೂಲಟೂಲಗಳೆರಡೂ ಅಪ್ಪ ರಲ್ಲಿಯ ಐಕ್ಯವಾಗಿಷೆಯೆಂಬ ಭಾವನೆಗೂ
ಎಡೆಗೊಟ್ಟಿದೆ. ಎರಡನೆಯದಾದ ವರ್ಣನಾತ್ಮಕ ವಿಮರ್ಶೆ ಗಾತ್ರದಲ್ಲಾಗಲಿ
ಗೌರವದಲ್ಲಾಗಲಿ ಸಂಶೋಧನಾತ್ಮಕ ವಿಮರ್ಶೆಯ ಮುಂದೆ: ಕಲೆತಗ್ಗಿಸಿಯೆ
ನಿಂತುಕೊಂಡಂತಿದೆ. ಅದರೂ ನಮ್ಮ ಕವಿಕೃತಿಗಳ ಸ್ವಾರಸ್ಯ ಈ ವರ್ಣನಾತ್ಮಕ
ವಾದ ಸಾಪಿತ್ಯವಿಮರ್ಶೆಯ ಸಹಾಯದಿಂದಲೆ ಅನೇಕ ಸಹೃದಯರಿಗೆ ಆಸ್ಟಾದ್ಯ
ವಾಗಿದೆ. ಮೂರನೆಯದಾದ ದರ್ಶನಾತ್ಮಕವಿಮರ್ಶೆ ನಮ್ಮಲ್ಲಿ ಅತ್ಯಂತ ಅಪೂರ್ವ
ವಾದುದು. ವರ್ಣನಾತ್ಮಕವಾದ ಉತ್ತಮ ಸಾಹಿತ್ಯವಿಮರ್ಶೆಯಲ್ಲಿ ಈ ದರ್ಶನಾತ್ಮ
ಕತೆ ಸ್ವಲ್ಪಸ್ವಲ್ಪವಾಗಿ ಪ್ರಕಟವಾಗಿರುವುದನ್ನು ನಾವು ಅಲ್ಲಲ್ಲಿ ಕಾಣುತ್ತೇವೆ.
"ಅಲ್ಲದೆ, ಈ ದರ್ಶನಾತ್ಮಕತೆ ಎಪ್ಟರಮಟ್ಟಿಗೆ ಯಾವ ಪ್ರಮಾಣದಲ್ಲಿ ಗೋಚರವಾಗು
ತ್ತದೆಯೊ ಅಪ್ಪರಮಟ್ಟಿ ಗೆ ಅಪ ತ್ರ ಮಾಣದಲ್ಲಿ ವರ್ಣನಾತ್ಯ ಕವಿಮರ್ಶಯೂ ಉತ್ತಮ
ವರ್ಗಕ್ಕೆ ಸೇರುತ್ತದೆ. ಹಾಗಲ್ಲದೆ ಬರಿಯ ವರ್ಣನಾತ್ಮಕ ಮಾತ್ರವಾಗಿದ್ದರೆ ಅದು
ತುಂಬ ಸಾಧಾರಣವಾದ ಪತ್ರಿಕೆಯ ಪುಸ್ತಕಪರಿಚಯದ ಮಟ್ಟಕ್ಕೂ ಇಳಿದುಬಡ
ಬಹುದು. ಅಂತೂ ಈ ದರ್ಶನಾತ್ಮಕವಾದ ಸಾಪಿತ್ಯವಿಮರ್ಶೆ ದೆಳೆಯಬೇಕಾದರೆ
-ವಿಮರ್ಶಕರಲ್ಲಿಯೂ ಸಹೃದಯರಲ್ಲಿಯೂ ಒಂದು ತಾತ್ಲ್ಯಿಕವಾದ ಕಾವೃಮಾಮಾಂ
ಸೆಯ ಜ್ಞಾನವೂ ಬೆಳೆದಿರಲೇಬೇಕಾಗುತ್ತದೆ. ಎ೦ದರೆ ಉತ್ತಮವಾದ ಸಾಹಿತ್ಯ
ವಿಮರ್ಶೆಗೆ ಕಾವ್ಯಮಾಮಾಂಸೆಯ ಅವಶ್ಯಕತೆ ಅನಿವಾರ್ಯ. ಕಾವ್ಯಮಾಮಾಂಸೆ
ಬೆಳೆಯದೆ ಅದರ ಪ್ರಾಯೋಗಿಕರೂಪವಾದ ಉತ್ತಮ ಸಾಪಿತ್ಯವಿಮರ್ಶೆ ಬೆಳೆಹುಲು
ಸಾಧ್ಯವಿಲ್ಲ,
೪11
viii
ಪಾಶ್ಚಾತ್ಯದ ಸಂಪರ್ಕದಿಂದ ನಮ್ಮ ಸಾಹಿತ್ಯಸೃಷ್ಟಿ ಹೊಸಹೊಸ ಹಾದಿಗಳಲ್ಲಿ"
ಹೊಸಹೊಸ ಹೆಜ್ಜೆಗಳನ್ನಿಟ್ಟು ನಡೆದುಬರುತ್ತಿದೆ. ಎಂದರೆ, ಆ ಸಾಹಿತ್ಯದ ಪರಿ:
ಣಾಮದಿ೦ದ ನಮ್ಮ ದೃಷ್ಟಿ ಪರಿವರ್ತಿತವಾಗಿ ಅದಕ್ಕೆ ಅನುಗುಣವಾದ ಸೃಷ್ಟಿಗೆ ಎಡೆ
ಕೊಟ್ಟಂತೆ ಪಾಶ್ಚಾತ್ಯದ ಕಾವ್ಯಮಾಮಾಂಸೆ ಮತ್ತು ಸಾಪಿ ತ್ಯವಿಮರ್ಶೆ-- ಇವುಗಳ
ಅಧ್ಯಯನದ ಪರಿಣಾಮವಾಗಿ ನಮ್ಮಲ್ಲಿ ಒಲದು ಹೊಸ ಸೃಷ್ಟಿ ಬರದೆೇಕಾದುದು
ಸಹಜ. ಅಂತಹ ದೃಷ್ಟಿ ಸೃಲ್ಪಮಟ್ಟಿಗಾದರೂ ಬಂದಿದೆ ಎಂದ. ಹೇಳಬಹುದು. ಅದರೆ,
ಸಾಪಿತ್ಯಸೃಷ್ಟಿ ಯಾವ ಪ್ರಮಾಣದಲ್ಲಿ ಎಷ್ಟು ವಿವಿಧವಾಗಿ ಮೈದೋರಿ ನಮ್ಮ
ಗಮನದಮೇಲೆ ಪರಿಣಾಮಕಾರಿಯಾಗಿದೆಯೋ ಅಪ್ಪರಮಟ್ಟಿಗೆ ಪರಿಣಾಮಕಾರಿ
ಯಾಗಿಲ್ಲ ಕಾವ್ಯಮಾಮಾಂಸೆ ಮತ್ತು ಸಾಹಿತ್ಯವಿಮರ್ಶೆಯ ಪ್ರಭಾವ ಹಾಗಾಗುವ
ಕಾಲ ಈಗ ಸನ್ನಿಹಿತವಾಗಿದೆ. ಪ್ರೊ॥ ತೀ. ನಂ. ಶ್ರೀಕ೦ಠಯ್ಯನವರ " ಭಾರತೀಯ
ಕಾವ್ಯಮಾಮಾಂಸೆ' ಎಂಬ ಈ ವಿದಗ್ಧ ಕೃತಿ ಆ ನವವಿಧಾನದ ಪ್ರಾರಂಭ್ಲೋತ್ಸವದ
ಪ್ರತೀಕವಾಗಿದೆ,
ಪಾಶ್ಚಾತ್ಯರಲ್ಲಿ ಕವಿಕಾವ್ಯಸ್ವರೂಪಜಿಜ್ಞಾಸೆಯ ಜೊತೆಜೊತೆಗೆ ಅದರ
ಪ್ರಾಯೋಗಿಕರಂಗೆರೂಪವಾದ ಸಾಹಿತ್ಯವಿವರ್ಶೆ ಯಥೇಚ್ಛ ವಾಗಿ ಬೆಳೆದಿರುವುದನ್ನು
ಕಾಣುತ್ತೇವೆ. ನಮ್ಮಲ್ಲಿ ಅಲಂಕಾರಶಾಸ್ತ್ರ) ಛಂದಶ್ಶಾಸ್ತ್ಮಾದಿಗಳನ್ನೊಳಗೊ೦ಡ:
ಶಾವ್ಯಮಾಮಾಂಸೆ ವಿಸ್ಮಯಕಾರಿಯಾದ ಪ್ರಮಾಣದಲ್ಲಿ ವಿಶದವಾಗಿ ವಿವರವಾಗಿ.
ದೆಳೆದುಬಂದಿದ್ದ ಡೊ ಅದರ ಪ್ರಯೋಗಾಂಗ--ವೃತ್ತಿವ್ಯಾಖ್ಯಾನಗಳ ರೂಪದಲ್ಲಿ
ಒಂದಿನಿತು ಪ್ರಕಟವಾಗಿರುವುದನ್ನು ಒಪ್ಪಿ ಕೊಂಡರೂ-ಅತ್ಯ೦ತ ಕೃಶಸ್ಥಿತಿಯಲ್ಲರು
ವುದು ಕಂಡುಬರುತ್ತದೆ, ಈ ಕೃಶಾಂಗವನ್ನು ಸುಪುಪ್ಪಗೊಳಿಸದೇಕಾದುದು
ಮ್ಮ ಮುಂದಣ ಕರ್ತವ್ಯ. ಆ ಕೆಲಸದಲ್ಲಿ ಭಾರತೀಯ ಕಾವ್ಯಮಾಮಾಂಸೆ ನಮ್ಮ
ರಸಚೀತನದ ಗುಡಿಗೆ ಅಡಿಗಲ್ಲಾಗಿ ನಿಲ್ಲಬೇಕಾಗುತ್ತದೆ. ಏಕೆಂದರೆ ಭಾರತೀಯ
ಕಾವ್ಯಮಾಮಾಂಸೆಯ.ಕವಿ, ಸಹೃದಯ, ಕಾವ್ಯಸ್ಟರೂಪ, ಉದ್ದೇಶ, ಪ್ರಯೋಜನ,
ಅಲಂಕಾರ, ರೀತಿ, ಧ್ವನಿ, ರಸ ಇತ್ಯಾದಿಗಳ-ಕೂಲಂಕಷವೂ ಹೃದಯಸ್ಪರ್ಶಿಯೂ
ಅದ ಪರಿಚಯವಿಲ್ಲದೆ ನಮ್ಮ ಮುಂದಣ ಉತ್ತಮ ಕಾವೃವಿಮರ್ಶೆ ಸಂಭವಿಸ
ಲಾರದು. ಸಾಹಿತ್ಯಸೃಪ್ಪಿಯಲ್ಲಿ ಹೇಗೊ ವಿಮರ್ಶದೃಷ್ಟಿಯಲ್ಲಿಯೂ ಹಾಗೆಯೆ
ಪಾಶ್ಚಾತ್ಯದ ಅ೦ಧಾನುಕರಣವಾಗಲಿ ಭಾರತೀಯತೆಯ ಅಂಧಾನುಸರಣವಾಗೆಲಿ
ಉತ್ತಮ ಸೃಷ್ಟಿಗೆ ಕಾರಣವಾಗದು. ಎಂದ ಮೇಲೆ ಕನ್ನಡದ ಕಾವ್ಯವಿಮರ್ಶೆ
ಸಮನ್ವಯರೂಪವಾದ ಒಂದು ನವವಿಧಾನವನ್ನು ಅನುಸರಿಸಿ ತನ್ನ ಪೈೊಶಿಷ್ಟೆ
ವನ್ನು ಸ್ಥಾಪಿಸುವುದರ ಮೂಲಕ ಲೋಕದ ಕಾವ್ಯವಿಮರ್ಶೆಗೂ ತನ್ನ ಸಾಣಿಕೆ
ಯನ್ನು ಸಲ್ಲಿಸಬೇಕಾಗಿದೆ.
ಇದುವರೆಗೆ ಕನ್ನಡ ಸಾಹಿತ್ಯದಲ್ಲಿ ಮೂಡಿರುವ ಕಾವ್ಯಮಾವಣಂಕೆ ಏನಿವ್ವರೂ
ಆಸೆಲ್ಲ ಸಂಸ್ಕೃತದ ಪಡಿನೆಳಲಂತಿದೆ ಮುಂದೆ ಬರುವ ಕಾವೃಮಾಮಾಂಸೆ'
ix
ಮತ್ತು ಸಾಹಿತ್ಯನಿಮರ್ಶೆ ಪಾಶ್ಚಾತ್ಯದ ಪಡಿನೆಳಲಾದರೆ ಅದಕ್ಕಿಂತಲೂ ಆಪಾಯ
ಕರವಾಗುತ್ತ ದೆ, ಏಕೆಂದರೆ ತನ್ನತನವನ್ನೆ ಕಳೆದುಕೊಳ್ಳುವ ಸೆಂಥವವಿರುವುದರಿಂದ,
ನಮ್ಮ ಮುಂದಿನ ಕಾವ್ಯಮಾಮಾಸೆ ಮತ್ತು ಸಾಹಿತ್ಯವಿಮರ್ಶೆಗಳು ಪಾಶ್ಚಾತ್ಯ
ಮತ್ತು ಭಾರತೀಯ ಕಾವ್ಯಮಾಮಾಂಸೆಗಳಿಂದ ಮಾತ್ರವಲ್ಲದೆ ತತ್ತ ಟಶಾಸ್ಟ್ರ.
ಯೋಗವಿಜ್ಞಾನ, ಸೌಂದರ್ಯಮಾಮಾಂಸೆ ಮತ್ತು ಮನಶ್ಶಾಸ್ತ ಇವುಗಳಿಂದಲೂ
ಬೆಳಕು ಪಡೆದು ಧೀರವಾಗಿ ಸ್ವತಂತ್ರವಾಗಿ ಪೂರ್ಣದೃಷ್ಟಿಯ ಕಡೆಗೆ ಮುನ್ನಡೆಯ
ಬೇಕಾಗುತ್ತದೆ. ಬಹುಶಃ ಆ ಹೊಸ ಬೆಳಕಿನಲ್ಲ ಹಳೆಯ ತತ್ತ್ವಗಳು ತಮ್ಮ
ನಿಗೂಢರಹಸ್ಯಗಳನ್ನೆಲ್ಲ ಬಿಚ್ಚಿ ಕೊಟ್ಟು ನಮ್ಮನ್ನು ಹೊಸಹೊಸ ರಸಾನುಧವಗಳಿಗೂ
ಹೊಸಹೊಸ ತುಪ್ಪಿ ಪುಷ್ಪಿಗಳಿಗೂ ಕೊಂಡೆ ಇಯ್ಯಬಹುದು.
ಮುಂಬರಲಿರುವ ಕನ್ನಡದ ಕಾವ್ಯಮಾಮಾಂಸೆಯ ಮತ್ತು ಸಾಸಿತ್ಯ
ವಿಮರ್ಶೆಯ ಸಾಹಸಕ್ಕೆ ಶ್ರೀರ್ಮಾ ಶ್ರೀಕಂಠಯ್ಯನವರು ಸುಸಮರ್ಥವೂ ಮಾರ್ಗ
ದರ್ಶಕವೂ ಆಗಿರುವ ಒಂದು ಆಚಾರ್ಯಕೃತಿಯನ್ನು ಒದಗಿಸಿದ್ದಾರೆ, ಈ "ಭಾರತೀಯ
ಕಾವ್ಯಮಾಮಾಂಸೆ'ಯಲ್ಲಿ. ಅ ನವೋದ್ಯಮದಲ್ಲಿ ಇದಕ್ಕೆ ಪೂರಕವಾಗಿರುವಂತೆ
" ಪಾಶ್ಚಾತ್ಯ ಕಾವ್ಯಮಾಮಾಂಸೆ' ಎಂಬ ಗ್ರಂಥದ ಸಿದ್ಧತೆಗೂ ಮೈಸೂರು
ವಿಶ್ವವಿದ್ಯಾನಿಲಯವು ಪ್ರಯತ್ನಮಾಡುತ್ತಿದೆ. ಆ ಪ್ರಯತ್ನ ದೇಗ ಸಪಲವಾಗಿ
ಎರಡೂ ದೃಷ್ಟಿಗಳ ಸಮನ್ಯಯದಿಂದ ಹೊಸ ಸೃಷ್ಟಿಗೆ ಅವಕಾಶ ಒದಗಿ ಕನ್ನಡ:
ಕಾವ್ಯಮಾಮಾಂಪೆ ಮತ್ತು ಸಾಹಿತ್ಯವಿಮರ್ಶೆ ಬೆಳೆದು ಯಶಸ್ಪಿಯಾಗಲೆ೦ದು
ಹಾರ್ಕೆಸುತ್ತೇವೆ.
ಮೈಸೂರು,
3 ಳೆ. ವಿ. ಪುಟ್ಟಪ್ಪ.
ತಾ॥ ೧೬-೧-೧೯೫೩.
ಅರಿಕೆ
ಇಂಥದೊಂದು ಪುಸ್ತಕವನ್ನು ಬರೆಯಬೇಕೆಂದು ನನ್ನನ್ನು ಪ್ರೇರಿಸಿ
ವೇಮಿಸಿ, ನನ್ನ ದೀರ್ಪವಿಲಂಬದಿ೦ದ ಬೇಸರಗೊಳ್ಳದೆ ಉದ್ದಕ್ಕೂ ಉತ್ತೇ
ಜನಕೊಟ್ಟಪರು ನನ್ನ ಪೂಜ್ಯಗುರುಗಳೂ ಮೈಸೂರು ವಿಶ್ವವಿದ್ಯಾನಿಲಯದ
ಕನ್ನಡ ಪ್ರಕಟನ ಸಮಿತಿಯ ಮೊದಲನೆಯ ಅಧಕ್ಷರೂ ಆಗಿದ್ದ ಆಚಾರ್ಯ
ಬಿ. ಎಂ. ಶ್ರೀಕಂಠಯ್ಯನವರು. ಇದಕೆ ಬೇಕಾದ ಪೂರ್ವಸಿದ್ಧತೆ
ಯನ್ನೂ ವಿಷಯ ಸಂಪತ್ತನ್ನೂ ನಾನು ತಕ್ಕಮಟ್ಟಿಗೆ ಒದಗಿಸಿಕೊಂಡು
ಗ್ರಂಥವನ್ನು ಬರೆದು ಮುಗಿಸಲು ಅನೇಕವರ್ಷ'ಗಳು ಪಡಿದುವು. ಅಂತೂ
ಪುಸ್ತಕದ ಹಸ್ತ ಪ್ರತಿಯನ್ನು ಪ್ರೇರಕಗುರುಗಳ ಕೈಸೇರಿಸಲು ೧೯೪೨ನೆಯ
ಜನವರಿ ತಿಂಗಳಲ್ಲಿ ಸಾಧ್ಯವಾಯಿತು ; ಅವಕಾಶಮಾಡಿಕೊಂಡು ಅವರು
ಗ್ರಂಥವನ್ನು ಅವಲೋಕಿಸಿ ಉಪಯುಕ್ತವಾದ ಸಲಹೆಗಳನ್ನೂ ಕೊಟ್ಟರು.
ಆದರೆ ಆ ಹೇಳೆಗಾಗಲೆ ಎರಡನೆಯ ಮಹಾಯುದ್ಧವು ತಾನೇ ತಾನಾಗಿ
ವಿಜೃಂಭಿಸಿತ್ತು ; ಅದರ ಕರಾಳಚ್ಛಾಯೆ ನಮ್ಮ ನಾಡನ್ನೂ ಚೆನ್ನಾಗಿಯೇ
ಮುಸುಕಿತ್ತು. ಯುದ್ಧೋದ್ಯಮವೊಂದು ಹೊರತು ಜೇರೆ ಯಾವುದಕ್ಕೂ
ಪುರಸ್ಕಾರನಿಲ್ಲದ ಆ ದುರ್ದಿನ ಪರಂಪರೆಯಲ್ಲಿ ಪುಸ್ತಕವು ಅಚ್ಚಿನ ಮನೆ
ಯನ್ನು ಕಾಣುವುದಕ್ಕೇ ಶ್ರಮವಾಯಿತು. ಆ ಬಳಿಕವಂತೂ ತುಂಬ ತಡ,
ತೊಡಕು. ರಾಷ್ಟ್ರದ ಉಪೆಪ್ಪವವು ಗ್ರಂಥ ವಿನಾಶದ ಕಾರಣಗಳಲ್ಲಿ
ಒಂದೆಂಬ ರಾಜಶೇಖರನ ಉಕ್ತಿ ಜ್ಞಾಪಕಕ್ಕೆ ಬಂದಿತು ; ಅನುಭವಕ್ಕೂ
ಬರುವುದೋ ಏನೋ ಎಂಬ ಭಯವೂ ಒಮ್ಮೊಮ್ಮೆ ಸುಳಿಯದೆ ಇರಲಿಲ್ಲ.
ಸಂಬಂಧಪಟ ವರೆಲ್ಳರ ಕೈಮಾರಿದ ಹಲವುಕಾರಣಗಳಿಂದ, ಮಹಾ
ಯುದ್ಧ ವು ಮುಗಿದ ಮೇಲೆ ಕೂಡ, ಇದರ ಮುದ್ರಣವು ಮುಗಿಯಲು
ಹಲವು ವರ್ಷಗಳು ಸಂದುವು. ಹೇಗಾದರೂ ಈ ಅತಿದೀರ್ಫುವಾದ
ಗರ್ಭವಾಸ ಕೊನೆಗೊಂಡು ಗ್ರಂಥವು ಬೆಳಕನ್ನು ಕಾಣುವ ವೇಳೆ
ಒದಗಿತೆಂದು ಮನಸ್ಸು ಸಮಾಧಾನಗೊಳ್ಳಬೇಕಾಗಿದೆ.
ಈ ರಚನೆ ಇಪಷ್ಟುಮಚ್ಛಿಗಾದರೂ ರೂಪುಗೊಳ್ಳುವುದಕ್ಕೆ ನನ್ನ
ಪೂಜ್ಯಗುರುಗಳಾದ ಆಚಾರ್ಯ ಎಂ. ಹಿರಿಯಣ್ಣನವರ ಆಶೀರ್ವಾದವೂ
xi
೫11
ಉಪದೇಶವೂ ಮುಖ್ಯಕಾರಣ. ರಸಧ್ಯನಿತತ್ತ ವನ್ನು ನಾನು ಮೊದಲ.
ಬಾರಿ ಕೇಳಿದ್ದು ಅವರ ಮುಖದಿಂದ. ಕಾಲೇಜಿನ ವಿದ್ಯಾರ್ಥಿಯಾಗಿರು
ವಾಗ « ಕಾವ್ಯಪ್ರಕಾಶ 'ದ ಹಲವು "" ಉಲ್ಲಾಸ'' ಗಳನ್ನು ಅವರ ಬಳಿ:
ಓದುವ ಅವಕಾಶ ನನಗೆ ದೊರೆಯಿತು. ಮುಂದೆ, ನಾನು ಈ ಗ್ರಂಥ
ರಚನೆಯ ಕಾರ್ಯವನ್ನು ಒಪ್ಪಿಕೊಂಡ ವಿಷಯವನ್ನು ಅವರಿಗೆ ಶ್ರುತಪಡಿಸಿ,
ಅದಕ್ಕೆ ಕೈಹಾಕಲು ಧೈರ್ಯ ಬರುವಂತೆ ನನಗೆ " ಧ್ವನ್ಯಾಲೋಕ ' ವನ್ನು
ಪಾಠಹೇಳದೇಕೆಂದು ಕೇಳಿಕೊಂಡೆ. ಪ್ರಾಧ್ಯಾಪಕ ವೃತ್ತಿಯಿಂದ ವಿಶ್ರಾಂತಿ
ಪಡೆದು, ಲೇಖನಕಾರ್ಯಕ್ಕೆ ತಮ್ಮ ವಿಖಾಮಕಾಲವನ್ನು ಮಾನಲಾಗಿಟ್ಟಿದ್ದ
ಈ ಪಿರಿಯ ಗುರುಗಳು ಶಿಪ್ಯವಾತೃಲ್ಯದಿಂದ ಪ್ರವಚನಭಾರವನ್ನು ಮತ್ತೆ
ಅಂಗೀಕರಿಸಿದರು. ಅವರ ಪಾದಸಮಾಪದಲ್ಲ ಮತ್ತೆ ಒಂದೂವರೆ
ವರ್ಷಕಾಲ ಕುಳಿತು ಅವರ ಉಕ್ತಿ ಯನ್ನು ಆಲಿಸುತ್ತಾ, ಕಾವ್ಯರಹಸ್ಯವನ್ನೂ
ಶಾಸ್ತ್ರಸಮಸ್ಯೆಯನ್ನೂ ಅರ್ಥಮಾಡಿಕೊಳ್ಳುತ್ತಾ, ಅವರ ಪರಿಣತ
ಪ್ರಜ್ಞೆಯ ಬೆಳಕಿನಲ್ಲಿ ಸಂಶಯಗಳನ್ನು ಪರಿಹರಿಸಿಕೊಳ್ಳುತ್ತಾ ನಾನು ಪಡೆದ
ಅನುಭವ ಅನಿರ್ವಚನೀಯ. ಗುರುಕೃಪೆ ಇಷ್ಟಕ್ಕೇ ನಿಲ್ಲಲಿಲ್ಲ. ಗ್ರಂಥದ
ಬರೆವಣಿಗೆ ಮುಗಿದ ಮೇಲೆ, ಇದರ ಅನೇಕ ಅಧ್ಯಾಯಗಳನ್ನು (ಎಂದರೆ
೧-೭, ೧೫, ೧೯, ೨೧, ೨೨ ಇವನ್ನು ) ಅವರು ಸಮಗ್ರವಾಗಿ ಓದಿ,
ನ್ಯೂನತೆಗಳನ್ನು ತಮ್ಮ ಸೌಜನ್ಯಮಯವಾದ ರೀತಿಯಲ್ಲ ನನಗೆ ತಿಳಿಸಿ
ತಿದ್ದಿಸಿ ಪರಮೋಪಕಾರಮಾಡಿದರು. ಅಚ್ಚಾದ ಪುಸ್ತಕವನ್ನು ಅವರ
ಕೈಯಲ್ಲಿಟ್ಟು ತೃಪ್ತಿಗೊಳ್ಳುವ ಭಾಗ್ಯ ಮಾತ್ರ ನನಗೆ ಇಲ್ಲವಾಯಿತು |
" ಭಾರತೀಯ ಕಾವ್ಯಮಾಮಾಂಸೆ ' ಎಂದು ಈ ಗ್ರಂಥಕ್ಕೆ ಹೆಸ
ರಿಟ್ಟದ್ದರೂ ಸಂಸ್ಕೃತಭಾಷೆಯಲ್ಲಿರುವ ಕಾವ್ಯಲಕ್ಷಣಗ್ರ೦ಥಗಳನ್ನೇ
ಪ್ರಧಾನವಾಗಿ ಅವಲಂಬಿನಿ ಇದನ್ನು ಬರೆಯಲಾಗಿದೆ ; ಕನ್ನಡದಲ್ಲಿ
ದೊರೆಯುವ ಲಕ್ಷಣಗ್ರಂಥಗಳನ್ನು ಕುರಿತ ಒಂದು ಆಧ್ಯಾಯ ಇದಕ್ಕೆ
ಪರಿಶಿಪ್ಟವಾಗಿ ಬಂದಿದೆ. ಭರತಖಂಡದ ಮಿಕ್ಕ ಭಾಷೆಗಳಲ್ಲ ಈ ಶಾಸ್ತ್ರ
ಹೇಗೆ ಬೆಳೆಯಿತು ಯಾವ ರೂಪ ತಾಳಿತು ಎಂಬುದನ್ನು ವ್ಯಾಸಂಗ
ಮಾಡಿ ನಿರೂಪಿಸಲು ನನಗೆ ಶಕ್ಯವಾಗಲಲ್ಲ... ಆದರೂ ಕೆಲವು
ವಿವರಗಳಲ್ಲೂ ವಿಶೇಪಾಂತಗಳಲ್ಲೂ ಭೇದವಿರಬಹುದೇ ಹೊರತು, ನಮ್ಮ
ಎಲ್ಲ ದೇಶಭಾಷೆಗಳಿಗೂ ಕನ್ನಡಕ್ಕೆ ಹೇಗೋ ಹಾಗೆಯೇ-ಸಂಸ್ಕೃತವೇ
೫1]
ಮೂಲವಸ್ತುವನ್ಮೂ ರೂಪರೇಖೆಗಳನ್ನೂ ಒದಗಿಸಿದೆಯೆಂದು ನಂಬ
ಬಹುದು. ಆ ಮಟ್ಟಿಗಾದರೂ ಸಂಸ್ಕ ೃತಗ್ರಂಥಗಳಲ್ಲ ಕಾಣಬರುವ ಕಾವ್ಯ
ಮಾಮಾಂಸೆ ನಿಸ್ಸಂದೇಹವಾಗಿ ಭಾರತೀಯ ಕಾವ್ಯಮಾಮಾಂಸೆಯೇ
ಆಗುತ್ತದೆ.
ಸಂಸ್ಕೃತದಲ್ಲಿ ದೊರೆಯುವ ಸಾಮಗ್ರಿಯೆಲ್ಲವನ್ನೂ ಇಲ್ಲ ಸಂಗ್ರಪಿ
ಸಿಲ್ಲ. ನಮ್ಮ ಕಾವ್ಯಮಾಮಾಂಸೆಯ ತಿರುಳೆಲ್ಲ ರಸ_ಧ್ಯನಿ-ಔಚಿತ್ಯ ಎಂಬ
ಮಾತುಗಳಲ್ಲಿ ಅಡಗಿದೆ. ಈ ತತ್ತ್ವಗಳು ತೌಲನಿಕ ಕಾವ್ಯಮಾಮಾಂಸಾ
ಶಾಸ್ತ್ರಕ್ಕೆ ( Comparative Poetics ) ಭರತಖಂಡದ ಕಾಣಿಕೆ.
ನಾನು ಗ್ರಂಥ ಬರೆದ ಕಾಲದಲ್ಲ ಇವುಗಳ ಸಾರವನ್ನು ತಕ್ಷಮಚಟ್ಟಿಗೆ ವಿಸ್ತಾ
ರವಾಗಿ ಪ್ರತಿಪಾದಿಸುವ ಯಾವ ಆಧುನಿಕಗ್ರಂಥವೂ ಕನ್ನಡದಲ್ಲ ಇರಲಿಲ್ಲ.
ಆದಕಾರಣ ಪುಸ್ತಕದ ಬಹುಭಾಗವನ್ನು ಇವುಗಳ ವಿಷಯಕ್ಕೆ € ವಿನಿಯೋಗಿ
ಸಜೇಕೆಂದು ನಿರ್ಧರಮಾಡಿದೆನು ; ಅಲಂಕಾರ, ಗುಣ, ಡೋಪ,
ರೀತಿ ಮಾರ್ಗ ಮೊದಲಾದವುಗಳ ವಿಚಾರವನ್ನು " ಶಾಸ್ತ್ರದ ಬೆಳೆವ
ಳಿಗೆ ' ಯ ಭಾಗದಲ್ಲಿ ಸಂಗ್ರಹವಾಗಿ ಎತ್ತಿದಷ್ಟಕ್ಕೇ ತೃಪ್ತನಾದೆನು ;
ವಿಸ್ತರಣ್, ವಿವರಣಿ ಯಾವುದಕ್ಕೂ ಕೈಹಾಕಲಲ್ಲ. ಕಾವ್ಯ ಪ್ರಭೇದಗಳು,
ನಾಟಕಲಕ್ಷಣ, ಕಥಾವಸ್ತುವಿನ ಮತ್ತು ಪಾತ್ರಗಳ ವಿವೇಚನೆ, ಕವಿ
ಸಮಯ-ಈ ಮೊದಲಾದ ವಿಭಾಗಗಳ ಪ್ರತಿಪಾದನೆಗೆ ಕೂಡ ಇಲ್ಲ ಅವ
ಕಾಶ ಮಾಡಿಕೊಳ್ಳಲು ಮನಸ್ಸಿದ್ದರೂ ಆಗಲಿಲ್ಲ. ಪುಸ್ತಕವು ಈಗಲೇ
ನಿರೀಕ್ಷೆಗೆ ಮಾರಿ ಬೆಳೆದಿರುವಾಗ, ಇದೆಲ್ಲವನ್ನೂ ತಕ್ಕ ಪ್ರಮಾಣದಲ್ಲಿ ಹೇಳಿ
ದ್ವರೆ, ಈ ಗಾತ್ರ ಇಮ್ಮಡಿಸುತ್ತಿತ್ತು! ಇದರ ಮೇಲೆ ಈ ವಿಷಯ
ಗಳನ್ನು ಇಲ್ಲ ನಿರೂಪಿಸದಿರುವುದರಿಂದ ಕನ್ನಡ ವಿದ್ಯಾರ್ಥಿಗಳಿಗೆ ಹೆಚ್ಚಿನ
ತೊಂದರೆಯೇನೂ ಆಗುವುದಿಲ್ಲವೆಂದು ನನ್ನ ಭಾವನೆ. ಏಕೆಂದರೆ ಇವು
ಗಳ ಪ್ರಸ್ತಾವ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟನೆಯಾದ " ಕನ್ನಡ
ಕೈಪಿಡಿ ' ಯ "" ಅಲಂಕಾರ '' ಭಾಗದಲ್ಲಿ ಆಗಲೇ ವಿಶದವಾಗಿ ಬಂದಿದೆ;
ಹಿಂದಿನ ಕನ್ನಡ ಗ್ರಂಥಗಳಲ್ಲೂ ಅನೇಕ ವಿವರಗಳು ದೊರೆಯುತ್ತವೆ.
ಪೀಗಾಗಿ, " ಧ್ವನ್ಯಾಲೋಕ ' ದ ಗಣ್ಯವಾದ ಮೇಲುಪಂಕ್ತಿಯನೆ ಸ
ನಾನೂ ದೂರದಿಂದ ಅನುಸರಿಸಿ, ಕಾವ್ಯತರೀರದ ಸಪರಿಕರವಾದ ನಿರೂ
ಪಣಿಯನ್ನು ಇಲ್ಲಿ ಕೈಕೊಳ್ಳದೆ, ಹಿಂದಿನ ಕಾವ್ಯಲಕ್ಷಣ ಗ್ರಂಥಗಳ ಕಡೆಗೆ
XIV
ಬೆರಳು ತೋರಿಸಿ, ಗ್ರಂಥದ ಮುಖ್ಯೋದ್ಹೇಶಕ್ಕೆ ಬೇಕಾದ ಅಂಶಗಳನ್ನು
ಅಲ್ಲಿಂದ ಯಥೋಚಿತವಾಗಿ ತೆಗೆದುಕೊಂಡಿದ್ದೇನೆ 1.
ಈ ಮುಖ್ಯೋದ್ಹ್ದೇಶವು ಮೇಲೆ ತಿಳಿಸಿರುವಂತೆ ಧ್ವನಿ ರಸ ತತ್ತ್ವ
ಗಳ ನಿರೂಪಣಿ, ಸೂಕ್ಷ್ಮವೂ ನಮ್ಮ ಕಾಲದ ದೃಷ್ಟಿಯಿಂದ ಅನುಪ
ಯುಕ್ತವೂ ಆದ ಪ್ರಭೇದ ವಿಭೇದಗಳಿಗೆ ಹೆಚ್ಚು ಲಕ್ಷ್ಯಕೊಡದೆ, ಈ
ತತ್ತ್ವಗಳ ತಿರುಳನ್ನು ನನ್ನ ತಿಳಿವಿಗೆ ನಿಲುಕಿದಮಟ್ಟಿಗೆ ವಿಶದಪಡಿಸಲು ಈ
ಗ್ರಂಥದ ಮೂರನೆಯ ಭಾಗದಲ್ಲಿ ಪ್ರಯತ್ನಮಾಡಿದ್ದೇನೆ. ಇದರ
ಮೊದಲನೆಯ ಭಾಗದಲ್ಲಿ, ಸಂಸ್ಕೃತದ ಪ್ರಸಿದ್ಧ ಕಾವ್ಯಮಾಮಾಂಸಕರು,
ಅವರ ಕೃತಿಗಳು, ಅವರ ಕೈಯಲ್ಲ ಈ ಶಾಸ್ತ್ರ ಬೆಳೆದು ರೂಪುಗೊಂಡ ಬಗೆ,
ಇದರ ವಿಶೇಷ ಲಕ್ಷಣಗಳು ಇದನ್ನೆಲ್ಲ ಸಂಗ್ರಹವಾಗಿ, ಆದರೂ
ಮುಖ್ಯಾಂಶಗಳನ್ನು ಬಿಡದೆ, ತಿಳಿಸಿದ್ದೇನೆ : ಇಲ್ಲ ಕೂಡ ರಸಧ್ಯನಿ ತತ್ತ್ವ
ಗಳ ಚೆರಿತ್ರೆ ಸೂತ್ರದಂತೆ ಉದ್ದಕ್ಕೂ ಬಂದು ನಿರೂಪಣಿಗೆ ಏಕಮುಖತೆ
ಯನ್ನು ಕೊಟ್ಟಿದೆಯೆಂದು ನಂಬಿದ್ದೇನೆ. “ ಕವಿ-ಕಾವ್ಯ-ಸಹೃ ದೆಯ''
ಎ೦ಬುದು ಗ್ರಂಥದ ಎರಡನೆಯ ಭಾಗ. ಕಾವ್ಯಸೃ ಖ್ಚಿ, ಕಾವ್ಯಜಗತ್ತು A
ಕಾವ್ಯಪ್ರಯೋಜನ-ಈ ಮೊದಲಾದ ವಿಷಯಗಳನ್ನು ನಮ್ಮ ಲಕ್ಷಣಗ್ರಂಥ
ಗಳಲ್ಲಿ ಒಂದೆರಡು ವಾಕ್ಯಗಳಲ್ಲಿ ಸೂಚಿಸಿ ದಾಟಿಬಿಡುವುದೇ ಸಾಮಾನ್ಯ.
ಇವನ್ನು ಕುರಿತು ಅಲ್ಲಲ್ಲಿ ದೊರೆಯುವ ಉಕ್ತಿ ಗಳನ್ನೂ, ಸೂಚನೆಗಳನ್ನೂ
ಒಂದುಗೂಡಿಸಿ ಈ ಭಾಗದಲ್ಲಿ ತಕ್ಕಮಟ್ಟಿಗೆ ವಿಸ್ತಾರವಾಗಿ ಪ್ರತಿಪಾದನೆ
ಮಾಡಿದ್ದೇನೆ. ,೧೦, ೧೧ನೆಯ ಅಧ್ಯಾಯಗಳಂತೂ ಬಲುಮಟ್ಟಿಗೆ
“ Imagination in Indian Poetics” ಎ೦ಬ ನನ್ನ ಇಂಗ್ಲಿಷ್
ಲೇಖನದ : ಕನ್ನಡ ರೂಪವೆನ್ನ ಬಹುದು. "" ಕವಿಕರ್ಮ '' ಪರಾಮರ್ಶೆಗೆ
ಪಾಶ್ಚಾತ್ಯ ಕಾವ್ಯಮಾಮಾಂಸೆಯಲ್ಲ ಹೆಚ್ಚಿನ ಪ್ರಾಶಸ್ತ್ಯವುಂಟು. ಈ
ವಿಷಯದಲ್ಲಿ ಭಾರತೀಯರ ದೃಷ್ಟಿ ಏನೆಂಬುದನ್ನು ತಿಳಿಯಲು ಈ ಗ್ರಂಥ
ಭಾಗದಿಂದ ಸಹಾಯವಾಗಬಹುದು.
1" ತತ್ರ ವಾಜ್ಯಃ ಪ್ರಸಿದ್ಧೋ ಯಃ ಪ್ರಕಾರೈರುಪಮಾದಿಭಿಃ |
ಬಹುಧಾ ವ್ಯಾಕೃತಃ ಹೋಮೈೊಃ ತತೋ ನೇಹ ಪ್ರತನ್ಯತೇ
ಕೇವಲವ:ನೂದೃತೇ ಯಥೋಪಯೋಗಂ ''
(ಧ್ವನ್ಯಾ, 1.೩ ಮತ್ತು ವೃತ್ತಿ)
2110, XIII. 1.
XV
ಆಧುನಿಕ ಕಾವ್ಯವಿಮರ್ಶೆಯಲ್ಲಿ “ ಶೈಲಿ'' ಯ (619) ವಿಚಾರವು
ಪ್ರಮುಖವಾಗಿರುವುದರಿಂದ ನಮ್ಮವರ ""ರೀತಿ” * ಮಾರ್ಗ''ಗಳಿಗೂ
| ಶೈಲಿ ''ಗೂ ಇರುವ ಸಾಮ್ಯವೈಪಮ್ಯಗಳನ್ಮು ಪರಿಶೀಲಿಸಿ ಇವಕ್ಕೂ
ರಸಕ್ಕೂ ಇರುವ ಸಂಬಂಧವನ್ನು ಸವಿಸ್ತರವಾಗಿ ಪ್ರತಿಪಾದಿಸಬೇಕಾಗಿತ್ತು.
ಅಲ್ಲದೆ, ಸಾಹಿತ್ಯದ ಸಾರವಾದ ರಸವು ಸಾಪಿತ್ಯದ ಜೀರೆ ಬೇರೆ ಪ ಕಾರ
ಗೆಳಲ್ಲಿ ಅಭಿವ್ಯಕ್ತ ವಾಗುವ ಬಗೆ ಹೇಗೆ; ಮಹಾಕಾವ್ಯ, ಭಾವಗೀತ, ನಾಟಕ
ಇವುಗಳಲ್ಲಿ ಒಂದಕ್ಕೊಂದಕ್ಕೆ ಈ ದೃಷ್ಟಿಯಿಂದ ಏನು ಭೇದ; ಗದ್ಯ
ಕೃತಿಗಳಲ್ಲಿ, ಉದಾಹರಣಿಗೆ ಕಥೆ ಕಾದಂಬರಿ ಮೊದಲಾದವುಗಳಲ್ಲಿ, ರಸದ
ಸ್ಥಾನವೇನು ಇದನ್ನೆಲ್ಲ ವಿವೇಚನೆಮಾಡದೇಕಾದ ಅವಶ್ಯಕತೆಯೂ ಇತ್ತು.
ಆದರೆ ಇದಕ್ಕೆ ತೊಡಗಿದರೆ ಗ್ರಂಥ ಅತಿಯಾಗಿ ಜಿಳೆಯುವುದೆಂಬ
ಅಂಜಿಕೆಯ ಜೊತೆಗೆ, ಇದು ಸ್ವತಂತ್ರವಾದ ಆಲೋಚನೆ ಪ್ರತಿಪಾದನೆ
ಗಳನ್ನು ಅಪೇಕ್ಷಿಸಿ ದೇರೊಂದು ಪುಸ್ತಕದ ವಸ್ತುವಾಗತಕ್ಕ ವಿಷಯವೆಂಬ
ಅರಿವೂ ನನ್ನನ್ನು ಇಲ್ಲಿ ತಡೆಯಿತು.
ನಮ್ಮ ದೇಶದ ಪಿರಿಯ ಕಾವ್ಯಮಾಮಾಂಸಕರ ಅಭಿಪ್ರಾಯ ಸಾರ
ವನ್ನು ಸಂಗ್ರಹಿಸಿ ಅವರ ಹೇಳಿಕೆಗೆ ಅವಿರೋಧವಾಗಿ ನಿರೂಪಿಸಬೇ
ಕೆಂಬುದು ಇಲ್ಲಿ ನನ್ನ ಗುರಿ. ಈ ವರದಿಗಾರನ ಕೆಲಸದ ಜೊತೆಗೆ
ವ್ಯಾಖ್ಯಾನಕಾರನ ಕೆಲಸವನ್ನೂ ಅಲ್ಲಲ್ಲಿ ಕೈಕೊಂಡು, ಮೂಲಗ್ರಂಥಗಳಲ್ಲ
ಸೂಚನೆಯ ರೂಪದಲ್ಲಿದ್ದ ಕೆಲವು ಆಂತಗಳನ್ನು ಇಲ್ಲಿ ವಿವರಣಿಮಾಡಿರು
ವುದುಂಟು ; ಒಮ್ಮೊಮ್ಮೆ ಲಾಕ್ಷಣಿಕರ ಆಶಯವನ್ನು ಅದೇ ಮುಖವಾಗಿ
ಒಂದೆರಡು ಹೆಜ್ಜೆ ಮುಂದಕ್ಕೆ ಜೆಳಸಿರುವುದುಂಟು ; ಇಂದಿನ ದೃಷ್ಟಿಗೆ
ಒಪ್ಪಿಗೆಯಾಗದ ಕೆಲವು ಅಂಶಗಳನ್ನು ಟೀಕಿಸಿರುವುದೂ ಉಂಟು. ಇಂಥ
ಕೆಲಸದಲ್ಲಿ ನಿರೂಪಣಕಾರನ ಶಕ್ತಿಪರಿಮಿತಿಯ ಫಲವಾಗಿ ಕೆಲವಾದರೂ
ಲೋಪ ಪ್ರಕ್ಷೇಪ ವಿಪರ್ಯಾಸಗಳು ಒದಗುವುದು ಅನಿವಾರ್ಯ. ಆದರೂ
ಹಿಂದಿನ ಲಾಕ್ಷಣಿಕರ ಅಭಿಪ್ರಾಯಕ್ಕೆ ವಿಸಂಗತವಾದದ್ದನ್ನು, ಅವರ
ಆಲೋಚನೆಗೆ ವಿಷಯವಾಗದ್ದ ನ್ನು ನಾನು ಬುದ್ಧಿ ಪೂರ್ವಕವಾಗಿಯಂತೂ
ಅವರಿಗೆ ಆರೋಪಿಸಿಲ್ಲವೆಂದು ನನ್ನ ನಂಬಿಕೆ. ಹಾಗೆ ನೋಡಿದರೆ, ಅವರ
ಉಕ್ತಿಗಳಲ್ಲಿ ಗರ್ಭಿತವಾಗಿರುವ ಕೆಲವು ಮುಖ್ಯಾಂಶಗಳು ನನ್ನ ಕಣ್ಣಿಗೆ
ತಪ್ಪಿಸಿಕೊಂಡು, ಅರಿವಿಗೆ ನಿಲುಕದೆ ಬಿಟ್ಟುಹೋಗಿರುವ ಸಂಭವವೇಹೆಚ್ಚು.
xvi
ಇಲ್ಲ ಕೊಟ್ಟಿರುವ ಉದಾಹರಣಿಗಳಲ್ಲಿ ಹಲವು ಸಹಜವಾಗಿಯೇ
ಕನ್ನಡ ಕಾವ್ಯಗಳಿಂದ ತೆಗೆದುಕೊಂಡವು. ಸಂಸ್ಕ ತೆದಿಂದ ಬಂದ ಪದ್ಯ
ಗಳು ಕೂಡ ಬಲುಮಟ್ಟಿಗೆ ನನ್ನಆಯ್ಕೆ; ಅವುಗಳ ಕನ್ನಡ ಪದ್ಯಾನುವಾದದ
ಹೊಣಿಗಾರಿಕೆಯೂ ನನಗೇ ಸೇರಿದ್ದು. ಈ ಉದಾಹರಣಿಗಳನ್ನು
ನಿಯೋಜಿಸುವುದರಲ್ಲೂ, ಅವುಗಳ ಒಳ ಅರ್ಥವನ್ನು ಗ್ರೃಹಿಸುವುದರಲ್ಲೂ
ಕೆಲವು ತಪ್ಪುಗಳಾಗಿರಬಹುದು. ಏಕೆಂದರೆ, ಕವಿಯ ಭಾವಗಳು ಅನೇಕ
ಪೇಳೆ ಅತಿ ಸೂಕ್ಷ್ಮವಾಗಿರುತ್ತದೆ. “Timid thoughts, do not
be afraid of me. 1 ೩10 ೩ poet's ಅಂದು ನವಿರಾದ ಭಾವ
ಗಳನ್ನು ಕವಿ ಸ್ವಾಗತಿಸಿ ಹೊರಗಿನವರ ಬಿರುನೋಟ ಸೋಕದಂತೆ
ಅವನ್ನು ಕೃತಿಯಲ್ಲ ಭದ್ರವಾಗಿ ನಿಕ್ಷೇಪಿಸಿರುತ್ತಾನೆ. ಇಂಥ ಕಡೆ ಇಂಥ
ಧೈನಿಯಿಡೆಯೆಂದು ಬಿಡಿಸಿ ತೋರಿಸುವಾಗಲಂತೂ ಅನುಭವವೇ ಪರಮ
ಪ್ರಮಾಣವಾಗುವುವರಿಂದ ಅಭಿಪ್ರಾಯಭೇದಕ್ಕೆ ಅವಕಾಶವಿದ್ದೇ ಇರು
ತ್ತದೆ. ಒಟ್ಟಿನ ಮೇಲೆ, “ದೇವಂ ವಿಕ್ಟೀಯ ತದ್ಯಾತ್ರೋತ್ಸವಂ
ಆಕಾರ್ಪೀತ್"'' ಎಂಬ ಅಪಕೀರ್ತಿಗೆ ನೆಲೆಯಾಗದೆ, ರಸಧ್ಯನಿ ಮಾರ್ಗ
ವನ್ನು ಈ ಗ್ರಂಥವು ತಕ್ಕಮಟ್ಟಿ ಗೆ ತೋರಿಸುವುದಾದರೆ ನಾನು ಧನ್ಯ.
ಕೊನೆಯಲ್ಲಿ, ಕೃತಜ್ಞ ತೆಯ ಎರಡು ಮಾತುಗಳು. ನನ್ನ ಗುರು
ವರ್ಯರಲ್ಲಿ ಒಬ್ಬರಾದ ಶ್ರೀ ಎ. ಆರ್. ಕೃಷ್ಣಶಾಸ್ತ್ರಿಗಳು ಈ ಪುಸ್ತಕ
ವನ್ನು ಪರಿಶೀಲಿಸಿ ಸಲಹೆಗಳನ್ನು ನೀಡಿದ್ದಾರೆ, ಇದರ ಮುದ್ರಣ
ಪ್ರಾರಂಭವಾದದ್ದು ಅವರು ಕನ್ನಡ ಪ್ರಕಟನ ಸಮಿತಿಯ ಅಧ್ಯಕ್ಷರಾಗಿ
ದಾಗ. ನನ್ನ ಮಿತ್ರರೂ ಕವಿವರ್ಯರೂ ಆದ ಶ್ರೀ ಕೆ. ವಿ. ಪುಟ್ಟಪ್ಪನವರ
ಅಧ್ಯಕ್ಷತೆಯಲ್ಲ ಈಗ ಇದು ಪ್ರಕಾಶಗೊಳ್ಳುತ್ತಿದೆ. ಶ್ರೀ ಡಿ. ಎಲ್.
ನರಸಿಂಹಾಚಾರ್ಯರು, ಕನ್ನಡ ಪ್ರಕಟನ ಸಮಿತಿಯ ಕಾರ್ಯದರ್ಶಿಗಳಾದ
ಶ್ರೀ ಜಿ. ಹನುಮಂತರಾಯರು ಈ ಸ್ನೇಪಿತರ ಕಣ್ಣ ಮುಂಡೆಯೂ
ಗ್ರಂಥವು ಹಾಯ್ಕು ಬಂದಿದೆ. ಇವರ ಜೊತೆಗೆ, ಇನ್ನೂ ಕೆಲವು ಮಂದಿ
ಮಿತ್ರರೂ ಶಿಷ್ಕರೂ ಗ್ರಂಥದ ಮುದ್ರಣ ಎಲ್ಲಿಗೆ ಬಂದಿದೆ, ಅದು
ಯಾವಾಗ ಹೊರಬೀಳುತ್ತದೆ ಎಂದು ಆಗಾಗ ವಿಶ್ವಾಸದಿಂದ ಕೇಳಿ,
3 Rabindranath Tagore : ‘Stray Buds’, No: 238.
xvii
ಕುಂದುತ್ತಿದ್ದ ನನ್ನೆ ಉತ್ಸಾಹವನ್ನು ಉದ್ದೀಪಿಸಿದ್ದಾರೆ. ಈ ಎಲ್ಲ
ಹಿತೈಷಿಗಳಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಗ್ರಂಥದ
ನಿರ್ಮಾಪಕರಾದ ಪೂಜ್ಯಗುರುಗಳಿಬ್ಬರಿಗೆ ನನ್ನ ಭಕ್ತಿಯನ್ನು "" ಪರೋಕ್ಷ
ವಿನಯ ''ವಾಗಿ ಮಾತ್ರ ಅರ್ಪಿಸಬೇಕಾಗಿದೆ.
ಧಾರವಾಡ
೧೩-೭-೧೯೫೨ ತೀ. ನಂ. ಶ್ರೀ.
೫.38, ೫
ಕಾವ್ಯಾ,
ಧನ್ಯಾ.
ಧ್ವನ್ಯಾ, ಲೋಚನ
ನಾ. ಶಾ.
ಪ.
ಪರಿಪತ್ಪತ್ರಿಕೆ
ಪು.
ಪ್ರ. ಕ.
ಮುಂ.
ಸು.
ABORI
BSS
Chap.
Com. Volume
GOS
IA
IHQ
JORM
Kss
Mys ORI
P.; Pp.
POC
TSS, T.S, Series
Vol.
ಸಂಕ್ಷೆಪ್ತಗಳು
ಕಾವ್ಯಾದರ್ಶ
ಧ್ವನ್ಯಾಲೋಕ
ಧ್ವನ್ಯಾಲೋಕಲೋಡಚನ
ನಾಟ್ಯಶಾಸ್ತ್ರ
ಪದ್ಯ
ಕನ್ನಡ (ಕರ್ಣಾಟಕ) ಸಾಹಿತ್ಯ ಪರಿಷತ್ಪತ್ರಿಕೆ
ಪುಟ
ಪ್ರಬುದ್ಧ ಕರ್ಣಾಟಕ
ಮತ್ತು ಮುಂದಕ್ಕೆ
ಸುಮಾರು
Annals of the Bhandarkar Oriertal
11689೩7010 Institute, Poona
Bombay Sanskrit Series
Cnapter
Cornmemoration Volume
Gaekwad’s Oriental Seriss
Indian Antiquary
Indian Historical Quarterly, Calcutta
Journal of Oriental Research, Madras
Kashi Sanskit Series
Goverment Oriental Research Institute,
Mysore
Page; Pages
Proceedings of the All-India Oriental
Conference
Trivandrum Sanskrit Series
Volume
xix
೨೨
೬೦
PES
೧೩
೨೫
೨೮
೨ಒ
೨೭೬
೨೪
೧೭
೨೯
೧೮
೨೭
eds
೧೬೭
೮೯
ಒರ ಕೆಳಗೆ
ಕೆಲವು ಅಚ್ಚಿನ ತಪು ಗಳು
ತಪ್ಪು 5
ವಸ್ಮು
೯೭
ಸಂಗ್ರಹ'
ಅದರಲ್ಲ ಮೂಲಕ
ನಿದರ್ಶ
ಸರ್ವತೆಃ
ಪ್ರತ್ಯಬಜ್ಞಾ
ಅನಂದವರ್ಥನನ
ಭಭ್ರತೀ
ಹುಟ್ಟಿ ಮೊಳೆ
ಮುಲುದುದು
ಈಗಿನು
iy. ೪೪
ಪಂಜ್ತಿ
ಪ್ರತಂಷಾ
ಪ್ರಶಂಪೆಯಲ್ಲ
ಅವರಣವು
ವ್ಯತ್ಪತ್ತಿಃ''
ದರ್ಮ
ವಿಷಯದಲ್ಲ
iv, ೪೧
ದೂರ್ಪಾಸರ
ಇಂದಿದ್ದರೂ
ಪ್ರತಿಗಳನ್ನೂ
ತಾನಾರೋ
ವಿಜ್ಞಾತಾ
ಉಜ್ಜ್ವಲ
"ಕೇಳು?
ಅನಂದಪೊಂದೇ
XX
ಒಪ್ಪು
ವಸ್ತು
ii ೯೭.
4 ವ್ಯಾಖ್ಯಾಗಮ್ಯ
ಸಾರಸಂಗ್ರಹ?
ಅದರ ಮೂಲಕ
ವಿದರ್ಶನ
ಸರ್ವತಃ
ಪ್ರತ್ಯಭಿಜ್ಞಾ
ಅನಂದವರ್ಧನನ
ಬಭ್ರತೀ
ಪುಟ್ಟಿ ನೊಳೆ
ಮುಚಿದುದು
ಈಗಿನ
1೪. ೨೧
ಪಂಕ್ತಿ
ಪ್ರಶಂಸಾ
ಪ್ರಶಂಸೆಯಲ್ಲ
ಆವರಣವು
ಪೃತ್ಪತ್ತೀಃ''
ಧರ್ಮ
ವಿಷಯದಲ್ಲ
1೪. ೧೮
ನಿರ್ವಾಸರ
ಇರದಿದ್ದರೂ
ಪ್ರತಿಗಳನ್ನು
ತಾನಾರೊ
ವಿಜ್ಮಾಕಾ
ಉಜ್ಜ ವಿಲಿ
"ಕೇಳು:
ಅನಂದವೊಂದೇ.
(ಕಾವ್ಯಮಾಮಾಂಸಾ, ಪು, ೫೧)
ಎಂದು ಸೇರಿಸಬೇಕು,
ಪುಟ
೨೫೭
೨೭೬೫
೨೭೫
೨೭೬೯
೨೭೬೯
೨೮೯
೨೯೦
೨೯೩
೨೯೫
೨೯೬
೩೦೦
೩೦೨
೩೦೫
೩೧ಓ
೩೨೩
೩.೦೫
೩೪೧
೩೪೩
೩೫೦
೩೫೧
೩೫೮
೩೬೨
೩೬೩
೩೬೧
೩೮೦
೩೮೧
೩೮೪
೩೯೦
೩೯೩
೩೯೩
೩೯೮
ರಿತುಚೃತೇ
ಗ್ತೊತಾಗುವುದಿಲ್ಲ
ಎದುರೇ
ನನ್ನ
ಮಂದಿನದ
ಆಯಿತು
ಕಣಿಯಲ್ಲದಂ
ವಾಡ್ಯದಪ್ಪೇ
ಇಲ್ಲಿಯೇ
ಬಟ್ಟರ
ಕಿಂಚಿದಸಿ
' ಕಾವ್ಯಪ್ರಕಃಶ ' ದ್ವಲ್ಲ
ತಾತೃರ
ಪಾದ್ವವಿಲ್ಲ
ಭರತನಾಟ
ಅವಶ್ಯಕ
(i. ೪)
ಅಧಿಕವಾಗಿ
ಭೋಗಕೃತ್ತವ
ತದಾಡ್ಯೆಃ
ಆಭಿವ್ಯಕ
ಕಂಬ
ಅನ್ವೆತ್
ಸುಖದುಖಃ
ಅದರೆ
ಹೊರತ
ಆಡುವವವಿಗೆ
ಕಡವೆ:ಯಿಲ್ಲ
(ii. ೧೦೩)
ಲಾಕ್ಷ ಕರ .
ಭಾರತೀಯ
ಭಾವ”,
ಸೂಕ್ಷಾಂಶ
ಗಾದಾ
ಅ " ಪೂರಸ '*
ಒಪ್ಪು
ರಿತ್ಯುಚ್ಯತೇ
ಗೊತ್ತಾಗುವುದಿಲ್ಲ
ರೇ
ನನ್ನಮ್ಮ
ಮುಂದಿನದ
ಆಯತಲ್ಲವೆ |
ಕಣಿಯೆಲ್ಲದಂ
ಪಾಡೈದಷ್ಟು ಮಾತ್ರ
ಇಲ್ಲಯೇ.
ಬಟ್ಟರು
ಕೀ ಚಿದನ್ತಿ,
" ಕಾವೃಪ್ರಕಂತ ' ದೆಲ್ಲಿ
ತಾತ್ಪರ್ಯ
ಸ್ಟಾದವಿಲ್ಲ
ಭರತನಾಟ್ಯ
ಅವಶ್ಯಕ
(ಸೂತ್ರ ೪)
ಅಧಿಕವಾಗಿ
ಭೋಗಕೃತ್ತ್ಯ
ತದಾದ್ಯೊಃ
ಅಭಿವ್ಯಕ್ತ
ಕಂಬ ಮತ್ತು
ಅನ್ಯತ್
ಸುಖದುಃಖ
ಅದರೆ
ಹೊರತು
ಆಡುವವನಿಗೆ
ಕಡಮೆಯಲ್ಲ
(ಸೂತ್ರ ೧೦೩)
ಲಾಕ್ಷಣಿಕರ
ಭಾರತಿಯ
""ಭಾವ ''
ಸೂಕ್ಷ್ಮಾಂಶ
ಗಾಥಾ
ಅವೂ "ರಸ
೪೧೯
೪೨೩
೪೨೩
೪೫೭
೪೬೮
೪೭೩
೪೮೩
ಪಂಕ್ತಿ
೧೮
೨೮
೧೩
೨೫
೨೬
xxii
ತಪು ಸ್ಟ
ವಿವರವಾಗಿ
ಪದ
ಲ್ಲಿಟ್ಟಿದ್ದರೈ
೩೪೩
ಅಲಂಕಾರಿಕರ
ವೃಂಗಾರ್ಥವು
ಕರ್ಣಾಟಕ,
XVI. ೪
ತಿದ್ದುಪಡಿ
ಒಪ್ಪು
ವಿಶದವಾಗಿ
ಪದ್ಯ
ಲ್ಲಿಟ್ಟದ್ದರೆ
೩೨೩
ಅಲಂಕಾರಿಕರ
ವೈಂಗ್ಯಾರ್ಥವು
ಕರ್ಣಾಟಕ, XVI. ೪
2೫೫.೧
ಪುಟ ೯೯. ಅಡಿಟಿಪ್ಪಣಿ 12: ಹೇಮಚಂದ್ರನ " ಕಾವ್ಯಾನುಶಾಸನ' ದ ರಚನೆಯ ಕಾಲ
ಕ್ರಿ.ಶ. ಸು. ೧೧೪೦. (೪೪೭ನೆಯ ಪುಟದ ಅಡಿಟಿಪ್ಪಣಿ 19ನ್ನು ನೋಡಿ.)
ಪುಟ ೪೪೬.--ಪಂಕ್ತಿ ೧೯ : ನಾಗವರ್ಮನು " ಕವಿರಾಜಮಾರ್ಗ ' ದ ಹೆಸರನ್ನು ಪ್ರತೃಕ್ಷ
ವಾಗಿ ಹೇಳಿಲ್ಲ ಆದರೆ ಗುಣಗಳ ವಿಚಾರದ ಕೊನೆಯಲ್ಲಿ, :: ಇವು ನಿಯತಂ
ದಕ್ಷಿಣದೇಶವರ್ತಿ ಕವಿರಾಜಮಾರ್ಗದೊಳ್ ನೆಗಲ್ಲುಂ...'” (ಪದ್ಯ ೫೨೧)
ಎಂದು ಹೇಳುವಾಗ « ಕವಿರಾಜಮಾರ್ಗ ' ಗ್ರಂಥವನ್ನು ನಿರ್ದೇಶಿಸುವ ಉದ್ದೇ
ಶವೂ ಅವನಿಗೆ ಇದ್ದಿರಬೇಕೆಂದು ನಂಬಬಹುದು,
ಭಾರತೀಯ ಕಾವ್ಯಮಾಮಾಂಸೆ
ಮೊದಲನೆಯ ಭಾಗ
ಶಾಸ್ತ್ರದ ಬೆಳ ವಳಿಗೆ
೧. ಅವತರಣಿಕೆ
ವಾಲ್ಮೀಕಿಯ ರಾಮಾಯಣವನ್ನು ಸಂಸ್ಕೃತದ ಆದಿಕಾವ್ಯವೆಂದು
ಕರೆಯುವುದು ವಾಡಿಕೆಯಾಗಿದೆ. ಆದರೆ ಇದಕ್ಕೆ ಎಷ್ಟೋ ಮುಂಚೆಯೇ
ಭರತಖಂಡದಲ್ಲಿ ಕಾವ್ಯರಚನೆಗೆ ಆರಂಭವಾಯಿತೆನ್ನಬೇಕು. ಆರ್ಯರ ಆದಿ
ಗ್ರಂಥವಾದ ಪೇದಸಂಪಿತೆಯಲ್ಲಿ ಹಲವು ಸೂಕ್ತಗಳೂ ಉಪನಿಪತ್ತು
ಗಳಲ್ಲಿ ಹಲವು ಭಾಗಗಳೂ ಉತ್ತಮ ಕಾವ್ಯ. ಅವುಗಳಿಂದ ಪಾರಲೌಕಿಕ
ಜ್ಞಾನವನ್ನು ಪಡೆಯಲಿ ಬಿಡಲಿ, ಅಲ್ಲಿಯ ಉಕ್ತಿ ಸೌಂದರ್ಯ ವನ್ನೇ ಸವಿಯು
ವುದು ಸಾಧ್ಯ. ಲೌಕಿಕಸಾಪಿತ್ಯದಲ್ಲಿ ಕೂಡ ` ಆದಿಕವಿ'ಗೂ ಹಿಂದೆಯೇ
ಕವಿಗಳಿದ್ದಿ ಬೇಕು. ರಾಮಾಯಣ ಹುಟ್ಟಿದೀಚೆಗಂತೂ ಸಂಸ್ಕೃತ
ಕಾವ್ಯವು ಸರ್ವತೋಮುಖವಾಗಿ ಬೆಳೆಯಿತು. ಪತಂಜಲಿಯ ಕಾಲಕ್ಕೆ
(ಕ್ರಿ. ಪೂ. ಸು. ೧೫೦) " ವಾರರುಚಕಾವ್ಯ 'ವೊಂದು ಇದ್ದಂತೆ ಸೂಚನೆ
ಯಿದೆ ; ನೀತಿ ಶೃಂಗಾರ ವೈರಾಗ್ಯಗಳನ್ನು ಪ್ರತಿಪಾದಿಸುವ ಪದ್ಯಬಂಡ
ಗಳನ್ನು ಪತಂಜಲಿ ತನ್ನ ಮಹಾಭಾಪ್ಯದಲ್ಲ ಉದಾಹರಿಸಿದ್ದಾನೆ.! ಪೀಗೆ
ಕಾವ್ಯದ ರಚನೆ ನಮ್ಮ ದೇಶದಲ್ಲ ಪ್ರಾಚೀನವಾದರೂ ಅದರ ವಿವೇಚ
ನೆಯ ಕಡೆಗೆ ಮೇಧಾವಿಗಳ ಮನಸ್ಸು ಬೇಗ ಹರಿದಂತೆ ಕಾಣಿಸುವುದಿಲ್ಲ.
ವ್ಯಾಕರಣ, ಛಂದಸ್ಸು ಮೊದಲಾದ ವೇದದ ಪಡಂಗಗಳಲ್ಲ ನಮ್ಮ ಶಾಸ್ತ್ರ
ಸೇರಿಲ್ಲ; ಚತುರ್ದಶ ವಿದ್ಯೆಗಳ ಪಟ್ಟಿಯಲ್ಲಿ ಅದರ ಹೆಸರಿಲ್ಲ. ಯಾಸ್ಕನ
ನಿರುಕ್ತದಲ್ಲೂ ಪಾಣಿನಿಯ ಅಪ್ಪಾಧ್ಯಾಯಿಯಲ್ಲೂ “ ಉಪಮೆ `'ಯ
ಪ್ರಸ್ತಾವಪೇನೋ ಪ್ರಾಸಂಗಿಕವಾಗಿ ಬಂದಿದೆ; ಇಷ್ಟು ಮಾತ್ರದಿಂದ,
ಆ ವೇಳೆಗೆ ಅಲಂಕಾರಶಾಸ್ತ್ರವೇ ಆವಿರ್ಭವಿಸಿದ್ದಿತೆಂದು ಹೇಳಲು ಸಾಧ್ಯ
ಎಲ್ಲ. ರಾಜಶೇಖಬರನು " ಕಾನ್ಯಮಾಮಾಂಸೆ 'ಯಲ್ಲಿ ಈ ಶಾಸ್ತ್ರದ ಮೂಲ
ವನ್ನು ಶಿವನಿಗೇ ಆರೋಪಿಸಿ, ಅದರ ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ
ಪ್ರಾಚೀನಾಚಾರ್ಯನ ಹೆಸರನ್ನು ಈ ರೀತಿಯಾಗಿ ಕೊಟ್ಟಿದ್ದಾನೆ:
1 4. B. Keith: Sanskrit Literature, pp. 45-7.
2ನ, K. De: Sanskrit Poetics, Vol. 1, p. 4 ff.
೩
೪ ಭಾರತೀಯ ಕಾವ್ಯಮಾಮಾಂಸೆ
"* ಅಥಾತಃ ಕಾವ್ಯಂ ಮಾಮಾಂಸಿಪ್ಯಾಮಹೇ ಯಥೋಪದಿದೇಶ ಶ್ರೀಕ೦ಠಃ
ಪರಮೇಷ್ಠಿ ವೈಕುಂಠಾದಿಧ್ಯಃ ಚತುಃಷರ್ನಯೇ ಶಿಷ್ಯೇಧ್ಯಃ 8, ಸೋಪಿ ಭಗವಾನ್
ಸ್ವಯಂಭೂಃ ಇಚ್ಛಾ ಜನ್ಮ ಭ್ಯಃ ಸ್ಯಾಂತೇವಾಸಿಧ್ಯಃ. ತೇಷು ಸಾರಸ್ಪತ್ತೇಯಃ .
ಕಾವ್ಯಪುರುಷ ಆಸೀತ್ . . ಸೊಪಾ ದಶಾಧಿಕರಣೀಂ ದಿಪೆ ್ಯೇಧ್ಯಃ ಕಾವ್ಯವಿದ್ಯಾ
ಸ್ಮಾತಕೇಧ್ಯಃ ಸಪ್ರಪಂಚಂ ಪ್ರೋವಾಚ. ತತ್ರ ಕವಿರಹಸ್ಯಂ ಸಹಸ್ರಾ ಈ ಸಮಾ
ಮ್ಹಾಸೀತ್, ಔಕ್ತಿ ಕಂ ಉಕ್ತಿ ಗರ್ಭಃ, ರೀತಿನಿರ್ಣಯಂ RS SN, 'ಅನುಪ್ರಾ
ಸಿಕಂ ಪ್ರಚೇತಾಯನಃ, ಯಮಕಾನಿ ಚಿತ್ರ೦ ಚಿತ್ರಾಂಗದಃ, ಶಬ್ದಶ್ಲೇಷಂ ಶೇಷಃ,
ವಾಸ್ತವಂ ಪುಲಸ್ತ ಕೌ ಔಪಮ್ಯಂ ಔಪಕಾಯನಃ, ಅತಿಶಯ ಪಾರಾಶರಃ, ಅರ್ಥ:
ಶ್ಲೇಷಂ ಉತಥ್ಯಃ, ಉಭಧೆಯಾಲಂಕಾರಿಕಂ ಕುದೇರಃ, ವೈನೋದಿಕಂ ಕಾಮದೇವಃ,
ರೂಪಕನಿರೂಪಣೀಯ೦ ಭರತಃ, ರಸಾಧಿಕಾರಿಕಂ ನಂದಿಕೇಶ್ವರಃ, ದೋಪಾಧಿ
ಕರಣಂ ಥಿಷಣಃ, ಗುಣ್‌ೌಪಾದಾನಿಕ೦ ಉಪಮನ್ಯುಃ, ಔಪನಿಷದಿಕಂ ಕುಚಮಾರ ಇತಿ
ತತಸ್ತೇ ಪೃಥಕ್ ಪೃಥಕ್ ಸ್ವಶಾಸ್ಟ್ರಾಣಿ ವಿರಚಯಾ೦ಚಕ್ರುಃ . ... '' (ಪು. ೧.)
ಈ ವಾಕ್ಯಗಳ ತಾತ್ಪರ್ಯವನ್ನು ಪೀಗೆ ಗ್ರಷಿಸಬಹುದು: "" ಇನ್ನು
ಮುಂದೆ ಕಾವ್ಯಮಿಸಾಮಾಂಸೆಗೆ ತೊಡಗುತ್ತೇವೆ. ಶಿವನು ಬ್ರಹ್ಮ ವಿಷ್ಣು
ಮೊದಲಾದ ಅರುವತ್ತುನಾಲ್ಕು ಮಂದಿ ಶಿಷ್ಯರಿಗೂ, ಬಳಿಕ ಬ ಶ್ರಹ್ಮದೇವನು
ಮಾನಸಪುತ್ರರಾದ ತನ್ನ ಶಿಷ್ಯರಿಗೂ ಉಪದೇಶಮಾಡಿದ್ದನ್ನೇ ಅನು
ಸರಿಸುತ್ತೇವೆ. ಆ ಬ್ರಹ್ಮ ಶಿಷ್ಯರಲ್ಲಿ ಸರಸ್ಕತೀಪುತ್ರನಾದ ಕಾವ್ಯಪುರುಪ
ನಿದ್ದನು. ಅವನು ಹದಿನೆಂಟು ಅಧಿಕರಣಗಳುಳ್ಳ ಈ ಶಾಸ್ತ್ರವನ್ನು ಕಾವ್ಯ
ವಿದ್ಯಾಪಾರಂಗತರಾದ ದಿವ್ಯವ್ಯಕ್ತಿಗಳಿಗೆ ಸವಿಸ್ತರವಾಗಿ ಹೇಳಿದನು. ಅಲ್ಲಿ
ಕವಿರಹಸ್ಯವನ್ನು ಸಹಸ್ರಾಕ್ಷನು ನಿರೂಪಿಸಿದನು ; ಶಬ್ದಾರ್ಥ ವಿಚಾರಕ್ಕೆ
ಕರ್ತೃ ಉಕ್ತಿಗರ್ಭ, ರೀತಿ ನಿರ್ಣಯಕ್ಕೆ ಸುವರ್ಣನಾಭ ; ಅನುಪ್ರಾಸ
ಯಮಕ: ಚಿತ್ರ (ಬಂಧ) ತಬ್ದಶ್ಲೇಷಗಳೆಂಬ ತಬ್ಧಾಲಂಕಾರ ವಿಭಾಗ
ಗಳಿಗೆ ಕ್ರಮವಾಗಿ ಪ್ರಚೇತಾಯನ, ಚಿತ್ರಾಂಗದ ಮತ್ತು ಶೇಷ:
ವಾಸ್ತವ ಔಪಮ್ಯ ಅತಿಶಯ ಅರ್ಥಶ್ಲೇಷಗಳೆಂಬ ಅರ್ಥಾಲಂಕಾರ ವಿಭಾಗ
ಗಳಿಗೆ ಕ್ರ ಆಹ ಪುಲ್ sR ಔಪಕಾಯನ, ಪಾರಾಶರ ಮತ್ತು ಉತಥ್ಯ ;
ತಾರಕ ವಿಚಾರಕ್ಕೆ ಕುಬೇರ; ನಾಗರಿಕನಿಗೆ ಆವ್
ವಿನೋದಗಳ ವಿಚಾರಕ್ಕೆ ಕಾಮದೇವ ; ನಾಟಕ ನಿರೂಪಣಿಗೆ ಭರತ;
ರಸಕ್ಕೆ ನಂದಿಕೇಶ್ವರ; ದೋಷ ಪ್ರಕರಣಕ್ಕೆ ಧಿಷಣ; ಗುಣಕ್ಕೆ ಉಪಮನ್ಯು ;
3 ಯಮಕಗಳನ್ನು ನಿರೂಪಿಸಿದ ಆಚಾರ್ಯನ ಹೆಸರು " ಕಾವ್ಯವಿಸಾಮಾಂಸೆ 'ಯ ಮಾತೃ
ಕೆಗಳಲ್ಲ ಬಟು ಹೋದಂತಿದೆ.
ದಿ. ಅವತರಣಿಕೆ ೫
ಯಂತ್ರಮಂತ್ರೋಪಾಸನಾದಿ ವಿಚಾರಕ್ಕೆ ಕುಚಮಾರ - ಪೀಗೆ ಆ ಬಳಿಕ
ಅವರು ತಮ್ಮ ತಮ್ಮ ಶಾಸ್ತ್ರಗಳನ್ನು ಬೇರೆ ಬೇರೆಯಾಗಿ ವಿರಚಿಸಿದರು. '`
-—ಈ ಸಂಪ್ರದಾಯದ ಕಥೆ ಎಪ್ಪರ ಮಟ್ಟಿಗೆ ನಿಜವೋ; ಭರತ, ನಂದಿ
ಕೇತ್ವರ ಮೊದಲಾದ ಕೆಲವರನ್ನು ಬಿಟ್ಟರೆ ಉಳಿದವರು ಎಪ್ಪರಮಟ್ಟಿಗೆ
ಐತಿಹಾಸಿಕ ವ್ಯಕ್ತಿಗಳೋ ! --*" ಚಿತ್ರಂ ಚಿತ್ರಾಂಗದಃ, ಶಬ್ದಶ್ಲೇಷಂ
ಶೇಷಃ....'' ಇಂಥ ಕಡೆಗಳಲ್ಲಿ ವಿಷಯಕ್ಕೂ ಅದರ ಪ್ರವಕ್ತೃವಿಗೂ
ಗಂಟುಬಿದ್ದಿ ರುವುದಕ್ಕೆ ಅನುಪ್ರಾಸರಸಿಕತೆಯೇ ಮುಖ್ಯ ಕಾರಣವೆನ್ನಿಸು
ತ್ತದೆ. ಇದು ಹೇಗಾದರೂ ಇರಲಿ.” ಕ್ರಿಸ್ತಶಕಕ್ಕೆ ಪೂರ್ವದಲ್ಲಿ ಹುಟ್ಟಿದ
ಕಾವ್ಯಲಕ್ಷಣಗ್ರಂಥ ಯಾವುದೂ ಇದುವರೆಗೆ ದೊರೆತಿಲ್ಲ. ಆ ಮೊದಲು
ಅಲಂಕಾರಶಾಸ್ವ್ರವು ಒಂದು ವ್ಯವಸ್ಥಿ ತರೂಪದಲ್ಲಿದ್ದಿ ತೆಂದು ಹೇಳುವುದಕ್ಕೂ
ತಕ್ಕಷ್ಟು ಆಧಾರವಿಲ್ಲ.
ನಮ್ಮ ದೇಶದ ಶಾಸ್ತ್ರಗಳಲ್ಲಿ ಕಾವ್ಯಮಾಮಾಂಸೆ ಹೀಗೆ ಕಿರಿಯ
ದಾದರೂ ಗ್ರಂಥಸಮೃದ್ಧಿಯಲ್ಲೂ ತತ್ತ್ವಾನ್ಬೇಷಣೆಯಲ್ಲೂ ಅದು ಮಿಕ್ಕವು
ಗಳಿಗೇನೂ ಹಿಂದೆ ಬೀಳಲಿಲ್ಲ. ಪ್ರತಿಭಾಶಾಲಿಗಳೂ ತೀಕ್ಷ್ಣ ಮತಿಗಳೂ ಆದ
1 ರಾಜಶೇಖರನ ಹೇಳಿಕೆಯನ್ನು ಕುರಿತ ವಶೇಷ ವಿಚಾರಕ್ಕೆ 1. V. 0೧0:
Alankara Literaturv, pp. 1-11; "ಕಾವ್ಯವಿಸಾಮಾಂಸ ' (G08), Explanatory
೫೧:೦೬, pp. 116-126 ನೋಡಿ.
5 ವಾತ್ಸ್ಯಾಯನ ಕಾಮಸೂತ್ರದಲ್ಲ ಕೊಟ್ಟಿರುವ ಚತಃಪಷ್ಟಿ ಕಲೆಗಳ ಪಟ್ಟಿಯಲ್ಲ
ಕಾವ್ಯಕ್ತಿಯಾ, ಅಭಿಧಾನಕೋಶ, ಛಂದೋಜ್ಞಾನ ಇವುಗಳ ಜೊತೆಗೆ " ಕ್ರಿಯಾಕಲ್ಪ' ಎಂಬ
ಹೆಸರು ಬರುತ್ತದೆ. ಕಾವ್ಯಕ್ರಿಯಗೆ ಅ-ಗಗಳಾದ ನಿಘಂಟ:ಛಂದಸುಗಳೊಂದಿಗೆ ಇದು
ಬಂದಿರುವುಣನ್ನು ಗಮನಿಸಬೇಕು. "ಜಯಮಂಗಳಾ'ಏಂಬ ಕಾಮಸೂತ್ರಪ್ಯಾಖ್ಯಾನವು
"" ಕ್ರಿಯಾಕಲ್ಪ ಇತಿ ಕಾವ್ಯಕರಣವಿಧಿಃ, ಕಾವ್ಯಾಲಂಕಾರ ಇತ್ಯರ್ಥಃ '' ಎಂದು ತಿಳಿಸುತ್ತದೆ.
ಈ ತಬ್ದಕ್ಕ ಕಾವೃಲಕ್ಷಣಶಾಸ್ತ್ರವೆಂಬ ಅರ್ಥವೆಂದು ಇದರಿಂದ ಸೃಷ್ಟವಾಗು
ತ್ತಡೆ. ಕ್ರಿ. ಶೆ. ಸು. ೧ನೆಯ ಶತಮಾನದಲ್ಲ ಹುಟ್ಟಿದೆ " ಲಲಿತವಿಸ್ತರ 'ದಲ್ಲ ಕೊಟ್ಟಿರುವ
ಕಲೆಗಳ ಪಟ್ಟಿಯಲ್ಲೂ " ಕ್ರಿಯಾಕಲ್ಪ 'ವು ಸೇರಿದೆ (ಪು. ೧೫೬). ರಾಮಾಯಣದ ಉತ್ತರ
ಕಾಂಡದಲ್ಲೂ (೯೪.೭) " ಕ್ರಿಯಾಕಲ್ಪ ' ವನ್ನು ಬಲ್ಲವರ ಉಲ್ಲೇಖವಿದೆ. ರಾಮಾಯಣದ
ಉತ್ತರಕಾಂಡವು ವಾಲ್ಮೀಕಿಕೃತವಲ್ಲವೆಂದು ವಿದ್ಬಾಂಸರ ಅಭಿಪ್ರಾಯ. ಆದರೂ ಕ್ರಿಯಾ
ಕಲ್ಪವೆಂಬ ಶಬ್ದವು ಕ್ರಿಸ್ತಶಕದ ಆರಂಭದ ವೇಳೆಗೆ ರೂಢಿಯಲ್ಲದ್ದಿರಬೇಕೆಂದು ಊಹಿಸಿದರ
ತಪ್ಪಾಗಲಾರದು. "ಜಯನುಂಗಳಾ' ವ್ಯಾಖ್ಯಾನದಲ್ಲಿ ಈ ಶಬ್ದಕ್ಕೆ ಕೊಟ್ಟಿರುವ ಅರ್ಥವೂ
ಇಪ್ಟೇ ಹಿಂದಿನದಾದಲ್ಲಿ, ಸಂಸ್ಕೃತ ಅಲಂಕಾರ ಶಾಸ್ತ್ರ ದ ಪ್ರಾಚೀನತೆಯನ್ನು ನಿರ್ಣಯ
ಸುವುದಕ್ಕೆ ಒಂದು ನೆಲೆ ಸಿಕ್ಕಿದಂತಾಗುತ್ತದೆ. ಈ ವಿಷಯವನ್ನು ವಿಶದವಾಗಿ ಪ್ರತಿಪಾದಿ
ಸಿರುವ ವಿ. ರಾಘವನ್ ಅವರ "Names of Sanskrit Poetics’ ಎಂಬ ಲೇಖನ
ಭಾಗವನ್ನು ನೋಡಿ (Some Concepts, pp. 264-7).
k ಭಾರತೀಯ ಕಾವ್ಯಮಿಾಮಾಂಸೆ
ವಿದಾಂಸರು ಇದನ್ನು ಬೆಳಸಿದರು; ಎಲ್ಲ ಕಾಲಕ್ಕೂ ಎಲ್ಲ ಸಾಪಿತ್ಯಕ್ಕೂ
ಅನ್ವಯಿಸುವ ಹಲವು ರಹಸ್ಯಗಳನ್ನು ಹೊರಗೆಡಪಿದರು. ವ್ಯಾಕರಣವೇ
ಮೊದಲಾದ ಶಾಸ್ತ್ರಗಳಲ್ಲಿ ಗೋಚರಿಸದ ಸ್ಕಾರಸ್ಯವೊಂದು ಇದರಲ್ಲುಂಟು.
ಕೇವಲ ಶೈಶವಾವಸ್ಥೆಯನ್ನು ಬಿಟ್ಟರೆ, ಮುಂದೆ ಅಲಂಕಾರಶಾಸ್ತ್ರದ
ಒಂದೊಂದು ವಯಃಸಂಧಿಯನ್ನೂ ನೋಡಬಹುದು. ಇಲ್ಲಿ ಹೊದಲಿ
ನಿಂದಲೂ ಮತಭೇದವುಂಟು. ಒಂದು ಪ್ರಸ್ಥಾನವನ್ನು ಮೂಲೆಗೊತ್ತಿ
ಮತ್ತೊಂದು ಹೊರಡುತ್ತದೆ. ಅದರ ಮೇಲೆ ಖಂಡನ ಮಂಡನಗಳು
ಬೆಳೆಯುತ್ತವೆ. ಶಾಸ್ತ್ರದ ಅವಕಾಶವು ವಿಸ್ತಾರವಾಗುತ್ತಾ ಅದರ ಸಿದ್ಧಾಂತ
ಗಳು ಖಚಿತವಾಗುತ್ತಾ ಹೋಗುತ್ತವೆ. ಇಲ್ಲ ನಿತಿತಮತಿಗಳ ಮಸೆದಾಟ
ವುಂಟು; ಆದ್ದ ರಿಂದ ಚರ್ಚೆಗಳಲ್ಲಿ ಜೀವಕಳೆಯುಂಟು. ಇಷ್ಟೇ ಅಲ್ಲ.
ಈ ಶಾಸ್ತ್ರದ ಉತ್ಕರ್ಪಕಾಲದಲ್ಲಿ ಬರೆದ ಹಲವರು ಸ್ವಯಂ ಕವಿಗಳು. ಅವರ
ಬರೆವಣಿಗೆ ರಸಾರ್ದ್ರವಾಗಿದೆ ; ಅವರ ವ್ಯಕ್ತಿವರ್ಚಸ್ಸು ಗ್ರಂಥಗಳಲ್ಲಿ
ನೆಲಸಿದೆ. '
ಓದತಕ್ಕ ಅಥವಾ ಕೇಳತಕ್ಕ ಸಾಮಾನ್ಯಕಾವ್ಯ. ಅಭಿನಯಿಸಿ ನೋಡ
ತಕ್ಕ ನಾಟಕ " ಇವೆರಡನ್ನೂ " ಕಾವ್ಯ ಎಂಬ ಶಬ್ದವು ಒಳಕೊಳ್ಳುತ್ತದೆ.
'" ಕಾವ್ಯೇಷು ನಾಟಕಂ ರಮ್ಯಂ'' ಎಂಬ ಪ್ರಶಸ್ತಿ ಮೇಲಿನ ಹೇಳಿಕೆಗೆ
ಒಂದು ನಿದರ್ಶನ. ಆದರೆ ಆದಿಯಲ್ಲಿ ಈ ಎರಡು ಕಾವ್ಯಶಾಖೆಗಳನ್ನೂ
ಒಟ್ಟಿಗೆ ತೆಗೆದುಕೊಂಡು ಒಂದೇ ಪರಿಪಾಟಿಯಲ್ಲ ವಿವೇಚನೆ ಮಾಡುವ
ಪದ್ಧ ತಿಯಿದ್ದ ೦ತೆ ಕಾಣುವುದಿಲ್ಲ. ಕಾವ ಲಕ್ಷಣ (ಎ. ಅಲಂಕಾರ ಶಾಸ ಕ್ರ್ರ')ವೂ
ನಾಟಕಲಕ್ಷಣ (-." ನಾಟ್ಯಶಾಸ್ತ್ರ ') ವೂ ಜೀರೆ ಬೇರೆ ಸಂಪ್ರ ದಾಯಗಳಲ್ಲ
ತಲೆಯೆತ್ತಿದುವು. ಇದಕ್ಕೆ "ಕಾರಣವನ್ನು ಊಪಿ ಜು ಸುಲಭ,
" ಸಂಸ್ಕೃತದಲ್ಲ ದೃಶ್ಯಕಾವ್ಯಕ್ಕೆ " ರೂಪಕ ' ಎಂಬುದು ಸಾಮಾನ್ಯವಾದ ಹೆಸರು;
" ನಾಟಕ ' ಇದರ ಬಗೆಗಳಲ್ಲಿ ಒಂದು. ಕನ್ನಡದಲ್ಲಾದರೆ "ನಾಟಕ ' ಎಂಬ ಶಬ್ದವನ್ನೇ
ವಿಶಾಲವಾದ ಅರ್ಥದಲ್ಲಿ ಉಪಯೋಗಿಸುವುದು ರೂಢಿಯಾಗಿದೆ. ಇದ ರಮೇಲೆ, " ರೂಪಕ '
ಎಂಬುದು ಆಲಂಕಾರಗಳಲ್ಲ ಒಂದರ ಹೆಸರೂ ಅಗಿದೆ. ಆದ್ದರಿಂದ ಕನ್ನಡದ ಮಟ್ಟಗಾ
ದರೂ ಈ ಶಬ್ದದ ವ್ಯಾಪ್ತಿಯನ್ನು ಅಲ್ಲಗೇ ನಿಯಮನ ಮಾಡುವುದು ಉಚಿತವೆಂದು ತೋರು
ತ್ಮದೆ. ನಮ್ಮ ಗ್ರಂಥದಲ್ಲಿ " ನಾಟಕ ' ಎಂಬುದನ್ನು ಜಾತಿವಾಚಕವಾಗಿ ಉಪಯೋಗಿಸಿದೆ.
ಈ ಬಗೆಯ ಪ್ರಯೋಗ ಭರತನ ನಾಟ್ಯಶಇಸ್ತದಲ್ಲೇ ಒಮ್ಮೊಮ್ಮೆ ಗೋಚರವಾಗುತ್ತದೆ
(ಉದಾಹರಣಿಗೆ ಇ. ೭೩ರಲ್ಲಿ). ಇದರಮೇಲೆ ವ್ಯಾಖ್ಯಾನ ಬರೆಯುತ್ತಾ, "" ನಾಟಕತಬ್ಬೋ
ರೂಶಕ ಮಾತ್ರವೃತ್ತಿಃ '' ಎಂದು ಅಭಿನವಗುಪ್ತನು ಹೇಳುತ್ತಾನೆ.
೧. ಅವತರಣಿಕೆ ೭
ನಾಟ್ಯವು ಒಂದು ಸಂಕೀರ್ಣಕಲೆ. ಇಲ್ಲಿ ಕಾವ್ಯಾಂಶಕ್ಕೆ ಸರ್ವಸ್ವತಂತ್ರ
ವಾದ ಸ್ಥಾನವಿಲ್ಲ; ನೃತ್ಯ, ಗಾಯನ, ವೇಷಭೂಪಣ- ಇವುಗಳ ಜೊತೆಗೆ
ಅದು ಅಭಿನಯದ ಅಂಗವಾಗಿ ಬರುತ್ತದೆ. : ಈ ಉಳಿದ ಕಲೆಗಳನ್ನು
ಪರಿಶೀಲಿಸುವಾಗ ಅವಕ್ಕೆ ಸಂಬಂಧಪಟ್ಟ ಅಭಿನೇಯವಾದ ಕಾವ್ಯಭಾಗ
ವನ್ನೂ ಪರಿಶೀಲಿಸುವ ಪದ್ಧತಿ ಬಂದಿತು. ಹೀಗೆ ನಾಟಕವು ತನ್ನ ಸಹ
ಹೆನೀಗಿಗಳ ಈ ರ್ರೈಭಾವಕ್ಕೆ ಕಟ್ಟು ಬಿದ್ದು ಮಿಕ್ಕ ಕಾವ್ಯವರ್ಗದಿಂದ ಬೇರೆ,
ಯಾಗಿ ನತು. ಸಾ ಸಾಮಾನ್ಯಕಾವ್ಯದ" ಲಕ್ಷಣವನ್ನು ನಿರೂಪಿಸಲು
ಹೊರಟವರು ನಾಟಕದ ವಿಚಾರವನ್ನು ಉದ್ದೆ (ಶಪೂರ್ವಕವಾಗಿಯೇ
ಕೈಬಿಟ್ಟರು; ಅದನ್ನು "" ಆಗಮಾಂತರ ''ವೆಂದು- -ಎಂದರೆ, ಜೇರೆಯ
ಶಾಸ್ತ್ರವೆಂದು.... ಭಾವಿಸಿದರು. : ಅಷ್ಟೇ ಅಲ್ಲ. ದೃತ್ಯಕಾವ್ಯ ತ್ರ ವ್ಯಕಾವ್ಯ
ಗಳಿರಡಕ್ಕೂ ತಿರುಳು ಒಂದೇ ; ನಾಟಕದಲ್ಲಿ ಸ "ರಸಕ
ದೊರೆತಿರುವ ಪ್ರಾ ಶಸ್ತ್ಯವು ಎಲ್ಲ ಬಗೆಯ ಸಾಹಿತ್ಯಕ್ಕೂ ಅನ್ವಯಿಸ
ತಕ್ಕದ್ದು __ಎಂಬುದನ್ನು ನರು ಅಂಗೀಕರಿಸುವುದಕ್ಕೂ ಅ ಜೇಕಾ
ಯಿತು. ಹಾಗೆ ನಡೆದಬಳಿಕ ಅಲಂಕಾರಸಾಸ್ವ್ರದಲ್ಲ ದೊಡ್ಡ ಕ್ರಾಂತಿಯೇ
ಉಂಟಾಯಿತು: ಈ ವಿಷಯ ಮುಂದೆ ವಿಶದವಾಗುತ್ತದೆ. ಇಪ್ಟಾ
ದರೂ, ನಾಟಕಲಕ್ಷಣ ನಿರೂಪಣಿಗೇ ಮಾಸಲಾದ ಗ್ರಂಥಗಳು ಪ್ರತ್ಯೇಕ
ವಾಗಿ ಹುಟ್ಟುವುದೂ ಕಾವ್ಯಲಕ್ಷಣದ ಗ್ರಂಥಗಳಲ್ಲಿ ನಾಟಕದ ಮಾತನ್ನು
ಎತ್ತದಿರುವುದೂ ಕೊನೆಯತನಕ ತಪ್ಪಲಿಲ್ಲ.
ಲೇಖನ ಭಾಷಣಾದಿಗಳ ರೂಪರಚನೆಗಳನ್ನೂ ಉಕ್ತಿಚಮತ್ಕಾರ
ವನ್ನೂ ವಿಭಜನೆಮಾಡುವ ಅಲಂಕಾರಶಾಸ್ತ್ರ (88610110 ಕಾವ್ಯದ
ತಿರುಳನ್ನೂ ಅದರ ನಿರ್ಮಾಣಕ್ರಮವೇ ಹೊದಲಾದವನ್ನೂ ನಿರೂಪಿ
ಸುವ ಕಾವ್ಯಮಾಮಾಂಸೆ (P6೦), ಎಲ್ಲ ಲಲಿತಕಲೆಗಳಿಗೂ ಸಮಾನ
ವಿಷಯವಾಗಿರುವುದು ಮಾತ್ರವಲ್ಲದೆ ಬ್ರಹ್ಮ ಸೃಷ್ಟಿಯಲ್ಲೂ ಕಾಣಬರುವ
7 ""ಅಭಿನಯತ್ರಯಂ ಡೀತಾತೋದೇ( ಚೇತಿ ಪಂಚಾಂಗಂ ನಾಟ್ಯಂ '' (ಅಭಿನವ
ಭಾರತೀ, 1, ಪು. ೨೬೫). "' ಆಂಗಿಕಾಭಿನಯ, ವಾಚಿಕಾಭಿನಯ, ಆಹಾರ್ಯಾಭಿನಯ,
ಗಾಯನ, ವಾದ್ಯ ಎಂದು ಐದು pl ನಾಟ್ಯ. '' ಇವುಗಳಲ್ಲಿ ವಾಚಿಕಾಭಿನಯವೇ
ನಟರು ಉಚ್ಛಾರಷಾಡಬೇಕಾದ "ನಾಟಕ ''
$ ದಂಡಿ: ಕಾವ್ಯಾದರ್ಶ, ೩೧, ೫.೩೬೭; ಭಾಮಹೆ: ಕಾಪವ್ಯಾಲಂ
ಕಣರ, 1. ೨೪.
ಆ ಭಾರತೀಯ ಕಾವ್ಯಮಾಮಾಂಸೆ
ಸೌಂದರ್ಯದ ಸ್ವರೂಪವನ್ನು ವಿಚಾರಮಾಡುವ ಸೌಂದರ್ಯಮಾಮಾಂಸೆ
(Aesthetic)—ೀಗೆ ಮೂರು ಶಾಸ್ತ್ರಗಳು ಪಾಶ್ಚಾತ್ಯರಲ್ಲಿ ಬಲು
ಮಟ್ಟಿಗೆ ಪ್ರತ್ಯೇಕವಾಗಿ ಬೆಳೆದಿವೆ. ಇವುಗಳಲ್ಲಿ ಕೊನೆಯದು ಅಲ್ಲಿ ತತ್ತ್ವ
ಶಾಸ್ತ್ರದ (Philosophy) ಅ೦ಗವಾಗಿ ಬರುತ್ತದೆ; ಪ್ರಸಿದ್ಧರಾದ
ಅನೇಕಮಂದಿ ತತ್ತ್ಯವಿವೇಚಕರು ತಮ್ಮ ದರ್ಶನದಲ್ಲಿ ಸೌಂದರ್ಯ
ವಿಚಾರಕ್ಕೆ ಒಂದು ಸ್ಥಾನವನ್ನು ಕೊಟ್ಟಿದ್ದಾರೆ. ನಮ್ಮ ದೇಶದಲ್ಲಾದರೆ,
ಅಲಂಕಾರವಿಭಜನೆ, ಕಾವ್ಯಮಾಮಾಂಸೆ, ಸೌಂದರ್ಯದರ್ಶನಈ
ಮೂರನ್ನೂ ಬೇರೆ ಬೇರೆ ಶಾಸ್ತ್ರಗಳೆಂದು ಭಾವಿಸಿ ವಿಂಗಡವಾಗಿ ನಿರೂಪಿ
ಸುವ ಪದ್ಧತಿ ಬರಲಿಲ್ಲ. ಇಲ್ಲಿ ಕಾವ್ಯತತ್ಸ್ಯಸಮಾಲೋಚನೆಗೆ ಅಂಗ
ವಾಗಿಯೇ ಅನುಪ್ರಾಸ, ಉಪಮೆ ಮೊದಲಾದ ಅಲಂಕಾರಗಳ ವ್ಯವಸ್ಥೆ
ನಡೆಯಿತು. ಮೊದಮೊದಲು ಬಂದ ಆಲಂಕಾರಿಕರು ಕಾವ್ಯದಲ್ಲಿ ರಮಣೀ
ಯತೆಯನ್ನುಂ೦ಟುಮಾಡುವ ಅಂತಗಳೆಲ್ಲವನ್ನೂ ಅಲಂಕಾರಗಳೆಂದು ಕರೆ
ದರು.” ಆದರೆ ಅವರ ಕಣ್ಣಿಗೆ ಬಿದ್ದವು ಮುಖ್ಯವಾಗಿ ಯಮಕ, ಅನು
ಪ್ರಾಸ, ಉಪಮೆ, ಉತ್ಪ್ರೇಕ್ಷೆ ಮೊದಲಾದ ತಬ್ದಾರ್ಥಾಲಂಕಾರಗಳು.
ಅಲ್ಲಿಂದೀಚೆಗೆ ವಿವೇಚನೆ ತೀಕ್ಷ್ಣತರವಾಗಿ ನಡೆದು. ಕಾವ್ಯದ ತಿರುಳು
ಬೇರೆ, ಈ ಅಲಂಕಾರಗಳೆಲ್ಲವೂ ಅದಕ್ಕೆ ಅಂಗಗಳು ಮಾತ್ರ ಎಂದು ಸಿದ್ಧ
ವಾಯಿತು. ` ಅಲಂಕಾರ ' ಶಬ್ಧಕ್ಕೆ ಶಬ್ಮಾರ್ಥಾಲಂಕಾರಗಳೆಂಬ ಪರಿಮಿತ
ವಾದ ಅರ್ಥ ಬಳಕೆಗೆ ಬಂದ ಮೇಲೆ ಕೂಡ, ಸೌಂದರ್ಯವೆಂಬ ಅದರ
9 “ ಕಾವ್ಯಶೋಭಾಕರಾನ್ ಧರ್ಮಾನಲಂಕಾರಣನ್ ಪ್ರಚಕ್ಷತೇ '' (ದಂಡಿ : ಕಾವ್ಯಾ
ದರ್ಶ, ii. ೧).
" ಅರಂ (ಅಲಂ) ` ಎಂಬುದಕ್ಕೆ ಅದಿಯಲ್ಲ " ಯುಕ್ತವಾಗಿ, ಶಶ್ತವಾಗಿ '_ ಈ ಬಗೆಯ
ಅರ್ಥವಿದ್ಧಿತು. ಮೊದಲಿಗೆ " ಅಲಂಕಾರ 'ವು ಮಾಂತ್ರಿಕ ಶಕ್ತಿಯನ್ನುಂಟುಮಾಡಿಕೊಡುತ್ತಿದ್ದ
ಸಾಧನ. ವೇದಮುತ್ರಗಳಲ್ಲ ಕಾಣಬರುವ ಅನುಪ್ರಾಸ, ಉಕ್ತಿಸಾಮೃ ಮೊದಲಾದವು
ದೈೈವಿಕತಕ್ತಿಯನ್ನುಂಟುಮಾಡುವುವೆಂದೂ, ಅದಕಾರಣ ಅವು " ಅಲಂಕಾರ 'ಗಳೆಂದೂ ಮೊದ
ಲಿಗೆ ಭಾವನೆಯಿದ್ದಿರಬೇಕು. (ಭಾಷೆ ಸುಷ್ಠುಎಾಗಲು ಹೇಗೆ " ಸಂಸ್ಕೃತ 'ವಾಗಿರಬೇಕೋ
ಸಶಕ್ತವಾಗಲು ಹಾಗೆ " ಅಲಂಕ್ಕತ 'ವಾಗಿರಬೇಕು.) ಬರುಬರುತ್ತಾ ಉಕ್ತಿಸೌಂದರ್ಯದ ಕಡೆಗೆ
ಗಮನ ಹೆಚ್ಚಾಗಿ, 'ಅಲಂಕಾರ'ವು '"ಶೋಭಾಕರವಾದ ಭೂಪಣ' ವಾಗಿ ಪರಿಣ
ಮಿಸಿತು. ಅನುಪ್ರಾನೆ, ಯಮಕ, ಉಪಮ ಮೊದಲಾದವು ಕಾನ್ಯಾಲಂಕಾರಗಳಾಗಿ
ನಿಂತುವು--ಈ ಪ್ರಕಾರವಾಗಿ ಎದ್ವಾಂಸರೊಬ್ಬರು ಪ್ರತಿಪಾದಿಸಿದ್ದಾರೆ. J. onda :
The Meaning of the Word ‘ Alankara’ (Thomas Com. 7010100,
pp. 97-114).
೧. ಅವತರಣಿಕೆ €
ಹಿಂದಿನ ವಿಶಾಲಾರ್ಥ ಮರೆಗೊಳ್ಳಲಲ್ಲ.!? ಆದ್ದರಿಂದಲೇ ` ಅಲಂಕಾರ
ಶಾಸ್ತ್ರ ಗ ಕಾವ್ಯಮಾಮಾಂಸೆ '__ಈ ಎರಡೂ ನಮ್ಮಲ್ಲಿ ಸಮಾನಾರ್ಥಕ
ಶಬ್ದ ಗಳಾಗಿ ನಿಂತಿವೆ.!! ಚರಿತ್ರೆಯ ದೃ ಪ್ವಿಯಿಂದ ನೋಡಿದರೆ, ಮೊದಲು
ಕೇವಲ ಅಲಂಕಾರಶಾಸ್ತ್ರವಾಗಿದ್ದದ್ದೇ ಬರುಬರುತ್ತಾ ಹೆಚ್ಚು ಆಳಕ್ಕೆ
ಇಳಿದು, ಹೆಚ್ಚು ವಿಶಾಲವಾಗಿ ಹರಡಿ, ಕಾವ್ಯಮಾಮಾಂಸೆಯಾಗಿ ಪರಿ
ಮಿಸಿತೆನ್ನ ಬಹುದು. ಅಂತೂ ಇವೆರಡೂ ಬೇರೆ ಬೇರೆ ಶಾಸ್ತ್ರಗಳೆಂಬ
ಭಾವನೆ ನಮ್ಮವರಲ್ಲಿ ಯಾವಾಗಲೂ ತಲೆದೋರಲಿಲ್ಲ. ಇದರ ಪ್ರಯೋ
ಜನಮೇನೆಂದರೆ, ಬರಿಯ ಅಲಂಕಾರಗಳನ್ನೇ ಪಟ್ಟಿಹಾಕುವ ಉದ್ದೇಶ
ದಿಂದ ಹೊರಟವರು ಕೂಡ ಕಾವ್ಯದಲ್ಲಿ ಅವುಗಳ ಸ್ಥಾ ನವೇನೆಂಬುದನ್ನು
ಮರೆಯದಂತಾಯಿತು. ಇತ್ತ. ಎಲ್ಲ ಲಲಿತಕಲೆಗಳನ್ನೂ ಏಕವಿಚಾರಕ್ಕೆ
ಒಳಪಡಿಸುವ ಸೌಂದರ್ಯಮಾಮಾಂಸೆಯೂ ನಮ್ಮ ದೇಶದಲ್ಲಿ ಸ್ವತಂತ್ರ
ವಾಗಿ ಬೆಳೆಯಲಿಲ್ಲ. ಪಾಶ್ಚಾತ್ಯರಂತೆ ಇಲ್ಲಿಯ ದಾರ್ಶನಿಕರು ಅದನ್ನು
ಎಲ್ಲಿಯೂ ಸವಿಸ್ತರವಾಗಿ ಪ್ರತಿಪಾದಿಸಿಲ್ಲ. ಕಲೆಯ ಸೌಂದರ್ಯವೆಲ್ಲ ಒಂದು
ಬಗೆಯ ತೋರಿಕೆಯೆಂದೂ ಕಲಾವ್ಯವಹಾರವು ಒಂದು ಬಗೆಯ "ವ್ಯಸನ'
ವೆಂದೂ ಅವರು ಭಾವಿಸಿ ಅದರ ಕಡೆಗೆ ಹೆಚ್ಚುಗಮನ ಕೊಡಲಿಲ್ಲ
ವೇನೋ. ಆದರೆ, ಕಲೆಯ ಮಹತ್ತ್ವವನ್ನು ಎಲ್ಲ ಭಾರತೀಯರೂ
ಕಡೆಗಣಿಸಲಲ್ಲ.'- ಅದರಲ್ಲೂ ಕಾವ್ಯಕಲೆಯ ವಿವೇಚನೆಗೆ ಕೈಹಾಕಿದವ
1 ಕಾವ್ಯಂ ಗ್ರಾಹ್ಯಮಲಂಕಾರಾತ್. ಸ9ಿ೦ದರ್ಯಮಲಂಕಾರಃ, '. (ವಾಮನಃ
ಕಾವ್ಯಾಲಂಕಾರಸೂತ್ತ, |, ೧. ೧, ೨)
11 ಅಲಂಕಾರ ' ಅಥವಾ " ಕಾವ್ಯಾಲುಕಣರ ' ಎಂಬುದೇ ಈ ಶಾಸ್ತ್ರಕ್ಕೆ ಮೊದಲು
ರೂಢಿಯಾಗಿದ್ದ ಹೆಸರು. ಭಾಮಹ, ಉದ್ಭಟ, ವಾಮನ, ರುದ್ರಟ ಮೊದಲಾದವರ
ಗ್ರಂಥಗಳ ಹೆಸರುಗಳನ್ನು ನೋಡಿ. ಧ್ವನ್ಯಾಲೋಕದ "ಗ: ಪ್ರತಿಯಲ್ಲಿ ""ಸಹ್ಮದಯಾ
ಲೋಕನಾಮ್ಮಿ ಕಾವ್ಯಾಲಂಕಾರೇ `' (ಪು. ೫೯) ಎಂದೆ. ಕುಂತಕನು "" ಗ್ರಂಥಸ್ಯಾಸ್ಯ
ಅಲಂಕಾರ ಇತ್ಯಭಿಧಾನಂ'' (ವಕ್ರೋಕ್ತಿಜೀವಿತ, ಪು. ೩) ಎಂದು ಸ್ಹಪ್ವವಣಗಿ ಹೇಳು
ತ್ತಾನೆ. " ಕಾವ್ಯಮಾಮಾಂಸಾ' ಎಂಬ ಹೆಸರು ಈಚೆಗೆ ಪ್ರಚಂರಕ್ಕೆ ಬಂದಂತೆ ಕಾಣಿಸು
ತ್ತದೆ. ನಮಗೆ ತಿಳಿದಮಟ್ಟಿಗೆ ರಾಜಶೇಬರನೇ ಅದನ್ನು ಮೊದಲು ಉಪಯೋಗಿಸಿದವನು.
""ರಸಗಂಗಾಧರನಾಮ್ಮೀ೦ ಕರೋತಿ ಕುತುಕೇನ ಕಾನ್ಯವಿಸಾಮಾಂಸಾಂ '' ಎಂಬ ಜಗನ್ಮಾಧ
ಪಂಡಿತನ ವಾಕ್ಯವನ್ನು (ರಸಗಂಗಾಧರ, ಪು. ೩ ) ನೋಡಿದರೆ " ಕಾವ್ಯಮಾಮಾಂಸೆ `
ಎಂಬುದೂ ಈ ಶಾಸ್ತ್ರದ ಬಳಕೆಯ ಹೆಸರಾಗಿಡೆಯೆಂಬುದು ಸ್ಪಪ್ತಪಡುತ್ಮದೆ ; ಶಾಸ್ತ್ರದ
ಪರಿಣತ ಸ್ಥಿತಿಯಲ್ಲ ಪೀಗಾಗುವುದೇ ಉಚಿತ. ಅದರೆ, ಅಲಂಕಾರ ಶಾಸ್ತ್ರ), ಅಲಂಕಾರಿಕ
ಎಂಬ ಶಬ್ದಗಳೇ ಇಂದಿಗೂ ಹೆಚ್ಚು ರೂಢಿಯಾಗಿವೆ.
12 71, Hiriyanna: ‘The Indian Conception of Values’
(ABORI, XIX. 1), pp. 20-21.
ಎ೨ ಭಾರತೀಯ ಕಾಷ್ಯವಿಸಾಮಾಂಸ
ರಲ್ಲಿ ಎಷ್ಟೋ ಮಂದಿ ತಾವೇ ಶ್ರೇಪ್ಕದಾರ್ಶನಿಕರಾಗಿದ್ದರು. ಈ ಕಾವ್ಯ
ಮಾಮಾಂಸಕರು ಮಿಕ್ಕ ಕಲೆಗಳ ಮಾತಿಗೆ ಸಾಮಾನ್ಯವಾಗಿ ಬಾಯಿಹಾಕ
ದಿದ್ದ ರೂ, ಎಲ್ಲ ಕಲೆಗಳ ಮೂಲಸೂತ್ರವೂ ಒಂದೇ ಎಂಬುದರ ಅರಿವು
ಅವರಿಗೆ ಉಂಟಾಗದೆ ಇರಲಿಲ್ಲ. (ಈ ಅಂತ ಮುಂದಿನ ಅಧ್ಯಾಯಗಳಲ್ಲಿ
ವಿಶದವಾಗುತ್ತದೆ.) ಪೀಗೆ, ನಮ್ಮ ಕಾವ್ಯಮಾಮಾಂಸೆಯ ಗ್ರಂಥಗಳಲ್ಲೇ
ಸೌಂದರ್ಯಮಾಮಾಂಸೆಯೂ ತಕ್ಕಮಟ್ಟಿ ಗೆ ನಡೆಯಿತು.
೨. ಭರತನ ನಾಟ್ಯಶಾಸ್ತ್ರ
ಕಾವ್ಯಲಕ್ಷಣವೂ ನಾಟಕಲಕ್ಷಣವೂ ಭಿನ್ನಪಾತ್ರಗಳಲ್ಲ ಕೆಲವು ದೂರ
ಹರಿದ ಬಳಿಕ ಒಂದನ್ನೊಂದು ಸಂಧಿಸಿದುವೆಂದು ಮೇಲೆ ಹೇಳಿತಪ್ಪೆ.
ಇವುಗಳೆಲ್ಲ ನಾಟಕಲಕ್ಕಣವೇ ಪ್ರಾಚೀನತರವೆಂದು ತೋರುತ್ತದೆ.
ನಾಟ್ಯಪ ಶ್ರಯೋಗವು ತೊಡಕಿನ ವಿಷಯವಾದ್ದ ರಿಂದ ಲಾಕ್ಷಣಿಕರ ಗಮನ
ವನ್ನು ಇದೇ ಮೊದಲು ಸೆಳೆದಿದ್ದರೆ ಆತ್ಚರ್ಯವಿಲ್ಲ.. ಪಾಣಿನಿಯ ಕಾಲ
ಕ್ಕಾಗಲೇ (ಕ್ರಿ. ಪೂ. ಸು. ೪ನೆಯ ಶತಮಾನ) ಶಿಲಾಲಿ ಕೃಶಾಶ್ಯ ಎಂಬ
ವರ ನಟಸೂತ್ರಗಳಿದ್ದು ವು.' ಆದರೆ ಈ ನಟಸೂತ್ರಗಳು ಮಾತುಗಾರಿಕೆಯ
ನ್ನೊಳಕೊಳ್ಳದ ಕೇವಲ ನೃತ್ಯಕ್ಕೆ ಅನ್ಯಯಿಸುತ್ತಿದ್ದುಪೋ ಏನೋ ಎಂಬ
ಸಂದೇಹವೂ ಇದೆ.' ಪತಂಜಲಿಯ ಕಾಲಕ್ಕಾದರೆ (ಕ್ರಿ. ಪೂ. ಸು.
೧೫೦) ಸಂಸ್ಕೃತ ನಾಟಕವು ಸರ್ವಾಂಗ ಪರಿಪೂರ್ಣವಾಗಿದ್ದಿ ತೆಂದು
ನಂಬಬಹುದು.' ನಾಟ್ಯಶಾಸ್ತ್ರಕ್ಕೂ ಹೆಚ್ಚುಕಡಮೆ ಆ ಸಮಯದಲ್ಲೇ
ಅಂಕುರಾರ್ಪಣವಾಗಿರಬೇಕು.
ಈಗ ದೊರೆಯುವ ನಾಟ್ಯಲಕ್ಷಣ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನ
ವಾದದ್ದು " ಭಾರತೀಯ ನಾಟ್ಯತಾಸ್ತ್ರ'. ಇದರ ಕರ್ತ್ರ್ವ ಭರತಮುನಿ
ಯೆಂದು ಪ್ರತೀತಿಯಿದೆ. ಆದರೆ ಈತನು ಯಾರು? ಯಾವ ಕಾಲದಲ್ಲಿದ್ದ
! ಅಪ್ಟಾಧ್ಯಾಯಾ, ೪. ೩. ೧೧೦-೧೧.
೨%. 03. Keith : Sanskrit Drama, pp. 31, 290.
ಭಾರತೀಯ ನಾಟಕವು ಕ್ರಿ. ಪೂ. ಮೂರು ಅಥವಾ ನಾಲ್ಕನೆಯ ಶತ ಸಜಾನದಷ್ಟೂ
ದರೂ ಹಿಂದೆಯೇ ಹುಟ್ಟಿರಬೇಕೆ೦ದು ವಿದ್ಯಾಂಸರೊಬ್ಬರು ಬೌದ್ಮಗ್ರಂಥಗಳಲ್ಲ ದೊರೆಯುವ
ಆಧಾರಗಳನ್ನು ಅವಲಂಬಿಸಿ ಈಚೆಗೆ ನಿರೂಪಿಸಿದ್ದಾರೆ :
“ The available ovidence would take Dack its origin to ut
least the thard or fourth century B. C., if they do not conclusively
prove that 0110870 were dramatic spectacles ೦! 50170 kind, probably
comedy 810 muce; in the time of Buddha himself.’ —0O. H.de A.
Wijesekara : ‘ Buddhist Evidence for the Early Existence of
Drama’ (THQ, XVII. 2), p. 205.
೧೧
೧೨ ಭಾರತೀಯ ಕಾವ್ಯವಿಕಾಮಾಂಸೆ
ವನು? ಈಗ ಪ್ರಚಾರದಲ್ಲಿರುವ ನಾಟ್ಯಶಾಸ್ತ್ರಗ್ರಂಥಪೆಲ್ಲವೂ ಈತನೇ ರಚಿ
ಸಿದ್ಧೆ?_ ಈ ಮೊದಲಾದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ದೊರೆಯು
ವುದಿಲ್ಲ. ಬ್ರಹ್ಮನು ದೇವತೆಗಳ ಕೋರಿಕೆಯಂತೆ ನಾಟ್ಯವನ್ನು ನಿರ್ಮಿಸಿ
ಅದರ ಪ್ರಯೋಗವನ್ನು ಭರತನಿಗೂ ಆತನ ನೂರುಮಂದಿ ಮಕ್ಕಳಗೂ
ವಹಿಪಿದನೆಂದು " ನಾಟ್ಯಶಾಸ್ತ್ರ`ದ ಮೊದಲನೆಯ ಅಧ್ಯಾಯವು ತಿಳಿಸುತ್ತ ದೆ.
ಕಾಳಿದಾಸನ " ವಿಕ್ರಮೋರ್ವಶೀಯ 'ದಲ್ಲ, ಭರತನು ಲಕ್ಷ್ಮೀಸ್ಟಯಂವರ
ವೆಂಬ ನಾಟಕವನ್ನು ಇಂದ್ರಸಭೆಯಲ್ಲಿ ಅಪ್ಸರೆಯರಿಂದ ಆಡಿಸಿದನೆಂದು
ಕಥಾಸಂಗತಿಯಿದೆ. ಇದನ್ನೆಲ್ಲಾ ನೋಡಿದರೆ, ನಮ್ಮದೇತದಲ್ಲ ಬಲು
ಹಿಂದೆಯೇ ಭರತನಿಗೆ ಮುನಿಪಟ್ಟವು ಬಂದು ಆತನ ಐತಿಹಾಸಿಕತ್ಚವು
ಮಸುಳಿಹೋಗಿದ್ದಿ ತೆನ್ನಬೇಕು. ನಾಟ್ಯಶಾಸ್ತ್ರಕ್ಕಿರುವ ನಾಟ್ಯ" ವೇದ'
ಪೆಂಬ ಇನ್ನೊಂದು ಹೆಸರೂ ಈ ಆಂತವನ್ನೇ ಪೋಷಿಸುತ್ತದೆ. ಭರ
ತನು ಪೀಗೆ ಲೋಕೋತ್ತರವ್ಯಕ್ತಿಯಾಗಿ ಪರಿಣಮಿಸಿದ್ದರಿಂದ ಆತನ
ಹೆಸರಿನಲ್ಲಿರುವ ಗ್ರಂಥಕ್ಕೆ ಅಪೂರ್ವವಾದ ಪೂಜ್ಯತೆಯೂ ಪ್ರಾಮಾಣ್ಯವೂ
ಬಂದುವು ; ನಾಟಕಕಾರರೂ ಲಕ್ಷಣಕಾರರೂ ಅದರ ವಿಧಿಗಳನ್ನು ಮರು
ಮಾತಿಲ್ಲದೆ ಒಪ್ಪಿ ಕೊಳ್ಳುವ ಪರಿಸ್ಥಿತಿ ಉಂಟಾಯಿತು.
" ಭಾರತೀಯ ನಾಟ್ಯಶಾಸ್ತ್ರ 'ವೆಂಬ ಹೆಸರಿನಲ್ಲಿ ಈಗ ಪ್ರಚುರವಾಗಿ
ರುವ ಗ್ರಂಥವೆಲ್ಲವೂ ಏಕಕರ್ತೃಕಪೆ೦ಂದು ಹೇಳುವುದು ಅಸಾಧ್ಯ. ಇದರ
ಬಹುಭಾಗವು ಅನುಷ್ಟುಪ್‌ಛಂದಸ್ಸಿನಲ್ಲ ಕಾರಿಕೆಗಳ ರೂಪದಲ್ಲಿದೆ. ಆದರೆ
ಅಲ್ಲಲ್ಲಿ -- ಉದಾಹರಣಿಗೆ, ರಸಭಾವ ವಿಚಾರವನ್ನು ಹೇಳುವ ಆರೇಳನೆಯ
ಅಧ್ಯಾಯಗಳಲ್ಲ--ಗದ್ಯವೂ ಬರುತ್ತದೆ ; ಇದರಲ್ಲ ಕೆಲಕೆಲವು ಭಾಗಗಳನ್ನು
ಸೂತ್ರವೆಂದೂ ಭಾಷ್ಯವೆಂದೂ ಈ ಗ್ರಂಥದ ಪ್ರಸಿದ್ಧ ವ್ಯಾಖ್ಯಾನಕಾರ
ನಾದ ಅಭಿನವಗುಪ್ತನು ಪ್ರತ್ಯೇಕಿಸುತ್ತಾನೆ. ಈ ಕಾರಿಕೆ, ಸೂತ್ರ-
ಭಾಷ್ಯ ಇವುಗಳ ಜೊತೆಗೆ, ನಡುನಡುವೆ ""ಅತ್ರ ಆನುವಂಶ್ಕ್ ಶ್ಲೋಕೌ
ಭವತಃ'', "" ಅತ್ರ ಅನುವಂಶ್ಯೇ ಆರ್ಕೇ ಭವತಃ'', "" ಅತ್ರ ಶ್ಲೋಕಾಃ '',
"“ ಅತ್ರ ಆರ್ಯೇ »_ಈ ಬಗೆಯಾದ ಅವತಾರಿಕೆಯೊಡನೆ ಕೆಲವು ಶ್ಲೋಕ
ಗಳೂ ಆರ್ಯೆಗಳೂ ಬಂದು ವಿಷಯಸಂಗ್ರಹ ಮಾಡುತ್ತವೆ. ಇಂಥ ಪದ್ಯ
ಗಳು ಪೂರ್ವಾಚಾರ್ಯರ ಕೃ ತಿಯೆಂದೂ, ಅವುಗಳಲ್ಲಿ ""ಆನ:ವಂಶ್ಯ''ಗಳಂತೂ
ಗುರುಶಿಷ್ಯ ಪರಂಪರೆಯಲ್ಲಿ ಪಿಂದಿನಿಂದ ಬಂದಪೆಂದೂ ಅಭಿನವಗುಪ್ತನ್ನೇ
5 ಭರತನ ನಾಟ್ಯಶಿಇಸ್ಮ ೧೩
ಸೂಚಿಸಿದ್ದಾನೆ. ಆದಕಾರಣ, ಈ ಪದ್ಯಗಳು ನಾಟ್ಯಶಾಸ್ತ್ರದ ಕಾರಿಕೆಗಳಿ
ಗಿಂತ ಪ್ರಾಚೀನಪೆಂದು ಸ್ಪಪ್ಪವಾಗುತ್ತದೆ. ಇನ್ನು ನಾಟ್ಯತಾಸ್ತ್ರವು
ಮೂಲತಃ ಗದ್ಯದಲ್ಲಿ ಸೂತ್ರಗಳ ರೂಪದಲ್ಲಿದ್ದಿರಬೇಕು; ಅದರ ಬಹು
ಭಾಗವನ್ನು ಈಚೆಗೆ ಯಾರೋ ಕಾರಿಕೆಗಳಾಗಿ ಮಾರ್ಪಡಿಸಿರಬೇಕು;
ಈಗ ಹತ್ತಿ ಕೊಂಡಿರುವ ಗದ್ಯದ ಚೂರುಗಳು ಗ್ರಂಥದ ಮೂಲರೂಪದ
ಅವಶೇಪ- -ಪೀಗೆಂದು ಕೆಲವರು ಅಭಿಪಾ ಯ ಪಡುತ್ತಾರೆ ; ಇದನ್ನು
ಒಪ್ಪದವರೂ ಉಂಟು. ಇದಲ್ಲದೆ, ಮೇಲಿಂದ ಮೇಲೆ ಪದ್ಯಗಳು ಪ್ರಕ್ಷಿಪ್ತ
ವಾಗುವುದು, ಗ್ರಂಥಪಾತವಾಗುವುದು, ಪಾಠಾಂತರಗಳು ತಲೆದೋರು
ವುದು ಇವೆಲ್ಲ ಇಂಥ ಗ್ರಂಥಗಳಲ್ಲಿ ಸಾಮಾನ್ಯ. " ಭಾರತೀಯ ನಾಟ್ಯ
ಶಾಸ್ತ್ರ'ದಲ್ಲ ಎರಡು ಪಾಠಸಂಪ್ರದಾಯಗಳು (1೪06೧30) ಉಂಟೆಂದು
ಈಗ ಬಹುಮಟ್ಟಿಗೆ ವ್ಯಕ್ತಪಟ್ಟಿದೆನ? ಅಂತೂ ಈ ಎಲ್ಲ ತೊಡಕುಗಳ
ಪರಿಣಾಮವಾಗಿ ಮೂಲ ನಾಟ್ಯಶಾಸ್ತ್ರದ ಸ್ವರೂಪವನ್ನು ನಿರ್ಧರಿಸು
ವುದು ಅತಿಕಪ್ಪ.
ಇದರಿಂದ ಈ ಗ $ಂಥದ ಕಾಲನಿರ್ಣಯವೂ ಚರ್ಚೆಗೆ ಸಿಕ್ಕಿ ಕೊಂ
ಡಿದೆ. ಆದರೂ, ಈ ನಾಟ್ಯಶಾಸ್ತ್ರದಲ್ಲಿ ಉಕ್ತವಾಗಿರುವ ಅಂಶಗಳಲ್ಲಿ
ಒಟ್ಟಿನಮೇಲೆ ಪರಸ್ಪರ ವಿರೋಧವಿಲ್ಲದಿರುವುದರಿಂದ ಕೆಲವು ಆಂತರಿಕ
ಪ್ರಮಾಣಗಳನ್ನು ಅವಲಂಬಿಸಿ ಇದರ ಕಾಲವನ್ನು ಸ್ಕೂಲವಾಗಿ ನಿರ್ಣಯಿ
ಸುವ ಪ್ರಯತ್ನಗಳು ನಡೆದಿವೆ. ಈ ಆಧಾರಗಳಲ್ಲಿ ಒಂದೆರಡನ್ನು ಮಾತ್ರ
ಇಲ್ಲಿ ಸೂಚಿಸಬಹುದು. ಈಚಿನ ಲಾಕ್ಷಣಿಕರೆಲ್ಲರೂ ಅಲಂಕಾರಗಳ
ಸಂಖ್ಯೆಯನ್ನು ಹೆಚ್ಚು ಹೆಚ್ಚಾ ಗಿ ಜೆಳಸಿರುವಾಗ ಭರತನ ಗ್ರಂಥದಲ್ಲಿ
ಉಪಮಾ, ದೀಪಕ, ರೂಪಕ, ಯಮಕ ಈ ನಾಲ್ಕನ್ನು ಮಾತ್ರ ಹೇಳಿದೆ ;
ಇಲ್ಲಿ ಬಂದಿರುವ ಛಂದೋವಿಧಾನವು ಪಿಂಗಳನ ಪದ್ಧತಿಗಿಂತ ಪಿಂದಿನದು ;
ಇದರಲ್ಲಿ ನಿರೂಪಿತವಾಗಿರುವ: ಪ್ರಾಕೃತ ಭಾಷೆಯ ಕಾಲ ಕ್ರಿ. ಶ. ಸು.
1 ಭರತನ ನಾಟ್ಯಶಾಸ್ತ $ದ ಆ೦ನೆಯ ಅಧ್ಯಾಯ, ಅದರ ಮೇಲನ ವ್ಯಾಖ್ಯಾನ...
ಈ ಭಾಗದಲ್ಲೇ ಮೇಲಿನ ಹೇಳಿಕೆಗೆ ಉದಾಹರಣೆಗಳು ದೊರೆಯುತ್ತವೆ ಈ ವಿಷಯದಲ್ಲಿ
ಖ. V. Kane: " Gleanings frou: AbhinavabhArati’, pp. 393-4 ನೋಡಿ
(Pathak Com, 01009).
5 ನಾಟ್ಯಶಾಸ್ತ್ರದ ಎರಡನೆಯ ಸಂಪುಟಕ್ಕೆ ಅದರ ಸಂಪಾದಕರಾದ ಎಂ. ರಾಮ
ಕೃಷ್ಣ ಕವಿಗಳು ಬರೆದಿರುವ ಪೀಠಿಕೆಯನ್ನು ನೋಡಿ.
೧೪ ಭಾರತೀಯ ಕಾವ್ಯಮಾಮಾಂಸೆ
೨೦೦ ಎನ್ನಬಹುದು. ಇಂಥ ಅಂತಗಳ ಜೊತೆಗೆ, ಭರತನ ಮುನಿಪಟ್ಟ
ವನ್ನೂ ಕಾಳಿದಾಸನಿಗೆ ಈ ಗ್ರಂಥದ ವಿಧಿಗಳ ಪರಿಚಯವಿದ್ಧಂತೆ ವ್ಯಕ್ತ
ವಾಗುವುದನ್ನೂ ಜ್ಞಾ ಪಿಸಿಕೊಂಡರೆ ಇದರ ಕಾಲ ಕ್ರಿ. ಶೆ ಮೂರನೆಯ
ಶತಮಾನಕ್ಕಿಂತ ಹಿಂದೆಯೇ ಇರಬೇಕೆಂದು ಹೇಳಬಹುದು. ಆದರೆ
ಬಹಳ ಹಿಂದೆ ಎನ್ನುವಂತಿಲ್ಲ; ಏಕೆಂದರೆ ಶಕ, ಯವನ, ಪಲ್ಲವ, ಬಾಪ್ಗಿ ಕ
ಮೊದಲಾದ ಕುಲಗಳ ಹೆಸರು ಇದರಲ್ಲಿ ದೊರೆಯುತ್ತದೆ (ಕಾತೀ
ಮುದ್ರಣ, xxiii. ೧೦೩). ಒಟ್ಟಿನ ಮೇಲೆ, ಕ್ರಿ. ಶೆ. ಎರಡನೆಯ ತತ
ಮಾನದಲ್ಲ ' ನಾಟ್ಯಶಾಸ್ತ್ರ' ಗ್ರಂಥವು ಹೆಚ್ಚುಕಡಮೆ ಈಗಿನ ರೂಪದಲ್ಲದ್ದಿ
ತೆಂದೂ ಅದರಲ್ಲಿ ನಿರೂಪಿತವಾಗಿರುವ ಸಂಪ್ರದಾಯವು ಬಹುಶಃ
ಕ್ರಿ. ಪೂ. ೧೦೦ರಷ್ಟು ಹಿಂದಕ್ಕೆ ಮುಟ್ಟಬಹುದೆಂದೂ ಈ ವಿಚಾರವಾಗಿ
ಎಲ್ಲ ಮುಖದಿಂದಲೂ ಪರಿಶೋಧನೆ ನಡಸಿರುವ ಮನೋಮೋಹನ
ಘೋಷ್ ಅವರ ಅಭಿಪ್ರಾಯ."
ಈ " ನಾಟ್ಯತಾಸ್ತ್ರ'ವು ಒಂದು ವಿಶ್ವಕೋಶ. ಅದರ ೩೬ (ಅಥವಾ
೩೭) ಅಧ್ಯಾಯಗಳಲ್ಲಿ ನಾಟ್ಯದ ಉತ್ಪತ್ತಿ. ಪ್ರಯೋಗ, ಅಂಗಗಳು,
ಮೊದಲಾದವನ್ನು ಕುರಿತು ಹೇಳದಿರುವ ವಿಷಯವೇ ಇಲ್ಲ. ಅನಧ್ಯಯ
ನದ ವಿರಾಮ ಕಾಲದಲ್ಲ ಭರತಮುನಿ ಮಕ್ಕಳೊಂದಿಗೆ ಕುಳಿತು, ನಾಟ್ಯದ
ವಿಷಯದಲ್ಲಿ ಖಪಿಗಳು ಕೇಳಿದ ಪ್ರಶ್ನೆಗಳಿಗೆಲ್ಲಾ ಸಾವಕಾಶವಾಗಿ
ಉತ್ತರ ಕೊಡುತ್ತಿದ್ದಾನೆ. ನಾಟ್ಯ ಹುಟ್ಟಿದ್ದು ಹೇಗೆ? "ಪ್ರೇಕ್ಷಾಗೃಹ'
ವನ್ನು ಹೇಗೆ ಕಟ್ಟಬೇಕು ? ರಂಗದೇವತೆಗಳನ್ನು ಹೇಗೆ ಒಲಿಸಿಕೊಳ್ಳಬೇಕು ?
ತಾಂಡವ ಮೊದಲಾದ ನೃತ್ಯಗಳು, ಬಗೆಬಗೆಯ ಅಭಿನಯಗಳು, ಪಾತ್ರ
ಗಳ ವೇಷ ಭೂಷಣಗಳು, ನಾಟ್ಯದಲ್ಲಿ ಬರುವ ಭಾಷೆ ಛಂದಸ್ಸು ಗೀತ
ವಾದ್ಯಗಳು. ಇದೆಲ್ಲದರ ವಿವರಷೇನು ? ರಸಭಾವಗಳ ಸ್ವರೂಪವೇನು?
ನಾಟಕಗಳು ಎಷ್ಟು ಬಗೆ? ಪಾತ್ರ ವ್ಯವಸ್ಥೆ -ಹೇಗೆ? ಈ ವಿಷಯಗಳನ್ನೆಲ್ಲಾ
6 “Now considering both the limits to the date, we may con
elude that the present teat of the NS. existed in the second century
after Christ while the tradition it records may go backtoa
period as early as 100 B.C.” M. Ghosh : ‘The Date of the Bharata
NatyaSastra’, (Journal of the Dept. of Letters, Cal, Uni., XXV,
p52).
೨. ಭರತನ ನಾಟ್ಯಶಾಸ್ತ್ರ ೧೫
ಮುಖ್ಯವೆನ್ನದೆ ಅಮುಖ್ಯಪೆನ್ನದೆ ಒಂದೇ ಸರಣಿಯಲ್ಲಿ ವಿವರಿಸುತ್ತಿದ್ದಾನೆ. ;
ಇಲ್ಲ ಕಾವ್ಯಮಾಮಾಂಸೆಗೆ ಸಂಬಂಧಪಟ್ಟ ಅಂಶಗಳು ಹಲವಿವೆ. ಅವು
ಗಳಲ್ಲೆಲ್ಲಾ ರಸಭಾವಗಳ ವಿಚಾರವು ನಮ್ಮ ದೃಷ್ಟಿಯಿಂದ ಅತಿಮುಖ್ಯ.
ಕಾವ್ಯಕ್ಕೆ ರಸವೇ ಜೀವಿತವೆಂಬ ವಿಷಯವನ್ನು ಭರತನಿಗೆ ಪಿಂದೆಯ್ಲೇ ಕವಿ
ಗಳು ಅರಿತಿರಬೇಕು; " ನಾಟ್ಯಶಾಸ್ತ್ರ 'ದ ""ಆನುವಂತ್ಯ'' ಪದ್ಯಗಳಲ್ಲೂ
ಗದ್ಯಭಾಗದಲ್ಲೂ ರಸವಿಚಾರವಿರುವುದರಿಂದ ಪೂರ್ವಾಚಾರ್ಯರು ಅದನ್ನು
ಪ್ರತಿಪಾದಿಸಿಯೂ ಇರಬೇಕು." ಆದರೆ ರಸದ ಸ್ವರೂಪ, ನಿಪ್ಪತ್ತಿ
ಮುಂತಾದವನ್ನು ಕುರಿತ ನಿರೂಪಣಿ ಮೊದಲು ನಮ್ಮ ಕಣ್ಣಿಗೆ ಬೀಳು
ವುದು ಭರತನ ಗ್ರಂಥದಲ್ಲಯೇ. ಅಲ್ಲಿಂದೀಚೆಗೆ ಹುಲುಸಾಗಿ ಬೆಳೆದಿರುವ
ವ್ಯಾಖ್ಯಾನರಾಶಿಗೆಲ್ಲಾ "" ವಿಭಾವಾನುಭಾವವ್ಯಭಿಚಾರಿಸಂಯೋಗಾದ್ರಸ
ನಿಪ್ಪತ್ತಿಃ'' ಎಂಬ ಸೂತ್ರವು ಒಡ್ಡಿದ ಸಮಸ್ಯೆಯೇ ಮೂಲ.
ರಸತತ್ತ್ವಪೇ ಭಾರತೀಯ ಕಾವ್ಯಮಾಮಾಂಸೆಯ ಒಳತಿರುಳು ;
ಕಾವ್ಯಸಾಗರವನ್ನು ಆಲೋಡನೆ ಮಾಡಿ ಮಾಡಿ ನಮ್ಮ ಶಾಸ್ತ್ರಕಾರರು ಸಾಧಿ
ಸಿರುವ ಅಮೃತವೇ ಅದು. ರಸದ ಸ್ವರೂಪ, ಪ್ರಭೇದ ಮೊದಲಾದವುಗಳ
ವಿಚಾರವು ಈ ನಮ್ಮ ಗ್ರಂಥದಲ್ಲಿ ಮುಂದೆ ಯಥಾಸ್ಥಾನದಲ್ಲ ತಕ್ಕಮಟ್ಟಿಗೆ
7 ರಸಾಭಾವಾ ಹೈಭಿನಯಾ ಧರ್ಮಾ ವೃತ್ತಿಪುವೃತ್ತಯಃ |
ಸಿದ್ದಿ ಸ್ವರಾಸ್ತಥಾತೋದ್ಯಂ ಗಾನಂ ರಂಗಶ್ಚ ಸಂಗ್ರಹಃ | (ನಾ. ಶಾ. 1. ೧೦)
ಈ ಶ್ಲೋಕವನ್ನು ನಾಟ್ಯಶಾಸ್ತ್ರದ ವಿಷಯಸೂಚಿಕೆಯೆಂದು ಕರೆಯಬಹುದು. " ನಾಟ್ಯ
ಶಾಸ್ತ್ರ) 'ದ ವಿಷಯ ಸಂಪತ್ತಿಯೇನೆಂಬುದನ್ನು ವಿಶದವಾಗಿ ತಿಳಿಯ ಬೇಕೆನ್ನುವವರು
ಎ. ಆರ್. ಕೃಷ್ಣಶಾಸ್ತ್ರಿಗಳ " ಅಲಂಕಾರ ಶಾಸ್ತ್ರದ ಚರಿತೆ (೧) ' ಎಂಬ ಲೇಖನವನ್ನು
ನೋಡಬಹುದು (ಪ್ರ.ಕ.,೪. ೨).
* ರಾಜಶೇಖರನ ಹೇಳಿಕೆಯ ಮೇರೆಗೆ, ರಸ ವಿಚಾರವನ್ನು ನಿರೂಪಿಸಿದ ಆಚಾರ್ಮನು
ನಂದಿಕೇಶ್ಚರ, ಭರತನಲ್ಲ; ಭರತನು ನಿರೂಪಿಸಿದ್ದು ನಾಟಕವಿಜಣರ ಎಂಬುದನ್ನು ಇಲ್ಲ
ಪ್ಹಾಪಿಸಬಹುದು.
“ ಯದ ಸಿ ತತ್ ಸುಕೃತಂ | ರಸೋ ವೆ ಸಃ! ರಸಂ ಹೇವಾಯಂ ಲಬ್ಬ್ಮಾನಂದೀ
ಭವತಿ | '' (ತೈೊತ್ತಿರೀಯೋಪನಿಪತ್, 0. ೭. ೧)-ಈ ಮೊದಲಾದ ಉಪನಿಷದ್ವಾಕ್ಯ
ಗಳನ್ನು ಅವಲಂಬಿಸಿ, ರಸತತ್ತ್ವವು ವೈದಿಕ ವಾಜ್ಮಯದಲ್ಲಿಯೇ ಕಣಣಿಸಿಕೊಂಡಿದೆಯೆಂದು
ಕೆಲವರು ಹೇಳುವುದುಂಟು. ಉದಾಹರಣಿಗೆ, ಜಗನ್ಮಾಥಪಂಡಿತನು "ರಸಗಂಗಾಧರ'ದಲ್ಲಿ
ಈ ತುತ್ಯಾಥಾರವನ್ನು ನಿರ್ದೇಶಿಸುತ್ತಾನೆ (ಪು. ೨೩). ರಸವೆಂದರೆ ಸಾರ, ಸವಿಯು
ಸಾರ. ಮೇಲಿನ ಉಪನಿಷದ್ಭಾಶ್ಯಗಳಲ್ಲ ಉಕ್ತ ವಾಗಿರುವ ರಸವು ಬ್ರಹ್ಮಾನಂದರಸವೇ
ಹೊರತು ನಮಗೆ ಪ್ರಕೃತವಾದ ಕಾವ್ಯರಸವಲ್ಲ. ಕಾವ್ಯರಸವು ಅನಂದಾತ್ಮಕವೆಂಬ ಹೇಳಿ
ಕೆಯ ಬೀಜ ಇಲ್ಲಿದೆಯೆಂದು ಬೇಕಾದರೆ ಭಾವಿಸಬಹುದು. (A. Sankaran : Rasa and
Dhvani, Chap. 1 ನೋಡಿ.)
-
೧೬ ಭಾರತೀಯ ಕಾವ್ಯವಿಾಮಾಂಸೆ
ವಿಶದವಾಗಿ ಬರುತ್ತದೆ. ಆದರೆ, ಗ್ರಂಥಪ್ರಾರಂಭದಿಂದಲೂ ರಸದ
ಹೆಸರನ್ನು ಎತ್ತದೆ ವಿಧಿಯಿಲ್ಲ; ಪುಟಪುಟದಲ್ಲಿಯೂ ಅದರ ಮಾತಿಲ್ಲದೆ
ಮುಂದುವರಿಯುವಹಾಗಿಲ್ಲ. ಆದಕಾರಣ, ರಸವೆಂದರೇನು ಎಂಬುದರ
ದಿಗ್ಬರ್ಶನವನ್ನಾದರೂ ಇಲ್ಲಿ ಸಂಕ್ಷಿಪ್ತವಾಗಿ ಮಾಡಿಕೊಡುವುದು ಅಗತ್ಯ
ವಾಗಿದೆ. ಇದಕ್ಕೆ ಒಂದು ಉದಾಹರಣಿಯನ್ನು ತೆಗೆದುಕೊಳ್ಳುವುದೇ
ಲೇಸು. ಮಗಳನ್ನು ಗಂಡನ ಮನೆಗೆ ಮೊದಲ ಬಾರಿ ಕಳುಪಿಸಿಕೊಡುವಾಗ
ಏನು ನಡೆಯಿತೆಂಬುದನ್ನು ಪಂಪನು " ಆದಿಪುರಾಣ ' ದಲ್ಲಿ ಒಂದು ಕಡೆ
ಹೀಗೆ ಚಿತಿ ಿಸಿದ್ಧಾನೆ:
ಪೊಡೆವಡುವಪ್ಪಿ ಕೊಳ್ಳ ನೆನೆಯುತ್ತಿರಿಮೆಂಬ ಸಹುಸ್ತವಸ್ತುವಂ
ಕುಡುವ ಪಲರ್ಮೆಯಿಂ ಪರಸಿ ಸೇಸೆಯುನಿಕ್ಕುವ ಬುದ್ಧಿವೇಟ್ಟ ಕ. |
ಯ್ಯೆಡೆ ನಿಮಗೆಂದೊಡಂಒಡಿಪ ನಲ್ಬರಗಲೈಗೆ ಕಣ್ಣ ನೀರ್ಗಳ೦
ಮಿಡಿವ ಬಹುಪ್ರಕಾರಜನಸಂಕಟವೊಪ್ಪಿ ದುದಾ ಪ್ರಯಾಣದೊಳ್ ॥ (. ೫೭)
ತೌರುಮನೆಯಲ್ಲಿ ಅಕ್ಕರೆಯ ಮಗುವಾಗಿ, ಆನಂದದ ಬಳ್ಳಿಯಾಗಿ,
ಜೆಳೆದ ಮಗಳು ಈಗ ತಾಯಿ, ತಂದೆ, ಸಖಿಯರು, ಬಂದುಗಳು
ಈ ಎಲ್ಲರನ್ನೂ ಬಿಟ್ಟು ದೂರಕ್ಕೆ ತೆರಳುತ್ತಿದ್ದಾಳೆ. ಅವಳು ಹೋಗ
ಲಾರಳು, ಇರಲಾರಳು; ಇವರೂ ಕಳುಪಿಸಿಕೊಡಲಾರರು, ಬಿಡಲಾರರು.
ಒಟ್ಟಿಗಿದ್ದಾಗ ಪ್ರೀತಿ ಒಬ್ಬರೊಬ್ಬರಿಗೆ ಎಷ್ಟೆಷ್ಟು ಬಲಿದಿತ್ತೋ, ಅಗಲು
ವಾಗ ಅಪ್ಪಷ್ಟು ಶೋಕವಾಗಿ ತಿರುಗಿದೆ. ಈ ಪದ್ಯವನ್ನು ನಾವು
ಓದುವಾಗ, ಇವರೇನು ಮಾಡಿದರು, ಅವರೇನು ಹೇಳಿದರು ಎಂದು
ತಿಳಿದುಕೊಂಡಪ್ವಕ್ಕೇ ತಟಸ್ಥ ರಾಗಿ ನಿಲ್ಲದೆ, ಈ ಅಗಲಿಕೆಯಿಂದ ಉದ್ಭ ವಿ
ಸಿದ ಶೋಕವೆಂಬ ಚಿತ್ತವೃತ್ತಿಯನ್ನೇ ಒಂದು ವಿಶೇಪರ್ಲೀತಿಯ ತನ್ಮಯತೆ
ಯಿಂದ ಅನುಭವಿಸುತ್ತೇವೆ; ಇದರಲ್ಲೇ ಅನಿರ್ವಚನೀಯವಾದ ಆಸ್ಚಾದ
ವನ್ನು ಪಡೆಯುತ್ತೇವೆ. ಹೀಗೆ ಇಲ್ಲಿ ನಮಗೆ ಉಂಟಾಗುವ ಅನುಭವ
ವಿಶೇಷಕ್ಕೆ " ರಸ ' ಎಂದು ಹೆಸರು. ಲೋಕವ್ಯವಹಾರದಲ್ಲ ಶೋಕವು
ದುಃಖಾತ್ಮಕವಾದರೂ ಕಾವ್ಯನಾಟಕಗಳಲ್ಲ ಲೌಕಿಕತ್ವವನ್ನು ಕಳೆದುಕೊಂಡು
"ಕರುಣರಸ 'ದ ರೂಪವನ್ನು ಹೊಂದಿ ಆಹ್ಲಾ ದಮಯವಾಗುತ್ತದೆ. ಇದ
ರಂತೆಯೇ ಪ್ರೇಮ, ಉತ್ಪಾಹ. ಭಯ, ಆಶ್ಚರ್ಯ ಮೊದಲಾದ 'ಮಾನವನ
ಎಲ್ಲ ಚಿತ್ತವೃತ್ತಿಗಳೂ ಲೋಕದಲ್ಲ ಪ್ರ್ರಿಯವಾಗಿರಲಿ ಅಪ್ರಿಯವಾಗಿರಲಿ,
೨. ಭರತನ ನಾಟ್ಯಶಾಸ್ತ್ರ ೧೬
ಕಾವ್ಯನಾಟಕಗಳಲ್ಲ ಆಸ್ಕಾದ್ಯವಾಗಿ ಶೃಂಗಾರ, ವೀರ, ಭಯಾನಕ,
ಅದ್ಭುತ ಮೊದಲಾದ ವಿಎಧ ರಸಗಳಾಗುತ್ತ ವೆ. ಜೀವನದಲ್ಲಿ ಶೋಕವೆಂಬ
ಚಿತ್ತೆ ವೃತ್ತಿಗೆ (ಅಥವಾ " ಭಾವ 'ಕ್ಕೆ) ಪ್ರಿಯರ ಅಗಲಿಕೆ ಒಂದು ಕಾರಣ ;
ಹೀಗೆ ಚಿತ್ತವು ಕಲಕಿದಾಗ ಕಣ್ಣಿನಲ್ಲಿ ನೀರು ತುಂಬುವುದು, ಕೊರಳ ಸೆರೆ
ಬಿಗಿಯುವುದು, ಸ್ಲೇಪಮಯವಾದ ಹಲವು ಮಾತುಗಳನ್ನಾಡುವುದು ಈ
ಹೊದಲಾದ ಕಾರ್ಯಗಳು ನಡೆಯುತ್ತವೆ. " ಭಾವ'ವು ಕೇವಲ ಮಾನಸಿಕ
ವ್ಯಾಪಾರವಾದದ್ದರಿಂದ ಅದು ಇಂದಿ ಿಯಗಳಿಗೆ ಗೋಚರವಾಗುವುದಿಲ್ಲ.
ಅದನ್ನು ಅರಿಯಲು ಅದರ ಕಾರಣಕಾರ್ಯಗಳನ್ನು ಅರಿತುಕೊಳ್ಳುವು
ದೊಂದೇ ದಾರಿ. ಕಾವ್ಯನಾಟಕಗಳಿಗೂ ಈ ಮಾತು ಅನ್ವಯಿಸುತ್ತದೆ ;
ಇಲ್ಲ, ಭಾವವನ್ನು ಉದ್ದೋಧಗೊಳಿಸುವ ಕಾರಣಸಾನುಗ್ರಿಗೆ " ವಿಭಾವ '
ಎಂದೂ, ಭಾವದ ಕಾರ್ಯಸಮುದಾಯಕ್ಕೆ " ಅನುಭಾವ' ಎಂದೂ
ಸಂಜ್ಞೆ. ಈ ವಿಭಾವಾನುಭಾವಗಳನ್ನು ಅರಿಯುತ್ತಿದ್ದ ಹಾಗೆಯೇ
ವಾಚಕಸಾಮಾಜಿಕರಿಗೆ ರಸಾನುಭವವುಂಚಾಗುತ್ತದೆ. ಮೇಲಿನ ಉದಾ
ಹರಣಿ ಯಲ್ಲಿ, ಒದಗಿಬಂದಿರುವ ಅಗಲಿಕೆಯೇ ವಿಭಾವ ; ನಮಸ್ಕರಿಸು
ವುದು, ಅಪ್ಪಿಕೊಳ್ಳುವುದು, ಹರಸುವುದು, ಕಣ್ಣೀರು ಮಿಡಿಯುವುದು ಈ
ಹೊದಲಾದ ಸಮಸ್ತ ಕ್ರಿಯೆಗಳೂ ಅನುಭಾವಗಳು. ಈ ವಿಭಾವಾನು
ಭಾವಗಳನ್ನು ಕವಿ ಸಮುಚಿತವಾಗಿ ವರ್ಣಿಸಿರುವುದರಿಂದ ಅವುಗಳನ್ನು
ಪರಿಭಾವಿಸಿದ ಮಾತ್ರಕ್ಕೇ ನಾವು ಕರುಣರಸವನ್ನು ಅಸ್ಕಾದಿಸುತ್ತೇವೆ. ?
ಇನ್ನು ಭರತನ ನಾಟ್ಯಶಾಸ್ತ್ರದ ಕಡೆಗೆ ಮತ್ತೆ ತಿರುಗೋಣ. "ರಸ'ದ
ವಿಷಯದಲ್ಲಿ ಅವನ ಉಕ್ತಿಗಳನ್ನು ಹೇಗೆ ಈಚಿನ ಲಾಕ್ಷಣಿಕರೆಲ್ಲರೂಂ ಪರಮ
ಪ್ರಮಾಣವೆಂದು ಅಂಗೀಕರಿಸಿದರೋ, ಹಾಗೆಯೇ ನಾಟಕದ ವಸ್ಸುವಿಭಾಗ,
ರಚನೆ, ಅದರ ಪ್ರಭೇದಗಳು ಈ ಮೊದಲಾದ ಅಂಶಗಳ ನಿರೂಪಣಿಯಲ್ಲೂ
ಅವನ ಮತವನ್ನು ಅತಿಶ್ರದ್ಧೆಯಿಂದ ಅನುಸರಿಸಿದರು.
9 ಬರತನ ಸೂತ್ರದಲ್ಲ ವಿಭಾವ ಅನುಭಾವಗಳಲ್ಲದೆ ' ವ್ಯಭಿಚಾರಿ ' ಭಾವದ ಹೆಸರೂ
ಬಂದಿದೆ ; ಇದಕ್ಕೆ "ಸುಂಚಾರಿಭಾಪ' ಎಂಬ ಇನ್ನೊಂದು ಹೆಸರೂ ಉಂಟು. ಪ್ರೇಮ,
ಶೋಕ, ಉತ್ಸಾಹ ಮೊದಲಾದ "ಸ್ಥಾಯ' ಭಾವಗಳು ನಡೆಯುತ್ತಿರುವಣಗ ನಡುನಡುವೆ
ಸುಳಿದು ಲಯವಾಗುವ ಹರ್ಷ, ಚಿಂತೆ, ನಾಚಿಕೆ ಮೊದಲಾದ ಅಲ್ಪಕಾಲದ ಚಿತ_ವೃತ್ತಿಗಳೇ
ಈ ಸಂಚಾರಿ ಭಾವಗಳು.
K.M, 2
೧೮ ಭಾರತೀಯ ಕಾವ್ಯಮಾಮಾಂಸೆ
| ನಮ್ಮ ಕಾವ್ಯಲಕ್ಷಣಕಾರರಿಗೂ ಭರತನೇ ಒಂದು ರೀತಿಯಲ್ಲಿ
ಮೊದಲ ಗುರುವೆನ್ನಬೇಕು. ಕಾವ್ಯದ "ಗುಣ', "ದೋಪ', " ಅಲಂಕಾರ'...
ಈ ಮೂರರ ವಿವೇಚನೆಯೇ ಪ್ರಾಚೀನಾಲಂಕಾರಗ್ರಂಥಗಳ ಮುಖ್ಯ
ವಿಷಯ. ಧ್ಯನಿತತ್ತ್ವವು ಅಂಗೀಕಾರ ಹೊಂದಿದ ಮೇಲೆ ಕೂಡ ಅವು
ಪ್ರತಿಯೊಬ್ಬ ಆಲಂಕಾರಿಕನ ಕೃತಿಯಲ್ಲೂ ಕಾಣಿಸಿಕೊಳ್ಳುತ್ತವೆ. ವಿ.
ರಾಘವನ್ ಅವರು ಹೇಳುವಂತೆ ಕಾವ್ಯಾಲಂಕಾರ ಶಾಸ್ತ್ರವು " ಕ್ರಿಯಾಕಲ್ಪ `
ಎಂಬ ಹೆಸರಿನಲ್ಲಿ ಕ್ರಿಸ್ತಶಕದ ಆರಂಭದೊಳಗೇ ತಲೆಯೆತ್ತಿದ್ದ ಪಕ್ಷದಲ್ಲಿ
ಈ ಗುಣದೋಪಾದಿಗಳ ವಿಚಾರ ಆಗಲೇ ಕೊಂಚ ಮಟ್ಟಿಗಾದರೂ ನಡೆ
ದಿರಬೇಕು. ರಸದ ವಿಷಯದಲ್ಲಿ ಹೇಗೋ ಹಾಗೆಯೇ ಉಳಿದ ಕಾವ್ಯಾಂಗಗಳ
ವಿಷಯದಲ್ಲಿಯೂ ಭರತನು ತನಗೆ ಹಿಂದೆ ಇದ್ದಿರಬಹುದಾದ ಲಕ್ಷಣಗ್ರಂಥ
ಗಳಿಂದ ಆವಶ್ಯಕವಾದ ಅಂತೆಗಳನ್ನು ಸಂಗ್ರಹಿಸಿರುವುದು ಅಸ೦ಂಭವವಲ್ಲ.
ಆದರೆ, ಈಗ ನಮಗೆ ತಿಳಿದಿರುವ ಮಟ್ಟಿಗೆ ಗುಣ, ದೋಷ, ಅಲಂಕಾರ
ಈ ಮೂರರ ಹೆಸರೂ ಮೊದಲು ಕಾಣಿಸಿಕೊಳ್ಳುವುದು " ಭಾರತೀಯ
ನಾಟ್ಯಶಾಸ್ತ್ರ'ದಲ್ಲಿ.. ಇವುಗಳಲ್ಲಿ " ಗುಣ 'ಗಳಿಗಂತೂ ಭರತನು ಕೊಟ್ಟ
ಸಂಖ್ಯೆಯೇ, ಇಟ್ಟ ಹೆಸರುಗಳೇ ಬಹುದೂರ ನಡೆದು ಬಂದುವು. (ಅವು
ಗಳ ಅರ್ಥ ಮಾತ್ರ ಬದಲಾಯಿಸುತ್ತಾ ಹೋಯಿತು.)
ಭರತನು ಮೂವತ್ತಾರು ಕಾವ್ಯಲಕ್ಷಣ (ಅಥವಾ ಭೂಷಣ) ಗಳನ್ನು
ಬೇರೆ ಹೇಳಿದ್ದನು (ಅಧ್ಯಾಯ ೧೬). ಇವುಗಳ ಸ್ವರೂಪ ನಿರ್ಣಯ
ದಲ್ಲಿ ಅಭಿನವಗುಪ್ತನ ಕಾಲಕ್ಕೆ ಬೇಕಾದಪ್ಪು ಚರ್ಚೆ ನಡೆದಿದ್ದಿತು.
ಒಬ್ಬಿಬ್ಬರನ್ನು ಬಿಟ್ಟರೆ ಈಚಿನ ಲಾಕ್ಷಣಿಕರು ಯಾರೂ ಈ ಲಕ್ಷಣ
ಗಳಿಗೆ ಕಾವ್ಯದಲ್ಲಾಗಲಿ ನಾಟ್ಯದಲ್ಲಾಗಲಿ ವಿಶೇಷ ಸ್ಥಾನವನ್ನು ಕೊಡ
ಲಿಲ್ಲ; ಅವುಗಳಲ್ಲಿ ಹಲವನ್ನು " ಅಲಂಕಾರ `ಗಳೊಳಗೇ ಸೇರಿಸಿಬಿಟ್ಟರು. 10
ಈಗ ಪ್ರಚಾರದಲ್ಲಿರುವ ನಾಟ್ಯಶಾಸ್ತ್ರಗ್ರಂಥದ ಕೊನೆಯಲ್ಲ,
"" ಶೇಷಮುತ್ತರತಂತ್ರೇಣ ಕೋಹಲಃ ಕಥಯಿಪ್ಯತಿ '' (ಕಾಶ್ಮೀಮುದ್ರಣ.
10 77, Raghavan: "70 History of Laksana ' (Some Concepts:
pp. 1-47) ನೋಡಿ.
*" ಪದಿನಾಅಲ್ಲವಲಂಕ್ರಿಯಾರಚನೆ ಮೂವತ್ತಾಣು ನೇರ್ಪಟ್ಟುವು ' ಎಂದು ವಾಕ್ಸುಂ
ದರಿಯನ್ನು ಕುರಿತು ರನ್ನನು " ಗದಾಯುದ್ಧದಲ್ಲ' (1. ೭) ಹೇಳಿರುವುದು ಭರತನ ೩೬
ಧೂಪಣಗಳನ್ನು ನೆನೆದೇ ಇರಬಹುದೆ 1
೨. ಭರತನ ನಾಟ್ಯಶಾಸ್ತ್ರ ೧೯
ಹ ೪,೬೫) _ " ಉಳಿದದ್ದನ್ನು ಕೋಹಲನು ಪರಿಶಿಷ್ಟ ಗ್ರಂಥದಲ್ಲಿ
ಹೇಳುವನು'' ಎಂಬ ಭವಿಷ್ಯಸೂಚನೆಯಿದೆ; ಭರತನ ನೂರುಮಂದಿ
ಮಕ್ಕಳ ಪಟ್ಟಿಯಲ್ಲಿ ಕೋಹಲನ ಹೆಸರೂ ಹೇರಿದೆ. ಇದಲ್ಲದೆ ಕೋಹ
ನ ಹೆಸರು ಹೇಳಿ ಕೆಲವು ಅಭಿಪ್ರಾಯಗಳನ್ನು ಅಭಿನವಗುಪ್ಮನೂ ಈಚಿನ
ನಾಟ್ಯಲಕ್ಷಣಕಾರರೂ ಆಗಾಗ ಉದಾಹರಿಸುತ್ತಾರೆ. ಇದನ್ನೆಲ್ಲಾ
ನೋಡಿದರೆ, ಭರತನ ಕಾಲದಿಂದ ಈಚೆಗೆ ಕೋಹಲನ ಕೃತಿ ತುಂಬ
ಪ್ರಸಿದ್ಧವಾಗಿರಬೇಕು. ಅಭಿನವಗುಪ್ತನ ಹೇಳಿಕೆ ಸರಿಯಾಗಿದ್ದರೆ, ಕೋಹ
ಲನ ಗ್ರಂಥ ಶ್ರೀಹರ್ಷನ "ರತ್ನಾವಳೀ' ನಾಟಿಕೆಗಿಂತ (ಎಂದರೆ ಕ್ರಿ.ಶ.ಸು.
೬.೨೦ಕ್ಕಿಂತ) ಈಚಿನದಾಗಿರಬೇಕು. ಆದರೆ ಇದುವರೆಗೂ ಅದು ದೊರೆ
ತಿಲ್ಲ; ಆದ್ದರಿಂದ ನಾಟ್ಯಲಕ್ಷಣದ ಚರಿತ್ರೆಯಲ್ಲಿ ಕೋಹಲನ ಪ್ರಾಮುಖ್ಯ
ಹೇನೆಂಬುದನ್ನು ನಿರ್ಧರಿಸಲೂ ಸಾಧ್ಯವಾಗಿಲ್ಲ.''
ಭರತನ ಮಹಾಕ್ಕ ತಿಯಮೇಲೆ ಟೀಕೆ, ವ್ಯಾಖ್ಯಾನ ಮೊದಲಾದವು
ಗಳನ್ನು ರಚಿಸುವುದಕ್ಕೆ ಪ್ರಾಚೀನ ಕಾಲದಿಂದಲೇ ಮೊದಲಾಯಿತು.
ಶ್ರೀಹರ್ಪನು ಬರೆದ ಒಂದು ವಾರ್ತಿಕವಿದ್ದಂತೆ ತಿಳಿಯಬರುತ್ತದೆ ;
ಆದರೆ ಈ ಶ್ರೀಹರ್ಷನು ಯಾರೋ ತಿಳಿಯದು. ಉದ್ಭ ಟ, ಲೊಲ್ಲಟ,
ಶಂಕುಕ ಮೊದಲಾದ ಪ್ರಸಿದ್ಧ ಲಾಕ್ಷಣಕರೂ ಅಷ್ಟು ಪ್ರಸಿದ್ಧರಲ್ಲದ
ಇತರರೂ ವ್ಯಾಖ್ಯಾನಗಳನ್ನು ಬರೆದಿದ್ದ ರು... ಆದರೆ ಇವೊಂದೂ ಈಗ
ಉಪಲಬ್ಧವಾಗಿಲ್ಲ... ಈ ವ್ಯಾಖ್ಯಾನಕಾರರಲ್ಲಿ ಉದ್ಭಟನು ಬೇರೆಯ
ಅಲಂಕಾರ ಗ್ರಂಥಗಳನ್ನು ಬರೆದವನು; ಅವನನ್ನು ಕುರಿತು ಕೆಲವು
ಮಾತು ಮುಂದಿನ ಅಧ್ಯಾಯದಲ್ಲ ಬರುತ್ತದೆ; ಇವನ ಕಾಲ ಕ್ರಿ.ಶ. ಸು.
"PP, V. Kane. " Fragments of Kohala’ (POC, VI, pp. 577 if.)
ನೋಡಿ... " ಕೋಹಲ ರಹಸ ' ಎಂಬ ಸಂಗೀತವಿಷಯದ ಗ್ರಂಥವೊಂದು ಉಂಟು
(ನ, K. De: 581/10 Poetics, 11, 376).
12 ಈ ವ್ಯಾಖ್ಭಾನಕಾರರೆಲ್ಲರ ವಿಷಯವಾಗಿ, 37, Raghavan: " Writers Quoted
in the 50717817207 817೩11' (70811, VL, pp. 140 8, 199 8.) ನೋಡಿ.
"" ವ್ಯಾಖ್ಯಾತಾರೋ ಭಾರತೀಯೇ ಲೋಲ್ಲಟೋದೃಟಶಂಕುಕಾಃ |
ಭಟ್ಟ್ವಾಭಿನವಗುಪ್ತಶ್ಚ ಶ್ರೀಮತ್ಕೀರ್ತಿಧರಃ ಪರ; 1"
ಹೀಗೆಂದು ಕೆಲವು ಪ್ರಸಿದ್ಧವಾದ ಹೆಸರುಗಳನ್ನು ಶಾರ್ಜ್ನದ್ದವನು " ಸಂಗೀತರತ್ಮಾಕರ '
(1. ೧೧) ದಲ್ಲಿ ಸಂಗ್ರಹಿಸುತ್ತಾನೆ. ಇವರಲ್ಲ ಅಭಿನವಗುಪ್ತನೇ ಎಲ್ಲರಿಗೂ ಇತ್ತೀಚಿನವನು ;
ಮಿಕ್ಕವರನ್ನೆಲ್ಲಾ ಅವನು ತನ್ನ ವ್ಯಾಖ್ಯಾನದಲ್ಲ ಸ್ಮರಿಸುತ್ತಾನೆ.
0-8
೨೦ ಭಾರತೀಯ ಕಾವ್ಯಖಾಮಾಂಸೆ
೮೦೦. ಇವನ ಅಭಿಪ್ರಾಯವನ್ನು ಲೊಲ್ಲಟನೂ, ಲೊಲ್ಲಟನವಾದವನ್ನು
ಶಂಕುಕನೂ ಖಂಡಿಸಿದ್ದಾರೆ. ಶಂಕುಕನೆಂಬ ಕವಿ ಕಾಶ್ಮೀರದ ಅಜಿತಾ
ಪೀಡನ ಕಾಲದಲ್ಲಿ (ಕ್ರಿ.ಶ. ಸು. ೮೧೬?) ನಡೆದ ಹೋರ ಯುದ್ಧ
ವೊಂದನ್ನು ಕುರಿತು " ಭುವನಾಭ್ಯುದಯ 'ಹೆಂಬ ಕಾವ್ಯವನ್ನು ಬರೆದನೆಂದು
ಕಲ್ಲಣನು "ರಾಜತರಂಗಿಣಿ ' ಯಲ್ಲ ಹೇಳುತ್ತಾನೆ... ಈ ಶಂಕುಕನೂ
ನಮ್ಮ ವ್ಯಾಖ್ಯಾನಕಾರನೂ ಏಕವ್ಯಕ್ತಿಯಾಗಿರುವುದು ಅಸಂಭವವಲ್ಲ.
ಲೊಲ್ಲಟ, ಶಂಕುಕರ ಕಾಲವು ಕ್ರಿ.ಶ. ೯ನೆಯ ಶತಮಾನದ ಮೊದಲನೆಯ
ಪಾದವಾಗಿರಬಹುದು.
ನಾಟ್ಯಶಾಸ್ತ್ರವನ್ನು ವ್ಯಾಖ್ಯಾನಿಸಿದವರಲ್ಲೆಲ್ಲಾ ಅತಿಪ್ರಸಿದ್ಧನೂ
ಅಪ್ರತಿಮನೂ ಆದ ಮಹಾವ್ಯಕ್ತಿ ಅಭಿನವಗುಪ್ತ (ಕಾಲ ಕ್ರಿ. ಶ. ೧೦೦೦).
ಅವನು " ಅಭಿನವಭಾರತಿ 'ಯನ್ನು ಬರೆದ ಬಳಿಕ ಪಿ೦ದಿನ ಕ ತಿಗಳೆಲ್ಲವೂ
ನಾಮಾವಶೇಪವಾದುವು; ಆದರೆ ಅವನು ಅಲ್ಲಲ್ಲೇ ಹಿಂದಿನವರ
ಅಭಿಪ್ರಾಯಗಳನ್ನೂ ವಾಕ್ಯಗಳನ್ನೂ ಉದಾಹರಿಸಿರುವುದರಿಂದಲೇ ಅವರೆಲ್ಲ
ಇದ್ದ ರೆಂಬುದನ್ನು ತಿಳಿದುಕೊಳ್ಳುವುದಾದರೂ ನಮಗೆ ಸಾಧ್ಯವಾಗಿರುವುದು.
ಅಭಿನೆವಗುಪ್ತನ ವಿಷಯವು ನಮ್ಮ ಗ್ರಂಥದ ನಾಲ್ಕನೆಯ ಅಧ್ಯಾಯದಲ್ಲಿ
ಕೆಲವುಮಟ್ಟಿಗೆ ಬರುತ್ತದೆ; ಅವನ ಮಹತ್ತ್ಯವಂತೂ ಇದರ ಆದ್ಯಂತವೂ
ವಿದಿತವಾಗುತ್ತದೆ.
13 ರಾಜತರಂಗಿಣೀ, 1೪. ಒಂ೪-೫,
೩. ಅಲಂಕಾರ-ರೀತಿ ಪ್ರಸ್ಥಾನಗಳು
ಭರತನ ನಾಟ್ಯಶಾಸ್ತ್ರ ದಲ್ಲ ಕಾವ್ಯಲಕ್ಷಣದ ಮೂಲರೇಖೆಗಳು ನಾಟ್ಯ
ವಿಚಾರಕ್ಕೆ ಅ೦ಗವಾಗಿ ಮಾತ್ರ ಕಾಣಿಸಿಕೊಂಡುವು ; ಸ್ವತಂತ್ರಸ್ಥಾನ
ವನ್ನು ಪಡೆಯಲಿಲ್ಲ. ಈಗ ನಮಗೆ ದೊರೆಯುವ ಪ್ರಾಚೀನತಮವಾದ
ಅಲಂಕಾರ ಗ $೦ಥಗಳೆಂದರೆ ಭಾಮಹನ 6" ಕಾವ್ಯಾಲಂಕಾರ ' ಮತ್ತು
ದಂಡಿಯ " ಕಾವ್ಯಾದರ್ಶ ಸೆ ಭರತನಿಗೂ ಇವರಿಗೂ ನಡುವೆ ಸಾಗಿದ
ನಾಲ್ಕೆ ತದ ಶತಮಾನಗಳ ಅಂತರದಲ್ಲ ಶಾಸ್ತ್ರವು ಹೇಗೆ ಬೆಳೆಯಿತೆಂಬು
ದನ್ನು ನಿರ್ಧರವಾಗಿ ತಿಳಿಯಲು ಸಾಧ್ಯವಿಲ್ಲ. ಆದರೂ, ವಿವೇಚನೆ
ನಡೆಧಿರಬೇಕು; ಗ್ರ೦ಥಗಳು ಹುಟ್ಟಿರಬೇಕು. ಹೀಗೆ ಹೇಳುವುದಕ್ಕೆ,
ಅಲ್ಲಲ್ಲಿ ಕವಿಗಳು ಲಕ್ಷಣವನ್ನು ದೃಷ್ಠಿ ), ಯಲ್ಲಿಟ್ಟು ಕೊಂಡು ಕಾವ್ಯರಚನೆ
ಮಾಡಿರುವುದೂ ಒಂದು ಆಧಾರ. ಉದಾಹರಣಿಗೆ, ಕ್ರಿಸ್ತಶಕದ
ಪ್ರಾ ರಂಭದ ಶತಮಾನಗಳಲ್ಲಿ " ಪ್ರಶಸ್ತಿ''ಗಳೆಂಬ ಶಾಸನಗಳನ್ನು ಬರೆದ
ವರು ಉದ್ದೆ €ಶಪೂರ್ವಕವಾಗಿ ಶಬ್ದಾರ್ಥಾಲಂಕಾರಗಳನ್ನು ಉಪಯೋಗಿ
ಸಿರುವುದು ಗೋಚರವಾಗುತ್ತದೆ ; ರುದ್ರದಾಮನ ಗಿರ್ನಾರ್ ಪ್ರಶಸ್ತಿಯಲ್ಲಿ
(ಕ್ರಿ.ಶ.೧೫೦) ಸ್ಫುಟ, ಮಧುರ ಮೊದಲಾದ "ಗುಣ'ಗಳ ಹೆಸರೂ ಬಂದಿದೆ.!
ಭಾಮಹನಿಗಿಂತ ಬಹುಶಃ ಪ್ರಾಚೀನನಾದ ಭಟ್ಟಿ (ಇವನ ಕಾಲ ಕ್ರಿ.ಶ.
೫೦೦ರಿಂದ ಈಚೆಗೆ, ಕ್ರಿ.ಶ. ೬೫೦ರೊಳಗೆ) ತನ್ನ ಕಾವ್ಯವನ್ನು ಮುಖ್ಯ
ವಾಗಿ ವ್ಯಾಕರಣದ ಸೂತ್ರಗಳಿಗೆ ಲಕ್ಷ $ ರೂಪವಾಗಿ ರಚಿಸಿದ್ದಾನೆ ; ಅದರಲ್ಲಿ
ಒಂದು ಕಡೆ: ಎಲೆ ಶಬ್ದಾ ರ್ಥಾಲಂಕಾರಗಳು, ಮಾಧುರ್ಯಗುಣ, ಭಾವಿಕಾ
ಲಂಕಾರ ಇವಿಪ್ಟನ್ನೂ ಕ್ರಮವಾಗಿ ಪ್ರಯೋಗಿಸಿದ್ದಾನೆ. ತನ್ನ ಕಾವ್ಯದ
ಕೊನೆಯಲ್ಲ ಭಟ್ಟಿ, ವ್ಯಾಖ್ಯಾನದ ಮೂಲಕ ತಿಳಿಯಬೇಕಾದ ಈ ಕಾವ್ಯ
ದಲ್ಲಿ ಪರ್ಯಾಪ್ತವಾದ ಉಲ್ಲಾಸ ಪಂಡಿತರಿಗೇ ಸರಿ) ಇದರಲ್ಲಿ ನನ್ನ
1 “ಸ್ಫುಟ ಲಘು ಮಧುರ ಚಿತ್ರ ಕಾನ್ತ ಶಬ್ಮಸಮಯೋದಾರಾಲ೭ಕೃತ ಗದ್ಯ
ಪದ್ಯ.,....... '' ಈ ವಿಷಯದಲ್ಲ G. Buhlor: " The Indian Inscriptions and
tho Antiquity of Indian Artificial Poetry’ (translated by V.S.
Ghate) ನೋಡಿ (14, XLII).
3 ಭಟ್ಟಕಾವ್ಯ, ಪ್ರಸನ್ನಕಾಂಡ, ೩-ಇ.
೨೧
೨೨ ಭಾರತೀಯ ಕಾವ್ಯವಿಾಮಾಂಸೆ
ವಿದ್ವತ್ನಯತೆಯಿಂದ ಜಡಮತಿಗಳು ಹತರಾದರು'' ಎಂದು ದರ್ಪ
ದಿಂದ ಹೇಳಿಕೊಂಡಿದ್ದಾನೆ. ಇದನ್ನು ಉದ್ದೇಶಿಸಿಯೇ ಇರಬೇಕು,
ಭಾಮಹನು ಈ ಮಾತುಗಳನ್ನೇ ತಿರುಗಿಸಿಕೊಂಡು, "ಅಚ್ಯುತೋತ್ತರ'
ಹೆ೦ಬ ಕಾವ್ಯದ ಪ್ರಹೇಳಿಕೆಗಳನ್ನು` ಕುರಿತು ಮಾತಾಡುವ ನೆವದಲ್ಲ, "" ಈ
ಕಾವ್ಯಗಳನ್ನು ಕೂಡ, ಶಾಸ್ತ್ರದಂತೆ, ವ್ಯಾಖ್ಯಾನದ ಮೂಲಕಷೇ ತಿಳಿಯ
ಬೇಕಾದಲ್ಲಿ, ಪಂಡಿತರಿಗೆ ಮಾತ್ರ ಉಲ್ಲಾಸ; ಪಾಪ, ಜಡಮತಿಗಳು
ಹತರಾದರು '' ಎಂದು ಹೇಳಿ, ಶಾಸ್ತ್ರಕ್ಕೂ ಕಾವ್ಯಕ್ಕೂ ಇರಬೇಕಾದ
ವ್ಯತ್ಯಾಸವನ್ನು ಸೂಚಿಸಿದ್ದಾ ವೆ.
ತಮ್ಮ. ಪಾಂಡಿತ್ಯ ವನ್ನು ಮೆರಸುವುದಕ್ಕಾಗಿ ಕವಿಗಳು ಹೀಗೆ
ಅಲಂಕಾರ ಮೊದಲಾದವನ್ನು "ಉದ್ದೇಶಪೂರ್ವಕವಾಗಿ ಉಪಯೋಗಿಸಿರು
ವುದರಿಂದ ಶಾಸ್ತ್ರವು ಆಗಲೇ ಬೆಳೆಯುತ್ತಿದ್ದಿತೆಂಬು ಸ್ಪಪ್ಟವಾಗುವುದಪ್ಟೆ.
ಪ್ರಾಚೀನ ಲಕ್ಷಣಗ್ರ೦ಥಗಳು ಇದ್ದು ವೆಂಬುದಕ್ಕೆ ಭಾಮಹ ದಂಡಿಗಳ ಗ್ರಂಥ
ಗಳಲ್ಲೇ ನಿದರ್ಶನಗಳು ದೊರೆಯುತ್ತವೆ. ಇವರಿಬ್ಬರೂ ಪೂರ್ವಾಚಾರ್ಯ
ರನ್ನ ಸ್ಮರಿಸುತ್ತಾರೆ. ಅಲ್ಲದೆ, ಭಾಮಹನು ತನಗೆ ಹಿಂದೆ ಇದ್ದ ಮೇಧಾವಿ
(ಅಥವಾ ಮೇಧಾವಿರುದ್ರ) ಎಂಬಾತನ ಹೆಸರನ್ನೂ ಹೇಳಿದ್ದಾನೆ.
ಆದರೆ ಈ ಹಳಬರ ಗ್ರಂಥಗಳು ಯಾವುವೂ ಇದುವರೆಗೆ ದೊರೆತಿಲ್ಲ.
" ಅಗ್ನಿಪುರಾಣ'ದಲ್ಲ, ಸಾಮಾನ್ಯ ವಾಗಿ ಪುರಾಣಗಳಲ್ಲಿ ಹೇಳುವ
ವಿವಿಧ ವಿಷಯಗಳ ಜೊತೆಗೆ ಅಲಂಕಾರಶಾಸ್ತ್ರ ಕ್ರೈ ಸಂಬಂಧಿಸಿದ ಅಂಶ
ಗಳನ್ನು ಸಂಗ್ರಹಿಸುವ ಕೆಲವು ಅಧ್ಯಾಯಗಳೂ "ದೊರೆಯು ರೆಯುತ್ತವೆ (ಆ (ಅಧ್ಯಾ ಯ
ಜು ಟೂ. ಇದು ಅಪ್ಪಾ ದಶಪುರಾಣಗಳನ್ಲಿ ಒಂದಾಗಿರುವುದರಿಂದ
ವ್ಯಾಸಮಹರ್ಪಿಯೇ ಇದನ್ನು ರಚಿಸಿರಬೇಕೆಂದೂ, ಆದ್ದರಿ೦ದ ಅಲಂಕಾರ
3 ಪ್ರಹೇಳಿಕೆ ಎಂಬುದು ಒಗಟು ಮಾತು ; ಕನ್ನಡದ ಗ್ರಂಥಗಳಲ್ಲ ಇದನ್ನು " ಹೇಳಿತ ',
' ಹೇಳಿಕೆ ' ಎಂದು ಕರೆದಿದ್ದಾರೆ. ಇದರಲ್ಲ ಅನೇಕ ಪ್ರಕಾರಗಳುಂಟು. (ಕಾವ್ಯಾದರ್ಶ,
೯೭-೧೨೪ ; ಕವಿರಾಜಮಾರ್ಗ, ॥. ೧೪೪. ೧೫೨ ; ಕಾವ್ಯಾವಲೋಕನ, ೫೯೩.೬೦೦
ನೋಡಿ.)
ವ್ಯಾಖ್ಯಾಗಮೃಮಿದಂ ಕಾವ್ಯಮುತ್ನವಃ ಸುಧಿಯಾಮಲಂ |
ಹತಾ ದುರ್ಮೇಧಸಶ್ಕಾಸ್ಕಿನ್ ವಿದೃತ್ಟಿ,ಯತಯಾ ಮಯಾ! (ಭಟ್ಟಿಕಾವ್ಯ, x೩. ಒಳ)
ಕಾವ್ಯಾನ್ಯಪಿ ಯದೀಮಾನಿ ವ್ಯಾಖ್ಯಾಗಮ್ಯಾನಿ ಶಾಸ್ತ್ರವತ್ |
ಉತ,ವಃ ಸುಧಿಯಾಮೇವ ಹಂತ ದುರ್ಮೇಧಸೋ ಹತಾಃ ॥
(ಭಾಮಹ : ಕಾವ್ಯಾಲಂಕಾರ, 8. ೨೦)
೩. ಅಲಂಕಾರ. ರೀತಿ ಪ್ರಸ್ಥಾನಗಳು ೨೩
ಶಾಸ್ತ್ರಕ್ಕೆ ಇದೇ ಮಾತೃಕೆಯೆಂದೂ ಕೆಲವರು ಭಾವಿಸಬಹುದು. ಆದರೆ
ಇದು ತಪ್ಪು ತಿಳಿವಳಿಕೆ. ಪುರಾಣಗಳ ಕಾಲನಿರ್ಣಯವು ಕ್ಲಿಪ್ಪ ಸಮಸ್ಯೆ
ಯಾದರೂ, " ಅಗ್ಗಿಪುರಾಣ'ದ ಈ ಭಾಗವು ಆರ್ವಾಚೀನವೆನ್ನಲು ಆಂತರಿಕ
ವಾದ ಹಲವು ಆಧಾರಗಳಿವೆ. ಇದರಲ್ಲಿ ಭರತನ ಹೆಸರು ಬಂದಿದೆ;
ಅವನ ನಾಟ್ಯಶಾಸ್ತ್ರದಿಂದಲೂ ಭಾಮಹ ದಂಡಿಗಳ ಕೃತಿಗಳಿಂದಲೂ
ಅನೇಕ ಶ್ಲೋಕಗಳನ್ನು ಇಲ್ಲ ಉದ್ಭರಿಸಿದೆ. ವಾಮನನಿಗೆ ಪರಿಚಿತವಾದ
ವೈದರ್ಭೀ, ಗೌಡೀ, ಪಾಂಚಾಲೀ ಎಂಬ "ರೀತಿ 'ಗಳ ಜೊತೆಗೆ, ರುದ್ರ
ಟನು ಕಲ್ಪಿಸಿದ ಲಾಟೀಯಾ ಎಂಬ ("ರೀತಿ 'ಯನ್ನೂ ಅಗ್ನಿಪುರಾಣದಲ್ಲ
ಹೇಳಿರುವುದರಿಂದ ಅದು ರುದ್ರಟನ ಕಾಲಕ್ಕೂ (ಕ್ರಿ.ಶ. ಸು. ೮೫೦)
ಈಚಿನದೆಂದು ಸ್ಪಪ್ಟವಾಗುತ್ತದೆ. (" ಧ್ವನ್ಯಾಲೋಕ 'ದ ಪರಿಚಯವು
ಅಗ್ನಿಪುರಾಣಕಾರನಿಗೆ ಇದ್ದಿತೇ ಇಲ್ಲವೇ ಎಂಬುದನ್ನು ಕುರಿತು ಅಭಿ
ಪ್ರಾಯಭೇದವುಂಟು. ಅಂತೂ, ಈ ಪುರಾಣದ ಅಲಂಕಾರಭಾಗವು
ಕ್ರಿ.ಶ. ೯ನೆಯ ಶತಮಾನಕ್ಕೆ ಪಿಂದಿನದಲ್ಲವೆಂದು ನಿಸ್ಸಂದೇಹವಾಗಿ ಹೇಳ
ಬಹುದು. ಕೆಲವರು ವಿಮರ್ಶಕರು ಇನ್ನೂ ಮುಂದೆ ಹೋಗಿ, ಇದು
ಭೋಜರಾಜನ-* ಶೃಂಗಾರಪ್ರಕಾಶ 'ಕ್ಕಿಂತ ಈಚಿನದೆಂದು ಹೇಳಲು ಕಾರಣ
ಗಳನ್ನು ಕೊಡುತ್ತಾರೆ. " ಸಾಪಿತ್ಯದರ್ಪಣ 'ಕಾರನಿಗಿಂತ (ಕ್ರಿ.ಶ.
೧೪ನೆಯ ಶತಮಾನ) ಹಿಂದಿನ ಆಲಂಕಾರಿಕರು ಯಾರೂ ಅಗ್ನಿಪುರಾಣದ
ಹೆಸರೆತ್ತದಿರುವುದು ಮೇಲಿನ ಹೇಳಿಕೆಗೆ ಪೋಪಕವಾಗುತ್ತದೆ.
ಇನ್ನು ಭಾಮಹ ದಂಡಿಗಳ ಕಡೆಗೆ ತಿರುಗೋಣ. ಇವರಿಬ್ಬರಲ್ಲಿ
ಯಾರು ಮುಂಚೆ ಇದ್ದವರು? ಈ ವಿಷಯದಲ್ಲ ವಿಶೇಷ ಚರ್ಚೆ ನಡೆದಿದೆ,
ನಡೆಯುತ್ತಿದೆ... ಈ ಜಟಿಲ ಪ್ರಶ್ನೆಗೆ ಕೈಹಾಕಲು ಇಲ್ಲ ಸ್ಥಳವಿಲ್ಲ.
ಇವರಿಬ್ಬರ ಗ್ರಂಥಗಳಿಗೂ ಅಲ್ಲಲ್ಲಿ ಉಕ್ತಿಸಾಮ್ಯವುಂಟು; ಅನೇಕ ಕಡೆ
So Kail Alankara Literature, pp. ut-v . A. Sankaran: Rasa
and Dhvani, pp. 35-39, S.K.De: Sanskrit Poetics, 1, pp. 102-4,
V. Raghavan : ‘ Riti and Guna iu the Agni Purana’ (THQ, ೩. 4);
P.C. Lahiri : Riti and Guna, pp. 176-7. |
ಪ್ರಕಾಶವರ್ಷನ ' ರಸಾರ್ಣವಾಲಂಕಾರ ' ವೆಂಬ ಗ್ರಂಥವು ಭಾಮಹದಂಡಿಗಳಿ
ಗಿಂತಲೂ ಪ್ರಾಚೀನವೆ೦ದು ಒಂದು ಪಾದವುಂಟು. ಅದರೆ ಈ ಗ್ರಂಥಕಾರನಿಗೆ ಭೋಜ
ರಾಜನ (ಕ್ರಿ.ಶ. ೧೧ನೆಯ ಶತಮಾನ) ಅಲಂಕಾರಗ್ರಂಥಗಳ್ಳೇ ಅವಲಂಬನವೆಂದೂ, ಅದ್ದ
ರಿಂದ ಇವನು ತುಂಬ ಈಚಿನವನೆಂದೂ ವಿದಾಂಸರು ತೋರಿಸಿದ್ದಾರೆ. V. Raghavan ;
" PrakaSavarsa's Rasarnavalankdra ' (JORM, ೫111, pp. 267-276).
೨೪ ಭಾರತೀಯ ಕಾವ್ಯಮಾಮಾಂಸೆ
ಗಳಲ್ಲಿ ಒಬ್ಬನೆ ಮತವನ್ನು ಇನ್ನೊಬ್ಬನು ಖಂಡಿಸಿ ತನ್ನ ಅಭಿಪಾ ಯ
ವನ್ನು ಮುಂದಿಟ್ಟಿರುವಂತೆ ತೋರುತ್ತದೆ. ಆದರೂ ಒಬ್ಬನ ಗ್ರಂಥ
ವನ್ನು ಇನ್ನೊಬ್ಬನು ನೋಡಿಯೇ ಇದ್ದನೆಂದು ತಪ ಥಮಾಡುವುದು ನಷ್ಟ
ಏಕೆಂದರೆ, ಇಬ್ಬರೂ ಪೂರ್ವಾಚಾರ್ಯರ' ಕೃತಿಗಳನ್ನು ಆವಶ್ಯಕವಾದ ಕಡೆ
ಗಳಲ್ಲಿ ಅನುಸರಿಸಿರುವುದರಿಂದ, ಭಾಮಹನಿಗೂ ದಂಡಿಗೂ ಇರುವ
ಸಾಮ್ಯವೈಪಮ್ಯಗಳು ವ್ಯಕ್ತಿ ಗತವಾಗಿರದೆ ಸಾಂಪ್ರದಾಯಿಕವಾಗಿ ಬಂದಿರ
ಜೇಕೆಂದು ಹೇಳಲು ಅವಕಾತವುಂಟು. ಆದ್ದ ರಿಂದ ಭಾಮಹನು
ಮೊದಲಿದ್ದ ನೆ ದಂಡಿ ಮೊದಲಿದ್ದ ವೆ ಎ೦ಬುದನ್ನು ವಿಶ್ಚ ಖುಸ ವುದು
ಹೇಗೆ? ಎರಡು ಪಕ್ಷಗಳನ್ನೂ ಪ್ರಬಲರಾದ ವಿದಾ ,೦ಸರೇ ಹಿಡಿದಿದ್ದ ಥ್ರ
ಇದೇ ರೀತಿಯಲ್ಲಿ ಇವರಿಬ್ಬರ ಲವ ಸಂದಿಗ್ಧ ವಿಷಯವಾಗಿದೆ. ನಮ್ಮ
ಗ್ರಂಥದ ಉದ್ದೇಶಕ್ಕೆ ಕಾಲನಿರ್ಣಯದ ಸೂಕ್ಷ್ಮ ಚರ್ಚೆಗಳು ಬಲುದೂರ.
ಅಲ್ಲದೆ ಬೇರೆಬೇರೆ ವಿದ್ವಾಂಸರು ಕೂಡಿಸಿರುವ ಆಧಾರಗಳನ್ನೂ ಹೂಡಿರುವ
ವಾದಗಳನ್ನೂ ನಾಲ್ಕೆ ದು ವಾಕ್ಯಗಳಲ್ಲಿ ಸಂಗ್ರಹಿಸುವುದು ಅಸಾಧ್ಯ."
6 ಉದಾಹರಣಿಗೆ, ಗದ್ಯಕಾವೃದಲ್ಲ ಕಥೆ, ಅಖ್ನಾಯಿಕೆ ಎಂಬ ಪ್ರಭೇದಗಳನ್ನು
ಭಾಮಹನು ಕಲ್ಪಿ ಸಿದ್ದರೆ, ದಂಡಿ ಐವು "ಒಂದೇ ಜಾತಿಗೆ ಎರಡು ಹೆಸರುಗಳನ್ನು ತ್ತಾನೆ
(ಕಾವ್ಯಾದರ್ಶ ನ ೨೮). ದಂಡಿ ಮೈದರ್ಭ, ಗೌಡ ಎಂಬ ಎರಡು 'ಮಾರ್ಗ 'ಗಳನ್ನು
ಪ್ರತ್ಯೇಕಿಸಿ ಅವುಗಳ ಭೇದವನ್ನು ವಿಸ್ತಾರವಾಗಿ ನಿರೂಪಿಸಿದ್ದರೆ, ಭಾಮಹನು “ಇದು
ಗಳಡೀಯ, ಇದು ಮೈದರ್ಭ ವಿಂದ ಮಾತ್ರ ಕ್ಕೆ ಬೇರೆಯೇನು? ಇದೆಲ್ಲ ಬುದ್ಧಿಹೀನರು
ಗತಾನುಗತಿಕವಾಗಿ ಕೊಟ್ಟ ಹೆಸರುಗಳು ' ಎನ್ನು ತ್ರಾ ನೆ (ಕಾವ್ಯಾಲಂಕಾರ, 1. ೩೨).
7 ಭಾಮಹನೇ ಹೆಚ್ಚು ಪ್ರಾಚೀನನೆಂದು ತ್ರಿವೇದಿ, ಡೇ ಮೊಒಲಾದವರೂ ದಂಡಿಯೇ
ಹೆಚ್ಚು ಪ್ರಾರ್ಚಿನೆಂದು ಕಣೇ ಕೀತ್ ಮೊದಲಾದವರೂ ಪ್ರತಿಪಾದಿಸಿದ್ದಾರೆ. ದಂಡಿ
ಗಿಂತ ಭಾಮಹನೇ ಹಿರಿಯವನೆಂದು ಪ್ರಕೃತ ಗ್ರಂಥದಲ್ಲ ಭಾವಿಸಲಾಗಿದೆ.
* ದಂಡಿಯ ಕಾಲವಿಚಾರ ಮಾಡುವಾಗ ಕನ್ನಡಿಗರಿಗೆ ಕುತೂಹಲಕರವಾದ ಅಂಶ
ವೊಂದು ದೊರೆಯುತ್ತದೆ. ದಂಡಿ ತನ್ನ "ಕಾವ್ಯಾದರ್ಶ 'ದ ಮಂಗಳತ್ಕೊ ಸದಲ್ಲ ಸರಸ್ಪ
ಯನ್ನ "" ಸರ್ಪಶುಕ್ಲಾ '' ಎಂದು ವರ್ಣಿಸಿದ್ದಾ ನೆ. ಐದನ್ನು ಒಪ್ಪದೆ ವಿಜ್ಞಿಕೆಯೆಂಬ ಕಬ್ಬಿಗಿತಿ,
ನೀಲೋತ್ಸಲದಲಶ್ಯಾಮಾಂ ವಿಜಿ ಕಾಂ ಮಾಮಜಾನತಾ |
ವೃಥ್ಯೊವ ದಂಡಿನಾ ಪ್ರೋಕ್ತಂ 'ರ್ವಶುಕ್ಲಾ ಸರಸ್ವತೀ 1
“ ಕನ್ನೊದಿಲೆಯ ದಳದಂತೆ ಶ್ಯಾಮಲೆಯಾದ ನನ್ನನ್ನು. ..ವಿಜ್ಜಿಕೆಯನ್ನು - ಅರಿಯದೆಯೇ,
ಸರಸತಿ ಸರ್ವಶುಕ್ಲೆಯೆಂದು ದಂಡಿ ವ್ಯರ್ಥವಾಗಿ ಹೇಳಿದನು" ಎಂದು ಖುಡಿಸಿದಳಂತ.
ಈ ವಿಜ್ಞಿಕೆ ಎರಡನೆಯ ಪುಲಕೇಶಿಯ ಮಗನನದ ಚಂದ್ರಾದಿತ್ಯನ ಪತ್ನಿ ವಿಜಯಾ ಎಂಬಾಕೆಯೇ
ಅಗಿರಬೇಕೆಂದು ವಿದಾಂಸರು ಊಹಿಸುತ್ತಾರೆ (ಕಾಲ ಕ್ರಿ.ಶ, ಸು. ೬೬೦). ಈ ಕೆಳಗಿನ
ಪದ್ಯ ಶಕೆಯನ್ನು ಕುರಿತೇ ಹುಟ್ಟಿದಂತೆ ತೋರುತ್ತ ಡೆ:
ಸರಸ್ವತೀವ ಕರ್ಣಾಟ ವಿಜಯಾಂಕಿಣ ಜಯತ್ಯಸಾಿ |
ಯಾ ಮೈದರ್ಭಗಿರಾಂ ವಾಸಃ ಕಾಲದಾಸಾದನಂತರಂ 1
"" ಕರ್ಣಾಟದೇಶದ ವಿಜಯಾ ಎಂಬ ಹೆಸರಿನಾಕೆ ಸರಸ್ವತಿಯಂತೆ ಪ್ರಸಿದ್ಧಳು ;
ಕಾಳಿದಾಸನ ತರುವಾಯ ವಮೈದರ್ಭಮಾರ್ಗದ ಕವಿತೆಗೆ ಈಕೆಯೇ ನಲೆವೀಡು. ಮಲನ
ಊಹೆಗಳು ಸರಿಯಾಗಿದ್ದ ಪಕ್ಷದಲ್ಲಿ ದಂಡಿಯ ಕಾಲ ಕ್ರಿ.ಶ. ೬೬೦ಕ್ಕಿಂತ ಹಿಂದೆ ದಂಡಿ
ದಾಕ್ಷಿಣಇತ್ಯನೆಂದು ತೋರುತ್ತದೆ; ಕನ್ನಡಿಗನಾಗಿದ್ದರೂ ಇರಬಹುದ".
೩. ಅಲಂಕಾರ--ರೀತಿ ಪ್ರಸ್ಮಾನಗಳು ೨೫
ಆದಕಾರಣ ಇಲ್ಲ ಆ ಪ್ರಸಕ್ತಿಗೇ ಹೋಗದೆ, ಭಾಮಹದಂಡಿಗಳ ಕಾಲವು
ಕ್ರಿ.ಶ. ಆರೇಳನೆಯ ಶತಮಾನಗಳೊಳಗೆ ಬೀಳಬಹುದೆಂದೂ, ಒಬ್ಬರೊಬ್ಬ
ರಿಗೆ ಹೆಚ್ಚು ಅಂತರವಿದ್ಧಿ ರಲಾರದೆಂದೂ ಹೇಳಿ ಮುಗಿಸುವುದು ವಾಸಿ.
") ಧಾಮಹನು ಛಂದಸ್ಸು ಮೊದಲಾದ ವಿಷಯಗಳನ್ನು ಕುರಿತು
ಗ್ರಂಥರಚನೆ ಮಾಡಿದನೆಂದು ನಂಬಲು ಅವಕಾಶವಿದ್ದರೂ, ಈಗ
ದೊರೆಯುವುದು ಅವನ " ಕಾವ್ಯಾಲಂಕಾರ 'ವೊಂದೇ. ಇದರ ಮೊದಲ
ನೆಯ ಪರಿಚ್ಛೇದದಲ್ಲಿ ಕಾವ್ಯದ ಲಕ್ಷಣ, ಪ್ರಯೋಜನ, ವಿಭಾಗ ಈ
ಹೊದಲಾದ ಸಾಮಾನ್ಯ ಬ 0ನ ಎರಡುಮೂರರಲ್ಲಿ ಸುಮಾರು ೪೦
ಅಲಂಕಾರಗಳ ತು ನತ್ತ ನಾಲ್ಕನೆಯದರಲ್ಲಿ ೧೦ ಕಾವ್ಯದೋಪ
ಗಳೂ, ಐದನೆಯದರಲ್ಲಿ ನ್ಯಾಯಶಾಸ್ತ್ರ ಕ್ಕೆ ಸಂಬಂಧಿಸಿದ ಕೆಲವು ದೋಷ
ಗಳ ವಿಷಯವೂ, ಆರನೆಯದರಲ್ಲ ಶಬ್ದ ಶುದ್ಧಿಯನ್ನು ಕುರಿತ ಕೆಲವು
ಸೂಚನೆಗಳೂ ಬಂದಿವೆ. ಇವುಗಳಲ್ಲಿ ವಸ್ತುತಃ ತರ್ಕವ್ಯಾಕರಣಗಳಿಗೆ
ಸೇರತಕ್ಕ ಕೊನೆಯ ಎರಡು ಪರಿಚ್ಛೇದಗಳನ್ನು ಬಿಟ್ಟರೆ, ಅಲಂಕಾರಗಳ
ನಿರೂಪಣೆಯೇ ಭಾಮಹನ ಗ (೦ಥದ ಪ್ರ 3 ಧಾನವಿಷಯ. ರಸಕ್ಕೆ ಹೆಚ್ಚಿನ
ಸ್ನಾನವೇನನ್ನೂ- ಕೊಟ್ಟಿಲ್ಲ; ಶೃಂಗಾರಾದಿ ರಸಗಳನ್ನು ಸ್ಪಷ್ಟವಾಗಿ
ದರ್ಶಿಸಿದ್ದರೆ ರಸವದರಂಕಾರವಾಗುವುದೆಂದು ಹೇಳಿ ಮುಗಿಸುತ್ತಾನೆ
(11 ೬). ಭಾಮಹನ ಮತದಂತೆ ಎಲ್ಲ ಕಾವ್ಯವೂ--ಅದು ಮಹಾ
ಕಾವ್ಯವಾಗಿರಲ, ಮುಕ್ತಕವಾಗಿರಲ್ಲ." ವಕ್ರೋಕ್ತಿ 'ಯಿಂದ ಕೂಡಿರ
ಬೇಕು. ". ಕಾವ್ಯದ ತಬ್ದದಲ್ಲಿಯೂ ಅರ್ಥದಲ್ಲಿಯೂ ಲೋಕರೂಡಿಗೆ
ಮಾರಿದ ಒಂದು ಅತಿಶಯವಿರುವುದೇ ಅತಿಶಯೋಕ್ತಿ ಅಥವಾ ವಕ್ರೋಕ್ತಿ.
ವಕ್ರೊ €ಕ್ರಿಯಿಂದಲೇ ಅರ್ಥವು ಸುಂದರವಾಗುವುದು; ಇದನ್ನು ತರುವುದ
ಕ್ಕಾಗಿಯ್ದೇ ಕವಿ ಪ್ರಯತ್ನಿ ಸಬೇಕು ; ಇದನ್ನುಳಿದು ಎಂಥ ಅಲಂಕಾರ?''
"“ಸೂರ್ಯ ಮುಳುಗಿದನು, ಚಂದ್ರ ಹೊಳೆಯುತ್ತಾನೆ, ಹಕ್ಕಿಗಳು ಗೂಡಿಗೆ
? “ಯುಕ್ತಂ ವಶ್ರಸ್ಟಭಾವೋಕ್ರ್ಯಾ ಸರ್ವಮೇವೈತದಿಷ್ಯತೇ'' (1 ೩೦).
* ಪಕ್ರಸ್ಟಭಾವೋಕ್ತ್ರ್ಯಾ '' ಎಂಬುದಕ್ಕೆ "" ವಕ್ರಸ್ಟಭಾವವನ್ನುಳ್ಳ ಉಕ್ತಿಯಿಂದ ` (ಎಂದರೆ,
'" ಪಕ್ರೋಕ್ತಿಯಿಂದ '') ಎನ್ನುವುದೇ ಸಮಂಜಸವಾದ ಅರ್ಥ.
10 ಕಾಪ್ಯಾಲಂಕಾರ, 8. ೮೧. ೪.
1! ಹೈಪಾ ಸರ್ಮ್ಮೈವ ವಕ್ರೋಕ್ತಿರನಯಾರ್ಥೋ ವಿಭಾವ್ಯತೇ |
ಯತ್ನೊೋಃಸ್ಯಾಂ ಕವಿನಾ ಕಾರ್ಯಃ ಕೋಲಂಕಾರೊಲನಯಾ ವಿನಾ ॥
(ಕಾವ್ಯಾಲಂಕಾರ, 8. ೮೫)
೨೬ ಭಾರತೀಯ ಕಾವ್ಯಮಾಮಾಂಸೆ
ಹೋಗುತ್ತವೆ ''-. ಈ ಬಗೆಯದೆಲ್ಲ ಕಾವ್ಯವೇ ? ಇದನ್ನು (ಲೋಕ)
ವಾರ್ತೆಯೆಂದು ಕರೆಯುತ್ತಾರೆ. 1 ಹೀಗೆನ್ನುವುದು ಭಾಮಹನ ಮತ.
(ಕ್ರ ಭಾಮಹನ ಅಭಿಪ್ರಾಯಕ್ಕೆ ದಂಡಿಯದು ಹಲವು ಅಂಶಗಳಲ್ಲಿ
ವಿರುದ್ಧ ವೆಂದು ಹೇಳಿದೆಯಪ್ಪೆ.. "" ಗತ್ಲೋೊಸ್ತಮಕ್ಕೋ ಭಾತೀೀಂದುಃ
ಯಾಂತಿ ವಾಸಾಯ ಪಕ್ಷಿಣಃ''_ಈ ಬಗೆಯ ವಾಕ್ಯಗಳಿಗೆ ಕೂಡ ಪೇಳೆ
ಯನ್ನು ತಿಳಿಸುವಾಗ ಔಚಿತ್ಯವು೦ಂಟೆ೦ದು ಅವನ ಮತ. !' ವಕ್ರೋಕ್ತಿ
ಯಿಲ್ಲದೆ ಅಲಂಕಾರವಿಲ್ಲ; ಸ್ವಭಾವೋಕ್ತಿಯನ್ನು ಕೆಲವರು ಮಾತ್ರ
ಅಲಂಕಾರವೆಂದು ಕರೆಯುತ್ತಾರೆ ಎಂದು ಭಾಮಹನು ಹೇಳಿದ್ದರೆ, ದಂಡಿ
'"ವಾಜ್ಮಯವು ಸ್ಟಭಾವೋಕ್ಕಿ, ವಕ್ರೋಕ್ತಿ ಎಂದು ಎರಡು ಬಗೆ”:
ಎಂದು ಹೇಳುವುದಲ್ಲದೆ ತನ್ನ ಅಲಂಕಾರಗಳ ಪಟ್ಟಿಯಲ್ಲಿ ಸ್ವಭಾವೋಕ್ರಿಗೇ
ಅಗ್ರಸ್ಥಾನವನ್ನು ಕೊಟ್ಟು ನಿರೂಪಿಸಿದ್ದಾನೆ. ಭಾಮಹನಿಗೂ ದಂಡಿಗೂ
ಇರುವ ಇನ್ನೊಂದು ಮುಖ್ಯ ವ್ಯತ್ಯಾಸವು "ಗುಣ 'ಗಳ ವಿಷಯದಲ್ಲಿ.
ಮಾಧುರ್ಯ, ಓಜಸ್ಸು, ಪ್ರಸಾದ--ಈ ಮೂರನ್ನು ಮಾತ್ರ ಕುರಿತು ಕೆಲವು
ಮಾತುಗಳನ್ನು ಭಾಮಹನು ಹೇಳಿದ್ದಾನೆ (೬ ೧-೩); ಇವನ್ನು ಕೂಡ
ಗುಣಗಳೆಂದು ಹೆಸರಿಟ್ಟು ಕರೆದಿಲ್ಲ. ದಂಡಿಯ ಕಾವ್ಯಾದರ್ಶದಲ್ಲಾದರೆ
ಹೊದಲನೆಯ ಪರಿಚ್ಛೇದದ ಬಹುಭಾಗವು ವೈದರ್ಭ, ಗೌಡ ಎಂಬ ಎರಡು
ಕಾವ್ಯಮಾರ್ಗಗಳ ವಿಭೇದವನ್ನು ಪ್ರತಿಪಾದಿಸುವುದಕ್ಕೇ ಮಾಸಲಾಗಿದೆ.
ದಂಡಿಯ ಒಲವೆಲ್ಲವೂ ಮೈದರ್ಭಮಾರ್ಗದ ಕಡೆಗೆ. ಶ್ಲೇಷ, ಪ್ರಸಾದ,
ಸಮತೆ, ಮಾಧುರ್ಯ, ಸುಕುಮಾರತೆ, ಅರ್ಥವ್ಯಕ್ತಿ, ಉದಾರತ್ವ, ಓಜಸ್ಸು,
ಕಾಂತಿ, ಸಮಾಧಿ ಈ ಹತ್ತು ಗುಣಗಳೇ ವೈದರ್ಭಮಾರ್ಗದ "ಪ್ರಾಣ.
ಗೌಡಮಾರ್ಗದಲ್ಲಿ ಪ್ರಾಯಿಕವಾಗಿ ಇವುಗಳ ವಿಪರ್ಯಯ ಕಾಣಿಸುತ್ತದೆ.”
1 ಗತ್ತೋಸ್ತಮರ್ಕೂ( ಛಾತೀಂದುಃ ಯಾಂತಿ ಮಾ.ಕಾಯ ಶಕ್ಷಿಣಃ |
ಇತ್ಯೇವಮಾದಿ ಕಿಂ ಕಾವ್ಕಂ ವಾರ್ತಾಮೇನಾಂ ಪ್ರಚಕ್ಷತೇ !
(ಕಇಪ್ಯಾಲಂಕಾರ, ॥. ೧೭)
13 ಗತೋಃಸ ಮಕರ್ಕೋ ಭಾತೀಂಡುಃ ಯಾಂತಿ ವಾಸಾಖ ಪಕ್ಷಿಣಃ!
ಐತೀದಮಪಿ ಸಾಧ್ವೇವ ಕಾಲಾನಸ್ಥಾನಿವೇದನೇ ॥ (ಕಾವ್ಯಾದರ್ಶ, ೪. ೨೪೪)
11 ಭಿನ್ನಂ ದ್ವಿಧಾ ಸ್ಪಭಾವೋಕಿರ್ವಕ್ರೋಕ್ತಿಶ್ಚೇತಿ ವಾದ್ಕಯಂ '
(ಕಾವ್ಯಾದರ್ಶ, ॥. ೩೬೩)
1» ಇತಿ ಮೈದರ್ಭಮಾರ್ಗಸ್ಯ ಪ್ರಾಣಾ ದಶಗುಣಇಃ ಸ್ಮೃತಃ |
ತೇಷಾಂ ವಿಪರ್ಯಯಃ ಪ್ರಾಯೋ ದೃಶ್ಯತೇ ಗೌಡವರ್ತ್ಮನಿ ॥
(ಕಾವ್ಯಾದರ್ಶ, i. ೪೨)
೩. ಅಲಂಕಾರ ರೀತಿ ಪ್ರಸ್ಕಾನಗಳು ೨೭
ರಸದ ವಿಷಯದಲ್ಲಿ ಭಾಮಹನಿಗಿಂತ ದಂಡಿಗೆ ಆದರ ಹೆಚ್ಚು. ರಸವದ
ಲಂಕಾರವನ್ನು ಹೇಳುವಾಗ ಎಲ್ಲ ರಸಗಳಿಗೂ ಬೇರೆಬೇರೆ ಉದಾಹರಣ್
ಗಳನ್ನು ಕೊಟ್ಟಿದ್ದಾನೆ. ಕಾವ್ಯಾದರ್ಶದ ಎರಡನೆಯ ಪರಿಚ್ಛೇದದಲ್ಲಿ
ಅರ್ಥಾಲಂಕಾರಗಳೂ ಮೂರನೆಯದರಲ್ಲಿ ಶಬ್ಧಾಲಂಕಾರಗಳೂ ದೋಷ
ಗಳೂ ನಿರೂಪಿತವಾಗಿವೆ. ಭಾಮಹನಿಗಿಂತ ದಂಡಿಗೆ ಶಬ್ಧಾಲಂಕಾರಗಳ
ಮೇಲೆ ಹೆಚ್ಚು ಆಸಕ್ಕಿ.
ದಂಡಿ ಆಲಂಕಾರಿಕನು ಮಾತ್ರವೇ ಅಲ್ಲ; ಅವನು ಒಳ್ಳೆಯ ಕವಿ.
ತ್ರಯೋ ದಂಡಿಪ್ರಬಂಧಾಃ'' ("" ದಂಡಿಯ ಕೃತಿಗಳು ಮೂರು'')
ಏಂಬುದು ಪ್ರಸಿದ್ಧವಾದ ವಾಕ್ಯ. ಆದರೆ, ಕಾವ್ಯಾದರ್ಶವನ್ನು ಬಿಟ್ಟರೆ ಮಿಕ್ಕ
ಏರಡು ಯಾವುವು ಎಂಬುದು ನಿಶ್ಚಿ ತವಾಗಿಲ್ಲ. " ದಶಕುಮಾರಚರಿತ 'ವು
ಈತನ ಗ್ರಂಥವೇ ಎಂಬುದು ಸಾಮಾನ್ಯವಾಗಿ ಎಲ್ಲರ ತಿಳಿವಳಿಕೆಯಾಗಿ
ದ್ಡರೂ ಇದನ್ನು ವಿರೋಧಿಸುವವರು ಇಲ್ಲದಿಲ್ಲ. ಮಿಕ್ಕ ಕೃತಿಗಳ ಮಾತಿರಲಿ.
ಕಾವ್ಯಾದರ್ಶದ ಲಕ್ಷ್ಯ ಶ್ಲೋಕಗಳಲ್ಲಿ ಹಲವು ಅತಿರಮಣೀಯವಾಗಿದೆ ;
ಇವುಗಳಲ್ಲಿ ಹೆಚ್ಚು ಕಡಮೆ ಎಲ್ಲವೂ ದಂಡಿಯಿಂದಲ್ಲೇ ರಚಿತವಾಗಿರತಕ್ಕ ವು.
) ಭಾಮಹನನ್ನು ಉದ್ಭಟನೂ ದಂಡಿಯನ್ನು ವಾಮನನೂ ಅನುಸರಿಸಿ
ಆಯಾ ಮತದ ವಿಶೇಷ ಲಕ್ಷಣಗಳನ್ನು ಬಲಪಡಿಸಿ ಪ್ರತಿಪಾದಿಸಿದರು.
ಉದ್ಭಟವಾಮನರಿಬ್ಬರೂ ಕಾಶ್ಮೀರದ ಜಯಾಪೀಡನೆಂಬ ರಾಜನ
(ಕ್ರಿ.ಶ.ಸು. ೭೭೬.೮೦೭)ಆಸ್ಥಾನದಲ್ಲದ್ದಂತೆ ಗೊತ್ತಾಗುತ್ತದೆ; ಉದ್ಧಟ
ನಂತೂ ಅಲ್ಲಿ ಸಭಾಪತಿಯಾಗಿ ತುಂಬ ಗೌರವವನ್ನೂ ಅಭ್ಯುದಯವನ್ನೂ
ಪಡೆದಿದ್ದನು, ಅವನಿಗೆ ದಿನವೊಂದಕ್ಕೆ ಒಂದು ಲಕ್ಷ ದೀನಾರಗಳ ವೇತನ
ವಿದ್ದಿತಂತೆ !'' ಹೀಗಿರುವಲ್ಲಿ ಈ _ಆಲಂಕಾರಿಕರು ಒಬ್ಬರನ್ನೊಬ್ಬರು
ಸ್ಮರಿಸದೆ ಇರುವುದು ಆತ್ಚ ರ್ಯಕ್ತರ. ಉದ್ಭಟನು ಭಾಮಹನ ಕಾವ್ಯಾಲಂ
ಕಾರದ ಮೇಲೆ " ಭಾಮಹವಿವರಣ `ಪೆಂಬ ವ್ಯಾಖ್ಯಾನವನ್ನು ಬರೆದಿದ್ದ ನಂತೆ ;
ಇದು ದೊರೆತಿಲ್ಲ. ಅಲ್ಲದೆ, ಪಿಂಡೆಯೇ ಸೂಚಿಸಿರುವಂತೆ ಅವನು ಭರತನ
ನಾಟ್ಯಶಾಸ್ತ್ರಕ್ಕೂ ವ್ಯಾಖ್ಯಾನರಚನೆ ಮಾಡಿದ್ದ ನೆಂದು ಊಹಿಸಲು ಅವಕಾಶ
1 ಎಿದ್ವಾನ್ ದೀನಾರಲಕ್ಷೇಣ ಪ್ರತ್ಯಹಂ ಕೃತವೇತನಃ |
ಭಟ್ಟ್ಯೋಭೂದುದ್ದಟಸ್ತಸ್ಯ ಭೂಮಿಭರ್ತುಃ ಸಭಾಪತಿಃ 1(ಲಾಜತರಂಗಿಣೀ, ೪. ೪೯೫)
ಮನೋರಥಃ ಶಂಬದತ್ತಶ್ಚಟಕಃ ಸಂಧಿಮಾಂಸ್ತಥಾ |
ಬಭೂವುಃ ಕವಯಸ್ತಸ್ಯ ವಾಮನಾದ್ಯಾತ್ಮ ಮಂತ್ರಿಣಃ ॥ (ಅದೇ, ಣ. ೪೯೭)
೨೮ ಭಾರತೀಯ ಕಾವ್ಯಮಿಾಮಾಂಸೆ
ವುಂಟು. ಈಗ ಡದೊರೆತಿರುವುದೇನೋೋ " ಕಾವ್ಯಾಲಂಕಾರಸಂಗ್ರಹ '
ಹೆಂಬ ಹೆಸರನ್ನುಳ್ಳ, ಅಲಂಕಾರಗಳನ್ನಷ್ಟೇ ಪ್ರತಿಪಾದಿಸುವ, ಅವನ ಒಂದೇ
ಗ್ರಂಥ. ಈ ಅಲಂಕಾರಗಳು ಬಲುಮಟ್ಟಿಗೆ ಭಾಮಹನ ಕಾವ್ಯಾಲಂಕಾರ
ದಲ್ಲಿರತಕ್ಕವೇ ಆಗಿವೆ; ಅಲ್ಲಿಯ ಕ್ರಮದಲ್ಲಿಯೇ ಬಂದಿವೆ. ಅವುಗಳ
ಲಕ್ಷಣವನ್ನು ಹೇಳುವಾಗ ಉದ್ಭಟನು ಭಾಮಹನ ದಾರಿಯಲ್ಲೇ ಹೋಗಿ
ದೃರೂ ಎಷ್ಟೋಕಡೆ ಇನ್ನೂ ಮುಂದುವರಿದು ಬಚಿತಪಡಿಸಿದ್ದಾನೆ ; ಇಬ್ಬ
ರಿಗೂ ಅಭಿಪ್ರಾಯಭೇದವೂ ಅಲ್ಲಲ್ಲಿ ಉಂಟು. ಉದ್ಭಟನ ಮಾತಿಗೆ ಈಟಿನ
ಆಲಂಕಾರಿಕರು ತುಂಬ ಗೌರವಕೊಡುತ್ತಾರೆ; ಅವನ ಗ ಸ2೦ಥವು ಪ್ರಸಿದ್ಧಿಗೆ
ಬ೦ದಬಳಿಕ ಭಾಮಹನ ಹೆಸರು ಕೂಡ ಹಿಂದಕ್ಕೆ ಬಿದ್ದಂತೆ ತೋರುತ್ತದೆ.
_ ರಸವನ್ನು ಭಾಮಹಾದಿಗಳಂತೆಯೇ ಉದ್ಭಟನೂ ರಸವದ ೨೦ಕಾರ
ದೊಳಗೇ ಗಣನೆ ಮಾಡಿದ್ದರೂ, ಗಮನಾರ್ಹವಾದ ಒಂದು ಅಂಶ
ಇಲ್ಲುಂಟು. ಭರತನ ನಾಟ್ಯಶಾಸ್ತ್ರದಲ್ಲಿ ಉಕ್ತವಾಗಿರುವವು ಎಂಟೇ
ರಸಗಳು. ಇವುಗಳ ಜೊತೆಗೆ " ಶಾಂತ'ವನ್ನೂ ಸೇರಿಸಿ, _ಉದ್ಭಟನು
"" ನಾಟ್ಯದಲ್ಲಿ ರಸಗಳು ಒಂಬತ್ತು ಎನ್ನುತ್ತಾನೆ." ಸಂಸ್ಕೃತದ ಕಾವ್ಯ
ನಾಟ್ಯ ಲಕ್ಷಣ ಗ್ರಂಥಗಳ ರಾಶಿಯಲ್ಲೆಲ್ಲಾ ಶಾಂತರಸದ ಹೆಸರು ಮೊದಲು
ಬಂದಿರುವುದು ಈಗ ತಿಳಿದಿರುವಮಟ್ಟಿಗೆ ಉದ್ಭ ಟನ " ಕಾವ್ಯಾಲಂಕಾರ
ಸಂಗ್ರಹ 'ದಲ್ಲಯೇ.'" ಅಲ್ಲಿಂದೀಚೆಗೆ, ಶಾಂತರಸವನ್ನು ಅಂಗೀಕರಿಸ
ಬೇಕೇ ಬೇಡವೇ ಎಂಬ ವಿಷಯದಲ್ಲಿ ವಿಪುಲವಾಗಿ ಚರ್ಚೆ ನಡೆದಿದೆ.
(ಇತ್ತ ವಾಮನನು ಗುಣಗಳಿಗೆ ದಂಡಿಯ ಗ್ರಂಥದಲ್ಲಿ ದೊರೆತಿದ್ದ
ಸ್ಕಾ ನವನ್ನು ತನ್ನ é ಕಾವ್ಯಾಲಂಕಾರಸೂತ್ರ'ದಲ್ಲ ಇನ್ನೂ ದೃಢಪಡಿಸಿ,
೫ ಶೃಂಗಾರ ಹಾಸ್ಯ ಕರುಣ ರೌದ್ರ ವೀರ ಭಯಾನಕಾಃ |
ಬೀಭತ್ಸಾದ್ಭುತ ಶಾಂತಾಶೈ ನವ ನಾಟ್ಯೇ ರಶಾಃ ಸ್ಮೃತಾಃ 1 (೪.೪)
!: ಪ್ರಾಕೃತದಲ್ಲ ರಚಿತವಾಗಿರುವ ' ಅಣ:ಒಗದಾರಸುತ್ತ (7೨ ಅನುಯೋಗದ್ವಾರ
ಸೂತ್ರ)ವೆಂಬ ಜೈನಧರ್ಮ ಗ್ರಂಥದಲ್ಲಿ ಹೇಳಿರತಕ್ಕ ಒಂಬತ್ತು ಕಾವೃರಸಗಳೊಳಗೆ
"" ಪನಂತ' (ಪ್ರಶಾಂತ) ವು ಸೇರಿದೆಯಲ್ಲದೆ, ಅದರ ಲಕ್ಷ್ಯಲಕ್ಷಣಗಳೂ ಸಂಕ್ಷಿಪ್ತವಾಗಿ
ಬಂದಿವೆ. ಈ "" ಪ್ರಶಾಂತ ''ಪೂ ನಮ 4" ಶೌಂತ''ಪೊ ಒಂದೇ ಎಂಬುದರಲ್ಲಿ ಸಂಶಯ
ಎಲ್ಲ. "ಅನುಯೋಗದ್ಪಾರ ಸೂತ್ರ 'ದ ಕಾಲವು ಬಹುಶಃ ಕ್ರಿ.ಶ. ಚನೆಯ ಶತಮಾನವಾಗಿರ
ಬಹುದೆಂದು ವಿದ್ಯಾಂಸಶು ಭಾವಿಸುತ್ತಾರೆ. ಐದು ದಿಟವಾಗಿದ್ದಲ್ಲ, ಶಂಂತರಸದ ವಿಚಾರ
ವನ್ನು ಮೊದಲು ಎತ್ತಿದ ಕೀರ್ತಿ ಈ ಗ್ರಂಥದ ಕರ್ತ್ಯವಿಗೆ ಸಲ್ಲಬೇಕಾಗುತ್ತದೆ.
(V. Raghavan: The Number of Ratas, pp. 23» 57-೧ ನೋಡಿ.)
೩. ಅಲಂಕಾರ-.-ರೀತಿ ಪ್ರುಸ್ಮಾನಗಳು ೨೯
ಅಲಂಕಾರಗಳ ಪ್ರಾಶಸ್ತ್ಯವನ್ನು ತಗ್ಗಿ ಸಿದನು. ಇವನಿಗಿಂತ ಹಿಂದಿನವರ
ಗ್ರ೦ಥಗಳು ಶ್ಲೋಕರೂಪದಲ್ಲಿರತಕ್ಕ ವು; ಉದಾಹರಣಿಗಳು ಬಲುಮಟ್ಟಿಗೆ
ಸೈಕಲ್ಪಿತವಾದವು. ವಾಮನೆನ ಗ್ರಂಥವಾದರೆ ಗದ್ಯದಲ್ಲಿ ಸೂತ್ರ-
ವೃತ್ತಿಗಳ ರೂಪದಲ್ಲದೆ. ಇಲ್ಲಿ ಬಂದಿರುವ ಉದಾಹರಣಿಗಳೆಲ್ಲ ಹಿಂದಿನ
ಅನೇಕ ಕಾವ್ಯನಾಟಕಗಳಿಂದ ಆರಿಸಿಕೊಂಡವು; ಈ ಕಾರಣದಿಂದ
ವಾಮನನ ಗ್ರಂಥಕ್ಕೆ ಸಂಸ್ಕೃತಸಾಪಿತ್ಯದ ಇತಿಹಾಸಶೋಧನೆಯಲ್ಲಿ
ವಿಶೇಷ ಸ್ಥಾನವಿದೆ. . "" ಕಾವ್ಯಶೋಭಾಯಾಃ ಕರ್ತಾರೋ ಧರ್ಮಾ
ಗುಣಾಃ. ತದತಿಶಯಹೇತವಸ್ತು ಆಲಂಕಾರಾಃ, ಪೂರ್ವೇ ನಿತ್ಯಾಃ. ''
("" ಕಾವ್ಯಸೌಂದರ್ಯವನ್ನು ಉಂಟುಮಾಡತಕ್ಕ ಧರ್ಮಗಳು ಗುಣಗಳು ;
ಅದನ್ನು ಹೆಚ್ಚಿ ಸತಕ್ಕವು ಮಾತ್ರ ಅಲಂಕಾರಗಳು. ಷೊದಲಿನವು
(ಕಾವ್ಯದಲ್ಲಿ, ಇರಲೇಬೇಕಾದವು'') ಎಂಬ ವಾಮನನ ಸೂತ್ರಗಳು
(ii. ೨. ೨-೪) ಪ್ರಸಿದ್ಧವಾಗಿವೆ. ಗುಣಗಳಿಗೂ ಅಲಂಕಾರಗಳಿಗೂ ತಾರ
ತಮ್ಯವನ್ನು ಕಲ್ಪಿಸಲು ಇಲ್ಲಿ ವಾಮನನು ಪ್ರಯತ್ನಿಸಿದ್ದಾನೆ. ಅವನ
ಮತದಂತೆ, ಗುಣಗಳಿದ್ದ ಹೊರತು ಕಾವ್ಯವೇ ಆಗುವುದಿಲ್ಲ. ದಂಡಿಯ
ಹತ್ತು ಗುಣಗಳ ಹೆಸರನ್ನೇ ವಾಮನನೂ ಉಳಿಸಿಕೊಂಡಿದ್ದರೂ,
ಒಂದೊಂದನ್ನೂ ಕಾವ್ಯದ ಶಬ್ದ, ಅರ್ಥ ಈ ಎರಡಕ್ಕೂ ಬೇರೆಬೇರೆಯಾಗಿ
ಅನ್ವಯಿಸ:ವುದರಿಂದ ಇಲ್ಲ ಗುಣಗಳ ಸಂಖ್ಯೆ ನಿಜವಾಗಿ ಇಪ್ಪತ್ತಕ್ಕೆ
ಏರುತ್ತದೆ ; ಲಕ್ಷಣವೂ ಬೇರ್ಪಡುತ್ತದೆ. ಈ ಗುಣಗಳನ್ನೆಲ್ಲಾ ಸಮಗ್ರ
ವಾಗಿ ಉಳ್ಳದ್ದು ಮೈದರ್ಭಿೀರೀತಿ ; ವಾಮನನು ಒಪ್ಪುವುದು ಇದೊಂದನ್ನೇ,
ಗೌಡೀ ಪಾಂಚಾಲ ರೀತಿಗಳಲ್ಲಿ ಕೆಲಕೆಲವು ಗುಣಗಳು ಮಾತ್ರ ಇರುವುದ
ರಿಂದ ಅವು ಗಾ ಹ್ಯವಲ್ಲ. ವೈದರ್ಭಿಗೂ ಅವಕ್ಕೂ ಇರುವ ತಾರತಮ್ಮ
ರೇಷ್ಮೆಯೆಳೆಗೂ ಸೆಣಬಿನ ದಾರಕ್ಕೂ ಇರುವಂತೆ. ದಂಡಿಗೂ ವೈದರ್ಭ
ಮಾರ್ಗವೇ ಪ್ರಿಯವಾಗಿದ್ದರೂ ಅದಕ್ಕೆ ವಿರುದ್ಧವಾದ ಗೌಡಮಾರ್ಗ
ವನ್ನು ಇಷ್ಟು ಖಚಿತವಾದ ಮಾತುಗಳಲ್ಲಿ ಅವನು ಖಂಡಿಸಿರಲಿಲ್ಲ. ದಂಡಿ
‘ ಮಾರ್ಗ 'ವೆನ್ನುವುದನ್ನು ವಾಮನನು "ರೀತಿ ' ಎ೦ಬ ಹೊಸ ಪದದಿಂದ
ಕರೆದಿರುವುದನ್ನೂ ಇಲ್ಲಿ ಗಮನಿಸಬೇಕು. ಪದವೊಂದೇ ಅಲ್ಲ; ಅದರ
ಪದವಿಯೂ ಹೊಸದು : «" ರೀತಿರಾತ್ಮಾ ಕಾವ್ಯಸ್ಯ ("ರೀತಿಯೇ
9,೨. ೧೧೨೧೮,
೩೦ ಭಾರತೀಯ ಕಾವ್ಯಮಾಮಾಂಸೆ
ಕಾವ್ಯದ ಆತ್ಮ'') ( ೨. ೬). ವಾಮನನಿಗೆ ಹಿಂದಿನ ಯಾವ ಆಲಂಕಾ
ರಿಕನೂ ಹೀಗೆ ಕಾವ್ಯದ "" ಆತ್ಮ ''ವನ್ನು ವಿಚಾರಮಾಡಲು ಹೊರಟಿರಲಲ್ಲ.
'ರೀತಿಯೆಂದರೆ ' 'ಗುಜಾತ್ಮ ಕಮದ ಪದರಚನ ಕಾವ್ಯ ದ ಆತ್ಮ ಈ
" ರೀತಿ'ಯೇ ಬೇರೊಂಡೇ ಎಂಬ ಪ್ರಶ್ನೆ ಈಚೆಗೆ ಹ ಬಗೆಯಲ್ಲೂ
ದರೂ ತೀರ್ಮಾನವಾಗಿರಲಿ; ಕಾವ್ಯದ ಶರೀರವನ್ನೂ ಆತ್ಮವನ್ನೂ
ಪೃಥಕ್ಕರಿಸಿ ನೋಡಲು ಮೇಲ್ಪಂಕ್ತಿ ಹಾಕಿಕೊಟ್ಟ ವನು ವಾಮನ.
ವಾಮನನ ಮತದಲ್ಲ ರಸದ ಸ್ಥಾನ ಉತ್ತ ಮವಾಗಿದೆ. ಭಾಮಹ,
ದಂಡಿಗಳು ಹೇಳಿರುವ " ರಸವತ್' , ಮೊದಲಾದ ಅಲಂಕಾರಗಳನ್ನು
ಅವನು ಕೈಬಿಟ್ಟಿದ್ದರೂ, ಕಾವ್ಯಕ್ಕೆ ಅವತ್ಯವೆನಿಸಿದ ಒಂದು " ಗುಣ 'ದಲ್ಲೇ
ರಸಕ್ಕೆ ಎಡೆಕೊಟ್ಟಿದ್ದಾನೆ.* ಆದ್ದ ರಿಂದ ಕಾವ್ಯದಲ್ಲಿ ಅದಕ್ಕೆ ನಿಯತ
ವಾದ ಸ್ಥಾನವೇ ಸಿಕ್ಕಿದಂತಾಯಿತು.
© ಇದುವರೆಗೆ ಬಂದ ಆಲಂಕಾರಿಕರಲ್ಲಿ ಯಾರೊಬ್ಬರೂ ಅಲಂಕಾರ
ಗಳನ್ನು ಶಾಸ್ತ್ರೀಯವಾದ ಕ್ರಮದಲ್ಲಿ ವಿಂಗಡಿಸಿರಲ್ಲು. ಆ ಪ್ರಯತ್ನ
ವನ್ನು ರುದ್ರಟನು (ಕ್ರಿ. ಶ. ಸು. ೮೫೦) ತನ್ನ " ಕಾವ್ಯಾಲಂಕಾರ 'ದಲ್ಲಿ
ಮಾಡಿದನು. ರಸದ ವಿಷಯದಲ್ಲಿ ಅವನಿಗೆ ಅದರವಿತ್ತು; ತನ್ನ ಗ್ರಂಥದ
೧೬ ಅಧ್ಯಾಯಗಳಲ್ಲಿ ಇನ್ನು ರಸನಿರೂಪಣಿಗೆ ವಿನಿಯೋಗಿಸುತ್ತಾನೆ.
ಕಾವ್ಯದಲ್ಲಿ ರಸವನ್ನು ಏಕೆ ತರಬೇಕೆಂಬುದಕ್ಕೆ ಅವನು ಹೇಳುವ ಕಾರಣ
ಮಾತ್ರ ಅಧುನಿಕರಿಗೆ ವಿಲಕ್ಷಣವೆಂದು ತೋರೀತು: "" ಸರಸಮತಿಗಳಿಗೆ
ಧರ್ಮಾರ್ಥಕಾಮಮೋಕ್ಷಗಳ ತಿಳಿವಳಿಕೆ ಕಾವ್ಯದಿಂದ ಶೀಘ್ರವಾಗಿ ಮೃದು
ಮಾರ್ಗದಲ್ಲಿ ಒದಗುವುದಲ್ಲವೆ. ನೀರಸವಾದ ಶಾಸ್ತ್ರಗಳನ್ನು ಕಂಡರೆ
ಅವರು ಅಂಜುತ್ತಾರೆ. ಆದಕಾರಣ, ಹೆಚ್ಚು ಯತ್ನ ಮಾಡಿ, ಕಾವ ೈವು
ರಸದಿಂದ ಕೂಡಿರುವಂತೆ ರಚಿಸಬೇಕು. ಇಲ್ಲವಾದರೆ, ಶಾಸ್ತ್ರದಂತೆ
ಇದರಲ್ಲೂ ಅವರಿಗೆ ಜುಗುಪ್ಸೆಯುಂಟಾದೀತು. ''-- ಈ ಬಗೆಯ ಭಾವನೆ
ವಿಶಿಷ್ಟಾ ಪದರಚನಾ ರೀತಿಃ. ವಿಶೇಷೋ ಗುಣಇತ್ತ್ಮ್ಮಾ, '' 1.೨. ೭, ೮.)
೭1 « ದೀಪ್ತರಸತ್ಛ೦ ಕಾಂತಿಃ” (11. ೨. ೧೪.)--'" ರಸವು ಉಜ್ಜಜಲವಾಗಿರುವುದು
jie” ಇವನು ಕಲ್ಪಿಸಿದ ವಾಸ್ತವ, ಔಷಮ್ಯ, ಅತಿಶಯ, ಶ್ಲೇಷ ಎಂಬ ವಿಭಾಗವನ್ನೇ
ಕನ್ನಡದಲ್ಲಿ ನಾಗವರ್ಮನು " ಕಾವ್ಯಾವಲೋಕನ 'ದಲ್ಲ ಅನುಸರಿಸಿದನು.
23 ನನು ಕಾವ್ಯೇನ ಕ್ರಿಯತೇ ಸರಸಾನಾಮವಗಮಶ್ಚತುರ್ವರ್ಗೇ!
ಲಘು ಮೃದು ಚ ನೀರಸೇಭ್ಯಃ ತೇ ಹಿ ತ್ರಸ್ಯಂತಿ ಶಾಸ್ಟೇಭ್ಯಃ ॥
ತಸ್ಮಾತ್ ತತ್ ಕರ್ತವ್ಯಂ ಯತ್ನೇನ ಮಹೀಯಸಾ ರಸ್ಯೊರ್ಯುಕ್ತಂ |
ಉದ್ಭೇಜನಮೇತೇಷಾಂ ಶಾಸ್ತ್ರವದೇವಾನ್ಯಥಾ ಹಿ. ಸ್ಯಾತ್ 1 (34, ೧, ೨)
೩. ಅಲಂಕಾರ .-ರೀತಿ ಪ್ರಸಸ್ಥಾನಗಳು ೩೧
ಹಿಂದೆ ಅನೇಕ ಮಂದಿ ಆಲಂಕಾರಿಕರಲ್ಲ ಇದ್ದಿತು. ಇದರಮೇಲೆ
ರುದ್ರಟನಿಗೆ ಅಲಂಕಾರಗಳ ನಚ್ಚು ಹೆಚ್ಚಾಗಿಯೇ ಇದೆ. ಅವಕ್ಕೂ
ರಸಕ್ಕೂ ಅವನು ಯಾವ ಸಂಬಂಧವನ್ನೂ ಕಲ್ಪಿಸಿಲ್ಲ; ರಸಪ್ರಕರಣವು ಅವನ
ಗ್ರಂಥದಲ್ಲಿ ಅಲಂಕಾರಗಳ ನಿರೂಪಣೆಯಾದ ಬಳಿಕ ಒಂದು ಅನುಬಂಧ
ದಂತೆ ಬರುತ್ತದೆ. ವಾಮನನು ಕಲ್ಪಿಸಿದ " ರೀತಿ'ಗಳ ಸಂಖ್ಯೆಗೆ ರುದ್ರಟನು
"ಲಾಟೀಯಾ ' ಎಂಬ ಹೆಸರಿನ ಇನ್ನೊಂದನ್ನು ಬೇರೆ ಸೇರಿಸಿದ್ದರೂ,
ಅವನಿಗೆ " ರೀತ್ರಿ'ಯ ಮೇಲೂ ಒಲವಿಲ್ಲ; ಅಲ್ಲಡೆ ಅವನು ಕೊಡುವ
" ರೀತಿ ' ಲಕ್ಷಣವೇ ಬೇರೆ." " ಗುಣ 'ಗಳ ವಿಚಾರವನ್ನು ಅವನು ಎತ್ತಿಯೇ
ಇಲ್ಲ. ಆದಕಾರಣ, ಒಟ್ಟಿನ ಮೇಲೆ ಅವನು ಭಾವ`:ಹ ಉದ್ಭಟರ
ಗುಂಪಿಗೇ ಸೇರತಕ್ಕವನು.
ರುದ್ರಭಟ್ಟ ವಿರಚಿತವಾದ " ಶೃಂಗಾರತಿಲಕ 'ಪೆಂಬ ಮೂರು
ಪರಿಚ್ಛೇದಗಳ ಚಿಕ್ಕ ಗ್ರಂಥವಿದೆ. ಇದರಲ್ಲ,
ಪ್ರಾಯೋ ನಾಟ್ಯಂ ಪ್ರತಿ ಪ್ರೋಕ್ತಾ ಭರತಾದ್ಯ್ಯ್ಯ ರಸಸ್ತಿ3ಿಃ |
ಯಥಾಮತಿ ಮಯಹಾಪ್ಯೇಪಾ ಕಾವ್ಯಂ ಪ್ರತಿ ನಿಗದ್ಯತೇ॥ (1 ೫)
"" ಭರತನೇ ಮೊದಲಾದವರು ರಸಸ್ಸಿ ತಿಯನ್ನು ಪ್ರಾಯಿಕವಾಗಿ ನಾಟ್ಯ
ವನ್ನು ಕುರಿತೇ ಹೇಳಿದ್ದಾರೆ; ಅದನ್ನು ನಾನು ಕಾವ್ಯಕ್ಕೆ ಅನ್ವಯಿಸಿ
ತಿಳಿದಮಟ್ಟಿಗೆ ಹೇಳುತ್ತೇನೆ `' ಎಂದು ಪ್ರತಿಜ್ಞೆಮಾಡಿ, ಅದರಂತೆ ಶೃಂಗಾ
ರಾದಿ ನವರಸಗಳನ್ನು ಈ ಗ್ರಂಥಕಾರನು ಸೋದಾಹರಣವಾಗಿ ನಿರೂಪಿ
ಸಿದ್ದಾನೆ. ರುದ್ರಟನ " ಕಾವ್ಯಾಲಂಕಾರ 'ದ ರಸಪ್ರಕರಣಗಳಿಗೂ ಈ
" ಶೃಂಗಾರತಿಲಕ 'ಕ್ಕೂ ಅನೇಕ ಸಾಮ್ಯಗಳಿದ್ದರೂ, ರಸಗಳ ಸಂಖ್ಯೆ
ಮೊದಲಾದ ಅಂಶಗಳಲ್ಲ ಭೇದವೂ ಉಂಟು. ರುದ್ರಟ, ರುದ್ರಭಟ್ಟ--
ಇವರಿಬ್ಬರನ್ನು ಏಕೀಕರಿಸಬೇಕೇ ಬೇಡವೇ ಎಂಬ ವಿಷಯದಲ್ಲಿ ಚರ್ಚೆ
ಬೇಕಾದಷ್ಟು ನಡೆದಿದೆ. ಇಬ್ಬರೂ ಭಿನ್ನ ವ್ಯಕ್ತಿಗಳು; ರುದ್ರಟನು
ಕಾವ್ಯಾಲಂಕಾರವನ್ನು ಬರೆದ ಈಚೆಗೆ, ಬಹುಶಃ ಅದನ್ನೇ ಅವಲಂಬಿಸಿ,
24 ರುದ್ರಟನ ಮತದಂತೆ, ರಚನೆಯಲ್ಲ ಸಮಾಸಗಳುಂಟೇ ಇಲ್ಲವೇ ಈ ಸಮಾಸಗಳು
ಚಿಕ್ಕವೇ ದೊಡ್ಡವೇ ಎಂಬುದನ್ನು ಅವಲಂಬಿಸಿ ರೀತಿ ನಿರ್ಣಯವಾಗುತ್ತದೆ ( ೩೬).
ಯಾವ ಯಾವ ರಸಕ್ಕೆ ಯಾವ ಯಾವ ರೀತಿಗಳು ಉಚಿತವೆಂಬುದನ್ನು ಇವನು ಹೇಳಿದ್ದಾನೆ
(೯. ೨೦).
+
೩೨ ಭಾರತೀಯ ಕಾವ್ಯಮಾಮಾಂಸೆ
ರುದ್ರಭಟ್ಟನು ' ಶೃ೦ಗಾರತಿಲಕ'ವನ್ನು ರಚಸಿರಬೇಕೆಂದು ವಿದ್ವಾಂಸರು
ಒಟ್ಟಿನಮೇಲೆ ಅಭಿಪ್ರಾಯಪಡುತ್ತಾರೆ."
(ಭ್ರ ನಮ್ಮ ನಿರೂಪಣಿಯಲ್ಲ ಕಾಲಾನುಕ್ರಮಣಿಕೆಗಿಂತಲೂ ಶಾಸ್ತ್ರದ
ಜೆಳೆವಳಿಗೆಯ ಕಡೆಗೆ ಗಮನ ಹೆಚ್ಚಾ ಗಿರುವುದರಿಂದ, ರಾಜಶೇಖರನ
" ಕಾವ್ಯಮಾಮಾಂಸೆ 'ಯನ್ನು ಕುರಿತು ಕೆಲವು ಮಾತು ಹೇಳುವುದಕ್ಕೆ
ಇದೇ ತಕ್ಕ ಸ್ಥಳ. ರಾಜಶೇಖರನು (ಕ್ರಿ. ಶ ೯೦೦) "ಧ್ವನ್ಯಾ
ಲೋಕ 'ಕಾರನಾದ ಆನಂದವರ್ಥನನಿಗಿಂತ ಈಚೆಯವನು ; ತನ್ನ ಗ್ರಂಥ
ದಲ್ಲಿ ಆನಂದವರ್ಧನನ ಹೆಸರನ್ನೂ ಅವನ ಕೆಲವು ಅಭಿಪ್ರಾಯಗಳನ್ನೂ
ಉದ್ಭರಿಸಿದ್ದಾನೆ.* ಆದರೆ ಧ್ವನ್ಯಾಲೋಕದಲ್ಲಿ ಪ್ರತಿಪಾದಿತವಾಗಿ ಆಲಂ
ಕಾರಿಕ ಜಗತ್ತಿನಲ್ಲಿ ಕ್ರಾಂತಿಯನ್ನುಂಟುಮಾಡಿದ ಧ್ವನಿತತ್ತ್ವದ ಹೆಸರು
ಕೂಡ ಇವನ ಗ್ರಂಥದಲ್ಲ ಬಂದಿಲ್ಲ.” ಪ್ರಾಚೀನಾಲಂಕಾರಿಕರಂತೆ ರಾಜ
ಶೇಖರನಿಗೂ ಗುಣಾಲಂಕಾರರೀತಿಗಳಲ್ಲೇ ಅಭಿನಿವೇಶ; "ಕಾವ್ಯ
೪
ಮಾಮಾಂಸೆ 'ಯ ಪ್ರಾರಂಭದಲ್ಲಿ ಅವನು ಕೊಟ್ಟಿರುವ ಶಾಸ್ತ್ರವಿಭಾಗ
2 * ರಸಕಲಿಕಾ' ಎಂಬ ಗ್ರಂಥವೊಂದು ಇಡೆ; ಇದರಲ್ಲಿ ಗ್ರಂಥಕಾರನ ಹೆಸರು
ಕಾಣಬರುವುದಿಲ್ಲ. ಅದರೂ ಸಾಳ್ಯನು (ಕ್ರಿ. ಶೆ. ಸು. ೧೫೫೦) ಕನ್ನಡ " ರಸ ರತ್ನಾಕರ 'ದಲ್ಲ
ಇದನ್ನು ಒಮ್ಮೊಮ್ಮೆ ಅನುಸರಿಸಿ, ಒಂದು ಕಡೆಯಲ್ಲಂತೂ " ಮತ್ತಂ ರುದ್ರಭಟ್ಟನ ರಸಕಳ
ಕೆಯ ಪದ್ಮತಿಯಂ . . .'' (ಪು. ೧೧) ಎಂದು ಸ್ಪಷ್ಟವಾಗಿಯೇ ನಿರ್ದೇಶಿಸಿರುವುದರಿಂದ, ಈ
* ರಸಕಲಕೆ'ಯ ಕರ್ತೃವಿನ ಹೆಸರು ರುದ್ರಭಟ್ಟನೆಂದೇ ನಂಬಬಹುದು. ಈ ರುದ್ರ
ಭಟ್ಟನೂ ' ಶೃಂಗಾರ ತಿಲಕ 'ಕಾರನೂ ಭಿನ್ನವೈಕ್ತಿಗಳು. " ರಸಕಲಿಕಾ 'ಕಾರನೂ ಕನ್ನಡ
ದಲ್ಲಿ "ಜಗನ್ನಾಥವಿಜಯ ಕಾವ್ಯ ವನ್ನು ಬರೆದ ರುದ್ರಭಟ್ಟನೂ (ಕಾಲ ಕ್ರಿ.ಶ.ಸು.
೧೨೧೮) ಒಬ್ಬನೇ ಅಗಿರಬಹುದೆಂದು ಕೆಲವರ ಅಭಿಪ್ರಾಯ. (" ರಸರತ್ನಾಕರ ', ಮದ
ರಾಸು ವಿಶ್ವವಿದ್ಯಾನಿಲಯದ ಮುದ್ರಣ, ಪು. ೫೫-೫೪, | 5-0 ನೋಡಿ.) " ರಸಕಲಿಕೆ
ಇನ್ನೂ ಮುದ್ರಿತವಾಗಿಲ್ಲ (೧೯೪೪).
2 ಉದಾಹರಣಿಗೆ, ಕಾವ್ಯಮಾಮಾಂಸಾ, ಪು. ೧೬.
2 ಜಲ್ಹಣನ " ಸೂಕ್ತಿಮುಕ್ತಾವಲಿ 'ಯಲ್ಲ ಕವಿಕಾವ್ಯಪ್ರಶಂಸಾವಿಭಾಗದಲ್ಲ "ರಾಜ
ಶೇಖರಸ್ಯ'' ಎಂಬ ಕರ್ತೃನಿರ್ದೇಶದೊಡನೆ ಭಾಸ, ಕಾಳಿದಾನ, ಬಾಣ, ದಂಡಿ, ವಿಜಯಾಂಕಾ
ಈ ಮೊದಲಾದವರನ್ನು ಪ್ರಶಂಸಿಸುವ ಅನೇಕ ಪದ್ಯಗಳು ಬಂದಿವೆ. ಇವುಗಳಲ್ಲಿ ಅನಂದ
ವರ್ಧನನನ್ನು ಕುರಿತ ಈ ಪದ್ಯವೂ ಸೇರಿದೆ :
ಧ್ಯನಿನಾತಿಗಭೀರೇಣ ಕಾವ್ಯತತ್ತ [ನಿವೇಶಿನಾ |
ಅನಂದವರ್ಧನಃ ಕಸ್ಯ ನಾಸೀದಾನಂದವರ್ಧನಃ ॥ (೪. ಒಲ)
ಇದನ್ನು ನೋಡಿದರೆ ರಾಜಶೇಖರನು ಅನಂದವರ್ಧನನ ಧ್ವನಿತತ್ತ ವನ್ನು ಮೆಚ್ಚಿದ್ದನೆಂದು
ಸ್ಪಷ್ಟವಾಗುತ್ತದೆ. ಆದರೆ ಈ ರಾಜಶೇಖರನು ಕಾವ್ಯವಿಕಾಮಾಂಸಾಕಾರನೇ ಬೇರೊಬ್ಬನೇ
ಇಂಬ ವಿಷಯದಲ್ಲಿ ಭಿನ್ನಾಭಿಪ್ರಾಯವುಂಟ.. ಇದರ ಚರ್ಚೆಗೆ ಇಲ್ಲ ಅನಕಾಶವಲ್ಲ.
ಓ ಅಲಂಕಾರ...ರೀತಿ ಪ್ರಸ್ಮಾನಗಳು ೩ಎ
ಗಳೆ ಪಟ್ಟಿಯಿಂದ ಇದು ಸ್ಪಪ್ಪವಾಗುತ್ತದೆ.* ತನ್ನ ಉದ್ದೇತದಂತೆ
ಗ್ರಂಥದಲ್ಲರಜೇತಾಗಿದ್ದ ೧೮ ಅಧಿಕರಣಗಳಲ್ಲಿ ಅಚ್ಚನ್ನು ರಾಜಶೇಖರನು
ಬರೆದು ಮುಗಿಸಿದ್ದ ಮೋ ತಿಳಿಯದು. ಈಗ ಆಡ ೆ ಕವಿರಹಸ್ಯ'
ಷೆ೦ಬ ಮೊದಲನೆಯ ಅಧಿಕರಣವೊಂದೇ. ಇದು ಮಾತ್ರ ಅಲಂಕಾರ
ವಾಜ್ಮಯದಲ್ಲೇ ಅಪೂರ್ವಕ್ಕ ತಿ.
ಕೌತುಕಾಸ ನ ದವಾದ ಅನೇಕ ವಿಷಯಗಳನ್ನು ರಾಜಶೇಖರನು
ಇದರಲ್ಲ ನಿರೂಪಿಸಿದ್ದಾನೆ. ಸಾಹಿತ್ಯವಿದ್ಯೆಯ ಸ್ಥಾನ, ಕಾವ್ಯಪುರುಷನು
ಹುಟ್ಟಿದ ಉಪಾಖ್ಯಾನ, ಕಾವ್ಯಪುರುಪನು ಸಾಪಿತ್ಯವಿದ್ಯೆಯನ್ನು ವರಿಸಿದ
ಥೆ, ಕವಿಗೆ ಆವತ್ಯ ಮ ಪ್ರತಿಭೆ ವ್ಯ ತೃತ್ತಿ ಮೊದಲಾದವನ್ನು ಕುರಿತು
ವಿಸ್ತಾರವಾದ ಚರ್ಚೆ, ಕಾವ್ಯ ವನ್ನು ವಾಡಾದ ಕ್ರಮ್, ಕಾವ ೈವಸ್ತು
ವಿಗೆ ಆಕರಗಳು, ಕವಿಚರೈ _ರಾಜಚರೈ, ಹರಣ- ಸ್ವೀಕರಣ, ಕವಿಸಮಯ,
ದೇಶಕಾಲ ವಿಭಾಗ : ಇವು" ಕಾವ್ಯವಿಸಾಮಾಂಸೆ'ಯ ವಸ್ತು ಸಂಕಲನದಲ್ಲಿ
ಕೈಲಕೆಲವು ಮಾತ್ರ. ಸಾಮಾನ್ಯವಾಗಿ ಆಲಂಕಾರಿಕರು ಉಪೇಕ್ಷಿಸುವ
ಅಥವಾ ಒಂದೆರಡು ಮಾತುಗಳಲ್ಲಿ ಮುಗಿಸಿಬಿಡುವ ವಿಚಾರಗಳನ್ನೇ ಇಲ್ಲಿ
ರಾಜಶೇಖರನು ಪ್ರಧಾನವಾಗಿ ನಿರೂಪಿಸಿದ್ದಾನೆ. ಆದಕಾರಣ, ಗುಣಾ
ಲಂಕಾರಗಳ ಪಟ್ಟಿಗಳನ್ನು ತಿರುವಿಹಾಕಿ ಪಟ್ಟ ಜೇಸರವು ಈ ಗ್ರಂಥವನ್ನು
ಕೈಗೆ ತೆಗೆದುಕೊಂಡರೆ ಬಲುಮಟ್ಟಿಗೆ ಪರಿಹಾರವಾಗುತ್ತದೆ. ಇದರ
ರಚನೆಯಲ್ಲಿ ರಾಜಶೇಬರನು ಕೌಟಿಲ್ಯನ ಅರ್ಥಶಾಸ್ತ್ರ, ವಾತ್ಸ್ಯಾಯನನ
ಕಾಮಸೂತ್ರ ಮೊದಲಾದ ಗ್ರಂಥಗಳ ಸರಣಿಯನ್ನು ಅನುಸರಿಸಿ, ಅಷ್ಟು
ಕ್ಲಿಪ್ಪವೂ ಅಪ್ಪು ಶಿಥಿಲವೂ ಅಲ್ಲದ ಗದ್ಯದಲ್ಲಿ ಬರೆದಿದ್ದಾನೆ. ಒಂದು
೨ ನಮ್ಮ ಗ್ರಂಥದ ೪ನೆಯ ಪುಟವನ್ನು ನೋಡಿ.
3, ಕರ್ಣಾಟದೇಶದವರ ಮಾಚನಕೃಮನನ್ನು ಕುರಿತು ರಾಜಶೇಖರನು ಹೀಗೆ
ಹೇಳುತ್ತಾ, ನೆ:
ರಸಃ ಕ್ಕೋಪ್ಯಸ್ತು, ಕಾತ್ಯಸು_ ರೀತಿಃ ಕೋಪ್ಯಸ್ತು ವಾ ಗುಣಃ |
ಸಗರ್ವಂ ಸರ್ವಕರ್ಣಾಟಾಃ ಟಂಕಾರೋತ್ತರಪಾಠಿನಃ | (ಪು. ೩೪)
“ ರಸ ಯಾವುದಾದರೂ ಆಗಲ, ರೀತಿ ಯಾವುದಾದರೂ ಆಗಲ, ಗುಣ ಯಾವು
ದಾದರೂ ಆಗಲಿ, ಕರ್ಣಾಟಕರೆಲ್ಲರೂ ಠೀವಿಯಿಂದ " ಟಂಕಾರಪ್ರಧಾನ 'ವಾಗಿ ಓಥುತ್ತಾರೆ.''
" ಟಂಕಾರ ' ಎಂದರೆ " ನಿರ್ಲಕ್ಷ್ಯವಾಗಿ, ಗತ್ತಿನಿಂದ್ಸಥ್ಲೇಂಕಾರದೊಡನೆ ' ಎಂದು: ಅಥಗಎರು
ವಂತೆ ತೋರುತ್ತದೆ. ರಾ. ಅನಂತಕೃಷ್ಣಶರ್ಮ ಹೆ "ತಾಗ? ಸೂತ ::
ನೋಡಿ (ಪ್ರಬುದ್ಧ ಕರ್ಣಾಟಕ, XX. ೧).
K.M. - A
೩೪ ಭಾರತೀಯ ಕಾವ್ಯಮಾಮಾಂಸೆ
ವಿಷಯವನ್ನು ನಿರೂಪಿಸುವಾಗ, ಹಿಂಡಿನ ಆಚಾರ್ಯರ ಮತಗಳನ್ನು
ಮೊದಲು ಉದಾಹರಿಸಿ ಕೊನೆಯಲ್ಲಿ ತನ್ನ ಅಭಿಪ್ರಾಯವನ್ನು ಕೊಡುವುದು
ರಾಜಶೇಖರನ ಸಾಮಾನ್ಯ ಪದ್ಧತಿ. ಆದ್ದರಿಂದ ನಡುನಡುವೆ ಇತರರ
ಶ್ಲೋಕಗಳೂ ವಾಕ್ಯಗಳೂ ಹೇರಳವಾಗಿ ಬರುತ್ತವೆ; ಉದಾಹರಣಿಗಳ
ನ್ನಂತೂ ಯಥೇಚ್ಛವಾಗಿ ಸಂಗ್ರಹಿಸಿ ಕೊಡುತ್ತಾನೆ. ಇಲ್ಲ ಸ್ವಾರಸ್ಯ
ವುಳ ಒಂದು ಸಂಗತಿಯೇನೆಂದರೆ, ರಾಜಶೇಖರನ ಪತ್ನಿಯಾದ ಅವಂತಿ
ಸುಂದರಿಯೇ ದೊಡ್ಡ ವಿದುಪಿಯಾಗಿದ್ದಳು ; ಅಲ್ಲಲ್ಲಿ ಆಕೆಯ ಮತವನ್ನು
ಅನುಮೋದನೆಯೊಡನೆ ಅವನು ನಿರೂಪಿಸಿದ್ದಾನೆ. ಇಂಥ ಪ್ರತಿಭಾ
ಶಾಲಿನಿಯನ್ನು ಬಲ್ಲ ಅನುಭವದಿಂದಲೇ ಇದ್ದೀತು, ರಾಜಶೇಖರನು
“ ಪುರುಷರಂತೆ ಸ್ತ್ರೀಯರೂ ಕವಿಗಳಾಗಬಹುದು. ಸಂಸ್ಕಾರವು ಆತ್ಮ
ನಿಷ್ಕವೇ ಸರಿ; ಗಂಡುಹೆಣ್ಣಿ೦ಂಬ ಭೇದವನ್ನು ಅದು ನೋಡುವುದಿಲ್ಲ.
ರಾಜಪುತ್ರಿಯರು. ಮಹಾಮಾತ್ರರ ಪುತ್ರಿಯರು, ಗಣಿಕೆಯರು, ಸುಸಂ
ಸ್ಕೃತರ ಮಡದಿಯರು ಇವರೆಲ್ಲ ಶಾಸ್ತ್ರ ಸಂಸ್ಕಾರವುಳ್ಳವರೂ ಕವಿಗಳೂ
ಅಗಿದ್ದುದನ್ನು ಕೇಳಿಬಲ್ಲೆವು, ಕಂಡೂ ಬಲ್ಲೆವು'` ಎಂದು ಬರೆದನು.
" ಕಾವ್ಯಮಾಮಾಂಸೆ 'ಯನ್ನು "" ಕಪ್ಪಿಗಳೆ ಕೈಪಿಡಿ'' ಎಂದು ಕರೆಯ
ಬಹುದು. ಕವಿವೃತ್ತಿಗೆ ಅವಶ್ಯಕವಾದ ಜ್ಞಾನವನ್ನೂ ಉಪಯುಕ್ತವಾದ
ಸಲಹೆಗಳನ್ನೂ ರಾಜಶೇಖರನು ಇದರಲ್ಲಿ ತುಂಬಿದ್ದಾನೆ. ಇದರ ಕಾಲ
ದಿಂದೀಚೆಗೆ ಅಲಂಕಾರ ವಾಜ್ಮಯದಲ್ಲಿ " ಕವಿಶಿಕ್ಕೆ 'ಯೆಂಬ ಸ್ವತಂತ್ರ
ವಿಭಾಗವೇ ಬೆಳೆಯಿತು. ಅದಕ್ಕೆ ಸೇರುವ ವಿಷಯದ ನಿರೂಪಣಿಯಲ್ಲಿ
ರಾಜಶೇಖರನೇ ಈಚಿನವರಿಗೆಲ್ಲ ಗುರುವಾದನು. "" ಕವಿಸವಯ''ದ
ವಿಷಯದಲ್ಲಂತೂ ಅವನೇ ಪ್ರಥಮಾಚಾರ್ಯ. ಚಕೋರವು ಬೆಳುದಿಂಗಳನ್ನು
ಕುಡಿಯುವುಡಂದಾ, 3ರ ಚೆಳ್ಳ್ಗಗೂ' ಅಪಕೀರ್ತಿ ಕಪ್ಪಗೂ ಇರುವು
ದೆಂದೂ, ಮುತ್ತುಗಳು ತಾಮ್ರಪರ್ಣಿಯಲ್ಲಿ ಮಾತ್ರ ದೊರೆಯುವು
ವೆಂದೂ ಈ ರೀತಿಯಾಗಿ. ಲೋಕಪ್ರಸಿದ್ಧವೂ ಶಾಸ್ತ್ರಪ್ರಸಿದ್ಧವೂ ಅಲ್ಲ
30 “ ಫ್ರರುಷದತ* ಯೋಪಿತ್ಲೋಪಿ ಕವೀಭನೇಯುಃ. ಸಂಸ್ಕಾರೋ ಕಳ್ಳಾತ್ಮನಿ
ಸಮಪೈೆತಿ, ನ ಸ್ಟ್ರೊಣಂ ಪೌರುಷಂ ಟಾ ವಿಭಾಗಮಪೇಕ್ವತೇ. ಶ್ರೂಯಂತೇ ದೃಶ್ಯಂತೇ ಚ
ರಾಜಪುತ್ರೋ ಮಹಾಮಾತ್ರದುಹಿತರೋ ಗಣಿಕಾಃ ಕಳಿತುಕಿಭಾರ್ಯಾಶ್ಮ ಶಾಸ
ಪ್ರಹತಬುದ್ಧಯಃ ಕವಯಶ್ಚ.'' (ಪು. ೫೩)
೩. ಅಲಂಕಾರ--ರೀತಿ ಪ್ರಸ್ನಾನಗಳು ೩೫
ದಿದ್ದ ರೂ ಕೆಲವು ವಿಷಯಗಳನ್ನು ಕವಿಗಳು ಪಾರಂಪರ್ಯವಾಗಿ ವರ್ಣಿ
ಸುತ್ತಾರಪ್ಪ. ಇದಕ್ಕೆ ಕವಿಸಮಯವೆಂದು ಹೆಸರು. ಇದರ ನಿರೂಪಣಿಗೆ
ರಾಜಶೇಖರನು ತನ್ನ ಗ್ರಂಥದ ಮೂರು ಅಧ್ಯಾಯಗಳನ್ನು (೧೪-೧೬)
ವಿನಿಯೋಗಿಸಿ ಕೊನೆಯಲ್ಲ ಪೀಗೆ ಹೇಳುತ್ತಾನೆ :
ಸೋಯಂ ಕವೀನಾಂ ಸಮಯಃ ಕಾಷ್ಯೇ ಸುಪ್ತ ಇವ ಸ್ಥಿತಃ |
ಸ ಸಾಂಪ್ರತವಿ:ಹಾಸ್ಕಾಭಿರ್ಯ ಥಾಬುದ್ಧಿ ವಿದೋಧಿತಃ ॥ (ಪ. ೮೯)
"ಈ ಕವಿಸಮಯವು ಕಾವ್ಯದಲ್ಲಿ ಮಲಗಿದಂತೆ ಅಡಗಿತ್ತು; ಈಗ ಅದನ್ನು
ನಾವು ಯಥಾಮತಿಯಾಗಿ ಉದ್ದೋಧನಗೊಳಿಸಿದ್ದೇವೆ. ' 4
ರಾಜಶೇಬರನು ಕೇವಲ ಆಲಂಕಾರಿಕನಲ್ಲ; ವಿಖ್ಯಾತನಾದ ನಾಟಕ
ಕಾರನೂ ಹೌದು. ಅವನು ರಚಿಸಿದ ಬಾಲರಾಮಾಯಣ, ಬಾಲಭಾರತ,
ವಿದ್ಧ ಸಾಲಭಂಜಿಕಾ, ಕರ್ಪೂರಮಂಜರೀ (ಇದು ಸಂಪೂರ್ಣವಾಗಿ
ಪ್ರಾಕೃತ ಭಾಷೆಯಲ್ಲೇ ಬರೆದ ' ಸಟ್ಟಕ') ಎಂಬ ನಾಲ್ಕು ನಾಟಕಗಳು
ಪ ಕ್ರಸಿದ್ಧವಾಗಿವೆ. ಹರವಿಲಾಸವೆಂಬ ಮಹಾಕಾವ್ಯವನ್ನೂ ಅವನು ಬರೆ
ದಿದ್ದ೦ತೆ ತಿಳಿಯಬರುತ್ತದೆ.
ರಾಜಶೇಖರನೊಬ್ಬನನ್ನು ಗಣಿಸದೆ ಬಿಟ್ಟರೆ, ನಾವು ಕ್ರಿ.ಶ೯ನೆಯ
ಶತಮಾನದ ಮಧ್ಯಭಾಗಕ್ಕೆ ಬಂದಂತಾಯಿತು.* ಇಲ್ಲಿ ಕೊಂಚ ತಡೆದು.
ಕಾವ್ಕರಹಸ್ಯವನ್ನು ಭೇದಿಸುವ ಪ ಯತ್ನದಲ್ಲಿ ಅಲಂಕಾರಶಾಸ್ವ್ರವು
ಎಪಷ್ಟುದೂರ ಒಳಹೊಕ್ಕ೦ತಾಯಿತೆಂಬುದನ್ನು ಪರ್ಯಾಲೋಚಿಸುವುದು
ಆವಶ್ಯಕ. ದಿನಗಟ್ಟಳೆಯ ವ್ಯವಹಾರದಲ್ಲಿ ಜನಸಾಮಾನ್ಯವು ಬಳಸುವುದೂ
ಮಾತುಗಳೇ, ಕಾವ್ಯದ ಸಾಮಗ್ರಿಯೂ ಮಾತುಗಳೇ. ಇವೆರಡಕ್ಕೂ
ವ್ಯತ್ಯಾಸ ಎಲ್ಲಿದೆ? ಕಾವ್ಯದ ಮಾತು ಯಾವುದರಿಂದ ಮನೋಹರವಾಗು
ತೈದೆ?-ಈ ಬಗೆಯ ಪ್ರಶ್ನೆಯೇ ಅಲಂಕಾರಶಾಸ್ತ್ರಕ್ಕೆ ಅಂಕುರಾರ್ಪಣ
ಹೆನ್ನಬಹುದು. ಆದಿಕಾವ್ಯವನಿಸಿದ. ವಾಲ್ಮೀಕಿರಾಮಾಯಣದಿಂದ
ಒ೦ದೆರಡು ಉದಾಹರಣಿಗಳನ್ನು ತೆಗೆದುಕೊಳ್ಳೋಣ. ತಾನು ದಶರಥ
3! ನಮ್ಮ ನಾಗವರ್ಮನ "ಕಾವ್ಯಾವಲೋಕನ 'ದ ಕವಿಸಮಯಪ್ರಕರಣಕ್ಕೆ ರಾಜ
ಶೇಖರನ " ಕಾವ್ಯಮಾಮಾಂಸೆ 'ಯೇ, ಪ್ರತ್ಯಕ್ಷವಾಗಿ ಅ್ಲದಿದ್ದರೆ ಪಾರಂಪರ್ಯವಾಗಿಯಾದರೂ,
ಆಕರಗ್ರಂಥ.
32 ಕನ್ನಡದ ಮೊಟ್ಟಮೊದಲನೆಯ ಲಕ್ಷಣಗ್ರಂಥವಾದ " ಕವಿರಾಜಮಾರ್ಗ : ಈ
ಸುಮಾರಿನಲ್ಲಿ ಹುಟ್ಟಿತೆಂಬುದನ್ನು ಸ್ಮರಿಸಬಹುದು.
3-k
೩೬ ಭಾರತೀಯ ಕಾವ್ಯವಿಸಾಮಾಂಸೆ
ನಿಂದ ಪಡೆದ ವರದ ಮೇರೆಗೆ ರಾಮನನ್ನು ಕಾಡಿಗೆ ಅಟ್ಟುವಾಗ, ಉಡು
ವುದಕ್ಕಾಗಿ ನಾರುಬಟ್ಟೆಯನ್ನು ಕೈಕೆಯೇ ಎಲ್ಲರಿಗೂ ತಂದು ಕೊಡುತ್ತಾಳೆ.
ರಾಮಲಕ್ಷ್ಮಣರು ತಮ್ಮ ದಿವ್ಯಾಂಬರಗಳನ್ನು ಕಳಚಿ ಈ ತಾಪಸವಸ್ತ್ರ
ಗಳನ್ನು ಧರಿಸಿ ಸಿದ್ಧರಾಗುತ್ತಾರೆ. ಸೀತೆಯ ಸರದಿ ಬಂದಿತು:
ಅಥಾತ್ಮ ಪರಿಧಾನಾರ್ಥಂ ಸೀತಾ ಕೌಶೇಯವಾಸಿನೀ |
ಸಂಪ್ರೇಕ್ಷ್ಯ ಚೀರಂ ಸಂತ್ರಸ್ತಾ ಪೃಷತೀ ವಾಗ:ರಾಮಿವ ॥ (1, ೩೭.೯)
"" ಪಟ್ಟೆಯ ಸೀರೆಯನ್ನುಟ್ಟಿದ್ದ ಸೀತೆ ತನಗೆ ಸುತ್ತಿಕೊಳ್ಳುವುದಕ್ಕಾಗಿ
ಬಂದ ನಾರುಮಡಿಯನ್ನು ನಿಟ್ಟಿಸಿ, ಬಲೆಯನ್ನು ಕಂಡ ಜಿಂಕೆಯಂತೆ
ಬೆದರಿದಳು ''--ಪೀಗೆ ವಾಲ್ಮೀಕಿ ವರ್ಣಿಸುತ್ತಾನೆ. ಈ ವಾಕ್ಯದಲ್ಲಿ
ಕವಿಯ ಮಾತಿಗೆ ಸೊಗಸು ತಂದು ಶ್ರೋತ್ಸಗಳ ಗಮನವನ್ನು ಒಡನೆಯೇ
ಸೆಳೆಯತಕ್ಕದ್ದು " ಪೃಷತೀ ವಾಗುರಾಮಿವ ' ಎಂಬ ಹೋಲಿಕೆ. ಇದ
ರಂತೆಯೇ, ಹನುಮಂತನು ಸಾಗರವನ್ನು ಲಂಫಿಸುವಾಗ,
ತಸ್ಯ ಲಾಂಗೂಲಮಾವಿದ್ಧ ಮಾತ್ತವೇಗಸ್ಯ ಪೃಷ್ಠ ಶಃ |
ದದೃಶೇ ಗರುಡೇನೇವ ಪ್ರಿಯಮಾಣೋ ಮಹೋರಗಃ ॥ (y. ೧. ೩೪)
"" ವೇಗಗೊಂಡು ಹೊರಟ ಆತನ ಹಿಂದುಗಡೆ ತೂಗಾಡುತ್ತಿದ್ದ ಬಾಲವು
ಗರುಡನು ಎತ್ತಿಕೊಂಡು ಹೋಗುವ ಮಹಾಸರ್ಪದಂತೆ ಕಾಣಿಸಿತು.” -
ಇಲ್ಲಿಯ ಹೋಲಿಕೆಯಂತೂ ತಾನೇ ತಾನಾಗಿ ಮನಸ್ಸನ್ನು ಮುತ್ತುತ್ತದೆ.
ಪೀಗಿರುವುದರಿಂದ ನಮ್ಮ ಲಾಕ್ಷಣಿಕರು ಸ ಉಪಮೆ ''ಯನ್ನು ಕಾವ್ಯಾಲಂಕಾ
ರಗಳಲ್ಲ ಒಂದನ್ನಾಗಿ ಅಂಗೀಕರಿಸಿದರು. ಇದೇ ರೀತಿ, ಬೇರೊಂದು ಕಡೆ
ರೂಪಕದ ಮೂಲಕ ಕವಿಯ ಮಾತು ರಮ್ಯವಾಗಬಹುದು ; ಮತ್ತೊಂದುಕಡೆ
ಅಕ್ಷರಗಳ ನಿಯಮಬದ್ಧವಾದ ಪುನರಾವೃತ್ತಿ ಶ್ರೋತೃಗಳ ಕಿವಿಯನ್ನು ಮೆಚ್ಚಿ
ಸಬಹುದು. ಈ ಪ್ರಕಾರ ನಮ್ಮ ಆಲಂಕಾರಿಕರು ಒಂದಾದಮೇಲೊಂದು
ಅಲಂಕಾರವನ್ನು ಗುರುತಿಸುತ್ತಾ ಹೋದರೆಂದು ತೋರುತ್ತದೆ. ಇವು
ಗಳಲ್ಲ ಒಂದಕ್ಕೂ ಮತ್ತೊಂದಕ್ಕೂ ಸ್ಥಾನತಾರತಮ್ಯಪೇನೆಂದು ಅವರು
ಮೊದಮೊದಲು ವಿಚಾರಮಾಡಲಿಲ್ಲ. ಕಾವ್ಯಕ್ಕೆ ಸೊಗಸುಕೊಡತಕ್ಕದ್ದೆ೦ದು
ತೋರಿದ ಎಲ್ಲವನ್ನೂ " ಅಲಂಕಾರ 'ವೆಂದು ಕರೆದರು:
ಕಾವ್ಯಕೋಭಾಕರಾನ್ ಧರ್ಮಾನ" ಅಲಂಕಾರಾನ್ ಪ್ರಚಕ್ಷತೇ |
ತೇ ಜಾದ್ಯಾಪಿ ವಿಕಲ್ಫ್ಯ೦ತೇ ಕಸ್ತಾನ್ ಕಾರ್ತ್ಟ್ಫೇನ ವಕ್ಷ್ಯತಿ ॥
(ಕಾವ್ಯಾದರ್ಶ, ;;, ೧)
೩. ಅಲಂಕಾರ ರೀತಿ ಪ್ರಸ್ಮಾನಗಳು ೩೬
"" ಕಾವ್ಯಕ್ಕೆ ಸೊಗಸುಕೊಡುವ ಧರ್ಮಗಳನ್ನು ಅಲಂಕಾರಗಳೆಂದು
ಕರೆಯುತ್ತಾರೆ. ಇಂದಿಗೂ ಕೂಡ [ಹೊಸಹೊಸದಾಗಿ] ಅವುಗಳಲ್ಲಿ
ಪ್ರಕಾರಭೇದಗಳನ್ನು ಕಲ್ಪಿಸುತ್ತಲೇ ಇದ್ದಾರೆ; ಒಂದನ್ನೂ ಬಿಡದೆ ಹೇಳು
ವವನು ಯಾರು?'' ಎಂಬ ದಂಡಿಯ ಉಕ್ತಿ ಮೇಲಿನ ಹೇಳಿಕೆಯನ್ನು
ಸಮರ್ಥಿಸುತ್ತದೆ. ತನಗೆ ಪಿ ಪ್ರಿಯವಾದ "ಗುಣ'ಗಳನ್ನು ಕೂಡ ದಂಡಿ
" ಅಲಂಕಾರ 'ವೆಂಬ ಹಸರನಲ. ಅಡಕಮಾಡಿದ್ದನು ;* ಆದಕಾರಣ ರಸ
ಪರಿಗಣಿಸುವುದು ಮಾ
ಉಪಮೆ, ರೂಪಕ್ತ ಮೊದಲಾದವುಗಳಂತೆ ಶೃಂಗಾರಾದಿ ರಸಗಳೂ ಕಾವ್ಯಕ್ಕೆ
ಸೌಂದರ್ಯವನ್ನು ಕೊಡುತ್ತವೆ; ಆದ್ದರಿಂದ ಸ್ಪಪ್ಪವಾಗಿ ರಸವು ತೋರುವ
ತಡೆ ; ರಸವದಲಂಕಾರಪುಂಚೆಂದು ಹೇಳಿದರಾಯಿತು ಎಂದು ಅವರು ಎಣಿಸಿರ
ಬೇಕು. ಇಪ್ಪಾ ದರೂ ಉಕ್ತಿವೈಚಿತ್ರ್ಯವೆಂದು ಎದ್ದು ಕಾಣುವ ಉಪಮೆ,
ಯಮಕ, ಉತ್ತೆ ನಕ್ಷೆ. `ರೂಪಕ-... ಈ ಮೊದಲಾದವಕ್ಕೇ ' ಅಲಂಕಾರ 'ವೆಂಬ
ಹೆಸರು ಮುಖ್ಯವಾಗಿ ಅನ್ವಯಿಸುತ್ತಿದ್ದಿತು. ಇವೇ ಕಾವ್ಯದ ಜೀವಾಳವೆಂದು
ಭಾಮಹಾದಿಗಳು ನಂಬಿದ್ದರು.
"ಅಲಂಕಾರ 'ದಂತೆ "ಗುಣ'ವೂ ಕಾವ್ಯಚರ್ಚೆಯಲ್ಲಿ ಬಳಕೆಗೆ ಬಂದ
ಇನ್ನೊಂದು ಪ್ರಾಚೀನ ಶಬ್ದ. ಭರತನ ನಾಟ್ಯತಾಸ್ತ್ರದಲ್ಲೇ ಇದರ
ಪ್ರಸ್ತಾವ ಬಂದಿದೆಯೆಂದು ಹಿಂದೆಯೇ ಸೂಚನಿದ್ದಾಗಿದೆ. "ಗುಣ'ದ
ಸ್ವರೂಪವು ಲಾಕ್ಷಣಿಕನಿಂದ ಲಾಕ್ಷಣಕನಿಗೆ, ಪ್ರಸ್ಥಾ ನದಿಂದ ಪ್ರಸ್ಥಾನಕ್ಕೆ
ಮಾರ್ಪಡುತ್ತಾ ಹೋಗಿರುವುದರಿಂದ, ಒಂದು ಮಾತಿನಲ್ಲಿ ಅದನ್ನು ಇಲ್ಲಿ
ತಿಳಿಸುವುದು ಅಸಾಧ್ಯ... ಆದರೂ ಪ್ರಾಚೀನರ ಮತದಂತೆ "ಗುಣ'
ಎನ್ನುವುದು ಒಟ್ಟಿನ ಮೇಲೆ ಶಬ್ದ, ಅರ್ಥ ಇವುಗಳ ವಿಶೇಷರಚನೆಯನ್ನು
ಸೂಚಸುತ್ತಿತ್ತೆಂದು ಹೇಳಬಹುದು. ಉದಾಹರಣಿಗೆ, ವಾಮನನ ಲಕ್ಷಣ
ದಂತೆ " ಉದಾರತೆ 'ಯೆಂಬ ಗುಣದ ಸ್ವರೂಪವನ್ನು ನೋಡೋಣ. ಪದ
ಗಳು ನರ್ತಿಸುವಂತೆ ವರ್ಣವಿನ್ಯಾಸಪಿದ್ದರೆ ಶಬ್ದಗುಣ ಉದಾರತೆಯಾಗು
ತ್ತದೆ. ಭೀಮನ ಮೂದಲಿಕೆಯನ್ನು ಕೇಳಿ ವೈಶಂಪಾಯನ ಸರೋವರ
3... ಕಾವ್ಯದರ್ಶ, ೩, 0. ೩೬೭ ನೋಡಿ.
8 “ ವಿಕಟತ್ಪುಂ ಉದಾರತಾ '' (ಕಾವ್ಯಾಲಂಕಾರಸೂತ್ತ, ॥. ೧. ೨೨)-“ಯಸ್ಕಿನಃ
ಸತಿ ನೃತ್ಯಂತ್ಲೀವ ಪದಾನೀತಿ ಜನಸ್ಯ ವರ್ಣಭವನಾ ಭವತಿ ತತ್ ವಿಕಟತ್ಪಂ'' (ವೃತ್ತಿ.)
೩೮ ಭಾರತೀಯ ಕಾವೃಖಾಮಾಂಸೆ
ದಿಂದ ಉರಿದೆದ್ದ ದುರ್ಯೋಧನನನ್ನು ವರ್ಜಸುತ್ತಾ,""........ ಅದ್ಭುತನಟ
ನಿಟಿಲಾಲೋಲಕೀಲಾಕ್ಷಿಮೋಲ್ ದಳ್ಳಿಸೆ ಕೋಪಾರಕ್ತನೇತ್ರಂ ನಿಜಭುಜ
ಗದೆಯಂ ತೂಗಿದಂ ಧಾರ್ತರಾಪ್ಟ್ರಂ'' ಎಂದು ರನ್ನನು ಹೇಳಿರು
ವುದನ್ನು ೫ ಇದಕ್ಕೆ ಉದಾಹರಣಿಯಾಗಿ ಕೊಡಬಹುದು. ಗಾ ಶ್ರಮ್ಯವಾಗಿ
ಹೇಳಬಹುದಾಗಿದ್ದ ಪ್ರಸಂಗದಲ್ಲೂ ಅಗ್ರಾಮ್ಯವಾದ ಅರ್ಥವನ್ನು
ಹೇಳುವುದು ಅರ್ಥಗುಣ ಉದಾರತೆ." ಉದಾಹರಣಿಗೆ, ಚಂದ್ರಾಪೀಡನಲ್ಲ
ಕಾದಂಬರಿಗೆ ಪ್ರೇಮ ಹುಟ್ಟಿ ಅವಳ ಮನಸ್ಸನ್ನು ಕದಡಿದಾಗ, ಆ ಮುಗ್ಧೆ
ಪತ್ರಲೇಖೆಯ ಸಂಗಡ, ಯುವರಾಜನು ಕನಸಿನಲ್ಲಿ ಬಂದು ನನ್ನನ್ನು
ಪರಿಭವಗೊಳಿಸಿದನೆಂದು ದೂರುವಳು. ಆಗ, ನಿನ್ನ ಮನೋವಿಕಾರಕ್ಕೆ ಲ್ಲ
ಆತನಲ್ಲಿ ನಿನಗೆ ಹುಟ್ಟಿರುವ ಅನುರಾಗವೇ ಕಾರಣವೆಂದು ಪತ್ರಲೇಖೆ
ಗ್ರಾಮ್ಯ ರೀತಿಯಲ್ಲಿ ಹೇಳಬಹುದಾಗಿತ್ತು; ಆದರೆ ಹಾಗೆ ಮಾಡದೆ:
""ಮುನಿಯಲ್ಕಾಗದು ಯುವರಾಜನ ದೋಪಮಿದಲ್ತು ಕಮಲಮುಖ ಕೇಳಿದು
ಕಾಮನ ದೋಪಂ'' '' ಎಂದು ಹೇಳುವಳು. ....ಇನ್ನು, ಮೃದುವಾದ
ವರ್ಣರಚನೆಯೂ, ಅಪಿತವಾದ ವಿಷಯವನ್ನು ನಯವಾಗಿ ಹೇಳುವುದೂ
ಸೌಕುಮಾರ್ಯಗುಣವೆನಿಸಿಕೊಳ್ಳುತ್ತಷೆ. ಪದಬಂಧವು ಬಿಗಿಯಾಗಿರುವುದೂ,
ಅರ್ಥವು ಪ್ರೌಢವಾಗಿರುವುದೂ ಓಜೋಗುಣವಾಗುತ್ತಷೆ. ಹೀಗೆಯೇ.
ಕಾವ್ಯದಲ್ಲಿ ಯಾವುದು ಮುಖ್ಯ : ಅಲಂಕಾರಗಳೇ ಗುಣಗಳೇ ಎಂಬ
ಪ್ರಶ್ನೆ ಬಹುಶಃ ಭಾಮಹದಂಡಿಗಳ ಕಾಲಕ್ಕೇ ಎದ್ದಿತ್ತು. ಭಾಮಹನೂ,
ಅವನನ್ನು ಅನುಸರಿಸಿ ಉದ್ಭಟ ಮೊದಲಾದವರೂ ಅಲಂಕಾರಗಳೇ ಮುಖ್ಯ
ಪೆಂದು ಎಣಿಸಿದರು ; ಗುಣಗಳ ವಿಚಾರಕ್ಕೆ ಅವರು ಕೈಹಾಕಲಿಲ್ಲ. ಇವರ
ಪಕ್ಷವನ್ನು " ಅಲಂಕಾರ ಪ.ಸ್ತಾನ' ಚ ಹೆಂದು ಕರೆಯುವುದು ವಾಡಿಕೆ
ಯಾಗಿದೆ. ಇತ್ತ ದಂಡಿಯ ಗ್ರಂಥದಲ್ಲಿ, ಗುಣ, ಅಲಂಕಾರ ಈ ಎರ
ಡನ್ನೂ ಅಲಂಕಾರವೆಂಬ ಹೆಸರಿನಿಂದ ಒಂದು ಕಡೆ ಕರೆದಿದ್ದರೂ ಆತನ
ಒಲವು ಇವುಗಳಲ್ಲಿ ಯಾವುದರ ಮೇಲೆ ಇದ್ದಿತೆಂಬುದು ವೈದರ್ಭಮಾರ್ಗ
3೨೯" ಗದಾಯುದ್ಧ, vii. ೩೦,
* “ ಅಗಸ್ಪಾಮ್ಯತ್ವಮುದಾರತಾ ' (ಕಾವ್ಯಾಲಂಕಾರ ಸೂತ್ರ, 11. ೨. ೧೨)
"7 ಕರ್ಣಾಟಕ ಕಾದಂಬರಿ, ಉತ್ತರಭಾಗ, ೩೦೭.
35 "" ಪ್ರತಿಪ್ಪಂತೇ ಪರಂಷರಯಾ ವಿಹರಂತಿ ಯೇನ ಮಾರ್ಗೇಣ ತತ್ ಪ್ರಸ್ಥಾನಂ '"...
(ಧನ್ಯಾ. ಲೋಚನ, ಪು. ೬)
೩, ಅಲಂಕಾರ--ರೀತಿ ಪ್ರಸ್ಕಾನೆಗಳು ೩೯
ದಲ್ಲಿ ಅವನಿಗಿದ್ದ ಪಕ್ಷಪಾತದಿಂದ ವ್ಯಕ್ತವಾಗುತ್ತದೆ : " ತಸ್ಯ ವೈದರ್ಭ
ಮಾರ್ಗಸ್ಯ ಪ್ರಾಣಾ ದಶಗುಣಾಃ ಸ್ಕೃ ತಾ8''. ವಾಮನನ ವಿಷಯ
ದಲ್ಲಂತೂ ಸಂದೇಹಕ್ಕೆ ಆಸ್ಪದಲೇಶವೂ ಇಲ್ಲ. ಗುಣದಿಂದ ಕೂಡಿದ
ರೀತಿಯೇ ಕಾವ್ಯದ ಅತ್ವಪೆಂದು ಹೇಳಿ ಅವನು ಹೊಸದೊಂದು ಪಂಥವನ್ನೇ
ಹೂಡಿದನು. ಅವನನ್ನೂ ಅವನಿಗೆ ಪ್ರೇರಕನಾದ ದಂಡಿಯನ್ನೂ " ರೀತಿ
ಪ್ರಸ್ಥಾ ಸ್ಮಾನ'ದವರೆನ್ನ ಬಹುದು. ದಂಡಿ " ರೀತಿ 'ಯೆ೦ಂಬ ಶಬ್ದವನ್ನು ಉಪ
ಜೋಸಸದಿದ್ದ ರೂ ಹೀಗೆ ಹೇಳುವುದರಲ್ಲಿ ಔಚಿತ್ಯವುಂಟು.
ಅಲಂಕಾರ ಪ್ರಸ್ಥಾನದವರು ತುಂಬ ಕೌತಲದಿಂದ ಅನೇಕ ಅಲಂ
ಕಾರಗಳನ್ನು ಗುರುತಿಸಿ, ಒಂದೊಂದರ ಲಕ್ಷಣವನ್ನೂ ಬಚಿತವಾಗಿ ನಿಷ್ಕರ್ಪಿ
ಸುವ ಪ ್ರಯತ್ನೆ ಮಾಡಿದರು, ಒಂದರಿಂದ ಇನ್ನೊಂದನ್ನು ಹೆಚ್ಚು ಹೆಚ್ಚು
ಸೂಕ್ಷ ವಾಗಿ ಂಗಡಿಕರರು: ಆದರೆ ಅವರು ಕಾವ್ಯಸಾಗರದ ತಡಿಯಲ್ಲಿ
ಚಿಪ್ಪುಗಳನ್ನು ಆಯ್ದ ೦ತಾಯಿತೇ ಹೊರತು, ಅದರ ತಳವನ್ನು ಶೋದಿಸಿದಂ
ತಾಗಲಿಲ್ಲ. ಕಾವ್ಯದಲ್ಲಿ ಯ ಯಾವುದು ಮುಖ್ಯ , ಯಾವುದು ಅಮುಖ್ಯ ಎಂಬು
ದರ ಅರಿವು ಅವರಿಗೆ ಬರಲಿಲ್ಲ; ಕಾವ್ಯದ AE ಯಾವುದು ARGS
ಹೊಳೆಯಲಿಲ್ಲ. ಲೋಕರೂಢಿಗೆ ಮಾರಿದ ಉಕ್ತಿವೈಚಿತ್ರ್ಯವೇ ಅಲಂಕಾರ,
ಅಲಂಕಾರವಿದ್ದರೆ ಕಾವ್ಯ--ಇಪ್ಪರಲ್ಲ ಅವರು ಮುಗಿನಿಬಿಟ್ಟಿರು. ಅದರೆ
ವಸ್ತುತಃ ಕಾವ್ಯದಲ್ಲಿ ಅಲಂಕಾರದ ಸ್ಥಾನವು ಗೌಣವಾದದ್ದು ; ಸ್ಫುಟವಾದ
ಅಲಂಕಾರವಿಬ್ಬದೆಯೇ ಕಾವ್ಯವು ಇರುವುದಷ್ಟೇ ಅಬ್ಬ; 'ಉತ್ಕೃ.ಪ್ವವಾಗಿ
ರುವುದೂ_ಸಾಧ್ಯ. ಕೈಕೆಯ ಕೈಯಿಂದ ನಾರುಮಡಿಯನ್ನು ಸೀತೆ ತೆಗೆದು
ಕೊಂಡಳಸ್ಪೆ ಆಗ ಕಣ್ಣಲ್ಲ ನೀರು ತುಂಬಿಕೊಂಡು ಆ ಧರ್ಮಜ್ಞ ಗಂಧರ್ವ
ರಾಜಪ್ರ ತಿಮನಾದ ತನ್ನ ಗಂಡನನ್ನು ಕುರಿತು ಹೀಗೆ ಹೇಳಿದಳು :
ಕಥಂ ನು ಚೀರಂ ಬದ್ಗೆ ತಿ Sn ವನವಾಸಿನಃ |
ಇತಿ ಹೃಕುಶಲಾ ಸೀತಾ ಸಾ ಮ ಮುಹುರ್ಮುಹಃ ॥
ಕೃಶ್ಯಾ ಕಂಠೇ ಚ ಸಾ ಚೀರಮೇಕಮಾದಾಯ ಪಾಣಿನಾ |
ತಸ ಹ್ಯ ಹ್ಯಕುಶರಾ ತತ್ರ ವ್ರೀಡಿತಾ ಘಟ ಜಾ॥
ತಸ್ಯಾಸ್ತ 3 ಕ್ಲಿಪ್ರಮಾಗತ್ಯ ರಾಮೋ ಧರ್ಮಭೃತಾಂ ವರಃ |
ಚೀರಂ ಬಬ೦ದ ಸೀತಾಯಾಃ ಕೌಿಶೇಯ ಸ್ಫೋಪರಿ ಸ್ವಯಂ ॥
ರಾಮಂ ಪ್ರೇಕ್ಷ್ಯ ತು ಸೀತಾಯಾ ಬಧ್ನ೦ತಂ ಚೀರಮುತ್ತಮಂ |
ಅಂತಃ ಪರಗತಾ ನಾರ್ಯೋ ಮುಮುಚುರ್ವಾರಿ ನೇತ್ರಜ೦ ॥
(ii. ೩೭. ೧೨೧-೫
೪೦ ಭಾರತೀಯ ಕಾವ್ಯಮಾಮಾಂಸೆ
"" ನಾರುಮಡಿಯನ್ನು ವನವಾಸಿಗಳಾದ ಮುನಿಗಳು ಹೇಗೆ ಉಡುತ್ತಾರೆ?--
ಹೀಗೆನ್ನುತ್ತಾ, ಕುಶಲೆಯಲ್ಲದ ಸೀತೆ ಮತ್ತೆ ಮತ್ತೆ ಭ್ರಮೆಗೊ೦ಡಳು.
ಒಂದು ಚೀರವನ್ನು ಕೊರಳಿಗೆ ಸುತ್ತಿಕೊಂಡು ಇನ್ನೊಂದನ್ನು ಕೈಯಲ್ಲ
ಹಿಡಿದು, ಕುತಲೆಯಲ್ಲದ ಜನಕಾತ್ಮಜೆ ಅಲ್ಲಿ ನಾಚುತ್ತಾ ನಿಂತಳು.
ಧರ್ಮನಿಪ್ಠರಲ್ಲ ಶ್ರೇಷ್ಠನಾದ ರಾಮನು ಬೇಗ ಬಂದು ಆಕೆಗೆ ಪಟ್ಟೆಯ
ಸೀರೆಯ ಮೇಲೆ ಆ ನಾರುಮಡಿಯನ್ನು ತಾನೇ ಉಡಿಸಿದನು. ಸೀತೆಗೆ
ನಾರುಸೀರೆಯನ್ನುಡಿಸುವ ರಾಮನನ್ನು ಕಂಡು ಅಂತಃಪುರದ ನಾರಿಯ
ರೆಲ್ಲ ಕಣ್ಣೀರು ಸುರಿಸಿದರು.” ಈ ವಾಕ್ಯಗಳಲ್ಲಿ ಉಕ್ತಿಚಮತ್ಕಾರ
ವೆಂದು ಎತ್ತಿ ತೋರಿಸಬಹುದಾದದ್ದು ಏನಿದೆ? ಆದರೆ ಇಲ್ಲಿ ಸರಳವಾದ
ಮಾತುಗಳಲ್ಲಿ ನಿರೂಪಿತವಾಗಿರುವ ಸಂಗತಿ ನಮ್ಮ ಕರುಳನ್ನು ಹೇಗೆ
ಹಿಂಡುತ್ತದೆ! ಉತ್ತಮೋತ್ತಮ ಕಾವ್ಯ ಇಲ್ಲದೆಯೆಂದು ಸಹೃದಯರಿಗೆ
ಬಿಚ್ಚಿ ಹೇಳುವುದು ಅನಾವಶ್ಯಕ.
ನಿರಾಭರಣವಾದ ಕಾವ್ಯಸೌಂದರ್ಯಕ್ಕೆ ಇನ್ನೊಂದು ನಿದರ್ಶನವನ್ನು
ಹಳ್ಳಿಯ ಹಾಡುಗಳಿಂದ ಕೊಡಬಹುದು. ತೌರುಮನೆಯಲ್ಲ ಬಾಣಂತಿತನ
ನಡೆದ ಬಳಿಕ, ಮಗುವಿನೊಂದಿಗೆ ಅತ್ತೆಯ ಮನೆಗೆ ಹೊರಟ ಹಳ್ಳಿಯ
ಹುಡುಗಿಯ ಚಿತ ಶೆ ಇದು:
ತೊಟ್ಟಿಲ ಹೊತ್ತುಕೊಂಡ. ತೌರುಬಣ್ಣ ಉಟ್ಟುಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೆ.೦ಡು--ತಂಗ್ಯಮ್ಮ
ತಿಟ್ಟತ್ತಿ ತಿರುಗಿ ಮೋಡ್ಯಾಳು.
ದಾರಿಯಲ್ಲ ಸಿಕ್ಕಿದ ತಿಟ್ಟನ್ನು ಹತ್ತಿ ಇಳಿಯುವ ಮುಂಚೆ ತೌರೂರಿನ
ಕೊನೆಯ ದರ್ಶನ ತೆಗೆದುಕೊಳ್ಳಲು ಈ ಹುಡುಗಿ ತಿರುಗಿ ನೋಡುತ್ತಾಳೆ.
ಆ ನೋಟದಲ್ಲಿ ಎಷ್ಟು ಆಸೆ, ಎಷ್ಟು ಬೇದ ! ಪದ್ಯದ ಮಾತು ಮಾತ್ರ
ಷ್ಟು ಸರಳ |
ಇನ್ನು ರೀತಿಗುಣಗಳ ಕಡೆಗೆ ತಿರುಗೋಣ. ಇವುಗಳನ್ನು ಎತ್ತಿ
ಹಿಡಿದವರ ದೃಷ್ಟಿ ಅಲಂಕಾರ ಪ್ರಸ್ಥಾನದವರ ದೃಷ್ಟಿಗಿಂತ ಹೆಚ್ಚು ವ್ಯಾಪಕ
ಹೆಂಬುದು ನಿಜ. ಕಾವ್ಯಶರೀರದಲ್ಲ ಅಲ್ಲೊಂದು ಕಡೆ ಇಲ್ಲೊಂದು ಕಡೆ
ಮಿನುಗುವ ಅಲಂಕಾರಗಳಿಗಿಂತ, ಅದಪ್ಪನ್ನೂ ಒಳಕೊಳ್ಳುವ ವಚನವಿನ್ಯಾಸ
ಕ್ರಮದ ವಿಭಜನೆಯಲ್ಲ ಕಾವ್ಯದ ತಿರುಳಿಗೆ ಹೆಚ್ಚು ಹತ್ತಿರವಾಗಿ ಬರುತ್ತೇವೆ,
೩. ಅಲಂಕಾರ-- ರೀತಿ ಪ್ರಸ್ಮಾನಗಳು ೪೧
ಆದರೆ, ರೀತಿಯೇ ಕಾವ್ಯದ ಅತ್ಮವೆಂದು ವಾಮನನು ಸಾರಿದ್ದರೂ ಈ
ಕಲ್ಪನೆ ಕೂಡ ಕಾವ್ಯರಹಸ್ಯವನ್ನು ಭೇದಿಸಲಿಲ್ಲ. ನಾವು ಹಿಂದೆಯೇ
ನೋಡಿದಂತೆ "ರೀತಿ' ಯೆನ್ನುವುದು ಬಗೆಬಗೆಯ ಗುಣಗಳಿಂದ ಕೂಡಿದ
ಶಬ್ಧಾರ್ಥಗಳ ಜೋಡಣ್. ಒಂದೊಂದು ಸಂದರ್ಭದಲ್ಲ ಒಂದೊಂದು
ಗುಣ ಉಚಿತವಾಗಿರಬಹುದು. ಎಲ್ಲೆಲ್ಲೂ ಪದಗಳು ನರ್ತಿಸುವಂತಿದ್ದರೆ
ಅ೦ದವಾದೀತೆ ? ಹಾಗೆಯೇ ಕೆಲವು ಕಡೆ ಪದರಚನೆ ಬಿಗಿಯಾಗಿರಬೇಕು,
ಮತ್ತೆ ಕೆಲವು ಕಡೆ ಸಡಿಲವಾಗಿರಬೇಕು. ಅರ್ಥದ ವಿಷಯವೂ ಹೀಗೆಯೇ.---
ಒಂದು ಕಡೆ ಪ್ರೌಢಿಮೆಯನ್ನು ಮೆಚ್ಚುತ್ತೇವೆ, ಮತ್ತೊಂದು ಕಡೆ ಸರಳತೆ
ಯನ್ನು ಅಪೇಕ್ಷಿಸುತ್ತೇಷೆ. ಇಂಥ ಸ್ಥಳದಲ್ಲಿ ಇಂಥ ಗುಣವೇ ಸರಿ ಎಂಬು
ದನ್ನು ನಿಯಮಿಸತಕ್ಕದ್ದು ಯಾವುದು ?--ಅದೇ ಕಾವ್ಯದ ತಿರುಳು.
ರೀತಿಪ್ರಸ್ಥಾನಕಾರನಿಗೆ ಇದು ಗೋಚರವಾಗದೆ ಹೋಯಿತು.
ಇಲ್ಲಿ ಸೋಜಿಗದ ಸಂಗತಿಯೇನೆಂದರೆ... ಭರತನ ನಾಟ್ಯಶಾಸ್ತ್ರವು
ಈ ಆಲಂಕಾರಿಕರೆಲ್ಲರ ಕಣ್ಣಮುಂದೆ ಇದ್ದಿತು; ಉದ್ಭಟನಂಥವರು ಅದಕ್ಕೆ
ವ್ಯಾಖ್ಯಾನವನ್ನು ಕೂಡ ಬರೆದು "" ಭರತನಯನಿಪುಣಮಾನಸ''ರೂ
ಆಗಿದ್ದರು. ಹಿಂದೆಯೇ ತಿಳಿಸಿರುವಂತೆ ಭರತನ ಗ್ರಂಥದಲ್ಲಿ ಗುಣದೋಪ್ಪ
ಅಲಂಕಂರಗಳಿ ಪ್ರಸ್ತಾವ ಬಂದಿ ರುವುದನ್ಟ ( ಅ್ಬಪ್ಯೇ ಠನಕೆ ಅಂಗವಾಗಿ
ಇವನ್ನೆಲ್ಲಾ ಪ್ರಯೋಗಿಸಬೇಕೆಂಬ ವಿಚಾರವೂ ನಿರ್ದಿಷ್ಟವಾಗಿದೆ.'" ಆದರೆ
ಭಾಮಹನಿಂದ ಪಿಡಿದು _ರುದ್ರಟನವರೆಗೆ ಯಾರೊಬ್ಬರೂ ರಸದ
ಈ ನಿಯಾಮಕತ್ಯವನ್ನು ಅಂಗೀಕರಿಸಲಲ್ಲ. ಅಪ್ಪೇ ಅಲ್ಲ. ಕಾವ್ಯದಲ್ಲಿ
ಈ ಸ್ಥಾನ ಅದಕ್ಕೆ ಸಲ್ಲಬಹುದೆಂಬ ಕಲ್ಪನೆಯಾದರೂ ಅವರಿಗೆ ಹೊಳೆದಿರ
ಲಾರದು. ರಸವನ್ನು ಕಾವ್ಯದಿಂದ ಹೊರದೂಡಲು ಅವರಿಗೆ ಅವಕಾಶ
ವಾಗಲಿ ಆವಶ್ಯಕತೆಯಾಗಲ ಇರಲಿಲ್ಲ; ತಮ್ಮ ತಮ್ಮ ಮತಕ್ಕೆ ಅನುಗುಣ
ವಾಗಿ ಯಾವುದೋ ಒಂದು ಮೂಲೆಯಲ್ಲಿ ಅದಕ್ಕೆ ಜಾಗ ಕೊಟ್ಟರು.
ಗಾಯನ, ಅಭಿನಯ ಹೊದಲಾದ ಅನೇಕ ಅಂಗಗಳಿಂದ ಸಮಾಕೀರ್ಣ
ವಾದ ನಾಟ್ಯದಲ್ಲಿ ಮಾತ್ರ ರಸಕ್ಕೆ ಪ್ರಾಧಾನ್ಯ ; ಕೇವಲ ಉಕ್ತಿರೂಪವಾದ
೫ ಏವಮೇತೇ ಹ್ಯಲಂಕಾರಾ ಗುಣಾ ದೋಷಾತೈ ಕೀರ್ತಿತ”ಃ |
ಪ್ರಯೋಗಮೇಪಾಂ ಚ ಪುನರ್ವಕ್ಷಾಮಿ ರಸಸಂಶ್ರಯಂ |
(ನಾಟ್ಯಶಾಸ್ತ್ರ, ೩೪: ೧೧೩)
೪೨ ಭಾರತೀಯ ಕ ಾವ್ಯಮಾಮಾಂಸೆ
ಕಾವ್ಯದ ಸೌಂದರ್ಯಕ್ಕೆ ತಿರುಳು ಬೇರೆ ಎಂದು ಅವರು ಭಾವಿಸಿರಬೇಕು.
ನಾಟ್ಯ, ಕಾವ್ಯ ಮೊದಲಾದ ಸಮಸ್ತ ಲಲಿತಕಲೆಗಳ ಹೃದಯವೂ ಒಂದೇ
ಎಂಬುದನ್ನು ಸ್ಥಾಪಿಸಲು ಬೇರೊಂದು ಪ್ರಸ್ಥಾನಷವೇ ಹೊರಡಬೇಕಾ
ಯಿತು. ಈ ತತ್ತ್ವವನ್ನು ಜಗತ್ತಿಗೆ ಮೊದಲು ಸಾರಿದ ಕೃತಿ " ಧ್ಯನ್ಯಾ
ಲೋಕ.
ಕಾವ್ಯದ ಶರೀರವನ್ನೂ ಆತ್ಮ ವನ್ನೂ ಬೇರ್ಪಡಿಸಿ ನೋಡುವ ದೃಷ್ಟಿ
ವಾಮನನ ಕಾಲಕ್ಕೇ ಮೊದಲಾಗಿತ್ತು ಹ ನಾಟ್ಯದಲ್ಲಿ ಅಭಿನಯ
ಗಾಯನಗಳಂತೆ ಸಾಹಿತ್ಯಬಭಾಗವೂ ರಸನಿಪ್ಪತ್ತಿಯನ್ನೇ ತನ್ನ ಗುರಿಯಾಗಿ
ಹಿಂದಿನಿಂದಲೂ ಅಂಗೀಕರಿಸಿತು. ರಂಗಸ್ತ ದಲ್ಲಿ ಆಡುವುದಕ್ಕಾಗಿ
ಬರೆದ ನಾಟಕಗಳು 'ಉತ್ಸ ಷ್ಟ ಕಾವು ಗಳಾಗಿದ್ದು ವೆಂಬುದನ್ನು ಆಲಂಕಾರಿ
ಕರು ಒಪ್ಪಿದ್ದರು. ಇದೆಲ್ಲವನ್ನೂ ಸಂಯ್ಲೋಜಕದೃಪ್ಪಿಯಿಂದ ಮೋಡಿ,
ದೃತ್ಯ ಕಾವ್ಯ ಕ್ಸ ಮಾತ್ರವಲ್ಲದೆ ಶ್ರವ್ಯಕಾವ್ಯಕ್ಕೂ ರಸನಿಪ್ಪತ್ತಿಯ್ದೇ ಗುರಿ,
ವಂ: ಬಗೆಯ ತಾವ್ಯಕು ಕ್ಕೂ 'ಠಸವೇ' ಸ ಅತ್ಮ ಎಂಬ ತಿಳಿವಳಿಕೆ
ಯನ್ನು ಒದಗಿಸತಕ್ಕ ಲಾಕ್ಷಣಿಕರು ಬ೦ದದ್ದು ಸಹಜವೇ ಸರಿ. ಈ
ತತ್ತ ಕ್ಕೆ ನಿದರ್ಶನವನ್ನು "ಆದಿಕವಿ >ಯ ಅನುಭವದಲ್ಲೇ ಧ್ವನಿಪ್ರಸ್ಥಾನ
ಹ ಕಂಡನು ; 'ಜೇಡನೊಬ್ಬನು ಕ್ರೌಂಚಪಕ್ಷಿಗಳ ಜೋಡಿಯಲ್ಲಿ
ಒಂದನ್ನು ಕೊಂದಾಗ ಇನ್ನೊಂದು ವಿರಹಶೋಕದಿಂದ ಆಕ್ರಂದನ
ಮಾಡಿತಪ್ಪೆ. ಅದನ್ನು ಕಂಡು ಮರುಗಿದ ವಾಲ್ಮೀಕಿಯ ವದನದಿಂದ "ಮಾ
ನಿಪಾದ....' : ಎಂಬ ಪ್ರಸಿದ್ಧವಾದ ಶ್ಲೋಕವು ಪಾದಬದ್ಧವಾಗಿ ಲಯಾ
ನ್ವಿತವಾಗಿ ತನಗೆ ತಾನೇ ಹೊರಹೊಮ್ಮಿತು. "ಶೋಕಃ ಶ್ಲೋಕತ್ವ
ಮಾಗತಃ ''--ಶೋಕವೇ ಶ್ಲೋಕವಾಗಿ ಪರಿಣಮಿಸಿತು! ಕಾವ್ಯದಲ್ಲಿ
ತಬ್ದಾರ್ಹಾಲಂಕಾರಗಳೂ ವಚನರಚನಾವಿಶೇಷವೂ ಬಂದು ರಮ್ಯತೆಯನ್ನು
ಒದಗಿಸುತ್ತವೆ; ನಿಜ. ಆದರೆ ಇದಕ್ಕೆಲ್ಲ ಸಾರಭೂತವಾದದ್ದು ರಸ; ಇದ್ದೇ
! ಇಲ್ಲಿ "ರಸ ' ಎಂಬ ಶಬ್ದವನ್ನು ವಿಶಾಲವಾದ ಅರ್ಥದಲ್ಲ ಗ್ರಪಿಸಬೇಕು. ಕಾವ್ಯ
ನಾಟಕಗಳಲ್ಲಿ ಅಸ್ಪಾದ್ಯವಾಗುವ ಚಿತ್ತವೃತ್ತಿ ವಿಶೇಷವೆಲ್ಲಕ್ಕೂ "ರಸ ' ಎಂಬುದು ಸಾಮಾನ್ಯ
ಸಂಜೆ ಎ1 ಶೈಂಗಾರ, ವೀರ ಮೊದಲಾದ ಮುಖ್ಯ ರಸಗಳು, ಅವುಗಳ ಅಭಾಸಗಳು,
ಸತ್ಸುಕ್ಯ್ಕ, ಚಿಂತೆ ಮೊದಲಾದ ಬಗೆಬಗೆಯ ಸಂಚಾರಿಭಾವಗಳು, ಅವುಗಳ ಅಭಾಸಗಳು,
ಇನ್ನೊ ಉಳಿದಿರಲಹುಬಾದ ಚಿಸ್ತವೃತ್ತಿವಿಶ್ನೇಷಗಳು ಇದನ್ನೆಲ್ಲಾ "ರಸ ` ಒಳಕೊಳ್ಳುತ್ತದೆ.
ಧ್ವನಿಪ್ರಸ್ಥ್ಮಾನದವರು ಇದನ್ನೇ "ರಸಾದಿ ' ಎಂದು ಕರೆಯುವುದುಂಟು.
2 ವಾಲ್ಮೀಕಿರಾಮಾಯಣ, 8. ೨. ೧೫.
ಲಸ
೪೪ ಭಾರತೀಯ ಕಾವ್ಯಮಾಮಾಂಸೆ
ಕಾವ್ಯದ ಪರಮಾರ್ಥ. ಕಾವ್ಯದ ಲ್ಲ ಅಂಗಗಳನ್ನು ಅಳವಡಿಸುವುದೂ
ಈ ಗುರಿಯ ಸಾಧನೆಗಾಗಿಯೇ. ಆದಕಾರಣ ರಸವೇ ಕಾವ್ಯದ ಆತ್ಮ. '
ಆತ್ಮದ ಸಾಮ್ಯವನ್ನು ಪರಿಭಾವಿಸುವಾಗ, ಧ್ವನಿಪ್ರಸ್ಥಾನದ ಅತಿ
ಮುಖ್ಯವಾದ ಇನ್ನೊಂದು ತತ್ತ್ವದ ಕಡೆಗೆ ನಮ್ಮ ಗಮನ ತಿರುಗುತ್ತದೆ.
ಆತ್ಮವೂ ಶರೀರವೂ ಬೇಕೆ ಬೇರೆ; ಶರೀರದಂತೆ ಆತ್ಮವು: ನಿರೀಕ್ಷಕರ
ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ; ಆದರೆ ಅದು ತರೀರದಲ್ಲೇ
ನೆಲೆಗೊಂಡು ಅದರ ಮೂಲಕವೇ ಪ್ರಕಾಶಗೊಂಡು ಅದಕ್ಕೆ ಸಾರ್ಥಕತೆ
ಯನ್ನು ಕೊಡುತ್ತದೆ. ಕಾವ್ಯದಲ್ಲಿ ತರೀರ ಯಾವುದು? ಅದು ಆತ್ಮ
ವನ್ನು ಅಭಿವ್ಯಕ್ತಪಡಿಸ:ವ ಬಗೆಯೇನು? ಈ ಪ್ರಶ್ನೆಗೆ ಧ್ವನಿಪ್ರಸ್ಥಾನ
ಕೊಟ್ಟ ಉತ್ತರವು ಶಬ್ಧಶಕ್ತಿಯಮೇಲೆ ಹೊಸ ಬೆಳಕನ್ನೇ ಬೀರಿತು.
" ಈ ಶಬ್ದಕ್ಕೆ ಇದು ಅರ್ಥ ' ಎಂದು ಲೋಕರೂಢಿಯಲ್ಲ ಪ್ರಸಿದ್ಧವಾದ
ಸಂಕೇತವೊಂದಿರುತ್ತದೆ; ಪೀಗೆ ಸಂಕೇತಬಲದಿಂದ ಒಂದು ಶಬ್ದವನ್ನು
ಕೇಳಿದ ಕೂಡಲೆ ತಿಳಿಯುವ ಅರ್ಥಕ್ಕೆ ಅದರ ವಾಚ್ಯಾರ್ಥವೆಂದೂ, ಈ
ಅರ್ಥವನ್ನು ತಿಳಿಯಪಡಿಸತಕ್ಕ ಶಬ್ದ ಶಕ್ತಿಗೆ ಅಭಿಧಾವೃತ್ತಿಯೆಂದೂ ಹೆಸರು.
ಒಂದೊಂದು ಕಡೆ ಶಬ್ದದ ವಾಚ್ಯಾರ್ಥವು ಸನ್ನಿವೇಶಕ್ಕೆ ಹೊಂದದಿದ್ದಲ್ಲ
ಹೊಂದಿಕೆಯಾಗುವಂತೆ ಅದನ್ನು ಸರಿಪಡಿಸಿ ಅರ್ಥಕೊಡುವ ಮತ್ತೊಂದು
ಶಕ್ತಿ ಕೆಲಸಮಾಡುತ್ತ ದೆ; ಇದಕ್ಕೆ ಲಕ್ಷಣಾವೃತ್ತಿಯೆಂದೂ ಇದರಿಂದ
ಬರುವ ಅರ್ಥಕ್ಕೆ ಲಕ್ಷ್ಮಾರ್ಥವೆಂದೂ ಹೆಸರು. ಭಾಷೆಯಲ್ಲ ಶಬ್ದಕ್ಕೆ
ಇರುವುದು ಇವೆರಡೇ ಶಕ್ತಿಗಳೆಂದೂ, ಶಬ್ಧದಿಂದ ನಮಗೆ ಪ್ರತೀತ
ವಾಗುವ ಸಮಸ್ತ ಅರ್ಥವೂ ಈ ವಾಚ್ಯಾರ್ಥಲಕ್ವ್ಯಾರ್ಥಗಳಲ್ಲೇ
ಅಡಕವಾಗುವುದೆಂದೂ ದಾರ್ತನಿಕರ ಮತ.' ಆದರೆ ನಿಘಂಟು ವ್ಯಾಕರಣ
ಗಳಿಗೆ ಗೋಚರವಾಗುವ ಇಷ್ಟು ಅರ್ಥವನ್ನು ಹೇಳುವುದರಲ್ಲೇ ಶಬ್ದದ
' ಕಾವ್ಕಸ್ಯಾತ್ಮಾ ಸ ಒವಾರ್ಥಃ ತಥಾ ಚಾದಿಕವೇಃ ಪುರಾ!
ಕ ೨ಚದ್ಯಂದ್ಯವಿಯೋಗೋತ್ಪಃ ಶೋಕಃ ಶ್ಲೋಕತ್ಟವಾಾಗತಃ |
(ಥೃವ್ನಾಲೋಕ, 1. ಚಿ
1 ಅಭಿಧಾವೃತ್ತಿ ಲಕ್ಷಣಇವೃತ್ತಿಗಳಿಂದ ಶಬ್ದಗಳ ಅರ್ಥ ಗೊತ್ತಾಗುತ್ತದೆ; ಒಟು
ಪಾಕದ ಅರ್ಥವನ್ನು ತಿಳಿಸಲು ತಾತ್ಪರ್ಯವೃತ್ತಿಯೆ£ಬ ಬೇರೊಂದು ಶಕ್ತಿ ಪ್ರವರ್ತಿಸುವು
ದೆಂದು ಕೆಲವರ ಅಭಿಪ್ರಾಯ. ಇದನ್ನು ಎರೋದಿಸಿ, ಅಭಿಧಾವೃತ್ತಿಗೇ ಈ ಶಕ್ತಿಯೂ
ಉಂಟೆಂದು ಉಳಿದವರು ಹೇಳುತ್ತಾರೆ. ಈ ಎರಡು ಮತಗಳ ವಿಚಾರ ನನ್ಕು ಗ್ರುಥದ
೧೫ನೆಯ ಅಧ್ಯಾಯದಲ್ಲಿ ಸ್ವಲ್ಪಮಟ್ಟಿಗೆ ಬರುತ್ತದೆ.
೪, ಧ್ವನಿ ಪ್ರಸ್ಥಾನ ೪೫
ಶಕ್ತಿ ಮುಗಿಯುವುದಿಲ್ಲ. ಸಾಮಾನ್ಯವಾಗಿ ಲೋಕರೂಢಿಯಲ್ಲೂ ಶಾಸ್ತ್ರ
ಗ್ರಂಥಗಳಲ್ಲಿಯೂ ಶಬ್ಧವು ಕೊಟ್ಟ ಕೆಲಸವನ್ನು ಮಾಡಿ ಅಲ್ಲಿಗೇ ಸುಮ್ಮ
ನಾಗುವ ಕೂಲಿಯಾಳಿನಂತೆ ವಾಚ್ಯಾರ್ಥವನ್ನು' ಮಾತ್ರ ತಿಳಿಸಿ ವಿರಮಿಸು
ಮು ಬಸ್ಯ ಟ್ರ ಕು ಎ ಬ ಭು
ಬಿಟ್ಟು ಹೇಳದಿದ್ದರೂ ಸನ್ನಿವ್ನೇಶಮಹಿಮೆಯಿಂದ ವ್ಯಂಜನೊವೃತ್ತಿಯೆಂಬ
ಬೇರೊಂದು ಶಕ್ತಿಯ ಮೂಲಕ ಸೂಚಿಸಬಲ್ಲುದು. ತಬ್ದದ' ಈ ಶಕ್ತಿ
ಕಾವ್ಯದಲ್ಲಿ ಚುರುಕಾಗುತ್ತ ದೆ; ಅದಕ್ಕೆ ಹೊಸ ತೇಜಸ್ಸು ಬರುತ್ತದೆ.
ವಾಚ್ಯಾರ್ಥಕ್ಕೆ ಮಾರಿದ, ಅದಕ್ಕೆ ಎಷ್ಟೋ ಮಿಗಿಲಾಗಿ ಮನೋಹರವಾದ,
ಬೇರೊಂದು ಅರ್ಥವು ಶಬ್ದದ ವ್ಯಂಜನಾವೃತ್ತಿಯ ಮೂಲಕ ಇಲ್ಲಿ
ಸ್ಫುರಿಸುತ್ತದೆ -
ಪ್ರತೀಯಮಾನಂ ಪುನರನ್ನ ದೇವ
ವಸ್ಮಸ್ತಿ ವಾಣೀಷು ಮಹಾಕವೀನಾಂ |
ುತ್ ತತ್ ಪ್ರಸಿದ್ಧಾವಯವಾತಿರಿಕ್ತ೦
ವಿಭಾತಿ ಲಾವಣ್ಯಮಿವಾಂಗನಾಸು | (ಧ್ವನ್ಯಾ., 1.೪)
“ ಮಹಾಕವಿಗಳ ವಾಣಿಯಲ್ಲಿ [ವಾಚ್ಯಾರ್ಥಕ್ಕಿಂತ] ಬೇರೆಯಾಗಿಯೇ
ಪ್ರತ್ಲೀಯಮಾನವಾಗುವ ಅರ್ಥವೊಂದು ಇದ್ದೇ ಇರುತ್ತದೆ; ಲಲನೆಯರಲ್ಲ
ಸ್ಫುಟವಾದ ಅವಯವಗಳಿಗಿಂತ ಬೇರೆಯಾಗಿರುವ ಲಾವಣ್ಯದಂತೆ ಅದು
ಹೊಳೆಯುತ್ತದೆ.''
ಒಂದೆರಡು ಉದಾಹರಣಿಗಳನ್ನು ಕೊಟ್ಟು ಈ ವಿಷಯವನ್ನು
ಸ್ಪಪ್ಪ ಪಡಿಸಬಹುದು. " ಪಂಪಭಾರತ ' ದಲ್ಲಿ, ಭೀಷ್ಮನಿಗೆ ಸೇನಾಧಿಪತಿ
ಪಟ್ಟವನ್ನು ಕಟ್ಟಿದ ಸಂದರ್ಭದಲ್ಲ, ಈ ಮುಪ್ಪಿನ ಮುದುಕನು ಎಂತು
ಕಾದಾಡಿಯಾನು ಎಂದು ಮೊದಲಾದ ತಿರಸ್ಕಾ ರದಿಂದಲೂ, ಸಮರ್ಥನಾದ
ತನಗೆ ಪಟ್ಟಕಟ್ಟಲಿಲ್ಲವೆಂಬ ಅಸಮಾಧಾನದಿಂದಲೂ ಕರ್ಣನು ಅಕ್ಷೇಪಿ
ಸುತ್ತಾನೆ. ಮಾತು ಬಿರುಸಾಗಿ ಬೆಳೆಯುತ್ತದೆ. ದ್ರೋಣನು ತನ್ನ
ಕುಲವನ್ನು ಅಲ್ಲಗಳೆದನೆಂದು ಕರ್ಣನು ರೇಗಿ, ಭೀಷ್ಮನು ಬಿದ್ದ ಹೊರತು
ಬಿಲ್ಲನ್ನು ಹಿಡಿಯುವುದಿಲ್ಲವೆನ್ನುವಪ್ಪು ದೂರ ಹೋಗುತ್ತಾನೆ. ಆಗ
ಭೀಪ್ಮನು, " ನಿನ್ನ ಶಕ್ತಿ ಯೌವನಾದಿಗಳು ನನಗಿಲ್ಲ, ನಿಜ; ಕರ್ಣ, ಇದು
5 ಇಲ್ಲ ವಾಚ್ಯಾರ್ಥ ಲಕ್ಷಾರ್ಥಗಳಿರಡನ್ನೂ ಒಟ್ಟಿಗೇ ಗ್ರಹಿಸಲಾಗಿದೆ,
೪೬ ಭಾರತೀಯ ಕಾವ್ಯವಿಸಾಮಾಂಸೆ
ಭಾರತಯುದ್ಧ; ಎದುರಾಳು ಅರ್ಜುನ. ಇಷ್ಟೊಂದೇಕೆ ಹಾರಾಡುವೆ
ಯಣ್ಣ! "" ಸೂಬ್ಬಡೆಯಲಪ್ಪುದು ಕಾಣ ಮಹಾಜಿರಂಗದೊಳ್ '` ಎನ್ನು
ತ್ತಾನೆ (» ೨೩). ಸೂಜ್ ಎಂದರೆ ಸರದಿ ಎಂದು ಅರ್ಥ.
"ಈ ಮಹಾ ಯುದ್ಧದಲ್ಲಿ ನಿನಗೂ ಸರದಿ ದೊರೆಯುವುದು, ಕಾಣಯ್ಯ'
ಎಂದು ಭರವಸೆ ಹೇಳಿದಪ್ಪಕ್ಕೆ ಇಲ್ಲಿಯ ವಾಚ್ಯಾರ್ಥ ಮುಗಿಯಿತು.
ಆದರೆ ಭೀಪ್ಮನ ಮನಸ್ಸಿನಲ್ಲಿದ್ದ ಎಲ್ಲ ಅರ್ಥವೂ ಮುಗಿಯಲ್ಲಲ್ಲ. ಇಲ್ಲ
" ಸೂಜ್' ಎಂಬ ಪದದ ಪ್ರಯೋಗದಿಂದ ಹೊರಡುವ ಅರ್ಥಸ್ಕಾರಸ್ಯ
ವನ್ನೆಲ್ಲಾ ಗಮನಿಸಿ... ಈ ಸಮರದಲ್ಲಿ, ಅರ್ಜುನನ್ನು ಲದುರಿಸಿ ನಿಲ್ಲುವ
ಕೌರವಪಕ್ಷದ ವೀರರಿಗೆಲ್ಲ ದೊರೆಯುವುದು ಪಟ್ಟಕಟ್ಟಿಸಿಕೊಳ್ಳುವ ಸರ
ದಿಯೇ ಹೊರತು ವಿಜಯಪೆಂದಿಗೂ ಅಲ್ಲ. ಭೀಷ್ಮನ ಸರದಿ ಮೊದಲು
ಬಂದಿತು, ಅವನು ಬಿದ್ದಮೇಲೆ ಮತ್ತೊ ಬ್ಹನದು, ಬಳಿಕ ಕರ್ಣನ ಸರದಿ.
ಆದರೆ ಕರ್ಣನಿಗೂ ಸರದಿ ಮಾತ್ರವೇ. ಯುದ್ಧ ಅಲ್ಲಗೂ ನಿಲ್ಲದೆ ಕರ್ಣನ
ಅನಂತರವೂ ಮುಂದೆ ಸಾಗುತ್ತದೆ... . ! ಇಲ್ಲ ಸನ್ನಿವೇಶವಶದಿಂದ
` ಸೂಜ್ ` ಎ೦ಬ ಪದವು ವ್ಯಂಜನಾವೃ ತ್ತಿಯ ಮೂಲಕ ಎಷ್ಟೊಂದು ಅರ್ಥ
ವನ್ನು ನಮಗೆ ಅರಿವುಮಾಡಿಕೊಡಬಲ್ಲದು !
ಶಾಕುಂತಲ ನಾಟಕದ ನಾಲ್ಕನೆಯ ಅಂಕದಿಂದ ಒಂದು ಉದಾ
ಹರಣಿ. ಶಕುಂತಲೆ ಪತಿಗೃಹಕ್ಕೆ ತೆರಳುವ ಸಮಯದಲ್ಲಿ, ತಾನು ಸೋದರ
ಪ್ರೇಮದಿಂದ ನೀರೆರೆದು ಬೆಳಸಿದ್ದ ವನಜೋತ್ಸ್ನೆ ಯೆಂಬ ಲತೆಯ ಯೋಗ
ಕ್ಷೇಮವನ್ನು ತನ್ನ ಜೀವದ ಗೆಳಳಯರಾದ ಪ್ರಿಯಂವದೆ ಅನಸೂಯೆಯರಿಗೆ
ವಹಿಸಿಕೊಡುತ್ತಾಳೆ. ಆಗೆ ನಡೆದ ಮಾತು ಇದು:
ಶಕುಂತಲೆ. -ಸಖಿಯರೆ, ಇದನ್ನು ನಿಮ್ಮಿಬ್ಬರ ಕೈಯಲ್ಲಿರಿಸಿದೆ.
ಸಖಿಯರು ನಮ್ಮನ್ನು ಯಾರ ಕೈಗೆ ಒಪ್ಪಿಸಿದೆ? (ಕಣ್ಣೀರನ್ನು ಮಿಡಿ
ಯುವರು).
ಇಲ್ಲ, ಸಖಿಯರ ಮಾತಿನ ವಾಚ್ಯಾರ್ಥ ಒಂದು ಪ್ರಶ್ನೆ ಮಾತ್ರ.
ಆದರೆ ಅದರಲ್ಲಿ ಮೂಲಕ, ಈ ಸಂದರ್ಭದಲ್ಲಿ ಗೋಚರವಾಗುವ
ವಿಯೋಗವೇದನೆಯನ್ನು ಗಮನಿಸಿ. ಶಕುಂತಲೆ ಇವರಿಬ್ಬರನ್ನೂ ಈಗ
ಅತಿಶಯ ಸಂಕಟದ ಕೈಗೆ ಒಪ್ಪಿಸಿ ಆಶ್ರಮವನ್ನು ಬಿಡುತ್ತಿದ್ದಾಳೆ. ಅವರು
ಕಿ
ನುಡಿದ ಮಾತಿನಿಂದ, ಮಿಡಿದ ಕಣ್ಣೀರಿನಿಂದ ಅವರ ಸಂಕಟ ಎಷ್ಟು
೪. ಧ್ವನಿ ಪ್ರಸ್ಥಾನ ೪೭
ಗಾಢವಾಗಿ ನಮ್ಮ ಅನುಭವಕ್ಕೆ ಬರುತ್ತದೆ! ಇದನ್ನು ನಮಗೆ
ಮನಮುಟ್ಟಿ ಸುವುದರಲ್ಲೇ ಇಲ್ಲಿಯ ಎಲ್ಲ ಮಾತುಗಳ ಸಾರ್ಥಕತೆ.
ಆದರೆ, "ದುಃಖ, "ಸಂಕು' ಎಂಬ ಪದಗಳು ಮಾತ್ರ ಇಲ್ಲಿ
ತಲೆಹಾಕಿಲ್ಲ. ಸಖಿಯರು ಸುಮ್ಮನೆ “ದುಖು ದುಃಖ ಎಂದು
ಷ್ಟು ಸಲ ಬಾಯಿಬಿಟ್ಟು ಕೂಗಿದ್ದರೂ ನಮಗೆ ಈ ಅನುಭವ ಬರುತ್ತಿರ
ಲಿಲ್ಲ.
ಈ ರೀತಿಯಲ್ಲ ಅನುಕ್ತವಾದರೂ ಅರಿವಿಗೆ ವಿಷಯವಾಗುವ
ವ್ಕ [೦ಗ್ಯಾರ್ಥವೇೇ * ರ್ಹಷ್ಟೇ* ಕಾವ್ಯದ ಸಾರವೆಂದು ಸಾರಿ, ಧ್ವನಿಪ್ರಸ್ತಾನಕಾರನು
ಕಾವ್ಯದಲ್ಲಿ ಶಬ್ದ! ಶಬ್ದಕ್ಕಿ ರುವ _ವಿಶೇಷಶಕ್ತಿಯನ್ನು ಬೆಳಕಿಗೆ ತಂದನು. ಈ
ಮತದಂತೆ, ತಬ್ಬ ಮತ್ತು, ಅದರ ವಾಚ್ಯಾರ್ಥ ರ್ಥ ಇವೆರಡೂ ಕಾವ್ಯದ ಶರೀರ_
ಮೇಲುಹೊದಿಕೆ. ಕಾವ್ಯದ ತಿರುಳ್ಳೇ ಬೇರೆ -ಅದು ವ್ಯಂಗ್ಯಾರ್ಥ :
ಶಬ್ದಾರ್ಡಶಾಸನಜ್ಞಾ ನಮಾತ್ರೀಣ್ಮಿವ ನ ವೇದ್ಯ ತೇ! ೬್
ದೇದೃತೇ ಸ ಹಿ ಕಾಮ್ನಾ ್ಯರ್ಥತತ ಶೆ 3ರೇವ ಹ ೦॥ (ಧ್ವನ್ಯಾ, ಬ
"" ಅದು ವ್ಯಾಕರಣ ನಿಘಂಟುಗಳನ್ನು ತಿಳಿದುಕೊಂಡಿದ್ದ ಮಾತ್ರಕ್ಕೆ ಅರಿ
ವಾಗುವುದಿಲ್ಲ; ಅದು-ಅರಿವಾಗುವುದು ಕೇವಲ ಕಾವ್ಯಾರ್ಥದ ಹುರು
ಳನ್ನು ಬಲ್ಲವರಿಗೆ ಮಾತ್ರ! ''
ಕವಿ ಉಪಯೋಗಿಸುವ ಶಬ್ದವೂ ಅದರಲ್ಲ ಅವನು ಕಂಠೋಕ್ತ
ವಾಗಿ ಹೇಳಿರುನ ಅರ್ಥವೂ ಕಾವ್ಯದ ಸಾರವಲ್ಲ. ಇವೆರಡರ ಮೂಲಕ
ಅವನು ಮತ್ತೊಂದು ಅರ್ಥದ ಕಡೆಗೆ ಬೆರಳು ನೀಡಿ ಸೂಚಿಸುತ್ತಿದ್ದಾನೆ.
ಅದನ್ನು ಅವನು ಮಾತಿನಲ್ಲಿ ಹೇಳಲ್ಲೇ ಆರನು ; ಹೇಳಲು ಸಾಧ್ಯವಾದ
ಕಡೆಗಳಲ್ಲೂ ಸೂಚಿಸುವುದೇ ಉತ್ತಮ. ಏಕೆಂದರೆ ಬಾಯಿಬಿಟ್ಟು ಹೇಳಿದ್ದು
ಬುದ್ಧಿಗೆ ಮಾತ್ರ ಮುಟ್ಟಿ, ಪ್ರತಿಭೆಗೆ ಗೋಚರವಾಗದೆ ಹೃದಯವನ್ನು
ತಟ್ಟದೆ ತನ್ನ ರಮಣೀಯತೆಯನ್ನು ಕುಂಡಿಸಿಕೊಳ್ಳುತ್ತದೆ. ಆದಕಾರಣ,
ಯಾವುದು ಕಾವ್ಯದ ಆತ್ಮವೋ ಅದು ಮೇಲುನೋಟಕ್ಕೆ ಕಾಣಿಸುವುದಿಲ್ಲ ;
ಸಹ್ಮದಯನು ಅದನ್ನು ಅರಿತುಕೊಳ್ಳಬೇಕು. ಅದನು ಅರಿಯುವುದಕ್ಕೆ
6 ವೃಂಜನಾವೃತ್ತಿಯ ಮೂಲಕ ಪ್ರಕಾಶಕ್ಕೆ ಬರುವುದೇ ವೃಂಗ್ಯಾರ್ಥ. ಇದನ್ನು
ಸೂಚಿಸುವ ಶಬ್ದಾರ್ಥಗಳಿಗೆ ವೃಂಜಕಗಳೆಂದು ಹೆಸರು. " ವ್ಯಂಗ್ಯ ' ಎಂಬ ಮಾತಿಗೆ ಕನ್ನಡದಲ್ಲ
ಒಂದು ಸಂಕುಚಿತವಾದ ಆರ್ಥವಿದೆ; ಕಾವ್ಯಮಾಮಾಂಸೆಯಲ್ಲ ಅದನ್ನು ಮರೆತುಬಿಡಬೇಕು.
೪೮ ಭಾರತೀಯ ಕಾವ್ಯಮಾಮಾಂಸೆ
ಕಾವ್ಯದ ಶಬ್ದ ವಾಚ್ಯಾರ್ಥಗಳು ದೀವಿಗೆಯಂತೆ ;” ಈ ದೀವಿಗೆ ಸರಿಯಾ
ಗಿರಬೇಕೆಂದು ಬೇರೆ ಹೇಳುವುದು ಅನಾವಶ್ಯಕ ; ಹಾಗಿಲ್ಲದಿದ್ದರೆ ಕಾವ್ಯವು
ಕತ್ತಲೆ ಕೋಣಿಯಾಗಿ, ಮಬ್ಬಿನ ಮುಸುಕಾಗಿ, ಆತ್ಮ ಗೋಚರಿಸದೆಯೇ
ಹೋದೀತು. ಉತ್ತಮ ಕಾವ್ಯದಲ್ಲಿ ಶಬ್ದವೂ ವಾಚ್ಯಾರ್ಥವೂ ತಾಷೇ
ಪ್ರಧಾನವಾಗಿ, ನಿಲ್ಲದೆ, ವ್ಯಂಗ್ಯಾರ್ಥಕ್ಕೆ ಅಡಿಯಾಳುಗಳಾಗಿ ಅದನ್ನು
ಚೆನ್ನಾಗಿ ವ್ಯಕ್ತಪಡಿಸುವುದರಲ್ಲೇ ಸಾರ್ಥಕತೆಯನ್ನು ಪಡೆಯುತ್ತವೆ.
ಸಹೃ ದಯನು ಕೂಡ ಅದನ್ನು ಕಾಣುವತನಕ ಬಿಡದೆ ಮುಂದುವರಿದು
ಆದಂ ಸವಿಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾನೆ. ಹೀಗೆ ಕಾವ್ಯದಲ್ಲ
ಪ್ರಧಾನವೂ ಪರಮಾರ್ಧವೂ ಅಗಿ ನಿಲ್ಲುವ ವ್ಯಂಗ್ಗಾ ರ್ಥಕ್ಕೆ € ಧ್ವನಿಯೆಂದು
ಹೆಸರು, "" ಕಾವ್ಯಸ್ಯಾತ್ಮಾ ಧ್ವ ಸ ಧ್ವನಿಯೇ ಕಾವ್ಯದ ಆತ್ಮ.')
ಇಷ” ಧ್ವನಿಯನ್ನು ಕಾವ್ಯವಿಶ್ನೇಷವನ್ಮೂ ಧ್ವನಿಯೆಂದು ಕರೆಯುವು
ದುಂಟು:
ಯತ್ರಾರ್ಥಃ ಶದ್ದೋ ವಾ ತಮರ್ಥಮುಪಸರ್ಜನೀಕೃತಸ್ಟಾರ್ಥಾ |
ವ್ಯ೦ಕ್ತ 8 ಕಾವ್ಯವಿಶೇಷಃ ಸ ಧ್ಯನಿರಿಶಿ ಸೂರಿಭಿಃ ಕಥಿಶಃ : (ಧ್ವನ್ಯಾ., | ೧೩)
"" ಯಾವುದರಲ್ಲಿ [ವಾಚ್ಯವಾದ] ಅರ್ಥವಾಗಲಿ [ವಾಚಕವಾದ] ಶಬ್ಧ
ವಾಗಲಿ, ತಾವು ಅಧೀನವಾಗಿ ನಿಂತು, ವ್ಯಂಗ್ಯಾರ್ಥವನ್ನು ಅಭಿವ್ಯಕ್ತಿಗೊಳಿ
ಸುವುವೋ ಆ ಕಾವ್ಯವಿಶೇಷವು ಧ್ವನಿಯೆಂದು ವಿದ್ವಾಂಸರ ಹೇಳಿಕೆ."
ರಸವು ಅನುಭವವಿಶೇಪವಾಗಿರುವುದರಿಂದ ಅದನ್ನು ವಾಚ್ಯವಾಗಿ
ಹೇಳುವಹಾಗಿಲ್ಲ; ವ್ಯಂಗ್ಯವಾಗಿ ಸೂಚಿಸುವುದು ಮಾತ್ರ ಸಾಧ್ಯ. ಆದರೆ
ವ್ಯಂಗ್ಯಾರ್ಥವು ರಸವೊಂದೇ ಆಗಿರಬೇಕಾಗಿಲ್ಲ. ನಾವು ವಾಚ್ಯವಾಗಿ
ತಿಳಿಸುವ ಅರ್ಥವೆಲ್ಲವನ್ನೂ ವ್ಯಂಗ್ಯವಾಗಿ ತಿಳಿಸಬಹುದು. ಉದಾಹರಣಿಗೆ,
ಒಂದು ವಸ್ತುವಿಗೂ ಮತ್ತೊ೦ದಕ್ಕೂ ಇರುವ ರಮ್ಯವಾದ ಹೋಲಿಕೆಯನ್ನು
ಬಾಯಿಬಿಟ್ಟು ಹೇಳಿದರೆ ಅದು ವಾಚ್ಯೋಪಮೆಯಾಗುತ್ತಃ ದೆ; ಈ ಹೋಲಿಕೆ
: ಅಲೋಕಾರ್ಥಿೀ ಯಥಾ ದೀಪಶಿಖಾಯಾಂ ಯತ್ನವಾನ್ ಜನಃ |
ತದುಪಾಯತಯಾ ತದ್ವದರ್ಥೇ ವಾಚ್ಯೇ ತದಾದೃತಃ ॥ (ಧ್ವನ್ಯಾ., i ೯)
* (೧) ವ್ಯಂಗೃವಾದ ಅರ್ಥ, (೨) ಅದನ್ನುಳ್ಳ ಕಾವ್ಯ. ಈ ಎರಡು ಅರ್ಥಗಳ
ಜೊತೆಗೆ, (೩) ವ್ಯಂಜನಾ ವ್ಯಾಪಾರ, (೪) ವ್ಯಂಜಕವಾದ ಶಬ್ಧ, (೫) ವ್ಯಂಜಕವಾದ
ಅರ್ಥ. ಇವನ್ನೂ 'ಧ್ವನಿ' ಶಬ್ದವು ನಿರ್ದೇಶಿಸಬಲ್ಲುದು. ಅದರೆ ಮೊದಲ ಮೂರು ಅರ್ಥ
ಗಳೇ ಈಗ ಹೆಚ್ಚಾಗಿ ರೂಢಿಯಲ್ಲವೆ.
೪. ಧ್ವನಿ ಪ್ರಸಸ್ಮನ ೪೯
ಯನ್ನೇ ವ್ಯಂಜನಾವೃತ್ತಿಯ ಮೂಲಕ ಸೂಚಿಸಿದರೆ ಅದು ು ಉಪಮಾಧ್ಯನಿ
ಯೆನಿಸಿಕೊಳ್ಳುತ್ತ ದೆ. ಮಿಕ್ಕ ಅಲಂಕಾರಗಳೂ ಪೀಗೆಯೇ ಧ್ವನಿತವಾಗ
ಬಹುದು. ಇಷ್ಟೇ ಅಲ್ಲ. ಚಿತ್ತ ವೃತ್ತಿ ವಿಶೇಷವಾದ ರಸವಾಗಲಿ ಕವಿಪ್ರತಿಭಾ
ಕಲ್ಪಿತವಾದ ಅಲಂಕಾರವಾಗಲಿ ಅಲ್ಲದಿರುವ ಮಿಕ್ಕ ಅರ್ಥಗಳನ್ನು ಕೂಡ
ವ್ಯಂಗ್ಯವಾಗಿ ಸೂಚಿಸುವುದು ಸಾಧ್ಯ; ದಿನಬಳಕೆಯ ವ್ಯವಹಾರದಲ್ಲೇ
ನಾವು ಎಷ್ಟೋ ಪೇಳೆ ಹಾಗೆ ಮಾಡುತ್ತೇವೆ. ಪೀಗೆ ಸೂಚಿತವಾದ ಅರ್ಥಕ್ಕೆ
ಪ್ರಾಧಾನ್ಯವಿದ್ದರೆ ಅದನ್ನು ವಸ್ತುಧ್ಯನಿಯೆಂದು ಕರೆಯುತ್ತಾರೆ. ಈ ರೀತಿ
ಯಲ್ಲಿ ವ್ಯಂಜನಾವೃ ತ್ತಿಯಿಂದ ಹೊರಡುವ ಅರ್ಥವು ರಸ, ಅಲಂಕಾರ,
ವಸ್ತು ಎಂದು ಮೂರು ಬಗೆಯಾಗಿದ್ದರೂ,* ಶ್ರೇಪ್ಮಕಾವ್ಯದಲ್ಲ ವ್ಯಂಗ್ಯವಾಗಿ
ಹೊಳೆಯುವ ಅಲಂಕಾರ ವಸ್ತುಗಳು ಕೂಡ ತಮ್ಮಲ್ಲೇ ತಾವು ವಿರಮಿ
ಸದೆ, ಪರ್ಯಂತದಲ್ಲಿ ರಸಧ್ಯನಿಯನ್ನು ಸೂಚಿಸಿ ಸಾರ್ಥಕತೆಯನ್ನು
ಹೊಂದುತ್ತ ವ ಯಾವ ಅರ್ಥವನ್ನೇ ಆಗಲಿ, ಹೇಳುವುದಕ್ಕಿ ೦ತ ಸೂಚಿ
ಸುವುದರಲಿ ಹೆಚ್ಚು ರಮ ್ಯತೆಯಿರುವುದರಿಂದ ವಸ್ತು ದ್ವನಿ ಅಲಂ ಅಲಂಕಾರಧ್ಯನಿ
ಗಳಿಗೆ ವಾಚಾ ರ್ಥದ ದೃಷ್ಟಿ! ಯಿಂದ ಪಾ ಶಸ್ತ್ರ ಪೆಂಟು ; ಒಂದೊಂದು ಕಡೆ
ಅವೇ ಕಾವ್ಯ ದ ಪ ಸ ದಾನಾರ್ಥವಾಗಿರುವುದೂ ಅಸಂಭವವಲ್ಲ. ಆದರೆ ಒಟ್ಟಿ
ನಲ್ಲಿ ರಸಪ ್ರತೀತಿಯೇ. ಕಾವ್ಯದ ಕೊನೆಯ ಗುರಿ, ಒಳತಿರುಳು. ಆದಕಾರಣ,
$4 ಕಾವ್ಯ ಸ್ಯಾ ತಾ ಧ್ಯನ '' ಏಂಬ ಮಾತು "" ಕಾವೃಸ್ತ್ಯಾತ್ಮಾ ರಸಃ”,
ಎ೦ಬ ನಲೆಗೇ ಬ ನಿಲ್ಲುತ್ತದೆ.
ವಾಸ್ತವವಾಗಿ ನೋಡಿದರೆ, ಧ್ವನಿಪ್ರಸ್ಮಾನದವರು ಹೊರಗೆಡಪಿದ
ಕಾವ್ಯರಹಸ್ಯಗಳಲ್ಲಿ ದ್ವನಿತತ್ತ್ವವೇ ಮುಖ್ಯತಮನೆಂದು ಹೇಳಬೇಕು. ಕಾವ್ಯ
ದಲ್ಲಿ 'ರಸಕ್ಕಿರುವ ಅಗ ಸ್ಥಾನವು ರಸಿಕರಾದ ಲಾಕ್ಷಣ್‌ಕರಿಗೆ ಒಂದಲ್ಲ ಒಂದು
ದಿನ ಗೋಚರವಾಗುತ್ತಲೇ ಇದ್ದಿತು. ಆದರೆ ಶಬ್ಧಕ್ಕೆ ವ್ಯಂಜನಾವೃತ್ತಿ
ಯೆಂಬ ವ್ಯಾಪಾರವುಂಟೆಂದೂ ಇದು ಅಭಿಧಾವೃ ತ್ರಿ ಲಕ್ಷಣಾವೃತ್ತಿ ಗಳಿಗಿಂತ
ಭಿನ್ನವೆಂದೂ ವ್ಯವಸ್ಥೆ ಗೊಳಿಸಿ, ಕಾವ್ಯದಲ್ಲಿ ಸಾರಭೂತವಾದ ಅರ್ಥವೆಲ್ಲ
ವ್ಯಂಗ್ಯವಾಗಿರುವುದೇ ಹೊರತು ವಾಚ್ಯವಾಗಿರುವುದಿಲ್ಲವೆಂಬುದನ್ನು ಸ್ಪಪ್ಪ
5 ಇಲ್ಲ ವಸ್ತು, ಅಲಂಕಾರ, ರಸ ಎಂಬ ಧೈವಿವಿಭಾಗವನ್ನು ದಿಕ್ಸೂಚನೆಗಾಗಿ
ಮಾತ್ರ ತಿಳಿಸಿದೆ; ಮುಂದಿನ ಚರ್ಚೆಯಲ್ಲಿ ಇವುಗಳ ಪರಿಚಯ ಸ್ವಲ್ಲ ಮಟ್ಟಿಗಾದರೂ ಅವಶ್ಯಕ
ವಾಗಿರುವುದರಿಂದ ಇವುಗಳ ಹೆಸರನ್ನು ಇಲ್ಲಿ ಎತ್ತಬೇಕಾಯುತು. ಇವಕ್ಕೆ ಉದಾಹರಣೆ,
ವಿವರಣೆ ಮೊದಲಾದವನ್ನೆಲ್ಲಾ ಈ ಗ್ರಂಥದ ಮೂರನೆಯ ಭಾಗದಲ್ಲ ನೋಡಬಹುದು.
KM. 4
೫೦ ಭಾರತೀಯ ಕಾವ್ಯಮಾಮಾಂಸೆ
ಪಡಿಸಿದ್ದು ಧ್ಯನಿಪ್ರಸ್ಥಾನಕಾರನ ಅಗಾಧಮತಿಗೆ ಮಾತ್ರ ಸಾಧ್ಯವಾದ
ಕಾರ್ಯ. ಕಾವ್ಯದಲ್ಲಿ ಬಾಯಿಬಿಟ್ಟು ಹೇಳದಿರುವ ಬೇರೊಂದು ಅರ್ಥವು ಗಮ್ಯ
ವಾಗಬಹುದೆಂಬ ಅಂಶವು ಪಾ ಿಚೀನಾಲಂಕಾರಿಕರಿಗೆ ಪೂರ್ಣವಾಗಿ ಅಪರಿ
ಚಿತವಾಗಿರಲಿಲ್ಲ. ಪರ್ಯಾಯೋಕ್ತವೇ ಮೊದಲಾದ ಅಲಂಕಾರಗಳನ್ನು
ಅವರು ಅಂಗೀಕರಿಸಿದ್ದುದು ಈ ಮಾತಿಗೆ ಒಂದು ನಿದರ್ಶನ. " ವಾಮನನು
ಅರ್ಥಗುಣ ಓಜಸ್ಥೆಂದು ಕರೆದಿರುವುದರಲ್ಲ ಅರ್ಥವು ಅಭಿಪ್ರಾಯಸಹಿತವಾ
ಗಿರುವುದೂ ಒಂದು ಬಗೆ ; ಇದು ಸ್ಪಷ್ಟವಾಗಿಯೇ ವ್ಯಂಗ್ಯವನ್ನು ಒಳಕೊಳ್ಳು
ತ್ತದೆ.” ಆದರೆ ಈ ಪ್ರಾಚೀನರೆಲ್ಲರೆ! ದುರದ್ರಪ್ಪವೇನೆಂದರೆ, ಕಾವ್ಯದ
ರಹಸ್ಯವು ಅಕಸ್ಮಾತ್ತಾಗಿ ಕಣ್ಣ ಮುಶಿದೆ ಸುಳಿದಾಗಲೂ ಅದೇ ರಹಸ್ಯ
ವೆಂದು ಅವರಿಗೆ ಗೊತ್ತಾಗಲಿಲ್ಲ; ರಸತತ್ತ್ವದಂತೆಯೇ ದ್ವನಿತತ್ತ್ವ್ಯವನ್ನೂ
ಅವರು ದಿನದಿನವೂ ಜೆಳೆಯುತ್ತಿದ್ದ ಗುಣಾಲಂಕಾರಗಳ ಗುಂಪಿನಲ್ಲಿ
ಸೇರಿಸಿಬಿಟ್ಟರು. ಮೇಲೆನ್ನದೆ ಕೀಳೆನ್ನದೆ, ಮುಖ್ಯವೆನ್ನದೆ ಅಮುಖ್ಯವೆನ್ನದೆ,
ಒಂದೇ ರಾತಿಯಲ್ಲ ಹೀಗೆ ಅವರು ಅಡಕಿದ್ದ ಸಾಮಗ್ರಿಯನ್ನೆಲ್ಲಾ ಬರ್ಪ
ಡಿಸಿ, ಕಾವ್ಯಸೌಂದರ್ಯಕ್ಕೆ ಯಾವುದು ಸಾರಭೂತವಾದದ್ದು ಯಾವುದು ಅತಿ
ತಯವನ್ನು ಕೊಡತಕ್ಕದ್ದು ಯಾವುದರ ಸ್ಥಾನ ಎಲ್ಲೆಲ್ಲಿ ಎಂದು ನಿರ್ಧರಿಸಿ,
ಕಾವ್ಯಸಾಮ್ರಾಜ್ಯದ ಅನಾಯಕತ್ವವನ್ನು ಕೊನೆಗಾಣಿಸಿದ ಕೀರ್ತಿ
ಧ್ವನಿಪ್ರಸ್ಥಾನದವರಿಗೆ ಸಲ್ಲುತ್ತದೆ.
ಧ್ವನಿಪ್ರಸ್ವಾನವು ಬಂದು ಹಿಂದಿನ ಅಲಂಕಾರ ರೀತಿ ಮೊದಲಾದ
ಪ್ರಸ್ಮಾನಗಳನ್ನು ಮೂಲೆಗೊತ್ತಲಿಲ್ಲ; ಅವುಗಳ ಸಾರವನ್ನೆಲ್ಲಾ ಜೀರ್ಣಿಸಿ
ಕೊಂಡು ತನ್ನೊಳಗೇ ಸಮಾವೇಶಗೊಳಿಪಿತು. ಕಾವ್ಯದ ಆತ್ಮವು ವಸ್ತುತಃ
ರಸ. ಗುಣಗಳು ನಿಜವಾಗಿ ರಸದ ಧರ್ಮ ; ಅದ್ದರಿಂದ ಆಯಾ ರಸಕ್ಕೆ
ಉಚಿತವಾದ ಗುಣವನ್ನುಳ್ಳ ರಚನೆ ಕಾವ್ಯದಲ್ಲಿರಬೇಕು. ಅಲಂಕಾರಗಳು
ಕಾವ್ಯಶರೀರವಾದ ಶಬ್ಧ ವಾಚ್ಯಾರ್ಥಗಳನ್ನು ಅಲಂಕರಿಸಿ ಆ ಮೂಲಕ
10 ಉದಾಹರಣಿಗೆ, ದಂಡಿ ಈ ರೀತಿಯಾಗಿ ಪರ್ಯಾಯೋಕ್ತದ ಲಕ್ಷಣವನ್ನು ಹೇಳುತ್ತಾನೆ:
ಅರ್ಹಮಿಪ್ಟ್ಪಮನಾಖ್ಯಾಯ ಸಾಕ್ಷಾತ್ ತಸ್ಯೊಪ ಸಿದ್ಧಯೇ |
ಯತ್ ಪ್ರಕಾರಾಂತರಾಖ್ಯಾನಂ ಪರ್ಯಾಯೋಕ್ತಂ ತದಿಷೃತೇ ॥
(ಕಾವ್ಯಾ., 1. ೨೯೫)
11 "" ..ಸಾಭಿಪ್ರಾಯಶ್ಚಮನ್ಯ ಚೆ. '' (ಕಾವ್ಯಾಲಂಕಾರ ಸೂತ್ರ, i. ೨. ೨ ವೃತ್ತಿ)
೪. ಧ್ವನಿ ಪ್ರಸ್ಮಾನ ೫೦
ರಸಕ್ಕೆ ಪುಷ್ಟಿ ಕೊಡುತ್ತಪೆ.ಪೀಗೆಂದು ಧ್ಯನಿಪ್ರಸ್ಥಾನದವರು ನಿರೂಪಿಸಿ,
ತರಿ ಕರು ಎತ್ತಿ ಹಿಡಿದಿದ್ದ ಒಂದೊಂದು 'ಕಾವ್ಯಾಂಗವನ್ನೂ ಅದಕ್ಕದಃ ದಕ್ಕೆ
ತಕ್ಕ ಸ್ಥಾನದಲ್ಲ ನರೆಗೊಳಿಸಿದರು. ಹೀಗೆ ವ್ಯವಸ್ಥೆ ಸ್ಲೆಮಾಡುವಾಗ ಔಚಿತ್ಯ. 21
ge ಮುತ ೦ದು ತತ ಶ್ರೈವು ಸಹಜವಾಗಿ ತರೆಯೊ ತು ತು. ಅಲಂಕಾರ
ವಾಗಲಿ ಗುಣವಾಗಲಿ, ರಸದ ದೃಷ್ಟಿಯಿಂದ ಉಚಿತವಾದಾಗ ಸುಂದರ
ವಾಗುತ್ತದೆ, ಗ್ರಾಹ್ಯವಾಗುತ್ತದೆ; ಅನುಚಿತವಾಗಾಗ ತ್ಯಾಜ್ಯವಾಗುತ್ತದೆ.
ಎಂದರೆ ಅದರ ಸೊಗಸು ಸ್ವನಿಪ್ಠವಲ್ಲ, ರಸಾಷೇಕ್ಷಿಯಾದದ್ದು. ನಾವು
ಸಾಮಾನ್ಯವಾಗಿ ಸ್ ಭಾವಿಸುವುದು ಕೂಡ ರಸೋಚಿತವಾದಾಗ
ಸೂಪಾ ಪರಿಣಮಿಸುತ್ತ ದೆ.
ಹೀಗೆ ಧ್ವನಿಪ್ರಸ್ಥಾನದ ತತ್ತ್ವವನ್ನು ಮೂರು ಶಬ್ದಗಳಲ್ಲ ಅಡಕ
ಮಾಡಬಹುದು. ಕಾವ್ಯ ದ ಆತ್ಮ ರಸ; ಅದನ್ನು ಕಾವ್ಠ ಶರೀರವು ಅಭಿವ್ಯ ಕ್ರ
ಪಡಿಸುವ ಮಾರ್ಗ ದ ವ ಆತ್ರ ಸ್ವ ಶರೀರಗಳ ಹೊಂದಿಕೆಯೇ ಔಚಿತ್ಯ. ರಸ”
ಧ್ವನಿ ಔಚಿತ್ಯ: : ಇದೇ ಕಾವ್ಯ ಗಾಯತ್ರಿ. ಜಾತಾ
ಕಾವ್ಯದ ಹೃದಯವನ್ನು ಹೀಗೆ ತೆರೆದಿಟ್ಟು, ಸಂಸ್ಕೃತದ ಕಾವ್ಯ
ಮಾಮಾಂಸೆಯಲ್ಲಿ ಇಷ್ಟು ಪ್ರಧಾನ ಸ್ಥಾನವನ್ನು ಗಳಿಸಿಕೊಂಡ ಧ್ಯನಿ
ಪ್ರಸ್ಥಾನಕ್ಕೆ ಆಕರ ಯಾವುದು? ಶುಪ್ಕರೆಂಬ ಅಪಪ್ರಥೆಗೆ ಒಳಗಾಗಿರುವ
ಷೈಯಾಕರಣರ ಸ್ಫೋಟವಾದವು ಈ ಕಾವ್ಯಮಹಾತತ್ತ ಕ್ಕೆ ಸ್ಫೂರ್ತಿ
ಯನ್ನೊ ದಗಿಸಿತೆಂದರೆ. ಆಶ್ಚರ್ಯವಾಗಬಹುದು. ಆದರೆ ಈ ವಿಷಯದಲ್ಲಿ
ಸಂಶಯಕ್ಕೆ ಆ ಅವಕಾಶವಿಲ್ಲದಂತೆ | "ಧ್ವನ್ಯಾಲೋಕ 'ದಲ್ಲಿ ಆನಂದವರ್ಧ
ನನು "" ಪರಿನಿಶ್ಚಿತನಿರಪಭ್ರ೦ಶಶಬ್ಧಬ್ರಹ್ಮಣಾ೦ ವಿಪಶ್ಚಿ ತಾಂ ಮತಮಾತ್ರಿ
ಶೈವ ಪ್ರವೃತ್ತೋಟ ಯಂ ಧ್ವನಿವ್ಯವಹಾರ ಇತಿ ತೈಃ ಸಹ ಕಿಂ ವಿರೋಧಾ
ವಿರೋಧೌ ಚಿಂತೆ ಕೇತ " ಎಂದು ಸ್ಪಪ್ಪವಾಗಿ ಹೇಳಿ, ವೈಯಾಕರಣರಲ್ಲಿ
ಭೆಯಥಕ್ತಿಗಳನ್ನು. ಪ್ರದರ್ಶಿಸುತ್ತಾನೆ. ಸಕಾರ ಸ್ಫೋಟವಾದವನ್ನು
12 * ನಿತ್ಯವಾದ ತಬ್ದಬ್ರಹ್ಮವನ್ನು ನಿಶ್ಚಯಿಸಿ ಅರಿತಿರುವ ವಿದ್ವಾಂಸರ ಮತವನ್ನು
ಅವಲಂಬಿಸಿಯೇ ಈ ಧ್ವನಿವ್ಯವಹಾರವು ಹೊರಟರುವುದು. ಹೀಗಿರುವಾಗ, ಅವರೊಂದಿಗೆ
[=ವ್ಯೈಯಾಕರಣರೊಂದಿಗೆ] ವಿರೋಧಾವಿರೋಥ'ಗಳನ್ನು ಬಗೆಯುವುದಾದರೂ ಉಂಟೆ |''
(ಧ್ರನ್ಯಾ., ಪು. ೧೯೯). ಧ್ವನ್ಯಾಲೋಕದ ೪೭ನೆಯ ಪುಟದಲ್ಲ ಬಂದಿರುಪ "" ಪ್ರಥಮೇ
ಹಿ ವಿದ್ಯಾಂಸೋ ಮೈಯಾಕರಣಾಃ. '' ಈ ಮೊದಲಾದ ವಾಕ್ಯಗಳನ್ನೂ ನೋಡಿ.
4-B.
೫೨ ಭಾರತೀಯ ಕಾವ್ಯವಿಾಮಾಂಸೆ
ಆತಿಸಂಗ್ರಹವಾಗಿ ಸೂಚಿಸಿ,'' ಅದರಿಂದ ಧ್ವನಿಪ್ರಸ್ಕಾನದವರು ಎಪ್ಪು
ಮಟ್ಟಿನ ಸ್ಫೂರ್ತಿಯನ್ನು ಪಡೆದಿದ್ದಾರೆಂಬುದನ್ನು ಕುರಿತು ಎರಡು ಮಾತು
ಹೇಳದಿದ್ದರೆ ನಮ್ಮ ನಿರೂಪಣೆ ಅಸಮಗ್ರವಾಗುತ್ತದೆ.
[ಪದವು ವರ್ಣಗಳಿಂದ ಕೂಡಿರುತ್ತದೆ. ಉಚ್ಛಾರಮಾಡುವಾಗ
ಒಂದು ವರ್ಣವಾದ ಮೇಲೆ ತಾನೆ ಇನ್ನೊಂದು ಬರುವುದು. ಮುಂದಿನದು
ಕಿವಿಗೆ ಬೀಳುವಪ್ಪರಲ್ಲಿ ಹಿಂದಿನದು ಲಯವಾಗಿರುತ್ತದೆ. ಅಂತೂ ಏಕಕಾಲ
ದಲ್ಲಿ ಪದದ ಎಲ್ಲ ವರ್ಣಗಳೂ ಅರಿವಾಗುವುದು ಅಸಂಭವ. ಪೀಗೆ ಕ್ಷಣಿಕ
ವಾದ ವರ್ಣಗಳು ಪದಗಳಾಗಿ ವಾಕ್ಯಗಳಾಗಿ ಕೂಡಿ ಇವುಗಳಿಂದ ಅರ್ಥ
ಗ್ರಹಣವಾಗುವುದು ಹೇಗೆ ಎನ್ನುವುದೇ ಸಮಸ್ಯೆ. ಇದಕ್ಕೆ ಉತ್ತರವನ್ನು
ವೈಯಾಕರಣರು ಹೀಗೆ ಕೊಡುತ್ತಾರೆ: ಅರ್ಥವು ನಮಗೆ ಗೊತ್ತಾಗುವುದು
ಕ್ಷಣಕವಾದ ವರ್ಣಗಳಿಂದಲ್ಲ, ನಿತ್ಯವೂ ಅಖಂಡವೂ ಆದ "ಸ್ಫೋಟ'
ತತ್ತ್ವದಿಂದ. ಅರ್ಥವನ್ನು ಸ್ಫುಟಪಡಿಸತಕ್ಕದ್ದಾದ ಕಾರಣದಿಂದಲೇ ಇದಕ್ಕೆ
ಸ್ಫೊ €ಟವೆಂದು ಹೆಸರು. ಪದವಾಕ್ಕಾದಿಗಳಲ್ಲರುವ ವರ್ಣಗಳು ಈ
ಸ್ಫೋಟವನ್ನು ಅಭಿವ್ಯಂಜಿಸುತ್ತವೆ. ಉದಾಹರಣಿಗೆ, " ಹಸು' ಎಂಬ ಪದ
ವನ್ನು ತೆಗೆದುಕೊಳ್ಳೋಣ. "ಹ್-ಅ-ಸ್-ಉ' ಎಂಬ ಇದರ ನಾಲ್ಕು ವರ್ಣ
ಗಳಲ್ಲ ಒಂದೊಂದೂ ಉಚ್ಚರಿಸಿದ ಕೂಡಲೆ ಲಯವಾಗುವುದು ನಿಜ.
ಆದರೆ, ಶ್ರೋತ್ಸವಿನ ಬುದ್ಧಿ ಯಲ್ಲಿ ಆಯಾ ವರ್ಣವನ್ನು ಕೇಳಿದ ಸಂಸ್ಕಾರ
ಉಳಿದಿರುತ್ತದೆ. "ಉ' ಎಂಬ ಕೊನೆಯ ಧ್ವನಿ ಕಿವಿಗೆ ಬಿದ್ದಾಗ ಅದರ
ಅನುಭವವು ಪಿಂದಿನ ಧ್ವನಿಗಳ ಅನುಭವಸಂಸ್ಕಾರದ ಸಹಾಯದಿಂದ ಹಸು
ಏಂಬ ಪದದ ಸ್ಫೋಟವನ್ನು ವ್ಯಕ್ತಪಡಿಸುತ್ತದೆ; ಈ ಸ್ಫೋಟದಿ೦ದ ಅರ್ಥ
ಜ್ಞ್ಞಾನವುಂಟಾಗುತ್ತದೆ. ಈ ವಿಧಾನವನ್ನು ವಿಶದಪಡಿಸಲು ಒಂದು ನಿದ
ರ್ಶನ ಕೊಡುವುದುಂಟು. ಪದ್ಯ ಗಟ್ಟಿ ಮಾಡುವವನನ್ನು ನೋಡಿ. ಅವನು
ಆ ಪದ್ಯವನ್ನು ಒಂದು ಸಲ ಹೇಳುತ್ತಾನೆ, ಅದು ಬಾಯಿಗೆ ಬರುವುದಿಲ್ಲ:
ಎರಡುಸಲ ನಾಲ್ಕು ಸಲ್ಲ ಹತ್ತು ಸಲ ಹೀಗೆ ಸಂದರ್ಭವಿದ್ದಂತೆ ಪುನರಾವೃತ್ತಿ
13 ಸ್ಫೋಟವಣದವು ತು.ಬ ಗಹನವಾದದ್ದು ; ಅದನ್ನು ಒಪ್ಪತಕ್ಕವರಲ್ಲೇ ಅಲ್ಲಲ್ಲ
ಭಿನ್ಮಾಭಿಪ್ರಾಯಗಳುಂಟು. ಐದೆಲ್ಲದರ ಗೋಜಿಗೆ ಹೋಗದೆ, ಪ್ರಕ್ಕತಕ್ಕೆ ಅವಶ್ಯಕವಾದಪ್ಪನ್ನು
ಮಾತ್ರ ಇಲ್ಲಿ ಸಂಗ್ರಹಿಸಲಾಗಿದೆ. ಹೆಚ್ಚಿನ ವಿಷಯವನ್ನು ತಿಳಿಯುವ ಕ:ತೂಹಲವುಳ್ಳವರು
P. ©. Chakravarti: The Philosophy of Sanskrit Grammar ಉಂಬ
ಗ್ರಂಥದಲ್ಲಿ Theory 0! Sphota’ ಎಂಬ ಪ್ರಕರಣವನ್ನು ಓದಬಹುದು. ಭರ್ತ್ನೃ
ಹರಿಯ " ವಾಕ್ಯಪದೀಯ'ವು ಸ್ಫೋಟವಾದಕ್ಕೆ ಒಂದು ಅಕರಗ್ರಂಥ.
೪. ಧ್ವನಿ ಪ್ರಸ್ಕಾನ ೫೩
ಮಾಡಿದೆ ಮೇಲೆ ಕಡೆಯ ಪುರಶ್ಚರಣಿಯ ವೇಳೆಯಲ್ಲಿ ಹಿಂದಿನ ಸಂಸ್ಕಾರ
ಗಳೂ ಸಹಕರಿಸಿ ಅದು ಸರಿಯಾಗಿ ಕೆಂಠಸ್ಪ ಧೈವಾಗತ್ತದೆ. ಸ್ಫೋಟವು
ಗೋಚರವಾಗುವುದೂ ಹೀಗೆಯೇ. ಪದದ ಒಂದೊಂದು ವರ್ಣವೂ
ಒಂದೊಂದು ಬಾರಿ ಅದನ್ನು ಪ್ರಕಾಶಪಡಿಸುತ್ತದೆ; ಆದರೆ ಆ ಪ್ರಕಾಶ
ಸಾಲದು. ಕೊನೆಯ ವರ್ಣವನ್ನೂ ಉಚ್ಚರಿಸಿದ ಹೊರತು ಸ್ಫೋಟದ
ಪೂರ್ಣಜ್ಞಾ ನವಾಗುವುದಿಲ್ಲ. ಅದು ಆದಕೂಡಲೆ ಅರ್ಥ ಸ: ಸರಿಸುತ್ತ ದೆ.)
ಪೈಯಾಕರಣರು ಎಷ್ಟು ಚಾತುರ್ಯದಿಂದ ುಂದ ನಿರೂಪಿಸಿದರೂ ಸ್ಫೋಟ
ವಾದಕ್ಕೆ ದಕ್ಕೆ ಇತರ ದಾರ್ಶನಿಕರು ಪುರಸ್ಕಾ ರತೊಡಲಿಲ್ಲ. ಪದಕ್ಕೂ ಅರ್ಹಕ್ಕೂ
ನಡುವೆ ಇ ಈ ಅಡ್ಡ ್ನಗೋಡೆಯೇಕೆ ? ಮತೆ ಉಕ್ತ ವಾದ ಕ್ರ ಮದಲ್ಲ ಪದದ
ವರ್ಣಗಳೇ ನೇರವಾಗಿ ಅರ್ಥವನ್ನು ಪ್ರಕಾಶಪೆಡಿಸುಪುವೆಂದು ಏಕೆ ಹೇಳೆ
ಬಾರದು? ಹ್ಫೋಟವೆಂಬ ಈ ವಿಲಕ್ಷಣತತ್ತ್ವ ಯಾರ ಅನುಭವಕ್ಕೆ
ಬಂದಿದೆ! ಈ ಮೊದಲಾದ ಆಕ್ಷೇಪಣಿಗಳು ವಿಪುಲವಾಗಿ ಎದ್ದು ವು. ದಾರ್ಶ
ನಿಕರ ಖಂಡನೆಯಿರಲಿ. ಭ್ಹಾಮಹನಂಥ ಆಲಂಕಾರಿಕನೇ ಹೀಗೆ ತೀಕ್ಷ್ಣವಾಗಿ
ಬರೆಯುತ್ತಾವೆ :
`` ಶಪಥೈರಪಿ ಚಾದೇಯಂ ವಚೋ ನ ಸ್ಪೋಟವಾದಿನಾಂ |
ನಭಃಕುಸುಮಮಸ್ತೀತಿ ಶ್ರದ್ದಧ್ಯಾತ" ಕಃ ಸಚೇತನಃ | ''
ಸ್ಫೋಟವಾದವು ಹೀಗೆ ಅದೃಷ್ಟಪೀನವಾಗಿ ಹಿಂದೆ ಬಿದ್ದರೂ, ಧ್ಯನಿ
ತತ್ತ್ವದಲ್ಲಿ ಅದರ ಕೆಲವು ಸಂಜ್ಞೆಗಳೂ ಅಭಿಪ್ರಾಯಗಳೂ ನೂತನಜನ್ಮ
ಪೆತ್ತಿದುಪೆಂಬುದರಲ್ಲಿ ಸಂಶಯವಿಲ್ಲ. ಮೊದಲಿಗೆ, “ಧ್ವನಿ'ಯೆಂಬ ಶಬ್ದವೇ
ಇಲ್ಲಂದ ಬಂದದ್ದು; ವ್ಯಂಗ್ಯ-ವ್ಯ೦ಜಕ ಸಂಬಂಧವೂ ಇಲ್ಲಿಯದೇ. ಉಚ್ಚರಿತ
ವಾಗಿ ಕಿವಿಗೆ ಬೀಳುವ ವರ್ಣಕ್ಕೆ ಧ್ಯನಿಯೆಂದು ಹೆಸರು; ಈ ಧ್ವನಿ
ಸ್ಫೋಟಕ್ಕೆ ವ್ಯಂಜಕವಾಗುತ್ತದೆ. ನಮ್ಮ ಧ್ವನಿಪ್ರಸ್ಕಾನದವರು ಈ 'ಧ್ವವಿ'
ಯೆಂಬ ಹೆಸರನ್ನು ಕಾವ್ಯದಲ್ಲಿ ವ್ಯಂಜಕವಾದ ತಬ್ನಾರ್ಥಗಳಿಗೆ ಕೊಟ್ಟರು;
ಅಪ್ಪಕ್ಕೇ ನಿಲ್ಲದೆ, ಈ , ವೈಂಜಕಗಳಿಂದ ಹೊರಡುವ ವ್ಯಂಗ್ಯಾರ್ಥವನ್ನೂ
ಧ್ವನಿಯೆಂದು ಕರೆದರು. ಬರುಬರುತ್ತಾ ವ್ಯಂಗ್ಯಕ್ಕೇ ಈ ಹೆಸರು ರೂಢಿ
ಯಾಯಿತು; ವ್ಯಂಜಕಕ್ಕೆ ಬಲುಮಟ್ಟಿಗೆ ತಪ್ಪಿ ಹೋಯಿತು. ಇನ್ನು, ಸ್ಭೊ ಟ
14 ಸ್ಫೋಟವಾದಿಗಳು ಶಪಥಮಾಡಿ ಹೇಳಿದರೂ ಅನರ ಮಾತುಗಳನ್ನು ಒಪ್ಪಲಾ
ಗದು , ಆಕಾಶಕುಸುಮವಂಚೆಂದು ಯಾವ ವಿವೇಕಿ ತಾನೆ ನಂಬಿಯಾನು ?''
(ಕಾವ್ಯಾಲಂಕಾರ, 11. ೧೨)
೫೪ ಭಾರತೀಯ ಕಾವ್ಯಮಾಮಾಂಸೆ
ವಾದದ ಮೇರೆಗೆ ಸ್ಫೋಟವೇ ನಿಜವಾಗಿ ಶಬ್ದ; ಅದೇ ಮುಖ್ಯ ತತ್ತ್ವ
ವರ್ಣಗಳು ಅದರ ಅಭಿವ್ಯಕ್ತಿಗಾಗಿ ನಾವು ಆಶ್ರಯಿಸುವ ಸಾಧನ ಮಾತ್ರ.
ಕಾವ್ಯದಲ್ಲಿ ಧ್ವನಿಗೂ ಅದರ ವ್ಯಂಜಕಗಳಾದ ಶಬ್ಬಾರ್ಥಗಳಿಗೂ ಇರುವ
ಸಂಬಂಧ ಇದನ್ನು ಎಪ್ಪು ಚೆನ್ನಾಗಿ ಹೋಲುತ್ತದೆ!
ಇಷ್ಟು ಹೇಳಿದ ಮೇಲೆ ಈ ಮಾತನ್ನೂ ಹೇಳಬೇಕು: ಸ್ಫೋಟ
ಎಲು ಸ
ವಾದದಲ್ಲಿ ಕಾವ್ಯಮಾಮಾಂಸೆ ಸೆಗೆ ಅನ್ಯಯಿಸುವಂತೆ ದೊರೆತದ್ದು ಒಂದೆರಡು
ಸೂಚನೆಗಳು. ಒಂದೆರಡು ಪಾರಿಭಾಷಿಕ ಶಬ್ದಗಳು. ಅಕ್ಷಯ ಪಾತ್ರೆ ಯೊಳಗೆ
ಅಂಟಿಕೊಂಡಿದ್ದ ಒಂದೆರಡು. ಅಹಾರತಣದಂತೆ' ತೋರುವ ಈ ಅಲ್ಪ
ಸೂಚನೆಗಳನ್ನು. ತನ್ನ ಪ್ರಜ್ಞಾ ಬಲದಿಂದ ಬೆಳಸಿ ಅಭಿನವಗೊಳಿಸಿ ಧ್ವನಿ
ತತ್ತ ತ್ರ್ನದ ದ ದಿವ್ಯಾ ಮೃ ತಡ. ಸಾಧಿಸಿದ ಮಹಿಮೆ 'ಧ್ಯನಿಪ್ರಸ ಸ್ಥಾ ನಕಾರನದು,
ಈ ಪ್ರ ಸ್ಥಾನದ ಆದಿಗ್ರಂಥವೂ ಆಧಾರಸ್ತ೦ಭವೂ ಆಗಿರುವ
"ಧ್ವನ್ಯಾಲೋಕ'ದ ಕಡೆಗೆ ಇನ್ನು ತಿರುಗೋಣ. ಈ ಕೃತಿಗೆ "ಕಾವ್ಯಾ
ಲೋಕ', "ಸಹೃದಯಾಲೋಕ' ಎಂಬ ಹೆಸರುಗಳೂ ಉಂಟು. ಇದರಲ್ಲಿ
ಮೂಲಭಾಗವು ಕಾರಿಕೆಗಳ ರೂಪದಲ್ಲಿಯೂ, ಅದರ ಮೇಲಿನ ವೃತ್ತಿ ಗದ್ಯ
ದಲ್ಲಿಯೂ ಇವೆ; ವೃತಿ ಶಿ, ಯಲ್ಲಿ, ಉಕ್ತವಿಷಯವನ್ನು ಸಂಗ್ರಪಿಸಲು, ನಿರೂ
ಪಣಿಗೆ ಪುಷ್ಟಿ ತೊಡು ಅಲ್ಲಲ್ಲೆ ಕ ಪರಿಕರಶೊ ್ಲೀಕಗಳೂ ಬಂದಿರುವುದುಂಟು.
ಗ್ರಂಥದ ವೃತಿ ತ್ರಿಭಾಗವನ್ನು ರಚಿಸಿದವನು ಆನಂದವರ್ಥನನೆಂಬುದು
ನಾವದ ಸಂಗತಿ; "ವೃತ್ತಿಯ ಸಮಾಪ್ತಿ ಪದ್ಯದಲ್ಲಿಯೇ * ಅದು
ಸ್ಭು ಟವಾಗಿ ಉಕ್ತವಾಗಿದೆ. ಆದರೆ, ಆನಂದವರ್ಥನನು ಕಾರಿಕಾ
ಭಾಗವನ್ನೂ ತಾನೇ ಬರೆದನೇ, ಅಥವಾ ತನಗಿಂತ ಹಿಂದೆಯೇ ರಚಿತವಾಗಿ
ದೊರೆತ ಗ್ರಂಥವನ್ನು ಉಪಯೋಗಿಸಿಕೊಂಡನೇ ಎಂಬ ವಿಷಯದಲ್ಲಿ
ತುಂಬ ಚರ್ಚೆ ನಡೆದಿದೆ. ಪೀಗೆ ಸಂದೇಹ ಬರುವುದಕ್ಕೆ ಮುಖ್ಯ ವಾದ
ಆಧಾರವೆಂದರೆ ಧ್ಯನ್ಯಾಲೋಕದ ಪ್ರಸಿದ್ಧ ವ್ಯಾಖ್ಯಾನಕಾರನಾದ fs
15 ಸತ್ಕಾವ್ಯತತ್ತ್ಯವಿಷಯಂ ಸ್ಬುರಿತಪ್ರಸುಪ್ತ.
ಕಲ್ಪಂ ಮನಸ್ಸು ಪರಿಪಕ್ಚಧಿಯಾಂ ಯದಾಸೀತ" |
ತದ್ದ್ಯಾಕರೋತ್ ಸಹ್ಮದಯೋದಯಲಾಭಹೇತೋ-
ರಾನಂದವರ್ಥನ ಇತಿ ಪ kei ॥ (ಧ್ವನ್ಯಾ., ಪು. ೨೪೬)
'" ಸತ್ಕಾವೃತತ್ತ್ವನಯವರ್ತ್ಮ ಚಿರಪುಸುಪ್ತಕಲ್ಪಂ-..'' ಎಂಬ ಪಾಠಾಂತರವುಂಟು;
ಐದನ್ನು ಅಭಿನವಗುಪ್ತನು ಉದ್ದರಿಸಿದ್ದಾನೆ (ಲೋಚನ, iv, ಪು. ೪೧).
೪. ಧೃನಿ ಪ್ರಸ್ಥಾನ ೫೫
ಗುಪ್ತನ ಮಾತುಗಳು. ಕಾರಿಕಾಕಾರನೇ ಬೇರೆ ವೃತ್ತಿಕಾರನೇ ಬೇರೆ ಎಂಬ
ಅಭಿಪ್ರಾಯ ಬರುವಂತೆ ಅಭಿನವಗುಪ್ತನು ತನ್ನ ವ್ಯಾಖ್ಯಾನದಲ್ಲಿ ಕೆಲವು
ಕಡೆ ಬರೆದಿದ್ದಾನೆ. ಇವುಗಳಲ್ಲಿ ಅತಿ ಮುಖ್ಯವಾದ ಒಂದನ್ನು ಇಲ್ಲ ಸೂಚಿಸ
ಬಹುದು: ವಸ್ತು, ಅಲಂಕಾರ, ರಸ ಎಂದು ವ್ಯಂಗ್ಯಾರ್ಥವನ್ನು ಮೂರು
ವಿಧವಾಗಿ ವಿಂಗಡಿಸುವುದುಂಟಪೈೆ. `"ಈ ತ್ರಿವಿಧ ಭೇದವು ಕಾರಿಕಾ
ಕಾರನು ಮಾಡಿದ್ದಲ್ಲ; ಇದು ವೃತ್ತಿಕಾರನು ತೋರಿಸಿದ್ದು '''"-ಹೀಗೆಂದು
ಅಭಿನವಗುಪ್ತನ ಹೇಳಿಕೆ. ಆದರೆ, ಇಲ್ಲಿ ಹೀಗೆ ಭೇದವನ್ನು ಕಲ್ಪಿಸಿರುವ
ಅಭಿನವಗುಪ್ತನೇ ಭರತನ ನಾಟ್ಯತಾಸ್ತ್ರಕ್ಕೆ ತಾನು ಬರೆದಿರುವ ವ್ಯಾಖ್ಯಾನ
ದಲ್ಲಿ ಎರಡುಸಲ ಧ್ವನ್ಯಾಲೋಕದ ಹಾರಿಕೆಗಳನ್ನು ಆನಂದವರ್ಧನನ
ಹೆಸರಿನಲ್ಲೇ ಉದಾಹರಿಸಿ," ಆನಂದವರ್ಧನನೇ ಕಾರಿಕಾಕಾರನೆಂದು
ವ್ಯಕ್ತಪಡಿಸಿದ್ದಾನೆ. ಈ ಎರಡ್ಮು ಅಂಶಗಳಿಗೂ ಸಮನ್ವಯ ಮಾಡುವುದು
ಹೇಗೆ? ಅಭಿನವಗುಪ್ತನು ಹೊರತು ಮಿಕ್ಕ ಯಾವ ಪ್ರಾಚೀನಾಲಂಕಾರಿ
ಕರೂ ಭೇದವಾದಿಗಳಾಗಿರುವಂತೆ ತೋರುವುದಿಲ್ಲ.
ಇನ್ನೊಂದು ವಿಷಯ. ದೃನ್ಯಾಲೋಕದ ಮೊದಲನೆಯ ಕಾರಿಕೆ
ಹೀಗಿದೆ :
ಕಾವ್ಯಸ್ಯಾತ್ಮಾ 'ಧ್ವೈನಿರಿತಿ ಒುಧ್ಯೆರ್ಯಃ ಸಮಾಮ್ನಾ ತಪೂರ್ವ.
ಸ್ತಸ್ಯಾಭಾವ೦ ಜಗದುರಪರೇ ಭಾಕ್ತ ಮಾಹುಸ್ತಮನ್ಯೇ |
ಶೇಟಿದ್ವಾಚಾಂ ಸ್ಟಿತಮವಿಷಯೇ ತತ್ತ ಎಮೂಡುಸ್ಮಟ್ನೀಯಂ
ತೇನ ಬ್ರೂಮಃ ಸಹೃದಯಮನಃಪ್ರೀತಯೇ ತತ್‌ಸ್ವರೂಪಂ ॥
4 ಕಾವ್ಯದ ಆತ್ಮವು ಧ್ಯನಿಯೆಂದು ಯಾವುದನ್ನು ವಿದ್ಯಾಂಸರು ಹಿಂದಿ
ನಿಂದ ನಿರೂಪಿಸಿಕೊ೦ಡುಬ೦ದಿರುವರೋ, ಅದು ಇಲ್ಲವೆಂದು ಕೆಲವರ
ಹೇಳಿಕೆ; ಅದು ಲಕ್ಕಾರ್ಥದಲ್ಲೇ ಸೇರುವುಡೆಂದು ಮತ್ತೆ ಕೆಲವರ ಉಕ್ತಿ;
ಅದರ ತತ್ತ್ವವು ನುಡಿಗೆ ನಿಲುಕಡೆ೦ದು ಇನ್ನು ಕೆಲವರ ಮಾತು. ಆದಕಾರಣ
ಸಹೃದಯರಮನಸ್ಸನ್ನು ನಲಿಸಲು ಅದರ ಸ್ವರೂಪವನ್ನು ಹೇಳುತ್ತೇವೆ.”
ಇಲ್ಲಿ "" ಸಮಾಮ್ನಾತಪೂರ್ವಃ '' ಎ೦ದು ಮೂಲಕಾರಿಕೆಯಲ್ಲಿಯೇ ಬಂದಿರು
4 1 ಉದಾಹರಣಿಗೆ, ಪು. ೫೯, ಓ೦, ೧೨೩, ೧೩೫, ೧೩೮ ಇತ್ಯಾದಿ.
ಗ “ಏತತ್ ತಾವತ್ ತಿ_ಭ್ಛೇದತ್ಚ೦ ನ ಕಾರಿಕಾಕಾರೇಣ ಕೃತಂ. ವೃತ್ತಿಕಾರೇಣ
ತು ದರ್ತಿತಂ..” (ಪು. ೧೨೩)
18 ಭರತನ ನಾಟ್ಯಶಾಸ್ತ್ರ, ಸಂ. 11, ಪು. ೨೨೯, ೨೯೯. ೩೦೦,
K 42 f1|
೫೬ ಭಾರತೀಯ ಕಾವ್ಯಮಾಮಾಂಸೆ
ವುದನ್ನು ಗಮನಿಸಬೇಕು; ಇದಕ್ಕೆ ವೃತ್ತಿಯಲ್ಲಿ "" ಪರಂಪರಯಾ ಸಮಾ
ಖ್ಯಾತಃ'' ಎಂದು ವಿವರಣ ಕೊಟ್ಟಿದೆ. ಇದರಿಂದ, ಧ್ಯನಿಕಾರಿಕೆಗಿಂತ
ಹಿಂದೆಯೇ ಈ ವಿಷಯವನ್ನು ಪ್ರತಿಪಾದಿಸುವ ಗ್ರಂಥಗಳೇನಾದರೂ ಹುಟ್ಟಿ
ದ್ದುವೋ ಅಂಬ ಸಂಶಯ ಹೊಳೆಯುತ್ತದೆ. ಆದರೆ, " ಅವಿಚ್ಛಿನ್ನೇನ
ಪ್ರವಾಹೇಣ ತೈರೇತದುಕ್ತಂ, ವಿನಾಪಿ ವಿಶಿಷ್ಟಪುಸ್ತಕೇಪು ವಿವೇಚನಾತ್
ಇತ್ಯಭಿಪ್ರಾಯಃ''1?---ಎ೦ಬ ಅಭಿನವಗುಪ್ತನ ವ್ಯಾಖ್ಯಾನವು ನಮ್ಮ
ಕುತೂಹಲದ ಕುಡಿಯನ್ನು ಅಲ್ಲಗೇ ಮುರಿಯುತ್ತದೆ.
ಇಲ್ಲಿ ಇನ್ನೊಂದು ಗಮನಾರ್ಹವಾದ ಸಂಗತಿಯುಂಟು. ಮೇಲಿನ
ಕಾರಿಕೆಗೆ ಆನಂದವರ್ಥನನು ವೃತ್ತಿಯನ್ನು ಬರೆಯುತ್ತಾ, ಧ್ಯನ್ಯಭಾವ
ವಾದಿಗಳ ಆಕ್ಷೇಪಣಿಯನ್ನು ಸಂಗ್ರಹಿಸುವಾಗ, ತಥಾ ಚ ಅನ್ಯೇನ ಕೃ ತ
ಏವಾತ್ರ ಶ್ಲೋಕಃ'' ಎ೦ಬ ಅವತಾರಿಕೆಯ್ಯೊಡನೆ,
«ಯಸ್ಮಿನ್ನಸ್ತ ನವನು ಕಿಂಚನ ಮನಃಪ್ರಹ್ನಾದಿ ಸಾಲಂಸ್ಯೃತಿ
ಪ್ಯತ್ತನ್ನೈೊ ರಚಿತಂ ಚ ನೈವ ವಚನೈರ್ವಕ್ರೋಕ್ಲಿಶೂರ್ಕಂ ಚ ಯತ್!
ಕಾವ್ಯಂ ತದ್ಧ ನನಾ ಸಮನ್ವಿತಮಿತಿ ಪ್ರೀತ್ಕಾ ಪ್ರಶಂಸನ್ ಜಡೋ
ಮೋ ವಿದ್ಮೊ ್ಮಭಿದಧಾತಿ ಕಿಂ ಸುಮತಿನಾ ಪೃಷ್ಟಃ ಸ್ವರೂಪಂ ಧ್ವವೇತ॥''3
ಎಂಬ ಪದ್ಯವನ್ನು ಉದಾಹರಿಸುತ್ತಾನೆ. ಈ ಪರಿಹಾಸಪದ್ಯವನ್ನು ಬರೆ
ದವನು "" ಗ್ರಂಥಕಾರನ ಸಮಕಾಲಿಕನೇ ಆದ ಮನೋರಥನೆಂಬ ಕವಿ''-!
ಎಂದು ಅಭಿನವಗುಪ್ತನ ವಿವರಣಿ. ಕಲ್ಹಣನ ರಾಜತರಂಗಿಣಿಯಲ್ಲಿ ಮನೋ
1 " ವಿಶಿಷ್ಟ ಪುಸ್ತಕಗಳಲ್ಲಿ [ಬರೆದು] ವಿಚಾರಮಾಡಿಲ್ಲದಿದ್ದರೂ ನಿರಂತರವಾದ
ಪ್ರವಾಹರೂಪದಲ್ಲ [ಪಾರಂಪರ್ಯವಾಗಿ] ಅವರು ಐದನ್ನು ಹೇಳಿದ್ದಾರೆ ಎಂದು ಅಭಿಸ್ರಾಯ.''
(ಧನ್ಯಾ. ಲೋಚನ, ಪು. ೩)
20. "ಅಲ್ಲದೆ ಈ ವಿಷಯದಲ್ಲಿ ಬೇರೊಬ್ಬನು ಕಟ್ಟಿರುವ ಶ್ಲೋಕವೇ ಉಂಟು.
ಯಾವುದರಲ್ಲಿ ಮನಸ್ಸಿಗೆ ಅಹ್ನಾದಕೊಡುವ ಅಲಂಕಾರಸುಪನ್ನವಾದ ವಸ್ತು ಎಳ್ಳಷ್ಟೂ
ಇಲ್ಲವೋ, ಯಾವುವನ್ನು ಸುಸ್ಮುಶಬ್ಬಗಳಿಂದ ರಚಿಸಿಲ್ಲವೋ, ಯಾವುದರಲ್ಲಿ ವಕ್ರೋಕ್ತಿಯ
ಸುಳಿವೇ ಇಲ್ಲವೋ, ಅ ಕಾವ್ಯವು ಧೃನಿಸಮನ್ಸಿತವೆಂದು ಮೆಚ್ಚಿ ಹೊಗಳುವ ಮಂಕನನ್ನು
ಧ್ವನಿಸ್ಟರೂಪವನೆಂದು ಬುದ್ಧಿಶಾಲಿ ಕೇಳಿದಾಗ ಏನು ಉತ್ತರ ಹೇಳುವನೋ ನಾವ
ರಿಯೆವು !'' (ಧೃನ್ಯಾ., ಪು. ೮-೯)
೫ “ಗ್ರಂಥೆತೃತ್ಸಮಾನಸಾಲಭಾವಿಮೈೈವ ಮನೋರಥನಾಮ್ಮಾ ಕವಿನಾ'' (ಧ್ವನ್ಯಾ.
ಲೋಚನ, ಮದರಾಸು ಸಂಸ್ಮರಣ, ಪು. ೫೯). ನಿರ್ಣಯಸಾಗರ ಮುದ್ರಣಾಲಯದ ಸಂಸ್ಕ
ರಣದಲ್ಲಿ ""--ಕಾಲಭಾವಿನಾ '' ಎ೦ದು ಪಾಠವಿದೆ (ಪು. ೮). ಆದರೆ ""-.- ಕಾಲಭಾವಿನೈೈವ ''
ಎಂಬ ಪಾಠಕ್ಕೇ ಮಾತೃಕೆಗಳ ಬೆಂಬಲ ಹೆಚ್ಚು.
೪. ಧ್ವನಿ ಪ್ರಸ್ಥಾನ ೫೭
ರಥನೆಂಬ ಕವಿಯ ಹೆಸರು ದೊರೆಯುತ್ತದೆ; ಮೇಲನ ಪದ್ಯಕಾರನು ಈ
ಮನೋರಥನೇ ಆಗಿದ್ದ ಪಕ್ಷದಲ್ಲಿ ಇವನು ಆನಂದವರ್ಧನನ ಸಮಕಾಲಿಕ
ನಾಗುವುದು ಕಪ್ಪ; ಅವನಿಗಿಂತ ಒಂದು ತಲೆ ಪಿಂದಿನವನಾಗಜೇಕಾಗು
ತ್ಮದೆ.೫ ಅಭಿನವಗುಪ್ತನೇ ಇಲ್ಲ ತಪ್ಪು ಮಾಡಿರಬಹುದೆ? ಈ ಮನೋ
ರಥನು ಮೂಲಕಾರಿಕಾಕಾರನನ್ನು ಕುರಿತೇ ಹಾಸ್ಯಮಾಡಿರಬಹುದೆ?
ಇಲ್ಲವೇ ಇವನು ಟೀರೊಬ್ಬ ಮನೋರಥನೋ?
ಇತ್ತ, ಮುಕುಲಭಟ್ಟನು (ಕ್ರಿ. ತ. ಸು. ೯೦೦) "ಅಭಿಧಾವೃತ್ತಿ
ಮಾತೃಕೆ 'ಯಲ್ಲ "ಧ್ವನಿ ಸಹೃದಯರಿಂದ ನೂತನವಾಗಿ ಉಪವರ್ಣತ
ವಾಗಿದೆ ''ಯೆ೦ದು ಹೇಳುತ್ತಾನೆ. ಈ ಮುಕುಲನ ತಂದೆ ಕಲ್ಲಟನು
ಅನಂದವರ್ಧನನಂತೆಯೇ ಕಾತ್ಮೀರದೇಶದ ಅವಂತಿವರ್ಮನ ಕಾಲದಲ್ಲ
(ಕ್ರಿ. ಶ. ೮೫೫.೮೮೩) ಇದ್ದವನು.
ಹೀಗೆ ಸಮಸ್ಯೆ ಜಟಿಲವಾಗಿದೆ. ಕಾರಿಕಾಕಾರನೂ ಆನಂದವರ್ಧ
ನನೂ ಭಿನ್ನವ್ಯಕ್ತಿಗಳೆಂದು ಕೆಲವರು ವಿದಾಂಸರು ವಾದಿಸಿದರೆ, ಅಷ್ಟೇ
ದೃಢವಾಗಿ ಇಬ್ಬರಿಗೂ ಅದ್ವೈತವನ್ನು ಪ್ರತಿಪಾದಿಸತಕ್ಕವರೂ ಇದ್ದಾರೆ.*
ಈ ವಿಷಯದಲ್ಲಿ ಅಚಾಲ್ಯವಾದ ನಿರ್ಣಯವನ್ನು ಮಾಡಲು ಹೆಚ್ಚಿನ ಆಧಾರ
3 ಗಾಜತರಂಗಿಣ್ಣೀ ೫. ೪೯೭. ಈ ಪದ್ಯವನ್ನು ನಮ್ಮ ಗ್ರಂಥದ ೩ನೆಯ ಅಧಾ
ಯದ 16ನೆಖ: ಅಡಿಟಪ್ಪಣಿಯಲ್ಲಿ ಉದಹರಿಸಿದೆ. ಕಾಪ್ಮೀರದೇಶದೆ ಜಯಾಪೀಡನ ಆಸ್ಥಾನ
ದಲ್ಲಿ ಮನೋರಥನು ಕವಿಯಾಗಿದ್ದನೆಂದೂ, ಆವನು ವಾಮನನ ಸಮಕಾಲಿಕನೆಂದೂ ಇಲ್ಲ
ಗೊತ್ತಾಗುತ್ತದೆ ; ಬಹುಶಃ ಇದೇ ಮನ್ನೋರಥನೇ ಲಲತಾಪೀಡನ (ಐವನ ಕಾಲ ಕ್ರಿ. ಶೆ. ಸು.
೮೦೭ರಿಂದ ಮುಂದಕ್ಕೆ) ಮಂತ್ರಿಯಾಗಿದ್ದಂತೆಯೂ ರಾಜತರಂಗಿಣಿಯಿಂದಲೇ ತಿಳಿಯಬರು
ತ್ತದೆ. ಅ ಪಕ್ಷಕ್ಕೆ ಮನೋರಥನು ಒಂಬತ್ತನೆಯ ಶತಮಾನದ ಮೊದಲನೆಯ ಪಾದೆದಲ್ಲಿ
ಜೀವಿಸಿದ್ದಿರಬೇಕು.
3 ಕಲ್ಲಣನು ಹೇಳುವ ಮನೋರಥನೂ ಅನಂದವರ್ಧನನೂ ಸಮಕಾಲೀನರಾಗು
ಪುದು ಅಸೆಂಭವವಲ್ಲವೆಂದು ಹೇಳುವವರೂ ಉಂಟು. T. R. Chintaman.
" Manoratha --A Poet (JORM, 11, 44-47) ನೋಡಿ.
೫“. ಲಕ್ಷಣಾಮಾರ್ಗಾವಗಾಪಿತ್ಯಂ ತು ಧ್ವನೇಃ ಸಹೃದಯ್ಯಾರ್ನೂತನ
ತಯಾ ಉಪವರ್ಣಿತಸ್ಯ ವಿದ್ಯತ ಇತಿ ದಿಶಮುನ್ಮೀಲಯಿತುಮಿದಮತ್ತೋಕ್ತಂ. ಏತಚ್ಚ
ವಿದೃದ್ಧಿಃ ಕುಶಾಗ್ರೀಯಯಾ ಬುದ್ಧ್ಯಾ ನಿರೂಪಣೀಯಂ. ' (ಅಭಿಧಾವೃತ್ತಿಮಾತ್ಮಕಾ,
ಪು. ೨೧)
233 ಖ. ವಿ. ಕಾಣೇ, ಎಸ್. ಕೆ. ದೇ ಮೊದಲಾದವರು ಭೇದವಾದಿಗಳು. ಎಸ್.
ಕುಪ್ಪುಸ್ನಾಮಿ ಶಾಸ್ತ್ರಿ, ಎ. ಶಂಕರನ್, ಕೆ. ಸಿ. ಪಾಂಡೇ ಮೊದಲಾದವರು ಅಭೇದ
ವಾದಿಗಳು.
೫೮ ಭಾರತೀಯ ಕಾಪ್ಯಮಾಮಾಂಸೆ
ಗಳು ದೊರೆತಲ್ಲದೆ ಸಾಧ್ಯವಿಲ್ಲ. ಒಂದುಷೇಳೆ ಧ್ವನಿಕಾರನೂ * ಆನಂದ
ವರ್ಧನನೂ ಬೇರೆ ಬೇರೆಯೆಂದೂ ಆನಂದವರ್ಥನನು ವೃತ್ತಿಭಾಗವನ್ನು
ಮಾತ್ರ ಬರೆದನೆಂದೂ ಒಪ್ಪಿ ಕೊಂಡರೂ, ಇವರಿಬ್ಬ ರಿಗೂ ಕಾಲದಲ್ಲಿ ಬಹಳ
ಅಂತರವುಂಟೆಂದು ಹೇಳುವಹಾಗಿಲ್ಲ. ಏಕೆಂದರೆ, ಕಾರಿಕಾಕಾರನಿಗೆ ಉದ್ಭಟನ
ಅಭಿಪ್ರಾಯಗಳು ತಿಳಿದಿದ್ದು ವೆ೦ದೂ, ಅವುಗಳ ಮೇರೆಗೆ ಹುಟ್ಟಬಹುದಾದ
ಆಕ್ಷೇಪಣಿಗಳಿಗೆ ಪ್ರತ್ಯುಕ್ತಿಯಾಗಿ ಕೆಲವು ಕಾರಿಕೆಗಳನ್ನು ಬರೆದನೆಂದೂ
ಹೇಳಲು ಅವಕಾತವಿದೆ.? ಜೊತೆಗೆ ಈ ಕಾರಿಕೆಯನ್ನೂ ಗಮನಿಸಬೇಕು:
ಅಸ್ಪಟಸ್ಸುರಿತಂ ಕಾವೃತೆತ್ತ ಪಎಮೇತದ್ಯಥೋದಿತಂ |
ಅಶಕ್ನವದ್ಬಿ ರ್ವ್ಯ್ಯಾಕರ್ತುು ರೀಕಯಃ ಸಂಪ್ರವರ್ತಿತಾಃ |
(ಧೃನ್ಯಾ » ni. AS)
"«ಈ ಧ್ವನಿಗ್ರ೦ಥದಲ್ಲ ಸರಿಯಾಗಿ ಹೇಳಿರುವ ಈ ಕಾವ್ಯತತ್ತ್ವವು ಮಸಕು
ಮಸಕಾಗಿ ಮಾತ್ರ ಹೊಳೆದದ್ದರಿಂದ ಅದನ್ನು ಸರಿಯಾಗಿ ವಿವರಿಸಖರ
ದವರು ರೀತಿಗಳನ್ನು ಪ್ರತಿಪಾದಿಸಿದರು''_ಎ೦ಬುದು ಇದರ ಅಭಿಪ್ರಾಯ.
ಇಲ್ಲಿ ""ರೀತಯಃ'' ಎಂದು ಬಹುವಚನಪ್ರಯೋಗವಿರುವುದರಿಂದ, ಕನಿಷ್ಠ
ಪಕ್ಷ ಮೂರು ರೀತಿಗಳಾದರೂ ಕಾರಿಕಾಕಾರನ ಮನಸ್ಸಿನಲ್ಲದ್ದಿ ರಜೇಕು;
"ರೀತಿ' ವಾದವನ್ನೂ ವೈದರ್ಭೀ ಗೌಡೀ ಪಾಂಚಾಲಿ ಎಂಬ ಮೂರು
ರೀತಿಗಳನ್ನೂ ನಮಗೆ ತಿಳಿದಮಟ್ಟಿಗೆ ಮೊದಲು ಪ್ರತಿಪಾದಿಸಿದವನು
ವಾಮನ. ಹೀಗೆ ಕಾರಿಕಾಕಾರನು ಉದ್ಭಟವಾಮನರಿಬ್ಬರ ಅಭಿಪ್ರಾಯ
ಗಳನ್ನೂ ಬಲ್ಲನು; ಆದಕಾರಣ ಕ್ರಿ.ಶ. ೮೦೦ ಕ್ಕೆ ಹಿಂದೆ ಇದ್ದಿ ರಲಾರನು.
ವೃತ್ತಿಕಾರನಾದ ಆನಂದವರ್ಧನನು, ಮೇಲೆಯೇ ಹೇಳಿರುವಂತೆ, ಅವಂತಿ
ವರ್ಮನ ಕಾಲದವನು. ಅಂತೂ ಒಂದುವೇಳೆ ಇಬ್ಬರೂ ಭಿನ್ನರಾದರೂ
ಇವರಿಗಿದ್ದಿರಬಹುದಾದ ಅಂತರ ಸುಮಾರು ಐವತ್ತು-ಅರುವತ್ತು ವರ್ಷ
ಗಳಿಗಿಂತ ಹೆಚ್ಚಾಗಿರಲಾರದು.*"
26 ಧ್ವನಿಕಾರಿಕೆಗಳನ್ನು ಬರೆದವನೇ ಬೇರೆ, ವೃತ್ತಿಕಾರನಾದ ಆನಂದವರ್ಥನನೇ
ಬೇರೆ--ಎಂದು ಹೇಳುವವರು ಕಾರಿಕಾಕಾರನನ್ನು " ಧ್ವನಿಕಾಶ'ನೆಂದು ನಿರ್ದೇಶಿಸುವುದು
ರೂಢಿಯಾಗಿದೆ.
“7 ಥೃನ್ಯಾ,, ಮದರಾಸು ಸಂಸ್ಕರಣ, ಪು. ೧೧ರಲ್ಲ " ಉಪಲೋಜನ'ವನ್ನು ನೋಡಿ.
3 ಪ್ರೊ. ಶಿವಪ್ರಸಾದ ಭಟ್ಟಾಚಾರ್ಯ ಎಂಬವರು ಈ ಸಮಸ್ಯೆಯನ್ನು ಪರಿಶೀಲಿಸುತ್ತಾ,
ಮೂಲತಃ ಧ್ವನಿಕಾರಿಕೆಗಳು ಒಟ್ಟು ೯೦ ಕ್ಕಿಂತ ಹೆಚ್ಚಾಗಿರಲಿಲ್ಲವೆಂದೂ, ಆನಂದವರ್ಧನನು
೪, ಧೃನಿ ಪ್ರಸ್ಥಾನ ೫೯
lk ಅತಿ gh ಈ ಚರ್ಚೆಯನ್ನು ಇಲ್ಲಿಗೆ
ನಿಲ್ಲಿಸಬಹುದು. ಪ್ರಕೃತ ಗ್ರಂಥದಲ್ಲಿ, ಇನ್ನು ಮುಂಡೆ ಇವರಿಬ್ಬರನ್ನೂ
ಜೀರ್ಪಡಿಸುವ ಲ "ಹೋಗದೆ, ತತ್ತ್ವತಃ ಅಲ್ಲದಿದ್ದರೆ ನಿರೂ
ಪಣಿಯ ಸೌಕರ್ಯಕ್ಕೋಸ್ಕರವಾದರೂ ಅಭೇದದೃಪ್ಪಿಯನ್ನು ಅವಲಂ
ಬಿಸಿ, ಆನಂದವರ್ಧನನ ಹೆಸರಿನಲ್ಲೇ ಧ್ವನ್ಯಾಲೋಕದ ಕಾರಿಕಾವೃತ್ತಿ
ಗಳೆರಡನ್ನೂ ಉದಾಹರಿಸಲಾಗುತ್ತದೆ. ಕಾರಿಕೆಗಳಲ್ಲಿ ದೊರೆಯುವುದು
ಧ್ಯನಿತತ್ತ್ಯದ ಮೂಲರೇಖೆ ಮಾತ್ರ. ವಿವರಣಿ, ವಿಸ್ತರಣ್, ಉದಾ
ಹರಣಿ, ವಿಮರ್ಶೆ ತಾಕಾ ಇದಕ್ಕೆ ಬಣ್ಣತುಂಬಿ ಪರಿಪೂರ್ಣ
ಚಿತ್ರವನ್ನು ರಚಿಸಿ ವಿದ್ಯತ್ಸ್ರಪ೦ಚದ ಕಣ್ಣನ್ನು ಸೆಳೆದವನು ಆನಂದವರ್ಧನ.
ಈತನಿಗೇ ಕಾರಿಕಾರಚನೆಯ ಕೀರ್ತಿಯೂ ಲಭಿಸಿದರೂ ಅದು ಅಷ್ಟು
ಅಸಂಗತವಲ್ಲ.
ಧ್ವನ್ಯಾಲೋಕಪು ಸಂಸ್ಕೃತ ಲಕ್ಷಣಸಾಪಿತ್ಯದಲ್ಲೆಲ್ಲಾ ಅತ್ಯಂತ
ಸ್ರಮುಖವೂ ಅಪೂರ್ವಗುಣಶೋವಿತವೂ ೬. ಗ ನ ಗ್ರಂಥ. ಹಿಂದಿನ ಆ ಆಲಂ
ಾರತರಂತ ಆನಂದವರ್ಥನನು ಇದರಲ್ಲಿ ಅಲಾರ, ಗುಣ, ದೋಷ
ಸೊದಲಾದವುಗಳ ಪಟ್ಟಿಯನ್ನು. ರಚಿಸುತ್ತಾ ಹೋಗಿಲ್ಲ. ಇವನ್ನೆಲ್ಲಾ
ಶಿಂದಿನ ಲಾಕ್ಷಣಿಕರು. ಆಶ ಬಹುವಿಧವಾಗಿ ನಿರೂಪಿಸಿದ್ದಾರೆ; ಆದ
ಕಾರಣ ಮತ್ತೆ ಇಲ್ಲ ವಿಸ್ತರಿಸದೆ ಅವರ ಅಭಿಪ್ರಾಯಗಳನ್ನು ಯಥೋಚತ
ಕಾಗಿ ಅನುವಾದಿಸಿಕೊಳ್ಳಲಾಗುತ್ತದೆ ಎಂದು ಪಾ ರಂಭದಲ್ಲೇ ಹೇಳಿ
ನಿಡುತ್ತಾನೆ. ಧ್ವನಿಯೆ೦ದರೇನು; ಕಾವ್ಯದಲ್ಲಿ ವ್ಯಂಜನಾವೃತ್ತಿಯೇ ಹೇಗೆ
ಕ್ರಮುಖವಾಗುತ್ತದೆ ; ಧ್ವನಿಪ್ರಭೇದಗಳು ಜತ ಪದದ ವರ್ಣ
ಸಳಿಂದ ಹಿಡಿದು ಒಟ್ಟು ಪ್ರಬಂಧದವರೆಗೆ ಒಂದೊಂದೂ ಹೇಗೆ ವ್ಯ೦ಜಕ
ಸಾಗಬಲ್ಲುದು; ವ್ಯಂಗ್ಯಾರ್ಥಕ್ಕೆ ಪ್ರಾಧಾನ್ಯವಿಲ್ಲದ ಗುಣೀಭೂತವ್ಯಂಗ್ಯ,
ಕ್ಯಂಗ್ಯಾರ್ಥವಿರಹಿತವಾದ ಚಿತ್ರ ಎಂಬ ಕಾವ್ಯಜಾತಿಗಳ ಸ್ವರೂಪಪೇನು,
ಸೊಸದಾಗಿ ಕೆಲವನ್ನು ರಚಿಸಿ ಅಲ್ಲಲ್ಲೇ ಪ್ರಕ್ಷೇಪಮಾಡಿರಬೇಕೆಂದೂ, ಮುಖ್ಯವಾಗಿ ನಾಲ್ಕ
ಯ ಉದ್ದೊ ೇತದಲ್ಲಿರುವ ಕಾರಿಕೆಗಳೆಲ್ಲವೂ ಈಚಿನವೇ ಎಂದೂ ಪಾದ ಹೂಡಿ, ಧ್ವನಿ
'ತ್ತ್ಯವು ಬಹಳ ಹಿಂದಿನದೆಂದೂ, ಬಾಣ, ದಂಡಿ ಮೊದಲಾದವರಿಗೆ ಕೂಡ ಇದರ ಮೂಲ
ೂಪ ತಿಳಿದಿದ್ದುದು ಅಸಂಭವವಲ್ಲವೆಂಥೂ ಸ್ಥಾಪಿಸಲು ಪ್ರಯತ್ನಿಸಿದ್ದಾರೆ. ("Dhvanyaloka
nd the Text of the Dbvanikarikas’, POC, VIL, pp. 613-622.)
'ಹ್ಲು ದೂರ ಊಹೆ ಮಾಡಲು ಅಧಾರ ಎಷ್ಟು ಮಾತ್ರಕ್ಕೂ ಸಾಲದೆಂದು ತೋರುತ್ತದೆ.
ಓಂ ಭಾರತೀಯ ಕಾವ್ಯಮಾಮಾಂಸೆ
ಸ್ಥಾನವೇನು; ಧೃನಿಮಾರ್ಗವನ್ನು ಆಶ್ರಯಿಸಿದರೆ ಕವಿಗೆ ಅರ್ಥದಾರಿದ್ರ್ಯ
ಹೇಗೆ ಉಂಟಾಗವುನ್ಯ ಪಾರಾನ ಇಾವ್ಯಾರ್ನನನ್ನು ಎಷ್ಟರ
ಮಟ್ಟಿಗೆ ಉಪಯೋಗಿಸಿಫೊಂಡರೆ ಚೋಸವಾಗುವುದ್ದ ಈ ಮೊದಲಾದ
ವಿಷಯಗಳ ನಿರೂಪಣಿ ಧ್ವನ್ಯಾಲೋಕದ ನಾಲ್ಕು ಉದ್ಧ್ಯೋತಗಳನ್ನು
ತುಂಬಿದೆ. ಇದಿಷ್ಟೂ ಗ್ರಂಥದ ಮೂಲಸೂತ್ರ ಮಾತ್ರ, ಇಲ್ಲಿ ಪ್ರಾಸಂಗಿಕ
ವಾಗಿಯೋ ನಿರೂಪಣೆಗೆ aS! ಬಂದು ಕಾವ್ಯ ರಹಸ್ಯ ವನ್ನು
ಬಯಲಿಗೆಳೆದು ಕೃತಿಯ ಸಾರವನ್ನು ಪುಪ್ಪಿಗೊಳಿಸುವ ಇನ್ನೆ ಜ| ಶ್ರ ಟು
ಗಳಿವೆ. ಅಲಂಕಾರಗಳ ಔಚಿತ್ಯನಿರ್ಣಯ, ರಸಡದೋಪದ ವಿಮರ್ಶೆ--ಇಂಥ
ಒಂದೆರಡನ್ನು ಮಾತ್ರ ದಿಗ್ಬರ್ಶನಕ್ಕಾಗಿ ಹೇಳಬಹುದು. "ಧ್ಯನ್ಯಾಲೋಕ'
ವನ್ನು ಮೊದಲ ಸಲ ಓದಿದಾಗ ಹೊಸದೊಂದು ಲೋಕವನ್ನೇ ಪ್ರವೇಶಿಸಿದ
ಅನುಭವವುಂಟಾಗುತ್ತದೆ. ಕಾರಿಕೆಗಳ ಬಿಗಿ, ವೃ ತ್ತಿಭಾಗದ ಖಚಿತವೂ
ತಲಸ್ಪರ್ತಿಯೂ ಆದ ನಿರೂಪಣಿ, ರಾಮಾಯಣ ಮಹಾಭಾರತಗಳಿಂದ
ಹಿಡಿದು ಪ್ರಾಕೃತಗಾಥೆಗಳವರೆಗೆ ಎಲ್ಲೆಲ್ಲೂ ಬಲೆಬೀಸಿ ಉದಾಹರಣಿಗಳನ್ನು
ಆರಿಸಿಕೊಂಡು ಪ್ರಕಾಶಪಡಿಸಿರುವ ರಸಜ್ಞತೆ-.ಇಷೆಲ್ಲವನ್ನೂ ಸಮಗ್ರವಾಗಿ
ಅರಿಯಲು ಮೂಲಗ್ರಂಥವನ್ನೇ ಪಠನಮಾಡಬೇಕು. ನಮ್ಮ ಪುಸ್ತಕದಲ್ಲಿ
ಧ್ಯನ್ಯಾಲೋಕದ ಪ್ರಭಾವವು ಹೆಜ್ಜೆಹೆಜ್ಜೆಗೂ ಕಾಣಬರುವುದರಿಂದಲೂ,
ಮುಂದೆ ಅನೇಕ ಪ್ರಕರಣಗಳಲ್ಲಿ ಅದರ ವಿಷಯದ ಸಾರವನ್ನು ಸಂಗ್ರಹಿ
ಸಿರುವುದರಿಂದಲೂ ಈ ಜಾಗದಲ್ಲಿ ಅದರ ಸೊಗಸಿಗೆ ನಿದರ್ಶನಗಳನ್ನು
ಕೊಡುವ ಕಾರ್ಯಕ್ಕೆ ಕೈಹಾಕಿಲ್ಲ.
ಧ್ಯನ್ನಾ ್ಯಾಲೋಕವನ್ನು ರಚಿಸುವುದರಲ್ಲಿ ಧ್ಯನಿತತ್ತ ಪಪ್ರತಿಪ್ಮಾಪನೆ
ಯೊಂದೇ ಆನಂದವರ್ಧನನ ಉದ್ದೆ ಶೇ ಶವಾಗಿರಲಿಲ್ಲ. ಕಾವ್ಯದಲ್ಲಿ ರಸವೇ
ಮುಖ್ಯ; ಅದನ್ನು ಗುರಿಯಾಗಿ ಇಟ್ಟುಕೊಂಡೇ ಕವಿಗಳು ಕಾವ್ಯರಚನೆ
ಮಾಡಬೇಕು ; ಇದರಲ್ಲಿ ಎಚ್ಚರ ತಪ್ಪ ಬಾರದು ಎಂದು ಅವನು ಸಾರಿ
ಸಾರಿ ಹೇಳುತ್ತಾನೆ. ಹಿಂದಿನ ಕವಿಗಳು ಕಟ್ಟಿ ಗೆ ಒಳಪಡದೆ ಬರೆದೂ
ಹೆಸರುಗೊಂಡರೆಂದು ಅವರನ್ನು ಆಶ್ರಯಿಸಿ, ಈ ನೀತಿಯನ್ನು ಬುದ್ಧಿ
ಶಾಲಿ ಬಿಡಬಾರದು ; ಲ್ಮೀಕಿ ವ್ಯಾಸ ಮೊದಲಾದ ಪ್ರಖ್ಯಾತಿಹೊಂದಿದ
ಕವೀಶ್ವರರ ೩.1. ನ ತೋರಿಸಿರುವ ಈ ಕ್ರಮ ಹೊರಗಲ್ಲ-_
ಬಂದು ಹೇಳಿ, ತನ್ನ ತತ್ತ್ವವನ್ನು ನಿಜವಾಗಿಯೂ ದೊಡ್ಡವರ ನಿದಶ ೯
೪. ಧೃನಿ ಪ್ರಸ್ಥಾನ ೬೧
ದಿಂದ ಪರಿಪ್ಲೋಪಿಸುತ್ತಾನೆ.*” ತಮ್ಮ ಕೃತಿಗಳಲ್ಲಿ ಅಲಂಕಾರಗಳನ್ನು
ಹೆಣಿಯುವುದರಲ್ಲೇ ಮನನಟ್ಟು, ರಸವನ್ನು ಒಲ್ಲದ ಕವಿಗಳಿರುವರಲ್ಲಾ
ಎಂದು ವಿಪಾದಪಡುತ್ತಾನೆ;* ಈ ಮಾತು ಎಲ್ಲಕಾಲಕ್ಕೂ ಅನ್ವಯಿಸುವ
ಮಹಾವಾಕ್ಯದಂತಿದೆ. ವ್ಯಂಗ್ಯಾರ್ಥತೂನ್ಯವಾದ "" ಚಿತ್ರಕಾವ್ಯ''ಪೆಂಬ
ಜಾತಿಯನ್ನು ಕುರಿತು ಮಾತಾಡುತ್ತಾ, ನಿರಂಕುತವಾಣಿಯುಳ್ಳ ಕವಿಗಳು
ರಸದಲ್ಲಿ ತಾತ್ಸರ್ಯವಿಲ್ಲದೆ ಕಾವ್ಯರಚನೆಗೆ ಹೊರಡುವುದನ್ನು ಕೆಂಡು ಈ
ಚಿತ್ರವೆಂಬ ಪ್ರಭೇದವನ್ನು ಕಲ್ಪಿಸಬೇಕಾಯಿತು.... ಪರಿಪಾಕಶಾಲಿ
ಗಳಾದ ಕವಿಗಳು ರಸದ ದೃಷ್ಟಿಯಿಲ್ಲದೆ ಕಾವ್ಯರಚನೆ ಮಾಡಲು ತೊಡಗು
ವುದೇ ಚೆನ್ನಲ್ಲ ಎನ್ನುತ್ತಾನೆ. ಈ ಸಂದರ್ಭದಲ್ಲ, ಕವಿಗಳ ರಚನೆ
ಯಾದದ್ದರಿಂದ ಕಾವ್ಯವೆಂಬ ಹೆಸರು ಯಾವುದಕ್ಕೆ ಉಂಟೋ ಅದಕ್ಕೆಲ್ಲಾ
ಜಿಲೆ ಕೊಡಬೇಕೆಂಬ ಆಶಯವೂ, ಆದರೆ ರಸವನ್ನು ಉಪೇಕ್ಷಿಸಿದ್ದು
ಹೇಗೆ ಕಾವ್ಯವಾದೀತೆಂಬ ಶಂಕೆಯೂ ಆನಂದವರ್ಧನನ ಮನಸ್ಸನ್ನು ಅತ್ತ
ಇತ್ತ ಕಾ. ಚಳ ಸ್ಪಪ್ಟವಾಗಿದೆ. ಇನ್ನೊಂದು, ವಿಷಯ.
ಪ್ರಧಾನವಾಗಿ ನಿಲ್ಲುವ ವ್ಯಂಗ್ಯಾರ್ಥವೇ ಧ್ವನಿಯಪ್ಪೈ. ರಸದಂತೆಯೇ
ಜ್ ದ್ | "ಧೃನಿಯಾಗಬಹುದೆಂದು ಅನಂದವರ್ಧನನು
ಅಂಗ್ಲೀಕರಿಸುತ್ತಾ: ನೆ; ಇವೆರಡೂ ಪರ್ಯ ವಸಾನದಲ್ಲಾ ದರೂ ರಸಧ್ಯನಿ
ಯನ್ನು ಸೂಚಿಸಲೇಜೇಕೆಂದು ಅವನು ಮ ವಾಗಿ ಹೇಳಿಲ್ಲ. ಹಾಗೆ
29 .ರಸಾದಿರೂಪಪ್ಯಂಗ್ಯತಾತ್ತ ರೃಮೇವ ಏಪಾಂ [| ಕವೀನಾಂ] ಯುಕ್ತ ಮಿತಿ
ಯತ್ನೋಸ್ಮಾಭಿರಾರಬ್ಬೊ ನ್ಮ ನ ಧ್ವನಿಪ್ರತಿಪಾದನಮಾತ್ರಾಭಿನಿವೇಶೇನ '' (ಧೃ್ವನ್ಯಾ.,
ಪು. ೧೬ನ) ೧೬೪ನೆಯ ಪುಟದಲ್ಲಿರುವ ಪರಿಕರಶ್ಲೊಕಗಳನ್ನೂ ನೋಡಿ :
ವನಖ್ಯಾ ವ್ಯಾಪಾರವಿಷಯಾಃ ಸುಕವ್ವೀನಇಂ ರಸಾದಯಃ |
ತೇಪಾಂ ನಿಬಂಧನೇ ಭಾವ್ಯಂ ತೈಃ ಸದ್ಭೊವಾಪ್ರಮಾದಿಭಿಃ 1..
ಪೂರ್ವೇ ವಿಶ್ಯ ಂಖಲಗಿರಃ ಕವಯಃ ಪ್ರಾಪ್ತಕೀರ್ತಯಃ |
ತಾನ್ ಸಮಾಶ್ರಿತ್ಯ ನ ತ್ಯಾಜ್ಯಾ ನೀತಿರೇಷಾ ಮನೀಷಿಣಾ |
ಲ್ಕೀಕಿವ್ಯಾಸಮುಖ್ಯಾಶ್ಚ ಯೇ ಪ್ರಖ್ಯಾತಾಃ ಕವೀಶ್ಚರಾಃ |
ಚ ಫ್ರಿಯಬಾಹ್ಮೋ ಯಂ ನಾಸ್ಕಾಭಿರ್ದರ್ಶಿತೋ ನಯಃ 1
30 ದೃಶ್ಯಂತೇ ಚ ಕವಯಃ ಅಲಂಕಾರನಿಬಂಧನೈೊಕರಸಾಃ ಅನಪೇಕ್ಷತರಸಾಃ
ಪ್ರಬಂಧೇಷು.'' (ಧುನ್ಯಾ., ಪು. ೧೫೧)
51 " ಏತಚ್ಛ ಚಿತ್ರಂ ಕವೀನಾಂ ವಿಶೃಂಬಲಗಿರಾಂ ರಸಾದಿತಾತ್ಸರ್ಯಮನಪೇಕ್ಷೆ ವ
ಕಾವ್ಯಪುವೃತ್ತಿ ದರ್ಶನಾತ್ ಅಸ್ಮಾಭಿಃ ಪರಿಕಲ್ಪಿತಂ. ...ಪರಿಪಾಶವತಾಂ ಕವೀನಾಂ
ರಸಾದಿತಾತ್ಸರ್ಯವಿರಹೇ ವ್ಯಾಪಾರ ಏವ ನ ಶೋಭತೇ. **'' (ಧೃನ್ಯಾ., ಪು. ೨೨೧)
೬೨ ಇರತೀಯ ಕಾಷ್ಯಮಾಮಾಂಸೆ
ಹೇಳಿಬಿಟ್ಟರೆ ವರ್ಣನಾಪ್ರಧಾನವೂ ಕವಿಕೌಶಲಪ್ರಧಾನವೂ ಆದ ಕೃ ತಿಗಳಿಗೆ
ಕಾವ್ಯತ್ಯವು ತಪ್ಪುವುದೆಂದು ಅವನು ಶಂಕಿಸಿದನೋ ಏನೋ. ಆದರೆ ರಸದ
ಮೇಲೆ ಅವನಿಗಿರುವ ಪಕ್ಷಪಾತವು ಧೃನ್ಯಾರೋಕದ ಪುಟಪುಟದಲ್ಲೂ
ಗೋಚದಿಸುತ್ತದೆ. ಈ ಗ್ರಂಥಾಮೃತದ ನವನೀತದಂತಿರುವ ಕೆಳಗಿನ ಕಾರಿ
ಕೆಯನ್ನೂ ಅದರ ಮೇಲಿನ ವೃತ್ತಿಭಾಗವನ್ನೂ ಈ ಸಂದರ್ಭದಲ್ಲ
ಕೊನೆಯ ಮಾತಾಗಿ ಉದಾಹರಿಸಬಹುದು :
ವಾಚ್ಯಾನಾಂ ವಾಚಕಾನಾಂ ಚ ಯದಾೌಚಿತ್ಯೇನ ಯೋಜನಂ |
ರಸಾದಿ ವಿಷಯೇಣ್ಯಿ ತತ್ ಕರ್ಮ ಮುಖ್ಯಂ ಮಹಾಕವೇಃ ॥
" ಅಯೆಮೇವ ಹಿ ಮಹಾಕವೇರ್ಮುಜ್ಯೋ ವ್ಯಾಪಾರಃ ಯತ್ ರಸಾ
ದೀನೇವ ಕಾವ್ಯಾರ್ಥೀಕೃತ್ಯ ತದ್ವ್ಯಕ್ತ $ನುಗುಣತ್ಸೇನ ಶಬ್ಕಾನಾಮರ್ಥಾನಾಂ
ಚ ಉಪನಿಬಂಧನಂ.' (ಥೈನ್ಯಾ., ii ೩೨ ಮತ್ತು ವೃತ್ತಿ ; ಪು. ೧೮೧)
"" ವಾಚ್ಯಾರ್ಥಗಳನ್ನೂ ವಾಚಕತಬ್ಬ ಗಳನ್ನೂ ರಸಾದಿಗಳ ದೃಷ್ಟಿ
ಯಿಂದ ಉಚಿತವಾಗುವಂತೆ ಅಳವಡಿಸುವುದು ಯಾವುದುಂಟೋ ಅದೇ
ಮಹಾಕವಿಯ ಮುಖ್ಯಕಾರ್ಯ.''.__""...ಇದೇ ಮಹಾಕವಿಯ ಮುಖ್ಯಕಾರ್ಯ :
ಯಾವುದೆಂದರೆ, ರಸಾದಿಗಳನ್ನೇ ಕಾವ್ಯಾರ್ಥವಾಗಿ ಮಾಡಿ ಅವುಗಳ
ಅಭಿವ್ಯಕ್ತಿಗೆ ಅನುಗುಣವಾಗುವಂತೆ ಶಬ್ದಗಳನ್ನೂ ಅರ್ಥಗಳನ್ನೂ
ಅಳವಡಿಸುವುದು.”
ಆನಂದವರ್ಧನನು ಲಾಕ್ಷಣಕನು ಮಾತ್ರವೇ ಅಲ್ಲ; ಅವನೊಬ್ಬ
ಕವಿಯೂ ಹೌದು. "ಅರ್ಜುನಚರಿತ' ವೆಂಬ ಮಹಾಕಾವ್ಯವನ್ನೂ "ವಿಷಮ
ಬಾಣಲೀಲೆ 'ಯೆಂಬ ಪ್ರಾಕೃತಕಾವ್ಯವನ್ನೂ ಅವನು ಬರೆದಿದ್ದನೆಂದು ಧ್ವನ್ಯಾ
ಲೋಕದಿಂದಲೇ ಗೊತ್ತಾಗುತ್ತದೆ; ವಿಷಮಬಾಣಲೀಲೆಯ ಕೆಲವು ಪದ್ಯ
ಗಳು ಅದರಲ್ಲಿ ಉದಾಹೃ ತವಾಗಿಯೂ ಇವೆ. ಆದರೆ ಈ ಎರಡು ಲಲಿತಕ್ಕ ತಿ
ಗಳೂ ಈಗ ದೊರೆಯುವುದಿಲ್ಲ. ಅವನು ರಚಿಸಿದ " ದೇವೀಶತಕ'ವು ಸಿಕ್ಕಿದೆ,
32 ಬೇರೊಂದು ಸಂದರ್ಭದಲ್ಲಿ ಬರುವ ಈ ಕೆಳಗಿನ ಕಾರಿಕೆಯನ್ನೂ ಇಲ್ಲ ನೆನಪಿಗೆ
ತಂದುಕೊಳ್ಳಬಹುದು :
ವ್ಯಂಗ್ಯವ್ಯಂಜಕಭಾವೇಷಸ್ಮಿನ್ ವವಿಧೇ ಸಂಭವತ್ಯಪಿ |
ರಸಾದಿಮಯ ಏಕಸ್ಮಿನ" ಕವಿಃ ಸ್ಯಾದವಧಾನವಾನ್ ॥ (ಧ್ವನ್ಯಾ., 1೪. ೫)
ಇಲ್ಲೆಲ್ಲಾ ""ರಸಾದಿ'' ಎಂದರೆ, ಹಿಂದೆಯೇ ಈ ಅಧ್ಯಾಯದ 1ನೆಯ ಅಡಿಟಪ್ಪಣಿಯಲ್ಲ
ಪು. ೪೩) ತಿಳಿಸಿರುವಂತೆ, ರಸ, ಭಾವ, ರಸಾಭಾಸ ಮೊದಲಾದ ಚಿತ್ತವೃತ್ತಿ ವಿಶೇಷಗಳು,
ರಸ'' ಎಂಬುದರ ಸ್ಥೂಲವಾದ ಅರ್ಥವೇ ""ರಸಾದಿ''.
೪. ಧ್ವನಿ ಪ್ರಸ್ಥಾನ ೬೩
ಅಚ್ಚಾಗಿಯೂ ಇದೆ. ಯಮಕ, ದ್ವ್ಯಕ್ಷರ, ಗೋಮೂತ್ರಿಕಾ ಬಂಧ. ಇಂಥ
ಚಿತ್ರಕವಿತ್ವದಿ೦ದಲ್ಲೇ ನಿಬಿಡವಾದ ದುಪ್ಕರಕಾವ್ಯ ಇದು.” ಧ್ಯನ್ಯಾ
ಲೋಕಕಾರನು ಇದನ್ನು ಕಟ್ಟಿದನೆಂದರೆ ಅತ್ಯಾತ್ಚರ್ಯವಾಗುತ್ತದೆ;
ಇದನ್ನು ಮುಗಿಸಿದ ಬಳಿಕ ಈ ಬಗೆಯ ನೀರಸ ರಚನೆಯಲ್ಲಿ ಯಾವ
ಪ್ರಯೋಜನವೂ ಇಲ್ಲವೆಂದು ಆನಂದವರ್ಧನನು ಅರಿತನೇನೋ. "ತತ್ತ್ವಾ
ಲೋಕ'ಪೆಂಬ ಒಂದು ಗ್ರಂಥದಲ್ಲಿ ಅವನು ಶಾಸ್ತ್ರನಯ ಕಾವ್ಯನಯಗಳ
ಮೇರೆಗೆ ಮಹಾಭಾರತದ ಸಾರಷೇನೆಂದು ವಿಚಾರಮಾಡಿದ್ದನಂತೆ ;
ಇನ್ನೂ ಯಾವಯಾವ ಮುಖ್ಯಾಂಶಗಳನ್ನು ಅದರಲ್ಲ ಪ ತಿಪಾದಿಸಿದ್ದ ನೋ.
ಈ ಗ್ರಂಥವಾಗಲಿ, ವನಿಶ್ಸೆಯಟೀಕಾ- ಜರ್ ಸಹ ಎಂಬ ಅವನ
ಇನ್ನೊಂದು ಕೃತಿಯಾಗಲಿ ಈಗ ದೊರೆಯುವುದಿಲ್ಲ.
" ಧ್ವನ್ಯಾಲೋಕ 'ದಲ್ಲಿ ಧ್ವನಿತವಾಗಿದ್ದ ರಸದ ಪಾರಮ್ಯ ವನ್ನು
ಸ್ಪಪ್ಟೋಕ್ತಿ ಗಳಲ್ಲ ದೃಢಪಡಿಸಿದವನು ಅಭಿನವಗುಪ್ತ. ಈತನನ್ನು 3
ಲಾಕ್ಷಣಿಕರು : | ಅಭಿನವಗುಪ್ತ ಪಾದಾಃ '' ಎಂದು ಬಹು ಗೌರವದಿಂದ
ಕರೆಯುತ್ತಾ ಥ್ರ ಇದಕ್ಕೆ ತಕ್ಕ ಮಹತ್ತ್ವವೂ ಈ ಆಚಾರ್ಯನಲ್ಲಿತ್ತು. ಇವನು
ಕೇವಲ ಕಾವ್ಯಲಕ್ಷಣಕಾರನಲ್ಲ: ; ಇವನೊಬ್ಬ ದೊಡ್ಡ ದಾರ್ಶನಿಕ, ಸಾಧಕ,
ಅನುಭಾವಿ, "" ಮಹಾಮಾಹೇಶ್ಯರ ''. ಆನಂದವರ್ಧನನಂತೆಯೇ ಇವನೂ
ಕಾಶ್ಮೀರದವನು; ಕ್ರಿ. ತ. ಹತ್ತನೆಯ ಶತಮಾನದ ಕೊನೆಯ ಭಾಗ
ದಲ್ಲೂ ಹನ್ನೊಂದನೆಯದರ ಆದಿಯಲ್ಲೂ ಜೀವಿಸಿದ್ದನು. ತನ್ನ ವಂಶೀಯರ
ವೈತ್ತಾಂತವನ್ನೂ ತನ್ನ ಕೆಲವು ಗ್ರಂಥಗಳ ರಚನೆಯ ಕಾಲವನ್ನೂ ತಾನೇ
ತಿಳಿಸಿದ್ದಾನೆ."
ಅಭಿನವಗುಪ್ಮನ ಮನೆತನ ಪಿಂದಿನಿಂದಲೂ ವಿದ್ಯೆಗೆ ಪ್ರಸಿದ್ಧ
ವಾದದ್ದು. ಇವನು ತನ್ನ ತಂಡೆಯೇ ಮೊದಲಾದ ಸುಮಾರು ಇಪ್ಪತ್ತು
ಮಂದಿ ಗುರುಗಳಲ್ಲಿ ವಿದ್ಯಾರ್ಜನೆ ಮಾಡಿದನು; ಜೈನ ಬೌದ್ಧ ನಾಸ್ತಿಕ
33 ಯೇನಾನ೦ದಕಥಾಯಾಂ ತ್ರಿದಶಾನಂಡೇ ಚ ಲಲಿತಾ ವಾಣೀ |
ತೇನ ಸುದುಷ್ಕರಮೇತತ್ ಸ್ತೋತ್ರಂ ದೇವ್ಯಾಃ ಕೃತಂ ಭಕ್ತ್ಯಾ |
(ದೇವೀಶತಕ, ೧೦೪)
ತ್ K.0. Pandey: Abhinavagupta-— An Historical and Philo-
sophical Study : ಈ ಗ್ರಂಡದಲ್ಲ ಅಭಿನವಗುಪ್ತನ ಜೀವಿತಚರಿತ್ರೆ, ಗ್ರಂಥಗಳು,
ತತ್ತ್ಯ್ಯದರ್ಶನ ಮೊದಲಾದವನ್ನು ಕುರಿತು ಅನೇಕ ವಿವರಗಳನ್ನು ನೋಡಬಹುದು,
೬೪ ಭಾರತೀಯ ಕಾಪ್ಯಮಾಮಾಂಸೆ
ಗುರುಗಳನ್ನು ಕೂಡ ಅವರ ಶಾಸ್ತ್ರ ಗಳನ್ನು ತಿಳಿಯುವ ಕುಶೂಹಲದಿಂದ
ಆಶ್ರಯಿಸಿದನಂತೆ. ಹೀಗೆ, ಸರ್ವರಿಗೂ ಶಿಷ್ಯನಾದ ಅವನಿಗೆ ಉಪದೇಶ
ಭಾಗದಲ್ಲಿ ಏನೂ ಕೊರೆಯಾಗಲಿಲ್ಲ. * ಸಾಹಿತ್ಯದಲ್ಲೂ ದರ್ಶನದಲ್ಲೂ ಇವನ
ತೀಕ್ಷ್ಯಮತಿ ಒಂದೇ ಸಮನಾಗಿ ಹರಿಯಿತು ; ಮಹಾವಿದ್ಯಾಂಸನಾದನು ;
ಜ್ಞಾನನಿಧಿಯಾದನು. ಇತ್ತ ಕಾರಣಾಂತರಗಳಿಂದ ಸಂಸಾರದಲ್ಲ ವಿರಕ್ತಿ
ಬ೦ದು ಶಿವೋಪಾಸನೆಯ ಕಡೆಗೆ ಮನಸ್ಸು ತಿರುಗಿತು ; ಹೆ೦ಡತಿಮಕ್ಕಳ
ಬಂಧನ ಅವನಿಗೆ ಒದಗಲಿಲ್ಲ.5 ಅನೇಕ ಸಾಧನೆಗಳನ್ನು ನಡಸಿ ಹಲವು ಸಿದ್ಧಿ
ಗಳನ್ನು ಪಡೆದನಂತೆ ; ಭೈರವನ ಅವತಾರವೆಂದು ಜನರು ಇವನನ್ನು
ಭಾವಿಸುತ್ತಿ ದ್ವರಂತೆ, ಅವನ ಶಿವಭಕ್ತಿ ಶಿವಾನುಭವಗಳೆಂತೂ ಅತಿಶಯ
ವಾದವು. ಧ್ವನ್ಯಾಲೋಕಲೋಚನದ ಕೊನೆಯಲ್ಲೇ ಅವನು
ವಸು ತಃ ಶಿವಮಯೇ ಹದಿ ಸು ಟಂ
ಸರ್ವತಃ ಶಿವಮಯಂ ವಿರಾಜತೇ | (ಲೋಚನ, ೪, ಪು.೪೨)
*" ದಿಟವಾಗಿ ಹೃದಯವು ಶಿವಮಯವಾದಲ್ಲಿ ಸ್ಭು ಟವಾಗಿ ಎಲ್ಲೆ ಲ್ಲೂ
ತಿವಮಯವಾಗಿಯೇ ಜೆಳಗುತ್ತದೆ'' ಎಂದು ಬರೆದಿದ್ದಾನೆ. ತನ್ನ ಜೀವ
ಮಾನದ ಕೊನೆಯಲ್ಲ ಅವನು ಅನೇಕ ಮಂದಿ ಶಿಷ್ಯರೊಡಗೂಡಿ ಭೈರವ
ಗುಹೆಯೆಂಬ ಗುಹೆಯನ್ನು ಹೊಕ್ಕನೆಂದೂ ಮತ್ತೆ ಕಾಣಿಸಿಕೊಳ್ಳಲಿಲ್ಲವೆಂದೂ
ಐತಿಹ್ಯವುಂಟು.
ತಂತ್ರ. ಕಾವ್ಯಲಕ್ಷಣ, ಪ್ರತ್ಯವಿಜ್ಞಾ ಸಿದ್ಧಾಂತ, ಇತರ ಶೃವ
ದರ್ಶನಗಳು- ಈ ಮೊದಲಾದವನ್ನು ಕುರಿತು ಇವನು ಬರೆದ ಗ್ರಂಥ
ಟೀಕಾವಿವರಣಾದಿಗಳು ಇ೦ಕ್ಕೆ ಹೆಚ್ಚಾಗಿವೆ. ಇವುಗಳಲ್ಲಿ ಸಾಪಿತ್ಯಕ್ಕೆ
ಸಂಬಂಧಪಟ್ಟವು ಅನುಕ 5 ಮವಾಗಿ ಈ ಮೂರು ಮಾತ್ರ : (೧) " ಕಾವ್ಯ
ಕೌತುಕವಿವರಣ ತನ್ನ ಗುರುವಾದ ಭಟ್ಟತೌತನ " ಕಾವ್ಯಕೌತುಕ' ದ
ಮೇಲೆ ಇವನು ಬರೆದ ವ್ಯಾಖ್ಯಾನ; (೨) "ಧ್ಯನ್ಯಾಲೋಕಲೋಚನ'--
ಆನಂದವರ್ಥನನ ಕೃತಿಗೆ ವ್ಯಾಖ್ಯಾನ ; (೩) " NE
35 « ತಸ್ಯ ಮೇ ಸರ್ವಶಿಪ್ಯಸ್ಯ ನೋಪದೇಶದರಿದೃತಾ'' (K ಲ, Pandey:
Abhinavagupta, ಪು. 344).
36 "" ದಾರಸುತಪ್ರಭೃತಿಬಂಥಕಥಾಮನಾಪ್ತ ಃ'' (ಅದೇ ಪು. 840)
೪. ಧ್ವನಿಪ್ಪ ಶ್ರಸ್ಥಾನ ಓಸಿ
ಅಥವಾ " ನಾಟ್ಯವೇದವಿವೃತಿ '__ಭರತನಾಟ್ಯತಾಸ್ತ್ರ್ರಕ್ಕೆ ವ್ಯಾಖ್ಯಾನ.”
ಇವುಗಳಲ್ಲಿ ಮೊದಲನೆಯದಾಗಲಿ ಅದರ ಮೂಲಗ !ಂಥವಾಗಲಿ ದೊರೆ
ತಿಲ್ಲ. ಮಿಕ್ಕ ಎರಡೂ ವ್ಯಾಖ್ಯಾನಗಳೆನಿಸಿಕೊಂಡರೂ ವಿಚಾರ ಪುಷ್ಟಿ
ಯಲ್ಲಿ ಯಾವ ಸ್ವತಂತ್ರ ಗ್ರಂಥಕ್ಕೂ ಕಡಮೆಯಲ್ಲ. ಅಭಿನವಗುಪ್ತನ
ಪಾಂಡಿತ್ಯ ತೀಕ್ಷ್ಣಬುದ್ಧಿ ರಸಿಕತೆಗಳು ಅನುಪಮವಾದವು. ಅವನು
ವ್ಯಾಖ್ಯಾನಿಸಲು ತೆಗೆದುಕೊಂಡ ನಾಟ್ಯಶಾಸ್ತ್ರ, ಧೃನ್ಯಾಲೋಕಗಳೆರಡೂ
ಸಂಸ್ಕ ತೆ ಲಕ್ಷಣ ಸರಸ್ವತಿಗೆ ಎರಡು ಕಣ್ಮಿದ್ದ೦ತೆ. ಇವುಗಳ ರಹಸ್ಯವನ್ನು
ರಷ್ಯೋಜ್ಜ ಹ ಭಾಷೆಯಲ್ಲಿ ಹೊರಗೆಡಪಿ, ಅಲ್ಲಿಯ ವಿಚಾರಸರಣಿಯನ್ನು
ಇನ್ನಷ್ಟು ದೂರ ಮುಂದುವರಿಸುವುದೆಂದರೆ ಅಭಿನವಗುಪ್ತನಂಥ ಮಹಾ
ಮತಿಗೆ ಮಾತ್ರ ಸಾಧ್ಯ. ಈ ಎರಡು ಉದ್ಭ್ರಂಥಗಳ ಮೇಲೂ ಪಿಂದೆಯೇ
ವಿವರಣ ಗ್ರಂಥಗಳು ಸುಟ್ಟಿದ್ದು ವು. ನಾಟ್ಯಶಾಸ್ತ್ರ $ದ ವ್ಯಾಖ್ಯಾನಕಾರ
ರಲ್ಲ ಕೆಲವರ ಹೆಸರುಗಳನ್ನು ಆಗಲೇ ನೋಡಿದ್ದೇವೆ. ಧ್ವನ್ಯಾಲೋಕಕ್ಕೆ
"ಚಂದ್ರಿಕಾ" ಉಂಜೊಂದು ವ್ಯಾಖ್ಯಾನವನ್ನು ಅಭಿನವಗುಪ್ತನ ಪೂರ್ವ
ವಂಶೀಯರಲ್ಲೊಬ್ಬನು ಬರೆದಿದ್ದನು. ಆದರೆ, ಅಭಿನವಗುಪ್ತನು ಈ
ಕಾರ್ಯಕ್ಕೆ ಕೈಹಾಕಿದ ಬಳಿಕ ನಾಟ್ಯಶಾಸ್ತ್ರದ ಪ್ರಾಚೀನ ವ್ಯಾಖ್ಯಾನಗ
ದಾರಿಯನ್ನೇ " ಚಂದ್ರಿಕೆ”ಯೂ ಹಿಡಿಯಿತು. ಕ
ಭರತನ ಗ್ರಂಥದಲ್ಲಿ ರಸಕ್ಕಿದ್ದ ಮಹತ್ತ್ವವನ್ನೂ, ಧ್ವನ್ಯಾಲೋಕ
ಕಾರನಿಗೆ ಅದರ ಮೇಲಿದ್ದ ಅತಿಶಯ ಪಕ್ಷಪಾತವನ್ನೂ ಚೆನ್ನಾಗಿ ತಿಳಿದ
ಅನುಭವರಸಿಕನಾದ ಅಭಿನೆಪಗುಪ್ತನಿಗೆ ಕಾವ್ಯದಲ್ಲಿ ರಸಧ್ಯನಿಯೇ ನಿಯತ.
ವಾದ ಪೆರಮಾರ್ಡಷೆಂದು ಸಾರುವುದು ಕಪ್ಪವಾಗಲಿಲ್ಲ. *" ರಸ ಏವ
ಜ್ ಸು ಸಾಸಿರ ಹ
ಸ್ಯೇತೇ ಇತಿ ವಾಚ್ಯಾದುತ್ಮೃಪ್ಪ್‌ು ತೌ ಇತ್ಯಭಿಪ್ರಾಯೇಣ ಧ್ಯನಿಃ ಕಾವ್ಯ
ಸ್ಯಾತ್ಮಾ ಇತಿ ಸಾಮಾನ್ಯೇನೋಕ್ತ ei (ಧ್ವನ್ಯಾ., ಪು. ೨೭)""ರಸವೇ ದಿಟ
ವಾಗಿ ಕಾವ್ಯದ ಆತ್ಮ; ವಸ್ತುಧ್ಯನಿ ಅಲಂಕಾರಧ್ಯನಿಗಳಾದರೆ ಸರ್ವಥಾ
ರಸಾಭಿಮುಖವಾಗಿಯೇ ಪರ್ಯವೆಸಾನಗೊಳ್ಳುತ್ತವೆ ; ವಾಚ್ಯಕ್ಕಿಂತ ಅವು
WN 8 ಇವಲ್ಲದೆ, ನಾಟ್ಯಶಾಸ್ತ್ರ ೨ದ ವಿಷಯವಾಗಿ ಶ್ಲೋಕರೂಪದಲ್ಲ ಒಂದು ಗ್ರಂಥ
ವನ್ನು ಅಭಿನವಗುಪ್ತನು ರಚಿಸಿದ್ದನೆಂದು ಹೇಳಲು ಅವಕಾಶವಿರುವಂತಿದೆ. V. Raghavan :
‘he Works of Abhinavagupta’ (JORM, XIV. 4), p. 321 ನೋಡಿ.
KM: [5)
೬೬ ಭಾರತೀಯ ಕಾವ್ಯಮಾಮಾಂಸ
ಉತ್ಕೃಪ್ಪಪೆಂಬ ಅಭಿಪ್ರಾಯದಿಂದ "ದ್ವನಿ ಕಾವ್ಯದ ಆತ್ಮ ' ವೆಂದು ಸಾಮಾ
ನ್ಯವಾಗಿ ಹೇಳಿದೆ.'' ಹೀಗೆಂದು ಅವನು ರಸದ ಜಯಘೋಪವನ್ನು ಮಾಡಿ
ದನು. " ಧ್ವನ್ಯಾಲೋಕ' ವನ್ನು ಉದ್ದೇಶಿಸಿ ಈ ನಡುವೆ ಎಷ್ಟೋ ಖಂಡನೆ
ಗಳು ಹೊರಟಿದು ವು. ಧ್ವನಿ ಯೆಂದರೆ ವಸ್ತುತಃ ರಸಧ್ಯನಿಯೆಂದೇ ಅಭಿನವ
ಗುಪ್ತನು ನಿರ್ಣಯಿಸಿ, ತನ್ನ ವ್ಯಾಖ್ಯಾನ ನದ ಉದ್ದಕ್ಕೂ ಸಾರಿ ಸಾರಿ ಹೇಳಿ
ದ್ಧ ರಿಂದ ಎಲ್ಲ ಆಕ್ಷೇಪಣಿಗಳಿಗೂ ಉತ್ತ ರ ಕೊಡಲು ಅವನಿಗೆ ಶಕ್ಯವಾ
೨. ಇತ್ತ, ರಸನಿಪ್ಪತ್ತಿ ಹೇಗೆ ಅಗುವುದೆಂಬ ವಿಷಯದಲ್ಲಿ ಅ ) ಅನೇಕ
ಖಾ ್ಯಾನಕಾರರು ಹೊಡಿದ್ದ ಅನ್ನೇಕ ಮತಗಳು ಒಂದರೊಡನೊಂದು
ಗ ದ್ದು ವು. ಭರತನ ರಸ ಸೂತ್ರ ಕ್ಕೆ ವ್ಯಾಖ್ನಾ ್ಯಾನೆ ಬರೆಯು
ವಾಗ ಅಭಿನವಗುಪ್ತ ನುಈ ಹಿಂದಿನ ವಾದಗನನ್ನೆ ಲಾ ಸಂಗ ಹಿಸಿ, ವಿಮ
ರ್ತಿ; ಎ೫: ದೃತಿತತ್ತ್ಯದ ದೃಷ್ಟಿ ಮಂಡ ರಸಾನುಭವದ ಸ್ವತೊಪವನ್ನು “ವಾಸಿ
ಈ ವಿಷಯದಲ್ಲಿ ಬಹುಶಃ ಕೊನೆಯದೆನ್ನ ಬಹುದಾದ ನಿರ್ಣಯ ವನ್ನು
ಕೊಟ್ಟ ನು. ಈ ಮುಖ್ಯ. ವಿಷಯಗಳಿರಲಿ. : ತನ್ನ ವ್ಯಾಖ್ಯಾನಗಳಲ್ಲಿ ಅಲ್ಲಲ್ಲೇ
ಕಾವ್ಯ ತತ ವನ್ನು. ಕುರಿತು ಎಷ್ಟೋ ಮಾತುಗಳನ್ನು ಪ್ರಾಸಂಗಿಕವಾಗಿ
ಹೇಳುತ್ತಾ ನೆ. ಧ್ವನ್ಯಾಲೋಕದ ಅಭಿಪ್ರಾಯಗಳನ್ನು ವಿಶದಪಡಿಸುತ್ತಾ
ನಡುನಡುವೆ ಲಾಕ್ಷಣಿಕರಿಗೆ ಮನನಮಂತ್ರವಾಗಬಲ್ಲ ವಾಕ್ಯಗಳನ್ನು ರಚಿಸು
ತ್ತಾನೆ. ಇದಕ್ಕೆ ಈ ಒಂದು ಉದಾಹರಣಿ ಸಾಕು: "" ರಚ [ನಯಾ]
ಪ್ರಸಾದೇನ ಚಾರುತ್ತೇನ ಉಪಬ್ಬಂಪಿತಾ ಏವ _ಶಬ್ದಾಃ ಕೌಪ್ಯೇ
ಯೋಜ್ಯಾಃ ” ( ರಚೆನೆಯಿಂದಲೂ ಪ್ರಸಾದದಿಂದಲೂ ಚಾರುತ್ವ
ದಿಂದಲೂ ತುಂಬಿಕೊಂಡಿರುವ ಶಬ್ದಗಳನ್ನೇ ಕಾವ್ಯದಲ್ಲಿ ಸೇರಿಸಬೇಕು.'')
ಕಾವ್ಯದಲ್ಲಿ ತಬ್ದಕ್ಕಿರುವ ಕೋಶತ್ರಯವನ್ನು ಈ ಉಕ್ತ ನಿರ್ದೇಶಿಸು
ತ್ತದೆ. ರಚನೆ ಎಂದರೆ ವರ್ಣವಿನ್ಯಾಸ : ಇದರಲ್ಲಿ ಅನುಪ್ರಾಸವೇ
ಮೊದಲಾದ ಶಬ್ದಾ ಲಂಕಾರಗಳೂ ಬಂಧಗುಣವೂ ಳಪಡುತ್ತವೆ.
ಪ್ರಸಾದ ಎಂದರೆ ಕಿವಿಗೆ ಬೀಳುತ್ತಿದ್ದ ಹಾಗೆಯೇ ಅಕ್ಲಿಪ್ಟವಾಗಿ ವಾಚ್ಯಾ
ರ್ಥವನ್ನು ಸಮರ್ಪಿಸುವ ಶಕ್ತಿ. ಚಾರುತ್ವವು ಮನೋಹರವಾದ ವ್ಯಂಗ್ಯಾ
ರ್ಥವನ್ನು ಸೂಚಿಸಬಲ್ಲ ಸಾಮರ್ಥ್ಯ. ಕಾವ್ಯದಲ್ಲಿ ಶಬ್ದಕ್ಕಿರಬೇಕಾದ
3 ಧೃನ್ಯಾ. ಲೋಚನ, ಪು. ೧೬೦.೧. ಇದರ ಅಭಿಪ್ರಾಯಕ್ಕೆ ಅನಂದವರ್ಧನನ
ವೃತ್ತಿಯಲ್ಲೇ ಅಧಾರವುಂಟು.
೪. ಧ್ವನಿ ಪ್ರಸ್ಥಾನ ೬೭
ಸಮಸ್ತಸಂಪತ್ತೂ ರಚನೆ, ಪ್ರಸಾದ, ಚ್ನಾರುತ್ವ ಎಂಬ ಮೂರು ಮಾತು
ಗಳಲ್ಲ ಅಡಕವಾಗಿದೆ.
ಅಭಿನವಗುಪ್ತನಲ್ಲಿ ಅಗಾಧ ಪಾಂಡಿತ್ಯಕ್ಕೆ ಪರಿಮಳವನ್ನು ಕಟ್ಟುವ
ರಸಿಕತೆಯೂ ಇತ್ತು. ಉದಾಹರಣಿಯ ಪದ್ಯಗಳಿಗೆ ವ್ಯಾಖ್ಯಾನ ಮಾಡು
ವಾಗ ಅವುಗಳ ಸಾರವನ್ನು ಒಂದು ತೊಟ್ಟೂ ಬಿಡದಂತೆ ಹಿಂಡಿ ತೆಗೆಯು
ತ್ತಾನೆ. (ಒಮ್ಮೊಮ್ಮೆ, ಇಪ್ಟೆಲ್ಲವೂ ಮೂಲಪದ್ಯದಲ್ಲಿ ಇದೆಯೇ ಎನ್ನಿಸು
ವುದೂ ಉಂಟು.) ಅವನ ಶೈಲಿ ಸರಸವೂ ಪ್ರೌಢವೂ ಓಜಸ್ಟಿಯೂ ಅದ
ಅವನ ವ್ಯಕ್ತಿತ್ವವನ್ನು ಚೆನ್ನಾಗಿ ಪ್ರತಿಬಿಂಬಿಸುತ್ತದೆ. ತನ್ನ ಕಾಲಕ್ಕಾಗಲೇ
ಸಂಸ್ಕೃತವನ್ನು ಮನೆಮಾತಾಗಿ ಆಡುವುದು ನಿಂತುಹೋಗಿ ಎಷ್ಟೋ ಶತ
ಮಾನಗಳಾಗಿದ್ದರೂ ಅದನ್ನು ಇವನು ಸಜೀವ ಭಾಷೆಯಂತೆ ಪಲುಕಿ
ನೊಡನೆ ಉಪಯೋಗಿಸುತ್ತಾನೆ. ಅಲ್ಲಲ್ಲೇ ಉಪಮಾನಗಳನ್ನು ಕೊಟ್ಟು
ವಿಷಯವನ್ನು ಮನಮುಟ್ಟಿಸುತ್ತಾನೆ. ಪ್ರತಿಕಕ್ಷಿಗಳ ಹುಳುಕನ್ನು ವತ್ತಿ
ತೋರಿಸುವಾಗಲಂತೂ ಅವನ ಹಸನಶಕ್ತಿ ತುಂಬ ಪ್ರಕಾಶಕ್ಕೆ ಬರುತ್ತದೆ.
ವಾದದಲ್ಲಿ ಸೋಲಿಸುವುದರ ಜೊತೆಗೆ ಉಪಹಾಹೋಕ್ಕಿಯಿಂದಲೂ ಕುಟು
ಕುತ್ತಾನೆ. "" ಯದಾಹ__ಕ್ರೋಥೋ,ಪಿ ದೇವಸ್ಯ ವರೇಣ ತುಲ್ಯ ಇತಿ”
("" ದೇವರ ಮುನಿಸೂ ದರಕ್ಕೆ ಸಮಾನ---ಎಂದು ಹೇಳಿದ ಹಾಗೆ !'')
ಏಂಬ ಮಾತು ಇದಕ್ಕೊಂದು ನಿದರ್ಶನ (ಧ್ವನ್ಯಾ. ಲೋಚನ, ಪು. ೨೦).
ಇನ್ನೊಂದು ಕಡೆ "ಚಂದ್ರಿಕಾ' ವ್ಯಾಖ್ಯಾನಕಾರನು ಒಂದು ಪದ್ಯದ ಭಾವ
ವನ್ನು ತಪ್ಪಾಗಿ ನಿರೂಪಿಸಿ, ಧ್ವನಿತತ್ತ್ವೃದ ಬುಡಕ್ಕೇ ಕೊಡಲಿ ಹಾಕಿದ
ನೆಂದು ತೋರಿಸುವಾಗ, " ಸ ದೇವಂ ವಿಶ್ರೀಯ ತದ್ಯಾತ್ರೋತ್ಸವಮ
ಕಾರ್ಪಿೀತ್ '' ("" ಅವನು ದೇವರ [ವಿಗ್ರಹವ]ನ್ನೇ ಮಾರಿ ಅದರ
ಯಾತ್ರೋತ್ಸ ವವನ್ನು ನಡಸಿದನು'') ಎಂದು ಚುಚ್ಚಿ, ಬಳಿಕ "" ಅಲಂ
ಪೂರ್ವವಂಶ್ಯ್ಯೈಃ ಸಹ ವಿವಾದೇನ'' ("" ನಮ್ಮ ಪೂರ್ವವಂಶ್ಲೀಯ
ರೊಂದಿಗೆ ವಿವಾದ ಸಾಕು 3) ಅಂದು ಮುಗಿಸುತ್ತಾನೆ! (ಪು. ೨೧೫)
ಅಭಿನವಗುಪ್ತನು "" ನಾಟ್ಯವೇದ ತತ್ತ್ವ್ವಾರ್ಥ'' ವನ್ನು ಭಟ್ಟ ತೋತ
(ಅಥವಾ ತೌತ)ನಿಂದಲೂ, ಧೃನ್ಯಾಲೋಕವನು ಬಹುಶಃ ಭಟ್ಟೇಂದುರಾಜ
ನಿಂದಲೂ ಕಲಿತನು ; ಇವರಿಬ್ಬರ ಉಕ್ತಿ ಗಳನ್ನೂ ಅಭಿಪ್ರಾಯಗಳನ್ನೂ
ತನ್ನ ವ್ಯಾಖ್ಯಾನಗಳ ಅನೇಕ ಕಡೆಗಳಲ್ಲಿ ಉದಾಹರಿಸಿದ್ದಾನೆ. ಭಟ್ಟೇಲದು
0-೫:
೬೮ ಭಾರತೀಯ ಕಾವೃಮಾಮಾಂಸೆ
ರಾಜನಲ್ಲಂತೂ ಅವನಿಗೆ ವಿಶೇಷ ಗೌರವ ; ಅವನನ್ನು “ವಿದ್ಯತ್ಮವಿ
ಸಹೃದಯ ಚಕ್ರವರ್ತಿ''ಯೆಂದು ಕರೆದು (ಧ್ವನ್ಯಾ., ಪು. ೧೬೦), ಮಹತ್ತ
ದಲ್ಲಿ ವ್ಯಾಸ ವಾಲ್ಮೀಕಿ ಕಾಳಿದಾಸರ ಪಂಕ್ತಿಗೆ ಸೇರಿಸುತ್ತಾನೆ !* ಭಟ್ಟೆ 13.
ರಾಜನ ಸಮಗ್ರ ಕಾವ್ಯವಾಗಲಿ ಲಕ್ಷಣಗ್ರಂಥವಾಗಲಿ । ದೊರೆಯದಿರು
ಪ್ರಡ2ಔ ಅವನು ಈ ಪ್ರಶಂಸೆಗೆ ನಿಜವಾಗಿಯೂ ಅರ್ಹನೇ, ಆಥವಾ
ಗ`ರುಭಕ್ತಿಯಿಂದ ಅಭಿನವಗುಪ್ತನ ವಿಮರ್ಶನಶಕ್ತಿ`ನಲುಪ್ತವಾಯಿತ್ತೇ
ಎಂಬುದನ್ನು ನಿರ್ಣಯಿಸಲು ಸಾಧ್ಯವಿಲ್ಲ.
ಭಟ್ಟ ಶ್ವತೌತನ "ಕಾವ್ಯ ಕೌತುಕ'ವು ಈಗ ನಪ್ಪವಾಗಿದೆ. ಆದರೆ ಅದು
ಮಹತ್ತೃದ ಗ ಸೃ೦ಥವಾಗಿರಬೇಕೆಂದು ಹೇಳಲು, ಪುನ ಮಿಕ್ಕ
ಕೆಲವರು SE ಉದ್ಭರಿಸಿರುವ ವಾಕ್ಯಗಳೇ ಸಾಕು. "" ಪ್ರಜ್ಞಾ
ನವನಮೋಜ್ಲೇಖಶ್ತಾಲಿನೀ ಪ್ರ ಪ್ರತಿಭಾ : ಮತಾ'' ಎಂಬ ಅವನ ಉಕ್ತಿಯ
ನ್ನಂತೂ ಅರಿಯದವರೇ ಇಲ್ಲ. ್ ಕಾವ ೈಕೌತುಕವೂ ಆದ ದಕ್ಕೆ ಅಭಿನವ
ಗುಪ್ತ ನು ಬರೆದ ವಿವರಣವೂ ದೊರೆತರೆ ಕಾವ್ಯ ರಹಸ್ಯವನ್ನು ಕುರಿತ ಅನೇಕ
ವಿಷಯಗಳು ಬಯಲಿಗೆ ಬರಬಹುದು.
ಅಭಿನವಗುಪ್ತನಿ೦ದ ಸಾಹಿತ್ಯವನ್ನು ಕಲಿತ 1 ಕ್ಷೇಮೇಂದ್ರನ ಅಲಂ
ಕಾರ ಗ್ರಂಥಗಳನ್ನು ಕುರಿತು ನ ಮಾತನ್ನು ಇಲ್ಲಿಯೇ ಹೇಳುವುದು
ಉತ್ತಮ. (ಇವನ ಕಾಲ ಕ್ರಿ. ಶ. ೧೧ನೆಯ 'ತತಮಾನದ ಮಧ್ಯಭಾಗ.)
ಕ್ಷೇಮೇಂದೃ್ರನು ವಿಶ್ವ ತ್ವಶುತೂಸಲ. " ಭಾರತಮಂಜರಿ' "ಬೃ 'ಹತ್ಯಥಾ
ಮಂಜರಿ” ಗಳಿಂದ ಪಿಡಿದು " ಚತುರ್ವರ್ಗಸಂಗ್ರೆಹ'ದ ವರೆಗೆ ಅವನ
ಲೇಖನಿಗೆ ಗುರಿಯಾಗದ ವಸ್ತುವಿಲ್ಲ. ಅವನ ಕೃ ತಿಗ ಸಂಖ್ಯೆ ಸುಮಾರು
ಮ್ಹೂವತ್ತೆ ದು. ಛಂದಸ್ಸಿನ ವಿಷಯವಾಗಿ ಅವನು ಬರೆದ " 'ನುವತ್ತೆತಿಕ'
ದಲ್ಲಿ ಪ; ವೃತ್ತ ಗಳ ರಚನೆಯನ್ನು ಕುರಿತು ಮತ್ತೆಲ್ಲಿಯೂ ದೊರೆಯದ ಅಂಶ
ಗಳೂ, "ಯಾವ ಯಾವ ವಿಷಯಕ್ಕೆ ಯಾವ ಯಾವ ವೃತ್ತ ಉಚಿಶಪೆಂಬು
39 "ನಹಿ ನವೋ ಮುಲ್ಮೀತಿರರಾಸಃ ಕಾಳಿದಾತೆ ೩ ಭತ್ತೀಂದುರಾಜೋ ವಾ,
(ಅಭಿನವಭಾ-”ತೀ, [[. ೨೯೩)
40 ಈ ವಾಕ್ಯದ ವಿವಶಣ್ ಮುಂದೆ ೧೦ನೆಯ ಅಧ್ಯಾಯದಲ್ಲ ಬಂದಿದೆ.
4! ಪ್ರುತ್ಯಾಭಿನನಗ'ಪ್ಲಾಖ್ಯಾತ" ಸಂಪಿತ್ಯಂ ಜೋಧವಾಗಧಥೇಃ |
ಅಚಾರ್ಯಶೇಬರಮ ಣೇ] ವ್ವಿದ್ಯಾವಿವೃತಿಕಾರಿಣಃ ॥
(ಬೃಹತ್ಮಥಾಮಂ-ರೀ, ಪು. ೬೨೦)
೪. ಧೃವಿಪ್ರಸ್ಥಾನ ೬೯
ದರ ವಿಚಾರವೂ ಇವೆ. ಅವನು ಕಾವ ಲಕ್ಷಣವನ್ನು ಕುರಿತು " ಕವಿಕರ್ಣಿಕಾ',
" ಔಚಿತ್ಯವಿಚಾರಚರ್ಚಾ ' ಮತ್ತು " ಕವಿಕಂಠಾಭರಣ ' ಎಂಬ ಮೂರು
ಗ್ರಂಥಗಳನ್ನು ಬರೆದನು. ಇವುಗಳಲ್ಲಿ ಮೊದಲನೆಯದು ಈಗ ಲಭ್ಯವಾಗಿಲ್ಲ,
ಧ್ವನಿಪ್ರಸ್ನಾ ನದಲ್ಲಿ ಔಚಿತ್ಯಕೆ ಯಾವ ಪ್ರಾಮುಖ್ಯವುಂಟೆಂಬು
ದನ್ನು ನಾವು ನೋಡಿದೆವು ; ರಸಭಂಗಕ್ಕೆ ಅನಇಚಿತ್ಯ ಹೊರತು ಬೇರೊಂದು
ಕಾರಣವಿಲ್ಲ ಎಂದು ಆನಂದವರ್ಧನನು ಸ್ಪಷ್ಟವಾಗಿಯೇ ನಿರೂಪಿಸಿ
ದ್ದನು. ಅದೇ ಅಭಿಪ್ರಾಯವನ್ನೇ ಕ್ಷೇಮೇಂದ್ರನು,
ಔಚಿತ್ಯಸ್ಯ ಚಮತ್ಕಾರಕಾರಿಣಶ್ಛಾರುಡರ್ವಣೀ |
ರಸಜೀವಿತಭೂತಸ್ಯ ವಿಚಾರಂ ಕುರುತೇಇಥುನಾ॥ 43
ಎಂದು " ಔಚಿತ್ಯವಿಚಾರಚರ್ಚೆ'ಯ ಪ್ರಾರಂಭದಲ್ಲೇ ಅನುವದಿಸಿ ಅದರ
ನಿರೂಪಣಿಗೆ ತೊಡಗುತ್ತಾನೆ. ಪದ, ವಾಕ್ಯ, ಪ್ರಬಂಧ, ಗುಣ, ಅಲಂ
ಕಾರ, ರಸ, ಕ್ರಿ ಯಾಪದ, ಕಾರಕಪದ, ಲಿಂಗ, ವಚನ, ಕಾಲ, ದೇಶ,
ಅಭಿಪ್ರಾಯ, ಸೈಭಾವ, ಪ್ರತಿಭೆ ಇದೇ ಮೊದಲಾದ ಎಲ್ಲ ಅಂತಗಳಲ್ಲೂ
ಔಚಿತ್ಯಾನೌಚಿತ್ಯಗಳನ್ನು ಅನ್ವಯಿಸಿ ನೋಡುತ್ತಾನೆ.
ತಿಲಕಂ ಭಭ್ರತೀ ಸೂಕ್ತಿರ್ಭಾತ್ಮೇಕಮುಚಿತಂ ಪದಂ!
ಚಂದ್ರಾನನೇನ ಕಸ್ತೂರೀಕೃತಂ ಶ2,ಮೇವ ಚಾ೦ದನಂ॥4
ಹೀಗೆ ಒಂದೊಂದು ವಿಷಯವನ್ನೂ ರಮ್ಯವಾದ ಉಪಮೆಗಳ ಮೂಲಕ
ಸೂಚಿಸಿ, ಔಚಿತ್ಯಕ್ಕೂ ಅನೌಚಿತ್ಯಕ್ಕೂ ಬೇರೆ ಬೇರೆ ಉದಾಹರಣಿಗಳನ್ನು
ಕೊಟ್ಟು ನಿದರ್ಶಿಸುವುದು ಕ್ಷೇಮೇಂದ್ರನ ಪದ್ಧತಿ. ಅವನು ಉದಾಹರಣಿ
ಗಳನ್ನು ಹಲವು ಕಡೆಗಳಿಂದ ತೆಗೆಯುತ್ತಾನೆ, ಕಾಳಿದಾಸಾದಿ ಮಹಾ
ಕವಿಗಳ ಪದ್ಯಗಳಲ್ಲೂ ದೋಷವನ್ನು ಹುಡುಕಿದ್ದಾನೆ, ತನ್ನ ಪದ್ಯಗಳನ್ನೂ
ಕೂಡ ಪಕ್ಷಪಾತವಿಲ್ಲದೆ " ಯಥಾ ಮಮ...'' "ನ ಯಥಾ ಮಮ....''
2 “ ಅನೌಚಿತ್ಯಾದೃತೇ ನಾನ್ಯತ" ರಸಭಂ ಸ್ಯ ಕಾರಣಂ” (ಧ್ವನ್ಯಾ., ಪು. ೧೪೫),
* ಸೌಂದರ್ಯಾಸ್ಟಾದದಲ್ಲಿ ಚಮುತ್ಕಾರವನ್ನುಂಟು ಮಾಡತಕ್ಕದ್ದೂ ರಸದ ಜೀವಿತಪೂ
ಆದ ಔಚಿತ್ಯದ ವಿಚಾರವನ್ನು ಈಗ [ಕ್ಷೇಮೇಂದ್ರನು] ಮಾಡುತ್ತಾನೆ,” (ಔಚಿತ್ಯವಿಚಾರ
ಚರ್ಚಾ, ೩)
44 « ಉಚಿತವಾದ ಪದವೊಂದನ್ನು ತಿಲಕವಾಗಿ ತಳೆದ ಸೂಕ್ತಿ ಕಸ್ತೂರಿಯ ತಿಲಕ
ವನ್ನಿಟ್ಟ ಚಂದ್ರಮುಖಯಂತೆ ಚಂದನದ್ಧನ್ನು ಧರಿಸಿದ ಶ್ಯಾಮಲೆಯಂತೆ ಮಿರುಗುತ್ತದೆ.''
ಔಚಿತ್ಯವಿಚಾರಚಚ ೯, ೧೧)
ಓಂ ಭಾರತೀಯ ಕಾವ್ಯಮಾಮಾಂಸ
ಎಂದು ಔಚಿತ್ಯ ಅನೌಚಿತ್ಯಗಳೆರಡಕ್ಕೂ ನಿದರ್ಶನವಾಗಿ ಅಲ್ಲಲ್ಲಿ ಕೊಟ್ಟಿರು
ವುದು ಅವನ ಮನೋಷ್ಯೆಶಾಲ್ಯವನ್ನು ತೋರಿಸುತ್ತದೆ. ೆ ಔಚಿತ್ಯ
ವಿಚಾರಚರ್ಚೆ ' ಓದಲು ರಮ್ಯವಾಗಿದೆ, ಆದರೆ ಕಾವ್ಯತತ್ತ ವನ್ನು
ಕುರಿತು ಧ್ಯನ್ಯಾಲೋಕಕ್ಕಿಂತ ಇದು ಮುಂದುವರಿದಿಲ್ಲ. ರಸವೂ ಉಚಿತ
ವಾಗಿರಬೇಕೆಂದು ಕ್ಷೇಮೇಂದ್ರನು ಹೇಳುವುದು ಹೊಸ ವಿಷಯದಂತೆ
ಕಾಣಿಸಬಹುದು : ಆದರೆ ರಸಪುಪ್ಪಿ ಎಲ್ಲಿ ಉಚಿತ, ಎಲ್ಲಿ ಅನುಚಿತ ಎಂಬು
ದರ ವಿವೇಚನೆ ಧೃನ್ಯಾಲೋಕದಲ್ಲೇೇ ಆಗಲೇ ಬಂದಿದೆ.
" ಕವಿಕಂಭಾಭರಣ'ವು " ಔಚಿತ್ಯವಿ/ತಾರಚರ್ಚೆ' ಗಿಂತಲೂ ಚಿಕ
ಗ್ರಂಥ ಇದು "ಕಾವ್ಯಮಾಮಾಂಸೆ`ಯಲ್ಲಿ ರಾಜಶೇಖರನು ಹಾಕಿಕೊಟ್ಟ
ಕವಿಶಿಕ್ಷಾ ಪರಂಪರೆಗೆ ಸೇರಿದ್ದು. ಇದರ ಐದು ಸಂಧಿಗಳಲ್ಲಿ ಹೇಳಿರುವ
ವಿಷಯವನ್ನು ಕ್ಷೇಮೇಂದ್ರನೇ ಪೀಗೆ ಸಂಗ್ರಪಿಸಿದ್ದಾನೆ :
ಚಮತ್ಕೃತಿಶ್ವ ಶಕ್ಷಾಪ್ತಾ ಗುಣದೋಹೋದ್ದ ತಿಸ್ತತಃ ॥
ಪಶ್ಚಾತ: ಪರಿಚಯಪ್ರಾಪ್ತಿಃ - ಇತ್ಯೇತೇ ಪಂಚಸಂಧಯಃ 14
ಇದರಲ್ಲಿ ಹೇಳಿರುವ ಅಂಶಗಳು ಬಹಳವಾಗಿಲ್ಲದಿದ್ದರೂ ಕ್ಷೇಮೇಂದ್ರನ
ಸರಸಶೈೈಲಿಯಿಂದ ಇದಕ್ಕೊಂದು ರಮ್ಯತೆ ಬಂದಿದೆ. ಉದಾಹರಣಿಗೆ-
ತತ್ತಾಕವೇಃ ಕವಿತ್ವಾಪ್ತಿಃ ಶಿಕ್ಷಾ ಪ್ರಾಪ್ರಗಿರಃ ಕವ್ಳೇ!
ಯನ್ನು ಪ್ರಕೃತ್ಯಾಶ್ಮಸಮಾನ ಏವ
ಕಪ್ಲೇನ ವಾ ವ್ಯಾಕರಣೀನ ನಪ್ಪಃ।
ತರ್ಕೇಣ ದಗ್ಮೊನಲಧೂಮಿನಾ ವಾ”
ಪ್ಯವಿದ್ಧಕರ್ಣಃ ಸ.ಕೆವಿಪ್ರಬಂಧ್ಯೆಃ॥ 1
—ಇಂಥವನಿಗೆ ಎಷ್ಟೇ ಬಗೆಯಲ್ಲಿ ಶಿಕ್ಷಣ ಕೊಡಲಿ, ವಕ್ತ ತ್ವ ಉಂಟಾಗು
ವುದಿಲ್ಲವಂತೆ !
4 “ ಅಲ್ಲ ಕವಿಯಲ್ಲದವನಿಗೆ ಕವಿತ್ವಲಾಭ, ವಾಕ್ಸಾಮರ್ಥ್ಯವನ್ನು ಪಡೆದವನಿಗೆ
ಶಿಕ್ಷಣ, ಶಿಕ್ಷಿತನಾದ ಮೇಲೆ [ಸೂಕ್ತಿ] ಚಮತ್ಕಾರ, ಬಳಿಕ ಗುಣದೋಪಜ್ಞಾನ, ತರುವಾಯ
[ಶಾಸ್ತ್ರಾದಿ ವಿವಿಧ ವಿಷಯಗಳ] ಪರಿಚಯ... ಇವು [ಈ ಗ್ರಂಥದ] ಐದು ಸಂಧಿಗಳು.”
(1. ೨-೩)
46... " ಹುಟ್ಟಿನೊಳೆ ಪಾಪಾಣಸದೃಶನಾವಂ ಮೇಣ"
ಕಪ್ಪದಾ ವ್ಯಾಕರಣದಿಂ ಕೆಟ್ಟುಪೋದಂ
" ಕಿಚ್ಚುಪೊಗೆ ' ತರ್ಕದಿಂ ಸುಟ್ಟರ್ಪನಾವಂ
ಚುಚ್ಚದಾವನ ಕಿವಿಯನೊಳ್ಗವಿಸು ಕಬ್ಬಂ.'' (1. ೨೨)
೫. ಧ್ವನಿವಿರೋಧಿಗಳು, ಅ೦ತರ್ಭಾವ ವಾದಿಗಳು
“ಧೃನ್ಯಾಲೋಕ'ದಲ್ಲ ಆನಂದವರ್ಧನನು ಹೊಸದೊಂದು ಕಾವ್ಯ
ತತ್ತ್ವವನ್ನು ಉದ್ರೋಪಿಸಿದ ಮಾತ್ರಕ್ಕೇ ಎಲ್ಲರೂ ಅದನ್ನು ಒಪ್ಪಲಿಲ್ಲ.
ಅದಕ್ಕೆ ವಿರೋಧವಾಗಿ ವಾದಗಳು ಹೊರಟುವು; ಆಕ್ಷೇಪಣಿಗಳು ಎದ್ದುವು.
ಗುಣಾಲಂಕಾರಗಳನ್ನು ಬಿಟ್ಟರೆ ಕಾವ್ಯಕ್ಕೆ ಸೌಂದರ್ಯ ಕೊಡತಕ್ಕದ್ದು
ಬೇರೆ ಯಾವುದುಂಟು ; ಹಿಂದಿನವರು ಅಂಥದೆಲ್ಲವನ್ನೂ ಹೇಳಿಯೇ ಮುಗಿ
ಸಿಲ್ಲವೆ ? ಗುಣಾಲಂಕಾರಗಳಿಗಿಂತಲೂ ಈ ಧ್ಯನಿ ಬೇರೆಯಾದದ್ದೆ೦ದು
ವಾದಿಸುವ ಪಕ್ಷಕ್ಕೆ ಅದು ಸೌಂದರ್ಯಕಾರಿಯೆಂದು ಒಪ್ಪುವುದು ಹೇಗೆ?
ಒಂದುವೇಳೆ, ಹೊಸ ಅಲಂಕಾರಗಳನ್ನು ಕಲ್ಪಿಸುವ ಹಾಗೆ ಒಂದೆರಡು
ಹೊಸ ಸೌಂದರ್ಯಾಂಶಗಳನ್ನು ಧ್ವನಿಪಕ್ಷದವರು ನಿರೂಪಿಸಿರುವರೆ೦ದು
ಒಪ್ಪಿ ಕೊಂಡರೂ, ಇಷ್ಟುಮಾತ್ರಕ್ಕೇ ಅವರು "` ಧ್ವನಿ, ಧ್ವನಿ'' ಎಂದು
ಕೂಗುತ್ತಾ, ತಾವೇ ಸಹೃದಯರೆಂಬ ಹುಸಿಹೆಮ್ಮೆಯಿಂದ ಉಬ್ಬುತ್ತಾ,
ಕಣ್ಣುಮುಚ್ಚಿ ಕೊಂಡು ಕುಣಿಯಬಹುದೆ ; ಹೊಸದಾಗಿ ಒಂದೆರಡು ಹೆಸರು
ಗಳನ್ನು ಕಲ್ಪಿಸಿದ್ದೇ ಮಹಾಪಾಂಡಿತ್ಯವೋ?--ಹೀಗೆಂದು ಕೆಲವರು ಆಡಿ
ಕೊಂಡಿದ್ದಾರು.' ಎ೦ಡಿನ ಅಧ್ಯಾಯದಲ್ಲಿ ಉದಾಹರಿಸಿರುವ ಮನೋ
ರಥನ ಪದ್ಯ (ಪು. ೫೬) ಇದಕ್ಕೆ ಒಂದು ನಿದರ್ಶನ. ಇನ್ನು ಕೆಲವರು
ಧ್ವನಿಯ ಬಗೆಯೆಲ್ಲವನ್ನೂ ಲಕ್ಷ್ಯಾರ್ಥದಲ್ಲೇ ಅಡಕಮಾಡಲು ನೋಡಿದರು.
ಈ ವಿವಿಧ ಪಕ್ಷಗಳ ಅಭಿಪ್ರಾಯಗಳನ್ನು ಧ್ವನ್ಯಾಲೋಕದ ಮೊದಲನೆಯ
ಕಾರಿಕೆಯಲ್ಲೂ, ಅದರಮೇಲೆ ಆನ೦ದವರ್ಥನನು ಬರೆದಿರುವ ವೃತ್ತಿ ಯಲ್ಲೂ
ಊಹಿಸಿ ಸಂಗ್ರಹಿಸಿ ಅವಕ್ಕೆ ಸವಿಸ್ತರವಾಗಿ ಉತ್ತರವನ್ನೂ ಕೊಡಲಾಗಿದೆ.
ಆದರೇನು? ವಿರೋಧ ತಪ್ಪಲಿಲ್ಲ. ಮುಕುಲಭಟ್ಟನು ತನ್ನ _"ಅಭಿಧಾ
ವೃತ್ತಿ ಮಾತೃಕೆ'ಯಲ್ಹ ನೂತನವಾದ ಧ್ವನಿತತ್ತ ವನ್ನು ಸ್ಮರಿಸಿ, ಅದನ್ನು
ಲಕ್ಷಣಾವೃ ತ್ತಿಯಲ್ಲೆ ( ಸ್ನೇರಿಸಬಹುದೆಂದೂ ಸೂಚಿಸಿ, ಆ ಕಾರ್ಯವನ್ನು
ಕುಶಾಗ್ರಬುದ್ಧಿಯುಳ್ಳ ಮುಂದಿನವರಿಗೆ ಬಿಟ್ಟಿದ್ದನು... ಅವನ ಶಿಷ್ಯನಾದ
1 ಧ್ವನ್ಯಾಲೋಕ, ಪು. ೫-ಲ್ಮ
2 ಹಿಂದಿನ ಅಧ್ಯ್ಯಾಯದಲ್ಲ 94ನೆಯ ಅಡಿಟಪ್ಪಣಿಯನ್ನು ನೋಡಿ (ಪು. ೫೭).
ಒಂ
೭೨ ಭಾರತೀಯ ಕಾವ್ಯವಿಸಾಮಾಂಸೆ
ಪ್ರತೀಹಾರೇ೦ದುರಾಜನು ಉದ್ಭಟನ_ ಕಾವ್ಯಾಲಂಕಾರಸಾರಸಂಗ್ರಹಕ್ಕೆ
ವ್ನಾ ್ಯಖ್ಯಾನ ಬರೆಯುವಾಗ, ತನ್ನ ಗುರುವಿಗಿಂತ ಎರಡು ಹೆಜ್ಜೆ ಎ ಮುಂದೆ
ಹೋಗಿ, ಧೃನಿಪ್ಸಭೇದಗಳನ್ನು ಪರ್ಯಾಯೋಕ್ತಪೇ ಹದವಾದ ಒಂದಲ್ಲ
ಒಂದು ಅಲಂಕಾರದಲ್ಲಿ ಒಳಪಡಿಸುವುದು ಹೇಗೆ ಸಾಧ್ಯವೆಂಬುದನ್ನು
““ ದಿಜ್ಮಾತ್ರ''ವಾಗಿ ತೋರಿಸಿದನು * ಹೀಗೆ ವಿವಾದ ಮುಂದುವರಿಯಿತು.
-ಕ್ವನಿತತ್ತ್ವದ ದ ವಿಮರ್ಶೆಗೆ ಪ್ರತ್ಯೇಕಗ ೈಂಥವನ್ನೇ ವಿಖಾಸಲಾಗಿಟ್ಟು
ಅದನ್ನು ವಿವರವಾಗಿ ಬಂಡಿ ಬಂಡಿಸಿದವರಲ್ಲಿ ಬಹುಶಃ ಭಟ್ಟ ನಾಯಕನೇ ಮೊದಲ
ನೆಯವನು. ಈತನ ಹೃ ದಯದರ್ಪಣ'ವು ಆ ಕಾಲ ಲ ತಂಬ ಪ ಪ್ರಸಿದ್ಧ
ವಾಗಿರಬೇಕು. ಆದರೆ ಈಗ ಅದು ದೊರೆಯುವುದಿಲ್ಲ. ಮುಂದಿನ
ಆಲಂಕಾರಿಕರು. ಮುಖ್ಯವಾಗಿ ಅಭಿನವಗುಪ್ತನು---ಉದ್ಭರಿಸಿರುವ ಕೆಲವು
ವಾಕ್ಯ ಗಳಿಂದಲೂ ಅನುವಾದ ಮಾಡಿರು : ಅಭಿಪ್ರಾಯಗಳಿಂದಲೂ ಅದರ
ಪರಿಚಯವನ್ನು ನಾವು ಪಡೆಯಜೇಕಾಗಿದೆ.* ಕಡೆಗೆ, ಹೃದಯದರ್ಪಣವು
ಮುಖ್ಯವಾಗಿ " ದನ್ತಿಧ್ವಂಸ ಕ್ಕಾಗಿ ಹುಟ್ಟದ ಗ್ರಂಥ ಆಥವಾ ಧರ
ಸ ನಾಟ್ಯಶಾಸ್ತ್ರದ ಮೇಲಿನ ವ್ಯಾಖ್ಯಾನವೇ ಎಂಬೀ ವಿಷಯದಲ್ಲಿ ಕೂಡ
ಭಿನ್ನಾಭಿಪ್ರಾಯ ವುಂಟು; ಬಹುಶಃ ಮೊದಲನೆಯ ಊಹೆಸೇ ಸರಿ.
ಭಟ್ಟ ನಾಯಕನ ಕಾಲವು ಸರಿಯಾಗಿ ಗೊತ್ತಾಗಿಲ್ಲ; ಇವನು ಅಭಿನವಗುಪ್ತ
ನಿಗಿಂತ ಕೆಲವು ವಷ ೯ಕ್ಕೆ ಮಾತ್ರ ಪಿರಿಯವನಾಗಿದ್ದಿ ರಬಹುದು.
ಭಟ್ಟ ನಾಯಕನು. ಕಾವ್ಯದಲ್ಲಿ ರಸಕ್ತಿ ರಬೇಕಾದ ಪ್ರಾಶಸ್ತ್ಯವನ್ನು
ಪೂರ್ಣವಾಗಿ ಅಂಗೀಕರಿಸಿದ್ದನು ; ರಸನಿಪ್ಪತ್ತಿ ಆಗುವುದು ಹೇಗೆಂಬ
ವಿಷಯದಲ್ಲಿ, ತನಗಿಂತ ಹಿಂದೆ ಇದ್ದ ಲೊಲ್ಲಟಶಂಕುಕರ ಮತಗಳನ್ನು
ಖಂಡಿಸಿ ಅವರದಕ್ಕಿಂತ ಹೆಚ್ಚು ಸಮರ್ಪಕವಾದ ವಾದವನ್ನು ಹೂಡಿದ್ದನು.
ಕಾವ ದಲ್ಲಿ ತಬ್ದದ ಅಭಿಧಾವ್ಯಾಪಾರದ ಜೊತೆಗೆ, ಭಾವಕತ್ಯ (ಅಥವಾ
ಭಾವನಾ) , ಭೋಜಕತ್ಯೆ (ಅಥವಾ ಭೋಗೀಕರಣ) ಎಂಬ ಇನ್ನೆರಡು
ವ್ಯಾಪಾರಗಳು ನಡೆಯುತ್ತ ವೆಯೆಂದೂ, ಇವುಗಳ ಮೂಲಕವೇ ಸಹೃದಯ
ವಿಗೆ ನಕಕ ಮತ. ಅಭಿನವಗುಪ್ತನು
3 ಕಾವ್ಯಾಲಂಕಾರ ಸಂಗ್ರಹ, ಲಘುವೃತ್ತಿ, ಪು. ೮೫.೯೨.
“7. R. 01171೩0೩01: 1.10೬ of Bha{ta NiAyaka’
(JORM, I, pp. 267-276) ನೋಡಿ,
೫. ಧ್ವನಿವಿರೋಧಿಗಳು, ಅಂತರ್ಭಾದ ವಾದಿಗಳು [2
ಇದನ್ನು ವಿರೋಧಿಸಿದರೂ ಇದರಿಂದ ಹಲವು ಅಂಶಗಳನ್ನು ಸ್ವೀಕರಿಸಿದ
ನೆಂಬುದು ಮುಂದೆ (೨೨ನೆಯ ಅಧ್ಯಾಯದಲ್ಲಿ) ವಿಶದವಾಗುತ್ತದೆ. ಧ್ಯನಿ
ವಾದದ ಮೇಲಂತೂ ಭಟ್ಟನಾಯಕನ ಖಂಡನೆ ಬಿರುಸಾಗಿಯೇ ನಡೆದಿರ
ಬೇಕು. ಅವನ ಅಕ್ಷೇಪಣಿಗಳನ್ನು ಅಭಿನವಗುಪ್ತನು ತನ್ನ ವ್ಯಾಖ್ಯಾನ
ದಲ್ಲಿ ಮತ್ತೆ ಮತ್ತೆ ಉದಾಹರಿಸಿ ಉತ್ತರ ಕೊಡುತ್ತಾನೆ. ಭಟ್ಟನಾಯ
ಕನು ಮಾಮಾಂಸಕನಾಗಿದ್ದಂತೆ ತೋರುತ್ತದೆ ; ಇದನ್ನು ಕೂಡ ಅಭಿನವ
ಗುಪ್ತನು ಉಪಹಾಸಮಾಡದೆ ಬಿಡುವುದಿಲ್ಲ. ““ಪಶ್ಯತ ಶೊ ್ರೀತ್ರಿಯಸ್ಯೆ
ಅನುವಾಕಹತಬುದ್ಧೇಃ ಉಕ್ತಿಕೌಶಲಂ'' (ಧ್ಯನ್ಯಾ. ಲೋಚನ, ಪು ೧೯)
('" ಷೇದಾಧ್ಯಯನದಿಂದ ಬುದ್ಧಿ ಕಳೆದುಕೊಂಡ ಶ್ರೋತ್ರಿಯನ ಉಕ್ಲಿಕೌಶಲ
ವನ್ನು ನೋಡಿ !'') ; "" ಜೈಮಿನೀಯಸೂತ್ರೇ ಹ್ಯೇವಂ ಯೋಜ್ಯತೇ
ನ ಕಾಷ್ಯೇಪಿ '' (ಧ್ಯನ್ಯಾ. ಲೋಚನ, ಪು. ೬೩) ("" ಜೈಮಿನಿಯ ಸೂತ್ರ
ದಲ್ಲಾದರೆ ಪೀಗೆ ಅನ್ವಯಮಾಡುವುದುಂಟು; ಕಾವ್ಯದಲ್ಲೆ (ನೂ ಅಲ್ಲ”)
ಹೀಗೆಲ್ಲ ಅಭಿನವಗುಪ್ತನು ಬರೆದಿರುವುದೂ ಉಂಟು. ಇಪ್ಪಾದರೂ,
ಭಟ್ಟಿನ್ರಾಯಕನು ಕೆಲವು ಖಚಿತವಾದ ಆಕ್ಷೇಪಣಿಗಳನ್ನು ಎತ್ತಿದ್ದನು. ಅವಕ್ಕೆ
ಉತ್ತರಕೊಡಲು ಅಭಿನವಗುಪ್ತನು ಧ್ವನ್ಯಾಲೋಕಕಾರನಿಗಿಂತ ಮುಂದು
ಬರಿದು ರಸದ್ರನಿಯೊಂದೇ ಕಾವ್ಯದ ನಿಜವಾದ ಆತ್ಮವೆಂದು ಸಂದೇಹಕ್ಕೆ
ಅವಕಾಶವಿಲ್ಲದಂತೆ _ಹೇಳೆಜೇಕಾಯತು. ಭಟ್ಟ ನಾಯಕನ ರಸನಿಷ್ಠೆ
ಯಂತೂ ಅತಿಶಯವಾದದ್ದು. ಅವನಿಗೆ ರಸಾಸ್ತಾದವೊಂದೇ ಕಾವ್ಯದ
ರ್
ಪ್ಲಯೋಜನ: "“ ಕಾವ್ಯೇ ರಸಯಿತಾ_ಸರ್ವೋ ನ್ಹಜೋದ್ಧಾ ನ
ನಿಯೋಗಭಾಕ್'' (ಧ್ಯನ್ಯಾ. ಲೋಚನ, ಪು. ೧೨) (""ಸರ್ವರಿಗೂ ಕಾವ್ಯ
ದಲ್ಲಿ ಉಂಟಾಗುವುದು ರಸಾಸ್ವಾದಪೇ ಹೊರತು ತಿಳಿವಳಿಕೆಯಲ್ಲ, ನಿಯೋಗ;
ವಲ್ಲ WW) ಎಂದು ಘೋಷಿಸಿ, ಈ ಮಿಕ್ಕವನ್ನು ಆನುಪಂಗಿಕ ಪ್ರಯೋಜನ
ವಾಗಿಯಾದರೂ ಗಣಿಸದಷ್ಟು ದೂರಕ್ಕೆ ಅವನು ಹೋಗುತ್ತಾನೆ.
ನಾಟ್ಯಲಕ್ಷಣಕಾರರೂ ಈ ಧ್ಯನಿಚರ್ಚೆಗೆ ಇದೇ ವೇಳೆಯಲ್ಲಿ
ಕೈಹಾಕಿದರು. ಭರತನ ನಾಟ್ಯಶಾಸ್ತ್ರದಿಂದೀಚೆಗೆ ಹುಟ್ಟಿದ ಗ್ರಂಥಗಳಲ್ಲಿ
5 “ ನಿಯೋಗ'' ಎಂದರೆ ಕರ್ತವ್ಯವನ್ನು ಕುರಿತು ಅಚ್ಚೆ " ತಿಳಿವಳಿಕೆ ” ಐತಿಹಾಸಾ
ದಿಗಳಿಂದಲೂ, "" ನಿಯೋಗ '' ವೇದಾದಿಗಳಿಂದಲೂ ಗೊತ್ತಾಗುತ್ತದೆ ; ಇವನು ಒದಗಿಸು
ವುದು ಕಾವ್ಯದ ಕೆಲಸವಲ್ಲ; ರಸಾಸಲ್ಪದವೊಂಡೇ ಇದರ ಪ್ರಯೋಜನ ಎಂಬುದು ಭಟ್ಟ
ನಾಯಕನ ಆಶಯ. :
೬೪ ಭಾರತೀಯ ಕಾವ್ಯಮಾಮಾಂಸ
ಈಗ ದೊರೆಯುವ ಪ್ರಾಚೀನತಮ ಕೃತಿಯೆಂದರೆ ಧನಂಜಯನ *ದಸ್ಯೆ
ರೂಪಕ'. (ಈ ನಡುವೆ ಹುಟ್ಟಿದ ಎಷ್ಟೋ ಮುಖ್ಯಕೃತಿಗಳು ಕಾಲನ
ಬಾಯಿಗೆ ತುತ್ತಾಗಿ ಹೋದುವೆಂದು ಎರಡನೆಯ ಅಧ್ಯಾಯದಲ್ಲೇ ಲಕ್ಷಿಸಿ
ದ್ದೇವೆ.) ಧನಂಜಯನು ಧಾರಾನಗರದ ಮುಂಜರಾಜನ ಆಸ್ಥಾನದಲ್ಲಿ
ದ್ವವನು ; ಆದ್ದರಿಂದ ಇವನ ಕಾಲ ಕ್ರಿ. ಶ. ೧೦ನೆಯ ಶತಮಾನದ
ಕೊನೆಯ ಭಾಗವಾಗುತ್ತದೆ. ಬಹುಶಃ ಧನಂಜಯನ ತಮ್ಮನೇ ಆದ
ಧನಿಕನು ದಶರೂಪಕಕ್ಕೆ ನಿಷಯಗರ್ಭಿತವಾದೊಂದು ವ್ಯಾಖ್ಯಾನವನ್ನು
ಬರೆದಿದ್ದಾನೆ. ದಶರೂಪಕದ ನಾಲ್ಕು ಪ್ರಕಾಶಗಳಲ್ಲಿ ಕ್ರುವಾಗಿ ನಾಟ
ಕದ ವಸ್ತು, ನಾಯಕಾದಿ ಪಾತ್ರಗಳು, ಹತ್ತು ವಿಧದ ರೂಪಕಗಳು (ಇವು
ಗಳ ಜೊತೆಗೆ ಹನ್ನೊಂದನೆಯದಾಗಿ " ನಾಚಿಕೆ” ಯೂ ಸೇರುತ್ತದೆ),
ರಸ ಇವಿಷ್ಟರ ನಿರೂಪಣಿ ಬಂದಿದೆ. ಭರತನ ನಾಟ್ಯಶಾಸ್ತ್ರದ ಬೃಹದಾ
ಕಾರವೂ ವಿಷಯಸಂಕೀರ್ಣತೆಯೂ ಅದಕ್ಕೆ ಗೌರವವನ್ನು ತಂದಿದ್ದ ರೂ
ಉಪಯೋಗಕ್ಕೆ ಅಡ್ಡಿಯಾಗಿದ್ದು ಪು. ದಶರೂಪಕದಲ್ಲಾ ದರೆ ನಾಟ್ಯದ ಪಾಠ್ಯ
ಭಾಗದ ವಿಷೇಚನೆ ಅಡಕವಾಗಿ ಬಂದಿರುವುದರಿಂದ ಅದು ಜನಪ್ರಿಯವಾ
ಯಿತು. ಧನಂಜಯ ಧನಿಕರೂ ಅಭಿನವಗುಪ್ತನೂ ಹೆಚ್ಚು ಕಡಮೆ ಸಮಕಾ
ಲಕರಾಗುತ್ತಾರೆ ; ಧನಂಜಯನಿಗಿಂತ ಅಭಿನವಗುಪ್ತನೇ ವಯಸ್ಸಿನಲ್ಲಿ ಕಿರಿ
ಯವನಾಗಬಹುದು. ಇವರಲ್ಲ ಒಬ್ಬರ ಕೃತಿಗಳ ಪರಿಚಯ ಇನ್ನೊಬ್ಬರಿ
ಗಿದ್ದಿತೇ ಎಂಬುದನ್ನು ನಿರ್ಣಯಿಸಲು ಆಧಾರಗಳಿಲ್ಲ. ದಶರೂಪಕಕ್ಕಿಂತಲೂ
" ಅಭಿನವಭಾರತಿ' ವಿಷಯದಲ್ಲೂ ತೂಕದಲ್ಲೂ ಔಜ್ಜ್ಯಲ್ಯದಲ್ಲೂ ಎಷ್ಟೋ
ಮಿಗಿಲು ಆದರೆ ಈಚಿನ ಆಲಂಕಾರಿಕರು ಸಂಗ್ರಹವಾಗಿರುವ ದಶರೂಪಕ
ವನ್ನೇ ನಾಟಕಲಕ್ಷಣ ನಿರೂಷಣಿಗೆ ಮುಖ್ಯಾಧಾರವಾಗಿ ಇಟ್ಟುಕೊಂಡರು.
4 ಧೀಖೇದಾಯ್ಕೆವ ವಿಸ್ತರಃ '' ಎ೦ಬ ಭಾಮಹನ ಮಾತು ಸುಳ್ಳಲ್ಲ!
ಮತವನ್ನು ಅನುಸರಿಸುತ್ತಾರೆ ; ರಸವು ಧ್ವನಿತವಾಗುವುದೆಂಬ ಮತವನ್ನು
ಒಪ್ಪುವುದಿಲ್ಲ. ಧ್ವನ್ಯಾಲೋಕ್ಷಕಾರನು ಶಾಂತರಸವನ್ನು ಒಪ್ಪಿದ್ದನು. ಈ
ಸಹೋದರರು ನಾಟ್ಯದಲ್ಲಂತೂ ಅದಕ್ಕೆ ಸ್ಥಾನವಿಲ್ಲವೆಂದು ಕಂಠೋಕ್ಷ
ಪಾಗಿ ಕುಸಿದಿದೆ ಕಾವ್ಯದ ವಿರಾಶರಿನುತ್ರಾರ್ಳೇ ತನ್ನ ನನಯ
5 ದಶರೂಪಕ, ;೪. ೩೫, ೪೫ ಮತ್ತು ಇವುಗಳ ಮೇಲಿನ ವ್ಯಾಖ್ಯಾನ.
೫. ಧೃನಿವಿರೋಧಿಗಳು, ಅಂತರ್ಭಾವ ವಾದಿಗಳು ೬೫
ವಿರಲಿ ; ಧನಿಕನು ತನ್ನ ವ್ಯಾಖ್ಯಾನದಲ್ಲಿ ಧ್ವನಿತತ್ತ್ವವನ್ನು ಸಂಗ್ರಹವಾಗಿ
ಅನ್ನವಾದಮಾಡಿ ಬಂಡಿಸುತ್ತಾನೆ. ಅವನು "ಕಾವ ಸಿರ್ ಎ೦ಬ
ಬೇರೊಂದು ಗ್ರಂಥವನ್ನು ಬರೆದಿದ್ದ ನಂತೆ; ಅದರಿಂದ ಕೆಲವು ಭಾಗಗಳನ್ನು
ಈ ಚರ್ಡೆಯಲ್ಲೂ ತ ತನ್ನ "ವ್ಯಾಖ್ಯಾನದ ಮಿಕ್ಕ ಕೆಲವು ಕಡೆಗಳಲ್ಲೂ ಉದ
ರಿಸಿಕೊಡುತ್ತಾನೆ. ವ್ಯಂಜನಾವೃತ್ತಿ ಯಂಬುದು ಬೇರೆ ಇಲ್ಲ; ತಾತ್ಪರ್ಯ
ಶಕ್ತಿಯಲ್ಲೇ ಅದರ ಕಾರ್ಯವನ್ನೆಲ್ಲಾ ಅಡಕಮಾಡಬಹುದೆಂಬುದು "ಅವ ವನ.
ಮತ. ವಾಕ್ಯದಿಂದ ಎಷ್ಟು ಅರ್ಥ ಹೊರಡುತ್ತದೋ ಅದಪ್ಪ ಪ್ವನ್ನೂ
ತಾತ್ಸರ್ಯಶಕ್ತಿಯೇ ತಿಳಿಸುತ್ತದೆ; ವಾಕ್ಯದಲ್ಲರುವ ಪದಗಳ ಅನ್ವಯವನ್ನು
ತಿಳಿಸಿದಪ್ಪಕ್ಕೆ ಅದು ವಿರಮಿಸ.ವುದೆಂದು ಎಸ ಹೇಳಬೇಕು ? ವಕ್ತ ವಿನ
ವಿವಕ್ಷೆ ಏನುಂಟೋ ಅದೆಲ್ಲವೂ ತಾತ್ಸರ್ಯಾರ್ಥಬಲ್ಲಯೇ ಸೇರುತ್ತದೆ;
ರಸಾನುಭವವೂ ಇದರೊಳಗೇ ಅಡಕವಾಗತಕ್ಕದ್ಳು. -ಪೀಗೆಂದು ಧನಿಕನ
ವಾದ.' "" ತಾತ್ಪರ್ಯಶಕ್ತಿ'' ಯೆಂಬುದು ಪ ತ್ಯೇಕವಾಗಿ ಇದೆಯೆಂದು
ದಾರ್ಶನಿಕರಲ್ಲಿ ಕೆಲವರು ) ಹೇಳುತ್ತಾ ರೆ ; ಇದಕ್ಕೂ. ವ್ಯ! ೦ಜನಾವೃತ್ತಿಗೂ
ಭೇದವುಂಟೆಂದು ಧ್ಯನ್ಯಾ ಲೋಕದಲ್ಲಿ ಆನಂದವರ್ಧನನ ನ ದೀಪ್ಪವಾ
ಗಿಯೇ ವಿ: ವಿಚಾರವಾಡಿದ್ದನು. ಆದರೂ ವಿರೋಧ ತಪ್ಪಲಿಲ್ಲ; ಧನಿಕನು
ತಾತ್ಪ ರೃಶಕ್ತಿ ಯ: ವ್ಯಾಪ್ತಿಯನ್ನು ವಿಲ್ತೆರಿಸಿ ತನ್ನ ವಾದವನ್ನು ಬೆಳಸಿದನು.
ಭಟ್ಟನಾಯಕನಿಗೂ ಧನಿಕನಿಗೂ ಧ್ವನಿವಿರೋಧಿಗಳೆಂಬ ಹೆಸರು
ನಿಸ್ನ ಸಿಂದೇಹವಾಗಿ ಸಲ್ಲು: ಸಲ್ಲುತ್ತದೆ. . "ವಕ್ರೋಕ್ತಿಜೀವಿತ 'ಕಾರನಾದ ಕುಂತ
ಕನ್ನ ವಿಷಯದಲ್ಲಿ ಈ ಮಾತನ್ನಾಡುವ ವ ಹಾಗಿಲ್ಲ ಇವನನ್ನು ಸತಾರಾ
ವಾದಿಯೆಂದೇ ಸ ಕರೆಯಶೇಕು : ಘಾ ತನ್ನದೇ ಆದೆ ಒಂದು ಹೊಸ ವಾದ
ವನ್ನು ಹೂಡಿ ಅದರಲ್ಲಿಯೇ ಧ್ವನಿತತ್ತ್ವ್ವದ ಮುಖ್ಯಾಂಶಗಳಿಗೂ ಸ್ಥಳಕೊಟ್ಟು
ಮುಗಿಸುವ ಪ್ರಯತ್ನವನ್ನು ನಡಸಿದನು. ಕುಂತಕನು ಅಭಿನವಗುಪ್ತನಿಗೆ
ಕೆಲವು ವರ್ಷಗಳ ಪಿಂದೆ ಮಾತ್ರ ಇದ್ದಿರಬೇಕು ; ಆತನ ಪಿರಿಯ ಸಮ
ಕಾಲಿಕನಾಗಿದ್ದಿ ರುವುದೂ ಅಸಂಭವವಲ್ಲ. ಅಭಿನವಗುಪ್ತನು ಕುಂತಕನ
ಕೃತಿಯನ್ನು ನೋಡಿದ್ದನೆಂದು ಹೇಳಲು ಕೆಲವು ಆಧಾರಗಳೂ ಉಂಟು.
7 ಅದೇ, ; iv. ೩೬-೩೭ರ ಮೇಲನ ವ್ಯಾಖ್ಯಾನ.
8A Sankaran: Rasa and Dhvani; 119-190; V. Raghavan :
" Writers quoted in the AbhinavabhArati’, pp. 218-222 ನೋಡಿ.
೭೬ ಭಾರತೀಯ ಕಾವ್ಯಮಾಮಾಂಸೆ
ಕುಂತಕನ ಮತದಂತೆ ವಕೊ ಕ್ರೋಕ್ತಿ ಯೇ ಕಾವ್ಯದ ಜೀವಿತ ; ಗ್ರಂಥದ
ಹೆಸರೇ ಇದನ್ನು ತಿಳಿಸುತ್ತದೆ. "" ಕೊ ್ರೀಕ್ತಿ ಯೆಂಬ ಶಬ )ಪೇನೂ
ಅಲ್ಲಂಕಾರಶಾಸ್ತ್ರ ,ದ ಚರಿತ್ರೆ ಯಲ್ಲಿ ಹ್ ಅದಿಲ್ಲದೆ ದಿಲ್ಲದೆ ಅಲಂಕಾ
ರವೇ ಆಗಲಾರದೆಂದು ನ ಹಿಂದೆಯೇ ಹೇಳಿದ್ದನು; ನು, ' ದಂಡಿ
"" ಭಿನ್ನಂ ದ್ವಿಧಾ ಸ್ವಭಾವೋಕ್ಷಿ ರ್ವಕೊ ಕ್ರೋಕ್ತಿತ್ಯೆ ಕೇತಿ ವಾಜ್ಮ್ಮಯಂ '”'ಂ ಎಂದು
ಹೇಳಿ, ಸ್ವಭಾವೋಲಕಿ, ಯನ್ನುಳಿದ ಮಿಕ್ಕ "ಅಲಂತಾರಗಳಿಗೆಲ್ಲ ವಕ್ರೋಕ್ತಿ
ಯೆಂಬ ಸಂಜ್ಞೆ ಯನ್ನು ತೊ ಕೊಟ್ಟ ನು. ಸಾಮ್ ರು ರುದ್ರಟರ ಗ್ರಂಥ ಂಥಗಳಲ್ಲಾದ ದರೆ
ಈ ; ಶಬ್ಬಕ್ತಿ ಕ್ರಿ ದ್ದ ವಿಶಾಲವ್ಯಾಪ್ತಿ ತಪ್ಪಿತು ; ಅದೊಂದು ನಿರ್ದಿಷ್ಟವಾದ ಅಲಂ
ಕಾರದ ತಿಗೆ | ಇಳಿಯಿತು. ಈ ದುರವಸೆ ತ್ಕೈಯಿಂದ ಅದನ್ನು ಉದ್ದ ರಿಸಿ,
Rees ಕೃತಿಯಲ್ಲಿ ಕೇವಲ ಒಂದು ಸೊಚಿನೆಯಂತಿದ್ದ ದಕ ನ
ವನ್ನು ವಿಸ್ತರಿಸಿ, ವರ್ಣವಿನ್ಯಾಸದಿಂದ ಹಿಡಿದು ಪೂರ್ಣಪ್ರಬಂಧದವರೆಗೆ
ಕಾವ್ಯದ ಎಲ್ಲ ಅಂಶಗಳಲ್ಲೂ "" ವಕ್ರೋಕ್ತಿ '' ಅಗತ್ಯವಾಗಿ ಇರಲೇ
ಬೇಕೆಂದು ಕುಂತಕನು ಸ್ಪ್‌ತಿಪಾದಿಸಿದನು.
ಇಲ್ಲಿ ವಕ್ರೋಕ್ತಿಯೆಂದರೆ ನಮಗೆ ಅಪಾತತಃ ತೋರುವಂತೆ ಕುಟಿ
ಲೋಕ್ತಿಯಲ್ಲ ; ಓರೆಕೋರೆಯ ಮಾತಲ್ಲ. " ವಕ್ರೋಕ್ತಿಃ ಪ್ರಸಿದ್ಧಾಭಿ
ಧಾನಾತಿರೇಕಿಣೀ ವಿಚಿತ್ರೆ ಯವ ಅಭಿಧಾ `' (ವಕ್ರೋಕ್ತಿ ಜೀವಿತ, ಪು. ೨೨).
ಎಂದರೆ, ಲೋಕರೂಢಿಯ ಮಾತಿನ ಸ್ಥಿತಿಯನ್ನು ದಾಟಿದ ಮನೋಹರ
ವಾದ ಉಕ್ತಿಯೇ ವಕ್ರೋಕ್ತಿ. ಕು೦ತಕನ ಪರಿಭಾಷೆಯಲ್ಲಿ ವಕ್ರ ತ್ವಷೆಂದರೆ
ವೈಚಿತ್ರ್ಯ. ಕಾವ್ಯದ ಶಬ್ದಾರ್ಥಗಳೆರಡನ್ನೂ ಇದೇ ಅಲಂಕರಿಸ
/
ಕವ್ಯಾಲಂಕಾರ, |, ೮೫ ನೋಡಿ, ಇದನ್ನು ಆಂದೆಯೇ ೩ನೆಯ ಅಧ್ಯಾಯದ
11ನೆಯ ಅಡಿಟಪ್ಪಣಿಯಲ್ಲ (ಪು. ೨೫) ಉದಾಹರಿಸಿದೆ.
ಪಂಪನೇ ಮೊದಲಾದ ಕನ್ನಡ ಕವಿಗಳೂ ಪ ಗ್ರೋಕ್ತಿಯನ್ನು ಪ್ರಶಂಸಿಸಿಸ್ನಾರೆ :
ಕಿವಿಯಿಂ ಬಗೆವೊಡೆ ಕೊಂ
ಕುವೆತ್ತ, ಪೊಸನುಡಿಯೆ ಪುಗುಗುಮುಖದುದು ಸಜುಸ್ಯೊ!
ತವಚಜನೆ ಮಾಡಿ ಸಜುಸ್ಕೊ
ತುವೋಕುಮೇಂ ಬಗೆಯ ಬಟ್ಟೆ ಯಂ ಮುಟ್ಟುಗುಮೇ॥ (ಆದಿಪುರಾಣ, ;. ೧೮)
ಇಲ್ಲ, "" ಕೊಂಕುವೆತ್ತ ಪೊಸನುಡಿ '' ಎಂಬುದು "" ವತ್ರೋಕ್ತಿ ''ಯಲ್ಲದೆ ಬೇರೆಯಲ್ಲ;
ಭಾಮಹೆನ ಅಭಿಪ್ರಾಯವನ್ನೇ ಪಂಪನು ಅನುಮೋದಿಸುವಂತೆ ತೋರುತ್ತದೆ.
10 * ವಾಜ್ಮಯವು ಸ್ವಭಾವೋಕ್ತಿ ವಕ್ರೋಕ್ತಿ ಎಂದು ಎರಡು ಬಗೆ '' (ಕಾವ್ಯಾದರ್ಶ,
1]. ೩೬೩)
೫. ಧ್ವನಿವಿರೋದಿಗಳು, ಅಂತರ್ಭಾವ ವಾದಿಗಳು ೭೭
ತಕ್ಕದ್ದು.' ಈ ವೈಚಿತ್ರ್ಯ ತ್ರ್ಯವನ್ನು ಉಂಟುಮಾಡುವುದು ಕವಿಯ ಪ್ರತಿಭಾ
ಅಮು ಪಮ ಐ.
ವ್ಯಾಪಾರ ; ಬಯ ತು "` ವಕ್ರ ಕವಿವ್ಯಾಪಾರ'', "" ಕಪ್ಪ
ವ್ಯಾಪಾರ ರ ಪಕ್ರತ್ಯ. 3," ಕವಿಕೌಶಲ'' ಎಂದೂ ಕರೆಯುತ್ತಾನೆ. ಇದರ.
ಮಹಿಮೆಯಿಂದ ಕಾವ್ಯದ ಪ್ರತಿಯೊಂದು ಅಂಶವೂ ದಿನಬಳಕೆಯ ರೂಢಿಯ
ಮಾತಿನಂತೆ ಶುಪ್ಕ ವಾಗದೆ, ಆಹ್ಲಾ ದಕಾರಿಯಾಗುತ್ತ ದೆ. ವರ್ಣವಿನ್ಯಾ ಸ,
ಪ್ರಕೃತಿ ಪ್ರತ್ಯ ಚ ಮೊದಲಾದವುಗಳ ಪ ಸ್ವಯೋಗ, ವಾಕ್ಯ ದಲ್ಲ ಅಲಂ ಮ
ಗಳನ್ನು ಅಳವಡಿಸುವುದು, "ಯಾವುದಾದರೊಂದು ಕದಾಣಾಗ್ರ ರಮ್ಯವಲ್ಲ
ದಿದ್ದರೆ. ರಸವನ್ನಾ ಗಲಿ ಪಾತ್ರಸ ಸ್ವಭಾವಗೌರವವನ್ನಾಗ ಗಲಿ ಭಂಗಪಡಿಸುವಂ
ತಿದ್ದತೆ ಆ ಅದನ್ನು ತಿದು ದ್ದುವುದು, ಒಟ್ಟು 3 ಪ್ರಬಂಧದಿ೨ದ ಒಂದು ರಃ ರಸವಾಗಲಿ
ರಾವ
ವ್ಯಾಪಾರವಕ್ರತೆಯ ಚೇರೆ' "ಜರೆ ಪ್ರಕಂರಗಳು. ಕಡೆಗೆ, ಕಾವ್ಯಕ್ಕೆ
ಹೆಸರು `ಫೊಡುವುದರಲಿ ಕೂಡ ಕವಿಪ್ರತಿಭೆ OE, i
"ವಕ್ರೋಕ್ತಿಜೀವಿತ 'ವಷ್ಟೂ ಕಂವತಿನಾನ್ಯಾದಾರವ ವೈಚಿತ್ರ್ಯವನ್ನು
ತೋರಿಸುವುದಕ್ಕೇ ಮಾಸಲಾಗಿರುವ ಗ್ರಂಥ. ಕಾವ್ಯದ ಸಮಸ್ತಾ ಹ
ಗಳಲ್ಲಿಯೂ ಅದು ಸ್ಪಪ ಕವಾಗಿ ಕಣ: :ಬರುವುದೆಂಬುದನ್ನು )ಿ ಕುಂತಕನು
ನಿರರ್ಶಿಸಿದ್ದಾನೆ. ಸಾನಔಿನ್ನವಾಗಿ ನಮ್ಮ ನಮ್ಮ ಆಲ ಆಲಂಕಾರಿಕರು ಕಾವ್ಯಕೆ
ಪ್ರತಿಭೆ ಬೀ ಥ್ರ ಬೀಜವೆಂದು ) ಹೇಳಿ ಆ ವಿಷಯದ ನಿರೂಪಣಿಯನ್ನು ಅಪ್ಪಕ್ಕೇ
ಮುಗಸುವುದೇ ಪ ಪದ್ಮ ತಿ. ಕುಂತಕನು ಇದಕ್ಕೆ ದೊಡ್ಡ ಅಪವಾದ.
ಸೂತಕದ ಅತಿ ಮನೋಹರವಾದ ಶೈಲ. ಮೂಲಗ್ರಂಥ
ವನ್ನು ಕಾರಿಕೆಗಳ ರೂಪದಲ್ಲಿ ಬರೆದು ಅದರ ಮೇಲೆ ತಾನೇ ವಿಸ್ತಾರ
ವಾದ ವೃತ್ತಿಯನ್ನು ರಸವತ್ತಾದ ಗದ್ಯದಲ್ಲಿ ಬರೆದಿದ್ದಾನೆ... ಉದಾ
1! ಐಾಚ್ಛಂ ಅಭಿಧೇಯ೨, ವಾಚಕ ಶನ, ಪಕ್ತೋಕ್ತಿರಲುಕರಣು ' ವಕ್ರೋಕ್ತಿ
ಜೀವಿತ, ಪು. ೪೪)
1: ಅಸ್ತಾಂ ಪಸ್ತುಪು ವೈೈದಗ್ಮ್ಯಂ ಕಾವ್ಯೇ ಕಾಮಪಿ ವಕ್ರತಾಂ।
ಪ್ರಥಾನ ಸಂವಿಧಾನಾ೨ಕನಾಮ್ಮಾಪಿ SK ಕವಿಃ (ಪು. ೨೪೩)
* "ವಕ್ರೋಕ್ತಿ ಜೀವಿತ 'ದಲ್ಲ ಒಟ್ಟು ನಾಲ್ಕು ಉನ್ಮೇಷಗಳಿದ್ದಂತೆ ತೋರುತ್ತದೆ ;
ಪೂರ್ಣಗ್ತಂಥನು ದೊರೆತಿಲ್ಲ ಡಾ! ಎಸ, ಕೆ. ಡೇ ಅವರ (ಎರಡನೆಯ) ಸಂಸ್ಕರಣದಲ್ಲ
ಮೂರ: ಯ ಉನ್ಮೇಪದ ೧೯ನೆಯ ಕಾರಿಕೆಯ ತನಕ ಪೂರ್ತಿಯಾಗಿ ಮುದ್ರಿಸಿ, ತ್ರುಟಿತವಾ
ಗಿದ್ದ ಮುಂದಿನ ಭಾಗಗಳಿಂದ ಕೆಲಕೆಲವು ವಾಕ್ಕಗಳನ್ನುದ್ದರಿಸಿ ಸಾರಾಂಶವನ್ನು ಸಂಗ್ರ
ಹಿಸಿ 'ಕೊಟ್ಟದೆ. ನಾಲ್ಕನೆಯ ಉನ್ಮೇಪದಲ್ಲ ಪ ಕ್ರಬಂಧವಕೃತೆಯ ವಿವರಣಿಯ ನಡುವೆ ಇದೂ
ಅಸಪಾಪ್ತವಾಗಿ ನಿಂತುಹೋಗಿದೆ,
೭೮ ಭಾರತೀಯ ಕಾವ್ಯಮಾಮಾಂಸ
ಹರಣಿಗಳನ್ನು ಪ್ರಾಚೀನ ಕಾವ್ಯ ನಾಟಕಗಳಿಂದ ಸಮಯೋಚಿತವಾಗಿ
ಎತ್ತಿ ಕೊಡುವುದಲ್ಲದೆ, ಅವುಗಳಲ್ಲ ಕೆಲವನ್ನು ಕುರಿತು ಹೃದ್ಯವೂ ಸಾರ
ಗ್ರಾಹಕವೂ ಆದ ವಿಮರ್ಶೆಯನ್ನು ಮಾಡಿದ್ದಾ ಪಃ ಕಾವ್ಯದ ನಿಜವಾದ
ಸವಿಯನ್ನು ಕುಂತಕನು ಅರಿತಿದ್ದನು. ಮಹಿಮಭಟ್ಟನು ಇವನನ್ನು ಕುರಿತು
"" ಸಹೃದಯಮಾನೀ'', "" ಕಾವ್ಯಕಾಂಚನಕಪಾಶ್ಮ ಮಾನೀ '' ಎಂದು
ಮೊದಲಾಗಿ ವಿಶೇಷಣಗಳನ್ನು ಉಪಯೋಗಿಸುತ್ತಾನೆ. (ವ್ಯಕ್ತಿ ವಿಷೇಕ,
ಪು. ೧೨೫, ೨೪೩). ಇವುಗಳಲ್ಲಿ "ಮಾನೀ ' ಎಂಬ ಅವಜ್ಞಾ ಸೂಚಕ
ವಾದ ಭಾಗವನ್ನು ಕಿತ್ತುಹಾಕಿದರೆ ಅವು ಕುಂತಕನಿಗೆ ಚೆನ್ನಾಗಿ ಅನೈಯಿಸು
ತ್ತವೆ. ನಿಜವಾಗಿಯೂ ಕುಂತಕನು ಕಾವ್ಯದ ಚಿನ್ನಕ್ಕೆ ಒರೆಗಲ್ಲು.
ಇವನ ಸೂಕ್ಷ್ಮ ರಸಿಕತೆಯನ್ನು ವಿಶದಪಡಿಸಲು ಒಂದೇ ಒಂದು
ನಿದರ್ಶನವನ್ನು ಇಲ್ಲಿ ಕೊಡಬಹುದು. ರಾಜಶೇಖರನ " ಬಾಲರಾಮಾ
ಯಣ 'ದ ಒಂದು ಪದ್ಯವನ್ನು ಉದಾಹರಿಸಿ, ಅದರ ಮೇಲೆ ಅವನು ಟೀಕೆ
ಮಾಡುತ್ತಿದ್ದಾನೆ :
ಸದ್ಯಃ ಪುರೀಪರಿಸರೇಣ ಶಿರೀಷಮೃದ್ಧೀ
ಸೀತಾ ಜವಾತ್ ತ್ರಿಚತುಐಾಣಿ ಪದಾನಿ ಗತ್ವಾ!
ಗ೦ತವ್ಯಮದ್ಯ ಕಿಯ:ದಿತ್ಯಸಕೃದು ಅಮಾಣ್
ದಾಮಾಶ್ತುಣಃ ಕೃತವತೀ ಪ್ರಥಮಾವತಾರಂ॥ (ಬನಲರಾ., ;, ೩೪)
[ಪುರದ ಪರಿಸರದೊಳೆ ಶಿವೀಷಕೋಮಲೆ ಸೀತೆ
ಬೇಗಬೇಗನೆ ಮೂರು ನಾಲ್ಕು ಹೆಜ್ಜೆಗಳಸಿರಿಸಿ,
« ಎನಿತು ದೂರದ ಪಯಣವಿಂದೆ ''ನ:ತ ಹಲ ಬಾರಿ
ನುಡಿದು ರಾಮನ ಮೊದ 2 ಕ೦ಬನಿಯ:ನುಕ್ಕಿಸಿದಳು.]
" ಇಲ್ಲಿ, " ಅಸಕೃತ್' ಎಂದರೆ ಪ್ರತಿಕ್ಷಣಸೂ " ಎಷ್ಟು ದೂರ ಈ ದಿನ
ಹೋಗಬೇಕು? ' ಎ೦ದಳೆಂಬ ಪರಿಸ್ಪ೦ದವು ಸ್ವಭಾವಮಹತ್ತ ನವನ್ನು ಪ್ರಕಾಶಪಡಿ
ಸುವುದಿಲ, ರಸಪರಿಪೋಷಕ್ಕಾದರೂ ಅಂಗವಾಗುವುದಿಲ್ಲ ಏಕೆಂದರೆ ಸಹಜ
ವಾದ ಯಾವುದೋ ಒಂದು ಔಚಿತ್ಯದಿಂದ ಹೊರಡಲು ನಿರ್ಧರಿಸಿದ ಸೀತೆಗೆ ಸಗಿಕು
ಮಾರ್ಯದ ದೆಸೆಯಿಂದ ಈ ಬಗೆಯ ಅಲೋಚನೆ ಹೃದಯದಲ್ಲಿ ಸ್ಟುರಿಸಿದರೂ ಅದು
ಮಾತಿನಲ್ಲಿ ಹೊಮ್ಮು ವುದೆಂದು ಸಂಭಾಖಿಸಲು ಸಹ್ಮದಯರಿಗೆ ಸಾಧ್ಯವಿಲ್ಲ. ಅಲ್ಲದೆ
ದ್ ರಫುವಂಶ ' ಅಥವಾ "ಶಾಕುಂತಲ 'ದಂಥ ಒಂದಾದರೂ ಮಹಾಕೃತಿಯ
ಮೇಲೆ ಪೂರ್ಣವಾಗಿ ಕುಂತಕನು ವ್ಯಾಖ್ಯಾನವನ್ನು ಬರೆದಿದ್ದರೆ ಎಷ್ಟು ಚೆನ್ನಾಗಿತ್ತು ;
ಅನರ್ಫು ರತ್ನದಂತೆ ಅದು ಉಪಾದೇಯುವಾಗುತ್ತಿತ್ತು. ಅಥವಾ, ಕುಂತಕನು ಬರೆದ
ವ್ಯಾಖ್ಯಾನಗೃಂಥಗಳೇನಾದರೂ ಕಾಲಸಾಗರದ ತಳದಲ್ಲ ಹೂತುಹೋಗಿವೆಯೋ |
೫. ಧೃನಿವಿರೋಧಿಗಳು, ಅಂತರ್ಭಾವ ವಾದಿಗಳು ೭೯
ಪ್ರತಿಕ್ಷಣವೂ ಅವಳು ಈ ಮಾತನ್ನು ಹೈಳುತ್ತಿದ್ದಲ್ಲಿ ರಾಘವನಿಗೆ ಮೊಟ್ಟಮೊದಲ
ಕಣ್ಣೀರು ಬಂದಿಸನ್ನುವುನಕ್ಕೂ ಅನು ಚೆನ್ನಾ ಗಿ ಹೆ.:೦ದಿಕೊಳ್ಳುವುದ್ದ ; ಎಲ್ಲೋ
ಒಂದು ಸಲ ಆಸನ್ನು ಕೇಳಿದರೆ ತಾನೆ ಸದ ಉಂಟಾಗುವುದು | ಇಲ್ಬಯ ಭಾವವು
ಅತ್ಯಂತ ರಮಣೀಯವಾಗಿದು. ಕೂಡೆ, ಕವಿಯೆ ಅವಧಾನವು ತುಸ ಮಾತ್ರ ಚಲ
ಸಿದ್ದೆರಿಂದ ಕಟ" ಹೋಗಿದೆ. ಅದಕಾರಣ "ಅವಶ”' (ಇ ವಶತಪ್ಲಿ '] ಎಂದು
ಇಲ್ಲಿ ಪಾಠವನ್ನು ಇಟ್ಟು ಕೊಳ್ಳಬೇಕು.” ;ಪಕ್ಲೊ ೇಕ್ಕಿಜೀವಿತ, ಪು. ೨೧-೨೨).
ಮೇಲಿನ ವಿಮರ್ಶೆ ಕುಂತಕನ ಸೂಕ್ಷ್ಯದೃಪ್ಟಿಯನ್ನು '* ಮಾತ್ರ
ವಲ್ಲದೆ, ರಸದಲ್ಲಿಯೂ ಪಾತ್ರಸ್ಯಭಾವಪರಿಪೋಪದಲ್ಲಿಯೂ ಅವನಿಗಿದ್ದ
ಅಭಿನಿಷೇಶವನ್ನೂ ಚೆನ್ನಾಗಿ ತೋರಿಸುತ್ತದೆ. ರಸದಿಂದಲ್ಲೇ ಕವಿವಾಣಿ
ಜೀವಿಸುವುದೆಂದು ಅವನು ಒಂದು ಕಡೆ ಹೇಳುತ್ತಾನೆ; ರಸವತ್ತ ಸವತ್ತ್ಯ್ಯವೇ
ಕಾದೆ ್ಯೈ ೈಕಸಾರವೆಂದು ಇನೊ ೦ದು ಕಡೆ ಸೂಚಿಸುತ್ತಾನೆ. ಪಾತ್ರ
ಸ್ವಭಾವಕ್ಕೆ ಕುಂದುಬಾರದಂತೆ, ಅದು ಇನ್ನೂ ಉತ್ಕ ರ್ಪಗೊಳ್ಳುವಂತೆ,
ಕಾವ್ಯಾಂಗಗಳನ್ನು ಅಳವಡಿಸಬೇಕೆಂದು ಸ್ಪಪ್ಪವಾಗಿ ನಿರ್ದೇಶಿಸುತ್ತಾ ನೆ.
ಇತ್ತ ಸವಿಯ ಸ್ನಾವವನಷ್ಟ ಅವನು ಗಣಿಸದೆ ಬಿಟ್ಟಿಲ್ಲ. ವೈದರ್ಭೀ
ಗೌಡಿ ಶೀ ಎಂದು" ಮೊದಲಾಗಿ ರೀತಿಗಳನ್ನು ದೇಶಧರ್ಮವನ್ನನುಸರಿಸಿ
ವಿ೦ಗಡಿಸ ಸುವುದರಲ್ಲಿ ಯಾವ ಔಚಿತ್ಯ ವಿದೆ? ಕವಿಸ್ಪಭಾವವನ್ನು ಆಧಾರ
ವಾಗಿಟ್ಟುಕೊಂಡು' ಕಾವ, ಧಮಾರ್ಗಗಳಿನ್ನು ಕಲ್ಪಿಸುವುದೇ ಸಮಂಜಸ
ಎಂದ್ರು ಹಳ ಅದರಂತೆ ಸುಕುಮಾರ, : ವಿಚಿತ್ರ » ಮಧ್ಯಮ ಎಂದು ಮೂರು
ಮಾರ್ಗಗಳನ್ನು ನಿರೂಪಿಸುತ್ತಾನೆ. "* ಗಾ ಸ್ವಭಾವ _ಕವಿಸ್ವ [ಭಾವ
ಗಳಿಗೂ, ಸಾ ಇವನು ಕೊ ಕೊಟಿ ತ್ತಿರುವ ಪಾ ಮುಖ್ಯವು
ಯಾದ _ರಾಕ್ಷಣಕನೆಂದು ಹೇಳಲು. ಸಾಧ್ಯ ವಿಲ್ಲ... ಅನನ ತತ್ತ್ವ ವೆಲ್ಸ
15 ಮೂಲಪದ್ಯದ "" ಅಸಕೃತ್'' ಎಂಬ ಪದಕ್ಕೆ ಕು೦ತಕನು " ಪ್ರತಿಕ್ಷಣಂ '' ಎಂದು
ಅರ್ಥ ಮಾಡಿರುವುದು ಅಷ್ಟೇನು ಸಮಂಜಸವಲ್ಲವೆಂದು ಮಾತ್ರ ಹೇಳಬೇಕಾಗಿದೆ. "ಹಲವು
ಬಾರಿ '' ಎಂದು ಏಿಪರಿಸಿದ್ದರೆ ಸಾಕಂಗಿತ್ತು; ಕುಂತಕನು ಎತ್ತಿರುವ ಆಕ್ಷೇಪಣಿ ಅಗಲೂ
ಸಿಲ್ಲುತ್ತಿ ಇತ್ತಿ.
10 ನಿರಂತರರಸೋದ]ರಗರ್ಭಸಂದರ್ಭನರ್ಭರಾ॥ |
ಗಿರಃ ಕವೀನಂಂ ಜೀವಂತಿ ನ ಕಥಾಮಾತ್ರಮಾಶ್ರಿತಾಃ॥
(ವಕ್ರೋಕ್ತಿ ಜೀವಿತ, ಪ್ರು ೨೨೫).
17 "ರಸವತ್ ' ಎಂಬ ಅಲಂಕಾಸದ ವಿಷಯನ್ನು ಹೇಳುವಾಗ (ಅದೇ ಪು. ೧೭೪),
18 ವಕ್ರೋಕ್ತಿಜೀವಿತ, ಪು. ೪೫ರಿಂದ ಮುಂದಕ್ಕೆ ನೋಡಿ,
೮೦ ಭಾರತೀಯ ಕಾವೃಮಾಮಾಂಸೆ
"" ವಿಚಿತ್ರ ವ ಅಭಿಧಾ'' ("" ವೈಚಿತ್ರ್ಯವನ್ನುಳ್ಳ ಉಕ್ತಿ'') ಎಂಬುದರಲ್ಲಿ
ಮುಕ್ತಾಯವಾಗುತ್ತದೆ. ಕಾವ್ಯಸೌಂದರ್ರಜಿಜ್ಞಾಸೆಯಲ್ಲಿ ಇದಿನ್ನೂ
ಕೆಳಗಿನ ಮೆಟ್ಟಲು. ಸಾಮಾನ್ಯ ರೀತಿಯಲ್ಲ ಹೇಳುವುದನ್ನು ಬಿಟ್ಟು
ಬೇರೊಂದು ಬಗೆಯಾಗಿ ಹೇಳುವು ದೇಕೆ ; ಇಲ್ಲ _ವೈಚಿತ್ರ (ವೂ ಅದರಿಂದ
ಆಹ್ಲಾದವೂ ಹುಟ್ಟುವ ಬಗ್ಗೆ_ ಹೇಗೆ ಎಂಬುದನ್ನು "`ಕುಂತ್ರಕನು
ನಿರೂಪಿಸಲಿಲ್ಲ. ನಿಜವಾದ ಸಮಸ್ಯೆ ಇರುವುದು ಇಲ್ಲ ಇದಕ್ಕೆ
ಉತ್ತ ರಕೊಟ ದ್ದರಿಂದಲ್ಲೇ .. 'ಫ್ರತಿತತ್ರ ಆಪು ಸ್ಥಾ ್ಲ ಯಯಾಗಿ ನಿಂತದ್ದು.
ಕುಂತಕನ ಎ ವಕೊ ್ರೀಕ್ರಿವಾದವು ಧ್ವನಿತತ್ತ್ವದ ಕಡೆಗೆ ಸಾಗಿ ಅರೆದಾರಿಯ
ಲ್ಲಿಯೇ ನಿಂತುಬಿಟ್ಛಿ ದೆಯೆನ್ನಬೇಕು. ಕುಂತಕನಿಗೆ ನ್ವನ್ಯಾ ಲೋಕದ ಪ ಪರಿ
ಚಯ ಚೆನ ಚೆನ್ನಾಗಿದ್ದಿತು. ಅವನ ಕವಿವ್ಯಾಪಾರವಕ್ರತೆಯ ಅನೇಕ
ಪ್ರಕಾರಗಳು ಧ್ವನ್ಯಾಲೋಕದ ಮೂರನೆಯ "'ಇದ್ದೊ ತದಲ್ಲಿ ವರ್ಣ,
ಪ್ರಕೃತಿ, ಪ್ರತ್ಯಯ, ನಿಪಾತ, ವಾಕ್ಯ ಮೊದಲಾದ ವ್ಲಂಜಕಗಳಿಂದ ದ್ಯನಿ
ಹೊರಡುವುದರ ನಿರೂಪಣಿಯನ್ನೇ ಅನುಸರಿಸಿ ಕಲ್ಪಿತವಾದಂತಿವೆ ;
ಧ್ವನ್ಯಾಲೋಕದ ಅನೇಕ ಉದಾಹರಣಪದ್ಯಗಳನ್ನು ಕುಂತಕನು ಸಮ
ಯೋಚಿತವಾಗಿ ತಾನೂ ಉಪ ಸೋಗಿಸಿಕೊಳ್ಳುತ್ತಾನೆ; ಅಲ್ಲಿಯ ಅಭಿ
ಪ್ರಾಯಗಳನ್ನೂ ಆಗಾಗ ತನ್ನ ಮಾತುಗಳಲ್ಲಿ ಅಳವಡಿಸುತ್ತಾನೆ.
ವ್ಯಂಗ್ಯವ್ಯಂಜಕ ಭಾವವು ಅನೇಕ ಕಡೆಗಳಲ್ಲಿ ಉಂಟೆಂದೂ ಒಪ್ಪಿ ಕೊಳ್ಳು
ತ್ತಾನೆ. * ಇದೆಲ್ಲವನ್ನೂ ಲಕ್ಷಿಸಿಯೇ ಮಹಿಮ ಭಟ್ಟನು, ವಕ್ರೋಕ್ತಿ
ವಾದಕ್ಕೂ ಧ್ಯನಿವಾದಕು ಕ್ಕೂ ವಸ್ತು ವಿನಲ್ಲಿ ಭೇದವಿಲ್ಲ; ಧ್ವನಿಲಕ್ಷಣವನ್ನೇ
ಇಲ್ಲಿ ಲ್ಲ ಬೇರೊಂದು ಭಂಗಿಯಿಂದ | ಹೇಳಿದೆ ಎಂದು ಆಕ್ಷೇಪಿಸಿದನು. ೫
ಅಂತೂ ಕುಂತಕನು ಅಂತರ್ಭಾವವಾದಿ. ತನ್ನ ಕಾಲದಲ್ಲಿ ಪ್ರಚುರ
ವಾಗಿದ್ದ ರೀತಿ, ಅಲಂಕಾರ, ಧ್ವನಿ, ರಸ ಮೊದರಾದ ಕಾವ್ಯತತ್ತ. ಗಳೆ
ಲ್ಲವನ್ನೂ ಕವಿವ್ಯಾಪಾರ ವಕ್ರತೆಯೆಂಬ ಹೊಸ ತತ್ತ್ವದಲ್ಲಿ ಅಡಕ ಮಾಡಲು
ಅವನು “ಪ್ರ ಯತ್ನಿ ವವು ಧ್ವನಿತತ್ತ ದಷ್ಟು ಆಳವಾಗಿ ಅವನ ವಿಚಾರವು
19 ಉದಾ.-ಪುುಲ೮೭; ಪು. ೧೩೪ (.... « ಪಾಚೈತ್ಯೇನೇತಿ ನೋಕ್ತಂ, ವ್ಯಂಗ್ಯ
ತ್ರೇನಾಪಿ ಪ್ರುತಿಪಾದನಸಂಭವಾತ" '')
20 4... ಥ್ರನೇರೆಃದೇದಂ ಲಕ್ಷಣ ಅನಯಾ ಭಗ್ಯಾ ಅಭಿಪಿತಂ ಭವತಿ, ಅಭಿನ್ನ
ತ್ಯಾತ್ ವಸ್ತುನಃ: ಅತ ಏನ ಚಾಸ್ಯ ತ ಏನ ಪ್ರಭೇದಾಃ ತಾನ್ಯೇವ ಉದಾಹರಣಇನಿ
ತೆ್ಕಿರುಪದರ್ಶಿತಾನಿ. "' (ವ್ಯಕ್ತಿವವೇಕ, ಪು. ೧೨೬)
೫. ಧ್ವನಿವಿರೋಧಿಗಳು, ಅಂತರ್ಭಾವವಾದಿಗಳು ೮೧
ಇಳಿಯಲಿಲ್ಲವಾದ ಕಾರಣ, ಅನುಯಾಯಿಗಳೇ ಇಲ್ಲದೆ ಅವನು ಒಂಟಿ
ಯಾಗಿ ನಿಲ್ಲಬೇಕಾಯಿತು. ಈಚಿನ ಆಲಂಕಾರಿಕರಂತೂ ಅವನಿಗೆ
ನ್ಯಾಯವಾಗಿ ಸಲ್ಪಬೇಕಾಗಿರುವಪ್ಟು ಗೌರವವನ್ನು ಕೂಡ ಕೊಡುವುದಿಲ್ಲ;
"ವಕ್ರೋಕ್ತಿ ಜೀವಿತ 'ದ ಹೆಸರನ್ನೇನಾದರೂ ಅವರು ಎತ್ತಿದರೆ ಅದು
ಬಹುಶಃ ಖಂಡನೆಗಾಗಿಯೇ. ಆದರೂ ಒಂದು ವಿಷಯದಲ್ಲಿ ಮಾತ್ರ ಕುಂತ
ಕನ ಕಾರ್ಯವು ಈಚಿನವರಿಗೆಲ್ಲ ಉಪಜೀವ್ಯವಾಯಿತು. ಧ್ವನಿತತ ಪು ವು
ಪ್ರ ಸಿದ್ದವ ವಾದ ಬಳಿಕ ಅಲಂಕಾರದ ಸ್ಟಾ ನವು ಕಾವ ಕಾವ್ಯ ದಲ್ಲಿ _ ಬಿದ್ದು
ಅದೊಂದು ಉಕ ವಿಶೇಷ ಮಾತ್ರ ವೆಂಬ ಸ ಪ್ರಚುರವಾಗಿತ್ತು.
4 ಅನಂತಾ' ಹಿ ವಾಗ್ವಿಕಲ್ಪಾಃ $ pe ತ್ರೃಕಾರಾ ಏ ಏವ ಚ ಅಲಂಕಾರಾಃ'',
(ದ್ವನ್ಯಾ ಪು. ROE ಮಾತಿನ ವಿಕಲ್ಪ ಗಳು ಅನಂತ; ಗ ಬಗೆ
ದ್ದನು. ಕುಂತಕನಾದರೆ, ಉಕ್ತಿ 3 ವಿಶೇಷವು ಕವಿಪ: ಪ್ರ ತಿಭಾಜನ್ವ: ವಾದ
ಹ ಸೊಗಸನ್ನು ಪಡೆದಿದ್ದ ಹೊರತು '`ತವಾಗವುಂಲ್ಲವಂದು
ಸ್ವಷ್ಟವಾಗಿ ನಿರ್ಧರಿಸ ಹಿಂದಿನಿಂದ. ಅಂಗೀಕ್ಕ ತವಾಗಿದ್ದ ಅಲಂಕಾರ
ರಾಶಿಯನ್ನೆ ಲ್ಲಾ ಸ್ವತಂತ್ರವಾಗಿ ವಿಮರ್ಶೆಮಾಡಿ, ಕೆಲವಕ್ಕೆ ಹೊಸ ಲಕ್ಷಣ
ಗಳನ್ನು” ಹೇಳ, ಮತ್ತೆ” ಕೆಲವಕ್ಕೆ ಸ್ಕಾ ನವನ್ನು ತಪ್ಪಿ! ಸಿದನು. ಪ್ರತಿ
೫21 ಅಲಂಕಾರದಲ್ಬೂ. ಕವಿಪ ್ರತಿಭೆಯಿಂದ' "'ನಿಂಟಾದ ಸೌಂದರ್ಯ
ವಿರಲೇಜೇಕೆಂದು ಈಚನ. ಲಾಕ್ಷಣಕರೆಲ್ಲ. 'ಧ್ವನಿಪ್ತಸ್ತಾನದವರು ಕೂಡು
ಒಪ್ಪಿ ತೊಂಡು ಅಡೇ ರೀತಿಯಲ್ಲಿ ಲಕ್ಷ್ಮವಿಧಾಗಾದಿಗಳನ್ನು ಕಲ್ಪಿಸು
ತಾಕಿ” `ಈ ವಿಷ ಯದಲ್ಲಿ ಕುಂತಕನ ಪಧಾನ "ಅಫಿಸವಗುಪ್ತ. ನನ್ನು
ಕೂಡ ಅವರಿಸೆಡೆ ಓಡಲಿಲ್ಲ” ಧೃನ್ಯಾಕೋಕದ' ಮಾತುಗಳಿಗೆ. ಅವನು
ವ್ಯಾ ಹ್ಯಾನ' "ಬರೆಯುತ್ತಾ, "" ವಾಗ್ಯಿಕಲ್ಪ ''ವೆಂದರೆ ವಾಕ್ಸ ವೃತ್ತಿಗೆ
ME ಪ್ರತಿಭಾವ್ಯಾಪಾರಪ್ರಕಾರವೂ ಆಗಬಹುದೆಂದು ಒಪ್ಪು
ತ್ತಾನೆ ; ೫ ಹೀಗೆ ಅಲಂಕಾರಗಳ ಅನಂತತೆಗೆ ಪ್ರತಿಭೆಯ ಅನಂತತೆಯೇ
ಕಾರಣಪೆಂದು ಸೂಚಿಸುತ್ತಾನೆ.
ಮೇಲೆ ಕುಂತಕನ ವಿಷಯವನ್ನು ಹೇಳುತ್ತಾ, ಅವನನ್ನು ಬಂಡಿ
ಸಿದ ಮಹಿಮಭಟ್ಟನ ಹೆಸರನ್ನು ಎತ್ತಿದೆವಪ್ಟೆ. ಇವನ ಗ್ರಂಥದ ಹೆಸರು
ಧನ್ಯಾ ಲೋಚನ, ಪು. ೮.
K- M: 6
೮೨ ಭಾರತೀಯ ಕಾವ್ಯಮಾಮಾಂಸೆ
ವ್ಯಕ್ತಿವಿವೇಕ '. ವ್ಯಂಜನಾವೃತ್ತಿಯೆಂಬ ತಬ್ದವ್ಯಾಪಾರವೊಂದು ಬೇರೆ
ಉಂಟೆಂಬ ತತ್ತ್ವವನ್ನು ಅಮೂಲಾಗ್ರವಾಗಿ ಖಂಡಿಸಿ ಧ್ವನಿಯೆಲ್ಲವನ್ನೂ
"" ಅನುಮಾನ ''ದಲ್ಲ ಒಳಪಡಿಸುವುದಕ್ಕಾಗಿ ಈ ಕೃತಿಯನ್ನು ಮಹಿಮ
ಭಟ್ಟನು ರಚಿಸಿದನು... " ವ್ಯಕ್ತಿ'' ಎಂದರೆ ವ್ಯಂಜನಾವ್ಸಾಪಾರ;
ಅದರ ವಿಷೇಚನೆಗಾಗಿಯೇ ' ವ್ಯಕ್ತಿವಿವೇಕ ' ಹೊರಟಿತು. ಮಹಿಮ
ಭಟ್ಟನು ಅಭಿನವಗುಪ್ತನಿಗಿಂತ ಈಚೆಯವನು ; ಧ್ವನ್ಯಾಲೋಕಲೋಚನ
ದಿಂದ ಒಂದು ಭಾಗವನ್ನು ತನ್ನ ಗ್ರಂಥದಲ್ಲ ಉದ್ಧರಿಸಿ ಬಂಡಿಸಿದ್ದಾನೆ
(ಪೆ. ೯) ೯೧). ಇವನ ಕಾಲ ಹನ್ನೊ ೦ದನೆಯ "ಮಾನದ ಪೂರ್ವಾರ್ಧ
ವೆಂದು ಹೇಳಬಹುದು.
" ಅನುಮಾನೆಲ್ವಾಂತರ್ಭಾವಂ ಸರ್ವಸ್ಯೆ ವೆ ಧ್ವನೇಃ ಪ್ರಕಾಶಯಿತುಂ!
ವ್ಯಕ್ತಿ ಎವೇಕಂ ಕ:ರುತೇ ಪ್ರಣಮ್ಯ ಮಹಿಮಾ ಪರಾಂ ವಾಚಂ।''
"" ಎಲ್ಲ ಬಗೆಯ ಧ್ವನಿಯೂ ಅನುಮಾನದಲ್ಲೇ ಅಡಕವಾಗು
ವುದನ್ನು ತೋರ್ಪಡಿಸುವುದಕ್ಕಾಗಿ, ಮಹಿಮನು ಪರಾವಾಕ್ಕಿಗೆ ನಮಿಸಿ,
ವ್ಯಕ್ತಿ ವಿವೇಕವನ್ನು ರಚಿಸುತ್ತಾನೆ''. _ಪೀಗೆಂಬ ವೀರಪ್ರತಿಜ್ಞೆಯಿಂದಲ್ಲೇ
ಗ್ರಂಥವು ಪಾ ಿರಂಭವಾಗುತ್ತದೆ. ಮಹಪಿಮಭಟ್ಟನ ಸ್ವಭಾವದಲ್ಲಿ ಔದೃತ್ಯ
ಹೆಚ್ಚು. ಬೇಗ ಕೀರ್ತಿಯನ್ನು ಗಳಿಸಬೇಕೆಂಬ ರಭಸದಲ್ಲಿ ` ದರ್ಪಣ'
ವನ್ನು ಕೂಡ ನೋಡದೆ--ಇದು ಭಟ್ಟನಾಯಕನ " ಹೃದಯದರ್ಪಣ 'ವೇ
ಆಗಿರಬೇಕು--ಸ್ವತಂತ್ರ ವಾಗಿಯೇ ಈ ಗ್ರಂಥವನ್ನು ತನ್ನ ಮೊಮ್ಮಕ್ಕಳಿಗೆ
ತಿಳಿವಳಿಕೆ ಕೊಡಲು ಬರೆದನಂತೆ |! ೫ ತನಗೆ ಸಮಾನರಾದವರನ್ನು
ಮೆಚ್ಚಸುವುದಕ್ಕಾಗಿಯೇ ಅವನ ಪ್ರಯತ್ನ. ಈ ಕೆಚ್ಚಿಗೆ ಸಮನಾದ
ಪಾಂಡಿತ್ಯವೂ ತೀಕ್ಷ್ಣ ವಿಮರ್ಶನಶಕ್ತಿಯೂ ಅವನಲ್ಲ ಇದ್ದುವು.
ವ್ಯ ್ರಿದೇಕೆ 'ದಲ್ಲಿ ಧ್ಯನಿಲಕ್ಷಣಾಕ್ಷೇಪ, ಶಬ್ಬಾನೌಚತ್ವವಿಚಾರ, ಅಂತ
ರ್ಭಾಪೋಪದರ್ಶನ ಎಂಬ ಹೆಸರುಳ್ಳ ಮೂರು ವಿಮರ್ಶಗಳಿವೆ. ಇದರಲ್ಲಿ
ಮೆಹಿಮಭಟ್ಟನು `` ಧ್ವನ್ಯಾ ತೋಕದ 'ಅನೇಕ ಅಭಿಪ್ರಾಯಗಳನ್ನು ಬ: ಬಹು
ಮರಾ
ಸೂಕ್ಷ್ಮವಾಗಿ ಪರೀಕ್ಷಿಸಿ ೨ ಅನೇಕ್ ಗೋಪ ಗಳನ್ನು ಉದ್ದಾ ಚಸುತ್ತಾನೆ.
ದ ಅ
ಗ್ರ ಂಥದ ದ ಎರಡನೆಯ ವಿಮರ್ಶವು ಮುಖ್ಯವಾಗಿ ಅನೇಕ ರೀತಿಯ
ಶಬ್ದಾರ್ಥ ಹೋಷಗಳ ಖಂಡನೆಗೆ ಮಾಗದ ಯಾವ ಸನ
22 ವ್ಯಕ್ತಿವಿವೇಕ, :. ೪ (ಪ್ರು ೬), ಸ. ೩೫ (ಪು. ೪೫೬).
೫. ಧ್ವವಿವಿರೋಧಿಗಳು, ಅಂತರ್ಭಾವವಾದಿಗಳು ೮೩
ಇಲ್ಲದೆ ಪ್ರಸಿದ್ಧ ಕವಿಗಳ ಪದ್ಯಗಳಲ್ಲೂ ಹುಳುಕುಗಳನ್ನು ** ಖಲನಂತೆ 33
ಎತ್ತಿ ಹಿಡಿಯುತ್ತಾನೆ. ಇದೇನು, ತನ್ನ ಕೃತಿಗಳಲ್ಲ ಸ್ವೇಚ್ಛೆಯಾಗಿ ಬರೆ
ಯುವವನು ಇನ್ನೊಬ್ಬರನ್ನು ಹೇಗೆ ಅನುಶಾಸನಮಾಡಿಯಾನು ಎಂದು
ಯಾರಾದರೂ ಕೇಳಿದರೆ, ವೈದ್ಯನು ತಾನೇ ಅಪಥ್ಯಮಾಡಿದರೂ ಇತರ
ರನ್ನು ನಿಷೇಧಿಸುವುದಿಲ್ಲವೆ ಎಂಬುದು ಅವನ ಉತ್ತರ! ೫
ಮಹಿಮಭಟ್ಟನ ವಾದದ ತಿರುಳು ಇಷ್ಟು: ಶಬ್ದಕ್ಕಿ ರುವುದು ಅಭಿಧಾ
ಪಾರವೊಂದೇ ; ಇದರಿಂದ ಮುಂದಕ್ಕೆ ಅನುಮಾನದ ಮೂಲಕ ಅನು
ಮೇಯಾರ್ಥವು ಹೊರಡುತ್ತದೆ. ಹೀಗೆ ಅರ್ಥವು ವಾಚ ಭೊ ಅನುಮೇಯ
ಎಂದು ಎರಡು ಬ ಬಗೆ. ವ್ಯ ೦ಗ್ಯಾ ರ್ಥವೆಂದು ರ ಕರೆಯುವುದಿಲ್ಲ ಅನುಮಾನದ
ಮೂಲಕ. ಗಮ್ಮವಾ ವಾಗುವುದ್ದೇತೆ ಡು ಷ್ಟ ೈಂಜನಾವೃತ್ತಿ ಯೆನ್ನುವುದು ಬೇರೆ
ಇಲ್ಲ. ಕಾವ್ಯದ ಸಾರವಾದ ರಸಪ ಪ್ರತೀತಿ ಕೂಡ ಹೀಗೆಯೇ ವಿಭಾವಾನು
ಫಾವಾದಿಗಳಿಂದ ಗಮ್ಯವಾಗುತ್ತದೆ.೨ ಈ ತನ್ನ ಮತಕ್ಕನುಸಾರವಾಗಿ,
ಮಹಿಮಭಟ್ಟನು ಧ್ವನಿಲಕ್ಷಣವನ್ನು ಹೇಳುವ ಧೃ್ವನ್ಯಾಲೋಕದ ಕಾರಿಕೆ
ಯನ್ನೇ ಮಾರ್ಪಡಿಸಿ,
ವಾಚ್ಯಸ್ತದನುಮಿತೋ ವಾ ಯತ್ರಾರ್ಥೊ_ರ್ಥಾಂತರಂ ಪ್ರಕಾಶಯತಿ!
ಸಂಬಂಧತೇ ಕುತಶ್ಚಿತ್ ಸಾ ಕಾವ್ಯಾನುಮಿತಿರಿತ್ಯುಕ್ತಾ॥
(ವ್ಯಕ್ತಿ ವಿವೇಕ, ;, ೨೫, ಪು. ೧೦೫)
"" ಎಲ್ಲಿ ವಾಚ್ಯಾರ್ಥವಾಗಲಿ ಅದರಿಂದ ಅನುಮಿತವಾದ ಅರ್ಥವಾಗಲಿ
ಬೇರೊಂದು ಅರ್ಥವನ್ನು ಯಾವುದಾದರೂ ಸಂಬಂಧದ ಮೂಲಕ ಪ್ರಕಾಶ
ಗೊಳಿಸುವುದೋ ಅದಕ್ಕೆ ಕಾವ್ಯಾನುಮಿತಿ ಎಂದು ಹೆಸರು.'--ಹೀಗೆಂದು
ಹೇಳಿ, ತಾನು ಪ್ರತಿಪಾದಿಸಿದ ಅನುಮಾನಕ್ಕೆ ""ಕಾವ್ಯಾನುಮಿತಿ '' ಯೆಂದು
ಹೆಸರು ಕೊಟ್ಟನು. ಮಹಿಮಭಟ್ಟನ ವಾದವನ್ನು ಮಮ್ಮಟ, ವಿಶ್ವನಾಥ
ಮೊದಲಾದ ಈಚಿನ ಆಲಂಕಾರಿಕರೆಲ್ಲ ಖಂಡಿಸಿದ್ದಾರೆ. ಅವನ ಕೃತಿಗೆ
33 ಪ್ಯಕೃತಿಷ್ಯಯಂತ್ರಿತಃ ಕಥಮನುಶಿಷ್ಯಾದನ್ಯಮಯಮಿತಿ ನ ವಾಚ್ಯಂ!
ವಾರಯತಿ ಭಿಷಗಪಬ್ಯಾದಿತರ್ರಾ ಪ್ಯಯಮಾಚರನ್ನಪಿ ತತ"! (11. ೨, ಪು. ೧೫೩)
2೫ ಶಬ್ಧಸೈಕಾಭಿಧಾ ಶಕ್ತಿರರ್ಥಸೆ ಕವ ಲಿಂಗತಾ।
ನ ವ್ಯಂಜಕತ್ಯಮನಯೋಃ ಸಮಸ್ತೀತ್ಯು ಪಪಾದಿತಂ॥ (೨೭, ಪು. ೧೦೫)
25 ಇದು ಶಂಕುಕನ ಅನುಮತಿಪಾದವನ್ನು ಹೋಲುತ್ತದೆ; ಶಂಕುಕನೂ ಮಹಿಮ
ಭಟ್ಟನೂ ನ್ಫೈೇಯಾಯಿಕರಂತೆ ಕಾಣಿಸುತ್ತಾರೆ.
6-8
೮೪ ಭಾರತೀಯ ಕಾವ್ಯಮಾಮಾಂಸೆ
ವ್ಯಾಖ್ಯಾನವನ್ನು ಬರೆದ ೫ ರು ಯ್ಯಕನಿಗೇ ಅನುಮಿತಿವಾದದಲ್ಲಿ ತ್ರ
ಯಿಲ್ಲ re ತ್ರ ಬಂಡನಮಂಡನಗಳನ್ನೆ ಲ್ಲಾ ಇಲ್ಲಿ ವಿಮರ್ಶಿಸಲು ಸೌಧ
ವಿಲ್ಲ. ಆದರೆ ಮಪಿಮಭಟ್ಟನ ದೃ ಪ್ರಿಯನ್ನು ಕುರಿತು ಒಂದು ಮಾತನ್ನು
ಹೇಳಬೇಕು. " ಬೆಟ್ಟದಲ್ಲಿ ಹೊಗೆ ಏಳುತ್ತಿದೆ; ಆದಕಾರಣ ಅದರಲ್ಲಿ
ಬೆಂಕಿಯಿದೆ '' ಎಂದು ಊಹಿಸುವುದು, ಕಾವ್ಯದಲ್ಲಿ ವಿಭಾವಾನುಭಾವಾದಿ
ಗಳ ಅರಿವಿನ ಮೂಲಕ ರಸ ವನ್ನು ಆಸ್ವಾದಿಸುವುದು. ಈ ಎರಡರಲ್ಲೂ
ಒಂದೇ ಅನುಮಾನಸರಣಿ ಗೋಚರವಾಗುವುದೆಂದ: ಮಹಿಮಭಟ್ಟನ
ವಾದ. ತರ್ಕಶಾಸ್ತ್ರ ಪ್ರಸಿದ್ಧವಾದ ಅನುಮಾನದಲ್ಲಿರಬೇಕಾದ ಪಕ್ಷ,
ಹೇತು ಮೊದಲಾದ ಅವಯವಗಳೆಲ್ಲವೂ "` ಕಾವ್ಯಾನುಮಿತಿ'' ಯಲ್ಲರಬೇಕಾ
ಗಿಲ್ಲ; `` ಸಾಧ್ಯ ''ವಾದ ರಸದ ಅರಿವು ಕಾವ್ಯಾನುತ್ಲೀಲನಾಭ್ಯಾಸದಿಂದ
ಸಹೃದಯನಿಗೆ ನೇರವಾಗಿ ಉಂಟಾಗುತ್ತದೆ--ಎಂದು ಅವನು ಒಪ್ಪಿ
ಕೊಂಡರೂ, ಅವನ ಮತದಂತೆ ಕಾವ್ಯಾನುಭವವು ತರ್ಕದ ದಾರಿಯಲ್ಲಿ
ನಡೆಯುವುದರಿಂದ ಬುದ್ಧಿ ವಿಷಯವೇ ಆ ಕಜ ಆದರೆ ಬುದ್ಧಿ
ಗಮ್ಯವಾಗತಕ್ಕದ್ದು ಶಾಸ್ತ್ರ; ಕಾವ್ಯವಾದರೆ ಪ್ರತಿಭಾಗಮ್ಯ. ಇಷೆರಡ
ಕ್ಕಿ ರುವ ಮೂಲವ್ಯ ತಾ ್ಯಸವು ಇಲ್ಲಿ ಮಾಯವಾಯಿತು. ಮಹಿಮಭಟ್ಟ ನು
ಪ್ರತಿಭಾತತ್ತ್ಯ ವನ್ನು 'ತತೊ ಕ್ತಿ ಕೋತಶ'ವೆಂಬ ತನ್ನ ಇನ್ನೊಂದು ಗ್ರಂಥ
ದಲ್ಲಿ ಚರಸ್ ಪ್ರತಿಪಾದಿಸಿದ್ದನಂತೆ ; ೫ "ವ್ಯಕ್ತಿವಿವೇಕ ' ದಲ್ಲಿ ತ
ಪ್ರತಿಭೆಯನ್ನು ಕುರಿತು ಅರ್ಥಗರ್ಭಿತವಾದ ಮಾತುಗಳನ್ನಾಡಿದ್ದಾನೆ.
ಇಂಥ ಪ್ರಾಜ್ಞನಿಗೆ, ಕಾವ್ಯದಲ್ಲಿ ತರ್ಕಕ್ಕೆ ಎಡೆಯಿಲ್ಲ, ಇದರದು ಅನುಮಾ
ನದ ಮಾರ್ಗವಲ್ಲ ಎಂದು ಏಕೆ ತೋರಲಿಲ್ಲವೋ.
ಮಹಿಮಭಟ್ಟನ ಬಂಡನೆಯೆಲ್ಲವೂ ವ್ಯ೦ಜನಾವ್ಯಾಪಾರತತ್ತ್ವ
ವನ್ನು ಕುರಿತು ಮಾತ್ರ. ಅದೊಂದನ್ನು ಬಿಟ್ಟರೆ, ಧ್ವನ್ಯಾಲೋಕದ ಅಭಿಪ್ರಾ
ಯಗಳ ವಿಷಯದಲ್ಲಿ ಹೆಚ್ಚಿನ ಆಕ್ಷೇಪಣಿ ಅವನಿಗಿಲ್ಲ. ರಸದ ವಿಚಾರ
26 ಈ ವ್ಯಾಖ್ಯಾನವು ಪೂರ್ಣವಾಗಿ ದೊರೆತಿಲ್ಲ. ಇದರಲ್ಲಿ ಕರ್ತೃವಿನ ಹೆಸರು
ಹೇಳಿಲ್ಲದಿದ್ದರೂ, ಹರ್ಷಚರಿತವಾರ್ತ್ತಿಕ, ಅಲಂಕಾರಸರ್ವಸ್ವೆ ಮೊದಲಾದವುಗಳ ಕರ್ತೃ
ಮಾದ ರುಯ್ಯಕನೇ ಇದನ್ನು ರಚಿಸಿದವನೆಂದು ಹೇಳಲು ಆಧಾರವುಂಟು.
27? ಇತ್ಯಾದಿ ಪ್ರತಿಭಾತತ್ತ್ವಮಸ್ಕಾ ಭಿರುಪಪಾದಿತಂ।
ಶಾಸ್ತ್ರೇ ತತ್ತ್ಯೋಕ್ತಿಕೋಶಬ್ಯ ಇತಿ ನೇಹ ಪ್ರಪಂಚಿತಂ॥
(ವ್ಯಕ್ತಿವಿವೇಕ, 11 `೧೧೯, ಪು. ೩೯೧)
೫. ಧೃನಿವಿರೋಧಿಗಳು, ಅಂತರ್ಭಾವವಾದಿಗಳು ೮೫
ದಲ್ಲಂತೂ ಅನಂದವರ್ಧನನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗು
ತ್ತಾನೆ. ರಸಪ್ರಾಧಾನ್ಯಕ್ಕೆ ಅವಕಾಶವಿಲ್ಲದಂತೆ ತೋರುವ ಗುಣೀಭೂತ
ವ್ಯಂಗ್ಯಾದಿಗಳ ನಾ ೬ ಒಪ್ಪಿಕೆ "ಕೊಂಡದ ಕ್ಕಾಗಿ ಧ್ವನಿಪಕ್ಷದವರನ್ನು ಅಕ್ಷೇಪಿಸು
ತ್ತಾ ನೆ (ಪು. ೧೪೨). ಮತಿಮಭಟ್ಟಿ ನಗೆ ರಸವೇ ಕಾವ್ಯ ದ ಆತ್ಮ; ರಸವಿಲ್ಲ
ದದ್ದ ರೆ ಕಾವ್ಯತ್ಯವೇ ಸಿದ್ಧಿ ) ಸುಪುದಿಲ್ಲ. ರಸ ಪ್ರ ಕ ವಿಭಾವಾದಿ
ಗಳನ್ನು 'ತೊತೆಗೊಳಿಸುವುಡೇ. ಕವಿಕಾರ್ಯ.** ಇಷ್ಟನ್ನೂ ಸ್ಪಷ್ಟವಾಗಿ ಹೇಳು
ವುದಲ್ಲದೆ, ಸಾರರೂಪವಾದ ಈ ಕೆಳಗಿನ ಉಕ್ತಿಯನ್ನು ಪಾ ಚನ ಕೃತಿ
ಯೊಂದರಿಂದ ಉದ್ಭರಿಸಿಕೊಡುತ್ತಾನೆ:
ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ!
ತೇಪಾಮೇವ ಪ್ರಯೋಗಸು ನಾಟ್ಕಂ ಗೀತಾದಿರ೦ಜಿತಂ॥೫ (ಪು. ೯೬)
"" ಅನುಭಾವವಿಭಾವಗಳ ವರ್ಣನೆಗ್ಲೇ ಕಾವ್ಯಪೆಂದು ಹೆಸರು
ಇವುಗಳನ್ನೇ ಗಾಯನಾದಿಗಳಿಂದ ರ೦ಜನೆಗೊಳಿಸಿ ಆಡಿ ತೋರಿಸಿದರೆ
ನಾಟ್ಯವಾಗುತ್ತದೆ.''...ಕಲಾಮಿಾಮಾಂಸೆ ಇದಕ್ಕಿಂತ ಹೆಚ್ಚು ದೂರ
ಹೋಗಲಾರದು.
ವ್ಯಕ್ತಿವಿವೇಕದಲ್ಲ ಕಾವ್ಯವನ್ನು ಕುರಿತು ಉಪಾದೇಯವೂ ವಿಚಾರ
ಕ್ಷಮವೂ ಆದ ಅನೇಕ ವಿಷಯಗಳು ಅಲ್ಲಲ್ಲೇ ಬಂದಿವೆ; ಇದು ಕ್ಲಿ ಪೈವಾ
ದರೂ ಓದಬೇಕಾದ ಗ್ರಂಥ. ಆದರೆ ಧ್ಯನಿತತ್ತ್ಯವನ್ನು ಖಂಡಿಸುವ
ಮುಖ್ಯೋದ್ದೇಶತದಿಂದಲ್ಲೇ ಮಪಿಮಭಟ್ಟನು ಹೊರಟದ್ದರಿಂದ ಈಚೆಗೆ ಬಂದ
ಆಲಂಕಾರಿಕರು ಅವನಿಗೆ ಪುರಸ್ಕಾ ರ ಕೊಡದೆಹೋದರು; ಅವನ
ಕೃತಿಯೂ ಅನುಯಾಯಿಗಳಿಲ್ಲದ್ದ ರಿಂದ ಮೂಲೆಗೆ ಸೇರಿತು.
ಭೋಜರಾಜನ ಔದಾರ್ಯ ದ ಕಥೆಗಳು ಯಾರ ಕಿವಿಗೆ ತಾನೆ ಬಿದ್ದಿಲ್ಲ!
(ಈತನ ಕಾಲ ಕ್ರಿ. ತ.ಸು. ೧೦೧೦೧೦೫೪. -) ಕಾಳಿದಾಸ, ದಂಡಿ, ದಾಣ,
ಭವಭೂತಿ ಮೊದಲಾದ ಕವಿಗಳೆಲ್ಲರೂ ಅವನ ಫೋಷಣಿಗೆ ಒಳಗಾಗಿದ್ದ
2 “ತಾವ್ಯಸ್ಯಾತ್ಮನಿ ಸಂಜ್ಞಿನಿ ರಸಾದಿರೂಷೇ ನ ಕಸ್ಯಚಿದ್ದಿಮತಿಃ'' (1 ೨೬, ಪು. ೧೦೫);
"“....ತದಭಾವೇ ಚ ಕಾವೃತ್ಯೊವ ನ ಸ್ಯಾತ"....'' (ಪು. ೯೫) ; ""ಕವಿವ್ಯಾಪ-ರೋ ಹಿ ವಿಭಾ
ವಾದಿ ಸಂಯೋಜನಾತ್ಮಾ ರಸಾಭಿವ್ಯಕ್ತ್ಯವ್ಯಭಿಚಾರೀ ಕಾವ್ಯಮುಚ್ಛೃತೇ ” (ಪು. ೯೫) ;
4 ರಸಾತ್ಮಕಂ ಚ ಕಾವ್ಯಂ....'' (ಪು. ೧೨೬) ; ಇತ್ಯಾದಿ.
29 ಈ ಶ್ಲೋಕ ಒಂದುವೇಳೆ ಭಟ್ಟತೌತನ " ಕಾವ್ಯಕೌತುಕ 'ದಿಂದ ತೆಗೆದದ್ದಾಗಿರ
ಬಹುದೆ? ಇದೇ ನೀತಿಯಲ್ಲ ಅರ್ಥಪೂರ್ಣವಾದ ಅನೇಕ ಶ್ಲೋಕಗಳನ್ನು ಮಹಿಮ
ಭಟ್ಟನು ಅಲ್ಲಲ್ಲೇ ಉದಾಹರಿಸುತ್ತಾನೆ. ಅಕರವನ್ನೂ ಗೂಚಿಸಿದ್ದಲ್ಲ ಅವನಿಗೆ ನಾವು
ಕೃತಜ್ಞತೆಯನ್ನು ಇಮ್ಮಡಿಯಾಗಿ ಸಲ್ಜಸುತ್ತಿದ್ದೆವು.
೮೬ ಭಾರತೀಯ ಕಾವ್ಯಮಾಮಾಂಸೆ
ರೆಂದು ನಿರೂಪಿಸುವ ದಂತಕಥೆಗಳ್ಳೇನೋ ಇತಿಹಾಸದ ಜೆಳಕಿನಲ್ಲ ಜೆದರಿ
ಹೋಗಿಪೆ. ಆದರೆ ಭೋಜನು ಶಾಸ್ತ್ರ ಸಾಹಿತ್ಯಗಳಲ್ಲಿ ಪ್ರವೀಣನಾಗಿದ್ದ
ನೆಂಬುದಕ್ಕೆ ಸಾಕ್ಷಿಯಾಗಿ ಅವನ ಹೆಸರಿನಲ್ಲಿ ಹಲವು ಗ್ರಂಥಗಳು ನಿಂತಿವೆ.
ಇವುಗಳಲ್ಲಿ (" ಸರಸ್ವತೀಕಂಠಾಭರಣ', " ಶ್ರ ೦ಗಾರಪ್ರಕಾತ' ು೦ಬೆರಡೂ
ಅಲಂಕಾರಶಾಸ್ತ್ರದ ವಿಷಯವನ್ನು ಪ್ರತಿಪಾದಿಸಲು ಹುಟ್ಟಿದವು. ಸರಸ್ವತೀ
ಕಂಠಾಭರಣದಲ್ಲಿ ದೋಷ ಗುಣ ಅಲಂಕಾರ ರಸಭಾವಾದಿಗಳ ವಿಚಾರ
"ಮುಖ್ಯವಾಗಿ ಬಂದಿದೆ ; ಇವುಗಳ ಸಂಖ್ಯೆ, ವಿಭಜನೆ ಮೊದಲಾದ ಹಲವು
ಅಂಶಗಳಲ್ಲ ಭೋಜನ ಅಭಿಪ್ರಾಯಗಳು ನೂತನವಾಗಿಷೆ., ಈ ಗ್ರಂಥ
ದಲ್ಲಿ ಭೋಜನು ದಂಡಿಯ ಕಾವ್ಯಾದರ್ಶದಿಂದ ನೂರಾರು ಪದ್ಯಗಳನ್ನು
ಉದಾಹರಿಸಿರುವುದು ಗಮನಾರ್ಹವಾದ ವಿಷಯ.
ಸಾಮಾನ್ಯ ವಾಚಕನಿಗೆ ಸರಸ್ವತೀಕಂಠಾಭರಣವೇ ತಕ್ಕ ಮಟ್ಟಿಗೆ
ದೀರ್ಫವಾದ ಗ್ರಂಥವೆನ್ನಿ ಸಬಹುದು ; ಆದರೆ " ಶೃಂಗಾರಪ ಶ್ರಕಾಶ'ದ
ಮುಂದೆ ಇದರ ಗಾತ್ರ ಅಲ್ಪವಾಗಿ ಕಾಣಿಸುತ್ತದೆ. " ಶೃಂಗಾರ ಪ್ರಕಾಶ'ವು
ಸಂಸ್ಕೃತ ಲಕ್ಷಣವಾಜ್ಮಿ ಯದಲ್ಲೇ ದೀರ್ಪತಮವಾದ ಗ್ರಂಥ. ಇದರ
ಮೂವತ್ತಾರು ಅಧ್ಯಾಯಗಳು ಮದರಾಸು ಓರಿಯೆಂಟಲ್ ಲೈಬೈರಿಯಲ್ಲನ
ಕೈಬರೆಹದ ನಾಲ್ಕು ಸಂಪುಟಗಳನ್ನು ತುಂಬಿ ಒಟ್ಟು ೧೯೦೮ ಪುಟಗಳನ್ನು
ವ್ಯಾಪಿಸಿವೆ. ೫ ಫಸರಸ್ಪತೀಕಂಠಾಭರಣದಲ್ಲಿ ಹೇಳಿದ್ದ ವಿಷಯಗಳನ್ನೇ
ಭೋಜನು ಇಲ್ಲ ಇನ್ನಷ್ಟು ವಿಸ್ತಾರವಾಗಿ ಪ್ರತಿಪಾದಿಸುವುದರ ಜೊತೆಗೆ
ನಾಟಕ ವಿಷಯವನ್ನೂ ಒಂದೆರಡು ಅದ್ಯಾಯಗಳಲ್ಲ ನಿರೂಪಿಸಿದ್ದಾನೆ.
ಪೀಗೆ ಕಾವ್ಯನಾಟಕಗಳೆರಡರ ಲಕ್ಷಣವನ್ನೂ ಒಂದೇ ಗ್ರಂಥವು ಒಳಕೊಂಡು
ಹುಟ್ಟುವುದಕ್ಕೆ ಈ ಶಾಸ್ತ್ರದ ಚರಿತ್ರೆಯಲ್ಲಿ ಇದೇ ಮೊದಲು, "ತೃಂಗಾರ
ಪ್ರಕಾಶ'ದಲ್ಲಿ ಸಾಪಿತ್ಯ ಸಮಾಲೋಚನೆಯ ಭಾಗವಿರಲಿ, ವ್ಯಾಕರಣ ವಿಷ
ಯೇ ಕೆಲವು ಅಧ್ಯಾಯಗಳ ತುಂಬ ಬಂದಿದೆ. ಇಷ್ಟು ದೊಡ್ಡ ಕೃತಿಯ
30 VY, Raghavan: Bhoyws Srngira PrakiSa, 301. 1, p.1
ನೋಡಿ. ಶೃಂಗಾರ ಪ್ರಕಾಶವನ್ನು ಕುರಿತು ನಮ್ಮ ಪುಸ್ತಕದಲ್ಲ ಹೇಳಿರುವ ವಿಷಯಕೆಲ್ಲ
ಈ ನಿಬಂಧವೇ ಮುಖ್ಯವಾದ ಅಧಾರ. ಶೃಂಗಾರಪ್ರಕಾಶವು ಇನ್ನೂ ಅಚ್ಚಾಗಿಲ್ಲ;
ಅದರ ಕೊನೆಯ ಎರಡು ಮೂರು ಅಧ್ಯಾಯಗಳು ಮಾತ್ರ ಪ್ರಕಟವಾಗಿವೆ ; ಶಾಸ್ತ್ರ ದೃಷ್ಟಿ
ಯಿಂದ ಐವು ಮುಖ್ಯವಲ್ಲ. (ವಿ. ರಾಘವನ್ ಅವರ ನಿಬಂಧವೂ ಇನ್ನೂ ಅಚ್ಚಾಗಿ ಮುಗಿದಿಲ್ಲ;
ಅದು ಪುಣಿಯ "New Indian Antiquary ' ಯಲ್ಲಿ ಕ್ರಮಶಃ ಪ್ರಕಟವಾಗುತ್ತಿದೆ ;
ಈ ವರೆಗೆ (೧೯೪೫) ಅದರ ಮೊದಲನೆಯ ಸಂಪುಟವು ಎರಡು ಭಾಗಗಳಲ್ಲಿ ಹೊರಬಿದ್ದಿದೆ.
೫. ಧೃನಿವಿರೋಧಿಗಳು, ಅಂತರ್ಭಾವವಾದಿಗಳು ೮೭
ವಿಷಯಸಂಗ್ರಹವೇನೆಂಬುದನ್ನು ತಿಳಿಸಲು ಕೂಡ ಇಲ್ಲಿ ಅವಕಾಶ
ಸಾಲದು. ಇದರ ಬಹುಭಾಗವು ಭೋಜರಾಜನ ಮತಕ್ಕನುಸಾಥ
ವಾಗಿ ರಸನಿರೂಪಣಿಗೆ ಮಾಸಲಾಗಿದೆಯೆಂದು ಹೇಳಿದರೆ ಸಾಕು.
( ರಸದ ವಿಷಯದಲ್ಲಿ ಭೋಜರಾಜನದು ಹೊಸ ದೃಷ್ಟಿ. ಇದರ
ಅಂಕುರವು ಸರಸ್ವತೀಕ೦ಠಾಭರಣದಲ್ಲೇ ""ರಸೋಃಭಿಮಾನೋೂಹಂಕಾರಃ
ಶೃಂಗಾರಃ ': ಎಂಬ ಮಾತಿನಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಪರಿ
ಸ್ಫುಟವಾಗುವುದು ತೃಂಗಾರಪ್ರಕಾತದಲ್ಲಿ. ಈ ಗ್ರಂಥದ ಪ್ರಾರಂಭ
ಭಾಗದಲ್ಲಿಯೇ ಭೋಜರಾಜನು, )
"" ಶೃಲಗಾರವೀರ ಕರುಣಇದ್ದುತ ರೌದ್ರೆಹಾಸ್ಯ-
ಬೀಭತ್ಸವತ್ಸಲಧೆ ಖಾನಕಶಾಂತನಾಮ್ಮಕಃ |
ಅಮ್ನಾಸಿಪುರ್ದಶ ರರ್ಸಾ ಸುಧಿಯೋ ವಯಂ ತು
ಶೃಂಗಾರಮೇವ ರಸನಾದ್ರಸಮಾಮನಾಮಃ। ' 3
ಹೀಗೆಂದು ತನ್ನ ನಿಷ್ಕರ್ಷೆಯನ್ನು ತಿಳಿಸುತ್ತಾನೆ. ಇಲ್ಲಿ “ತೈಂಗಾರ''
ಪೆಂದರೆ ಭರತನ ಕಾಲದಿಂದಲೂ ಪ್ರಸಿದ್ಧವಾಗಿರುವಂತೆ ಸ್ತ್ರೀಪುರುಷರ
ಪರಸ್ಪ ರ ಪ್ರೇಮಾತ್ಮಕವಾದ ರತಿಸ್ಥಾಯಿಭಾವವನ್ನುಳ್ಳ ರಸವಿಶೇಷವಲ್ಲ.
ಸುಸಂಸ್ಕೃತನಾದ ಮಾನವನಲ್ಲಿ ಆತ್ಮಗುಣವಾದ ಅಹಂಕಾರವುಂಟು.
"ನಾನು '' ಎನ್ನುವ ಅಭಿಮಾನವೇ ಇದು. ಆತ್ಮದ ಎಲ್ಲ ಗುಣಸಂಪತ್ತಿಗೂ
ಇದೇ ಉತ್ಕರ್ಷ ಬೀಜ. ಬುದ್ಧಿ, ಸುಖ, ದುಃಖ, ಇಚ್ಛೆ, ದ್ವೇಷ, ಪ್ರಯ
ತ್ಲಾದಿಗಳೆಲ್ಲಕ್ಕೂ ಇದೇ ಅತಿಶಯಕಾರಿ. ಈ ಅಹಂಕಾರವೇ ಆಸ್ಕಾದ್ಯ
ವಾಗಿ ರಸಪೆನಿಸಿಕೊಳ್ಳುತ್ತದೆ. ಆತ್ಮಗುಣ ವಿಶೇಷವಾದ ಈ ಅಹಂಕಾರವು
ಎಲ್ಲರಲ್ಲೂ ಇರುವುದಿಲ್ಲ. ಅದರ ಉದಯಕ್ಕೆ ಜನ್ಮಾಂತರಗಳ ಸುಕೃತ
ವಿಶೇಷವು ಆವಶ್ಯಕ. ಇದನ್ನುಳ್ಳವನೇ ರಸಿಕ, ಇದು ಯಾರಲ್ಲಿಲ್ಲವೋ
31 ಇದರ ವಿಷಯ ಪರಿಚಯವು ವಿ. ರಂಘುಸನ್ ಅವರ ನಿಬಂಧದಲ್ಲ ರಾಜಾಕಾರದ
೫೮ ಪುಟಗಳನ್ನು ಅಕ್ರಮಿಸಿದೆ (Chap. 1, pp. 12-69).
32 ರಸೋ-ಭಿಮಾನೋಹಂಕಾರಃ ಶೃಂಗಾರ ಇತಿ ಗೀಯತೇ |
ಯ್ಯೋೊರ್ಥಸ್ತಸ್ಕಾನ್ವಯಾತ್ ಕಾವ್ಯಂ ಕಮನೀಯತ್ಪಮತ್ಮುತೇ | (ಇ. ೧)
33 " ಶೃಂಗಾರ, ವೀರ, ಕರುಣ, ಅದ್ಭುತ, ರೌದ್ರ, ಹಾಸ್ಯ, ಬೀಬಭತ್ಛ, ವಕ್ಬಲ,
ಭಯಾನಕ, ಶಾಂತ ಎಂಬ ಹತ್ತು ರಸಗಳನ್ನು ವಿದ್ವಾ೦ಸರು ಹೇಳಿದ್ದಾರೆ; ನಾವಾದರೆ,
ಶೃಂಗಾರದಲ್ಲಿ [ಮಾತ್ರ] ರಸನ (ಎಂದರೆ, ಅಸ್ಪಾದ] ವಿರುವುದರಿಂದ ಕೇವಲ ಅದನ್ನೇ ರಸ
ವೆಂದು ಹೇಳುತ್ತೇವೆ.
ಆ೮ ಭಾರತೀಯ ಕಾವ್ಯವಿಸಾಮಾಂಸೆ
ಅವನು ನೀರಸ. ರಸಿಕನಲ್ಲಿ ನೆಲಸಿರುವ ಈ ಅಹಂಕಾರವು ಅಭಿಮಾನ
ರೂಪದಲ್ಲಿ ವ್ಯಕ್ತ ವಾಗುತ್ತದೆ. ಯಾವ ವಸ್ತು ವನ್ನೇ ಆಗಲಿ, ಅಭಿಮಾ
`ನವು ಎತರ ಅದು ಪ್ರಿಯವಾಗುತ್ತದೆ; ರಸಿಕನು ಈ ಅಭಿಮಾನ ಬಲ
ದಿಂದ ರತಿ, ಹಾಸ, ಕ್ರೋಧ ಮೊದಲಾದ ಸಮಸ್ತ ಭಾವಗಳಲ್ಲೂ ಸವಿ
ಯನ್ನು ಪಡೆಯುತ್ತಾನೆ. ಇನ್ನು, ಅಹಂಕಾರವು ರಸಿಕನನ್ನು ಅನುಭ
ವದ *ತ್ರಂಗ''ಕ್ಕೆ, ಎಂದರೆ ತುಟ್ಟ ತುದಿಗೆ, ಮುಟ್ಟಿ ಸುತ್ತದೆ. ಆದಕಾರಣ
ಇದಕ್ಕೆ ತ್ರಂಗಾರವೆಂದೂ ಹೆಸರು. “ ಈ ರೀತಿಯಾಗಿ, ಅಹಂಕಾರವೇ
ತ್ವಂಗಾರ, ನ ಅಭಿಮಾನ, ಅದೇ ರಸ. ("" ಸ ಶೃಂಗಾರ ಪೊಟ್ಟಭಿ
ಮಾನ, ರಸಃ. '') ಭೋಜರಾಜನ ಮತದಂತೆ ಅದೊಂದೇ ರಸ.
ರತಿ, ಹಾಸ, ಶೋಕ, ಉತ್ಸಾಹ ಹೊದಲಾದವು ಸ್ಕಾ ಯಿಭಾವ
ಗಳೆಂದೂ, ಇವಕ್ಕೆ ಅಂಗವಾಗಿ ಚಿಂತೆ, ಔತ್ಪುಕ್ಕ, ಹರ್ಷ ಮೊದಲಾದ
ನ ಬರುವುವೆಂದೂ ಹಿ೦ದಿನ 'ರಾಕ್ಮಣಿಕರು ನಿರೂಪಿಸಿದ್ದ
ರಷ್ಟೆ.. ಈ ಭೇದವನ್ನು ಭೋಜರಾಜನು ನಿರಾಕರಿಸುತ್ತಾನೆ. ನಿಜವಾದ
ಸ್ಕಾಯಿ "" ಅಹಂಕಾರ-ಶೈಂಗಾರ ''ವೊಂದೇ. ರತಿ ಮೊದಲುಗೊಂಡು
ಸಮಸ್ತ ಭಾವಗಳೂ ಇದರಿಂದಲೇ ಉದಿಸುತ್ತಪೆ, ಇದನ್ನೇ ಪೋಷಿಸು
ತ್ತವೆ. ಅಗ್ನಿಯಿಂದ ಚಿಮ್ಮಿ ಸುತ್ತಲೂ ಬಳಸಿಕೊಂಡು ಅದನ್ನೇ ಪೋಷಿ
ಸುವ ಉರಿಗಳಿಗೆ ಇವನ್ನು ಭೋಜರಾಜನು ಹೋಲಿಸುತ್ತಾನೆ.» ಈ
ಭಾವಗಳು ಪ ರ್ರಕರ್ಪಾವಸ್ಥೆ ಯಲ್ಲಿರುವಾಗ ಅವುಗಳಲ್ಲಿ ಕೆಲವಕ್ಕಾದರೂ
ರಸವೆಂಬ ಹೆಸರನ್ನು ಪ್ರಾಚೀನಲಾಕ್ಷಣಿಕರು ಕೊಡುತ್ತಿದ್ದರು. ಆದರೆ
ಇದನ್ನು ಭೋಜನು ಒಪ್ಪ ವುದಿಲ್ಲ. ಎಷ್ಟೇ ಪ್ರಕರ್ಪ ಹೊಂದಿದರೂ
ಅವು ಇನ್ನೂ ಭಾವಗಳೇ ; ಉಪಚಾರಕ್ಕಾಗಿ ಮಾತ್ರ ಅವನ್ನು ರಸಪೆಂದು
ಕರೆಯಬಹುದೆ೦ದು ಅವನ ಮತೆ. ನಿಜವಾದ ರಸತ್ಯವು ಒದಗಜೇಕಾದರೆ
4 ಭಾವನಾಪಥ''ವನ್ನು ದಾಟಜೇಕು ; ಎಂದರೆ, ಈ ವಿವಿಧ ಭಾವಗಳ
ನಿಯತವೊ ವೈಯಕ್ತಿಕವೂ ಆದ ಸ್ವರೂಪದ ಅರಿವು ಅಳಿಯಚೇಕು. ಈ
3 ಯೇ (ನ ಶ ಸಂಗಂ ರೀಯತೇ ಸ ಶೃಂಗಾರ.
35 ರತಾ ದಯ್ಕೋರ್ಧಶತಮೇಕವಿವರ್ಜಿತಾನಿ
ಭಾವಾಃ ಫೃಥಗಿಧವಿಭಾವಭುವಮೋ ಭವಂತಿ |
ಶೃಂಗಾರತತ್ತ್ವಮಭಿತಃ ಪರಿವಾರಯಂತಃ
ಸಪ್ತಾರ್ಚಿಪಂ ದ್ಯುತಿಜಯಾ ಇವ ವರ್ಧಯಂತಿ ॥
೫. ಧೃವಿವಿರೋಧಿಗಳು, ಅಂತರ್ಭಾವವಾದಿಗಳು ೮೯
ನೆಲೆಗೆ ಬಂದಾಗ ಎಲ್ಲ ಭಾವಗಳೂ "" ಪ್ರೇಮ ''ದಲ್ಲಿ ಪರ್ಯವಸಾನಗೊಳ್ಳು
ತ್ತವೆ. ಈ ಪ್ರೇಮವೆನ್ನುವುದೂ ಅಹಂಕಾರದ ಒಂದು ಮುಖ ಮಾತ್ರ.
ಹೀಗೆ ಭೋಜರಾಜನು ರಸಾಸ್ಟಾದದಲ್ಲಿ ಮೂರು ಅವಸ್ಥೆಗಳನ್ನು
ವಿಂಗಡಿಸುತ್ತಾ ನೆ. ಆತ್ಮ ಗುಣ ವಿಶೇಷವಾದ ಅಹಂಕಾರವು ಜಡ
ಟಿ ಪೂರ್ವಕೋಟಿ''. ಇದರಂದ ಅನೇಕ ಭಾವಗಳು ಉದಿಸಿ ಪ್ರಕರ್ಪ
ಗೊಳ್ಳುವುದು "" ಮಧ್ಯಮಾವಸ್ಥೆ''. ಈ ಸ್ಥಿತಿಯನ್ನು ದಾಟಿ “ಪ್ರೇಮ ದಲ್ಲಿ
ಪರಿಣತವಾಗುವುದು "" ಉತ್ತರ ಕೋಟಿ '`, ಈ ಪ್ರಕಾರವಾಗಿ ಎಲ್ಲ ಭಾವ
ಗಳೂ ಅಹಂಕಾರ__ತೃ೦ಗಾರದಿಂದ ಉದಿಸಿ ಅದನ್ನೇ ಪೋಷಿಸಿ ಅದರಲ್ಲೇ
ಲೀನವಾಗುತ್ತ ಷೆ) ಈ ಶ್ರ ೦ಗಾರರಸವನ್ನು ಭೋಜನು ಪುರುಷಾರ್ಥಗಳ
ದೃ ಪ್ಟಿಯಿಂದ, ಧರ್ಮಶೃಂಗಾರ, ಅರ್ಥಶೈಂಗಾರ, ಕಾಮಶೃಂಗಾರ,
ಮೋಕ್ಷತೃಂಗಾರ ಎಂದು ನಾಲ್ಕು ಬಗೆಗಳಾಗಿ ವಿಭಾಗಿಸಿ ವಿಸ್ತಾರವಾಗಿ
ನಿರೂಪಿಸುತ್ತಾನೆ.
"" ಅಹಂಕಾರ-ಶೃ೦ಗಾರ ''ಕ್ಕೆ ಮಾತ್ರ ರಸಶಬ್ಬವನ್ನು ಭೋಜನು
ಮಾಸಲಾಗಿಟ್ಟು ಅದನ್ನೇ ಶಿಖರಕ್ಕೆ ಏರಿಸಿದ್ದರೂ, ಅವನಿಗೆ " ರತಿಶ್ವ ೦
ಗಾರ''ದಲ್ಲಿ (ಅಂದರೆ, ಮಿಕ್ಕ ಲಾಕ್ಷಣಿಕರು ಶೈಂಗಾರರಸವೆಂದು ಕರೆಯು
ವುದರಲ್ಲಿ) ಅಧಿಕ ಪಕ್ಷಪಾತವುಂಟು. ಅದರ ವಿಶದ ನಿರೂಪಣಿಗೆ ಅವನು
" ಶೃಂಗಾರ ಪ್ರಕಾಶ'ದ ಅನೇಕ ಅಧ್ಯಾಯಗಳನ್ನು ವಿನಿಯೋಗಿಸಿದ್ದಾನೆ.
ಅಪ್ಟೇ ಅಲ್ಲ; ಹಂಸ ಕಡೆಗಳಲ್ಲಿ, ಸಂ ಲಕ್ಷಣಕಾರರನ್ನು ಆಕ್ಷೇಪಿಸು
ವಾಗ ಕೂಡ, ಭೋಜನು ಯಾವ "" ಶೃಂಗಾರ ''ವನ್ನು ಕುರಿತು ಮಾತಾ
ಡುತ್ತಿದ್ದಾನೆಂದು ನಿರ್ಣಯಿಸುವುದು ತೊಡಕಾಗುತ್ತದೆ.
ರಸವು ಏಕಮಾತ್ರ ವೆಂಬ ಭೋಜರಾಜನ ವಾದದಲ್ಲಿ ಸತ್ಯಾ ೦ತವಿಲ್ಲ
ದಿಲ್ಲ. ಏಕೆಂದರೆ, ಸ್ಥಾಯಿಭಾವವು ಸುಖಾತ್ಮಕವಾಗಿರಲಿ ದುಃ 'ಪಾತ್ಮಕ
ವಾಗಿರಲಿ, ಶೃಂಗಾರ ನೀರ ಕರುಣ ರೌದ್ರ ಭಯಾನಕ ಮೊದಲಾದ ಎಲ್ಲ
ರಸಗಳೂ ಕೇವಲ ಆನಂದಮಯವಾಗಿಯೇ ಇರುತ್ತವೆ. ಈ ಒಳ ತಿರು
ಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಸವು ಒಂದೇ ಎಂದು ಹೇಳಬಹುದು.
ಆದರೆ ಯಾದ ರಸಾನುಭವಕಾಲದಲ್ಲಿ ಒಂಡೊಂದು ಚಿತ್ತವೃತ್ತಿ
ಪ್ರಧಾನವಾಗಿ ನಿಲ್ಲುವುದೆಂಬುದನ್ನೂ, ಆ ವೇಳೆಯಲ್ಲಿ ವಿಭಾವಾನುಭಾವ
ಗಳ ಅರಿವು ಇದ್ದೆ € ಇರುವುದರಿಂದ ರಸಾಸ್ವಾದದಲ್ಲೂ ರುಚಿ ವೈ ಚಿತ ಶ್ರ್ಯವು
೯೦ ಭಾರತೀಯ ಕಾವ್ಯವಿಸಾಮಾಂಸೆ
ತೋರುವುದೆಂಬುದನ್ನೂ ನಾವು ಮರೆಯಬಾರದು. ಈ ದೃಷ್ಟಿಯಿ೦ದಲೇ
ಲಾಕ್ಷಣಿಕರು ರಸಪ್ರಭೇದಗಳನ್ನು ಅಂಗೀಕರಿಸಿರುವುದು. ಈ ವೈವಿಧ್ಯದ
ಜ್ಞಾನ ಇರುವ ತನಕ ಅವು ಭಾವಗಳಾಗಿರುವುಷೇ ಹೊರತು ರಸತ್ಯ ಅವಕ್ಕೆ
ಬರುವುದಿಲ್ಲವೆಂಬ ಆಕ್ಷೇಪಣೆಯನ್ನು ಒಪ್ಪುವುದಕ್ಕಾಗುವುದಿಲ್ಲ. ಅದರಂ
ತೆಯೇ ಸ್ಥಾಯಿ ಸಂಚಾರಿಗಳೆಂಬ ಭೇದವನ್ನು ಪೂರ್ಣವಾಗಿ ತೊಡೆದು
ಹಾಕುವುದೂ ಅಶಕ್ಯ. ಇನ್ನು ಉಳಿದದ್ದು , ಅಹಂಕಾರವೇ ಮೂಲಸ್ಸಾ ಯಿ
ಯೆಂಬ ವಿಚಾರ. ಎಲ್ಲ ಚಿತ್ತವೃತ್ತಿಗಳಿಗೂ ಇದು ತಳಹದಿಯಾಗಿದೆ
ಯೆಂದು ಒಪ್ಪಬಹುದು. ಆದರೆ ರಕಾನುಭವಸಾಲದಲ್ಲಿ, ಈ "" ನಾನು”
ಅಂಬ ಅರಿವು ಲಯವಾಗುವುದರಿಂದಲೇ ಭಾವವು ರಸವಾಗಿ ಪರಿಣಮಿಸು
ವುದು; ಹೀಗಿರುವಾಗ ಅಹಂಕಾರಗುಣವೇ ಆಸ್ವಾದ್ಯವಾಗಿ ರಸಪೆನಿಸಿಕೊಳ್ಳು
ಪುದೆಂಬ ಹೇಳಿಕೆ ವಿಲಕ್ಷಣವಾಗಿ ತೋರುತ್ತದೆ.” ಈ ಅಂಶಗಳ ಸವಿಸ್ತರ
ವಾದ ಚರ್ಚೆಗೆ ಇಲ್ಲಿ ಸ್ಥ ಳವಿಲ್ಲ.
ರಸಸ್ವರೂಪ, ನಿಪ್ಪತ್ತಿ ಮೊದಲಾದ ವಿಚಾರಗಳಲ್ಲಿ ಅಭಿನವಗುಪ್ತನ
ಮತವನ್ನು ಅವಲಂಬಿಸಿ, ಭೋಜರಾಜನ ಕೋಟಿಗಳಿಗೆ ಸಮಂಜಸವಾಗಿ
ಉತ್ತರ ಕೊಡುವುದು ಸಾಧ್ಯ." ಅಭಿನವಗುಪ್ತನ ಗ್ರಂಥಗಳ ಪರಿಚಯ
ಭೋಜರಾಜನಿಗೆ ಲೇಶಮಾತ್ರವೂ ಇರಲಿಲ್ಲವೆಂದು ತೋರುತ್ತದೆ. 3"
ಹಾಗೇನಾದರೂ ಇದ್ದಿದ್ದರೆ, " ಶೃಂಗಾರ ಪ್ರಕಾಶ'ದ ವಾದಗಳು ಈಗಿನು
ರೂಪದಲ್ಲಿ ಉಳಿಯುತ್ತಲೇ ಇರಲಿಲ್ಲವೋ ಏನೋ!
ತೆಂ ಮೂಲಪುಕೃತಿಯ ವಿಕಾರಗಳಲ್ಲೊಂದಾದ ಅತಂಕಾರತತ್ತ್ವವನ್ನು ಸಾಂಖ್ಯದರ್ಶ
ನದಲ್ಲಿ ಹೇಳುವರಷ್ಟೆ ; ಅದಕ್ಕೆ " ಅಭಿಮಾನ ''ವೆಂಬ ಹೆಸರೂ ಅಲ್ಲಿಯೇ ಗೋಚರವಾಗು
ತ್ತದೆ. ಭೋಜನು ಸಾಂಬ್ಯದಿಂದ ಸ್ಪೂರ್ತಿಪಡೆದು ಅಹಂಕಾರ ಶಬ್ದವನ್ನು ವಿಶೇಣಾರ್ಥ
ದಲ್ಲಿ ಪ್ರಯೋಗಿಸಿದ್ದಾರೆ. ಎಂದು ಅವನ ಪರವಾಗಿ ಹೇಳುವುದು ಸಾಧ್ಯ. ಆಗ ಕೂಡ,
ಈ "ಅಹಂಕಾರ ''ವು ಹೇಗೆ ಆಸ್ಪಾದ್ಯವಾಗುವುದೆಂಬುದನ್ನು ವಿವರಿಸಿದಂತಾಗುವುದಿಲ್ಲ.
ಭೋಜರಾಜನ ರಸತತ್ತ್ವಕ್ಕೂ ಸಾಂಖ್ಯಕ್ಕೂ ಇರುವ ಸಂಬಂಧವನ್ನು ಕುರಿತು,
V. Raghavan : Syngiara Prakida 1, ಪ. 490 ಮುಂದೆ ನೋಡಿ.
37 ಅಭಿನವಗುಪ್ತನ ಅಭಿಪ್ರಾಯಗಳನ್ನು ನಮ್ಮ ಗ್ರಂಥದಲ್ಲಿ ಮುಂದೆ ೨೨ನೆಯ
ಅಧ್ಯಾಯದಲ್ಲಿ ತಕ್ಕಮಟ್ಟಿಗೆ ವಿವರವಾಗಿ ಪ್ರತಿಪಾದನೆ ಮಾಡಲಾಗುತ್ತದೆ. ಅದನು ಓದಿದರೆ
ಮೇಲೆ ಬರೆದಿರುವ ವಾಕ್ಯಗಳ ಆಶಯ ಸುಲಭಗ್ರಾಹೃವಾಗಬಹುದು.
38 "" There is not the slightest indication of Bhoja’s knowledge
of Abhinavagupta, the end of whose literary career coincided
with the beginning of Bhoja’s.” V. Righavan: Bhoja’s Srngara
Prakasa, 1, p. 477.
೫. ಧ್ವನಿವಿರೋಧಿಗಳು, ಅಂತರ್ಭಾವವಾದಿಗಳು ೯೧
ಧ್ವನಿಯನ್ನು ಕುರಿತು ಭೋಜನ ಅಭಿಪ್ರಾಯವೇನೆಂಬುದು "ಸರ
ಸ್ವತೀ ಕಂಠಾಭರಣ'ದಲ್ಲಿ ಸ್ಫುಟವಾಗಿ ತಿಳಿಯುವುದಿಲ್ಲ. ಆದರೆ ಶೃಂಗಾರ
ಪ್ರಕಾಶವು ಈ ಸಂಶಯವನ್ನು ಹೋಗಲಾಡಿಸುತ್ತದೆ. ಧ್ವನಿ ವಿಚಾರದಲ್ಲಿ
ಭೋಜನದು ಒಂದು ರೀತಿಯ ಮಧ್ಯಮಾರ್ಗ. ಕಾವ್ಯದಲ್ಲಿ ಧ್ಯನಿಯೇ
ಪ್ರಧಾನವೆಂದು ಒಪ್ಪುವುದಪ್ಟೇ ಅಲ್ಲ; "ಧ್ವನ್ಯಾಲೋಕ'ದ ಬಹುಭಾಗ
ವನ್ನೇ ತನ್ನ ಗ್ರಂಥದಲ್ಲಿ ಸಮಾವೇಶಗೊಳಿಸುತ್ತಾನೆ. ಆದರೆ ಈ
ಧ್ವನಿತಾರ್ಥವನ್ನು 1 ತಾತ್ಸರ್ಯ''ವೆ೦ಬುದರಲ್ಲಿ ಒಳಪಡಿಸುತ್ತಾನೆ. ವಾಕ್ಯ
ದಿಂದ ತಿಳಿಯಬರುವ ವಕ್ತ ವಿನ ಒಟ್ಟು ಅಭಿಪ್ರಾಯಕ್ಕೇ ಇಲ್ಲಿ ತಾತ್ಪರ್ಯ
ವೆಂದು ಹೆಸರು. ಇದು ಅಭಿಧೀಯಮಾನ, ಪ್ರತೀಯಮಾನ, ಧ್ವನಿ
ರೂಪ ಎಂದು ಮೂರುಬಗೆ. (ಇಲ್ಲಿ ಅಭಿಧೀಯಮಾನವು ವಾಚ್ಯಾರ್ಥ
ಲಕ್ಷ್ಯಾರ್ಥಗಳನ್ನು ಒಳಕೊಳ್ಳುತ್ತದೆ. ಪ್ರತೀಯಮಾನಕ್ಕೂ ಧ್ಯನಿರೂಪಕ್ಕೂ
ವ್ಯತ್ಯಾಸವೇನೆಂಬುದು ಸರಿಯಾಗಿ ಗೊತ್ತಾ ಗುವುದಿಲ್ಲ.) ಭೋಜನ ನಿರೂ
ಪಣಿಯಲ್ಲ ಕೊನೆಕೊನೆಗೆ "" ತಾತ್ಪರ್ಯ''ದ ಈ ವ್ಯಾಪ್ತಿ ಸಂಕುಚಿತವಾಗಿ,
ಅದು ಬೇರೆಯಲ್ಲ, ಧ್ಯನಿ ಬೇರೆಯಲ್ಲ ; ಲೋಕದಲ್ಲಿ ತಾತ್ಪರ್ಯವಾಗಿರುವುದೇ
ಕಾವ್ಯದಲ್ಲಿ ಧ್ವನಿಯೆನಿಸಿಕೊಳ್ಳುವುದು. ಎಂಬ ಭಾವನೆ ಬಲಿಯುತ್ತದೆ.೫
ಭೋಜನ ಎರಡು ಗ್ರಂಥಗಳಲ್ಲೂ ಅನೇಕಾನೇಕ ಪದ್ಯಗಳು,
ಅಪೂರ್ವಗ್ರಂಥಗಳಿಂದ ತೆಗೆದಿರತಕ್ಕವು ಕೂಡ, ಉದಾಹೃ ತವಾಗಿವೆ.
" ಸರಸ್ಪತೀ ಕಂಠಾಭರಣ 'ದಲ್ಲೇ ಸುಮಾರು ೧,೫೦೦ ಇಂಥ ಪದ್ಯಗಳುಂಟು.
" ಶೃಂಗಾರ ಪ್ರಕಾಶ'ವನ್ನ೦ತೂ ಕವಿಸೂಕ್ತಿ ಮಹಾಕೋತಪೆನ್ನ ಬಹುದು.
39 ತಣತ್ಪರ್ಯಮೇವ ಪಚಸಿ ಧ್ವನಿರೇವ ಕಾವ್ಯೇ
ಸೌಭಾಗ್ಯಮೇವ ಗುಣಸಂಪದಿ ವಲ್ಲಭಸ್ಯ |
ಲಾವಣ್ಯಮೇವ ವಪುಪಿ ಸ್ವದಶೇಂಗನಾಯಾಃ
ಶೃಂಗಾರ ಏವ ಹೃದಿ ಮಾನವತೋ ಜನಸ್ಯ ॥
ಈ ಪದ್ಯದ ಮೊದಲನೆಯ ಮತ್ತು ಕೊನೆಯ ಚರಣಗಳು ಧ್ವನಿ ರಸಗಳ ವಿಷಯದಲ್ಲಿ
ಭೋಜನ ಅಭಿಪ್ರಾಯವೇನೆಂಬುದನ್ನು ಸೂತ್ರಪ್ರಾಯವಾಗಿ ತಿಳಿಸುತ್ತವೆ.
೬. ಪರಿಷ್ಕಾರ ಯುಗ
ಕ್ರಿ.ಶ. ಸು. ೮೦೦ ರಿಂದ ಈಚಿನ ಸುಮಾರು ಇನ್ನೂ ರೈವತ್ತು
ವರ್ಷಗಳನ್ನು ಕಾವ್ಯಮಾಮಾಂಸಾಶಾಸ್ತ್ರದ ಸೃಷ್ಟಿ ಯುಗವಪೆನ್ನ ಬಹುದು.
ಧ್ವನಿತತ್ತ ಪು ಭಟ್ಟ ಪ್ರ ಕಾಶಕ್ಕೆ ಬಂದು, ಅದರ ಷೆ ಲೆ ಖಂಡನ
ಮಂಡನ ವಿಮರ್ಶ ವಿವರಣಾದಿಗಳು ನಡೆದು, ನಡುನಡುಷೆ ಪ ಪ್ರ ತಿಪಕ್ಷಗಳು
ಎದ್ದು ಉಡುಗಿಹೋಗಿ ಕಡೆಗೆ ಧ್ವನಿಪ್ರಸ್ಥಾನವೇ ಜಾಮ
ನಿಲ್ಲಲು ಇಷ್ಟು ಕಾಲ ಬೇಕಾಯಿತು.' ಈ ಅವಧಿಯಲ್ಲಿ ಉದಿಸಿದಷ್ಟು
ಮಂದಿ ಪ್ರತಿಭಾಶಾಲಿಗಳಾದ ಸೂಕ್ಷ್ಮ ಮತಿಗಳಾದ ಲಾಕ್ಷಣಿಕರೂ, ಅವರಲ್ಲಿ
ಒಬ್ಬರೊಬ್ಬರಿಗೆ ನಡೆದಷ್ಟು ವಿಚಾರ ಘರ್ಪಣವೂ ಈ ಶಾಸ್ತ್ರದ ಚರಿತ್ರೆಯಲ್ಲಿ
ಹಿಂದಾಗಲಿ ಮುಂದಾಗಲಿ ಕಾಣಬರುವುದಿಲ್ಲ. ಹನ್ನೊಂದನೆಯ ಶತಮಾ
ನದ ಕೊನೆಕೊನೆಯ ವೇಳೆಗೆ ಶಾಸ್ತ್ರರಥ ಒಂದು ನಿಲುಗಡೆಗೆ ಬರುವ ಸ್ಥಿತಿ
ಒದಗಿತ್ತು ; ಧ್ವನಿಪ್ರಸ್ಥಾನದ ದೃಷ್ಟಿಯಿಂದ ಕಾವ್ಯದ ಎಲ್ಲ ಅಂಶಗಳನ್ನೂ
ಸಕ್ರಮವಾಗಿ ವ್ಯವಸ್ಥಿತವಾಗಿ ಪ್ರತಿಪಾದಿಸುವ ” ಒ೦ದು ಪಠ್ಯಪುಸ್ತಕ ಆವ
ಶ್ಯಕವಾಗಿತ್ತು. ಆನಂದವರ್ಧನನು ಕಾವ್ಯದಲ್ಲಿ ರಸ, ಗುಣ, ದ್ಲೋಪ,
ಅಲಂಕಾರ ಮೊದಲಾದವುಗಳ ಸ್ಥಾನವೇನೆಂಬುದನ್ನು ನಿರ್ಣಯಿಸಿದ್ದ ನೇ
ಹೊರತು ಅವುಗಳ ವಿವರವಾದ ನಿರೂಪಣಿಗೆ ಕೈಹಾಕಿರಲಿಲ್ಲ. ಧ್ವನ್ಯಾ
ಲೋಕದ ರಚನಾಕ್ರಮದಲ್ಲಿ ಹಾಗೆ ಮಾಡಲು ಅವಕಾಶವೂ ಇರಲಿಲ್ಲ. ಈ
ಕಾರ್ಯವನ್ನು ಮಮ್ಮಟನು ಮಾಡಿದನು.' ಅನಂದವರ್ಧನನು ತೋರಿ
ಸಿದ್ದ ದಾರಿಯನ್ನೇ ಮುಖ್ಯವಾಗಿ ಅನುಸರಿಸಿ, ಪ್ರಾಚೀನಾಲಂಕಾರಿಕರ
ಕೃತಿಗಳಲ್ಲಿ ಗ್ರಾಹ್ಯವೆಂದು ತೋರಿದ ಅಂಶಗಳನ್ನು ಧ್ವನಿನಿರೂಪಣಿಗೆ
ಅಂಗವಾಗಿ ಉಳಿಸಿಕೊಂಡು, ಧ್ವನಿತತ್ತ್ವ್ವವನ್ನೂ ಅದರ ಮೇಲೆ ಏಳುವ
ಆಕ್ಷೇಪಣಿಗಳಿಗೆಲ್ಲ ಉತ್ತರವನ್ನೂ ಖಚಿತವಾಗಿ ಪ್ರತಿಪಾದಿಸುವ "ಕಾವ್ಯ
ಪ್ರಕಾಶವನ್ನು ಮಮ್ಮಟನು ರಚಿಸಿದನು. ಕಾವ್ಯ ವಿಚಾರದಲ್ಲಿ ಇವನು
1 ಇವನ ಕಾಲ ಬಹುಶಃ ಕ್ರಿ . ಶೆ. ೧೧೦೦ «ಕಾವ್ಯಪ್ರಕಾಶ' ದ ಏಳನೆಯ ಮತ್ತು
ಹತ್ತನೆಯ ಉಲ್ಲಾಸಗಳ ರಚನೆಯಲ್ಲ ಅಲಕ (ಅಥವಾ ಅಲ್ಲಟ) ಎಂಬಾತನ ಕೈವಾಡವೂ
ಉಂಟೆಂದು ಕೆಲಮಂದಿ ವ್ಯಾಖ್ಯಾನಕಾರರ ಅಭಿಪ್ರಾಯ.
೯೨
೬. ಪರಿಷ್ಕಾರ ಯುಗ ೯೩
ಹೇಳದೆ ಬಿಟ್ಟದ್ದು ನಾಟಕಲಕ್ಷಣವೊಂದೇ. ಅಗಾಧ ಪಾಂಡಿತ್ಯವುಳ್ಳ
ಮಮ್ಮಟನು ಹೀಗೆ ಧ್ವನಿಧುರಂಧರನಾಗಿ ನಿಂತು ಬಿಗಿಯಾದ ಶಾಸ್ತ್ರಸರಣಿ
ಯಲ್ಲಿ ಕಾವ್ಯಪ್ರಕಾಶವನ್ನು ಬರೆದ ಬಳಿಕ, ಈ ತತ್ತ 3ಕ್ಕೆ ಎದುರು
ನಿಲ್ಲುವವರು ಯಾರೂ ಉಳಿಯಲಿಲ್ಲ; ಆದೇ ಭಾರತೀಯ ಕಾವ್ಯಮಾ
ಮಾಂಸೆಯ ಕೊನೆಯ ಮಾತಾಗಿ ನಿಂತಿತು. ಈಟನ ಅಸಂಖ್ಯ ಆಲಂಕಾ
ರಿಕರಿಗೆಲ್ಲ ಕಾವ್ಯಪ್ರಕಾಶವೇ ಮೇಲುಪಂಕ್ತಿ; ಆಕರ ಗ್ರಂಥ." ಮಮ್ಮ
ಟನ ಪ್ರಾಶಸ್ತ ವಿರುವುದು ಇಲ್ಲಿ.
ಕಾವ್ಯಪ್ರಕಾಶದ ಮೇಲೆ ಹುಟ್ಟಿದ ವ್ಯಾಖ್ಯಾನಗಳು ಅಪರಿಮಿತ.
ಈ ಗ್ರ೦ಥಕ್ಕೆ ವ್ಯಾಖ್ಯಾನವನ್ನು ಬರೆದ ಹೊರತು ಒಬ್ಬನ ಪಾಂಡಿತ್ಯವು
ಸ್ಥಾ ಪಿತೆವಾಗುವುದಿಲ್ಲಪೆಂಬ ಭಾವನೆ ಕೂಡ ಬಲವಾಗಿ, ಹಲವರು ತಮಗೆ
ಸಾಹಿತ್ಯಾಭಿರುಚಿ ಇರಲಿ ಇಲ್ಲದಿರಲಿ, ತಮ್ಮ ಶಾಸ್ತ್ರಜ್ಞಾ ನವನ್ನು ಪ್ರದರ್ಶಿ
ಸುವ ದೃಷ್ಟಿಯಿಂದ ಈ ಕಾರ್ಯಕ್ಕೆ ಕೈಹಾಕಿದರು.
ಕಾಬಿಪೆಕಾಶನ್ನ ಕತಾ ಗಹೇ ಗಹೇ
ಳೆ ಲೆ" p ಆ
ವ್ಯಾಖ್ಯಾ ತಥಾಪ್ಯೇಷ ತಥೈವ ದುರ್ಗಮಃ ''
46 ped Ke
ಕಾವ ಪ್ರಕಾಶಕ್ಕೆ ಮನೆಮನೆಯಲ್ಲೂ ವಾ ಕ್ಯಾನ ಹುಟ್ಟಿದೆ ಕೆ
ಆದರೂ ಇದು ಎಂದಿಸಂತೆ ಕ್ಲಿಪ್ಪವಾಗಿಯೇ ಇದೆ'' ಎಂದು ಒಬ್ಬ
ವ್ಯಾಖ್ಯಾನಕಾರನು ಹೇಳಿದ್ದಾನೆ. ಇದುವರೆಗೆ ಎಪ್ಪತ್ತಕ್ಕಿಂತ ಹೆಚ್ಚಾಗಿ
ವ್ಯಾಖ್ಯಾನಗಳ ಲೆಕ್ಕ ದೊರೆತಿದೆಯೆಂದು ಎಣಿಕೆ ಮಾಡಿದ್ದಾರೆ ; ಇವು
( ದ್)
ಗಳನ್ನು ಬರೆದವರಲ್ಲಿ " ಅಲ್ರಂಕಾರಸರ್ವಸ್ವ'ಕಾರನಾದ _ ರುಯ್ಯಕ,
" ಸಾಹಿತ್ಯ ದರ್ಪಣ'ಕಾರನಾದ ವಿಶ್ವನಾಥ ಇವರಂಥ ಪ್ರ ಸಿದ್ಧ ಲಾಕ್ಷಣಿ
ಕರೂ ಸೇರಿದ್ದಾರೆ" ಮಮ್ಮಟನಿಗೆ "" ವಾಗ್ದೇವಿಯ ಅವತಾರ'' ಎಂಬ
ಪ್ರತಸ್ತಿ ಕೂಡ ದೊರೆಯಿತು. ಹೀಗೆ ಕಾವ್ಯಪ್ರಕಾಶಕ್ಕೆ ಸಂದ ಅಪೂರ್ವ
3 ಕಾವೃಪುಕಾಶದ "" ಕಾರಿಕೆ ''ಗಳನ್ನು ಹಾಗೆಯೇ ಇಟ್ಟು ಕೊಂಡು ಅವಕ್ಕೆ ವೃತ್ತಿ_
ಮೊದಲಾದವನ್ನು ಬೇರೆಯಾಗಿ ಬರೆದವರೂ ಉಂಟು. ಗೋವಿಂದನ "ಕಾವ್ಯಪ್ರದೀಪ'ವು
ಇಂಥ ಗ್ರಂಥ; ಇವನ ಕಾಲ ಕ್ರಿ. ಶ ೧೫ನೆಯ ಶತಮಾನದ ಕೊನೆಯ ಭಾಗವಾಗಿರ
ಬಹುದು.
3 ಈಗ ವಿಶ್ವವಿದ್ಯಾನಿಲಯಗಳಲ್ಲ “ಡಾಕ್ಟರ್” ಪ್ರಶಸ್ತಿಯನ್ನು ಪಡೆಯಲು "“ನಿಬಂಧ'
ಬರೆಯಬೇಕಾಗಿರುವಂತೆ ಆಗ ಈ ವ್ಯಾಖ್ಯಾರಚನೆ ಅವಶ್ಯಕವಾಗಿದ್ದಿಕೋ ಏನೋ.
1 ಕಾವೃಪ್ರಕಾಶದ ಪ್ರಾಚೀನ ವ್ಯಾಖ್ಯಾನಗಳಲ್ಲಿ ಒಂದಾದ ಮಾಣಿಕ್ಯಚಂದ್ರನ "ಸಂ
ಕೇತ'ವನ್ನೂ ಇಲ್ಲ ಸ್ಮರಿಸಬಹುದು. ಮಾಣಿಕ್ಯಚಂದ್ರನು ಜೈನ, ಇವನು ತನ್ನ ವ್ಯಾಖ್ಯಾನ
ವನ್ನು ರಚಿಸಿದ್ದು ಕ್ರಿ. ಶ. ೧೧೬೦ ರಲ್ಲಿ.
೯೪ ಭಾರತೀಯ ಕಾಷ್ಯಮಾಮಾಂಸೆ
ಗೌರವದಿಂದ ಹಲವು ಪ್ರಮುಖ ಪ್ರಾಚೀನ ಕೃತಿಗಳಿಗೆ ಸಲ್ಲದ ಅಪ್ರಸಿದ್ಧಿ
ಮುಸುಕಿತು. ಧ್ವನ್ಯಾಲೋಕಕ್ಕೆ ಕೂಡ ಇದು ಸೋಕಿ ಅದರ ವ್ಯಾಸಂ
ಗವು ಪಂಡಿತವರ್ಗದಲ್ಲಿ ಕಡಮೆಯಾಯಿತೆಂದು ಹೇಳದೆ ವಿಧಿಯಿಲ್ಲ.
ಮಮ್ಮಟನು ಬರೆದ ಈ ಪಠ್ಯಪುಸ್ತಕದ ವಿಷಯಕ್ರಮವನ್ನು
ನೋಡೋಣ. ಕಾವ್ಯಪ್ರಕಾತವು ಕಾರಿಕೆ ವೃತ್ತಿಗಳ ರೂಪದಲ್ಲಿದೆ,
ಇದರಲ್ಲಿ ಒಟ್ಟು ಹತ್ತು ಉಲ್ಲಾಸಗಳಿವೆ. ಮೊದಲನೆಯದರಲ್ಲಿ ಕಾವ್ಯದ
ಲಕ್ಷಣ, ಉತ್ಪತ್ತಿ, ಪ್ರಯೋಜನ, ವಿಭಾಗ ಇವುಗಳ ವಿಷಯ ಬಹು
ಸಂಗ್ರಹವಾಗಿ ಬಂದಿದೆ. ಎರಡನೆಯದರಲ್ಲಿ ಶಬ್ದವ್ಯಾಪಾರವಿಚಾರವೂ
ಮೂರನೆಯದರಲ್ಲಿ ಸಂಗ್ರಹವಾಗಿ ವ್ಯಂಗ್ಯಾರ್ಥ್ಹವೂ ನಾಲ್ಕನೆಯದರಲ್ಲಿ
ಧ್ವನಿಪ್ರಭೇದಗಳೂ ಪ್ರತಿಪಾದಿತವಾಗಿವೆ ; ನಾಲ್ಕನೆಯದರಲ್ಲೇ ರಸ ವಿಚಾ
ರವು ವಿಸ್ತಾರವಾಗಿ ಬಂದಿದೆ. ಐದನೆಯ ಉಲ್ಲಾಸದಲ್ಲಿ ಮುಖ್ಯವಾಗಿ
ಗುಣೀಭೂತವ್ಯಂಗ್ಯದ ವಿಷಯವೂ ಧ್ಯನಿತತ್ತ್ಯದ ಮೇಲಿನ ಆಕ್ಷೇಪಗಳ
ಬಂಡನೆಯೂ ಇವೆ. ಆರನೆಯ ಉಲ್ಲಾಸ ಬಲು ಚಿಕ್ಕದು; ಇದು ಚಿತ್ರ
ಕಾವ್ಯದ ಲಕ್ಷಣವನ್ನು ತಿಳಿಸುತ್ತದೆ. ಏಳನೆಯ ಉಲ್ಲಾಸದಿಂದ ಮುಂದಕ್ಕೆ
ಮಮ್ಮಟನು ಕ್ರಮವಾಗಿ ದೋಪ, ಗುಣ, ಶಬ್ದಾಲಂಕಾರ, ಅರ್ಥಾಲಂ
ಕಾರ ಇಪ್ಪನ್ನೂ ನಿರೂಪಿಸಿದ್ದಾನೆ; ಕಾವ್ಯಪ್ರಕಾಶಗ್ರ೦ಥದಲ್ಲಿ ಅರ್ಧಕ್ಕೆ
ಮೇಲ್ಪಟ್ಟ ಭಾಗವನ್ನು ಇವು ಆಕ್ರಮಿಸಿವೆಯೆ೦ದಮೇಲೆ, ಪ್ರಾಚೀನಾಲಂಕಾ
ರಿಕರು ಪ್ರತಿಪಾದಿಸುವ ವಿಷಯವನ್ನು ಅವರಿಗಿಂತಲೂ ದೀರ್ಪವಾಗಿಯೇ
ಮಮ್ಮ ಟನು ಹೇಳಿದ್ದಾನೆಂಬುದು ಸ್ಪಪ್ಟವಾಗದಿರದು. ಅಲಂಕಾರಗಳನ್ನು
ನಿರೂಪಿಸುವಾಗ ಉದ್ಭಟಾದಿಗಳ ಕ್ರಮವನ್ನು ಬಲುಮಟ್ಟಿಗೆ ಅನುಸರಿಸಿ
ದ್ಥಾನೆ; ಆದರೆ ಎಷ್ಟೋ ಕಡೆ ತನ್ನ ಅಭಿಪ್ರಾಯಗಳನ್ನೇ ಮಂಡಿಸಿದ್ದಾನೆ.
" ಗುಣ'' ವಿಮರ್ಶೆಯಲ್ಲಿ ವಾಮನನ ಜೀವವಾದ ಇಪ್ಪತ್ತು ಗುಣಗಳನ್ನು
ಪರಿಶೀಲಿಸಿ, ಖಂಡಿಸಿ ಮೂರಕ್ಕೆ ಇಳಿಸಿಬಿಟ್ಟಿದ್ದಾನೆ. ಕಾವ್ಯಪ್ರಕಾಶದ
"" ದೋಷೆ'' ಪ್ರಕರಣವಂತೂ ತುಂಬ ವಿಸ್ತಾರವಾಗಿದೆ." ಶ್ರೀಹರ್ಷನು"
5 ಈ ಭಾಗದಲ್ಲಿ ಮಮ್ಮಟನು ಬಹುಮಟ್ಟಿಗೆ " ವ್ಯಕ್ತಿವಿವೇಕ 'ದ ಎರಡನೆಯ ವಿಮರ್ಶ
ವನ್ನು ಅನುಸರಿಸುವಂತೆ ತೋರುತ್ತದೆ.
6 ಶ್ರೀಹರ್ಷನಕಾಲ ಕ್ರಿ. ತ. ೧೨ನೆಯ ಶತಮಾನದ ಉತ್ತರಾರ್ಥಪಾಗಿರಬಹುದೆಂದು
ವಿದ್ಬಾಂಸರು ಸಾಮಾನ್ಯವಾಗಿ ಅಭಿಪ್ರಾಯಪಡುತ್ತಾರೆ. (11, Krishnamachariar :
Classical Sanskrit Literature» pp. 178-9 ನೋಡಿ.)
೬. ಪರಿಷ್ಕಾರ ಯುಗ ೯೫
"" ವಿದ್ಧದೌಷಧ ''ವೆಂದು ಹೆಸರುಗೊಂಡ ತನ್ನ " ನೈಪಧ ' ಕಾವ್ಯವನ್ನು
ತನ್ನ ಸೋದರಮಾವನಾದ ಮಮ್ಮ ಟನ ಅವಲೋಕನಕ್ಕಾಗಿ ತಂದಾಗ,
ಅವನು "" ಈ ಕೃತಿಯನ್ನು ಮೊದಲೇ ನನಗೆ ತೋರಿಸಿದ್ದರೆ ಎಷ್ಟೋ
ಉಪಯೋಗವಾಗುತ್ತಿತ್ತು; * ಕಾವ್ಯಪ್ರಕಾಶ'ದ ಏಳನೆಯ ಉಲ್ಲಾಸಕ್ಕೆ
ಉದಾಹರಣಿಗಳನ್ನು ಬೇರೆಯ ಕಡೆಗಳಲ್ಲ ಹುಡುಕಿ ತೆಗೆಯುವ ಶ್ರಮವೇ
ತಪ್ಪುತ್ತಿತ್ತು'' ಎಂದು ಹೇಳಿದನಂತೆ; ಅದಕ್ಕೆ ಶ್ರೀಹರ್ಷನು ಕೋಪಿಸಿ
ಕೊಂಡು, ಮಮ್ಮ ನು ಕಾವೃರಮಣ್‌ಯನ್ನು ಹಿಂಸಿಸಲು ಬಲ್ಲನೇ ಹೊರತು
ಒಲಿದು ಸವಿಗೊಳ್ಳಲು ಅರಿಯನೆಂಬ ಭಾವ ಬರುವಂತೆ ಒ೦ದು ವಿಡಂಬನ
ಶ್ಲೋಕವನ್ನು ಕಟ್ಟಿದನಂತೆ! ಈ ಐತಿಹ್ಯದ ಸತ್ಯಾಂಶವೂ ಮಮ್ಮಟನ
ದೋಹೈಕದರ್ಶಿತ್ವದ ಮಾತೂ ಹೇಗಾದರೂ ಇರಲಿ ; ರಸಿಕತೆ ಸಾಲ
ದೆಂಬ ಅಪವಾದಕ್ಕೇನೋ ಅವನು ಸರ್ವಥಾ ಅಪಾತ್ರನೆ೦ದು ಹೇಳುವುದು
ಕಪ್ಪ. ಅವನು ಅಲ್ಲಗಳೆಯುವ ಪದ್ಯಗಳಲ್ಲಿ ಕೆಲವು ನಮಗೆ ಉತ್ತಮವಾಗಿ
ಕಾಣುತ್ತವೆ ; ಧ್ವನಿಕಾವ್ಯವೆಂದು ಉತ್ತಿ ಹಿಡಿಯತಕ್ಕವುಗಳಲ್ಲಿ ಕೆಲವು ಸೌಂದರ್ಯ
ವಿರಹಿತವಾಗಿ ಕಾಣುತ್ತವೆ. ಇದಕ್ಕೆ ದೃಪ್ಟಿಭೇದವೂ ಕಾಲಪರಿವರ್ತನೆ
ಯಿಂದ ಅಭಿರುಚಿ ವ್ಯತ್ಯಾಸ ಹೊಂದಿರುವುದೂ ಕೆಲಮಟ್ಟಿಗೆ ಕಾರಣವಾಗಿ
ರಬಹುದು. ಆದರೆ ಈ ಸಂದರ್ಭದಲ್ಲಿ, ಹಿಂದಿನವರ ಆಕ್ಷೇಪಣಿಗೇ ಅವ
ಕಾಶಕೊಟ್ಟ ಒಂದು ನಿದರ್ಶನವನ್ನು ಇಲ್ಲಿ ಕೊಡಜೇಕೆನ್ನಿಸುತ್ತದೆ.
ಹೆಯಗ್ರೀವನೆಂಬ ದೈತ್ಯನ ಪ್ರತಾಪ ಎಪ್ಪರಮಟ್ಟಿಗಿತ್ತೆಂಬುದನ್ನು ವರ್ಣಿ
ಸುವ ಒಂದು ಪದ್ಯ ಹೀಗಿದೆ :
ವಿನಿರ್ಗತಂ ಮಾನದಮಾತ್ಮ ಮಂದಿರಾ"
ಭವತ್ಯುಪಶ್ರುತ್ಯ ಯದೃಚ್ಛಯಾಪಿ ಯಂ!
ಸಸಂಭ್ರಮೇಂದ್ರದ್ರುತಪಾತಿತಾರ್ಗಲಾ
ನಿಮಾಲಿತಾಕ್ಷೀವ ಭಿಯಾವುಿರಾವತೀ ॥?
[ತನ್ನ ಮಂದಿರದಿ೦ದ ಮಾನಮರ್ದನನವನು
ಸುಮ್ಮ ನೆಯೆ. ಹೊರಹೊರಡಲದನೆಂತೊ ಕೇಳಿ
ದಡದಡಿಸುತಿಂದ್ರನೇ ಥೆಟ್ಟನಗುಳಿಯನಿಕ್ಕೆ,
ಬೆಚ್ಚಿ ಕಣ್ಮು ಚ್ಚಿದಂತಿಹುದಮರನಗರಿ.]
7 ಈ ಪದ್ಯ ಭರ್ತೃಮೇಂಶನ " ಹಯಗ್ರೀವವಥ ' ಕಾವ್ಯಕ್ಕೆ ಸೇರಿದ್ದೆಂದು ತೋರುತ್ತದೆ.
ರಮ ಬೀ ೈಕ್ಕ ಸೇರಿದ್ದ
೯೬ ಭಾರತೀಯ ಕಾಪ್ಯಮಾಮಾಂಸೆ
ಇದರಲ್ಲಿ ವ್ಯಂಗ್ಯಾರ್ಥವೇನೂ ಸ್ಫುಟವಾಗಿ ತೋರುವುದಿಲ್ಲವೆಂದೂ
ಆದಕಾರಣ ಇದು ಅಧಮಕಾವ್ಯವೆಂದೂ ಮಮ್ಮಟನ ಅಭಿಪ್ರಾಯ.
ವಾಚ್ಯಾಲಂಕಾರವನ್ನು ಪ್ರಧಾನವಾಗಿ ಉಳ್ಳ ವಾಚ್ಯಚಿತ್ರಕ್ಕೆ ಇದನ್ನು ಉದಾ
ಹರಣಿಯಾಗಿ ಕೊಡುತ್ತಾನೆ (ಕಾವ್ಯಪ್ರಕಾಶ, 1, ೫ ಪ್ರಯೋಗ). ಆದರೆ
ಮಮ್ಮಟನ ಈ ನಿರ್ಣಯವು " ಕಾವ್ಯಪ್ರದೀಪ'ಕಾರನಿಗೆ ರುಚಿಸಿಲ್ಲ. "" ಇಲ್ಲಿ
ಉತ್ಪ್ರೇಕ್ಷೆ ಅರ್ಥಾಲಂಕಾರ. ಆದರೆ [ಕವಿಗೆ] ರಸಾದಿಯಲ್ಲ ತಾತ್ಪರ್ಯ
ವಿರಲಿಲ್ಲವೆಂಬುದಾಗಲಿ ಅದು ಅಸ್ತುಟತರವೆಂಬುದಾಗಲಿ ಹೇಗೋ, ತಿಳಿ
ಯದು. ಹೆಯಗ್ರೀವನೇ ಇಲ್ಲಿ ವರ್ಣನೀಯ ವಿಷಯ ; ಅವನ ಪ್ರಭಾ
ವವು ಸ್ಫುಟವಾಗಿ ಪ್ರತೀತವಾಗುತದೆ '' (ಕಾವ್ಯಪ್ರದೀಪ, ಪು. ೧೯).*
ಈ ಪದ್ಯಜಾತಿಯನ್ನು "" ಅಧಮ'' ಕಾವ್ಯವೆಂದು ಕರೆದದ್ದಕ್ಕಾಗಿ ಮಮ್ಮ
ಜನು ಜಗನ್ನಾಥಪಂಡಿತನ ಚಾವಟಿಯೇಟಿಗೂ ಸಿಕ್ಕಿದ್ದಾನೆ (ರಸಗಂಗಾ
ಧರ, ಪು. ೨೦).
" ತಬ್ಬವ್ಯಾಪಾರ ವಿಚಾರ 'ವೆಂಬ ಮಮ್ಮ ವಿರಚಿತವಾದ ಚಿಕ್ಕಗ್ರಂಥ
ವೊಂದಿದೆ. ಇದರಲ್ಲಿ ಅಭಿಧಾಲಕ್ಷಣವೃತ್ತಿಗಳನ್ನು ಕೆಲವು ಮಟ್ಟಿಗೆ ನಿರೂ
ಪಿಸಿ, ವ್ಯಂಗ್ಯಾರ್ಥವನ್ನು ಕುರಿತು ಎರಡು ಮಾತು ಹೇಳಿ ಅದರ ವಿಸ್ತಾರ
ವಾದ ವಿಚಾರವನ್ನು ತಾನು ಬೇರೊಂದು ಕಡೆ (ಎಂದರೆ " ಕಾವ್ಯಪ್ರಕಾತ '
ದಲ್ಲಿ) ಮಾಡಿರುವುದಾಗಿ ತಿಳಿಸುತ್ತಾನೆ. ಮಮ್ಮ ಟನ " ಶಬ್ದವ್ಯಾಪಾರ
ವಿಚಾರ 'ವು ಮುಕುಲನ " ಅಭಿಧಾವೃತ್ತಿಮಾತ್ಮಕೆ'ಯನ್ನು ನೆನಪಿಗೆ ತರು
ತ್ತದೆ; ಆದರೆ ಎರಡಕ್ಕೂ ಅಲ್ಲಲ್ಲಿ ಅಭಿಪ್ರಾಯಭೇದವುಂಟು.
ಮಹಿಮಭಟ್ಟನ " ವ್ಯಕ್ತಿ ವಿವೇಕ', ಮಮ್ಮಟನ " ಕಾವ್ಯಪ್ರಕಾಶ ` ಈ
ಎರಡು ಉದ್ಭ್ರಂಥಗಳಮೇಲೂ ರುಯ್ಯಕನು (ಕಾಲ ಸು. ೧೧೫೦)
ವ್ಯಾಖ್ಯಾನ ಬರೆದಿರುವನೆಂಬ ಅಂಶವನ್ನು ಆಗಲೇ ಗಮನಿಸಿದ್ದೇವೆ.
5 ಈ ಪದ್ಯದಬ್ಲರುವ ಉತ್ಪ್ರೇಕ್ಷಾಲಂಕಾರದಿಂದ ಭೀತಿಭಾವವು ಸ್ಫುಟವಾಗಿ ಅಭಿ
ವ್ಯಕ್ತವಾಗುತ್ತದೆ. “ ಭಿಯಾ '' [ಭೀತಿಯಿಂದ] ಎಂದು ಭಾವದ ಹೆಸರನ್ನೂ ಕವಿ ಹೇಳಿಬಿಟ್ಟ
ರುವುದರಿಂದ ಸೂಚ್ಯವಾಗಬೇಂಇದದ್ದು ವಾಚ್ಯವಾಯಿತೆಂಬ ಅಕ್ಷೇಪಣ್ ಏಳಬಹುದು. ಈ
ದೋಷವನ್ನು ಒಪ್ಪಿಕೊಂಡರೂ ಬಾಧಕವಿಲ್ಲ ; ಏಕೆಂದರೆ ಇಲ್ಲ ಭಯವು ಎಂತಿದ್ದರೂ ತನ್ನಲ್ಲೇ
ವಿಶ್ರುಂತವಾಗದೆ ಹಯಗ್ರೀವನ ಪೌರುಪಾತಿಶಯವನ್ನು ಸೂಚಿಸಿ ಭಾಷಧ್ವನಿಗೆ ವ್ಯಂಜಕ
ವಾಗಿಯೇ ನಿಲ್ಲುತ್ತದೆ. ಅರ್ಥಪ್ರತೀತಿಗೆ ಈ ಕೊನೆಯ ಭಾವವೇ ವಿಶ್ರಾಂತಿಸ್ಥಾನ.
ಇಲ್ಲೆಲ್ಲಾ ಕವಿತಾತ್ಸರ್ಯವೇನೆಂಬುದನ್ನು ಮುಖ್ಯವಾಗಿ ಗಮನಿಸಬೇಕು. ಈ ಪದ್ಯದಲ್ಲಂತೂ
ಅದು ರಸಭಾವ ನಿರಪೇಕ್ಷವಾಗಿರೇ"ಲ್ಲವೆಂದು ದೃಢವಾಗಿ ಹೇಳಬಹುದು.
೬. ಪರಿಷ್ಕಾರ ಯುಗ ೯೭
ಈತನು "ನಾಟಕ ಮಾಮಾಂಸಾ', "ಸಾಹಿತ್ಯ ಮಾಮಾಂಸಾ, " ಅಲಂ
ಕಾರಾನುಸಾರಿಣೀ', " ಹರ್ಷಚರಿತವಾರ್ತ್ತಿಕ '---ಈ ಮೊದಲಾದ ಗ್ರಂಥ
ಗಳನ್ನೂ ಬರೆದಿದ್ದನೆಂತೆ; ಇವು ಯಾವುವೂ ದೊರೆತಿಲ್ಲ. " ಸಹೃದಯ
ಲೀಲಾ' ಎ೦ಬ ಇವನ ಚಿಕ್ಕ ಗ್ರಂಥವು ರಮಣಿಯರ ಗುಣ, ಅಲಂಕಾರ,
ಜೀವಿತ (ಎಂದರೆ ಯೌವನ), ಪರಿಕರ ಇವನ್ನು ಬಣ್ಣಿಸುತ್ತದೆ. ಇವನ
ಅತಿಪ್ರಸಿದ್ಧವಾದ ಕೃತಿ "ಅಲಂಕಾರಸರ್ವಸ್ವ'. ಧ್ವನಿಪ್ರಸ್ಥಾನದ ದೃಷ್ಟಿ
ಯಿಂದ ಶಬ್ದಾರ್ಥಾಲಂಕಾರಗಳನ್ನು ವಿಮರ್ಶಿಸಿ ಶಾಸ್ತ್ರೀಯ ಕ್ರಮದಲ್ಲಿ
ಪ್ರತಿಪಾದಿಸುವ ಕಾರ್ಯವು ಇನ್ನೂ ನಡೆದಿರಲಿಲ್ಲ... ಮಮ್ಮಟನು "ಕಾವ್ಯ
ಪ್ರಕಾಶ'ದಲ್ಲಿ ಅಲಂಕಾರಗಳನ್ನು ವಿಸ್ತಾರವಾಗಿಯೇ ನಿರೂಪಿಸಿದ್ದರೂ,
ಅವನು ಈ ಕಾರ್ಯವನ್ನು ಸಕ್ರಮವಾಗಿಯೂ ಸಮರ್ಪಕವಾಗಿಯೂ ಮಾಡಿ
ದ್ವನೆಂದು ಹೇಳುವಂತಿಲ್ಲ. ತಾನು ಅನುಸರಿಸಿದ ಧ್ವನಿಪ್ರಸ್ಥಾನದಲ್ಲ ಪೀಗೆ
ಇನ್ನೂ ವ್ಯವಸ್ಥಿತವಾಗಿ ನಡೆಯದಿದ್ದ ಅಲಂಕಾರ ವಿಚಾರವನ್ನು ರುಯ್ಯ
ಕನು ಉದ್ದೆ €ಶ ಪೂರ್ವಕವಾಗಿ ಕೈಕೊಂಡು, ಅದನ್ನು ಸ್ವತಂತ್ರವೂ ಯುಕ್ತಿ
ಯುಕ್ತವೂ ಆದ ಕ್ರಮದಲ್ಲಿ ನಿರ್ವಪಿಸಿದನು. ಪ ರೃತಿಭೆಯಿಂದ ಉಂಟಾದ
ಸೊಗಪಿಲ್ಲದೆ ಅಲಂಕಾರವಾಗಲಾರದೆಂದು ಈ ಮೊದಲೇ ಕುಂತಕನು
ಸ್ಲಾಪಿಸಿದ ನಷ್ಟೆ; ಈ ತತ್ತ್ವವನ್ನೇ ರುಯ್ಯಕನೂ ಮನಸ್ಸಿನಲ್ಲಿಟ್ಟು ಕೊಂಡು
ಛ ಲ ಚಿ ದಿ ೩ ಲೆ ಬನ್
ಅಲಂಕಾರಗಳನ್ನು ಪರೀಕ್ಷಿಸಿದನು; ಲಕ್ಷಣಗಳನ ್ಸ್ನಿ ಕಲ್ಬಿಸಿದನು.
ಇನ್ನೊಂದು ವಿಷಯ. ರುದ್ರಟನನ್ನುಳದರೆ ಯಾವ ಆಲಂಕಾರಿಕನೂ
ಆಲಂಕಾರಗಳನ್ನು ಕ್ರಮವರಿತು ವರ್ಗೀಕರಣಮಾಡಿರಲಿಲ್ಲ; ರುದ್ರಟನ
ವಿಭಜನೆ ಸಮರ್ಪಕವಾಗಿರಲಿಲ್ಲ. ರುಯ್ಯಕನು ಇದಕ್ಕೂ ಗಮನಕೊಟ್ಟು
ಇದರ ನಿರ್ವಾಹದಲ್ಲಿಯೂ ಬಲುಮಟ್ಟಿ ಗೆ ಕ್ರ ತಾರ್ಥನಾದನು.
ಅಲಂಕಾರಸರ್ವಸ್ವವು ಗದ್ಯದ ಸೂತ್ರ, ಅದರ ಮೇಲಿನ ವೃತ್ತಿ
ಉದಾಹರಣ್‌ಗಳು- ಇವೆರಡನ್ನೂ ಒಳಕೊಂಡಿದೆ. ರುಯ್ಯಕನ್ನೇ ಸೂತ್ರ
- 9 ತಿರುವೇಂದ್ರಂ ಸಂಸ್ಕೃತ ಗ್ರಂಥಮಾಲೆಯಲ್ಲ " ಸಾಹಿತ್ಯಮಾಯಾಂಸೆ 'ಯೆಂಬುದು
ಅಚ್ಚಾಗಿದೆ; ಇದರಲ್ಲ ಗ್ರಂಥಕಾರನ ಹೆಸರಿಲ್ಲ. ಗ್ರಂಥದ ಹೆಸರಿನ ಹೋಲಿಕೆಯ ಮೇಲೆ ಇದು
ಅಲಂಕಾರಸರ್ವಸ್ಯಕಾರನದಾಗಿರಬೇಕೆಂದು ಅದರ ಸಂಪಾದಕರು ಹೇಳುತ್ತಾರೆ.
ಗ್ರಂಥದ ತುಂಬ ಕುಂತಕ, ಭೋಜ ಮೊದಲಾದವರ ಕೃತಿಗಳಿಂದ ಉದ್ಭರಿಸಿಬ ಭಾಗಗಳೇ
ವಿಪುಲವಾಗಿವೆ ; ಐದರ ಕೆಲವು ಅಭಿಪ್ಲಾಯಗಳೂ ವಿಲಕ್ಷಣವಾಗಿವೆ. ಇದು ಧ್ವನಿವಾದಿಯಾದ
ರುಯ್ಯಕನ ಕೃತಿಯೆಂದು ನಂಬುವುದು ಕಪ್ಪ. ಬ,
SringaraprakiiSa, I, pp. 38-—100 ನೋಡಿ.
1. M. ಗ
Raghavan: Bhoju's
೯೮ ಭಾರತೀಯ ಕಾಪ್ಠಮಾಮಾಂಸೆ
ವೃತ್ತಿಗಳೆರಡನ್ನೂ ಬರೆದನೆಂಬುದು ಉತ್ತರದೇಶದಲ್ಲಿ ದೊರೆಯವ ಇದರ
ಮಾತೃಕೆಗಳ ಹೇಳಿಕೆ; ಜಯರಥನೆಂಬ ಪ್ರಾಚೀನವ್ಯಾಖ್ಯಾನಕಾರನ
ಮತವೂ ಇದೇ. ಆದರೆ ದಕ್ಷಿಣದೇಶದ ಕೆಲವು ಮಾತೃಕೆಗಳ ಮೇರೆಗೆ,
ಸೂತ್ರವನ್ನು ಬರೆದವನು ರುಯ್ಯಕ ; ವೃತ್ತಿಕಾರನು ಅವನ ಶಿಷ್ಯನೂ
" ಶ್ರೀಕಂಠಚರಿತ 'ವೆಂಬ ಕಾವ್ಯದ ಕರ್ತೃವೂ ಆದ ಮಂಖಬ (ಅಥವಾ
ಮಂಖುಕ) ; ಸಮುದ್ರಬಂಧನೆಂಬ ಕೇರಳದೇಶದ ವ್ಯಾಖ್ಯಾನಕಾರನು ಈ
ಪಕ್ಷವನ್ನು ಹಿಡಿಯುತ್ತಾನೆ. ವೃತ್ತಿಯೊಳಗಿನ ಉದಾಹರಣಿಗಳಲ್ಲಿ
" ಶ್ರೀಕಂಠಚರಿತ 'ದ ಕೆಲವು ಪದ್ಯಗಳೂ ಸೇರಿವೆಯೆಂಬುದನ್ನು ಇಲ್ಲ
ಗಮನಿಸಜೇಕು. !0
ಅಲಂಕಾರಭಾಗಕ್ಕೆ ರುಯ್ಯಕನ ಕೃತಿಯೂ ಕಾವ್ಯವಿಚಾರದ ಮಿಕ್ಕ
ಭಾಗಗಳಿಗೆ ಮಮ್ಮ ಟನ ಕೃತಿಯೂ ಪ್ರಮಾಣ ಗ್ರಂಥಗಳಾಗಿ ನಿಂತ
ಬಳಿಕ,'' ಈಚೆಗೆ ಬಂದ ಆಲಂಕಾರಿಕರು ಸ್ವತಂತ್ರವಾಗಿ ಹೇಳುವುದು
ಅಷ್ಟೇನೂ ಉಳಿಯಲಿಲ್ಲ. ಹಿಂದಿನವರು ರಚಿಸಿದ್ದ ಲಕ್ಷಣಗಳನ್ನು ಹೆಚ್ಚು
ಸಮರ್ಪಕಗೊಳಿಸುವುದು, ಹೆಚ್ಚು ಹೆಚ್ಚಾಗಿ ಪ್ರಭೇದಗಳನ್ನು ಕಲ್ಪಿಸುವುದು,
ಸಾಧ್ಯವಾದರೆ ಹೊಸ ಉದಾಹರಣಿಗಳನ್ನು ಸೇರಿಸುವುದು--ಇಪ್ಪರಲ್ಲೇ
ಅವರ ಕೌತಲ ವ್ಯಕ್ತವಾಗಬೇಕಾಯಿತು. ನಾಟಕಲಕ್ಷಣವನ್ನು ಮಮ್ಮ
ಟನು ಕೈಬಿಟ್ಟಿದ್ದನು; ಅದನ್ನೂ ಕಾವ್ಯಮಾಮಾಂಸಾ ಗ್ರಂಥದಲ್ಲಿ ಒಳ
ಪಡಿಸುವ ಅವಕಾಶವನ್ನು ಕೆಲವರು ಉಪಯೋಗಿಸಿಕೊಂಡರು.
ಹೀಗೆ ಧ್ವನಿಪ್ರಸ್ಥಾನದಲ್ಲಿ ನಾಟಕಲಕ್ಷಣವನ್ನೂ ಒಳಕೊಂಚು
ರಚತವಾದ ಮೊದಲನೆಯ ಕೃತಿ ಹೇಮಚಂದ್ರನ " ಕಾವ್ಯಾನುಶಾಸನ ".
ಈತನು ಒಬ್ಬ ದೊಡ್ಡ ಜೈನಾಚಾರ್ಯ. ಇವನು ಗುಜರಾತಿನಲ್ಲಿ ಕ್ರಿ ಶ.
ಫೆ
೧೦೮೮ರಲ್ಲಿ ಜನಿಸಿದನು ; ಎಂಟನೆಯ ವಯಸ್ಸಿನಲ್ಲೇ ಯತಿಯಾಗಿ
10 ಎಸ್. ಕೆ. ದೇ, ಪಿ. ವಿ. ಕಾಣೀ ಮೊದಲಾದ ವಿದ್ವಾಂಸರು ಸೂತ್ರವೃತ್ತಿ
ಗಳೆ೦ಡಕ್ಕೂ ರುಯ್ಯಕನೇ ಕರ್ತೃವಾಗಿರಜೇಕೆಂದು ಅಭಿಪ್ರಾಯಪಡುತ್ತಾರೆ. ಇದನ್ನೇ
ನಾವು: ಅನುಸರಿಸುತ್ತೇವೆ.
11 ಇವೆರಡಕ್ಕೂ ದೊರೆತ ಪ್ರಸಿದ್ಧಿಯನ್ನು ವಿದ್ಯಾಧರಚಕ್ರಪರ್ತಿಯೆಂಬ ವ್ಯಾಖ್ಯಾನ
ಕಾರನು ಹೀಗೆ ನಿರೂಪಿಸುತ್ತಾನೆ :
"" ಕಾವ್ಯಪ್ರಕಾಶೇ-ಲಂಕಾರಸರ್ವಸ್ಟೇ ಚ ವಿಶಶ್ಚಿತಾಂ |
ಅತ್ಯಾದರೋ ಜಗತ್ಯಸ್ಮಿನ್ ಬ್ಯಾಬ್ಯಾತಮುಭಯಂ ತತಃ॥ ''
(S. K. De: Sanskrit Poetics, Vol. 1, P. 201).
೬. ಪರಿಷ್ಕಾರ ಯುಗ ೯೯
ಇಪ್ಪತ್ತೊ೦ದನೆಯ ವಯಸ್ಸಿಗೆ ""ಸೂರಿ'' ಎಂಬ ಪ್ರಶಸ್ತಿಯನ್ನು ಪಡೆದು,
ಗುಜರಾತಿನ ಜಯಸಿ೦ಹ, ಕುಮಾರಪಾಲ ಎಂಬ ಇಬ್ಬರು ರಾಜರ ಗೌರವ
ಸನ್ಮಾನಗಳಿಗೆ ಪಾತ್ರನಾಗಿ ಪ್ರಸಿದ್ದಿ ಹೊಂದಿದನು; ಕುಮಾರಪಾಲನು ಇವನ
ಶಿಷ್ಯನೂ ಆಗಿದ್ದನು. ಹೇಮಚಂದ್ರನು ಅನೇಕ ಶಾಸ್ತ್ರಗಳಲ್ಲಿ ಪಾಂಡಿತ್ಯ
ವನ್ನು ಗಳಿಸಿ ವಿಖ್ಯಾತವಾದ ಗ್ರಂಥಗಳನ್ನು ರಚಿಸಿ "" ಕಲಿಕಾಲ ಸರ್ವಜ್ಞ”
ಬ೦ಬ ಯತಸ್ಸಿಗೆ ತಕ್ಕವನಾದನು. ಈತನು ತೀರಿಹೋದದ್ದು ಕ್ರಿ. ಶ.
೧೧೭೨ರಲ್ಲಿ. ಹೇಮಚಂದ್ರನು "ತ್ರಿಪಪ್ಪಿತಲಾಕಾಪುರುಪ ಚರಿತ್ರ'ವೇ ಮೊದ
ಲಾದ ಜೈನಗ್ರಂಥಗಳನ್ನು ಬರೆದಿರುವುದಲ್ಲದೆ ವ್ಯಾಕರಣ, ಛಂದಸ್ಸು, ಅಲಂ
ಕಾರ, ನಿಘಂಟು ಈ ಎಲ್ಲ ವಿಷಯಗಳನ್ನೂ ಕುರಿತು ಉಪಾದ್ದೇಯುವಾದ
ಗ್ರಂಥಗಳನ್ನು ಬರೆದಿದ್ದಾನೆ. ಹೇಮಚಂದ್ರನ ಒಂದು ಗುಣವೇನೆಂದರೆ,
ಅವನು ವ್ಯಾಕರಣಾದಿ ಎಲ್ಲ ಗ್ರಂಥಗಳಲ್ಲೂ ಸಂಸ್ಕೃತಕ್ಕೆ ಮಾತ್ರವಲ್ಲದೆ
ಪ್ರಾಕ್ಟತಕ್ಕೂ ಲಕ್ಷಣವನ್ನು ಕಲ್ಪಿಸುತ್ತಾನೆ. ಅವನ ಪ್ರಾಕೃತವ್ಯಾಕರಣ
ಭಾಗವೂ " ದೇಶೀೀನಾಮಮಾಲಾ ' ಎಂಬ ನಿಘಂಟೂ ಪ್ರಖ್ಯಾತವಾಗಿವೆ.
ಕ ಶಬ್ದಾನುಶಾಸನ `ದಲ್ಲಿ ಭಾಷಾಲಕ್ಷಣವನ್ನು ನಿರ್ಣಯಿಸಿ, ಬಳಿಕ
ಕ್ರಮಪ್ರಾಪ್ತವಾಗಿ ಒದಗಿದ ಕಾವ್ಯಲಕ್ಷಣವನ್ನು ಹೇಮಚಂದ್ರನು
" ಕಾವ್ಯಾನುಶಾಸನ'ದಲ್ಲ '' ನಿರೂಪಿಸಿದನು. ಇದರಲ್ಲಿ ಮಾಡಿರು
ವುದು ಒಟ್ಟಿನ ಮೇಲೆ ಸಂಕಲನ ಕಾರ್ಯ. ಹಲವು ಶಾಸ್ತ್ರಗಳಿಗೆ ಇವನು
ಮನಸ್ಸು ತೆತ್ತದ್ದ್ಧರಿಂದಲೋ ಏನೋ, ಕೃತಿಯಲ್ಲಿ ವಿಚಾರನವ್ಯತೆ ಕಾಣ
ಬರುವುದಿಲ್ಲ... ಕಾವ್ಯಾನುಶಾಸನದಲ್ಲೂ, ಅದರ ಮೇಲೆ ತಾನೇ ಬರೆದ
" ವಿಷೇಕ 'ಹೆಂಬ ಚೀಕೆಯಲ್ಲೂ ಹೇಮಚಂದ್ರನು ಆನಂ೦ದವರ್ದನ,'
ರಾಜಶೇಖರ, ಅಭಿನವಗುಪ್ತ, ಮಮ್ಮಟ ಮೊದಲಾದ ಪ್ರಸಿದ್ಧಲಾಕ್ಷಣ
ಕರ ಅಭಿಪ್ರಾ ಯಗಳನ್ನು ಅನ`ಸರಿಸಿರು ವುದಷ್ಟೇ ಅಲ್ಲ; ಅವರ ಗ್ರಂಪ
ಗಳಿಂದ ಭಾಗಭಾಗಗಳನ್ನೇ ಏತಿ ಸೇರಿಸಿಕೊಂಡಿದ್ದಾನೆ. (ಎಷ್ಟೋ ಮೇಳೆ
ಇದು ಇಂಥವರ ವಾಕ್ಯವೆಂದು ಕೂಡ ನಿರ್ದೇಶಿಸುವುದಿಲ್ಲ.) ಆದರೆ ಈ
ರೀತಿಯ ""ಉದ್ಭರಣ''ದಿ೦ದ ವಿದ್ಯಾರ್ಥಿಗಳಿಗೆ ಪ್ರಯೋಜನವೂ ಇಲ್ಲದಿಲ್ಲ.
ಉದಾಹರಣಿಗೆ, ಭಟ್ಟ ತೌತನ " ಕಾವ್ಯಕೌತುಕ'ದ ಒಂದೆರಡು ಭಾಗಗಳು
ಇಂದಿನ ವರೆಗೂ ಉಳಿದುಬಂದಿರುವುದು ಹೇಮಚಂದ್ರನ ಉಪಕಾರದಿಂದ.
1? ಐದರ ರಚನೆಂಜ್ಯ ಕಾಲ ಕ್ರಿ, ಶ. ೧೧೫೦ ನಿಂದ ಈಚೆಗೆ. ರುಯ್ಯಕನ ಕೃತಿಯನ್ನು
ಹೇಮಚಂದ್ರನು ಮೋಡಿರಲಾರನು.
೧೦೦ ಭಾರತೀಯ ಕಾವ್ಯಮಾಮಾಂಸೆ
ಆಚಾರ್ಯ ಹೇಮಚಂದ್ರನ ಶಿಷ್ಯರಾದ ರಾಮಚಂದ್ರ (ಕಾಲ : ಸು.
೧೧೦೦-೧೧೭೫), ಗುಣಚಂದ್ರ ಎಂಬ ಇಬ್ಬರು ವಿದ್ವಾಂಸರು " ನಾಟ್ಯ
ರ್ಪಣ'ಷೆಂಬ ಗ್ರಂಥವನ್ನು ರಚಿಸಿದ್ದಾರೆ. ಹೇಮಚಂದ್ರನು ತನ್ನಅನಂತರ
ಆಚಾರ್ಯಪಟ್ಟಕ್ಕೆ ರಾಮಚಂದ್ರನು ಬರಬೇಕೆಂದು ಹೇಳಿದ್ದನಂತೆ. ರಾಮ
ಚಂದ್ರನು ""ಪ್ರಬಂ ಧಶತಕರ್ತ'' ; " ನಲವಿಲಾಸೆ'ಷೇ ಮೊದಲಾದ ಹಲವು
ನಾಟಕಗಳನ್ನೂ ಇತರ ಗ್ರಂಥಗಳನ್ನೂ ಬರೆದವನು. ಅವನ ಸತೀರ್ಥ್ಯ
ನಾದ ಗುಣಚಂದ್ರನ ವಿಷಯದಲ್ಲಿ ಹೆಚ್ಚು ವಿಷಯಗಳು ತಿಳಿಯಬಂದಿಲ್ಲ.
" ನಾಟ್ಯದರ್ಪಣ' ದಲ್ಲ ಗ್ರಂಥಕರ್ತರು ದಶರೂಪಕ, ತಾವ್ಯಪ್ರಹಾಶ,
ಮೊದಲಾದವುಗಳ ಮತವನ್ನು ಸಾಮಾನ್ಯವಾಗಿ ಅನುಸೆರಿಸಿದ್ದರೂ ಎಷ್ಟೋ
ಕಡೆ ಸ್ವತ೦ತ್ರಾಭಿಪ್ರಾಯಗಳನ್ನೂ ಕೊಡುತ್ತಾರೆ. ಇಂಥವುಗಳಲ್ಲ,
ರಸಸ್ಪಭಾವವನ್ನು ಕುರಿತು ಹೇಳುವ ಒ೦ದು ಅಂಶವು ತುಂಬ ವಿಲಕ್ಷಣ
ವಾದದ್ದು. ಸ್ಕಾಯಿಭಾವವು ರತಿಯಂತೆ ಸುಖದಾಯಕವಾಗಿರಲಿ
ಶೋಕದಂತೆ ದುಃಖದಾಯಕವಾಗಿರಲಿ, ಶೃಂಗಾರಕರುಣಾದಿ ಸಮಸ್ತ
ರಸಗಳ ಅನುಭವವೂ ಸುಖಾತ್ಮಕವೆಂದೇ ಲಾಕ್ಷಣಿಕರ ಏಕಾಭಿಪ್ರಾಯ.
ನಾಟ್ಯದರ್ಪಣಕಾರರು ಮಾತ್ರ ಇದನ್ನೊಪ್ಪದೆ, "" ಸುಖದುಃಖಾತ್ಮಕೋ
ರಸಃ `' ಎಂದು ಸ್ಪಪ್ಪವಾಗಿ ಸೂತ್ರಿಸಿ, ದೀರ್ಪವಾಗಿ ವಿವರಿಸಿ, ಅದರಂತೆ
ರಸಗಳನ್ನು ಎರಡು ಪಂಗಡಗಳಾಗಿ ವಿಂಗಡಿಸುತ್ತಾರೆ. ಈ ವಾದದ
ಹುರುಳೇನೆಂಬುದನ್ನು ಮುಂದೆ ಯಥಾಸ್ಥಾನದಲ್ಲ ವಿವೇಚನೆ ಮಾಡಲಾಗು
ತ್ಮದೆ.!1
| ನಾಟಕ ಲಕ್ಷಣವನ್ನು ಕುರಿತು ಈಚೆಗೆ ಹುಟ್ಟಿದ ಎರಡು ಮೂರು
ಮುಖ್ಯಗ್ರಂಥಗಳನ್ನು ಕುರಿತು ಎರಡೆರಡು ಮಾತನ್ನು ಹೇಳಲು ಇದೇ ತಕ್ಕ
ಸ್ಥಳ, ಇವುಗಳಲ್ಲೆಲ್ಲಾ ಅತಿಮುಖ್ಯವಾದದ್ದು ಶಾರದಾತನಯನು
(ಕಾಲ: ಸು. ೧೧೭೫-೧೨೫೦) ಬರೆದ " ಭಾವಪ್ರಕಾತನ'. ಇದಕ್ಕೆ
" ಭಾವಪ್ರಕಾಶ', " ಭಾವಪ್ರಕಾಶಿಕಾ' ಎಂಬ ಹೆಸರುಗಳೂ ಉಂಟು.
13 ಇನ್ನಿಬ್ಬರು ಜೈನಲಾಕ್ಷಣಿಕರನ್ನು ಇಲ್ಲಯೇ ಸ್ಮರಿಸಬಹುದು. "ಪಾಗೃಟಾಲಂ
ಕಾರ 'ವನ್ನು ಬರೆದ ವಾಗೃಟನು ಒಬ್ಬನು; ಇವನ ಕಾಲ ಕ್ರಿ. ಶ. ೧೨ನೆಯ ಶತಮಾನದ
ಪೂರ್ವಾರ್ಧ. ಎರಡನೆಯವನ ಹೆಸರೂ ವಾಗ್ಧಟ ಎಂದೇ ; ಇವನ ಕಾಲ ಕ್ರಿ. ಶ. ೧೪ನೆಯ
ತತಮಾನವಿರಬಹುಡು ; ಗ್ರಂಥದ ಹೆಸರು " ಕಾವ್ಯಾನುಶಾಸನ'. ಎರಡೂ ಲಘುಕೃತಿ
ಗಳು; ಶಾಸ್ತ್ರದ ಬೆಳೆವಳಿಗೆಯ ದೃಷ್ಟಿಯಿಂದ ಇವಕ್ಕೆ ಹೆಚ್ಚಿನ ಪ್ರಾಶಸ್ತ್ರ್ಯೈವೇನೂ ಇಲ್ಲ.
ಓ. ಪರಿಷ್ಮ್ಮಾರ ಯುಗ ೧೦೧
ಇದರಲ್ಲಿ, ಭರತನ " ನಾಟ್ಯಶಾಸ್ತ್ರ'ದಲ್ಲಿ ಹೇಳಿರುವ ಅಂತಗಳು
ಬಹುಮಟ್ಟಿಗೆ ಸಂಗ್ರಹಗೊಂಡಿರುವುದಲ್ಲದೆ, ಶಬ್ದ ವ್ಯಾಪಾರ, ರಸ
ನಿಷ್ಪತ್ತಿ ಈ ಮೊದಲಾದವನ್ನು ಕುರಿತು ದೀರ್ಪವಾದ ಚರ್ಚೆಗಳೂ
ಬಂದಿವೆ. ತಾನು ನಿರೂಪಿಸುವ ಒಂದೊಂದು ವಿಷಯದ ಮೇಲೂ, ತನ್ನ
ಇಲದ ವರೆಗಿದ್ದ ಮುಖ್ಯ ಲಾಕ್ಷಣಿಕರ ಮತಗಳನ್ನು ಕೂಡಿದ ಮಟ್ಟಿಗೆ
ಸಂಗ್ರಹಿಸುವುದು ಶಾರದಾತನಯನ ಪದ್ಧತಿ. ಅವನು ಸದಾಶಿವೆ,, ನಾರದ
ಹೊದಲಾದ ಪೌರಾಣಿಕ ವ್ಯಕ್ತಿಗಳ ಹೆಸರನ್ನು ಎತ್ತುತ್ತಾನೆ; ಕೋಹಲ,
ಹರ್ಷ ಮೊದಲಾದವರ ನಪ್ಪಗ್ರಂಥಗಳಿಂದ ವಾದಗಳನ್ನು ಅಲ್ಲಲ್ಲಿ ಉದ್ದ
ರಿಸುತ್ತಾನೆ. ನಾಟ್ಯಶಾಸ್ತ್ರ, ಧ್ವನ್ಯಾಲೋಕ ಮತ್ತು ಲೋಚನ, ದಶರೂಪಕ,
ಶೃಂಗಾರಪ್ರಕಾಶ, ಕಾವ್ಯಪ್ರಕಾಶ ಮೊದಲಾದ ಗ್ರಂಥಗಳಿಂದಂತೂ
ಅನೇಕ ಭಾಗಗಳನ್ನು ಎಷ್ಟೋ ಸಲ ಅಲ್ಲಿಯ ಮಾತುಗಳಲ್ಲೇ ಸಂಗ್ರಹಿಸಿ
ಕೊಡುತ್ತಾನೆ; ಇವನ ಕೃತಿಯಪ್ಪೂ ಪದ್ಯಾತ್ಮಕವಾಗಿ, ಬಲುವಟ್ಟಿಗೆ
ಶ್ಲೋಕಗಳಲ್ಲಿ ರಚಿತವಾಗಿದೆ. ತಾನು ಅಭಿನವಗುಪ್ತನಿಗೆ ಖುಣಿಯಾಗಿ
ರುವ ವಿಷಯವನ್ನು ಶಾರದಾತನೆಯನೇ ಒಪ್ಪುತ್ತಾನೆ, ಆದರೆ ಎಲ್ಲ
ಅಭಿಪ್ರಾಯಗಳಲ್ಲೂ ಅವನನ್ನು ಅನುಸರಿಸಿಲ್ಲ. ವ್ಯಂಗ್ಯಾ ರ್ಥವು
"ತಾತ್ಪರ್ಯ ದಲ್ಲಿ ಅಂತರ್ಗತವಾಗುವುದೆಂದು ಅವನ ಅಭಿಪ್ರಾಯ ; ಇದು
ಭೋಜರಾಜನಿಗೆ ಸಮ್ಮ ತವಾದ ಮತವೆಂದು ನಾವು ಆಗಲೇನೋಡಿದ್ದೆ (ವೆ.
ರಸನಿಪ್ಪತಶ್ತಿಯ ವಿಷಯದಲ್ಲಿ ಭಟ್ಟನಾಯಕನೂ ಧನಂಜಯಧನಿಕರೂ
ಹೇಳುವ ಭಾವ್ಯ-ಭಾವಕ ಸಂಬಂಧವು ಅವನಿಗೆ ಅಭಿಮತವಾದದ್ದು.
ಧನಿಕನಂಶೆ ಇವನೂ ನಾಟ್ಯದಲ್ಲಿ ಶಾಂತರಸವನ್ನು ಒಪ್ಪುವುದಿಲ್ಲ; ಆದರೆ
ಕಾವ್ಯದಲ್ಲಿ ಅದಕ್ಕೆ ಸ್ಥಾನವನ್ನು ಕೊಡುತ್ತಾನೆ.
ಸಾಗರನಂದಿಯ *" ನಾಟಕಲಕ್ಕಣರತ್ನ ಕೋಶ'ವೆಂಬ ಗ್ರಂಥವು
ಇತ್ತೀಚೆಗೆ ಪ್ರಕಟವಾಗಿದೆ. ಭರತನ ಮತವನ್ನು ಶ್ರೀಹರ್ಷ, ವಿಕ್ರಮ
ಮಾತೃಗುಪ್ತ ಮೊದಲಾದವರ ಮತದ ಮೇರೆಗೆ ಒಳಹೊಕ್ಕು ಅಲ್ಲಿಂದ
ತಾನು ತಂದ ರತ್ನಕೋತವಿದೆಂದು ಗ್ರಂಥಕಾರನ ಹೇಳಿಕೆ. ಅಂತೂ
ಭರತನ ನಾಟ್ಯಶಾಸ್ತ್ರ ದಲ್ಲಿ ನಾಟಕವಿಧಾನ, ರಸಭಾವಾದಿಗಳು, ಲಕ್ಷಣಾದಿ
ಗಳು ಈ ಮೊದಲಾದವನ್ನು ಕುರಿತ ಅನೇಕ ಅಧ್ಯಾಯಗಳ ವಿಷಯವನ್ನು
ಇಲ್ಲ ಸಂಗ್ರಹಿಸಿ, ಪ್ರಸಿದ್ಧವೂ ಅಪ್ರಸಿದ್ಧವೂ ಅದ ಹಲವು ಕೃ ತಿಗಳಿಂದ ತೆಗೆದ
೧೦೨ ಭಾರತೀಯ ಕಾವ್ಯಮಾಮಾಂಸೆ
ಉದಾಹರಣಿಗಳೊಡನೆ ನಿರೂಪಿಸಿದ್ದಾನೆ. ಇದರ ರಚನೆಯಲ್ಲಿ ಸಾಗರ
ನಂದಿ ' ದಶರೂಪಕ 'ವನ್ನು ಉಪಯೋಗಿಸಿಕೊಂಡಂತೆ ಕಾಣಿಸುವುದಿಲ್ಲ;
ಇವನ ಕೃತಿ " ಸಾಪಿತ್ಯದರ್ಪಣ 'ಕಾರನಿಗೆ ಒಂದು ಆಕರಗ್ರಂಥವಾಗಿದ್ದಂತೆ
ತೋರುತ್ತದೆ. ಈ" ನಾಟಕ ಲಕ್ಷಣರತ್ನಕೋಶ'ವು ಕಿ. ಶ. ಹದಿಮೂರ
ನೆಯ ಶತಮಾನದಲ್ಲಿ ರಚಿತವಾಗಿರುವುದು ಅಸಂಭವವಲ್ಲ.
" ರಸಾರ್ಣವಸುಧಾಕರ'ವು ಸಿಂಗಭೂಪಾಲನೆಂಬ ಒಬ್ಬ ಪ್ರಭುವಿನ
ಕೃತಿ (ಕಾಲ: ಸು. ೧೩೩೦) ; ಇದಕ್ಕೆ " ಸಿಂಗಭೂಪಾಲೀಯ ' ಪೆಂಬ
ಹೆಸರೂ ಉಂಟು. ಇದರಲ್ಲಿ ನಾಟಕಾದಿಗಳ ಲಕ್ಷಣವು ಸುಲಭವಾದ
ಶೈಲಿಯಲ್ಲಿ ಅತಿಸಂಗ್ರಹವೂ ಅತಿಸಿಸ್ತರವೂ ಆಗದಂತೆ ನಿರೂಪಿತ
ವಾಗಿದೆ; ಸಿ೦ಂಗಭೂಪಾಲನು ಹಿಂದಿನ ಲಾಕ್ಷಣಿಕರ ಮತಗಳನ್ನು ಅಲ್ಲಲ್ಲಿ
ಸಂಗ್ರಪಿಸುತ್ತಾನೆ; '' ಪ್ರಾಚೀನ ಗ್ರಂಥಗಳಿಂದ ಆರಿಸಿದ ಕಾವ್ಯಭಾಗ
ಗಳ ಜೊತೆಗೆ ತಾನೇ ರಚಿಸಿದ ಪದ್ಯಗಳನ್ನೂ ಅಲ್ಲಲ್ಲಿ ಉದಾಹರಿಸುತ್ತಾನೆ.
* ಸಿಂಗಭೂಪಾಲೀಯ 'ದ ಮತವನ್ನು ಕನ್ನಡದ ಕೆಲವರು ಆಲಂಕಾರಿಕರು
ಅನುಸರಿಸಿರುವುದುಂಟು.
ಇನ್ನು ಕಾವ್ಯ ಖಾಮಾಂಸಾಗ್ರಂಥಗಳ ಕಡೆಗೆ ತಿರುಗೋಣ.
" ಸಾಹಿತ್ಯದರ್ಪಣ'ದ ಹೆಸರನ್ನು ಪ್ರಸಂಗವಶದಿಂದ ಈಗಾಗಲೇ ಎತ್ತಿ
ದ್ಹೇವೆ. ಇದನ್ನು ರಚಿಸಿದವನು ವಿಶ್ಚನಾಧ; ಈತನ ಕಾಲ ಕ್ರಿ. ಶ. ೧೪ನೆಯ
ತೆತಮಾನ. "ಸಾಪಿತ್ಯದರ್ಪಣ'ವು ಕಾವ್ಯಾನುಶಾಸನದಂತೆಯೇ ನಾಟಕ
ಲಕ್ಷಣವನ್ನೂ ಒಳೆಕೊಂಡಿದೆ; ಆದರೆ ಇಡು ಕಾವ್ಯಾನುಶಾಸನಕ್ಕಿಂತ
ಹೆಚ್ಚು ಸ್ವತಂತ್ರವಾದ ಗ್ರಂಥ. ವಿಶ್ವನಾಥನು ಎಷ್ಟೋ ಕಡೆಗಳಲ್ಲಿ ಮಮ್ಮ
ಟನೆ ಅಭಿಪ್ರಾಯಗಳನ್ನು ಖಂಡಿಸಿ ಬರೆದಿದ್ದಾನೆ. ಅಲಂಕಾರ ನಿರೂಪಣ
ಯಲ್ಲಿ ಇವನು ರುಯ್ಯಕನ ಮತವನ್ನು ಅನುಸರಿಸುತ್ತಾನೆ. “ವಾಕ್ಯಂ
ರಸಾತ್ಮಕಂ ಕಾವ್ಯಂ'' ಎಂದು ತನ್ನ ಗ್ರಂಥದ ಮೊದಲಲ್ಲೇ ಘಂಟಾ
ಘೋಷವಾಗಿ ಹೇಳಿ, ಕಾವ್ಯಲಕ್ಷಣದಲ್ಲಿಯೇ ""ರಸ'' ಶಬ್ದವನ್ನು ಸೇರಿಸಿದ
ಕೀರ್ತಿ ಇವನಿಗೆ ಸಲ್ಲತಕ್ಕದ್ದು. ರಸರಹಿತವಾದದ್ದನ್ನು ಕಾವ್ಯಪೆಂದೇ
ಕರೆಯಕೂಡಡೆನ್ನುವಷ್ಟು ದೂರ ಇವನು ಹೋಗುತ್ತಾನೆ; ಅದರಂತೆ
14 ಅವನು ಮುಖ್ಯವಾಗಿ ಭೋಜ, ಶಾರದಾತನಯ ಇವರನ್ನು ಅನುಸರಿಸುವಂತೆ
ಕಾಣುತ್ತದೆ.
೬. ಪರಿಷ್ಕಾರ ಯುಗ ೧೦೩
““ಚಿತ್ರ''ವೆಂಬ ಪ್ರಭೇದವನ್ನು ನಿರಾಕರಿಸುತ್ತಾನೆ. ಇವನ ಶೈಲಿ ಒಟ್ಟಿನ
ಮೇಲೆ ಸರಳವಾಗಿರುವುದರಿಂದಲೂ, ಅಲಂಕಾರ ಶಾಸ್ತ್ರಕ್ಕೆ ಸಂಬಂಧಪಟ್ಟ
ಎಲ್ಲ ವಿಷಯಗಳನ್ನೂ ಪ್ರತಿಪಾದಿಸುವುದರಿಂದಲೂ ಇದು ಈ ಶಾಸ್ತ್ರಡ
ವ್ಯಾಸಂಗಕ್ಕೆ ಒಳ್ಳೆಯ ಪ್ರವೇಶಿಕೆ.
ಸ್ವತಂತ್ರವಿಚಾರದ ಕಾಲವು ಮುಗಿದ ಬಳಿಕ, ಗ್ರಂಥಕಾರರ
ಕೌಶಲವು ಬೇರೆ ವಿಧಗಳಲ್ಲಿ ಪ್ರಕಾತಗೊಳ್ಳುವುದು ಸಹಜ. ಭಾಮೆಹೆ,
ದಂಡಿ ಮೊದಲಾದ ಒಬ್ಬಿಬ್ಬರು ಪ್ರಾಚೀನರನ್ನು ಬಿಟ್ಟರೆ ಹದಿಮೂರನೆಯ
ತತಮಾನದ ವರೆಗೂ ಲಾಕ್ಷಣಿಕರು ಉದಾಹರಣಿಗಳನ್ನು ಪ್ರಖ್ಯಾತವಾದ
ಕಾವ್ಯನಾಟಕಗಳಿಂದ ಆರಿಸಿಕೊಳ್ಳುತ್ತಿದ್ದರು; ತಮ್ಮ ಪದ್ಯಗಳನ್ನು
ಉದಾಹರಿಸುವಾಗಲೂ ಮಿತವಾಗಿ ಉಚಿತವಾಗಿ ಉದಾಹರಿಸುತ್ತಿದ್ದರು.
ಆದರೆ ವಿದ್ಯಾಧರನು (ಕಾಲ: ಕ್ರಿ.ಶ. ಸು. ೧೩೦೦) "ಏಕಾವಳಿ'ಯಲ್ಲಿ
ಬಹುಶಃ ತನಗೆ ಮಾತ್ರ ಲಾಭದಾಯಕವಾದ ಹೊಸದೊಂದು ಪದ್ಧತಿ
ಯನ್ನು ಪ್ರಾರಂಭಿಸಿದನು. ಇದರಲ್ಲಿ ಕೊಟ್ಟಿರುವ ಉದಾಹರಣಿಗಳೆಲ್ಲ
ಅವನೇ ರಚಿಸಿದವು. ಇಷ್ಟೇ ಆಗಿದ್ದರೆ ಹೆಚ್ಚು ಚಂತಿಸಜೇಕಾಗಿರಲಿಲ್ಲ ;
ಆದರೆ ಅವೆಲ್ಲವೂ ಒಬ್ಬ ವ್ಯಕ್ತಿ ಯ, ಎಂದರೆ ಇವನ ಪ ಶಭುವಾದ ಕಳಿಂಗ
ದೇಶದ ನರಸಿಂಹನ, ಸ್ತುತಿಪರವಾದವು. ನಮ್ಮ ದಕ್ಷಿಣದೇಶದಲ್ಲ ಬಲು
ಮಟ್ಟಿಗೆ ಪಂಡಿತಪ್ಪಿಯವಾಗಿರುವ ವಿದ್ಯಾನಾಥನೆ ' ಪ್ರತಾಪರುದ್ರಯತ್ಕೋ
ಭೂಷಣ' (ಅಥವಾ " ಪ್ರತಾಪರುದ್ದೀಯ')ವೂ ಇದೇ ದಾರಿಯಲ್ಲೇ
ಹೊರಟು ಬರೆದದ್ದು (ಇವನ ಕಾಲವೂ ಕ್ರಿ.ಶ. ಸು. ೧೩೦೦).
"" ಪ್ರತಾಪರುದ್ರದೇವಸ್ಯ ಗುಣಾನಾಶ್ರಿತ್ಯ ನಿರ್ಮಿತಃ |
ಅಲಂಕಾರಪ್ರಬಂಧೋಯಂ ಸಂತಃ ಕರ್ಣೋತ್ಸವೊಆಸ್ತು ವಃ ॥'' 13 (1೯)
ಎಂದು ವಿದ್ಯಾನಾಥನು ಹಾರೈಸುತ್ತಾನೆ. ಈ ಗ್ರಂಥದ ಇನ್ನೊಂದು
ವೈಪರೀತ್ಯವೇನೆಂದರೆ, ನಾಟಕಲಕ್ಷಣಕ್ಕೆ ಪೂರ್ಣನಿದರ್ಶನವಾಗಿ
ಪ್ರತಾಪರುದ್ರನ ಕಥೆಯನ್ನವಲಂಬಿಸಿ ತಾನೇ ರಚಿಸಿದ "" ಸಾಂಗ'' ವಾದ
ನಾಟಕವನ್ನು ವಿದ್ಯಾನಾಥನು ಉದಾಹರಿಸುತ್ತಾನೆ. ಹೆಜ್ಜೆಹೆಜ್ಜೆಗೂ,
15" ಪ್ರತಾಪರುದ್ರದೇವನ ಗುಣಗಳನ್ನು ಆಶ್ರಯಿಸಿ ರಚಿತವಾದ ಈ ಅಲಂಕಾರ
ಗ್ರಂಥವು, ಓ ಸಜ್ಜನರೇ, ನಿಮ್ಮ ಕಿವಿಗಳಿಗೆ ಹಬ್ಬವಾಗಲಿ! ''
೧೦೪ ಭಾರತೀಯ ಕಾವ್ಯಮಾಮಾಂಸೆ
ಅದರಲ್ಲಿ ತಾನು ಸೇರಿಸಿರುವ ಅಂಗಗಳನ್ನು ನಿರ್ದೇತಿಸುತ್ತಾನೆ. ಇಷ್ಟು
ಲಕ್ಷಣಪೂರ್ಣವಾದರೂ ಈ ನಾಟಕಗಲ್ಲಿ ರಸಿಕರಿಗೆ ಅಹ್ಲಾದವೇನೂ
ಹುಟ್ಟುವುದಿಲ್ಲ! 10
ನಮ್ಮ ಗ್ರಂಥದ ಈ ಭಾಗದಲ್ಲಿ ಮುಖ್ಯವಾಗಿ ಶಾಸ್ತ್ರದ ಜೆಳೆವಳಿಗೆ
ಯನ್ನು ನಿರೂಪಿಸುವುಡೇ ಉದ್ದೇಶವಾಗಿರುವ ಕಾರಣ, ಸಿದ್ಧಾಂತದ
ದೃಷ್ಟಿಯಿಂದ ಅಷ್ಟು ಗಣ್ಯರಲ್ಲದ ಇತ್ತೀಚಿನ ಎಷ್ಟೋ ಮಂದಿ ಆಲಂಕಾರಿ
ಕರ ವಿಷಯವನ್ನು, ಅವರ ಹೆಸರುಗಳನ್ನು ಕೂಡ ಸೂಚಿಸದೆ, ಕೈಬಿಡ
ಬೇಕಾಗಿದೆ. ಆದರೂ, ಸಂಸ್ಕೃತ ಕಾವ್ಯಮಾಮಾಂಸೆಯ ಚರಮದಿಗ್ಗಜ
ಪೆನಿಸುವ ಜಗನ್ನಾಥಪಂಡಿತ, ಆತನ ಕಟುಟೀಕೆಗೆ ಗುರಿಯಾಗಿದ್ದ
ಅಪ್ಪಯ್ಯದೀಕ್ಷಿತ ಇವರಿಬ್ಬರ ವಿಷಯವನ್ನು ಹೇಳದೆ ಈ ಅಧ್ಯಾಯವನ್ನು
ಮುಗಿಸುವಹಾಗಿಲ್ಲ. ಅಪ್ಪಯ್ಯದೀಕ್ಷಿತನ "ಕುವಲಯಾನಂದ ', *ಚಿತ್ರಮಾ
ಮಾಂಸೆ' ಎಂಬ ಗ್ರಂಥಗಳನ್ನು ಪರಿಚಯ ಮಾಡಿಕೊಡುವಾಗ
ಕುವಲಯಾನಂದಕ್ಕೆ ಆಧಾರಗ್ರಂಥವಾದ ಜಯದೇವನ " ಚಂದ್ರಾಲೋಕ'
ವನ್ನೂ ಕುರಿತು ಎರಡು ಮಾತು ಹೇಳಲೇಬೇಕಾಗುತ್ತದೆ. ಜಯದೇವನ
ಕಾಲ ಬಹುಶಃ ಕ್ರಿ.ಶ. ೧೩ನೆಯ ಶತಮಾನ. ಇವನು!” "ಚಂದ್ರಾಲೋಕ'
ದಲ್ಲಿ ಧ್ವನಿಸಂಪ್ರದಾಯವನ್ನನುಸರಿಸಿ ಕಾವ್ಯಾಂಗಗಳನ್ನೆಲ್ಲ ನಿರೂಪಿಸಿ
ದ್ದ ರೂ, ಅದರಲ್ಲಿ ಪ್ರಶಸ್ತಿ ಹೊಂದಿರತಕ್ಕ ಭಾಗವು ಅರ್ಥಾಲಂಕಾರ
ಪ್ರಕರಣ; ಇದರಲ್ಲಿ ನೂರು ಅಲಂಕಾರಗಳನ್ನು ಹೇಳಿದೆ. ಇಲ್ಲ ಪ್ರತಿ
ಯೊಂದು ಅಲಂಕಾರಕ್ಕೂ ಸರಳವಾದ ಲಕ್ಷಣವೂ, ಲಾಕ್ಷಣಿಕನೇ ಕಲ್ಪಿಸಿದ್ದಾ
ದರೂ ರಮ್ಯವೂ ಉಚಿತವೂ ಆದ ಉದಾಹರಣಿಯೂ ಶ್ಲೋಕರೂಪದಲ್ಲಿ
ಬಿಡಿಯಾಗಿ ಅಡಕವಾಗಿ ಬಂದಿವೆ. ಅಲಂಕಾರಗಳ ಪ್ರಥಮಪರಿಚಯ
ಮಾಡಿಕೊಳ್ಳುವುದಕ್ಕೆ ಇದು ಅತ್ಯುತ್ತಮವಾದ ಗ್ರಂಥ. "ಚಂದ್ರಾಲ್ಲೋಕ'ದ
ಈ ಅರ್ಥಾಲಂಕಾರಭಾಗವನ್ನೇ ಅತ್ಯಲ್ಪವಾದ ವ್ಯತ್ಯಾಸಗಳೊಡನೆ ಮೂಲ
ವಾಗಿಟ್ಟುಕೊಂಡು ಅದರಮೇಲೆ ಚರ್ಚೆ ಉದಾಹರಣಿ ಮೊದಲಾದವನ್ನು
16 ಏಕಾವಳಿಗೆ ಪ್ರಸಿದ್ಧ ಟೀಕಾಕಾರನಾದ ಮಲ್ಲಿನಾಧನೂ " ಪ್ರತಾಪರುದ್ರೀಯ ' ಕ್ಕೆ
ಅವನ ಮಗನಾದ ಕುಮಾರಸ್ವಾಮಿಯೂ ವ್ಯಾಖ್ಯಾನಗಳನ್ನು ಬರೆದಿದ್ದಾರೆ.
17 ಜಯದೇವನಿಗೆ ಪೀಯೂಪವರ್ಪನೆಂದೂ ಹೆಸರಿದೆ ; "ಪ್ರಸನ್ನರಾಥವ' ನಾಟಕದ
ಕರ್ತೃವಾದ ಜಯದೇವನೇ ಈತನೆಂದು ಊಹಿಸಲು ಆಧಾರವುಂಟು. " ಗೀತಗೋವಿಂದ ' ದ
ಕರ್ತೃ ಬೇರೊಬ್ಬ ಜಯದೇವ ; ಈತನಲ್ಲ.
೬. ಪರಿಷ್ಕಾರ ಯುಗ ೧೦೫
ಬೆಳಸಿ, ಕೊನೆಯಲ್ಲಿ ಇನ್ನು ಇಪ್ಪತ್ತು ನಾಲ್ಕು ಆಲಂಕಾರಗಳನ್ನು ಹೆಚ್ಚಾ ಗಿ
ಸೇರಿಸಿ ಅಪ್ಪಯ್ಯದೀಕ್ಷಿತನು : ಕುವಲಯಾನಂದ ' ವನ್ನು ರಚಿಸಿದನು ು. ಈಗ
ಅರ್ಹಾಲಂಕಾರ ನಿರೂಪಣಿಗೆ ಕುವೇ ಲಯಾನಂದವೇ ಬಹುಮೆಟ್ಟಿಗೆ
ಪ್ರಮಾಣ ಗ್ರ ೦ಥವಾಗಿ ಪರಿಣಮಿಸಿದೆ. " ಚಿತ್ರಮಾಮಾಂಸೆ ' ಅಪೂರ್ಣ
$ ಯಲ್ಲಿದೆ. ಇದರಲ್ಲಿ ಅಪ್ಪಯ್ಯದೀಕ್ಷಿತನು ಧ್ವನಿ, ಗುಣಃ £ಭೂತವ್ಯಂಗ್ಯ,
ತ್ರ ಎಂಬ ಕಾವ್ಯವಿಭಾಗವನ್ನು ಸಂಗ್ರಹವಾಗಿ ತಿಳಿಸಿ, ಅರ್ಥ ಚಿತ್ತ
ರೂಪವಾದ ಅರ್ಥಾಲಂಕಾರಗಳ "ಪ್ರ ಸನ್ನ ವಿಸ್ತೀಣನ '' ವಾದ ವಿಷೇಚನೆಸೆ
ತೊಡಗುತ್ತಾನೆ; ಆದರೆ ಉತತಿಯಂದ ಅತಿತಯೋಕಿ_ ಯವರೆಗೆ ಹನ್ನೆರಡು
ಅಲಂಕಾರಗಳನ್ನು ನಿರೂಪಿಸುವುದರಲ್ಲೇ ಗೃಂಥವು ತ್ತು ಟಿತವಾಗಿದೆ.
ಅಪ್ಪಯ್ಯದೀಕ್ಷಿತನು ದ್ರಾವಿಡದೇಶವನು ; ಹ ಕಾಲ ಕ್ರಿ. ಶೆ.
೧೫೨೦೧೫೯೩ ಎಂದು ಕೆಲವರೂ, ಕ್ರ. ತ. ೧೫೫೩ ೧೬೨೬
ಒ೦ದು ಮತ್ತೆ ಕೆಲವರೂ ಅಭಿಪ್ರಾಯಪಡುತ್ತಾರೆ." ಅಪ್ಪಯ್ಯದೀಕ್ಷಿತನು
ದೊಡ್ಡ ಪಂಡಿತ... ನೂರಕ್ಕಿಂತ ಹೆಚ್ಚಾಗಿ ವಿವಿಧವಿಷಯಗಳ ಮೇಲೆ
ಗ್ರಂಥರಚನೆ ಮಾಡಿದವನು ” ಈತನು ಶಿವಾದ್ವೈತ 4ತವನ್ನು ಕುರಿತು ಬರೆದ
ಗ್ರಂಥಗಳು ಪ್ರಖ್ಯಾತವಾಗಿವೆ. ಈತನ ವಿಷಯವಾಗಿ ಅನೇಕ ಕಥೆಗಳು
ಪ್ರಚಾರದಲ್ಲಿ ಉಂಟು. ಅಪ್ಪಯ್ಯದೀಕ್ಷಿತನಲ್ಲಿ ಒಂದು ಕಡೆ ಕರ್ಮಶ್ರದ್ಧೆಯೂ
ಮತ್ತೊಂದು ಕಡೆ ಮೃದುಹೃದಯವೂ ಸೇರಿದ್ದುವಂತೆ. ಒಮ್ಮೆ ಯಾಗವನ್ನು
ಕೈಕೊಂಡು ಆದರಲ್ಲಿ ಪಶುವಥೆ ಮಾಡಬೇಕಾಗಿ ಬಂದಾಗ ಆತನಿಗೆ
ಕರುಳು ಚುಚ್ಚಿ, "" ವೇದಮೇ, ಉನ್ನ್ಮ್ಮ್ಯೈ ನಂಬಿನೇನ್!'' (""ವೇದವೇ,
ನಿನ್ನನ್ನು ನಂಬದೆನು!'') ಎಂದುಕೊಂಡು ಮುಂದುವರಿದನಂತೆ !
'ಅಪ್ಪಯ್ಯದೀಕ್ಷಿತನ ಪ್ರಬಲವಿರೋದಿ ಜಗನ್ನಾಥ ಪಂಡಿತರಾಜ.
(ಕಾಲ : ಕ್ರಿ.ಶ. ೧೬ನೆಯ ಶತಮಾನದ ಆದಿ ಮತ್ತು ಮಧ್ಯಭಾಗ.) ಈ
""ಪಂಡಿತರಾಜ'' ಎಂಬ ಬಿರುದನ್ನು ದೆಹಲಿಯ ಷಹಜಹಾನ್ ಚಕ್ರವರ್ತಿ ಇವ
ನಿಗೆ ಕೊಟ್ಟಂತೆ ತಿಳಿಯಬರುತ್ತದೆ. ಅಂತೂ ಇವನು ಆತನ ಆಸ್ಥಾನದಲ್ಲಿ,
ಬಹುಶಃ ಅವನ ಮಗ ದಾರಾಷಪಿಕೋ, ಮಾವ ಆಸಫ್‌ಖಾನ" ಇವರ
ಖಿ
ಎ
ಚತ
IE Y, Mahalnga ೧೩೮001 : Appa ya Dikstu's Ace (101121, 11,
pp. 225-237) ನೋಡಿ.
19 ಶಬ್ನದ ಅಭಿಧಾ ಮತ್ತು ಲಕ್ಷಣಂವೃತ್ತಿಗಳನ್ನು ಪ್ರತಿಪಾದಿಸುವ "ವೃತ್ತಿ ವಾರ್ತ್ತಿಕ
ವೆಂಬ ಈತನ ಕೃತಿಯ ಹೆಸರನ್ನು ಇಲ್ಲ ಸ್ಮರಿಸಬಹುದು.
೧೦೬ ಭಾರತೀಯ ಕಾವ್ಯಮಾಮಾಂಸೆ
ಆಶ್ರಯದಲ್ಲಿ, ಕೆಲವು ಕಾಲವಾದರೂ ಇದ್ದಿರಬೇಕು. "ಅಸಫವಿಲಾಸ'ವೆಂಬ
ಇವನ ಗದ್ಯಕಾವ್ಯವು ಮೇಲೆಕಂಡ ಆಸಫ್‌ಖಾನನನ್ನೇ ಕುರಿತದ್ದು.
ಜಗನ್ನಾ ಭಂಡತನ ಪ್ರಾ ಣನಾರಾಯಣನೆಂಬ ಕಾಮರೂಪದ ದೊರೆಯ
ಆತ್ರ ಯದಲ್ಲಿ ಸ್ವಲ್ಪ ಕಾಲ ಇದ್ದಿರಬೇಕೆಂದೂ ಕೆಲವರು ಊಹಿಸುತ್ತಾರೆ ;
ಇದಕ್ಕೆ ಅವನ "ಪಾ ಣಾಭರಣ.. ವೆಂಬ ಕಾವ್ಯವೇ ಆಧಾರ. ಪಂಡಿತರಾಜನು
ಒಬ್ಬ ಯವನ ಸುಂದರಿಯನ್ನು ಮೆಚ್ಚಿ ಫಸ '೦ದೂ ಇದಕ್ಕಾಗಿ ಕುಲದ
ವರ ಬಪಿಪ್ಕಾರಕ್ಕೆ ಗುರಿಯಾದನೆಂದೂ ಬಳಿಕ ಕಾಶಿಯಲ್ಲಿ ಗಂಗಾಪ್ರವೇಶ
ಮಾಡಿದನೆಂದೂ ಕಥೆಗಳುಂಟು.?"
ಜಗನ್ನಾಥಪಂಡಿತನು ಲಾಕ್ಷಣಿಕನು ಮಾತ್ರವೇ ಅಲ್ಲ; ಪ್ರಸಿದ್ಧ
ದು G
ಕವಿಯೂ ಹೌದು. ಮೇಲೆ ಉದಾಹರಿಸಿರುವ ಕಾವ್ಯಗಳ ಜೊತೆಗೆ ಅವನ
" ಭಾಮಿನೀವಿಲಾಸ', "ಜಗದಾಭರಣ', "ಕರುಣಾಲಹರೀ', “ಪೀಯೂಪ
ಲಹರೀ' ಮೊದಲಾದ ಸ್ತೋತ್ರಗಳು... ಇವನ್ನೂ ಹೆಸರಿಸಬಹುದು. ಈತನು
ತನ್ನ ಅಲಂಕಾರಗ್ರಂಥಗಳಲ್ಲಿ ಲಕ್ಷ್ಯವಾಗಿ ತನ್ನ ಪದ್ಯಗಳನ್ನೇ ಕೊಡು
ತ್ತಾನೆ.
ನಿರ್ಮಾಯ ನೂತನಮ:ಪಾಹರಣಾನುರೂಪಂ
ಕಾವಂ ಮಯಾತ್ರ ನಿಹಿತಂನ ಪರಸ್ಕ ಕಿಂಚಿತ್
ಶಂ ಸೇವ್ಯತೇ ಸುಮನಸಾಲ ಮನಸಾಪಿ ಗಂಧಃ
ಕಸ್ತೂರಿಕಾಜನನಸಶಕ್ತಿಭೃತಾ ಮ ಗೇಣ॥ 2 (ರಸಗಂಗಾಧೆರ, ಪು. ೩)
ಎಂದು ಕೆಚ್ಚಿನಿಂದ ಹೇಳುತ್ತಾನೆ. ಇವನು ತನ್ನ ಅಲಂಕಾರ ಗೃ೦ಥಗಳಲ್ಲಿ
ತಾರ್ಕಿಕಸಮ್ಮ ತವಾದ ಶೈಲಿಯನ್ನು ಅವಲಂಬಿಸಿ ಬರೆದಿರುವುದರಿಂದ
ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ತರ್ಕಶಾಸ್ತ್ರದ
ಪರಿಚಯವೂ ಅವಶ್ಯಕವಾಗುತ್ತದೆ.
೫ ಜಗನಾ ಥಪಂಡಿತನ ವಿಷಯದಲ್ಲಿ ಹೆಚ್ಚನ ವಿಚಾರಗಳಿಗೆ, ಬೆಳ್ಳಾವೆ ವೆಂಕಟನಾರಾ
ಯಣಪ್ಪ: ಜಗನ್ನಾಥ ಪಂಡಿತರಾಜ (ಕ. ಸಾ. ಪರಿಷತೃ ತ್ರಿಕೆ, XVI. ೨ ಈ ಲೇಖನವನ್ನೂ,
V. ತ Ramaswami Sastri: Jagannatha Pandita (11208728101
Sanskrit Series) ಈ ಗ್ರಂಥವನ್ನೂ ನೋಡಿ.
21 “ ಉದಾಹರಣಿಗೆ ಹೊಂದುವ ಕವನವನ್ನು ನಾನು ಹೊಸದಾಗಿ ಕಟ್ಟಿ ಇಲ್ಲ
ಜೋಡಿಸಿದ್ದೇನೆ ; ಅನ್ಯರದು ಏನನ್ನೂ ಮುಟ್ಟಿ ಕಸ್ತೂರಿಯನ್ನು ಉತ್ಪತ್ತಿಮಾಡುವ
ಶಕ್ತಿಯ; ಮೃಗವು ಕುಸುಮಗಳ ಗಂಧವನ್ನು ವ ed ದರೂ ಸೇವಿಸೀತೆ ? ''
ಫ್ರಿ ಪರಿಷ್ಕಾರ ಯುಗ ೧೦೭
ಜಗನ್ನಾಥಪಂಡಿತನ "ರಸಗಂಗಾಧರ'ವು ಕಾವ್ಯಮಾಮಾಂಸೆಯನ್ನು
ಕುರಿತ ಪ್ರೌಢಗ್ರಂಥ. ಇದರಲ್ಲಿ ಆತನ ತೀಕ್ಷ್ಣಮತಿಯೂ ಸ್ವತಂತ್ರ
ಮನೋವೃ ತ್ತಿಯೂ ಚೆನ್ನಾಗಿ ವ್ಯಕ್ತವಾಗುತ್ತವೆ. ಪ್ರಾಚೀನರಲ್ಲಿ ಯಾರೊ
ಬ್ಬರ ಅಭಿಪ್ರಾಯವನ್ನೂ, ಅವರು ಎಷ್ಟೇ ಡೊಡ್ಡವರಾಗಲಿ, ಅವಿಚಾರಿತ
ವಾಗಿ ಗೌರವಿಸತಕ್ಕವನಲ್ಲ. ಉದಾಹರಣಿಗೆ, ಗ್ರಂಥದ ಆದಿಭಾಗದಲ್ಲಿ
ಕಾವ್ಯಲಕ್ಷಣವನ್ನು ನಿರ್ಣಯಿಸುವಾಗಲೇ ವಾಮನ, ಮಮ್ಮಟ, ವಿಶ್ವನಾಥ
ಮೊದಲಾದವರ ಮತಗಳನ್ನು ಖಂಡಿಸಿ ತನ್ನದೇ ಒಂದು ಲಕ್ಷಣವನ್ನು
ಕೊಡುತ್ತಾನೆ ; ಮುಂದೆ ಕೂಡ ಇದೇ ದಾರಿಯಲ್ಲಿ ಹೋಗುತ್ತಾನೆ.
ಧ್ವನಿತತ್ತ್ವವನ್ನು ಅಂಗೀಕರಿಸಿ, ಧ್ವನ್ಯಾಲೋಕಕಾರನಲ್ಲ ವಿಶೇಷ ಗೌರವ
ವನ್ನು ಇಟ್ಟಿದ್ದ ರೂ, ಸಮಯಬಿದ್ದ ರೆ ಅವನ ಅಭಿಪ್ರಾಯವನ್ನು ನಿರಾಕರಿ
ಸಲು ಕೊಡ ಜಗನ್ನಾಥಪಂಡಿತನು ಹಿಂಜರಿಯುವುದಿಲ್ಲ. ಕಾವ್ಯಸಾಮಾನ್ಯ
ಕಲ್ಲ ರಸವೇ ಆತ್ಮಷೆಂದು ಅವನು ಒಪ್ಪುವುದಿಲ್ಲ; ಆದರೆ ರಸಧ್ಯನಿಯೇ
ಪರಮ ರಮಣೀಯವೆಂದು ಅಂಗೀಕರಿಸುತ್ತಾನೆ. ಇವನು ಗ್ರಂಡಕ್ಕೆ
ಕೊಟ್ಟಿರುವ "ರಸಗಂಗಾಧರ'ಪೆಂಬ ಹೆಸರನ್ನೂ ಅದರ ಅಧ್ಯಾಯಗಳನ್ನು
""ಆನನ''ಗಳೆಂದು ಕರೆದಿರುವುದನ್ನೂ ನೋಡಿದರೆ, ಇದರಲ್ಲಿ ಒಟ್ಟು ಐದು
ಆನನಗಳನ್ನು ರಚಿಸಬೇಕೆಂಬುದು ಜಗನ್ನಾಥನ ಉದ್ದೇಶವಾಗಿರಬಹುದು.
ಆದರೆ ಈಗ ಡೊರೆತಿರುವವು ಎರಡೇ ಆನನಗಳು; ಎರಡನೆಯದು
ಪೂರ್ಣವಾಗಿ ಕೂಡ ಇಲ್ಲ. ಇವುಗಳೊಳಗೆ ಮೊದಲನೆಯದರಲ್ಲಿ ಮುಖ್ಯ
ವಾಗಿ ರಸವಿಚಾರವೂ, ಎರಡನೆಯದರಲ್ಲಿ ಮಿಕ್ಕ ಧ್ವನಿಪ್ರಭ್ನೇದಗಳೂ
ಅಲಂಕೂರಗಳೂ ನಿರೂಪಿತವಾಗಿವೆ. ಜಗನ್ನಾಥನ ಕುಶಾಗ್ರಬುದ್ಧಿ
ಪ್ರಕಟವಾಗಿರುವುದು ವಿಶೇಷವಾಗಿ ಅಲಂಕಾರ ವಿವೇಚನೆಯಲ್ಲಿ. ಈ
ಭಾಗದಲ್ಲಿ ಅವನು ರುಯ್ಯಕ, ಅಪ್ಪಯ್ಯದೀಕ್ಷಿತ--ಇವರ ಮತಗಳನ್ನು
ಬಹುವಾಗಿ ವಿಮರ್ಶಿಸುತ್ತಾನೆ. ಅಪ್ಪಯ್ಯದೀಕ್ಷಿತನ ಮೇಲಂತೂ ಅವನಿಗೆ
ವ್ಯಕ್ತಿತಃ ಕ್ರೋಧವಿದ್ದಿರಬೇಕು. ಅವಕಾತಸಿಕ್ಕಿದಾಗಲೆಲ್ಲ ಅವನ ಅಭಿ
ಪ್ರಾಯಗಳನ್ನು ಎಳೆದುತಂದು ಉಪಹಾಸಮಾಡುತ್ತಾನೆ. “ದ್ರವಿಡ
ಶಿಶು'' ಎಂದು ಅವನನ್ನು ಕರೆಯುವುದಕ್ಕೂ ಇವನು ಹಿಂದು ಮುಂದು
ನೋಡುವುದಿಲ್ಲ. (ಜಗನ್ನಾಥಪಂಡಿತನು ಆಂಧ್ರನೆಂಬುದನ್ನು ಇಲ್ಲಿ
ನೆನಪಿಡಬೇಕು.)
೧೦೮ ಭಾರತೀಯ ಕಾವ್ಯಖಾಮಾಂಸೆ
ರಸಗಂಗಾಧರದಲ್ಲಿ ಪೀಗೆ ಖಂಡಿಸಿದ್ದು ಮಾತ್ರವಲ್ಲದೆ, ಅಪ್ಪಯ್ಯ
ದೀಕ್ಷಿತನ " ಚಿತ್ರಮಾಮಾಂಸೆ'ಯನ್ನೇ ಗುರಿಯಾಗಿಟ್ಟುಕೊಂಡು ಜಗ
ನ್ನಾಥನು ತನ್ನ ಆಕ್ಷೇಪಣ್‌ಗಳನ್ನೆಲ್ಲಾ ಕ್ರೋಡೀಕರಿಸಿ " ಚಿತ್ರಮಾಮಾಂಸಾ
ಖಂಡನ'ಷೆಂಬ ಗ್ರಂಥವನ್ನು ರಚನೆ ಮಾಡಿದನು. ಅದರಲ್ಲಿ,
ಸೂಕ್ಷ್ಮಂ ವಿಭಾವ್ಯ ಮಯಕಾ ಸಮುದೀರಿಕಾನಾಂ
ಅಪ್ಪಯ್ಯದೀಕ್ಷಿತಕೃತಾವಿಕ ದೂಷಣಾನಾಂ |
ನಿರ್ಮತ ರೋ ಯದಿ ಸಮುದ್ಧರಣ೦ ವಿದಧ್ಯಾ.
ದಸ್ಯಾಹಮುಜ್ಜಲಮತೇಶ್ವರಣಳ ವಹಾಮಿ | *:
ವಂದು ಮೊದಲಲ್ಲೇ ವೀರಪ್ರತಿಜ್ಞೆ ಬರುತ್ತದೆ! ಪಂಡಿತರಾಜನ ಪ್ರೌಢ
ಮೆಯ ಮುಂದೆ ಬೇರೆ ಯಾರ ವಾದವೂ ಸಾಗದಿದ್ದರೂ, ಅಪ್ಪಯ್ಯದೀಕ್ಷಿ
ತನ ತಲೆಯ ಮೇಲೆ ಆತನು ಹೊರಿಸುವ ದೋಪಷಗಳೆಲ್ಲವೂ ನ್ಯಾಯವಾ
ಗಿಯೇ ಇವೆಯೆಂದು ಹೇಳಲು ಮನಸ್ಸು ಒಪ್ಪುವುದಿಲ್ಲ.
೫ “ಸೂಕ್ಷ್ಮವಾಗಿ ಎಚಾರಮಾಡಿ ಅಪ್ಪಯ್ಯದೀಕ್ಷಿತನ ಕೃತಿಯೊಳಗೆ ನಾನು ಎತ್ತಿ
ಹೇಳಿರುವ ದೋಷಗಳನ್ನು ನಿರ್ಮತ್ನ್ಸರನಾದವನು ಪರಿಹಾರಮಾಡಿದ ಪಕ್ಷದಲ್ಲಿ ಆ ಉಜ್ಜ್ವಲ
ಮತಿಯ ಪಾದಗಳನ್ನು ನಾನು ಹೊತ್ತುಕೊಳ್ಳುತ್ತೇನೆ ''
೭. ವಿಶೇಪ ವಿಚಾರ
ಅತಿ ಸಂಕ್ಷಿಪ್ತವೂ ಹಲವು ಅಂಶಗಳಲ್ಲ ಅಪೂರ್ಣವೂ ಆದ ಮೇಲಿನ
ನಿರೂಪಣ್‌ಯಿಂದಲ್ಲೇ ಸಂಸ್ಕೃತದಲ್ಲಿ ಕಾವ್ಯಲಕ್ಷಣಶತಾಸ್ತ್ರದ ವ್ಯಾಪ್ತಿ
ಎಷ್ಟೆಂಬುದು ಕೆಲವುಮಟ್ಟಿಗಾದರೂ ಮನವರಿಕೆಯಾಗಿರಬೇಕು. ಇತಿ
ಹಾಸದ ಕಣ್ಣಿಗೆ ಗೋಚರವಾಗಿರುವಂತೆ, ಈ ಗ್ರಂಥವಾಪಿನಿ ಒಂದೂವರೆ
ಸಾವಿರ ವರ್ಷಗಳಿಗಿಂತ ಉದ್ದವಾದ ಕಾಲಪಥದಲ್ಲಿ, ಅಲ್ಲಿ ಕೃತವಾಗಿ, ಇಲ್ಲಿ
ತುಂಬುಹೊಳೆಯಾಗಿ, ಆಲ್ಲಿ ಕವಲೊಡೆದು, ಇಲ್ಲಿ ಮತ್ತೆ ಕೂಡಿಕೊಂಡು,
ನಡುವೆ ಎಲ್ಲಿಯೂ ಇಂಗಿಹೋಗದೆ, ಎಷ್ಟೋ ಕಡೆಗಳಲ್ಲಿ ಅಸಮಾನ
ವೈಭವದಿಂದ ಹರಿದುಬಂದಿತು. " ರಸಗಂಗಾಧರ 'ಕಾರನೇ ಈ ಶಾಸ್ತ್ರ
ದಲ್ಲಿ ಕೊನೆಯ ಉದ್ದಾಮ ವ್ಯಕ್ತಿಯಾದರೂ, ಮೊನ್ನೆ ಮೊನ್ನೆಯ ತನಕ
ಸಂಪ್ರದಾಯಾನುಸಾರವಾಗಿ ಗ್ರಂಥರಚನೆ ನಡೆಯುವುಡೇನೂ ತಪ್ಪಲಿಲ್ಲ.
ಮೈಸೂರಿನ ಪರಕಾಲಮಠದ ಶ್ರೀ ಕೃಷ್ಣಬ್ರಹ್ಮತಂತ್ರ ಪರಕಾಲ
ಯತೀಂದ್ರರು ಕ್ರಿ. ಶ. ೧೮೯೯ರಲ್ಲಿ ಮುಗಿಸಿದ "ಅಲಂಕಾರ ಮಣ್‌ಹಾರ'
ವೆಂಬ ದೀರ್ಪಕೃತಿಯನ್ನು ಇಲ್ಲ ನೆನಪಿಗೆ ತಂದುಕೊಳ್ಳಬಹುದು.' ಈ ಶಾಸ್ತ್ರ
ದಲ್ಲಿ ಒಂದಲ್ಲ ಒಂದು ಬಗೆಯಾಗಿ ಗ್ರಂಥರಚನೆ ಮಾಡಿದವರ ಸಂಖ್ಯೆ
(ವ್ಯಾಖ್ಯಾನಕಾರರನ್ನೂ ಸೇರಿಸಿಕೊ೦ಡಲ್ಲಿ) ೮೦೦ಕ್ಕೇನೂ ಕಡಮೆಯಾಗ
ಲಾರದು ; ಹೆಸರನ್ನು ಕೂಡ ಉಳಿಸದೆ ಗತಿಸಿಹೋದವರು ಎಷ್ಟು ಮಂದಿ
ಯುಂಟೋ! ಅಲ್ಲದೆ, ಇದಷ್ಟೂ ಕೇವಲ ಸಂಸ್ಕೃತದಲ್ಲಿ ಬರೆದವರ
ವಿಷಯ. ಸಂಸ್ಕೃತ ಗ್ರಂಥಗಳನ್ನು ಅವಲಂಬಿಸಿ ಪ್ರಾಕೃತದಲ್ಲಯೂ
ಅನೇಕ ದೇಶಭಾಷೆಗಳಲ್ಲಿಯೂ ಬೆಳೆದ ಗ್ರಂಥರಾಶಿಯನ್ನು ನಾವು ಇಲ್ಲಿ
ಗಮನಕ್ಕೇ ತಂದುಕೊಂಡಿಲ್ಲ.
2 ಇದರಲ್ಲರುವ ಮೂಲಕಾರಿಕೆಗಳ ಸಂಖ್ಯೆ ೨೪೨೮ ; ಈ ಕಾರಿಕೆಗಳ ಮೇಲೆ ಗದ್ಯದಲ್ಲಿ
ವೃತ್ತಿಯೂ ಗ್ರಂಥಕರ್ತರೇ ರಚಿಸಿದ ಶ್ರೀಕೃಪಷ್ಣಸ್ತುತಿಪರವಾದ ಉದಾಹರಣ ಪದ್ಯಗಳೂ
ಇವೆ. ಒಟ್ಟು ಗ್ರಂಥವು ನಾಲ್ಕು ಸಂಪ್ರಟಗಳಾಗಿ ಮೆಶ್ಳಿಸೂರು ಓರಿಯೆಂಟಲ್ ಲೈೊಬ್ರೆರಿಯ
-ಸಂಸ್ಕೃತ ಗ್ರಂಥಮಾಲೆಯಲ್ಲಿ ಪ್ರಕಟಿತವಾಗಿದೆ.
೧೦೯
೧೧೦ ಇರೆತೀಯ ಕಾವ್ಯವಿಸಾಮಾಂಸೆ
ಕಾಶ್ಮೀರಕ್ಕೆ ಶಾರದಾಪೀಠವೆಂಬ ಪುರಾತನ ಪ್ರಸಿದ್ಧಿ ಯುಂಟು.
ಕಾವ್ಯಮಾಮಾಂಸೆಯ ರೂಪರಚನೆಗಂತೂ ಅದೇ ತೌರೂರೆಂದರೆ ಅತಿ
ಶಯೋಕ್ತಿಯಾಗಲಾರದು. ಭಾಮಹ, ಉದ್ಭಟ, ವಾಮನ, ಆನಂದವರ್ಧನ,
ಕುಂತಕ, ಅಭಿನವಗುಪ್ತ, ಕ್ಷೇಮೇಂದ್ರ, ಮಮ್ಮಟ, ರುಯ್ಯಕ. ಇವರೆಲ್ಲರೂ
ಕಾಶ್ಮೀರದವರು ; ಇವರಲ್ಲನೇಕರು "" ರಾಜಾನಕ `' ಎಂಬ ಬಿರುದಿಗೆ
ಭಾಗಿಗಳಾಗಿದ್ದವರು. ಪ್ರಾಚೀನರಲ್ಲಿ ದಂಡಿ, ರಾಜಶೇಖರ --ಇವರಿಬ್ಬರು
ಮಾತ್ರ ಕಾಶ್ಮೀರದವರಲ್ಲವೆಂದು ದೃಢವಾಗಿ ಹೇಳಬಹುದು. ದಂಡಿ ದಾಕ್ಷಿ
ಣಾತ್ಯ. ಕನ್ನಡದೇಶದವನಾಗಿದ್ದುದೂ ಅಸ೦ಭವವಲ್ಲ; ಆದರೆ ಪೀಗೆ ಬಚಿತ
ವಾಗಿ ಹೇಳಲು ಆಧಾರ ಸಾಲದು. ರಾಜಶೇಖರನು ಮಹಾರಾಷ್ಟ್ರದವನು.
ಗಮನಾರ್ಹವಾದ ಇನ್ನೊಂದು ಸಂಗತಿಯೇನೆಂದರೆ, ನಾವು
ಈಗಾಗಲೇ ನೋಡಿರುವಂತೆ ಒಬ್ಬಿಬ್ಬರನ್ನುಳಿದು ಸ್ವತಂತ್ರ ವಿಚಾರಕ
ರೆಲ್ಲರೂ ಕ್ರಿ. ಶತ. ಹನ್ನೊಂದನೆಯ ಶತಮಾನವು ಮುಗಿಯುವುದರೊಳಗೆ
ಸಂದುಹೋಗಿದ್ದರು. ಈ ಸರಣ ಯಲ್ಲಿ, ಮಮ್ಮಟನ " ಕಾವ್ಯಪ್ರಕಾಶ'ವು
ಪ್ರತಿಭಾಯುಗವನ್ನು ಮುಗಿಸಿ ಪರಿಪ್ಮಾ ರಯುಗವನ್ನು ಪ್ರಾರಂಭಿಸುತ್ತದೆ.
ಈಚಿನವರ ಗ್ರ೦ಥಗಳೆಲ್ಲ, ಒಂದೆರಡು ಅಪವಾದಗಳನ್ನು ಗಣಿಸದೆ ಬಿಟ್ಟರೆ,
ಚರ್ವಿತಚರ್ವಣ ಮಾತ್ರ. ಶಾಸ್ತ್ರನಿರ್ಮಾಪಕರ ಪ್ರತಿಬೆಯಲ್ಲಿ ಜೆಳಗು
ತ್ತಿದ್ದ ಕೆಂಡವು ಉರಿದುಹೋಗಿ ಇನ್ನು ಮುಂದೆ ಬೂದಿಯಾಗುತ್ತದೆ ;
ಭರತ, ಧ್ವನಿಕಾರ ಮೊದಲಾದವರು ಹೂಡಿದ ವಾದಗಳನ್ನೂ ಮಾಡಿದ
ವಿಭಾಗಗಳನ್ನೂ ಈಚನವರು ಎಷ್ಟೋಸಲ ಒಳಹೊಕ್ಕು ನೋಡಿ ತಿರುಳನ್ನು
ಗ್ರಹಿಸದೆ, ನಿಸ್ಬಾರವಾದ ಮಾತುಗಳಲ್ಲಿ ಅನುವಾದಮಾಡುತ್ತಾರೆ. ಇಷ್ಟೇ
ಆಲ್ಲ. ಉಎಷ್ಟೋವೇಳೆ, ನಿರರ್ಥಕವಾದ ಪ್ರಭೇದಗಳನ್ನು ಹೆಚ್ಚು ಹೆಚ್ಚಾಗಿ
ಕಲ್ಪಿಸಿಕೊಂಡು ಹೋಗಿ ಶಾಸ್ತ್ರವನ್ನು ಒ೦ದು ಹೊರೆಯಾಗಿ ಮಾಡುತ್ತಾರೆ.
ಅಲಂಕಾರ ಪ್ರಸ್ಥಾನದ ಧ್ವಜಸ್ತಂಭವೆಂದು ನಾವು ಕರೆಯಬಹುದಾದ
ಉದ್ಭಟನು ಅಂಗೀಕರಿಸಿರತಕ್ಕ ಅಲಂಕಾರಗಳ ಸಂಖ್ಯೆ ೪೧; ಆದರೆ
ಆಲಂಕಾರಕ್ಕೆ ಪ್ರಾಮುಖ್ಯವನ್ನು ಸಲ್ಲಸದಿರುವ ಧ್ವನಿಪ್ರಸ್ಥಾ ನದಲ್ಲಾಬರೆ
ಇವುಗಳ ಸಂಖ್ಯೆ ಬೆಳೆಯುತ್ತಾ ಬಂದು ಕುವಲಯಾನಂದದಲ್ಲ ೧೨೪ಕ್ಕೆ
ಮುಟ್ಟುತ್ತದೆ. ಇದಕ್ಕಿಂತಲೂ ಆತ್ಚ್ಮರ್ಯಕರವಾದದ್ದು ಧ್ವನಿಪ್ರಭೇದ ಕಲ್ಪನೆ ;
" ಪ್ರತಾಪರುದ್ರೀಯ'ಕಾರನು ಲೆಕ್ಕಹಾಕಿ ಧ್ವನಿಯಲ್ಲಿ ೫,೩೦೪ ಬಗೆಗಳೆಂದು
ಒ. ವಿಶೇಯ ವಿಚಾರ ೧೧೧
ತೋರಿಸುತ್ತಾನೆ.: ಆದರೆ ನಮ್ಮ ಪುಣ್ಯಕ್ಕೆ ಅವನು ಅವೆಲ್ಲಕ್ಕೂ ಉದಾ
ಹರಣಿಗಳನ್ನು ಕಲ್ಪಿಸುವ ಗೋಜಿಗೆ ಹೋಗಲಿಲ್ಲ !
ಈ ಶಾಸ್ತ್ರದಲ್ಲಿ ಪಕ್ಷ ಪ್ರಸ್ಥಾ ನೆಗಳಿಗೆ ಯಾವ ಕೊರತೆಯೂ ಇಲ್ಲವೆಂದು
ನೋಡಿದ್ದೇವಪೈ. ಅವುಗಳನ್ನು ವಿಂಗಡಿಸುವ ಕಾರ್ಯವೂ ಹಿಂದೆಯೇ ಮೊದ
ಲಾಯಿತು. "ಅಲಂಕಾರ ಸರ್ವ ಸ್ಟ' ಕ್ಕೆ ವ್ಯಾಖ್ಯಾನ ಬರೆಯುತ್ತಾ ಸಮುದ್ರ
ಬಂಧನು ನಿರೂಪಿಸಿರುವ ಈ ಕೆಳಗಿನ ವಿಭಾಗವು ಪ್ರಸಿದ್ಧ ವಾಗಿದೆ :
“ಇಹೆ ವಿಶಿಪ್ಟೌ ಶಬ್ದಾರ್ಥ ಕಾವೃ೦. ತಯೋಶ್ಚ ವೈಶಿಷ್ಟ್ಯ೦ ಧರ್ಮಮುಖೇನ
ವ್ಯಾಪಾರ ಮುಜೀನ ವೃ೦ಗ್ಯಮುಜೀನ ವಾ ಇತಿ ತ್ರಯಃ ಪಕ್ಷಣಃಣ ಆದ್ಯೇಓಿಪಿ
ಅ"೦ಕಾರತೋ ಗುಣತೋ ವಾ ತಿದ ಥಂ. ದಿ ತೀಯ ಭಣಿತಿವೈಚಿತ್ರೆ ಕಣ
ಭೋಗಕೃತ್ತೆ ನ ವಾ ಇತಿ ದೈೈಥ೦. ಇತಿ ಪಂಚಸು ಪಕ್ಷೇಷು ಆದ್ಯ ಉದ್ಭಟಾದಿ
ಭರಂಗೀಕೃತಃ ದ್ವಿತೀಯೋ ವಾಮನೇನ ತ್ರತಕೀಯೋ ವಕ್ರೋಕಿ ಜೀವಿತಕಾರೇಣ
ಚತುರ್ಥೋ ಧಟ್ಟನಾಯಕೇನ ಪಂಚಮ ಅನ೦ದವರ್ಧನೇನ . , . '' (ಪು. ೩-೪)
"« ಇಲ್ಲಿ ವಿಶಿಷ್ಟವಾದ ತಬ್ದಾರ್ಥಗಳೇ ಕಾವ್ಯ. ಅವುಗಳಿಗೆ
ವೈ ತಿಷ್ಠ 4 ಬರುವೆದು ಧರ್ಮದ ಮೂಲಕ, ವ್ಯಾಪಾರದ ಮೂಲಕ,
ಅಥವಾ ವ್ಯಂಗ್ಯದ ಮೂಲಕ -_ಹೀಗೆ ಮೂರು ಪಕ್ಷಗಳು. ಮೊದಲನೆಯದ
ರಲ್ಲಿ (ಎ೦ದರೆ, ಧರ್ಮಪಕ್ಷದಲ್ಲ] ಅಲಂಕಾರದ ಮೂಲಕ ಅಥವಾ ಗುಣದ
ಮೂಲಕ ಎಂದು ಎರಡು ಬಗೆ. ಎರಡನೆಯದರಲ್ಲಿ (ಎಂದರೆ, ವ್ಯಾಪಾರ
ಪಕ್ಷದಲ್ಲಿ] ಕೂಡ ಉಕ್ತಿವೈಚಿತ್ರ್ಯದ ಮೂಲಕ ಅಥವಾ ಭೋಗೀಕರಣದ
ಮೂಲಕ ಎಂದು ಎರಡು ಬಗೆ: ಈ ಐದು ಪಕ್ಷಗಳಲ್ಲಿ ಮೊದಲನೆಯದನ್ನು
ಉದ್ಭಟಾದಿಗಳೂ, ಎರಡನೆಯದನ್ನು ವಾಮನನೂ, ಮೂರನೆಯದನ್ನು
ವಕ್ರೋಕ್ತಿ ಜೀವಿತಕಾರನೂ, ನಾಲ್ಕನೆಯದನ್ನು ಭಟ್ಟನಾಯಕನೂ ಐದನೆ
ಯದನ್ನು ಆನಂದವರ್ಥನನೂ ಅಂಗೀಕರಿಸಿದ್ದಾರೆ. . .''_ಪೀಗೆ ಸಮು
ದ್ರಬಂಧನ ಅಭಿಪ್ರಾಯದಂತೆ, ಅಲಂಕಾರ, ಗುಣ, ವಕ್ರೋಕ್ತಿ, ಭೋಗೀ
ಕರಣ, ವ್ಯಂಗ್ಯ ಇಮ್ಯೆದರಲ್ಲಿ ಒಂದೊಂದೂ ಒಂದೊಂದು ಪಕ್ಷದ ಹೃ ದಯ.
(ಇವುಗಳ ಜೊತೆಗೆ " ವ್ಯಕ್ತಿವಿವೇಕ 'ಕಾರನಿಗೆ ಒಪ್ಪಿತವಾದ ಅನುಮಾನದ
ಹೆಸರನ್ನೂ ಎತ್ತಿ, ಅದು ವಿಚಾರಕ್ಷಮವಲ್ಲದ್ಧರಿಂದ ಗಣನೆಗೆ ತಂದುಕೊಳ್ಳ
ಜೇಕಾಗಿಲ್ಲಷೆಂದು ಸಮುದ್ರಬಂಧನು ಒತ್ತರಿಸಿಬಿಡುತ್ತಾನೆ.)
3 ಧ್ವನಿಗಳ ಸಂಖ್ಯೆ (ಮಿಶ್ರಭೇದಗಳನ್ನೂ ಸೇರಿಸಿಕೊಂಡು) ೧೦,೪೫೫ ಆಗುವುದೆಂದು
ಇವನಿಗೂ ಮೊದಲೇ ಮಮ್ಮಟನು ಸೂಚಿಸಿದ್ದನು ! (ಕಾಪ್ಯಪ್ರಕಾತ, ೪. ೪೪.)
-೧೧೨ ಭಾರತೀಯ ಕಾವ್ಯ ಖಸಾಮಾಂಸೆ
ಇವುಗಳೊಳೆಗೆ, ಅಲಂಕಾರ ಗುಣ ವ್ಯಂಗ್ಯಗಳಲ್ಲಿ ಒಂದೊಂದಕ್ಕೆ
ಪ್ರಾಧಾನ್ಯ ಕೊಡುವ ಪಕ್ಷಗಳು ನಮಗೆ ಆಗಲೇ ಅಲಂಕಾರಪ್ರ ಸ್ಥಾ ನ, ರೀತಿ
ಪ್ರ ಸ್ಥಾ ನಃ ಧ್ವನಿಪ್ರ ಸ್ಥಾ ನ ಎಂಬ ಹೆಸರುಗಳಿಂದ ಪರಿಚಿತವಾಗಿವೆ. ಅವು
ಗಳಿಲ್ಲ ಒಂದೊಂದಕ್ಕೂ, ಇದ್ದ ವ್ಯಾಪ್ತಿ, ಪ್ರಸಿದ್ಧಿ, ಒಂದನ್ನು ಮತ್ತೊಂದು
ಖಂಡಿಸಿ ಉದಿಸಿದ ವಿಧಾನ ಇದನ್ನೆ ನೋಡಿದರೆ ಪ್ರಸ್ಟ್ರಾನಪೆಂಬ ಹೆಸರಿಗೆ
ಅವು ನಿಜವಾಗಿಯೂ ಅರ್ಹವಾಗಿವೆ. ಅವುಗಳ ಮುಖ್ಯ ತತ್ತ್ಯ್ಯಮೆೇನೆಂಬು
ದನ್ನು ನಾವು ಈ ಮೊದಲ್ಲೇ ಗಮನಿಸಿದ್ದೇವೆ. ಇನ್ನು ಉಳಿದಿರತಕ್ಕ
ವೆಂದರೆ, ""ವ್ಯಾಪಾರ''ಪ ರ್ರಮುಖವೆಂದು ಸಮುದ್ರಬಂಧನು ನಿರ್ದೇಶಿಸುವ
ಕುಂತಕ ಭಟ್ಟನಾಯಕರ ಪಕ್ಷಗಳು. i ವ್ಯಾಪಾರ” ಖಂದರೆ ಕ್ರಿಯಾಕ್ರಮ.
ಕುಂತಕನ ಮತದಂತೆ ವತ್ರಕವಿನ್ಯಾಪಾರಪೇ ಕಾವೃದ ತಬ್ಬಾರ್ಥಗಳಲ್ಲಿರುವ
ಭಣಿತಿಷ್ಯಚಿತ್ರ್ಯ, ಅಥವಾ ವಕ್ರೋಕ್ತಿಗೆ ಕಾರಣ. ಈ ವಕ್ರಕವಿ ವ್ಯಾಪಾ
ರವು ಕವಿಪ್ರತಿಭಾ ವ್ಯಾಪಾರವೇ ಹೊರತು ಬೇರೊಂದಲ್ಲ. ಎಂದರೆ
ಕುಂತಕನ ದೃ ಯೆಲ್ಲಾ ಕವಿಪ ರತಿಭೆಯಲ್ಲಿ ಕಾವ, ್ಯೈವು ಹೇಗೆ ರೂಪುಗೊಂಡು
ಹೊರಹೊಮ್ಮು ಪದೆ ಬುದರ ಕಡೆಗೆ. ಹ ಕಾವ್ಯಮಾಮಾಂಸೆ
ಯಲ್ಲಿ ಇದೊಂದು ನೂತನ ಮಾರ್ಗ, *"ವಕ್ರೋಕ್ತಿ''ಯಿಲ್ಲದೆ ಅಲಂಕಾ
ರವೇ ಆಗದೆಂದು ಭಾಮಹನು ಹಿಂದೆಯೇ ಹೇಳಿದ್ದನು; ಕುಂತಕನು ಅವ
ನನ್ನೇ ಅನುಸರಿಸಿ ವಕ್ರೋಶ್ತಿಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾನೆ; ಆದಕಾ
ರಣ ಇವನನ್ನು ಅಲಂಕಾರ ಪ್ರಸ್ಥಾನಕ್ಕೇ ಸೇರಿಸಿಬಿಡಬಹುದೆಂದು ಕೆಲವರ
ಅಭಿಪ್ರಾಯ. ಹೀಗೆ ಮಾಡಿದರೆ ಅನ್ಯಾಯವಾಗುತ್ತದೆ. ಕುಂತಕನಿಗೆ
ಭಾಮೆಹನ ಗ್ರಂಥದಲ್ಲಿ ದೊರೆತದ್ದೆಲ್ಲ ಒಂದು ಸೂಚನೆ; ಅದನ್ನು ಅಲಂಕಾರ
ಗಳಿಗೆ ಮಾತ್ರ ವಲ್ಲದೆ, ವರ್ಣವಿನ್ಯಾಸದಿಂದ ಹಿಡಿದು ಸಮಗ್ರ ಪ್ರಬಂಧ
ದವರೆಗೆ ಎಲ್ಲತ್ಕೊ ಅನ್ಯಯಿಸಿದ್ದು LE ಕಾರ್ಯ. ಕುಂತಕನನ್ನು
ಅನುಸರಿಸಿ ಜರೆ ಸಾ ಗ್ರ ೦ಥರಚನೆ ಮಾಡದಿದ್ದರೂ 3 ವಕೊ ನೀ
ವಾದವನ್ನು ಸ್ವತಂತ್ರ ಪ್ರಸ್ಥಾನವೆಂದೇ ಕರೆಯುವುದು ಉತ್ತಮ.
3 ಕೆಲವರು ಗುಣಕ್ಕೂ ರೀತಿಗೂ ಭೇದವನ್ನು ಕಲ್ಪಿಸಿ, ದಂಡಿಯದು ಗುಣಪಕ್ಷವೆಂದೂ
ಇಮನನದು ರೀತಿಪಕ್ಷನೆಂದೂ ಹೇಳುವುದುಂಟು. ಹಾಗೆಯೇ ಕ್ಷೇಮೇಂದ್ರನು ಔಚಿತ್ಯವನ್ನು
ಎತ್ತಿ ಹಿಡಿಯುವುದರಿಂದ ಅಪನದನ್ನೂ ಒಂದು ಪ್ರಸ್ಥಾನವಾಗಿ ಭಾವಿಸುತ್ತಾರೆ. ಸೂಕ್ಷ್ಮ
ವಾದ ಭೇದಗಳಿಗೆಲ್ಲ ಒಂದೊಂದು ಪಂಗಡವನ್ನು ಕಲ್ಪಿಸುತ್ತಾ ಹೋದರೆ ಒಬ್ಬೊಬ್ಬ ಲಾಕ್ಷ
ಣಿಕನಿಗೂ ಒಂದೊಂದು ಪ್ರಸ್ಥಾನವೆಂದು ಹೇಳಬೇಕಾದೀತು.
೭. ವಿಶೇಪ ವಿಚಾರ ೧೧೩
ಕಾವ್ಯವನ್ನು ಕುಂತಕನು ಒಂದು ತುದಿಯಿಂದ ನೋಡಿದರೆ, ಭಟ್ಟ
ನಾಯಕನು ಇನ್ನೊಂದು ತುದಿಯಿಂದ ನೋಡಿದನು. ಕುಂತಕನಿಗೆ
ಕಾವ್ಯವು ಕವಿಯ ಪ್ರಶಿಭಾವ್ಯಾಪಾರವಾದರೆ ಇವನಿಗೆ ಅದು ಸಹೃದಯನ
ರಸಾನುಭವ ವ್ಯಾಪಾರ. ಭಟ್ಟನಾಯಕನು ಕಾವ್ಯದ ಶಬ್ದಾರ್ಥಗಳನ್ನು
ತೆಗೆದುಕೊಂಡು ಅವುಗಳಿಂದ ವಾಚಕನಿಗೆ ರಸಾಸ್ವಾದವು ಹೇಗೆ ಉಂಟಾ
ಗುವುದೆಂದು ವಿಚಾರಮಾಡಿದನು.
» ಶೆಬ್ಬಪ್ಪಾ ನಾಥಾನ್ಯಮಾಶ್ರಿತ್ಯ ಹತ್ರ ಶಾಸ್ತ್ರಂ ಪೃಥಗ್ಟಿ ದುಃ ।
ಅರ್ಥೇ ತತೆ ನ ಯುತ ಕೇತು ವದಂತ್ಯಾ ಖ್ಯಾನಮ್ಮ್‌ಶಯೋಃ |
ದೃಯೋರ್ಗುಣತ್ಯೇ ವ್ಹಾ ಪಾರಪ್ರಾಧಾವ್ಯೇ Ba ೈಗೀರ್ಭವೇತ್ ॥
ಭಟ್ಟನಾಯಕನ ಈ ವಾಕ್ಯಗಳನ್ನು ಅಭಿನಷಗುಪ್ತನು ಮೊದಲುಗೊಂಡು «
ಹಲವರು ೨೫೦0 ಉಬಾಹರಿಸ ಸುತ್ತಾರೆ; ಇದರ ಒಟ್ಟು ತಾತ್ಪರ್ಯ
ವನ್ಮು ಹೀಗೆ ಸಂಗ್ರಹಿಸಬಹುದು: "" ಶಬ್ಧಪ ಕ್ರಧಾನವಾಗಿರುವುದನ್ನು
ನೋಡಿ ಶಾಸ್ತ್ರವನ್ನು [ಎಂದರೆ, ಇಲ್ಲಿ ಪದವನ್ನು] ಪ್ರತ್ಯೇಕವಾಗಿ ಗಣಿಸಿ
ದರು. ಅರ್ಥವು ಮುಖ್ಯವಾಗಿದ್ದ ರೆ ಆಖ್ಯಾನ [ಎಂದರೆ, ಪುರಾಣಾದಿಗಳು]
ಬ೦ದು ಕರೆಯುತ್ತಾರೆ. .ಇಷೆರಡೂ ([ಎಂದರೆ, ಶಬ್ದಾರ್ಥಗಳೆರಡೂ|
ಗೌಣವಾಗಿ ವ್ಯಾಪಾರವು ಪ್ರಧಾನವಾದಲ್ಲ ಕಾವ್ಯವಾಣಿಯಾಗುವುದು.''
ಇಲ್ಲ ನಮಗೆ ಪ್ರ ತೃತವಾದದ್ದು ಕಾವ್ಯ ದ ವಿಷಯ. ಇದರಲ್ಲಿ ಶಬ್ದಾರ್ಥ
ಗಳರಡೂ ಅಮುಖ್ಯ. ಶಬ್ದ ದಿಂದ ವರಗ ಅಭಿಥೇಯಾರ್ಥವು Bn
ಮೇಲೆ ಭಾವಕತ್ಯ (ಅಥವಾ ಭಾವನಾ), ಭೋಗೀಕರಣ ಎಂಬ ಇನ್ನೆರಡು
ಕಾರ್ಯಗಳು ನಡೆದು ವಾಚಕನಿಗೆ ರಸಾಸ್ವಾದವು ಲಭಿಸುತ್ತದೆ. ಈ ಕಾರೃ
ಕ್ರಮವನ್ನೇ ಭಟ್ಟಿನಾಯಕನು ಇಲ್ಲ "“ವ್ಯಾಪಾರ'' ಅಂದು ಕರೆದಿರುವುದು.
ಅವನಿಗೆ ರಸವೇ ಕಾವ್ಯದ ಸಮಸ್ತ ಸಾರ; ಆದರೆ ವ್ಯಂಜನಾವೃತ್ತಿ
' ಅಭಿನನಭಾರತೀ, ೪. ೨೯೮. ಇಲ್ಲ ಅಭಿನವಗುಪ್ತನು " ವ್ಯಾಪಾರ ' ಎಂದರೆ ಅಭಿಥಾ
ಸ್ಯಾಪಾರವೆಂದು ಅರ್ಥಮಾಡುತ್ತಾನೆ. ಇದು ಭಟ್ಟನಾಯಕನಿಗೆ ಸಮ್ಮತವೇ ಆಗಿದ್ದಲ್ಲಿ
ಸಸ ಜನು ವಾಚ್ಯಾರ್ಧಜ್ಞಾನ ಮೊದಲುಗೊಂಡು ಭಾವನಾ ಭೋಗೀ
ಕರಣಗಳ ತನಕ ಎಲ್ಲ ಮವ್ಯಾಪಾರಗಳೂ ಅಡಕವಾಗುವುವೆಂದು ಹೇಳಬೇಕು. ಈ ಭಾವನಾ
ಭೋಗೀಕರಣ ಎಂಬಪುಗಳ ಸ್ವರೂಪವೇನೆಂಬುದನ್ನು ಮುಂದೆ ೨೧ನೆಯ ಅಧ್ಯಾಯದಲ್ಲಿ
ನಿರೂಪಿಸುತ್ತೇವೆ.
5 ಶಬ್ದಪ್ರಧಾನ, ಅರ್ಥ ಪ್ರಧಾನ ಎಂದರೇನು ಎಂಬುದರ ಎಚಾರ ಮುಂದಿನ ಅಧ್ಯಾಯ
ದಲ್ಲಿ ಬರುತ್ತದೆ.
K.M. A
೧೧೪ ಭಾರತೀಯ ಕಾವ್ಯಮಾಮಾಂಹೆ
ಯುಂಟೆಂದು ಅವನು ಒಪ್ಪುವುದಿಲ್ಲ. ಆದಕಾರಣ ಅವನದೇ ಒಂದು
ಸ್ವತಂತ್ರ ಪ್ರಸ್ಥಾನವಾಯಿತು. ಭರತನ ನಾಟ್ಯತಾಸ್ತ್ರದಲ್ಲೇ ರಸಕ್ಕೆ
ಪ್ರಾತಸ್ತ್ಯವಿದ್ದುದು ನಿಜ; ಆದರೆ ಆನಂದವರ್ಧನನ ಕಾಲದವರೆಗೆ
ಅದನ್ನು ಯಾರೂ ಕಾವ್ಯಸಾಮಾನ್ಯಕ್ಕೆ ಅನ್ಯಯಿಸಿರಲಿಲ್ಲ. ಲೊಲ್ಲಟ,
ಶಂಕುಕ ಮೊದಲಾದವರು ರಸನಿಪ್ಪತ್ತಿಯನ್ನು ಕುರಿತು ವಿಚಾರಮಾಡು
ವಾಗ ಗಮನದಲ್ಲಿಟ್ಟುಕೊಂಡಿದ್ದುದು ಅಭಿನಯಯೋಗ್ಯವಾದ ನಾಟಕ
ನ್ನೇ ಹೊರತು ಕಾವೃಸಾಮಾನ್ಯವನ್ನಲ್ಲ. ಧ್ಯನಿವಾದವನ್ನು ಬಂಡಿ
ಸಿದರೂ ಕೂಡ, ರಸವೇ ಕಾವ್ಯದ ಪ್ರಾಣವೆಂಬ ತತ್ತ್ಯವನ್ನು ಅಂಗೀಕರಿಸಿ
ಕಾವ್ಯದ ತಬ್ಬಾರ್ಥಗಳಿಂದ ಅದು ಹೇಗೆ ಭಾವ್ಯವಾಗುವುದೆಂಬುದನ್ನು
ಮೊದಲು ನಿರೂಪಿಸಿದವನು ಭಟ್ಟ ನಾಯಕನೆಂದೇ ತೋರುತ್ತದೆ. ಇವನ
« ಭೋಗೀಕರಣ''ವಾದವನ್ನು ಅಭಿನವಗುಪ್ತನು ಖಂಡಿಸಿದನು, ಆದರೂ
ನಾಟ್ಯಲಕ್ಷಣವನ್ನು ಮುಖ್ಯವಾಗಿ ಪ್ರತಿಪಾದಿಸುವ "ದಶರೂಪಕ ', "ಬಾವ
ಪ್ರಕಾಶನ' ಮೊದಲಾದ ಗ್ರಂಥ ಪರಂಪರೆಯಲ್ಲಿ ಅದು ಜೀವಿಸುತ್ತಾ
ಬಂದಿತು. ಆದಕಾರಣ ಭಟ್ಟನಾಯಕನದೂ ಒಂದು ಸ್ವತಂತ್ರ ಮಾರ್ಗ
ಪೆಂಡೇ ಹೇಳಬೇಕು.
ಅಲಂಕಾರ ರೀತಿ ಧೃನಿಗಳಂತೆ ರಸ ಪ್ರಸ್ಥಾನವೆಂಬುದೂ ಒಂದು
ಉಂಟೆಂದು ಕೆಲವು ಮಂದಿ ವಿಮರ್ಶಕರ ಮತ. ಇದನ್ನು ಅಂಗೀಕರಿಸಿದ
ಪಕ್ಷಕ್ಕೆ ಯಾರುಯಾರನ್ನು ಇಲ್ಲಗೆ ಸೇರಿಸಬೇಕು ? ಭರತನನ್ನೂ ಅವನ
ವ್ಯಾಖ್ಯಾನಕಾರರನ್ನೂ ಇಲ್ಲಗೆ ತರೋಣ ಎನ್ನಬಹುದು. ಹಾಗಾದರೆ
ವ್ಯಾಖ್ಯಾನಕಾರರ ಮಕುಟಮಣಿಯಾದ ಅಭಿನವಗುಪ್ತನ ಸ್ಥಾನವೆಲ್ಲಿ ಗ.
ರಸಪ್ರಸ್ಥಾನದಲ್ಲೇ, ಧ್ವನಿಪ್ರಸ್ಹಾನದಲ್ಲೇ 1 ಅನುಮಾನವಾದಿಯಾದರೂ,
ರಸವೇ ಕಾವ್ಯದ ಆತ್ಮವೆಂದು ಸಾರಿದ ಮಹಿಮಭಟ್ಟನೂ ಇಲ್ಲಿಗ್ನ ಬರು
ತಾನೋ? ಇನ್ನು, ಭೋಜರಾಜನೋ ? . ನಿಜವಾದ ವಿಷಯಪೇನೆಂದರೆ,
ಸಂಸ್ಕ ೃತೆದ ಕಾವ್ಯ ನಾಟಕ ಮಾಮಾಂಸೆಯಲ್ಲಿ ರಸಪ್ರಾ ಶಸ್ತ ವಾದವು
ಕೇವಲ ಒಂದು ಪ್ರಸ್ಥಾನವಲ್ಲ ; ಅದು ಎಲ್ಲ ಪ್ರಸ್ಥಾನಗಳ ಗಮ್ಯಸ್ಥಾನ.
ನಮ್ಮ ಶಾಸ ಒದ ಕಥೆಯನ್ನು ಒಂದು ಬಗೆಯಲ್ಲಿ ರಸಪ್ರತಿಷ್ಠಾ ಪನೆಯ ಕಥೆ
ಹಿಂದೇ ಕರೆಯಬಹುದು ; ಇದರ ಮಜಲು ಮಜಲನ್ನೂ ನಾವು ಉದ್ದಕ್ಕೂ
ನೋಡಿಕೊಂಡು ಬಂದಿದ್ದೇವೆ. ಕಾವ್ಯವನ್ನು ಒಂದು ಗುಡಿಗೆ ಹೋಲಿಸಿ
೭. ವಿಶೇಷ ಎಚಾರ ೧೧೫
ದರೆ, ಅಲಂಕಾರ ಪ್ರಸ್ಥಾನದವರು ಅದರ ಹೊರಗೋಡೆಯನ್ನು ಸುತ್ತುವು
ದರಲ್ಲೇ ಕಾಲ ಕಳೆದರು ರಸವನ್ನೂ ಆ ಹೊರಗೋಡೆಯ ಮೇಲೆ ಕೆತ್ತಿ
ರುವ ಅನೇಕ ವಿಗ್ರಹಗಳಲ್ಲಿ ಒಂದಾಗಿ ಅವರು ಭಾವಿಸಿದ್ದರು. ಈ ಒಂದು
ವಿಗ್ರಹವು ಮುಕ್ಕಾದರೂ ಮುರಿದುಬಿದ್ದ ರೂಗುಡಿಗೆ ಯಾವ ಭ೦ಗವೂ ತಟ್ಟು
ವಂತೆ ಅವರಿಗೆ ತೋರಲಿಲ್ಲ. ರೀತಿ ಪ್ರಸ್ಥಾನದಲ್ಲಿ ರಸವು ಗುಡಿಯೊಳಕ್ಕೆ,
ಬಂದಿತು ; ಕಾವ್ಯಕ್ಕೆ ನಿಯತವಾದ ಆಂಗವಾಯಿತು ; ಆದರೆ ಪ್ರಾಮುಖ್ಯ
ವನ್ನು ಇನ್ನೂ ಪಡೆಯಲಿಲ್ಲ. ಅವನ್ನು ಇಲ್ಲಿ ಗರ್ಭಗುಡಿಯ ದಾ ದ್ವಾರಪಾಲಕ
ನಿಗೆ ಜಳೇಅಸಸಿಕುತ್ತೂ ಏನೋ. ಧ್ವನಿಕಾರನು ಬಂದು ರಸದ ಮಹತ್ತ್ವ
ವನ್ನರಿತು ಒಳಪೀರದ ಮೇಲೆ ನಿಲ್ಲಿಸಿದಾಗ ಇದೇ ಕಾವ್ಯಮಂದಿಶದ
ಅಧಿದೈವವೆಂದು ಗೊತ್ತಾಯಿತು. ಆದರೂ, ಈ ವಿಗ್ರಹಕ್ಕೆ ಪ್ರಾಣಪ್ರತಿ
ಪ್ಯಾಪನೆಮಾಡಿದವನು ಅಭಿನವಗುಪ್ತನೆಂದು ಹೇಳಿದರೆ ಅತಿಶಯೋಕ್ತಿಯಾ
ಗಲಾರದು. ಭಟ್ಟ ನಾಯಕ, ಮಹಿಮೆಭಟ್ಟ ಇವರೆಲ್ಲರೂ ಈ ದೈವದ
ಆರಾಧಕರೇ ಸರಿ, ಇವರಿಗೂ ದ್ವನಿಪ್ರಸ್ಥಾನದವರಿಗೂ ಆರಾದನೆಯ
ವಿಧಾನಗಳಲ್ಲಿ ಮಾತ್ರ ಭೇದ. ಇನ್ನು ಕಾವ ಲಕ್ಷಣದಲ್ಲೇ ರಸದ ಹೆನರನ್ನು
ಸೇರಿಸಿ ಉದ್ಭೋಪಷಿಸುವ ಕಾರ್ಯ ವಿಶ್ವನಾದನಿಗೆ ಉಳಿಯಿತು ; ಅಲ್ಲ ಅಂದ
ಮುಂದೆ, ಅದನ್ನು ವಿರ್ಲೋಧಿಸತಕ್ಕ ವನೆಂದರೆ ಜಗನ್ನಾಥನು ಮಾತ್ರ ಕ್ಯ
ಅವನೂ ಕೂಡ ರಸಧ್ಯನಿಯ ಪರಮರಮಣೀಯತೆಯನ್ನು ಮುಕ್ತಕಂಠ
ತ್ತಾನೆ.
ನಾಗಿ ಒ
(ಈ.
ರಸವು ಅನುಭವವಿಶೇಷ. ಲೋಕರೂಢಿಯ ಮಾತಿನಲ್ಲಿ ನಾವು
ಕಾವ್ಯವೆಂದು ಕರೆಯುವ ಶಬ್ದಾರ್ಧಗಳು ಒಂದು ಉಪಕರಣ ಮಾತ್ರ.
ಅವುಗಳ ಮೂಲಕ ಸಹೃದಯನ ಹೃದಯದಲ್ಲಿ ರಸಾನ.ಭವವುಂಟಾದಾಗಲ್ಲೇ
ಕಾವ್ಯವು ಕಾವ್ಯವಾಗತಕ್ಕದ್ಳು. ಭಾರತೀಯ ಲಕ್ಷಣತಾಸ್ತ್ರದ ಗವ. ನ
ವೆಲ ಈ ಅನುಭವದ ಕಡೆಗೆ. ಸಾಮಾಜಿಕನಿಗೆ ಇದನ್ನು ಒದಗಿಸುವ
ಸಾಮಗ್ರಿ ಯಾವುದು? ಅದರ ಸ್ವರೂಪಪೇನು? ಅದರ ಅಂಗಾಂಗ
ವಿನ್ಯಾಸ ಹೇಗಿರಬೇಕು? ಇದರಿಂದ ರಸಸಿಪ್ನತ್ತಿಯಾಗುವ ಬಗೆ ಹೇಗೆ?
ಇದೆಲ್ಲದರ ವಿಸ್ನೇಚನೆಯೇ ನಮ್ಮ ಕಾವ್ಯಮಾಮಾಂಸೆಯ ಮುಖ್ಯ ವಸ್ತು
ಅದರೆ ಈ ಅನುಭವವು ಮೊದಲು ಕವಿಯ ಹೃದಯದಲ್ಲಿ ಉದಿಸಿ ಅವನ
ಪ್ರತಿಭೆಯಲ್ಲಿ ರೂಪುಗೊಂಡು ತಾನ್ಯ ದ ತೆಬ್ಬಾ ರ್ಥವಾಗಿ ಹೊರಹೊಮ್ಮ
೧೧೬ ಭಾರತೀಯ ಕಾವ್ಯಮಾಮಾಂಸ
ಬೇಕಷ್ಟೆ. ಇದನ್ನು ನಮ್ಮ ಲಾಕ್ಷಣಿಕರು ಅರಿತಿದ್ದರೂ, ಕವಿಗೆ ಅನುಭವ
ಹೇಗೆ ಒದಗುತ್ತದೆ, ಅದು ""ಕಾವ್ಯ'' ರೂಪವನ್ನು ಹೇಗೆ ತಳೆಯುತ್ತದೆ
ಎಂಬುದರ ನಿರೂಪಣಿಗೆ ಅವರು ಹೆಚ್ಚಾಗಿ ಗಮನ ಕೊಡಲಿಲ್ಲ. ಇದು
ಪಾಶ್ಚಾತ್ಯ ಕಾವ್ಯಮಾಮಾಂಸೆಯಲ್ಲಿ ಪ್ರಧಾನವಾಗಿರುವ ವಿಷಯ. ಆದ
ಕಾರಣ ಪ್ರಾಚ್ಯ ಪಾಶ್ಚಾತ್ಯ ಕಾವ್ಯಮಾಮಾಂಸೆಗಳು ಈ ವಿಷಯದಲ್ಲಿ
ಒಂದಕ್ಕೊ೦ದು ಪೂರಕವಾಗುತ್ತದೆ.
ತುಷ್ಕದಾರ್ತನಿಕರಿಗೆ ಕಾವ್ಯದಲ್ಲಾಗಲಿ ಇತರ ಕಲೆಗಳಲ್ಲಾಗಲಿ
ಅಭಿರುಚಿಯೂ ಗೌರವವೂ ಹುಟ್ಟದಿರಬಹುದು; ತಾರ್ಕಿಕ ಮಾಮಾಂಸ
ಕಾದಿಗಳನ್ನು ನೀರಸರೆಂದು ಆಲಂಕಾರಿಕರು ಕುಜ್ಕೋದ್ಯಮಾಡಿರಲೂ
ಬಹುದು. ಆದರೆ ನಮ್ಮ ದೇಶದಲ್ಲಿ ಕಾವ್ಯಮಾಮಾಂಸೆಗೂ ಮಿಕ್ಕ ಶಾಸ್ತ್ರ
ದರ್ಶನಾದಿಗಳಿಗೂ ಸಂಬಂಧವಿರಲಿಲ್ಲಷೆಂದು "ಮಾತ್ರ ಎಂದಿಗೂ ಭಾವಿಸ
ಕೂಡದು. ಬಾರತೀಯ ಶಾಸ್ತ್ರಪಂಕ್ತಿಯಲ್ಲ ಕಾವ್ಯಲಕ್ಷಣವು ಕಿರಿಯ
ಮಗುವೆಂದು ಪ್ರಾರಂಭದ ಅಧ್ಯಾಯದಲ್ಲೇ ಗಮನಿಸಿದ್ದೇವೆ; ಆದಕಾರ
ಣವೇ ಅದು ಹಿರಿಯ ಶಾಸ್ತ್ರಗಳ ಸಾರವನ್ನು ಬಹಳಮಟ್ಟಿಗೆ ಪೀರಿ ದೃಢ
ವಾಯಿತು. ನಮ್ಮ ಲಕ್ಷಣಕಾರರಲ್ಲಿ ಹಲವರು ವ್ಯಾಕರಣ, ನ್ಯಾಯ,
ಮಾಮಾಂಸಾ, ವೇದಾಂತ ಮೊದಲಾದ ಶಾಸ್ತ್ರಗಳಲ್ಲ ಪ್ರವೀಣತೆಯನ್ನು
ಪಡೆದಿದ್ದವರು ; ಅಭಿನವಗುಪ್ತನಂಥವರು ಶಾಸ್ತ್ರ ಸಾಪಿತ್ಯಗಳೆರಡರ ವೇ
ಚನೆಯಲ್ಲೂ ಒಂದೇ ಬಗೆಯ ನಿರರ್ಗಳತೆಯಿಂದ ಮುಂದುವರಿದ ಸವ್ಯ
ಪಾಚಿಗಳು. ಆದ್ದ ರಿಂದ ಅವರ ಶಾಸ್ತ್ರಜ್ಞಾ ನವು ಕಾವ್ಯತತ್ತ ೩ ನಿರೂಪಣಿ
ಯಲ್ಲಿ ಮಾರ್ಗದರ್ಶನವನ್ನು ಒದಗಿಸಿದ್ದು ಸಹಜವಾಗಿದೆ. ಕಾವ್ಯದ
ತರ್ಲೀರ ಶಬ್ದಮಯವಪ್ಪೆ ; ತಬ್ದತುದ್ಧಿಯನ್ನು ಪೆಡೆಯುವುದು ಕವಿಯ
ಪ್ರಥಮ ಕರ್ತವ್ಯ. ಆದಕಾರಣ, ಭಾಮಹ, ವಾಮನ ಮೊದಲಾದವರ
ಗ್ರಂಥಗಳಲ್ಲಿ ಕೇವಲ ವ್ಯಾಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಬೋಧಿ
ಸಲು ಒಂದೊಂದು ಪ್ರಕರಣವೇ ಮಾಸಲಾಗಿದೆ. ಇಷ್ಟೇ ಅಲ್ಲ. ಧ್ವನಿ
ಪ್ರಸ್ಥಾನದವರಿಗೆ ವೈಯಾಕರಣರಲ್ಲಿ ಪರಮ ಗೌರವ; ವೈಯಾಕರಣರ
ಸ್ಫೋಟವಾದವೇ ಧ್ವನಿತತ್ತ್ಯ್ಯಕ್ಕೆ ಆಕರವೆಂದೂ ಅವರು ಒಪ್ಪಿಕೊಳ್ಳುತ್ತಾ ರೆ.
ಆದರೆ ವ್ಯಂಜನಾವೃತ್ತಿ ಯೆಂಬ "ತಬ್ಬವ್ಯಾಪಾರವೂಂದು ಬೇರೆ ಉಂಟೆಂದು
ಪಾ ಚೀನ ವೈಯಾಕರಣರಾಗಲಿ ನೈಯಾಯಿಕರೇ ಮೊದಲಾದ ದಾರ್ಶನಿಕ
ಒ. ವಿಶೇಷ ವಿಚಾರ ೧೧೭.
ರಾಗಲಿ ಒಪ್ಪಲಿಲ್ಲ ;" ಷೊದಮೊದಲಲ್ಲಿ ಹಲವರು ಆಲಂಕಾರಿಕರೂ ಒಪ್ಪ
ಲಿಲ್ಲಪೆಂದೂ ಆಗಲೇ ನೋಡಿದ್ದೇವೆ. ಈ ಪ್ರತಿಪಕ್ಷದವರ ಆಕ್ಷೇಪಣಿಗಳ
ನ್ನೆಲ್ಲಾ ಬಂಡಿಸಿ, ಅವರವರ ದಾರಿಯಲ್ಲೇ ಅವರವರಿಗೆ ಉತ್ತರ ಕೊಟ್ಟು
ಧ್ವನಿಸ್ಕಾಪನೆಮಾಡಲು ಧ್ವನ್ಯಾಲೋಕಕಾರನೂ ಅವನ ಪಕ್ಷದವರೂ ಅತಿ
ಶಯ ಬುದ್ಧಿಕೌಶಲವನ್ನೂ ತಾಸ್ತ್ರಜ್ಞಾನವನ್ನೂ ಪ್ರಯೋಗಿಸಬೇಕಾಯಿತು.
ಅವರ ಅಲಂಕಾರ ಗ್ರಂಥಗಳಲ್ಲಿ ಶಬ್ದವ್ಯಾಪಾರವನ್ನು ಕುರಿತ ಅಧ್ಯಾಯ
ಭಾಗವು ಶಾಸ್ತ್ರಗಳ ವಾದಭೂಮಿಯಂತೆ ಕಾಣಿಸುತ್ತದೆ.
ಹೀಗೆ ಮಕ್ಕ ಶಾಸ್ತ್ರಗಳೊಂದಿಗಿದ್ದ ಸಂಸರ್ಗವೂ ಸಂಘರ್ಷವೂ
ಸ್ಪಪ್ಟವಾಗಿ ಕಾಣಿಸುವ ಇಂಥ ಸಂದರ್ಭಗಳೇ ಅಲ್ಲದೆ, ಬೇರೆ ಬೇರೆ
ಭಾರತೀಯ ದರ್ಶನಗಳು ಕಾವ್ಯವಿಾಮಾಂಸಕರ ದೃಷ್ಟಿಯನ್ನೇ ಆಂತರಿಕ
ವಾಗಿ ತಿದಿ ರುವ ಸಂದರ್ಭಗಳೂ ಹಲವು ಉಂಟು, ಅವುಗಳಲ್ಲಿ ಅತಿ
ಮುಖ್ಯವಾದದ್ದೆ೦ದರೆ, ರಸನಿಪ್ಪ ತ್ತಿ ಯನ್ನು ಕುರಿತ ವಾದಪ್ರಕರಣ. ಭಟ್ಟ
ನಾಯಕನ ಧುಕ್ತಿವಾದ '`ವನ್ನು ಖಂಡಿಸಿ, ಅಭಿನವಗುಪ್ತನು "" ಅಭಿ
ವ್ಯಕ್ತಿವಾದ ''ವನ್ನು ಸ್ಥಾಪಿಸಿದನಪ್ಪೆ. ಇವರಿಬ್ಬರ ಮತಗಳೂ ಅನುಕ್ರಮ
ವಾಗಿ ಸಾಂಖ್ಯ ಮತ್ತು ವೇದಾಂತ ದರ್ಶನಗಳಿಂದ ಪ್ರೇರಿತವಾಗಿವೆ
ಯಂಬುದನ್ನು ಪ್ರೊ॥ ಎಂ. ಹಿರಿಯಣ್ಣನವರು ನಿದರ್ಶಿಸಿ, ಈ ಎರಡು
ದರ್ಶನಗಳ ಪ್ರಕಾರ ಸೌಂದರ್ಯಮಾಮಾಂಸೆ ಹೇಗೆ ಭಿನ್ನವಾಗುವುದೆಂಬು
ದನ್ನು ಪ್ರತಿಪಾದಿಸಿದ್ದಾರೆ." ದರ್ಶನಗಳ ಪ್ರಭಾವವು ಎದ್ದು ತೋರುವ
HE |
"here 14 no evidence tu beheve that Tyenand Was ever
1ecogmsed by the ancient grannariuns. Among the ganna ans
NageSa has defintely supported 01/1/1110, and he lavs much
emphasis on the desirability of ucknowlelging it from the stand-
point of gramnar... (PC. Chakuwaru The Philosophy of
Sansket Grammar, |. 335 )
ಧ್ರನಿತತ್ವೃವು ಪ್ರಸಿದ್ಧಿಗೆ ಬಂದ ತರುಣದಲ್ಲಿದ್ದ ಭಟ್ಟಜಯಂತನು ತನ್ನ "ನ್ಯಾಯ
ಮಂಣರಿ'ಯಲ್ಲ, ಧೃನಿಕಾರನನ್ನು "" ಪಂಡಿತಂಮನ್ಯ ''ನೆಂದು ಪರಿಹಾಸಮಾಡುತ್ತಾನೆ. ಈ
ತತ್ತ್ವದ ವಿಷಯದಲ್ಲ ತನ್ನ ವಿರೋಧವನ್ನು ತೋರಿಸುವ ಒಂದೆರಡು ಮಾತನ್ನಾಡಿ, ಅಪ್ಪಕ್ಕೇ
ಮನಸ್ಸು ಬದಲಾಯ ದವನಂತೆ,
ಅಥವಾ ನೇಡೃಶೀ ಚರ್ಚಾ ಕವಿಭಿ: ಸಹ ಶೋಭತೇ |
ವಿದ್ಯಾಂಸೋಪಿ ವಿಮುಹ್ಯಂತಿ ವಾಕ್ಯಾರ್ಥಗಹನೇಇಧ್ದನಿ !
ಎಂದು ಮುಗಿಸುತ್ತಾನೆ | (ನ್ಯಾಯಮಂಜರೀ, ಪು. ೪೫.)
7 11. Wiuyanna . " ₹0114) Aestheties’ (POC, 1, Vol. 11),
೧೧೮ ಭಾರತೀಯ ಕಾವ್ಯಮಾಮಾಂಸೆ
ಇನ್ನೊಂದು ಸ್ಥಳ ಯಾವುದೆಂದರೆ ಕವಿಪ್ರತಿಭೆಯ ಸ್ವರೂಪ ಕಾರ್ಯ ಮೊದ
ಲಾದವುಗಳ ವಿಚಾರ. ಲೌಕಿಕವೂ ವಿಳಂಬವೂ ಆದ ತರ್ಕಮಾರ್ಗಕ್ಕೆ
ಒಳಪಡದೆ, ದಿವ್ಯಪ್ರಭೆಯಂತೆ ಥಟ್ಟನೆ ಹೊಳೆಯುವ ಯೋಗಿಪ್ರತ್ಯಕ್ಷವೇ
ಮೊದಲಾದ ಜ್ಞಾನಗಳು ಉಂಟೆಂದು ಅನೇಕ ದರ್ಶನಗಳಲ್ಲ ಒಪ್ಪುತ್ತಾರೆ;
ಇದರ ಸ್ವರೂಪಾದಿಗಳನ್ನು ತಮ್ಮ ತಮ್ಮ ಸಿದ್ಧಾಂತಗಳಿಗೆ ಅನುಸಾರವಾಗಿ
ಬೇರೆ ಬೇರೆ ಬಗೆಗಳಲ್ಲ ನಿರೂಪಿಸುತ್ತಾರೆ... ಕಾವ್ಯವಿಾಾಮಾಂಸಕರು
ಕವಿಪ್ರತಿಭೆ ಖುನ್ನು ಕುರಿತು ಹೇಳುವ ವಿಷಯಗಳಲ್ಲಿ ಈ ದಾರ್ಶನಿಕ ತತ್ತ್ವ
ಗಳ ಛಾಯೆ ಸುವ್ಯಕ್ತವಾಗುತ್ತದೆ. ಉದಾಹರಣಿಗೆ ಅಭಿನವಗುಪ್ತನು
ಕಾಶ್ಮೀರದ ಶೈವಾಗಮವನ್ನು ಪ್ರತಿಪಾದಿಸಿದ ಶೈವಾಚಾರ್ಯ ; ಮಹಿಮ
ಭಟ್ಟನು ಮೈಯಾಯ.ಕನೆಂಬುದಕ್ಕೆ ಅವನ ಕಾವ್ಯಾನುಮಿತಿವಾದವೇ ಸಾಕ್ಷಿ;
ಹೇಮಚಂದ್ರನು ಜೈನ ಸೂರಿ. ಈ ಮೂವರು ಪ್ರತಿಪಾದಿಸಿರುವ ಪ್ರತಿಭಾ
ತತ್ತ ಗಳೂ ಅವರವರ ದರ್ಶನಗಳನ್ನು ಅನುಸರಿಸುತ್ತವೆ." ಹೀಗ,
ಒಬ್ಬನು ಅವಲಂಬಿಸುವ ದರ್ಶನಕ್ಕೆ ಅನುಗುಣವಾಗಿ ಅವನು ಒಪ್ಪುವ
ಕಾವ್ಯತತ್ತ $ನೂ ರೂಪುಗೊಳ್ಳುವುದು ಸಹಜ, ಅನಿವಾರ್ಯ. ಕಾವ್ಯದ
ತಾಯಿಚೆೇರು ಜೀವನ ; ಕಾವ್ಯಮಾಮಾಂಸೆಯ ತಾಯಿಬೇರು ಜೀವನ
ಮಾಮಾಂಸೆ.
% Gopinath Kavira]: ‘The Doctrine ol Piatibhs in 87011)
Philosophy ' (473081, V) ನೋಡಿ.
9 ಈ ಅಂಶವನ್ನು ಮುಂದೆ ೧೦ನೆಯ ಅಧ್ಯಾಯದಲ್ಲ ದಿಜ್ಮಾತ್ರಷಾಗಿ ಸೂಚಿಸಲಾಗು
ತದೆ.
ಎರಡನೆಯ ಭಾಗ
ಕವಿ-ಕಾವ್ಯ-ಸಹೃದಯ
೮. ವಿಷಯ ಪ್ರವೇಶ
ಲಲಿತಕಲೆಗಳ ಮೂಲ ಎಂತಾದರೂ ಇರಲಿ; ನಾಗರಿಕ ಜೀವನದಲ್ಲಿ
ಆಪೆಲ್ಲ ಸೌಂದರ್ಯೋಪಾಸನೆಯ ಸಾಧನೆಗಳಾಗಿವೆ. ಗೀತ, ನೃತೃ, ಶಿಲ್ಪ
ಚಿತ್ರ ಹೊದಲಾದವುಗಳಂತೆ ೨ವೈವೂ ಒಂದು ಲಲಿತಕಲೆ. ಇವೆಲ್ಲವುಗಳ
ಸಾಮಾನ್ಯಧರ್ಮವನ್ನು ಕೊಂಚಮಟ್ಟಿಗೆ ತಿಳಿದರೆ ನಮಗೆ ಪ್ರಕೃತವಾದ ಕಾವ,
ವನಾಮಾಂಸೆ ಸುಲಭವಾಗುತ್ತದೆ. ಒಂದು ಕಲೆಯ ಬಚೆಳಕು' ಮತ್ತೊಂದರ
ಮೇಲೆ ಬಿದ್ದರೆ ಎರಡರ ಸ್ವರೂಪವೂ ಹೆಚ್ಚು ಸ್ಪುಟವಾಗುತ್ತದೆ.
ನಮ್ಮ ಆಲ೦ಕಾರಿಕರು ಕಾವ್ಯಕ್ಕೂ ಇತರ ಕಲೆಗಳಿಗೂ ಇರುವ
ಸಂಬಂಧವನ್ನು ಕ್ರಮವಾಗಿ ಎಲ್ಲಿಯೂ ವಿಚಾರಮಾಡಿಲ್ಲ. ಈ ಬಗೆಯ
ಪ್ರಷೇತಿಕೆಯೇನೂ ಇ್ಲದೆ ಕಾವ್ಯಸ್ಯರೂಪನಿರೂಪಣಗೇ ನೇರವಾಗಿ
ತೊಡಗುವುದು ಅವರ ಪದ್ಧತಿ. ಆದರೂ, ಮೇಲಿನ ವಿಷಯವನ್ನು ಕುರಿತು
"ಧ್ಯನ್ಯಾಲೋಕ'ದಲ್ಲ ನಾಲ್ಕೆ ಮಾತು ಅಲ್ಲಲ್ಲಿ ಪ್ರಾಸಂಗಿಕವಾಗಿ ಬಂದಿದೆ ;'
ಆದು ಲಲಿತಕಲೆಗಳ ಹೃದಯವನ್ನೇ ತೆರೆದಿಡತಕ್ಕದ್ದಾಗಿರುವುದರಿಂದ
ಆದರ ಭಾವವನ್ನು ಕೆಲವು ಮಟ್ಟಿಗೆ ಇಲ್ಲಿ ವಿವರಿಸ:ವುದು ಆವಶ್ಯಕ.
ಗಾಯನದ ಸ್ವರೂಪವನ್ನು ಮೊದಲು ನೋಡೋಣ. ಇಂಪಾದ
ನಂದ ಪರಂಪರೆಯೇ ಅದರ ಶರೀರ. ಭಾಷೆಯ ಶಬ್ದಗಳಿಗಿರುವಂತೆ,
ಗಾಯನದಲ್ಲಿ ಇಂಥ ಸ್ವರಕ್ಕೆ (ಅಥವಾ ಸ್ವರಸಮುಚ್ಛ ಬಕ್ಕೆ) ಇಂಥ ಅರ್ಧ
ವೆಂದು ಯಾರೂ ಸಂಕೇತಮಾಡಿಲ್ಲ ಎ೦ದರೆ, ಇಲ್ಲಿ ವಾಚ್ಯಾರ್ಥವೇ ಇಲ್ಲ.
ಆದರೂ ಗಾಯಕನ ಹೃದಯದಲ್ಲಿ ತುಂಬಿದ ಅರ್ಥವೊಂದನ್ನು ಈ ಗಾಯ
ನವು ಹೊರಹೊಮ್ಮಿಸಿ ಶ್ರೋತ್ಸವಿನ ಹೃದಯಕ್ಕೆ ನೇರವಾಗಿ ಮುಚ್ಚಿಸು
ತ್ತದೆ. ಈ ಅರ್ಥವು ಯಾವುದು? ಚಿತ್ತವೃತ್ತಿ ವಿಶೇಷವೂ ಅನುಭವ
! ಧ್ವನ್ಯಾ., ಪ್ರ. ೧೮೩, ೧೮೮, ೧೯೪, ೨೦೦ ಇತ್ಯಾದಿ.
*` ಗೀತಧ್ವನೀನಾಮಪಿ ವ್ಯಂಜಕತ್ವವುಪ್ತಿ ರಸಾದಿಎಿಷಯಂ '' (ಪು. ೧೯೪) ;
“` ತಥೆ ಸಿವ ವ್ಯಂಜಕತ್ಯಂ ಪಾಚಕಾನಾಂ ತಬ್ಬಾನಾಂ ಅವಂಚಕಣನಾಂ ಚ ಗೀತಧ್ಯನೀನಾಂ
ಅಶಬ್ಲರೂಪಾಣ್‌೨ ಚ ಚೇಷ್ಟಾದೀನಾಂ ಯತ್ ಸರ್ವೇಷಾಮನುಭವಸಿದ್ದಂ ತತ್ ಕೇನಾ
ಜಿದ್ರೊಯತೇ (ಪು. ೨೦೦). ....
೧೨೧
೧೨೨ ಭಾರತೀಯ ಕಾವ್ಯವಿಸಾಮಾಂಸೆ
ಪೇದ್ಯವೂ ಆನಂದಮಯವೂ ಆದ ರಸವಲ್ಲದೆ ಜೀರೊಂದಲ್ಲ. "ರತಿ
ವೈಭವ'ದ ಈ ಪದ್ಯವನ್ನು ಜ್ಞಾಪಿಸಿಸೊಳ್ಳೋಣ.
ಒಳೆಗುಮ್ಮಿ ದಾಸಂದರಸ ತನ್ನ ತನು ತುಂಬಿ
ತುಳುಕಿ ಹರಗೆ ಸೂಸುವಂತೆ |
ತೆಳುವಸುಖು೦ದ ಬನಎಯ್ತೆರೆಯೊಳು ಸುಸ್ವರ
ಹೊಳೆದು ಮೋಹಿಸುತಿದ್ದುದಾಗ ॥ (ವೀಣಾಸಂಧಿ, ೧೨,
ಗಾಯನದ ಸ್ವರವಿನ್ಯಾಸವೆ ಈ ರಸವನ್ನು ಸ್ರಕಾಶಪಡಿಸುವ ಒಂದು
ಸಾಧನ... ರಸಾನುಭವ ಮಾಡುವಾಗ ಈ ಸ್ವರಸಮುದಾಯದ
ಅರಿವೂ ನಮಗೆ ಇರುತ್ತದೆ; ಅದು ನಿಂತ ಕೂಡಲೇ ರಸವೂ ವಿಚ್ಛೇದ
ಹೊಂದುತ್ತದೆ. ಆದರೆ ಸ್ವರಗಳ ರಸವಲ್ಲ. ಎಂದರೆ ಗಾಯನವು
ರಸಕ್ಕೆ ವ್ಯಂಜಕ ಎಂದಾಯಿತು. ಇಲ್ಲ ನಾದವಶೇಷಕ್ಕೆ ನಿಯತವಾದ
ಅರ್ಥ ಯಾವುದೂ ಇಲ್ಲದ್ದರಿಂದ, ರಸಪ್ರಕಾತವು ನಡೆಯುವುದು ಕೇವಲ
ವ್ಯಂಜನಾವ್ಯಾಪಾರದಿಂದ ಮಾತ್ರ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.
ಗಾಯನದಲ್ಲಿ ಅವಾಚಕವಾದರೂ ಶಬ್ಧ ವುಂಟು. ನೃತ್ಯದಲ್ಲಾ ದರೆ
'ಶಬ್ದಸ೦ಂಪರ್ಕಷೇ ಅನಾವಶ್ಯಕ, ಸಮರ್ಥೆಯಾದ ನಟಿ ಕಣ್ಣನ್ನು ಅರಳಿಸು
ವುದ: ಹೊರಳಿಸುವುದು, ಹುಬ್ಬನ್ನು ಬಿಗಿಯುವುದು, ತೋಳುಗಳನ್ನು
ಆಡಿಸುವುದು, ಇವೇ ಮೊದಲಾದ ಅನೇಕ ಅಂಗಚಲನೆಗಳಿಂದ ಉಲ್ಲಾಸ,
ಔತ್ಪುಕ್ಕ, ಕೋಪ ಮೊ ದಲಾದ ಚಿತ್ತವೃತ್ತಿಗಳನ್ನು ಸೂಚಿಸುತ್ತಾಳೆ. ಅವಳು
ಹೀಗೆ ಅಭಿವ್ಯಕ್ತ ಪಡಿಸುವ ಭಾವ ಯಾವುದೇ ಆಗಿರಲಿ, ಅದರಿಂದ ನಮಗೆ
ಆನಂದಾನುಭವವುಂಟಾಗುವುದು ಸ್ಯಸೆಂವೇದ್ಯ. ಮಾಲವಿಕೆಯ ನಾಟ್ಯ
ವನ್ನು ಕಾಳಿದಾಸನೂ ನೀಲಾ೦ಜನೆಯ ನಾಟ್ಯವನ್ನು ಪಂಪನೂ ಭರತಚಕ್ರ
ವರ್ತಿಯ ಆಸ್ಥಾನದಲ್ಲಿ ನಡೆಯುತ್ತಿದ್ದ ನೃತ್ಯಗಳನ್ನು ರತ್ನಾಕರನೂ
ವರ್ಣನೆ ಮಾಡಿರುವುದನ್ನು ಓದಿದ ಮಾತ್ರಕ್ಕೇ ಹೃದಯವು ಆನಂದಪರಿ
ಪೂರ್ಣವಾಗುತ್ತದೆ. ಆ ಬಗೆಯ ನೃತ್ಯವನ್ನು ಕಣ್ಣಾರ ನೋಡಿದಾಗ ನಾವು
ರಸಪರವಶರಾಗುವುದರಲ್ಲ ಸಂಡೇಹಪೇ ಇಲ್ಲ. ಇಲ್ಲಿ ಚಿತ್ತವೃತ್ತಿವಿಶೇಪ
ವನ್ನು ಸೂಚಿಸಲು ನೃತ್ಯಕಲೆ ಅನುಸರಿಸುವುದು ವ್ಯಂಜನೆಯ ಮಾರ್ಗವೇ.
ಈ ವಿಷಯವನ್ನು ಸ್ಥಾಪಿಸಲು ತಲೆಯ ತನಕ ಕೂಡ ನಾವು ಹೋಗಬೇಕಾ
2 ಮಾಲವಿಕಾಗ್ನಿಮಿತ್ರ, ||; ಆದಿಪುರಾಣ, 1; ; ಭರತೇಶವೈಭವ, ಪೂರ್ವನಾಟಕ
ಸಂಧಿ ಮತ್ತು ಉತ್ತರನಾಟಕ ಸುಧಿ.
೮. ವಿಷಯ ಪ್ರವೇಶ ೧೨೩
ಗಿಲ್ಲ... ಲೋಕವ್ಯವಹಾರದಲ್ಲೇ ಅಂಗಚೇಷ್ವೆ ಚಿತ್ತವೃತ್ತಿಯನ್ನು ಚೆನ್ನಾಗಿ
ಅಭಿವ್ಯಕ್ತಪಡಿಸುತ್ತದೆ.. ಆದರೆ ಇಲ್ಲಿಯದು ಲೌಕಿಕಭಾವ. ಇದಕ್ಕೂ
ರಸಕ್ಕೂ ವ್ಯತ್ಯಾಸವೇನೆಂಬುದನ್ನು ಮುಂದೆ ವಿಸ್ತಾರವಾಗಿ ಪ್ರತಿಪಾದನೆ
ಮಾಡಬೇಕಾಗಿರುವುದರಿಂದ ಇಲ್ಲ ಅದರ ಪ್ರಸ್ತಾವ ಅನಾವತ್ಯಕ.
ಕಾವ್ಯದ ತಿರುಳೂ ರಸವೇ. ಇಲ್ಲ ಶಬ್ದಕ್ಕೆ ಸಂಕೇತಿತವಾದ ವಾಚ್ಯಾ
ರ್ಹವಿದ್ದ ರೂ, ಚಿತ್ತವೃತ್ತಿ ವಿಶೇಷವಾದ ರಸವನ್ನು ಪ ಶ್ರ ಕಾಶಪಡಿಸಲು
ಇಲ್ಲಿಯೂ ವ್ಯಂಜನಾವ್ಯಾಪಾರವೇ ಗತಿ. ಪೀಗೆ, ಗಾಯನ, ನೃತ್ಯ, ಕಾವ್ಯ
ಮೊದಲಾದ ಎಲ್ಲ ಕಲೆಗಳೂ ಒಂದೇ ಗುರಿಯನ್ನು ಒಂದೇ ದಾರಿಯಲ್ಲ
ುಟ್ಟುತ್ತವೆ. ಇದು ಚೆನ್ನಾಗಿ ಸ್ಪಷ್ಟವಾಗುವುದು ನಾಟಕದಲ್ಲಿ. ನಾಟಕವು
ಹಲವು ಕಲೆಗಳ ಸಮನ್ವಯಸ್ಥಾನಪೆಂದು ನಾವು ಹಿಂದೆಯೇ ಅರಿತಿದ್ದೇವೆ.
ಇದರಲ್ಲಿ ಮಾತಿನ ಭಾಗವುಂಟು, ಅಭಿನಯ ಭಾಗವುಂಟು , ಇವಕ್ಕೆ ಪೋಪಷ
ಕವಾಗಿ ಬರುವ ಗಾಯನ ಭಾಗವುಂಟು. ಇದೆಲ್ಲವೂ ಒಂದರೊಡನೊಂದು
ಹೊಂದಿಕೊಂಡು ರಸಕ್ಕೆ ವ್ಯಂಜಕಗಳಾಗುತ್ತವೆ. ರಸಾಭಿವೃಕ್ತಿಯೇ
ಇವುಗಳ ಪರಮಾರ್ಥ.
' ಲಲಿತಕಲೆಯೆಂದರೆ ಕಾವ್ಯ, ಗಾಯನ, ನೃತ್ಯ, ನಾಟ್ಯ ಎವಿಷ್ಟೇ ಅಲ್ಲ. ಚಿತ್ರ,
ತಿಲ್ಲ, ವಾಸ್ತು ಈ ಮೊದಲಾದವೂ ಸೇರುತ್ತವೆ. ಆದರೆ ನಮ್ಮ ಆಲಂಕಾರಿಕರು ಎಸ
ಶಿಲ್ಪಾದಿಗಳ ಹೆಸರನ್ನೇ ಎತ್ತುವುದಿಲ್ಲ. ಚಿತ್ರವನ್ನು ಕುರಿತು ಪ್ರಾಸಂಗಿಕವಾಗಿ ಎರಡು
ಮಾತನ್ನು ಆಡಿದ್ದರೂ ಅದು ಮುಖ್ಯವಸ್ತುನಿನ ಪ್ರತಿಕೃತಿ ಅಧವಾ ಅನುಕರಣ ಮಾತ್ರವೆಂದು
ಅವರ ಭಾವನೆ. ಅದರಲ್ಲಿ ಜೀವಭೂತವಾದ ರಸವುಂಚೆಂದು ಅದರು ಒಪ್ಪುವಂತೆ ತೋರು
ವುದಿಲ್ಲ. "' ಚಿತ್ರ '`ಕಾವ್ಯ, "" ಅಲೇಖ್ಯಪುಖ್ಯ''ವೆಂಬ ಕಾಪ್ಕಾನುಕರಣ : ಈ ಹೆಸರುಗಳೂ
ಇವುಗಳ ಸ್ಟರೂಪಪೂ ಮೇಲಿನ ಮಾತಿಗೆ ನಿದರ್ಶನ. ಆದರೆ, ಚಿತ್ರಕಲೆಯನ್ನು ಕ-ರಿತ
ನಿರೂಪಣಿಗಳಲ್ಲ " ಭಾವಚಿತ್ರ '' ವೆಂಬ ಪ್ರಭೇದದ ಹೆಸರು ಬರುತ್ತದೆ. " ಅಭಿಲಪಿತಾರ್ಥ
ಚಿಂತಾಮಣಿ ' ಯಲ್ಲಿ ಇದರ ಲಕ್ಷಣವನ್ನು ಹೀಗೆ ಕೊಟ್ಟದೆ :
ಶೃಂಗಾರಾದಿರಸೋ ಯತ್ರ ದರ್ಶನಾದೇವ ಗಮ್ಮತ್ತೇ!
ಭಾವಚಿತ್ರಂ ತದಾಖ್ಯಾತಂ ಚಿ [ಶ್ರ] ಕೌೌತುಶಕಾರಕಂ | (11 ೯೪೧.೨.)
ರಸಾಭಿವ್ಯಕ್ತಿಯನ್ನೇ ಗುರಿಯಾಗಿ ಉಳ್ಳ ಚಿತ್ರಗಳು ಉಂಟೆಂದು ಪ್ರಾಚೀನ ಶಾಸ್ತ ಕಾರರು
ಅರಿತಿದ್ದುದು ಇದರಿಂದ ಸ್ಫುಟವಾಗುತ್ತದೆ.
ನಮ್ಮ ಪ್ರಾಚೀನಕವಿಗಳಂತೂ ಚಿತ್ರಕಲೆಗೆ ತುಂಬ ಪ್ರಾಶಸ್ತ್ಯ ಕೊಟ್ಟಿದ್ದರು ;
ನಾಯಕನಾಯಿಕೆಯರ ಭಾವಾಭಿವ್ಯಂಜನೆಗೆ ಚಿತ್ರವು ಉತ್ಕೃಷ್ಟ ಸಾಧನವೆಂದು ಭಾವಿಸಿ
ದ್ಮರು. "ಮಾಲವಿಕಾಗ್ನಿಮಿತ್ರ,` "ಶಾಕುಂತಲ,' “ರತ್ನಾವಳಿ'--ಈ ಮೊದಲಾದ ನಾಟಕಗಳ
ಸಂವಿಧಾನದಲ್ಲ ಚಿತ್ರಲೇಖನಕ್ಕಿರುವ ಪ್ರಾಮುಖ್ಯವನ್ನು ಗಮನಿಸಿ. ಅದರಲ್ಲೂ "ಶಾಕುಂತಲ`ದ
ಅರನೆಯ ಅಂಕದಲ್ಲಿ ದುಷ್ಕಂತನು ರಚಿಸುತ್ತಿದ್ದ ಚಿತ್ರದ ವರ್ಣನೆಯನ್ನು ಓದಿದರೆ:
ಕಾಳಿದಾಸನು ಚಿತ್ರಕಲೆಯ ಹೃದಯವನ್ನು ಚೆನ್ನಾಗಿ ಅರಿತಿದ್ಧನೆಂಬುದು ಸ್ಮಹ್ವವಾಗು
ತ್ತದೆ. " ಕಾರ್ಯಾ ಸ್ಫೊಕತಲೀನಹೆಂಸಮಿಥುನಾ ” ಏಂಬ ಒಂದು ಪದ್ಯವೇ ಸಾಕು.
೧೨೪ ಭಾರತೀಯ ಕಾವ್ಯಮಾಮಾಂಸೆ
ಲಲಿತಕಲೆಗಳ ಪ್ರಾಣ ಹೀಗೆ ಒಂದೇ ಅದರೂ, ಅವುಗಳ ತರೀರ
ಗಳು ಮಾತ್ರ ಬೇರೆ ಬೇರೆ. ಕಾವ್ಯವು ವಾಚ್ಯಾರ್ಥಸಪಿತವಾದ ಮಾತಿನ
ರೂಪದಲ್ಲರುತ್ತದೆ ; ಎಂದರೆ ಅದರ ಶರೀರವು ವಾಚಕವಾದ ಶಬ್ದ.
ಗಾಯನವೂ ಶಬ್ದಾತ್ಮಕವೇ ಆದರೂ ಅದರ ಶಬ್ದ ವು ಅವಾಚಕ. ನೈ ತ್ಯ
ವಂತೂ ತಬ್ದರೂಪವೇ ಅಲ್ಲ. ಅದರ ಶರೀರ ಆಂಗಿಕಾಭಿನಯ. ಈ
ಕಲೆಗಳಲ್ಲೆಲ್ಲಾ ಅದರದರ ಶರೀರವೊಂದೇ ಇಂದ್ರಿಯಗೋಚರವಾಗ
ತಕ್ಕದ್ದು ; ಈ ತರೀರಪೇ ಒಂದು ಕಲೆಯನ್ನು ಮತ್ತೊಂದರಿಂದ ಪ್ರತ್ಯೇಕಿಸ
ತಕ್ಕದ್ದು ; ವ್ಯಂಜನಾವ್ಯಾಪಾರದಲ್ಲ ಆಯಾ ಕಲೆಗೆ ವಿಶಿಷ್ಟವಾದ ಸಮಸ್ಯೆ
ಗಳು ಏಳತಕ್ಕದ್ಧೂ ಪರಿಹಾರವಾಗತಕ್ಕದ್ದೂ ಇದರ ಸ್ವರೂಪ ಸ್ವಭಾವ
ಗಳನ್ನು ಅನುಸರಿಸಿಯೇ. ಒಬ್ಬ ವ್ಯಕ್ತಿಯ ಶೀಲಸತ್ತ್ಮ್ಯಾದಿಗಳನ್ನು
ಅರಿಯುವುದಕ್ಕೆ ಅವನ ರೂಪ ವೇಷ ನಡೆ ನುಡಿಗಳೇ ಆಧಾರ; ಅದ
ರಂತೆಯೇ ಒಂದು ಕಲೆಯ ಸ್ಕರೂಪವಿಶೇಪವನ್ನ ರಿಯುವುದಕ್ಕೂ ಅದರ
ಶರೀರದ ವಿವೇಚನೆಯೇ ಮುಖ್ಯ ಸಾಧನ.
ತನದ ಶರೀರ ಮಾತು ಆವರ ಸಸತಲ್ಟ ಸೂ ಕಾಣ ಇಲ. ತಬ್ಬಿ
ಸಾಮ್ರಾಜ್ಯ ಅಪಾರವಾದದ್ದು. ಕಾವ್ಯ ಇದರಲ್ಲ ಅಮೂಲ್ಯವಾದ ಒಂದು
ಭಾಗವೆಂಬುದು ನಿಜ; ಆದರೆ ಅದು ಸಾಮ್ರಾಜ್ಯದ ಒಂದು ಪ್ರಾಂತ
ಮಾತ್ರ. ಮಾತನ್ನು ನಾವು ಎಷ್ಟು ವಿಧದಲ್ಲ ಎಷ್ಟು ಕಾರ್ಯಕ್ಕಾಗಿ ಉಪ
ಯೋಗಿಸುತ್ತೇವೆ ! ಭಾಷೆಯೊಂದಿಲ್ಲದಿದ್ದರೆ ನಾಗರಿಕತೆಯೇ ಇರುತ್ತಿರ
ಲಿಲ್ಲ. ಭಾಷೆಯ ಮಹಿಮೆಯನ್ನು ದಂಡಿ ಹೀಗೆ ವರ್ಣಿಸುತ್ತಾನೆ:
ಇಹ ಶಿಪ್ನಾನುಶಿಷ್ಟಾನಾ೦ ಶಿಪ್ವಾನಾಮಪಿ ಸರ್ವಥಾ |
ವಾಚಾಮೇವ ಪ್ರಸಾದೇನ ಲೋಕ ಯಾತ್ರಾ ಪ್ರವರ್ತತೇ ॥
ಇದಮಂಥಂತಮಃ ಕೃತ್ಸ೦ ಜಾಯೇತ ಭುವನತ್ರಯಂ |
ಯದಿ ಶಬ್ದಾಹ್ಮಯನ್ಮಜ್ಯೋತಿರಾಸ೦ಸಾರಾನ್ನ ದೀಪ್ಯತೆ॥
(ಕಾವ್ಯಾದರ್ಶ, |, ೩-೪)
"` ಭಾಷೆಗಳು ವಿದ್ಯಾ೦ಸರ ಅನುಶಾಸನಕ್ಕೆ ಒಳಪಟ್ಟವಾಗಿರಬಹುದು,
ಬಿಟ್ಟವಾಗಿರಬಹುದು; ಅಂತೂ ಎಲ್ಲ ರೀತಿಯಲ್ಲೂ ಅವುಗಳ ಅನು
ಗ್ರಹದಿಂದ ಮಾತ್ರವೇ ಲೋಕವ್ಯವಹಾರ ಸಾಗುತ್ತಿದೆ. ಮಾತೆಂಬ ಜ್ಯೋತಿ
ಸಂಸಾರದ ಉದ್ದಕ್ಕೂ ಬೆಳೆಗದೆ ಇದ್ದರೆ ಅಶ್ಲೇಷ ಭುವನೆತ್ರಯವೂ ಕಗ್ಗ ತ್ತ
ಲಾಗಿಬಿಟ್ಟೀತು.''
೮. ವಿಷಯ ಪ್ರವೇಶ ೧೨೫
ದಿನಗಟ್ಟಳೆ ಯ ವ್ಯವಹಾರದಲ್ಲಿ ಜನರು ಭಾಷೆಯನ್ನು ಅಡುವ
ಮಾತಾಗಿ ಉಪಯೋಗಿಸುವುದಿರಲಿ. ತಮ್ಮ ಅನುಭವ ಆಲೋಚನೆಗಳ
ಸಾರವು ತಲೆತಲೆಗೂ ಉಳಿಯುವಂತೆ ಕಾಪಾಡಲು ಅದರಲ್ಲ ಗ್ರಂಥಗಳನ್ನು
ರಚಿಸುತ್ತಾರೆ. ಪೀಗೆ ಒಂದು ಭಾಷೆಯಲ್ಲಿ ಬೆಳೆದು ಬಂದ ಗ್ರಂಥರಾಶಿಯೇ
ವಾಜ್ಮಯ. (ಇದನ್ನು ಬರೆದಿಟ್ಟಿರಲೇಬೇಕೆಂಬ ನಿಯಮವಿಲ್ಲ. ವೇದ
ಗಳು ಎಷ್ಟೋ ಕಾಲದ ತನಕ ಕೇವಲ ಕೆಂಠಸ್ಥವಾಗಿಯ್ಲೇ ಇದ್ದುವು ;
ಈಗಲೂ ಬಾಯಲ್ಲ ಉಚ್ಚರಿಸಿದಾಗಲೇ ಪ್ಲೇದಮಂತ್ರಕ್ಕೆ ಮಂತ್ರತ್ಯ ಬರು
ವುದು. ಇಂದಿಗೂ ಎಷ್ಟೋ ಹಳ್ಳಿಯ ಹಾಡುಗಳು ನಾಲಗೆಯ ತುದಿಯಿಂದ
ಕಾಗದಕ್ಕೆ ಇಳಿದೇ ಇಲ್ಲ.) ಗ್ರಂಧಗಳು ಹಲವು ಬಗೆ. ನಮ್ಮ ಆಚಾರ
ವ್ಯವಹಾರಗಳು ಪೀಗೆಪೀಗಿರಬೇಕೆಂದು ವಿಧಿಕತಕ್ಕವೂ ಪಾರಲೌಕಿಕ
ಜ್ಞಾ ನವನ್ನು ಒದಗಿ ಕತಕ್ಕವೂ ಕೆಲವು. ಇಹಲೋಕದ ಅನೇಕ ವಿಷಯ
ಗಳನ್ನು ಕುರಿತು ನಿಷ್ಕ ಷ್ವವಾದ ತಿಳಿವಳಿಕೆಯನ್ನು ಕೊಡತಕ್ಕವು ಹಲವು,
ಬರೆದವನ ಅನುಭವದಲ್ಲಿ ಓದುವವನೂ ಪಾಲುಗೊಂಡು ಅದರ ಆಸ್ವಾದ
ದಲ್ಲಿ ಮೈಮರೆಯುವಂತೆ ಮಾಡುವ ಮಾತಿನ ಮಾಯೆಗಳು ಉಳಿದವು.
ಹೀಗೆ ಬಹುಮುಖವಾಗಿದುವ ವಾಜ್ಮಯವನ್ನು ಸಂಸ್ಕೃತದ ಆಲಂಕಾರಿ
ಕರು ವೇದ, ತಾಸ್ತ್ರ, ಕಾವ್ಯ ಬಂದು ಮೂರು ವರ್ಗವಾಗಿ ವಿಂಗಡಿಸು
ತ್ತಾರೆ. ಪ್ಲೇದವು ಅಪೌರುಷೇಯವೆಂದೂ ಆದರ ಮಂತ್ರಗಳಿಗೆ ಅಲಔಕಿಕ
ಪ್ರಭಾವವುಂಟೆಂದೂ ಅವರ ನಂಬಿಕೆಯಾಗಿದ್ದುದರಿಂದ ಅದನ್ನೇ ಒಂದು
ಪ್ರತ್ಯೇಕವರ್ಗವಾಗಿ ನಿಲ್ಲಿಸಿದರು. ವೇದವು "" ಶಬ್ದಪ್ರಧಾನ '' : ಎಂದರೆ
ಇದರಲ್ಲಿ ಅರ್ಥವು ಮಾತ್ರ ಮುಖ್ಯವಲ್ಲ ; ಅದನ್ನು ಒಳಕೊಂಡ ತಬ್ಬ ವು
ಒಂದು ರೀತಿಯಲ್ಲಿ ಅದಕ್ಕಿಂತಲೂ ಮುಖ್ಯ. ವೇದಮಂತ್ರದಲ್ಲಿ ಒಂದು
ಪದವನ್ನು ತೆಗೆದು ಸಮಾನಾರ್ಥಕವಾದ ಇನ್ನೊಂದು ಪದವನ್ನು
ಅದರ ಜಾಗದಲ್ಲ ಇಡುವ ಹಾಗಿಲ್ಲ; ಹೀಗೆ ಬದಲಾಯಿಸಿದರೆ ಮಂತ್ರದ
ಮಹಿಮೆ ನಪ್ಪವಾಗುತ್ತದೆ. ಅಲ್ಲಿಯ ಒಂದು ವರ್ಣವನ್ನಾಗಲಿ ಸ್ವರ
ವನ್ನಾಗಲಿ ವ್ಯತ್ಯಾಸಮಾಡಿದರೂ ಪ್ರ ಬಲವಾದ ದೋಪವು ಸಂಘಟಿಸು
ತ್ತದೆ... ವೇದದ ವರ್ಣಾನುಪೂರ್ವಿಗಿರುವ ಈ ಆಅಲಔಕಿಕಮಹಿಮೆ
4 ಇಂದ್ರಶತ್ರುರ್ವರ್ಧಸ್ವ'' ಎಂಬ ಮಂತ್ರದ ಉಚ್ಛಾರಣೆಯಲ್ಲ ಒಂದು ಸ್ವರ
ವ್ಯತ್ಯಾಸವಾದದ್ದರಿಂದ, ಇಂದ್ರನನ್ನು ಕೊಲ್ಲಬೇಕಾಗಿದ್ದ ವೃತ್ತಾಸುರನು ಇಂದ್ರನ
ಕೈಯಿಂದಲೇ ಹತನಾದನಂತೆ.
೧೨೬ ಭಾರತೀಯ ಕಾವ್ಯಮಾಮಾಂಸೆ
ಎರಡನೆಯ ವರ್ಗವಾದ ಶಾಸ್ತ್ರದಲ್ಲಲ್ಲ. ವೇದದಂತೆಯೇ ಶಾಸ್ತ್ರೇತಿ
ಹಾಸಪುರಾಣಗಳು' ಕರ್ತವ್ಯಾಕರ್ತವ್ಯಾದಿಗಳನ್ನು ಜೋದಿಸಿದರೂ ಇವು
ಗಳಲ್ಲ ಶಬ್ಧಕ್ಕಿಂತಲೂ ಅದರಿಂದ ಶಿಳಿಯಬರುವ ವಿಷಯಕ್ಕೆ ಜಿಲೆ
ಹೆಚ್ಚು; ಇಲ್ಲಿ ಪದಗಳನ್ನು ಬದಲಾಯಿಸಿದರೂ ದೋಷವೇನೂ ಇಲ್ಲ.
ಆದಕಾರಣ ಶಾಸ್ತ್ರವು "" ಅರ್ಥಪ್ರಧಾನ''. ವಿಷಯವನ್ನು ಆದಷ್ಟು ಸ್ಪಪ್ಪ
ವಾಗಿ ನೇರವಾಗಿ ತಿಳಿಸುವುದು ಶಾಸ್ತ್ರದ ಕಾರ್ಯವಾದದ್ದರಿಂದ ಇಲ್ಲಿ
ಪ್ರಧಾನವಾಗಿರುವ ಅರ್ಥವು ವಾಚ್ಯಾರ್ಥವಲ್ಲದೆ ಬೇರೆಯಲ್ಲ. ಕಾವ್ಯ
ಮೂರನೆಯ ದಾರಿಯನ್ನು ಹಿಡಿಯುತ್ತದೆ. ಇದರಲ್ಲಿ ಶಬ್ದ ವೂ ಮುಖ್ಯ
ವಲ್ಲ, ವಾಚ್ಯಾರ್ಥವೂ ಮುಖ್ಯವಲ್ಲ. ಈ ಎರಡೂ ಅನುಕ್ತವಾದ
ಬೇರೊಂದು ಅರ್ಥಕ್ಕೆ ಅಧೀನವಾಗಿ ಅದನ್ನು ವ್ಯಂಜಿಸುತ್ತವೆ. ಹೀಗೆ
ಕಾವ್ಯದಲ್ಲಿ ವ್ಯಂಗ್ಯಾರ್ಥವೇ ತಿರುಳಾಗಿರುವುದರಿಂದ ಅದನ್ನು ಧ್ವನಿ ಪ್ರಧಾ
ನವೆಂದು ಕರೆಯುತ್ತಾರೆ; ನಸಪ್ರಧಾನವೆಂಡ್ಲೇ ಕರೆಯಬಹುದು.
ವಾಜ್ಮಯವನ್ನು ಹೀಗೆ ವಿಂಗಡಿಸಲು ಇನ್ನೊಂದು ಕಾರಣವುಂಟು. ವೇದ,
ಶಾಸ್ತ್ರ, ಕಾವ್ಯ ಈ ಮೂರರಿಂದಲೂ ಮಾನವನಿಗೆ ಕರ್ತವ್ಯಾಕರ್ತವ್ಯಗಳ
ತಿಳಿವಳಿಕೆ ಒದಗುತ್ತದೆ. ಆದರೆ ಒಂಡೊಂದರಿಂದ ಅದು ಬರುವುದು
ಒಂದೊಂದು ರೀತಿಯಲ್ಲಿ ಈ ಭೇದವು ಮುಂದೆ ೧೪ನೆಯ ಅಧ್ಯಾಯ
ದಲ್ಲಿ ವಿಶದವಾಗುವುದರಿಂದ ಇಲ್ಲಿ ಅದರ ನಿರೂಪಣೆ ಅನಾವಶ್ಯಕ.
ಮೇಲಿನ ವಿಭಾಗಗಳಲ್ಲಿ, ಪ್ಲೇದಶಾಸ್ತ್ರಗಳ ಮುಖ್ಯೋದ್ದೇಶವು
ಜ್ಞಾನಬ್ಲೋಧನೆಯಾದ ಕಾರಣ ವೇದವನ್ನೂ ಶಾಸ್ತ್ರದ ಗುಂಪಿಗೇ
_ *ಶಾಸ್ತ್ರವರ್ಗದಲ್ಲಿ ಇತಿಹಾಸಂದಿಗಳನ್ನೂ ಸೇರಿಸುವುದು ಹಿಂದಿನ ಸಂಪ್ರದಾಯ.
ಅದರೆ ರಾಮಾಯಣ ಮಹಾಭಾರತಗಳನ್ನು ಕಾವ್ಯಕೋಟಿಗೇ ಸೇರಿಸಬೇಕು. ಅನಂದವರ್ಧ
ನನು ಇವುಗಳನ್ನು ಕಾವ್ಯಗಳಂತೆಯೇ ಪರಿಗಣಿಸಿ ಇವುಗಳ ಮುಖ್ಯ ರಸವೇನೆ೨ದು ವಿಚಾರ
ಮಾಡಿದ್ದಾನೆ (ಧ್ವನ್ಯಾ., ಪು. ೨೩೭-೩೯).
6 ಈ ""ಶಬ್ದ ಪ್ರಧಾನ,” " ಅರ್ಥಪ್ರಧಾನ '' ಎಂಬ ಮಾತುಗಳು ಮೊದಲು ಕಾಣ
ಬರುವುದು ಭಟ್ತನಾಯಕನ ವಾಕ್ಯಗಳಲ್ಲಿ (ಅವನ್ನು ಹಿಂದಿನ ಅಥ್ಯಾಯದಲ್ಲ ಪು. ೧೧೩ರಲ್ಲಿ
ಉದಾಹರಿಸಿದ್ದೆ (ವೆ). ಅವನ ಮತದಂತೆ ಶಾಸ್ತ ವೆಂದರೆ ವೇದ. "" ಆಖ್ಯಾನ '' ಪು ಪುರಾ
ಣಇದಿಗಳನ್ನು ಒಳಕೊಳ್ಳುತ್ತದೆ. ಅವನು “ವ್ಯಾಪಾರ್ ಪ್ರಧಾನ '' ವೆಂದು ಕಡೆದ ಕಾವ್ಯ
ವನ್ನು ಧೃನಿಪಕ್ಷದವರು "" ಧ್ವನಿಪ್ರಧಾನ '' ಎನ್ನುತ್ತಾರೆ. ಭಟ್ಟನಾಯಕನ ಮಾತು
ಗಳನ್ನೇ ಉಪಖೋಗಿಸಿಕೊಂಡು ಈಚಿನ ಅಲುಕಾರಿಕರು ಬೇರೆ ಬೇರೆ ರೀತಿಯಾಗಿ ನಿರೂಖ
ಸುತ್ತಾರೆ. ಉದಾಹರಣಿಗೆ, " ಎಕಾವಳಿಳ, : ೪.೬; "ಪ್ರತಾಸರುದ್ರೀಯ', 1. ೮. ಇವ
ರಿಗೆ ಮೊದಲೇ ಅಭಿನವಗುಪ್ತನು "" ವ್ಯಾಪಾರೋ ಯದಿ ಧೃನನಾತ್ಮಾ ರಸಸ್ವಭ :ವಃ ತನ್ನಾ
ಪೂರ್ವಮುಕ್ತಂ '' ಎಂದು ಹೇಳಿದ್ದನು (ಧೃನ್ಯಾ. ಲೋಚನ, ಪು. ೨೭).
೮. ವಿಷಯ ಪ್ರವೇಶ ೧೨೭
ದೇರಿಸಿದರೂ ಸರಿಯೆ, ಅದರ ವಿಷಯವು ಪಾರಲೌಕಿಕಜ್ಜಾ ನವಾದ ಕಾರಣ
ಆದರ ಮಾತನ್ನು ಇಲ್ಲ ಕೈಬಿಟ್ಟರೂ ಸರಿಯೆ, ಒಟ್ಟಿನ ಮೇಲೆ ವಾಜ್ಕಯ
ದಲ್ಲಿ ಶಾಸ್ತ್ರ, ಕಾವ್ಯ ಎಂದು ಎರಡೇ ಮುಖ್ಯಭಾಗಗಳನ್ನು ಇಟ್ಟುಕೊಂಡು?
ii ಇರುವ ಮತ್ತೆ ಕೆಲವು ವ್ಯತ್ಯಾ ಸಗಳನ್ನು ಗಮನಿಕಬಹುದು.
ಲ ಪರ್ಶ್ಯನೀ ಗಿರೋ ದೇವಃ ಶಾಸ್ತ ೦ ಚ ಕವಿಶರ್ಮ ಚ!
ಬ್ಲೋಪಟ್ಲ೦ ತಯೋರಾದ ಪ ತಿಥೋದ್ರ ನವೇ ೨ತವಂ I>
(ವಿಗೆ ಮಾರ್ಗಗಳು ರಡು; ಒಂದು ಶಾಸ್ತ್ರ, ಇನ್ನೊಂದು
ವ್ಯ. ಇ ಸತ ಮೊದಲನೆಯದು ಪ ಜ್ಞೆಯಿಂದ ಜನಿಸಿದ್ದು; ಕೊನೆಯದು
ತಿಭೆಯಿಂದ ಉದ್ಭನಿಸಿದ್ದು.'' ಭಟ್ಟ ತೌತನದೆಂದೇ ತೋರುವ ಈ ಉಕ್ತಿ
ಶಾಸ್ತ್ರಕಾವ್ಯ ಗಳಿಗಿರುವ ಭೇದವನ್ನು ಸ್ಪಷ್ಟವಾಗಿ ನಿರ್ದೇಶಿಸುತ್ತದೆ.
-~
¢
ವಲ
ಹ ಟಿ
ಆ (೭4 ತ್ಸ
“ಪ್ರಜ್ಞೆ” ಂಡಕೆ ಅರಿಯುವ ಶಕ್ತಿ. ಹಿಂಡೆ ಆದದ್ದನ್ನು ನೆನೆಯುವುದು
ಸೆ ಈಗ ನಡೆಯುವುದನ್ನು. ಪರಿಶೀಲಿಸುವುದು “ಬುದ್ದಿ”; ಮುಂದೆ
ಆಗುವುದನ್ನು ಊಪಿಸುವುದು "" ಮೆತಿ", ನಮ್ಮವರ ಮತದಂತೆ ಈ
ತ್ರಿಕಾಲದ ವಿಷಯವನ್ನೂ ಪ್ರಜ್ಞೆ ಒಳಕೊಳ್ಳುತ್ತದೆ.' ಶಾಸ್ತ್ರದಲ್ಲಿ ವ್ಯವಹರಿ
ಸುವ ಪ್ರಜ್ಞೆಯೆಂಬುದು ವಿಚಾರ, ಅನುಶೀಲನ, ಊಹೆ, ಪರೀಕ್ಷೆ--ಈ
ಮೊದಲಾದ ದಾರಿಯಲ್ಲ, ವಿಂದರೆ ಮುಖ್ಯವಾಗಿ ವಿಭಜನೆಯ ದಾರಿಯಲ್ಲಿ,
ಹೊರಡುತ್ತದೆ. ಇದರಲ್ಲಿ ಮಾನವನ ಬುದ್ಧಿಯ ಕಾರ್ಯವೇ ಬಹಳ; ಚಿತ್ತ
ವೃತ್ತಿಯ ಉದ್ರೇಕಕ್ಕೆ ಇಲ್ಲ ಅವಕಾಶವಿಲ್ಲ. ಕಾವ್ಯದಲ್ಲ ಇದೆಲ್ಲ ವ್ಯತ್ಯಾಸ
ವಾಗುತ್ತದೆ. ಇಲ್ಲಿಯೂ ಅರಿವು ಉಂಟೆಂಬುದು ನಿಜ; ಆದಕಾರಣ
ಇಪ್ಯಕ್ಕೆ ಬೀಜವಾದ ಪ್ರತಿಭೆಯೂ ಒಂದು ರೀತಿಯಲ್ಲಿ ಪ್ರಜ್ಞೆಯೇ.!?
ಆದರೆ ಇದು ಉದಿಸುವುದು ಚಿತ್ತವೃತ್ತಿ ಪ್ರಧಾನವಾಗಿದ್ದಾಗ, ಇದು
ಕೆಲಸ ಮಾಡುವುದು ಸಂಖ್ಲೋಜನೆಯ ಮಾರ್ಗದಲ್ಲಿ; ಇದರ ಗಮನವೇ
: ರಾಜಶೇಬರನ ಕಾವ್ಯವಿಸಾಮಾಂಸೆಯಲ್ಲ ನಮಗೆ ಕಾಣುವುದು ಐದೇ ವಿಭಾಗ:
"(ಇಹ ಶಿ ವಾದ್ಮಿಯು ಉಭಯ -ಶಾಸ್ತೆ WS ಕಾವ್ಯಂಚ..... ತಚ್ಚ ದ್ವಿಧಾ.
ಅಪೌರುಷೇಯಂ' ಪೌರುಸೇಯಂ ಚ. ಅಪೌರ: ಷೇಯಂ ಶತಿ '' (ಪು. ೨).
* ಕಾಪ್ಯಪ್ರಕಾಶವ "ಸಂಪ್ರದಾಯಪ್ರಕಾಶಿನೀ'. ವ್ಯಾಖ್ಯಾನ, ಪು. ೧೩ರಲ್ಲಿ
ಉದಾಹ ತಾಗಿದೆ (T. S. Series):
? ಸ್ಮೃತಿಷ ಲಪ ಮತಿರಾಗಾಮಿಗೋ ಚರ್ |
ಬುನ್ನಿ ಸ್ತಾತ್ಕಾಲಿಕೀ ಜ್ಲೇಯಾ ಪ್ರಜ್ಞಾ ತ್ರೊಕನಲಕಿ ಮತನ! (ಮೇಲಿನದೇ, ಪು.೧೨)
ರಾಜಕೇರನು “ ಬುದ್ದಿ '' ಯನ್ನು ಜಾತಿವಾಚಕವಾಗಿಟು, ಕೊಂಡು ಅಪರ್ಣ ಲ್ಲಸ್ಕ್ಯೃತಿ, ಮತಿ,
ಹ್ಹಾ ಎಂಬ ವಿಭಾಗಗಳನ್ನು ಕದ್ರಿ ಸುತ್ತಾನೆ (ಕಾವ ವಿಜಮಾಂಸಾ, ಪ್ರ.”೧೦).
10 « ಪ್ರಜ್ಞಾ ನಸನವೋಲ್ಲೆ ್ಲೇಖಶಲನ್ನೀ ಪ್ರತಿಭಾ ಮತಾ'' (ಭಟ್ಟ ಕತರ ಇ ಇಕ್ಯ).
೧೨೮ ಭಾರತೀಯ ಕಾವ್ಯವಿಸಾಮಾಂಸೆ
ಬೇರೆ. ಆದಕಾರಣ ಶಾಸ್ತ್ರ ರಚನೆಗೆ ಬೇಕಾಗುವ ಪ್ರಜ್ಞೆಯೂ ಕಾವ್ಯರಚನೆಗೆ
ಜನನಿಯಾದ ಪ ್ರತಧೆಯೂ ವಸ್ತುತಃ ಅತಿಭಿನ್ನ ವಾಗುತ್ತ ವೆ.
ಇನ್ನು ತಾಸ್ಟ್ರಕಾವ್ಯಗಳ ಗುರಿಯೂ ಬೇರೆ. ಶಾಸ್ತ್ರದ ಉದ್ದೇಶವು
ತತ್ತ್ಯಪ್ರತಿಪಾದನೆ. ಇದು ಸತ್ಯ, ಇದು ಅಸತ್ಯ ಎಂದು ಒರೆಹಚ್ಚಿ ನೋಡು
ಚೇ ಇದರ ಕಾರ್ಯ. ಇಲ್ಲ ನಿರ್ಣಯವು ತಪಾ ಿಗದಿರುವುದಕ್ಕೊೋಸ್ಕರ
ಪ್ರತ್ಯಕ್ಷ, ಆಸಿತ ಮೊದಲಾದ ಪ ಶಮಾಣಗಳನ್ನು ಹೆಜ್ಜೆಹೆಜ್ಜೆಗೂ ಅವ
Ae ಹೀಗೆ, ಶಾಸ್ತ್ರ ದಿಂದ ತಿಳಿಯುವ ವಿಷಯವು 'ಫರಿಯೆನಿಸ
ಬೇಕಾದರೆ, ಗ್ರಾಹ್ಯವಾಗಬೇಕಾದರೆ, ತನ್ನಿಂದ ಹೊರಗಿರುವ ಪ್ರಮಾಣ
ಗಳ ಪರೀಕ್ಷೆಗೆ ಒಳಪಡಬೇಕು. ಆದರೆ ಇಲ್ಲಿ ಕಾವ್ಯದ ಬಗೆಯೇ ಬೇರೆ
ಕಾವ್ಯದ ಗುರಿ ರಸಾನುಭವ. ಅನುಭವಕ್ಕೆ ಅನುಧವವೊಂದೇ ಪ ಪ್ರಮಾಣ.
ತನಗೆ ಅದು ದೊರೆತರೆ ಉಂಟು, ಇಲ್ಲವಾದರೆ ಇಲ್ಲ. ಅನುಭವ ಪಡೆದ
ವನ ಮುಂದೆ ಬೇರೊಬ್ಬರು ಬಂದು ಅದು ಇಲ್ಲವೆಂದು ಎಪ್ಪು ಯುಕ್ತಿ
ಯುಕ್ತವಾಗಿ ಪ್ರತಿಪಾದನೆ ಮಾಡಿದರೂ ತನ್ನ ಅನುಭವ ಮಿದ್ಯವೆಂದು ಅವನು
ಒಪ್ಪುವುದಿಲ್ಲ. ಈ ಅನುಭವ ದೊರೆಯದಿದ್ದ ವನಿಗೆ ಯಾರೆಪ್ಟು ತಪಥಮಾಡಿ
ಹೇಳಿದರೂ ಅದರಲ್ಲಿ ನಂಬಿಕೆ ಹುಟ್ಟುವದಿಲ್ಲ. ಹೀಗೆ ಕಾವ್ಯಾನುಭವಕ್ಕೆ
ಪ್ರಮಾಣಾಂತರದ ಹಂಗಿಲ್ಲ. ಅನುಭವವೇ ಅದರ ಸತ್ಯ. ಕಾವ್ಯದಲ್ಲಿ
ತಿಳಿಯಬರತಕ್ಕದ್ದು ದಿಟವೇ ಸುಳ್ಳೇ ಎಂಬುದನ್ನು ನಿರ್ಣಯಿಸಲು ಪ್ರತ್ಯಕ್ಷ
ಅನುಮಾನಾದಿ ಪ್ರಮಾಣಗಳನ್ನು ಯಾರಾದರೂ ತಂದಡೊಡ್ಡಿದರೆ ಅವರು
ಉಪಹಾಸಕ್ಕೆ ಗುರಿಯಾಗುತ್ತಾರೆ.'' ರಸಾನುಭವದೊಂದಿಗೆ, ಅದರ ಮೂಲ
ಕವೇ, ತತ್ತ್ಯಜ್ಞಾನಾದಿಗಳು ವಾಚಕನಿಗೆ ಬರಬಹುದು. ಆದರೆ ಅವೆಲ್ಲ ಆನ:
ಪಂಗಿಕ ಫಲಗಳು. ಅವು ಬರಲಿ, ಬಾರದಿರಲಿ; ; ಕಾವ್ಯತ್ಯಕ್ಕೆ ಚ್ಯುತಿಯಿಲ್ಲ.
ಶಾಸ್ತ್ರಕಾವ್ಯಗಳ ಗುರಿಯೂ ದಾರಿಯೂ ಬೇರೆಯಾದ ಮಾತ್ರಕ್ಕೆ
ಶಾಸ್ತ್ರದ ವಸ್ತುವಿಗೆ ಕಾವ್ಯದಲಿ ಪ್ರವೇಶವಿಲ್ಲದೆ ಹೋಗಿಲ್ಲ. ಕಾವ್ಯಕ್ಕೆ
ವಿಪಯವಾಗದ ವಸ್ತು ಯಾವುದುಂಟು ? ಶಾಸ್ತ್ರದ ಸಂಗತಿಗಳೂ ಇಲ್ಲ
ಬೇಕಾದಷ್ಟು ಬರಬಹುನು. ಆದರೆ ಕಾವ್ಯಮಂದಿರವನ್ನು ಹೊಕ್ಕ ಕೂಡಲೆ
ಅವುಗಳ ಬಣ್ಣವೇ ಬದಲಾಯಿಸುತ್ತದೆ. ಅಲ್ಲಿ ಗ್ರಹಿಸುವುದಕ್ಕೆ ಕಠಿನ ಕಾ?
7“ ಕಾವ್ಯವಿಷಯೇ ಚ ವ್ಯಂಗೃಪುತೀತೀನಾಂ ಸತ್ಯಾಸತ್ಯನಿರೂಪಣಸೃ ಅಪ್ರಯೊ।
ಜಕತ್ಚಮೇವೇತಿ ತತ್ರ ಪ್ರಮಾಣಇಂತರವ್ಯಾಪಾರಪರೀಕ್ಷಾ ಉಪಹಾಸಾಯ್ಕಾವ ಸಂತಿ
ದೃತ್ವೇ.'” (ದೈನ್ಯಾ., ಪು. ೨೦೩.)
೮. ವಿಷಯ ಪ್ರವೇಶ ೧೨೯
ತಲೆನೋವು ಬರಿಸುತ್ತಿದ್ದವು ಇಲ್ಲಿ ಆರ್ದ್ರವಾಗಿ ಆಹ್ಲಾ ದವನ್ನುಂಟು
ಮಾಡುತ್ತಷೆ. ಅಲ್ಲಿ ತುಪ್ಕವಾಗಿದ್ದುದೆಲ್ಲ ಇಲ್ಲಿ ಮನೋಹರವಾಗುತ್ತದೆ.
ಈ ಮಾರ್ಪಾಡನ್ನು ರಾಜಶೇಖರನು ಒಂದು ಸುಂದರವೂ ಸತ್ಯವೂ ಆದ
ಉಪಮೆಯಿಂದ ಸ್ಪಪ್ಪಪಡಿನಿದ್ದಾನೆ :
ಯಾಂಸ್ತರ್ಕಕರ್ಕಶಾನರ್ಥಾನ್ ಸೂಕ್ತಿಪ್ಯಾದ್ರಿಯತೇ ಕವಿಃ |
ಸೂರ್ಯಾಂಶವ ಇಷೇಂದ್‌ೌ ತೇ ಕಾ೦ಂಚಿದಂಚ೦ತಿ ಕಾಂತತಾಂ ॥
(ಕಾವ್ಯಮಾಮಾಂಸಾ, ಪು. ಎ೮)
« ತರ್ಕಕರ್ಕತವಾದ ಯಾವ ಅರ್ಥಗಳಿಗೆ ಕವಿ ತನ್ನ ಸೂಕ್ತಿಗಳಲ್ಲಿ
ಆದರದಿಂದ ಎಡೆಗೊಡುತ್ತೂನೋ, ಅವೆಲ್ಲ ಚಂದ್ರಮೆಂಡಲದಲ್ಲ ಬಿದ್ದ
ಸೂರ್ಯಕಿರಣಗಳೆಂತೆ ಅತಿಶಯವಾದ ರಮಣ್ಣೀಯತೆಯನ್ನು ಹೊಂದುತ್ತವೆ.'`
ಇದೇ ಕಾವ್ಯದ ಮೇಲ್ಮೆ. ಕಾವ್ಯದ ಸ್ಪರ್ತದಲ್ಲೇ ಈ ಸೊಗಸು ಇರುವುದ
ರಿಂದ, ತಾಸ್ತ್ರವೆಂದರೆ ಪಿಮ್ಮೆಟ್ಟುವ ಸುಶುಮಾರಮತಿಗಳು ಕೂಡ ಅದೇ
ವಿಷಯವನ್ನು ಕಾವ್ಯರೂಪದಲ್ಲ ಉಲ್ಲಾಸದಿಂದ ಕೇಳುತ್ತಾರೆ.
ತಾಸ್ತ್ರ ವೂ ಕಾವ [ವೂ ಒಂದೇ ಭಾಷೆಯ ಎರಡು ಪ ಪ್ರವೃತ್ತಿ ಪ್ರಕಾರ
ಗಳು ; ಒಂದೇ ವಾಜ್ಮಯದ ಏರಡು ಶಾಖೆಗಳು. ಒಂದರ ಗುಣಲೇಶದ
ಸ್ಪರ್ಶವೇ ಇನ್ನೊಂದಕ್ಕಿಲ್ಲದಂತೆ, ಒಂದರ ಪ್ರಭಾವಕ್ಕೆ ಇನ್ನೊಂದು
ಸ್ವಲ್ಪವೂ ಸಿಕ್ಕದಂತೆ, ಇರುವುದು ಹೇಗೆ ತಾನೆ ಸಾಧ್ಯ ? ತಾಸ್ತ್ರ, ಕಾವ
3
ಎಂಬುದು ಆದರ್ಶ ದೃಷ್ಟಿಯಿಂದ ಮಾಡಿದ ತುದ್ಧವಿಭಾಗ. ವ್ಯವಹಾರದಲ್ಲಿ,
ಕೇವಲ ಶುಪ್ಶ ಶಾಸ್ತ್ರದೊಳಗೆ ಕೂಡ ಉಕ್ತಿಸೌಂದರ್ಯ ಕೆಲವು ಮಟ್ಟಿಗೆ
ಕಾಣದೆ ಇರುವುದಿಲ್ಲ ; ಕಾವ್ಯದಲ್ಲಿಯೂ ಶಾಸ್ತ್ರದ ವಿಷಯ ಸ
ಮಾರ್ಪಡದೆ ಒಮ್ಮೊಮ್ಮೆ ಉಂಡುಂಡೆಯಾಗಿ ಬಂದಿರುವುದುಂಟು. ಈ
ಅನಿವಾರ್ಯ ವಾದ ಸಂಗತಿಯನ್ನು ನಾವು ನೆನಪಿನಲ್ಲಡಬೇಕು.':
ಡೆ ಕ್ರ), ಕಾವ್ಯ ಎಂಬ ಎರಡು ವಿಭಾಗಗಳ ಜೊತೆಗೆ ಕ್ಷೇಮೇಂದ್ರನು "ಶಾಸ್ತ್ರ
ಕಾವ್ಯ," ಸಕಾ '' ಎಂಬ ಇನ್ನೆರಡನ್ನು ಸೇರಿಸುತ್ತಾನೆ (ಸುವೃತ್ತತಿಲಕ, ಬಃ ೪).
“ ಶಾಸ್ತ್ರಕಾವ್ಯ ” ದಲ್ಲ ಫರ್ಪಾರ್ಥಕಾಮುಮೋಜ್ಞೆಗಳಿನ್ನು ಉಪಡೇಶಿಸುವುದೇ ಪ್ರುಧಾನೋ
ದ್ವೇಶ ; ಇದರ ಶೆ]ಲಿ ಸರಸವಾಗಿರಬೇಕೆ೨ದು ಕ್ಷೇಮೇಂದ್ರ ನ ಅಭಿಪ್ರಾಯವೆಂದು ತೋರು
ತುದೆ. ವ್ಯಾಕರಣ, ಅಲಂಕಾರ, ಛಂದಸ್ಸು ಈ ಬಗೆಯ ಲಕ್ಷಣಶಾಸ್ರ ರ್ರ ಗಳ ವಸ್ತುವಿಗೆ
ಲಕ್ಷ್ಯವಾಗಬೇಕೆಂಬ ಉದ್ದೇಶದಿಂದ ರಚಿಸಿದ್ದು " ಕಾವ್ಯ ಶಾಸ್ತ ೨; ಇದಕ್ಕೆ “ಧೆ,
ಕಾವ್ಯ ' ಒಂದು ನಿದರ್ಶನ ಈ ಕೊನೆಯ ಜಾತಿಗೆ ಸೇರುವ ಗ್ರಂಥಗಳು ನಮ್ಮ ಕಾಲದಲ್ಷೆ
ವಿರಳ, ಅನಾವಶ್ಯಕವೂ ಹೌದು. ಮೂರನೆಯ ಬಗೆ ಹೆಚ್ಚಾ ಗರೆಂದು ಹಾಡ್ಯೊಸೆಬಹುದು.
ಶಾಸ್ತ್ರ ಕವಿತ್ವ ಕಾವ್ಯಕವಿತ್ವ ಎಂಬ ಶಬ್ದಗಳನ್ನು ಕನ್ನ ಡ ಕವಿಗಳೂ ಉಪಯೋಗಿ
ಸುತ್ತಿದ್ದರು. ಶ್ರೀಧರಾಚಾರ್ಯನ (ಕ್ರಿ. ಶ. ೧೮೪೯) ಬೊತಕೆತಿಲಕದಲ್ಲಿ ಇವು ಬಂದಿವೆ.
(ಕರ್ಣಾಟಕ ಕವಿಚರಿತೆ, ], ಪು. ೭೫ ನೋಡಿ.)
9 KM.
೧೩೦ ಭಾರತೀಯ ಕಾಷ್ಯಮಾಮಾಂಹೆ
ನಮ್ಮ ಪ್ರಕೃತ ವಿಷಯವಾದ ಕಾವ್ಯದ ಕಡೆಗೇ ಇನ್ನು ತಿರುಗೋಣ.
ಇದಕ್ಕೆ "" ಸಾಹಿತ್ಯ'' ವೆಂಬ” ಇನ್ನೊಂದು ಹೆಸರೂ ಉಂಟು. ಈಗಿನ
ಕಾಲದಲ್ಲಿ ಪಾಶ್ಚಾ ತ್ಯ ಪದ್ಧತಿಯನ್ನನುಸರಿಸಿ, ಕಥೆ, ಕವನ, ನಾಟಕ ಮೊದ
ಲಾದ ಗದ್ಯಪದ್ಯಾತ್ಮಕವಾದ ಗೃಂಥರಾತಿಗೆಲ್ಲ ಸಾಹಿತ್ಯವೆಂಬ ಒಟ್ಟು
ಹೆಸರನ್ನೂ, ಅದರಲ್ಲಿ ಪದ್ಯರೂಪವಾಗಿರುವ ಭಾಗಕ್ಕೆ ಮಾತ್ರ ಕಾವ್ಯ, ಕವನ,
ಕವಿತೆ ಈ ಮೊದಲಾದ ಹೆಸರನ್ನೂ ಅನ್ಯಯಿಸುವ ರೂಢಿ ಬರುತಿದೆ. ಆದರೆ
ಹಿಂದಿನ ಲಕ್ಷಣಕಾರರು ಈ ಭೇದಪೇನನ್ನೂ ಪರಿಗಣಿಸುವುದಿಲ್ಲ. ಅವರಿಗೆ
ಪದ್ಯದಲ್ಲಿರುವುದೂ ಕಾವ್ಯವೇ, ಗದ್ಯದಲ್ಲರುವುದೂ ಕಾವ್ಯವೇ, ಚಂಪುವಿನೆಂಠೆ
ಎರಡನ್ನೂ ಮಿಶ್ರವಾಗಿ ಉಳ್ಳದ್ದೂ ಕಾವ್ಯವೇ.'' ನಾಟಕದಲ್ಲಿ ಗದ್ಯಪದ್ಯ
ಗಳು ಜೊತೆಗೂಡಿಯೇ ಬರುವವಪ್ಪೆ; ಅದೂ ಕಾವ್ಯವೇ. ಛಂದೋಬದ್ಧ
ವಾಗದಿದ್ದ ಮಾತ್ರಕ್ಕೆ ಕಾವ್ಯತ್ವಪೇ ಅಳಿಯುವುದೆಂದು ಅವರು ಭಾವಿಸ
ಲಿಲ್ಲ. " ರಫವಂಶ' ದಂತೆ, " ಶಾಕುಂತಲ ' ದಂತೆ, " ಕಾದಂಬರಿ ' ಯೂ
ಅವರಿಗೆ ಶ್ರೇಷ್ಠಕಾವ್ಯ. ಯಮಕ, ಅನುಪ್ರಾಸ ಮೊದಲಾದ ಶಬ್ಹಾಲಂಕಾರ
ಗಳ ಹಾಗೆ ಛಂದಸ್ಸೂ ಕಾವ್ಯಕ್ಕೆ ಒಂದು ಅಲಂಕಾರ ಮಾತ್ರವೆಂದೂ
ನಿಯತಗುಣವಲ್ಲವೆಂದೂ ಅವನು ಭಾವಿಸಿದ್ದ ಹಾಗೆ ಕಾಣುತ್ತ ಸೆ.
ಛಂದಸ್ಸಿನ ಸ್ಥಾನವು ಪಾಶ್ಚಾತ್ಯ ಕಾವ್ಯಚರ್ಚೆಗಳಲ್ಲಿ ಅತಿಪ್ರಮುಖವಾದ
ವಿಷಯ; ಇದನ್ನು ಕುರಿತು ಬಲು ಹಿಂದಿನಿಂದಲೂ ವಾದಘರ್ಷಣ ಅಲ್ಲಿ ನಡೆ
ದಿಡೆ. ಭಾರತೀಯ ಲಕ್ಷಣಶಾಸ್ತ್ರ ದಲ್ಲಾ ದರೆ, ಕಾವ್ಯತತ್ತ 5 ವಿಚಾರದಲ್ಲಿ
ಛಂದಸ್ಸಿನ ಹೆಸರೇ ಬರಲಿಲ್ಲ. ಯಾವುದಾದರೂ ಒಂದು ವೃತ್ತವು ರಸಾಭಿ
ವ್ಯಕ್ತಿ ಗೆ ಉಚಿತವೋ ಅನುಚಿತವೋ ಆಗಬಹುದೆಂದು ಅವರು ಅರಿತಿದ್ದರು;
ಚ *ಪಹಿತ'' ಎಂದರೆ ಜೊತೆಗೂಡಿದ್ದು ; ಇದರ ಭಾವವೇ "" ಸಾಪಿಶ್ಯ''. ಕಾವ್ಯ
ದಲ್ಲಿ ತಬ್ಮಾರ್ಹಗಳು ಜೊತೆಗೂಡಿರುವುದರಿಂದ ಸಾಹಿತೃವೆಂಬ ಹೆಸರು ಇದಕ್ಕೆ ರೂಢಿಯಾ
ದಂತೆ ತೋರುತ್ತದೆ. “ ಶಬ್ಯೂರ್ಥೌ್ ಸಹಿತೌ ಕಾವ್ಯಂ `` ಎಂಬ ವಾಕ್ಯವನ್ನು ಹೋಲಿಸಿ.
ಇದರ ವಿಚಾರ ಮುಂದಿನ ಅಧ್ಯಾಯದಲ್ಲ ಕೆಲವು ಮಟ್ಟಿಗೆ ಬರುತ್ತದೆ,
ಕ್ಯ 4 ಪದ್ಯೆಂ ಗದ್ಯಂ ಚ ಖಿಶ್ರೆಂ ಚ ತತ್ ತ್ರಿಥ್ಯೊವ ವ್ಯವಸ್ಸಿತಂ ಥಿ? (ಕಾವ್ಯಾದರ್ಶ ?
1. ೧೧).
15 ಉದಾಹರಣಿಗೆ, ಕಾವ್ಯಪ್ರಕಾಶದ ಈ ವಾಕೃವನ್ನು ನೋಡಿ... ಹಾಸ್ಯ
ವ್ಯಂಜಕಮೇತದ್ವೃತ್ತೆಂ'”' (೪. ೫೩ ವೃತ್ತಿ).
ಕ್ಷೇಮೇಂದ್ರನು " ಸುವೃತ್ತ ತಿಲಕ 'ದ ೩ನೆಯ ವಿನ್ಯಾಸದಲ್ಲ ಯಾವ ಯಾವ ವೃತ್ತ
ಗಳನ್ನು ಎಲ್ಲೆಲ್ಲ ಉಪಯೋಗಿಸಬೇಕೆಂದು ಕೆಲವು ಮಟ್ಟಿಗೆ ವಿಚಾರ ಮಾಡಿದ್ದಾನೆ. ಕೆಲವು
ವೃತ್ತಗಳಿಗೂ " ಗುಣ '' ಗಳಿಗೂ ಇರುವ ಸಂಬಂಧವನ್ನು ಕುರಿತು ನಾಲ್ಕು ಮಾತು ಹವು
ಚಂದ್ರನ ' ಕಾವ್ಯಾನುಶಾಸನ' ದೆ 19. ೧ರ ಮೇಲಿನ ವ್ಯಾಖ್ಯಾನದಲ್ಲಿ ಬಂದಿದೆ. ಯಾವ
ರಸಕ್ಕೆ ಯಾವ ಛಂದಸ್ಸು ಹೊಂದುವುದೆಂಬುದನ್ನು ಕುರಿತ ಸಂಕ್ಷಿಪ್ತ ವಿವೇಚನೆ ಭರತನ
ನಂಟ್ಯ ಶಎಸ್ತೆ ದಲ್ಲಿಯೇ ತಲೆದೋರಿದೆ (1. ೧೧೪ಮುಂದೆ).
೮. ವಿಷಯ ಪ್ರವೇಶ ೧೩೧
ಆದರೆ ಈ ವಿಷಯದ ವಿವೇಚನೆಯನ್ನು ಮುಖ್ಯವಾಗಿ ಛಂದಶ್ಕಾಸ್ತ್ರಕ್ಕೆ
ಬಿಟ್ಟರು. ಈ ಸಂದರ್ಥದಲ್ಲ ಗಮನಿಸತಕ್ಕ ಇನ್ನೊಂದು ವಿಷಯವುಂಟು.
ಸಂಸ್ಕೃತದಲ್ಲಿ ಛಂದಸ್ಸಿಗೆ ವಿಧವಿಧವಾದ ಉಪಖೋಗವಿತ್ತು. ಗದ್ಯಕ್ಕಿಂತ
ಪದ್ಯವನ್ನು ನೆನಪಿಟ್ಟು ಕೊಳ್ಳುವುದು ಸುಲಭ. ಆದಕಾರಣ ಕಾವ್ಯಗಳನ್ನು
ಮಾತ್ರವಲ್ಲದೆ, ತರ್ಕ, ಖಾಮಾಂಸಾ, ವೈದ್ಯ, ಜ್ಯೋತಿಷ ಮೊದಲಾದ
ಶಾಸ್ತ್ರಗಳನ್ನು ನಿರೂಪಿಸುವುದಕ್ಕೂ ಛಂದೋಬದ್ಧವಾದ ಭಾಷೆಯನ್ನೇ
ಸಾಮಾನ್ಯವಾಗಿ ಬಳಸುತ್ತಿದ್ದರು; ಕೋಶ ನಿಘಂಟುಗಳೂ ಪದ್ಯರೂಪ
ದಲ್ಲೇ ರಚಿತವಾಗುತ್ತಿದ್ದುವು. ಹೀಗೆ ಛಂದಸ್ಸಿನ ವ್ಯಾಪ್ತಿ ಅತಿ ವಿಶಾಲ
ವಾಗಿದ್ದ ಕಾರಣ, ಕಾವ್ಯಕ್ಕೆ ಮಾತ್ರ ಛಂದಸ್ಸು ಖಾಸಲೆಂದಾಗಲಿ
ಛಂದಸ್ಸಿದ್ದ ಹೊರತು ಕಾವ್ಯವಾಗದೆಂದಾಗಲಿ ಲಕ್ಷಣಕಾರರು ಭಾವಿಸಲು
ಆಗಲಿಲ್ಲವೆಂದು ತೋರುತ್ತದೆ.
ಆದರೂ, ಕವಿಗಳ ಒಲವೆಲ್ಲ ಪದ್ಯದ ಕಡೆಗೇ ಇತ್ತು. ಸಂಸ್ಕೃತದಲ್ಲೂ
ಅದನ್ನು ಅನುಸರಿಸುವ ದೇಶಭಾಷೆಗಳಲ್ಲೂ ಪದ್ಯಕಾವ್ಯಗಳು ಅಸಂಖ್ಯವಾಗಿ
ಹುಟ್ಟಿ, ಗದ್ಯಕಾವ್ಯಗಳು ಅಕಿ ವಿರಳವಾಗಿರುವುದು ಇದಕ್ಕೆ ನಿದರ್ಶನ.
ಗದ್ಯಪದ್ಯ ವಿಮಿಶ್ರಿತವಾದ ನಾಟಕ, ಚಂಪು ಇವುಗಳಲ್ಲಿ ಕೂಡ ಭಾವವು
ಆಳವಾದಾಗಲೆಲ್ಲ ಗದ್ಯವನ್ನು ಬಿಟ್ಟು ಪದ್ಯವನ್ನು ಕವಿ ಆಶ್ರಯಿಸುತ್ತಾನೆ.
ಆರ್ದ್ರವಾದ ಭಾವವು ಕವಿಹೃದಯದಿಂದ ಛಂದೋಬದ್ಧವಾಗಿಯೇ ಹೊರ
ಹೊಮ್ಮುತ್ತಿದ್ದಿತು. ವಾಲ್ಮೀಕಿಯ ಶೋಕವು ಶ್ಲೋಕವಾಗಿ ಪರಿಣಮಿ
ಸಿದ್ದೇ ಇದಕ್ಕೆ ಸಾಕ್ಷ. ಕವಿಗಳಿಗೆ ಛಂದಸ್ಸಿನ ಪಕ್ಷಪಾತ ಎಪ್ಪ ರಮಟ್ಟಿ ಗಿದ್ದಿ
ತೆ೦ದರೆ, ಅವರು ಅಪೂರ್ವವಾಗಿ ಗದ್ಯವನ್ನು ಬರೆದಾಗಲೂ ಅದನ್ನು ಕೆಲವು
ಮಟ್ಟಿಗೆ ಲಯಾನುಗುಣವಾಗಿ ರಚಿಸುತ್ತಿದ್ದರು; ಒಮ್ಮೊಮ್ಮೆ, "" ವೃತ್ತ
ಗಂಧಿ'`ಯೇ ಮೊದಲಾದ ಬಗೆಗಳಲ್ಲಿ ಪದ್ಯದ ಛಾಯೆಯನ್ನೇ ಪೂರ್ಣ
ವಾಗಿ ತರುತ್ತಿದ್ದರು. ಪೀಗೆ "" ಕಾವ್ಯ '' ತಬ್ದವು ಗದ್ಯಪದ್ಯಗಳೆರಡಕ್ಕೂ
ಅನ್ಯಯಿಸಿದರೂ ಅದರ ಬಹುಪ್ರಧಾನವಾದ ಭಾಗವು ಪದ್ಯರೂಪದಲ್ಲೇ
ಇದೆ.
೯, ಕಾವ್ಯಲಕ್ಷಣಗಳು
px
ತಾನು ನಿರೂಪಿಸಲು ಕೈಕೊಂಡ ವಕ್ತುವಿನ " ಲಕ್ಷಣ''ವನ್ನು ಹೆಚ್ಚು
ಕಡಮೆಗಳಿಲ್ಲದಂತೆ ಹೇಳುವುದು ಶಾಸ್ತ್ರಕಾರನಿಗೆ ಆರಂಭದಲ್ಲಿಯೇ ಒದ
ಗುವ ಸಮಸ್ಯೆ, ಕೈಗೆ ಸಿಕ್ಕುವ, ಕಣ್ಣಿ ಗೆ ಕಾಣುವ ಭೌತವಸ್ತುಗಳ ಲಕ್ಷಣ
ಪನ್ನು ಈ ಎಷ್ಟೆಪ್ಟೋ ವಿವಾದಗಳು ಹುಟ್ಟುವಾ ವಾಗ, ಗ್ಗ ಅನುಭವ್ಯೆಕ
ಸಾಕ್ಷಿಕವಾದ ಕಾವ್ಯದ ಲಕ್ಷಣವನ್ನು ತಪ್ಪಿಲ್ಲದಂತೆ ಹೇಳಲು ಹೊರಡು
ವವನು ME, ಸರಿ. ಲಕ್ಷಣವು ವರ್ಣನೆಯು. ಇದರಲ್ಲಿ ಅತಿ
ವ್ಯಾಪ್ತಿ, ಅವ್ಯಾಪ್ತಿ ಮೊದಲಾದ ಹೋಪಷಗಳಿರಕೂಡದು; ಸಜಾತೀಯ
ಆ ಜು ಪ್ರಸ್ತುತವಿಷಯವನ್ನು ಗೆರೆಯೆಳೆದಂತೆ
ಪ್ರತ್ಯೇಕಿಸಬೇಕು ಹೀಗೆ ಕಲ್ಪಿಸತಕ್ಕ ಲಕ್ಷಣವು ಕಬ್ಬಿಣದ ಕಡಲೆಯಾಗದೆ
ಸ್ಫುಟವಾಗಿ ಅರ್ಥ ಕೊಡಬೇಕು. ಅಂತೂ ಲಕ್ಷಣಕರಣವು ತುಂಬ ತೊಡ
ಕಿನ ಕೆಲಸ. ಈ ಕಪ್ಪವನ್ನು ಅರಿತದ್ದರಿಂದಲೇ ಇರಬೇಕು, ನೆಮ್ಮ
ಆಲಂಕಾರಿಕರು ಮೊದಮೊದಲಲ್ಲ ಕಾವ್ಯಲಕ್ಷಣವನ್ನು ಶಾಸ್ತ್ರೀಯವಾಗಿ
ವಿಷ್ಕರ್ಷಿಸಿ ಒಂದು ವಾಕ್ಯದಲ್ಲಿ ಹಿಡಿದಿಡು ಸ ಪ್ರಯಾಸಕ್ಕೆ ಹೋಗಲಿಲ್ಲ.
«ಶಬ್ದಾ ರ್ಥೌ ನ ಸಹಿತೌ _ ಕಾವ್ಯ ೦ ("" ಶಬ್ಧಾರ್ಥಗಳು ಒಂದುಗೂಡಿ
ಕಾವ್ಯ”) `ಎಂದಿಪ ನ್ಟ ಹೇಳಿ ಹಿ ತೃಪ್ಲಿಪಟ್ಟನು. ""ಶರೀರಂ
ತಾವದಿಪ್ಪಾರ್ಥವ್ಯ ವೆಚ್ಚಿನ್ನಾ ಪದಾವಲ್ಲೀ'' ("" [ಕಾವ್ಯದ] ಶರೀರ
ವೆಂದರೆ ಇಪ್ಪವಾದ ಅರ್ಥವನ್ನುಳ್ಳ ಪದಸಮೂಸ'') ಎಂದು ಹೇಳಿ
ಕಾವ್ಯತರೀರವಿದೆಂದು ದಂಡಿ* ಸೂಚಿಸಿದನು. ವಾಮನನು " ಕಾವ್ಯ
ಶದ್ದೋ್ಯಯಂ ಗುಣಾಲಂಕಾರಸಂಸ್ಕೃತಯೋಃ ತಬ್ಬಾರ್ಥಯೋರ್ವ
ರ್ತತ್ರೇ '' ("ಕಾವ್ಯ ಎಂಬ ಶಬ್ದವು ಗುಣಾಲಂಕಾರಗಳಿಂದ ಪರಿಷ್ಕಾರ
ಹೊಂದಿದ ಶಬ್ಧಾರ್ಥಗಳಿಗೆ ಅನ್ವಯಿಸುತ್ತದೆ'') ಎಂದು ಒಂದು
1 ಭಾಮಹ : ಕಾಪ್ಯಾಲಂಕಣರ, |. ೧೬.
3 ದಂಡೀ : ಕಾವ್ಯಾದರ್ಶ, ;. ೧೦.
ಇಲ್ಲ “ಇಷ್ಟ'' ಎಂದರೆ ಪ್ರಿಯ, ರಮ್ಯ ಎಂದು ಅಪಾತತಃ ತೋರುತ್ತದೆ.
ಅದರೆ ಕಾವ್ಯಾದರ್ಶದ ಪ್ರಾಚೀನ ವ್ಯಾಖ್ಯಾನಕಾರರಿಬ್ಬರೂ ""ಇಪ್ಕವಿವಕ್ಷಿತ'' ಎಂದು
ಅರ್ಥವಮಾಡಿದ್ದಾರೆ. (ಎಂ. ರಂಗಾಚಾರ್ಯರ ಸಂಸ್ಕರಣವನ್ನು ನೋಡಿ.)
೧೩೨
೯. ಕಾವ್ಯಲಕ್ಷಣಗಳು ೧೩೩
ಕಡೆ? ಹೇಳಿ, ""ರೀತಿರಾತ್ಮಾ ಕಾವ್ಯಸ್ಯ'' (`"ರೀತಿಯೇ ಕಾವ್ಯದ ಆತ್ಮ'')
ಎಂದು ಇನ್ನೊಂದು ಕಡೆ" ಹೇಳಿದನು. ಆನಂದವರ್ಧನನು ಕೂಡ
ಒಂದು ಪರಿಷ್ಕೃತವಾದ ಕಾವ್ಯಲಕ್ಷಣವನ್ನು ಕೊಟ್ಟಿಲ್ಲ. "" ಕಾವ್ಯಸ್ಯಾತ್ಮಾ
ಧ್ವನಿಃ '' (""ಕಾವ್ಯದ ಆತ್ಮ ಧ್ವನಿ''), "" ಸಹೃದಯಹೃದಯಾಹ್ಞಾದಿ
ತಬ್ದ್ಧಾರ್ಥಮಯತ್ಚಮೇವ ಕಾವ್ಯಲಕ್ಷಣಂ '' ("" ಸಹೃದಯರ ಹೃದಯ
ವನ್ನು ಆಹ್ಲಾದಗೊಳಿಸುವ ಶಬ್ದಾರ್ಥಗಳಿಂದ ಪ್ರಚುರವಾಗಿರುವುದೇ
ಕಂವ್ಯಲಕ್ಷಣ''), ""ತಬ್ಧಾರ್ಥಯೋಃ ಸಾಪಿತ್ಯೇನ ಕಾವ್ಯತ್ವೇ....”' (""ತಬ್ದಾ
ರ್ಥಗಳು ಕೂಡಿ ಕಾವ್ಯವಾಗುವಲ್ಲ....'') *_ಪೀಗೆ ಅವನ ಕೃತಿಯಲ್ಲಿ ಅಲ್ಲಲ್ಲಿ
ಬರುವ ಮಾತುಗಳನ್ನು ಜೋಡಿಸಿಕೊಂಡು ಅವನಿಗೆ ಸಮ್ಮತವಾದ ಲಕ್ಷಣ
ವನ್ನು ಕಲ್ಪಿಸಿಕೊಳ್ಳಜೇಕಾಗಿದೆ. ಕಾವ್ಯಸ್ಟರೂಪವನ್ನು ತಿಳಿಸಲು ಹೊರಟ
ಬುದ್ಧಿಶಾಲಿ ಅದರ ಲಕ್ಷಣವನ್ನು ಸಾಮಾನ್ಯ ರೂಪದಲ್ಲಿ ಮೊದಲು ಹೇಳ
ಬೇಡವೆ? ಅದನ್ನು ಹೇಳದೆಯೇ ಅನಂದವರ್ಧನನು ವಿಷಯನಿರೂಪಣಿಗೆ
ಮುಂದುವರಿದಿರುವನೆಂದು ಮಹಿಮಭಟ್ಟನು ಆಕ್ಷೇಪಿಸಿಯೂ ಇದ್ದಾನೆ.
ಕಾವ್ಯಲಕ್ಷಣವನ್ನು ಶ್ರದ್ಧಾಪೂರ್ವಕವಾಗಿ ರಚಿಸಿ, ಅದರ
ಒಂದೊಂದು ಮಾತಿನ ಅರ್ಥವನ್ನೂ ಪ್ರಯೋಜನವನ್ನೂ ವಿವರಿಸಿ ಸಮರ್ಥಿ
ಸಿದ ಮೊದಲನೆಯ ಲಕ್ಷಣಕಾರನು, ನಮಗೆ ತಿಳಿದಿರುವಮಚ್ಟಿಗೆ, ಕುಂತಕ.
ಶಬ್ದಾರ್ಥಾ ಸಹಿತೌ ವಕ್ರಕನಿವ್ಯಾಪಾರಶಾಲಿನಿ |
ಬಂಧೇ ವ್ಯವಸ್ಥಿತೌ ಕಾವ್ಯಂ ತದ್ವಿದಾಹ್ಲಾದಕಾರಿಣಿ॥
(ಪಕ್ರೋಕ್ತಿಜೀವಿತ, ;, ೭)
""ವಕ್ರಕವಿವ್ಯಾಪಾರದಿಂದ ಕೂಡಿದ್ದೂ, ಬಲ್ಲವರಿಗೆ ಆಹ್ಲಾ ದವನ್ನುಂಟು
ಮಾಡತಕ್ಕದ್ದೂ ಆದ ಬಂಧದಲ್ಲಿ ವ್ಯವಸ್ಥೆ ಗೊಂಡ ಶಬ್ಧಾರ್ಥಗಳು ಒಟ್ಟಿಗೆ
ಕಾವ್ಯ''_ಈ ಲಕ್ಷಣವನ್ನು ಕುಂತಕನು ಕೊಟ್ಟು, ದೀರ್ಪವಾಗಿ
3 ವಾಮನ : ಕಾವ್ಯಾಲಂಕಾರ ಸೂತ್ರವೃತ್ತಿ, 1 ೧. ೧ವೃತ್ತಿ.
“ಗುಣವದಲಂಕೃತೆಂ ಚಿವಾಕ್ಯಮೇವ ಕಾವ್ಯಂ'' ಎಂಬ ರಾಜಶೇಖರನ ಉಕ್ತಿಯನ್ನು
ಇದರೊಂದಿಗೆ ಹೋಲಿಸಿ (ಕಾವ್ಯಮಾಮಾಂಸಾ, ಪು. ೨೪),
1 ಹಾಮನ : ಕಾವ್ಯಾಲಂಕಾರ ಸೂತ್ರವೃತ್ತಿ, 1. ೨. ೬,
5 ಥೃನ್ಯಾ., 1 ೧; ಧ್ವನ್ಯಾ, ಪು.೭; ಧ್ರನ್ಯಾ., ಪು. ೨೪೦.- ಈ ಕೊನೆಯ ಎರಡು
ಉಕ್ತಿಗಳು ಪೂರ್ವಪಕ್ಷದವರ ಮಾತಿನ ನಡುವೆ ಬಂದಿದ್ದರೂ ಅನಂದವರ್ಧನನಿಗೆ
ಅವು ಅಸಮ್ಮತವಲ್ಲ.
6 ವ್ಯಕ್ತಿವಿವೇಕ, ಪು. ೧೩೯.
೧೩೪ ಭಾರತೀಯ ಕಾವ್ಯಮಾಮಾಂಸೆ
ಪ್ರತಿಪಾದಿಸುತ್ತಾನೆ. ಅವನ ವಕ್ರೋಕ್ತಿವಾದವು ಸಂಸ್ಕೃತಕಾವ್ಯಮಾಮಾಂ
ನೆಯ ಕೊನೆಯ ಮಾತಲ್ಲವಾದಕಾರಣ, ಅದಕ್ಕನುಸಾರವಾಗಿ ಹುಟ್ಟಿದ ಈ
ಲಕ್ಷಣವನ್ನು ನಾವು ಸವಿಸ್ತರವಾಗಿ ಪರಿಶೀಲಿಸುವುದು ಅನಾವಶ್ಯಕ.
““ಶಬ್ಬಾರ್ಥೌ ಸಹಿತೌ ಕಾವ್ಯಂ '' ಎಂಬುದನ್ನು ಕುರಿತು ಕು೦ತಕನು
ಹೇಳುವ ಮಾತುಗಳು ಅರ್ಥವತ್ತಾಗಿಷೆ. ಮುಂದೆ ಆ ವಿಷಯ ನಿರೂಪ
ಣಯ ಸಮಯದಲ್ಲಿ ಅವನ್ನು ಸ್ಮರಿಸೋಣ,
ಧ್ವನಿಮಾರ್ಗದವರಲ್ಲಿ ಮಮ್ಮ ಟನು ಕೊಟ್ಟಿರುವ ಲಕ್ಷಣವು ಪ್ರಸಿದ್ಧ
ವಾಗಿದೆ. "ಕಾವ್ಯಪ್ರಕಾಶ'ದ ಪಾ ಎ ರಂಭಭಾಗದಲ್ಲೇ (4.೪)
«« ತದದೋಪೌ ಶಬಾ ರೌ ಸಗುಣಾವನಲಂಕೃತೀ ಪುನಃ ಕ್ವಾಪಿ?
""ಅದು [ಎಂದರೆ, ಕಾವ್ಯವು] ದೋಪವಿಲ್ಲದ, ಗುಣಸಪಿತವಾದ ತಬ್ಬಾರ್ಥ
ಗಳಾಗಿರುತ್ತದೆ, ಇವುಗಳಲ್ಲಿ ಕ್ಯಚಿತ್ತಾಗಿ ಅಲ '೦ಕಾರವಿಲ್ಲದಿರುವುದೂ
ಉಂಟು '' ಎಂದು ಅವನು ಸೂತ್ರಿಸಿದನು.. ಈ ಲಕ್ಷಣಕ್ಕೂ ಭಾಮಹ
ವಾಮನಾದಿ ಪ್ರಾಚೀನಾಲಂಕಾರಿಕರ ವಚನಗಳಿಗೂ ಹೆಚ್ಚಿನ ವ್ಯತ್ಯಾಸ
ಷೇನೂ ಕಾಣ ಸುವುದಿಲ್ಲ. ಅವರಂತೆಯೇ ಇವನೂ ಗುಣ, ದೋಷ
ಅಲಂಕಾರ-- ಇವುಗಳ ಹೆಸರನ್ನು ಜಪಿಸಿದಪ್ಪರಿಂದಲ್ಲೇ ತನ್ನ ಲಕ್ಷಣವನ್ನು
ಮುಗಿಸಿಬಿಟ್ಟಿದ್ದಾ ನೆ; ಕಾವ್ಯಜೀವಿತವಾದ ರಸಧ್ಯನಿವಿಚಾರವನ್ನೆೇೇ ಖಶ್ತಿಲ್ಲ.
ಆದರೂ ಕಾವ್ಯಲಕ್ಷಣ ಪರಿಷ್ಕಾರಕ್ಕೆ ಮಮ್ಮಟನಿಂದ ಒಂದು ಉಪಕಾರ
ವಾಗಿದೆ: ಅಲಂಕಾರಕ್ಕೆ ಕಾವ್ಯದಲ್ಲಿ ನಿಯತಸ್ಥಾನವಿರಲ್ಲೇ ಬೇಕಾಗಿಲ್ಲ
ಎಂಬುದನ್ನು ಅವನು ಕ್ರೋಡೀಕರಿಸಿದ್ದಾನೆ. ಸಾಮಾನ್ಯವಾಗಿ ಅಲಂಕಾರ
ವಿರಚೇಕೆಂಬುದೇ ಅವನ ಅಭಿಪ್ರಾಯ ; ಸೂತ್ರದ ಮಾತಿನ ಬಗೆಯಲ್ಲೇ
ಇದು ವ್ಯಕ್ತವಾಗುತ್ತದೆ ; ಅಷ್ಟೇ ಅಲ್ಲ; ಅದರ ಮೇಲಿನ ವೃತ್ತಿಯಲ್ಲಿ
ನ ಸರ್ವತ್ರ ಸಾಲಂಕಾರೌ '' : (""ಎಲ್ಲ ಕಡೆಯಲ್ಲೂ ಶಬ್ದಾರ್ಥಗಳು
ಟರಿಕ್ತಾರಸತತವಾಗಿಕು ಇರುತ್ತವೆ'') ಎಂದು ಬಾಯಿಬಿಟ್ಟೇ ಹೇಳಿ
ದ್ದಾನೆ... ಇದರೆ ಅಪ್ಪಕ್ಕೇ ನಿಲ್ಲಸದೆ, "" ಕೃಚಿತ್ತು ಸ್ಫುಟಾಲಂಕಾರ
ವಿರಹೋೊಪಿ ನ ಕಾವ ೈತ್ಯಹಾನಿ8'' (" ಒಂದೊಂದು ಕಡೆ ಮಾತ್ರ ಸ್ಸು ವಾದ
ಅಲಂಕಾರವಿಲ್ಲದಿದ್ದರೂ ಕಾವ ಸತ್ಯಕ್ಕೆ ಹಾನಿಯಿಲ್ಲ'') ಎಂಬುದನ್ನೊ ಪೆ ಸೇರಿಸಿ
ದ್ದಾನೆ. ನನ ಸೂತ್ರದ ಮೇಲಿನ ವೃತ್ತಿಯಲ್ಲಿ ಇಷ್ಟು ವಿಚಾರಕ್ಕೆ
ಮಾತ ತ್ರವೇ ಅವನು ಸೆ ಕೊಟ್ಟಿ ರುವುದು.
೯, ಕಾವ್ಯಲಕ್ಷಣಗಳು ೧೩೫
ಮಮ್ಮಟನ ಲಕ್ಷಣದಲ್ಲಿ ಹುಳುಕುಗಳನ್ನು ತೋರಿಸುವುದು ಸುಲಭ.
ಅದರೂ ಹೇಮಚಂದ್ರನೇ ' ಮೊದಲಾದವರು ಅದನ್ನೇ ಸಾಮಾನ್ಯವಾಗಿ
ಅಂಗೀಕರಿಸಿದರು. * ಕಾವ್ಯಲಕ್ಷಣ ನಿಷ್ಕರ್ಷೆಗೆ ವಿಶೇಷ ಗಮನಕೊಟ್ಟು,
ಹಿಂದಿನ ಲಾಕ್ಷಣಿಕರ ಉಕ್ತಿಗಳನ್ನು ವಿಮರ್ಶಿಸಿ ಖಂಡಿಸಿ, ತಮ್ಮದೇ
ಒಂದು ಹೊಸ ಲಕ್ಷಣವನ್ನು ಸ್ಥಾಪಿಸಲು ಹೊರಟ ಪ್ರಮುಖ ಆಲಂಕಾರಿ
ಕರು ವಿಶ್ವನಾಥ ಜಗನ್ನಾಥನಬ್ಬರೇ... ಮಮ್ಮಟನ ಹೇಳಿಕೆಗಳನ್ನು
ಪರಿಷ್ಕರಿಸುವ ಪ್ರವೃತ್ತಿಯುಳ್ಳ ವಿಶ್ವನಾಥನಿಗೆ ತನ್ನ ಗ್ರಂಥದ ಆರಂಭದಲ್ಲೇ
ಕೆಲಸಕ್ಕೆ ಅವಕಾಶ ದೊರೆಯಿತು. ಆವನು "" ಅದೋಪಾ
ಸಗ್ಗುಣೌ .. ಎಂಬ ಉಕ್ತಿಯ ಪದಪದವನ್ನೂ ಉಜ್ಜಿನೋಡಿದನು :
ಕಾವ್ಯಲಕ್ಷಣದಲ್ಲಿ ""ಅಪ್ಲೋಪ್'' ಎಂದು ಸೇರಿಸಬಹುದೆ ? ದೋಷರಪಿತ
ವಾದ ಶಬ್ದಾಥ:ಗಳ್ಳೇ ಕಾವ್ಯ ಎಂದಾದರೆ, ಕಾವೃತಬ್ರಕ್ಕೆ ವಿಷ ಸುವಾಗುವ
ಕೃತಿಗಳು ಅತಿ ವಿರಳವಾದಾವು; ಅಥವಾ ಆ ಹೆಸರೇ ಯಾವುದಕ್ಕೂ
ಸಲ್ಲದೆ ಹೋಗಬಸುವ:. ಒಂದು ದೋಪವೂ ಇಲ್ಲದಂತೆ ಗ್ರಂಥರಚನೆ
ಮಾಡುವವರು ಯಾರುಂಟು? ಕಾವ್ಯದಲ್ಲಿ ಅಲ್ಲೊಂದು ಇಲ್ಲೊಂದು
ದೋಪವಿದ್ದರೂ ಅದು, ಧ್ವನಿಸೂರ್ಣವಾಗಿದ್ದರೆ, ಉತ್ತಮಕಾವ್ಯವೆಂದೇ
ಅದನ್ನು ಅಂಗ್ಲೀಕರಿಸುತ್ತಾರೆ. ಅಲ್ಲದೆ, ಸಾಮಾನ್ಯವಾಗಿ ನಾವು ದೋಷ
ಷೆಂದು ಭಾವಿಸುವ ತ್ರುತಿಕಟುತ್ಯ ಮೊದಲಾದವು ರಸಕ್ಕೆ ಕುಂದು ತಾರ
ದಿದ್ದರೆ ಅವನ್ನು ದೋಪವೆಂದೇ ಗಣಸುವುದಿಲ್ಲ; ಉದಾಹರಣೆಗೆ ಕರ್ಕಶ
ವರ್ಣಗಳ ಜೋಡಣಿ ಶೃಂಗಾರರಸ ನಲ್ಲಿ ದೋಷವೇ ಹೊರತು, ರೌದ್ರರಸ
ದಲ್ಲಿ ಅದು ಅದೋಪವಸಪ್ಪ್ಟೇ ಅಲ್ಲ, ಉಪಾದೇಯವೇ ಆಗುತ್ತದೆ. ಇನ್ನು
ವಾದಕ್ಕಾಗಿ, "ಅಡೋಪೌ'`' ಎಂಬುದಕ್ಕೆ ""ಈಪದ್ದೋಪೌ'' ("ಸ್ವಲ್ಪ
ದೋಷವನ್ನುಳ್ಳವು'') ಅಂದು ಅರ್ಥ ಹೇಳಿದರೆ, ಅಸೂರ್ವವಾಗಿ ದೊರೆಯ
ಬಹುದಾದ ನಿರ್ದೋಪ ಕಾವ್ಯಕ್ಕೆ ಕಾವ್ಯತ್ಯ ತಪ್ಪುತ್ತದೆ. ಇದಕ್ಕೆ
ಉತ್ತರವಾಗಿ "" ಒಂದುಷೇಳೆ ದೋಪವಿದ್ದ ರೆ ಅದನ್ನು ಕೊಂಚವಾಗಿ
ಉಳ್ಳಪು`' ಎ೦ದು ವಿವರಿಸಿದರೆ, ಇದು ಕಾವ್ಯಲಕ್ಷಣದಲ್ಲ ಸೇರಿಸತಕ್ಕ
ವಿಷಯವೆ? ರತ್ನದ ಲಕ್ಷಣವನ್ನು ಹೇಳುವಾಗ ಅದರ ಹುಳುಕುಗಳ
ಮಾತನ್ನು ಯಾರಾದರೂ ಎತ್ತುತ್ತಾರೆಯೆ' ರತ್ನದಲ್ಲಿ ಗೀರುಪಾರುಗಳು
7 "ಅದೋಪಔ ಸಗುಣ? ಸಾಲಂಕಾರೌ ಚ ಶೆಬ್ಮಾರ್ಥ್ ಕಾವ್ಯಂ' (ಹೇಮಚಂದ್ರ :
ಕಾವ್ಯಾನುಶಾಸನ, ಪು. ೧೯).
೧೩೬ ಭಾರತೀಯ ಕಾವ್ಯಮಾಮಾಂಸೆ
ಹೇಗೋ ಕಾವ್ಯದಲ್ಲಿ ದೋಪಗಳು ಹಾಗೆ. ಅವು ಇದ್ದ ಮಾತ್ರಕ್ಕೆ ರತ್ನದ
ರತ್ನತ್ಯವಾಗಲ, ಕಾವ್ಯದ ಕಾವ್ಯತ್ಯವಾಗಲಿ ಧ್ಯಂಸವಾಗುವುದಿಲ್ಲ ; ಉಪಾ
ದೇಯತೆ ಮಾತ್ರ ಕುಗ್ಗುತ್ತದೆ."
ಇನ್ನು ""ಸಗುಣಾ'' ಎಂಬ] ವಿಶೇಷಣದ ವಿಮರ್ಶೆ. ಧ್ವನಿತತ್ತ್ವದ
ಪ್ರಕಾರ ಗುಣಗಳು ಮೂರೇ ಮೂರು : ಮಾಧುರ್ಯ, ಓಜಸ್ಸು ಮತ್ತು
ಪ್ರಸಾದ. ಶೃಂಗಾರ, ಕರುಣ ಮೊದಲಾದ ಕಲವು ರಸಗಳನ್ನು ಆಸ್ವಾದ
ಮಾಡುವಾಗ ಹೃದಯವು ವಿಶೇಷವಾಗಿ ಆರ್ದ್ರವಾಗುತ್ತದೆ; ಕರಗಿಹೋಗು
ವಂತೆ ತೋರುತ್ತದೆ. ಪೀಗಾಗುವುದು ರಸದ ಮಾಧುರ್ಯಗುಣದಿಂದ.
ವೀರರೌದ್ರಾದಿರಸಗಳ ಅನುಭವ ಕಾಲದಲ್ಲಿ ಹೃದಯವು ದೀಪ್ತ
ವಾಗಿ ವಿಸ್ತಾರಗೊಳ್ಳುತ್ತದೆ; ರಸದ ಈ ಉಜ್ಜ್ಯಲತೆಗೆ ಓಜ
ಸ್ಲೆಂದು ಹೆಸರು. ಇನ್ನು ಯಾವ ರಸವೇ ಆಗಲಿ, ಅನುಭವ
ಗೋಚರವಾಗುತ್ತಿದ್ದ ಹಾಗೆಯೇ--ಒಣಗಿದ ಕಟ್ಟಿಗೆಯನ್ನು ಅಗ್ನಿ
ಯಂತೆ, ಶುಭ್ರವಾದ ಬಟ್ಟೆಯನ್ನು ನೀರಿನಂತೆ... ಹೃದಯವನ್ನೆಲ್ಲಾ ವ್ಯಾಪಿ
ಸುತ್ತದೆ; ಇದೇ ಪ್ರಸಾದ ಗುಣ. ಹೀಗೆ ಈ ಮೂರೂ ರಸಧರ್ಮಗಳು.
ಆತ್ಮದ ಗುಣವಾದ ಶೌರ್ಯ, ಔದಾರ್ಯ ಹೊದಲಾದವುಗಳಿಗೆ ಇವನ್ನು ಲಾಕ್ಷ
ಣಿಕರು ಹೋಲಿಸುತ್ತಾರೆ. ಕಾವ್ಯದ ಶಬ್ದಾರ್ಧಗಳ ರಚನೆ ಆಯಾ ರಸದ
ಗುಣಗಳಿಗೆ ಅನುಸಾರವಾಗಿ, ಕೆಲವು ರಸಗಳಲ್ಲಿ ಸುಕುಮಾರವೂ, ಕೆಲವು
ರಸೆಗಳಲ್ಲಿ ಉಜ್ಜ್ಯಲವೂ, ಎಲ್ಲ ರಸಗಳಲ್ಲಿಯೂ ಸ್ವಚ್ಛವೂ ಆಗಿರಬೇಕು,
ವಾಮನನು ನಿರೂಪಿಸಿದ್ದ ಇಪ್ಪತ್ತು ಶಬ್ಬಗುಣ ಅರ್ಥಗುಣಗಳನ್ನು ಈ ಮೂರೇ
ಗುಣಗಳಿಗೆ ಇಳಿಸಿ, ಅಷೆಲ್ಲವೂ ಮುಖ್ಯವಾಗಿ ರಸಧರ್ಮಗಳೆಂದೂ ಶಬ್ಮಾಥ್ಯ
ಗಳಲ್ಲಿ ಅವು ಉಂಟೆಂದು ಹೇಳುವುದು ಔಪಚಾರಿಕವೆಂದೂ ಮೆಮ್ಮ ಟನೇ
3 ತನ್ನ ವಾದಕ್ಕೆ ಪರಿಪೋಷಕವಾಗಿ. ವಿಶ್ವನಾಥನು ಈ ಕೆಳಗಿನ ಶ್ಲೋಕವನ್ನು
ಉಊದಾಹರಿಸುತ್ತಾನೆ :
“ಕಿ(ಟಾನುವಿದ್ದರತ್ಲಾದಿಸಾಧಾರಣ್ಯೀನ ಕಾವ್ಯತಾ |
ದುಪಷ್ಟೇಪ್ಟಪಿ ಮತಾ ಯತ್ರ ರಸಾದ್ಯನುಗಮಃ ನ್ಫುಟಃ |
“ಕಟ ಕೊರೆದ [ಎಂದರೆ ಗೀರ:ಪಾರುಳ್ಯ] ರತ್ನ ಮೊದಲಾದವುಗಳಲ್ಲಿ ಹೇಗೋ ಹಾಗೆ
ದುಪ್ಪವಾದ ಕೃತಿಗಳಲ್ಲಿ ಕೂಡ, ಸ್ಟುಟವಾದ ರಸಪ್ರತೀತಿಯಿದ್ದಲ್ಲ, ಕಾವ್ಯತ್ಯವು ಉಂಟೆಂದೇ
ಮತ.”
ಈ ಶ್ಲೋಕವು [ಭಟ್ಟನಾಯಕನ] "ಹೈದಯದರ್ಪಣ ' ದ್ಹಂದು ಪ್ರಭಾಕರಭಟ್ಟನ
" ರಸಪ್ರದೀಪ' ದಲ್ಲಿ ಉಕ್ತವಾಗಿದೆ (ಪು. ೩).
೯. ಕಾವ್ಯಲಕ್ಷಣಗಳು ೧೩೭
ನಿರ್ಣಯಿಸಿದ್ದಾನೆ.” ಇಂಥವನು ರಸದ ಹೆಸರನ್ನೇ ತನ್ನ ಲಕ್ಷಣದಲ್ಲಿ
ಹೇಳದೆ, ಗುಣಗಳನ್ನು ಮಾತ್ರ ಸ್ಮರಿಸಿರುವುದು ಆಶ್ಚರ್ಯ. ಗುಣಗಳು
ಕಾವ್ಯದಲ್ಲಿ ಉಂಟೆಂದು ಹೇಳಿರುವುದರಿಂದ ಗುಣ ಯಾದ ರಸವೂ
ಊಂಟೆಂದೇ ಸಿದ್ದ ವಾಯಿತಲ್ಲವೆ-- ಎಂಬುದಾಗಿ ಯಾರಾದರೂ ವಾದಿಸಿ
ಯಾರು. ಅದರೆ ನೇರವಾಗಿ ಧರ್ಮಿಯನ್ನು ಹೇಳದೆ, ಗೌಣವಾದ ಧರ್ಮ
ಗಳನ್ನು ಹೇಳಿಬಿಟ್ಟು, ಅದರಿಂದ ಧರ್ಮಿಯಿರುವುದನ್ನು ಊಹಿಸಿಕೊಳ್ಳಿ ಎನ್ನು
ವುದು ಯಾವ ನ್ಯಾಯ? "ಪ್ರಾಣಿಗಳನ್ನುಳ್ಳ ದೇಶ'' ಎಂದು ಮುಖ್ಯವಾಗಿ
ಹೇಳಬೇಕಾಗಿರುವಾಗ "ತೌರ್ಯಾದಿಗಳನ್ನುಳ್ಳ ದೇಶ'' ಎಂದು ಯಾರಾದರೂ
ಹೇಳುವರೆ? ಇನ್ನೊ೦ದು ವಿಷಯ, ಗುಣಗಳು ಕಾವ್ಯಸ್ವರೂಪಕ್ಕೆ
ಆಧಾರವಲ್ಲ; ಅವು ಕೇವಲ ಉತ್ಕರ್ಷವನ್ನು ಕೊಡಶಕ್ಕವು. ಅಲಂಕಾರ
ಗಳ ಕಾರ್ಯವೂ ಇಷ್ಟೇ. ಕಾವ್ಯಕ್ಕೆ ಶಬ್ಬಾರ್ಥಗಳು ಶರೀರ, ರಸಭಾವಾದಿ
ಗಳು ಆತ್ಮ. ಗುಣಗಳು ತೌರ್ಯಾದಿಗಳಂತೆ, ದೋಷಗಳು ಕುರುಡತನ
ಮೊದಲಾದವುಗಳಂತೆ, ರೀತಿಗಳು ಅವಯವವಿನ್ಯಾಸದಂತೆ, ಅಲಂಕಾರ
ಗಳು ಕಡಗ ಕುಂಡಲ ಮೊದಲಾದವುಗಳಂತೆ. ಹೀಗಿರುವುದರಿಂದ,
ದೋಷ, ಗುಣ, ಅಲಂಕಾರ--ಇವು ಯಾವುವೂ ಕಾವ್ಯಲಕ್ಷಣದಲ್ಲಿ ಸೇರ
ತಕ್ಕ ವಲ್ಲ ಎಂಬುದು "ಸಾಹಿತ್ಯದರ್ಪಣ' ಕಾರನ ಆಶಯ.
""ಕಾವ್ಯಸ್ಯಾತ್ಮಾ ಧ್ಯನಿಃ'', ""ರೀತಿರಾತ್ಮಾ ಕಾವ್ಯಸ್ಯ''---ಎಂಬು
ದಾಗಿ ಕಾವ್ಯದ ಆತ್ಮವೇನೆಂದು ನಿರೂಪಿಸುವ ವಾಕ್ಯಗಳನ್ನೂ ವಿಶ್ವನಾಧನು
ವಿಮರ್ಶಿಸುತ್ತಾನೆ. ಇವುಗಳಲ್ಲಿ ಎರಡನೆಯದು ವಾಮನನ ಮತ.
ಅದನ್ನು ಆನಂದವರ್ಧನನು ಹಿಂದೆಯೇ ಬಂಡಿಶಿದ್ದನು. ಇನ್ನು
ಆನಂದವರ್ಧನನ ಮತದಂತೆ ವಸ್ತು, ಅಲಂಕಾರ, ರಸ ಎಂಬ ಮೂರು
ಧ್ವನಿಗಳನ್ನೂ ಕಾವ್ಯದ ಆತ್ಮವೆಂದು ಅಂಗೀೀಕರಿಸಬೇಕೆ, ರಸಧ್ಯನಿ
ಯೊಂದೇ ಆತ್ಮವೇ ? ಈ ಪ್ರಶ್ನೆಗೆ ಅಭಿನವಗುಪ್ತನೇ ಪಿಂದೆ ಉತ್ತರ
ಕೊಟ್ಟಿದ್ದನು. ವಿಶ್ವನಾಥನು ಅದ್ದೇ ದಾರಿಯಲ್ಲೇ ನಡೆದು ಧ್ವನ್ಯಾಲೋಕ
ದಲ್ಲಿ ರಸಪಕ್ಷಪಾತವನ್ನು ಸೂಚಿಸುವ ವಾಕ್ಯಗಳಿರುವುದನ್ನು ನಿದರ್ಶಿಸಿ,
ರಸವೊಂದೇ ಕಾವ್ಯದ ಆತ್ಮವೆಂದು ಸೂಶ್ರಿಸಿದನು. ಇದರಮೇಲೆ ಏಳ
ಬಹುದಾದ ಕೆಲವು ಆಕ್ಷೇಪಣಿಗಳಿಗೆ ಅವನು ಉತ್ತರವನ್ನು ಕೊಡುತ್ತಾನೆ.
9 ಕಾವ್ಯಪ್ರಕಾಶ, ೮ನೆಯ ಉಲ್ಲಾಸ.
'೧೩೮ ಭಾರತೀಯ ಕಾವ್ಯಮಾಮಾಂಸೆ
ರಸವನ್ನು ಳ್ಳದ್ದೆ€ ಕಾವ್ಯವಾದರೆ, ಒಂದು ಪ್ರಬಂಧದಲ್ಲಿ ನಡುವೆ ಬರತಕ್ಕ
ನೀರಸವಾದ ಪದ್ಯಗಳ ಗತಿಯೇನು... ಎಂದರೆ, ರಸವತ್ತಾದ ಪದ್ಯದಲ್ಲಿ
ರುವ ಕೆಲವು ನೀರಸಪದಗಳಿಗೆ ಒಟ್ಟು ಪದ್ಯದ ರಸದಿಂದ ಹೇಗೆ ಪುಖ್ಪಿ
ಬರುತ್ತದೋ ಹಾಗೆಯೇ ಒಟ್ಟು ಪ್ರಬಂಧದ ರಸದಿಂದ ಇವಕ್ಕೂ ಕಾವ್ಯತ್ಯ
ಬರುತ್ತದೆ. ಕೆಲವು ಪದ್ಯಗಳು ನ್ನೀರಸವಾದರೂ ಅವುಗಳಲ್ಲಿ ಗುಣ
ವ್ಯಂಜಕವಾದ ವರ್ಣ ರಚನೆಯೂ ಅಲಂಕಾರಗಳೂ ಇದ್ದು ದೋಪವಿಲ್ಲ
ದಿದ್ದರೆ ಅವನ್ನು ಕಾವ್ಯವೆಂದು ಕರೆ ಯುವರಲ್ಲ ಎಂದೆ, ರಕವತ್ತಾದ ಪದ್ಯ
ನ್ನು ಇವು ಕೆಲವು ಅಂಶಗಳಲ್ಲಿ ಹೋಲುವುದರಿಂದ ಕಾವ್ಯವೆಂಬ ಹೆಸರು
ಇವಕ್ಕೆ ಔಪಚಾರಿಕವಾಗಿ ಬರುತ್ತದೆ ಎಂದು ವಿಶ್ವನಾಥನು ಉತ್ತರಕೊಡು
ತ್ತಾನೆ... ಅಂತೂ ಅವನ ಮತದಂತೆ, "ವಾಕ್ಕಂ ರಸಾತ್ಕಕಂ
ಕಾವ್ಯಂ'' ೦ಬುದೇ ಸರಿಯಾದ ಲಕ್ಷಣ. ಹೋಪ, ಗುಣ, ಅಲಂಕಾರ,
ರೀತಿ ಷೊದಲಾದವುಗಳ ಕಾರ್ಯವೇನೆಂಬುದನ್ನು ಇದಕ್ಕೆ ಉಪಸ್ಮಾರಕ
ವಾಗಿ ಸೇರಿಸಿ,
ವಾಕ್ಯ೦ ರಸಾತ್ಮಕ೦ ಕಾವ್ಯಂ ...ದೋಪಾಸ್ತ ಸ್ಯಾಪಕರ್ಷಕಾಃ |
ಉತ್ಕರ್ಪಹೇತವೇ ಪ್ರೋಕ್ತಾ ಗುಣಾಲ೦ಕಾರರೀಶಯಃ॥10
ಎಂದು ಮುಗಿಸುತ್ತಾನೆ.
ವಿಶ್ವನಾಥನು ಇಷ್ಟು ಚಾತುರ್ಯದಿಂದ ಚರ್ಚಸಿ'' ಒಂದು ಲಕ್ಷಣ
ವನ್ನು ಸಿದ್ಧಪಡಿಸಿದ್ದರೂ ಅದು ಜಗನ್ನಾ ಥಪಂಡಿತನಿಗೆ ಗ್ರಾಹ್ಯವಾಗಲಲ್ಲ.
“ರಸಗಂಗಾಧರ'ದ ಮೊದಲಲ್ಲಿ ಅವನು ಬೇರೊಂದು ಲಕ್ಷಣವನ್ನು ಕಲ್ಪಿಸಿ,
ಅದರ ಸಮರ್ಥನೆ ಮಾಡುವಾಗ, ಹಿಂದಿನ ಲಾಕ್ಷಣಿಕರ ಮತಗಳನ್ನೆಲ್ಲಾ |
ವಿಶ್ವನಾಥನದನ್ನೂ ಬಿಡದೆ, ಖಂಡಿಸಿದನು. ಇದುವರೆಗೆ ಆಲಂಕಾರಿಕರು
10 « ರಸಾತ್ಮಕವಾದ ಬಾಕ್ಯವು ಕಾವ್ಯ; ದೋಪಗಳು ಅದಕ್ಕೆ ಕುಂದುಂಟು ಮಾಡ
ತಕ್ಕವು; ಅದಕ್ಕೆ ಉತ್ಕರ್ಪಕೊಡತಕ್ಕವು ಗುಣಾಲಂಕಾರರೀತಿಗಳು.'' (ಸಾಪಿತ್ಯ
ದರ್ಪಣ, 1 ೩)
11 ವಿಶ್ವನಾಧನ ಈ ಚಾತುರ್ಯ ಒಂದೊಂದು ಕಡೆ ಅತಿಯಾಗುತ್ತದೆ. ""ಅದೋಪಾ''
ಎಂಬ ಪದವನ್ನು ಎಳೆದಾಡಿರುವುದು ಇದಕ್ಕೆ ನಿದರ್ಶನ. ""ಅದೋಪಾೌ '' ಎಂದು ಹೇಳು
ಇಗ " ಸ್ಫುಟ ದೋಪರಹಿತವಾದವು '' ಎಂಬುದೇ ಮಮ್ಮ ಬನಿಗಿದ್ದ ತಾತ್ಪರ್ಯ; ಸ್ಫುಟ
ಖರ?
ವೆಂದರೆ ರಸಪ್ರತೀತಿಗೆ ತಡೆಯಾಗತಕ್ಕದ್ದು. ನಾವು ಸಾಮಾನ್ಯವಾಗಿ ದೋಷವೆಂದು
ಕರೆಯುವುದು ಸೆಂದರ್ಭವಶದಿಂದ ಗುಇವಾಗಬಹುದೆಂಬ ಅಂಶ ಮಮ್ಮಟನಿಗೂ ತಿಳಿ
ದಿದ್ದಿತು. ಇಷ್ಟಾದರೂ, ಕಾವ್ಯಲಸ್ತಣದಲ್ಲಿ ಅದೋಪಾ'' ಎಂಬ ಪದಕ್ಕೆ ಅವಕಾಶವಿಲ್ಲ
ವೆಂದು ಒಪ್ಪಬೇಕು.
೯. ಕಾವ್ಯಲಕ್ಷಣಗಳು ೧೩೯
ಸಾಮಾನ್ಯವಾಗಿ ""ಶಬ್ದಾರ್ಥಗಳ. ಜೊತೆಗೂಡಿ ಕಾವ್ಯ''! ಎಂದು
ಹೇಳಿಕೊಂಡು ಬಂದಿದ್ದರು. ಜಗನ್ನಾಥನ ತೀಕ್ಷ್ಣತರ್ಕಕ್ಕೆ ಇದು ಸರಿ
ಯೆಂದು ತೋರಲಿಲ್ಲ. ಶಬ್ಧ, ಅರ್ಥ ಈ ಏರಡನ್ನೂ ಕಾವ್ಯವೆಂದು ಕರೆ
ಯುವುದಕ್ಕೆ ಪ್ರಮಾಣಷೇನು? ""ಕಂವ್ಯವನ್ನು ಗಟ್ಟಿಯಾಗಿ ಓದುತ್ತಾನೆ'',
"" ಕಾವ್ಯದಿಂದ ಅರ್ಥ ತಿಳಿಯಬರುತ್ತದೆ”', ""ಕಾವ್ಯ ವನ) ಶೇಳಿದ್ದಾಯಿತು ;
ಅರ್ಥ pa ಗಲಿಲ್ಲ''-ಪೀಗೆ ಎಲ್ಲರೂ ಮಾತಾಡುತಾರೆ ಇಲ್ಲೆಲ್ಲಾ
ಶಬ್ದವಿಶೇಷಕ್ಕೆ ಕಾವ್ಯಸಂಜ್ಞೆ ಸ್ಮಯ. ಹೊರತು, ಅರ್ಡಕ್ಕಿ ಲ್ಲ ಶಬ್ದಾರ್ಥ
ಗಳೆರಡಕ್ಕೂ ಕಾವ್ಯತ್ತವುಂಡಿಂಬುದಕ್ಕೆ ದೃಢತಂವಾದ ಬೇರೆ ಪ್ರಮಾಣ
ಪೆಲ್ಸಿದೆ ? ಆದ್ದರಿಂದ ತಬ್ದಮಾತ್ರವನ್ನೇ ಕಾವ್ಯವೆಂದು ಕರೆದು ಅದರಂತೆ
ಲಕ್ಷಣವನ್ನು ಕಲ್ಪಿಸನೇಕು. ಇನ್ನು, ಅಸ್ವಾಡವನ್ನು ೦ಟುಮಾಡುವುದೇ
ಕಾವ್ಯಪ್ರಯೋಜನ, ಈ ಶಕ್ತಿ ಶಬ್ದಾರ್ಥಗಳೆರಡರಲ್ಲೂ ಇರುವುದರಿಂದ
ಕಾವ್ಯತ್ಯವು ಎರಡಕ್ಕೂ ಸಲ್ಲುತ್ತದೆ ಏಂದು ವಂಡದಿಸಿದಲ್ಲಿ, ನಾಟ್ಯದ ಅಂಗ
ಗಳಾದ ಸೀತ ನೃತ್ಯ ವಾದ್ಯಾದಿ ಗಳೆಲ್ಲದರಲ್ಲಿಯೂ ಈ ಗುಣವಿರ.ವುದರಿಂದ
ಅದನ್ನೂ ಕಾವ್ಯವೆಂದು ಕರೆಯಬೇಕಾನೀತು. ಹೀಗೆಲ್ಲ ವಿಚಾರಮಾಡಿ
ಜಗನ್ನಾ ಥನು ಕಾವ್ಯತ್ಛವು ಕಬ್ಬ ನಿಪ ಹೆಂದೇ ನಿರ್ಣಯಿಸುತ್ತಾನೆ.
ಗುಣಾಲಂಕಾರಗಳನ್ನು ಲಕ್ಷಣದಲ್ಲಿ ಸೇರಿಸುವುದು ಸರಿಯೆ ೨
ಎಂಬ ಪ್ರಶ್ನೆ ಒದಗುತ್ತದೆ. ಸ್ಪಪ್ಪವಾದ ಗುಣಾಲಂಕಾರಗಳಿಲ್ಲದಿದ್ದರೂ
""ಉದಿತಂ ಮಂಡಲಂ ವಿಥೋಃ''. (""ಉದಿಸಿತು ಚಂದ್ರನ ಮಂಡ
ಲವು'') , ಗತ್ತೋಸ್ತಮರ್ಶಃ'' (""ಅಸ್ತಮಿಸಿದನು ರವಿ”) ಇಂಥ
ವಾಕ್ಯಗಳು ವಿಶ್ಲೇಷಕ೦ದರ್ಥಗಳಲ್ಲಿ ಆಸ್ವಾದ್ಯವಾಗಿ ಕಾವ್ಯವೇ ಆಗುತ್ತವೆ.
"ಅದೋಪ''ದ ವಿಷಯವೂ ಕಾವ್ಯಲಕ್ಷಣದಲ್ಲಿ ಸೇರತಕ್ಕದ್ದಲ್ಲ. ಇಲ್ಲಿಗೆ
ಮಮ್ಮ ಟನ ಲಕ್ಷಣದ ಮಾತು ಮುಗಿಯಿತು. ವಿಶ್ವನಾಥನು ಅದನ್ನು
ಸವಿಸ್ತರವಾಗಿ ಖಂಡಿಸಿದ್ದುದರಿಂದ ಮತ್ತೆ ಅದನ್ನೇ ಸದೆಬಡಿಯದೆ,
ಜಗನ್ನಾಥನು ಈಗ ವಿಶ್ವನಾಥನ ಲಕ್ಷಣದ ಕಡೆಗೇ ತಿರುಗುತ್ತಾನೆ :
““ರಸವತ್ತಾಗಿರುವುಡೇ ಕಾವ್ಯ''ಪೆಂದು "ಸಾಪಿತ್ಯದರ್ಪಣ'ದಲ್ಲ ನಿರ್ಣಯಿ
12ರ ಅಧ್ಯಾಯದಲ್ಲಿ ಉದಾಸರಿಸಿರುವ ಲಾಕ್ಷಣಿಕರ ವಾಕ್ಯಗಳನ್ನು ನೋಡಿ.
“ವಾಕ್ಯಂ ರಶಾತ್ಮಕಂ ಕಾವ್ಯಂ'' ಎಂದು ವಿಶ್ವನಾಥನು ಹೇಳಿದ್ದರೂ, "" ತಯೋಃ ಕಾವ್ಯ
ಸ ಟರೂಕತ್ರೇನ ಅಭಿಮತಯೋಃ ತಬ್ದಾರ್ಥಯೋಃ ........ ಎಂದು ಅವನೇ ಒಂದು ಕಡೆ
(೩ ೨ ವೃತ್ತಿ: ಹೇಳಿರುವುದರಿಂದ ಅವನ ಮತದಲ್ಲಯೂ ಶಬ್ದಾರ್ಥಯುಗಳಕ್ಕೇ ಕಾವ್ಯ
ಸಂಜ್ಞೆ.
೧೪೦ ಭಾರತೀಯ ಕಾವ್ಯಮಾಮಾಂಸೆ
ಸಿರುವುದು ಸರಿಯಲ್ಲ. ಅದನ್ನು ಒಪ್ಪಿದರೆ, ವಸ್ತುಧ್ಯನಿ ಅಲಂಕಾರಧ್ಯನಿ
ಗಳೇ ಪ್ರಧಾನವಾಗಿರುವ ಕಾವ್ಯಗಳಿಗೆ ಕಾವ್ಯತ್ಯ ತಪ್ಪುತ್ತದೆ. ನಮ್ಮ
ಅಭಿಪ್ರಾಯ ಹಾಗೆಯೇ ಸರಿ ಎಂದು ವಾದಿಸಕೂಡದು; ಏಕೆಂದರೆ ಆ
ಪಕ್ಷದಲ್ಲಿ ಮಹಾಕವಿಗಳ ಸಂಪ್ರದಾಖಕ್ಕೇ ಭಂಗ ಬಂದೀತು. ಅಲ್ಲದೆ
ಜಲಪ್ರವಾಹದ ಏಳು ಬೀಳು ಸುಳಿ ಸುತ್ತಾಟಗಳನ್ನೂ, ಕಪಿಗಳ ಮತ್ತು
ಮಕ್ಕಳ ಆಟಗಳನ್ನೂ ಕವಿಗಳು ವರ್ಣಿಸಿದ್ದಾರಲ್ಲ; ಇಲ್ಲೆಲ್ಲ ಹೇಗೆ?
ಇಲ್ಲಿಯೂ ಹೇಗೋ ಪಾರಂಪರ್ಯವಾಗಿ ರಸಸ್ಪರ್ತವಿದ್ದೇ ಇದೆಯೆಂದು
ಹೇಳುವಂತಿಲ್ಲ. ಈ್ಯಬಗೆಯ ರಸಸ್ಪರ್ಶ್ತವು "" ಹಸು ಹೋಗುತ್ತದೆ'',
"" ಜಿಂಕೆ ಓಡುತ್ತದೆ '' ಈ ಮೊದಲಾದ ಕಾವ್ಯಗಳಲ್ಲೂ ಉಂಟೆಂದು ಹೇಳೆ
ಬೇಕಾಗಿ ಅತಿ ಪ್ರಸ೦ಗವೊದಗುತ್ತದೆ. ಏಕೆಂದರೆ, ಯಾವ ಅರ್ಥವಾದರೂ
ಸರಿಯೆ, ವಿಭಾವಾನುಭಾವಸಂಚಾರಿಗಳಲ್ಲ ಒಂದಲ್ಲ ಒಂದಾಗಿರಲೇ
ಬೇಕು. ಹೀಗೆನ್ನುವುದು ಅವನ ಆಕ್ಷೇಪಣಿಯ ಸಾರಾಂಶ.
ಜಗನ್ನಾಥಪಂಡಿತನು ಕೊಡುವ ಲಕ್ಷಣ ಇದು: "ರಮಣ್
ಯಾರ್ಥಪ್ರತಿಪಾದಕಃ ಶಬ್ದಃ ಕಾವ್ಯಂ'' ("" ರಮಣೀಯವಾದ ಅರ್ಥ
ವನ್ನು ಪ್ರತಿಪಾದಿಸುವ ಶಬ್ದವು ಕಾವ್ಯ''). ಇದರ ವಿವರಣಿಯನ್ನು
ಆದಷ್ಟು ಸರಳವಾಗಿ ಹೀಗೆ ಸಂಗ್ರಪಿಸಬಹುದು : ರಮಣೀಯವೆಂದರೆ
ರೋಕೋತ್ತರವಾದ ಆಹ್ಹಾದವನ್ನುಂಟುಮಾಡತಕ್ಕದ್ದು. ಇಲ್ಲಿ
" ಲೋಕೋತ್ತರ '' ಎಂಬ ವಿಶೇಪಣವು ಮುಖ್ಯ. " ನಿನಗೆ ಮಗನು
ಹುಟ್ಟಿದನು'', "« ನಿನಗೆ ಹಣವನ್ನು ಕೊಡುತ್ತೇನೆ »__ಈ ಬಗೆಯ ವಾಕ್ಯ
ಗಳನ್ನು ಕೇಳಿದಾಗ ಉಂಟಾಗುವ ಆಹ್ಲಾದವು ಲೋಕೋತ್ತರವಲ್ಲ ;
ಆದಕಾರಣ ಅವುಗಳು ಕಾವ್ಯವಲ್ಲ. ಕಾವ್ಯದಿಂದ ದೊರೆಯುವ ಲೋಕೋ
ತರವಾದ ಆಹ್ಲಾ ದವು ಅನುಭವಸಾಕ್ಷಿಕವಾದದ್ದು ; ಇದು ಬರುವುದು
ರಮಣೀಯವಾದದ್ದನ್ನು ಮತ್ತೆ ಮತ್ತೆ ಅನುಸಂಧಾನಮಾಡುವುದರಿಂದ
(ಎಂದರೆ ಅದರಲ್ಲೆ ಮಗ್ನವಾಗಿ ಪರಿಭಾವಿಸುವುದರಿಂದ) ,.. ಈ ಬಗೆಯ
ಅನುಸಂಧಾನಷೇ "" ಭಾವನೆ '' ; ಇದರಿಂದ ಬರುವ ಆಹ್ಲಾ ದವಿಶೇಪಕ್ಕೆ
“ಚೆಮತ್ಕಾ ರ '' ಪೆಂಬ ಹೆಸರೂ ಉಂಟು. ಇನ್ನು, ರಮಣೀಯವಾದ
ಅರ್ಥವನ್ನು ಹೇಳುವ '' ಎನ್ನದೆ ""..... ಪ್ರತಿಪಾದಿಸುವ '' ಎಂದು
ಕಲ್ಪಿ ಸಿರುವುದರಲ್ಲೂ ಔಚಿತ್ಯವುಂಟು. ಏಕೆಂದರೆ, ""ಪ್ರತಿಪಾದಿಸುವ'' ಎನ್ನು
ವುದ ವಾಚ್ಯವಲ್ಲದ ವ್ಯಂಗ್ಯವನ್ನೂ ಒಳಕೊಳ್ಳುತ್ತದೆ.
೯, ಕಾವೃ ಲಕ್ಷಣಗಳು ೧೪೧
ಜಗನ್ನಾಥನು ಕೊಟ್ಟಿರುವ ಈ ಲಕ್ಷಣ ನವೀನವೂ ವಿಚಾರಾ
ರ್ಹವೂ ಆಗಿದೆ. ಹಿಂದಿನವರ ಉಕ್ತಿ ಗಳಲ್ಲೆಲ್ಲಾ "ಶರೀರಂ ತಾವದಿಪ್ಟಾ
ರ್ಥವ್ಯವಚ್ಚಿನ್ನಾ ಪದಾವಲೀ '' ಎಂಬ ದಂಡಿಯ ವಾಕ್ಯವನ್ನು ಮಾತ್ರ
ಇದು ಹೋಲುತ್ತದೆ. ಶನ್ಮಾರ್ಥಗಳೆರಡಕ್ಕೂ ಕಾವ್ಯತ್ಯವನ್ನು ಹೇಳಲೊ
ಪದೆ, ಅರ್ಥವಿತಿಪ್ಟವಾದ ಶಬ್ದವನ್ನೇ ಕಾವ್ಯವೆಂದು ಕರೆಯಜೇಕೆಂಬು
ದಾಗಿ ಜಗನ್ನಾಥನು ಸಾಧಿಸಿರುವ ಬಗೆಯನ್ನು ನೋಡಿದೆವು. ಅವನ
ವಿಚಾರಸರಣಿ ನಿಜವಾಗಿಯೂ ಅನುಭವಸಮ್ಮ ತವೆ? "" ಕಾವ್ಯವನ್ನು
ಓದುತ್ತಾನೆ'' ಎನ್ನುವಂತೆಯ್ಲೇ "" ಕಾವ್ಯ ತಿಳಿಯಿತು (" ಕಾವ್ಯಂ
ಜ್ಞಾತಂ 3?) ಎಂದು ಜನರು ಹೇಳುವುದಿಲ್ಲವೆ? ಇಲ್ಲ "" ಕಾವ್ಯ > ಎಂದರೆ
ಅದರ ಅರ್ಥವೇ ತಾನೆ? ಇದರ ಮೇಲೆ, ಮಿಕ್ಕ ಆಲಂಕಾರಿಕರೆಲ್ಲರೂ
ಶಬ್ಬಾರ್ಧಗಳನ್ನು ಒಟ್ಟಿಗೆ ಕಾವ್ಯವೆಂದು ' ಕರೆದಿರುವುದಕ್ಕೆ ಇನ್ನೊಂದು
ಔಚಿತ್ಯವುಂಟು. ತಬ್ದವಿಲ್ಲದೆ ಅರ್ಧ ತಿಳಿಯದು, ಅರ್ಥವಲ್ಲದೆ ಶಬ್ದ
ಸಲ್ಲದು. ಇವೆರಡೂ ಪರಸ್ಪರಾವಲಂಬಿಗಳು. ಕಾವ್ಯರಸವನ್ನು ಆಸ್ಕಾ
ದಿಸುವಾಗ ಶಬ್ದ ವನ್ನೂ ಅರ್ಥವನ್ನೂ ನಾವು ಜೇರೆಬೇರೆಯಾಗಿ ಗ್ರಪಿಸ
ವುದಿಲ್ಲ. ಅಖಂಡ ಬುದ್ಧಿಯಿಂದ ಒಟ್ಟಿಗೇ ಗ್ರಪಿಸುತ್ತೇಷೆ. ವಿಮರ್ತನ
ಕಾಲದಲ್ಲಿ ಮಾತ್ರ ಶಬ್ದ, ವಾಚ್ಯಾರ್ಥ, ವ್ಯಂಗ್ಗಾ ರ್ಥ. ಹೀಗೆ ಪೃಥಕ್ಕರಿಸಿ
ನೋಡುತ್ತೇವೆ. ಆಸ್ಫಾದಕ್ಕೆ ಒಮ್ಮೆ ಶಬ್ದದಿಂದ ಹೆಚ್ಚು ಸಹಾಯವಾಗ
ಬಹುದು, ಮತ್ತೊಮ್ಮೆ ಅರ್ಥದಿಂದ ಹೆಚ್ಚು ಸಹಾಯವಾಗಬಹುದು ;
ಆದರೆ ಎರಡೂ ಬೇಕು, ಎರಡೂ ಸಹಕರಿಸಜೇಕು.!
ತ ತಬ್ದಾರ್ಥಾ ಸಹಿತೌ ಕಾವ್ಯ೦'' ಎಂದು ಹೇಳುವುದರಲ್ಲಿ
ಇನ್ನೊ೦ದು ಹೊಗಸೂ ಉಂಟು. ಅದನ್ನು ವಕ್ರೋಕ್ತಿ ಜೀವಿತಕಾರನು
ವಿಸ್ತಾರವಾಗಿ ರಮ್ಯವಾಗಿ ಪ್ರತಿಪಾದಿಸಿದ್ದಾನೆ.! ಅದರ ಸಾರವಿಷ್ಟು :
ಹಸ ಮತತ
ಎ. ಸಿ. ಬ್ರ್ಯಾಡ್ಜೆಯವರ "006/1 for Poetty’s Sake’ ಎಂಬ ಪ್ರಬಂಧದಲ್ಲಿ
ಶೆಬ್ನಾರ್ಥಗಳಿಗಿರುವ ಈ ಅವಿಭಾಜ್ಯ ಸಂಬಂಧವು ಹೈ ದಯಂಗಮವಾಗಿ ನಿರೂಪಿತವಾಗಿದೆ
(Oxford Lectures on Poetry, p. 14).
11 ವಕ್ರೋಕ್ತಿ ಜೀವಿತ, ಪು. ೭.೧೧; ೨೬.೨೯,
ಸಮಸರ್ವಗುಣ್‌ೌ ಸಂತೌ ಸುಹೃದಾವಿಷ್ಮಸಂಗತಔೌ |
ಪರಸ್ನರಸ್ಯ ಶೋಭಾಯೆಶ್ಬ ಶಬ್ಮಾರ್ಥಾ ಭವಕೋ ಯಥಾ? (ಹು. ೧೧)
ಸ ಎ.ಎ... ರಸೌನ್‌ಾಂ ಪರಿಪೋಷಣಂ I
ಸ 'ರ್ಧಯಾ ವಿದ್ಯತೇ ಯತ್ರ ಯಥಾಸ್ಪಮುಭಯೋರಪಿ! ,, (ಪು. ೨೮)
೧೪೨ ಭಾರತೀಯ ಕಾವ್ಯಮಾಮಾಂಸೆ
ತಬ್ಧಾರ್ಥಗಳು ಕಾವ್ಯ. ಎರಡು ಕೂಡಿ ಒಂದು ಎನ್ನುವುದು ವಿಚಿತ್ರೋ
ಕ್ರಿಯೇ ಸರಿ. ಇದರ ಅಭಿಪ್ರಾಯವೇನೆಂದರೆ, ರಮಣೀಯತೆಯನ್ನುಳ್ಳ
ಕೇವಲ ಶಬ್ದಕ್ಕಾಗಲಿ ಕೇವಲ ಅರ್ಥಕ್ಕಾಗಲಿ ಕಾವ್ಯತ್ವವಿಲ್ಲ. ರಮ್ಮ
ವಾದ ವಾಚಕವೂ ರಮ್ಯವಾದ ವಾಚ್ಯವೊ ಸಮ್ಮಿಳಿತವಾಗಿ ಕಾವ್ಯವಾಗು
ತ್ತದೆ. ಇವೆರಡರಲ್ಲಿ ಯಾವುದೊಗದರ ಹೊಗಸಿನಲ್ಲಿಯೂ ಈಪನ್ಮಾತ್ರದ
ನ್ಯೂನತೆ ಇರಕೂಡದೆನ್ನುವುದಕ್ಕಾಗಿ ""ಸಪಿತೌ'' ಎ೦ಬ ಮಾತು ಬಂದಿದೆ.
ಈ ""ಸಹಿತಭಾವ'' ಅಥವಾ "" ಸಾಪಿತ್ಯ'' ಎಂದರೇನು ? ವಾಚ್ಯವಾಚಕ
ಗಳು ಹೇಗೂ ಒಂದರೊಡನೊಂದು ಸೇರಿಯೇ ಇರುವುದರಿಂದ ಅವುಗಳ
ಸಾಪಿತ್ಸ ಸಿದ್ಧವಾಗಿಯೇ ಇದೆಯಲ್ಲ ಎಂದರೆ, ಹಾಗಲ್ಲ. ಇಲ್ಲಿ ಉದ್ದಿಪ್ಪ
ವಾಗಿರುವುದು ವಿಶೇಪರೀತಿಯ ಸಾಪಿತ್ಯ. ಶಬ್ದಾರ್ಥಗಳೆರಡೂ ಸರ್ವ
ಗುಣಗಳಿಂದ ಸಮನಾಗಿ ಕೂಡಿ ಸ್ನೇಹಿತರಂತೆ ಒಂದರೊಡನೊಂದು
ಹೊಂದಿಕೊಂಡು, ಒಂದರ ಶೋಭೆಯನ್ನು ಮತ್ತೊಂದು ಹೆಚ್ಚಿಸುವಂತಿರ
ಬೇಕು. ಗುಣವಿಶಿಷ್ಟವಾದ ರಚನೆ, ಅಲಂಕಾರವಿನ್ಯಾಸ, ರಸಪರಿ
ಪೋಪಣಿ - ಈ ಮೊದಲಾದವುಗಳಲ್ಲೆಲ್ಲಾ ಅಷೆರಡಕ್ಕೂ ಸ್ಪರ್ಧೆಯಿರ
ಬೇಕು. ಇದೇ ""ಸಾಪಿತ್ಯ''ದ ರಹಸ್ಯ.
ರಸಪ್ರಾಧಾನ್ಯವನ್ನು ಕುರಿತು ಜಗನ್ನಾಥಪಂಡಿತನು ಎತ್ತುವ
ಒಂದೆರಡು ಆಕ್ಷೇಪಣಿಗಳನ್ನು ಈಗ ಗಮನಿಸೋಣ. ಯಾವ ಒಳ್ಳೆಯ
ಕಾವ್ಯವನ್ನೇ ತೆಗೆದುಕೊಳ್ಳಲಿ, ಅದಕ್ಕೆ ಜೀವೆಪ್ರಾಯವಾದ ರಸವೋ
ಭಾವವೋ ಒಳಗಿನ ತಿರುಳಾಗಿ ಇದ್ದೇ ಇರುತ್ತದೆ." ಕವಿಗೆ ಕಾವ್ಯರಚನೆ
ಮಾಡಲು ಆಷೇಶ ಬರುವುದು ಅವನ ಮನಸ್ಸು ರಸಾರ್ದ್ರವಾಗಿದ್ದಾ ಗಲೇ.
ಈ ಒಳಗಿನ ಅನುಭವವನ್ನು ಹೊರಗೆಡಹುವ ಯತ್ನವೇ ಕಾವ್ಯರಚನೆ.
ರಸಪ್ರಾಧಾನ್ಯವಿಲ್ಲದ ಕೃತಿಗಳನ್ನು ಕವಿಗಳು ರಚಿಸಿರುವುದು ಉಂಟು.
ಅಂಥವು ಔಪಚಾರಿಕವಾಗಿ ಕಾವ್ಯಗಳೆಂದು ಸಾಪಿತ್ಯದರ್ಪಣಕಾರನಂತೆ
ಧೈರ್ಯವಾಗಿ ಹೇಳಿಬಿಡುವುದೇ ಉತ್ತಮ ; ಅಲ್ಲಿ ಕೂಡ ರಸಸ್ಪರ್ಶ ಕೆಲವು
ಮಟ್ಟಿಗಾದರೂ ಇದ್ದೇ ಇರುತ್ತದೆ. ಜಗನ್ನಾಥಪಂಡಿತನು ಅಪವಾದ
ಹೆಂದು ಸೂಚಿಸುವ ಕೆಲವು ನಿದರ್ಶನಗಳು ನಿಜವಾಗಿಯೂ ವಿಚಾರಕ್ಷಮ
ವಲ್ಲ. ಜಲಪಾತದ ವರ್ಣನೆಯಲ್ಲಿ ಅದ್ಭುತರಸವು ಸ್ವಯಂವ್ಯಕ್ತವಲ್ಲವೆ ?
15" ನು ಹಿತಡ್ತೂನ್ಯಂ ಕಾವ್ಯಂ ಕಿಂಚಿದಸ್ತಿ.'' (ಧನ್ಯಾ. ಲೋಚನ, ಪು. ೬೫)
೯. ಕಾವೃಲಕ್ಷಣಗಳು ೧೪೩
ಇದನ್ನು ಬೇರೆ ರಸಗಳಿಗೆ ಪೋಷಕವಾಗಿ ವರ್ಣಸಿರುವ ಕವಿಗಳೂ
ಉಂಟು. ಮಕ್ಕಳ ತೊದಲುಮಾತು, ತಪ್ಪುನಡಗೆ. _ಈ ಮೊದಲಾದ
ವನ್ನು ನೋಡಿ ಒಂದು ಕಡೆ ವಾತ್ನಲ್ಯವನ್ನೂ ಇನ್ನೊಂದು ಕಡೆ ವಿಸ್ಮಯ
ವನ್ನೂ ಅನುಭವಿಸದವರು HE ಕಪಿಗಳ ಆಟದಲ್ಲಂತೂ ಹಾಸ ವು
ಸ್ಪಷ್ಟವಾಗಿ ಗೋಚರವಾಗುತ್ತದೆ. ಇದೆಲ್ಲ ಚಿತ್ತವೃತ್ತಿ ವಿಶೇಷಗಳ್ಳೇ
ತಾನೆ? ಜಗನ್ನಾಥಪಂಡಿತನಿಗೆ ಇಲ್ಲೆಲ್ಲಾ ರಸಸ್ಪರ್ಶ ಹೇಗೆ ತೋರ
ಲಿಲ್ಲವೋ ! ಇನ್ನು '"ಗತೋಸ್ತ ಮರ್ಕ” ಅ೦ಬುದು ಸಂದರ್ಭವತ
ದಿಂದ ಕಾವ್ಯವಾಗಬಹುದಾದರೆ, ಹಸು ಹೋಗುತ್ತದೆ '',. "ಜಿಂಕೆ
ಓಡುತ್ತದೆ'' ಎಂಬ ವಾಕ್ಯಗಳೂ ಉಚಿತ ಸನ್ನಿವೇಶದಲ್ಲಿ ಕಾವ್ಯವಾಗ
ಬಹುದು. ಅವನ್ನು ಬಿಡಿಬಿಡಿಯಾಗಿ ತೆಗೆದುಕೊಂಡರೆ ಮಾತ್ರ ನೀರಸ
ವಾಗಿ ತೋರುತ್ತವೆ. ಕಾವ್ಯವಿಚಾರದಲ್ಲ, ಒಂದು ವಾಕ್ಯವನ್ನೇ ಹಿಡಿದು
ಅದರಲ್ಲೆ € ಸಮಸ್ತ ಕಾವ್ಯ ತ್ಯ ವನ್ನೂ ಕಾಣಲು ಹೊರಡುವುದು ತಪ್ಪು ದಾರಿ.
ಮೇಲಿನ ವಾಕ್ಯಗಳು ರಸ ನಯವಾದ ನ ರಬಂಧದಲ್ಲ ಸೇರಿ ಬಂದರೆ, ಅವು
ಗಳಿಂದಲ್ಲೇ ರಸಕ್ಕೆ ಮತ್ತಷ್ಟು ಕಳೆಯೇರುವುದು ಅಸ೦ಭವವಲ್ಲ.!
ತ ರಮಣ್ಮೀಯಾರ್ಥಪ್ಪ ತಿಪಾದಕಃ'' ಎಂಬ ಮುಖ್ಯ ವಿಶೇಷಣ
ವನ್ನು ಕುರಿತು ಕಡೆಯಲ್ಲಿ ಒಂದು ಮಾತು. " ರಮಣ್ಣೀಯ'' ಎಂದ
ರೇನು ?. ""ಲೋಕೋತ್ತರವಾದ 'ಆಹ್ಣಾದವನ್ನುಂಟುಮಾಡತಕ್ಕದ್ದು''.
ಇದರಿಂದ ಕಾವ್ಯಸ್ವರೂಪವನ್ನು ಕುರಿತು ನಿಶ್ಚಿತವಾದ ಜ್ಞಾನ ಎಪ್ಪರ
ಮಟ್ಟಿಗೆ ನಮಗೆ ಬಂದಂತಾಯಿತು? ಹಿಂದಿನ ಆಲಂಕಾರಿಕರೆಲ್ಲ, ಕಾವ್ಯ
ಸೌಂದರ್ಯಕ್ಕೆ ಆಧಾರವೆಂದು ತಾವು ಭಾವಿಸಿದ್ದ ಅಲಂಕಾರ, ಗುಣ, ರಸ,
ಧ್ವನಿ ಇವುಗಳಲ್ಲಿ ಒಂದನ್ನು ಅಥವಾ ಹಲವನ್ನು ತಮ್ಮ ಲಕ್ಷಣಗಳಲ್ಲಿ ಸುಟ
ವಾಗಿ ಹೇಳುತ್ತಿದ್ದರು; ಅವರ ಅಭಿಪ್ರಾಯ ತಪ್ಪೇ ಸರಿಯೇ ಎಂಬುದು
ಬೇರೆಯ ವಿಚಾರ. ಜಗನ್ನಾಥ ಪಂಡಿತನ ಲಕ್ಷಣದಲ್ಲಿ ಈ ಸ್ಫುಟತ್ವಕ್ಕೇ ಅಭಾವ
ಬಂದಿದೆ. '" ರಮಣೀಯತೆ '', ಲೋಕೋತ್ತರಾಹ್ಗಾದ'' ಎಂದರೇನು
ಎಂಬುದನ್ನು ನಿರ್ಣಯಿಸಿದ ಹೊರತು ಕಾವ್ಯಲಕ್ಷಣವೂ ನಿರ್ಣಯವಾಗು
16 ಜಗನ್ನಾಥಪಂಡಿತನ ವಾದಕ್ಕೆ ಮೂಲ ವಿಜವಾಗಿ ಧ ನ್ಯಾಲೋಕದಲ್ಲಿಯೇ
ಐದೆ. ಕಾವ್ಯದಲ್ಲ ರಸವೇ ಪ್ರಧಾನವೆಂದು ಕಂಠೋಕ್ತವಾಗಿ ಹೇಳಿಬಿಟ್ಟರೆ ವಸ್ತುಧ್ವನಿ
ಅಲಂಕಾರಧ್ರನಿಗಳ ಗತಿಯೇನು ಎಂಬ ಅತಂಕ ಅನಂದವರ್ಥನನಿಗೆ ಇದ್ದಿತೆಂದು ಹಿಂದೆ ನೋಡಿ
ದ್ಹೇವೆ ; ಅಭಿನವಗುಪ್ತನು ಬಂದು ಇದನ್ನು ಪರಿಹರಿಸಿದನೆಂಬುದನ್ನೂ ಗಮನಿಸಿದ್ದೇವೆ.
೧೪೪ ಭಾರತೀಯ ಕಾವ್ಯವಿಸಾಮಾಂಸೆ
ವೆಂತಿಲ್ಲ. ಈ ಸಂದರ್ಭದಲ್ಲಿ "ಲೋಕೋತ್ತರೆ'' ಎಂಬುದರ ಸ್ವರೂಪವನ್ನು
ಕೆಲವುಮಟ್ಟಿಗೆ ಪರಿಷ್ಕಾರಮಾಡಿದ್ದ ಕ್ಕಾಗಿ ಮಾತ್ರ ನಾವು ಜಗನ್ನಾಥ ಪಂಡಿತ
ನಿಗೆ ಕೃತಜ್ಞರಾಗಿರಬೇಕು. ಕಾವ್ಯದ ಆಹ್ಣಾ ದವು ಲೌಕಿಕ ವ್ಯವಹಾರದಲ್ಲಿ ಪಡೆ
ಯುವ ಅಹ್ಣಾದವಲ್ಲ; ಇದನ್ನು ಪಡೆಯಲು ಕೇವಲ ""ಭಾವನೆ'' ಯೊಂದೇ
ದಾರಿ ಎ೦ಬುದನ್ನು ಅವನು ತನ್ನ ಲಕ್ಷಣದ ವಿವರಣಿಯಲ್ಲಿ ನಿರೂಪಿಸಿದ್ದಾನೆ.
ಲಕ್ಷಣವನ್ನು ನಿರ್ಣಯಿಸಲು ಹೊರಡುವುದರ ಫಲಿತಾಂಶ ಇಷ್ಟೆ €.
ಎಷ್ಟೆಪ್ಟೇ ಪರಿಷ್ಕಾರ ಮಾಡಿರಲಿ, ಈ ಲಕ್ಷಣ ಸರ್ವಸಮರ್ಪಕಷೆಂಬ ಭಾವನೆ
ಬರುವುದಿಲ್ಲ.” ಇದು ಅನಿವಾರ್ಯವಾದ ಕಪ್ಪ. ಅಶೀಂದ್ರಿಯ ವಸ್ತುವಾದ
ಕಾವ್ಯದ ಲಕ್ಷಣವನ್ನು ಹೇಳುವುದೆಂದರೆ " ಬ್ರಹ್ಮ '' ದ ಲಕ್ಷಣವನ್ನು ಹೇಳು
ವಂತೆಯೇ. ಎರಡೂ ಅನುಭವೈಕಗಮ್ಯವಾದವು. ಬ್ರಹ್ಮಮಿಾಮಾಂಸೆಗೆ
ತೊಡಗಿದವರು ವಾದಮಾಡಿ ಮಾಡಿ, ತಮ್ಮ ಶಕ್ತಿ ಕು೦ಠಿತವಾದದ್ದನ್ನು
ಒಪ್ಪಿ ಕೊಂಡು, ಬ್ರಹ್ಮ ಗಜ ವಾಕ್ಯಾರ್ಥ '' ವಾಗಲಾರದು ; ಅದು ಕೇವಲ
“ಪ್ರಾತಿಪದಿಕಾರ್ಥ”' ವಾಗಿಯೇ ನಿಲ್ಲತಕ್ಕದ್ದು ಎಂಬ ನಿರ್ಧರಕ್ಕೆ ಬರುತ್ತಾ
ರಂತೆ." ಕಾವ್ಯಲಕ್ಷಣಕಾರರ ಸ್ಥಿತಿಯೂ ಹೆಚ್ಚು ಕಡಮೆ ಇಲ್ಲಿಗೇ ಬರುತ್ತದೆ.
ಕಾವ್ಯವೆಂದರೆ ಏನೆಂಬುದು ಅನುಭವಕ್ಕೆ ಗೊತ್ತು; ಬಾಯಿಮಾತಿನಲ್ಲಿ ಖಚಿತ
ವಾಗಿ ಹೇಳುವುದು ಮಾತ್ರ' ಕಪ್ಪ .. ಅದರ ಎಲ್ಲ ಮುಖಗಳನ್ನೂ ಒಂದು
ಲಕ್ಷಣವಾಕ್ಯ ಪೂರ್ಣವಾಗಿ ಒಳೆಕೊಳ್ಳಬಲ್ಲುದ್ಲೇ ಎಂಬುದು ಸಂದೇಹದ
ವಿಷಯ. ಅದರೆ ಲಕ್ಷಣದ ಚರ್ಚೆ ಅಪ್ರಕೃ ತವಲ್ಲ. ಇಷ್ಟು ತಿಳಿಯಿತು, ಇಷ್ಟು
ಉಳಿಯಿತು ಎಂದು ಅರಿಯುವುದಕ್ಕಾದರೂ ಈ ಬಗೆಯ ವಿಚಾರ ಬೇಕಷ್ಟೆ!
17 ಪಂಡಿತ ಡಿ. ಟಿ. ತಾತಾಚಾರ್ಯ ಶಿರೋಮಣಿ, ಎಂ.ಓ.ಎಲ್. ಅವರು "inition
of Poetry or Kavya’ ಎಂಬ ದೀಘುನವಾದ ನಿಬಂಧವನ್ನು. ಬರೆದಿದ್ದಾರೆ. (1011,
111-117) ಅದರಲ್ಲಿ ಪಾಶ್ಚಾತ್ಯರ ಮತ್ತು ಭಾರತೀಯರ ಗ್ರಂಥಗಳಲ್ಲ ದೊರೆಯುನ
ಲಕ್ಷಣಗಳನ್ನೂ ಮತಗಳನ್ನೂ ವಿವೇಚಿಸಿ, ಕಡೆಗೆ ತಮ್ಮ ಸಿದ್ಧಾಂತವನ್ನು ಹೀಗೆ ಕೊಡು
ತ್ತಾರೆ: “I conclude that word and sense which directly aim ut,
and produce, pleasure are poetry” (“ಆಹ್ಮಾದವನ್ನೇ ನೇರವಾಗಿ ಗುರಿ
ಹಿಡಿದು ಅದನ್ನು ಉಂಟುಮಾಡುವ ಶಬ್ಗ್ದಾರ್ಥಗಳು ಕಂವ್ಯವೆಂದು ನನ್ನ ಸಿದ್ಧಾಂತ.'') ಈ
ಲಕ್ಷಣವಾದರೂ ಸಮರ್ಪಕವೆಂದು ಹೇಳಲು ಸಾಧ್ಯವಿಲ್ಲ.
18 "ವಾಕ್ಯಾರ್ಥ'' ಎಂದರೆ ಒಂದು ವಾಕ್ಯದಲ್ಲಿ ವರ್ಣಿಸಬಹುದಾದದ್ದು; '"ಪ್ರಾತಿ
ಪದಿಕಾರ್ಥ'' ಎಂದರೆ ಒಂದೇ ಶಬ್ದದಲ್ಲಿ ಹೇಳಬೇಕಾದದ್ದು. ಈ ಹೇಳಿಕೆಯ ಅರ್ಥ
ಇಷ್ಟು: ಬ್ರಹ್ಮಸ್ಟ್ಪರೂಪವನ್ನು ಬೇರೆ ಮಾತುಗಳಲ್ಲ ಸಂಪೂರ್ಣವಾಗಿ ಹೇಳುವುದಕ್ಕಾಗುವು
ದಿಲ್ಲ; ""ಬ್ರಹ್ಮ'' ಎಂದರೆ ""ಬ್ರಹ್ಮ'' ಎಂದೇ ಅರ್ಥ.
೧೦. ಕವಿತೆಯ ಆಕರ
ಬಟ್ಟ ತೌತನ " ಕಾವ್ಯಕೌತುಕ 'ದಿಂದ ಅವರಿವರು ಉದ್ಧರಿಸಿ
ಉಳಿಸಿಕೊಟ್ಟಿ ರುವ ತುಣುಕುಗಳಲ್ಲೊ ೦ದು ಅದರಲ್ಲೂ ಮೊದಲನೆಯ
ಪಂಜ್ತಿ--ಬಲು ಪ್ರಸಿದ್ಧವಾಗಿದೆ:
ಪ್ರಜ್ಞಾ ನವನವೋಲ್ಲೆಳಬಶಾಲಿನಿೀ ಪ್ರತಿಭಾ ಮತಾ |
ತದನುಪ್ರಾಣನಾಜೀವದ್ಬರ್ಣ ನಾನಿಪುಣಃ ಕವಿಃ ॥
ತಸ್ಯ ಕರ್ವ ಸ್ಮೃತಂ ಕಾವ್ಯಂ . ...!
ಈ ಉಕ್ತಿಖಂಡವನ್ನು ಸಾರಗುಂದದಂತೆ ಕನ್ನಡಕ್ಕೆ ಅನುವಾದ
ಮಾಡುವುದು ಕಪ್ಪ ; ಆದರೆ ಅಭಿಪ್ರಾಯವನ್ನು ನಿರೂಪಿಸುವುದು ಕಪ್ಪ
Ely : ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುವ, ಕಟ್ಟುವ
ಜ್ಞೆಯೇ ಪ್ರತಿಭೆ. ಈ ಪ್ರತಿಭೆಯ ಉಸಿರಿನಿಂದ ಜೀವತುಂಬಿ ವರ್ಣಿಸ
ಬ ರಟ ಕವಿ. ಕವಿಕರ್ಮವೇ ಕಾವ್ಯ. ಹೀಗೆ, ಕವಿಸೃಷ್ಟಿಯ
ರಹಸ್ಯವೆಲ್ಲ "" ಪ್ರತಿಭೆ '' .ಎ೦ಬ ಮೂರು ಅಕ್ಷರಗಳಲ್ಲಿ ಅಡಗಿದೆ. ; ಆದರೆ
ಕವಿಪ್ರತಿಭೆಯಲ್ಲಿ ಕಾವ್ಯವು ಹೇಗೆ ಹೊಮ್ಮುತ್ತದೆ, ಹೇಗೆ ಹೊರಬೀಳುತ್ತದೆ ?
ಈ ನಿರ್ಮಾಣಕಾರ್ಯ ದ ಕವಿಗೆ PRG ಶಕ್ತಿ, ದೃಷ್ಟಿ, ಪರಿಕರ ಮೊದ
ಲಾದವು ಜಾತಾ 7 ಈ ಮೊದಲಾದ ಹಿಷ್ನಯನಳ ನಿರೂಪಣಿ ನಮ್ಮ
ಲಕ್ಷಣಗ್ರಂಥಗಳಲ್ಲ ಹೆಚ್ಚಾಗಿ ಬರುವುದಿಲ್ಲ; ಒಂದೆರಡು ಮಾತಿನಲ್ಲಿ ಈ
ವಿಚಾರವನ್ನು ಮುಗಿಸಿಬಿಡುವುದೇ ನಮ್ಮ ಅಲಂಕಾರಿಕರ ಸಾಮಾನ್ಯ
ಪದ್ಧ ತಿ. ಆದರೂ ರಾಜಶೇಖರ, ಕುಂತಕ ಮೊದಲಾದವರ ಕೃತಿಗಳಲ್ಲಿ
ಮೇಲಿನ ಪ್ರಶ್ನೆಗಳಿಗೆ ಉತ್ತರ ತಕ್ಕ ಮಟ್ಟಿಗೆ ವಿಶದವಾಗಿ ದೊರೆಯುತ್ತದೆ.
ಅಲ್ಲದೆ, EEN ತಾತ ತೊದರಾಡವರು ಅಲ್ಲೂಂದು ಕಡೆ
ಇಲ್ಲೊಂದು ಕಡೆ ಹೇಳಿರುವ ಸಸ ಕವಿಕರ್ಮದ ಗುಟ್ಟನ್ನು
ಬಿಚ್ಚಿಡುವ ಸಾಮರ್ಥ್ಯವುಂಟು. ವರ ಮುಖ್ಯಾಭಿಪ್ರಾ ಯಗಳೆನ್ನು
`` ಹೇಮಚಂದ್ರ : ಕಾವ್ಯಾನುಶಾಸನ, ಪು. ೩; ಕಾವ್ಯಪ್ರಕಾಶೆ: ಮಾಣಿಕ್ಯಚಂದ್ರನ
" ಸಂಕೇತ ' ವ್ಯಾಖ್ಯಾನ, ಪು. ೭. "..ನವನವೋನ್ಮೇಷ ಶಾಲಿನ, ,,'' ಎಂಬ ಪಾಠಾಂತ
ರವೂ ಉಂಟು (ಔಚಿತ್ಯವಿಚಾರಚರ್ಚಾ, ೩೫ ವೃತ್ತಿ). "" ಉಲ್ಲೇಖ '' ಎಂದರೆ ಇಲ್ಲ ವರ್ಣನೆ,
ರಚನೆ ; "" ಉನ್ಮೇಪ '' ಎಂದರೆ ಹೊಳವು.
KM. ೧೪೫ 10
೧೪೬. ಭಾರತೀಯ ಕಾವ್ಯಮಾಮಾಂಸೆ
ಕ್ರೋಡೀಕರಿಸಿ, ಕಾವ್ಯದ ಉತ್ಪತ್ತಿಯನ್ನು ಕುರಿತು ಭಾರತೀಯರ ದೃಷ್ಟಿ
ಯೇನೆಂಬುದನ್ನು ಇಲ್ಲಿ ಕೆಲವು ಮಟ್ಟಿಗೆ ಸೂಚಿಸಲಾಗುತ್ತದೆ.
ಜ್ತ ಪ್ರತಿಭೆ '` ಎಂಬ ಶಬ್ದದ ಅಕ್ಷರಾರ್ಥ " ಹೊಳವು ''. ಇದರ
ಕಾರ್ಯವನ್ನು ಸರಳವಾದ ಮಾತುಗಳಲ್ಲ ರುದ್ರಟನು ಹೀಗೆ ಹೇಳಿದ್ದಾನೆ:
ಮನಸಿ ಪದಾ ಸುಸಮಾಧಿನಿ ವಿಸ್ಲುರಣಮನೇಕನಾಭಿಧೇಯಸ್ಯ |
ಅಕ್ಲಿ ಪ್ಪಾಸಿ ಪದಾನಿ ಚ ವಿಧಾಂತಿ ಯಠ್ಯಾಮಸ್‌ಾ ಶಕ್ತಿಃ ॥
ಪ್ರತಿಭೇತ್ಯಪರ್ಯೆರುದಿತಾ. . . 2
(ಕಾವ್ಯಾಲಂಕಾರ, |, ೧೫, ೧೬)
""ಸಮಾಹಿತವಾದ ಮನಸ್ಸಿನಲ್ಲಿ ಅನೇಕ ಪ್ರಕಾರವಾಗಿ ಅರ್ಥವೂ, ಅದನ್ನು
ತಿಳಿಸಲು ಕ್ಲಿಷ್ಟ ವಲ್ಲದ ಪದಗಳೂ ಯಾವುದರಿಂದ ಹೊಳೆಯುವುವೋ ಅದೇ
ಶಕ್ತಿ. ಇದನ್ನೇ ಪ್ರತಿಭೆಯೆಂದು ಇತರರು ಕರೆಯುವರು. '' ಪ್ರತಿಭೆಯ
ಮಹಿಮೆಯನ್ನು ರಾಜಶೇಖರನು ವರ್ಣಸಿರುವ ರೀತಿ: ಈ ಮೇಲಿನ
ವಾಕ್ಯಗಳಿಗೆ ವ್ಯಾಖ್ಯಾನದಂತಿದೆ : ಯಾವುದು ಶಬ್ಧಸಮೂಹವನ್ನೂ ಅರ್ಥ
ಪುಂಜವನ್ನೂ ಅಲಂಕಾರತಂತ್ರವನ್ನೂ ಇದೇ ಬಗೆಯ ಇತರ ಉಕ್ತಿಮಾರ್ಗ
ವನ್ನೂ ಹೃದಯದಲ್ಲಿ ಹೊಳೆಯಿಸುತ್ತದೋ ಅದೇ ಪ್ರತಿಭೆ. ಪ್ರತಿಭೆ
ಯಿಲ್ಲದವನಿಗೆ ಪದಾರ್ಥಸಮೂಹಪವು ಎದುರಿಗಿದ್ದರೂ ಇಲ್ಲದಂತೆಯೇ.
2 ನಮ್ಮ ಅಲಂಕಾರಿಕರು "" ಪ್ರತಿಭೆ ' " ಶಕ್ತಿ” ಎಂಬ ಎರಡು ಶಬ್ದಗಳನ್ನೂ ಸಾಮಾ
ನೃವಾಗಿ ಸಮಾನಾರ್ಥಕಗಳಂತೆ ಉಪಯೋಗಿಸುತ್ತಾರೆ. ರಾಜಶೇಖರನು ಮಾತ್ರ 4 ಶಕ್ತಿ''ಗೆ
ವಿಸ್ತಾರವಾದ ಅರ್ಥವನ್ನು ಕೊಟ್ಟು, ""ಶಕ್ತಸ್ಯ ಪ್ರತಿಭಾತಿ ಶಕ್ತಶ್ಚ ವ್ಯತ್ಪದೃತ್ತೇ''
ಎಂದರೆ, "" ಶಕ್ತಿಯುಳ್ಳವನಿಗೇ ಪ್ರತಿಭಾವ್ಯುತ್ಪತ್ತಿಗಳೆರಡೂ ಒದಗುವುವು '' ಎನ್ನುತ _ನೆ
(ಪು. ೧೧). ಅದರೆ, " ಪ್ರತಿಭೆ '' ಎಂಬ ಪದಕ್ಕೆ ಅಪೂರ್ವವನ್ನು ನಿರ್ಮಾಣಸಾಮರ್ಥ್ಯ''
ಎಂಬ ಸಾಮಾನ್ಯಾರ್ಥವನ್ನೂ ಕವಿಯಲ್ಲ ಆ ಸಾಮರ್ಥ್ಯವು ಪ್ರಕಾಶಗೊಳ್ಳುವ ಏಕಮಾರ್ಗ
ವಾದ “ಶಬ್ಮಾರ್ಥಗಳ ನವನವೋನ್ಮೇಷ'' ವೆಂಬ ವಿಶೇಪಾರ್ಥವನ್ನೂ ಸಮಯೋಚಿತವಾಗಿ
ಕೊಟ್ಟು ಉಪಯೋಗಿ ಸುವುದು. ರೂಢಿಯಾಗಿದೆ. ಹೀಗೆ ಅದು ಇಂಗ್ಲಿಪಿನ “ ೧0010೬''
“ imagination '' ಎಂಬ ಎರಡು ಅರ್ಥಗಳನ್ನೂ ಕೊಡಬಲ್ಲದ:. ನಮ್ಮ ಕಾವ್ಯಚರ್ಚೆ
ಯಲ್ಲ "" ಶಕ್ತಿ '' ಎಂಬುದನ್ನು ವಿಶಾಲತರವಾದ '" 00108 '' ಎಂಬ ಅರ್ಥದಲ್ಲಯೂ
ಸ ಪ್ರತಿಭೆ id ಎಂಬುದನ್ನು “imagination” ಉಂಬ ಅರ್ಥದಲ್ಲಿಯೂ ನಿಯತವಾಗಿ ಉಪ
ಯೋಗಿಸುವುದು ಉತ್ತಮ. "" ಪ್ರತಿಭಾನ '' ಎಂಬ ಇನ್ನೊಂದು ಸಮಾನ ಪದವುಂಟು.
ಅದಕ್ಕೆ "` 11107 '' ಎಂಬ ಅರ್ಥವನ್ನು ಕೆಡಬಹುದು. ಕನ್ನಡದಲ್ಲ ಬರೆಯುವಾಗ ಕೆಲ
ವರು “ imagination ” ಎಂಬುದಕ್ಕೆ "" ಭಾವನೆ” " ಕಲ್ಪನೆ” ಎಂಬ ಪ್ರತಿಶಬ್ದಗಳನ್ನು
ಇಟ್ಟುಕೊಳ್ಳುತ್ತಾರೆ. ಆದರೆ, " ಭಾವನೆ '' ಎಂದರೆ “contemplation, meditation”
ಎಂದು ಅರ್ಥ (" ರಸಗಂಗಾಧರ' ಕಾರನ ಪ್ರಯೋಗವನ್ನುಗಮನಿಸಿ) ; “ಕಲ್ಪನೆ '' ಎಂಬು
ದನ್ನು "" ಕncy, ೮೦10606100 '' ಎಂಬುದಕ್ಕೆ ಸಮಾನವಾಗಿ ಅಂಗೀಕರಿಸೋಣ,
3 ಕಾವ್ಯಮಾಮಾಂಸಾ, ಪು. ೧೧. ೧೨.
೧೦. ಕವಿತೆಯ ಆಕರ ೧೪೭
ಪ್ರತಿಭಾಶಾಲಿಯಾದವನಿಗೆ ಕಣ್ಣಮುಂದೆ ಕಾಣಿಸದಿದ್ದರೂ ಅವೆಲ್ಲ
ಪ್ರತ್ಯಕ್ಷವಾಗಿದ್ದಂತೆ ಯೀ. ಮ್ಲೇಧಾವಿರುದ್ರ ಕುಮಾರದಾಸ ಮೊದ
ಲಾದ ಕವಿಗಳು ಹುಟ್ಟುಗುರುಡರೆಂದು ಕೇಳಿದ್ದೇವೆ. ಅಲ್ಲದೆ, ಮಹಾ
ಕವಿಗಳು ದೇಶಾಂತರ ದ್ವೀಪಾಂತರಗಳ ಸಂಗತಿಗಳನ್ನೂ ಕಾಲಾಂತರ
ದಲ್ಲಿ ಇದ್ದ ಕಥಾಪುರುಷರ ವ್ಯವಹಾರಗಳನ್ನೂ ಎದುರಿಗಿದ್ದು ನೋಡಿ
ದಂತೆ, ಹೃದಯವನ್ನು ಹೊಕ್ಕು ಅರಿತಂತೆ ವರ್ಣಿಸುವುದಿಲ್ಲವೆ ? ಈ ಹೇಳಿ
ಕೆಗೆ ನಿದರ್ಶನವಾಗಿ ಕಾಳಿದಾಸನ ಕಾವ್ಯಗಳಿಂದ ನಾಲ್ಕು ಪದ್ಯಗಳನ್ನು
ರಾಜಶೇಖರನು ಉದಾಹರಿಸುತ್ತಾನೆ.
"«" ರವಿ ಕಾಣದ್ದನ್ನು ಕವಿ ಕಂಡ'' ಎಂದು ಹೇಳುವುದುಂಟು.
ಮಾನವ ಹೃದಯದ ಒಳಗನ್ನು ಪ್ರತಿಭೆಯ ಕಣ್ಣು ಕಂಡು ನಿರೂಪಿಸಬಲ್ಲ
ಡನ್ನುವುದಕ್ಕೆ " ಶಾಕುಂತಲ ' ದಿಂದ ಒಂದು ಉದಾಹರಣಿಯನ್ನು ಕೊಡ
ಬೇಕೆನ್ನಿ ಸುತ್ತದೆ. ಅಕಾರಣಪರಿತ್ಯಾಗದಿಂದ ನೊಂದು ಬೆಂದು ಶಕುಂ
ತಲೆ ಕತ್ತಪರ ಆತ್ರಮದಲ್ಲಿ ತಪಸ್ವಿನಿಯಾಗಿರುತ್ತಾಳಷ್ಟೆ ; ಪಶ್ಚಾತ್ತಾಪ
ದಗ್ಭ ನಾದ ದುಷ್ಯಂತನು ಅವಳನ್ನು ಕೊನೆಯ ಅಂಕದಲ್ಲಿ ಸಂಧಿಸಿ, ಅವಳ
ಕಂಬನಿಯನ್ನು ಒರಸುತ್ತಿ ರುವಾಗ ಅವನ ಜೆರಳಿನಲ್ಲಿದ್ದ ಉಂಗುರ ಶಕುಂತ
ಲೆಯ ಕಣ್ಣಿಗೆ ಸಹಜವಾಗಿ ಗೋಚರವಾಗುತ್ತದೆ. ಆ ಸಮಯದ ಮಾತು
ಕಥೆಯನ್ನು ಕಾಳಿದಾಸನು ಪೀಗೆ ಜೆಳಸುತ್ತಾನೆ :
ಶಕುಂತಲೆ -.(ನಾಮಾಂಸಿತವಾದ ಉಂ/ರವನ್ನು ಕಂಡು) ಅರ್ಕ ಪುತ್ರ,
ಐದೇ ಆ ಉಂಗುರ!
ರಾಜ. ಈ ಉಂಗುರ ದೊರೆತ ಬಳಿಕ ಜೇ ನನಸೆ ನೆನಪು ಮರಳಿದ್ದು ;
ಶಕುಂತಲೆ -ಆರ್ಯಪುತ್ರನಿಗೆ ನಂಬಿಕೆಯ:೨ಟ. ಮಾಡಬ್ಲೇಹಾಗಿದ್ದ ಸಮಯವಲ್ಲ
ಇದು ಡೊರೆ::ದೆ ನನಗೆ ಕೆಡುಕುಮಾಡಿತು.
ರಾಜ ಹಾಗಾದರೆ, ವಸಂತಶಮಾಗಮಕ್ಕೆ ಗುರುತಾಗಿ ಬಳ್ಳಿ ಹೂವನ್ನು
ಮಕ್ಕ ಶಳೆಯಲಿ
ಶಕುಂತಲೆ. -ಇದರಲ್ಲ ನನಗೆ ನಚ್ಚಿಕೆಯಿಲ್ಲ. ಅರ್ಯಸುತೃವೇ ಇದನ್ನು
ಧರಿಸಬೇಕು (ಶಾಕ.೦ತಲ, 11)
ಇಲ್ಲಿ ತಕುಂತಲೆಯ ಕೊನೆಯ ಮಾತು ಮುಖ್ಯವಾಗಿ ಲಕ್ಷಿಸತಕ್ಕ
ದ್ಧಾಗಿದೆ. ಸಾಧಾರಣಕವಿ ಈ ಸಂದರ್ಭದಲ್ಲ ಅವಳು ಉಂಗುರವನ್ನು
ಮತ್ತೆ ಸ್ವೀಕರಿಸಿ ಬೆರಳಿಗೆ ತೊಡಿಸಿಕೊಂಡಂತೆ ನಿರೂಪಿಸುತ್ತಿದ್ದನ:. ಆದರೆ
ಕಾಳಿದಾಸನ ಪ್ರತಿಭೆ ಇಲ್ಲ ಶಕುಂತಲೆಯ ಹೃದಯವ್ಯಾಪಾರವನ್ನು
೧೪೮ ಭಾರತೀಯ ಕಾವ್ಯಮಾಮಾಂಸೆ
ತಾದಾತ್ಮ ದಿಂದ ಒಳಹೊಕ್ಕು ನೋಡಿ ಅದನ್ನು ಯಥಾವತ್ತಾಗಿ ಆತಿ
ಮನೋಹರವಾಗಿ ಆಕೆಯ ಮಾತಿನಲ್ಲಿ ಪಿಡಿದು ತೋರಿಸಿದೆ. ಎಲ್ಲಿಯೋ
ಬಿದ್ದುಹೋಗಿ, ನಂಬಿದ ವೇಳೆಗೆ ಸರಿಯಾಗಿ ತಲೆ ಮರಸಿಕೊಂಡ ಈ
ಉಂಗುರವನ್ನು, ಈ ಅಪಕಾರಿಯನ್ನು, ಶಕುಂತಲೆ ಮತ್ತೆ ಹೇಗೆ ನೆಚ್ಚಿ
ಯಾಳು ! ಅದನ್ನು ಧರಿಸಿದರೆ ದುರದೃಪ್ಪ ಮತ್ತೆ ಒದಗೀತೆಂದು ಕೂಡ
ಶಂಕಿಸಿದಳೋ ಏನೋ. ಇದು ಎಷ್ಟು ಸಹಜವಾದ ಮನೋವೃತ್ತಿ 1...
ಆದರೆ ಇದರ ಅರಿವನ್ನು ನಮಗೆ ತಂದುಕೊಡಲು ಕನಿಯ ಪ್ರತಿಭೆಯೇ
ಕೆಲಸಮಾಡಬೇಕು.
ಪ್ರತಿಭೆ ನಿಜವಾಗಿ ಒಂದು ರೀತಿಯ ದೃಷ್ಟಿ. ಅದು ಬುದ್ಧಿಯ
ಕಣ್ಣಲ್ಲ ಕ ಹೈದಯದ ಕಣ್ಣು . ಕವಿಯ ಈ ಒಳೆಗಣ್ಣು ತೆರೆದಾಗ ವಿಶ್ವದ
ಹೃದಯವೇ ಅವನಿಗೆ ತೆರೆಯುತ್ತದೆ.
ಯದುವನ್ವೀಲನಶಕ್ಟ್ಯೈವ ವಿಶ್ವಮುನ್ಮೀಲತಿ ಕ್ಷಣಾತ್ |
ಸ್ಕ್ಯಾತ್ಸಾ ಯತನವಿಶ್ರಾಂತಾ೨ 3೦ ವಂಬೇ ಪ್ರತಿಬಾಂ ಕಿವಾಂ ॥
(ಧ್ವನ್ಯಾ.ಲೋಜನ, ಪು. ೬೦)
ಎಂದು ಅಭಿನವಗುಪ್ತ ವಿರಚಿತವಾದ ಸ್ತುತಿಪದ್ಯವೊಂದುಂಟು. ಇಲ್ಲಿ,
ಕಾಶ್ಮೀರ ಶೈವಾಗಮಕ್ಕೆ ಅನುಸಾರವಾಗಿ ಪರಮೇಶ್ವರನ ಆತ್ಮ
ಪ್ರಕಾಶನಶಕ್ತಿಯಾದ ಪರಾಪ್ರತಿಭೆಯನ್ನೂ ಕವಿಯ ಪ್ರತಿಭೆಯನ್ನೂ
ಅಭಿನವಗುಪ್ತನು ಸಮಾನವಿಶೇಷಣಗಳಿಂದ ವರ್ಣಿಸುವಂತೆ ತೋರು
ತ್ತದೆ. ಪರಾಪ್ರತಿಭೆ ಪರಮೇಶ್ವರನಲ್ಲ ನಿತ್ಯವಾಗಿ ನೆಲೆಗೊಂಡಿರತಕ್ಕದ್ದು ;
ಅದು ಉನ್ಮೀಲಿತವಾಯಿತೆಂದರೆ, ಆದೇ ಕ್ಷಣದಲ್ಲ ವಿಶ್ವವಷ್ಟೂ ಉನ್ಮೀಲಿತ
ವಾಗುತ್ತದೆ. ಕವಿಪ್ರತಿಭೆಯ ಕಾರ್ಯವೂ ಇದೇ ರೀತಿ. ಇದರ ನೆಲೆವೀಡು
ಕವಿಹೃದಯ. ಈ ಪ್ರ ತಿಭೆ ಉದ್ದೋಧನಗೊಂಡಾಗ ಹೊಸದೊಂದು
ವಿಶ್ವವೇ ಇದಕ್ಕೆ ಗೋಚರವಾಗುತ್ತದೆ. ಸೃಷ್ಟಿಕರ್ತನಂತೆ ಇಚ್ಛಾಮಾತ್ರ
ದಿಂದ ಕವಿ ಅಪೂರ್ವ ವಿಚಿತ್ರ ಜಗತ್ತನ್ನು ಇದರ ಬಲದಿಂದ ನಿರ್ಮಿಸ
ಬಲ್ಲನು."
4 ಕವಿ ಪ್ರತಿಭೆಯ ತಿರುಳನ್ನು ಕುರಿತು ಸಂಗ್ರಹವಾದ ಉಕ್ತಿ " ಅಭಿನವಭಾರತಿ 'ಯಲ್ಲ
ಒಂದು ಕಡೆ ಹೀಗೆ ಬಂದಿದೆ : "",., ಕವೇರಪಿ ಸ್ವಷೃದಯಾಯತನ-ಸತತೋಡಿತ--ಪ್ರತಿಭಾಭಿ
ಧಾನ_ಪರವಾಗ್ಥೇವತಾನುಗ್ರಹೋತ್ಮಿ ತ ವಿಚಿತ್ರಾಪೂರ್ವನಿರ್ಮಾಣ ಶಕ್ತಿಶಾಲಿನಃ ಪ್ರಜಾ
ಫತೇರಿವ ಕಾಮಜನಿತಜಗತಃ '' (ನಾಟ್ಯಶಾಸ್ತ್ರ, 1. ಪು. ೪). ಈ ಅಧ್ಯಾಯದಲ್ಲ ಹೇಳಿರುವು
'ಜೆಬ್ಲ ಈ ಉಕ್ತಿಯ ವಿವರಣಿ ಮಾತ್ರ ಎನ್ನಬಹುದು.
೧೦. ಕವಿತೆಯ ಅಕರ ೧೪೯
ಕವಿದೃಷ್ಟಿಯ ವಿಶೇಷ ಲಕ್ಷಣವೇನು ? ಈ ಪ್ರಶ್ನೆಗೆ ಉತ್ತರ ಮಹಿಮ
ಭಟ್ಟನ ಗ್ರಂಥದಲ್ಲಿ ದೊರೆಯುತ್ತದೆ." ಪ್ರತಿವಸ್ತುವಿಗೂ ಸಾಮಾನ್ಯ,
ವಿಶೇಷ ಎಂದು ಎರಡು ರೂಪಗಳು೦ಟು. ಅನುಮಾನಪೇ ಮೊದಲಾದ
ವಿಚಾರಸರಣಿಗೂ ಲೋಕರೂಢಿಯ ಉಕ್ತಿಗೂ ನಿಲುಕ.ವುದು ವಸ್ತುವಿನ
ಸಾಮಾನ್ಯರೂಪ ಮಾತ್ರ. ಆದರ ವಿಶೇಷರೂಪವು ಕವಿಪ್ರ ತಿಭೆಗೆ ಗೋಚರ
ವಾಗುತ್ತಡೆ.
ರಸಾನುಗುಣಶಬ್ದಾರ್ಧತಿ೦ಎಇಸಿ,ಮಿಸಚೆ:ತ |
ಕ್ಷಣಂ ಸ್ವರೂಪಶ್ಪರ್ಶೋಣ್ತಾ ಪ್ರಜ್ಞೆ ತೃವೆ ಪ್ರಶಿನಾ ಕವ ॥
ಸಾ ಹಿ ಚಕ್ಷುರ್ಭಗವತಃ ಶ್ರತೀಯವಮಿತಿ ಗೀಯತೇ |
ಯನ ಸಾಕ್ಷಾಸ್ಮರೋಕ್ಕೇಷ ಭಾವಾ ಸ್ರೈ್ಯೊಕಾಲ್ಯವರ್ತಿನಃ ॥
(ವ್ಯಕ್ತಿಟವೇಕ, ಪು. ೩೯೦-೧)
" [ತನ್ನಲ್ಲ ತಂಪಿರುವ] ರಸಕ್ಕೆ ಅನುಗುಣವಾದ ತಬ್ದಾರ್ಥಗಳನ್ನು
ಕುರಿತ ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತು
ಏನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲ ಹಟ್ಟನೆ ಹೊಮ್ಮು
ತ್ತದೆ. ಇದೇ ಕವಿಯ ಪ್ರತಿಭೆ. ಇದನ್ನು ಪರಮ್ಲೇಶ್ವರನ ಮೂರನೆಯ
ಕಣ್ಣಿಂದ ಕೀರ್ತಿಸುತ್ತಾರೆ. ಏಕೆಂದರೆ, ಅವನು ಇದರ ಮೂಲಕ ತ್ರಿಕಾಲ
ದಲ್ಲಿ ನಡೆಯುವ ಸಂಗತಿಗಳನ್ನೂ ಸಾಕ್ಷಾತ್ತಾಗಿ ಕಾಣಬಲ್ಲನು.'' ಹೀಗೆ
ಕವಿಪ್ರತಿಭೆಯನ್ನು ಮಹಿಮಭಟ್ಟನೂ ಅಭಿನವಗುಪ್ತನೂ ಪರಮೇಶ್ವರನ
ಜ್ಞಾ ನಚಕ್ಷುಸ್ಸಿಗೆ ಹೋಲಿಸಿರುವುದು ಹೆಚ್ಚ ಲ್ಲ; ಅದು ವಸ್ತುಸ್ವಭಾವದ
ಏಶೇಷರೂಪವನ್ನು ಭೇದಿಸಿ ನೋಡುವುದೆಂಬುದೂ ಸುಳ್ಳಲ್ಲ. ಇದಕ್ಕೆ
ಕಾರಣ ಪೀಗೆಂದು ತೋರುತ್ತದೆ: ಲೋಕವ್ಯವಹಾರದಲ್ಲೇ ಸದಾ
ಮಗ್ನನಾಗಿರುವ ಸಾಮಾನ್ಯವೃಕ್ತಿಗೆ ಒಂದು ವಸ್ತುವೂ ಮತ್ತೊಂದು
ವಸ್ತುವೂ ಹೆಚ್ಚು ಕಡಮೆ ಒಂದೇ ರೀತಿಯಾಗಿ ಗೋಚರಿಸುತ್ತವೆ ; ಅವು
ಗಳ ಆಂತರಿಕ ಗುಣಗಳಂತೂ ಗಮನಕ್ಕೆ ಖಂಡಿತ ಬರುವುದಿಲ್ಲ. ಏಕೆಂದರೆ
ತನ್ನ ಸುತ್ತಮುತ್ತ ಇರುವ ಪದಾರ್ಥಗಳಿಂದ ತಾನು ಯಾವ ಉಪಯೋಗ
ವನ್ನು ಪಡೆದೇನು ; ಅವುಗಳನ್ನು ತನ್ನ ಅನುಕೂಲಕ್ಕಾಗಿ ಹೇಗೆ ಹವಣಿಸಿ
ಕೊಂಡೇನು ಎಂಬುದೇ ಅವನಿಗೆ ಸಂತತವಾದ ಚಿಂತೆ. ವಸ್ತುವಿನ
೨ಮಹಿಮಭಟ್ಟನು ನೈೈಖಾಯಿಕ ; ನ್ಯಾಯದರ್ಶನದ ತತ್ವವನ್ನೇ ಕವಿಪ್ರತಿಭೆಗೆ ಇಲ್ಲ
ಅನ್ಸಯಿಸುತ್ತಾನೆ. ಅದರ ಶಾಸ್ತ್ರೀಯ ಪ್ರತಿಪಾದನೆ ನಮಗೆ ಅಪ್ರಕೃತ.
೧೫೦ ಭಾರತೀಯ ಕಾವ್ಯವಿ್ ಮಾಂಸೆ
ನಿಜನ್ಸಿ ತಿಯನ್ನು ಪರಿಭಾವಿಸುವ ಆಪೇಕ್ಷೆಯಾಗಲಿ ವ್ಯವಧಾನವಾಗಲಿ ಅವ
ನಿಗೆ ಇರುವುದಿಲ್ಲ. ಕವಿಯ ಕರ್ಮವಾದರೆ ಕೇವಲ ಭಾವನೆ; ಅದು ಒಂದು
ಬಗೆಯ ಸಮಾಧಿ." ಲೌಕಿಕವಾದ ಉಪಯೋಗದ ದೃಷ್ಟಿ ಅವನಿಗೆ ಎಳ್ಳಪ್ಪೂ
ಇಲ್ಲ. ಅವನ ತುದ್ಧ ದೃಷ್ಟಿಗೆ ಸಿಕ್ಕಿದ ಕೂಡಲೇ ವಿಶ್ವದ ವಸ್ತುಗಳೆಲ್ಲ
ತಮ್ಮ ಪರಿಚಿತವಾದ ಮೇಲುಮುಸುಕನ್ನು ಕಳಚುತ್ತೆಷೆ; ಒಳಗಿನ ವಿಶೇಷ
ರೂಪ ಪ್ರಕಾಶವಾಗುತ್ತದೆ. ಮೇಲುನೋಟಕ್ಕೆ ಅತಿ ವಿಕೃಸವೆಂದು
ತೋರುವುದರಲ್ಲಿ ಕೂಡ ಪರಮ ರಮಣೀಯತೆಯನ್ನೂ ಅತಿ ತುಚ್ಛವೆಂದು
ತೋರುವುದರಲ್ಲ ಕೂಡ ಅರ್ಥಮಹತ್ತ $ವನ್ನೂ ಕವಿಯೆ ಪ್ರತಿಭಾದೃ ಖಿ
ಕಾಣುತ್ತದೆ, ಕಾಣಿಸುತ್ತದೆ. ಈ ಬಗೆಯ ಅಪೂರ್ವ ದರ್ಶನವನ್ನೇ
ಕವಿಯ ವಾಣಿ ರೂಪಿಸುವುದು. ಆದಕಾರಣವೇ, ನಾವು ದಿನದಿನವೂ
ಕಂಡು ಕೇಳಿದ ಸಾಮಾನ್ಯಾರ್ಥಗಳು ಕನವಿಪ್ರತಿಭೆಯ ಬೆಳಕಿನಲ್ಲಿ ಹೊಳೆ
ದಾಗ ಹೊಸಹೊಸ ಶೆರನಾಗಿ ಕಾಣಿಸುತ್ತವೆ.
ಪ್ರತಿಭಾವ್ಯಾಪಾರವು ದೃಷ್ಟಿಯೂ ಹೌದು ; ಸೃಷ್ಟಿಯೂ ಹೌದು.
" ಅಪೂರ್ವವಸ್ತು ನಿರ್ಮಾಣಕ್ಷಮಾ ಜು (೭ ಅಪೂರ್ವ ವಸ್ತುಗಳನ್ನು
ನಿರ್ಮಾಣಮಾಡುವ ಸಾಮರ್ಥ $ವುಳದ್ದು i ಎಂದು ವರ್ಣಿಸಿ ಅದರ
ಸೃಷ್ಟಿತಕ್ತಿಯ ಕಡೆಗೆ ನಮ್ಮ ಗಮನವನ್ನು ಆಲಂಕಾರಿಕರು ಎಳೆಯುತ್ತಾರೆ.
ಇಷ್ಟೇ ಅಲ್ಲ. ಕವಿಯನ್ನು ಬ್ರಹ್ಮನಿಗೆ ಹೋಲಿಸಿ, ಬ್ರಹ್ಮಸೈಪ್ಪಿಗಿಂತಲೂ
ಕವಿಸೃಪ್ಪಿಯದೇ ಹೆಚ್ಚುಗಾರಿಕೆಯೆಂದು ತೋರಿಸುವ ಪ್ರತಂಪಾವಾಕ್ಯಗಳೂ
ಉಂಟು. ಈ ವಿಷಯವನ್ನು ಬೇರೊಂದು ಅಧ್ಯಾಯದಲ್ಲಿ ವಿವೇಚನೆ
ಮಾಡಬೇಕಾಗುತ್ತದೆ. ಉಪಾದಾನಸಾಮಗ್ರಿ ಯಾವುದೂ ಇಲ್ಲದ ಕವಿ
ತನ್ನ ಪ್ರತಿಭಾಸಾಮರ್ಥ್ಯ. ಮಾತ್ರದಿಂದಲೇ ನೂತನ ಪ್ರಪಂಚವನ್ನು
ನಿರ್ಮಾಣಮಾಡುತ್ತಾನೆಂಬ ಹೇಳಿಕೆಯನ್ನು ಇಲ್ಲಿ ವಿಚಾರಮಾಡತಕ್ಕದ್ದು
ಆವಶ್ಯಕ. ಕವಿಸೃಪ್ಟಿಯ ಅಪೂರ್ವತೆ ನಿಜವಾಗಿಯೂ ಇರುವುದು "ಬಲ್ಲಿ?
ಅವನು ವರ್ಣಿಸುವ ವಸ್ತುಸಂದರ್ಭಗಳೂ ಅವನು ಉಪಯೋಗಿಸುವ
ಮಾತುಗಳೂ ಹಿಂದೆ ಎಲ್ಲಿಯೂ ಇರಲೇ ಇಲ್ಲವೆಂದು ತಾತ್ಪರ್ಯವೇ? ಅಲ್ಲ
ಪೆಂಬುದು ಇದುವರೆಗಿನ ನಿರೂಪಣಿಯಿಂದಲೇ ಸ್ಪಪ್ಪವಾಗುತ್ತದೆ. ಜೀವನ
6 * ಕಾವ್ಯಕರ್ಮಣಿ ಕವೇ ಸಮಾಧಿಃ ಪರಂ ಮ್ಯಾಪ್ರಿಯತೇ'' ಇತಿ ಶ್ಯಾಮದೇವಃ.
ಮನಸ ಏಕಾಗ್ರತಾ ಸಮಾಧಿಃ. ಸಮಾಖಪಿತಂ ಚಿತ್ತಂ ಅರ್ಥಾನ್ ಪಶ್ಯತಿ.
(ಕಾವ್ಯಮಾಮಾಂಸಾ, ಪು. ೧೧)
7" ಪ್ರತಿಭಾ ಅಪೂರ್ಪವಸ್ತು ನಿರ್ಮಾಣಕ್ಷಮಾ ಪ್ರಜ್ಞಾ. ತಸ್ಯಾ ವಿಶೇಷೋ ರಸಾ
ವೇಶವೈೊಶದ್ಯ ಸೌಂದರ್ಯ ಕಾವ್ಯ ನಿರ್ಮಾಣಕ್ಷವ ತ್ವಂ.” (ಧೃನ್ಯಾ. ಲೋಚನ, ಪು. ೨೯)
೧೦. ಕವಿತೆಯ ಆಕರ ೧೫೧
ದಲ್ಲಿ ಹೇಗೋ ಕಾವ್ಯದಲ್ಲಿಯೂ ಹಾಗೆಯೇ ಶೂನ್ಯದಿಂದ ಪೂರ್ಣವು
ಎಂದಿಗೂ ಉದಿಸಲಾರದು. ಕವಿಯ ಪ್ರತಿಭೆ ಜೇಡರ ಹುಳುವಿನಂತೆ ತನ್ನ
ಉದರದಿಂದಲ್ಲೇ ಬಳೆಗಳನ್ನು ತೆಗೆದು ಮನೋಹರವಾದ ಆಕೃತಿಗಳನ್ನು
ನಿರ್ಮಿಸಿದರೂ ಆ ಎಳೆಗಳ ಮೂಲಸಾಮಗ್ರಿ ಲೋಕದಿಂದಲೇ ಅದಕ್ಕೆ ಒದ
ಗಿರದೇಕು ತನ್ನ ಅನುಭವಕ್ಕೂ ಆಲ್ಲೋಚನೆಗೂ ವಿಶ್ವದ ಎಷ್ಟು ಸಾಮಗ್ರಿ
ನಿಲುಕಿಡೆಯೋ ಅಪ್ಪನ್ನೇ ಹೊಸಹೊಸ ರೀತಿಯಲ್ಲಿ ಜೋಡಿಸಿ ಬಣ್ಣಗೂಡಿಸಿ
ಕವಿ ರೂಪಿಸಬಲ್ಲನಲ್ಲದೆ ಅಭೂತಪೂರ್ವವಾದ ಏನನ್ನೂ ತಳಹದಿಯಿಲ್ಲ
ದೆಯ್ದೇ ಕಲ್ಪಿಸಲಾರನು. ಇದು ಆಧುನಿಕ ಮನಃಶಾಸ್ತ್ರದ ಸಿದ್ಧಾಂತ.
ನಮ್ಮ ಪ್ರಾಚೀನಾಲಂಕಾರಿಕರು ಕೂಡ ಕವಿಪ್ರತಿಭೆಯ ಪ್ರಶಂಷೆಯಲ್ಲಿ ಪರ
ವತರಾದಾಗಲೂ ಈ ಎಷಯವನ್ನು ಮರೆತಿರಲಿಲ್ಲಷೆನ್ನು ವುದಕ್ಕೆ ಆನಂದ
ವರ್ಧನನ ಈ ಮನೋಹರವಾದ ಎರಡು ಪದ್ಯಗಳು ಸಾಕ್ಷಿ:
ಅಪಾರೇ ಕಾವ್ಯಸ೦ಸಾರೇ ಕವಿರೇವ ಪ್ರಜಾಪತಿಃ |
ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ ॥ .
ಭಾವಾನಚೇತನಾನಪಿ ಚೀತನವಚ್ಚೇತನಾನಚೇತನವತ್ |
ವ್ಯವಹಾರಯತಿ ಯಥೇಪ್ಜಂ ಸುಕವಿಃ ಕಾವ್ಯೇ ಸೃತಂತ್ರತಯಾ |
ಕ (ಧ್ವನ್ಯಾ., ಪು. ೨೨೨)
ಅಪಾರವಾದ ಕಾವ್ಯಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ
ಹೇಗೆ ರುಚಸುವು ಡೋ ಹಾಗೆ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ.
ಅಜೇತನವಾದ ವಸುಗಳನ್ನು ಸಜೇತನವಾಗಿಯೂ ಸಚೇತನವಾದವು
ಗಳನ್ನು ಅಚೇತನವಾಗಿಯೂ ಸ ತನಗೆ ಇಪ್ಪಬಂದಂತೆ ಸ್ವತೆಂತ್ರತೆಯಿಂದ
ವ್ಯವಹಾರಗೊಳಿಸುತ್ತಾನೆ.'' ) ಇಲ್ಲ "" ಪರಿವರ್ತತ್ತೇ'' ("" ರೂಪಾಂತರ
ಗೊಳಿಸುತಾನೆ' ) ಎಂಬ ಮಾತನ್ನು ಮುಖ್ಯವಾಗಿ ಗಮನಿಸಬೇಕು.
ಒಂದನ್ನು ಇನ್ನೊಂದಾಗಿ ಪರಿವರ್ತಿಸುವ ನಿತ್ಯಸ್ಥಾತಂತ್ರ್ಯ ಕವಿಪ್ರ ತಿಭೆಗೆ
ಉಂಟು. ಇದೇ ಅದರ ಅಪೂರ್ವಕಾರ್ಯ. ಆದರೆ ಈ ಪರಿವರ್ತನ
ಕಾರ್ಯಕ್ಕೆ ಮೂಲಭೂತವಾಗಿ ಲೋಕದ ಸಾಮಗ್ರಿ ಇರಬೇಕು.
ತ ಏವ ಪದಸಂಪಾತಾಸ್ಕಾ ೩ ವಾರ್ಥವಿಭೂತಹುಃ |
ತಥಾಪಿ ನವ್ಯಂ ಭವತಿ ಕಾವ್ಯಂ ಗ್ರಥನಕೌಶಲಾತ್ ॥ $
“ ಅದೇ ಪದಸಮೂಹ, ಅದೇ ಅರ್ಹಸಂಪತ್ತು ; ಆದರೂ ಕಟ್ಟುವ
ಕೌಶಲದಿಂದ ಕಾವ್ಯ ಹೊಸದಾಗುತ್ತದೆ''..ಎಂಬ ಉಕ್ತಿಯನ್ನು ಇಲ್ಲಿ
* ರಸಾರ್ಣವ ಸುಧಾಕರ, |, ೨೪೨.
೧೫೨ ಭಾರತೀಯ ಕಾವ್ಯಮಾಮಾಂಸೆ
ಸ್ಮರಿಸಬಹುದು. ಇಲ್ಲಿ "" ಗ್ರಥನ'' ಎಂಬುದರ ಆರ್ಥವನ್ನು ಮಾತ್ರ ಅತಿ
ವಿಶಾಲವಾಗಿ ಗ್ರಹಿಸಬೇಕು.
ಈ ವಿಚಾರಕ್ಕೆ ಪ್ರತ್ಯೇಕವಾಗಿ ಗಮನಕೊಟ್ಟು ಕುಂಶಕನು ಗಮನಾ
ರ್ಹವಾದ ಕೆಲವು ಅಂಶಗಳನ್ನು ಪ್ರತಿಪಾದಿಸಿದ್ದಾನೆ. ಅವನ ಉಕ್ತಿಯ
ಸಾರವಿಷ್ಟು : ವರ್ಣನೆಗೆ ತೊಡಗಿದ ಕವಿ ಅಭೂತವಾದ ಪದಾರ್ಥ
ವೇನನ್ನೂ ನಿರ್ಮಿಸುವುದಿಲ್ಲ. ಅವನು ಒದಗಿಸುವುದೆಲ್ಲ ಒಂದು ಅತಿಶಯ
ಕಾಂತಿ. ಇದರಿಂದ ವರ್ಣನೀಯವಸ್ತು ಬಣ್ಣಗೊಂಡು ಆಗತಾನೆ ಕವಿಕಲ್ಪನೆ
ಯಲ್ಲಿ ನಿರ್ಮಾಣವಾದಂತೆ ಹೊಳೆಯುತ್ತದೆ. ಈ ಬಗೆಯ ಅತಿಶಯಕ್ಕೆ
ರಮಣೀವರ್ಣನೆ ಒಳ್ಳೆಯ ನಿದರ್ಶನ:
ಇವಳಂ ಶೃಂಗಾರಸಾರಂ ಕು ಉಮತಶರನೆ ಮೇಣ್ ಮಾಡಿದಂ ಪ್ರೋಲ್ಲಸತ್ಪ
ಲ್ಹವಪುಪ್ಪ೦ ಮೇಣ* ಬಸ೦ತ೦ ಬಯಸಿ ಪಡೆದನೆತ್ತಂ ಸುಧಾಸಾರಮಂ ಸೂ!
ಸುವ ಚ೦ದ್ರ೦ ತಾನೆ ಮೇಣ್ ಪುಟ್ಟಿಸಿದನತಿಜಡ೦ ಛಾ೦ದಸಂ ಪದ್ಮಜಂ ನಿ
ಕ್ಕುವಮಲ್ಲ೦ ಕರ್ತೃವಾದ೦ದನಿತತಿಶಯಮಂ೦ ತಾಳ್ವುದೇ ಕನ್ನೆಯಂದಂ ॥ :
ಲೋಕಪ್ರಸಿದ್ಧವಾದ ಸ್ತ್ರೀರೂಪಕ್ಕೆ ಇಲ್ಲ ಅತಿಶಯವಾದ ಮೆರುಗನ್ನು
ಕೊಟ್ಟು, ಇದೊಂದು ಅಪೂರ್ವ ಸೃಷ್ಟಿಯೆ೦ದು ತೋರುವಂತೆ ಕವಿ
ರಚಿಸಿದ್ದಾನಲ್ಲವೆ |
ಲೋಕದಲ್ಲಿ ಆಗಲೆ ಸಿದ್ಧವಾಗಿರುವ ವಸ್ತುಗಳ ವರ್ಣನೆಯಲ್ಲ
ಮಾತ್ರವಲ್ಲ ; ಒಂದು ಸಂದರ್ಭವನ್ನೇ ಕವಿ ನೂತನವಾಗಿ ಕಲ್ಪಿಸಿದಂತೆ
ತೋರುವಾಗ ಕೂಡ, ಮೂಲ ಸಾಮಗ್ರಿಯೇ ಇಲ್ಲದೆ ಅವನ ಪ್ರತಿಭೆ
ನಿರ್ಮಿಸಿರುವುದಿಲ್ಲ. ಇಲ್ಲ ಆಗುವುದು ಇಷ್ಟು: ಒಂದು ವಸ್ತು ವಿಗೂ
(ಅಥವಾ ಅರ್ಥಕ್ಕೂ) ಮತ್ತೊಂದಕ್ಕೂ ಪರಸ್ಪರ ಸಂಬಂಧವಿರುವುದರಿಂದ
ಅವುಗಳ ಗುಣಗಳು ಅವನ ಪ್ರತಿಭೆಯಲ್ಲಿ ತಮ್ಮಪ್ಪಕ್ಕೆ ತಾಷೇ ಹೊಳೆದು
ಒಂದರೊಡನೊಂದು ಹೊಂದಿಕೊಳ್ಳುತ್ತ ಷೆ; ಈ ಸೇರುಷೆಯಿಂದ ಹೊಸ
ದೊಂದು ಪದಾರ್ಥವೇ ಸೃಷ್ಟಿಯಾದಂತೆ ನಮಗೆ ತೋರುತ್ತದೆ. ಆದರೆ
? ಕಾವ್ಯಾವಲೋಕನ, ೪೨. ಇದು ಕಾಳಿದಾಸನ " ವಿಶ್ರಮೋರ್ವಶೀಯ' ದಲ್ಲಿ
ಬರುವ ""ಅಸ್ಯಾಃ ಸರ್ಗವಿಧ?ೌ......'' ಎಂಬ ಉರ್ಪ್ವಶೀ ವರ್ಣನಯ ಅನುಕರಣವೆಂಬುದು
ಸ್ಪಷ್ಟವಾಗಿದೆ. ಕು೦ತಕನು ಕಾಳಿದಾಸನ ಪದ್ಯವನ್ನೇ ಉದ-ಹರಿಸಿದ್ದಾನೆ. ರವೀಂದ್ರ
ನಾಥ ಠಾಕೂರರ "" 0 woman; you ave not merely the handiw rk of
God, but also of men...You are one half woman and one half
dream '' ಎ೦ಬ ಮಾತನ್ನು ಹೊಲಿಸಿ (Th Gardener» ಪ. ೧೦೨).
೧೦. ಕವಿತೆಯ ಅಕರ ೧೫೩
ಇಲ್ಲಿ ಕೂಡ ಕವಿಯ ಅಪೂರ್ವ ಕಾರ್ಯವೆಂದರೆ, ಇವಕ್ಕೆ ಒದಗಿಸಿದ ಅತಿ
ಶಯತೆ ಮಾತ್ರ. . " ಪ್ರಸ್ತುತಾತಕಯನಿಧಾನವ್ಯತಿರೇಕೇಣ ನ ಕಿಂಚಿದ
ಪೂರ್ವವತ್ರಾಸ್ತಿ.'' (ವಕ್ರೋಕ್ತಿಜೀನಿತ, ಪು. ೧೪೩.)
ಕವಿಗೆ ಅಪೂರ್ವವಸ್ತು ನಿರ್ಮಾಪಕನೆಂಬ ಬಿರುದು ಪೂರ್ಣಾರ್ಥ
ದಲ್ಲಿ ಸಬ್ಬುವುದಿಲ್ಲವೆಂದು ಹೇಳಿದ ಮಾತ್ರಕ್ಕೇ ಕವಿಸೃಷ್ಟಿಯ ಮಹಿಮೆ
ಯನ್ನು ಅಲ್ಲಗಳೆದಂತಾಗಲಿಲ್ಲ. ಅವನ ಪ್ರತಿಭೆಯಿಂದ ಹೊರಹೊಮ್ಮಿದ
ವಸ್ತು ನೂತನವೆಂಬಂತೆಯೇ ಗೋಚರವಾಗುತ್ತದೆ ; ಲೋಕದಲ್ಲಿ ಗೋಚರ
ವಾಗದ ಒಂದು ಮನೋಹರಕಾಂತಿ ಅದರಲ್ಲಿ ಮಿಂಚುತ್ತಿರುತ್ತದೆ.
ಅದರಲ್ಲಿ ಸೇರಿರುವ ಅಂಶಗಳನ್ನು ಜೇರೆ ಜೇರೆಯಾಗಿ ಬಿಡಿಸಿ ನೋಡಿದರೆ
ಅಕಂಭಾವ್ಯವೆಂದು ತೋರಿದರೂ, ಕವಿಪ್ರತಿಭೆಯ ಮೂಸೆಯಲ್ಲಿ ಅವು
ಬೆರೆದಾಗ ಸಮಂಜಸವಾದ ರೂಪವು ಉತ್ಪನ್ನವಾಗುತ್ತದೆ. ಇದು ನಿಜ
ವಾಗಿಯೂ ಸೃಷ್ಟಿಯೇ ಸರಿ. ಇದರ ಮೇಲೆ ಹೊಸ ಹೊಸ ಕಲ್ಪನೆಗಳು
ಕವಿವಾಣಿಯಿಂದ ಕ್ಷಣಕ್ಷಣಕ್ಕೂ ನಿಲಷೇ ಇಲ್ಲದೆ ಹೊರಬೀಳುವುದನ್ನು
ಯಾರು ಅರಿಯರು ! "" ಪ್ರಿಯೆಯ ಬೆಡಗುಗಳು, ಸುಕವಿವಾಣಿಯ
ಅರ್ಥಗಳ... ಇವಕ್ಕೆ ಅವಧಿಯುಂಟೆ, ಇವು ಎಂದಾದರೂ ಪುನರುಕ್ತ
ವಾಗುವುದುಂಟೆ!'' ಎಂದು ಆನಂದವರ್ಥನನು ಶತ್ಲಾಫಿಸುತ್ತಾನೆ."
ಇವನಿಗಿಂತಲೂ ಹಿಂದೆಯ್ದೇ ಮಾಘನು " ಕ್ಷಣಕ್ಷಣಕ್ಕೂ ನವೋನವವಾಗು
ವುದೇ ರಮಣೀಯತೆಯ ರೂಪ''ಪೆಂದು ಸಾರಿದ್ದನು. ಸೌಂದರ್ಯದ
ರಹಸ್ಯವೇ ಇದು,
ಪ್ರತಿಭೆಯ ಸ್ವರೂಪವನ್ನು ನಿರೂಪಿಸುವವರೆಲ್ಲರೂ ಅರ್ಥ-ತಬ್ದ
ಅಥವಾ ದರ್ಶನ_ವರ್ಣನ ಈ ಎರಡೂ ಕವಿಪ್ರತಿಭೆಯಲ್ಲೇ ನಿಪ್ಟನ್ನ
ವಾಗುವುಪೆಂದು ಹೇಳುತ್ತಾರೆ. ಇದು ಯುಕ್ತಷೇ ಸರಿ. ಕವಿಯ ಕಾಣ್ಕೆ
10 ಕುಂ5ಕನ ನಿರೂಪಣ ಕಲವು ಕಡೆಗಳಲ್ಲಿ ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ಅದರೆ
ಅವನ ಒಟ್ಟು ಅಭಿಪ್ರಾಯ ಹೀಗೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
1! ಐದರ ಮೂಲ ಪ್ರಾಕ್ಕ ತದಲ್ಲಿಡೆ; ಐದು ಅವನ " ವಿಷಮಬಾಣಲೀಲೆ 'ಯ ಪದ್ಯ
ವಂತೆ. ಇದರ ಸಂಸ್ಕೃತ ಚ್ಛಾಯೆ:
ನ ಚತೇಪಾಂ ಘಟತೇ ಪದಿ: ನಚತೇ ದೃಶ್ಯಂತೇ ಕದಾಪಿ ಪುನರುಕ್ತಾಃ |
ಯೇ ವಿಭ್ರಮಾಃ ಪ್ರಿಯಾಣಾಂ ಅರ್ಥಾ ವಾ ಸುಕವಿವಾಣೀನಾಂ॥
(ದ್ವನ್ಯಾ., ಪು. ೨೪೧)
12 ಕ್ಹಣೀಕ್ಷಣೀ ಯನ್ನವತಾಮುಖೈೆತಿ ತದೇವ ರೂಪಂ ರಮಣೀಯತಾಯಾಃ!
(ಶಿಶುಪಾಲವಧ, 1, ೧೭)
೧೫೪ ಭಾರತೀಯ ಕಾವ್ಯಮಾಮಾಂಸೆ
ಕಲ್ಪನೆಗಳು ಎಷ್ಟೇ ಅಪೂರ್ವವಾಗಿರಲಿ, ಉಚಿತವಾದ ಮಾತಿನಲ್ಲಿ ರೂಪು
ಗೊಳ್ಳುವ ತನಕ ಅವಕ್ಕೆ ಪೂರ್ಣವಾದ ಅಸ್ತಿತ್ವ ಬರುವುದಿಲ್ಲ. "" ತಬ್ದ ವು
ಬೆನ್ನಂಟದ ಅರಿವೇ ಲೋಕದಲ್ಲ ಇಲ್ಲ; ಎಲ್ಲ ಜ್ಞಾನವೂ ಶಬ್ದದೊಂದಿಗೆ
ಪೋಣಿಕೆಯಾಗಿರುವಂತೆಯೇ ಹೊಳೆಯುತ್ತದೆ.” ಎಂದರೆ, ಶಬ್ದ
ಗೋಚರವಲ್ಪದ ಅರ್ಥವೇ ಇರಲಾರದು ಎನ್ನುವಷ್ಟು ದೂರ ಹೋಗು
ವವರೂ ಉಂಟು. ಆದರೆ, ಮೂಕನ ಕನಸಿನಂತೆ ಮಾತಿಗೆ ನಿಲುಕದೆ
ಚೇತಸ್ಸಿನ ಒಳಪದರದ ತುದಿಯಲ್ಲಿ ಭಾವ ಮಿನುಗುತ್ತಿ ರಬಹುದೆಂಬುದನ್ನು
ಕವಿಗಳು ಬಲ್ಲರು." ಆದರೂ ಇಪ್ಪು ನಿಜ: ಅಮೂರ್ತವಾದ ಅರ್ಥಕ್ಕೆ
ಮಾತಿನಲ್ಲಿ ಮೂರ್ತತರೀರವನ್ನು ಒದಗಿಸುವುದೇ ಕವಿಯ ಕಾರ್ಯ.
ತಾನು ಕಂಡ ದರ್ಶನವನ್ನು ಶಬ್ದಗಳಲ್ಲಿ ಅಳವಡಿಸಿ ತನ್ನ ಹೃದಯಕ್ಕಾದರೂ
ವಿಷೇದಿಸಿಕೊಂಡ ಹೊರತು ಅವನು ನಿಜವಾದ ಕವಿಯಾಗದರಾರನು.
"ಯಃ ಹೃದಯ ಏವ ಕವತೇ ನಿಹ್ನುತೇ ಚ ಸ ಹೃದಯಕವಿಃ ''
("" ಯಾರು ಹೃದಯದಲ್ಲೇ ಕವನಮಾಡಿ ಬಚ್ಚಿಡುತ್ತಾನೋ ಅವನು
ಹೃದಯಕವಿ'') ಎಂದು ರಾಜಶೇಖರನು ಹೆಸರುಕೊಡುತ್ತಾನೆ (ಕಾವ್ಯ
ಮಾಮಾಂಸೆ, ಪು. ೧೯). ಒಬ್ಬನಿಗೆ ಕವಿಪ್ಟ ಬರಬೇಕಾದರೆ ಈ
ಹೈದಯಕವಿತ್ವವಾದರೂ ಅವನಲ್ಲಿರದೇಕು. ಭಟ್ಟತೌತನು ಈ ದರ್ಶನ-
ವರ್ಣನಗಳ ವಿಷಯದಲ್ಲಿ ಕೆಲವು ಸ್ಫುಟವಾಕ್ಯಗಳನ್ನು ಬರೆದಿದ್ದಾನೆ:
ನಾಸ್ಯೃಷಿಃ ಕವಿರಿತ್ಯುಕ್ತ೦ ಸಪಿಸ್ಟ ಕಿಲ ದರ್ಶನಾತ್।
ವಿಚಿತ್ರಭಾವಧರ್ಮಾ'೧ಶತತ್ತ್ವಪ್ರಖ್ಯಾ ಚ ದರ್ಶನಂ
ಸ ತತ್ಕ್ತ್ವದರ್ಶನಾದೇವ ಶಾಸ್ತ್ರೇಷು ಪಠಿಶಃ ಕವಿಃ।
ದರ್ಶನಾದ್ವರ್ಣನಾಚ್ಚಾಥ ರೂಢಾ ಲೋಕೇ ಕವಿಶ್ರುತಿಃ॥
ತಥಾ ೫ ದರ್ಶನೇ ಸ್ವಚ್ಛೇ ನಿತ ಪ್ಯಾಬಕವೇರ್ಮು [ವೇ] 8!
ಮೋದಿತಾ ಕವಿತಾ ಲೋಕೇ ಯಾವಜಾತಾ ನ ವರ್ಣನಾ
(ಕಾವ್ಯಾನ, ಶಾಸನ, ಪು. ೩೭೯)
"" ಬುಪಿಯಲ್ಲದ ಕವಿಯಲ್ಲ ಎನ್ನುವರು ; ದರ್ಶನವುಳ್ಳವನು ತಾನೆ ಮಪಿ!
ಜಗತ್ತಿನ ವಿವಿಧ ವಸ್ತುಗಳ ಧರ್ಮಾಂತದ ತತ್ತ್ವವನ್ನು ಕಾಣುವುದೇ
ಚಿನ ಸೋಸಸ್ತಿ ಪ್ರತ್ಯಯೋ ಲೋಕೇ ಯಃ ಶಬ್ಧಾನುಗಮಾದ್ಮತೇ |
ಅನುವಿದ್ಧಮಿವ ಜ್ಞಾನಂ ಸರ್ವಂ ಶಬ್ದೇನ ಭಾಸತೇ | (ವಾಕ್ಯಪದೀಯ ;. ೧೨೩)
14" ಅವಧೇಹಿ ಕ್ಷಣಮೇಹಿ ಭ್ರಾತರ್ಭಾವಜ್ಞ ಭಾವಯ ಗಿರಂ ನಃ
ಚರಮೇ ಚಕಾಸ್ತಿ ಚೇತಸಿ ಮೂಕಸ್ಪಪ್ಲೋಪಮೋ ಭಾವಃ ॥
(ಸದುಕಿ.ಕರ್ಣಾಮ್ಮತ, ಪು. ೨೯೬)
೧೦, ಕವಿತೆಯ ಆಕರ ೧೫೫
ದರ್ಶನ. ಶತ್ಯದರ್ಶನವನ್ನು ಹೊಂದಿರುವಪ್ಪಕ್ಕೇ ಒಬ್ಬನಿಗೆ "ಕವಿ'
ಯೆಂಬ ಹೆಸರು ಶಾಸ್ತ್ರಗಳಲ್ಲಿ” ಉಕ್ತವಾಗಿದೆ. ಆದರೆ ದರ್ಶನ ಮತ್ತು
ವರ್ಣನೆ ಇವೆರಡೂ ಇದ್ದರೇ ಲೋಕದಲ್ಲಿ ಕವಿಯೆಂದು ಕರೆಯುವುದು.
ಹೀಗೆ, ಆದಿಕವಿಯಾದ ವಾಲ್ಮೀಕಿಮುನಿಗೆ ನಿರ್ಮಲವಾದ ದರ್ಶನವು
ನಿತ್ಯವಾಗಿದ್ದ ರೂ ಕೂಡ, ವರ್ಣನೆಯೂ ಅವನಲ್ಲ ಒದಗುವತನಕ [ಎಂದರೆ
ಅವನು "ರಾಮಾಯಣ 'ವನ್ನು ರಚಿಸುವತನಕ] ಕವಿಪಟ್ಟವು ಲೋಕದಲ್ಲಿ
ದೊರೆಯಲಿಲ್ಲ.”
"ಕವಿ? ಎಂಬ ತಟ ಕ್ಕೂ ಇಂಗ್ಲಿ ಪಿನ "(0 ೬1೧೦೪ ನತೋರಿಸು''
ಏಂಬ ಧಾತುವಿಗೂ ಒಂದೇ ಮೂಲವೆಂದು ಭಾಪಾಶಾಸ್ತ್ರಜ್ಞರ ಅಭಿ
ಪ್ರಾಯ. ಕವಿ ತಾನೊಂದು ತತೃವನ್ನು ಕಂಡಿದ್ದರೆ ಸಾಲದು; ಅದನ್ನು
ಮಾತಿನ ನೂಲಕ ಇತರರಿಗೆ ಕಾಣಿಸಲೂ ಬಲ್ಲವನಾ ಗಿರಬೇಕು. ನಮ್ಮ
ಪ್ರಾಚೀನ ವಿದ್ವಾಂಸರು " ಕವೃ.._ವರ್ಣಿೀ (ವರ್ಣಸು)'' ಎಂಬ
ಧಾತುವಿನಿಂದ "" ಕವಿ'` ಶಬ್ದವನ್ನು ಸಾಧಿಸುತ್ತಾರೆ. ಇದರ ತಾತ್ಪರ್ಯವೂ
ಮೇಲಿನ ಹೇಳಿಕೆಗೆ ಪೋಪಕವಾಗುತ್ತದೆ.
ಈ ದರ್ಶನ ವರ್ಣನಗಳಿಗಿರುವ ನಿಪ್ಪತ್ತಿಕ್ರಮಪೇನೆಂಬ ಪ್ರಶ್ನೆ
ಈಗ ತಶಲೆಯೆತ್ತುತ್ತದೆ. ಧ್ವನ್ಯಾಲೋಕಲೋಚನದ ಪ್ರಾರಂಭದಲ್ಲಿ
ಅಭಿನವಗುಪ್ತನು ರಚಿಸಿರುವ ಪ್ರಸಿದ್ಧವಾದ ಸ್ತುತಿಪದ್ಯವು ಇಲ್ಲಿ
ಜ್ಞಾ ಪಕಕ್ಕೆ ಬರುತ್ತದೆ:
ಆಫೂರ್ವಂ ಯದ್ಯಫ ಪ್ಲು ಪ್ರಧಯತಿ ವಿನಾ ಕಾರಣಕಲಾಂ
ಜಗದ್ದಾ ಪಹಪ್ತ ಬ ಎ ನಿಇರಸಭರಾತ್ ಸಾರಯೆತಿ ಜಿ|
ಮಾತ" ಪಜೊ ೀಪಾಖ್ಯಾ ಪ್ರ ಸರ ಸುಭಗಂ ಭಾಪಯತಿ ತತ್
ede ಸ್ತತ್ತ್ವಂ೦ ಕವಿ ರಹ್ಮದಹಾಖ್ಯಂ ವಎಜಸುತೇ॥
"" ಯಾವುದು ಕಾರಣಲೇಶವನ್ನೂ ಅಪೇಕ್ಷಿಸದೆ ಅಪೂರ್ವವಾದ ವಸ್ತು
ವನ್ನು ಪ್ರಕಟಿಸುವುದ್ಲೋ, ಯಾವುದು ಶಿಲಾಸದೃಶವಾದ ಜಗತ್ತನ್ನು
15 “ಕವಿರ್ಮನೀಪಿ ಪರಿಭೂಃ ' (ಈಶಾವಾಹ್ಯೋಪನಿಷತ", ೮) ""
ಶೆ ವೋ ತಾಃ '' (ಭಗವದ್ಗೀತಾ, ೪. ೧೬) ಇತ್ಯಾದಿ.
"" ಕವಿಃ ಕ್ರ್ರಾಂತದರ್ಶೀ ಸರ್ವದೃಕ"' "ಕವ ಅತೀತವಾದದ್ದನ್ನು ಕಾಣುವವನು,
ಸರ್ವವನ್ನೂ ಕಾಣುವವನು '' (ಈಶಾವಾಸ್ಯ, ೮. ಶಾಂಕರ ಭಾಷ್ಯ).
16 ಪ ಪ್ರಖ್ಯಾ--ಉಪಾಖ್ಯಾ: ಇವು ಕ್ರಮವಾಗಿ ದರ್ಶನ--ವರ್ಣನಗಳಿಗೆ ಪರ್ಯಾಯ
ಪದಗಳು. ""ಪ್ರಟ್ಯಾ ಪ್ರಕೃಪ್ಪಾ ಖ್ಯಾನಂ ಪ ತ ಸತಂ Ml ವಚನಂ ಅಭಿಧಾನ
ಲಕ್ಷಣಂ `' (ಧೆ ಸನ್ಯಾರೋಕ 1 ಲೋಚನ 'ಕುಮುನೀ, ಪು
ಕವಯೋ
೧೫೬ ಭಾರತೀಯ ಕಾವೃಮಾಮಾಂಸೆ
ತನ್ನ ರಸಪೂರ್ಣತೆಯಿಂದ ಸಾರವತ್ತಾ ಗಿ ಕಲ್ಪಿಸುವುದೋ, ಯಾವುದು
ಕ್ರಮವಾಗಿ ದರ್ಶನ-ವರ್ಣನ ವಿಧಾನದಲ್ಲಿ ಮನೋಹರವಾಗಿ ಭಾಸವಾಗು
ವುದೋ, ಆ "ಕವಿ-ಸಹೃದಯ' ಎಂಬ ಹೆಸರಿನ ಸರಸ್ವತೀ ತತ್ವವು
ಮೆರೆ ಯುತ್ತಿದೆ.''---ಇಲ್ಲಿ ನಮಗೀಗ ಪ್ರಕೃತವಾದದ್ದು ಮೂರನೆಯ ಚರಣ
ಮಾತ್ರ. ಇದರ ಅಭಿಪ್ರಾಯವೇನು? ಒಂದು ಅರ್ಥವು ಕವಿಪ್ರ ತಿಭೆಯಲ್ಲಿ
ಬಚಿತವಾಗಿ ಉದಿಸಿದ ಬಳಿಕ, ಅದಕ್ಕೆ ಶಬ್ದದ ಹೊದಿಕೆ ಒದಗುವುದೆಂದೆ?'?
ಹೀಗಾದರೆ, ಇದರಲ್ಲಿ ಸ್ವಲ್ಪ ಮಾರ್ಪಾಡು ಆವಶ್ಯಕ. ಏಕೆಂದರೆ, ಕವಿಯ
ಮನಸ್ಸಿನಲ್ಲಿ ಪ್ರತಿಭಾವ್ಯಾಪಾರದಿ೦ದ ಒಂದು ಅರ್ಥ ಮೊದಲು ಕಾಣಿಸಿ
ಕೊಂಡಾಗ, ಆಗತಾನೆ ಗಣಿಯಿಂದ ತೆಗೆದ ಮಣ್ ಹೇಗೆ ಒಂದು
ಪಾಪಾಣಶಕಲದಂತೆ ತೋರುವುದೋ ಹಾಗೆ ಇರುತ್ತದೆ. ಅದು ವಿದಗ್ಭ
ನಾದ ಕವಿಯ ಮಾತಿನಲ್ಲಿ ರೂಪುಗೊಂಡಾಗ ಸಾಣಿಗೆ ಕೊಟ್ಟು ಬಿಡಿಸಿದಂತೆ
ಹೊಳಪುಗೂಡಿ ರಮಣೀಯವಾಗುತ್ತದೆ.!". ಎ೦ದರೆ, ನಿರೂಪಣಿಯ
ಕಾಲದಲ್ಲೇ ಕವಿಕಲ್ಪನೆ ಪರಿಸ್ಫುಟವಾಗತಕ್ಕದ್ದು. ಕಾವ್ಯರಚನೆ ಮಾಡು
ವಾಗ ಎಷ್ಟೋ ವೇಳೆ ಈ ಪದವನ್ನು ಇಡಲೆ ಆ ಪದವನ್ನು ತೆಗೆಯಲೆ
ಬಂದು ಮನಸ್ಸು ಆಕಡೆ ಈ ಕಡೆ ತೊಗಾಡುವುದೂ ಉಂಟು. ಇದಕ್ಕೆ ಕವಿ
ಕಲ್ಪನೆಯಲ್ಲ ಇನ್ನೂ ಅನಿಶ್ಚಯವಿರುವುದೇ ನಿಜವಾದ ಕಾರಣ. ಯಾವಾಗ
ಈ ಅನಿಶ್ಚಯ ತೊಲಗಿ, ಪದಗಳನ್ನು ಅಲ್ಲಾಡಿಸದಂಶಾಗುವುದೋ ಆಗ
"" ಶಬ್ಧಪಾಕ'' ಸಿದ್ಧಿ ಕಿತೆಂದು ಲಾಕ್ಷಣಿಕರು ಹೇಳುತ್ತಾರೆ.» ಈ "ಶಬ್ದ
ಪಾಕ''ವನ್ನು ನಿಜವಾಗಿ "" ಅರ್ಥಪಾಕ'' ವೆಂದೇ ಕರೆಯಬಹುದು.
ಇಪ್ಟೇ ಅಲ್ಲ. ನಿರೂಪಣಿಯ ಕಾಲದಲ್ಲೇ ಮೂಲಕಲ್ಪನೆ ಸನ್ನಿ
ವೇಶವತದಿ೦ದ ಮಾರ್ಪಾಡು ಹೊಂದಿ. ವಿಸ್ತರಿಸಿ, ಹೆಚ್ಚು ಸುಂದರವಾಗ
ಬಹುದು. ಇದಕ್ಕೆ ಕುಂತಕನು " ತಾಪಸವತ್ಸರಾಜ` ಏಂಬ ನಾಟಕದಿಂದ
ಉದಾಹರಣಿಯಾಗಿ ಕೊಟ್ಟಿರುವ ಒಂದು ಸುಂದರವಾದ ಪದ್ಯವನ್ನು
17 " ಪ್ರಥಮಂ ಹಿ ಪ್ರಖ್ಯಾ ತದನಂತರಮುಪಾಖ್ಯೇತಿ ಕ್ರಮಃ `` ಎಂದು "ಕೌಮುದಿ?
ಇರನು ವ್ಯಾಖ್ಯಾನ ಮಾಡುತ್ತಾನೆ (ಪ್ರ. ೬).
18 "' ಕವಿಚೇತಸಿ ಪ್ರಥಮಂ ಪ್ರತಿ;ಭಾಪ್ರತಿಭಾಸಮಾನಂ ಅಘಟಿತಪಾಷಾಣಶಕಲ
ಕಲ್ಪಮಣಿಪ್ರಖ್ಯಮೇವ ವಸ್ತು ವಿದಗ್ನಕಎರಚಿತ ವಕ್ರವಾಕ್ಯೋಪಾರೂಢಂ ಶಾಣೋಲ್ಲೀಢ
ಮಣಿಮನೋಹರತಯಾ ತದ್ದಿದಾಹ್ನಾದಕಾರಿ ಕಾವ್ಯತ್ವಂ ಅದಿರೋಹತಿ '' (ಪಕ್ರೋಕ್ತಿ
ಜೀವಿತ, ಪು. ೯)
19 ವಾಮನ : ಕಾವ್ಯಾಲಂಕಾರ ಸೂತ್ರ, 1. i»: ೧೫ ವೃತ್ತಿ ನೋಡಿ.
೧೦. ಕವಿತೆಯ ಅಕರ ೧೫೭೬
ಪರಿಶೀಲಿಸೋಣ. ನಾಟಕದ ಮೊದಲನೆಯ ಅಂಕದಲ್ಲ, ವತ್ಸರಾಜನು
ತನ್ನ ಪ್ರಿಯವಲ್ಲಭೆ ವಾಸವದತ್ತೆಯನ್ನು ಕಾಣಲು ಹೊರಟಿದ್ದಾನೆ
ಅವಳಲ್ಲ ತನಗಿರುವ ಹುಚ್ಚು ಪ್ರೇಮವನ್ನು ಕುರಿತು ಈರೀತಿ ಜಿರಗು
ಪಡುತ್ತಾನೆ:
ತದ್ಭಸ್ತ್ರೇ೦ದುವಿಲೊಸಕನೇನ ದಿನಸ್ಲೋ ನೀತ ಪ್ರಥೋಷಕ್ತಥಾ
ತದ್ಗೋಪ್ನೈವ ನಿಕಾಪಿ ಮನ್ಮಧಕೃತೊೋತ್ಪಾಹ್ಯೆಸ್ತದಂಗ ಗಾರ್ಪಣ್ಯೆಃ
ತಾಲ ಸೆಂಸ್ರತ್ಯಪಿ ಮಾರ್ಗದತ್ತನಯನಾಂ ದ್ರಷ್ಟುರ ಪ್ರವೃತ್ತ ಸ್ಯ ಮೇ
ಬದ್ದೊ €ತ್ಲಂಠಮಿದಂ ಮನಃ 8೦...
[ಅವಳ ವದವೇಂದುವನೆ ನೋಡುವುದರಲಿ ಹಗಲು
ಸಾಗಿದುದು, ಸಂಜೆ ಮತ್ತವಳೊಂದಿಗೆ
ಕೀಳಿಯೆಲ, ನಿಶೆ ಕೂಡ ಮನ ಸಥೋತ್ಪಾ ಹಡೊಳು
ಮ್ಯಗೆ ಮೆ: ಸ್ಯ ಯೊಪ್ಪಿ ಸುವ ಸಂಭ್ರಮದಲಿ,
ಮತಿ €ಗಳಿದೊ ನಟ ನಂ:ನದಲಿ ಹಾದಿಯನು
ತಣದಿರುವಳನೆ ಕಾಣಹೊರಟ ನನಗೆ
ಏತಕಿನ್ನೂ ಚಿತ್ತ ತುಡಿಯುತಿದೆ ?....] |
ಪ್ರೇಮದ ಸವಿಯನ್ನೆಲ್ಲಾ ವತ್ಸರಾಜನು ಆಸ್ವಾದಿಸಿದ್ದಾನೆ; ಆದರೂ,
"" ಏತಕಿನ್ನೂ ಚಿತ್ತ ತುಡಿಯುತಿದೆ ??'--ಈ ಪ್ರಶ್ನೆಯೊಡನೆ ವತ್ಸರಾಜನ
ಸರಳ ವಿಚಾರವೂ ಮುಗಿಯಜೇಕು. ಕವಿಪ್ರತಿಭೆಯ ಪ್ರ ಪ್ರಥಮ ಪರಿಸ್ಪಂದ
ಇಲ್ಲಿಗೆ ಮುಕ್ತಾಯಹೊ೦ದಿತು. ಆದರೆ, _ಬಹುಶಃ ಪದ್ಯವಿನ್ನೂ
ಪೂರ್ಣವಾಗದಿರುವ ಅಲ್ಬಕಾರಣಕ್ಕೇ ಏಕಾಗಿರದಾರದು ? ನರ ತಿದಿ
ಮತ್ತೊಮ್ಮೆ ಚಿಮ್ಮಿ ವತ್ಸರಾಜನ ಮಾತನ್ನು ಹೀಗೆ ಮುಂದುವರಿಸ ಸುತೆ: ಕ
"" ಅಥವಾ ಪ್ರೇಮಾಸಮಾಪ್ತೋತ್ಸವಂ '' ("" ಅಲ್ಲದಿರೆ, ಪ್ರೇಮದುತ್ನವ
ವೆಲ್ಲ ಮುಗಿದಿಲ್ಲವೋ ?'') ವತ್ಸರಾಜ ವಾಸವದತ್ತೆಯರ ಅಪೂರ್ವ ಪ್ರೇಮ
ಕಥೆಯನ್ನು ಅರಿತವರಿಗೆಲ್ಲ ಈ ಕಡೆಯ ವಾಕ್ಯದ ಧ್ವನಿ ಚೆನ್ನಾಗಿ ಸ್ಫುರಿಸ
ಬೇಕು. ತನ್ನ ಗಂಡನು ವ್ಯಾಮೋಹಾತಿಕೇಕದಲ್ಲಿ ರಾಜ್ಯವನ್ನೇ ಉಪೇ
ಕ್ಲಿಸಿರುವುದನ್ನು ತಪ್ಪಿಸುವುದಕ್ಕಾಗಿ ವಾಸವದತ್ತೆ ಸೃಸುಖವನ್ನು ಬಲಿಗೊಟ್ಟು
ಊರು ಬಿಟ್ಟು ಹೊರಡಲು ಸಿದ್ಧಳಾಗಿದ್ದಾಳೆ; ಆದರೆ ಈ ವಿಷಯ ವತ್ಸ
ರಾಜನಿಗೆ ತಿಳಿಯದು. ಪ್ರೇಮದಲ್ಲಿ ಹೊಸ ಸುಖವೇನುಂಟೋ ಎಂದು
20 ವಕ್ರೋಕ್ತಿಜೀವಿತ, ಪು. ೧೩.
೧೫೮ ಭಾರತೀಯ ಕಾವ್ಯಮಾಮಾಂಸೆ
ಆಲೋಚಿಸುತ್ತಾ ಬರುತ್ತಿದ್ದಾನೆ. ನಿಜ; ವಿಯೋಗದ "" ಸುಖ'' ವನ್ನು
ಅವನು ಇನ್ನೂ ಕಂಡಿಲ್ಲ; ಅದು ಅವನಿಗೆ ಸಿದ್ಧವಾಗಿ ಕಾಯುತ್ತಿದೆ!
ಪ್ರತಿಭೆಯೇ ಕಾನ್ಯಜನನಿ. ಅದಿಲ್ಲದಿದ್ದ ರೆ ಕವಿಗೆ ಲೇಶಮಾತ್ರವೂ
ವಸ್ತುವೇ ಇಲ್ಲ. (": ತಸ್ಮಿ೦ಸ್ತು ಅಸತಿ ನ ಕಿಂಚಿದಪಿ ಕವೇಃ ವಸ್ತ್ರ್ರಸ್ತಿ.'')
ಪ್ರತಿಭೆಯ ಕಣ್ಣು ತೆರೆದಾಗಲೆ ಕವಿಗೆ "" ದರ್ಶನ '' ಲಭಿಸುವುದು, ಸೃಷ್ಟಿ
ನಡೆಯುವುದು, ವರ್ಣನೆ ಸಾಧ್ಯವಾಗುವುದು. ಆದರೆ ಈ ಪ್ರತಿಭಾ
ವ್ಯಾಪಾರಕ್ಕೆ ಮೊದಲಿನಿಂದ ಕೊನೆಯತನಕವು ನಿಯಾಮಕವಾದ
ಮತ್ತೊಂದು ತೆತ್ತ್ಯವುಂಟು. ಅದೇ ರಸಾವೇಶ. ಧ್ಯನಿತತ್ತ್ಯದ
ಸಮರ್ಥನಕಾರನಾದ ಅಭಿನವಗುಪ್ತನಿಗೂ ಅದರ ಖಂಡನಕಾರನಾದ
ಮಹಿಮಭಟ್ಟನಿಗೂ ಈ ವಿಷಯದಲ್ಲಿ ಏಕಕಂಠತೆಯಿದೆ. "" ಕಸಾವೇಶ
ಷೈಶದ್ಯ ಸೌಂದರ್ಯ ಕಾವ್ಯ ನಿರ್ಮಾಣ ಕ್ಷಮತ್ವ''ವ್ಲೇ ಪ್ರತಿಭೆಯೆಂದು
ಅಭಿನವಗುಪ್ತನ ಉಕ್ತಿ (ದ್ವನ್ಯಾ. ಲೋಚನ, ಪು. ೨೯) ; ಕಸಾನುಗುಣ
ವಾದ ತಬ್ಬಾರ್ಥಗಳನ್ನು ಕವಿ ಚಿಂತಿಸುವಾಗ ಅವನಲ್ಲಿ ಪ್ರ ತಿಭೆ ಉಕ್ಕುವು
ದೆಂಬ ಮಹಿಮಭಟ್ಟನ ಹೇಳಿಕೆಯನ್ನು ಆಗಲೇ ನಾವು ಗಮನಿಸಿದೆ. ಷೆ.
ಕವಿಯ ಹೃದಯದಲ್ಲಿ ರಸದ ಕಾವು ಉಂಟಾದಾಗಲೇ ಅವನ ಪ್ರತಿಭೆ
ಉಜ್ಜ ಪಲಿಸುವುನು. ತನ್ನ ರಸಾನುಭವವನ್ನು ಅಭಿವ್ಯಕ್ತ ಪಡಿಸುವುದ
ಕ್ಕಾಗಿಯೇ ಕವಿ ಕಾವ್ಯವನ್ನು ರಚಸುವುದರಿಂದ, ಅವನ ಪ್ರತಿಭೆ ರಸಕ್ಕೆ
ಅನುಗುಣವಾಗಿಯೇ ವರ್ತಿಸುತ್ತದೆ. ಎಂದರೆ, ಕವಿ ರಸಪರವಶನಾಗಿರು
ವಾಗ ಅವನ ಶಕ್ತಿವಿಶೇಷವಾದ ಪ್ರತಿಭೆ ಕೂಡ ರಸದ ಆಳಿಕೆಗೆ ಒಳ
ಪಟ್ಟು ಮುಂದುವರಿದು ಹೊಸ ಅರ್ಥಗಳನ್ನು ಕಾಣುತ್ತದೆ, ಕಟ್ಟುತ್ತದೆ,
ಉಲ್ಲೇಖಿಸುತ್ತದೆ ; ಒಂದುವೇಳೆ ಆ ರಸಕ್ಕೆ ಹೊಂದಿಕೆಯಾಗದ ಅಂಶ
ಗಳು ಅಪ್ಪಿತಪ್ಪಿ ಹೊಳೆದರೆ ಅವುಗಳನ್ನು ಉತ್ತರ ಕ್ಷಣದಲ್ಲಿಯೇ ಅಳಿಸಿ
ಬಿಡುತ್ತಡೆ. ಕವಿಪ್ರತಿಭೆಗೆ ಈ ರೀತಿಯಲ್ಲಿ ಒಂದು ಏಕಾಗ್ರತೆ ಒದಗಿದ
ಹೊರತು ಅದು ಸುಸಂಘಟಿತವೂ ಏಕಾರ್ಥಪರವೂ ಆದ ಕಾವ್ಯವನ್ನು
ಹೇಗೆ ನಿರ್ಮಿಸಬಲ್ಲುದು? ಪ್ರತಿಭೆ ಚುರುಕಾಗಿ ಓಡುವ ಕುದುರೆಯಂತೆ;
ಆದರೆ ಕಡಿವಾಣವನ್ನೂ ಚಾವಟಿಯನ್ನೂ ಕೈಯಲ್ಲಿ ಹಿಡಿದು, ಎಲ್ಲಿ ಎತ್ತ
ಓಡಿಸಬೇಕೋ ಓಡಿಸಿ ತಿರುಗಿಸಬೇಕೋ ತಿರುಗಿಸಿ ಹಿಂದಕ್ಕೆ ಜಗ್ಗ
ಬೇಕೋ ಜಗ್ಗಿ ಸರಿಯಾದ ದಾರಿಯಲ್ಲಿ ನಡಸುವ ಸಾರಥಿ ಕವಿಯ
೧೦. ಕವಿತೆಯ ಆಕರ CAE
ರಸಾಷೇಶ. ಕವಿಯ ಅನವಧಾನದಿಂದ ಕಟ್ಟು ಸಡಿಲಿ ಕಲ್ಪನೆ ಅತ್ತಿತ್ತ
ಜಾರಿದರೆ ರಸಪ್ರತ್ರೀತಿಗೆ ಭಂಗವುಂಟಾಗುವುದು ಖಂಡಿತ. ಅವನು ಕಲ್ಪಿ
ಸಿರುವ ಒಂದು ಚಿತ ಶ್ರ ವೋ ಅಲಂಕಾರವೋ ಬಿಡಿಯಾಗಿ ತೆಗೆದುಕೊಂಡು
ನೋಡಿದರೆ ಆತ್ಚರ್ಯಕರವಾಗಿರಬಹುದು ; ಆದರೆ ಕಾವ್ಯದ ಒಟ್ಟು ಅಂದದ
ದೃಷ್ಟಿಯಿಂದ ಚ್ ದಾರಿತಪ್ಪಿ ದನೆಂಡೇ NE ಇಂಥ
ನಿದರ್ಶನಗಳು ಮಹಾಕವಿಗಳ ಕೃತಿಗಳಲ್ಲೂ ಇಲ್ಲದಿಲ್ಲ.
ಪ್ರತಿಭೆ ಉಕ್ಕಲು ರಸಾವೇಶ ಅವಶ್ಯಕ; ಆದರೆ ರಸಿಕರೆಲ್ಲರೂ
ಕವಿಗಳಾಗಿಲ್ಲ. ಕಾವ್ಯನಿರ್ಮಾಣಕ್ಕೆ ಅಗತ್ಯವಾದ ರಚನಾತ್ಮಕ
ಪ್ರತಿಭೆಗೆ "" ಕಾರಯಿತ್ರೀ '' ಎಂಬ ತಳ ರನ್ನು ರಾಜೇ ಖರನು ಕೊಡು
ಇಡಿ] ಇದು ಇರುವುದು ಕೆಲವರಲ್ಲಿ ಮಾತ್ರ. ಅವರಿಗಾದರೂ ಇದು
ಲಭಿಸಿದ್ದು ಹೇಗೆ ?.._ ಈ ವಿಷಯದಲ್ಲಿ ಕೆಲವು ಮಟ್ಟಿನ ಚರ್ಚೆ ನಡೆದಿದೆ.
ಇದು ಅದ್ಕ ಪ್ವ ವಾದ ಪೂರ್ವಜನ್ಮ ಸಂಸ್ಕಾರದಿಂದ ಒದಗಿರತಕ್ಕ ಸಹಜಶಶಕ್ತಿ
ಯೆಂದೇ ಹಲವರ ಮತ. ಆದರೆ ಸಹಜ, ಔಪಾಧಿಕ ಎಂದು ಪ್ರತಿಭೆ
ಯನ್ನು ಎರಡು ಬಗೆಯಾಗಿ ವಿಂಗಡಿಸತಕ್ಕವರೂ ಉಂಟು. ಜಗನ್ನಾಥ
ಪಂಡಿತನು ಈ ವಿಷಯದಲ್ಲಿ ಸಮಾಲೋಚನೆ ನಡಸಿ ಹೀಗೆ ಅಭಿಪ್ರಾಯ
ಪಡುತ್ತಾನೆ: "ಈ ಪ್ರತಿಭೆಗೆ ಕಾರಣ ಒಂದುಕಡೆ ದೇವತೆ, ಮಹಾ
ಪುರುಷರು ಇವರ ಅನುಗ್ರಹದಿಂದ ಉಂಟಾದ ಅದೃಷ್ಟ ವಾಗಿರಬಹುದು
ಮತ್ತೊ೦ದುಕಡೆ ವಿಲಕ್ಷಣವಾದ ತಿಳಿವಳಿಕೆ (ವ್ಯತ್ಪತ್ತಿ), ಕಾವ್ಯರಚನಾಭ್ಯಾಸ
ಇವುಗಳಾಗಿರಬಹುದು. ಚಿಕ್ಕ ಹುಡುಗರಲ್ಲಿ ಕೂಡ ವ್ಯತ್ಪತ್ತಿ ಅಭ್ಯಾಸ
ಗಳಿಲ್ಲದೆ ಮಹಾಪುರುಷ ಪ 4 ಸಾದವೊಂದರಿಂದಲೇ ಪ ರ್ರತಿಭೆ ಉದಿಪಿರುವು
ದುಂಟು. . . . ಆದರೆ ಅದೃಪ್ಪವೊಂದೇ ಸತಶಾಜ ಕಾರಣವೆಂದು
ಹೇಳುವುದೂ ಶಕ್ಯವಲ್ಲ. ಎಷ್ಟೋ ಕಾಲದ ತನಕ ಕಾವ್ಯರಚನೆಮಾಡಲು
ಶಕ್ತಿಯಿಲ್ಲದಿದ್ದ ವನಿಗೆ ವ್ಯತ್ಪತ್ತಿ ಅಭ್ಯಾಸಗಳು ಒದಗಲಾಗಿ ಪ್ರತಿಭೆ
ಪ್ರಾದುರ್ಭವಿಸಿದ್ದನ್ನೂ ಕಂಡಿದ್ದೇವೆ. ...''2 ಇದು ವಿಚಾರಣ್ಮೀಯ
ಹ ವಿಷಯ, ಆಧುನಿಕ ಮನಃಶಾಸ್ತ್ರದ ಮೇರೆಗೆ, |
214 . ಪೂರ್ವವಾಸನಾಗುಣಇನುಬಂಧಿಪ ರ್ರತಿಭಾನಮದ್ಭುತಂ '' (ಕಾವ್ಯಾದರ್ಶ,
1, ೧೦೪) ; 'ಜನ್ಮಾಂತರಾಗತಸಂಸ್ಕಾರವಿಶೇಷಃ ಕಶ್ಚಿತ್ ತ ಸೂತ್ತವೃತ್ತಿ,
1. ii. ೧೬) ಇತ್ಯಾದಿ.
22 "ರಸಗಂಗಾಧರ', ಪು. ೮.
೧೬೦ ಇರತೀಯ ಕಾಷ್ಯವಿಸಾಮಾಂಸೆ
ಹೊಸ ಹೊಸ ಅರ್ಥಗಳನ್ನು ಕಾಣುವ, ನಿರ್ಮಾಣಮಾಡುವ ಶಕ್ತಿಯುಂಟು ;
ಆದರೆ ಪ್ರತಿಭೆಯ ಬಾಗಿಲನ್ನು ತೆರೆಯುವ ಬೀಗದಕ್ಕೆ ಮಾತ್ರ ಅವನಿಗೆ
ವಶವಾಗಿರಬೇಕು. ಪ್ರತಿಭಾತಾಲಿಯೆಂದು ಕರೆಯಿಸಿಕೊಳ್ಳುವ ಕವಿಗೂ
ಸಾಮಾನ್ಭ ಮನುಷ್ಯನಿಗೂ ಇಲ್ಲ ವ್ಯತ್ಯಾಸವಿದೆ. ಸಾಮಾನ್ಯವ್ಯಕ್ತಿ ತನ್ನ
ಅನುಭವಗಳನ್ನೂ ವಿಚಾರಪರಂಪರೆಗಳನ್ನೂ ತೊಡಕಿಲ್ಲದಂತೆ ಸಮನ್ನಯ
ಗೊಳಿಸಿ ಒಂದು ವ್ಯವಸ್ಥೆಗೆ ತರಲಾರನು. ತನ್ನ ಚಿತ್ತದಲ್ಲಿ ಅವೊವೂ
ವಿಶೃಂಬಲವಾಗಿ ಏಳಲು ಅವನು ಅವಕಾಶಕೊಟ್ಟರೆ, ಮನಸ್ಸಿನ ಸಮಸ್ಸಿ ತಿ
ಯನ್ನು ಅವು ಕೆಡಿಸಿಬಿಡುವುದೇ ಖಂಡಿತ. ಆದ್ದರಿಂದ ಅವನು ಅನೇಕಾ
ನೇಕ ಅನುಭವಗಳನ್ನೂ ಆಲೋಚನೆಗಳನ್ನೂ ಮೇಲಕ್ಕೆ ಏಳದಂತೆ ಅದುಮಿ
ಬಿಟ್ಟು, ಕಣ್ಣಡೆಕಟ್ಟಿದ ಕುದುರೆಯಂತೆ ಜೀವನಮಾರ್ಗದಲ್ಲ ಅತ್ತಿತ್ತ
ನೋಡದೆ ಸಾಗುತ್ತಾನೆ. ಕನಿಚಿತ್ತದಲ್ಲಾದರೆ ಈ ಕಲ್ಪನೆಗಳ ಉದ್ದ ಮನಕ್ಕೆ
ಇಂಥ ತಡೆಗಳಿರುವುದಿಲ್ಲ ; ಇದ್ದರೂ ಬಹಳ ಕಡಮೆ. ಅಲ್ಲದೆ, ಅವನ ಅನು
ಭವ ಆಲೋಚನೆ ಮೊದಲಾದವೆಲ್ಲ ಬಹುಮಟ್ಟಿಗೆ ಅವನ ಸುಪ್ತಪ್ರಜ್ಞೆಯ
ಲ್ಲಿಯೇ ಸುಸಂಘಟಿತವಾಗಿ, ಕಾವ್ಯರೂಪದಲ್ಲಿ ನಿರರ್ಗಳವಾಗಿ ಹೊಮ್ಮು
ತ್ತವೆ.೫ ಎಷ್ಟೋ ವೇಳೆ ತನ್ನ ನಿರ್ಮಿತಿಯ ವೈಚಿತ್ರ್ಯವನ್ನು ಕಂಡು
ಕವಿಯೇ ಬೆರಗುಪಡುತ್ತಾನೆ. ಪ್ರಾಕ್ತನ ಸಂಸ್ಕಾರವಾಗಲಿ ದೇವತಾನು
ಗ್ರಹವಾಗಲ ಪ್ರತಿಭೆಯ ಮುಖ್ಯ ಜನ್ಮಭೂಮಿಯೆಂದು ಒಪ್ಪದವರಿಗೆ ಕವಿ
ಸೃಷ್ಟಿಯ ರಹಸ್ಯವನ್ನು ಬಿಡಿಸುವ ವಿವರಣಿ ಇದೊಂದೆ. ಜಗನ್ನಾಥ
ಪಂಡಿತನು ನಿರೂಪಿಸುವಂತೆ ಬಹುಕಾಲ ಮ9ನವ್ರತಾಚಾರಿಗಳಾಗಿದ್ದು
ಬಳಿಕ ನಾಲಗೆ ಸಡಿಲಿ ಹಾಡತೊಡಗುವವರ ಸಮಸ್ಯೆಗೂ ಇಲ್ಲ ಉತ್ತರ
ದೊರೆಯುತ್ತದೆ. ಅಪೂರ್ವವೂ ಅತಿಶಯವೂ ಆದ ಯಾವುದಾದರೂ
ಒಂದು ತಿಳಿವಳಿಕೆಯಿಂದಲೋ ಘಟನೆಯಿಂದಲೋ ಒಬ್ಬನ ಕಣ್ತಡೆಗಳು
ಕಳಚಿಹೋಗಬಹುದು ; ಅದುವರೆಗೆ ಬಂಧನದಲ್ಲಿದ್ದ ಅವನ ವಿಪುಲಾನುಭವ
ಗಳೂ ಆಲೋಚನೆಗಳೂ ಈಗ ಮೇಲಕ್ಕೆದ್ದು ಕಾವ್ಯವಾಗಿ ರೂಪುಗೊಳ್ಳ
ಬಹುದು. ಹೇಮಚಂದ್ರನು ಪ್ರತಿಭೆಯನ್ನು ಕುರಿತು ಹೇಳುವ ಮಾತುಗಳು
ಇಲ್ಲಿ ಗಮನಾರ್ಹವಾಗಿವೆ. ಜೈನಮತದ ಮೇರೆಗೆ, ಸೂರ್ಯನಿಗೆ ಪ್ರಕಾಶವು
ಹೇಗೋ ಆತ್ಮನಿಗೆ ಜ್ಞಾನ ಹಾಗೆ ಸಹಜವಾದದ್ದು. ಆದರೆ ಬಿಸಿಲಿಗೆ
ಮೋಡ ಅಡ್ಡಬರುವಂತೆ ಆತ್ಮನ ಜ್ಞಾನಕ್ಕೆ ಜ್ಞಾ ನಾವರಣೀ ಯಗಳೆಂಬ
3 Downey : Creutive Imagination, p. 164.
೧೦. ಕವಿತೆಯ ಆಕರ ೧೬೧
ಕರ್ಮಗಳು ಅಡ್ಡವಾಗಿ ಬಂದಿರುತ್ತವೆ. ಈ ಅಡ್ಡಿಗಳು ತಲೆಯೆತ್ತಿ ಬಳಿಕೆ
ಕ್ಹಯಹೊಂದಿದರೂ ಸರಿಯೆ, ತಲೆಯೆತ್ತದೆಯೇ ಉಪತಮವಾದರೂ ಸರಿಯೆ,
ಬೆಳಗುವ ಪ್ರತಿಭೆ ಸಹಜಪ್ರತಿಭೆಯೆನಿಸಿಕೊಳ್ಳುತ್ತದೆ. ಇಲ್ಲಿ ಅಡ್ಡಿಗಳ
ನಿವಾರಣಿ ನಮಗೆ ಗೋಚರವಾಗುವುದಿಲ್ಲ; ಆದಕಾರಣ ಪ್ರತಿಭೆಯನ್ನು
"" ಸಹೆಜ'' ಎನ್ನುತ್ತೇವೆ. ಮಂತ್ರ ದೇವತಾನುಗ್ರಹ ಮೊದಲಾದ
*" ಉಪಾಧಿ'' ಗಳಿಂದ ಒದಗುವ ಪ್ರತಿಭೆಗೆ "" ಔಪಾಧಿಕ'' ಎಂದು ಹೆಸರು.
ಇಲ್ಲಿ ಕೂಡ ಜ್ಞಾನಾವರಣೀಯಗಳನ್ನು ತೊಲಗಿಸುವುದೇ ಮಂತ್ರಾದಿಗಳ
ಪ್ರ ಯೋಜನ; ಆದರೆ ಇವುಗಳ ಮಹಿಮೆಯಿಂದ ಈ ಅವರಣವು ನಮ್ಮ
ಕಣ್ಣಿದುರಿಗೇ ಹರಿಯುವುದರಿಂದ "" ಔಪಾಧಿಕ ' ಎಂದು ಕರೆಯುತ್ತೇವೆ ;
ಅಪ್ಪೆ. ಅಂತೂ ಪ್ರತಿಭೆಯ ಪ್ರಕಾಶಕ್ಕೆ ಅಡ್ಡಿಯಾಗಿರುವ ಆವರಣಭಂಗಪಷೇ
ಎಲ್ಲ ಕಡೆಗಳಲ್ಲೂ ಕವಿತೆಗೆ ಕಾರಣ. ಈ " ಆವರಣ '' ಎಂಬುದು ಆಧುನಿಕ
ಮನಶ್ಶಾಸ್ತ್ರದ "" ಪ್ರತಿರೋಧನ ''ವನ್ನು (Inhibition) ನೆನಪಿಗೆ ತರು
ತ್ತದೆ. ಈ ದೃಷ್ಟಿಯಿಂದ ಹೇಮಚಂದ್ರನ ವಿವರಣೆಯನ್ನು ಗಮನಿಸಿದರೆ
ಅದು ಅರ್ಥವತ್ತಾಗಿಯೂ ಕಾಣಿಸುತ್ತದೆ.
ಪ್ರತಿಭೆಯೇ ಕವಿತೆಯ ಬೀಜ. ಅದಿಲ್ಲದೆ ಕಾವ್ಯ ಹುಟ್ಟುವುದೇ ಇಲ್ಲ;
ಒಂದುವೇಳೆ ಹುಟ್ಟಿದರೂ ಉಪಹಾಸಕ್ಕೆ ಗುರಿಯಾದೀತು-ಪೀಗೆಂದು ಆಲಂ
ಕಾರಿಕರು ಸಾಮಾನ್ಯವಾಗಿ ಒಪ್ಪುತ್ತಾರೆ. ಆದರೆ ಕಾವ್ಯೋತ್ಸತ್ತಿಗೆ ಪ್ರತಿಧೆ
ಯೊಂದಿದ್ದರೆ ಸಾಕೆ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ.
ಶಕ್ತಿರ್ನಿಪುಣತಾ ಲೋಕಶಾಸ್ತ್ರ ಕಾವ್ಯಾದ್ಯವೇಕ್ಷಣ್‌ತ್ |
ಕಾವ್ಯಜ್ಞ ಶಿಕ್ಷಯಾಭ್ಯಾಸಃ ಇತಿ ಹೇತುಸ್ತದುದ್ಭವೇ ॥
(ಕಾವ್ಯಪ್ರಕಾಶ, ;, ೩).
ಎಂದರೆ, ಶಕ್ತಿ (ಷಾ ಪ್ರತಿಭೆ )» ಲೋಕದ ನಡೆವಳಿಕೆ, ಶಾಸ್ತ್ರ, ಕಾವ್ಯ
ಮೊದಲಾದವುಗಳ ಪರಿಶೀಲನೆಯಿಂದ ಬರುವ ನಿಪುಣತೆ ( ಜಾ ವ ತುಕಿ)
ಕಾವ್ಯಜ್ಞರ ಉಪದೇಶವನ್ನು ಪಡೆದು ಮತ್ತೆಮತ್ತೆ ಮಾಡಿದ ಅಭ್ಯಾಸ
( = ಅಭ್ಯಾಸ) _ ಇವು ಮೂರೂ ಒಟ್ಟಿಗೆ ಕಾವ್ಯನಿರ್ಮಾಣಕ್ಕೆ ಕಾರಣ.
3 ಕಾವ್ಯಾನುಶಾಸನ, ಪು. ೫-೬.
25 " ಕ್ಷವಿತ್ವಬೀಜಂ ಪ್ರತಿಭಾನಂ '' (ಕಇವ್ಯಾಲಂಕಾರ ಸೂತ್ರ, 1. 1. ೧೬). ಕವಿತ್ವಸ್ಯ
ಬೀಜಂ ಜನ್ಮಾಂತರಾಗತಸಂಸ್ಕಾರವಿಶೇಷಃ ಕಶ್ಚಿತ್ ಯಸ್ಕ್ಮಾದ್ವಿನಾ ಕಾವ್ಯಂ ನ
ನಿಷ್ಪದ್ಯತೇ ; ನಿಪ್ಪನ್ನಂ ವಾ ಅವಹಾಸಾಯತನು ಸ್ಯಾತ್ (ವೃತ್ತಿ). ವಾಮನನ ಈ ಅಭಿ
ಪ್ರಾಯವನ್ನೇ ಮಮ್ಮಟನೂ ಅನುವಾದಮಾಡುತ್ತಾನೆ (ಕಾವ್ಯಪ್ರಕಾಶ, . ೩ ವೃತ್ತಿ).
K.M. 11
೧೬೨ ಭಾರತೀಯ ಕಾವ್ಯಮಾಮಾಂಸೆ
ಒಂದೊಂದೇ ಇದ್ದರೆ ಸಾಲದು ಎಂದು ಮಮ್ಮಟನು ನಿರ್ಧರವಾಗಿ ಹೇಳು
ತ್ತಾನೆ. ಇತ್ತ ಜಗನ್ನಾಥಪೆಂಡಿತನು""ತಸ್ಯ ಚ ಕಾರಣಂ ಕವಿಗತಾಕೇವಲಾ
ಪ್ರತಿಭಾ'' ಎನ್ನುತ್ತಾನೆ (ರಸಗಂಗಾಧರ, ಪು. ೮). ಇದುವರೆಗೆ ನಾವು
ಮಾಡಿರುವ ವಿಚಾರವನ್ನು ನೆನಪಿನಲ್ಲಿಟ್ಟುಕೊಂಡರೆ ಈ ವಾದವನ್ನು ಪರಿ
ಹರಿಸುವುದು ಕಪ್ಪವಾಗಲಾರದು. ವ್ಯತ್ತ ತ್ತಿಯೂ ಅಭ್ಯಾಸವೂ ಇಲ್ಲದೆ
ಕಾವ್ಯ ಹೊರಡಲೇ ಆರದೆಂದು ತಪಥಮಾಡುವುದು ಸಾಧ್ಯವಿಲ್ಲ. ಹಳ್ಳಿಗರ
ಹಾಡುಗಳು ಎಷ್ಟು ಮನೋಹರವಾಗಿರಬಲ್ಲುವು; ಅವನ್ನು ಕಟ್ಟಿ ದವರೆಲ್ಲ
ವೈತ್ಪತ್ತಿಯುಳ್ಳವರೆಂದಾಗಲಿ ಸಂತತವಾಗಿ ಅಭ್ಯಾಸಮಾಡಿದವರೆಂದಾಗಲಿ
ಯಾರು ಹೇಳಬಹುದು ! ಇತ್ತ ಪಾಂಡಿತ್ಯ ಹೆಚ್ಚಿದ ಹಾಗೆಲ್ಲ ಕಾವ್ಯದ ಚಿಲುಮೆ
ಬತ್ತಿಹೋಗುವುದುಂಟು ; ಅಲ್ಲದೆ ಕಾವ್ಯರಚನೆಯ ಅಭ್ಯಾಸ ಮುಂದುವರಿದ
ಮಾತ್ರಕ್ಕೆ ಕವಿತೆ ಉತ್ಕ ಪ್ಪವಾಗಿಯೇ ಆಗುವುದೆಂಬ ಭರವಸೆಯೂ ಇಲ್ಲ.
ಇದರ ಮೇಲೆ, ಉಜ್ಜ $ಲವಾದ ಪ್ರತಿಭೆ, ಒಳ್ಳೆಯ ಬುದ್ಧಿವಂತಿಕೆ, ಶ್ರದ್ಧಾ
ನ್ಫಿತವಾದ ಅಭ್ಯಾಸ... ಇವುಗಳ ಸಮುಚಿತ ಸಮ್ಮಿಳನವನ್ನು ಒಬ್ಬನೇ ವ್ಯಕ್ತಿ
ಯಲ್ಲಿ ನೋಡುವುದೂ ವಿರಳ.” ಇಷ್ಟೇ ಅಲ್ಲ. ಪ್ರತಿಭೆಯೊಂದಿದ್ದರೆ,
ಕವಿಯ ಮಿಕ್ಕ ನ್ಯೂನತೆಗಳನ್ನು ಅದು ಮರೆಗೊಳಿಸುತ್ತದೆ. ಆನಂದವರ್ಧ
ನನು ಇದನ್ನು ಸ್ಪಪ್ಪಗೊಳಿಸಿದ್ದಾನೆ :
ಅವ್ಯುತ್ಪತ್ತಿಕೃತೋ ದೋಷಃ ಶಕ್ತ್ಯಾ ಸಂವ್ರಿಯತೇ ಕವೇಃ |
ಯಸ್ಶ್ಮೈಶಕ್ತಿ ಕೃತೋ ದೋಪಃ ಸೆ ರುಟಿತ್ಯವಭಾಸತೇ ॥
(ಧೃನ್ಯಾ., ಪ. ೧೩೭).
"" ಕವಿಯ ಅವ್ಯತ್ಸತ್ತಿಯಿಂದಾದ ದೋಪವನ್ನು ಅವನ ಶಕ್ತಿ ಮುಚ್ಚುತ್ತದೆ ;
ಪ್ರತಿಭಾದಾರಿದ್ರ $ದಿಂದ ಏನಾದರೂ ದೋಪವುಂಟಾದರೆ ಅದು ಥಟಕ್ಕ ಘಿ
ಕಣ್ಣಿಗೆ ಬೀಳುತ್ತದೆ.”
ಮ
26 " ತ್ರಯಃ ಸಮುದಿತಾಃ ನ ತು ವ್ಯಸ್ತಾಃ'. ಹೇತುಃ ನ ಚ ಹೇತವಃ'' (ವೃತ್ತಿ).
“ ಪ್ರತಿಭೆಯುಂ ಅಭ್ಯಾಸಮುಂ ವಿದ್ವತ್ಲೇವೆಯುಂ ಕಾವ್ಯಪರಿಚಯಮುಂ ಕವಿತೆಗೆ
ಕಾರಣಂ '' (ಶಬ್ದಮಣಿದರ್ಪಣ, ಸೂ. ೧೪೪ ಪ್ರಯೋಗ). ಇದನ್ನು ಹೋಲಿಸಿ ; ""ಪ್ರತಿ
ಭಾನಂ ಕಾವ್ಯವಿದ್ಯಾಪುಚಯಪರಿಚಯಂ ವೃದ್ಧ ಸೇವಾನುರಾಗಂ | ಸತತಾಭ್ಯಾಸಪ್ರಯತ್ನಂ
ಕವಿತೆಗೆ ನಿಯತಂ ಕಾರಣ೦,,,' ಎಂಬ ಕಾವ್ಯಾವಲೋಕನದ ಪದ್ಯಭಾಗವನ್ನೊ (೪೨೪)
ನೋಡಿ.
2೫ ಬುದ್ಧಿಮತ್ತ್ವ್ಯಂ ಚ ಕಾವ್ಯಾಂಗವಿದ್ಯಾಸ್ವಭ್ಯಾಸಕರ್ಮ ಚ |
ಕವೇಶ್ಟೋಪನಿಪಚ್ಚಕ್ತಿಃ ತ್ರಯಮೇಕತ್ರ ದುರ್ಲಭಂ 1
(ಕಾವ್ಯಮಾಮಾಂಸಾ, ಪು. ೧೩)- ಐದನ್ನು ಹೋಲಿಸಿ.
೧೦. ಕವಿತೆಯ ಅಕರ ೧೬೩
ಇಪ್ಪಾದರೂ, ಕವಿಪ್ರತಿಭೆಯ ಕಾರ್ಯಕ್ಕೆಲ್ಲ ಅವನ ಜ್ಞಾನಾನುಭವ
ಗಳೇ ಆಧಾರಸಾಮಗ್ರಿಯೆಂಬುದನ್ನೂ, ಅವನ ಮನಸ್ಸಿನ ಪರಿಪಾಕಕ್ಕೆ
ಅನುಗುಣವಾಗಿ ಪ್ರತಿಭಾವ್ಯಾಪಾರವೂ ಹೆಚ್ಚು ಸಮರ್ಪಕವಾದೀತೆಂಬು
ದನ್ನೂ ಮರೆಯಬಾರದು. ಕವಿಯ ಅನುಭವ ವಿಸ್ತಾರಗೊಂಡಂತೆಲ್ಲ
ಅವನ ಕಾವ್ಯದ ತಿರುಳೂ ಅಧಿಕವಾಗುವುದು ; ಅವನ ಕ್ಕೆ ಪಳೆಗಿದಹಾಗೆಲ್ಲ,
ಓರೆಕೋರೆಗಳು ತಿದ್ದಿ ಕಾವ್ಯದ ರೂಪ ಹೆಚ್ಚು ಸುಂದರವಾಗುವುದು.
ಕಾಳಿದಾಸನ "ಶಾಕುಂತಲ 'ವು ಬಂಡಿಶ ಚಿಕ್ಕ ವಯಸ್ಸಿನಲ್ಲಿ ಬರೆದ
ಗ್ರಂಥವಲ್ಲ.
ಈ ಚರ್ಚೆಯಲ್ಲಿ ಕೊನೆಯ ಮಾತಾಗಿ ಹೇಮಚಂದ್ರನ ವಾಕ್ಯಗಳನ್ನು
ಉದಾಹರಿಸಬಹುದು : ಕಾವ್ಯಕ್ಕೆ ಪ್ರತಿಭೆ ಕಾರಣ. ಅದು ವೃತ್ಪತ್ತಿ
ಅಭ್ಯಾಸಗಳಿಂದ ಸಂಸ್ಕಾರ ಹೊಂದಬೇಕು. . . . ಆದಕಾರಣ, ಅವು
ಕಾವ್ಯಕ್ಕೆ ಪ್ರತ್ಯಕ್ಷ ಕಾರಣವಾಗುವುದಿಲ್ಲ; ಆದರೆ ಪ್ರತಿಭೆಗೆ ಉಪಕಾರಕ
ಗಳಾಗುತ್ತವೆ. ... ವೃತ್ತತ್ತಿಯಿಂದ ಸಂಸ್ಕಾರ ಹೊಂದಿದ ಪ್ರತಿಭೆ
ಅದನ್ನು ಮಾರದಂತೆ ಕಾವ್ಯವನ್ನು ಕಟ್ಟುತ್ತದೆ. ... ಅಭ್ಯಾಸದಿಂದ
ಸಂಸ್ಕಾ ರಹೊಂದಿದ ಪ್ರತಿಭೆ ಕಾವ್ಯಾಮೃತವನ್ನು ಕರೆಯುವ ಕಾಮಧೇನು
ವಾಗುತ್ತದೆ.'' 2
ಪ್ರಪಂಚದಲ್ಲಿ ಅಸಂಖ್ಯಾತರಾದ ಕವಿಗಳು ಆಗಿಹೋದರು. ಆದರೆ
ಮಹಾಕವಿಪಟ್ಟವನ್ನು ಪಡೆದಿರತಕ್ಕವರು ಕಾಳಿದಾಸನಂಥ ಇಬ್ಬರು
ಮೂವರೋ ಐದಾರುಮಂದಿಯೋ ಇರಬಹುದು. ಇವರಿಗೆ ಈ ಮಹಿಮೆ
ಯನ್ನು ತಂದುಕೊಟ್ಟಿರತಕ್ಕದ್ದು ಮಿಕ್ಕೆಲ್ಲದಕ್ಕಿಂತ ಮುಖ್ಯವಾಗಿ ಅವರ
ಪ್ರತಿಭೆಯ ನವನಪೋನ್ಮೇಷ. " ಮಹಾಕವಿ ನಿದ್ದೆಮಾಡುತ್ತಿದ್ದಾಗಲೂ
ಅವನಿಗೆ ಸರಸ್ಪತಿ ಶಬ್ಮಾರ್ಥಗಳನ್ನು ಕಾಣಿಸುತ್ತಾಳೆ ; ಮಹಾಕವಿಯಲ್ಲ
ದವನು ಎಚ್ಛತ್ತಿದ್ದರೂ ಅನನ ಕಣ್ಣು ಕುರುಡ್ಲೇ..... ಚರ್ಮ ಚಕ್ಷು
ಗಳಾದ ಕವಿಗಳು ಕಾಣುವುದನ್ನು ಮುಕ್ಕಣ್ಮನಾಗಲಿ ಸಸಸ್ರಾಕ್ಷನಾಗಲಿ ಕಾಣ
ಲಾರನು. ಕವಿಗಳ ಮತಿಯೆಂಬ ಕನ್ನಡಿಯಲ್ಲಿ ವಿಶ್ವವೇ ಪ್ರತಿಫಲಿಸುತ್ತದೆ.
(" ಮತಿದರ್ಷಣೀ ಕವೀನಾಂ ವಿಶ್ವಂ ಪ್ರತಿಫಲತಿ'). ಇವರ ಕಣ್ಣಿಗೆ
3 ಕಾವ್ಯಾನುಶಾಸನ, ಪು. ೫೯.
2 ಯೇನ ಅಸ್ಮಿನ್ ಅತಿವಿಚಿತ್ರಕವಿಪರಂಪರಾವಾಹಿನಿ ಸಂಸಾರೇ ಕಾಲಿದಾಸ
ಪ್ರಭೃತಯೋ ದ್ವಿತ್ರಾ ಪಂಚಪಾ ವಾ ಮಹಾಕವಯ ಇತಿ ಗಣ್ಯಂತೇ (ಧ್ರನ್ಯಾ., ಪು. ೨೯).
೧೬೪ ಭಾರತೀಯ ಕಾವ್ಯವಿಸಾಮಾಂಸೆ
ಹೇಗೆ ಗೋಚರವಾದೇವು ಎಂಬ ತವಕದಿಂದ ತಬ್ದ್ಧಾರ್ಥಗಳು ಈ ಮಹಾ
ತ್ಮರೆಡೆಗೆ ನಾನು ಮುಂದು ತಾನು ಮುಂದು ಎಂದು ನುಗ್ಗುತ್ತವೆ.'' 9
ಹೀಗೆಲ್ಲ ಆಲಂಕಾರಿಕರು ಮಹಾಕವಿಗಳ ಪ್ರತಿಭಾಶಕ್ತಿಯನ್ನು ಪ್ರಶಂಸಿಸು
ತ್ತಾರೆ. "« ಪ್ರತಿಭಾತಾರತಮ್ಯೇನ ಪ್ರತಿಷ್ಠಾ ಭುವಿ ಧೂರಿಧಾ''!
("ಪ್ರತಿಭೆಯ ತಾರತಮ್ಯಕ್ಕೆ ಅನುಸಾರವಾಗಿ ಲೋಕದಲ್ಲಿ ಕವಿಗಳ ಪದ
ವಿಯೂ ಬಗೆ ಬಗೆಯಾಗುತ್ತದೆ.'')
30 ರಾಜಶೇಖರ : ಕಾವ್ಯಮಾಮಾಂಸಾ, ಪು. ೬೨.
31 ಮೈೇಲನದೇ, ಪು. ೧೩
೧೧. ಕವಿತೆಯ ಪರಿಕರಗಳು
4 ಕಾವ್ಯಮಾಮಾಂಸೆ 'ಯಲ್ಜಿ ರಾಜಶೇಖರನು,
ಸ್ವಾಸ್ಥ್ಯ೦ ಪ್ರತಿಭಾಭ್ಯಾ ಸೋ ದಕ್ಷಿರ್ವಿದೃತ್ಮಥಾ ಬಹುಶ್ತುತತಾ |
ಸ್ಮ ತತಿದಾರ್ಥ್ಯಮನಿರ್ವೇದಶ್ಚ ಮಾತರ್ಯೋಷ್ಟ್ ಕವಿತ್ವಸ್ಯ ॥
(ಪು. ೪೯).
"“ದೇಹ ಮನಸ್ಸುಗಳ ಸೃಸ್ಥತೆ, ಪ್ರತಿಭೆ, ಅಭ್ಯಾಸ, ಭಕ್ತಿ, ವಿದಾಂಸರೊಡನೆ
ಮಾತುಕಥೆ, ಪಾಂಡಿತ್ಯ, ದೃಢವಾದ ಜ್ಞಾ ಪಕಶಕ್ತಿ, ಉತ್ಪಾಹ--
ಇವೆ೦ಟೂ ಕವಿತ್ಯಕ್ಕೆ ತಾಯಂದಿರು'' ಎಂದು ಪಟ್ಟಿಹಾಕುತ್ತಾನೆ. ಈ
ಮಾತೃಗಣದಲ್ಲ ಕವಿತೆಗೆ ಹೆತ್ತ ತಾಯಿ ಪ್ರತಿಭೆಯೊಂದೇ. ಮಿಕ್ಕವುಗಳಲ್ಲಿ
ಕೆಲವು ಸಾಕುತಾಯಿಯರಂತೆ, ಕೆಲವು ಸೂಲಗಿತ್ತಿಯರಂತೆ. ಕಾವ
ನಿರ್ಮಾಣದಲ್ಲಿ ಇವುಗಳಿಂದ ಆಗುವುದೆಲ್ಲ ಪರೋಕ್ಷವಾದ ಉಪಕಾರ;
ಒಮ್ಮೊಮ್ಮೆ ಈ ಸುತ್ತುಮುತ್ತಿನವುಗಳ ಉಪಚಾರ ಹೆಚ್ಚಾಗಿ ಕೂಸು ಬಡ
ವಾಗುವುದೂ ಉಂಟು. ಈ ಪರಿಕರಗಳ ಕಾರ್ಯಪೇನೆಂಬುದನ್ನು ಈಗ
ಕೊಂಚಮಟ್ಟಿಗೆ ವಿಚಾರಮಾಡೋಣ. >
ಇವುಗಳಲ್ಲೆಲ್ಲಾ ಅತಿಮುಖ್ಯವಾದದ್ದು ವ್ರತ್ನತ್ತ್ವಿ ಸಂಗ್ರಹವಾಗಿ
ಹೇಳಬೇಕಾದರೆ, ": ಬಹುಜ್ಞತಾ ವ್ಯತ್ಪತ್ತಿಃ'' 1 ("" ಅನೇಕ ವಿಷಯಗಳನ್ನು
ತಿಳಿದಿರುವುದೇ ವೃ್ಯತ್ಪತ್ತಿ''). "" ಇದರ ತಿಳಿವು ನನಗೆ ಅನಾವಶ್ಯಕ ''
ಎ೦ದು ಕವಿ ನಿರಾಕರಿಸಬಹುದಾದ ವಿಷಯಪೇ ಜಗತ್ತಿನಲ್ಲಿ ಇಲ್ಲ:
ನ ಸ ಶಬ್ದೋ ನ ತದ್ವಾಚ್ಛಂ ನ ಸನ್ಯಾಯೋನಸಾಕಲಾ।
ಜಾಯೆತೇ ಯನ್ನ ಕಾವ್ಯಾಂಗ೦ ಅಹೋ ಭಾರೋ ಮಹಾನ್ ಕವೇಃ ॥:
"" ಕಾವ್ಯಕ್ಕೆ ಅಂಗವಾಗದ ಶಬ್ದವಿಲ್ಲ, ಅರ್ಥವಿಲ್ಲ, ನ್ಯಾಯವಿಲ್ಲ, ಕಲೆಯಿಲ್ಲ.
ಅಬ್ಬಾ, ಕವಿಯ ಭಾರ ಎಷ್ಟು ದೊಡ್ಡದು!” ಹೀಗೆಂದು ಭಾಮಹನು
ಉದ್ದಾರತೆಗೆಯುತ್ತಾನೆ. ಮಮ್ಮಟನು ನಿರ್ದೇಶಿಸಿರುವಂತೆ* ಕವಿಗೆ
ಮೂರು ಬಗೆಯ ವಿಷಯಗಳಲ್ಲಿ ವೃತ್ಪತ್ತಿ ಬೇಕಾಗುತ್ತದೆ. ಇವುಗಳಲ್ಲಿ
ಮೊದಲನೆಯದು ಸಚರಾಚರವಾದ ಲೋಕದ ನಡೆವಳಿಕೆಯ ಪರಿಜ್ಞಾನ.
1 “ಬಹುಜ್ಞತಾ ವ್ಯತ್ಪತ್ತಿಃ'' ಇತ್ಯಾಚಾರ್ಯಾಃ (ಕಾವ್ಯವಿಮಾಂಸ್ಕಾ ಪು. ೧೬).
3 ಭಾಮಹೆ: ಕಾವ್ಕಾಲಂಕಾರ, ;. ೪.
3 * ಲೋಕಸ್ಯ ಸ್ಮಾವರಜಂಗಮಾತ್ಮಕಲೋಕವೃತ್ತಸ್ಯೆ, ಶಾಸ್ತ್ರಾಣಾಂ ಛಂದೋ
ಪ್ಯಾಕರಣಾಭಿಧಾನಕೋಶಕಲಾಚತುರ್ಪರ್ಗ ಗಜತುರಗಬಡ್ನಾದಿ ಲಕ್ಷಣಗ್ರಂ ಥಾನಾಂ
ಕಾವ್ಯಾನಾಂ ಚ ಮಹಾಕವಿಸಂಬಂಧಿನಾಂ, ಆದಿಗ್ರಹಣಾತ್ ಇತಿಹಾಸಾದೀನಾಂ ಚ
ವಿಮರ್ಶನಾತ್ ಪ್ರೃತ್ಪತ್ತಿಃ' (ಕಾವ್ಯಪುಕಾಶ, ;, ೩ ವೃತ್ತಿ).
೧೬೫
೧೬೬ ಭಾರತೀಯ ಕಾವ್ಯಮಾಮಾಂಸೆ
ಈ ಲ್ಲೋಕಜ್ಞಾನವ ಕಾವ್ಯದ ಮೂಲಸಾಮಗ್ರಿಯೆ`ಂದು ಈಗಾಗಲೇ
ಮೋಡಿದ್ದೇವೆ; ಕಾವ್ಯದ ಅಸ್ಥಿ ಪಂಜರವೇ ಅದೆಂದು ಕರೆದರೂ ಅತಿಶಯೋಕ್ತಿ
ಯಾಗಲಾರದು. ಎರಡನೆಯದು ಕಾವ್ಯನಿರ್ಮಾಣಕ್ಕೆ ಅಂಗವಿದ್ಯೆಗಳಾದ
ಛಂದಸ್ಸು, ವ್ಯಾಕರಣ, ತಬ್ಧಾಭಿದಾನ (ಎಂದರೆ ನಿಘಂಟು) ಮೊದಲಾದ
ವುಗಳ ಜ್ಞಾನ; ಚಿತ್ರ, ಶಿಲ್ಪ ಮೊದಲಾದ ವಿವಿಧ ಕಲೆಗಳು; ದರ್ಮ
ಅರ್ಥ ಕಾಮ ಮೋಕ್ಷಗಳೆಂಬ ಚತುರ್ವರ್ಗಗಳನ್ನು ಪ್ರತಿಪಾದಿಸುವ
ಅನೇಕ ಶಾಸ್ತ್ರಗಳು ಇದೆಲ್ಲದರ ಪರಿಚಯ ; ಮೂರನೆಯದು ಮಹಾಕಾವ್ಯ
ಗಳು, ಇತಿಹಾಸಗಳು ಮೊದಲಾದವುಗಳ ಅನುಶೀಲನ. ಇವುಗಳಲ್ಲೆ ಲ್ಲಾ
ಕವಿಗೆ ಎಷ್ಟೆ ಷ್ಟು ಪ್ರವೇಶವಿದ್ಧರೆ ಅವನ ಕಾವ್ಯವೂ ಅಪ್ಪಷ್ಟು ಸಂಪನ್ನ
ವಾಗಲು ಅವಕಾತವೊದಗುತ್ತದೆ. ಕವಿಯ ಕಣ್ಣು ಎಷ್ಟು ಚುರುಕಾಗಿರಬೇಕು,
ಅವನ ಕುತೂಹಲ ಹೇಗೆ ಯಾವಾಗಲೂ ಎಚ್ಚೆ ರಗೊಂಡಿರಜೀಕು, ಹೊಸ
ಹೊಸ ಜ್ಞಾನಾನುಭವಗಳನ್ನು ಅವನು ಎಲ್ಲೆಲ್ಲ ಹುಡುಕಿಕೊಂಡು ಹೋಗ
ಬೇಕು ಎಂಬುದನ್ನು ತೋರಿಸಲು, ಕ್ಷೇಮೇಂದ್ರನು "ಕವಿಕಂಠಾಭೆರಣ 'ದಲ್ಲಿ
ಸಂಗ್ರಹಿಸಿರುವ “ ಶಿಕ್ಷಾಶತ ''ದಲ್ಲಿ ಕೆಲವನ್ನು ಇಲ್ಲ ಉದ್ಭರಿಸಬಹುದು :
...ಸಹೆವಾಸಃ ಕವಿವರೈಃ ಮಹಾಕಾವ್ಯಾರ್ಥಚರ್ವಣಂ ।
ಅರ್ಯತ್ವಂ ಸುಜನೈರ್ಮೈತ್ರೀ ಸೌಮನಸ್ಯಂ ಸುಷೇಷಶಾ |
ನಾಟಕಾಭಿನಯಪ್ರೇಕ್ಷಾ ಶೃಂಗಾರಾಲಂಗಿತಾ ಮತಿಃ |....
ಲೋಕಾಚಾರಪರಿಜ್ಞಾನಂ ವಿವಿಕ್ತಾಖ್ಯಾಯಿಕಾರಸಃ |
ಇತಿಹಾಸಾನುಸರಣಂ ಚಾರುಚಿತ್ರಸಿರೀಕ್ಷಣಂ ॥
ಶಿಲ್ಪಿನಾ೦ ಕೌಶಲಪ್ರೇಕ್ಷಾ ವೀರಯುದ್ಧಾವಲೋಕನಂ |
ಶೋಕಪ್ರಲಾಪಶ್ರವಣಂ ಶೈ ಶಾನಾರಣ್ಯದರ್ಶನಂ ॥....
ಆಲೋಕಃ ಪತ್ರಲೇಖ್ಯಾದೌ ಗೋಷ್ಟೀಪ್ರಹಸನಜ್ಞತಾ ।
ಪ್ರೇಕ್ಷಾ ಪ್ರಾಣಿಸೃಭಾವಾನಾಂ ಸಮುದ್ರಾದಿಸ್ಥಿ ತೀಕ್ಷಣಂ |
ರವೀಂದುತಾರಾಕಲನಂ ಸರ್ವರ್ತುಪರಿಭಾವನಂ |
ಜನಸಂಪಾಭಿಗಮನಂ ದೇಶಭಾಷೋಪಜೀವನಂ !....
ಪರೋನ್ಮೇಷಜಿಗೀಪಾ ಚ ವ್ಯತ್ಸತ್ತೈ 4 ಸರ್ವಶಿಪ್ಯತಾ ॥ ಕಿ
(i ೪-೧೪)
4 ಪೌಮನಸ್ಯಂ - ಒಳ್ಳೆಯ ಮನಸ್ಸಿನಿಂದಿರುವುದು ; ವಿವಿಕ್ತಾಖಾ, ಶಯಿಕಾರಸೆತ- ರಹ
ಸೃದ ಸಂಗತಿಗಳಲ್ಲಿ ಅಸಕ್ತಿ (೧); ಪರೋನ್ಮೇಪಜಿಗೀಷಾ - ಇನ್ನೊಬ್ಬರ ಕಲ್ಪನೆಗಳನ್ನು
ಮಾರಿಸುವ ಹುರುಡು; ವ್ಯತ್ಪತ್ತ್ಯೊ ಸರ್ವಶಿಷ್ಯತಾ - ತಿಳಿವಳಿಕೆಗಾಗಿ ಎಲ್ಲರಲ್ಲೂ ಶಿಷ್ಯತ್ವ
ವಹಿಸುವುದು.
೧೧. ಕವಿತೆಯ ಪರಿಕರಗಳು ೧೬೭
ಕ್ಷೇಮೇಂದ್ರನ ಪಟ್ಟಿಯಲ್ಲಿ ಸೇರದ ವಿಷಯವೇ ಇಲ್ಲ; ಅವನ ಅನುಶಾಸನ
'ದಂತೆ ಎಲ್ಲ ಕವಿಗಳೂ-ಮಹಾಕವಿಗಳು ಕೂಡ--ಯುದ್ಧಸ್ಟರೂಪ, ಪ್ರಾಣಿ
ಸ್ವಭಾವ, ಸಮುದ್ರಾದಿಗಳ ಪರಿಸ್ಥಿ ತಿ ಈ ಮೊದಲಾದವುಗಳನ್ನು ಚೆನ್ನಾಗಿ
ಪರಿಶೀಲಿಸಿದ ಬಳಿಕವೇ ವರ್ಣನೆಗೆ ಕೈಹಾಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ಅವರ ಗ್ರಂಥದ ಭಾರವೂ ನಮ್ಮ ಅನುಲ್ಲಾ ಸವೂ ಬಲುಮಟ್ಟಿ ಗೆ ಕುಗ್ಗು
ತ್ರಿತ್ತು!
ಲೋಕಜ್ನಾ ನವಿಲ್ಲದೆ ಕಟ್ಟಿದ ಕಾವ್ಯ ಯಾರನ್ನೂ ಮೆಚ್ಚಿಸದೆಂಬ
ಭಾವವನ್ನು ಈ ಕೆಳಗಿನ ಹಳೆಯ ಪದ್ಯವು ಉಕ್ತಿಚಮತ್ಕಾರಡೊಡನೆ ಪ್ರತಿ
ಪಾದಿಸುತ್ತದೆ ಕ
ಅರಮನೆಗಲ್ಲು ಸೂಳೆಮನೆಗಲ್ತು ಸವಣ್ಮನೆಗಲು ಕೂಡೆ ಬ.
ಲ್ಲರ ಬಗೆಗಲ್ಲು ವಸ್ತುಕೃತಿಯಂ ಸಲೆ ಪೇಟ್ಟುದು ಕಲ್ಲು ಷೇಟದಂ. |
ದರಮನೆಗಲ್ತು ಸೂಳೆಮನೆಗಲ್ಲು ಸವಣ್ಮನೆಗಲ್ಲು ಕೂಡೆ ಬ
ಬರ ಬಗೆಗಲ್ಲದಾವೆಡೆಗಮಲ್ಲದು ಕಲ್ಪಿ ವಲಂ ಕವೀಂದ್ರರಾ ॥
ಇಲ್ಲಿ ಒಂದು ಎಚ್ಚ ರಿಕೆಗೆ ಅವಕಾಶವು೦ಟು. ಕವಿಯಲ್ಲಿ ಪಾಂಡಿ
ತ್ಯಾದಿಗಳು ಹೆಚ್ಚಿದಂತೆಲ್ಲ ಅದರ ಪ್ರದರ್ಶನಕ್ಕೇ ಅವನು ಮನಸೋತು
ಕಾವೃರಸದ ಕಡೆಗೆ ಗಮನಕೊಡದೆ ಹೋಗಬಹುದು. ಈ ದೌರ್ಬಲ್ಯ
ಮಹಾಕವಿಗಳಿಗೂ ತಪ್ಪಿದ್ದಲ್ಲವೆಂಬುದಕ್ಕೆ ಪ್ರತಿಯೊಂದು ಭಾಷೆಯ ಸಾಪಿತ್ಯ
ದೆಲ್ಲೂ ನಿದರ್ಶನಗಳಿವೆ.
ಯದ್ವೇದಾಧ್ಯಯನಂ ತಥೋಪನಿಷಹಾಂ ಸಾಂಖ್ಯಸ್ಯ ಯೋಗಸ್ಯ ಚ
ಜ್ಞಾನಂ ತತ್ಕಥನೇನ ಕಿಂ ನ ಹಿ ತತಃ ಕಶ್ಚಿದ್ಗುಣೋ ನಾಟಕೇ |
ಯತ್ ಪ್ರೌಢತ್ಟಮುದಾರತಾ ಚ ವಚಸಾಂ ಯಜ್ಭಾರ್ಥತೋ ಗೌರವಂ
ತಚ್ಚೇದಸ್ತಿ ತತಸ್ತದೇವ ಗಮಕಂ ಪಾ೦ಡಿತ್ಯವೈದಗ್ಧ ಯೊ ॥
5 ಕಾವ್ಯಾವಲೋಕನ, ಪ್ಲ ೨೦೫. ಪದ್ಯದ ಪೂರ್ವಾರ್ಥದಲ್ಲ, "" ಅರಮನೆ--
ಕಲ್ಲು,” ಎಂದೂ, ಉತ್ತರಾರ್ಧದಲ್ಲಿ, "" ಅರಮನೆಗೆ -- ಅಲ್ಲ,” ಎಂದೂ ಬಿಡಿಸಿ
ಅರ್ಥಮಾಡಿಕೊಳ್ಳಬೇಕು.
೧೬೮ ಭಾರತೀಯ ಕಾವ್ಯವಿಸಾಮಾಂಸೆ
" ವೇದಾಧ್ಯ ಯನಮಾಡಿರುವುದು, ಹಾಗೆಯೇ ಉಪನಿಷತ್ತು ಗೆಳು,
ಸಾಂಖ್ಯ, ಯೋಗ ಇವುಗಳ ಜ್ಞಾನ ಪಡೆದಿರುವುದು ಇದನ್ನೆಲ್ಲಾ ಹೇಳಿ
ಕೊಂಡರೆ ಏನಾಗುತ್ತ ದೆ? ಅದರಿಂದ ನಾಟಕಕ್ಕೆ ಯಾವ ಗುಣವೂ ಬರುವು
ದಿಲ್ಲ. ಮಾತಿನ ಪ್ರೌಢಿಮೆ ಮತ್ತು ಉದಾರತೆ, ಅರ್ಥದ ಮಹತ್ವ ಇವು
ಇದ್ದರೆ ಸಾಕು; ಕವಿಯ ಪಾಂಡಿತ್ಯ ವಿದಗೃತೆಗಳಿಗೆ ಇವೇ ಸೂಚಕಗಳಾಗು
ತ್ತ ಡೆ'' ಎಂದು ಭವಭೂತಿ ಹೇಳಿದನು." ಕವಿಯ ಪಾಂಡಿತ್ಯವು ಕಾವ್ಯಾ
ಮೃತದ ರೂಪದಲ್ಲಿ ಒದಗಿದರೆ, ಅದು ಎಷ್ಟುಬಂದರೂ ನಾವು ಬೇಡವೆನ್ನು
ವುದಿಲ್ಲ, ಆದರೆ ಕವಿಗಳು ತಮ್ಮ ಶಾಸ್ತ್ರಪೆ ಗ್ರೌಢಿಮೆಯನ್ನು ಉಂಡುಂಡೆಯಾಗಿ
ಅನಾವಶ್ಯಕವಾದ ಕಡೆಗಳಿ್ಲೆಲ್ದಾ ತೋರಿಸಿಕೊಳ್ಳುವುದುಂು; ಭವಭೂತಿಗೇ
ಈ ದೂರು ತಪ್ಪಿಲ್ಲ. ಕನ್ನ ಡೆ ಕವಿಗಳಲ್ಲಿಯೂ ಅನೇಕರು ಈ ವಿಷಯದಲ್ಲಿ
ದಾರಿ ತಪ್ಪಿರುವುದಕ್ಕೆ ನಿದರ್ಶನಗಳನ್ನು ಬೇರೆ ಕೊಡಬೇಕಾಗಿಲ್ಲ.
ಪಾಂಡಿತ್ಯದ ಕ್ಲೇಶ ಇನ್ನೊಂದುಂಟು. ತಾನು ಪ್ರೌಢನೆಂದು ಹೆಮ್ಮೆ
ಗೊಂಡು ಕವಿ ಸರಳಕವಿತೆಯ ಮಾರ್ಗವನ್ನು ಬಿಡುತ್ತಾನೆ. ಅಜ್ಜ ರನ್ನುಅಸಡ್ಡೆ
ಮಾಡಿ, ವಿದ್ವಾಂಸರ ತ್ಲಾಘನೆಯನ್ನು ನಿರೀಕ್ಷಿಸುತ್ತಾನೆ. ತನ್ನಕಾವ್ಯದಿಂದ
ಅರ್ಥವನ್ನು ಹೊರಡಿಸಲು ವಾಚಕರಿಗೆ ಎಪ್ಟೆಪ್ಟು ಕಪ್ಪವಾದರೆ ಅಪ್ಪಪ್ಟು
ಸಂತೋಪಪಡುತ್ತಾನೆ. ಈ ಬಗೆಯ ಮನೋವೃತ್ತಿಯನ್ನೂ ಕವಿತಾಪ್ರ
ವೃತ್ತಿಯನ್ನೂ ಅಲ್ಲಗಳೆಯುವ ಮನೋಹರವಾದ ಕನ್ನಡ ಪದ್ಯವೊಂದಿದೆ ;
ಅದರ ಅರ್ಥವನ್ನು ಪೌಢಕವಿಗಳೆಲ್ಲರೂ ಪರ್ಕ ್ಯಿಲೋಚಿಸುವುದು ಅಗತ್ಯ :
ಇಟ್ಟು ರಮಾಗೆ' ತಾಘ್ಯರಸಮರ್ಥಮುಮ ತ್ಕ ರಮುಂ ಪ್ರತೀತಿಯಂ
ಮಾಟಿ, ನೆಗಂ ಜಲಕ್ಕನಿರೆ ಪೇಟದೆ ಕೆಮ್ಮ ನೊ [ಗ] ೦ಟುವೇಲಟ್ದು ಚಿಃ |
ನೋಟ್ಟುದೆ ಮುಯ್ಯನಾಕ್ಕತಿಗೆ ಪಂಚಿನೆಪೇಟು ದದರ್ಕೆ ಟಿಪ್ಪಣ೦
ಬೇಟ್ಟುದು ಟೀಕುವೇಟ್ದಿದೆನೆ ಪೇಟ್ಟವನುಂ ಕಪಿಯೆಂಬ ಲೆಕ್ಕಮೇ 8?
ಒಗೆಟೆಗೆ ಸಮಾನವಾಗಿ, ಟೀಕೆಟಿಪ್ಪಣಿಗಳಿದ್ದಹೊರತು ಅರ್ಥವಾಗದ ಕಾವ್ಯ
ವನ್ನು ಭಾಮಹನೂ ಬಂಡಿಸಿದ್ದಾನೆಂಬುದನ್ನು* ಇಲ್ಲ ಸ್ಮರಿಸಬಹುದು.
““ವೈತ್ವತ್ತಿ'' ಶಬ್ದಕ್ಕೆ ನಮ್ಮ ಆಲಂಕಾರಿಕರು ಹೇಳಿರುವ ಇನ್ನೊಂದು
ಬಹುಮುಖ್ಯವಾದ ಅರ್ಥ ಈಗ ಗಮನಕ್ಕೆ ಬರುತ್ತದೆ. "" ಉಚಿತಾನುಚಿತ
6 ಮಾಲತೀಮಾಧವ, 1 ೭.
7 ಕಾವ್ಯಾವಲೋಕನ, ಪ. ೨೯೯,
84 ಕಾವ್ಯಾನ್ಯಪಿ ಯದೀಮಾನ್ಮಿ,,,'ಘ (ಕಾವ್ಯಾಲಂಕಾರ, ||, ೨೦). ಈ ಪದ್ಯವನ್ನು
ನಮ್ಮ ಗ್ರಂಥದ ೨೨ನೆಯ ಪುಟದಲ್ಲ, 4ನೆಯ ಅಡಿಟಪ್ಪಣಿಯಲ್ಲ ಉದಾಹರಿಸಿದೆ.
೧೧, ಕವಿತೆಯ ಪರಿಕರಗಳು ೧೬೯
ವಿಷ್ಠೇಕೋ ವ್ಯತ್ಪತ್ತಿ 8'' ( ಯಾವುದು ಉಚಿತ ಯಾವುದು ಅನುಚಿತ
ಎಂಬುದರ ವಿವೇಚನೆ ವೃೃತ್ಪತ್ತಿ'') ಎಂದು ರಾಜಶೇಖರನೂ (ಕಾವ್ಯ
ಮಾಮಾಂಸಾ, ಪು. ೧೬), ವು ಕೆತ್ತಿ 8 ತದುಪಯೋಗಿ ಸಮಸ್ತವಸ್ತು
ಪೌರ್ಯಾಪರ್ಯ ಪರಾಮರ್ಶಕೌೌಶಲಂ'” (ವ್ಯತ್ಪತ್ತಿಯೆಂದರೆ ಪ್ರತಿಭೆಗೆ ಉಪ
ಯೋಗವಾಗುವ ಸಮಸ್ತ ವಸ್ತುಗಳ ಪಿಂದುಮುಂದನ್ನು ವಿಮರ್ಶಿಸುವ
ವಿಚಕ್ಷಣತೆ'' ಎಂದು ಅಭಿನವಗುಪ್ತನೂ (ದ್ರೈನ್ಯಾ. ಲೋಚನ, ಪು. ೧೩೭)
ಒತ್ತಿ ಹೇಳುತ್ತಾರೆ. ಈ ದೃಷ್ಟಿಯಿಂದ, ವು ಕತ್ಸತಿಯೆಂದರೆ ವಿಮರ್ಶನ
ಸಾಮರ್ಥ್ಯವಲ್ಲದೆ ದೇರೊಂದಲ್ಲ. ಪ್ರತಿಭೆಯನ್ನು ಇದು ಸಂಸ್ಕರಿಸಿದ
ಹೊರತು ಸರ್ವ ಮಾನ್ಯವಾದ ಮಹಾಕಾವ್ಯವು ಅವತರಿಸಲಾರದು. ಇದನ್ನು
ಅರಿತೇ ರಾಜಶೇಖರನು "" ಪ್ರತಿಭಾವ್ಯತ್ವತ್ತೀ ಮಿಥಃ ಸಮವೇತೇ
ಶ್ರೇಯಸ್ಕ್'” ( ಪ್ರತಿಭೆ ವ್ಯತ್ಸತ್ತಗೆಕ ಒಂದರೊಡನೊಂದು ಬೆರೆದರೆ
ಶ್ರೇಯಸ್ಕರವಾಗುತ್ತವೆ':) ಎಂದು ಹೇಳಿದನು (ಕಾವ್ಯಮಾಮಾಂಸಾ,
ಪು. ೧೬). ಕವಿಪ್ರತಿಭೆಯಲ್ಲಿ ಕಲ್ಪನೆಗಳು ರೂಪುಗೊಳ್ಳುವಾಗ ಅವುಗ
ಳನ್ನು ಪರೀಕ್ಷಿಸಿ, ಬಿಡುವ ಸೇರಿಸುವ ವಿಮರ್ಶನಕಾರ್ಯವೂ ಜೊತೆಯಲ್ಲಿಯೇ,
ಎಷ್ಟೋ ವೇಳೆ ಕವಿಗೆ ಅರಿವಾಗದಂತೆಯೇ, ನಡೆಯುತ್ತದೆ. ಆದರೆ ಎಲ್ಲ
ಪ್ರತಿಭಾಶಾಲಿಗಳಲ್ಲೂ ಈ ಔಚಿತ್ಯಜ್ಞಾನ ಯಾವಾಗಲೂ ಎಚ್ಚೆ ತಿರುವು
ದೆಂದು ಹೇಳಲು ಸಾಧ್ಯವಿಲ್ಲ. ಕಾಳದಾಸನಂಥ ಮಹಾಕವಿಯೇ "ಕುಮಾರ
ಸ೦ಭವ ದಲ್ಲಿ, ಜಗತ್ತಿನ ತಾಯಿತಂದೆಗಳೆಂದು ಸಂಪ್ರದಾಯಸ್ಥರು ನೆಂಬುವ
ಪಾರ್ಯತೀಪರಮೇಶ್ವರರ ಸಮಾಗಮವನ್ನು ವರ್ಣಿಸಿ ಅಲಂಕಾರಿಕರ ಆಕ್ಷೇ
ಪಣಿಗೆ ಗುರಿಯಾದನು.?
9 ಧೃನ್ಯಾ. ಪು. ೧೩೭.೮. ಅವೃತ್ನತ್ತಿಯಿದ್ದರೂ ಕವಿಶಕ್ತಿ ಅದನ್ನು ಮರೆಗೊಳಿಸುವು
ದೆಂದು ತೋರಿಸಲು ಆನಂದವರ್ಧನನು ಈ ನಿದರ್ಶನವನ್ನು ಕೊಡುತ್ತಾನೆ. ಅಭಿನವಗುಪ್ತನು
ಇಲ್ಲ ಪೀಗೆ ವ್ಯಾಖ್ಯಾನ ಬರೆಯುತ್ತಾನೆ: "ಈ ಸಂಭೋಗವನ್ನು ಕೂಡ ಪ್ರತಿಭಾಶಾಲ
ಯಾದ ಕವಿ ಹೇಗೆ ವರ್ಣಿಸಿದ್ದಾನೆಂದರೆ ಹೃದಯವು ಅಲ್ಲೇ ವಿಶ್ರಾಂತಿಗೊಂಡು ಪ*ರ್ಕ್ಯಾಪರ್ಯ
ವಿಮರ್ಶೆಮಾಡಲು ಅವಕಾಶ ಕೊಡುವುದಿಲ್ಲ. ನಿಸರ್ಗಪರಾಕ್ರಮಶಾಲಿಯಾದ ಪುರುಷನು
ಯೋಗ್ಯವಲ್ಲದ ಹೋರಾಟದಲ್ಲಿ ತೊಡಗಿದ್ದರೂ, ಶೌರ್ಯಪ್ರದರ್ಶನಕಾಲದಲ್ಲ. [ಜನರು]
"ಭಲೆ' ಎನ್ನುತ್ತಾರೆ; ಹಿಂದುಮುಂದನ್ನು ಯೋಚಿಸಿದ ಒಳಿಕ ಒಪ್ಪುವುದಿಲ್ಲ. ಇಲ್ಲಿಯೂ
ಹಾಗೆಯೇ” ("" ಸಂಭೋಗೋಣಪಿ ಹೃಸೌ ವರ್ಣಿತಸ್ತಥಾ ಪ್ರತಿಭಾನವತಾ ಕವಿನಾ ಯಥಾ
ತತ್ರೈವ ವಿಶ್ರಾಂತಂ ಹೃದಯಂ ಪೌರ್ಟಾಪರ್ಯ ಪರಾಮರ್ಶಂ ಕರ್ತುಂ ನ ದದಾತಿ ಯಥಾ
ನಿರ್ವ್ಯಾಜಪರಾಕ್ರಮಸ್ಯ ಪುರುಷಸ್ಯ ಆವಿಷಯೇಪಿ ಯುಧ್ಯಮಾನಸ್ಯ ತಾವತ್ ತಸ್ಮಿನ್ನವ
ಸರೇ ಸಾಧುವಾದೋ ವತೀರ್ಯತೇ ನ ತು ಪೌರ್ಟಾಪರ್ಯಪರಾಮರ್ಶೆ ತಥಾ ಅತ್ರಾಪೀತಿ
ಭಾವಃ'')
೧೭೦ ಭಾರತೀಯ ಕಾಷ್ಯಮಾಮಾಂಸೆ
ಔಚಿತ್ಯಜ್ಞಾನವು ಕಡಮೆಯಾಗಿರುವುದಕ್ಕೆ ಸಂಬಂಧಿಸಿದಹಾಗೆ,
*" ಅವ್ಳೈತ್ಚತ್ತಿ'' ಎಂಬ ತಬ್ದವನ್ನು ಇನ್ನೊಂದು ಅರ್ಥದಲ್ಲಿ ಪ್ರಯೋಗಿಸು
ವುದೂ ಉಂಟು. ಕಾವ್ಯ ರಚನೆಮಾಡುವಾಗ ಕೆಲವರು ಶಬ್ದದ ಅರ್ಥ
ಸ್ವಾರಸ್ಯಕ್ಕೆ ಗಮನಕೊಡದೆ ಅನುಪ್ರಾ ಸಾದಿ ಶಬ್ದ ವೈಚಿತ್ರ್ಯ ವನ್ನು ತುಂಬು
ವುದರಲ್ಲೇ ಮಗ್ಗರಾಗುತ್ತಾರೆ. ಇಂಥ ಪ ವು ತ್ತಿಯನ್ನು ಟೀಕಿಸುತ್ತಾ
SN
ಅಭಿನವಗುಪ್ತ ಷ್ಟ “ ಅವು ಸುಶಿ ಶಿಃ ಅನುಪ್ರಾ 02 ತಾತ'ರ್ಗಪ
ಎ
ವೃತ್ತಿಃ” ("" ಅವ್ಯತ್ನತ್ತಿಯೆಂದರೆ ಅನುಪ್ರಾಸ ಪೌದಶದವುಗಳನ್ನು
ಹೆಣಿ ಯುವ ಉದ್ದೇಶದಿಂದ ಪ್ರವರ್ತಿಸುವುದು'') ಎಂದು " ಅವ್ಳ್ಯತ್ಪತ್ತಿ''
ತಬ್ದದ ಅರ್ಥವನ್ನು ವಿಸ್ತ ರಿಸುತ್ತಾನೆ (ಧ್ವನ್ಯಾ. ಲೋಚನ, ಪು ೨೧).
ಕವಿಯ (ಅಭ್ಯಾಸ, ಕವಿತೆ ಹೊಮ್ಮುಪುದಕ್ಕೆ ತಕ್ಕ ಸನ್ನಿವೇಶ-ಈ
ಮೊದಲಾದವುಗಳ ೂಪೆಣಿಗೆ ಈಗ ಬರುತ್ತೇವೆ. ಈ ವಿಪಯದಲ್ಲ
ವಿಸ್ತಾರವಾಗಿ ಬರೆದಿರತಕ್ಕವನು ರಾಜಶೇಖರ; ಕವಿಯ ದಿನಚರ್ಯೆ ಪೀಗೆ
ಹೀಗೆ ಇರಬೇಕೆಂದೇ ಅವನು ವಿಧಿಸಿದ್ದಾನೆ. ಅವನ ಮಾತುಗಳಲ್ಲಿ ಕಾತು
ಕಾಸ್ಟದವಾದ ಕೆಲವನ್ನು ಇಲ್ಲಿ ಅನುವಾದ ಮಾಡಬಹುದು :
"" ಕವಿ ಯಾವಾಗಲೂ ಶುಚಿಯಾಗಿರಜೇಕು. 1ತುಚಿತ್ವವು ಮಾತಿ
ನದು, ಮನಸ್ಸಿನದು,» ದೇಹದ್ದು ಎಂದು ಮೂರು ಬಗೆ. ಮೊದಲನ
ಎರಡೂ ಶಾಸ್ತ್ರದಿಂದ ಬರತಕ್ಕವು. ಮೂರನೆಯದರ ಬಗೆಯೇನೆಂದರೆ-
ಉಗುರು ಕತ್ತರಿಸಿದ ಪಾದಗಳು, ತಾಂಬೂಲವುಳ್ಳ ವದನ, ನಸು ಲೇಪನ
ವುಳ್ಳ ಶರೀರ, ಜಿಲೆ ಬಾಳುವುದಾದರೂ ಸೌಮ್ಯವಾದ ಉಡುಪು, ಹೂವು
ಮುಡಿದ ಶಿರಸ್ಸು, ಪೀಗೆ. ಶುಚಿಯಾದ ಸತತಾಭ್ಯಾಸವೇ ಸರಸ್ವತಿಯನ್ನು
ವತಗೊಳಿಸುವ ತಾಯಿತಿ (ಸಂವನನಂ) ಎನ್ನುತ್ತಾ 3. ನ ಬಾವ
ಹೇಗಿರುತ್ತದೋ ಕಾವ್ಯವೂ ಅದಕ್ಕೆ ಅನುರೂಪವಾಗಿರುತ್ತ ದೆ (ಸ
ಯತ್ನ್ಟಭಾವಃ ಕವಿಃ ತದನುರೂಪಂ ಕಾವ್ಯ ೦'). ಚಿತ್ರ ಕಾರನ ಆಕಾರ ಯಾವ
ರೀತಿಯೋ ಅವನ ಚಿತ್ರರ ದ ವಿ ಅರೇ ರೀತಿಯೆಂದು ಗಾದೆ
(ಪ್ರಾಯೋವಾದಃ). ವ ಮುಗುಳುನಗೆಗೂಡಿದ ನುಡಿ, ಯಾವಾಗಲೂ ಅರ್ಥ
ಗರ್ಭಿತವಾದ ಮಾತು, ಎಲ್ಲೆಲ್ಲೂ ರಹಸ್ಯದ ಅನ್ವೇಷಣ, ತನ್ನನ್ನು ಯಾರೂ
ಕೇಳದಿರುವಾಗ ಅನ್ಯರ ಕಾವ್ಯಗಳನ್ನು ದೂಷಣ ಮಾಡುವುದರಲ್ಲಿ ವಿಮು
ಖತೆ, ಕೇಳಿದಾಗ ಮಾತ್ರ ಇದ್ದುದನ್ನು ಇದ್ದಂತೆ ಹೇಳುವುದು. . . .
೧೧. ಕವಿತೆಯ ಪರಿಕರಗಳು ೧೭೦
"" ಹಲಗೆಯನ್ನೂ ಬಳಪಗಳ ಅರೆಯನ್ನೂ ಉಳ್ಳ ಪೆಟ್ಟಿಗೆ, ಲೇಖನಿ
ಮಸಿಕುಡಿಕೆಗಳಿಂದ ಕೂಡಿದ ತಾಡಿಪತ್ರಗಳು ಅಥವಾ ಭೂರ್ಜಪತ್ರಗಳು,
ಲೋಹಕಂಠ ಸಮೇತವಾದ ಓಲೆಗರಿಗಳು, ಚೆನ್ನಾಗಿ ಸಮ್ಮಾರ್ಜನೆ
ಮಾಡಿರುವ ಗೋಡೆಗಳು, ಇಷೆಲ್ಲ ಅವನಿಗೆ ಯಾವಾಗಲೂ ಕೈಗೆ ಸಿಕ್ಕು
ವಂತಿರದೇಕು. " ಇದಲ್ಲವೇ ಕಾವ್ಯವಿದ್ಯೆಯ ಪರಿಕರ!' ಎಂದು ಆಚಾರ್ಯರು
ಹೇಳುತ್ತಾರೆ. "ಪ್ರತಿಭೆ ಮಾತ್ರವೇ ಪರಿಕರ' ("ಪ್ರತಿಭಾ ಏವ
ಪರಿಕರಃ ') ಎಂದು ರಾಜಶೇಖರನ ಅಬಿಪ್ರಾಯ. . .
"" ಅರ್ಧ ರಚಿಸಿದ್ದನ್ನು ಯಾರಿಗೂ ಓದಬಾರದು, ಅಸಮಾಷ್ತಿಯೇ
ಅದರ ಫಲವೆಂಬುದು ಕವಿರಹಸ್ಯ. ಹೊಸದಾಗಿ ಬರೆದದ್ದನ್ನು ಒಬ್ಬೊಂಟಿ
ಗನ ಎದುರಿಗೆ ಓದಬಾರದು; ಅದು ತನ್ನದೆಂದು ಅವನು ಹೇಳಿದಲ್ಲಿ
ಯಾವ ಸಾಕ್ಷಿಯನ್ನಿಟ್ಟು ಜಯಿಸಲಾದೀತು? ತನ್ನ ಕೃತಿಗಳನ್ನು ಕುರಿತು
ತುಂಬ ಅಭಿಮಾನ ಪಡಬಾರದು ("ನ ಚ ಸೈಕೃತಿಂ ಬಹು ಮನ್ಯೇತ ').
ಪಕ್ಕಪಾತವು ಗುಣದೋಷಗಳನ್ನು ವಿಪರ್ಯಾ 'ಸನೊಂನುತ್ತ ದೆ. ಅಲ್ಲದೆ
ಗರ್ವಪಡದಾರದು. ಎಳ್ಳಷ್ಟು ಗರ್ವವಿದ್ದ ಲ್ಲ ಸಂಸ್ಕಾರಗಳನ್ನೂ
ಉಚ್ಛೇದಿಸಿಬಿಡುತ್ತದೆ. ಇನ್ನೊಬ್ಬರಿಗೆ ತೋರಿಸಿ ಪರೀಕ್ಷೆ ಮಾಡಿಸಬೇಕು:
ನೋಡುವವನಿಗೆ ಕಾಣಿಸುವುದು ಮಾಡುವವನಿಗೆ ಕಾಣಿಸುವುದಿಲ್ಲವೆಂದು
ಗಾದೆ. (ಯದುದಾಸೀನಃ ಪತ್ಯತಿ ನ ತದನುಪ್ಳಾತೇತಿ ಪ್ರಾಯೋವಾದಃ ').!9
""ಕ್ಲುಪ್ತವಾದ ಕಾಲವಿಲ್ಲದಿದ್ದರೆ ಮಾಡುವುದೆಲ್ಲ ಕೆಟ್ಟುಹೋಗು
ತ್ತದೆ. ಆದ್ದರಿಂದ ಹಗಲನ್ನೂ ರಾತ್ರಿಯನ್ನೂ ಜಾವಗಳಿಗೆ ಅನುಸಾರ
ವಾಗಿ ನಾಲ್ಕುನಾಲ್ಕು ಭಾಗಗಳಾಗಿ ಎಂಗಡಿಸಡೇಕು. ಕವಿ ಜಿಳಗ್ಗೆ ಎದ್ದು
ಸಂಧ್ಯೋಪಾಸನೆ ಮಾಡಿದ ಬಳಿಕ ಸಾರಸ್ವತಸೂಕ್ತವನ್ನು ಅಧ್ಯಯನ
ಮಾಡಬೇಕು. ಬಳಿಕ ವಿದ್ಯಾಗೃಹದಲ್ಲಿ ಸುಖಾಸೀನನಾಗಿ ಕಾವ್ಯ ದ ವಿದ್ಯೋ
ಪವಿದ್ಯೆಗಳನ್ನು ಒಂದು ದ ಕಾಲ ಅನುಶೀಲನ ಚರತ ಹೊಸ
ಹೊಸ ಸಂಸ್ಕಾರದ೦ತೆ ಪ್ರತಿಭಾಕಾರಕವಾದದ್ದು ಬೇರೊಂದಿಲ್ಲ
೩
10 " ಕವಿರಾಜಮಾರ್ಗ 'ದ ಪದ್ಯವೊಂದು ಇಲ್ಲ ನೆನಪಿಗೆ ಬರುತ್ತದೆ :
ಕಾಣನೇಗೆಯ್ದುಂ ತನ್ನ ದೋಪಮಂ
ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ |
ಪೂಣಿಗನಾದುದಯುಂ ಪೆಅರಿಂ
ಜಾಣರಿನೋದಿಸಿ ಪೇಟ್ಟುದು ಕಬ್ಬಮಂ! (;, ೪೫)
೧೬೨ ಭಾರತೀಯ ಕಾವ್ಯಮಾಮಾಂಸೆ
("ನ ಹ್ಯೇವಂ ವಿಧಮನ್ಯತ್ ಪ್ರತಿಭಾಹೇತುಃ ಯಥಾ ಪ್ರತ್ಯಗ್ರಸಂಸ್ಕಾರಃ').
ಎರಡನೆಯ ಜಾವದಲ್ಲಿ ಕಾವ್ಯರಚನೆ. ಮಧ್ಯಾಹ್ನದ ಹೊತ್ತಿಗೆ ಸ್ನಾನ;
ಹಿತವಾದ ಭೋಜನ. ಊಟವಾದ ಬಳಿಕ ಕಾವ್ಯಗೋಷ್ಠಿಯನ್ನು ನಡಸ
ಬೇಕು... ನಾಲ್ಕನೆಯ ಯಾಮದಲ್ಲಿ ತಾನೊಬ್ಬನೆಯೋ ಪರಿಮಿತ
ಸಮಾಜದಲ್ಲಿ ಕುಳಿತೋ, ತಾನು ಪೂರ್ವಾಹ್ನದಲ್ಲ ರಚಿಸಿದ ಕಾವ್ಯವನ್ನು
ಪರೀಕ್ಷಿಸಬೇಕು. ರಸಾವೇಶದಲ್ಲಿ ಕಾವ್ಯವನ್ನು ರಚಿಸುವವನಿಗೆ ವಿವೇಚನೆ
ಯುಳ್ಳ ದೃಪ್ಪಿಯಿರುವುದಿಲ್ಲ; ಆದಕಾರಣ ಆ ಮೇಲೆ ಪರೀಕ್ಷಿಸಬೇಕು
("ರಸಾವೇಶತಃ ಕಾವ್ಯಂ ವಿರಚಯತೋ ನ ಚ ವಿಷೇಕ್ರೀ ದೃಷ್ಟಿಃ,
ತಸ್ಮಾದನುಪರೀಕ್ಷೇತ'). ಹೆಚ್ಚಾದದ್ದನ್ನು ಬಿಡುವುದು, ಸಾಲದ್ಧನ್ನು
ಕೂಡಿಸುವುದು, ಸರಿಯಲ್ಲದ್ದ ನ್ನು ಮಾರ್ಪಡಿಸುವುದು, ಮರೆತದ್ದ ನ್ನು ನೆನ
ಹಿಗೆ ತಂದುಕೊಳ್ಳುವುದು; ಇತ್ಯಾದಿ.
"" ಸಂಜೆಯಲ್ಲಿ ಸಂಧೈಯನ್ನೂ ಸರಸ್ವತಿಯನ್ನೂ ಉಪಾಸನೆ ಮಾಡ
ಬೇಕು. ಬಳಿಕ ಹಗಲಿನಲ್ಲಿ ರಚಿಸಿ ಪರೀಕ್ಷಿಸಿದ್ದನ್ನು ಹೊತ್ತುಮುಳುಗುವ
ವರೆಗೆ ಬರೆದಿಡಬೇಕು . .. ಎರಡು ಮೂರನೆಯ ಜಾವಗಳಲ್ಲ ಚೆನ್ನಾಗಿ
ನಿದ್ರಿಸಬೇಕು. ತುಂಬುನಿದ್ದೆಯಿ೦ದ ದೇಹಕ್ಕೆ ಪರಮಾರೋಗ್ಯ. ನಾಲ್ಕ
ನೆಯ ಜಾವದಲ್ಲಿ ಪ್ರಯತ್ನಪಟ್ಟು ಎಚ್ಚರಮಾಡಿಕೊಳ್ಳಬೇಕು. ಬ್ರಾಹ್ಮ
ಮುಹೂರ್ತದಲ್ಲಿ ಮನಸ್ಸು ನಿರ್ಮ ಲವಾಗಿದ್ದು, ಆಯಾ ಅರ್ಥಗಳನ್ನು
ಎದುರಿಗಿದ್ದಂತೆ ಕಾಣುತ್ತದೆ. ಇದು ದಿನಚರ್ಯೆ (ಆಹೋರಾತ್ರಿಕಂ) ...
"" ಮತ್ತೆ ಮುಗಿಸುತ್ತೇನೆ, ಮತ್ತೆ ಸಂಸ್ಕರಿಸುತ್ತೇನೆ, ಸ್ನೇಷಿತ
ರೊಂದಿಗೆ ವಿವೇಚನೆ ಮಾಡುತ್ತೇನೆ-ಪೀಗೆಂದು ಗ್ರಂಥಕರ್ತನು ಆಕುಲ
ಪಡುವುದೂ, ರಾಷ್ಟ್ರಕ್ಕೆ ಉಪಪ್ಣೆ ವವುಂಟಾಗುವುದೂ ಗ್ರಂಥವಿನಾತಕ್ಕೆ
ಕಾರಣಗಳು. . , .' 31
ರಾಜಶೇಖರನ ಉಕ್ತಿಯಲ್ಲಿ ವಿಷಿತವೂ ವಿಚಿತ್ರವೂ ಆದ ಅಂಶಗಳು
ಜೊತೆಗೂಡಿ ಬಂದಿಷೆ. ಸ್ಫೂರ್ತಿಶಾಲಿಯಾದ ಕವಿಗೆ ಇಂಥ ವೇಳಾಪತ್ರಿಕೆ
ಅತ್ಯಗತ್ಯವೆಂದು ಯಾರು ವಿಧಿಸಬಹುದು! ಅಲ್ಲದೆ, ಕವಿಯ ಗೃಹಸಂಪತ್ತ ನ್ನು
ಅವನು ವರ್ಣಿಸಿರುವುದನ್ನು ನೋಡಿದರೆ-ಈ ವರ್ಣನೆಯನ್ನು ಮೇಲೆ
ಕೊಟ್ಟಿಲ್ಲ-ಶ್ರೀಮಂತನಲ್ಲದವನಿಗೆ ಕಾವ್ಯರಚನೆ ಕೈಗೂಡದೆನ್ನಿಸುತ್ತದೆ.
11 ಕಾವ್ಯಮಾಮಾಂಸಾ, ಪು., ೪೯-೫೩.
೧೧. ಕವಿತೆಯ ಪರಿಕರಗಳು ೧೭೩
ಆದರೂ, ಸಹಜಕವಿಗಳು ಕೂಡ ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲ
ಹಲವುಂಟು. _...
ಇನ್ನೊಂದು ವಿಷಯ. ಹಿಂದಾಗಲಿ ಇಂದಾಗಲಿ, ಕೇವಲ ಅಂತಃ
ಸ್ಫೂರ್ತಿಯ ಒತ್ತಾಯದಿಂದಲ್ಲೇ ಎಲ್ಲರೂ ಕಾವ್ಯರಚನೆಗೆ ಹೊರಡುವುದಿಲ್ಲ.
ಬಾಹ್ಯ ಕಾರಣಗಳೂ ಸನ್ನಿವೇಶ ಸಂಘಟನೆಗಳೂ ಒಬ್ಬನನ್ನು ಕವಿಯಾಗಲು
ಪ್ರಚೋದಿಸುವುದು೦ಟು. J ಹಿಂದಿನ ಕಾಲದಲ್ಲಂತೂ ಕಾವ್ಯರಚರಾ ಸಾಮ
ರ್ಥ್ಯವಿದ್ಧಲ್ಲದೆ ಒಬ್ಬನ ವಿದಗೃತೆ ಅಪೂರ್ಣವೆಂಬ ಭಾವನೆಯಿತ್ತು; ರಾಜ
ಸಭೆ, ವಿದ್ಯದ್ಧೋಷ್ಠಿ ಮೊದಲಾದವುಗಳಲ್ಲಿ ಶಾಸ್ತ್ರವಾದಗಳಂತೆ ಸಮಸ್ಯಾ
ಪೂರಣವೇ ಮೊದಲಾದ ಕಾವ್ಯವಿನೋದಗಳೂ ನಡೆಯುತ್ತಿದ್ದುವು. ಇಷ್ಟೇ
ಅಲ್ಲ. (ರಾಜನಿಗೆ ಕಾವ್ಯಾಭಿರುಚಿಯಿದ್ದರೆ ಅವನು ಕವಿಸಮಾಜಗಳನ್ನು
ಏರ್ಪಡಿಸುತ್ತಿದ್ದನು; ಒಳ್ಳೆಯ ಕವಿಗೆ ಸನ್ಮಾನ ಮಾಡುತ್ತಿದ್ದನು. ಮೆಚ್ಚಿಕೆ
ಯಾದ ಕಾವ್ಯಗಳನ್ನು ಆನೆಯ ಮೇಲೆ ಅಂಬಾರಿಯಲ್ಲಟ್ಟು ಮೆರೆವಣಿಗೆ
ಮಾಡಿಸಿದ ಸಂದರ್ಭಗಳೂ ಉಂಟು) ಉಜ್ಜಯಿನಿಯೇ ಮೊದಲಾದ
ನಗರಗಳಲ್ಲಿ ಕವಿಗಳ ಪರೀಕ್ಷೆಯನ್ನೂ ನಡಸುತ್ತಿದ್ದರಂತೆ.'? ಹೀಗೆ ಕವಿ
ತ್ವಕ್ಕೆ ಪ್ರಚೋದನವೂ ಪುರಸ್ಕಾರವೂ ಪ್ರತಿಫಲವೂ ವಿಶೇಷವಾಗಿದ್ದ
ಕಾಲದಲ್ಲಿ ವಿದ್ವಾಂಸರು ಕಾವೃಕಲಾಭ್ಯಾಸವನ್ನು ಮಾಡಲು ತವಕಿಸುತ್ತಿ
ದುದು ಆತ್ಮ ರ್ಯವಲ್ಲ. ು ಈ ವಿಷಯದಲ್ಲಿ ಸ್ವಲ್ಪವಾದರೂ ಸಹಜ ಪ್ರವೃತ್ತಿ
ಯುಳ್ಳವರ ಶಕ್ತಿಯನ್ನು ಸಂಸ್ಕಾರಗೊಳಿಸಿ ಆದಷ್ಟು ಉತ್ತಮವಾದ ಫಲ
ವನ್ನು ದೊರಕಿಸುವುದಕ್ಕಾಗಿ ಸಂಸ್ಕೃತದಲ್ಲಿ "" ಕವಿಶಿಕ್ಕೂ'' ಗ್ರಂಥಗಳೇ
ಪ್ರತ್ಯೇಕವಾಗಿ ಹುಟ್ಟಿದುವು; ರಾಜಶೇಖರನ ಗ್ರಂಥ ಇವುಗಳಲ್ಲಿ ಮುಖ್ಯ
ವಾದದ್ದು. ನೈಸರ್ಗಿಕವಾದ ಪ್ರತಿಭೆ ಕಾವ್ಯಸಂಪತ್ತಿಗೆ ಆವಶ್ಯಕವೆಂದು"
ಹೇಳಿದ ದಂಡಿಯಂಥ ಸಹಜರಸಿಕನು ಕೂಡ-ಆಜನ್ಮಸಿದ್ಧವಾದ ಪ್ರತಿಭೆ
ಯಿಲ್ಲದಿದ್ದರೂ, ವಿದ್ಯೆ ಕಲಿತು, ಪ್ರಯತ್ನಪಟ್ಟು, ವಾಗ್ದೆ (ವಿಯನ್ನು ಉಪಾ
12 ಶ್ರೂಯತೇ ಚೋಜ್ಜಯನ್ಯಾಂ ಕಾವೈಕಾರಪರೀಕ್ಷಇ -
ಇಹ ಕಾಲಿದಾಸ ಮೇಂಠಾವತ್ರಾಮರರೂಪಳೂರ ಭಾರವಯಃ।
ಹರಿಚಂದ್ರಚಂದ್ರಗುಪ್ತೌ ಪರೀಕ್ಷಿತಾವಿಹ ವಿಶಾಲಾಯಾಮ" |
(ಕಾವ್ಯಮಾಮಾಂಸಾ, ಪು. ೫೫)
13 ವೈಸರ್ಗಿಕೀ ಚ ಪ್ರತಿಭಾ ಶ್ರುತಂ ಚ ಬಹು ನಿರ್ಮಲಂ |
ಅಮಂದಶ್ಕಾಭಿಯೋಗೋಸ್ಕಾಃ ಕಾರಣಂ ಕಾವ್ಯಸಂಪದಃ ॥
(ಕಾವ್ಯಾದರ್ಶ, ;, ೧೦೩)
೧೬೪ ಭಾರತೀಯ ಕಾವ್ಯಖಾಮಾಂಸೆ
ಸನೆ ಮಾಡಿದಲ್ಲಿ ಅವಳು ಅತಿಶಯವಾದ ಅನುಗ್ರಹವನ್ನು ತೋರಿಸುವುದು
ನಿಶ್ಚಯ; ಕವಿತಾಶಕ್ತಿ ಕೃ ಶವಾಗಿದ್ದ ರೂ ಯತ್ನ ಶಾಲಿಗಳಾದ ಜನರು ವಿದಗ್ಭ
ಗೋಷ್ಠಿಗಳಲ್ಲಿ ತಲೆಯೆತ್ತಿ ವಿಹರಿಸಬಹುದು!" ಎಂದು ಕವಿಯಶಃ
ಪ್ರಾರ್ಥಿ '' ಗಳಿಗೆ ಭರವಸೆಕೊಟ್ಟು, ತನ್ನ ಕಾಲದಲ್ಲಿ ಕಪಿತೈಕ್ಕಿದ್ದ ವ್ಯಾವ
ಹಾರಿಕ ಪ್ರ ಯೋಜನವನ್ನು ತೋರ್ಪಡಿಸುತ್ತಾನೆ. ಅವನ ಸಲಹೆಯಂತೆ
ನಡೆದು ಲಾಭ ಹೊಂದಿದವರು ಎಲ್ಲ ಕಾಲದಲ್ಲಿಯೂ ಉಂಟು. ಆದರೆ ಇತ್ತ,
ನಾಕವಿತ್ವಮಧರ್ಮಾಯ ವ್ಯಾಥಯೇ ದಂಡನಾಯ ವಾ!
ಕುಶವಿಶ್ಚ೦ ಪುನಃ ಸಾಕ್ಷಣನ್ಮತಿಮಾಹುರ್ಮನೀಪಿಣಃ ॥
" ಕವಿಯಾಗದಿದ್ದ ಲ್ಲ ಅಧರ್ಮ ತಟ್ಟು ಪುದಿಲ್ಲ, ರೋಗ ಬರುವುದಿಲ್ಲ,
ನೆಂಡನೆ ಒದಗುವುದಿಲ್ಲ; ಕುಕವಿಯಾದಲ್ಲಿ ಮಾತ್ರ ಪ್ರತ್ಯಕ್ಷ ಮರಣಕ್ಕೇ
ರಮನೆಂದು ಬಲ್ಲವರು ಹೇಳುವರು ''-ಪೀಗೆಂದು ಎಚ್ಚರಿಕೆ ಕೊಡುವವರೂ
ಇಲ್ಲದಿರಲಿಲ್ಲ.'" ಸಹಜಕವಿತೆ ತನಗಿಲ್ಲದಿದ್ದರೂ, ಬಹುಶಃ ಲಾಭಗೌರವಗಳಿಗೆ
ತಿಸೆಬಿದ್ದು, ವಾಣಿಯನ್ನು ತಿರುಚಿ ಪದ್ಯ ಹೊಸೆಯುವ ಬೆಳ್ಳಕ್ಕರಿಗನನ್ನು
ರಿತು ರನ್ನನು ಎಸೆದಿರುವ ಸದಾಗ್ರಹದ ವಾಗ್ಭಾಣವನ್ನೂ ಇಲ್ಲಿಯೇ
ತ್ಮಿಕೊಡಬಹುದು :
ಸರಸತಿಯನಬಲೆಯೆಂ ಗೋ...
ಜ್ಮುರಿಗೊ೦ಡರ್ಥಕ್ಕೆ ಕುದಿದು ಮೋಯಿಸುವವನ... ।
ಕ್ಕರಿಗನೆ ಪಾತಕನಾತನೆ
ಸರಸ್ಯತೀದ್ಬೋಹನವನನಾರ್ ಮುಟ್ಟು ವರೋ |
(ಅಜಿತಪುರಣಣ, |, ೮೯)
ಕವಿಯಾಗತಕ್ಕ ವನು ಪಿಂದಿನ ಮಹಾಕವಿಗಳ ಕೃತಿಗಳನ್ನು ಪರಿಶೀ
ನ ಮಾಡಬೇಕೆಂದು ಲಾಕ್ಷಣಿಕರು ಹೇಳುತ್ತಾರಷ್ಟೆ ; ಅವುಗಳಿಂದ ಕಾವ್ಯ
x ಕ | ಲು
ಚನಾಕ್ರಮವನ್ನು ಕಲಿಯುವುದಪ್ಪೇ ಅಲ್ಲ; ವಿಷಯಸಂಗ್ರಹವನ್ನೂ
೩4 ಕಾವ್ಯಾದರ್ಶ, 1. ೧೦೪-೫.
15 ಭಾಮಹ : ಕಾವ್ಯಾಲಂಕಾರ, ;. ೧೨. ಬಹುಶಃ ಈ ಶ್ಲೋಕವನ್ನು ಅನುಸರಿಸಿಯೇ,
2ಜಶೇಖರನು " ವರಮಕವಿಃ ಪುನರ್ನಕುಕವಿಃ ಸ್ಯಾತ್. ಕುಕವಿತಾ ಹಿ ಸೋಚ್ಚ್ಬಾಸಂ
'ರಣಂ'' ಎಂದು ಹೇಳುತ್ತಾನೆ (ಕಾವೃಮಾವಕಾಂಸಾ ಪು. ೨೧). "" ಕೆವರ್ದವರು
9ಳರೆ ಕವಿಯಲ್ಲದರಂ '' ಎಂಬ ಕವಿರಾಜಮಾರ್ಗದ ಉಕ್ತಿಗೂ (1. ೧೨) ಭಾಮಹನ
ಕ್ಯವೇ ಪ್ರೇರಕವಪಾಗಿರಬೇಕು.
೧೧. ಕವಿತೆಯ ಪರಿಕರಗಳು ೧೭೫
ಈಚಿನವರು ಮಾಡಿಕೊಳ್ಳುವುದುಂಟು. ಇದರ ಯುಕ್ತತೆ ಅಯುಕ್ತ ತೆಗಳನ್ನು
ಕೆಲವೆಮಟ್ಟಿಗಾದರೂ ಚರ್ಚಿಸುವುದು ಆವಶ್ಯಕ. "ಪುರಾತನ ಕಾಲ
ದಿಂದಲೂ ಎಪ್ಟುಮಂದಿ ಕವಿಗಳು ಕಾವ್ಯಪಥದಲ್ಲಿ ನಡೆದಿದ್ದಾ ರೆ! ಅವೆರು
ಮುಟ್ಟದ ವಸ್ತು ಏನಾದರೂ ಉಳಿದಿದೆಯೆ, ಹಿಂದಿನವರು ಹೇಳಿದ್ದ ನ್ನೇ
ಮತ್ತೆ ಸಂಸ್ಕರಿಸಿ, ಉಕ್ತಿವೈಚಿತ } ದಿಂದ ಕೆಲವುಮಟ್ಟಿಗೆ ನೂತನಗೊಳಿಸಿ
ಹೇಳುವುದಪ್ಪೇ ತಾನೆ ಮುಂದೆ ಬರುವ ಕವಿಗಳ ಕೆಲಸ? ಹೊಸ ವಸ್ತು
ಇನ್ನೇನುಂಟು?`' ಎಂದು ನಿರ್ಧರಿಸಿಕೊಂಡು, ಹಳಬರ ಕೃತಿಗಳನ್ನು
ಅವಲಂಬಿಸುವುದೊಂದೇ ಹೊಸಬರಿಗೆ ದಾರಿಯೆಂದು ಹೇಳುವವರು ಉಂಟು.
ಈ ಬಗೆಯ ಅಭಿಪ್ರಾಯ ಸಾವಿರಾರು ವರ್ಷಕ್ಕೆ ಹಿ೦ದಯೇ ಮೂಡಿದ್ದ೦ತೆ
ತೋರುತ್ತದೆ. ಇದಕ್ಕೆ ಉತ್ತರವಾಗಿ ವಾಕ್ಚತಿರಾಜನು,
ಅಸಂಸಾರಮುದಾರ್ಯೆಃ ಕವಿಭಿಃ ಪ್ರತಿದಿನಗೃಷೀತಸಾರೊಕ್ಳಿಪಿ |
ಅದ್ಯಾಪ್ಯಭಿನ್ನಮುದ್ರೋ ವಿಧಾತಿ ವಾಚಾಂ ಪರಿಸ್ಪಂದಃ॥!ಂ
ಕ ಸೃಷ್ಟಿಯ ಮೊದಲಿನಿಂದಲೂ ಉದಾರರಾದ ಕಪಿಗಳು ಪ್ರತಿದಿನವೂ
ಇದರ ಸಾರವನ್ನು ಸೆಳೆದಿದ್ದರೂ, ಇಂದಿಗೂ ವಾಗ್ಚಿಲಾಸವು ಮುದ್ರೆ
ಕೂಡ ಒಡೆಯದೆಯೇ ಪೆರೆಯುತ್ತಿದೆ'' ಎಂಬ ಧೀರೋಕ್ತಿಯನ್ನಾಡಿ
ದನು. ಇದು ಬರಿಯ ಕೆಚ್ಚಿ ನ ಮಾತಲ್ಲ; ಇದಕ್ಕೆ ಆಧಾರವುಂಟು ಎಂಬು
ದನ್ನು ಆನಂದವರ್ಧನನು "ಧೃ್ವನ್ಯಾಲೋಕ'ದಲ್ಲಿ ಸ್ಪಪ್ಪಪಡಿಸುತ್ತಾನೆ.
"« ಕವಿಗಳೇನೂ ಯೋಗಿಗಳಂತೆ ಕಾಲತ್ರಯದ ಸಂಗತಿಗಳನ್ನು ಸಾಕ್ಷಾ
ತ್ಕಾರ ಮಾಡಿಕೊಳ್ಳಲಾರರು. ಅವರು ಮಾಡುವದೆಲ್ಲ ಏನು? ತಮ್ಮ
ಅನುಭವಕ್ಕೆ ಬಂದ ಸುಖದುಃಖಗಳನ್ನೂ ಅವುಗಳ ನಿಮಿತ್ತಸಾಮಗ್ರಿ
ಯನ್ನೂ ಕಥಾಪಾತ್ರಗಳಿಗೆ ಆರೋಪಿಸಿ ಕಾವ್ಯರಚನೆ ಮಾಡುತ್ತಾರೆ; ಈ
ಅನುಭವಗಳು ಮನುಷ್ಯಜಾತಿಗೇ ಸಾಮಾನ್ಯವಾದವು, ಪರಿಮಿತವಾದವು.
ಇವನ್ನು ಪುರಾತನ ಕವಿಗಳು ತಮ್ಮ ಕೃತಿಗಳಲ್ಲಿ ಪಿ೦ದೆಯೇ ನಿರೂಪಿಸಿ
ಬಿಟ್ಟಿದ್ದಾರೆ. ಈಗಿನವರು ಹೊಸದು, ಹೊಸದು ಎನ್ನುವುದೆಲ್ಲ ಬರಿಯ
ಭ್ರಮೆ. ಅವರು ಸಾಧಿಸುವುದೆಲ್ಲ ಉಕ್ತಿ ವೈಚಿತ್ರ ಕಪೊಂದೇ''-ಇದೇ
16 ಪಾಕ್ಟತಿರಾಜನ "ಗಉಡವಹೊ ಎಂಬ ಪ್ರಾಕೃತ ಕಾವ್ಯದ ೮೭ನೆಯ ಪದೃವನ್ನು
ಈ ರೀತಿಯಾಗಿ ಸಂಸ್ಕೃತ ರೂಪದಲ್ಲ ರಾಜಶೇಬುರನು ಉದಾಹೆರಿಸಿದ್ದಾನೆ. “ ವಾಗ್ದೇ
ವಿಯ ಭಂಡಾರದ ಮುಡ್ರೆಯನೊಡೆದಂ ಸಾರಸ್ಪತವೆ:ನನಿಪ ಕವಿತೆಯೊಳ್ ಕವಿರತ್ನ೦''
(ಗದಾಯುದ್ಧ, ;. ೩೮) ಎಂಬ ಆತ್ಮ ಪ್ರಶಂಸೆಯನ್ನು ಇದರೊಂದಿಗೆ ತೂಗಿನೋಡಿ.
೧೭೬ ಭಾರತೀಯ ಕಾವ್ಯವಿಸಾಮಾಂಸೆ
ಆನಂದವರ್ಧನನ ಮುಂದಿರುವ ಆಕ್ಷೇಪಣಿಯ ಸಾರ. ಇದನ್ನು ಖಂಡಿಸಿ
ಅವನು ಕೊಡುವ ಉತ್ತರದ ತಿರುಳನ್ನು ಹೀಗೆ ಗ್ರಹಿಸಬಹುದು :
ಅನುಭವಸಾಮಾನ್ಯವನ್ನು ಮಾತ್ರ ಕವಿಗಳು ನಿರೂಪಿಸುತ್ತಾರೆ,
ಅದರ ವಿಷಯ ಕೂಡ ಪರಿಮಿತವಾದದ್ದು -ಎನ್ನುವುದಾದರೆ, ಹಿಂದಿನ ಮಹಾ
ಕೆವಿಗಳ ಅತಿಶಯ ತಾನೆ ಎಲ್ಲಿದೆ? ಮಾನವಸಾಧಾರಣವಾದದ್ದನ್ನು ಬಿಟ್ಟು
ಅವರು ಏನೂ ಹೇಳಲಾರರು ; ಅದನ್ನು ಎಲ್ಲ ಮಾನವರೂ ಅರಿತೇ ಇರು
ತ್ತಾರೆ. ಇದಲ್ಲದೆ, "ಅದಿಕವಿ'' ವಾಲ್ಮೀಕಿಯನ್ನು ಬಿಟ್ಟರೆ ಈಚಿನ
ಯಾರಿಗೂ « ಕವಿ” ಎಂಬ ಹೆಸರೇ ದಕ್ಕುವಂತಿಲ್ಲ. ಏಕೆಂದರೆ ನೀವು
ಹೇಳುವ "" ಸಾಮಾನ್ಯ ''ಪೆಲ್ಸ ವಾಲ್ಮೀಕಿಯ ಕಾವ್ಯದಲ್ಲಾಗಲೆ ಬಂದೇ
ಬಿಟ್ಟಿದೆ. ಅದರೆ, ವಾಲ್ಮೀಕಿಯಿಂದೀಜೆಗೆ ಪ್ರಾಚೀನ ಕಾಲದಲ್ಲೇ ಎಷ್ಟು
ಮಂದಿ ಕವಿಗಳು ಹುಟ್ಟಲಿಲ್ಲ! ಇವರೆಲ್ಲ ""ಉಕ್ತಿವೆ ಚಿತ್ರ್ಯ'' ಬಲದಿಂದ
ಕವಿಗಳಾದರು ಎಂದು ನೀವು ಉತ್ತರಕೊಡಬಹೆದು." ಹಾಗಾದರೆ, ಈ
«" ಕುಕ್ತಿವೈಚಿತ್ರ್ಯ'' ಎನ್ನುವುದೇನು? "" ಉಕ್ತಿ `' ಎಂದರೆ ವಿಶಿಷ್ಟವಾದ
ಅರ್ಥವನ್ನು ಹೇಳುವ ಮಾತು. ಮಾತಿನಲ್ಲಿ ವೈಚಿತ್ರ್ಯವಿದ್ದರೆ ಅದರ
ಅರ್ಥದಲ್ಲಿಯೂ ನಿಯತವಾಗಿ ವೈಚಿತ್ರ್ಯವಿರಲೇ ಜೇಕಪ್ಪೆ. ಇದರ ಜೊತೆಗೆ
ಉಕ್ತಿವೈಚಿತ್ರ್ಯರೂಪವಾದ ಅಲಂಕಾರವರ್ಗವನ್ನು ನೆನೆದರೆ ಸಾಕು;
ಒಂದೊಂದು ಅರ್ಥವೂ ನೂರು ಬಗೆಯಾಗಬಲ್ಲುದು. ಇದನ್ನು ಒಪ್ಪಿದಲ್ಲಿ,
ಕೇವಲ ಉಕ್ತಿವೈಚಿತ್ರ್ಯದಿಂದಲೇ ಕಾವ್ಯಾರ್ಥವು ಅನಂತವಾಗಬಲ್ಲುದೆಂದು
ಒಪ್ಪಬೇಕಾಗುತ್ತದೆ.
ಆದರೆ ಆಕ್ಷೇಪಣಿಗೆ ಆನಂದವರ್ಧನನ ಉತ್ತರ ಇದಿಪ್ಪೇ ಅಲ್ಲ:
ಉಕ್ತಿವೈಚಿತ್ರ್ಯ ಸಂಪಾದನೆಯೊಂದೇ ಈಚಿನ ಕವಿಗಳ ಕೆಲಸವಲ್ಲ. ಕಾವ್ಯದ
«"ಉಕ್ತಿ'' ಹಾಗಿರಲಿ; ಅದರ "ವಸ್ತು ''ವಿಗ್ಗೇ ಕೊನೆಯೆಲ್ಲಿ ಬಂತು!
ಜಗತ್ತಿನಲ್ಲಿ ಎಷ್ಟೊ ೦ದು ದೇಶಗಳಿವೆ! ಅಲ್ಲಿಯ ವಾಯುಗುಣ, ನೆಲ,
ನೀರು, ಕಾಡು, ಊರು ; ಅಲ್ಲಿ ಬೆಳೆಯುವಗಿಡ, ಬಳ್ಳಿ, ಹೂವು, ಹಣ್ಣು ; ಅಲ್ಲಿ
ಜೀವಿಸುವ ಮೃಗ ಪಕ್ಷಿ---ಈ% ಮೊದಲಾದವುಗಳ ಸ್ವರೂಪಸ್ವಭಾವಗಳಲ್ಲ
ಎಷ್ಟೊಂದು ವ್ಯತ್ಯಾಸ! ಇನ್ನು ಅಲ್ಲಿ ನೆಲಸಿರುವ ಮನುಷ್ಯರ ಚರೈಗಳು
ವ್ಯವಹಾರಗಳು_ಅದರಲ್ಲೂ ಸ್ತ್ರೀಯರ ವರ್ತನೆಗಳು! ಇದನ್ನೆಲ್ಲಾ ವರ್ಣಿ
ಸುವುದಿರಲಿ; ಎಣಿಸಿ ಮುಗಿಸುವುದಾದರೂ ಶಕ್ಯವೇ? ಇಪ್ಪೆಲ್ಲ ಏಕೆ?
೧೧. ಕವಿತೆಯ ಪರಿಕರಗಳು ೧೭೭
ಒಬ್ಬನೇ ಕವಿ ಒಬ್ಬಳ್ಳೇ ಕಥಾನಾಖಿಕೆ ಯನ್ನು ಹತ್ತುಕಡೆ ವರ್ಣಿಸ ತ್ತಾನೆ;
ಆದರೆ ಒಂದೊಂದು ಕಡೆಯಲ್ಲೂ ಸನ್ನಿವೇಶಾದಿಗಳ ಭಿನ್ನತೆಯಿಂದ ವರ್ಣನೆ
'ಅಭಿನವವಾಗಿಯೇ ತೋರುವುದಿಲ್ಲವೆ?-ಈ ವಿಚಾರವನ್ನು ಇನ್ನು ಬೆಳಸದೆ,
ಸಾರವತ್ತಾದ ಈ ಎರಡು ಕಾರಿಕೆಗಳನ್ನು ಉದಾಹರಿಸೋಣ :
ರಸಭಾವಾದಿಸಂಬದ್ದಾ ಯದ್ಯ್‌ಚಿತ್ಯಾನು ಕಾರಿಣೀ |
ಅನ್ವೀಯತೇ ವಸ್ತುಗತಿರ್ದೇತಕಾಲಾದಿಭೇದಿನೀ ॥
ವಾಚಸ್ಪತಿಸಹಸ್ಲಾಣ್‌ಾಂ ಸಹಸ್ಪೆ ರಪಿ ಯತ್ನತಃ ।
ಲ 4
ನಿಬದಾ ಏ ಕಯೆಂ ಮೈತಿ ಪ್ರಕ ಶಿರ್ಜಗತನಮಿವ॥
ಛಿ ಚಿ ಫಿ ಲ್ ಮ
(ಧೈನ್ಯಾ., IV. ೯-೧೦)
“ ದೇಶಭೇದ ಕಾಲಭೇದಾದಿಗಳನ್ನುಳ್ಳ ವಸುಸ್ಕಭಾವವನ್ನು ರಸಭಾವಾದಿ
ಗಳಿಗೆ ಹೊಂದಿಸಿ, ಔಚಿತ್ಯಾನುಗುಣವಾಗಿ ಆನ್ಯಯಿಸಿಕೊಂಡಲ್ಲ, ಸಹಸ್ರ
ಸಹಸ್ರಮಂದಿ ಬೃಹಸ್ಪತಿಗಳೇ ಪ್ರಯತ್ನಪಟ್ಟು ಇದನ್ನು [ಕಾವ್ಯವಸ್ತು
ವಾಗಿ] ಅಳವಡಿಸಿಕೊಂಡರೂ ಜಗತ್ತಿನ ಪ್ರಸೃತಿಯಂತೆಯೇ ಇದ. ಕೂಡ
ಕೊನೆಮುಟ್ಟಲಾರದು. ''
ಜಗತ್ತಿನಲ್ಲಿ ಕಲ್ಬಾ೦ತರಗಳಿ೦ದಲೂ ವಿವಿಧ ವಿಚಿತ್ರ ವಸ್ತು ಪರಂಪರೆ
ಹೊಸ ಹೊಸದಾಗಿ ಉನ್ಮೇಪಷವಾಗುತ್ತಲೇ ಇದೆ; ಆದರೂ ಕೂಡ ನೂತನ
ವಕ್ತುಗಳೆ ನಿಮಾಣ ಇಲ್ಲಗೆ ಮುಗಿಖಿತೆಂಮ ಯಾರೂ ಹೇಳುವಂತಿಲ್ಲ.
ಇದರಂತೆಯೇ ಅಶಂಖ್ಯರಾದ ಕವಿಗಳು ಕಾವ್ಯರಚನೆ ಮಾಡುತ್ತಾ ಬಂದಿ
ದ್ವರೂ ಅರ್ಥಸಂಪತ್ತು ಇಲ್ಲಿಗೆ ಮುಗಿ ಸಿತು; ಪ್ರತಿಭೆಯ ಸಂಚಾರ
ಇಲ್ಲಿಗೆ ನಿಂತಿತು ಎಂದು ಹೇಳಲಾದ್ದೀತ್ಲೇ? ನಿರವಧಿಯಾದ ಬ್ರಹ್ಮ
ಸೃಷ್ಟಿಯೇ ಕವಿಸೃಷ್ಟಿಗೆ ಆಧಾರಮೆನು ಇಲ್ಲಿ ಮತ್ತೊಮ್ಮೆ ಜ್ಞಾ ಪಿಸಿ
ಕೊಂಡರೆ ಸಾಕು.
ಹಿಂದಿನ ಕವಿಗಳಿಗೆ ಈಚಿನವರು ಎಷ್ಟುಮಟ್ಟಿಗೆ ಖುಣಿಗಳಾಗಿದ್ದರೆ
ದೋಷವಲ್ಲ ಎಂಬುದರ ವಿಚಾರಕ್ಕೆ ತೊಡಗಿ ಎಲ್ಲಿಗೋ ಬಂದು ಸೇರಿದೆವು.
ಈಗ ಮತ್ತೆ ಸರಣ-ಸ್ಕೀಕರಣಗಳೆ ವಿಷಯಕ್ಕೆ ಪಿಂದಿರುಗೋಣ. ಒಬ್ಬ
ಕವಿಯ ಕಾವ್ಯವನ್ನು ಇನ್ನೊಬ್ಬನು ನೋಡಿರುವ ಸಂಭವವೇ ಇಲ್ಲದಾ
ಗಲೂ ಒಂದೇ ಅಭಿಪ್ರಾಯ, ಕೆಲವು ವೇಳೆ ಒ೦ದೇ ಬಗೆಯ ಉಕ್ತಿ ಕೂಡ,
ಎರಡು ಕಡೆಗಳಲ್ಲೂ ಕಾಣಬರುವುದು ಅಶಕ್ಯವಲ್ಲ 17 "" ಸಂವಾದಿನ್ಯ್ಯೋ
17 ಭಿನ್ನದೇಶಗಳಲ್ಲದ್ದು ಭಿನ್ನ ಭಾಷೆಗಳಲ್ಲಿ ಬರೆದ ಕವಿಗಳ ಸೂಕ್ತಿಗಳಿಗೆ ಹೀಗೆ
ಪಂಮಾದವಿರುವುದನ್ನು ಆಧುನಿಕರು ಅಲ್ಲಲ್ಲಿ ಪಟ್ಟಿ ಹಾಕಿರುವುದೂ ಉಂಟು.
K.M. 12
ತ
೧೭೮ ಭಾರತೀಯ ಕಾವೃಮಾಮಾಂಸೆ
ಮೇಧಾವಿನಾಂ ಬುದ್ಧಯಃ '' (ಮೇಧಾವಿಗಳ ಬುದ್ಧಿಗಳು ಒಂದು
ನ್ನೊಂದು ಹೋಲುತ್ತವೆ '') ಎಂದು ಗಾದೆಯೇ ಇದೆ. ಇಂಥ ಕಡೆಗಳಲ್ಲಿ
ಒಬ್ಬನ ಅಭಿಪ್ರಾಯವನ್ನು ಇನ್ನೊಬ್ಬನು ಅಪಹರಿಸಿದನೆಂದಾಗಲಿ ಸ್ಟೀಕ
ರಿಸಿದನೆಂದಾಗಲಿ ಹೇಳಬೇಕಾದ ಸಂದರ್ಭವೇ ಇರುವುದಿಲ್ಲ. ಉಳಿದ ಕಡೆ
ಗಳಲ್ಲಿ ಗೋಚರವಾಗುವ ಹೋಲಿಕೆಗಳನ್ನು ಅನಂದವರ್ಧನನು “ಪ್ರತಿ
ಬಿಂಬಕಲ್ಪ'', ""ಆಲ್ಲೇಖ್ಯಪ್ರಖ್ಯ'', ""ಸಮಾನದೇಷಿಕಲ್ಪ'' ಎಂದು ಮೂರು
ಬಗೆಯಾಗಿ ವಿಂಗಡಿಸುತ್ತಾನೆ ; ಇವಕ್ಕೆ "“ಪರಪುರಪ್ರವೇಶಸದೃಶ'' ವೆಂಬ
ನಾಲ್ಕನೆಯ ಬಗೆಯನ್ನು ರಾಜಶೇಖರನು ಸೇರಿಸಿ, ಅವುಗಳ ಒಳಭೇದ
ಗಳನ್ನು ಅನೇಕ ಉದಾಹರಣಿಗಳೊಡನೆ ವಿಸ್ತರಿಸುತ್ತಾನೆ. ಈ ವಿವರ
ಗಳನ್ನೆಲ್ಲಾ ಇಲ್ಲಿ ಪೂರ್ಣವಾಗಿ ಕೈಬಿಟ್ಟು, ನಮ್ಮ ಆಲಂಕಾರಿಕರ ಒಟ್ಟು
ದೃಷ್ಟಿ ಈ ವಿಷಯದಲ್ಲಿ ಏನೆಂಬುದನ್ನು ಮಾತ್ರ ಇಲ್ಲ ಸೂಚಿಸಬಹುದು.
«" ಪ್ರತಿಬಿಂಬಕಲ್ಪ'' ಎಂಬುದರ ಹೆಸರೇ ಸೂಚಿಸುವಂತೆ, ಅದರ ತಿರುಳೆ
ಛಲವೂ ಪರಕವಿಯದು ; ಮಾತಿನ ಹೊದಿಕೆ ಮಾತ್ರ ಇವನದು. ಒಬ್ಬ ಮನು
ಪ್ಯನ ರೂಪಚಿತ್ರದಂತಿರುವ "" ಆಲೇಖ್ಯಪ್ರಖ್ಯ''ವು ಹಿಂದಿನದಕ್ಕಿಂತ
ಉತ್ತಮ. ಆದರೆ ಇವೆರಡರಲ್ಲೂ ಮೂಲ ಕಾವ್ಯದ ನೆನಪು ಥಟ್ಟನೆ
ಬಂದು, ಎದುರಿಗಿರುವುದರ ಕಡೆಗೆ ಗಮನ ಹೋಗುವುದಿಲ್ಲ. ಈ ಬಗೆಯ
ಅನುಕರಣ ತ್ಯಾಜ್ಯವೇ ಸರಿ. « ಸಮಾನ ದೇಪಿಕಲ್ಪ''ದ ವಿಷಯ ಬೇರೆ.
ಒಬ್ಬನಿಗೂ ಇನ್ನೊಬ್ಬನಿಗೂ ಆಕಾರದಲ್ಲಿ ಹೋಲಿಕೆ ಇರಬಹುದು. ಆದರೆ
ಇಬ್ಬರಿಗೂ ಪ್ರತ್ಯೇಕವಾದ ವ್ಯಕ್ತಿತೃವಿರುವುದರಿಂದ ಅದು ದ್ಲೋಪವಾಗುವು
ದಿಲ್ಲ; ರಮಣಿಯ ಮುಖ ಚಂದ್ರನಂತಿದ್ದರೆ ಅದು ಅವಳಿಗೆ ಭೂಪಣವೇ
ಹೊರತು ದೂಪಣವಲ್ಲ.
ಪೂರ್ವಕವಿಕೃತಿಯಲ್ಲಿ ದೊರೆಯುವ ವಿಷಯವನ್ನೇ ಒಬ್ಬನು ಸ್ವೀಕ
ರಿಸಿ ಹೊಸಬಗೆಯಲ್ಲಿ ಉಪಸಖೋಗಿಸಿ, ದೋಷಕ್ಕೆ ಗುರಿಯಾಗದಿರುವುದು
ಮಾತ್ರವಲ್ಲ, ತ್ಲಾ ಘನೆಗೂ ಪಾತ್ರನಾಗಬಹುದೆಂಬುದಕ್ಕೆ ಕನ್ನಡ ಕಾವ್ಯ
ಗಳಿಂದ ಒಂದು ಉದಾಹರಣಿಯನ್ನು ಇಲ್ಲಿ ಕೊಡಬಹುದು. ಪಾಂಡವರು
ಅರಣ್ಯದಲ್ಲಿ ವಾಸಮಾಡುತ್ತಿದ್ದಾಗ ದುರ್ಯೋಧನನು ಅವರೆದುರಿಗೆ ತನ್ನ
ಸಿರಿಯನ್ನು ಮೆರಸಲು ಬಂದು ಚಿತ್ರಾಂಗದನೆಂಬ ಗಂಧರ್ವನಿಗೆ ಸೆರೆ
ಸಿಕ್ಕಲು, ಅರ್ಜುನನು ಬಿಡಿಸಿಕೊಂಡು ಬರಬೇಕಾಯಿತಪ್ಕೆ. ಆಗ ದ್ರೌಪದಿ
ಕ ಧೃನ್ಯಾ., 5. ೧೧ವೈತ್ತಿ.
೧೧. ಶವಿತೆಯ ಪರಿಕರಗಳು ೧೭೯
ಅವನ ಕಟ್ಟುಗಳನ್ನು ಕಳಚಿ, ಮರ್ಮಭೇದಕವಾದ ಮಾತುಗಳನ್ನಾಡಿ ಅವ
ನನ್ನು ಭಾನುಮತಿಗೆ ಒಪ್ಪಿಸಿದಾಗ, "" ದುರ್ಯೋಧನಂ ದಾಡೆಗಳೆದ ಕುಳಿಕ
ನಂತೆಯುಂ ಕೋಡುಡಿದ ಮದಹಸ್ತಿಯಂತೆಯು೦ ನಖಮುಡಿದ ಸಿಂಹ
ದಂತೆಯು೦ ಗಳಿತಗರ್ವನಾಗಿ '' ನಾಚಿಕೆಯೊಡನೆ ಹಸ್ತಿನಾವತಿಗೆ ಹೋದ
ನೆಂದು ಪಂಪನು ತನ್ನ ಭಾರತದಲ್ಲಿ ವರ್ಣಿಸಿದ್ದಾನೆ (wii: ೩೯ವ).
ರನ್ನನ ಗದಾಯುದ್ಧದಲ್ಲಾದರೆ, ಊರುಭಂಗ ಮಕುಟಭಂಗಗಳಿಗೆ
ಈಡಾಗಿ, ಮಾನಭಂಗದಿಂದ ನರಳುತ್ತಿರುವ ದುರ್ಯೋಧನನ ಬಳಿಗೆ ಅಶ್ವ
ತ್ಥಾಮನು ಬಂದು,
ಕುಳಿಕನ ಪಲ್ಗಳ೦ ಮುಜಖಯೆ ಮೋದಿದರಾರ್ ಪಿಡಿದೊತ್ತಿ ಸಿ೦ಹಮಂ
ಮುಳಿಯಿಸಿ ದಾಡೆ ಸುಂ ವಿಡಿದುಕಿಟ್ಷಿವರಾರ" ಮದಹೆಪ್ತಿಯಂ ನೆಟ್ರಂ!
ಗೊಳೆ ನೆಲಕಿಕ್ಕಿ ಕೋಡೆರಡುಮ೦ ಕುಸಿಯೊತ್ತಿದರಾರ್ ಸುರಾದ್ರಿನಿ
ಶ್ಚಳನಿಬಿಡೋರುವುಂಡಲವಮನಾರುಡಿದರ" ಫಣಿರಾಜಕೇತನಾ॥
(ix. ೨೦)
ಎಂದು ಮರುಗುತ್ತಾನೆ. ರನ್ನನು ಕೊಟ್ಟಿರುವ ಮೂರು ಉಪಮಾನ
ಗಳೂ ಪಂಪನ ಗ್ರಂಥದಿಂದಲ್ಲೇ ಬ೦ದಿರಶಕ್ಕವು. ಆದರೆ ಇಲ್ಲಿ ಅವು
ಅಲ್ಲಿರುವಂತೆ ಲಜ್ಕಾಭಾವಕ್ಕೆ ಪೋಪಕವಾಗದೆ ವಿಸ್ಮಯಭಾವಕ್ಕೆ ಪೋಪಕ
ವಾಗಿ ಬಂದು ಸನ್ನಿಷಪೇಶದ ಭೀಷಣ ಕರುಣವನ್ನು ಎಷ್ಟು ಚೆನ್ನಾಗಿ ಬೆಳಗು
ತ್ತೃವೆ1 ಇಲ್ಲಿ ರಸವು ಬೇರೆಯಾದದ್ದರಿಂದ ಈ ಹೋಲಕೆಗಳ ಅರ್ಥವೇ,
ತಿರುಳೀ ಬೇರೆಯಾಗಿ ಪರಿಣಮಿಸಿತು.
ದೃಪಷ್ಟಪೂರ್ವಾ ಅಪಿ ಹೃರ್ಥಾಃ ಸಾಷ್ಯೇ ರಸಪರಿಗ್ರಹಾತ್।
ಸರ್ವೇ ನವಾ ಇವಾಭಾ೦ತಿ ಮಧುಮಾಸ ಇವ ದ್ರುಮಾಃ॥
(ಧೈನ್ಯಾ., iv, ೪)
"“ಹಿಂದೆಯ್ಲೇ ಕಂಡಿದ್ದ ಅರ್ಥಗಳಾದರೂ ಕಾವ್ಯದಲ್ಲಿ ರಸವನ್ನು
ಒಳಕೊಂಡು ಬಂದರೆ, ವಸಂತದಲ್ಲಿ ವೃಕ್ಷಗಳಂತೆ ಎಲ್ಲವೂ ಅಭಿನವವಾಗಿ
ಹೊಳೆಯುತ್ತವೆ '' ಎ೦ದು ಆನಂದವರ್ಥನನು ಹೇಳಿರುವ ಮಾತಿಗೆ ಇದು
ಒಳ್ಳೆಯ ನಿದರ್ಶನ. ರಸವು ಸ್ಪರ್ಶತಿಲೆ; ಅದು ಮುಟ್ಟಿದ್ದೆಲ್ಲ ಹೊಸಚನ್ನ.
ಕವಿಗಳಲ್ಲಿ ಉಪಜೀವ್ಯ, ಉಪಜೀವಕ ಎಂಬ ಭೇದವುಂಟೇ ಉಂಟು.
ಎಲ್ಲರ ಪ್ರತಿಭೆಗಳೂ ಒಂದೇ ಮಟ್ಟದಲ್ಲರುವುದಿಲ್ಲ; ಪಿಂದೆಯೇ ನಾವು
ನೋಡಿರುವಂತೆ, ಪ್ರತಿಭಾತಾರತಮ್ಯದಿಂದ ಒಬ್ಬನು ಮಹಾಕವಿಯಾಗು
12-18
೧೮೦ ಭಾರತೀಯ ಕಾವೃಮಾಮಾಂಸೆ
ತ್ತಾನೆ, ಇನ್ನೊಬ್ಬನು ಅನುಜೀವಿಯಾಗುತ್ತಾನೆ. ಇದರ ಮೇಲೆ
ಒಂದೊಂದು ಸಾಹಿತ್ಯದಲ್ಲೂ ಜಗದ್ವಂದ್ಯವಾಗಬಲ್ಲ ಮಹಾಕೃತಿಗಳು ಒಂದೆ
ರಡು ಇದ್ದ ರೆ ಹೆಚ್ಚು; ರಾಮಾಯಣ, ಮಹಾಭಾರತ, ಬೃಹತ್ಮಥೆ ಮೊದ
ಲಾದವು ಇಂಥವು; ಇವುಗಳಲ್ಲಿ ಒಂದೊಂದೂ ಒಂದು ಭವ್ಯಜಗತ್ತು. ಬಾಹ್ಯ
ಜಗತ್ತಿನಂತೆಯೇ ಈ ಕೃತಿಗಳೂ ಈಚಿನ ಕವಿಗಳಿಗೆ-ಅವರು ಎಷ್ಟೇ ದೊಡ್ಡವ
ರಾಗಿರಲಿ -ಆಕರಗಳಾಗುತ್ತವೆ. ಅಲ್ಲಿಂದ ಅಮೃತ ಶಿಲೆಗಳನ್ನು ಎತ್ತಿ ತೆಗೆದು
ಕೆತ್ತಿ ನಯಗೊಳಿಸಿ ಸುಂದರ ವಿಗ್ರಹಗಳನ್ನು ನಿರ್ಮಿಸುವ ಹಕ್ಕು ಎಲ್ಲರಿಗೂ
ಉಂಟು. ಇಲ್ಲಿ ""ಹರಣ''ದ ಪ್ರಶ್ನೆಯೇ ಬರಕೊಡದು. ಇನ್ನು, "" ಬಾಣೋ
ಚ್ಛಿಪ್ಪ೦ ಜಗತ್ಸರ್ವಂ''(""ಎಲ್ಲ ಜಗತ್ತೂ ಬಾಣನ ಎ೦ಜಲು'') ಎ೦ಬ೦ಥ
ಪ್ರಶಂಸೆಗೆ ಪಾತ್ರರಾಗಿ ಕವಿಗಳಿಗೆ ಕವಿಯಾಗುವ ಭಾಗ್ಯಶಾಲಿಗಳು ಅತಿವಿರಳ.
ಹುಡುಕಿಕೊಂಡು ಹೋದರೆ ಅವರಿಗೂ ಸ್ಫೂರ್ತಿಯನ್ನೂ ವಸ್ತುವನ್ನೂ ಒದ
ಗಿಸಿದವರು ಯಾರಾದರೂ ಇದ್ದೇ ಇರುತ್ತಾರೆ. ಪಿ೦ದಿನವರಿಗೆ ಯಣಿಯಲ್ಲದ
ಕವಿ ಜಗತ್ತಿನಲ್ಲಿ ಎಲ್ಲುಂಟು? ರನ್ನನು ಪಂಪನ ಕಾವ್ಯಭಾಗದ ತಳಹದಿಯ
ಮೇಲೆ ತನ್ನ ಕೃ ತಿಮಂದಿರವನ್ನು ಕಟ್ಟಿದನು ; ಪಂಪನು ಕಾಳಿದಾಸ,
ಭಾರವಿ, ಮಾಘ, ಭಟ್ಟನಾರಾಯಣಾದಿಗಳಿಂದ ಬೇಕಾದಷ್ಟು ಸಹಾಯ
ಪಡೆದನು ; ಕಾಳಿದಾಸನು ಕೂಡ ಅಲ್ಲಲ್ಲಿ ಅಶ್ವಘೋಪನನ್ನು ಅನುಸರಿಸು
ವಂತೆ ತೋರುತ್ತದೆ. ಅಶ್ಚಘೋಪನ ಕಾವ್ಯದಲ್ಲಿ ವಾಲ್ಮೀಕಿ ರಾಮಾಯಣದ
ಛಾಹೆ ಗೋಚ-ವಾಗುತ್ತಡೆ.--ಈ ಪರಂಪರೆಗೆ ಕೊನೆಯಲ್ಲ!
ನಾಸ್ತೃ ಜೌರಃ ಕವಿಜನಃ ನಾಸ್ತ್ಯಚೌರೋ ವಣಿಗ್ಣನಃ |
ಸ ನಂದತಿ ವಿನಾ ವಾಚ್ಯಂ ಯೋ ಜಾನಾತಿ ನಿಗೂ ತುಂ ॥
(ಕಾವ್ಯಮಾಮಾಂಸಾ ಪು. ೬೧)
“: ಕದಿಯದ ಕವಿಯಿಲ್ಲ, ಕದಿಯದ ವರ್ತಕನಿಲ್ಲ; ಯಾರು ಬಚ್ಚಿಡಲು ಬಲ್ಲ
ನೋ! ಅವನು ಮಾತಿಗೆ ಸಿಕ್ಕದೆ ಬಾಳುಶ್ತಾನೆ''-ಎಂದು ರಾಜಶೇಖರನಸು
ಹೇಳಿದನು. ಆದರೆ ಅನ್ಯರದನ್ನು ತನ್ನದೆಂದು ಮರೆಮಾಜಿ ಹೇಳುವುದೇ
ನಿಜವಾದ ಹರಣ; ಇದೇ ನಿಜವಾದ ದೋಷ. ಪರರ ಕೃತಿಗಳಿಂದ ಮುಚ್ಚು
ಮರೆಯಿಲ್ಲದೆ ತೆಗೆದುಕೊ೦ಡು, ಅದಕ್ಕೆ ಹೊಸಹೊಂದು ಮೆರುಗನ್ನು ತನ್ನ
ಪ್ರತಿಭಾವ್ಯಾಪಾರದಿಂದ ಅಳವಡಿಸುವುದು ಈ ಜಾತಿಗೆ ಸೇರಲಾರದು.
ಅದು ಹರಣವಲ್ಲ; ಸ್ವೀಕರಣ. ಅದನ್ನು ಮಾಡದ ಕವಿಯೇ ಇಲ್ಲ.
೧೨. ಕವಿಸೃಷ್ಟಿ
ಕವಿಗಿರುವ ಸಲಕರಣಿಯೆಲ್ಲ ಮಾತು; ಕಿವಿಯಲ್ಲಿ ಬೀಳುತ್ತಿದ್ದ
ಹಾಗೆಯೇ ಕರಗಿಹೋಗುವ ಮಾತು. ತನ್ನ ಸಾಮಗ್ರಿ ಇಷ್ಟು ಭಂಗುರ
ವಾದರೂ ಅವನು ಇನ್ನೊಬ್ಬ ವಿಶ್ಯಾಮಿತ್ರನಂತೆ ಸೃಷ್ಟಿಕರ್ತನೊಂದಿಗೆ
ಹುರುಡಿಸಿ ತನ್ನದೇ ಒಂದು ಜಗತ್ತನ್ನು ನಿರ್ಮಿಸುತ್ತಾನೆ. ಈ ಕವಿಸೃಷ್ಟಿ
ವಿಶ್ಯಾಮಿತ್ರನದರಂತೆ ಪೀನವಾಗದೆ ಬ್ರಹ್ಮ ಸೃಷ್ಟಿಯನ್ನೂ ಮಿರಿಸಿ ನಿಲ್ಲು
ತ್ತದೆ.
ನಿಯತಿಕ್ಕತನಿಯಮರಹಿತಾಂ ಹ್ಞಾದ್ಯೆಕಮಂಜಾಮನನ್ಯಪರತಂತ್ರಾಂ |
ಸವರಸರುಚಿರಾ೦ ನಿರ್ನ್ಮಿತಿಮಾದಧತೀ ಭಾರತೀ ಕವೇರ್ಜಯತಿ 1
—ಎಂದು ಮಮ್ಮಟನು ಕಾವ್ಯಪ್ರಕಾಶದ ಆದಿಯಲ್ಲಿ (;೧) ಕವಿವಾಣಿ
ಯನ್ನು ಸ್ತುತಿಸುತ್ತಾ, ಅದರ ಉತ್ಕರ್ಷವನ್ನು ಹೇಳುವ ಬಗೆಯಲ್ಲೇ ಅದು
ಹೇಗೆ ಬ್ರಹ್ಮ ಸೃಷ್ಟಿಗಿಂತ ಅಂಶಅ೦ತದಲ್ಲೂ ಮೇಲೆಂಬುದನ್ನು ಕೌಶಲದಿಂದ
ಸೂಚಿಸಿದ್ದಾನೆ. ನಮ್ಮ ದಿನದಿನದ ಅನುಭವಕ್ಕೆ ಗೋಚರವಾಗುವಂತೆ,
ಬ್ರಹೈಸ್ಪ ಪ್ರೆ ಬಂಧನಗಳು' ಹಲವು ; ಅದು ನಿಯತಿಯ ನಿಯಮಗಳನ್ನು
ಎಳ್ಳಷ್ಟೂ ಮಾರಲಾರದು ; ಇಲ್ಲಿಯ ವ್ಯವಹಾರದಲ್ಲಿ ಸುಖದ ಜೊತೆಗೆ ಅದ
ಕ್ಕಿಂತ ಹೆಚ್ಚಾಗಿ ದುಃಖಮೋಹಗಳು ನಮ್ಮನ್ನು ಸುತ್ತಿಕೊಳ್ಳುತ್ತವೆ; ಅಲ್ಲದೆ
ಇದರ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಯೆಪ್ಪು, ತ್ರಮವೆಷ್ಟು! ಇಪ್ಪಾ
ದರೂ ಈ ಜಗತ್ತನ್ನು ಕೇವಲ ಮನೋಹರವೆನ್ನಬಹುದೆ?! ಇದಕ್ಕೆ
ಪ್ರತಿಚಿತ್ರವಾಗಿ ಕವಿಸೃಷ್ಟಿಯನ್ನು ನೋಡಿ: ""ನಿಯತಿಃ ಕೇನ ಲಂಘ್ಯತೇ''
(""ನಿ ಸುತಿಯನಾರ್ ಮಾಯಿದಪರ್'') ಎಂಬ ಉಕ್ತಿ ಇದಕ್ಕೆ ಅನ್ವಯಿಸು
ವದಿಲ್ಲ; ಲೋಕದಲ್ಲಿ ಅಸಾಧ್ಯವಾದ ಸಂಗತಿಗಳು ಇಲ್ಲಿ ಸಹಜವೆಂಬಂತೆ
ಉಲ್ಲಿಖಿತವಾಗುತ್ತವೆ. ದುಃಖತಾಪಾದಿಗಳನ್ನು೦ಟುಮಾಡುವ ವಸ್ತುಗಳೂ
ಅನುಭವಗಳೂ ಕಾವ್ಯದಲ್ಲಿ ಕಾಲಿಟ್ಟಕೂಡಲ್ಲೇ ಕೇವಲ ಆಹ್ಲಾದಮಯ
1 « ನ್ರಿಯತಿಶಕ್ತಾ , ನಿಯತಸ್ಥರೂಪಾ, ಸುಖದ್ದುಖಮೋಹಸ್ವಭಾವಾ, ಪರಮಾ
ಣಗ್ವಾದ್ಯುಪಾದಾನ ಕರ್ಮಾದಿಸಹಕಾರಿ ಕಾರಣಪರತಂತ್ಪಾ, ಷಡ್ರಸಾ, ನ ಚ ಹೃದ್ಕೊವ
ತೈೊಃ ತಾದೃಶೀ ಬ್ರಹ್ಮಣೋ ನಿರ್ಮಿತಿಃ ನಿರ್ವಾಣಂ. ಏತದ್ದಿಲಕ್ಷಣಾ ತು ಕವಿವಾ ಜ್ನ
ರ್ಮಿತಿಃ, ಅತ ಏವ ಜಖತ್ನಿ,,,,'' (ವೃತ್ತಿ).
೧೮೧
೧೮೨ ಭಾರತೀಯ ಕಾವ್ಯವಿಸಾಮಾಂಸೆ
ವಾಗುತ್ತವೆ. ಈಜಗತ್ತಿನ ನಿರ್ಮಾಣಕಾರ್ಯದಲ್ಲಂತೂ ಕವಿ ಯಾರ ಕೈಯನ್ನೂ
ಕಾದಿರಬೇಕಾಗಿಲ್ಲ. ಅದು ಅವನ ಪ್ರತಿಭೆಯಿಂದ ನಿರರ್ಗಳವಾಗಿ ನಿರ
ವಧಿಯಾಗಿ ಹೊರಡುತ್ತದೆ. ಇದರ ಸರ್ವಾಂಗರಮಣೀಯತೆಯ
ನ್ನಂತೂ ರಸಿಕರೆಲ್ಲರೂ ಬಲ್ಲರು.
ವಾಣಿಯ ನೆಲೆವೀಡು ಬ್ರಹ್ಮನ ವದನವಷ್ಟೆ; ಅದರಲ್ಲಿ ಅವಳು ಬೇಸರ
ಗೊಂಡು ಕವಿಯ ವದನಕಮಲಕ್ಕೆ ಮನಸೋತು ಬಂದು ನೆಲಸಿ, ಬ ್ರಿಹ್ಮನ
ಮುದಿಸೃಷ್ಟಿಯನ್ನು ಹಾಸ್ಕಮಾಡುವ ರೀತಿಯಲ್ಲಿ ಹೊಸದೊಂದು ಧುವನ
ಮಂಡಲವನ್ನೇ ತೋರ್ಪಡಿಸುವಳಂತೆ!:
ಹೀಗೆ ಕವಿಸೃಷ್ಟಿಯ ಮುಂದೆ ನಮ್ಮ ಬಳಕೆಯ ಜಗತ್ತು ಅಸಾರಪೆನಿ
ಸಿದರೂ ಇವೆರಡಕ್ಕೂ ಸ೦ಬಂಧವಿಲ್ಲನಲ್ಲ. ಅದನ್ನು ಕೆಲವು ಮಟ್ಟಿಗೆ
ವಿಚಾರಮಾಡುವುದು ಆವಶ್ಯಕ. ಕವಿಪ್ರತಿಭೆಯ ಲ್ಲೀಲಾವ್ಯಾಪಾರಕ್ಕೆ
ಲೋಕವ್ಯವಹಾರವೇ ಆಧಾರವೆಂದು ಹಿ೦ದಿನ ಅಧ್ಯಾಯಗಳಲ್ಲಿ ನೋಡಿದೆವು.
"ನಾಟ್ಯ ಶಾಸ್ತ್ರ'ಕಾರನು ತನ್ನ ಗ್ರಂಥದ ಮೊದಲನೆಯ ಅಧ್ಯಾಯದಲ್ಲಯೇ
ನಾಟೃದ ವಸ್ತು ಏನೆಂಬುದನ್ನು ಪೀಗೆ ಸೂಚಿಸಿದ್ದಾನೆ:
ತ್ರೆ 3ೀಲೋಕ್ಯಸ್ಯಾಸ್ಯ ಸರ್ವಸ್ಯ ನಾಟ್ಯಂ ಭಾವಾನುಕೀರ್ತನಂ।
ಕೃಚಿದ್ಫರ್ಮಃ ಕ್ವಚಿತ್ ಕ್ರೀಡಾ ಕೃಚಿದರ್ಥಃ ಕೃಚಿಚ್ಛಮಃ॥
ಕ್ವಚಿದ್ದಾ ಸ್ಯಂ ಕೃಚಿದ್ಯುದ್ಧ೦ ತ್ವಚಿತ್ಕಾಮಃ ಕೃಚಿದ್ದಧಃ |
ಧರ್ಮೋ ಧರ್ಮಪ್ರವೃತ್ನಾ ನಾಂ ಕಾಮಃ ಕಾಮೋಪಸೇವಿನಾಂ॥
ನಿಗ್ರಹೋ ದುರ್ವಿನೀತಾನಾಂ ಎಿನೀತಾನಾ೦ ದಮಕ್ರಿಯಾ |
ಕ್ಲೀಬಾನಾ೦ ಧಾರ್ಪ್ಯ್ಯಜನನಂ೦ ಉತ್ಸಾಹಃ ಶೂರಮಾನಿನಾಂ॥
ಆಬುಧಾನಾಂ ವಿಜೋಧಶ್ವ ವೈದುಷ್ಯಂ ವಿದುಪಾಮಪಿ!
ಈಶ್ವರಾಸ್‌ಇಂ ಎಲಾಸಶ್ಚ ಸ್ಥೆ ತ್ಫರ್ಯ೦ ದುಃಖಾದಿ ತಸ್ಯ ಚ
ಆರ್ಥೋಪಜೀವಿನಾಮರ್ಥಃ ಧೃತಿರುದ್ಧಿಗ್ನ ಜೇತಸಾಂ।
ನಾನಾಧಾವೋಪಸಂಪನ್ಮ೦ ನಾನಾವಸ್ಥಾಂತರಾತ್ಮಕಂ!
ಲೋಕವೃತ್ತಾನುಕರಣಂ ನಾಟ್ಯಮೇತನ್ಮಯಾಕೃತಂ!
ಉತ್ತಮಾಧಮಮಧ್ಯಾನಾ೦ಂ ನರಾಣಾಂ ಕರ್ಮಸಂಶ್ರಯೆಂ॥8. . .
ನ ತತ್ ಜ್ಞಾನಂ ನ ತಚ್ಚಿಲ್ಪಂ ನಸಾ ವಿದ್ಯಾನ ಸಾ ಕಲಾ!
7 ಸಕಾವ್ಯಪ್ರಕಾಶದಲ್ಲ1೪. ೪೧ರ ಕೆಳಗೆ ಉದಾಹರಿಸಿರುವ ಒಂದು ಪ್ರಾಕೃತತದ್ಯದ
ಅಶಯ ಇದು. ಇದರ ಸಂಸ್ಕೃತಚ್ಛಾಯೆ ;
ಯಾ ಸ್ಮವಿರಮಿವ ಹಸಂತೀ ಕವಿವದನಾಂಬುರುಹ ಬದ್ಧವಿನಿವೇಶಾ।
ದರ್ಶಯತಿ ಭುವನಮಂಡಲಮನ್ಯದಿವ ಜಯತಿ ಸಾ ವಾಣೀ!
೧೨. ಕವಿಸೃಷ್ಟಿ ೧೮೩
ನಾಸ್ ಯೋಗೋ ನ ತತ್ ಕರ್ಮ ನಾಟ್ಯೋಸ್ಕಿನ್ ಯನ್ನ ದೃಶ್ಯತೇ॥...
ಯೊಲ್ಯಯಂ ಸ್ವಧಾವೊಃ ಲೋಕಸ್ಯ ಸುಖದುಃಖಸಮನ್ವಿತಃ।
ಸೋಃಂಗಾದ್ಯಭಿನಯೋಪೇ ತೋ ನಾಟ್ಯಮಿತ್ಯಭಿಧೀಯತೇ॥
(i: ೧0೬-೧೨೨)
« ಈ ತ್ರೈೈಲೋಕ್ಯವೆಲ್ಲದರ ಭಾವದ ಅನುಕೀರ್ತನವೇ ನಾಟ್ಯ.
ಒಂದು ಕಡೆ ಧರ್ಮ, ಒಂದು ಕಡೆ ಆಟ, ಒಂದು ಕಡೆ ಅರ್ಥ, ಒಂದು ಕಡೆ
ಶಾಂತಿ, ಒಂದು ಕಡೆ ಹಾಸ್ಯ, ಒಂದು ಕಡೆ ಯುದ್ಧ, ಒಂದು ಕಡೆ ಕಾಮ,
ಒಂದು ಕಡೆ ಕೊಲೆ, ಧರ್ಮತತ್ಪರರ ದರ್ಮ, ಕಾಮಾಸಕ್ತರ ಕಾಮ,
ಉದ್ಭತರ ನಿಗ್ರಹ, ವಿನೆಯಶಾಲಿಗಳ ಇಂದ್ರಿಯನಿಗ್ರಹೆ, ಹೇಡಿಗಳ ದಿಟ್ಟ
ತನ, ಶೂರರ ಉತ್ಸಾಹ, ಅಜ್ಜು ರ ಪ್ರಬೋಧ, ವಿದ್ಯಾಂಸರ ಪಾಂಡಿತ್ಯ,
ಶ್ರಿ ಮಂತರ ವಿಲಾಸ, ದುಃಖಪೀಡಿತರ ಮನಃಕ್ಳೆ 3ರ ಅರ್ಥ ಪರರ ಅರ್ಥ
ಸಂಗ್ರಹ, ಕದಡುಮನಸ್ಸಿನ ವರ ಧೈರ್ಯ. ಹೀಗೆ ಅನೇಕ ಭಾವಗಳಿಂದ ಸಂಪ
ನ್ನವಾಗಿ, ಅನೇಕ ಅವಸ್ಥೆಗಳನ್ನು ಒಳಕೊಂಡು, ಲೋಕದ ನಡೆವಳಿಕೆ
ಯನ್ನು ಅನುಕರಿಸುವ ಈ ನಾಟ್ಯವನ್ನು ನಾನು ನಿರ್ಮಿಸಿದೆನು ; ಇದಕ್ಕೆ
ಉತ್ತಮ, ಮಧ್ಯಮ, ಅಥೆಮ ಈ ಎಲ್ಲರ ಕಾರ್ಯಗಳೂ ಆಧಾರ. ... ಈ
ನಾಟ್ಯದಲ್ಲಿ ಕಾಣದಾರದ ಜ್ಞಾ ನವಿಲ್ಲ, ಶಿಲ್ಪವಿಲ್ಲ, ವಿದ್ಯೆಯಿಲ್ಲ, ಕಲೆಯಿಲ್ಲ,
ಯೋಗವಿಲ್ಲ, ಕಾರ್ಯವಿಲ್ಲ. ... ಸುಖದುಃಖಗಳಿಂದ ಕೂಡಿದ ಲೋಕ
ಸ್ವೈಭಾವವೇನೇನುಂಟೋ ಅದೆಲ್ಲವೂ ಆಂಗಿಕಷೇ ಹೊದಲಾದ ಅಭಿನಯ
ಗಳಿಂದ ಕೂಡಿ ನಾಟ್ಯವೆಂದು ಕರೆಯಿಸಿಕೊಳ್ಳುತ್ತದೆ.''
ದೈಶ್ಯವಾದ ನಾಟ್ಯವನ್ನು ಕುರಿತು ಹೇಳಿರುವ ಈ ಮಾತುಗಳನ್ನು
ಕಾವ್ಯಸಾಮಾನ್ಯಕ್ಕೇ ಅನ್ವಯಿಸಬಹುದು. ಒಂದು ವಾಕ್ಯದಲ್ಲಿ ಸಂಗ್ರಹಿ
ಸುವುದಾದರೆ : “ತ್ರೆ ತ್ವಲೋಕ್ಯಸ್ಥ್ಯಾಸ್ಯ ಸರ್ವಸ್ಯ ಕಾವ್ಯಂ ಭಾವಾನು
ಶೀರ್ತನಂ.?'
ಕವಿ ವರ್ಣಿಸುವ ಸಂಗತಿಗಳು ಪಿಂದೆ ನಡೆದಿರಲೇಜೇಕಾಗಿಲ್ಲ; ಅವು
ಗಳಲ್ಲಿ ಹಲವು ಯಥಾವತ್ತಾಗಿ ಲೋಕದಲ್ಲಿ ನಡೆಯುವ ಸಂಭವವೂ
ಕಡಮೆ. ನೇಮಿಚಂದ್ರನು ಹೇಳುವಂತೆ,
ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ
ಮುಟ್ಟುಗೆ ಮುಟ್ಟದಿರ್ಕೆ ನಧಮ೦ ಹರನ೦ ನರನೊತ್ತಿ ಗಂಟಲಂ |
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬ೦ಧದೊಳಲೆ, ಕಟ್ಟಿದರ್
ಮುಟ್ಟಿದರಿಕ್ಕಿ ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ॥
(ಲೀಲಾವತಿ, ;. ೧೧)
೧೮೪ ಭಾರತೀಯ ಕಾವೃಮಾಮಾಂಸೆ
ಇವು ಪುರಾಣಪ್ರಸಿದ್ಧವಾದ ವಿಷಯಗಳಾದ ಕಾರಣ, ಪೀಗೆ ನಡೆದೇ
ನಡೆದುವೆಂದು ನಂಬತಕ್ಕ ವರೂ ಕೆಲವರಿರಬಹುದು. ಆದರೆ ಪೌರಾಣಿಕ
ಕಥೆಗಳನ್ನು ನಿರೂಪಿಸುವಾಗಲ್ಲೇ ಕವಿ ತನ್ನ ಉದಡ್ದೇಶಸಾಧನೆಗಾಗಿ
ಎಷ್ಟೊಂದು ವ್ಯತ್ಯಾಸಗಳನ್ನು ಅದರಲ್ಲಿ ಮಾಡುವುದಿಲ್ಲ! ಉದಾಹರಣಿಗೆ,
ದೂರ್ವಾಸರ ಶಾಪದ ಸಂಗತಿ ಮಹಾಭಾರತದ ಶಾಕುಂತಲೋಪಾಖ್ಯಾನ.
ದಲ್ಲಿ ಎಲ್ಲಿದೆ? ಕಲ್ಪಿತ ಕಥೆಗಳಲ್ಲಂತೂ ಕವಿಪ್ರತಿಭೆಯದೇ ಏಕಾಧಿ
ಪತ್ಯ. ಇದನ್ನೆಲ್ಲಾ ನೋಡಿದಾಗ ಕವಿಸೃಷ್ಟಿ ""ನಿಯತಿಕ್ಕತನಿಯಮರಪಿತ''
ವೆಂದೇ ತೋರುತ್ತದೆ. ಆದರೆ ಇಲ್ಲಿ ಕೂಡ ಗಮನಾರ್ಹವಾದ ಅಂಶ
ವೊಂದುಂಟು. ಲೋಕಾತೀತವಾದ ವಿಪೆಯಗಳನೆ ಹ ಜೋಡಿಸಿ ಕವಿ
ತನ್ನ ಜಗತ್ತನ್ನು ಕಟ್ಟಿ ರಬಹುದು ; ಅವು ಬಾಹ್ಯಜಗತ್ತಿ ನಲ್ಲಿ ಇರುವುದಾ
ಗಲಿ ನಡೆಯುವುದಾಗಲಿ ಅಸಾಧ್ಯ ವಾಗಿರಬಹುದು. ಆಅದರೆ ಕಾವ್ಯ
ಪ್ರಪಂಚವನ್ನು ನಾವು ಹೊಕ್ಕು ವಿಹರಿಸುವಾಗ, ಅಲ್ಲ ಹೇಳಿರುವುದೆಲ್ಲ
ಸಾಧ್ಯವಲ್ಲದಿದ್ದ ರೂ ಸಂಭವವೆನಿಸಬೇಕು.
ಅತಥಾಸ್ಥಿತಾನಪಿ ತಥಾಸಂಸ್ಥಿತಾನಿವ ಹೃದಯೇ ಯಾ ನಿವೇಶಯತಿ |
ಆರ್ಥವಿಶೇರ್ಪಾ ಸಾ ಜಯತಿ ವಿಕಟಕವಿಗೋಚರಾ ವಾಣೀ ॥3
ಎಂದರೆ, ಮಹಾಕವಿವಾಣಿ ಕಲ್ಪಿಸುವ ಅರ್ಥವಿಶೇಷಗಳು ಲೋಕ
ದಲ್ಲಿ ಹಾಗೆ ಇಂದಿದ್ದರೂ, ನಮ್ಮ ಹೈ ದಯಕ್ಕೆ ಮುಟ್ಟಿದಾಗ ನಿಜವಾ
ಗಿಯೂ ಹಾಗೆಯೇ ಇರುವಂತೆ ಅನುಭವವಾಗುತ್ತದೆ. ಎಂದರೆ, ಕವಿ
ಸೃಷ್ಟಿಯ ಸಂಭಾವ್ಯತೆಯ ವಿಷಯದಲ್ಲಿ ನಮ್ಮ ಹೃದಯಾನುಭವವೇ ಒರೆ
ಗಲ್ಲು. ಕಾವ್ಯದಲ್ಲಿ ಉಕ್ತ ವಾಗಿರುವುದನ್ನೆಲ್ಲಾ ನಾವು ಹೆಜ್ಜೆಹೆಜ್ಜೆಗೂ
ಲೋಕದ ವಸ್ತುಗಳೊಂದಿಗೆ ಹೋಲಿಸಿ ನೋಡುತ್ತಾ, ವಿಭಜಿಸಿ ಪರೀಕ್ಷಿ
ಸುತ್ತಾ ಕುಳಿತುಕೊಳ್ಳುವುದಿಲ್ಲ ; ಅಖಂಡವಾಗಿ ಗ್ರಹಿಸಿ ಆಸ್ಚಾದಿಸುತ್ತೇವೆ.
ಅದರಲ್ಲಿ ನಿರೂಪಿತವಾಗಿರುವುದು ದಿಟವೇ ಸುಕ್ಳೇ, ಹೀಗೆಯೇ ನಡೆಯಿತೇ,
ಹೀಗೆಯೇ ಇದೆಯೇ ಎಂದು ಕೇಳುವುದಿಲ್ಲ; ಕವಿ ಚಿತ್ರಿಸಿರುವ ರೀತಿಯಲ್ಲಿ
ಸಂಭವಿಸೀತೇ ಇಲ್ಯವೇ ಎಂಬುದನ್ನು ಮಾತ್ರ ನೋಡುತ್ತೇವೆ. ಹೀಗೆ
ಇಲ್ಲಿ ಸಂಭಾವ್ಯತೆಯೇ ಮುಖ್ಯ. ಆದಕ್ಕೆ ಭಂಗಬಂದರೆ ಮಾತ್ರ ಕಾವ್ಯ
3 ಇದು ಧೃನ್ಯಾಲೋಕದ ೨೩೬ವೆಯ ಪುಟದಲ್ಲ ಉದಾಹರಿಸಿರುವ ಒಂದು ಪ್ರಾಕೃತ
ಪದ್ಯದ ಸಂಸ್ಕೃತಚ್ಛಾಯೆ.
೧೨. ಕವಿಸೃಷ್ಟಿ ೧೮೫.
ಸರ್ಯಸ್ವವೂ ಭಂಗವಾಗುತ್ತದೆ ; ಕವಿಪ್ರತಿಭೆಯೆಂಬ ಮಾಯದ ಕುಂಚವು
ಕಲ್ಪಿಸಿದ ಬಣ್ಣಬಣ್ಣದ ಜಗತ್ತು ನೀರುಗುಳ್ಳೆಯಂತೆ ಒಡೆದುಹೋಗುತ್ತದೆ ;
ನಮ್ಮ ತನ್ಮಯತೆ ಭಂಗವಾಗುತ್ತದೆ ; ರಸಧಾರೆ ಥಟ್ಟನೆ ಕತ್ತರಿಸಿಹೋಗು
ತ್ತದೆ. ಆದಕಾರಣವೇ ರಸಾಸ್ಕಾದಕ್ಕೆ ವಿಘ್ನಗಳು ಯಾವುವೆಂಬುದನ್ನು
ಪರಿಶೀಲಿಸುವಾಗ ಅಭಿನವಗುಪ್ತನು “ ಸಂಭಾವನಾ ವಿರಹ ''ವನ್ನು ಮೊದ
ಲನೆಯದಾಗಿ ಗಣಿಸಿದ್ದು.*
ಈ ಸಂಭಾವ್ಯತೆ ಒಂದೊಂದು ಸಂದರ್ಭದಲ್ಲ ಒಂದೊಂದು ಬಗೆ
ಯಾಗಿರುತ್ತದೆ. ಆಯಾ ಪಾತ್ರಗಳ ಸ್ವಭಾವಕ್ಕೂ ಮಹತ್ತ್ವಕ್ಕೂ ಆವರ
ನಡೆವಳಿಕೆ ಉಚಿತವಾಗುವಂತೆ ಕವಿ ಚಿತ್ರಿಸಬೇಕು. ರಾಮನು ಸಮುದ್ರಕ್ಕೆ
ಸೇತುವೆ ಕಟ್ಟಿದನೆಂದು ಕವಿ ವರ್ಣಿಸಬಹುದು ; ಅದು ಪುರಾಣಪ್ರಸಿದ್ಧ
ವಾಗಿರುವುದರಿಂದ ನಮಗೆ ಸಂಭಾವ್ಯವೆನ್ನಿಸುತ್ತ ದೆ; ಇದೇ ಕಾರ್ಯವನ್ನು
ಸಾಮಾನ್ಯ ರಾಜನೊಬ್ಬನಿಗೆ ಆರೋಪಿಸಿದರೆ ಹಾಸ್ಯಾಸ್ಪದವಾದೀತು.
ಕಾವ್ಯವು ಲೋಕಸ್ಥಿ ತಿಯ ನಕಲಾಗಬೇಕಾಗಿಲ್ಲ; ಆದರೆ ಲೋಕಸ್ಸಿತಿಯ
ಎಲ್ಲೆಯನ್ನು ಬಹುದೂರ ಮಾರಿ ಹೋಗಬಾರದು. ಇದೇ ಸಂಭಾವ್ಯತೆಯ
ಗುಟ್ಟು. ಉಪ್ಪು ದೂರ ಹೋಗಬಹುದು, ಒಲ್ಲಿಗೆ ನಿಲ್ಲಬೇಕು ಎಂಬುದರ
ನಿರ್ಣಯಕ್ಕೆ ಏಕಸೂತ್ರವಿಲ್ಲ. ಅದನ್ನು ಸಹೃದಯರೇ ಸಂದರ್ಭವರಿತು
ಗೊತ್ತುಮಾಡಿಕೊಳ್ಳಬೇಕು. ಪಾತ್ರರಚನೆ ಕಥಾರಚನೆಗಳಿಗೆ ಮಾತ್ರ
ವಲ್ಲ; ವರ್ಣನೆ ಮೊದಲಾದುವುಗಳಿಗೂ ಈ ಮಾತು ಅನ್ವಯಿಸುತ್ತದೆ.
ಕಾವ್ಯಸೌಂದರ್ಯಕ್ಕೆ ಅತಿಶಯೋಕ್ತಿ ಒ೦ದು ಮುಖ್ಯವಾದ ದಾರಿ; ಆದರೆ
ಅದು ಅತ್ಯುಕ್ತಿಯಾಗಿ ಪರಿಣಮಿಸಿದರೆ ಎಲ್ಲೋ ಕೆಲವರು ಪ್ರೌಢರು ಮಾತ್ರ
ಅದನ್ನು ಮೆಚ್ಚಬಹುದು ; ವಾಚಕಸಾಮಾನ್ಯದ ಹೃದಯವನ್ನು ಅದು ಆಕ
ರ್ಷಿಸಲಾರದು;, ದಂಡಿ ಈ ಅಂಶದ ಕಡೆಗೆ ನಮ್ಮ ಗಮನವನ್ನೆಳೆಯು
ತ್ತಾನೆ. “ಲೋಕದ ಪರಿಸ್ಥಿತಿಯನ್ನು ಮಾರದಂತೆ ಹೇಳುವುದು ಕಾಂತ
ಗುಣ ; ಇದು ಸರ್ವರಿಗೂ ಮನೋಹರ. ಇದನ್ನು ವೃತ್ತಾಂತಗಳೆ ಕಥನ
ದಲ್ಲೂ ವರ್ಣನೆಗಳಲ್ಲೂ ಕಾಣಬಹುದು.''- ಹೀಗೆಂದು ನಿರೂಪಿಸಿ ಇದಕ್ಕೆ
ಉದಾಹರಣೆ ಪ್ರತ್ಯುದಾಹರಣಿಗಳನ್ನು ಕೊಡುತ್ತಾನೆ. ಇದ್ದದ್ದನ್ನು
ಇದ್ದಂತೆಯೇ ನಕಲು ಮಾಡಬೇಕೆಂದು ಸರ್ವಾತ್ಮನಾ ದಂಡಿಯ ತಾತ್ಪರ್ಯ
4 ಅಭಿನವಭಾರತೀ, 1, ಪು. ೨೮೨.
೮೬ ಭಾರತೀಯ ಕಾವ್ಯಮಾಮಾಂಸೆ
ಸಲ್ಲ ; ಆದರೆ ಕವಿಕಲ್ಪನೆಯ ಆರೋಹಣಕ್ಕೂ ಒಂದು ಮಿತಿಯಿರಬೇಕೆಂದು
೨ವನ ಅಭಿಪ್ರಾಯ.
ಇದರ ಮೇಲೆ, ಸೌಂದರ್ಯವನ್ನು ಸಾಧಿಸಲು ಕವಿ ಯಾವಾಗಲೂ
ಸೋಕದ ಎಲ್ಲೆಯನ್ನು ದಾಟಿಯೇ ಹೋಗಬೇಕಾಗಿಲ್ಲ. ದೃಷ್ಟಿಯನ್ನು
ಸರಿಯಾಗಿ ತೆರೆದರೆ ಅವನ ಮುಂದೆಯೇ ಸೌಂದರ್ಯ ನಲಿಯುತ್ತದೆ. ಒಂದು
'ಸ್ತುವನ್ನು ಇರುವಂತೆಯೇ ವರ್ಣಿಸಿದರೂ ಅದು ಕಾವ್ಯವಾಗಬಹುದು.
ಸ್ವಭಾವೋಕ್ತಿ' ಒಂದು ಅಲಂಕಾರಷೇ ಅಲ್ಲವೇ ಎಂಬ ವಿಷಯದಲ್ಲಿ ಬಹು
ೀರ್ಫವಾದ ಚರ್ಚೆ ನಮ್ಮ ಅಲಂಕಾರಶಾಸ್ತ್ರ ದಲ್ಲಿ ನಡೆಯತು; "ಅಲಂ
ಇರ' ಶಬ್ದದ ಪಾರಿಭಾಪಿಕಾರ್ಥವನ್ನು ಪಿಡಿದು ಈ ವಿಷಯವನ್ನು ನಿರ್ಣ
ಬಸುವುದು. ಇಲ್ಲಿ ನಮಗೆ ಪ್ರಕೃತವಲ್ಲ; ಅದು ಅಪ್ಪು ಮುಖ್ಯವೂ ಅಲ್ಲ,
ಸ್ವಭಾವೋಕ್ತಿ 'ಗೆ ಕಾವ್ಯದಲ್ಲಿ ಸ್ಥಾನವುಂಟೇ ಇಲ್ಲವೇ ಎಂಬುದೇ ಮುಖ್ಯ
ಕ್ರೆಶ್ನೆ. ಭಾಮಹಾದಿಗಳು ಇಲ್ಲವೆಂದು ಭಾವಿಸಿದರು; ದಂಡಿ ಉಂಟು
»೦ದನು. ದಂಡಿಯ ಮಾತೇ ಸ್ಥಿರವಾಯಿತು. ಮಹಿಮಭಟ್ಟನು ಸ್ವಭಾ
ಕೋಕ್ಕಿಗೆ ಪ್ರಾಣಪ್ರತಿಪ್ಠಾಪನೆ ಮಾಡುವುದಕ್ಕಾಗಿಯೇ ತನ್ನ ಪ್ರತಿಭಾ
ತ್ತ ಪಿವನ್ನು ನಿರೂಪಿಸಿದನು. ಕವಿದೃಷ್ಟಿ ವಸ್ತುವಿನ ವಿಶೇಷಾಂಶ
1೪ನ್ನು ಕಾಣುತ್ತದೆ; ಹಾಗೆ ಪ ಪ್ರತ್ಯಕ್ಷವಾದ ವಸ್ತುಸ್ವಭಾವದ ಯಥಾ
ಸತ್ತಾದ ನಿರೂಪಣಿಯೇ ಸ್ವಭಾವೋಕ್ತಿ. ಇಲ್ಲಿ ಗಮನಿಸಬೇಕಾದ ಅಂಶ
ಷ್ಟು. ವಸ್ತುವಿನಲ್ಲಿ ಲೀನವಾದಂತಿರುವ ಸೂಕ್ಷ್ಮಾ೦ಶಗಳನ್ನು ಕವಿಯ
ಣ್ಣು ಆರಿಸಿಕೊಳ್ಳುತ್ತ ಚಃ ಅವಕ್ಕೆ ಹೊಸದಾಗಿ ಏನನ್ನೂ ಕಲ್ಪಿಸಿ ಜಿರ
'ದೆ ಕಂಡದ್ದನ್ನು ಕಂಡಂತೆಯೇ ನಿರೂಪಿಸುತ್ತದೆ. ಇದೇ ಸ್ವೈಭಾವೋಕ್ತಿ."
ಇವ್ಯದಲ್ಲಿ ಇದಕ್ಕೆ ಅತಿಶಯವಾದ ಸ್ಥಾನವುಂಟು.
5 ಕಾಂತಂ ಸರ್ವಜಗತ್ಕಾಂತಂ ಲೌಕಿಕಾರ್ಥಾನತಿಕ್ರಮಾತ್ |
ತಚ್ಚ ವಾರ್ತಾಭಿಧಾನೇಷು ವರ್ಣನಾಸ್ಪಪಿ ದೃಶ್ಯಶೇ॥ೃ ...
ಲೋಕಾತೀತ ಐವಾತ್ಯರ್ಧಮಧ್ಯಾರೋಪ್ಯ ವಿವಕ್ಷಿತಃ!
ಯ್ಯೋೊರ್ಧಸ್ಟೆ Sle ವಿದಗ್ಮಾ ನೇತರೇ ಜನಾಃ ॥
(ಕಾವ್ಯಾದರ್ಶ, ;, ೮೫, ೮೯.)
ಮೈದರ್ಭ ಗೌಡಮಾರ್ಗ ಗಳಿಗೆ ದಂಡಿ ತೋರಿಸುವ ಭೇದವು ಬಹುಮಟ್ಟಿಗೆ "ಮಿತಿ
2ತಿ' ಗಳನ್ನು ಅವಲಂಬಿಸುತ್ತದೆ.
6 « ಸೂಕ್ಷ್ಮವಸ್ತುಸ್ನ ಭಾವಸ್ಯ ಯಥಾವತ್ ವರ್ಣನಂ ಸ್ಟಭಾವೋಕ್ತಿಃ ''-
ನಿಯ್ಯಕ : ಅಲಂಕಾರಸರ್ವಸ್ವ, ಸೂ, ೭೮.
೧೨. ಕವಿಸೃಪ್ಪಿ ಸ ೧೦೭
ಪಾಶ್ಚಾತ್ಯ ಕಾವ್ಯಮಾಮಾಂಸೆಯಲ್ಲಿ_ಕಾವ್ಯವು ಅನುಕರಣವೇ
ನಿರ್ಮಾಣವೇ, ಅದು ವಾಸ್ತೆವಿಕವಾಗಿರದೇಕೇ ಲೋಕೋತ್ತರವಾಗಿರ
ಬೇಕೇ ಎಂಬ ಚರ್ಚೆ ಹಿಂದಿನಿಂದ ನಡೆದಿದೆ.” ಈ ಪ್ರಶ್ನೆಗಳಿಗೆ ಕೊಡತಕ್ಕ
ಉತ್ತರಕ್ಕೆ ಅನುಸಾರವಾಗಿ ಭಿನ್ನ ಭಿನ್ನವಾದ ಕಾವ್ಯಪಂಥಗಳೂ ಹೊರ
ಚಿವೆ. ಭರತಖಂಡದಲ್ಲೂ ಈ ಚರ್ಚೆ ಕೆಲವುಮಟ್ಟಿಗೆ ಮೊದಲು ನಡೆ
ಯಿತೆಂಬುದಕ್ಕೆ ಸ್ವಭಾವೋಕ್ತಿಯನ್ನು ಕುರಿತು ಪ್ರಾಚೀನಾಲಂಕಾರಿಕ
ರಿಗಿದ್ದ ಭಿನ್ನಾಭಿಪ್ರಾಯವೇ ಸಾಕ್ಷಿ. ಆದರೆ ರಸಪ್ರಕಾಶವೇ ಕಾವ್ಯದ
ಕೊನೆಯ ಗುರಿಯೆಂದು ಯಾವಾಗ ನಿರ್ಧಾರವಾಯಿತೋ ಆಗ ಈ
ಚರ್ಡೆಯೂ ಮುಗಿಯಿತು. ಕೆಲವು ಪೇಳೆ ವಸ್ತುಸ್ಥಿತಿಯ ಸರಳ ವರ್ಣನೆ
ಯಿಂದಲ್ಲೇ ರಸವುಕ್ಕಬಹುದು ; ಪ್ರೌಢಕಲ್ಪನೆಗಳನ್ನು ಅಲ್ಲಿಗೆ ಸೋಕಿಸು
ವುದೇ ಅನುಚಿತವಾಗಬಹುದು; ಇನ್ನು ಕೆಲವು ಪೇಳೆ ಶುಪ್ಕವೆಂದು
ತೋರುತ್ತಿದ್ದ ವಸ್ತು ವಿನಲ್ಲಿ ಕವಿಯ ಕಲ್ಪನಾಮಪಿಮೆಯಿಂದ ರಸ ಸೆಂಚಾ
ರವಾಗಬಹುದು.* ಹೀಗೂ ಉಂಟು ; ಹಾಗೂ ಉಂಟು. " ಭಿನ್ನಂ ದ್ವಿಧಾ
ಸ್ವಧಾವೋಕ್ತಿರ್ವ ಕ್ರೋಕ್ತಿಶ್ಚೇತಿ ವಾಜ್ಮಿಯಂ'' . (1, ೩೬೩) ಎಂದು
ದಂಡಿ ಹೇಳಿದನು. ಈ ಎರಡು ತಬ್ದಗಳನ್ನೂ ವಿಶಾಲವಾದ ಅರ್ಥದಲ್ಲಿ
ಗ್ರಷಿಸಿದ ಪಕ್ಷಕ್ಕೆ, ಇದೇ ಭಾರತೀಯ ಕಾವ್ಯ ಮಾಮಾಂಸೆಯ ಕೊನೆಯ
ನಿರ್ಣಯ.* ಅನುಕರಣ ನಿರ್ಮಾಣಗಳೆರಡಕ್ಕೂ ಕಾವ್ಯದಲ್ಲಿ ಸ್ಥಾನವಿದೆ.
ರಸದ ದೃ ಪ್ವಿಯಿಂದ ಪರಿಶೀಲಿಸಿದಲ್ಲಿ, ಇವೆರಡೂ ಒಂದಕ್ಕೊಂದು ವಿರೋಧಿ
ಗಳಲ್ಲ; ಪರಸ್ಪರ ಪೂರಕಗಳು ಎಂಬುದು ವಿದಿತವಾಗುತ್ತದೆ.
7 Gilbert Murray: Essays and Addresses—ಈ ಗ್ರಂಥದಲ್ಲಿ
Poesis and 11107661 ' ಎಂಬ ಪ್ರಬಂಧವನ್ನು ನೋಡಿ.
*ಪಸ್ತುಧೃನಿಯಲ್ಲ «« ಕವಿಪ್ರೌಢೋಕ್ತಿನಿಷ್ಟನ್ನ '', "ಸ್ಪತಃಸ೦ಭವಿ'' ಎಂಬ ಎರಡು
ಬಗೆಗಳನ್ನು ಧೃನಿಪ್ರಸ್ಥಾನದವರು ಎಂಗಡಿಸ ತ್ತಾರಷ್ಟೆ. ಇದರ ತಳದಲ್ಲರುವುದೂ ಅನುಶ್ರ
ಮವಾಗಿ ವಕ್ರೋಕ್ತಿ ಸ್ಪಭಾವೋಕ್ತಿಗಳ್ಳೆ ಎರಡರಿಂದಲೂ ಕಾವ್ಯಾನು ಭವ ಒದಗುತ್ತದೆ;
9 ಈ ಹೇಳಿಕೆ ಸರಿಯೆಂಬುದನ್ನು ಅಭಿನವಗುಪ್ತನ ವಾಕ್ಯವೊಂದು ದೃಢಪಡಿಸುತ್ತದೆ.
" ಕಾವ್ಯೇಃಪಿ ಚ ಲೋಕನಾಟ್ಯಧರ್ಮಿಸ್ಥಾನೀಯೇ [ನ] ಸ್ವಭಾವೋಕ್ತಿ ವಕ್ರೋಕ್ತಿ ಪ್ರಕಾರ
ದ್ವಯೇನ ಆಲೌಕಿಕ ಪ್ರಸನ್ನ ಮಧುರೌಜಸ್ಟಿಶಬ್ದಸಮರ್ಶg್ವಮಾಣ ವಿಭಾವಾದಿಯೋಗಾತ್
ಇಯಮೇವ ರಸವಾರ್ತಾ ” (ಧ್ವನ್ಯಾ. ಲೋಚನ, ಪು. ೬೯). ನಾಟ್ಯದಿಂದಲೂ ಕಾವ್ಯ
ದಿಂದಲೂ ರಸನಿಷ್ಟತ್ತಿಯಾಗುವ ಶ್ರಮ ಒಂದೇ ಬಗೆಯದೆಂದು ಅಭಿನವಗುಪ್ತನ ಅಶಯ.
ದೃತ್ಯಪಾದ ನಾಟ್ಯದಲ್ಲಿ ಲೋಕಧರ್ಮಿ ನಾಟ್ಯಧರ್ಮಿಗಳಿರುತ್ತವೆ ; ಅವಕ್ಕೆ ಸಮನಾಗಿ
ಶ್ರವ್ಯವಾದ ಕಾವ್ಯದಲ್ಲಿ ಸ್ಪಭಾವೋಕ್ತಿ ವಕ್ರೋಕ್ತಿಗಳು.
೧೮೮ ಭಾರತೀಯ ಕಾವೃಮಾಮಾಂಸೆ
ಈ ವಿಚಾರ ಇಷ್ಟಕ್ಕೇ ನಿಲ್ಲುವುದಿಲ್ಲ. ಇದು ನಿಜವಾಗಿ "“ಸೌಂದರ್ಯ'”
ಸ್ವರೂಪದ ಚರ್ಚೆ. ಸಇಂದರ್ಯವೆಂದರೇನು ?--ಎಂಬ ಪ್ರಶ್ನೆಗೆ ಪಾಶ್ಚಾತ್ಯ
ತತ್ತ್ವಜ್ಞ ರಲ್ಲಿ ಒಬ್ಬೊಬ್ಬರು ಒಂದೊಂದು ವಿಧವಾಗಿ ಉತ್ತರ ಕೊಟ್ಟಿ
ದ್ದಾ ರೆ. ಇದು ವಸ್ತು ವಿನಲ್ಲಿದೆಯೆ, ಅದನ್ನು ಗ್ರಪಿಸುವ ಚಿತ್ತ ದಲ್ಲದೆಯೆ
ಎರಡರಲ್ಲೂ ಇದೆಯೆ ?- ಇದು ದೊಡ್ಡ ಸಮಸ್ಯೆ. ಅದರ ತೊಡಕನ್ನು ವಿವ
ರಿಸಲು ಇಲ್ಲ ನಮಗೆ ಅವಕಾಶವಿಲ್ಲ. ಆದರೆ ಈ ಪ್ರಶ್ನೆಗೆ ಭಾರತೀಯ
ಕಾವ್ಯಮಾಮಾ೦ಸೆಯ ಉತ್ತರವೇನೆ೦ಬುದನ್ನು ಗ್ರಹಿಸುವುದು ಕಪ್ಪವಲ್ಲ.
ಕಾವ್ಯದ ಸಾರ ರಸ; ಇದು ಆನಂದಮಯವಾದ ಅನುಭವವಿಶೇಷ.
ಸಹೃದಯನಿಗೆ ಈ ರಸಾನುಭವವನ್ನು ಯಾವಯಾವುದು ಕೊಡಬಲ್ಲುದೋ
ಅದೆಲ್ಲವೂ ಸುಂದರ; ಈ ಆಹ್ಣಾದಕ್ಕೆ ಭಂಗತರತಕ್ಕದ್ದೇ ದೋಷ.
ದೋಪವು ಕೂಡ ಸ್ಥಾನ ತಪ್ಪಿಬಂದಾಗ ದೋಷವೇ ಹೊರತು ನಿತ್ಯವಾಗಿ
ದೋಷವಲ್ಲ. " ರಮಣೀಯ'' ಎಂಬ ಶಬ್ದವನ್ನು ತನ್ನ ಕಾವ್ಯಲಕ್ಷಣದ
ಲ್ಲಿಯೇ ಉಪಯೋಗಿಸಿದ ರಸಗಂಗಾಥರಕಾರನು " ಪೌಂದರ್ಯ'ವನ್ನು ಹೀಗೆ
ವಿವರಿಸುತ್ತಾನೆ: "" ಸೌಂದರ್ಯಂ ಚ ಚಮತ್ಕೃತ್ಯಾಧಾಯಕತ್ವಂ ಚಮ
ತ್ಶೃತಿಃ ಆನಂದನಿಶೇಪಃ ಸಹೈ ದಯಹೃ ದಯಪ್ರಮಾಣಕಳ' (ಪು. ೧೫೭)
(""ಸೌಂದರ್ಯಪೆ೦ದರೆ ಚಮತ್ಕಾ ರಜನಕವಾದ ಗುಣ. ಚಮತ್ಕಾರವೆಂದರೆ
ಆನಂದವಿಶೇಷ ; ಇದಕ್ಕೆ ಸಹೃದಯರ ಹೃದಯವೇ ಪ್ರಮಾಣ.'') ಸೌಂದ
ರ್ಯಾನುಭವದಿಂದ ಬರುವ ಆನಂದವು ಲೌಕಿಕವಾದ ಆಹ್ಲಾದವಲ್ಲ; ಅದ
ರಂತೆ ಪ್ರಯೋಜನಾಪೇಕ್ಷಿಯಲ್ಲ. ಇಲ್ಲಿಯ ಆನಂದವು ಕೇವಲ ಭಾವನೆ
ಯಿಂದ ಬರತಕ್ಕದ್ದು. ಚಿತ್ತವಿಶ್ರಾಂತಿಯೇ ಇದರ ಲಕ್ಷಣ... ಈ ವಿಷಯ
ಮುಂದೆ ಒಂದು ಅಧ್ಯಾಯದಲ್ಲಿ ಸ್ಪಪೈವಾಗುತ್ತದೆ.
ಲೋಕವ್ಯವಹಾರದಲ್ಲಿ ಸುಂದರ, ಮನೋಹರ ಎಂಬ ಶಬ್ದಗಳನ್ನು
ಸಾಮಾನ್ಯವಾಗಿ ಪ್ರಿಯ, ಇಷ್ಟ ಎಂಬ ಅರ್ಥದಲ್ಲಿ ಉಪಯೋಗಿಸುವುಡೇ
ಹೆಚ್ಚು. ಬೆಳುದಿಂಗಳು, ಅರಳುಮಲ್ಲಿಗೆ, ನಗೆಮೊಗ ಮೊದಲಾದವು ಸುಂದ
ರವೆನ್ನುವುದು ನಿಜ; ಆದರೆ ಎಷ್ಟೋ ವೇಳೆ ಲೋಕದಲ್ಲಿ ಇವುಗಳನ್ನು
ನೋಡಿದಾಗ ನಾವು ಪಡೆಯುವ ಉಲ್ಲಾಸಡೊಡನೆ ಉಪಭೋಗಾಭಿಲಾ:
ಷೆಯೂ ಚಿರೆದಿರುವುದುಂಟು ; ಆದಕಾರಣ ಆ ಘಳಿಗೆಯಲ್ಲಿ ಅವು "ಸುಂದರ?
ವಾಗಿ ವಿಶ್ರಾಂತಿರೂಪವಾದ ರಸಾನುಭವವನ್ನು ಕೊಡುವುದಕ್ಕಿಂತ,
೧೨. ಕವಿಸೈಪ್ಟಿ ೧೮೯
ಪ್ರಿಯ 'ವಾಗಿ ಕಾಮವನ್ನು ಕೆರಳಿಸುವುವೆಂದು ಹೇಳತಕ್ಕದ್ದೇ ಉಚಿತ. 18
ಲೋಕದಲ್ಲಿ ಸೌಂದರ್ಯವನ್ನು ಕಾಣಬೇಕಾದರೆ, ವ್ಯಾವಹಾರಿಕ ದೃಷ್ಟಿಯನ್ನು
ಬಿಡಬೇಕು. ಆಗ, ಬೆಳುದಿಂಗಳು, ಹುಣ್ಣಿಮೆಯ ಚಂದ್ರ--ಈ ಮೊದಲಾದ
ಸಾಮಗ್ರಿಯಲ್ಲಿಯೇ ಅಲ್ಲ; ಬೀಪಣವೆಂದು ನಾವು `ತೆಯುವ ಸನ್ನಿ ಿವೇಶೆ
ಗಳಲ್ಲೂ ಮೇಯ ಗೋಚರಿಸುತ್ತದೆ :
ಗಗನಂ ಚ ಮತ್ತಮೇಘಂ ಧಾರಾಲುಲಿಶಾರ್ಜುನಾನಿ ಚ ವನಾನಿ |
ನಿರಹಂಕಾರ ಮೃಗಾ೦ಕಾ ಹರಂತಿ ನೀಲಾ ಅಪಿ ನಿಶಾ |!
“" ಮದಿಸಿದ ಮೋಡಗಳು ಕವಿದ ಗಗನವೂ, ಮಳೆಯ ಧಾರೆ ಅರ್ಜುನ
ವೃಕ್ಷಗಳ ಮೇಲೆ ಸುರಿಸುರಿದು ನಲುಗಿಸಿರುವ ಅರಣ್ಯಗಳೂ, ಚಂದ್ರನ
ದರ್ಪ ವುಡುಗಿಹೋದ ಕಾರಿರುಳುಗಳೂ ಕೂಡ ಮನಸ್ಸನ್ನು ಸೆಳೆಯುತ್ತವೆ.''
ಸರಿಯಾದ ಕಣ್ಣಿನಿಂದ ನ್ನೋಡತಕ್ಕ ವನಿಗೆ ಲೋಕದಲ್ಲಿ ಸೌಂದರ್ಯವು
ಕಾಣದ ಎಡೆಯಿಲ್ಲ. ಸೃಷ್ಟಿಯೇ ಒಂದು ಅದ್ಭುತ ನಾಟಕ, ಮನುಪ್ಮರು
ಇದರಲ್ಲಿ ಕ್ಷಣಕ್ಷಣಕ್ಕೂ ರಸಾಸ್ಕಾದ ಮಾಡಬಹುದು. ಈ ವಿಷಯವನ್ನು
ಭಟ್ಟನಾಯಕನು ಧೀರಮನೋಹರವಾದ ಈ ಪ್ರಾರ್ಥನಾಪದ್ಯದಲ್ಲ ಪ್ರತಿ
ಪಾದಿಸಿದ್ದಾನೆ :
ನಮಸ್ಥೆ ಸಾಲೋಕ್ಯ ನಿರ್ಮಾಣತವಯೇ ಶಂಭವೇ ಯತಃ |
ಪ್ರತಿಕ್ಷಣಂ ಜಗನ್ನಾ ಟೃಪ್ಪ ಪ್ರಯೋಗ ರಸಿಕೋ ಜನಃ ॥12
[ನವಿಸುತೆನು ಮೂಲೋಕವನು ವಿ.
ವಿ೯ಸಿದ ಕವಿ ಶಂತರಸಿಗೆ ;
ನಿಮಿಷನಿಮಿಷಕು ವಿಶ್ಚರಂಗದ
ನಾಟಕದ ನೋಟದಲಿ ಜನರಿಗೆ
ರಸವನುಕ್ಕಿಸುತಿಹನಿಗೆ ! ]
10 ಕಾಪ್ಯದಲ್ಲ ಇವು ಬಂದಾಗ ನಿಯತವಾಗಿ ರಸಾನುಭವಕ್ಕೇ ಪೋಪಕಗಳಾಗು
ತ್ತವೆ. ಇಲ್ಲ ಉಪಭೋಗದ ಪ್ರಶ್ನೆಯೇ ಏಳುವುದಿಲ್ಲ.
1 ಐದು ವಾಕೃತಿ ರಾಜನ "ಗಉಸತನಹೋ' ಕಾವ್ಯದ ಒಂದು ಪ್ರಾಕೃತ ಪದ್ಯದ
(೪೦೯) ಸಂಸ್ಕೃತಚ್ಛಾಯೆ , ಧ್ಯನ್ಯಾಲೋಕದಲ್ಲೂ ಉದಾಹೃತವಾಗಿದೆ. (ಪು.೬೩)
12 ಇಟ ಭಟ್ಟ `ನಾಸಕನ ಉಕ್ತಿಯೆಂದು "ಅಭಿನನಭಾರತಿಯಲ್ಲಿ (1. ಪು. ೫)
ಉಸಾಹೃತನಾಗಿಡೆ, ಈ ಶದೃಪು ಭಟ್ಟನಾಯಕನ " ಹೃದಸುದರ್ಶಣ'ದ ವಂಗಳಶ್ಲೋಕ
ವಾಗಿದ್ದರೂ ಇರಬಹುದು. 7, R. Chintamani : ‘Fragments of Bhatta-
Nayaka’ (70811, 1, ಪು. 267 ನೊಡಿ).
೧೯೦ ಭಾರತೀಯ ಕಾವ್ಯಮಾಮಾಂಸೆ
ಪ್ರಕೃತಿಸೌಂದರ್ಯದ ವಿಷಯದಲ್ಲಿ ಭಾರತೀಯ ದಾರ್ತನಿಕರಲ್ಲೇ
ಭಿನ್ನಾಭಿಪ್ರಾಯಗಳುಂಟು. ಸಾಂಖ್ಯರಿಗೂ ಪೇದಾಂತಿಗಳಿಗೂ ಇರುವ
ಭೇದವನ್ನು ಪ್ರೊ. ಎಂ. ಹಿರಿಯಣ್ಣನವರು ಸವಿಸ್ತರವಾಗಿ ಉಪಪಾದಿಸಿ
ದ್ದಾರೆ. ಅವರ ಕೆಲವು ವಾಕ್ಯಗಳನ್ನು ಪೀಗೆ ಕನ್ನಡಿಸಬಹುದು :13 ""ಸಾಂಖ್ಯ
ದರ್ಶನದ ಮೇರೆಗೆ, ಪ್ರಕೃತಿ ಸಮಗ್ರವಾಗಿ ಸುಂದರವಲ್ಲ: ಅದರಲ್ಲಿ
ಸುಂದರವಾದ ಅಂಶಗಳೂ ಉಂಟು, ವಿರೂಪವಾದ ಅಂಶಗಳೂ ಉಂಟು,
ಪ್ರಕೃತಿಯಲ್ಲಿನ ವಸ್ತುಗಳಿಂದ ಅಆಹ್ಲಾದವೇ ಒದಗುವುದಿಲ್ಳವೆಂದೇನೊ
ಆ ದರ್ಶನ ಹೇಳುವುದಿಲ್ಲ. ಆದರೆ ಸರ್ವಕಾಲದಲ್ಲಿಯೂ ಸರ್ವರಿಗೂ
ಆಹ್ಲಾದ ಕೊಡತಕ್ಕದ್ದು ಪ್ರಕೃತಿಯಲ್ಲಿ ಏನೂ ಇಲ್ಲವೆಂದು ಅವರ ಅಭಿ
ಪ್ರಾಯ. ಅವಿಮಿಶ್ರಿತವಾದ ಕೇವಲ ಸುಖವನ್ನು ಪಡೆಯಲು ವ್ಯಾವ
ಹಾರಿಕ ಜಗತ್ತನ್ನು ಬಿಟ್ಟು ಬೇರೆಯ ಕಡೆಗೇ ನಾವು ತಿರುಗಬೇಕು. ಇತ್ತ
ಪೇದಾಂತದರ್ಶನದ ಮೇರೆಗೆ, ಸರ್ವವೂ ಸುಂದರ ; ವಿಶ್ವದ ಆಂತರಿಕ
ಸಾಮರಸ್ಯವನ್ನು ಧಂಗಗೊಳಿಸತಕ್ಕದ್ದು ಯಾವುದೂ ಅದರಲ್ಲಿಲ್ಲ. ..
ಯೋಗಿ ಶ್ರೇಪ್ಠತಮನಾದ ಕವಿ. ಏಕೆಂದರೆ ಎಲ್ಲದರಿಂದಲೂ ಅವನಿಗೆ
ಆನಂದವೊದಗುತ್ತದೆ. "ಸರ್ವವೂ ಆತ್ಮ ' ಎಂಬ ಯೋಗಿಯ ಜ್ಞಾ ನವು
ನಮಗೆ ಇಲ್ಲದಿದ್ದರೂ ನಾವು ಕೊಡ ಪ್ರಕೃ ತಿಯಿ೦ದ ಆಗಾಗ ರಸಾನುಭವ
ಹೊಂದಬಹುದು. ಆದರೆ ವಿಶ್ವಸೌಂದರ್ಯವನ್ನು ಕಾಣಲು ನಮ್ಮ ಜಡತೆ
ಸಾಮಾನ್ಯವಾಗಿ ಅಡ್ಡಿ ಯಾಗುತ್ತದೆ. ಸೌಂದರ್ಯಗಾ )ಿಹಿಯಾದ ಕಣ್ಣು ಳ್ಳ
ಕವಿಯಾದರೆ ನಮಗೆ ಸಾಧ್ಯವಿಲ್ಲದ ಕಡೆಗಳಲ್ಲೂ ಪ್ರಕೃತಿಯ ಸೊಬಗನ್ನು
ಸವಿಯುತ್ತಾನೆ ; ತನ್ನ ಅನುಭವಕ್ಕೆ ಸ್ವೈರಸವೂದ ರೂಪವನ್ನು ಸಹಜವಾಗಿ
ಕೊಟ್ಟು, ಆ ಮೂಲಕ ನಮ್ಮ ಕಣ್ಣನ್ನೂ ತೆರೆದು ನಾವು ಕಾಣದೆ ಬಿಟ್ಟ
ದ್ವನ್ನು ತೋರಿಸುತ್ತಾನೆ. ಎಂದರೆ, ನಮಗೆ ಹೃದ್ಯವಾಗುವಂತೆ ಅಭಿವ್ಯಕ್ತಿ
ಗೊಳಿಸಿದ ಪ್ರಕೃತಿಯೇ ಕಲೆ... . ವೇದಾಂತದ ಪ್ರಕಾರ, ಕಲೆ ಪ್ರಕೃ
ತಿಯ ಉತ್ತಮಾಂಶವನ್ನು ಪ್ರಕಾತಪಡಿಸುತ್ತ ಣಿ ಸಾಂಖ್ಯದ ಪ್ರಕಾರ,
ಪ್ರಕೃತಿಗಿಂತಲೂ ಉತ್ತಮವಾದ ಬೇರೊಂದು ಲೋಕವನ್ನು ನಿರ್ಮಿಸು
ತ್ರಡೆ.'
ಎಡಿ
13 M, Hiriyanna : ' Indian Aesthetics’ (P.0.C., Poona, Vol-
IT, pp: 249-50).
೧೨. ಕವಿಸೃಷ್ಟಿ ೧೯೧
ಪ್ರಕೃತಿಸಾಂದರ್ಯವನ್ನು ಕುರಿತು ದೃಷ್ಠಿ ಸ ಯಾವುದೇ ಆಗಿರಲಿ,
ಕಲಾಸೌಂದರೃವನ್ನು ಕುರಿತು ಭಿನ್ನಾಭಿಪ್ರಾಯ ಯಾರಿಗೂ ಇಲ್ಲ,
ಸೃಷ್ಟಿಯ ಅಂಶಅಂತದಿಂದಲೂ ರಸವನ್ನು ಕವಿ ತೆಗೆಯಬಲ್ಲನು. ಲೋಕದಲ್ಲಿ
ಅದನ್ನು ರಮ್ಯಪೆಂದು ಕರೆಯಿರಿ, ವಿಕೃತವೆಂದು ಕರೆಯಿರಿ. ಕವಿಯ ಭಾವ
ನೆಗೆ ಒಳಪಟ್ಟಮೇಲೆ ಅದೆಲ್ಲ ಒಂದೇ ಬಗೆಯಾಗಿ ರಸಮಯವಾಗುತ್ತದೆ.
ರಮೃ್ಯ೦ ಜುಗುಪ್ಪಿತಮುದಾರಮಥಾಪಿ ನೀಚ೦
ಉಗ್ರಂ ಪ್ರಸಾದಿ ಗಹನಂ ವಿಕೃತಂ ಚ ವಸ್ತು |
ಯದ್ಯಾಪ್ಯವಸ್ತು ಕವಿಭಾವಕಭಾವ್ಯಮಾನಂ
ತನ್ನಾಸ್ತಿ ಯನ್ನ ರಸಭಾವಮುಪೈೆತಿ ಲೋಕೇ ॥ (ದಶರೂಪಕ, ;-೮೫)
ಸ ರಮ್ಯ, ಅಸಹ್ಯ, ಉದಾರ, ನೀಚ, ಉಗ್ರ, ಪ್ರಸನ್ನ, ಕ್ಲಿಷ್ಟ
ವಿಕೃತ-ವಸ್ತು ಪೀಗೆ ಯಾವುದಾದರೂ ಆಗಿರಲಿ, ಕಡೆಗೆ ವಸ್ತುವಲ್ಲದ್ದೇ
ಆಗಿರಲಿ : ಕವಿಭಾವಕರ ಭಾವನೆಗೆ ವಿಷಯವಾದ ಮೇಲೆ ರಸಮಯ
ವಾಗದ್ದು ಲೋಕದಲ್ಲಿ ಏನೊಂದೂ ಇಲ್ಲ.”
ಈ ವಿಷಯವನ್ನು ಎಷ್ಟೆಷ್ಟು ವಿವರಿಸಿದರೂ ಕಡೆಗೆ ಫಲಿತಾಂಶ
ಇಷ್ಟೇ : ನಾವು ಕಣ್ಣಿದುರಿಗೆ ನೋಡಿದಾಗ ಮನೋಹರವಾಗಿ ಗೋಚರಿ
ಸದ್ದು, ಕವಿವಾಣಿಯ ಮೂಲಕ ಕಾಣಿಸಿದಾಗ ಮಿರುಗುತ್ತದೆ ; ಕವಿ
ತನ್ಮಯತೆಯಿಂದ ಅದನ್ನು ಪರಿಭಾವಿಸುವುದೇ ಇದಕ್ಕೆ ಕಾರಣ; ಅವನು
ಹೀಗೆ ಸಾಧಿಸಿದ ಸೌಂದರ್ಯವನ್ನು ನಾವೂ ಈಗ ತನ್ಮಯತೆಯಿಂದ ಅನುಭವಿ
ಸುತ್ತೇಷೆ.
ಸೃಷ್ಟಿಯಲ್ಲಿ ನಮ್ಮ ಸ9೦ದರ್ಯಾನುಭವವನ್ನು ಕವಿ ಹೇಗೆ ಹೆಚ್ಚಿ ಸಬಲ್ಲ
ನೆಂಬುದಕ್ಕೆ ಒಂದು ಉದಾಹರಣಿಯನ್ನು ಕೊಟ್ಟು ಈ ಭಾಗದ ವಿಚಾರ
ವನ್ನು ಮುಗಿಸಬಹುದು: ಸುರಹೊನ್ನೆಯ ಹೂವನು ೩ ಎಷ್ಟು ಜನ
ನೋಡಿಲ್ಲ! ದೇವರ ಪೂಜೆಗೆಂದು ಚಿಕ್ಕಂದಿನಲ್ಲಿ ಅದನ್ನು ಕೊಯ್ದು ತಂದ
ಶ್ರಮ ಮಾತ್ರ ಅವರ ನೆನಪಿನಲ್ಲಿ ಉಳಿದಿದ್ದೀತು. ಎಷ್ಟೋ ಜನ ಅದನ್ನು
ಅಲಕ್ಷ $ ಮಾಡಿರಲೂ ಬಹುದು. ಆದರೆ,
24 ಕವಿಶಕ್ತ್ಯರ್ಪಿತಾ ಭಾವಾ ಃ ತನ್ಮಯಾಭಾವಯೋಗತಃ |
ತಥಾ ಸ್ಫುರಂತ್ಯಮಾ ಕಾವ್ಯಾತ್ ನ ತಥಾಧ್ಯಕ್ಷತಃ ಕಿಲ!
(ವೃಕ್ತಿವಿವೇಕ, ಪ, ೭೩.)
೧೯೨ ' ಭಾರತೀಯ ಕಾವ್ಯಮಾಮಾಂಸು
ಎಸೆಬ್ಗಳನೆಯ್ದೆ ಕ೦ಡರಿಸಿ ಮುತ್ತಿ ಮೊಳಲ್ಲಿ ಸುವರ್ಣಚೂರ್ಣಮಂ
ಪಸರಿಸಿ ಕೇಸರಾಕೃತಿಯೊಳಲ್ಲಿಗೆ ಕರ್ಣಿಕೆಯ೦ದಮಾಗೆ ಕೀ!
ಲಸಿ ಪೊಸಶಪ್ಪ ಮಾಣಿಕದ ನುಣ್ಣರಲಂ ಮಧು ಮನ್ಮಥಂಗೆ ಬ
ಣ್ಲಿಸಿ ಸಮೆದಂತೆ ತೋಖವುದು ಪೂಗಳೊಳ್ಲೇಂ ಸುರಹೊನ್ನೆ ಚೆನ್ನನೋ॥!*
ಎಂಬ ಪಂಪನ ಮೆಚ್ಚಿಕೆಯ ಪದ್ಯವನ್ನು ಓದಿದ ಬಳಿಕ ಸುರಹೊನ್ನೆಯನ್ನು
ಮತೆಯುರಾಡತೂ: ಸಾಧ್ಯವೆ ? ಹತ್ತಿ ರವಿದ್ದ ರೂ ನಾವು ಉಪೇಕ್ಷಿಸಿ
ಮತೆತುಬಿಟ್ಟಿದ್ದ ಒಂದು ನಿಧಿಯನ್ನು ಮತ್ತೆ “ಗಳಿಸಿದ ಅನುಭವ ಇಲ್ಲಿ
ಉಂಟಾಗುತ್ತದೆ. ಪಂಪನ ವರ್ಣನೆ ಅಕ್ಷರಶಃ ನಿಜ; ಹೂವನ್ನು ಎದುರಿ
ಗಿಟ್ಟುಕೊಂಡು ಪದ್ಯವನ್ನು ಪರೀಕ್ಷಿಸಬಹುದು. ಆದರೆ ನಾವು ಹಿಂದೆ
ಹೂವನ್ನು ನೋಡಿದ್ದಾಗ ಕವಿಯ ತಲ್ಲೀನತೆ ನಮಗಿರಲಿಲ್ಲ; ಅವನ
ಸಾದೃತ್ಯಜ್ಞಾನ ನಮಗೆ ಬರಲಿಲ್ಲ. ಪದಾರ್ಥದ ಚೆಲುವು ಮನಸ್ಸನ್ನು
ಹಿಡಿಯಲಿಲ್ಲ.
ಕವಿಸೃಪ್ಟಿಯ ಅಪೂರ್ವತೆಗೆ ಬೆರಗಾಗಿ ರಸಿಕರು ಅದನ್ನು ಬಾಯಿ
ತುಂಬ NE ಆದರೆ ಕೆಲವರ ದೃಷ್ಟಿಯಲ್ಲಿ ಇದೇ ಹಲವು ವೇಳೆ
ದೋಷವಾಗಿ ಪರಿಣಮಿಸಿದೆ. ಮೊದಲಿನಿಂದಲೂ ಕಾವ್ಯದ ಮೇಲೆ ಹಲವು
ಆಪಾದನೆಗಳು ಬಂದಿವೆ. "" ಕಾವ್ಯಾಲಾಪಾಂತ್ಸ ವರ್ಜಯೇತ್” ಎಂಬ
ನಿಷ್ಕುರೋಕ್ತಿಗಳು ಕೂಡ ಆಗಾಗ ಹೊರಟು ಜಗತ್ತಿನಿಂದ ಕಾವ್ಯವೆಂಬ
ವಿಷವನ್ನು ಹೊರದೂಡಬೇಕೆಂದು ಪ್ರಯತ್ನಿಸಿವೆ ಕುಶಲರಾದ ವ್ಯಾಖ್ಯಾನ
ಕಾರರು ತಮ್ಮ ಮೆಚ್ಚಿಕೆಯ ಕಾವ ಗಳನ್ನು ಹೇಗಾದರೂ ಉಳಿಸಿಕೊಳ್ಳ
ಬೇಕೆಂಬ ಉದ್ದೇಶದಿಂದ, ಮೇಲಿನ ವಿಧಿಯಲ್ಲಿ " ಕಾವ್ಯಾಲಾಪವೆಂಬುದು
ಅಸತ್ಕಾವ್ಯವನ್ನು ಮಾತ್ರ ಕುರಿತು ಹೇಳಿದ್ದು ” ಎಂದು ಅರ್ಥ ಮಾಡಿ
ನುಣಿಚಿಕೊ೦ಡೂ ಇದ್ದಾರೆ. ಕಾವ್ಯವನ್ನು ಏಕೆ ಹೇಳಬಾರದು, ಕೇಳ
ಬಾರದು ಎಂಬುದಕ್ಕೆ ಕೊಡತಕ್ಕ ಮೂರು ಕಾರಣಗಳನ್ನು ರಾಜಶೇಖರನು
ಸಂಗ್ರಪಿಸಿದ್ದಾನೆ : ಕಾವ್ಯ ಸುಳ್ಳನ್ನು ಹೇಳುತ್ತದೆ ; ಕೆಟ್ಟದನ್ನು ಬೋಧಿಸು
ತ್ತದೆ; ಅಶ್ಲೀಲವನ್ನು ವರ್ಣಿಸುತ್ತದೆ. ಇದಿಷ್ಟೂ ದಿಟವಾದರೆ ಕಾವ್ಯ
15 ಅದಿ ಪುರಾಣ, xi. ೧೧೬.
16" ಅಸತ್ಯಾರ್ಧಾಭಿಧಾಖತ್ಯಾನ್ನೋಪಡೇಪ್ಸವ್ಯಂ ಕಾವ್ಯಂ'' ... " ಅಸದು
ಪದ್ದೇಶಕತ್ಪಾತ್ ತರ್ಷಿ ಮೋಪದೆಃಪ್ಸೈವ್ಮಂ ಕಾವ್ಯಂ'' . . . ""ಅಸಭಗ್ಯಾರ್ಥಾಭಿಯಿತ್ಟಾನ್ನೋ
ಪದೇಪ್ಪವ್ಯಂ ಕಾವ್ಯಂ '' (ಕಾವ್ಯಪಿಸಾ ಮಾಸಾ, ೨೪.೨೮).
೧೨. ಕವಿಸೃಷ್ಟಿ ೧೯೩
ವನ್ನು ಉಚ್ಛಾಟನೆ ಮಾಡಬೇಕಾದದ್ದೇ ಸರಿ. ಆದ್ಧರಿಂದ ಈ ಆಪಾದನೆ
ಗಳನ್ನು ಕೆಲವು ಮಟ್ಟಿಗಾದರೂ ಪರಿಶೀಲಿಸತಕ್ಕದ್ದು ಅಗತ್ಯ.
ಮೊದಲು, ಕಾವ್ಯದಲ್ಲರುವ ಅಸತ್ಯಾಂಶವನ್ನು ಕುರಿತು ವಿಚಾರ
ಮಾಡೋಣ. ಒಂದು ಪದಾರ್ಥದ ಅತಿಶಯವನ್ನು ತೋರಿಸಜೇಕೆ೨ದ್ಲೋ,
ಒಂದು ಭಾವವನ್ನು ಮನಮುಟ್ಟಿಸಜೇಕೆಂದೋ, ಉದ್ಧೇಶ ಪೂರ್ವಕವಾಗಿ
ವಸ್ತುಸ್ಥಿತಿಯ ಗೆರೆಯನ್ನು ಮಾರಿ ವರ್ಣಿಸುವುದು ಕವಿಗಳ ಪದ್ಮತಿ. ಈ
ಒಗೆಯ «ಆ ಅರ್ಥವಾದ ''ವು ವೇದಶಾಸ್ತ್ರಾದಿಗಳಲ್ಲ ಕೂಡ ಉಂಟೆಂದೂ,
ಕಾವ್ಯಕ್ಕೇ ವಿಲಕ್ಷಣವಲ್ಲವೆಂದೂ ರಾಜಶೇಖರನು ನಿರೂಪಿಸಿದ್ದಾ ನೆ. ಇಂಥ
ಕಡೆಗಳಲ್ಲೆಲ್ಲಾ ಹೇಳುವವನ ಆಶಯವೇನೆಂಬುದನ್ನು ಗಮನದಲ್ಲಿ ಇಟ್ಟು
ಕೊಳ್ಳದಿದ್ದರೆ ಟೀಕಾಕಾರನು ಕರ್ತವ್ಯಲೋಪ ಮಾಡಿದಂತಾಗುತ್ತದೆ.
ಕಾವ್ಯದಲ್ಲಿ ತಬ್ದ ವಾಚ್ಯಾರ್ಥಗಳೆರಡೂ ಬೇರೊಂದು ಅರ್ಥವನ್ನು ಸೂಚಿ
ಸುವ ಸಾಧನ ಮಾತ್ರ. ಅವುಗಳಿಗೆ ಅತಿಶಯವನ್ನು ಆರೋಪಿಸಿದ್ದರಿಂದ
ಒಳತಿರುಳು ವಾಚಕನ ಮನಸ್ಸಿಗೆ ಬೇಗ ಮುಚ್ಚಿದರೆ ಕವಿಯ ಉದ್ದೇತ
ಫಲಿಸಿತು ; ಅವನು ಹಿಡಿದ ದಾರಿಯೂ ನಿರ್ದೋಪವಾಯಿತು.
ಆದರೆ ಮೇಲಿನ ಆಕ್ಷೇಪಣೆಯ ವ್ಯಾಪ್ತಿ ಇಪ್ಪ ಕ್ಕೇ ನಿಲ್ಲುವುದಿಲ್ಲ.
ಶಾಸ್ತ್ರವು ವಸ್ತುವಿನ ನಿಜಸ್ಥಿತಿಯನ್ನು--ಸತ್ಯವನ್ನು--ಜೋಧಿಸುತ್ತದೆ.
ಕಾವ್ಯದಲ್ಲಿ ನಮಗೆ ಸಿಕ್ಕು ವುದೆಲ್ಲ ಬರಿಯ ತೋರಿಕೆ ಪ್ರತಿಭಾಸ. ಆದಕಾರಣ
ಕಾವ್ಯವು " ಅವಿಚಾರಿತ ರಮಣೀಯ ” ; ಒಳಹೊಕ್ಕು ನೋಡಿದರೆ ಅದರ
ಲ್ಲೇನೂ ಹುರುಳಿಲ್ಲ ಎಂದು ವಾದಿಸುವವರುಂಟು.1? ಆದರೆ ವಿಚಾರದ
ಮುಂದೆ ಈ ಆಕ್ಷೇಪಣೆ ನಿಲ್ಲಲಾರದು. ಕವಿಯ ಕಣ್ಣಿಗೆ ಸತ್ಯದ ಜ್ಯೋತಿ
ಯನ್ನು ಕಾಣುವ ಶಕ್ತಿಯಿಲ್ಲ; ಅದು ಹಿಮ್ಮೆಟ್ಟಿ ಪ್ರತಿಭಾಸವನ್ನೇ ಅಪ್ಪಿ
ಕೊಳ್ಳುತ್ತದೆ ಎಂಬುದು ಸರಿಯಾದ ಮಾತಲ್ಲ. ಹಾಗೆ ನೋಡಿದರೆ, ಶ್
ತೆರೆಯದ ಬಾಗಿಲು ಕಾವ್ಯಕ್ಕೆ ತೆರೆದಿದೆ. ದರ್ಶನವಿಲ್ಲದವನು ನಿಜವಾದ
ಕವಿಯಾಗಲಾರನೆಂದು ಪಿಂಡೆಯೇ ನೋಡಿದ್ದೇವೆ. ತಾರ್ಕಿಕನ ಬುದ್ಧಿ
ಒ೦ದು ದಾರಿಯಲ್ಲಿ ಸತ್ಯವನ್ನು ಸಮಾಪಿಸಿದರೆ, ಕವಿಯ ಪ್ರತಿಭೆ ಇನ್ನೊಂದು
ದಾರಿಯಲ್ಲಿ ಅದೇ ಮುಖವಾಗಿಯೇ ನಡೆಯುತ್ತದೆ. ಪ್ರಜ್ಞೆ » ಪ್ರತಿಭೆ
ಇವೆರಡೂ ಮನುಷ್ಯನ ಎರಡು ಕಣ್ಮುೆಳದ್ದಂತೆ. ಅವನಿಗೆ ಎರಡೂ
ಬೇಕು. ಈ ಮಹಾತತ್ತ್ವವು ಅನಂದವರ್ಧನನಿಗೆ ಚೆನ್ನಾಗಿ ತಿಳಿದಿದ್ದಿತು:
17 ಕಾವ್ಯಮಾಮಾಂಸಾ, ಪು. ೪೪,
KM. 13
೧೯೪ ಭಾರತೀಯ ಕಾವ್ಯಮಾಮಾಂಸೆ
ಯಾ ವ್ಯಾಪಾರವತೀ ರಸಾನ್ ರಸೆಯಿತುಂ ಕಾಚಿತ್ಕವೀನಾ೦ ನವಾ
ದೃಷ್ಟಿ ರ್ಯಾ ಪರಿಪಿಷ್ಠಿ ಿತಾರ್ಥವಿಷಯೋನ್ನೆ ಪಾ ಚೆ ವೈ ಪಶಿ ತೀ |
ತೇ ದ್ವೇ ಅಪ್ಪ 4 ವಲಂಬ್ಯ ವಿಶ್ಚಮನಿಶಂ RTS ವಯಂ
ಶ್ರಾಂತಾ ವೈವ ಚ ಲಬ್ಬಮಜ್ಜಿ ಶಯನ ತೃದ್ಧಕ್ತಿ ಕ್ರಿತುಲ್ಕಂ ಸುಖಂ |
(ಧ್ವನ್ಯಾ , ಪು. ೨೨೭)
[ರಸಗಳನು ಸವಿಗೆ ಏಳಿಸುವುಜ್ಜು ಗವನಾಂತಿರುವ
ಕವಿಗಳ ನವೋಜ್ಞಲದ ಮೋಟಪೊಂದು,
ವಿಷೆಯಗಳನಿರುವ ತೆರದೊಳೆ ತೆರೆದು ಕಾಣಿಸುವ
ಪಂಡಿತರ ನಿಶ್ಚಯದ ನೋಟವೊಂದು, ...
ಈ ಎರಡನೂ ನೆರವುಗೊಂಡು ವಿಶ್ವವ ನಾವು
ತಿರುತಿರುಗಿ ನಿರುಕಿಸುತ ಬಲುದಣಿದೆವು ;
ದೊರೆಯದೆಯೆ ಹೋದುದೈ ಮತ್ತೆ, ಸಾಗರಶಯನ,
ನಿನ್ನ ಭಕ್ತಿಯ ಹೋಲಬಲ್ಲ ಸುಖವು. ]
ಕವಿಯ ಪ್ರತಿಭೆ, ಶಾಸ್ತ್ರಜ್ಞನ ಮತಿ ಇವೆರಡೂ ದೈವಭಕ್ತಿಯಷ್ಟು ಸುಖ
ಕೊಡಲಾರವೆಂದು ಅನಂದವರ್ಧನನು ಹೇಳಿರುವುದು ಇಲ್ಲಿ ನಮಗೆ
ಪ್ರಕೃತವಲ್ಲ ; ಇವೆರಡು ದೃಷ್ಟಿಗಳನ್ನೂ ಅವಲಂಬಿಸಿ ಕೊನೆಮುಟ್ಟ
ನೋಡಿದವನು ಮಾತ್ರ ಅಡಬಹುದಾದ ಮಾತು ಅದು ; ಅದರ ಸತ್ಯಾ
ಸತ್ಯ ತೆಗಳನ್ನು ನಾವು ಜಾಯಾ] ಕಾವ್ಯ, ಶಾಸ್ತ್ರ ಈ ಎರಡಕೂ
ಸಮಾನಸ್ಥಾನವನ್ನು ಎರಡರಲ್ಲೂ ನುರಿತವ ಹ ನವರ
ಕೊಟ್ಟಿ ದ್ಥಾನೆಂಬ ವಿಷಯ ಇಲ್ಲಿ ಗಮನಾರ್ಹವಾದದ್ದು. ಈ ಪದ್ಯದ
ಮೇಲೆ ವ್ಯಾಖ್ಯಾನ ಮಾಡುತ್ತಾ ಅಭಿನವಗುಪ್ತನು, "" ಒ೦ದೇ ಕಣ್ಣಿನಿಂದ
ಸರಿಯಾಗಿ ನೋಡಲು ಆಗುವುದಿಲ್ಲ''(" ನಹಿ ಏಕಯಾ ದೃಷ್ಟ್ಟ್ಯಾ ಸಮ್ಯಬ್ನ
ರ್ವರ್ಣನಂ ಭವತಿ ')-ಎಂದು ಸ್ಟುಟಪಡಿಸಿದ್ದಾನೆ. ಶಾಸ್ತ್ರವೊಂದಕ್ಕೇ
ಸತ್ಯ ಮಾಸಲುಗಂಟಲ್ಬ; ಭಾವನಾವಶನಾಗಿ ಕವಿ ವಿಶ್ವವನ್ನು ಧ್ಯಾನ
ಮಾಡುತ್ತಿರುವಾಗ ಶಾಸ್ತ್ರಕ್ಕೆ ನಿಲುಕದ ಎಷ್ಟೋ ಸತ್ಯಗಳು ಅವನಿಗೆ
ಗೋಚರಿಸುತ್ತವೆ. ರವಿ ಕಾಣದ್ದನ್ನು ಕೂಡ ಅವನು ಕಾಣುತ್ತಾನೆ,
ಕವಿಸೃಷ್ಟಿಯನ್ನು ತೋರಿಕೆಯೆಂಹಿ ಅಲ್ಲಗಳೆದರೆ, ಶಾಸ್ತ್ರಕಾರರ ಜಗ
ತ್ತನ್ನು ಇನ್ನೊಂದು ಬಗೆಯ ತೋರಿಕೆಯೆಂದು ಅಲ್ಲಗಳೆಯಬೇಕಾದೀತು.
ಕವಿ ಸತ್ಯದ ಒಂದು ಮುಖವನ್ನು ತೋರಿಸುತ್ತಾನೆ. ಶಾಸ್ತ್ರಕಾರನು
೧೨. ಕೆವಿಸೃಪ್ಪಿ 1 ೧೯೫
ಇನ್ನೊಂದು ಮುಖವನ್ನು ತೋರಿಸುತ್ತಾನೆ. ಪೂರ್ಣಸತ್ಯವನ್ನು ವಿರೊಪಿ
ಸಲು ಒಬ್ಬೊಬ್ಬರಿಗೇ ಸಾಧ್ಯವಿಲ್ಲ ಎಂಬುದನ್ನು ಬೇಕಾದರೆ ಒಪ್ಪೋಣ.
ಮಿಕ್ಕೆರಡು ಆಪಾದನೆಗಳನ್ನು ಕುರಿತು ಎರಡೆರಡು ಮಾತು. ಜಾರ
ಯರ ನೆಡೆವಳಿಕೆ, ಧೂರ್ತರ ವಂಚನೆಗಳು. ಈ ಮೊದಲಾದವುಗಳ
ವರ್ಣನೆ ಕಾವ್ಯದಲ್ಲಿ ಬರುವುದುಂಟು ; ಇದನ್ನು ಓದಿ ಕೇಳಿ, ವಾಚ
ಕರ ಮನಸ್ಸು ಒಷ್ಮೊಮ್ಮೆ ಕೆಡಬಹುದು. ಆದರೆ, ಈ ಬಗೆಯ ವರ್ತನೆ
ಗಳೂ ಲೋಕದಲ್ಲಿ ಉಂಟು; ಅವನ್ನು ತಿಳಿದುಕೊಳ್ಳಿ; ಆದರೆ ಹಾಗೆ ನಡೆ
ಯದಿರಿ'' ಎಂದು ನಿಷೇಧಿಸುವುದಕ್ಕಾಗಿ ಕವಿ ಇದನ್ನು ನಿರೂಪಿಸುವನೇ
ಹೊರತು ಅವನ್ನು ಅನುಸರಿಸಿರೆಂದು ವಿಧಿಸುವುದಕ್ಕಾಗಿ ಅಲ್ಲ. ಹೀಗೆಂದು
ರಾಜಶೇಬರನು ಸಮಾಧಾನ ಹೇಳುತ್ತಾನೆ. ಇದಕ್ಕೆ ಇನ್ನೊಂದು
ಮಾತನ್ನು ಸೇರಿಸಬಹುದು. ಲೋಕದಲ್ಲಿ ಗುಣದೋಪಗಳೆರಡನ್ನೂ
ಜೊತೆಜೊತೆಗೇ ಉಳ್ಳ ಪದಾರ್ಥಗಳು ದೊರೆಯುತ್ತಪವೆಯೇ ಹೊರತು,
ಕೇವಲ ಗುಣವಾಗಲಿ ಕೇವಲ ದೋಪವಾಗಲಿ ಎಲ್ಲಿಯೂ ಕಾಣಬರುವು
ದಿಲ್ಲ. ಆದಕಾರಣ ಕವಿಕಾವ್ಯದಲ್ಲಿ ಕೂಡ ಲೋಕದ ಗುಣದೋಪಗಳ್ಳೆ
ರಡೂ ಯಥೋಚಿತವಾಗಿ ಪ್ರತಿಫಲಿಸಿರಲೇ ಬೇಕು; ದುಪ್ಪವಾದದು
ಅದಕ್ಕೆ ಹೊರಗಲ್ಲ. ಆದರೆ ಕೆಟ್ಟತನ ಕೂಡ ಕಾವ್ಯದಲ್ಲ ಸರಿಯಾಗಿ ಪ್ರತಿ
ಪಾದಿತವಾಗಿದ್ದರೆ, ವಾಚಕನ ಮನಸ್ಸು ರಸಾಸ್ಟಾದದಲ್ಲೇ ವಿಶ್ರಾಂತಿ
ಹೊಂದುತ್ತದೆ; ಕೆಟ್ಟನಡತೆಯ ಕಡೆಗೆ ಹರಿಯುವುದಿಲ್ಲ. ಇದಲ್ಲದೆ, ಎಲ್ಲ
ಕಾವ್ಯಗಳನ್ನೂ ಓದುವುದಕ್ಕೆ ಎಲ್ಲರೂ ಅಧಿಕಾರಿಗಳಲ್ಲ ; ಸಂಸ್ಕಾರಭೇದಕ್ಕೆ
ತಕ್ಕಂತೆ ಫಲವೂ ಜೇರೆಯಾಗುತ್ತದೆ. ಕಾವ್ಯವು ಒಂದು ದೀಪದಂತೆ.
ಅದರಿಂದ ವಿವೇಕಿ ತನ್ನ ಮನೆಯನ್ನು ಜೆಳಗಿಸಿಕೊಳ್ಳಬಹುದು; ಅಚತು
ರನು ತನ್ನ ಕೈಯನ್ನು ಸುಟ್ಟುಕೊಳ್ಳಬಹುದು. ಈ ಫಲಾಫಲಗಳೆಲ್ಲಕ್ಕೂ
ಕವಿ ಹೊಣಿಗಾರನಾಗಲಾರನು. ಹೀಗೆಂದ ಮಾತ್ರಕ್ಕೆ ಕವಿಗೆ ಯಾವ
ಕರ್ತವ್ಯವೂ ಈ ಭಾಗದಲ್ಲಿ ಇಲ್ಲವೆಂದು ತಾತ್ಪರ್ಯವಲ್ಲ.. ದೈವದತ್ತವಾದ
ಪ್ರತಿಭೆಯನ್ನು ದುರುಪಯೋಗಪಡಿಸುವ ಕವಿಗಳೂ ಉಂಟು ; ಅಂಥವರ
ಕೃ ತಿಗಳು ವಿಷಬೆರಸಿದ ಜೇನಿನಂತೆ ; ಅವನ್ನು ಪರಿಹರಿಸಬೇಕಾದದ್ದೇ
ನ್ಯಾಯ. ಆದರೆ ಯಾರೋ ನಾಲ್ಕುಮಂದಿ ದುಪ್ಪಕವಿಗಳಾದರೆ, ಒಟ್ಟು
ಕವಿಜಾತಿಯನ್ನೇ ಶಿಕ್ಷಿಸಲಾದೀತೆ? ಕಾವ್ಯಸಾಮಾನ್ಯವನ್ನು ಕುರಿತು
19 ಇ
೧೯೬ ಭಾರತೀಯ ಕಾವೃಮಾಮಾಂಸೆ
ಮಾತಾಡುವಾಗ ಈ ಅಪವಾದಗಳನ್ನು ಮರೆಯಜೇಕು. ಮಹಾಕವಿಗೆಳ
ಕೃತಿಗಳಲ್ಲಿ ಅಂತಸ್ಸಾರವಾಗಿ ಉದಾತ್ತನೀತಿ ಇದ್ದೇ ಇರುತ್ತದೆ, ಅವರ
ಕೃತಿಗಳು ಕೇವಲ ಕಾವ್ಯದ ಗಡಿಯನ್ನು ದಾಟಿ ಧರ್ಮಗ್ರಂಥಗಳಾಗಿಯೂ
ಪರಿಣಮಿಸುವುದುಂಟು. ರಾಮಾಯಣಕ್ಕೂ ಮಹಾಭಾರತಕ್ಕೂ ನಮ್ಮ
ದೇಶದಲ್ಲಿರುವ ಪೂಜ್ಯತೆಯನ್ನು `ಜ್ಞಾಪಿಸಿಕೊಂಡರೆ ಸಾಕು ; ಕಾವ್ಯವನ್ನು
ಕುರಿತು ಏಳತಕ್ಕ ಕ್ಷುಲ್ಲಕವಾದ ಆಕ್ಷೇಪಣಿಗಳು ಉಡುಗಿಹೋಗುತ್ತ ಪೆ.
ಕೊನೆಯದಾಗಿ ಅಶ್ಲೀಲತೆಯ 8 ವಿಷಯ. ಸಂದರ್ಭಾನುಗುಣ
ವಾಗಿ ಈ ವಿಷಯಗಳನ್ನು ವರ್ಣಿಸಲೇ ಬೇಕು; ವೇದಶಾಸ್ತ್ರಗಳಲ್ಲಿ
ಕೂಡ ಇಂಥ ವರ್ಣನೆಗಳುಂಟು__ಎಂದು ರಾಜಶೇಖರನು ವಾದಿಸು
ತ್ತಾನೆ.
ಅನುಚಿತಮಲ್ಲೆ ಯೋಗಿಜನಮಂಡನ ನೀಂ ಕೃತಿವೇಟ್ಟುದಿಲ್ಲಿ ಕೇಳ್
ಮನಸಿಜಕೇಳಿಮುಖ್ಯ ಜನರ೦ಜನವರ್ಣನೆ ಗೈೈಪುದೆಂದು ಸ।
ಜ್ವನರಿದನೆನ್ನದಿರ್ಕೆ ಶಿವಯೋಗಿ ಹರೀಶ್ವರ ಮಲ್ಲಣ್‌ಾರ್ಯರಿಂ
ಪಿನ ಪೊಸಕಬ್ಬಮಂ ನೆಗಟ್ಬ ರಾನವರಂತಿರೆ ಪೇಡ್ವಿನಿಂತಿದಂ॥
(ರಾಜಶೇಖರ ವಿಳಾಸ, ;. ೮೮)
ಎಂದು ಪಡಕ್ಷರಕವಿ ತನ್ನ ಶೃಂಗಾರಪ್ರ ವಣತೆಯನ್ನು ಸಮರ್ಥಿಸಿಕೊಂಡಿರು
ವುದೂ ಹೀಗೆಯೇ. ಆದರೆ ಪಿಂದಿನವರು ಒಂದು ರೀತಿಮಾಡಿದ ಮಾತ್ರಕ್ಕೇ
ನಾವೂ ಮಾಡಿಬಿಡಬಹುದೆಂಬುದು ಸರಿಯಾದ ಉತ್ತರವಲ್ಲ. ಈ ಅಶ್ಲೀಲ
ತೆಯ ಪ್ರಶ್ನೆ ತುಂಬ ತೊಡಕಿನದು. ಕಾಲದಿಂದ ಕಾಲಕ್ಕೆ, ಜನತೆಯಿಂದ
ಜನತೆಗೆ, ಭಾಷೆಯಿಂದ ಭಾಷೆಗೆ -ಯಾವುದು ಅಶ್ಲೀಲ, ಯಾವುದು ಅಲ್ಲ
ಎಂಬುದರ ನಿರ್ಣಯ ಬೇರೆ ಬೇರೆಯಾಗುತ್ತದೆ. ಇದರ ಮೇಲೆ, ಒಂಡೇ
18 ನಾಚಿಕೆಗೊಳಿಸುವುದು, ಜುಗುಪ್ಸೆ ಪಡಿಸುವುದು, ಅಮಂಗಳ ಸೂಚಿಸುವುದು. ಪೀಗೆ
ಅಶ್ಲೀಲತೆ ಮೂರು ಬಗೆಯೆಂದು ಆಲಂಕಾರಿಕರು ನಿರೂಪಿಸುತ್ತಾರೆ. ("" ಅಶ್ಲೀಲತ್ವಂ
ವ್ರೀಡಾಜುಗುಪ್ಳಾಮುಂಗಲವ್ಯಂಜಕತ್ಪಾತ್ ತ್ರಿವಿಧಂ ''--ಸಾಹಿತ್ಯದರ್ಪಣ, ೪.೨
ವೃತ್ತಿ) ಇದು ಮುಖ್ಯವಾಗಿ ಪದದೋಷ ; ಆದರೆ ಅರ್ಥದ ಅಶ್ಲೀಲತೆಯನ್ನೂ ಆಲಂಕಾರಿ
ಕರು ಗಣಿಸದೆ ಇಲ್ಲ, ಆಧುನಿಕ ವ್ಯವಹಾರದಲ್ಲಿ ಅಸಭ್ಯವಾದ ಶಬ್ದಾರ್ಥಗಳನ್ನು ಅಶ್ಲೀಲ
ಎಂದು ಕರೆಮುವುದು ಪ್ರಚುರವಾಗಿದೆ ; ಮೇಲನ ನಮ್ಮ ನಿರೂಪಣಿಯಲ್ಲೂ ಐದೇ ಅರ್ಥ
ವನ್ನೇ ಗ್ರಷಿಸಬೇಕು. ಅಶ್ಮೀಲ ಎಂಬ ಪದದ ಭಾಗವಾದ ಶ್ಲೀಲ ಎಂಬುದು ಶ್ರೀಲ
(= ಸಂಪದ್ಯುಕ್ತ) ಎಂಬುದರ ರೂಪಾಂತರವೆಂದು ಭಾಷಾಶಾಸ್ತ್ರ ಜ್ಞರ ಅಭಿಪ್ರಾಯ.
ವೇದದಲ್ಲಿ ಶ್ರೀರ ಎಂಬ ರೂಪವೂ ಉಂಟು,
೧೨. ಕವಿಸೃಷ್ಟಿ ೧೯೭
ವಸ್ತುವನ್ನು ಹೇಳುವ ಶಬ್ದ ಒಂದು ಭಾಷೆಯಲ್ಲಿ ಸಭ್ಯವಾದರೆ ಇನ್ನೊಂದೆ
ರಲ್ಲಿ ಅಸಭ್ಯವೆನಿಸಿಕೊಳ್ಳುತ್ತ ದೆ. ಕೆಲವು ಕಡೆ ಜನದ ಮಾತು ಒಂದು ವಿಪ
ಯವನ್ನು ಕುರಿತು ಬಹಳ ಸಂಕೋಚಪಡುವುದುಂಟು ; ಮತ್ತೆ ಕೆಲವು ಕಡೆ
ಆಕ್ಷೇಪಣಿಯ ಶಂಕೆಯೇ ಇಲ್ಲದೆ, ಮನಸ್ಸಿನ ವಿಕಾರವೇ ಇಲ್ಲದೆ, ಬಹು
ದೂರ ನುಗ್ಗು ವುದುಂಟು. ಪರಿಸ್ಥಿ ತಿ ಪೀಗಿರುವುದರಿಂದ, ನಮ್ಮ ಸಮಾ
ಜದ ವಿಶೇಷಸನ್ನಿ ವೇಶದಲ್ಲಿ ಯಾವುದು ಸಭ್ಯವೆಂದು ಸದ್ಯಕ್ಕೆ ನಮಗೆ
ತೋರುವುದವೋ ಅದು ಎಲ್ಲ ದೇಶ ಕಾಲ ಸಮಾಜಗಳಿಗೂ ಸಭ್ಯವೇ ಅಲ್ಲ
ವೆಂದು ತೀರ್ಮಾನಿಸುವುದು ದಿಟ್ಟತನ.
ಇಲ್ಲಿ ಮುಖ್ಯವಾಗಿ ಕವಿಯ ಆಶಯವನ್ನೇ ಒರೆಗಲ್ಲಾಗಿ ಇಟ್ಟು
ಕೊಳ್ಳಬೇಕು. ತೃ ೦ಗಾರವು ವಿಶ್ಚಮೋಹಕವಾದ ರಸ ; ಆದರೆ ಅದರಲ್ಲಿ
ಔಚತ್ಸ ಅನಔಚಿತ್ಯಗಳಿಗೆ ನಡುವೆ ಇರುವ ಗೆರೆ ಬಹು ಸೂಕ್ಷ್ಮ... ಕವಿಯೂ
ನಮ್ಮಂತೆಯೇ ಮನುಷ್ಯ. ಕೆಲವು ವೇಳೆ ಅವನೂ ಕಾಮಚಾಪಲ್ಯಕ್ಕೆ ಒಳ
ಗಾಗಿ, ಜೀವನದಲ್ಲ ಪಡೆದು ತಣಿಯದಿದ್ದ ವಿಲಾಸೋಪಭೋಗಗಳನ್ನು
ಕಾವ್ಯದಲ್ಲಿ ವರ್ಣಿಸಿ ಆ ಮೂಲಕ ಆಶಾತೃಪ್ತಿಗಾಗಿ ಯತ್ನಿಸಿರಬಹುದು.
ಅಂಥ ವರ್ಣನೆಗಳು ವಾಚಕರಿಗೆ ಆಹ್ಲಾದ ವಿಶ್ರಾಂತಿಯನ್ನು ತರುವ ಬದಲು
ಅವರ ಮನಸ್ಸಿನಲ್ಲೂ ಕಾಮವನ್ನು ಕೆರಳಿಸಬಹುದು; ಆಗ ವರ್ಣನೆ
ಅಶ್ಲೀಲವೇ ಸರಿ. ಹಾಗಿಲ್ಲದೆ, ಮಿಕ್ಕ ಕಾವ್ಯಾಂಶಗಳನ್ನು ವರ್ಣಿಸು
ವಂತೆಯೇ ಪ್ರಣಯಿಗಳ ದರ್ಶನ ಸ್ಪರ್ಶನಾದಿಗಳನ್ನೂ ಕೇವಲ ಅವುಗಳ
ಸೌಂದರ್ಯಕ್ಕಾಗಿ, ಅಶ್ಲೀಲತೆಯ ಹೋಂಕೇ ಇಲ್ಲದಂತೆ ವರ್ಣಿಸುವುದು
ಸಾಧ್ಯ. ಮುಖ್ಯವಾಗಿ ಶೃ ೦ಗಾರನಿರೂಪಣಿಯಲ್ಲಿ ವಾಚ್ಯಮಾರ್ಗಕ್ಕಿಂತ
ವ್ಯಂಗ ಕಮಾರ್ಗವು ಪೆರವ:ಸುಂದರ.
ಇದರ ಮೇಲೆ, ಸಂಭೋಗವರ್ಣನೆ ಮೊದಲಾದವುಗಳ ಅತಿರೇಕ
ವನ್ನು ಹಿಂದಿನ ಅಲಂಕಾರಿಕರೇ ಸ್ಪಷ್ಟೋಶಕ್ತಿಗಳಲ್ಲಿ ಖಂಡಿಸಿದ್ದಾರೆ. ಪ್ರತಿ
ಯೊಂದು ವಿಷಯದ ನಿರೂಪಣಿಯಲ್ಲೂ ಗ್ರಾಮ್ಯಮಾರ್ಗವುಂಟ್ಕು
ಉತ್ತಮಮಾರ್ಗವುಂಟು. ಪಾತ್ರಸೃಭಾವಾದಿಗಳಿಗೆ ತಕ್ಕಂತೆ ಔಚಿತ್ಯಾ
ನೌಚಿತ್ಯಗಳುಂಟು. "" ಸಂಭೋಗ ಶೃಂಗಾರದಲ್ಲರುವುದು ಸುರತಲಕ್ಷಣ
`` ದಹದ ಅಂಗಗಳನ್ನು ಹೆಸರಿಸುವ ಒಂದೆರಡು ಶಬ್ಧಗಳು ಬಂದ ಮಾತ್ರಕ್ಕೆ ನೀತಿ
ನಿರತರು ಹೆದರಬೇಕಾಗಿಲ್ಲ; ಸನ್ನಿವೇಶಮಪಿಮೆಯಂದ ಆ ಶಬ್ದಗಳು ಕಾಮಸಂಪರ್ಕವನ್ನು
ಕಳೆದುಕೊಂಡುಬಿಟ್ಟರುತ್ತವೆ.
೧೯೮ ಭಾರತೀಯ ಕಾವ್ಯಮಾಮಾಂಸೆ
ಪೆಂಬ ಒಂದೇ ಪ್ರಕಾರವಲ್ಲ. ಪರಸ್ಪರ ಪ್ರೇಮಾವಲೋಕನವೇ ಮೊದ
ಲಾದ ಬೇರೆಯ ನ್ರ್‌ಭೇದಗಳೂ ಉಂಟು.'' ರಂಗಸ್ಥಳದಲ್ಲಿ ಆಡಿ ತೋರಿ
ಸುವ ನಾಟಕದಲ್ಲಿ ಮಾತ್ರ ಇದನ್ನು ಪರಿಹರಿಸಬೇಕು ; ಕಾವ್ಯದಲ್ಲಿ ದೋಷ
ವಿಲ್ಲ ಎಂದು ಯಾರಾದರೂ ಹೇಳಿಯಾರು. ಆದರೆ ನಾಟಕದಲ್ಲಿ
ಯಾವುದು ಅಸಹ್ಯವೋ ಅದು ಕಾವ್ಯದಲ್ಲೂ ಅನಹ್ಯವೇ.2 ಇನ್ನು;
ಸಂಭೋಗತ್ಸಂಗಾರಕ್ಕಿಂತ ವಿಪ್ರಲಂಭಷೇ ಮಧುರತರಪೆಂದು ರಸಿಕ
ರೆಲ್ಲರೂ ಬಲ್ಲರು.
ಈ ವಿಷಯಗಳಲ್ಲೆಲ್ಲಾ ಕವಿ ಔಚಿತ್ಯವರಿತು, ತನ್ನ ಚಪಲತೆಯನ್ನು
ಅದುಮಿ, ಕಾವ್ಯರಚನೆಮಾಡಜೇಕು. ವಾಚಕನು ತುದ್ಧ ಹೃದಯದಿಂದ
ಓದಬೇಕು. ಟೀಕಾಕಾರನು ಉದಾರಮನಸ್ಸಿನಿಂದ ವಿಮರ್ಶೆಮಾಡ
ಬೇಕು.
೫ ಧ್ವನ್ಯಾಲೋಕ, ಪು. ೧೪೬-೧೪೭ ನೋಡಿ. ಇದೇ ಅಭಿಪ್ರಾಯವನ್ನೇ ದಶ
ರೂಪಕದಲ್ಲಿ ಧನಂಜಯ ಧನಿಕರು ಅನುಮೋದಿಸಿದ್ದಾರೆ. (1೪. ೭೧ ಕಾರಿಕೆ ಮತ್ತು
ವೃತ್ತಿ). ಕ
೧೩. ಸಹೃದಯ
ಕಾಪ್ಯಪ್ರೇಮಿಗೆ ಭಾರತ್ಮೀಯ ಕಾವ್ಯಮಾಮಾಂಸೆಯಲ್ಲ ಹೊರೆತಿರು
ವಷ್ಟು ಪ್ರಾಶಸ್ತ್ಯ ಮತ್ತೆಲ್ಲಿಯೂ ದೊರೆತಿಲ್ಲ. ಕವಿಯೇನೋ ಅಂತರಂಗದ
ಪ್ರಚೋದನೆಯಿಂದ ಪದ್ಯರಚನೆಮಾಡಿ ತನ್ನ ಎದೆಯ ಧಾರ ಇಳಿಯಿ
ತೆಂದು ಕ್ಷಣಕಾಲ ತೃಪ್ತಿಪಡಬಹುದು; ಆದರೆ ಹಾಗೆ ಕಟ್ಟಿದ ಕಾವ್ಯವನ್ನು
ಓದಿ ಸುಖಪಡುವವರು ಇಲ್ಲದೆ ಹೋದರೆ ಏನು ಪ್ರಯೋಜನ?
“* ಕೆಟ್ಟಿಯುಮೇನೊ? ಮಾಲೆಗಾಅನ ಪೊಸಬಾಸಿಗಂ ಮುಡಿವ ಭೋಗಿ
ಗಳಿಲ್ಲದೆ ದಾಡಿಪೋಗದೇ! '' 1 ಕಾವ್ಯವು ಸಾರ್ಥಕವಾಗುವುದು ರಸಿಕನ
ಹೃದಯದಲ್ಲಿ ಮತ್ತೆ ನೆಲೆಗೊಂಡಾಗ. ಆದಕಾರಣವೇ, ಕವಿ-ಸಹೃದಯ
ರಿಬ್ಬರೂ ಒಂದೇ ಸಾರಸ್ವತ ತತ್ತ್ವದ ಅಂಗಗಳೆಂದೂ ಇಬ್ಬರೂ ಒಂದು
ಗೂಡ ಕಾವ್ಯವಾಗುವುದೆಂದೂ ಅರ್ಥ ಬರುವಂತೆ ಅಭಿನವಗುಪ್ತನು "" ಸರ
ಸ್ವತ್ಯಾಸ್ತತ್ತ್ವ೦ ಕವಿಸಹೃದಯಾಖ್ಯಂ ವಿಜಯತೇ '' ಎಂದು ಪ್ರಶಂಸೆಮಾಡಿ
ದನು. ಇದಕ್ಕಿಂತ ಹೆಚ್ಚಿನ ಮಹತ್ತ್ವ ಓದುಗನಿಗೆ ಯಾವುದು ? ಇದರ
ಮೇಲೆ, ಕವಿಗೇ ಉತ್ತೇಜನ ಬೇಕು; ತನ್ನ ಕೃತಿಯನ್ನು ಆದರಿಸುವವರಿ
ಲ್ಲದೆ ಹೋದರೆ ಅವನ ಉತ್ಪಾಹೆ ಕುಗ್ಗ ಬಹುದು, ಸೃಷ್ಟಿಕಾರ್ಯ ನಿಂತು
ಬಿಡಲೂಬಹುದು. ಸಹಾನುಭೂತಿಯಿಂದ ಆಲಿಸುವವರು ದೊರೆಯದೆ
"" ಜೀರ್ಣಮಂಗ್ಲೇ ಸುಭಾಷಿತಂ'' ("" ಸುಭಾಪಿತವೆಲ್ಲ ಮೈಯೊಳಗೇ
ಮುಪ್ಪಾಗಿಹೋಯಿತು'') ಎಂದು ಇದುವರೆಗೆ ಎಷ್ಟುಮ೦ದಿ ಕವಿಗಳು
ನೊಂದು ನುಡಿದಿದ್ದಾರೋ! ಸಹೃದಯರ ಸಂತುಪ್ಪಿ ಕವಿಪ್ರತಿಭೆಯ ಕುಡಿ
ಯನ್ನು ಮಾಟಿ ಉದ್ದೀಪಿಸುತ್ತದೆ.
" ಸಹೃದಯ' ಎಂಬುದು ಅರ್ಥವತ್ತಾದ ಹೆಸರು. (ಕವಿ ಹೃದ
ಯಕ್ಕೆ) ಸಮಾನವಾದ ಹೈದಯವುಳ್ಳವನ್ನೇ ಸಹೃದಯ. ಎಂದರೆ, ಕಾವ್ಯ
ವನ್ನು ಓದುವಾಗ, ಕವಿಯ ಹೃದಯದೊಂದಿಗೆ ಇವನ ಹೃದಯವೂ ಸಮ
ತಾನವಾಗಿ ಮಿಡಿಯುತ್ತದೆ. ಅವನ : ಅನುಭವಗಳಲ್ಲಿ ಇವನೂ ಪಾಲು
ಗಾರನಾಗುತ್ತಾನೆ. ಅವನ ಆಶಯವನ್ನು, ಇಂಗಿತವನ್ನು ಸಹಾನುಭೂತಿ
ಯಿಂದ ಅರಿಯುತ್ತಾನೆ. ಸಹೃದಯನು ಯಾರೆಂಬುದು ಅಭಿನವಗುಪ್ತನ
1 ಜನ್ನ: ಅನಂತನಾಥ ಪುರಾಣ, ;, ೪೫.
೧೯೯
೨೦೦ ಭಾರತೀಯ ಕಾವ್ಯವಿಸಾಮಾಂಸೆ
ಈ ವಾಕ್ಯದಲ್ಲಿ ರಮ್ಯವಾಗಿ ನಿರೂಪಿತವಾಗಿದೆ. ""ಯೇಪಾಂ ಕಾವ್ಯಾನು
ಶೀಲನವಶಾತ್ ವಿತದೀಭೂತೇ ಮನೋಮುಕುರೇ ವರ್ಣನೀಯತನ್ಮ
ಯಾಭವನಯೋಗ್ಯತಾ ತೇ ಹೃದಯಸಂವಾದಭಾಜಃ ಸಹೃದಯಾಃ *'
(ಧ್ವನ್ಯಾ. ಲೋಚನ, ಪು. ೧೧) (" ಕಾವ್ಯಗಳನ್ನು ಪರಿಶೀಲಿಸಿ,
ಮನಸ್ಸೆಂಬ ಕನ್ನಡಿ ನಿರ್ಮಲವಾಗಿರುವುದರಿಂದ, ವರ್ಣಿತವಿಷಯದಲ್ಲ
ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವರೇ ಸಹೃದಯರು
(ಕೆವಿಯೊಂದಿಗೆ) ಹೃದಯದ ಹೊಂದಿಕೆಯನ್ನುಳ್ಳವರು.'') ೭ ಕವಿ ಹೃದ
ಯವೂ ರಸಿಕನ ಹೃದಯವೂ ಸವತ್ರುತಿಯನ್ನುಳ್ಳ ಎರಡು ವೀಣಿಗಳಂತೆ ;
ಒಂದನ್ನು ನುಡಿಸಿದಾಗ ಇನ್ನೊಂದು ಅದಕ್ಕೆ ಸಮತಾನವಾಗಿ ರೋಂಕರಿ
ಸುತ್ತದೆ. ಇಂಥ ಸಸ್ಕ ದಯನನ್ನು ಲಾಕ್ಷಣಿಕರು ಪ್ರಶಂಸಿಸುತ್ತಾರೆ,
ಕವಿಗಳು ಅಪೇಕ್ಷಿಸುತ್ತಾರೆ. ಆದರೆ ಅವನು ದೊರೆಯುವುದು ದುರ್ಲಭ
ಈಗಿನ ಕಾಲದಲ್ಲಿ ಕವಿ ತನ್ನ ಪದ್ಯಗಳನ್ನು ಅಚ್ಚುಹಾಕಿಸಿ ದೇಶ
ಕೈಲ್ಲಾ ಹಂಚಬಹುದು ; ಪ್ರತಿಗಳನ್ನೂ ಕೊಳ್ಳುವವರಿಲ್ಲ, ಓದುವವರಿಲ್ಲ
ಎಂದು ವ್ಯಸನಪಡುವುದೇನೋ ನಿಜ; ಆದರೆ ಅದಕ್ಕಿಂತಲೂ ಘೋರವಾದ
ಇನ್ನೊಂದು ಸಂಕಟಕ್ಕೆ ಅವನು ಗುರಿಯಾಗಬೇಕಾಗಿಲ್ಲ. ಹಿಂದಿನ ಕಾಲ
ದಲ್ಲಾಗಿದ್ದರೆ ಅವನು ಆಸ್ಥಾನಗಳಲ್ಲ, ಸಭೆಗಳಲ್ಲಿ ತನ್ನ ಕೃತಿಯನ್ನು ಪ್ರತ್ಯಕ್ಷ
ವಾಗಿ ಓದಿ ಶ್ರೋತೃಗಳನ್ನು ಮೆಚ್ಚಿ ಸಬೇಕಾಗುತ್ತಿತ್ತು. ರ್ವಶಿಕನಲ್ಲದವ.
ನಿಗೆ ತನ್ನ ಕಾವ್ಯವನ್ನು ಒಪ್ಪಿಸದೇಕಾಗಿ ಬಂದಾಗ ಕವಿಯ ಹೃದಯ
ಎಷ್ಟು ವೃಥೆಗೊಂಡರಬೇಕು! ಇದರ ಯಾತನೆಯನ್ನು ಅನುಭವಿಸಿದ
ದರದ ರಾಜರು
ಒಬ್ಬಾತನು ಪೀಗೆ ಮೊರೆಯಿಡುತ್ತಾನೆ :
೪ ಇತರಕರ್ಮಪಲಾನಿ ಯದೃಚ್ಛಯಾ
ಎತೆರ ತಾನಿ ಸಹೇ ಚತುರಾನನ।
ಅರೆಸಿಕೇಷು ಕವಿತ್ವನಿವೇದನಂ
ಶಿರಸಿ ಮಾ ಲಖ ಮಾ ಲಿಖ ಮಾ ಲಖ॥
[ಉಳಿದೆಲ್ಲ ಕರ್ಮಪಲಗಳನು ಮನಬಂದಂತೆ
ಕಳುಹು ; ಸಹಿಸುವೆನಯ್ಯ ನಾನವನು ಎಧಿಯೆ,
ಅರಸಿಕರ ಮುಂದೆ ಕವಿತೆಯನೊಪ್ಪಿಸುವುದೊಂದ
ಬರೆಯದಿರು ಬರೆಯದಿರು ಬರೆಯದಿರು ಶಿರದ |]
9 “ ರಸಜ್ಞಿತಾ ಏವ ಸಹೃದಯತ್ಪಂ '' (ಧ್ವನ್ಯಾಲೋಕ, ಪು. ೧೬೦)--ಈ ಮಾತನ್ನೂ
ಹೋಲಿಸಿ.
೧೩. ಸಹ್ಮದಯ ೨೦೧
ಕೆಚ್ಚುಳ್ಳ ಕವಿ ತನ್ನ ಕಾಲದ, ದೇಶದ ಜನರ ಅಸಡ್ಡೆ ತಿರಸ್ಕಾರ
ಗಳನ್ನು ಲೆಕ್ಕಿಸದೆ ಕೃತಿಗಳನ್ನು ರಚಿಸುತ್ತಾನೆ. ಆದರೆ, ಅವನಿಗೂ
ಒಂದಲ್ಲ ಒಂದು ದಿನ ಸರಿಯಾದ ವಾಚಕನನ್ನು ಪಡೆಯುವ ಗುರಿ ಇದ್ದೇ
ಇರುತ್ತದೆ. ಭವಭೂತಿ " ಮಾಲತೀಮಾಧವ'ದ ಪ್ರಸ್ತಾವನೆಯಲ್ಲಿ (1.೮)
ಆಡಿರುವ ಮಾತುಗಳನ್ನು ಲಕ್ಷಿಸಿ :
ಯೇ ನಾಮ ಕೇಚಿದಿಹ ನಃ ಪ್ರಥೆಯಂತ್ಯವಜ್ಞಾಂ
ಜಾನಂತಿ ತೇ ಕಿಮಪಿ ರ್ತಾ ಪ್ರತಿ ನೈಷ ಯತ್ನಃ!
ಉತ್ಪತ್ಸ್ಯತ್ನೇಃ ಸ್ತಿ ಮಮ ಕೋ್ಠಪಿ ಸಮಾನಧರ್ಮಾ
ಕಾಲೋ ಹ್ಯಯಂ ಸಿರವಧಿರ್ವಿಪುಲಾ ರ ಪೃಥ್ವೀ ॥
[ಇಲ್ಲ ಕೆಲರಾರುಂಟೊ ನಮ್ಮ ನವಗಣಿಸುವವರು
ಬಲ್ಲರವರೇನನೋ--ಈ ಯತ್ನವವರಿಗಲ್ಲ.
ಜನಿಸಲಹಸಿಹರು ತಾನಾರೋ ಸಮಧರ್ಮಿ ನನಗೆ:
ಕೊನೆಯುಂಟೆ ಕಾಲಕ್ಕೆ, ಮತ್ತೆ ಪರಿಮಿತವೆ ಪೃಥಿವಿ []
"« ಲೋಕೋ ಭಿನ್ನರುಚಿಃ ''--ಒಬ್ಬೊಬ್ಬರ ಅಭಿರುಚಿ ಒಂದೊಂದು
ಬಗೆಯಾಗಿರುತ್ತದೆ. ಕಾವ್ಯವನ್ನು ಓದುವವರಲ್ಲಿ ಎಲ್ಲರೂ ಒಂದೇ
ರೀತಿಯ ಸೊಗಸನ್ನು ಅಪೇಕ್ಷಿಸುವುದಿಲ್ಲ. ಹಲವರು ತಬ್ದಚಮತ್ಕಾರಕ್ಕೇ
ಬೆರಗಾಗುತ್ತಾರೆ ; ಇನ್ನಷ್ಟುಮಂದಿಗೆ ಅಲಂಕಾರವೈಚಿತ್ರ್ಯ ಬೇಕು ;
ಒಳಗಿನ ಭಾವದ ಸೊಬಗನ್ನು ಹಿಡಿಯುವವರು ಎಲ್ಲೋ ಕೆಲವರು. ಕಾವ್ಯದ
ಸಮಸ್ತ ಸೌಂದರ್ಯಕ್ಕೂ ಹೃದಯವನ್ನು ತೆರೆದಿಟ್ಟು, ಯಾವ ಒಂದು ಅಂಶ
ವನ್ನೂ ಬಿಡದೆ, ಯಾವುದಕ್ಕೂ ಅದರ ಸ್ಥಾನಕ್ಕೆ ಮಾರಿದ ಬೆಲೆಯನ್ನು
ಕೊಡದೆ, ಒಂದೊಂದನ್ನೂ ಉಳೆಬಿಡಿಸಿ ಪರೀಕ್ಷಿಸುತ್ತಾ ಕುಳ್ಳಿರದೆ, ಅಖಂಡ
ವಾಗಿ ಸ್ವಾರಸ್ಯವನ್ನು ಸವಿಯತಕ್ಕವರಂತೂ ಬಲು ವಿರಳ.
ಇನ್ನು ತಮ್ಮ ಸಂತುಪ್ಪಿಯನ್ನು ವ್ಯಕ್ತಪಡಿಸುವುದರೆಲ್ಲೂ ಅಷ್ಟೇ ;
ಒಜ್ಜೊಬ್ಬರದು ಒಂದೊಂದು ವಿಧ, ಕೆಲವರು "“ ಭಲಾ, ಬೇಷ್,
ಆಹಾ! ' ಎನ್ನುತ್ತಾರೆ ; ಕೆಲವರು ಕುಣಿದಾಡಿಬಿಡುತ್ತಾರೆ; ಇನ್ನು
ಕೆಲವರು ಹೃದಯದಲ್ಲೇ ಮೆಚ್ಚಿಕೆಯನ್ನು ಅಡಗಿಸಿಕೊಳ್ಳುತ್ತಾರೆ; ಎಲ್ಲೋ
ಒಬ್ಬಿಬ್ಬರು ಅಪ್ರಯತ್ನವಾಗಿ ಮೈಯಲ್ಲ ಹುರಿಗೊಂಡ ಪುಳಕದಿಂದ,
೨೦೨ ಭಾರತೀಯ ಕಾಷ್ಯಮಾಮಾಂಸೆ
ಅರಳಿದ ಕಣ್ಣುಗಳಿಂದ ಅದನ್ನು ಮೌನವಾಗಿಯೇ ವ್ಯಕ್ತಪಡಿಸುತ್ತಾರೆ. 3
ಕವಿ ಬಯಸುವುದು ಈ ಕೊನೆಯವರ್ಗದ ಭಾವಕನನ್ನು, ವಿಜ್ವಾತಾ ಎಂಬ
ಕಬ್ಬಿಗಿತಿ ಅವನನ್ನು ಈ ರೀತಿ ವರ್ಣಿಸಿ ವಂದಿಸುತ್ತಾಳೆ :
ಕವೇರಭಿಪೀಯಮಶಬ್ಧ್ಬ ಗೋಚರಂ
ಸ್ಫುರಂತಮಾರ್ದ್ರೇಷು ಪದೇಷು ಕೇವಲಂ!
ವದದ್ಭಿರ೦ಗೈಃ ಕೃತರೋಮವಿಕ್ರಿಯ್ಯೇಃ
ಜನಸ್ಯ ತೂಷ್ಟಿ ಂಭವತೊ ಯಮಂಜಲಿಃ ॥ 4
[ನುಡಿಗೆ ನಿಲುಕದ ಕವಿಯ ಬಗೆಯೆ ಭಾವವನು
ಅರ್ದ್ರಪದಗಳಲ ಕೇವಲ ಮಿನುಗುವುದನು
ಪುಳಕ ಹುರಿಗೊ೦ಡಂಗಗಳಲಿ ಮಾರ್ನುಡಿದು
ಮಸನವಾ೦ಶವನಿಗಿದೊ ಮಣಿವೆ ಕೈಮುಗಿದು.]
ಕಾವ್ಯದ ತಿರುಳನ್ನು ಸರಿಯಾಗಿ ಪಿಡಿದು ಸವಿಯುವುದಕ್ಕೆ ವಾಚಕ
ನಿಗೂ ಶಕ್ತಿ ಬೇಕು, ಸಿದ್ಧತೆ ಬೇಕು. ಮಾತಿನ ಹೊಡಿಕೆಯನ್ನು ಭೇದಿಸಿ
ಅದರೊಳಗೆ ಮಿಡಿಯುತ್ತಿರುವ ಕವಿಯ ಸೂಕ್ಷ ಭಾವವನ್ನು ತನ್ನದಾಗಿ
ಮಾಡಿಕೊಳ್ಳಬೇಕಾದರೆ ಸಹೃದಯನೂ ದೃಷ್ಟಿಯನ್ನು ಚುರುಕು ಮಾಡಿ
ಕೊಳ್ಳಬೇಕು, ಅಂತಃಕರಣವನ್ನು ಪಳಗಿಸಿಕೊಳ್ಳ ಬೇಕು. ತನ್ನ ಪ್ರತಿಭೆಯ
ಬಲದಿಂದ ಕವಿ ಒಂದು ಹೊಸ ಪ್ರಪಂಚವನ್ನು ಮಾತುಗಳಲ್ಲಿ ಕಟ್ಟು ತ್ತಾನೆ.
ಕಾವ್ಯದ ಓದುಗನಿಗೆ ದೊರೆಯುವುದು ಈ ಮಾತು ಮಾತ್ರ ; ಇದನ್ನು
ಅವನು ತನ್ನ ಒಳಗಣ್ಣಿನಿಂದ ನೋಡಿ ಜೀವಗೊಂಡ ವ್ಯಕ್ತಿ ಗಳನ್ನಾಗಿ,
ಅವರ ಚರೈಗಳನ್ನಾಗಿ ಮಾರ್ಪಡಿಸಿಕೊಳ್ಳ ದಿದ್ಧ ರೆ ಕಾವ್ಯವು ಕಾಗದ
3 ಪಾಗ್ಮಾವಕೋ ಭವೇತ್ ಕಶ್ಟಿತ್ ಕಶ್ಚಿತ್ ಹೃದಯ ಭಾವಕಃ।
ಸಾತ್ತಿಕ್ಸೈರಾೌಂಗಿತ್ಯೆಃ ಕತ್ಚಿದನುಭಾವೈೊಶ್ವ ಭಾವಕಃ ॥
(ಕಾಪ್ಯಮಿಾಮಾಂಸಾ, ಪು, ೧೫).
ಈ ಉಕ್ತಿಗೆ ಆಧಾರ ಭರತನಾಟ್ಯಶಾಸ್ತ, ಅದೆ ಕೆಲವು ಶ್ಲೋಕಗಳೆಂದು ತೋರುತ್ತದೆ ;
ನಾಟ್ಯಪ್ರಯೋಗವು ಸಿದ್ಧಿಸಿದ್ದಕ್ಕೆ ಗುರುತೇನೆಂಬುದನ್ನು ಇಲ್ಲ ಭರತನು ವರ್ಣಿಸುತ್ತಾನೆ:
ಸ್ಮಿತಾರ್ಧಹಾಸಾತಿಹಾಸಾ ಸಾಧ್ವಹೋ ಕಪ್ಪಮೇವ ಚ!
ಪ್ರವೃದ್ಧನಾದಾ ಚ ತಥಾ ಜ್ಹೇಯಾ ಸಿದ್ದಿಸ್ತು ವಾಜ್ಮಯಾಗ
ಪುಲಕ್ಕೆಶ್ಚ ಸರೋಮಾಂಚ್ಛೆಃ ಅಭ್ಯುತ್ನಾನೈಸ್ತಥ್ಛೊವ ಚ।
ಚೇಲದಾನಾಂಗುಲಿಕ್ಷೇಪ್ಟೈಃ ಶಾರೀರೀ ಸಿದ್ದಿರಿಪ್ಯತೇ 1
(ನಾಟ್ಯಶಾಸ್ತ್ರ , ಕಾಶೀಮುದ್ರಣ, xxvii, ೪; ೫).
4 ಸುಭಾಷಿತಾವವಿ, ೧೫೮. ಈ "ವಿಷ್ಮಾಕಾ' ಎಂಬಾಕೆ ನಮ್ಮ ವಿಜ್ವಕೆಯೇ
ಅಗಿರಬಹುದು.
೧೩. ಸಹೈದಯ ೨೦೩
ಮೇಲಿನ ಕರಿಯ ಗೆರೆಗಳಾಗಿಯೇ ಉಳಿಯುತ್ತದೆ. 5 ಇಷ್ಟೇ ಅಲ್ಲ. ಕವಿಯ
ಭಾವ ಯಾವಾಗಲೂ ಮಾತಿನ ಆಜೆಗೆ ಇರುತ್ತದೆ. ಅದನ್ನು ಅವನು
ಕೇವಲ ಸೂಚಿಸಿ ಬಿಟ್ಟಿರುತ್ತಾನೆ. ಅದನ್ನು ಅರಿಯಲು ಸಹೃದಯನೇ
ಮುಂದುವರಿಯಬೇಕಾಗುತ್ತದೆ. ಕವಿ ಹೇಳದೆ, ಹೇಳಲಾರದೆ_ಬಿಟ್ಟದ್ದ
ನ್ನೆಲ್ಲಾ ತಾನೇ ಭಾವಿಸಿಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ಸಹೃದಯನಿಗೂ_
ಪ್ರತಿಭೆ ದೇಕು. ರಸಾಸ್ಕಾದಮಾಡಲು ಯಾರು ತಕ್ಕವರೆಂಬುದನ್ನು
ಹೇಳುವಾಗ ಅಭಿನವಗುಪ್ತನು, "" ಅಧಿಕಾರೀ ಚಾತ್ರ ವಿಮಲ ಪೃತಿಭಾನ
ಶಾಲೀ ಸಹೃದಯಃ '' (ಅಭಿನವಭಾರತೀ, ೬. ೨೮೦) ಎಂದು ಹೇಳಿ ಈ
ಕಡೆಗೆ ನಮ್ಮ ಗಮನವನ್ನೆಳೆಯುತ್ತಾನೆ. ಕವಿಯ ಮೂಲಾನುಭವವನ್ನು
ತಾನು ಪಡೆದ ಹೊರತು, ಅವನ ಪ್ರತಿಭಾವೇಶವನ್ನೇ ತಾನು ಉಕ್ಕಿಸಿ
ಕೊಂಡ ಹೊರತು ಅವನಿಗೆ ರಸವು ಸಿದ್ಧಿಸುವುದಿಲ್ಲ. ``ಕವಿಯ ಪ್ರತಿಭೆಗಿಂತ
ಸಹೃದಯನ ಪ್ರತಿಭೆ ಕೆಳಮಟ್ಟದ್ದೆ೦ಬುದು ನಿಜ; ಏಕೆಂದರೆ ಕವಿಯದು
ಸೃಷ್ಟಿಕಾರ್ಯವಾದರೆ, ಇವನದು ಅನುಸೃಷ್ಟಿ ಮಾತ್ರ. ಆದರೆ ಇವೆರಡು
ಆವಶ್ಯಕವಾದ ಪ್ರತಿಭೆಗೆ ರಾಜಶೇಖರನು " ಭಾವಯಿತ್ರೀ' ಎಂದು ಹೆಸರು
ಕೊಡುತ್ತಾನೆ.
ತನ್ನ ಕಾವ್ಯದ ಸವಿಯನ್ನು ಕವಿ ಅನುಭವಿಸುತ್ತಾನೆಯೇ ಇಲ್ಲವೇ
ಎಂಬುದು ಹಿಂದಿನಿಂದಲೂ ಚರ್ಚೆಗೆ ಒಳಗಾಗಿರುವ ಪ್ರಶ್ನೆ. ಅದನ್ನು
ಕುರಿತು ಎರಡು ಮಾತನ್ನು ಇಲ್ಲಿ ತಿಳಿಸಬಹುದು. ""ಕವಿತಾರಸಮಾಧುರ್ಯಂ
ರಸಿಕೋ ವೇತ್ತಿ ನೋ ಕವಿಃ '' ಎಂದು ಹೇಳುವುದುಂಟು. ಕಾವ್ಯದ
ಸವಿಯನ್ನು ಅರಿಯುವವನು ರಸಿಕನು ಮಾತ್ರ; ಅದನ್ನು ಕಟ್ಟಿದ ಕವಿಗೇ
ಆ ಅದೃಪ್ವವಿಲ್ಲ: ತ್ರಮವೆಲ್ಲ ಕವಿಗೆ, ಫಲಪೆಲ್ಲ ಇತರರಿಗೆ--ಎಂದಿಪ್ಟೇ
5 ಈ ಮಾತು ಮುಖ್ಯವಾಗಿ ಓದುವ ಅಥವಾ ಕೇಳುವ ಕಾವ್ಯಕ್ಕೆ ಅನ್ವಯಿಸು
ತ್ತದೆ; ನಾಟಕದಲ್ಲಿ ಸಾಮಾಜಿಕನ ಪ್ರತಿಭೆಗೆ ಇಷ್ಟು ಕೆಲಸವಿಲ್ಲ. ಆದರೆ ರಸಭಾವಗಳನ್ನು
ಗ್ರಹಿಸುವುದರಲ್ಲ ಅವನಿಗೂ ಕಾವ್ಯವಾಚಕನಿಗೂ ಯಾವ ಭೇದವೂ ಇಲ್ಲ.
6 ಪ್ರತಿಪತ್ತ್ಯನ್ ಪ್ರತಿ ಸಾ ಪ್ರತಿಭಾ ನ ಅನುಮಾಯಮಾನಾ ಅಪಿತು ತದಾ
ವೇಶೇನ ಭಾಸಮಾನಾ (ಧ್ವನ್ಯಾ ಲೋಚನ, ಪು. ೨೯).
7 ವಕ್ತ್ಯೃಪ್ರತಿಪತ್ತ್ಯ ಪ್ರತಿಭಾ ಸಹಕಾರಿತ್ವಂ ಪಿ ಅಸ್ಮಾಭಿಃ ದ್ಯೋತನಸ್ಯ ಪ್ರಾಣ
ತ್ಪೇನೋಕ್ತಂ (ಧ್ವನ್ಯಾ. ಲೋಚನ, ಪು. ೧೯).
3 ಕಾವ್ಯಮಾಮಾಂಸಾ, ಪು. ೧೩.
೨೦೪ [ಭಾರತೀಯ ಕಾವ್ಯವಾಮಾಂಸೆ
ಇದರ ತಾತ್ಸರ್ಯವಾದರೆ ಒಪ್ಪುವುದು ಕಪ್ಪ. ತನ್ನ ಕಾವ್ಯವನ್ನು ಓದಿ
ಅನಂದಿಸುವಾಗ, ಅವನು _ಕವಿಯಾಗಿರುವುದಿಲ್ಲ, ತಾನೂ ಒಬ್ಬ ಭಾವಕ
ನಾಗಿರುತ್ತಾ ನೆ ಎಂದು ಹೇಳುವ ಪಕ್ಷದಲ್ಲಿ ಸಮ್ಮತಿಸಬಹುದು. ಇಲ್ಲ ಕೂಡ
ಮೊದಲಲ್ಲ ಕವಿಗೆ ರಸಾನುಭವವಿಲ್ಲದಿದ್ದ ರೆ ಜಾವ ಭವೇ ಹೊಮ್ಮುತ್ತಿರಲಲ್ಲ
ವೆಂಬುದನ್ನೂ, ಅವನ ಅನುಭವವನ್ನೇ ತಾನೂ ಪಡೆಯುವ. ಯತ್ನ
ಸಹೃದಯನದೆಂಬುದನ್ನೂ ಇಲ್ಲ ಮರೆಯಬಾರದು. ಆದರೆ ಇಷ್ಟು
ನಿಜ. ಕವಿಯ ಪ್ರಥಮಭಾವವು ಮಾತಿನಲ್ಲಿ ರೂಪುಗೊಳ್ಳುವ ಸಮಯ
ದಲ್ಲಿ ಮಾರ್ಪಾಡು ಹೊಂದುವುದು ಸಾಧ್ಯವೆಂದು ಪಿಂದೆ ಒಂದು ಅಧ್ಯಾಯ
ದಲ್ಲಿ ನೋಡಿದ್ದೇವೆ. ಪೀಗೆ ಸಂಸ್ಕಾರ ಹೊಂದಿ ಖಚಿತವಾದ ರೂಪದಲ್ಲಿ
ನಿಂತದ್ದ ಕ್ಕೂ ಮೂಲಾನುಭವಕ್ಕೂ ಕೆಲವು ಮಟ್ಟಿಗಾದರೂ ವ್ಯತ್ಯಾಸ
ವಿದ್ಧೆ € ಇರುತ್ತದೆ. ಏಕೆಂದರೆ, ಕಾವ್ಯರಚನೆಗೆ ಪ್ರಾರಂಭಿಸಿದ ವೇಳೆಯಲ್ಲಿ
ಇದರ ಸ್ವರೂಪ ಪೀಗಾದೀತೆಂಬುದನ್ನು ಕವಿಯೇ ನಿರ್ದಿಷ್ಟವಾಗಿ ಕಂಡಿರ
ಲಾರನು. ರಚನೆ ಮುಗಿದ ಬಳಿಕ ಸಮಗ್ರಕ್ಕತಿಯನ್ನು ಓದುವಾಗ ಕವಿಗೂ
ಕೆಲವು ಅಂಶಗಳು ಸಾಮಾಜಿಕರಿಗಾಗುವಂತೆ ಹೊಸದಾಗಿಯೇ ಗೋಚರ
ವಾಗಬೇಕು. ಈ ದೃಷ್ಟಿಯಿಂದ ನೋಡಿದಲ್ಲಿ ತನ್ನ ಪೂರ್ಣಕೃತಿಯನ್ನು
ಕವಿ ಭಾವಕನಾಗಿಯೇ ಓದಿ ಆಸ್ವಾದಿಸುವನೆಂದು ಒಪ್ಪಬಹುದು.
ಆದರೆ, ಭಾವೆಕತ್ಯವು ಎಲ್ಲ ಕವಿಗಳಲ್ಲಿಯೂ ಉಜ್ಜಲವಾಗಿರುವು
ದೆಂದು ಹೇಳಲು ಸಾಧ್ಯವಿಲ್ಲ. ಇದು ತನ್ನ ಕೃ *ಯಿ೦ಬ ಮಮತೆ ಅಡ್ಡಿಯಾಗಿ
ಬಂದು ಅವನಿಗೆ ಸರಿಯಾದ ರಸಾನುಭವ ಒದಗದಿರುವ ಸಂಭವವುಂಟು.
" ಹೆತ್ತವರಿಗೆ ಹೆಗ್ಗಣ ಮುದ್ದು '' ; ತಾನು ಬರೆದದ್ದೆಲ್ಲಾ ಅವನಿಗೆ ಚೆನ್ನಾಗಿ
ಕಾಣಬಹುದು. ವಿವೇಚನೆಯಿಲ್ಲದ ಈ ಅಭಿಮಾನವನ್ನು ಕಾವ್ಯಾ ಸ್ಟಾದವೆಂದು
ಕರೆಯುವುದು ಹೇಗೆ ? ಅಷ್ಟೇ ಅಲ್ಲ. ತನ್ನ ಕೃತಿಯಲ್ಲೇ ಮನಸ್ಸು ನಟ್ಟು
ಹೋಗಿ, ಇನ್ನೊಬ್ಬರ ಕಾವ್ಯದ ರುಚಿಯನ್ನು ಕಾಣುವ ಶಕ್ತಿಯನ್ನೇ ಒಬ್ಬನು
ಕಳೆದುಕೊಳ್ಳಬಹುದು ; ಒಂದು ವೇಳೆ ಉಳಿದಿದ್ದರೂ, ಮಾತ್ಸ ರ್ಯ ಅದನ್ನು
ಮುಚ್ಚಿ ಬಿಡಬಹುದು.” ಈ ಅರ್ಥಕೊಡುವ ಪದ್ಯವೊಂದನ್ನು ರಾಜಶೇಖ
ರನು ಉದಾಹರಿಸಿದ್ದಾನೆ :
೨8 "ಕವಿಗೆ ಕವಿ ಮುನಿವಂ ' ಎಂಬ ವಾಕ್ಯವನ್ನು (ಶಬ್ಮಮಣಿದರ್ಪಣ, ಸೂ. ೧೩೦
ಪ್ರಯೋಗ) ಹೋಲಿಸಿ.
೧೩. ಸಹೈದಯ ೨೦೫
ಕಸ್ತಂ ಭೋಃ ಕವಿರಸ್ಮಿ ಕಾಪ್ಯಭಿನವಾ ಸೂಕ್ತಿಃ ಪಜೇ ಪಠ್ಯತಾಂ
ತ್ಯಕ್ತಾ ಕಾವ್ಯಕಥೈವ ಸಂಪ್ರತಿ ಮಯಾ ಕಸ್ಕಾದಿದಂ ಶ್ರೂಯತಾಂ |
ಯಃ ಸಮೃಗ್ವಿ ನಿನಕ್ತಿ ದೋಪಗುಣಖಯೋಃ ಸಾರಂ ಸ್ವಯಂ ಸೆತ್ಮವಿಃ
ಸ್ಫೋಸ್ಕಿನ್ ಭಾವಕ ಏವ ನಾಸ್ತ್ಮಥ ಧವೇದ್ವೆ ಯವಾನ್ನ ನಿರ್ಮತ್ಸರಃ ॥
(ಕಾವ್ಯಮಾಮಾಂಸಾ, ಪು. ೧೪)
" ಯಾರಪ್ಪ ನೀನು?' " ನಾನೊಬ್ಬ ಕವಿ.' "ಹೊಸದೇನಾದರೂ
ಸುಭಾಷಿತವಿದ್ದರೆ ಹೇಳಯ್ಯ.' "ಈಗ ಕಾವೃದ ಮಾತನ್ನೇ ಬಿಟ್ಟಿದ್ದೇನೆ '.
“ಅದೇಕೆ ?' " ಕೇಳು" ತಾನೇ ಸತ್ಕವಿಯಾಗಿ, ಯಾರು ಗುಣದೋಪಷಗಳೆ
ಸಾರವನ್ನು ಚೆನ್ನಾಗಿ ವಿಷೇಚಿಸಲ್ಲನೋ ಆತನು ನನ್ನ ಕೃತಿಯ ವಿಷಯದಲ್ಲಿ
ಭಾವಕನೇ ಆಗಿರುವುದಿಲ್ಲ. ದೈವವಶದಿಂದ ಒಂದು ಪೇಳೆ ಆದರೂ,
ನಿರ್ಮತ್ಪರನಾಗಿರುವುದಿಲ್ಲ.'
ಇದೆಲ್ಲ ನಿಜವಂಬುದಕ್ಕೆ ಕವಿಕಥೆಗಳಲ್ಲಿ ನಿದರ್ಶನವುಂಟು. ಅದರೆ
ಇವು ನಿಜವಾಗಿ ವೈಕ್ತಿದೋಷಗಳು. ಕವಿಯೂ ಒಬ್ಬ ಮನುಪ್ಯ. ಮಮತೆ
ಮಾತ್ಸರ್ಯಗಳು ಇತರರಂತೆ ಅವನನ್ನು ಮುಸುಕುವುದರಲ್ಲಿ ಅಸಂಭವತ್ವ
ವಾಗಲಿ ಆತ್ಚರ್ಯವಾಗಲಿ ಇಲ್ಲ. ಇಷ್ಟು ಮಾತ್ರಕ್ಕೆ, ಸ್ವಕಾವ್ಯಪರಕಾವ್ಯ
ಗಳಲ್ಲಿ ರಸವನ್ನು ಆಸ್ಕಾದಿಕುವ ಶಕ್ತಿ ಕವಿಜಾತಿಗೇ ಇಲ್ಲವೆಂದು ಹೇಳಿದರೆ
ಪರಿಹಾಸಾಸ್ಪದವಾಗುತ್ತದೆ
ಕವಿ-ಸಸೃದಯರನ್ನು ಸ್ತುತಿಸಿ ಅವರವರ ಕಾರ್ಯವೇನೆಂಬುದನ್ನು
ವಿಶದಪಡಿಸುವ ಕೆಳಗಿನ ಮನೋಹರವಾದ ಪದ್ಯವನ್ನು ಉದಾಹರಿಸಿ ಈ
ಅಧ್ಯಾಯವನ್ನು ಮುಗಿಸೋಣ :
ಲೀನಂ ವಸ್ತುನಿ ಯೇನ ಸೂಕ್ಷ್ಮ ಸುಧಗಂ ತತ್ತ್ವಂ ಗಿರಾ ಕೃಪ್ಯತ್ತೇ
ನಿರ್ಮಾತುಂ ಪ್ರಧವೇನ್ಮ ನೋಹರಮಿದಂ ವಾಚ್ಯೆವ ಯೋ ವಾ ಬಹಿಃ |
ವಂದೇ ದ್ಯಾವಪಿ ತಾವಹ೦ ಕವಿವರಔೌ ವಂದೇತರಾಂ ತಂ ಪುನಃ
ಯೋ ಎಜ್ಞಾತಪರಿಶ್ರ ಮೋ ಯಮನಯೋರ್ಭಾರಾವತಾರಕ್ಷಮಃ 89
" ಒಬ್ಬನು ಪದಾರ್ಥಗಳಲ್ಲಿ ಅಡಗಿರುವ ಸೂಕ್ಷ್ಮ ಸುಂದರವಾದ
ತತ್ತ್ವವನ್ನು ಮಾತಿನಿಂದ ಹೊರಸೆಳೆಯವವನು ; ಇನ್ನೊಬ್ಬನು ಕೇವಲ
ಮಾತಿನಿಂದಲೇ ನೂತನವಾದೆೊ೦ನು ಮನೋಹರ ರೂಪವನ್ನು ನಿರ್ಮಿಸ
9 ವಕ್ರೊ ಕ್ರಿ ಜೀವಿತ, |. ೧೦೭.
೨೦೬ ಭಾರತೀಯ ಕಾವೃಮಾಮಾಂಸೆ
ಬಲ್ಲವನು : ಈ ಕವಿವರ್ಯರಿಬ್ಬರನ್ನೂ ನಾನು ವಂದಿಸುತ್ತೇನೆ. ಇವರಿ
ಬ್ಬರ ಶ್ರಮವನ್ನರಿತು ಅವರ ಭಾರವನ್ನು ಇಳಿಸಿಕೊಳ್ಳಬಲ್ಲವನನ್ನು ಇನ್ನೂ
ಮಿಗಿಲಾಗಿ ವಂದಿಸುತ್ತೇನೆ.”
ಕವಿಪ್ರತಿಭೆಯ ದೃಷ್ಟಿಕಾರ್ಯ ಸೃಷ್ಟಿಕಾರ್ಯ ಗಳು, ಸಹೃ ದಯಪ್ರತಿಭೆಯ
ಅನುಸೃಷ್ಟಿ ಕಾರ್ಯ--ಈ ಮೂರನ್ನೂ ಈ ಪದ್ಯವು ಗ್ರಹಿಸಿ, ಒಟ್ಟು ಪ್ರತಿಭಾ
ತತ್ತ್ಮಕ್ಕೇ ಕೈಗನ್ನಡಿಯಂತಿದೆ.
೧೪, ಕಾವ್ಯಪ್ರಯೋಜನ
ಕಾವ್ಯ ವನ್ನು ಒಬ್ಬ ನು ರಚಿಸುವುದಾಗಲಿ ಇನ್ನೊಬ್ಬ ನು ಓದುವುದಾ
ಗಣಿ ಏತಕ್ಕೆ? ಯಾವ ಯಾವ ಪ್ರಯೋಜನಗಳನ್ನು ಪಡೆಯಲು ಇವರು
ಈ ಕಾರ್ಯಗಳಲ್ಲಿ ತೊಡಗುತ್ಮಾರೆ?-ಈ ಪ್ರಶ್ನೆಗೆ ಲಾಕ್ಷಣಿಕರು ಹೇವು ರೀತಿ
ಗಳಲ್ಲಿ ಉತ್ತರ ಕೊಟ್ಟಿದ್ದಾರೆ. ಇವುಗಳಲ್ಲಿ ಮಮ್ಮಟನ ವಾಕ್ಕವು ಅತಿಶಯ
ಪ್ರಸಿದ್ಧಿಯನ್ನು ಪಡೆದಿರುವುದರಿಂದ ನಮ್ಮ ವಿಚಾರಕ್ಕೆ ಅದನ್ನೇ ತಳ
ಹದಿಯಾಗಿಟ್ಟುಕೊಳ್ಳಬಹುದು :
ನ ಕಾವ್ಯಂ ಯಶಸೆರ್ಥಕೃತೇವ್ಯವಹಾರವಿದೇ ಶಿವೇತರಕ್ಷತಯೇ |
ಸದ್ಯಃ ಪರನಿರ್ವತಯೇ ಕಾಂತಾಸಂಮಿತತಯೋಪದೇಶಯಂುಜೇ |
(ಕಾವ್ಯಪ್ರಕಾಶ, ;, ೨)
"" ಕಾವ್ಯವು ಕೀರ್ತಿಗಾಗಿ, ಧನಾರ್ಜನೆಗಾಗಿ ವ್ಯವಹಾರಜ್ಞಾನಕ್ಕಾಗಿ,
ಅಮಂಗಳನಿವಾರಣಿಗಾಗಿ, ತತ್ಕಾಲದಲ್ಲೇ ಪರಮಾನಂದ ಹೊಂದು
ವುದಕ್ಕಾಗಿ, ಕಾಂತೆಯಂತೆ ಉಪದೇಶಿಸುವುದಕ್ಕಾಗಿ,'' ಕಾವ್ಯ
ದಿಂದ ಪಡೆಯಬಹುದೆಂದು ತೋರಿರುವ ಫಲಗಳನ್ನೆ ಛ್ಲಾಇಲ್ಲಿ ಮನ್ಮುಟನು
ಒಟ್ಟಿಗೆ ಎಣಿಕೆ ಮಾಡಿದ್ದಾನೆ. " ಎಲ್ಲ ಪ್ರಯೋಜನಗಳಿಗೂ ಶಿಖ
ರದಂತಿರತಕ್ಕದ್ದೆ ೦ದರೆ..ರಸಾಸ್ಟಾದದಿಂದ.. ಅದೇ ಸಮಯದಲ್ಲಿಯೇ
ಒದಗಿ ಜೀರೊ೦ದರ ಅರಿವನ್ನೇ ಉಳಿಸದ ಅನಂದ '' ಎಂದು ಅವನು! ವಿವ
ರಿಸಿದ್ದರೂ, ಈ ಪ್ರ ಯೋಜನರಾತಿಯಲ್ಲಿ ಯಾವುದು ನಿಯತ, ಯಾವುದು
ಅನಿಯತ; ಯಾವುದು ಕವಿಗೆ, ಯಾವುದು ಸಹೃದಯನಿಗೆ-ಎಂಬುದನ್ನೆಲ್ಲಾ
ನಮ್ಮ ವಿಚಾರಕ್ಕೆ ಬಿಟ್ಟಿದ್ದಾನೆ ಮ್ಹಮ್ಮಟನ ಉಕ್ತಿಕ್ರಮ ಹಿಂದಿನ ಅಲಂ
ಕಾರಿಕರಿಗೇ ಸರಿದೋರಲಿಲ್ಲ. ಉದಾಹರಣಿಗೆ, ಹೇಮಚಂದ್ರನು " ಕಾವ್ಯಂ
ಅನಂದಾಯ ಯಶಸೆ ಸೇ ಕಾಂತಾತುಲ್ಯತಯಾ ಉಪದೇಶಾಯ'' ಎಂದು
ಮೂರು ರು ಉಪಯೋಗಗಳನ್ನು ಮಾತ್ರ” ನಿರೂಪಿಸುತ್ತಾನೆ. ಎಲ್ಲ ಪ್ರಯೋ
ಜನಗಳಿಗೂ ಸಾರಭೂತವಾದದ್ದು ಎಂಡ ಇದನ್ನು ಕವಿ ಸಹೃದಯರಿ
ಬರೂ ಅನುಭವಿಸುವರು, ಕೀರ್ತಿ ಬರುವುದು ಕವಿಗೆ ಮಾತ್ರ; ಉಪ
1 ಪಕಲಪ್ರಯೋಜನಮಾಿಲಭೂತಂ ಸಮನಂತರಮೇವ ರಸಾಸ್ಟಾದನ ಸಮದ್ಭೂ
ತಂ ವಿಗಳಿತವೇದ್ಯಾಂತರಂ ಅನಂಧಂ '' (ವೃತ್ತಿ).
೨೦ಒಓ
೨೦೮ ಭಾರತೀಯ ಕಾವ್ಯವಿಸಾಮಾಂಸೆ
ದೇತ ಸಹೃ ದಯರಿಗೆ. ಇನ್ನು, ಧನಸಂಪಾದನೆ ಆಗಿಯೇತೀರುವುದೆಂಬ
ನಿಶ್ಚಯವಿಲ್ಲ. ವ್ಯವಹಾರಜ್ಞಾನವು ಶಾಸ್ತ್ರಗಳ ಮೂಲಕವೂ ಅನರ್ಥ
ನಿವಾರಣಿ ಮಂತ್ರಾನುಪ್ಮಾನವೇ ಮೊದಲಾದ ಬೇರೆ ಪ್ರಕಾರಗಳಲ್ಲೂ
ಉಂಟಾಗಬಹುದು? ಆದಕಾರಣ ಇವನ್ನೆಲ್ಲಾ ಕಾವ್ಯಪ್ರಯೋಜನಗಳೆಂದು
ನಾವು ಹೇಳೆಲಿಲ್ಲ-ಎಂದು ಹೇಮಚಂದ್ರನು ಮಮ್ಮ ಟನ ಹೇಳಿಕೆಯನ್ನು
ಟೀಕಿಸುತ್ತಾನೆ. i
ಕವಿಯ ವಿಷಯವನ್ನೇ ಮೊದಲು ಗಮನಿಸೋಣ, ಕಾವ್ಯದಿಂದ
'ಅವನು ಪಡೆಯುವ ನಿಶ್ಚಿತಪ್ರಯೋಜನವೆಂದರೆ ಸೃಷ್ಟಿಕ್ಷಾರುದ್ದ ಆನಂದ
ವೊಂದೇ ತನ್ನಲ್ಲಿ ತುಂಬಿದಅನುಭವಕ್ಕೆ ಮಾತಿನಲ್ಲಿ ರೂಪುಕೊಟ್ಟು ಅಭಿವ್ಯಕ್ತಿ
ಪಡಿಸಿದಲ್ಲದೆ ಅವನಿಗೆ ತೃಪ್ತಿಯಿಲ್ಲ, ರಸವು ಅವನ ಹೃದಯದಲ್ಲ ತುಂಬಿದ
ಹೊರತು ಹೊರಬೀಳುವುದಿಲ್ಲ." ಹಾಗೆ ತುಂಬಿದ ಮೇಲೆ ಅದು ತುಳುಕಿ
ಹೊರಸೂಸಿದ ಹೊರತು ಅವನಿಗೆ ವಿಶ್ರಾಂತಿಯೂ ಇಲ್ಲ ಕೃತಕ್ಕತ್ಯತೆಯ
ಅನೆಂದವೊಂದೇ ಕವಿಗೆ ಒದಗುವ ನಿಶ್ಚಿತ ಪ್ರಯೋಜನ, ಇದಾದ ಮೇಲೆ
ಬರತಕ್ಕದ್ದೆಲ್ಲಾ ಪ್ರಾಸ೦ಗಿಕವೇ ಸರಿ; ಅದೂ ಕೂಡ ಬರುವುದೆಂಬ ನೆಚ್ಚಿ ಕೆ
ಯಿಲ್ಲ.
ಮಿಕ್ಕ ಮಾನವರಂತೆ ಕವಿಗೂ ಆಸೆಅಪೇಕ್ಷೆಗಳು ಉಂಟು. ತನ್ನ
ಕೃತಿಯಿಂದ ಫಲಗಳನ್ನು ಸಾಧಿಸಬೇಕೆಂಬ ಉದ್ದೇಶ ಅವನಿಗೆ ಇಲ್ಲದೆ
ಹೋಗುವುದಿಲ್ಲ ಕಾಳಿದಾಸನಂಥ ಮಹಾಕವಿಯ « ಕವಿಯಶಃಪ್ರಾರ್ಥಿ ''
ಯಾಗಿ ಕಾವ್ಮರಚನೆಗೆ ತೊಡಗಿದನು. ಆದ್ದರಿಂದಲೇ ಇರಬೇಕು, ಧನ
ಲಾಭವು ಅನಿಯತವೆಂದು ಕೈಬಿಟ್ಟ ಕ ಹೇಮಚಂದ್ರನು ಯಶಸ್ಸನ್ನು ಫಲಗಳ
2 ಮಮ್ಮಟನ ಅಭಿಪ್ರಾಯದಲ್ಲ, ಧನಾರ್ಜನೆ ಕವಿಗೆ, ವ್ಯವಹಾರಜ್ಹಾನ ಸಹೃದಯನಿಗೆ
ಎಂಬುದು ಸ್ಪಷ್ಟ. ಅನರ್ಥನಿವಾರಣಿಯನ್ನು ಕಾವ್ಯಫಲವಾಗಿ ಹೇಳಿರುವುದು ಆಧುನಿಕರಿಗೆ
ವಿಚಿತ್ರವಾಗಿ ಕಾಣಿಸಬಹುದು, ಬಾಣನ ಸಮಕಾಲಕನಾದ ಮಯೂರನೆಂಬ ಕವಿ ತನಗೆ
ಒದಗಿದ್ದ ತೊನ್ನನ್ನು " ಸೂರ್ಯಶತಕ 'ದ ರಚನೆಯಿಂದ ಕಳೆದುಕೊಂಡನಂತೆ. ಮಮ್ಮಟನ
ಹೇಳಿಕೆಗೆ ಈ ಐತಿಹ್ಯ ಅಧಾರ,
3 ಕಾಪ್ಯಾನು ಶಾಸನ, ಪು. ೩-೫.
4 ಯಾವತ್ ಪೂರ್ಣೋ ನ ಚೈೊತೇನ ತಾವನ್ಮೊವ ವಮತ್ಯಮುಂ ''--ಭಟ್ಟ
ಮಾಯಕ (ಧ್ವನ್ಯಾ. ಲೋಚನ, ಪು. ೨೭).
೧೪. ಕಾವ್ಯಪ್ರಯೋಜನ ೨೦೯
ಚಿಕ್ಕ ಗುಂಪಿನಲ್ಲಿ ಸೇರಿಸಿದನು. ಆದರೆ ಕೀರ್ತಿ ಕೂಡ ಕವಿಗಳ ಕೈಗಂಟಲ್ಲ
ವೆಂಬುದು ಅನೇಕ ಸಾಹಿತ್ಯಗಳ ಚರಿತ್ರೆಯಲ್ಲಿ ವಿಶದವಾಗಿರುವ ಸಂಗತಿ.
ಮರುಮರೀಟಚಿಕೆಯಂತೆ ಎಷ್ಟೋ ಮಂದಿಯನ್ನು ಇದು ತೊಳಲಿಸಿ ಬಳಲಿ
ಸಿದೆ. ಕೆಲವರಿಗೆ ಜೀವಿತ ಕಾಲದಲ್ಲಿ ಹತ್ತಿರವೂ ಸುಳಿಯಡೆ ಮರಣಾ
ನಂತರ ಒಲಿದು ಬಂದಿದೆ.
ನ ಗೀತಸೂಕ್ತಿರತಿಕ್ರಾಂತೇ ಸ್ತೋತಾ ದೇಶಾಂತರಸ್ಟ್ರಿತೇ |
ಪ್ರತ್ಯಕ್ಷಕವಿಕಾವ್ಯೇ ತು ಸಾವಜ್ಞಃ ಸುಮಹತ್ಯಪಿ ॥
«« ಕವಿ ತೀರಿಕೋಗಿದ್ದರೆ ಅವನ ಸೂಕ್ತಿಗಳನ್ನು [ಲೋಕ] ಹಾಡಿಕೇಳು
ವುದು; ದೇಶಾಂ ತರದಲ್ಲಿದ್ದರೆ [ಓದಡೆ ಸ] ಹೊಗಳುವುದು; ಕಣ್ಣಿದುರಿಗೇ
ಅವನಿದ್ದರೆ ಮಹಾಕಾವ್ಯವಾದರೂ ಅಸಡ್ಡೆ ವಾಡುವುದು > ಎಂಬ ಮಾತು
ಬಲುಮಟ್ಟಿಗೆ ನಿಜ. ಇಂಥ ಚಪಲ ಕೀರ್ತಿಯನ್ನು ಕವಿ ಹೇಗೆ ನೆಚ್ಚ
ಬಹುದು ?
ಆದರೆ ಅದೃಪ್ಟತಶಾಲಿಗಳಾದ ಕೆಲವರುಂಟು. ಅವರಿಗೆ ತಮ್ಮ
ಜೀವಿತಕಾಲದಲ್ಲೇ ಕಾವ್ಯರಚನೆಯಿಂದ ಕೀರ್ತಿಸನ್ಮಾನಗಳು ಮಾತ್ರ
ವಲ್ಫದೆ ಇವಕ್ಕಿಂತಲೂ ಅನಿಶ್ಚಿ ತವಾದ ಸಂಪತೂ, ದೊರೆಯಿತು. ಕನ್ನಡ
ದಲ್ಲಿ ಪಂಪನೇ ಇದಕ್ಕೆ ಉದಾಹರಣಿ, . " ಕ್ಷವಿತೆಯೊಳ್ ಆಸ್ರೆಗೆಯ್ಯ ಫಲ
ಮಾವುದೊ 1. ಪೂಜೆ ನೆಗಡೆ ಲಾಭ೦ ಎಂಬಿವೆ ವಲಂ 1'' ಎಂದು
ಅವನು ತನ್ನ ಮನೋಗತವನ್ನು ಬಿಚ್ಚಿ ಹೇಳಿದನು. ಮಿಕ್ಕವರಿಗೆ ೫೪ ಟ್ಟೆ 13
ಯಾಗಿ ಮಾತ್ರ ನಿಲ್ಲುವ ಈ ಫಲಗಳೆಲ್ಲ ಪಂಪನಿಗೆ ಸಮೃದ್ಧಿಯಾಗಿ ಒದಗಿ
ದುವು. ಸಂಸ್ಕ ತೆ ಸಾಪಿತ್ಯದಲ್ಲ ಬಾಣನನ್ನು ನಿದರ್ಶಿಸಬಹುದು. ಹಿಂದಿನ
ಕಾಲದಲ್ಲಿ, ಮಿಕ್ಕ ರತ್ನಗಳಂತೆ ಕವಿರತ್ನಗಳೂ ರಾಜರ ಆಸ್ಥಾನಗಳನ್ನು
5 ಆಲಂಕಾರಿಕರು ಮುಖ್ಯವಾಗಿ ಪ್ರೀತಿಕೀರ್ತಿಗಳೆರಡನ್ನೇ ಕಾವ್ಯಫಲವಾಗಿ ಹೇಳು
ತ್ತಾರೆ. ಉದಾಹರಣಿಗೆ, ವಾಮನನು "" ಕಾವ್ಯಂ ಸತ್ ದೃಷ್ಟಾದೃಷ್ಟಾರ್ಧಂ ಪ್ರೀತಿ ಕೀರ್ತಿ
ಹೇತುತ್ಪಾತ್'' ಎನ್ನುತ್ತಾನೆ (1. 1. ೫). ಇಲ್ಲ “ಪ್ರೀತಿ” ಎಂದರೆ ಅಹ್ಲಾದ, ಅನಂದ
ಎಂದು ಅರ್ಥ. ಕವಿ ಕೀರ್ತಿಯಂದ ಪಡೆಯುವುದು ಕೂಡ ಆನಂದವೇ ತಾನೆ; ಆದಕಾರಣ
ಎಲ್ಲ ಫಲವನ್ನೂ ಅನಂದದಲ್ಲೇ ಒಳಪಡಿಸಬಹುದೆಂದು ಅಭಿನವಗುಪ್ತನ ಅಭಿಪ್ರಾಯ :
“ ತತ್ರ ಕವೇಃ ತಾವತ್ ಕೀರ್ತ್ಯಾಪಿ ಪ್ರೀತಿರೇವ ಸಂಪಾದ್ಯಾ'' (ಧನ್ಯಾ. ಲೋಚನ:
ಪು. ೧೨.)
6 ಆದಿಪುರಾಣ, ; ೩೬.
KM. 14
೨೧೦ ಭಾರತೀಯ ಕಾವ್ಯಮಾಮಾಂಸೆ
ಸೇರಿ ಅವರ ಆತ್ರಯದಲ್ಲಿ ಬೆಳಗುತ್ತಿದ್ದದ್ದೇ ಸಾಮಾನ್ಯವಾಗಿತ್ತು.
ಆದರೆ ದೊರೆಗಳು ಪ್ರತಿಫಲಾಪೇಕ್ಷೆಯಿಲ್ಲದೆಯೇ ಇವರಿಗೆ ಸೌಕರ್ಯಗಳನ್ನು
ಕಲ್ಪಿಸಿಕೊಡುತ್ತಿರಲಿಲ್ಲ. ತನ್ನ ಪ್ರಭುವಿನ ಕೀರ್ತಿಯನ್ನು ಆಶ್ರಿತನಾದ
ಕವಿ ಅತಿಶಯಪಡಿಸಿ ವರ್ಣಿಸುತ್ತಿದ್ದನು; ಅವನ ಗುಣಾವಳಿಯನ್ನು ತನ್ನ
ಕಾವ್ಯದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಉದ್ಭೋಪಿಸು
ತ್ತಿದ್ದನು. ತನ್ನ ಹೆಸರು ಮಾತ್ರವಲ್ಲದೆ ಆತನ ಹೆಸರೂ ಚಿರಸ್ಛಾಯಿ
ಯಾಗುವಂತೆ ತನ್ನ ಕಾವ್ಯಮಂದಿರದಲ್ಲಿ ನೆಲೆಗೊಳಿಸುತ್ತಿದ್ದನು. ಹೀಗೆ
ಇಬ್ಬರಿಗೂ ಪರಸ್ಪರ ಉಪಕಾರವಾಗುತ್ತಿತ್ತು :
ಖ್ಯಾತಾ ನರಾಧಿಪತಯಃ ಕವಿಸಂಶ್ರಯೇಣ
ರಾಜಾಶ್ರಯೇಣ ಚ ಗತಾಃ ಕವಯಃ ಪ್ರಸಿದ್ಧಿ೦।
ರಾಜ್ಹಾ ಸಮೋಸಷಸ್ತಿ ನ ಕವೇಃ ಪರಮೋಪಕಾರೀ
ರಾಜ್ಹೊ € ನ ಚಾಸ್ತಿ ಕವಿನಾ ಸದೃಶಃ ಸಹಾಯಃ॥*
“: ಕವಿಗಳನ್ನಾ ಶ್ರಯಿಸಿ ರಾಜರು ಖ್ಯಾತಿಹೊಂದಿದರು ; ರಾಜರನ್ನಾಶ್ರಯಿಸಿ
ಕವಿಗಳು ಪ್ರಸಿದ್ಧರಾದರು. ರಾಜನಂಥ ಪರಮೋಪಕಾರಿ ಕವಿಗೆ ಬೇರೆ
ಇಲ್ಲ; ರಾಜನಿಗೂ ಕವಿಯಂಥ ಸಹಾಯಕ ಬೇರೆ ಇಲ್ಲ.
ಹಾಗೆ ನೋಡಿದರೆ, ಈ ವ್ಯಾಪಾರದಲ್ಲ ದೊರೆಗಳಿಗೇ ಲಾಭ ಹೆಚ್ಚೆಂದು
ತೋರುತ್ತದೆ. ಪಂಪನು "ವಿಕ್ರಮಾರ್ಜುನವಿಜಯ ` ದಲ್ಲಿ ತನ್ನನ್ನು ಕೀರ್ತಿ
ಸಿದ್ಧಕ್ಕಾಗಿ ಅರಿಕೇಸರಿ ಅವನಿಗೆ ಕೊಟ್ಟ ಉಡುಗೊರೆಯೂ ರತ್ನ ಸ೦ಚಯವೂ
ದಾಸೀವರ್ಗವೂ ಈಗ ಎಲ್ಲಿ? ಅವನು ಶಾಸನ ಹಾಕಿಸಿಕೊಟ್ಟ ಧರ್ಮವುರ
ಪೆ೦ಬ ಮನೋಹರವಾದ ಅಗ್ರಹಾರದ ನೆಲೆ ಸಿಕ್ಕುವುದೇ ಈಗ ಕಪ್ಪವಾಗಿದೆ.»
ಆದರೆ ಪಂಪನ ಉಕ್ತಿಮಪಿಮೆಯಿಂದ ಈ "" ಸಾಮಂತ ಚೂಡಾಮಣಿ ಯ
ಹೆಸರು ಮಾತ್ರ ಹತ್ತು ಶತಮಾನ ಕಳೆದರೂ ಅಚ್ಚಳಿಯದೆ ನಿಂತಿದೆ. 1
7 ""ರತ್ನಹಾರೀ ತು ಪಾರ್ಥಿ ವಃ ''.. ಎಂಬ ಮಾತನ್ನು ಸ್ಮರಿಸಿ.
8 ಸುಭಾಷಿತಾವಲಿ, ೧೬೦ (" ಭಟ್ಟ ಗೋವಿಂದಸ್ಯಾಮಿನಃ '`).
೨ ತಂಪಭಾರತ, ;1೪. ೫೫೫೭ ನೋಡಿ.
10 ಮೈಲನ ವಾಕ್ಯಗಳನ್ನು ಪ್ರೇರಿಸಿದ ಸಂಸ್ಕೃತದ ಸುಭಾಷಿತ ಐದು, ಇಲ್ಲ ಬಾಣ
ಸವಿ.ಪರ್ಷಚಕ್ರವರ್ತಿಗಳ ಸಂಬಂಧ ನಿರೂಪಿತವಾಗಿದೆ :
ಹೇೇಮ್ನೋ ಭಾರಶತಾನಿ ವಾ ಮದಮುಚಾಂ ಬೃಂದಾನಿ ಮಾ ದಂತಿನಾಂ
ಶ್ರೀಹರ್ಷೇಣ ಸಮರ್ಪಿತಾನಿ ಗುಣಿನೇ ಬಾಣ್‌ಇಯ ಕುತ್ರಾದ್ಯ ತತ್!
ಯಾ ಬಾಣೀನ ತು ತಸ್ಯ ಸೂಕ್ತಿನಿಸರೈರುಟ್ಟಂಕಿತಾಃ ಕೀರ್ತ ಯಃ
ತಾಃ ಕಲ್ಪಪುಲಯೇಪಿ ಯಾಂತಿ ನ ಮನಾಬ್ಕನ್ಯೇ ಪರಿಮ್ಲಾನತಾಂ!
(ಸುಭಾಷಿತಾವಲ ೧೮೦)
೧೪. ಕಾವ್ಯಪ್ರಯೋಜನ ೨೧೧
ಇನ್ನು, ಸಹೃದಯನು ಕಾವ್ಯದಿಂದ ಪಡೆಯುವ ಪ್ರಯೋಜನದ
ಕಡೆಗೆ ತಿರುಗೋಣ. ಕಾವ್ಯವನ್ನು ಓದುತ್ತಿ ದ್ದ ಹಾಗೆಯೇ, ನಾಟಕವನ್ನು
ನೋಡುತ್ತಿದ್ದ ಹಾಗೆಯೇ ಆಸ್ಚಾದವುಂಟಾಗುತ್ತದೆ. ಎದುರಿಗೆ ಹೊಳೆದಾಡಿ
ದಂತೆ, ಹೃದಯವನ್ನು ಹೊಕ್ಕಂತೆ, ಮೈಯನ್ನೆಲ್ಲಾ ಮುತ್ತಿದಂತೆ, ಮಿಕ್ಕದ್ದ
ನ್ನೆಲ್ಲಾ ಮರೆಗೊಳಿಸಿದಂತೆ, ಬ್ರಹ್ಮಾನಂದಪೇ ಒದಗಿದಂತೆ :: ಒಂದು
ವಿಶೇಪಾನುಭವವು ಉಂಟಾಗುತ್ತದೆ. ಇದೇ ರಸಾನುಭವ. « ಪ್ರೀತಿ”,
*" ಅನಂದ '', « ಅಹ್ಲಾದ'', : ಚಿತ್ತ ವಿಶ್ರಾಂತಿ "- -ಇವೆಲ್ಲವೂ ಇದನ್ನೇ
ನಿರ್ದೇಶಿಸುವ ಬೇರೆ ದೇರೆ ಹೆಸರುಗಳು. ಇದು ಸಹೃದಯನಿಗೆ ದೊರೆತ
ಹೊರತು ಅವನ ಪಾಲಿಗೆ ಕಾವ್ಯವು ಕಾವ್ಯವೇ ಆಗುವುದಿಲ; ಇದು ದೊರೆತ
ಮೇಲೆ ಬೇರೆಯ ಫಲಗಳು ಒರಲಿ ಬಾರದಿರಲಿ, ಅದರ ಕಾವ್ಯತ್ವಕ್ಕೆ
ಚ್ಯುತಿಯಿಲ್ಲ.
ಆದರೆ ವಾಚಕನಿಗೆ ಕಾವ್ಯದಿಂದ ದೊರೆಯಬಹುದಾದ ಪ್ರಯೋಜನ
ಇಲ್ಲಿಗೇ ನಿಲ್ಲುವುದಿಲ್ಲ. ಮಮ್ಮಟನ ವಾಕ್ಯಗಳನ್ನು ಮತ್ತೆ ಸ್ಮರಿಸಿದರೆ,
“ ವ್ಯವಹಾರವಿದೇ ?, « ಕಾಂತಾಸಂಮಿತತಯಾ ಉಪದೇಶಯುಜೇ''
ಎಂಬ ಪದಗಳು ಗೋಚರವಾಗುತ್ತವೆ. ಕಾವ್ಯದಲ್ಲಿ ಕವಿ ತನ್ನ ಜ್ಞಾನ
ಭಂಡಾರವನ್ನೆಲ್ಲಾ ಸೂರೆಮಾಡಿರುತ್ತಾನೆ] ಲೋಕದ ನಡೆವಳಿಕೆಯನ್ನು
ನೋಡಿ ಕೇಳಿ, ವಿವಿಧ ಶಾಸ್ತ್ರಗಳನ್ನು ಪರಿತ್ಲೀಲಿಸಿ ಮನನ ಮಾಡಿಕೊಂಡ
ವಿಷಯಗಳನ್ನೆಲ್ಲಾ ಇಲ್ಲ ಯಥೋಚಿತವಾಗಿ ಅಳವಡಿಸಿರುತ್ತಾನೆ. ಅವನ
ಕೃತಿಯನ್ನು ಓದಿದವರ ತಿಳಿವಳಿಕೆ ಜೆಳೆಯುವುದರಲ್ಲಿ ಆಶ್ಚರ್ಯವೇನು ?
ಇದಕ್ಕಿಂತ ಮುಖ್ಯವಾದ ಫಲಪೆಂದರೆ, ವಾಚಕನ ಮನಸ್ಸು ಸಂಸ್ಕಾರ
ಹೊಂದಿ ಅವನಿಗೆ ಧರ್ಮಾಧರ್ಮಗಳ ಪರಿಜ್ಞಾನ ತನ್ನಪ್ಪಕ್ಕೆ ತಾನೇ
ಒದಗಿ ಸನ್ಮಾರ್ಗದಲ್ಲಿ ನಡೆಯಜೇಕೆಂಬ ಪ್ರವೃತ್ತಿ ಯುಂಟಾಗತಕ್ಕದ್ದು.
ಕೆಲಮಂದಿ ಆಲಂಕಾರಿಕರು ಇದನ್ನೇ ಪರ್ಯಂತದ ಪ್ರಯೋಜನವಾಗಿ ಬಾವಿ
ಸಿದರು. ಅವರ ಅಭಿಪ್ರಾಯದಲ್ಲಿ, ಕಾವ್ಯವಿರುವುದು ಸುಕುಮಾರಮತಿಗಳ
ಉಪಯೋಗಕ್ಕಾಗಿ ; ಇವರಿಗೆ ಕಠಿನವಾದ ವೇದಶಾಸ್ಕ್ರಾದಿಗಳನ್ನು ಓದಲು
ಮನಸ್ಸು ಬರುವುದಿಲ್ಲ; ಕಾವ್ಯದಲ್ಲಿ ರಸದ ಸವಿಯಿರುವುದರಿಂದ ಅದಕ್ಕೆ
n “ಪುರ ಐವೆ ಪರಿಸ್ಫುರನ್ ಹೃದಯಮಿವ ಪ್ರವಿಶನ್ ಸರ್ವಾಂಗೀಣಮಿವ
ಅಲಿಂಗವ್, ಅನ್ಯತ್ ಸರ್ವಮಿವ ತಿರೋದಧತ್, ಬ್ರಹ್ಮಾ ಸ್ಕಾದಮಿವ ಅನುಭಾವಯನ್ ''
(ಕಾಷ್ಯಪ್ರಕಾಶ, ೪, ೫ ವೃತ್ತಿ).
14-10
೨೧೨ ಭಾರತೀಯ ಕಾವ್ಯವಿಕಾಮಾಂಸೆ
ಆಸೆಪಟ್ಟು, ಸಕ್ಕರೆ ಬೆರಸಿದ ಅಥವಾ ಜೇನುತುಪ್ಪದಲ್ಲಿ ಕಲಸಿದ ಔಷಧ
ವನ್ನು ಸೇವಿಸುವಂತೆ ಕರ್ತವ್ಯಾಕರ್ತವ್ಯಗಳನ್ನು ಗ್ರಹಿಸುತ್ತಾರೆ. ಇ
ಕಾವ್ಯದಿಂದ ಸುಕುಮಾರಮತಿಗಳೂ ಅರಿವನ್ನು ಪಡೆಯಬಹುದು ; ನಡತೆ
ಯನ್ನು ತಿದ್ದಿ ಕೊಳ್ಳಬಹುದು. ಆದರೆ ಕಾವ್ಯರಸ್ಪವಿರುವುದು ಈ ಉದ್ದೇ
ತದ ಸಾಧನೆಗಾಗಿಯೇ ಎಂದು ಹೇಳಿದ ಪಕ್ಷದಲ್ಲಿ ಮುಖ್ಯಾಮುಖ್ಯ ವಸ್ತು
ಗಳನ್ನು ಕರುಗಮುರುಗ ಮಾಡಿದಂತಾಗುತ್ತದೆ. ಕಾವ್ಯಕ್ಕಿಂತ ಹೆಚ್ಚಾಗಿ
ನಾಟಕದಲ್ಲಿ ಉಪದೇಶವು ಪ್ರಧಾನವಾಗಿರಬೇಕೆಂಬ ಭಾವನೆ ಪ್ರಬಲ
ಸಿದ್ಧಂತೆ ಸೂಚನೆಯುಂಟು. "" ಕಾವ್ಯಾಲಾಪಾಂಶ್ಚ ವರ್ಜಯೇತ್ ''
ಎಂಬ ಬೆದರಿಕೆಯನ್ನು ನಿವಾರಿಸಲು ಹೀಗೆ ನೀತಿಜೋಧೆಗೆ ಪ್ರಾಶಸ್ತ್ಯ
ವನ್ನು ಕೊಡಬೇಕಾಯಿತೇಮೋ. ಆದರೆ ಈ ಬಗೆಯ ದೃಪ್ಟಿಯನ್ನು ಅಲ್ಲ
ಗಳೆಯುವವರೂ ಹಿಂದೆಯೇ ಇದ್ದರು :
ಅನಂದನಿಷ್ಯಂದಿಷು ರೂಪಕೇಷು
ವ್ಯತ್ನತ್ತಿ ಮಾತ್ರಂ ಫಲಮಲ್ಪಬುದ್ಧಿ 1
ಯೋಪೀತಿಹಾಸಾದಿನದಾಹ ಸಾಧ
ತಸ್ಮೈ ನಮಃ ಸ್ಯಾದುಪರಾಜ್ಮುಖಾಯೆ॥ (ದಶರೂಪಕ, ;, ೬)
"“ ಆನಂದವನ್ನು ಸೂಸುವ ನಾಟಕಗಳಲ್ಲಿ, ಇತಿಹಾಸಾದಿಗಳಲ್ಲಿರುವಂತೆ
ವ್ಯತ್ಪತ್ತಿ ಯೊಂದೇ ಫಲವೆಂದು ಅಲ್ಪಮತಿಯಾದ ಯಾವ ಸಾಧುಮಹಾ
ಶಯನು ಹೇಳಿದನೋ, ಸವಿಯ ಕಡೆಗೆ ಬೆನ್ನು ತಿರುಗಿಸಿ ನಿಂತ ಆತ
ನಿಗೆ ನಮಸ್ಕಾರ | '' ಹೀಗೆಂದು ಧನಂಜಯನು ಉಪಹಾಸಮಾಡಿದ್ದಾನೆ.
ಇವನಿಗೆ ಬಹುಶಃ ಪ್ರೇರಕನಾದ ಭಟ್ಟನಾಯಕನು ಇನ್ನೂ ಮುಂದೆ
ಹೋಗಿ “ಕಾವ್ಯೇ ರಸಯಿತಾ ಸರ್ವೋ ನ ಜ್ರೋದ್ಧಾ ನ ನಿಯೋಗ.
ಭಾಕ್ '' ಎಂದು ಘೋಷಿಸಿದನಪ್ಟೆ. ಕಾವ್ಯದಲ್ಲಿ ಯಾರೇ ಪಡೆಯು
ವುದೂ ರಸಾಸ್ಟಾದವೊಂದೇ; ಅವರಿಗೆ ಅದರಿಂದ ತಿಳಿವಳಿಕೆಯೂ ಬರ
ಬೇಕಾಗಿಲ್ಲ, ವಿಧಿನಿಷ್ಠೇಧಗಳೂ ಗೊತ್ತಾಗಜೇಕಾಗಿಲ್ಲ. ಎನ್ನುವಷ್ಟು
ನಾವು ವೀರರಸಿಕರಾಗಬೇ ಕಾಗಿಲ್ಲ. ರಸಾನುಭವವೇ ಕಾವ್ಯದ ಪರಮ
ಪ್ರಯೋಜನವೆಂಬುದನ್ನು ಒಪ್ಪಿ, ಇದರ ಜೊತೆಗೆ ನೀತಿಜ್ಞಾನವೂ ಹೇಗೆ
ಲಭಿಸಬಹುದೆಂಬುದನ್ನು ವಿಚಾರಮಾಡೋಣ.
12 ಪಾಹಿತ್ಮದರ್ಪನಿ | ೨ ವೃತ್ತಿ
1 ಧ್ವನ್ಯಾ., ಪು. ೧೨ ನೋಡಿ.
೧೪. ಕಾವ್ಯಪ್ರಯೋಜನ ೨೧೩
ಇದಕ್ಕೆ ಉತ್ತರವು "" ಕಾಂತಾಸಂಮಿತತಯಾ ಉಪಡೇಶಯುಜೇ”'
ಅಂಬ ಮಾತಿನಲ್ಲಿದೆ. ಕರ್ತವ್ಯಾಕರ್ತವ್ಯಗಳನ್ನು ಶ್ರುತಿಸ್ಮೃ ೬ಿಗಳಿಂದಲೂ
ಅರಿಯಬಹುದು, ಇತಿಹಾಸೆಪುರಾಣಗಳಿಂದಲೂ ಅರಿಯಬಹುದು, ಕಾವ್ಯ
ದಿಂದಲೂ ಅರಿಯಬಹುದು. ಮಾರ್ಗವು ಮಾತ್ರ ಬೇರೆ ಬೇರೆ. ಪ್ರಭು
ನ
೦ಮಿತ, ಮಿತ್ರಸಂಮಿತೆ, ಕಾಂಶಾಸಂಮಿತ, ಎಂಬ ಮೂರು ಹೋಲಿಕೆ `
ಗಳು ಈ ಮರ್ ದಾರಿಯನ್ನು ನ ಸೂಚಿಸುತ್ತವೆ... ಪೇದವಾಕೃವು
ಪ್ರಧುವಿನ ಆಜ್ಞೆ ಯಂತೆ; ಕಾನೂನಿನಂತೆ : "«" ಇದನ್ನು ಮಾಡಬೇಕು.
ಇದನ್ನು ಮಾಡಕೂಡದು. ತಪ್ಪಿದರೆ ಇಂಥ ದಂಡನೆ '' ಎಂದು ಅದು
ವಿಧಿಸುತ್ತ ದೆ. ಕರ್ತವ್ಯಲೋಪವಾದರೆ ಶಿಕ್ಷೆಗೆ ಒಳೆಗಾಗುವೆವಲ್ಲಾ ಎಂಬ
ಭಯದಿಂದ ಜನರು ಅದನ್ನು ಅನುಸರಿಸುತ್ತಾರೆ. ಇತಿಹಾಸಪುರಾಣಗಳಲ್ಲಿ
ಈ ಬಗಿ ಸಡಿಲುತ್ತದೆ. ಸ ದಂಡಧಾರಿಯಾದ ದೊರೆಯಂತಲ್ಲ: ಸಲಿ
ಗೆಯ ಗೆಳೆಯನಂತೆ. ಹಿಂಡೆ ಯಾರು ಯಾರು ಹೇಗೆ ಹೇಗೆ ಮಾಡಿದ್ದ.
ರಿಂದ ಹೇಗೆ ಹೇಗೆ ಪರಿಣಮಿಸಿತು ಎಂದು ದೃಪ್ವಾಂತಗಳನ್ನು ಕೊಟ್ಟು,
ಯುಕ್ತಿಯುಕ್ತವಾಗಿ ವಿಷಯಪ್ರತಿಪಾದನೆ ಮಾಡಿ ಕರ್ತವ್ಯಾಕರ್ತವ್ಯ
ಗಳನ್ನು ಜೋದಿಸುತ್ತವೆ. ಅವುಗಳ ಸರಣಿ ಜನಗಳ ಬುದ್ಧಿಗೆ ಒಪ್ಪಿಗೆ
ಯಾಗುತ್ತದೆ. ಆದಕಾರಣ, ಕೇವಲ ಭಹುದಿ೦ದಲ್ಲ, ವಿಚಾರಪರತೆಯಿಂದ
ಸನ್ಕಾರ್ಗದಲ್ಲ ಅವರು ತೊಡಗುತ್ತಾರೆ. ಆದರೆ ಇಲ್ಲೂ ಕೂಡ ಉಪದೇಶ
ವನ್ನು ಕೇಳುತ್ತಿ ದೆ ವೆ 3 ಎಂಬ ಭಾವನೆ ದೂರವಾಗುವುದಿಲ್ಲ.
ಕಾವ್ಯದಲ್ಲಾದರೆ ಪರಿಸ್ಥಿತಿಯೇ ಬೇರೆಯಾಗುತ್ತದೆ. ಇಲ್ಲಿ ಕೇಳ
ದೈಲ್ಲ ಜಾ ಕ ಹೃದಯವನ್ನು ಒಳಹೊಗುವುದರಿಂದ ತಾನು
ಉಪದೇಶ ಪಡೆಯುತ್ತಿದ್ದೇನೆಂದು ಸಹೃದಯನಿಗೆ ಅನ್ನಿಸುವುದೇ ಇಲ್ಲ.
ಅದು ಗುರುತು ಸಿಕ್ಕದಂತೆ ಬಂದು ಮನಸ್ಸನ್ನು ಸಂಸ್ಕರಿಸಿ ಸನ್ಮಾರ್ಗದ
ಕಡೆಗೆ ತಿರುಗಿಸುತ್ತದೆ. ಇದನ್ನೇ ": ಕಾಂತಾಸಂಮಿತ '' ಎನ್ನುವುದು.
ಕಾವ್ಯವು ಕಾಂತೆಯಂತೆ. ಇನಿಯಳು ನಲ್ಲನ ಹೃದಯವನ್ನೇ ಸೆರೆಪಿಡಿದಿರು
ವುದರಿಂದ ಅವಳ ಒಂದೊಂದು ಉಕ್ತಿಯೂ ಒಂದೊಂದು ಚರ್ಯೆಯೂ ಅವ
ನಿಗೆ ಅತ್ಯಂತ ಮಧುರವೆನ್ನಿಸುತ್ತದೆ. ಅವಳು ಉದ್ದೇಶಿಸಿದ ಪಿತವೆಲ್ಲ
4
1 ಸಂಮಿತ-ಸದೃಶ.
೨೧೪ ಭಾರತೀಯ ಕಾವ್ಯಮಾಮಾಂಸೆ
ಇವನಿಗೆ ಪ್ರಿಯವಾಗಿ ತೋರುತ್ತದೆ. ಈ ಸಂದರ್ಭದಲ್ಲ ಕೆಳಗಿನ ಶ್ಲೋಕ
ವನ್ನು ಉದಾಹರಿಸಬಹುದು :
ಯದೇವ ರೋಚತೇ ಮಹ್ಯಂ ತದೇವ ಕುರುತೇ ಪ್ರಿಯಾ।
ಇತಿ ವೇತ್ತಿ ನ ಜಾನಾತಿ ತತ" ಪ್ರಿಯ೦ ಯತ" ಕರೋತಿ ಸಾ||!
[ಏನು ಮೆಚ್ಚಿಕೆ ನನಗೆ, ಅದನೇ ನಲ್ಲೆ ಯೆಸಗುವಳಿಂಬನು ;
ಏನನವಳೆಸಗುವಳೊ ಅದೆ ಆದೆ ಮೆಚ್ಚು ತನಗೆಂದರಿಯನು ||
ಇದರ ಮೇಲೆ, ನಲ್ಲೆ ಏನನ್ನೂ ಬಾಯಿಬಿಟ್ಟು ಹೇಳಬೇಕಾಗಿಯೇ ಇಲ್ಲ;
ಹಾಗೆ ಆವಳು ಹೇಳುವುದೂ ಇಲ್ಲ. ಅವಳ ಮಾತಿನ ಒಂದು ಸೂಚನೆ,
ನಡತೆಯ ಒಂದು ಪ್ರೇರಣಿ ನಲ್ಲನ ಮನಸ್ಸನ್ನು ತಿದ್ದುತ್ತದೆ. ಸರಸವಾದ
ಕಾವ್ಯದ ಪ್ರಭಾವವೂ ಹೀಗೆಯೇ. ಕವಿ ತನ್ನ ಕಾವ್ಯದಲ್ಲ ಸ್ಪ್ಪವಾಗಿ
ಯಾವ ನೀತಿಯನ್ನೂ ಬೋಧಿಸುವುದಿಲ್ಲ, ಹಾಗೆ ಅದನ್ನು ವಾಚ್ಯವಾಗಿ
ತಂದರೆ ಅದರ ರಮಣೀಯತೆ ಹ್ರಾಸವಾಗುವುದೆಂದು ಅವನಿಗೆ ಗೊತ್ತು.
ಇದನ್ನು ಮಾಡು, ಅದನ್ನು ಮಾಡಜೇಡ ಎಂದು ವಿಧಿಸದೆ, ಪೀಗೆ ಮಾಡಿ
ದರೆ ಒಳ್ಳೆಯದು, ಹಾಗೆ ಮಾಡದಿದ್ದರೆ ಮೇಲು ಎಂದು ಬೋದಿಸದೆ, ತನ್ನ
ಕಧಾಸಂವಿಧಾನ ಪಾತ್ರವಿನ್ಯಾಸಗಳೆ ಮೂಲಕ ಒಳ್ಳೆಯದುಕೆಟ್ಟದ್ದರ
ಅರಿವು ಅಭಿವ್ಯ ತಸ ವಾಗುವಂತೆ ರಚನೆಮಾಡಿರುತ್ತಾ ನೆ. ಸಹೃದಯನು
ತನ್ಮ ನ ಯತೆಯಿಂದ ಕಾವ್ಯ ವನ್ನು ಒದುವಾಗ, ನಾಟಕವನ್ನು ನೋಡುವಾಗ
ಅಲ್ಲಿಯ ನೀತಿದೃಪ್ಪಿ ಇವನಿ ನಿಗೂ ಒದಗುತ್ತದೆ. ಕಾವ್ಯ ದಲ್ಲ ಒದಗುವುದು
ಅನುಭವ ಮಾತ್ರ ; ಅದರಿಂದಲೇ ತಿಳಿವಳಿಕೆಯೂ ಸಿದ್ಧಿಸುತ್ತದೆ." ಕಾವ್ಯ
ಪ್ರಯೋಜನಗಳಾದ ಆನಂದ ವ್ಯತ್ಪತ್ತಿ ಗಳನ್ನು ಜೇರೆ ಬೇರೆ. ಎಂದು ವ
ಸುವುದೇ ತಪ್ಪು. ಎರಡರ ವಿಷಯವೂ ಒಂದೇ. ವಿಭಾವಾನುಭಾವ
ಗಳನ್ನು ಉಚಿತವಾಗಿ ಹವಣಿಸಿ ಕಾವ್ಯ ಕಟ್ಟಿದರೆ ತಾನೆ ಆನಂದವೊದಗ
ತಕ್ಕದ್ದು. ಈ ವಿಭಾವಾನುಭಾವಗಳ ಸ್ವರೂಪವನ್ನು ಸರಿಯಾಗಿ
15 ಸರಸ್ವತೀಕಂಠಾಭರಣ, ಪು. ೬೯೮.
16 “ ಪ್ರತೀತಿಮಾತ್ರಪರಮಾರ್ಥಂ ಚ ಕಾವ್ಯಾದಿ, ತಾವತ್ಯೊವ ವಿನೇಯೇಪು ವಿಧಿ
ನಿಷೇಧವೃೃತ್ಪತ್ತಿ ಸಿದ್ಧೇಃ '' (ವ್ಯಕ್ತಿವಿವೇಕ, ಪು. ೭೪).
೧೪. ಕಾವೃಪ್ರಯೋಜನ ೨೧೫
ಅರಿತುಕೊಳ್ಳುವಾಗ ಸಾಮಾಜಿಕನಿಗೆ ತನ್ನಪ್ಪಕ್ಕೆ ತಾನೇ ವ್ಯತ್ಪತ್ತಿ ಲಭಿಸು
ವುದು. ” ಅದಕ್ಕಾಗಿ ಅವನು ಬೇರೆ ಪ್ರಯಾಸಪಡಬೇಕಾಗಿಲ್ಲ.'*
ಕಾವ್ಯದಿಂದ ದೊರೆಯುವ ಈ ಫಲವನ್ನು «: ಉಪದೇಶ '' ವೆಂದು
ಕರೆಯುವುದೇ ಸರಿಯಲ್ಲ; *“ ಸತ್ಪ್ರೇರಣಿ'' ಎಂಬ ಹೆಸರು ಇದಕ್ಕೆ ಹೆಚ್ಚು
ಉಚಿತವಾದೀತು.* ಅಭಿನವಗುಪ್ತನು ಹೀಗೆ ಬರೆಯುತ್ತಾನೆ: "" ಏನು,
ಗುರುವಿನಂತೆ ಉಪದ್ದೇಶಮಾಡುತ್ತದೆಯೇ ? ಎಂದು ಪ್ರಶ್ನಿಸಿದರೆ. ಅಲ್ಲ;
ಬುದ್ಧಿಯನ್ನು ಬೆಳಸುತ್ತದೆ , ಸಹೃದಯನ ಪ ಪ್ರತಿಭೆಯನ್ನು ಆ Ei
ನಡಸುತ್ತದೆ.'' ಈ ಮಾತಿನಿಂದ ಇನ್ನೊಂದು ವಿಷಯವನ್ನು ಪ
ಪ್ಯಾರಗೊಳಿಸಬಹುದು. ನೇರವಾಗಿ ಎದ್ದುಕಾಣುವ ತ
ಕಾವ್ಯದಲ್ಲಿ ಸ್ಥಾನವಿಲ್ಲ. ರಸಕ್ಕೆ ಅಂಗವಾಗಿ ಏನನ್ನಾದರೂ ಕವಿ ತರಲಿ ;
ಉಪದೇಶ ವಿಷಯವನ್ನೂ ಅವಶ್ಯವಾಗಿ ತರಲಿ. ಆದರೆ ಅದು ಶುಷ್ಮವಾಗಿ
ಬರಕೂಡದು ; ಉಪಡೇತಷೆಂದು ಗೋಚರವಾಗಕೂಡದು.
ಅಂತೂ, ಮಹಾಕೃತಿಗಳಲ್ಲಿ ಜೀವನದ ಸಾರವನ್ನೊ ಳಕೊಂಡ ಕಥಾ
ವಸ್ತುವೂ ಉದಾತ್ತಪ್ರಕೃತಿಯ ಕಥಾಪುರುಷರೂ ಚಿತಿ ತರಾಗಿರುವುದರಿಂದ
ಅವನ್ನು ಓದುವವನು ರಾಸ್ತಾದದೊಂದೆ ಆತ್ಮಸಂಸ್ಕಾರವನ್ನು ಪಡೆದೇ
ಪಡೆಯುತ್ತಾ ನೆ. ಇಲ್ಲವ್ಯತ್ಸತ್ತಿ ಪ್ರತ್ಯಕ್ಷವಾಗಿ ದಾರದಿರುವುದರಿಂದ ಅದು
ಅಳತೆಗೆ ಸಿಕ್ಕುವುದಿಲ್ಲ; ಆದಕಾರಣವೇ ಅದರ ಪ್ರಭಾವ ಅತಿಶಯವಾಗ
11 ನ ಚ್ಛೆತೇ ಪ್ರೀತಿವ್ಯತ್ಸತ್ತೀ ಭಿನ್ನರೂಪೇ ಏವ, ದ್ವಯೋರಪ್ಶೇಕವಿಷಯತ್ವಾತ".
ವಿಭಾವಾದ? ಚಿತ್ಯಮೇವ ಪಿ ಸದ್ಯಃಪ್ರೀತೇರ್ನಿದಾನಮಿತಿ ಅಸಕೃದವೋಟಾಮ. ವಿಭಾವಾ
ದೀನಾಂ ತದ ಸಚಿವರ ಯಥಾಸ್ಪರೂಪವೇದನಂ ಫಲಪರ್ಯಂತೀಭೂತತಯಾ
ವ್ಯತ್ಪತ್ತಿರಿತುಚ್ಯತ್ತೇ, ,,'' (ಧ್ವ್ಯನ್ಯಾ, ಲೋಚನ, ಪು. ೧೪೯).
ರಳ
ip ವೇದವನ್ನೂ ಇತಿಹಾಸವನ್ನೂ ಕ್ರಮವಾಗಿ ಪ್ರಭುವಿಗೂ ಮಿತ್ರನಿಗೂ ಹೋಲಿಸಿ,
ಕಾವ್ಯದಲ್ಲಿ ಕಾಂತೆಯ ಸಾದೃಶ್ಯವನ್ನು ಕಂಡವರಲ್ಲ ಭಟ್ಟನಾಯಕನೇ ಮೊದಲಗನೆಂದು
ತೋರುತ್ತದೆ. (ರುಚಕನ ಕಾವ್ಯಪ್ರಕಾಂಶಶಂಕೇತ, ಪುಟ ೧೬, ಅಡಿಟಪ್ಪಣಿ ೧೨ ನೋಡಿ.)
ಬಹುತಃ ಅವನನ್ನೇ ಅನುಸರಿಸಿ, ಈ ಹೋಲಿಕೆಗಳನ್ನು ಅಭಿನವಗುಪ್ತನೂ ಹೇಳುತ್ತಾನೆ
(ಧೃನ್ಯಾ. ಲೋಚನ, ಪು, ೧೨).
1೪ « ಈ ಕಾವ್ಯಕಾರ್ಯವನ್ನು ಉಪದ್ದೇಶವೆಂದಾಗಲಿ ಜೋಧನೆಯೆಂದಾಗಲಿ ಕರೆಯುವು
ಕ್ಕಿಂತ ಪ್ರೇರಣಿಯೆಂದು ಕರೆಯುವುದು ಉಚಿತವೂದೀತು.” (ಡಿ. ವಿ. ಗುಂಡಪ್ಪ: "ಕನ್ನಡ
ನ್ಯ ಯ ವಿಮರ್ಶೆ, ಪ್ರಬುದ್ಧ ಕರ್ಣಾಟಕ, ;%, ೪)
2". ವನು ಕಿಂ ಗುರುವದುಪದೇಶಂ ಕರೋತಿ ; ನೇತ್ಯಾಹ--ಕಿಂತು ಬುದ್ಧಿಂ ವಿವರ್ಧ
ಯತಿ, ಸ್ವಪ್ರುತಿಭಾಂ ಏವಂ ವಿತರತೀತ್ಯರ್ಥಃ'' (ಅಭಿನವಭಾರತ್ತೀ 1, ಪು ೪೧]. ಧೃನ್ಯಾ.
ಲೋಚನ, ಪು. ಒ೦ ನ್ನೂ ನೋಡಿ.
೨೧೬ ಭಾರತೀಯ ಕಾವ್ಯಮಾಮಾಂಸೆ
ಬಲ್ಲುದು. ಇನ್ನೊ ೦ದು ವಿಷಯ- ರಸಾನುಧವವು ಒದಗುವ ಮೊದಲು
ಕಥೆಯ ಪ ಪ್ರಸಂಗಗಳನ್ನು ಸಹೈದಯನು ತನ್ಮಯತೆಯಿಂದ ಅರಿಯಬೇಕಪ್ಪೆ;
ಅಲ್ಲಿಯ 'ಆರ್ಡ್ರನನ್ನಿಷೇತಗಳಲ್ಲ ಕರಗಿ, ಅಲ್ಲಿಯ ಉಜ್ಜ್ವಲ ಸನ್ನಿವೇಶ
ಗಳಲ್ಲಿ ಪಿಗ್ಗಿ ಇವನ ಅಂತರಂಗವು ಖಂಡಿತ ಉತ್ತ ಮಗೊಳ್ಳುತ್ತ ದೆ. ಕಾವ್ಯ
ವನ್ನು ಓದಿ ಕೆಳಗಿಟ್ಟ ಬಳಿಕ, ನಾಟಕ ಮಂದಿರದಿಂದ ಹಿಂದಿರುಗಿದ ಬಳಿಕ,
ಇವನು ಲೌಕಿಕ ವ್ಯವಹಾರದಲ್ಲಿ ಮತ್ತೆ ತೊಡಗುವುದೇನೋ ನಿಜ; ಆದ
ಮಾತ ಕ್ಕೆ, ಕಾವ್ಯನಾಟಕಗಳ ಪರಿಣಾಮ ಸಂಪೂರ್ಣವಾಗಿ ಇವನ ಹೈದಯ
ಬ ಅಳಿಸಿ ಹೋಗುವುದಿಲ್ಲ. ಕ್ಷಾವ್ಯರಸದಲ್ಲಿ ಮಿಂದ ಮನಸ್ಸನ್ನು
ಪನ್ನೀರಿನಲ್ಲ ಅದ್ದಿದ ವಸ್ತ್ರಕ್ಕೆ ಹೋಲಿನಬಹುದೆ ; ; ಒಣಗಿದ ಮೇಲೆ ಕೂಡ
ಅದರಲ್ಲಿ ಪರಿಮಳ. ಕೊಂಚವಾದರೂ ಉಳಿದಿರುತ್ತದೆ. ಕಾವ್ಯ ವನ್ನು ಓದಿದ
ಧನ ಪ ಕೃತಿ ನಮಗೆ ಹೊಸ ಬಗೆಯಾಗಿ. 'ಕಾಣುವುದೆಂದು ಸ
ಅಧ್ಯಾಯದಲ್ಲಿ ಸೂಚಿಸಿದೆಯಪ್ಪೆ.2! ಅಪ್ಪೇ ಅಲ್ಲ; ಕಾವ್ಯವನ್ನು ಓದಿದ
ಬಳಿಕ ನಾವೇ ಹೊಸ ಮನುಷ್ಯರಾಗುತ್ತೇವೆ.
ಪ್ರೇರಣ್ ಪ್ರಭಾವಗಳ ವಿಷಯವಿರಲಿ. ಕಾವ್ಯದ ಅವಶ್ಯ ಫಲ
ವಾದ ಆನಂದವನ್ನೇ ಪುರುಪಾರ್ಥಗಳ ಶ್ರೇಣಿಗೆ ಸೇರಿಸಬೇಕು. ಈ
ಆನಂದವನ್ನು ಬ್ರಹ್ಮಾ ಸ್ವಾದ ಪದೃತವ್ದೆಂದು ಲಾಕ್ಷಣಿಕರು ಪ್ರತಂಪಿಸುತ್ತಾರೆ.
ಕಾವ್ಯವನ್ನು ಸವಿಯುವಾಗ ಸಹೃದಯನ ಅಹಂಕಾರ ಮಮಕಾರಗಳು
ಜಗುಳಿಹೋಗುತ್ತವೆ ; ಅವನು ರಾಗದ್ವೇಷಗಳನ್ನು ಮರೆತು, ನಿಲುವಿಲ್ಲದೆ
ತೊಳಲುವ ಚಿತ್ತವನ್ನು ವಿಶ್ರಾಂತಿಗೊಳಿಸಿ, ಲೋಕೋತ್ತರವಾದ ಆಹ್ಲಾದ
ದಲ್ಲಿ ಮೈಮರೆಯುತ್ತಾ ನೆ. ಈ ಕಾವ್ಯಾನಂದವು ತಾತ್ಕಾಲಿಕವೆಂಬುದು
ನಿಜ; ಅದನ್ನು ಅನುಭವಿಸುತ್ತಿರುವ ವೇಳೆಯಲ್ಲ ಕೂಡ ಪರತತ್ತ್ವದ ನಿಶ್ಚಿತ
ಜ್ಞಾನ ಇರುವುದಿಲ್ಲವೆಂಬುದು ನಿಜ. ಆದರೆ ಈ ಪರಿಮಿತ ಸನ್ನಿವೇಶ
ರೇ ಸಂಸಾರದ ಕೋಟರಲೆಗಳಿಂದ ಕ್ಷಣಕಾಲವಾದರೂ ಪಾರಾಗಿ
ಲ
ಮನುಷ್ಯನ ಆತ್ಮವು ) ಪರಮಯೋಗಿಗಳಿಗೆ ಲಭ್ಯವಾಗು ವಾಗುವ ಬ್ರ ಬ್ರಹ್ಮಾನಂದ
2! ಅಧ್ಯಾಯ ೧೨, ಪು. ೧೯೧-೨.
೧೪. ಕಾವ್ಯಪ್ರಯೋಜನ ೨೧೭
ಮೊದಲ ಸವಿಯನ್ನು ಕಾಣುವುದೆಂಬುದೂ_ ನಿಜ. ಕಾವ್ಯವೂ ಒಂದು
ಯೋಗ ; ಅದು ಸಂಸಾಂಡ ಯ ಯೋಗ. 22
ಭಟ್ಟನಾಯಕನು ಇಷ್ಟಕ್ಕೇ ನಿಲ್ಲದೆ, ಯೋಗಿಗಿಂತ ರಸಿಕನಿಗೇ
ಅನುಕೂಲತೆ ಹೆಚ್ಚೆನ್ನುವಷ್ಟು ದೂರ ಹೋಗಿ, ಪೀಗೆನ್ನುತ್ತಾನೆ :
ವಾಗ್ಧೆ €ಮುರ್ದುಗೃ ಏಕ೦ ಹಿ ರಸಂ ಯದ್ಭಾಲಶೃಪ್ಣಯಾ |
ತೇನ ನಾಸ್ಕ ಸಮಃ ಸ ಸ್ಯಾತ್ ದುಹೈತೇ ಯೋಗಿಭಿರ್ಹಿ ಯಃ 1೫
«ವಾಣಿಯೆ೦ಬ ಹಸು ಕರುವಿನ ಮೇಲಿನ ಮಮತೆಯಿಂದ ಯಾವ ಅಪೂರ್ವೆ
ರಸವನ್ನು ತಾನಾಗಿಯೇ ಕರೆಯುತ್ತದೆಯೋ, ಅದಕ್ಕೆ ಯೋಗಿಗಳು
ಕರೆದುಕೊಳ್ಳುವ ರಸವು ಕೂಡ ಸಮಾನವಾಗದು.'' ಇಲ್ಲ ಕವಿವಾಣಿಯೇ
ಹಸು; ಸಹೃದಯನೇ ಕರು. ಕೆಚ್ಚಲಗೆ ಕರು ಬಾಯಿಟ್ಟ ಕೂಡಲೆ,
ಹಸು ಪ್ರೇಮದಿಂದ ಹೊರು ಬಿಟ್ಟು ಸಾರತರವಾದ ಅಮೃತವನ್ನು
ಸೂಸುವಂತೆ ಕವಿವಾಣಿ ರಸಾಸ್ವಾದವನ್ನು ಸಸ್ಕ ದಯನಿಗೆ ತಾನಾ
ಗಿಯೇ ಉಂಟುಮಾಡಿಕೊಡುತ್ತೆದೆ. ಇದಕ್ಕಾಗಿ ಇವನು ಯಾವ
ಪ್ರಯತ್ನವನ್ನೂ ಮಾಡಬೇಕಾಗಿಲ್ಲ, ಯಾವ ಪ ರ್ರ ಯಾಸವನ್ನೂ ಪಡಜೇಕಾ
ಗಿಲ್ಲ ; ಹೃದಯವೊಂದನ್ನು ತೆರೆದಿಟ್ಟು ಚ. ಕುಳಿತರೆ ಸಾಕು. ಈ
ಸೌಲಭ್ಯ ಯೋಗಿಗಳಿೆಲ್ಲ ಬಂತು? ಗಳಳಿಗನು ಶ್ರಮಪಟ್ಟು ಹಸುವಿ
ಹಾಲನ್ನು ಹಿಂಡಿಕೊಳ್ಳುವಂತೆ ಅವರು ದೀರ್ಫಕಾಲ ಶ್ರಮಪಟ್ಟು ಸಾಧನೆ
ಭರದ ಎವ ಕಕ ಪಾವಾ
32 “Arb may, indeed, be characterised as the layman s YO,
.. By the attitude of detachment which it evokes, it gives
man a foretaste, albeit momentarv, of the supreme peace . '
M. 111117800೩: ‘The lndian Conception of Values’ (ABORI, NIN.
1, p. 23).
ಮಹಿಮಭಟ್ಟನು ಉದಾಹರಿಸುವ ಈ ಎರಡು ಶ್ಲೋಸಗಳನ್ನೂ ಗಮನಿಸಿ, ಇವು "
ಕೌತುಕ 'ದವೇ ಆಗಿರಬಹುದು. ಇಲ್ಲ ಗಾಯನಾದಿಗಳಂದ ಕೂಡಿದ ನಾಟ್ಯವನ್ನು ಹ
ವಾಗಿ ಗಮನದಲ್ಲಟು )ಕೊಂಡಿರುವಂತೆ ಕೋರುತ್ತದೆ:
ಪಾಠ್ಯಾದಥ ಧ್ರುವಾಗಾನಾತ್ ತತಃ ಸಂಪೂರಿತೇ ರಸೇ |
ತದಾಸ್ಟಾದ ಭರ್ಯೆಕಾಗ್ರೋ ಹೃಷ್ಯತ್ಯಂತರ್ಮುಐಃ ಕ್ಷಣಂ 1
ತತೋ ನಿರ್ವಿಷಯಸ್ಯಾಸ್ಯ ಸ್ಟರೂಪಾವಸ್ಥಿತೌ ನಿಜಃ |
ವ್ಯಜ್ಯತೇ ಹ್ಲಾದನಿಷ್ಯಂದೋ ಯೇನ ತೃಶ್ಯಂತಿ ಯೋಗಿನಃ ॥
(ವ್ಯಕ್ತಿವಿವೇಕ, ಪ. ೯೪)
ವ್ಯ
3 ಧೃನ್ಯಾ., ಮದರಾಸು ಸಂಸ್ಕರಣ, ಪು. ೧೬೮.
೨೧೮ ಭಾರತೀಯ ಕಾವ್ಯಮಾಮಾಂಸೆ
ಗಳನ್ನು ಪಿಡಿದು, ತತ್ತ್ವಜ್ಞಾನವನ್ನು ಸಂಪಾದಿಸಿ ಬ್ರಹ್ಮಾನಂದವನ್ನು
ಸವಿಯಬೇಕು. ಭಟ್ಟನಾಯಕನ ಷ್ ಭಾವನೆಗೆ ಕುಂತಕನ ಅನುಷ್ಟೋ
ದನೆಯೂ ಉಂಟು. ಧರ್ಮಾರ್ಥ ಕಾಮ ಮೋಕ್ಷಗಳೆಂಬ ಚತುರ್ವರ್ಗ
ದಿಂದ ದೊರೆಯುವ ಸವಿಯನ್ನುಕೂಡ ಮಾರಿಸುವ ಅಂತಃಸುಬವು ಕಾವ್ಯಾ
ಮೃತ ರಸದಿಂದ ಕಾವ್ಯಜ್ಞರಿಗೆ ಒದಗುವುದೆಂದು ಅವನು ಹೇಳುತ್ತಾನೆ."
ಧರ್ಮ, ಅರ್ಥ, ಕಾಮವೆಂಬ ತ್ರಿವರ್ಗದ ಮಾತಿರಲಿ; ಕಾವ್ಯಸುಖವು
ಮೋಕ್ಸಕುಖಕ್ಕೂ ಮಿಗಿಲೆಂಬ ಇಲ್ಲಿನ ಉಕ್ತಿ ಗಮನಾರ್ಹವಾದದ್ದು ;
ಅನೇಕರು ಇದನ್ನು ಒಪ್ಪಲಾರರು.” ಇವೆರಡರಲ್ಲಿ ಯಾವುದು ಹಿರಿದು
ಎಂಬುದನ್ನು ಎರಡರ ಸವಿಯನ್ನೂ ಬಲ್ಲವನು ಮಾತ್ರವೇ ನಿರ್ಣಯಿಸಿ
ಹೇಳಬಹುದು. ಯೋಗದ ಪರಿಜ್ಞಾನವಿಲ್ಲದ ನಮಗೆ ಈ ಅಪ್ರಸ್ತು ತವಾದ
ಚರ್ಚೆ ಏಕೆ? ಕಾವ್ಯಾನುಭವದ ಅತಿಶಯ ಮಾಧುರ್ಯವನ್ನು ಒಪ್ಪಿ, ಆದು
ಸರ್ವರಿಗೂ, ಮೋಕ್ಷಾರ್ಥಿಗಳಿಗೆ ಕೂಡ, ಉಪಾದೇಯಪೆಂದು ಹೇಳಿ
ನಿಲ್ಲಿಸೋಣ.
44 ಚತುರ್ವರ್ಗಫಲಾಸ್ಟಾದಮಶ್ಯತಿಕ್ರಮ್ಯ ತದ್ದಿದಾ: |
ಕಾವ್ಯಾಮೃತರಸೇನಾಂತತ್ಮಮತ್ಕಾರೋ ವಿತನ್ಯತೇ ॥
(ವಕ್ರೋಕಿ,ಜೀವಿತ, |. ೫)
23 ಇತರ ಅಲಂಕಾರಿಕರೇ ಒಪ್ಪುವುದಿಲ್ಲ. ಉದಾಹರಣಿಗೆ ಆನಂದವರ್ಧನನ "ಯಾ
ವ್ಯಾಸಾರವತ್ತೀ ,.' ಎಂಬ ಪದ್ಯವನ್ನೂ (ಐದನ್ನು ಮೇಲೆ ಪು. ೧೯೪ರಲ್ಲಿ ಉದಾಹರಿಸಿದೆ)
ಅದರ ಮೇಲೆ ಅಭಿನವಗುಪ್ತನು ಬರೆದಿರುವ ವ್ಯಾಖ್ಯಾನವನ್ನೂ ನೋಡಿ. "",.,ತದಾನಂದ
ವಿಪ್ತುಣ್ಮ್ಮಾತ್ರಾವಭಾಸೋ ಹ ರಸಾಸ್ಕಾದ ಇತ್ಯುಕ್ತ೦ ಪ್ರಾಗಸ್ಮಾಭಿಃ '' ಎಂದು ಅಭಿನವ
ಗುಪ್ತನು ಬರೆಯುತ್ತಾನೆ.
ಮೂರನೆಯ ಭಾಗ
ರಸ-ಧುಸಿ
೨೧೯
೧೫. ಶಬ್ದ ಎಅರ್ಥ
" ರಘುವಂಶದ ಆದಿಯಲ್ಲಿ ಕಾಳಿದಾಸನು,
ವಾಗರ್ಥಾ ವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ ।
ಜಗತಃ ಪಿತರಿ ವಂದೇ ಪಾರ್ವತೀಪರಮೇಶ್ವರಔ |
ಎಂದು ಮಂಗಳಾಚರಣಿ ಮಾಡುತ್ತಾನೆ. ಕಾವ್ಯರಚನೆಯಲ್ಲಿ ತನಗೆ
ಆವಶ್ಯಕವಾದ ಶಬ್ದಾರ್ಧಗಳ ಸಮ್ಯಗ್‌ಜ್ಞಾ ನವನ್ನು ಜಗತ್ತಿನ ತಾಯಿತಂದೆ
ಗಳಾದ ಪಾರ್ವತೀ ಪರಮೇಶ್ವರರ ಪ್ರಸಾದದಿಂದ ಹೊಂದಲು ಇಲ್ಲ ಕಾಳಿ
ದಾಸನು ಬಯಸಿದ್ದಾನೆ. ನಮ್ಮವರ ನಂಬಿಕೆಯಂತೆ ಈ ಆದ್ಯ ದಂಪತಿ
ಗಳ ಸಂಬಂಧವು ಎಪ್ಪು ನಿಕಟಪೆಂಬುದನ್ನು ಬೇರೆಯಾಗಿ ವಿವರಿಸಜೇಕಾ
ಗಿಲ್ಲ, ಅರ್ಧನಾರೀತ್ಯರಮೂರ್ತಿಯನ್ನು ಜ್ಞಾ ಪಿಸಿದರೆ ಸಾಕು. ಇಂಧ
ಅನ್ಯಾದೃಶ ಸಂಸಗಃ ಸರ್ಗಕ್ಕೆ ಸಮುಚಿತವಾದ "ಹೋಲಕೆಯಾಗಿ ವಾಕ್ಕು, ಅರ್ಥ
ಇವುಗಳ ಸಂಬಂಧವನ್ನು ಕಾಳಿದಾಸನು ಕೊಟ್ಟು, ಇದಕ್ಕೊಂ! ೦ದು ಮಹಿಮಾ,
ವಿಶೇಷವನ್ನೊ: ಮೊ ದಗಿಸಿದ್ದಾ ನೆ ತಬ್ದಾರ್ಥಗಳೆರಡೂ ಅಷ್ಟು ನಿಕಟವಾಗಿ
ಒಂದುಗೂಡಿರತಕ್ಕ ವೆಂಬುದು ಇಲ್ಲಿಯ ಅಭಿಪ್ರಾಯ.
ದಿನದಿನದ ನಡೆವಳಿಕೆಯಲ್ಲಿ, ಮಾತು ಹೊರಬೀಳುತ್ತಿರುವಾಗಲ್ಲೇ
ಅದರ ಅರ್ಥ ಕೇಳುವವನ ಮನಸ್ಸಿಗೆ ಸ್ಫುರಿಸುತ್ತದೆ. ಮಾತಿನ ರೂಪ
ನ್ನು ತಳೆದಲ್ಲದೆ ಮನಸ್ಸಿನ ಅಭಿಪ್ರಾಯ ಹೇಳುವವನಿಗೇ ಬಚಿತವಾಗುವು
ದಿಲ್ಲ. ಪೀಗೆ ವಾಕ್ಕೂ ಅರ್ಥವೂ ಎಣಿವಕ್ಕಿ ಗಳಂತೆ ಒಂದನ್ನೊ ೦ದು ಬಿಟ್ಟು
ಇರಲಾರವು. ದ ಇವುಗಳ ಫಟ ತಾರಕದ ಸ್ಸ ರ
ವೆಂದೂ. ತೋರಿದರೆ ಆಶ ಶ್ಚರ್ಯವೇನು 1
ಆದರೆ ವಿಜ್ಞಾನದ ದೃಷ್ಟಿಯಿಂದ ಪರಿಶೀಲಿಸಿದರೆ ಈ ಅಭಿಪ್ರಾಯ
ವನ್ನು ಮಾರ್ಪಡಿಸಬೇಕಾಗುತ್ತದೆ. ಸೃಷ್ಟಿಯ ಆದಿಯಿಂದಲೂ ಮಾನ
ವನು ಇರುವನೆಂಬುದಕ್ಕೇ ಮೊದಲು ಆಧಾರವಿಲ್ಲ. ಭೂಮಿಯ ಮೇಲೆ
'ಮಾನೆವೆಜಾತಿ ಕಾಣಿಸಿಕೊಂಡದ್ದು ಕೆಲವು ಲಕ್ಷ ವರ್ಷಗಳ ಹಿಂದೆ ಎಂದ್ಳ
ವಿದ್ಯಾಂಸರು ಅಭಿಪ್ರಾಯಪಡುತ್ತಾರೆ... ಈಗಲೇನೋ ಭಾಷೆಯಿಲ್ಲದ
! Arthur Keith : The Antiquity of Man, pp. 782-734 ನೋಡಿ
೨೨೧
೨೨೨ ಭಾರತೀಯ ಕಾವ್ಯಮಾಮಾಂಸೆ
'ಮಾನವವರ್ಗವಿಲ್ಲ; ನಿಜ. ಅತ್ಯಂತ ಅನಾಗರಿಕರೆಂದು ಕರೆಯಿಸಿಕೊಳ್ಳುವ
ಕಾಡುಮನುಷ್ಯರು ಕೂಡ ಮಾತುಕಥೆಯಿಲ್ಲದೆ ಬಾಳುವುದಿಲ್ಲ. ಆದರೆ ಪಶು
ಪಕ್ಷಿಗಳಲ್ಲಿ ಇಂದಿಗೂ ಇರುವಂತೆ, ಮನುಪ್ಯಜಾತಿಯಲ್ಲೂ ಮೊದಲಿಗೆ ನಲವು
ನರಳಿಕೆ ಮೊದಲಾದ ಭಾವಗಳನ್ನು ಹೊರಗೆಡಹಲು ಹೊಮ್ಮುತ್ತಿದ್ದ ಕೂಗು
ಬರಬರುತ್ತಾ ಪರಿಣಾಮ ಹೊಂದಿ ಉದ್ದೇಶಪೂರ್ವಕವೂ ಅರ್ದವಿಕಿಷ್ಟವೂ
ವರ್ಣ ವಿಭಾಗಸಮೇತವೂ ಆದ `` ಭಾಷೆ''ಯಾಗಿ ರೂಪುಗೊಳ್ಳಲು ಎಷ್ಟೋ
`ಕಾಲ ಜೇಕಾಯಿತು.: ಆಮೇಲೆ ಕೂಡ, ಮಾನವ ಸೃಪ್ಟಿಗೆಲ್ಲ ಒಂದೇ
ಮೂಲ ಭಾಷೆಯಿದ್ದಿತೆಂದು ಹೇಳಲು ಅಧಾರ ಸಾಲದು. ಈಗಲಂಶೂ
ಬಾಷೆಗಳ ಸಂಖ್ಯೆ ಅತಿ ವಿಪುಲವಾಗಿದೆ. ಒಂದೇ ವಸ್ತು ವನ್ನು ನಿರ್ಜೇಶಿಸು
ವುದಕ್ಕೆ ಬೇರೆ ಬೇರೆ ಭಾಷೆಗಳಲ್ಲ ಬೇರೆ ಬೇರೆ ತಬ್ದಗಳಿವೆ. ತಬ್ರಕ್ಕೂ
ಅರ್ಥಕ್ಕೂ ಇರುವ ಸಂಬಂಧ ಸ್ವಭಾವಜನ್ಯವಾಗಿದ್ದರೆ ಈ ವೈವಿಧ್ಯ ಎಕೆ
ಅಭಿಪ್ರಾಯಕ್ಕೂ ಇರುವ ಸಂಬ೦ಧದಷ್ಟು ಕೂಡ ತಬ್ದಾರ್ಧಸಂಬಂಧವು
ವಿಕಟವಲ್ಲ. ಉದಾಹರಣೆಗೆ, ದೂರದಲ್ಲರುವವರನ್ನು ಸಮಾಪಕ್ಕೆ ಕರೆಯು
ವಾಗ ಬಹುಶಃ ಎಲ್ಲ ಜನಾಂಗಗಳಲ್ಲಿಯೂ ಒಂದೇ ಬಗೆಯಲ್ಲ ಸೈ ಬೀಸಿ
ಸನ್ನೆ ಮಾಡುತ್ತಾರೆ. ಮಾತಿನಲ್ಲಾದರೆ, ದಾ'' ಎಂಬುದಕ್ಕೆ. ಎಷ್ಟು
ಭಾಷೆಗಳಿವೆಯೋ ಹೆಚ್ಚು ಕಡವೆ) ಅಪ್ಪು ತಬ್ದಗಳಿವೆ.
ಹಾಗಾದರೆ, ಈ ಮಾತಿಗೆ ಇದು ಅರ್ಥ, ಈ ವಸ್ತುವಿಗೆ ಅದವಾ
ಕ್ರಿಯೆಗೆ ಇದು ಹೆಸರು ಎಂಬ ಸಂಬಂಧ ಹೇಗೆ ಉಂಟಾಯಿತು? ಈ
ಪ್ರಶ್ನೆಯ ವಿಚಾರ ಮುಖ್ಯವಾಗಿ ಭಾಪಾಶಾಸ್ತ್ರಕ್ಕೆ ಸೇರಿದ್ದು; ಇಲ್ಲಿ ಅದನ್ನು
ಬೆಳಸುವುದು ಅನಾವತ್ಯಕ. ಈ ಸೆಂಬಂಧಕ್ಕೆ ಸಂಕ್ಟೇತಪೇ ಆದಾರದೆಂದು
ಇಲ್ಲ ಹೇಳಿದರೆ ಸಾಕು.' ಒಂದು ವಸ್ತುವನ್ನು (ಅಥವಾ ಗುಣ, ಕ್ರಿಯೆ
ಮೊದಲಾದವನ್ನು) ಮಾತಿನ ಮೂಲಕ ನಿರ್ದೇಶಿಸಲು ಸೆಮಾಜದಲ್ಲ ರೂಢಿ
ಯಾಗಿರುವ ಸಂಕೇತವೇ ಶಬ್ದ. ಮನುಷ್ಯನು ಗುಂಪಿನಲ್ಲಿ ಜೀವಿಸುವ
2 Otto Jespersen : Language, pp. 435-7 ನೋಡಿ.
1 " ಈ ಶಬ್ದಕ್ಕೆ ಇದು ಅರ್ಥವೆಂಬುದು ಸಂಕೇತ '' ಎಂಬ ಅಭಿಪ್ರಾಯ ನಮ್ಮ ದೇಶ
ಕ್ಕೇನೂ ಹೂಸದಲ್ಲ. ನೈಯಾಯಿಕರು ಈ ನಿರ್ಣಯಕ್ಕೆ ಹಿ೦ದೆಯೇ ಬಂದಿದ್ದರು. ಈ ಸಂ
ಕೇತವನ್ನು ಕಲ್ಪಿಸಿದವರು ಯಾರು ಎಂಬ ಎಷಯದಲ್ಲ ಚರ್ಚೆಯಿದೆ ; ಅಭಿಪ್ರಾಯಭೇದವಿದೆ.
`ಅದು ನಮಗೆ ಇಲ್ಲ ಅಪ್ರಕೃತ.
೧೫, ಶಬ್ದ- ಅರ್ಥ ೨೨೩
ಪ್ರಾಣಿ; ತನ್ನ ಅಭಿಪ್ರಾಯವನ್ನು ಇನ್ನೊಬ್ಬರಿಗೆ ಅವನು ತಿಳಿಸಲು ಉಪ
ಯೋಗಿಸುವ ಒಂದು ಸಾಧನ ಭಾಷೆ. ಒಂದೊಂದು ಗುಂಪಿನಲ್ಲೂ
ಸಮಾಜದಲ್ಲೂ ಪರಸ್ಪರ ವ್ಯವಹಾರವು ಸಾಧ್ಯವಾಗಬೇಕಾದರೆ ಮಾತಿನ
ಸಂಕೇತಗಳು ಕೂಡಿದಮಟ್ಟಿಗೂ ಒಂದೇ ರೀತಿಯಾಗಿರಜೇಕೆಂಬುದು ಸ್ಪಪ್ಪ.
ಆದಕಾರಣ ನಿಕಟವಾದ ಸವ್ಯವಹಾರವುಳ್ಳ ಒಂದೊಂದು ಸಮಾಜಕ್ಕೂ
ಇಂಥ ಒಂದೇ ಸಂಕೇತಸಮುದಾಯ--ಎಂದರೆ ಒಂದೇ ಭಾಷೆ-- ಇರು
ತ್ತದೆ, ಈ ಭಾಪಾಸಂಕೇತವನ್ನು ಪ್ರತಿಯೊಂದು ತಲೆಮಾರಿನವರೂ
ಹೊಸದಾಗಿ ಕಲಿಯಬೇಕು ; ಇದು ಹುಟ್ಟುತ್ತಿದ್ದಹಾಗೆಯೇ ಮಕ್ಕಳಿಗೆ ಆರಿ
ವಾಗುವ ವಂಶಾನುಗತ ಗುಣವಲ್ಲ. ಇದರ ಮೇಲೆ, ಈ ಸಂಕೇತ
ಉದ್ದಕ್ಕೂ ಒಂದೇ ರೀತಿಯಾಗಿ ಇರುವುದಲ್ಲ ಒಂದೇ ಸಮಾಜದಲ್ಲೇ,
ಒಂದೇ ವಾಸ ಪೆಯಲ್ಲೇ, ಕಾಲಚಕ್ರ ಉರುಳಿದಂತೆ ಒಂದು ಶಬ್ದದ ಅರ್ಥದಲ್ಲಿ
ವ ್ಯ ತ್ಯಾಸಗಳುಂಟಾಗ: ಬಹುದು. ಅಪ್ಪೇ ಅಲ್ಲ, ಶಬ್ದದ ರೂಪವೇ ವ್ಯತ್ಯಾಸ
ಹ ಈ ವ್ಯತ್ಯಾಸಗಳು ನಿದಾನವಾದರೂ ಸಂತತವಾಗಿ
ನಡೆಯುತ್ತಿ ರುವುದರಿಂದ ಭಾಷೆಗೂ ಒಂದು " ಚರಿತ್ರೆ'' ಒದಗುತ್ತದೆ.
ಅಂತೂ, ನೀರು, ಊರು, ಸಣ್ಣದು, ಹೊಕದು, ಹೋಗು, ನಿಲ್ಲು,
ಅಶೋಕ, ಮೈಸೂರು. ಈ ವೆ ಮೊದಲಾದ ಶಬ್ದಗಳನ್ನು ಕೇಳಿದ ಕೂಡಲೇ
ನಮಗೆ ನೇರವಾಗಿ ಒಂದು ಅರ್ಥ ತಿಳಿಯುತ್ತ ದೆ ಇದು ಸಾಡ್ಯವಾಗಿರು
ವುದು ಮೇಲೆ ನೋಡಿದಂತೆ ಸ ಸಮಾಜದಲ್ಲ ಪಾರಂಪರ್ಯವಾಗಿ ಬಂದಿರು
ಸಂಕೇತದ ಬಲದಿಂದ. ಹೀಗೆ ಸಂಕೇತಿತವಾದ ಅರ್ಧವನ್ನು ಸಾಕ್ಷ
ತ್ತಾಗಿ ತಿಳಿಸುವ ಶಬ ಶಕ್ತಿಗೆ ಅಭಿಧಾವೃತ್ತಿ ಯೆಂದೂ, ಇದರಿಂದ ತಿಳಿಯ
ಬರುವ ಅರ್ಥಕ್ಕೆ ಅಭಿಧೇಯಾರ್ಥ, ವಾಚ್ಯಾರ್ಥ ಅಥವಾ ಮುಖ್ರ್ಯಾರ್ಥ
ಎಂದೂ ಹೆಸರು. ತಬ್ಬದ ವಾಚ್ಯಾರ್ಥವು ಅದನ್ನು ಕೇಳಿದ ಕೂಡಲೆ
ಥಟ್ಟನೆ ಗೊತ್ತಾಗತಕ್ಕದ್ದು ; ಒಂದು ಭಾಷೆಯನ್ನು ಉಪಯೋಗಿಸುವರಿ
ಗೆಲ್ಲ ಅದು ಒಂದೇ ಆಗಿರುತ್ತದೆ. ಆ ಭಾಷೆಯ ಕೋಶ, ನಿಘಂಟು
ಮೊದಲಾದವುಗಳಲ್ಲಿ ಈ ಅರ್ಥವನ್ನು ಕೊಟ್ಟಿರುತ್ತದೆ. ಆದಕಾರಣ
ಇದರ ವಿಷಯದಲ್ಲ ಭಿನ್ನಾಭಿಪ್ರಾಯಕ್ಕೆ ಸಾಮಾನ್ಯವಾಗಿ ಆವಕಾತವಿರುವು
ದಿಲ್ಲ.
।?1
೨೨೪ ಭಾರತೀಯ ಕಾವ್ಯವಿಸಾಮಾಂಸೆ
ಒಂದು ಶಬ್ದದ ಪರಿಚಯ ನಮಗಿಲ್ಲದಿದ್ದರೆ ನಿಘಂಟನ್ನು ತೆಗೆದು
ನೋಡಬಹುದು; ಪಿರಿಯರನ್ನು ಕೇಳಬಹುದು ; ಅದು ಯಾವ ಸಂದರ್ಭ
ದಲ್ಲಿ ಬಂದಿದೆ, ಯಾವ ಅರ್ಥ ಸಮಂಜಸವಾಗುತ್ತದೆ ಎ೦ದು ನೋಡಿ
ಕೊಳ್ಳಬಹುದು; ಇನ್ನೂ ಕೆಲವು ಕಡೆಗಳಲ್ಲ ಅದರ ರೂಪನಿಪ್ಪತ್ತಿ ಹೇಗೆಂ
ಬುದನ್ನು ಪರಿಶೀಲಿಸಬಹುದು... ಈ ಮೊದಲಾದ ವಿಧಾನಗಳಿಂದ ಒಂದು
ಶಬ್ದದ ವಾಚ್ಯಾರ್ಥವನ್ನು ಗ್ರಹಿಸುತ್ತೇವೆ... (ಹಳಗನ್ನಡದ ಕಾವ್ಯ
ವೊಂದನ್ನು ಕೈಯಲ್ಲಿ ಹಿಡಿದು ಓದುವಾಗ ಈ ಎಲ್ಲ ಸಹಾಯವೂ ಬೇಕಾ
ಗುತ್ತದೆ. ಕೆಲವು ಸಲ ಅದೂ ಸಾಲದೆ ಹೋಗುತ್ತದೆ. ) ಇಷ್ಟೂ ದರೂ,
ಬಳಕೆಯ ಭಾಷೆಯಲ್ಲಿ ಶಬ್ದದ ಸಂಕೇತವನ್ನು ತಿಳಿದುಕೊಳ್ಳುವುದು ಮುಖ್ಯ
ವಾಗಿ ) ವ್ಯವಹಾರಎಿಂದ ; ಮಕ್ಕ ಳು ಭಾಷೆಯನ್ನು ಕಲಿಯುವುದು ಹಸಿಯ
ತಮ್ಮ ಕಿವಿಗೆ ಬಿದ್ದ ಬಡ ಶಬ್ದಕ್ಕೂ ಅರ್ಥವೇನೆಂದು ಅವರು
ತಾಯನ್ನೋ ತಂದೆಯನ್ನೋ ಪ್ರಶ್ನಿಸುತ್ತಾ. ಹೋಗುವುದಿಲ್ಲ; ನಿಘಂ
ಟನ್ನು ನೋಡುವ ಸಂಭನವಂತೂ ಇಲ್ಲವೇ ಇಲ್ಲ. ಒಂದು ತಬ್ಬ ಪಿರಿ
ಯರ ಬಾಯಲ್ಲಿ ಮತ್ತೆ ಮತ್ತೆ ಬಂದಾಗ ಕಾಣಿಸುವ ವಸ್ತುಗಳನ್ನೂ ನಡೆ
ಯುವ ಕ್ರಿಯೆಗಳನ್ನೂ ನೋಡಿ ಮಕ್ಕಳು ಸುಕೇತವನ್ನು ಗ್ರ ಶಿಸುತ್ತಾರೆ
ಹೊಸ ವಸ್ತುವನ್ನು ಕಂಡರೆ ಇದರ ಹೆಸರೇನೆಂದು ಕೇಳಿ ತಿಳಿದುಕೊಳ್ಳು
ವುದೂ ಇದರ ಜೊತೆಗೆ ನಡೆದು ಅವರ ಅರ್ಥಜ್ಞಾ ನವೂ ಶಬ್ದಕೋಶವೂ
ಬೆಳೆಯುತ್ತವೆ.
ಇದುವರೆಗೂ ಬಿಡಿ ಶಬ್ದವನ್ನೇ ಕುರಿತು ವಿಚಾರಮಾಡಿದೆವು.
ಆದರೆ ಭಾಪಾವ್ಯವಹ ವಹಾರದಲ್ಲಿ ನಾವು ಉಪಯೋಗಿಸುವುದು ವಾಕ ್ಯಗಳನ್ನೆ ್ನ
ಹೊರತು ಬಿಡಿ. ಬಿಡಿಯಾದ ಶಬ್ದಗಳನ್ನಲ್ಲ. *' ನಕ್ಷತ್ರವು ಮಿನುಗುತ್ತ ದೆ”,
1 ತಬ್ದದ 5 ಸಂಕೇತವನ್ನು ತಿಳಿದು ಕೊಳ್ಳಲು ಇರ ವ ವಿಧಾನಗಳನ್ನು ಈ ಕೆಳಗಿನ ಪದ್ಯ
ಸಂಗ್ರಶಿಸುತ್ತ ದೆ:
ಶಕ್ತಿಗ್ರಹಂ ವ್ಯಾಕರಣೋಪಮಾನ ಕೋಶಾಪ್ತವಾಕ್ಯ ವ್ಯವಹಾರತಶ್ಚ |
ವಾಕ್ಯಸ್ಯ ಶೇಷೂದ್ರಿವೃತೇರ್ವದಂತಿ ಸಾನ್ನಿಧ್ಯತಃ ಸಿದ್ಧ ಪಠನ ವೃದ್ಧಃ 21
(ತಬ್ದತಕ್ತಿ ಪ್ರಕಾಶಿಕಾ, ಪು. ೧೦೩, ವ್ಯಾಖ್ಯಾ)
(೧) ವ್ಯಾಕರಣ, (೨) ಹೋಲಿಕೆ, (೩) ನಿಘಂಟು(೪) ಆಪ್ತರ ವಾಕ್ಯ (೫) ಲೋಕ
ವ್ಯವಹಾರ, (೬) ವಾಕ್ಯದ ಮಿಕ್ಕ ಭಾಗ, (೭) ಬಲ್ಲವ? ವಿವರಣಿ, (೮) ತಿಳಿದ ಪದದ
ಸನ್ನಿಧಿ: ಇವುಗಳಿಂದ ಶಬ್ದಶಕ್ತಿ'ಯ ಅರಿವು ಉಂಟಾಗುತ್ತದೆ.
5 ಸಾಹಿತ್ಯದರ್ಪಣ, ;;, ೪ರ ವೃತ್ತಿಯನ್ನು ನೋಡಿ.
೧೫. ಶಬ್ದ. ಅರ್ಥ ೨೨೫
"" ಅವನು ಮನೆಗೆ ಹೋದನು '', "ನನ್ನೆ ಜೊತೆಯಲ್ಲಿ ನೀನೂ ಬಂದರೆ
ಎಷ್ಟು ಚೆನ್ನಾಗಿರುತ್ತದೆ! ''__ ಈ ಮೊದಲಾದ ವಾಕ್ಯಗಳನ್ನು ಕೇಳಿದಾಗ
ಅರ್ಥವನ್ನು ಹೇಗೆ ಗ್ರಹಿಸುತ್ತೇವೆ? ಪದಗಳ" ಅರ್ಥವನ್ನು ಜೇರೆ ಬೇರೆ
ಯಾಗಿ ಮೊದಲು ತಿಳಿದುಕೊಂಡು ಆ ಬಳಿಕ ವಾಕ್ಯಗಲ್ಲಿ ಅವುಗಳಿಗಿರುವ
ಸಂಬಂಧವನ್ನು ಅರಿತುಕೊಳ್ಳುತೆ ಕ್ರೀವೆಯೇ, ಅಥವಾ ಒಟ್ಟು ವಾಕ್ಯದ ಅರ್ಥ
ವನ್ನೇ ಅಖಂಡವಾಗಿ A 'ತಿಸುತೆ ಷೆಯೇ ? “ಈ ಷಯದಲ್ಲಿ ಹಿ೦ದಿ
ನಿಂದಲೂ ೦ದಲೂ ಚರ್ಚೆ, ನಡೆದಿದ NS ಸಂಪ್ರದಾಯದ ಮತ
ಹೀಗೆ: ವ ವಾಕ್ಯದಲ್ಲಿ ಸೇರಿರುವ ಪದಗಳು ಬಿಡಿ ಬಿಡಿಯಾಗಿ ತಮ್ಮ ಅರ್ಥ
ವನ್ನು ಸೂಚಿಸಿದಷ್ಪಕ್ಕೆ ಅವುಗಳ ಅಭಿಧಾವೃತ್ತಿ ಮುಗಿಯುತ್ತದೆ. "" ನಕ್ಷ
ತ್ರವು ಮಿನುಗುತ್ತದೆ'' «೦ಬ ವಾಕ್ಯವನ್ನೇ ನೋಡೋಣ. ಇಲ್ಲಿ,
". ಮಿನುಗುತ್ತದೆ'' ಎಂಬ ಪದವು ಕ್ರಿಯೆಯನ್ನೂ, "ನಕ್ಷತ್ರ oN
ಎಂಬುದು ಕತ್ವ ೯ವಾದ ಒಂದು ವಸ್ತು ವನ್ನೂ ತಮ್ಮ ತಮ್ಮ ಅಭಿಧಾವ
ಯಿಂದ ತಿಳಿಸುತ್ತವೆ. ಮಿನುಗುವ ಕ್ರಿಯೆ ನಡೆಯುತ್ತದೆ ; is
ಯಾವುದೋ ಒಂದು ಕ್ರಿಯೆಗೆ ಕತೃ ೯---ಎಂದಿಷ್ಟು ಮಾತ್ರ ನಮಗೆ ತಿಳಿದ
ಹಾಗಾಯಿತು. ಈ ಕ್ರಿಹೆಗೂ ಈ ಕರ್ತೃವಿಗೂ ವಿಶಿಷ್ಟ ಸಂಬ೦ಧವು೦ಟು ;
ಮಿನುಗುವ ಕ್ರಿಯೆಗೆ ನಕ್ಷತ್ರವೇ ಕರ್ತೃ ಎಂಬುದು ಇಲ್ಲ ಇನ್ನೂ ಗೊತ್ತಾಗ
ಲಿಲ್ಲ. ಆದರೆ ಇದನ್ನು ತಿಳಿಸುವುದೇ ವಾಕ್ಯದ ಉದ್ದೇಶ. ವಾಕ್ಯದಲ್ಲಿ
ಸೇರಿರುವ ಪದಗಳ ಈ ವಿಶಿಷ್ಟ ಸಂಬಂಧಕ್ಕೆ --ಅನ್ಯಯಕ್ಕೆ--"" ಸಂಸರ್ಗ '»
ಷೆಂದು ಹೆಸರು. ಈ "" ಸಂಸ ಸ ವನ್ನು ಳಿಸುವ ಶಕ್ತಿ ಅಭಿದಾವೃತ್ತಿಗಿಲ್ಲ;
ಅದಕ್ಕಾಗಿ «" ತಾತ್ಪೆ ರ್ಯವೃತ್ತಿ ಯೆಂಬ ಬೇರೊಂದು ತಿಬ್ಬವ್ಕಾ ಪಾರವೇ
ಉಂಟು; ಆ ಗ ಹೊರಡುವ ಅರ್ಥಕ್ಕೆ ತಾತ್ವ ರಾ ರ್ಥವೆಂದು
ಹೆಸರು. | ವಾಕ್ಯದ ಪವಗನಾಡ' ಮೊದಲು ನ ವಾಚ್ಯಾರ್ಥ
ಹೊರಡುತ್ತ ಡೆ; ಬಳಿಕ ಇವುಗಳ ಅನ್ವಯ ರೂಸವಾದ ತಾತ್ತ ರಾ ರ್ರ್
ನ್ನು ಗ್ರ ಸುತ್ತ ವೆ ಪೀಗೆನ್ನುವುದು. ಈ ಸಂಪ್ರದಾಯದವರ : ಸ
ಇವರಿಗೆ ಅಭಿಪಿತಾನ್ಯಯವಾದಿಗಳೆಂದು _ ಹೆಸರು. ಆನಂದವರ್ಧನ,
6 ಶಬ್ದ ಎನ ಎನ್ನುವುದು "" ಪ್ರಕೃತಿ'' ; ಪ್ರತ್ಯಯಸಹಿತವಾಗಿ ವಾಕ್ಯದಲ್ಲಿ ಜೋಡಣೆ
ಹೊಂದುವುದ- "" ಪದ''. ಇವೆರಡಕ್ಕೂ ಇರುವ ಸೂಕ್ಷ್ಮ ಭೇದವನ್ನು ಮುಂದಿನ ನಿರೂಪಣಿ
ಯಲ್ಲ ಖಚಿತವಾಗಿ ಗಮನಿಸಿಲ್ಲ. ಸಂದರ್ಭಾನುಸಾರವಾಗಿ ಅನ್ವಯಿಸಿಕೊಳ್ಳಬೇಕು.
7 "ಅರ್ಥಾನಾಂ ಅಭಿಪಿತಾನಾಂ ಉತ್ತರಕಾಲಂ ಪರಸ್ಪರಾನ್ಪಯಾತ" ಅಭಿಪಿತಾ
ನ್ವಯಃ '' (ಮುಕುಲ; ಅಭಿಧಾವೃತಿ,ಿ ಮಾತೃಕಾ, ಪು. ೧೫)
K.M. 16
೨೨೬ ಭಾರತೀಯ ಕಾವ್ಯಮಾಮಾಂಸೆ
ಅಭಿನವಗುಪ್ತ, ಮಮ್ಮಟ ಮೊದಲಾದ ಆಲಂಕಾರಿಕರು ಈ ಪಕ್ಷವನ್ನೇ
ಮುಖ್ಯ ವಾಗಿ ಅನುಸರಿಸತಕ್ಕ ವರು.
§ ಸ ದರೆ ಈ ವಾದ ಅಷ್ಟು ಸಂಗತವಾಗಿ ತೋರುವುದಿಲ್ಲ. ನಮಗೆ
ಹಿಂದೆ ತಿಳಿಯದೆ ಇದ್ದ ಪದವು ಪಾಕದ ದಲ್ಲಿ ಬಂದಾಗ ಬಲ್ಲವರನ್ನು
ಕೇಳಿಯೋ ನಿಘಂಟನ್ನು 'ನೋಡಿಯೋ ಅದರ ಅರ್ಥವನ್ನು ಪ್ರತ್ಯೇಕವಾಗಿ
ಗ್ರಪಿಸುವುದುಂಟು. ಆದರೆ ಇದು ಕೂಡ ಅಪೂರ್ವವೇ ; ಆ ಪದವನ್ನು
ಬಿಡಿಯಾಗಿ ಗಮನಿಸದೆ ವಾಕ್ಯದೊಳಗಿನ ಮಿಕ್ಕ ಪದಗಳ ಅರ್ಥದೊಂದಿಗೆ
ಹೇಗೋ ಅನ್ವಯಿಸಿಕೊಂಡು ಹೋಗುವುದೇ ರೂಢಿ. ಸಾಮಾನ್ಯ ವ್ಯವ
ಹಾರದಲ್ಲಂತೂ ಬಿಡಿ ಪದದ ಕಡೆಗೆ ಮೊದಲು ಗಮನಕೊಡುವ ಪರಿಸ್ಥಿತಿಯೇ
ಇಲ್ಲ. ವ್ಯವಹಾರದಲ್ಲಿ ಮಾತ್ರವಲ್ಲ, ಆಲೋಚನೆಯಲ್ಲಿ ಕೂಡ ಮೂಲಾಂತವು
ವಾಕ್ಯವೇ ಹೊರತು ಪದವಲ್ಲ. ಇದು ಆಧುನಿಕ ಭಾಪಾತಾಸ್ತ್ರಕ್ಕೆ
ಸಮ್ಮ ತವಾದ ವಿಷಯ. ಆದಕಾರಣ ವಾಚ್ಯಾ ರ್ಥ, ತಾತ್ಸರ್ಯಾರ್ಥ-
ಇವೆರಡನ್ನೂ ಬೇರೆ ಬೇರೆಯಾಗಿ ಗಣಿಸಿ ಆಧಿಧಾನೃತ್ತಿ (ಅಲನ "ಜೊತಿಗೆ
ತಾತ್ಪರ್ಯ ವೃತ್ತಿ ಯೆಂಬುದೂ ಜೇರೆ ಉಂಟೆಂದು ಚಾಟು ಅನಾವಶ್ಯಕ.
ಈ ಆಕ್ಷೇಪಣಿ ಹೊಸದಲ್ಲ. ಅಭಿಪಿತಾನ್ವಯವಾದವನ್ನು ಒಪ್ಪದಿ
ರುವ ಪಕ್ಷವೂ ಹಿಂದಿನಿಂದ ಉಂಟು. ಅನ್ನೈಯಎಶಿಪ್ಪವಾಗಿಯೇ ವಾಕ್ಯದ
ಪದಗಳ ಸರ ಅಥನವನ್ನು : ಗ್ರಹಿಸುತ್ತೇವೆ. ಆದಕಾರಣ ಪದಗಳ ಅರ್ಧವೇ
ವಾಕ್ಯದ ಅರ್ಥ; ಇ pe ಇವೆರಡೂ ಬೇರೆಬೇರೆಯಲ್ಲ ಎಂದು ಇವರ ಮತ. ಈ
ನಾರಣದಿವಿದ ಅವರಿಗೆ ಅನ್ನಿತಾಭಿಧಾನವಾದಿಗಳೆಬ ಹೆಸರು ಬಂದಿದೆ.
ವೈಯಾಕರಣರು ಇವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗುತ್ತಾ
ವಾಕ್ಯ ದ ಅರ್ಥವು ಅಖಂಡವಾಗಿ ತಿಳಿಯುವುದೆಂಡೇ ಅವರ ಪರಮ
ದಾತ: ಬ ಮಿನುಗುತ್ತ ದೆ ನ ಎಂಬ ಪದ ಕಿವಿಗೆ ಬಿದ್ದಾ ಗ ಅದರಲ್ಲಿ
ಪ್ಪ ಶಕೃತಿಭಾಗ 2 ಪೃತ ಪ್ರತ್ಯಯಭಾಗಗಳನ್ನು ವಿಂಗಡಿಸಿ ನೋಡದೆ ಹೇಗೆ ಪ ದದ
ಒಟ್ಟು ಅರ್ಥವನ್ನು ಒಮ್ಮೆ: ಗೇ _ಗ್ರಷಿಸುತೆ ಕ್ಲೀವೆಯೋ ಹಾಗೆಯೇ ವಾಕ್ಯದ
ಅರ್ಥವನ್ನೂ ಒನೆ ೫ ಗ್ರಹಿಸುತ್ತ. ye ಪದ ಪದದ ಅರ್ಥವೇನೆಂದು ಬಿಡಿಸಿ
ನೋಡುವುದಿಲ್ಲ. ವಾಕ್ತ ೈದಲ್ಲಿ ಪದಗಳನ್ನು ವಿ೦ಗಡಿಸುವುದೂ, ಪದದಲ್ಲಿ ಪ್ರ ಕೃ ತಿ
8 “ ವಾಚ್ಯ ಏವ ವಾಕ್ಯಾರ್ಥಃ, ಪದಾನ್ಯೇವ ವಾಕ್ಯಂ, ಪದಾರ್ಥ ಒದ ತದರ್ಥಃ,
ನತು ಪದಾರ್ಥೇಭ್ಯೋ ವಾಕ್ಯಾರ್ಥಃ. "' (ಕಾವ್ಯಪ್ರಕಾಶ : ಸಂಕೇತವ್ಯಾಬ್ಯಾ, ಪು. ೧೮)
೧೫. ಶಬ್ದ. ಅರ್ಧ ೨೨೭
ಪ್ರತ್ಯಯಾದಿಗಳನ್ನೂ ಎಂಗಡಿಸುವುದೂ, ಸಂಧ್ಯಕ್ಷರಗಳಲ್ಲಿ ವರ್ಣಗಳನ್ನು
ವಿಂಗಡಿಸುವುದೂ ಒಂದೇ; ಇದೆಲ್ಲ ಕಲ್ಪಿತ. "ಅಜ್ಜ ರಿಗೆ ವಿ ಪಯವನ್ನು
ತಿಳಿಸುವುದಕ್ಕಾಗಿ ಈ ರೀತಿ ವಿಭಾಗಿಸಿ ತೋರಿಸುತ್ತೇವೆ. * ಹೀಗೆ ವಾಕ್ಯ
ದಲ್ಲಿ ಪದವಿಭಾಗವೇ ಕೃತಕವಾದ ಮೇಲೆ ಅರ್ಥವಿಭಾಗಕ್ಕೆ ಇನ್ನು
ಜಾಗವನೆಲ್ಲ ?
ಅಂತೂ ವಾಕ್ಯದಲ್ಲಿ ಪದಗಳು ಅನ್ವಯಹೊಂದಿಯೇ ಅರ್ಥ ಕೊಡು
ವುದರಿಂದ ವಾಚ್ಯಾರ್ಥದಲ್ಲೆ € ಪದ, ವಾಕ್ಯ ಎರಡರ ಅರ್ಥವನ್ನೂ ಅಡಕ
ಮಾಡಬಹುದು ; ತಾತ್ವರ್ಯಾರ್ಥವೆಂಬುದನ್ನು ಬೇರೆ ಗಣನೆ ಮಾಡದೇಕಾ
ಗಿಲ್ಲ. ಅಭಿಧಾವೃತ್ತಿಯೇ ವಾಕ್ಯದ ಅರ್ಥವನ್ನೂ ತಿಳಿಸಬಲ್ಲುದು. ಇಷ್ಟನ್ನು
ನಾವು ಗ ಗ್ರಹಿಸಿದರೆ ಸಾಕು. ಭಾಷೆಯಲ್ಲಿ ವಾಕ್ಯವೇ ಮುಖ್ಯ; ಪದಗಳು
ಅದರ 'ಅಿವೆಯವೆಗಳು. ಆದಕಾರಣ ವಾಕ್ಯದ ಲಕ್ಷಣವೇನೆಂಬುದನ್ನು
ಸಂಗ್ರ ಹವಾಗಿಯಾದರೂ ನೋಡುವುದು ಆವಶ್ಯಕ. ಈ ವಿಷಯದಲ್ಲಿ
ಶಾಸ ಸ್ರಜ್ಞಿ ರು ವಿಚಾರ ನಡಸಿ, ಆಕಾಂಕ್ಷೆ, ಸನ್ನಿಧಿ (ಅಥವಾ ಆಸತ್ತಿ),
ಯೋಗ್ಯ: ಗತೆ. ಈ ಮು ರನ್ನು ಳ್ಳ ಪದಸಮುದಾಯಪೇ ವಾಕ್ಯವೆಂದು ನಿರ್ಧ
ರಿಸಿದ್ದಾ ರೆ.10 ವಾಕ್ಯ ದ ಪದಗಳು ಅರ್ಥದ ತೂಂದಕಗಾಾಿ, ಒಂದನ್ನೊ ೦ದು
ಕೋರುವುದೇ ಪ “ ಮಗುವನ್ನು ಎತ್ತಿಕ್ಲೋ'' ಎಂಬ 'ವಾಕ್ಯ
ದಲ್ಲಿ "" ಎತ್ತಿಕೋ'' ಎಂಬ ಕ್ರಿಯೆಯ ಅರ್ಥವು ಹೊಂದಿಕೆಯಾಗಲು
“ ಮಗುವನ್ನು'' ಎಂಬ ಕರ್ಮಪದ ದೇಕು. " ಮಗುವಿಗೆ '' ಅಥವಾ
“ ಮಗುವಿನ '' ಎಂಬ ಬೇರೆ ವಿಭಕ್ತಿಯ ಪದವನ್ನು ಉಪಯೋಗಿಸಿದ್ದರೆ
ಆಕಾಂಕ್ಷೆ ಕೆಡುತ್ತಿತ್ತು. ಇನ್ನು, ವಾಕ್ಯದ ಪದಗಳು ಒಂದಕ್ಕೂ ಮತ್ತೊಂ
ದಕ್ಕೂ ನಡುಪೆ ವಿಲಂಬ ವಾಗದಂತೆ. ಉಚ್ಚರಿತವಾಗಿ ಕಿವಿಗೆ ಬೀಳಬೇಕು.
ಇದಕ್ಕ ಸನ್ನಿಧಿ (ಅಥವಾ ಆಸತ್ತಿ) ಎಂದು ಹೆಸರು. ಮಗುವನ್ನು''
ಚ ಈಗ ಹೇಳಿ ಇನ್ನೊಂದು ಘಂಜೆಯಾದ ಬಳಿಕ " ಎತ್ತಿಕೋ ''
ಎಂದು ಹೇಳಿದರೆ ಇವೆರಡೂ ಕೂಡಿ ಒಂದು ವಾಕ್ಯವಾಯಿತೆಂಬುದರ
ಪ್ರತೀೀತಿಯಾದರೂ ಹೇಗೆ ಹುಟ್ಟುತ್ತದೆ? ಕೇವಲ ಅನ್ವಯದ ದೃಷ್ಟಿಯಿಂದ
ನೋಡಿದಲ್ಲಿ ವಾಕ್ಕವಾಗಲು ಆಕಾಂಕ್ಷೆ, ಸನ್ನಿಧಿ ಇವೆರಡೂ ಸಿದ್ಧಿ ಸಿದರೆ
9 ಮಾಕ್ಯಪದೀಯ, 1]. ೮-೧೩ ನೋಡಿ.
10 “ವಾಕ್ಯಂ ಸ್ಯಾತ" ಯೋಗ್ಯತಾಕಾಂಕ್ಟಾಸತ್ತಿ ಯುಕ್ತಃ ಪದೋಚ್ಚಯಃ'' (ಸಾಹಿತ್ಯ
ವರ್ಪಣ, ;i. ೧)
15-8
೨೨೮ ಭಾರತೀಯ ಕಾವ್ಯಮಿಾವಮಾಂಸೆ
ಸಾಕು. ಆದರೆ ವ್ಯವಹಾರದ ದೃಷ್ಟಿಯಿಂದ ಇಷ್ಟೇ ಸಾಲದು. ಉದಾ
ಹರಣಿಗೆ, "" ಅವನು ನೀರನ್ನು ತಿಂದನು '' ಎಂಬ ಪದಸಮುದಾಯವನ್ನು
ಗಮನಿಸಿ. ಇಲ್ಲಿ ವ್ಯಾಕರಣದೋಪಷ ಯಾವುದೂ ಇಲ್ಲ. ಕರ್ತೃ, ಕರ್ಮ,
ಕ್ರಿಯೆ ಎಲ್ಲವೂ ಸರಿಯಾಗಿವೆ. ಆದರೆ ಪೀಗೆ ಯಾರಾದರೂ ಹೇಳಿದರೆ,
ಅವನು ಹುಚ್ಚನೆನ್ನುತ್ತೇವೆ. ದ್ರವ ಪದಾರ್ಥವಾನ ನೀರನ್ನು "" ತಿನ್ನು”
ನ ಹೇಗೆ? ಇಲ್ಲ ಕರ್ಮವಾದ ವಸ್ತುವಿಗೂ ಅದಕ್ಕೆ ಅನ್ವ್ಯಯಿಸಬೇ
ಕ್ರಿಯೆಗೂ ವಿರೋಧವಿರುವುದರಿಂದ ಅರ್ಥವು ಯಾತ
ಸು ವಾಕ್ಯ ಸಿದ್ಧಿಸುವುದಿಲ್ಲ. ವಾಕ್ಯಕ್ಕೆ ಆವಶ್ಯಕವಾದ 4 ಯೋಗ್ಯತೆ ಗೆ
ಇಲ್ಲಿ ಭಂಗ ಬಂದಿದೆ. ಯೋಗ್ಯತೆಯೆಂದರೆ ವಾಕ್ಯದಲ್ಲಿ ಸೇರುವ ಪದಗಳ
ಅರ್ಥಗಳು ಒಂದರೊಡನೊಂದು ವಿರೋಧವಿಲ್ಲದೆ ಹೊಂದಿಕೊಂಡಿರುವುದು.
ಈಗ, ಕೆಲವು ವಾಕ್ಯಗಳನ್ನು ಪರಿಶೀಲಿಸೋಣ. ಮೊದಲು ಇದನ್ನು
ನೋಡಿ: ": ಅಂದ ಒಳ್ಳೆಯ ಹುಡುಗಿಗೆ ಕಪ್ಪ ಬಂದಿತೆಂದ- ಕೇಳಿ ನಮ್ಮ
ಕೇರಿಯೆಲ್ಲ ಕಣ್ಣೀರು ಸುರಿಪಿತು.'” ಕೇರಿಯೆಂದರೆ ಮನೆಗಳ ಸಾಲು; ಈ
ಅಚೇತನ ಪದಾರ್ಥವು ಒಂದು ಸಂಗತಿಯನ್ನು ಕೇಳುವುದಾಗಲಿ, ಕಣ್ಣೀರು
ಸುರಿಸುವುದಾಗಲಿ ಹೇಗೆ ಸಾಧ್ಯ 1. ಇಲ್ಲಿ ಕತ್ಛ :ವಿಗೂ ಕ್ರಿಯೆಗಳಿಗೂ
ವಿರೋಧವುಂಟೆಂಬುದು ಸ್ಪ ಪೃ. ಆದಕಾರಣ ವಾಕ್ಯವು ಅಸಂಬದ್ಧವಾಗ
ಲಿಲ್ಲವೆ ? ಆದರೆ ವ್ಯವಹಾರದಲ್ಲಿ ಇಂಥ ಮಾತುಗಳನ್ನು ಪ್ರಾಜ್ಞರೇ ಆಡುವು
ದುಂಟು; ಅವರಿಗೆ ಬುದ್ಧಿ ಕೆಟ್ಟಿದೆಯೆ೦ದು ಹೇಳಲಾಗುವುದಿಲ್ಲ. ಆದ
ಕಾರಣ, ಇದು ಸರಿಯಾದ ವಾಕ್ಯವಲ್ಲ ಎಂದು ತಿರಸ್ಕರಿಸಿ ಕೈಬಿಡದೆ, ವಿಚಾರ
ವನ್ನು ಮುಂದುವರಿಸಿ ಅರ್ಥವನ್ನು ಹೊಂದಿಕೊಳ್ಳಲು ಪ್ರಯತ್ನ ಮಾಡು
ತ್ತೇವೆ. ಈ ಹೊಂದಿಕೆ ಸಿದ್ಧಿ ದ್ಲಿಸದೇಕಾದರೆ, "" ಕೇರಿ'' ಎಂಬ ಪದಕ್ಕೆ
ಸಂಕೇತಿತವಾದ ಮನೆಗಳ ಸಾಲು'' ಏಂಬ ವಾಚ್ಯಾರ್ಥವನ್ನು ನಿರಾಕರಿಸಿ
«" ಕೇರಿ” ಎಂದರೆ " ಕೇರಿಯಲ್ಲಿರುವ ಜನಗಳು '' ಎಂದು ಅರ್ಥಮಾಡ
ಬೇಕು. ಪೀಗೆ ಮಾಡುವುದು ಸುಲಭ. ಏಕೆಂದರೆ, ಕೇರಿಗೂ ಕೇರಿ
ಯಲ್ಲರುವ ಜನರಿಗೂ ಪ್ರಿದೃವ ವಾದ ಅಧಿಕರಣಸಂಬಂಧವಿರುವುದರಿಂದ
ಈ ಹೊಸ ಅರ್ಥ ನಮಗೆ ಧು 3 ಗೋಚರವಾಗುತ್ತ ದೆ. ಮಾತನ್ನು ಆಡಿದ
ವರ ಮನಸಿ ನಲ್ಲಿದ್ದ ಅರ್ಥವೂ ಇದೇ. ಇದು ಹೊಂದಿದ "ಕೊಡಲೆ
ವಾಕ್ಯವು ಸಮಂಜಸವಾಗುತ್ತ ದೆ.
೧೫. ಶಬ್ದ. ಅರ್ಥ ೨೨೯
ಇನ್ನೊಂದು ವಾಕ್ಯ: "" ಅವನ ಬುದ್ಧಿ ಪಾದರಸ '' ಎಂದು ಹೇಳು
ವುದುಂಟು. ಇಲ್ಲಿ ವಾಚಾ ್ಯರ್ಥಕ್ಕೆ ಹತ್ತೂ ಬಂದಿದೆಯೆಂದು ಯಾರೂ
ಶೋರಿನಿಕೊಡಬೇಕಂಗಿಲ | ಪಾದರಸ ” ಎಂಬುದಕ್ಕೆ "" ಪಾದರಸದ
ಕೊಳ್ಳಬೇಕು. ಬುದ್ಧಿ ಗೂ ಪಾದರಸಕ್ಕೊ ಓಟದಲ್ಲ, ಚುರುಕಿನಲ್ಲಿ ಹೋಲಿಕೆ
ಯಿರುವುದರಿಂದ ಈ ರೀತಿಯಾದ ಅರ್ಥವನ್ನು ಸುಲಭವಾಗಿ ಕಲ್ಪಿಸಿ
ಕೊಳ್ಳುತ್ತೇವೆ.
ಮೇಲಿನ ಎರಡು ಉದಾಹರಣಿಗಳಲ್ಲೂ ವಾಚ್ಯಾರ್ಥಕ್ಕೆ ಬಾಥೆ.
ಉಂಟಾದದ್ದರಿಂದ ಅದನ್ನು ನಿರಾಕರಿಸಿ ಬೇರೊಂದು ಅರ್ಥವನ್ನು ಅಂಗ್ಗೀ
ರಿಸದೇಕಾಯಿತು. ಈ ಹೊಸ ಅರ್ಥವು ಮನಸ್ಸಿಗೆ ತೋರಿದ ಯಾವುದೋ
ಒಂದಲ್ಲ ; ಅದು ವಾಚ್ಯಾರ್ಥಕ್ಕೆ ಕು ಪ್ಲವಾಗಿ ಸಂಬಂಧಪಟ್ಟಿರತಕ್ಕದ್ದು .
" ಕೇರಿ'' ಎಂಬ ಕಡೆ ಅಧಿಕರಣ ಸೆಂಬಂಧವುಂಚಟು ; "" ಪಾದರಸೆ''ಎಂಬ
ಕಡೆ ಹೋಲಿಕೆಯ ಸಂಬಂಧವುಂಟು. ವಾಚ್ಯಾರ್ಥಕೆ ಸ ಬಾಧೆ ಬಂದು,
ಅದಕ್ಕೆ ಸಂಬಂಧಪಟ್ಟ ಬೇರೊಂದು ಅರ್ಥವು ತೋರಿ ಸಮಂಜಸವಾಗುವ
ಕಡೆ ಪೀಗೆ ಹೊರಡುವ ಅರ್ಥಕ್ಕೆ ಲಕ್ಷ್ಯಾರ್ಥವೆಂದೂ, ಅದನ್ನು ತಿಳಿಸುವ
ಶಬ್ಬವ್ಯಾಪಾರಕ್ಕೆ!: ಲಕ್ಷಣಾವೃತ್ತಿಯೆಂದೂ ಹೆಸರು.
- ತುಮುಲ ಯುದ್ಧವನ್ನು ವರ್ಣಿಸುತ್ತಾ, "" ಅಲ್ಲಿಗೆ ಭರ್ಜಿಗಳು
ನುಗ್ಗಿದುವು'' ಎಂದು ಹೇಳಬಹುದು. ಅಜೇತನವಾದ ಭರ್ಜಿಗಳು
ತಮ್ಮಪ್ಪಕ್ಕೆ ತಾವೇ ನುಗ್ಗುವುದು ಹೇಗೆ? ಆದರೆ ಅವು ಹಿಂದೆ ಇದ್ದ
ಸ್ಥಾನದಿಂದ ಕದಲಿ ಇನ್ನೊಂದು ಸ್ಥಾನಕ್ಕೆ ಸೇರಿರುವುದು ನಿಜ ಈ
ಅರ್ಥವು ಸಿದ್ಧಿಸುವುದಕ್ಕಾ ಗಿ, “ಭರ್ಜಿಗಳನ್ನು ಹಿಡಿವ ಭಟರು ನುಗ್ಗಿದರು''
ಎಂದು ಇಲ್ಲ ಅರ್ಥಮಾಡಬೇಕಾಗುತ್ತ ದೆ. ಇಲ್ಲಿ ವಾಚ್ಯಾರ್ಥವು
1 ತ ಶಬ್ಧ ದಿಂದ ಮೊದಲು ಪಾಚ್ಯಾರ್ಥವು ಹೊರಟು ಬಳಿಕ ಲಕ್ಷ್ಯಾರ್ಧವು ತೋರುವುದ
ರಿಂದ, ಶಬ್ದಕ್ಕೂ ಲಕ್ಷಾರ್ಥಕ್ಕೂ ನೇರವಾದ ಸಂಬಂಧವಿಲ್ಲ. ಅದರೂ ನಿರೂಪಣಿಯ
ಶೌಕರ್ಯಕ್ಕಾಗಿ ಲಕ್ಷಣಾವೃತಿ,ಯನ್ನು ಶಬ್ದಕ್ಕೇ ಆರೋಪಿಸಿ, ಅದನ್ನು ಶಬ್ದಪ್ಯಾಪಾರ
ದೆಂದು ಕರೆಯುತ್ತಾರೆ.
ಮುಖ್ಯಾರ್ಥಬಾಧೇ ತದ್ಯೋಗೇ ರೂಢಿತಶೋೊದ ಪ್ರಯೋಜನಾತ್ |
ಅನ್ಯೋರ್ಥೋ ಲಕ್ಷ್ಯತೇ ಯತ್ ಸಾ ಲಕ್ಷಣಾರೋಪಿತಾ ಕ್ರಿಯಾ |
(ಕಾವ್ಯಪ್ತಕಾಶೆ, ;;, ೪)
೨೩೦ ಭಾರತೀಯ ಕಾವ್ಯಮಾಮಾಂಸೆ
ತನ್ನಪ್ಪಕ್ಕೆ ತಾನೇ ಸಮಗ್ರವಾಗಿರಲಲ್ಲ; ಅದರ ಪೂರಣಕ್ಕಾಗಿ ಲಕ್ಷಣಾ
ವೃತ್ತಿಯನ್ನು ಆಶ್ರಯಿಸಿ "" ಧರ್ಜಿಗಳು'' ಎಂದರೆ « ಭರ್ಜಿಗಳನ್ನು
ಹಿಡಿದವರು'' ಎಂದು ಅರ್ಥ ಮಾಡಬೇಕಾಯಿತು. ಇಲ್ಲಿಯ ಲಕ್ಷಣೆಗೂ
«« ಶೇರಿಯೆಲ್ಲ ಕಣ್ಣೀರು ಸುರಿಸಿತು'' ಎಂಬಲ್ಲಿಯ ಲಕ್ಷಣೆಗೂ ವ್ಯತ್ಯಾಸ
ವುಂಟು. "ಕೇರಿ'' ಎಂಬುದರಲ್ಲಿ ವಾಚ್ಯಾರ್ಥವು ಪೂರ್ತಿಯಾಗಿ
ತಿರಸ್ಕೃತವಾಗುತ್ತದೆ; ಅದಕ್ಕೆ ಸಂಬಂಧಪಟ್ಟಿದ್ದರೂ ಅದನ್ನೊ ಳಕೊಳ್ಳದೆ
ಬೇರೆಯಾಗಿರುವ ""ಜನರು'' ಎಂಬ ಅರ್ಥವು ಲಕ್ಷಿತವಾಗುತ್ತದೆ.
(ಜನರು ಕಣ್ಣೀರು ಸುರಿಸಿದರೇ ಹೊರತು, ಕೇರಿ ಕಣ್ಣೀರು ಸುರಿಸಲಲ್ಲ.)
ಈ ಬಗೆಯ ಲಕ್ಷಣಿಗೆ "" ಜಹಲ್ಲಕ್ಷಣಾ'' ಎಂದು ಹೆಸರು. ""ಭರ್ಜಿಗಳು
ನುಗ್ಗಿ ದುವು "ಎಂಬಲ್ಲಿ ವಾಚ್ಯಾರ್ಥವು ಹೀಗೆ ತಿರಸ್ಕೃತವಾಗುವುದಿಲ್ಲ.
(ಜನರು ನುಗ್ಗಿದಾಗ ಅವರ ಕೈಯಲ್ಲದ್ದ ಧರ್ಜಿಗಳೂ ನುಗ್ಗಿಯೇ ನುಗ್ಗಿ
ದುವು.) ಇಲ್ಲಿ ವಾಚ್ಯಾರ್ಥ ದ ಸಿದ್ಧಿಗಾಗಿ, ಎ೦ದರೆ ಅದು ಪೂರ್ಣ
ವಾಗುವುದಕ್ಕಾಗಿ, ಭರ್ಜಿಯನ್ನು ಹಿಡಿದವರು ಲಕ್ಷಿತರಾಗುತ್ತಾಗೆ. ಈ
ಬಗೆಗೆ "" ಆಓಹಲ್ಲಕ್ಷಣಾ '' ಎಂದು ಹೆಸರು."
ಈ ಎರಡು ಬಗೆಯ ಲಕ್ಷಣಿಗಳಲ್ಲೂ, ವಾಚ್ಯಾರ್ಥ ಕ್ಕೂ ಲಕ್ಷ್ಯಾರ್ಥ ಕ್ಕೂ
ಸಂಬಂಧವುಂಟೆಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಬಗೆಬಗೆಯಾಗಿರ
ಬಹುದು: ಮೊದಲನೆಯದರಲ್ಲಿ ಇರುವುದು ಅಧಾರಾಥೇಯ ಸಂಬಂಧ;
ಭರ್ಜಿಗಳು ಎಂಬ ಕಡೆ ಸಾಹಚರ್ಯವಿದೆ. ಈಗ, " ಅವನಿಗೆ ಕಾಫಿಯೇ
ಪ್ರಾಣ'' ಏಂಬ ಮಾತನ್ನು ಗಮನಿಸಿ. " ಅವನಿಗೆ ಕಾಫಿಯೇ ಪ್ರಾಣ
ವನ್ನುಳಿಸುವ ಕಾರಣವಸ್ತು ” ಎಂದು ಇದರ ಲಕ್ಷಾರ್ಥ ; ಇಲ್ಲಿ ಕಾರ್ಯ
ಕಾರಣ ಸಂಬಂಧವುಂಟು. " ಅವನು ನನ್ನ ಅನ್ನವನ್ನು ಕಿತ್ತುಕೊಂಡನು ''
ಎಂಬ ಮಾತಿನಲ್ಲೂ ಪೀಗೆಯೇ ; ಅನ್ನವು ದೊರೆಯುವುದಕ್ಕೆ ಕಾರಣವಾದ
ಉದ್ಯೋಗವನ್ನೋ ಲಾಭವನ್ನೋ ತಪ್ಪಿಸಿದನು ಎಂದು ಇಲ್ಲ ಅರ್ಥ.
ಹೀಗೆ ಜಗತ್ತಿನಲ್ಲಿ ಎಷ್ಟೆಷ್ಟು ಹುಗೆಯ ಸಂಬಂಧಗಳು ತೋರುತ್ತಷೆಯೋ
ಅವೆಲ್ಲವೂ ಲಕ್ಷಣಾವೃತ್ತಿಗೆ ಮೊಲವಾಗಬಹುದು. ಈ ಎಲ್ಲ ರೀತಿಯ
ಲಕ್ಷಣಿಗೂ "" ಸಂಬಂಧಮೂಲಾ'' ಎಂದು ಲಾಕ್ಷಣಿಕರು ಹೆಸರು ಕೊಟ್ಟಿ
1 ಮನೆ ಕಟ್ಟುವಾಗ ಗಣಗೆಯ ಕೆಲಸದವನು, “ ಈಗ ಗಾರೆ ಬರಲ, ಈಗ ಇಟ್ಟಿಗೆ
ಬರಲಿ '' ಎನ್ನುತ್ತಾನೆ. ಔತನದ ಊಟದಲ್ಲಿ " ಚಿರೋಟಿ ಬಂತು, ಇನ್ನು ಸಕ್ಕರೆ ಬರ
ಬೇಕು ' ಎಂದು ಹೇಳುವುದು ಎಲ್ಲರಿಗೂ ಗೊತ್ತಿದೆ. ಇದೆಲ್ಲ ಅಜಹಲ್ಲಕ್ಷಣಿಗೇ ನಿದರ್ಶನ.
೧೫. ಶಬ್ದ --ಅರ್ಥ ೨೩೧
ದ್ದಾರೆ. ಇದರಲ್ಲಿಯೇ "" ಅಜಹಬ್ಬಕ್ಷಣಾ'' "« ಜಹಲ್ಲಕ್ಷಣಾ'' ಎಂಬುವು
ಒಳವಿಭಾಗಗಳು. ಈಗ, "ಅವನ ಬುದ್ಧಿ ಪಾದರಸ '' ಎಂಬುದರ
ವಿಷಯವೇನು ;. ಇಲ್ಲಿ ವಾಚ್ಯಾರ್ಥಕ್ಕೂ ಲಕ್ಷ್ಯಾರ್ಥಕ್ಕೂ ಇರುವುದು
ಸಾದೃತ್ಯ.. ಇದೂ ಒಂದು ವ ಸಂಬಂಧವೇ 'ಆದರೂ ಇದನ್ನು
ಪ್ರತ್ಯೇಕವಾಗಿ ಗಣಿಸಿ, « ಸಾದೃತ್ಯಮೂಲಾ'' ಅಥವಾ «ಗಾಣೀ''
ಎಂಬ ಹೆಸರನ್ನು ಕೊಡುತ್ತಾರೆ.
ಲಕ್ಷಣಾವೃತಿ ಶ್ಲಿಯ ಈ ಮುಖ್ಯ ವಿಧಾಗಗಳನ್ನು ಒಂದು ಪಟ್ಟಿಯ
ರೂಪದಲ್ಲಿ. ತೋರ ಸಬಹುದು.
ಸಂಬಂಧಮೂಲಾ ಸಾದೃಶ್ಯಮೂಲ
ಸ Le (ಎಾಗೌಣೀ)
ಅಜಹಭಿಕ್ಷಣಣ ಚ
ಮೇಲೆ ನಾವು ಕೊಟ್ಟಿ ರುವುದ: ಬಹುಸ್ಫೂಲವಾದ ವಿಭಾಗ; ಇದರಲ್ಲಿ
ಇನ್ನೂ ಒಳಭೇದಗಳನ್ನು ತಾರ್ಕಿಕರೂ ಆಲಂಕಾರಿಕರೂ ತಮ್ಮ ತಮ್ಮ
ಆವಶ್ಯಕತೆಗೂ ಬುದ್ಧಿ ಚಾತುರ್ಯಕ್ಕೂ ತಕ್ಕ೦ತೆ ಕಲ್ಪಿಸುತ್ತಾ ಹೋಗುತ್ತಾರೆ.
ಆದರೆ ಅವನ್ನು ಇಲ್ಲಿ ವಿವರಿಸುತ್ತಾ ಹೋದರೆ ಅತಿ ವಿಸ್ತಾರವಾಗುತ್ತದೆ.
:! ಮುಖ್ಯವಾದ ಒಂದು ಒಳ ಭೇದವನ್ನು ಉದಾಹರಣಿಯ ಮೂಲಕ ಇಲ್ಲ ಸೂಚಿಸ
ಎಹುದು. ಆಪ್ತರು ಕೆಲವರು ಸೇರಿ ಗುಟ್ಟು ಮಾತಾಡುತ್ತಿರುವಾಗ, ಗುರುತಿನವನೊ
ನಿನು ಸಮಿಾಪಿಸುತ್ತಿರುವುದನ್ನು ಕಂಡು, "ನರಿ ಬರುತ್ತಿದೆ; ಇನ್ನು ಸುಮ್ಮುನಿರಿ''
ಎನ್ನುವುದುಂಟು. ಇಲ್ಲ ""ನರಿ'' ಎಂದರೆ ಮೃಗವಲ್ಲ, ನರಿಯಂಧ ಒಬ್ಬ ತಂತ್ರಗಾರ.
೨ವನ ಹೆಸರನ್ನೇ ಹೇಳದೆ, ನರಿಗೂ ಅವನಿಗೂ ಅಭೇದವನ್ನು ಕಲ್ಪಿಸಿದ್ದಾರೆ. ಇಲ್ಲ
ಕ್ರಸ್ತುತ ವ್ಯಕ್ತಿಗೆ "ವಿಷಯ '' ಎಂದೂ ಸಾದೃಶ್ಯಸಂಬಂಧವುಕ್ಯ ನರಿಗೆ “ವಿಷಯ”
ನಿಂದೂ ಸಂಜ್ಞೆ. ವಿಷಯವನ್ನು ಬೇರೆಯಾಗಿ ನಿರ್ದೇಶಿಸಡೆ ವಿಷಯಯಲ್ಲೇ ಒಳಪಡಿಸಿ
೨ಭೀದವನ್ನು ಕಲ್ಪಿಸುವುದಕ್ಕೆ "" ಅಧ್ಯವಸಾಯ '' "ಎಂದು ಹೆಸರು. ಹೀಗ್ಗೆ ""ನರಿ
ರುತ್ತದೆ” ಎಂಬುದು ಸಾಡೃತ್ಯವೂಲಲಕ್ಷಣಿಯಲ್ಲಿ “ ಸಾಧ್ಯವಸಾನಾ '' ಎಂಬ
ರ್ರೈಭೇದೆ. "" ಬುದ್ಧಿ ಪಾದರಸ '' ಎಂಬಲ್ಲಿಯೂ ವಿಷು ವಿಷಯಿಗಳಿಗೆ ಅಭೇದ ಹೇಳಿದ್ದರೂ
2ರಡೂ ಪ್ರತೈೇತವಾಗಿ ಉಕ್ತವಾಗಿವೆ ; ಅಧೇದ ಆರೋಪಿತವಾಗಿದೆ. ಇದು ""ಸಾರೋಪಾ''
ಎ೦ಬ ಲಕ್ಷಣಾಪ್ರಭೇದ. ಈ ಸಾರೋಪಾ ಸಾಧ್ಯವಸಾನಾ ಎಂಬ ಪ್ರಭೇದಗಳು
ರಂಬಂಧಮೂಲಲಕ್ಷಣೆಯಲ್ಲೂ ಉಂಟು.
ಈ ಎರಡು ಪ್ರಭೇದಗಳನ್ನವಲಂಬಸಿ ಕಾವ್ಯದಲ್ಲಿ ರೂಪಕ, ಅತಿಶಯೋಕ್ತಿ ಮೊದಲಾದ
ಕರೆ ಬೇರೆ ಅಲಂಕಾರಗಳಾಗುತ್ತವೆ. ಆದಕಾರಣ ಅಲಂಕಾರಗಳ ಸೂಕ್ಷ್ಮ ವಿಚಾರಕ್ಕೆ
2ವುಗಳ ಭೇದಜ್ಞಾನ ಅವಶ್ಯಕ.
೨೩೨ ಭಾರತೀಯ ಕಾವ್ಯಮಾಮಾಂಸೆ
ಆದರೆ ಜಹಲ್ಲಕ್ಷಣಿಯ ಒಂದು ವಿಶೇಷ ವಿಭಾಗವನ್ನು ಮಾತ್ರ ನಾವು
ಗಮನಕ್ಕೆ ತಂದುಕೊಳ್ಳುವುದು ಆವಶ್ಯಕ. ಒಬ್ಬ ನು ಇನ್ನೊ ಬ್ಬನನ್ನು
ಕುರಿತು ಕ ತಾವು ದೊಡ್ಡವರು; ನನ್ನ. ಹತ್ತಿರಕ್ಕೆ ಬರದೇಡಿ”' ಎಂದು
ವ
ಹೇಳುವುದುಂಟು. ಇಲ್ಲ ವಾಕ್ಯದ ಅನ್ವಯವೇನೋ ಹೊಂದುತ್ತದೆ ;
ಆದರೆ, ಸಂಬೋಧನೆಗೆ ಗಿರುವ ವ್ಯಕ್ತಿಯನ್ನು ದೊಡ್ಡ ವನೆಂದು
ಕರೆದು ಗೌರವಿಸುವುದು ವಕ್ತ ವಿನ ತಾತ್ಪ ರ್ಯವಲ್ಲಪೆಂದು ಥಟ್ರಃ ನೆ ಗೊತ್ತಾ
ಗುತ್ತದೆ. ಇಲ್ಲಿ " ದೊಡ್ಡವರು” ಬುಡಕ್ಕೆ «ನೀಚ, ಯೋಗ್ಯ ಸ
ಎಂಬುದು ಲಕ್ಷಾ ರ. ವಾಚ್ಯಾ ರ್ಥಕ್ಕೆ ಸ್ ವಿರುದ್ಧ ವಾಗಿರುವ
ಅರ್ಥ. ಇದು; ಈ ವಿರೋಧ. ತ ಪೈಪರೀತ್ಯ ವೇ ಇಲ್ಲ ಇವೆರಡಕ್ಕೂ
ಇರುವ ube ಈ ಪ್ರಭೇದಕ್ಕೆ " ವಿಪರೀತಲಕ್ಷಣಾ'' ಎಂದು
ಹೆಸರು. " ಅವನು ಬೃಹಸ್ಪತಿ'', ಅಯ್ಯಾ ರಫಿಕತಿಖಾಮಣ, ನಿನಗೇಕೆ
ಕಾವ್ಯದ ಗೋಜು!''--ಇಂಥ ವಾಕ್ಯಗಳಲ್ಲೆಲ್ಲಾ ವಿಪರೀತಲಕ್ಷಣೆ
ಗೋಚರಿಸುತ್ತದೆ.
ಅಂತೂ, ಯಾವುದಾದರೂ ಒಂದು ರೀತಿಯಲ್ಲಿ ವಾಚ್ಯಾರ್ಹಕ್ಕೆ
ದಾಥೆ ತಟ್ಟಿದಾಗ, ಎಂದರೆ ಅದು ಹೊಂದದೆ ಇದ್ದಾಗ (ಅನುಪಪನ್ನ
ವಾದಾಗ) ಮಾತ್ರ, ಲಕ್ಷಣಾವ್ಯಾಪಾರ ಪ್ರವರ್ತಿಸುತ್ತದೆ. ವಾಕ್ಯದ
ಅರ್ಥ ಉಪಪನ್ನವಾಗುವುದಕ್ಕೆ ಎಷ್ಟು ಬೇಕೋ ಅಷ್ಟೇ ಕೆಲಸಮಾಡಿ
ವಿರಮಿಸುತ್ತದೆ. ಇಷ್ಟೇ ಕೆಲಸ ಮಾಡುತ್ತೇನೆಂದು ಕರಾರು ಮಾಡಿ
ಕೊಂಡು, ಅದು ಮುಗಿದಕೂಡಲೆ ಜಾರಿಬಿಡುವ ಕೆಲಸಗಾರನಿಗೆ ಈ ವೃತ್ತಿ
ಯನ್ನು ಹೋಲಿಸಬಹುದು. ಇದು ಅಭಿಧಾವೃ ತ್ತಿಯ ಬೆನ್ನ ಹಿಂದೆ Aa
ಅದು ಅಸಮರ್ಥವಾದಾಗ ಮಾತ, ನಿಯತವಾದಷೆ ಸ ದೂರ ಪ್ರವರ್ತಿ
ಸುವುದರಿಂದ ಇದನ್ನು ಅಭಿಧಾವೃತ್ತಿಯ ಬಾಲವೆಂದು ಕರೆಯುತ್ತಾರೆ."
ಅದು ಬರುವ ಪ್ರತಿ ಸಂದರ್ಭದಲ್ಲೂ ವಾಚ್ಯಾರ್ಥದಪ್ಪೇ ಖಚಿತವಾಗಿ
ಲಕ್ಷ್ಯಾರ್ಥವನ್ನೂ ಗ್ರಹಿಸಬಹುದು; ವಾಚ್ಯರೂಪದಲ್ಲಿ ಹೇಳೆಲೂಬಹುದು.
ಇದಕ್ಕೆ ಮೇಲಿನ ಉದಾಹರಣಿಗಳಲ್ಲೇ ನಿದರ್ಶನವಿದೆ.
ಒಂದು ಅರ್ಥವನ್ನು ವಾಚ್ಯವಾಗಿಯೇ ತಿಳಿಸಲು ಸಾಧ್ಯನಿರುವಾಗ
ಲಕ್ಷ್ಮಣಾವೃತ್ತಿಯನ್ನು ಎಕೆ « ಆತ ತ್ರಯನದೇಕು? ಇದು. ದ್ರಾವಿಡ ಪ್ರಾಣಾ
14 * ಅಭಿಧಾಪುಡ ೊತ್ಳೊವ ಲಕ್ಷಣ್. (ಧ್ವವ್ಯಾ. ಲೋಚನ, ಪು. ೫೫)
೧೫. ತಬ್ದ- ಅರ್ಥ ೨೩೩
ಯಾಮವಲ್ಲವೆ? ಇದರಲ್ಲಿ ಯಾವ ಪ್ರಯೋಜನವುಂಟು--ಎಂಬ ಪ್ರಶ್ನೆ
ಸಹಜವಾಗಿ ಏಳುತ್ತದೆ. "" ಪ್ರಯೋಜನಮನುದ್ವಿಶ್ಯ ನ ಮಂದೋಃಪಿ
ಪ್ರವರ್ತತೇ ' ("ಪ್ರಯೋಜನದ ಗುರಿಯಿಲ್ಲದೆ ದಡ್ಡನು ಕೂಡ ಕಾರ್ಯದಲ್ಲಿ
FS '') ಇಲ್ಲಿರುವ ಪ್ರಯೋಜನವೇನು, ನೋಡೋಣ.
FO ಕೇರಿಯೆಲ್ಲ ಕಣ್ಣೀರು ಸುರಿಸಿತು '' ಎಂಬ ಕಡೆಯಲ್ಲಿ, « ಕೇರಿ”
ಎಂದರೆ 4 ತೌರಹಲ್ಲರುವ. ಜನಗಳು” ಎಂಬುದು ಲಕ್ಷ್ಯಾರ್ಥವಷ್ಟೆ.
1 ಕೇರಿಯಲ್ಲರುವ ಜನಗಳೆಲ್ಲ ಕಣ್ಣೀರು ಸುರಿಸಿದರು '' ಎಂಬ ವಾಕ್ಯವು
ನಮ್ಮ , ಮನಸ್ಸಿನ ಮೇಲೆ. ಉಂಟುಮಾಡುವ ಪರಿಣಾಮವನ್ನೂ ಜು
ವಾಕ್ಯದ ಪರಿಣಾಮವನ್ನೂ ಹೋಲಿಸಿನೋಡಿ. "" ಕೇರಿಯ ಜನರಲ್ಲ
ಒಬ್ಬರನ್ನೂ ಬಿಡದೆ ಎಲ್ಲರೂ ಒಂದೇ ವ್ಯಕ್ತಿಯಂತೆ ಕಣ್ಣೀರು ಸುರಿಸಿದರು,
ಆ ಹುಡುಗಿಯ ವಿಷಯದಲ್ಲಿ ಅವರೆಲ್ಲರಿಗೂ ಒಂದೇ ಸಮನಾಗಿ ಅಪ್ಪು
ಗಾಢವಾದ ಮಮತೆಯಿತ್ತು '--ಇಷವೇ ಮೊದಲಾದ ಆಅಶೆಯಗಳು
ಮೂಲವಾಕ್ಯವನ್ನು ಕೇಳಿದಾಗ ಸ್ಫುರಿಸುತ್ತಷೆ. «: ಕೇರಿಯಲ್ಲರುವ ಜನ
ಗಳೆಲ್ಲ... .... ತ ಎಂದು ಹೇಳಿದ್ದರೆ ಈ « ಗಾಢಮಮತೆ `` ಯೆಂಬ ಅರ್ಥ
ಹೊಳೆಯುತ್ತಿದಿ ತೋ ಇಲ್ಲವೋ ಸಂದೇಹ; ಇಷ್ಟು ಅತಿಶಯವಾಗಿ
ಖಂಡಿತ ತೋರುತ್ತಿ ರಲಿಲ್ಲ. “ ಅವನ ಬುದ್ಧಿ ಪಾದರಸ ' ಎಂಬುದರಲ್ಲೂ
ಹೀಗೆಯೇ ; ಇಲ್ಲಿಯೂ ಅತಿಶಯ ತೋರುತ್ತದೆ. “ ತಾಯಿಯನ್ನು
ನೋಡುತ್ತಲೇ ಮಗುವಿನ ಮುಖ ಅರಳಿತು” ಎಂಬ ಸಾದೃಶ್ಯಮೂಲವಾದ
ಬೇರೊಂದು ಉದಾಹರಣಿಯನ್ನು ತೆಗೆದುಕೊಳ್ಳೋಣ. ಅರಳುವುದು
ಹೂವಿನ ಕ್ರಿಯೆ; ““ ಮುಖ ಅರಳಿತು'' ಎಂಬಲ್ಲಿ ವಾಚಾ ್ಯರ್ಥವು ಅಸಂಗತ
ವಾಗಿ * ಹೂವು ಅರಳಿದಾಗ ಅಗಲವಾಗುವಂತೆ, ಮುಖವು ಅಗಲ
ವಾಯಿತು'' ಎಂದು ಲಕ್ಕಾರ್ಥ ಸಿದ್ಧಿಸುತ್ತದೆ. ಆದರೆ ಇದನ್ನು ಮೂಲ
ವಾಕ್ಯದೊಂದಿಗೆ ಹೋಲಿಸಿನೋಡಿ, ಎಷ್ಟು ನಿಸ್ಬಾರವಾಗಿ ಕಾಣಿಸುತ್ತದೆ!
ಈ ಮಾತನ್ನು ಹೀಗೆ ವಾಚ್ಯವಾಗಿ ಹೇಳದೆ ಲಕ್ಷಣಾವೃತ್ತಿಯನ್ನು ಆಶ್ರಯ
ಸಿದ್ಧರಿಂದ ದೊರೆತಿರುವ ಪ್ರಯೋಜನಾತಿತಯವನ್ನು ಮಾತಿನಲ್ಲ ಹೇಗೆ
ಸಂಗ್ರಪಿಸಬಹುದು ? ಅದು ಅನುಭವವೇದ್ಯ.
ನಾಪು ಸಾಮಾನ್ಯವಾಗಿ ಆಡುವ ಮಾತನ್ನು ಪರೀಕ್ಷಿಸಿ ನೋಡಿದರೆ,
ಅದರಲ್ಲಿ ಲಕ್ಷಣಾವ್ಯಾಪಾರ ಪ್ರಚುರವಾಗಿದೆಯೆಂಬುದು ಮನವರಿಕೆ
೨೩೪ ಭಾರತೀಯ ಕಾವ್ಯಮಾಮಾಂಸೆ ಕೈ
ಯಾಗದಿರದು. ಹೀಗೆ ಮಾತನ್ನು ಉಪಯೋಗಿಸುವುದು ವಷ್ಟು ರೂಢಿ
ಯಾಗಿದೆಯೆಂದರೆ, ಇದನ್ನು ಕೇಳಿದ ಕೂಡಲೆ ಅರ್ಥಮಾಡಿಕೊಳ್ಳುವುದು
ನಮಗೆ ಎಷ್ಟು ಅಭ್ಯಾಸವಾಗಿದೆಯೆಂದರೆ, ಗಮನವಿಟ್ಟು ವಿಭಜನೆಮಾಡಿದ
ಹೊರತು, ಇಲ್ಲೆ ಲ್ಲಾ ವಾಚ್ಯಾರ್ಥ ಹೊಂದುವುದಿಲ್ಲ, ದಕ್ಕೆ ಸಂಬಂಧ
ಪಟ್ಟ ಹಾಗೆ ಬೇರೊಂದು ಅರ್ಥವನ್ನು ಕಲ್ಪಿಸಿಕೊಂಡು ಸರಿಪಡಿಸಿಕೊಳ್ಳು
ತ್ತೇವೆ ಎಂಬುದ್ಧೇ ನಮಗೆ ಅರಿವಾಗುವುದಿಲ್ಲ. ಅಭಿನವಗುಪ್ತನು ಹೇಳು
ವಂತೆ ಅನಯಾ ಲಕ್ಷಣಯಾ,....... ವಿಶ್ವಮೇವ ವ್ಯಾಪ್ತಂ" ("" ಈ ಲಕ್ಷಣಾ
ವ್ಯಾಪಾರ ವಿಶ್ವವನ್ನೇ ವ್ಯಾಪಿಸಿದೆ ''). ಲಕ್ಷಣೆ ವಾಗ್ಯ್ಯವಹಾರದ ನಿತ್ಯೆ
ದರ್ಮ ; ಕವಿಗಳ ಕಾಮಧೇನು ; ಅನೇಕ ಅಲಂಕಾರಗಳ ಜೀವದ್ರವ್ಯ.
ಇದಕ್ಕೆ ಈ ಮಹಿಮೆ ಬರಲು ಇದರಿಂದ ಸ್ಫುರಿಸುವ ಪ್ರಯೋಜನಾಂ೦ಶವೇ
ಮುಖ್ಯ ಕಾರಣ. ಮೇಲೆ ಉದಾಹರಿಸಿರುವ ಕೆಲವು ಲೌಕಿಕ ವಾಕ್ಯಗಳಲ್ಲೇ
ಇದು ಗೋಚರವಾಗುತ್ತದೆ. ಕಾವ್ಯದಲ್ಲಿ ಇದು ಎಪ್ಪು ವ್ಯಾಪಕವೆಂಬು
ದನ್ನು ಮುಂದೆ ವಿಶದವಾಗಿ ಗಮನಿಸುತ್ತೇವೆ.
ಇಲ್ಲಿ, “ಪ್ರಯೋಜನ ವು ಶಬ್ದದ ಯಾವ ವ್ಯಾಪಾರದಿಂದ
ಗೋಚರವಾಗುತ್ತದೆ? ಅಭಿಧಾವೃತ್ತಿಯಿಂದ ಅಲ್ಲ. ಏಕೆಂದರೆ ಅದು
ಪ್ರಾರಂಭದಲ್ಲೇ ಕುಂಠಿತವಾಯಿತು. “ಕೇರಿ” ಎಂಬುದಕ್ಕೆ "" ಮನೆಗಳ
ಸಾಲು'' ಎಂಬುದು ಅಭಿಧಾವೃತ್ತಿಯಿಂದ ಹೊರಡುವ ಅರ್ಥ ; ಇದು
ಹೊಂದಲಿಲ್ಲ. ಮುಖ ತೋರಿಸಿ, ಅಪ್ರಯೋಜಕ ವಿನ್ನಿಸಿಕೊಂಡವನಂತೆ
ಅದು ತಲೆಮರಸಿಕೊಂಡಿತು. ಹೋಗಲಿ; ಅದಾದಮೇಲೆ ಬಂದ ಲಕ್ಷಣಾ
ವೃತ್ತಿಯಿಂದಲ್ಲೇ ಇಷ್ಟು ಅರ್ಥವೂ ಹೊರಟಿತು ಎನ್ನಬಹುದೆ? ಸಾಧ್ಯವಿಲ್ಲ.
ಲಕ್ಷಣಿಯ ವ್ಯಾಪಾರವೂ ನಿಯತವೆಂದು ಆಗಲೇ ಅರಿತಿದ್ದೇವೆ. ವಾಕ್ಯದ
ಅರ್ಥವು ಸಂಗತವಾಗುವಂತೆ ಅದನ್ನು ಸರಿಪಡಿಸಿದಪ್ಪಕ್ಕೆ, ಎಂದರೆ
“ಶೇರಿಎಕೇರಿಯ ಜನರು'' ಎಂದು ತಿಳಿಸಿದಪ್ಪಕ್ಕೆ, ಅದಕ್ಕೆ ನೇಮಕ
ವಾಗಿರುವ ಕೆಲಸ ಮುಗಿಯಿತು. ಆದರೆ ಈ ಸಂದರ್ಭದಲ್ಲಿ ಹೊರಡುವ
ಅರ್ಥವೆಲ್ಲ ಮುಗಿಯಲಿಲ್ಲ. ಪ್ರಯೋಜನರೂಪವಾಗಿ ಇನ್ನು ಮುಂದಕ್ಕೆ
ಹೊಳೆಯುವ ಅರ್ಥಪರಂಪರೆಗೆಲ್ಲಾ ಶಬ್ಧದ ಬೇರೊಂದು ವ್ಯಾಪಾರವೇ
ಒದಗಬೇಕು. ಇದಕ್ಕೇ ವ್ಯ೦ಜನಾವೃತ್ತಿಯೆಂದು ಹೆಸರು. ಇಲ್ಲಿ ಸಂದರ್ಭ
8 ಧ್ವನ್ಯಾ.ಲೋಚನ, ಪು. ೫೭.
೧೫. ತಬ್ದ- ಅರ್ಥ ಮಘ
ವತದಿಂದ, ಕೇರಿ” ಎಂಬ ಶಬ್ದವು ಹಿಂದೆ ನಾವು ಸೂಚಿಸಿದ
ಪ್ರಯೋಜನವನ್ನೆಲ್ಲಾ ಬಾಯಿಬಿಟ್ಟು ಹೇಳದೆಯೇ ವ್ಯಂಜನಾವ್ಯಾಪಾರದ
ಮೂಲಕ ಸೂಚಿಸುತ್ತದೆ. ಈ ಪ್ರಯೋಜನವನ್ನು ಸಾಧಿಸುವುದಕ್ಕಾಗಿಯೇ
« ಕೇರಿಯ ಜನರೆಲ್ಲ” ಎನ್ನದೆ "" ಕೇರಿಯೆಲ್ಲ ಎಂದು ಪ್ರಯೋಗಿಸಿದ್ದು.
ಈ ಪ್ರಯೋಜನವೇ ಇಲ್ಲಿಯ ವ್ಯಂಗ್ಯಾರ್ಥ. "*" ತಾಯಿಯ ಮುಖವನ್ನು
ಕಾಣುತ್ತಲೇ ಮಗುವಿನ ಮುಖ "ಅರಳಿತು `` ಆಂಬ ಉದಾಹರಣಿಯಲ್ಲೂ
ಹೀಗೆಯೇ. " ಅರಳಿತು '' ಎಂಬುದರಿಂದ ಹೊಳೆಯುವ ಪ್ರಯೋಜನವು
ಕಬ್ಬವ ಅಬಿಧಾವೃತ್ತಿಗಾಗಲಿ ಲಕ್ಷಣಾವೃತ್ತಿಗಾಗಲಿ ಗೋಚರವಲ್ಲ.
ಮಗುವಿನ ಸಂತೋಷ, ಪಿಗ್ಗು, ಉಲ್ಲಾ ಸ. ಇದೆಲ್ಲವನ್ನೂ ಇಲ್ಲ ಪ್ರತೀತಿಗೆ
ತಂದುಕೊಡುವುದು ಶಬ್ದ ದ ವ್ಯ ೦ಜನಾವ್ಯಾಪಾರ.
ವ್ಯ೦ಜನಾವ್ಯಾಪಾರದ ವಿಚಾರಕ್ಕೆ ಮುಂದುವರಿಯುವ ಮೊದಲು,
ಈ ಪ್ರಖೆ ೋಜನವನ್ನೆ 6 ಕುರಿತು ಒಂದೆರಡು ವಿಷಯಗಳನ್ನು ತಿಳಿದು
ಕೊ ಳ್ಳುವುದು ಅಗತ್ಯ. ಲೋಕದ ಮಾತಿನಲ್ಲಿ ಲಕ್ಷಣಾವೃತ್ತಿ ಸಂತತವಾಗಿ
ಪ್ರವರ್ತಿಸಿದರೂ, ಎಲ್ಲ ಕಡೆಯಲ್ಲೂ ಪ್ರಯೋಜನವು ಮುಖ್ಯವಾಗಿರು
ವುದೆಂದಾಗಲಿ, ಕಡೆಯಪಕ್ಷ ಗೋಚರವಾಗುವುದೆಂದಾಗಲಿ ಹೇಳಲು
ಇಲ್ಲ ಗಮನಾರ್ಹವಾದ ಅಂಶವೇನೆಂದರೆ--ಒಂದು ಶಬ್ದ
ಕ್ಷಣಾಮಾರ್ಗದಲ್ಲಿ ಮತ್ತೆ ಮತ್ತೆ ಉಪಯೋಗಿಸಿದ ಹಾಗೆಲ್ಲ
ಅದರ ಪ್ರಯೋಜನ ಹೊಳಪುಗುಂದುತ್ತ ದೆ, ಅದರ ಮೊನೆ ಮೊಂಡಾಗು
ತಡೆ ಅಡಡ ತಳೆಮಾರುಗಳಲ್ಲ ಹೀಗೆ ಬಳಸುತ್ತಾ ಬಂದಮೇಲೆ,
ಮೊದಲು ಲಕ್ಷ್ಯಾರ್ಥವಾಗಿದ್ದದ್ದು ವಾಚ್ಯತ್ವಕ್ಕೆ ಹೆಚ್ಚು ಹೆಚ್ಚು ಹತ್ತಿರ
ಬಂದು ಕಡೆಗೆ ತಾನೂ ವಾಚ್ಯಾಥ ರ್ಥವೇ ಆಗಿಬಿಡುವ ನೆಲೆಗೆ ಮುಟ್ಟುತ್ತದೆ.
೨ೀಗಾದಂತೆಲ್ಲ « ಲಕ್ಷಣಾವೃತ್ತಿ ತ ಹೊರಡುವ ಪ ಕ್ರಯೋಜನವೂ. ಹ್ರಾಸ
ವಾಗುತ್ತಾ ಬಂದು ಕಡೆಗೆ ಶೂನ್ನವಾಗುವುದೂ ಉಂಟು. ಪ್ರಯೋಜನ
ವಾಗಿ ಪರಿಣಮಿಸಿದ ಇಂಥ ವ್ಯಾಪಾರವನ್ನು "" ರೂಡಿಲಕ್ಷಣಾ ''
ಎಂದು ಕರೆಯುತ್ತಾರೆ.” ಭಾಪಾಪಧದ ಉದ್ದಕ್ಕೂ ರೂಢಿಲಕ್ಷಣಿಯ
[2
1 ಇಂಗ್ಲಿಪಿನಲ್ಲಿ "" ಮೃತರೂಪಕ `' (16801 metaphor) ಎನ್ನುವುದು ರೂಢಿಲಕ್ಷಣಿಯ
ಒಂದು ಪ್ ಭೇದ, ನ ಗ metaphor '' ಎನ್ನುವುದೇ ಅದಕ್ಕೆ ಲ್ವ ಕ್ಷ್ಯಷೊ ಆಗಬಹುದು.
೨೩೬ ಭಾರತೀಯ ಕಾವ್ಯಮಿಾಮಾಂಸೆ
ನಿದರ್ಶನಗಳು ಕಿಕ್ಕಿರಿದಿವೆ. ಒಂದೆರಡನ್ನು ಕನ್ನಡದಲ್ಲಿ ನೋಡೋಣ.
«ಮಂಕು ಎಂದರೆ ಜೆಳಕು ಕಡಮೆಯಾಗುವುದು ; “ ದೀಪ ಎ ಮಂಕಾಗಿದೆ ''
ಎನ್ನುತ್ತೇವಷ್ಟೆ. (( ಅವನ ಬುದ್ಧಿ ಮಂಕಾಗಿದೆ '' ಎಂಬ ಪ್ರಯೋಗ
ಕನ್ನಡಿಗನ ಬಾಯಲ್ಲಿ ಮೊದಲು ಹೊರಟಾಗ ಅದರ ಪ್ರಯೋಜನ
ಉಜ್ಜ್ಜಲವಾಗಿ ತೋರಿರಬೇಕು. ಆದರೆ ಅತಿ ಪರಿಚಯದಿಂದ ಈ
"" ಮಂಕು'' ಎಂಬಲ್ಲಿ ಲಕ್ಷಣಾವೃತ್ತಿಯ ಪ ಪ್ರಯೋಜನ ಈಗ ನಿಜವಾಗಿಯೂ
ಮಂಕಾಗಿದೆ, ಅಳಿಸಿಯೇ 'ಹೋಗಿದೆಯೆನ್ನ ಬಹುದು. ಪೀಗೆಯೇ, « ಕುದಿ''
ಎನು ವುದು ನೀರು ಮೊದಲಾದ ಮೂರ್ತವಸ್ತುಗಳಿಗೆ ಮೊದಲು ಅನ್ಯಯಿ
ಸುತ್ತಿತ್ತು; ಬಳಿಕ ಲಕ್ಷಣೆಯಿಂದ ಅಮೂರ್ತಕ್ಕೂ ವ್ಯಾಪಿಸಿತು. ಈಗ
ಲಾದರೆ “ನನ್ನ ಮನಸ್ಸು ಕುದಿಯುತ್ತಿದೆ :: ಎಂದು "ಮಾನ್ಯ ವಾಗಿ
ಹೇಳುತ್ತೇವೆ; ಇಲ್ಲಿ ಈಗ ಪ್ರತೀತವಾಗುವ ಪ್ರಯೋಜನ ಅತ್ಯಲ್ಪ.
ಲೋಕವ್ಯವಹಾರದಲ್ಲ ಒಬ್ಬರಂತೆ ಇನ್ನೊಬ್ಬರು ಮಾತಾಡುವುದೇ
ರೂಢಿ. ಅನುಕರಣಬಲದಿಂದ, ಅಭ್ಯಾ ಸಬಲದಿಂದ ಶಬ್ದ ಗಳನ್ನು
ಲಕ್ಷ್ಮಾರ್ಥದಲ್ಲಿ ಉಪಯೋಗಿಸುವಾಗ ಪ್ರಯೋಜನದ ದೃಷ್ಟಿ ಸಾಮಾನ್ಯ
ವಾಗಿ ಆಡುವವರಿಗೂ ಇರುವುದಿಲ್ಲ, ಕೇಳುವವರಿಗೂ ಇರುವುದಿಲ್ಲ. ಹಲವು
ಸಂದರ್ಭಗಳಲ್ಲಿ ಪ್ರಯೋಜನವು ಹೊಳೆಯುವಂತಿದ್ದರೂ ಅದು ಅಲ್ಪ
ವಾಗಿದ್ದು ಗಮನವನ್ನು ಸೆಳೆಯಲಾರದು. ಇಂಥ. ರೂಡಿಲಕ್ಷಣೆಯ
ಮತ್ತು 'ಅಲ್ಬಪ್ರಯೋಜನದ ಲಕ್ಷಣಿಯ ವಿಚಾರವು ಕಾವ್ಯ ದಲ್ಲಿ ಮುಖ್ಯ
ವಾಗುವುದಿಲ್ಲ. ಕವಿ ಲಕ್ಷ್ಮಣಾವೃತ್ತಿ ಯನ್ನು ಅವಲಂಬಿಸಿದಾಗ ಆಪರಿ
ಮಿತವಾದ ಪ್ರಯೋ ಗೋಚರವಾಗುತ್ತದೆ. ಅದೇ " ಪ್ರಧಾನವಾ ಗಿ
ನಮ್ಮ ಮನಸ್ಸ ನ್ನು ಆಕರ್ಷಿಸುತ್ತದೆ. ನಿಜವಾದ ಪ್ರಯೋಜನವೆಂದರೆ ಈ
ಬಗೆಯದು ; ವ್ಯಂಜನಾವ್ಯಾಪಾರ ಚೆನ್ನಾಗಿ ಕಾಣಿಸಿಕೊಳ್ಳುವುದು ಇಲ್ಲಿ.
ಇದಕ್ಕೆ ಒಂದೆರಡು ನಿದರ್ಶನಗಳನ್ನು ಈಗ ಕೊಡಬಹುದು.
1? “ ಮಜುಗು '' ಎಂಬ ಶಬ್ದ ""ಕುದಿ'' ಎಂಬುದಕ್ಕಿಂತ ಇನ್ನೂ ಒಂದು ಹೆಜ್ಜೆ
ಮುಂದೆ ಹೋಗಿದೆ. ಮೊದಲಿಗೆ ಆದಕ್ಕೂ "" ಕುದಿ '' ಎಂಬ ಅರ್ಥವೇ ಐತ್ತು; " ಮಜುಗುವ
ಪಾಲ್ಗಳೆಯ ಪನಿಗಳಂ ಬೆರಸಿದವೋಲ್ (ಕುದಿಯುವ ಹಾಲಿಗೆ ಮಜ್ಜಿ ಗೆಯ ಹನಿಗಳನ್ನು
ಬೆರಸಿದಂತೆ) ಎಂದು ಕೂಡ ಹೇಳುತ್ತಿದ್ದರು (ಕವಿರಾಜಮಾರ್ಗ, |. ಲ). ಈಗ ಆಅ
ಅರ್ಥವೆಲ್ಲ ಮರೆಯಾಗಿ, "" ಇನ್ನೊಬ್ಬ ರಿಗಾಗಿ ಮನನ ನಲ್ಲ ಪರಿತಾಪಪಡು '' ಎಂದು
ನಿಂತಿದೆ. ಐದು ತಬ್ದದ ವಾಚ್ಯಾರ್ಥವೇ ಅಗಿಬಟ್ಟದೆ.
೧೫. ತಬ್ದ--ಅರ್ಥ ೨೩೭
ಕುಮಾರವ್ಯಾಸನ ಭಾರತದಲ್ಲಿ, ದ್ರೌಪದಿಯ ಸೀರೆಯನ್ನು ಸೆಳೆಯಲು
ದುಶ್ಶಾಸನನು ತೊಡಗಿದ್ದಾನೆ. ಆ ತುಂಬಿದ ಸಭೆಯಲ್ಲಿ ಅವಳ ಮಾನ
ವನ್ನು ಕಾಯುವವರು ಒಬ್ಬರೂ ಇಲ್ಲ. ಕೈಪಿಡಿದ ಪತಿಗಳೇ ಸುಮ್ಮನೆ
ಕುಳಿತಿದ್ದಾರೆ. ಆಗ, ಅನಾಥೆಯಾದ ದ್ರೌಪದಿ, "" ಪತಿಗಳೆನ್ನನು ಮಾಲು
ಧರ್ಮಸ್ಸಿತಿಯ ಕೊಂಡರು ” ವಂದು ಹೆಲಬುತ್ತಾಳೆ. «« ತನ್ನ ಗಂಡಂದಿರು
ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ, ಪಶ್ನಿಯ ಮಾನಭಂಗವಾಗು
ತ್ತಿದ್ದರೂ ಅವಳ ಯೋಚನೆಯನ್ನು ಬಿಟ್ಟರು'' ಎಂಬುದು ಲಕ್ಷ್ಯಾರ್ಥ.
ಇದನ್ನು ಕವಿ ಪೀಗೆಯೇ ಹೇಳಿದ್ದರೆ ಸಪ್ಪೆಯಾಗಿ ಕಾಣಿಸುತ್ತಿತ್ತು; ಆದರೆ
ಲಕ್ಷಣಾ ವೃತ್ತಿಯನ್ನು ಆಶ್ರಯಿಸಿದ್ದರಿಂದ ಸ್ಫುರಿಸುವ ಅತಿಶಯಪ್ರಯೋಜನ
ವನ್ನು ಗಮನಿಸಿ, ನಿಜವಾಗಿ ಇಲ್ಲಿ ಯಾವ ಮಾರಾಟವೂ ಕೊಳ್ಳಾಟವೂ
ನಡೆದಿಲ್ಲ. ಅದರೆ ತನ್ನನ್ನು ಮಾರಿ ಅದಕ್ಕೆ ಪ್ರತಿಯಾಗಿ ಪತಿಗಳು
ಧರ್ಮವನ್ನು ಕೊಂಡರೆಂದು ದ್ರೌಪದಿ ಹೇಳುತ್ತಾಳೆ. ಯಾವುದಕ್ಕೆ
ಯಾವುದು ಬೆಲೆ! ಎಷ್ಟು ಅನುಚಿತವಾದ ವ್ಯಾಪಾರ ಇದು ಎ೦ಬ ಅಂಶವೂ,
ಪತಿಗಳ ವರ್ತನೆಯನ್ನು ಕುರಿತು ದ್ರೌಪದಿಯ ರೋಪ ವ್ಯಥೆಗಳೂ ಇಲ್ಲಿ
ಚೆನ್ಮಾಗಿ ಅಭಿವ್ಯಕ್ತವಾಗುತ್ತವೆ. ಇದೇ ಇಲ್ಲಿಯ ವ್ಯಂಗ್ಯಾರ್ಥ.
ಕುಮಾರ ನಂಬಿಯಣ್ಮನು ಬಾಲ್ಯದಲ್ಲಿಯೇ ತೋರಿಸಿದ ಮಪಿಮೆಯೊಂ
ದರಿಂದ ಅವನು ಕಾರಣಿಕಪುರುಪನೆಂಬುದನ್ನು ನರಸಿಂಗಮೊನೆಯರೆಂಬ
ದೊರೆ ಅರಿತು ಮೆಚ್ಚಿ , ತಾನು ಅಪುತ ಶ್ರ ಕರಾದಕಾರಣ ವಾತ್ಸಲ್ಯವುಕ್ಕಿ ಆ ಶಿಶು
ವನ್ನು ಅವನ ತಾಯಿತಂದೆಗಳ ಒಪ್ಪಿಗೆ ಪತೆದು ತನ್ನ ತನಯನಾಗಿ
ಸ್ಕೀಕರಿಸುತ್ತಾನೆ. ಬಳಿಕ ಅವನನ್ನು ಹೇಗೆ ಸಲಹಿದನೆಂಬುದನ್ನು ಹರಿ
ಹರನು ಈ ಮಾತುಗಳಲ್ಲ ವರ್ಣಿಸಿದ್ದಾನೆ:
«(,ಕುಮಾರನ೦ ಕಣ್‌ತೀವಿ ನೋಡಿ ತೆಗೆದಪ್ಬಿ ಮುಂಡಾಡಿ ಕೊಂಡಾಡಿ
ಸವಿಗಳನೂಡಿ ಸುಕುಮಾರತೆಯನುಡಿಶಿ ಕಾ೦ತಿಗಳ೦ ತೊಡಿಸಿ ಪರಿಮಳಮ೦
ಮುಡಿಸಿ ನೇಹಮಂ ಕಾಪಿಟ್ಟು ನೆನಪಿನೊಳಚ್ಚೊತ್ತಿ ಮನದೊಳ್ ತೂಪಿಯಿದು
ಚೆ ವಂ ಸಲಹುವಂತೆ | ಅಂದಂದಿಗೆ ಮೋಹಂ ಮೂವಡಿಸಿ ಸಲಹುತ್ತು
ಮಿರೆಯಿರೆ ''
(ನಂಬಿಯಣ್ಣನ ರಗಳೆ, ;[ ೯೯.೧೦೫).
೨೩೮ ಭಾರತೀಯ ಕಾವೃಮಾಮಾಂಸೆ
ಇದು ಲಕ್ಷಣಾವ್ಯಾಪಾರದ ಸುಗ್ಗಿ. ಇಲ್ಲಿಯ ಕೆಲವು ಮಾತುಗಳನ್ನು
ನಾವು ಗಮನಿಸಿದರೆ ಸಾಕು. ಲೋಕದಲ್ಲಿ ಮಕ್ಕಳಿಗೆ ತೊಡಿಪುವುದು
ಆಭರಣಗಳನ್ನು ; ಅದರೆ ನರಸಿಂಗಮೊನೆಯರು ಈ ಕುಮಾರನಿಗೆ ಕಾಂತಿ
ಗಳನ್ನೇ ತೊಡಿಸಿದನಂತೆ ! ಮುಡಿಸುವುದು ಹೂವನ್ನು ; ಇಲ್ಲಿ ಪರಿಮ
ವನ್ನೇ ಮುಡಿಸಿದನಂತೆ ! ಆಭರಣದ ಆಕರ್ಷಕವಾದ ಗುಣ ಅದರ ಕಾಂತಿ;
ಹೂವಿನ ಸಾರ ಅದರಲ್ಲಿರುವ ಪರಿಮಳ. ಸಂಬಂಧಮೂಲವಾದ ಲಕ್ಷಣ್
ಯನ್ನು ಆತ್ರಯಿಸಿ ಕವಿ ಅಭೇದವನ್ನು ಕಲ್ಪಿಸಿರುವುದರಿಂದ, ಇಲಿಯ
ಈ
ಅಲಂಕರಣದ ಲೋಕಾತಿಶಯತ್ಯವೂ, ಅದರಿಂದ ನರಸಿಂಗಮೊನೆಯರ
ವಾತ್ಸಲ್ಯವೂ ಉತ್ಕೃಷ್ಟವಾಗಿ ವ್ಯಂಗ್ಯವಾಗುತ್ತವೆ. ಇನ್ನು, " ನೇಹಮಂ
'ಕಾಪಿಟ್ಟು '' ಎಂಬುದರ ಅಭಿಪ್ರಾಯವನ್ನು ನೋಡಿ. ಲೋಕದಲ್ಲಿ ಮಕ್ಕಳ
ಕಾವಲಗೆ ಸಾಮಾನ್ಯವಾಗಿ ಆಳುಗಳನ್ನು ನೇಮಿಸುತ್ತಾರೆ. ಇಲಾದರೆ
ಅವರ ಹೆಸರನ್ನೇ ಎತ್ತದೆ, ಈ ಎಲ್ಲ ಕಾವಲಿಗೂ ಮೂಲಕಾರಣವಾ
ಹೃದಯದ ಸ್ನೇಹವನ್ನೇ ಕಾವಲುಗಾರನೆಂದು ಕರೆದಿರುವುದರ ಪ್ರಯೋ
ಜನಾತಿಶಯವನ್ನು ದೇರ ಮಾತಿನಲ್ಲ ಹೇಳುವುದು ದುಷ್ಕರ. ಕಾವಲಿನ
3ಳು ಸಂಬಳಕ್ಕಾಗಿ ದುಡಿಯುವವನು ; ಅವನು ಎಚ್ಚ ರತಪ್ಪುವುದುಂಟು.
ಆ
ಸ್ನೇಹದ ವಿಷಯದಲ್ಲಿ ಈ ತಂಕೆಗೇ ಅವಕಾತವಿಲ್ಲ; ಇತ್ಯಾದಿ, ಇತ್ತಾದಿ. '`
ಲ್ರ ೯
[3
ಪ್ರಯೋಜನಸಪಿತವಾದ ಲಕ್ಷಣೆಯಿರುನ ಕಡೆಗಳಲ್ಲೆಲ್ಲಾ ವ್ಯಂಗ್ಯಾ
32. 3331137777. ಒತ್ತಿ ಯು ರ ದ ಎಡ ಜಿ ಜ್ ಬ್ರ ಲ
ರ್ಥವಿದ್ದೇ ಇರುತ್ತದೆ; ಆದರೆ ವ್ಯಂಗ್ಯಾರ್ಥವಿರುವ ಕಡೆಗಳಲ್ಲೆಲಾ
ಕಬ್ಬು ರ ತೆ ಬಸ ಸತ್ತ NENT SE ಭನ ಗ್ ದದ
ಕವ ಉರಜೇ ಗ ಲಕಾ ತಿಗ ಅವಕಾಶವೇ ಇ ವ ಶಬದು
ಅಭಿಧಾವ್ಯಾಪಾರದಿಂದ ಹೊರಡುವ ವಾಚ್ಯಾರ್ಥವು ಸಂಗತವಾಗಿರುವ ಕಡೆ
FY ge i ಹೆ fs ಸನ ೧4
ಗಳೆಲ್ಲೂ ವ್ಯಂಗ್ಯಾರ್ಥವು ಸ್ಫುರಿಸಬಲ್ಲುದು. ಇದಕ್ಕೆ ಒಂದೆರಡು ಉದಾ
ಹರಣಿಗಳನ್ನು ನೋಡೋಣ. ದೂರದೇಶಕ್ಕೆ ಪ್ರಯಾಣ ಹೊರಟಿರುವ
ತನ್ನ ಕಾಂತನಿಗೆ ಪ್ರಿಯೆ ಹೇಳುವ ಮಾತು ಇದು:
18 ಲಕ್ಮಣಾವೃತ್ತಿಯ ಮೂಲಕ ಪ್ರಯೋಜನವು ಗೋಚರವಾಗುವ ಕಡೆಗಳಲ್ಲಿ ಆರ್ಧ
ವಿಭಜನೆ ಮಾಡುವಾಗ ವಾಚ್ಯಾರ್ಥ, ಲಕ್ಷ್ಯರ್ಥ, ವ್ಯಂಗ್ಯಾರ್ಥ--ಈ ಮೂರನ್ನೂ ಸರಿ
ಯಾಗಿ ಬಿಡಿಸಬೇಕು. ಅದರಲ್ಲೂ ಲಕ್ಷಾರ್ಥ ವ್ಯಂಗ್ಯಾರ್ಥಗಳಿಗೆ ಒಮ್ಮೊಮ್ಮೆ ವ್ಯತ್ಯಾಸ
ಬೇಗ ಸ್ತುಟವಾಗುವುದ್ದಿ. ಎಷ್ಟೋ ಕಡೆ ಅರ್ಥದ ಅತಿಶಯವೇ ವೃಂಗ್ಯವಾಗಿರುತ್ತದೆ.
“ಐದನ್ನು ಗಮನದಲ್ಲಟ್ಟುಕೊಳ್ಳಬೇಕು.
೧೫. ಶಬ್ಧ..-ಅರ್ಥ ೨೩೯
ಬಟ ತೆರಳು, ತೆರಳುವೊಡಿನಿಯ ; ಪಥದಲಿ
ನಿನಗೆ ಮಂಗಳಪೊದಗಲ.
ಎಲ್ಲಗೈದುವೆ ನೀನ್ನು ನನಗೂ
ಆಲ್ಲೆ ಜನ್ಮವು ಲಭಿಸಲ. '' ೪ |
ಇದರ ವಾಚ್ಯಾರ್ಥ ಸ್ಪಷ್ಟವಾಗಿದೆ. ತನ್ನ ಇನಿಯನಿಗೆ ಪ್ರಯಾಣ
ಮಾಡಲು ಅನುಜ್ಞೆ ಯನ್ನು ಈಕೆ ಸ್ಫುಟವಾದ ಮಾತಿನಲ್ಲೇ ತಿಳಿಸುತ್ತಾಳೆ ;
ದಾರಿಯಲ್ಲಿ ಅವನಿಗೆ ಮಂಗಳವುಂಟಾಗಲೆಂದು ಹಾರೈಸುತ್ತಾಳೆ. ಆದರೆ
ಅಪ್ಪಕ್ಕೇ ನಿಲ್ಲದೆ, ಅವನು ಹೋಗಿ ಸೇರುವ ಸ್ಥಳದಲ್ಲಿ ತನಗೂ ಜನ್ಮ
ವುಂಟಾಗಲೆಂದು ಕೋರುವುದನ್ನು ನೋಡಿದರೆ, ಪ್ರಿಯನ ವಿಯೋಗವಾದ
ಮೇಲೆ ತನ್ನ ಜೀವ ನಿಲ್ಲುವುದು ಅಸಾಧ್ಯವೆಂದು ತೋರ್ಪಡಿಸಿ ತನಗೆ
ಅವನಲ್ಬರುವ ಪ ಕ್ರೇಮಾತಿಶಯವನ್ನೂ, ನಾನು ಬದುಕಿರಬೇಕಾದರೆ ನೀನು
ಹೊರಡಬೇೇಡ ಎಂಬ ನಿಷ್ನೇಧವನ್ನೂ ಸೂಚಿಸುತ್ತಿದ್ದಾಳೆಂದು ಗೊತ್ತಾಗು
ತ್ತದೆ. ಹೀಗೆ ಈ ವಾಕ್ಯದಲ್ಲಿ "" ಹೋಗು'' ಎಂಬುದು ವಾಚ್ಯಾರ್ಥ
ವಾದರೆ "" ಹೋಗಬೇಡ ಸ ಎ೦ಬುದು ವ್ಯಂಗ್ಯಾರ್ಥವಾಗುತ್ತದೆ. ಈ
ಎರಡು ಅರ್ಧಗಳಿಗೂ ಪೂರ್ಣವಿರೋದವಿರುವುದರಿಂದ ಇದು ವಿಫರೀತ
ಲಕ್ಷಣಿಯ ಉದಂಹರಣಿಯಲ್ಲವೇ ಎಂದು ತ೦ಕಿಸಬಾರದು. ಲಕ್ಷಣಾ
ವೃತ್ತಿಯ ಯಲ್ಲಿ ವಾಚ್ಯಾ ರ್ಧ ಹೊಂದುವುದೇ ಇಲ್ಲ. ನೀರಸನಾದವನನ್ನು
ಚ ರಾ ಎಂದು ಕರೆದಾಗ, ಆ ಶಬ್ದದ ವಾಚ್ಯಾರ್ಥವು
ಪ್ರಾರಂಭದಲ್ಲೇ ಅನಂಗತವಾಗುತ್ತದೆ, ಅದಕಾರಣವೇ ಲಕ್ಷ್ಮಣ ನನ್ನು
ಆಶ್ರಯಿಸಿ *" ನೀರನಲ ಆಗ್ರೇಸರ'' ಎಂದು ಅರ್ದಮಾಡಿಕೊಳ ಬೇಕಾ
ಹೆ ದೆ. ಇಲ್ಲಯ ಉದಾಹರಣಿಯಲ್ಲಿ ಹಾಗಲ್ಲ. ತಿಪ್ರಾಣಿಯಾದ
ಹೆಂಗಸು ತೆನಗೆ ಎಷ್ಟು ಕಪ್ಪವಾದರೂ ತ ಪ್ರಿಯನ ಕಾರ್ಯಕ್ಕೆ
ಹು ಎಂದು ಅವನ ಪ ರೈಯಾಣಕ್ಕೆ ಅನುಮತಿ ಕೊಡು Fl
19 ಗಚ್ಛ ಗಚ್ಛೆಸಿ ಸಿ ಚೇತ್ ಕಾಂತ ಪಂಥಾನಃ ಸಂತು ತೇ ಪಿಮಾಃ!
ಮಮಾಪಿ ಜನ್ಯ ತತ್ರೊವ ಭೂಯಾದ್ಯತ್ರ ಗತೋ ಭರ್ವಾ॥
(ಕಾವ್ಯಾದರ್ಶ, ||, ೧೪೧)
ಇದನ್ನು ದಂಡಿ ಆಶ್ಮೀರ್ವಚನುಕ್ಷೇಪಾಲಂಕಾರಕ್ಕೆ ಉದಾಹರಣಿಯಾಗಿ ಕೊಟ್ಟು
ಇತ್ಯಾಶೀರ್ವಚನಾಕ್ಷೇಪೋ ಯದಾಶೀರ್ವಚನಾತ್ಮನಾ।
ಸ್ವಾವಸ್ಮಾಂ ಸೂಚಯಂತ್ಕೊವ ಕಾಂತಯಾತ್ರಾ ನಿಪಿಧ್ಯತೇ!
ಎಂದು ವಿವರಿಸುತ್ತಾನೆ.
೨೪೦ ಭಾರತೀಯ ಕಾವ್ಯಮಾಮಾಂಸೆ
ಅಸಂಗತ ವಲ್ಲ, ಅಸಂಭವವಲ್ಲ. ಆದಕಾರಣ ಇಲ್ಲ ವಾಚ್ಯಾರ್ಥ ಮೊದಲು
ಸಿದ್ಧ ಸುತ್ತ ದೆ. ಆದರೆ ಇವರಿಬ್ಬರ ಪ್ರೇಮಾತಿತಯ AP ಉಕ್ತಿ
ಯಂದಕೇ ಗೊತ್ತಾ ಶ್ಯ ಪ್ರ ಯಾಣವನ್ನು ನಿಷೇಧಿಸುವುದೇ ಇಲ್ಲಿಯ
ಆತೆಯವೆಂದು ವ ) ವ್ಯಂಜನಾವ್ಯಾ; ಪಾರದ ಮೂಲಕ ಸ್ಭು ರಿಸುತ್ತ ದೆ. ಅವಳ
ಪ್ರಿ ಯುನಂತೂ ಅದನ್ನು ಮನಗಾಣುವುದು ಬಂಡಿತ.
"ಸ್ಯ ಸ್ವಪ್ನವಾಸವದತ್ತ ' ನಾಟಕದ ಮೂರನೆಯ ಅಂಕದಿಂದ ಒಂದು
ಉದಾಹರಣಿ. ವತ್ಸರಾಜನಿಗೆ ಪದ್ಮಾವತಿಯನ್ನು ಕೊಟ್ಟು ಮದುವೆ
ಮಾಡಲು ಏರ್ಪಾಡಾಗಿ ಮುಹೂರ್ತ ಒದಗಿಬಂದಿದೆ. ಆವಂತಿಕೆಯ
ವೇಷದಲ್ಲಿ ಪದ್ಮಾವತಿಯ ಆಶ್ರಿತಳಂಗಿರುವ ವಾಸವದತ್ತೆಯ ಕೈ ಹಲ್ಲೇ
ವರಣಮಾರ್ಲಿಯನ್ನು ಕಟ್ಟಿಸಿಕೊಂಡು ಹೋಗಲು ಚೇಟಿ ಬಂದಿದ್ದಾಳೆ.
ಆಗ ವಾಸವದತ್ತೆಗೂ ಚೇಚಿಗೂ ಮಾತು ಪೀಗೆ ನಡೆಯುತ್ತದೆ:
ವಾಸವದತ್ತೆ “ಅಳಿಯ ಹೇಗಿದ್ದಾನೆ ?
ಚೇಟಿ-ಆರ್ಯೆ, ಹೇಳದೇಕೆ ; ೨೦ಥವನನ್ನು ಎದುವರೆಗೂ ನೋಡಿಯೇ ಇಲ್ಲ,
ವಾಸವದತ್ತೆ..ಸಖಿ, ಹೇಳು ಹೇಳು, ನೋಡು ವುದಕ್ಕೆ ಚೆನ್ನಾಗಿದ್ದಾ ನೆಯೆ |
ಚೇಟಿ_ಬಿಲ್ಲುಬಾಣಗಳಿಲ್ಲದ ಕಾಮದೇವನೆ೨ದೇ ಹೇಳಬಹುದು.
ವಾಸವದತ್ತೆ ಇಷ್ಟೇ ಸಾಕು, ಬಿಡು.
ಚೇಟಿ_ಅದೇಕೆ, ಸಾಕು ಎಂದ. ತಡೆಯುವೆ ?
ವಾಸವದತ್ತೆ._ಪರಪುರ.ಷರ ವರ್ಣನೆಯನ್ನು ಕೇಳುವುದು ಯುಕ್ತವಲ್ಲ
ಇಲ್ಲಿ ವಾಸವದಕ್ತೆಯ ಕೊನೆಯ ಮಾತನ್ನು ಗಮನಿಸಿ. ತಾನು ಒಬ್ಬ
ಬ್ರಾಹ್ಮಣನ ತಗಿಯೆಂದು ಹೇಳಿಕೊಂಡು ಇವರ ಮನೆಯಲ್ಲ ಅವಳಿದ್ದಾಳೆ ;
ಅದನ್ನೇ ಸರ್ವರೂ ನಂಜದ್ದಾರೆ. ಆದಕಾರಣ ವತಶ್ಚರಾಜನು ಇವಳಿಗೆ
ಪರಪುರುಷ ; ಚೇಟಿ ಇಷ್ಟೇ ಅರ್ಥವನ್ನು ಗ್ರಪಿಸುತ್ತಾಳೆ. ವಾಸವದತ್ತೆ
ಗಾದರೆ, ತನ್ನ ಪತಿಯನ್ನು ಇವರೆಲ್ಲರೂ ಮೆಚ್ಚಿದರೇ ಹೇಗೆ ಎಂಬುದನ್ನು
ತಿಳಿಯುವ ಅಪೇಕ್ಷೆಯುಂಟಾಯಿತು ; ಅದು ತಿಳಿಯಿತು. ಅವನ ಸೌಂದರ್ಯದ
ವರ್ಣನೆ.ಖನ್ನು ದೇರೆಯವರಿಂದ ಕೇಳಿ ಅರಿಯಬೇಕಾದ ಆವಶ್ಯಕತೆ ಇಲ್ಲ.
(ಅಲ್ಲದೆ, ಹೆಚ್ಚಿ ನೆ ಕುತೂಹಲವನ್ನು ತಾನು ತೋರಿಸಿದರೆ ತನ್ನ ವಿಷಯ
ದಲ್ಲಿ ಸಂದೇಹ 'ಕುಟ್ಟೀತು, ತನ್ನ ಗುಟ್ಟು ಬಯಲಾದಿ;ತು ಎಂಬ SER
ಇದ್ದಿರಬಹುದು.) ಆದಕಾರಣ ಸಮಂಜಸವಾದ ಈ ನಿಮಿತ್ತವನ್ನು ಹೇಳಿ
ಚೇಟಿಯ ಮಾತನ್ನು ನಿಛ್ಛಸಲೆಂದ್ಲೇ ಅವಳು ಈ ಮಾತನ್ನು ಆಡಿದ್ದಾಳು.
೧೩, ಶಬ್ಧ. ಅರ್ಥ ೨೪೧
ಪೀಗೆ ವಾಕ್ಯದ ಅರ್ಥ ಮುಗಿದಂತಿರುವಾಗ, ಬೇರೊಂದು ಅರ್ಥ ಇಲ್ಲ
ಸ್ಫುರಿಸುತ್ತದೆ. ವತ್ಸರಾಜನ ಹಿತಕ್ಕಾಗಿಯೇ, ತಾನು ಬೆಂಕಿಯಲ್ಲ ಸುಟ್ಟು
ಹೋದಳೆಂಬ ಭಾವನೆಯನ್ನು ಅವನಲ್ಲಿ ಉಂಟುಮಾಡಿ, ವಾಸವದತ್ತೆ ಅಗಲಿ
ಬಂದಿದ್ದರೂ, ಇದುವರೆಗೂ ಅವನು ತನ್ನವನೇ ಆಗಿದ್ದನು. ಈಗ
ಬೇರೊಬ್ಬಳನ್ನು ಮದುವೆಯಾಗಲು ಒಪ್ಪಿಕೊಂಡು, ತನ್ನ ಗಂಡನೇ ತನಗೆ
ಪರಕೀಯನಾಗಿ ಪರಿಣಮಿಸಿದ್ದಾನೆ. ಇದಕ್ಕಿಂತ ಕಷ್ಟದ ಸಂಗತಿ ಇನ್ನೊಂ
ದುಂಟೆ ? ಹೀಗೆ "" ಪರಪುರುಷ'' ಎಂಬ ಶಬ್ಧವು ಸನ್ನಿ ವೇಶಬಲದಿಂದ
ವ್ಯಂಜನಾವ್ಯಾಪಾರದ ಮೂಲಕ ಹೆಚ್ಚಿನದೊಂದು ಅರ್ಥವನ್ನು ಕೊಟ್ಟು
ಆತಿಶಯವಿಪಾದಕ್ಕೂ ದಾರಿಮಾಡುತ್ತದೆ. " ಆರೃಪುತ್ರೊ್ಯ್ಠಪಿ ಪಠ
ಕೀಯಃ ಸಂವೃತ್ತಃ'' ("" ಆರ್ಯಪುತ್ರನೂ ಪರಕೀಯನಾಗಿಬಿಟ್ರನು pe)
ಎಂಬುದು ಈ ಅಂಕದಲ್ಲೇ ಇನ್ನೆರಡು ಕಡೆಗಳಲ್ಲಿ ವಾಸವದತ್ತೆಯ
ವಿಷಾದಗೀತೆಯ ಪಲ್ಲವಿಯಂತೆ ಬರುತ್ತದೆ, ಆದರೆ ಅಲ್ಲ ವಾಚ್ಯವಾಗಿರುವ
ಅರ್ಧ ಇಲ್ಲಿ ವ್ಯಂಗ್ಯವಾಗಿ ಹೊಳೆದು ಸ್ವಾರಸ್ಯವನ್ನು ಹೆಚ್ಚಿ ಸಿಕೊ೦ಡಿದೆ.
ಹೀಗೆ ಕೆಲವು ಕಡೆಗಳಲ್ಲಿ ಲಕ್ಷ ರ್ಥವೊ, ಕೆಲವು ಕಡೆಗಳಲ್ಲಿ ವಾಚ್ಯಾ
ರ್ಥವೂ ತಿಳಿದ ಬಳಿಕ ವ್ಯಂಗ ರ್ಥೇವು ಹೊಳೆಯುತ್ತ ದಷ್ಟೆ. ಇಲ್ಲೆಲ್ಲಾ
ವ್ಯಂಜನಾವೃತ್ತಿ ಒಂದೇ ಸಲ ಪ ಶ್ರವರ್ತಿ ಸಿ ಅಷ್ಟಕ್ಕೇ ನಿಲ್ಲದೇಕೆಂಬುದೇನಿ
ಇಲ್ಲ. ಒಂದು ವ್ಯಂಗ್ಗಾ ರವ, ಮತ್ತೊಂದು ವ್ಯ ೦ಗ್ಯಾ ರ್ಥ ಕ್ಕೆ ದಾರಿಮಾಡಿ
ಕೊಡಬಹುದು ; ಎದು ಮತ್ತೊ ೦ದಕ್ಕೆ ; ಹೀಗೆಯೇ. ಸನ್ನಿ ಪೇಶಾದಿಗಳ
ಮಪಿಮೆಯಿಂದ, ಸಹ್ಯ ದೆಯನ ಪ್ರತಿಭೆಗೆ ಅನುಗುಣವಾಗಿ ವ್ಯಂಗ್ಯಪರಂ
ಪರೆಯೇ ಪ್ರತೀತವಾಗಬಸುದು. ಸ ಸ್ಪಷ್ಟವಾಗಿ ತಿಳಿಯುವ ಒಂದು
ಉದಾಹರಣಿಯನ್ನು ನೋಡೋಣ : ಮಳೆ ಕಾಲುತೆಗೆದು, ಭೀಕರವಾದ
ಬರಗಾಲವೊದಗಿದಾಗ ನಡೆಎರಬಹ:ದಾಗ ಒಂದು ಘಟನೆಯನ್ನು ಹಳ್ಳಿಯ
ಅಜ್ಜಾ ತಕವಿಯೊಬ್ಬನು ಪೀಗೆ ನಿರೂಪಿಸುತ್ತಾನೆ:
ರ್ಟ ಒಕೆ ಲಗ್ನೇರ್ಯಾಗ, ಮಠೆರಾಜ_ಅವರು
ಮಕ್ಕಳ ಜಾನಿ ರು ಮಳೆರಾಜ ;
ಮಕ್ಕಳ ಮಾರಿ ರೊಕ್ಕ ತಕ್ಕೊಂಡು
ಭತ್ತ್ವ೦ತ ತಿರುಗ್ಯಾರು, ಮಳೆರಾಜ |
ಹೊಟ್ಟೆಯಲ್ಲ ಹುಟ್ಟಿದ ಮಕ್ಕಳನ್ನು ಮಾರಬೇಕಾದರೆ, ಜೀವನ ಎಷ್ಟು
ಕಪ್ಪವಾಗಿರಬೇಕು ಎಂದು ಹೊಳೆಯುತ್ತದೆ. "ಬತ್ತ ಅಂತ ತಿರು
K.M. 16
೨೪೨ ಭಾರತೀಯ ಕಾವ್ಯಮಾಮಾಂಸೆ
ಗ್ಯಾರು'' ಎಂಬ ಮಾತಿನಿಂದ, ಹೊಟ್ಟೆಗೆ ತಿನ್ನಲು ಬೇಕಾದ ಬತ್ತ
ವನ್ನು ಹುಡುಕಿಕೊಂಡು ಅಲೆದಲೆದರೂ ಅದು ಎಲ್ಲಿಯೂ ದೊರೆಯಲಿಲ್ಲ ;
ಬೆಳೆ ಭಸ್ಮವಾಗಿತ್ತು ಎಂದು ವ್ಯಂಗ್ಯವಾಗುತ್ತದೆ. ದೊರೆಯದ ಈ ಭತ್ತ
ವನ್ನು ಕೊಳ್ಳಲು ಅವರು ರೊಕ್ಕವನ್ನು ಗಳಿಸಿದ್ದು ಮಕ್ಕಳನ್ನು ಮಾರಿ.
ಮಕ್ಕಳಿಗಿಂತ ಭತ್ತ ಪ್ರಿಯವಾಯಿತು | ಪ್ರಕೃತಿ ಮುನಿಸುಗೊಂಡದ್ದರಿಂದ
ಜನರ ಸ್ಥಿತಿ ಎಲ್ಲಿಗೆ ಇಳಿಯಿತು --ಹೀಗೆ ವ್ಯಂಗ್ಯಪರಂಪರೆ ತರಂಗಮಾಲೆ
ಯಂತೆ ಹೊರಡುತ್ತದೆ. ಈ ವಿಲಕ್ಷಣಪರಿಸ್ಥಿ ತಿಯಿಂದ ಉದಿಸುವ ವಿಸ್ಮಯ
ಮಿಶ್ರವಾದ ವ್ಯಥೆಯಲ್ಲಿ ಮನಸ್ಸು ಮುಳುಗಿದಲ್ಲದೆ ಆರ್ಥಪ್ರತೀತಿ
ನಿಲ್ಲುವುದಿಲ್ಲ.
ಪೀಗೆ, ಅಭಿಧಾವೃತ್ತಿ, ಲಕ್ಷಣಾನೃತ್ತಿ, ವ್ಯ೦ಜನಾವೃತ್ತಿ ಎಂದು
ಖೂರು ಶಬ್ದವ್ಯಾಪಾರಗಳುಂಟು, ಇವುಗಳಿಂದ ಹೊರಡುವೆ ಅರ್ಥಗಳಿಗೆ
ಕ 5 ಮವಾಗಿ ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥ ಏಂದು ಹೆಸರು.
ಇವುಗಳಲ್ಲಿ ವಾಚ್ಯಾರ್ಥವು ಸಂಕೇತದ ಮೂಲಕ ಶಬ್ದದಿಂದ ನೇರವಾಗಿ
ಹೊರಡುತ್ತದೆ ; ಇದನ್ನು ತಿಳಿಸುವ ತಬ್ಬಕ್ಕೆ "ವಾಚಕ '' ಎಂದು ಸಂಜ್ಞೆ.
ವಾಚ್ಯಾರ್ಥಕ್ಕೆ ಬಾಥೆ ತಟ್ಟಿದಾಗ ಮಾತ್ರ ಲಕ್ಷಣಇವೃತ್ತಿಗೆ ಪ್ರವೃತ್ತಿ
ಯುಂಟಾಗಿ ಲಕ್ಷ್ಯರ್ಧವು ಗೋಚರವಾಗುತ್ತದೆ; ಇದನ್ನು ತಿಳಿಸುವ
ಶಬ್ಧಕ್ಕೆ "" ಲಾಕ್ಷಣಿಕ '' ಅಧವಾ "" ಲಕ್ಷಕ'” ಎಂದು ಹೆಸರು. ಇನ್ನು ಉಳಿ
ದದ್ದು ವ್ಯಂಗ್ಯಾರ್ಥ. ಇದನ್ನು ಕೆಲವು ವೇಳೆ ಮುಖ್ಯವಾಗಿ ಶಬ್ದವೂ
ಕೆಲವು ವೇಳೆ ಮುಖ್ಯವಾಗಿ ಅರ್ಥವೂ ಸೂಚಿಸುತ್ತವೆ. ಹೀಗೆ ವ್ಯಂಜನಾ
ವ್ಯಾಪಾರವನ್ನುಳ್ಳದ್ದ ಕೈಲ್ಸ--ಅದು ಶಬ್ದವಾಗಲಿ ಅರ್ಥವಾಗಲಿ-""ವ್ಯಂಜಕ 3)
ವೆಂದು ಹೆಸರು, ವಾಚ್ಯಾರ್ಥಾದಿಗಳಿಂದ ವ್ಯಂಗ್ಯವು ಸೂಚಿತವಾಗುವು
ದಿರಲಿ. ಒಂದು ವ್ಯಂಗ್ಯಾರ್ಥವೇ ಮತ್ತೊಂದಕ್ಕೆ ವ್ಯಂಜಕವಾಗುವುದು
ಅಸೆಂಭವವಲ್ಲವೆಂಮ ಮೇಲೆ ನೋಡಿದೆವು. ಕಾವ್ಯದಲ್ಲ೦ತೂ ಇದು
ಸರ್ವಸಾಮಾನ್ಯ.
ಕವಿಯ (ಅಥವಾ ವಕ್ತ ಲಿನೆ ಮಾತಿನಲ್ಲಿ ವಾಚ್ಯವಾಗದೆ ಸೂಚ್ಯ
ವಾಗಿ ಅರಿವಿಗೆ ನಿಲುಕುವುದೇ ವ್ಯಂಗ್ಯಾರ್ಥ ವಪ್ಕೆ. ಇಂಥ ಕಡೆಯಲ್ಲಿ ಈ
ವ್ಯಂಗ್ಯವುಂಟೆಂದು ಅರಿಯುವುದು ಹೇಗೆ ಎಂಬ ಪ ಶ್ನೆ ಹುಟ್ಟುವುದು ಸಹಜ,
ಇದನ್ನು ತಿಳಿಯಲು ಸಹೃದಯತೆ ಬೇಕು, ಪ್ರತಿಭೆ ಬೇಕು. ಹೀಗೆಂದರೆ,
೧೫. ಶಬ್ದ ಅರ್ಥ ೨೪೩
ವ್ಯಂಗ್ಯಾರ್ಥವು ಅತ್ಯಂತ ಅನಿಯತವೆಂದೂ, ಒಂದು ಮಾತಿಗೆ ಯಾರು
ಬೇಕಾದರೂ ತಮ್ಮ ತಮ್ಮ ಚಾತುರ್ಯಕ್ಕೆ ತಕ್ಕಂತೆ ಊಹೆಯನ್ನು ವಿಶ್ವಂಖಲ
ವಾಗಿ ಹರಿಯಬಿಟ್ಟು ಅರ್ಥಕಲ್ಪನೆ ಮಾಡಬಹುದೆಂದೂ ತಾತ್ಸರ್ಯವಲ್ಲ.
ಇಲ್ಲಿ ಹೊಸ ಅರ್ಥ ವೇನನ್ನೂ ವಾಚಕನು ಹುಟ್ಟುಗಟ್ಟ ಬೇಕಾಗಿಲ್ಲ; ಕವಿಯ
ಮಾತಿನ ತೆರೆಯ ಹಿಂದೆ ಸ್ಫುರಿಸುತ್ತಿರುವುದನ್ನು ಕಣ್ಣಿಟ್ಟು ನೋಡಿದರೆ
ಸಾಕು. ಒಂದು ಕಡೆ ವ ೈಂಗ್ಯವುಂಟೆಂದು ಬೆರಳುನೀಡಿ ತ್ಲೋರಿಸುವುದಕ್ಕೂ
ಅದರ ಸ್ವರೂಪವನ್ನು ಕೂಡಿದ ಮಟ್ಟಿಗೂ ನಿಯಮನ ಮಾಡುವುದಕ್ಕೂ
ಕೆಲವು ಸೂಚಕೆಗಳುಂಟು. ಮಾತನ್ನು ಆಡುವವರು ಯಾರು? ಕೇಳು
ವವರು ಯಾರು ? ಆಡುವಾಗ ಹತ್ತಿರ ಯಾರಾದರೂ ಇದ್ದರೆ? ಮಾತು
ಹೊರಟ ಸಂದರ್ಭಪೇನು? ಎಲ್ಲ ಹೇಳಿದ್ದು? ಯಾವಾಗ ಹೇಳಿದ್ದು ?
ಹೇಳಿದ ರೀತಿ ಎಂಥದು ? ಉಪಯೋಗಿಸಿದ ಶಬ್ದಗಳಲ್ಲಿ ವಿಶೇಷವೇನಾ
ದರೂ ಉಂಟೆ'---ಈ ಹೊದಲಾದ ಅನೇಕ ಅಂಶಗಳನ್ನು ಗಣನೆಗೆ ತಂದು
ಕೊಂಡು ಅವುಗಳ ಸಹಾಯದಿಂದ ವ್ಯಂಗ್ಯಾರ್ಥವನ್ನು ಆರಿತುಕೊಳ್ಳನೇಕು.
(ಲೋಕವ್ಯವಹಾರದಲ್ಲಿ ಕೂಡ ಒಬ್ಬರ ಇಂಗಿತವನ್ನು ಆರಿತುಕೊಳ್ಳುವುದು
ಹೀಗೆಯೇ ತಾನೆ.) ಒಂದೊಂದು ಕಡೆ ಒಂದೊಂದಕ್ಕೆ ವಿಶೇಷತ್ವ್ಯ ಬರು
ತ್ತದೆ. ಒಮ್ಮೊಮ್ಮೆ ನಾಲ್ಕಾರು ಅಂಶಗಳು ಒಟ್ಟಿಗೇ ಪ್ರಯೋಜಕವಾಗು
ವುದೂ ಉಂಟು.?
ಅಂತೂ ಇವನ್ನೆಲ್ಲಾ ಗಮನಿಸಿ, ಇವು ಹದಗೊಳಿಸಿದ ದಾರಿಯಲ್ಲಿ
ಮುಂದುವರಿದ ಭಾವಕನ ಪ ರೃತಿಬೆಗೆ ಕವಿಹೃ ದ್ಗ್ಗ ತವಾದ ವ್ಯ ೦ಗ್ಯಾ ರ್ಥ
ಮಿಂಚಿನಂತೆ ಗೋಚರಿಸುತ್ತ ಡೆ, ಸವಿತುಂಬಿದ "ಹೆಣ್ಣ ನಂತೆ ಅನ್ಯಾದ್ಯ
ವಾಗುತ್ತದೆ.
20 ವಕ್ತ ಬೋದ ವ್ಯಕಾಕೂನಾಂ ವಾಕ್ಯವಾಚ್ಛಾನ್ಯಸನ್ನಿಧೇಃ।
ಪ್ರಸ್ತಾವಡೇಶಕಾಲಾದೇರ್ವೈಶಿಷ್ಟ್ವಾತ* ಪ್ರತಿಭಾಜುಪಣಂ |
ಯೋ್ಯರ್ಥಸ್ಕಾನ್ಯಾರ್ಥಧೀಹೇತುರ್ವ್ಯಾಪಣರೋ ವ್ಯಕ್ತಿರೇವ ಸಾ!
(ಕಾವೃಪ್ರಕಾಶ, ;;;. ೧-೨)
16
೧೬. ಧೈನಿಪ್ರಭೇದಗಳು
ಒಂದು ಅರ್ಥವು ವ್ಯಂಗ್ಯವಾಗಿ ಹೊಳೆದ ಮಾತ್ರಕ್ಕೇ ನಮ್ಮ ಮನ
ಸ್ಸನ್ನು ಸೆಳೆದು ತನ್ನಲ್ಲೇ ಹಿಡಿದುನಿಲ್ಲಿಸಿಕೊಳ್ಳುವುದೆಂಬ ನಿಶ್ಚಯಮೇನೂ
ಇಲ್ಲ. ಕೆಲವುವೇಳೆ ಅದನ್ನು ಅರಿತ ಮೇಲೂ ಮನಸ್ಸು ಅಲ್ಲಿಯೇ ನಿಲ್ಲದೆ
ವಾಚ್ಯಾರ್ಥಾದಿಗಳ ! ಕಡೆಗೆ ಪಿಂದಿರುಗುವುದೂ ಉಂಟು. ಪೀಗೆ ವ್ಯಂಗ್ಳಾ
ರ್ಥವು ಪ ಪ್ರಧಾನ, ಅಪ್ರಧಾನ ಎಂದು ಸ್ಕೂಲವಾಗಿ ಎರಡು ರಾ
ತ್ರಪ. ೩೦೦ನ ಅಧ್ಯಾ ಧ್ಯಾಯದಲ್ಲಿ ಕೊಟ್ಟ “ಉದಾಹರಣೆಗಳಲ್ಲಿ ವ್ಯಂಗ್ಯಾ
ರ್ಧವು ಪ ್ರ ಧೂನವಾಗಿಯೇ ಇತ್ತು. ಈ ಅಪ್ರ ಧಾನವಾದದ್ದ ಕ್ಕ ಟಾ
ಉದಾಹರಣಿಯನ್ನು ನೋಡೋಣ :
"ಪ೦ಚರಾತ್ರ'ದಲ್ಲಿ, ಗೋಗ್ರಹಣಸಮಯದಲ್ಲ ಉತ್ತರನೂ ಬೃಹನ್ನ
ಳೆಯೂ ಹೋಗಿ ಕೌರವರ ಮೇಲೆ ನಡಸಿದ ಯುದ್ಧವನ್ನು ಭಟನು
ವರ್ಣಿಸುತ್ತಾ,
« ಕೃತಾ ನೀಲಾ ನಾಗಾಃ ಶರಶತನಿಸಾತೇವ ಕಪಿಲಾಃ .
( ಕರಿದೆನಿಸಿರ್ದ ದಂತಿಘಟಿ ಪಿಂಗಳವಾದುದು ಬಾಣಪಾತದಿಂ . . .?')2
ಎಂದು ಮೊದಲಾಗಿ ಹೇಳುತ್ತಾನೆ. ಈ ವಾಕ್ಯವನ್ನು ಕೇಳುತ್ತಲೇ,
«ಆನೆಗಳ ಮೊದಲಿನ ಬಣ್ಣ ಮುಚ್ಚಿಹೋಗುವಪ್ಪುಮಟ್ಟಿಗೆ ಅವುಗಳ
ಮೈಮೇಲೆಲ್ಲಾ ರಕ್ತ ಚಿಮ್ಮಿತು'' ಎಂಬುದು ವ್ಯಂಗ್ಯವಾಗಿ ಪ್ರತ್ಲೀತವಾಗು
ತ್ತದೆ. ಆದರೆ ನಿಜವಾಗಿ ಇಲ್ಲ ಈ ಅರ್ಧಕ್ಕೆ ಪ್ರಾಧಾನ್ಯವಿಲ್ಲ. ಕಪ್ಪ
ಗಿರುವ ಆನೆಗಳ ದೇಹ ಪಿಂಗಳವಾಯಿತು ಎಂಬ ವಾಚ್ಯಾರ್ಥದಲ್ಲೇ
ಚಮತ್ಕಾರ ಹೆಚ್ಚು. ಈ ವರ್ಣಪರಿವರ್ತನೆ ಆದದ್ದು ಹೇಗೆ?
ಅತಿಶಯವಾಗಿ ರಕ್ತ ಉಕ್ಕಿ ಹರಿಯಿತು; ಅದರಿಂದ ದೇಹದ ಕಪ್ಪೆಲ್ಲವೂ
ಕೆಂಪಾಯಿತು : ಈ ಬಗೆಯಾಗಿ ಇಲ್ಲ ಅರ್ಥಗ್ರಹಣ ನಡೆಯುತ್ತದೆ.
1 111 ಇಲ್ಲಿಂದ | ಮುಂದೆ ಅವಶ್ಯವಿದ್ಧಾಗ ಮಾತ್ರ ಲಕ್ಷಾರ್ಥವನ್ನು ಪ್ರತೇಕವಾಗಿ ಸ್ಮರಿಸು
(ವೆ; ಸಾಮಾನ್ಯವಾಗಿ ವಾಚ್ಯಾರ್ಥ ಎಂಬ ಶಬ್ಧ ಪು ಲಕ್ಷ್ಯಾರ್ಥವನ್ನೂ ಒಳಕೊಳ್ಳು
ದೆ.- ಸಂದರ್ಭವನ್ನು ನೋಡಿಕೊಂಡು ವ್ಯಾಪ್ತಿಯನ್ನು ಅರಿತುಕೊಳ್ಳಬೇಕು.
2 ಪಂಚರಾತ್ರ, i. ೨೨. ಕನ್ನಡದ ಅನುವಾದ ದೇವಕಿಬಾಮಣಿ ಅಳಸಿಂಗರಾ
ಚಾರ್ಯರದು.
$
pe @
೨೪೪
೧೬. ಧೃನಿಪ್ರಭೇದಗಳು ೨೪೫
ಎಂದರೆ, ವ್ಯಂಗ್ರ್ಯಾರ್ಥವೊಂದು ಹೊಳೆದರೂ ಪ್ರತೀತಿ ಅಲ್ಲಯೇ ನಿಲ್ಲದೆ
ಮತ್ತೆ ತ್ತೆ ವಾಚ್ಚಾ ್ಯರ್ಥಕ್ಕೇ ಮರಳುತ್ತ ಡೆ; ಇ ಇಲ್ಲಿ ಈ ವ್ಯಂಗ್ಯಾರ್ಥದ ಕ ಕಾದ
ಕ
ಹೆಚ್ಚುವುದು. "ಗೆ ಪುಷ್ಟಿ ನ ವಾಚ್ಯಾ ಈ "ದ ಚಮತ್ಕಾತ್ ರವನ್ನು
ನಾವು ಕ್ಷಣಕಾಲ ಪರಿಭಾವಿಸಿ, ಬಳಿಕ ಆ ಇ ಜತ್ತ
ಕೈಚಳಕವೂ ಯುದ್ಧದ ಭೀಷಣತೆಯೂ ವ್ಯಕ್ತವಾಗುವುದನ್ನು ಗಮನಿಸ
ಬಹುದು. ಆದರೆ ಅದೆಲ್ಲ ಮುಂದಿನಮಾತು. “ ಮೈ ಮುಚ್ಚಿ 3ಿಹೋಗು
ವಪ್ಟರಮಟ್ಟಿಗೆ ರಕ್ತ ಚಿಮ್ಮಿತು'' ಎಂಬ ವ್ಯಂಗ್ಯಾರ್ಥವಪ್ಪನ್ನೇ ತೆಗೆದು
ಕೊಂಡ, ಅದಕ್ಕೆ ಧಾನ ಎಲ್ಲದಿರುವುದು, ಎಂದ್” ಅದು ಗೌಣ
(ಅಥವಾ ಗುಣ್ನಥೂತ)ಪಾಗಿರುವುದು, ನಿಜ ಈ ದೃಪ್ಟಿಯಿಂದ ಈ
ವಾಕ್ಯಕ್ಕೆ "" ಗುಣೀೀಧೂತವ್ವಂಗ್ಯ '' ಎಂಬ ಹೆಸರು ಸಲ್ಲುತ್ತದೆ. ಇದರ
ಸ್ವರೂಪ, ಪ್ರಭೇದ, ಸ್ಥಾನ ಮೊದಲಾದವುಗಳನ್ನು ಕೆಲವುಮಟ್ಟಿಗೆ
ಮುಂದಿನ ಅಧ್ಯಾಯದಲ್ಲಿ ಪರಿಶೀಲಿಸುತ್ತೇವೆ. ಒಂದು ಅರ್ಥವು
ವ್ಯಂಗ್ಯವಾದ ಮಾತ್ರಕ್ಕೆ ಅದು ಪ್ರಧಾನವಾಗಿಯೇ ಇರಬೇಕಾಗಿಲ್ಲ
ಎಂಬುದನ್ನು ಇಲ್ಲಿ ನೆನಪಿಟ್ಟುಕೊಂಡರೆ ಸಾಕು.
ವ್ಯಂಗ್ಗಾ ್ಯರ್ಥವು ಪ್ರಧಾನವಾಗಿದ್ದಾಗ, ಎಂದರೆ ದರೆ ವ್ಯಂಜಕವಾದ
ಶಬ್ಬಾ ರ್ಥಗಳಿಗಿಂತೆ ಹೆಚ್ಚು ಮನೋಹರವಾಗಿದ್ದಾಗ, ಅದಕ್ಕೆ “ಧನಿ”
ಯಂದು ಹೆಸರು. ಹೀಗೆ ವ್ಯಂಗ್ರದದ್ಲಿ ಧ್ವನಿ ಒಂದು ಒಳೆದ್ದೇದ. ಧನಿ
ಯೆಲ್ಲವೂ ಯಾವಾಗಲೂ ವ ವ್ಯಂಗ್ಯವೇ ; ಆದರೆ ವ ್ಯ೦ಗ್ಯವು ಮಾತ್ರ ಹಾವಾ
ಗಲೂ ' ದ್ವನಿಯಾಗಿರಬೇಕಾಗಿಲ್ಲ. ಈ ಪ್ರಾಧಾನ್ಯ ವನ್ನು ಸುವ ಬಗೆ
ಹೇಗೆ ?--ಇದಕ್ಕೆ ಸಹ ಹ್ಲದಯನ ಅನುಭವವೇ ಪರಮ ಪ್ರಮಾಣ, ಆದರೆ
ಒಂದು ಹೆಗ್ಗುರ: ರುತನ್ನು ತಾತ” ce ವಾಕೆ ೈವನ್ನು ಕೇಳಿದಾಗ,
ಅದರ ವಾಚ್ಯಾರ್ಥವನ್ನು ಗ್ರಪಿಸಿದಪ್ಪಕ್ಕೇ ಪ್ರತೀತಿ ವಿಲ್ಲುವುದಿಲ್ಲ; ಇನ್ನೂ
ಮುಂದುವರಿದು ವ್ಯಂಗ್ಯಾರ್ಥವೇನಾದರೂ ಇದ್ದಲ್ಲಿ ಅದನ್ನೂ ಅರಿತುಕೊಳ್ಳು
ತ್ತದೆ. ಪೀಗೆ ಪ್ರತೀತಿಕಾರ್ಯ ನಡೆಯುವಾಗ ಯಾವುದು ರಮ್ಯವೋ
ಅದರ ಕಡೆಗೆ ಮನಸ್ಸು ಒಲೆಯುತ್ತದೆ. ಅದರ ಪರಿಭಾವನೆಯಲ್ಲೇ
ಆಹ್ಲಾದಮಯವಾದ ವಿಶ್ರಾಂತಿಯನ್ನು ಪಡೆಯುತ್ತದೆ. ಹೀಗೆ ಅರ್ಥ
ವನ್ನು ಆಸ್ವಾದಿಸುತ್ತಾ ಮನಸ್ಸು ಎಲ್ಲಿ ನೆಲಸುತ್ತದೋ ಅದೇ
೨೪೬ ಭಾರತೀಯ ಕಾವ್ಯಮಿಸಾಮಾಂಸೆ
ಪ್ರಧಾನ. ಯಾವುದಾದರೂ ಕಾರಣದಿಂದ ವ್ಯಂಗ್ಯಾರ್ಥಕ್ಕಿಂತಲೂ
ವಾಚ್ಯಾರ್ಥವೇ ಸುಂದರವೆಂದು ತೋರಿದರೆ, ಕಣ್ಣುಮುಚ್ಚಾ ಲೆಯಾಟದಲ್ಲ
«" ಅಜ್ಜಿ '' ಯನ್ನು ಬಿಟ್ಟುಹೋದ ವ'ಗು ನಿಮಿತ್ತಾಂತರದಿ೦ದ ಅವಳ
ಬಳಿಗೇ ಓಡಿಬರುವಂತೆ ವಾಚ್ಯಾರ್ಥಕ್ಕೇ ಹಿಂದಿರುಗುತ್ತದೆ ; ಅಲ್ಲಿಂದ
ಸಾಧ್ಯವಾದರೆ ಬೇರೊಂದು ವ್ಯಂಗ್ಯದ ಕಡೆಗೆ ಮತ್ತೆ ಹರಿಯುತ್ತದೆ.
ಗುಣೀಭೂತವ್ಯಂಗ್ಯದಲ್ಲಿ ಆಗುವುದು ಪೀಗೆಯೇ. ಈ ಬಗೆಯ ಮಾನ
ಸಿಕ ಕಾರ್ಯವೆಲ್ಲ ಅತಿಸೂಕ್ಷ್ಮ, ಅತಿಕ್ಷಿಪ್ರ. ಅದನ್ನು ವಿಂಗಡಿಸಿ ವಿಭಜನೆ
ಮಾಡಿ ನೋಡುವದು ಕಪ್ಪ. ಅಲ್ಲದೆ ಕಾವ್ಯಾಸ್ಟಾದವು ಅಖಂಡವಾಗಿ
ಅನನ್ಯಮನಸ್ಸಿನಿಂದ ನಡೆಯತಕ್ಕದ್ದು | ಅದರಲ್ಲೇ ನಾವು ಮಗ್ನರಾಗಿರು
ವಾಗ ಪ್ರತೀತಿಯ ಚಲನವಲನಗಳು ಯಾವುವೂ ಗೋಚರವಾಗುವುದಿಲ್ಲ.
ಆದರೂ ಯಾವ ಬಗೆಯ ಅರ್ಥ ಯಾವ ರೀತಿಯಲ್ಲಿ ನಮ್ಮ ಅನುಭವಕ್ಕೆ
ಬರುವುದೆಂಬುದನ್ನು ಅನುಸರಿಸಿಯೇ ಕಾವ್ಯಾಸ್ಕಾದದಲ್ಲ ಮೇಲುಕೀಳೆಂಬ
ತಾರತಮ್ಯವುಂಟಾಗುವುದು. ಆದಕಾರಣ ಕಾವ್ಯಸ್ವರೂಪವನ್ನು ಕೂಲ೦
ಕಪವಾಗಿ ಗೃಪಿಸಬೇಕಾದರೆ ಪೃಥಕ್ಕರಣದ ಮಾರ್ಗದಲ್ಲಿ ಸ್ವಲ್ಪ ದೂರವಾ
ದರೂ ನಡೆಯಲೇ ಬೇಕು.
ಹಿಂದೆ ಉದಾಹರಿಸಿರುವ ಕಾವ್ಯಭಾಗಗಳಲ್ಲಿ ತೋರುವ ಕೆಲವು
ವ್ಯಂಗ್ಯಾರ್ಥಗಳನ್ನು ಸ್ಪಷ್ಟೋಕ್ತಿಯಲ್ಲಿ ಸಂಗ್ರಹಿಸಲು ಯತ್ನಮಾಡಿದೆ
ವಷ್ಟೆ. ಆದರೆ ಈ ಪ್ರಯಾಸದ ಫಲ ಎಷ್ಟು ಶುಪ್ಕವೆಂಬುದನ್ನು ಬಿಚ್ಚಿ
ಹೇಳಬೇಕಾಗಿಲ್ಲ. ಹೀಗೆ ವ್ಯಂಗ್ಯಾರ್ಥವನ್ನು ವಾಚ್ಯವಾಗಿ ತಿಳಿಸಲು ಸಾಧ್ಯ
ವಾದ ಕಡೆಗಳಲ್ಲಿ ಕೂಡ ಅದರ ಅರಿವನ್ನು ಸಹೃದಯನ ಪ್ರತಿಭೆಗೆ ಬಿಡು
ವುದೇ ಲೇಸು. ಆದರೆ ಇನ್ನೆಷ್ಟೋ ಕಡೆಗಳಲ್ಲಿ ಅದನ್ನು ವಾಚ್ಯವಾಗಿ
ಸಂಗ್ರಹಿಸುವುದೇ ಶಕ್ಯವಿಲ್ಲ ; ಇಂಥ ವ್ಯಂಗ್ಯಗಳೂ ಹಿ೦ದೆ ಅಲ್ಲಲ್ಲಿ ಇದ್ದುವು;
ಆದರೆ ಅವನ್ನು ನಾವು ಪ್ರತ್ಯೇಕವಾಗಿ ಎತ್ತಿ ತೋರಿಸಲಿಲ್ಲ. ಕಾವ್ಯದಲ್ಲಿ
ಈ ಬಗೆಯ ವ್ಯಂಗ್ಯವೇ ಮುಖ್ಯ. ಇದನ್ನು ಒಂದು ಕ್ಲುಪ್ತವಾದ ಉದಾ
ಹರಣಿಯ ಮೂಲಕ ಈಗ ಗಮನಿಸೋಣ.
3 ಚಾರುತ್ಯೋತ್ಯರ್ಷನಿಬಂಧನಾ ಹ ವಾಚ್ಯವ್ಯಂಗ್ಯಯೋಃ ಪ್ರಾಧಾನ್ಯವಿವಕ್ಷಾ.
(ಧೈನ್ಯಾ., ಪು. ೩೭)
೧೬. ಧೃನಿಪ್ರಭೇದಗಳು ೨೪೭
ರನ್ನನ " ಗದಾಯುದ್ಧ'ದಲ್ಲ ದುರ್ಯೋಧನನು ಭೀಷ್ಮನ ಒತ್ತಾ
ಯಕ್ಕೆ ಒಳಪಟ್ಟು ಒಂದು ದಿನದಮಟ್ಟಿಗೆ ವೈಶಂಪಾಯನ ಸರೋವರದಲ್ಲಿ
ಜಲಸ್ತಂಭನವಿದ್ಯೆಯ ಬಲದಿಂದ ಅಡಗಿಕೊಂಡಿರುತ್ತಾನೆ. ಇದರೆ ಸುಳಿ
ವನ್ನು ತಿಳಿದ ತತ ಕೊಳದ ಬಳಿಗೆ ಬಂದು ದುರ್ಯೋಧನನನ್ನು ಹೊರ
ಹೊರಡಿಸಲು ಯತ್ನಮಾಡುತ್ತಾರೆ. ಮಿಕ್ಕವರ ಮೂದಲಕೆಗಳು
ನಿಷ್ಪೃಯೋಜನವಾದ ಬಳಿಕ ಭೀಮನು ಉಪಹಾಸೋಕ್ತಿಗಳಿಂದ
ಮಕಾ ೀಧನನನ್ನು ಹಂಗಿಸಿ, ಸಿಂಹನಾದ ಮಾಡುವನು --
ಆ ರವಮಂ ನಿರ್ಜಿತ ಕಂ
ಠೀರವರವಮಂ ನಿರಸ್ತಘನರವಮಂ೦ ಕೋ.|
ಪಾರುಣನೇತ್ರ೦ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ8 (೪. ೨೨)
ಭೀಮನ ಧ್ವನಿ ಹೇಗಿತ್ತು, ಅದನ್ನು ಕೇಳಿ ದುರ್ಯೋಧನನಿಗೆ ಏನಾಯಿತು
ಎ೦ಬ ಎರಡು ವಿಷಯಗಳನ್ನು ಕವಿ ವರ್ಣಿಸಿದ್ದಾನೆ. ಇಲ್ಲ, ಸಿಂಹದ
ಗರ್ಜನೆಯನ್ನೂ ಮೋಡದ ಪೊಳಗನ್ನೂ ಮಾರಿಸಿದ ಭೀಮನ ಆರ್ಭಟವು
“ ವಿಭಾವ''; ಕೊಳದ ತಳದ ನೀರಿನ ಶೈತ್ಯ ವನ್ನು ಕೂಡ ಮುರಿಯುವಷ್ಟು
ಕಾವು ಮೊ ್ಯೀಧನನ ದೇಹದಲ್ಲೆಲ್ಲಾ ಹಬ್ಬಿ ಅವನ ಮೈ ಜಿವರಿದ್ದು
"" ಅನುಭಾವ ''. ಇಲ್ಲಿ ವಾಚ್ಯಾರ್ದವಾಗಿರುವ ಕ ಈ ವಿಭಾವಾನುಭಾವಗಳನ್ನು
ಅರಿಯುತ್ತಿದ್ದ ಹಾಗೆಯೇ, ದುರ್ಯೋಧನನಲ್ಲ ಧೆಗ್ಗನೆ ಉರಿದೆದ್ದ ಕ್ರೋಧದ
ಅರಿವು ನಮಗೆ ಉಂಟಾಗಿ ತನ್ಮಯತೆಯ ಬಲದಿಂದ ರಾೌದ್ರರಸದ ಅನು
ಭವವು ನಮ್ಮ ಹೃದಯವನ್ನು ತುಂಬುತ್ತದೆ. ಇಲ್ಲಿ ಆರ್ಶಪ್ರತೀತಿಗೆ
ರೌದ್ರರಸವೇ ವಿಶ್ರಾಂತಿಸ್ಥಾನ. ಇಲ್ಲಯೆ ಚಿತ್ತವೃತ್ತಿ ವಿಶೇಷವನ್ನು
ವಾಚ್ಯವಾಗಿ ಹೇಳುವುದು ಹೇಗೆ ಸಾಧ್ಯ? '"ದುರ್ಯೊ ಧನ ಗೆ ಕ್ರೋಧ
ವುಂಟಾಯಿತು '' ಎಂದು ಹೇಳಬಹುದಲ್ಲಾ ತಾಃ ಜಾತಾ
ಪ್ರಶ್ನಿಸಬಹುದು. ನಿಜ; "" ಕ್ರೋಧ'' ಎಂಬ ಶಬ್ಧ್ದವಪೇನೋ ಇದೆ.
ಆದರೆ ಅದೊಂದು ಸಂಜ್ಞೆ ಮಾತ್ರ. ಕೇವಲ ಅದನ್ನೇ ಜಪಿಸಿದ ಮಾತ್ರಕ್ಕೆ
ಇಲ್ಲಿಯ ಅನುಭವ ನಮಗೆ ಬರಲಾರದು. ಇದು ""ಸಿಪಿ'' ಎಂಬ ಶಬ್ದ
ದಂತೆ. ಅದನ್ನು ಉಚ್ಚರಿಸಿದ ಮಾತ್ರ ಕ್ರೈ ಯಾವ ಸುಖವುಂಟು ? ಆದರೆ
ಸಕ್ಕರೆ ನಾಲಗೆಯ ಮೇಲೆ ಬೀಳಲಿ; "" ಸಿಪಿ'' ಎಂಬ ಮಾತಿನ ಹಂಗೇ
೨೪೮ ಭಾರತೀಯ ಕಾವ್ಯಮಾಮಾಂಸೆ
ಇಲ್ಲದೆ ಅದರ ಸವಿ ನಿಯತವಾಗಿ ದೊರೆಯುತ್ತದೆ." ರನಾನುಭವಕ್ಕೆ
ವಿಭಾವಾನುಭಾವಾದಿಗಳು ಸವಿಗೆ ಸಕ್ಕರೆಯಿದ್ದ ೦ತೆ. ವಾಚ್ಯಾರ್ಥವು
ಅವನ್ನು ಸ್ಫುಟವಾಗಿ ಅರ್ಪಿಸಿದರೆ ಸಾಕು ; ರಸವು ತನ್ನಪ್ಪಕ್ಕೆ ತಾನೆ ಅಭಿ
ವ್ಯಕ್ತವಾಗುತ್ತದೆ. ಮೇಲಿನ ಪದ್ಯದಲ್ಲಿ ವಿಭಾವವೂ ಅಷ್ಟೇ ಅನುಭಾ
ವವೂ ಅಷ್ಟೇ, ಅತ್ಯುಜ್ಞ್ಯಲವಾಗಿವೆ. ಭೀಮನ ಧ್ವನಿಗೆ ಕೊಟ್ಟಿರುವ
ಸಾಮ್ಯಗಳನ್ನು ನೋಡಿ ; ಅದರ ಪರಿಣಾಮ ದುರ್ಯೋಧನನ ಮೇಲೆ ಅತಿ
ಶೆಯವಾಗಿ ಆಗಿರಬೇಕು. ಇನ್ನು, ದುರ್ಯೋಧನನ ಕಣ್ಣು ಕೆ೦ಡವಾದದ್ದು
ಹಾಗಿರಲಿ; ಆ ತಣ್ಣೀರಿನೊಳಗೂ ಅವನ ಮ್ಶೈ ಕಟ್ಟುಬೆವರಿಟ್ಟಿತೆಂಬ ಅನು
ಭಾವಕ್ಕಿಂತ ಉತ್ಕೃಪ್ಪವಾದ ವ್ಯಂಜಕ ಬೇರೆ ಯಾವುದಿದೆ! "" ಉರಗ
ಪತಾಕ'' ಎಂದು ದುರ್ಯೋಧನನನ್ನು ಕರೆದಿ ರುವುದರಲ್ಲೂ ಸ್ವಾರಸ್ಯ
ವುಂಟು. ಉರಗದಂತೆ ಅವನೂ ರೋಪದಿಂದ ಸಿಡಿದೇಳುವವನೆಂಬ
ಸೂಚನೆ ಸ್ಫುರಿಸಿ, ಇಲ್ಲಯ ಅನುಭಾವಕ್ಕೇ ಪುಷ್ಟಿ ಕೊಡುತ್ತದೆ.
ಕಾವ್ಯನಾಟಕಗಳಲ್ಲಿ ಅಭಿವೃಕ್ತವಾಗಿ ಅಸ್ಪಾದ್ಯವಾಗುವ ಚಿತ್ತವೃತ್ತಿ
ವಿಶೇಷಕ್ಕೆ « ರಸ'' ವೆಂದು ಹೆಸರಪೈ. ಮೇಲಿನ ಉದಾಹರಣಿಹಲ್ಲಿ
ಇ 4 po ಇ ಇಗ KN
ರಸವೇ ವೃಂಗ್ಯಾರ್ಥ ;, ಇದು ಎಂದೆಂದಿಗೂ ವಾ್ಯವಾಗಲಾರದು.
ಆದರೆ ವ್ಯಂಗ್ಯಾರ್ಥವೆಳ್ಳವೂ ರಸವೇ ಆಗಬೇಕಾಗಿಲ್ಲ. ಕೆಳಗಿನ ಉದಾ
ಹರಣಿಯನ್ನು ನೋಡಿ. ಅನಂದವರ್ಧನನು ತನ್ನ " ಪಿಷಮಬಾಣಲೀಲೆ '
ಯೆಂಬ ಪ್ರಾಕೃತಕಾವ್ಯದಿಂದ ಇದಕ್ಕಾಗಿಯೇ ಉದಾಹರಿಸಿರುವ ಒಂದು
ಪದ್ಯದ ಸಂಸ್ಕೃತಚ್ಛಾಯೆ ಇದು ; ಕಾಮಡೇವನು ಅಸುರರ ಮೇಲೆ
ದಾಳಿಯಿಟ್ಟದ್ದು ಹೇಗೆ ಎಂಬುದನ್ನು ವರ್ಣಿಸುತ್ತದೆ:
ತತ" ತೇಷಾಂ ಶ್ರೀಸಹೋದರ ರತ್ಮಾಹರಣೀ ಹೃದಯಮೇಕರಸಂ।
ಬಿ೦ಬಾಧರೇ ಪ್ರಿಯಾಣ್‌ಂ ನಿಷೇಶಿತಂ ಕುಸುಮಬಾಣೀನ॥
[ಸಿರಿಯೊಡಹುಟ್ಟಿದ ರತ್ನವ ಸೆಳೆತರು.
ಪೊಂದೆ ಲಾಲಸೆಯ ಹೃದಯವನು
4 ರಸಗಳು "" ಸ್ಪಶಬಸ್ಥಾಸ್ಪದ '' ಎ೦ಬ ವಾದವನ್ನು ಖಂಡಿಸುತ್ತಾ ಕುಂತಕನು ಬರೆ
ದಿರುವುದು ಸ್ವಾರಸ್ಯವಾಗಿದೆ; "" ತದಿದಮುಕ್ತಂ ಭವತಿ. -ಯತ್ ಪ್ಪತಬ್ಧ್ಬಃ ಅಭಿಧೀಯ
ಮಾನಾಃ ತ್ರುತಿಪಥಮವತರ೦ತಃ ಚೇತನಾನಾಂ ಚರ್ವಣಚಮತ್ಕಾರಂ ಕುರ್ವಂತೀತ್ಯನೇನ
ನ್ಯಾಯೇನ ಫೃತಪೂರೆಪ್ರಭೃ ತಯಃ ಪದಾರ್ಥಾಃ ಸ್ವಶಬ್ಲೊರಭಿಧೀಯಮಾನಾಃ ತದಾಸ್ಟಾದ
ಸಂಪದಂ ಸಂಪಾದಯಂತೀತ್ಯೇವಂ ಸರ್ವಸ್ಯ ಕಸ್ಕಚಿದುಪಭೋಗಸುಖಾರ್ಥಿನಃ ತೈೊರುದಾರ
ಚರಿತ್ಛಿಃ ಅಯತ್ನೇನೈೈವ ತದಭಿಧಾನಮಾತ್ರಾದೇವ ತ್ರ್ರಲೋಕ್ಯರಾಜೃಸಂಪತ್‌ಸೌಖ್ಯ
ಸಮೃದ್ಧಿಃ ಪ್ರತಿಪಾದ್ಯತೇ ಐತಿ ನಮಸ್ತೇಭ್ಯಃ.'' (ವಕ್ರೋಕ್ತಿಜೀವಿತ, ಪು. ೧೫೯)
5 ಧೃನ್ಯಾ., ಪು. ೧೧೧.
೧೬. ಧೈನಿಪ್ರಭೇದಗಳು ೨೪೯
ಪ್ರಿಯೆಯರ ಬಿಂಬಾಧರದಲ ದೈತ್ಯರಿ_
ಗಿಂಬುಗೊಳಿಪಿದನು ಕ ಕಸೆಹೀಪು.]
ಸಮುದ್ರಮಥನ ಕಾಲದಲ್ಲ ಲಕ್ಷ್ಮಿಯೊಂದಿಗೆ ಉದಿಸಿಬಂದ ಅಶಿತಯೋತ್ಕ
ರ್ಷವುಳ್ಳ ರತ್ನಗಳನ್ನು ಈ ಅಸುರರು ಬಯಸಿದ್ದು ; ಇಂದ್ರನ ವಶದಲ್ಲಿದ್ದ
ಈ ರತ್ನ ಗಳನ್ನು ಸಾಧಿಸುವ ಒಂದೇ ತತ್ಪರತೆ ಇವರಿಗೆ. ಆದಕ್ಕಾಗಿ
ದೇವನಗರದ ಮೇಲೆ ದಾಳಿಯಿಡಲು ಇವರು ತವಕಿಸುತ್ತಿದ್ದರು. ಹೀಗೆ
ಅತ್ತ ನಟ್ಟಿದ್ದ ಇವರ ಹೃದಯವನ್ನು ಕೇವಲ ಕೋಮಲಾಯುಧನಾದ
ಮನ್ಯಧನು ಇತ್ತ ತಿರುಗಿಸಿ ಪ್ರಿಯೆಯರ ತುಟಿಯನ್ನು ಸವಿಯುವುದರಲ್ಲೇ
ನಿರತವಾಗುವಂತೆ, ಅಲ್ಲೆ ಸುಖಸಾರವನ್ನು ಕಾಣುವಂತೆ, ಮಾಡಿದನು.
ಇದಿಷ್ಟೂ ವಾಚ್ಯಾರ್ಥದ ವಿಸ್ತಾರವೇ ಆಯಿತು. ಆದರೆ ಅರ್ಥಪ್ರತೀತಿ
ಇನ್ನೂ ಮುಂದುವರಿಯುತ್ತದೆ. ಅಸುರರ ಹ ಶೈ ದಯವು ಮೊದಲು ಕಾಮಿ
ಸಿದ್ದ ಅನರ್ಫರತ್ನಕ್ಕೂ ಈಗ ಸಂತೃಪ್ತಿ ಯಿಂದ ಸವಿಯುತ್ತಿರುವ ಪ್ರಿಯಾ
ಧರಕ್ಕೂ ಹೋಲಿಕೆ ಇಲ್ಲಿ ಸೂಚಿತವಾಗುತ್ತದೆ.” ಆ ರತ್ನದ೦ತಯೇ ಈ
ತುಟಿಯೂ ರಮ್ಯ, ಉತ್ಕೃಷ್ಟ ಎಂಬ ಅರ್ಥ ಹೊಳೆದು ಮನಸ್ಸು ಆದನ್ನು
ಪರಿಭಾವಿ ನಿಸತೊಡಗುತ್ತ ದೆ. ಈ ಸಾದೃತ್ಯ ಇದುವರೆಗೆ ಆ ಅಸುರರಿಗೂ
ತೋರಿರಲಲ್ಲ; ಇದರ ಕಡೆಗೆ ಅವರ ಗಮನ ಹೋಗುವಂತೆ ಮಾಡಿ ಮದ
ನನು ವಿಜಯಯಾದನು.
ಇಲ್ಲ ವ್ಯಂಗ್ಯವಾಗಿರುವ ಹೋಲಿಕೆಯನ್ನು ಮೇಲಿನ ವಿವರಣ್‌ಯಲ್ಲ
ಕಾಣಿಸಿರುವಂತೆ ವಾಚ್ಯವಾಗಿ ಹೇಳುವುದು ಸಾಧ್ಯ, ಆ ರೀತಿ ಮಾಡಿ,
ರತ್ನದಂತೆ ಪ್ರಿಯಾಧರವು ಹೃದಯಗಾ 'ಹಿಯಾಯಿತು ಜಸಷ್ಟಿ
ಎಂದು ಹೇಳಿದಲ್ಲಿ. ಅದು ಉಪಮಾಲಂಕಾರದ ರೂಪವನ್ನು. ಸ್ಪಷ್ಟ
ತಳೆಯುತ್ತದೆ. ಪೀಗೆ ವಾಚ್ಯವಾಗಿ ಹೇಳದ್ದರೆ ಯಾವುದು ಉಂ ಇ
ಲಂಕಾರವಾಗುತ್ತಿ ಶಿತ್ಲೋ ಅದು _ಪದ್ಯದಲ್ಲ ವ್ಯಂಜನಾವೃತ್ತಿಯ ಮೂಲಕ
ಸೂಚತವಾಗಿರುವುದರಿಂದ ವ್ಯ ಸಂಗೊ ಸ್ಯೋಪಮೆಯಾಗಿದೆ... ಇಂತೂ ವಾಚ್ಯ
ವನ್ನು ದಾಟಿ ಈ ವ್ಯಂಗ್ಯದ ಅನ್ಸಾದದದ್ದೇ ಮನಸ್ಸು ನೆಲಸುವುದರಿಂದ
ಇದು ಉಪಮಾಧ್ಯನಿಯೇ ; ಸರಿ. ಈ ಬಗೆಯ ಧ್ವನಿಗೆ. " ಅಲಂಕಾರದ್ವನಿ'”
6" ಅತ್ರ ಅತಿಶಯೋಕ್ತಿರ್ವಾಚ್ಯಾಲಂಕಾರಃ; ಪ್ರತೀಯಮಾನಾ ಚ ಉಪಮಾ”
( ಧ್ವನ್ಯಾ. ಲೋಚನ, ಪು. ೧೧೧).
೨೫೦ ಭಾರತೀಯ ಕಾವ್ಯಮಾಮಾಂಸೆ
ಯೆಂಬ ಹೆನರನ್ನು ಕೊಟ್ಟಿದ್ದಾರೆ; ಎಲ್ಲ ಅಲಂಕಾರಗಳೂ ಕವಿಪ್ರತಿಭಾ
ವ್ಯಾಪಾರದ ದಾರದ. ಬೀರೆ ಕೇಕೆ ಡೇರೆ ಪ್ರ ಪ್ರಕಾರಗಳು ; ಇಲ್ಲಿ ವ್ಯಂಗ್ಯವಾಗಿರುವ
ಕೇಳ
«ಅಲಂಕಾರ ಕ್ಕೂ ಕ್ಲೂ ಕವಿಪ ಸ್ರತಿಭೆಯೇ ಬೀಜ. ಇದು ವಾಚ್ಯ ವಾಗದೆ ಧ ಧ್ಯನಿತ
ವಾಗಿರುವ ಕಾಡಾ ಸಹೃದಯನ ಪ್ರತಿಭೆಗೂ ಪ್ರಚೋದನೆ ಉಂಟಾಗಿ
ಇದರ ಸೊಗಸು ಹಲವುಮಡಿ ಹೆಚ್ಚಾ ಗಿದೆ. ಇಲ್ಲಿಯ "" ಉಪಮೆ''ಯಂತೆ
ಮಿಕ್ಕ ಗ ಧ್ವನಿತವಾಗಬಹುದು : ಆದರೆ ಅವಕ್ಕೆಲ್ಲಾ ಉದಾ
ಹರಣಿಗಳನ್ನು ಬೆಳೆಸಲು ನಮಗೆ ಅವಕಾಶವಿಲ್ಲ.
ಧ್ವನಿತವಾದ ಅರ್ಥಸಮುದಾಯದಲ್ಲ, ೬೨. ಅಲಂಕಾರ
ಧ್ವನಿಯೂ ಅಲ್ಲದಿರುವುದಕ್ಕೆ ಲ್ಲ ವಸ್ತುಧ್ವನಿಯೆಂದು_ಹೆಸರು. ಇದಕ್ಕೆ
ಒಂದು ನಿದರ್ಶನ ವನ್ನು ಕೊಡಬಹುದು. ಕೆ. ವಿ. ಪುಟ್ಟಪ್ಪನವರ "ಕಲ್ಕಿ'
ಎಂಬ ಕವನದ ಕೊನೆಯ ಸಾಲುಗಳು ಇವು:
": ಕಲ್ಕಿ 1 ಕಲ್ಕಿ | ” ಎನ್ನುತ ಚೀರಿ
ಕನಸೊಡೆದೆದ್ದೆ
ಇನ್ನೆಲ್ಲಿಯೆ ನಿದೆ 6 ( " ಪಾಂಚಜನ್ಯ ಪು. ೭೨)
ಕವಿ ನಿದ್ದೆಯ ಲೋಕದಲ್ಲಿ ಕನಸಿನ ಬೀದಿಯಲ್ಲಿರುವಾಗ ಕಲ್ಮಿಯ
ಕರಾಳಾಕೃತಿಯನ್ನು ನೋಡುತ್ತಾನೆ. ಬಡಬಗ್ಗರ ಗೋಳನ್ನು ಅಸಡ್ಡೆ
ಮಾಡಿ ಮೆರೆದ ಶ್ರೀಮಂತರ ರಕ್ತ ವನ್ನು ಪೀರಲು ಈ ಅವತಾರಮೂರ್ತಿ
ಹೊರಟಿದ್ದಾನೆ; ರಕ್ತದ ನದಿಯನ್ನೆ € ಕುಡಿದರೂ ಸರ್ವರನ್ನೂ ಭಕ್ಷಿಸಿ
ದರೂ ಅವನ ದಾಹ ಹಸಿವುಗಳು ತೀರವು. ಕವಿ ಒಂದು ಜಿಟ್ಟದ ಮೇಲೆ
ನಿಂತು ಈ ಭಯಂಕರ ದೃಶ್ಯವನ್ನು ನೋಡುತ್ತಿರುವಾಗ ಕಲ್ಕಿಯ ದೃಷ್ಟಿ
7 “ಅಲಂಕಾರ ಧ್ವನಿ” ಯೆಂಬ ಶಬ್ಧವನ್ನು ಕೇಳಿ ಒಂದು ಸಂದೇಹ ಹುಟ್ಟಬಹುದು.
ಶೆಬ್ಹಾಲಂಕಾರ ಅರ್ಥಾಲಂಕಾರಗಳು ಶರೀರದ ವೇಷಭೂಪಣಗಳಂತೆ, ಧ್ವನಿತವಾದ
ಅರ್ಥವು ನಿಜವಾಗಿ ಅಲಂಕಾರ್ಯ. ಅದನ್ನು ಅಲಂಕಾರವೆಂದು ಕರೆಯಬಹುದೆ? ಇದಕ್ಕೆ
ಸಮಾಧಾನ ಹೀಗೆ: ಈ ಅರ್ಥವನ್ನು "" ಅಲಂಕಾರ '' ಎಂದು ಕರೆದಿರುವುದು ನಿರ್ದೇಶ
ಸೌಕರ್ಯಕ್ಕಾಗಿ ಮಾತ್ರ. "" ಬ್ರಾಹ್ಮಣ ಶ್ರಮಣನ್ಯಾಯ''ವನ್ನು ಇಲ್ಲ ಜ್ಞಾಪಿಸಿಕೊಳ್ಳಬಹುದು.
ಬ್ರಾಹ್ಮಣನು ಬೌದ್ದ ಸಂನ್ಯಾಸಿಯಾದ ಬಳಿಕ ಅವನ ಹಿಂದಿನ ಜಾತಿ ಉಳಿಯದಿದ್ದರೂ ಅವನ
ಪೂರ್ಫೋತ್ತರಗಳನ್ನು ಗುರುತಿಸಲು "" ಬ್ರಾಹ್ಮಣಶ್ರಮಣ '' ಎನ್ನುವರಪ್ಪೆ. (ಬ್ರಾಹ್ಮಣ
ಕ್ರೈಸ್ತ, ಶೂದ್ರಕ ಸ್ತ್ರ ಎಂಬ ಮಾತುಗಳನ್ನು ಆಧುನಿಕರು ಹೋಲಿಸಬಹುದು.)
ಇಲ್ಲಿಯೂ ಹಾಗೆಯೇ. ವಾಚ್ಯರೂಪದಲ್ಲದ್ದರೆ ಯಾವುದು ಅಲಂಕಾರವೆನಿಸಿಕೊಳ್ಳುತ್ತಿತ್ತೋ
ಅದು ಈಗ ಇಲ್ಲ ಧೃನಿಯಾಗಿದೆ ಎಂದು ಅರ್ಥ.
೧೬. ಧ್ವನಿಪ್ರಭೇದಗಳು ೨೫೧
ಇವನ ಕಡೆಗೂ ಹರಿದು ಅವನು ಇತ್ತ ನುಗ್ಗುವನು. ಆಗ ಕವಿ ಚಿಟ್ಟನೆ
ಚೀರಿ ನಿದ್ದೆಯಿಂದ ಏಳುವನು ; ಕನಸು ಒಡೆಯುವುದು. ಇದೇ ಇಲ್ಲಿಯ
ಸಂದರ್ಭ. ಈಗ ಕೊನೆಯ ಚರಣವನ್ನು ಪರಿಶೀಲಿಸಿ: « ಇನ್ನೆಲ್ಲಿಯ
ನಿದ್ದೆ ?'' ಇಷ್ಟು _ಧಯಂಕರವಾದ ಕ್ರ ಕನಸನ್ನು ಕಂಡು ಎಚ ರಗೊಂಡೆ ಬಳಿಕ
ನಗಿ ನಿಡೆ ದೆ ಬರುವುದುಂತೆ 1--ಎಂಬುದೇ : ಇಲ್ಲಿಯ ವಾಚ್ಕಾ ರ್ಥ. ಇದು
ಸಂದರ್ಧತ್ಕೆ ಇ ಹೊಂದಿದರೂ, ಇಪ್ಪ ಕ್ಕೇ ವಾ ವಾಕ್ಯದ ನಾನಾ ಮುಗಿದಿದ್ದರೆ
ಈ ಉಜ್ಜ ' ಲವಾದ ಕವನಕ್ಕೆ ಸಪ್ಟೆಯಾದ ಮುಕ್ತಾಯವಾಗುತ್ತಿ ತ್ತು.
ಕನಸಿನ ವೃತ್ತಾಂತವನ್ನೆಲ್ಲಾ ಅನುಶೀಲನ ಮಾಡಿಕೊಂಡು ಬಂದವರಿಗೆ
ಇಲ್ಲಿ ಉದಾತ್ತವಾದ ಬೇರೊಂದು ಅರ್ಥ ನಿಸ್ಸಂದೇಹವಾಗಿ ಧ್ಯನಿತವಾ
ಗುತ್ತದೆ. ಇಲ್ಲಿ "ನಿದ್ದೆ ” ಎಂದರೆ ನಿಜವಾಗಿ « ಮನಸ್ಸಿನ ನೆಮ್ಮದಿ.
ಜಗತ್ತಿನ ವಿಷಮಸ್ಸಿ ತಿಯನ್ನು ಕಲ್ಮಿಯ ರೂಪದಲ್ಲಿ ಹೊಸದಾಗಿ ದಃ _ ದರ್ಶನ
ಪಡೆದ ಕಃ ಕವಿಗೆ ಇ ಇನ್ನು ಮನಸ್ಸು ನೆಮ್ಮನಮಾಗಿ _ನಿಶ್ಚಿಂತೆಯಾಗಿ ಉಳಿಯು
ಪದೆಲ್ಲ ಬಂತು! ರುವ ಕನಸಿನ ನಾಡಿನಲ್ಲಿ ವಿಶರಿಸುತ್ತಿರಿ ದ್ದ ವನ ಕಣ್ಣಿ ಗೆ
ಲೋಕದ ದುಃಖದುರಿತಗಳ ಸ್ವರೂಪ ಚೆನ್ನಾಗಿ ಕಟ್ಟಿತು. ಸ್ವಚ್ಛಂದ
ವಾಗಿದ್ದ ಮನಸ್ಸು ಕದಡಿಹೋಯಿತು (ಇ ದೇ ಇಲಿಯ ವಸ್ತುಧ್ಯನಿ
ಇಲ್ಲಿಂದ ಮುಂದೆ ಒಂದು ರಸವೂ ಪ್ರತೀತವಾಗುತ್ತದೆ : ಆದರೆ ಅದರ
ವಿಚಾರ ಸದ್ಯದಲ್ಲಿ ಅಪ್ರಕೃತ.
ವಸ್ತು ಅಲಂಕಾರ, ರಸ---ಎಂಬುದು _ಧೈನಿವಿಬಾಗದಲ್ಲಿ ಅತಿ
pe
ಸ್ಕೂ ಲವಾದ ಒಂದು ು ಕ್ರಮ. ಇಲ್ಲ ವ್ಯಂಜಕವನ್ನು ಗಮನಕ್ಕೇ ತಂದು
ಕೊಳ್ಳ ಡೆ, “ಕೌಲವ ನ್ಯೈಂಗ್ಯದ ಸ್ನ [ರೂಪವನ್ನು ಅನುಸರಿಸಿ ಿ ವಿಭಾಗ ಮಾಡಿ
ದ್ದಾಃ ಯಿತು. ಭತರ. ವ್ಯ 5 ಂಜತನಥ್ಧದೆ ವೃಂಗ್ಯವ ವಿಲ್ಲ. ಕೆಲವುವೇಳೆ ಲಕ್ಷಣಾ
ವ್ಯಾಪಾರವೂ ಮತ್ತೆ ಕೆಲಪುವೇಳೆ ಅಭಿಧಾನ್ಯಾ ಲ ವ್ಯಂಜನಾವ ತ್ರಿ
ಜರ ಮಾಡಿಕೊಡಬಹುದು ; ಕೆಲವುಷೇಳೆ ತಬ್ದವೂ ಮತ್ತೆ ಕೆಲವುವೇಳೆ
ಅರ್ಥವೂ ಮುಖ್ಯ ವ್ಯಂಜಕವಾಗಿರಬಹುದು. ಈ ವೈವಿಧ್ಯಕ್ಕೆ ಅನುಸಾರ
ವಾಗಿ ವ್ಯಂಗ್ಯ ದಿಯ ವೈವಿಧ್ಯವು ಗೋಚರವಾಗುತ್ತದೆ. ವ್ಯಂಗ್ಯ ವ್ಯ೦ಜ
ಕಗಳ ಗಳ ರ ಸಂಬಂಧವನ್ನು 3 ಪ್ವಿಯಲ್ಲಿಟ್ಟು ಕೊಂಡು ಧ್ರನಿಪ್ರಭೇದಗಳನ್ನು ಕ
ಆಲಂಕಾರಿಕರು. ಕಲ್ಪಿಸು ಸುತ್ತಾ 3, ಸತ್ಯ ವಾಗಿ ವಿಭಾಗಮಾಡುತ್ತಾ
ಹೋದಂತೆಲ್ಲ ಪ್ರಭೇ ಪ್ರಭೇದಗಳೂ ಹೆಚ್ಚು ಹೆಚ್ಚಾ ಗಿ ಪ್ರ ಪೆ. `ಅಲಿಂಕಾರ
೨೫೨ ಭಾರತೀಯ ಕಾವ್ಯಮಾಮಾಂಸೆ
ಶಾಸ್ತ್ರದ ಚರಿತ್ರೆಯನ್ನು ಪರಿಶೀಲಿಸುವಾಗ ವಾಚ್ಯಾಲಂಕಾರಗಳ ಸಂಖ್ಯೆಯೇ
ಅತಿಯಾಗಿ ಬೆಳೆಯಿತೆಂದು ನಮಗೆ ತೋರುವುದಲ್ಲವೆ! ದ್ವನಿಪ್ರಕಾರಗಳ
ಸಂಖ್ಯೆ ಇದಕ್ಕೆ ನೂರುಮಡಿಯಾಗಬಹುದು. ಇನ್ನೂ ಹೆಚ್ಚಾಗಬಹುದು.
ಈ ಗಣಿತ ಕ್ಲೇತಕ್ಕೆ ಇಲ್ಲಿ ದೂರದಿಂದಲೇ ಕೈಮುಗಿಯುತ್ತೆ "ಪೆ. ಕಡೆಗೆ
" ಧ್ವನ್ಯಾಲೋಕ ' ದಲ್ಲ ಹೇಳಿರುವ ಭೇದಗಳಪ್ಪನ್ನಾದರೂ ಪರಿಶೀಲಿಸಲು
ಕೊಡ ನಮಗೆ ಅವಕಾಶ ಸಾಲದು ; ಅದು ಅನಾವಶ್ಯಕವೂ ಹೌದು ಅಲ್ಲಿ
ಕಲ್ಪಿಸಿರುವ ಮೂಖವಿಭಾಗವನ್ನು ಮಾತ್ರ ಸಂಗ್ರಹಿಸಿ ಈ ಕೆಳಗಿನ ಪಟ್ಟಿ
ಯಲ್ಲಿರುವಂತೆ ತೋರಿಸಬಹುದು :
ಧ್ವನಿ
ಅವಿವಕ್ಷಿತವಾಚ್ಯ ವಿವಕ್ಷಿತಾನ್ಯಪರವಾಚ್ಯ
(ಲಕ್ಕಣಾಮೂಲ) (ಅಭಿಧಾಮೂಲ)
[
| | |
(೧) ಅರ್ಥಾಂತರ (೨) ಅತ್ಯಂತ (೩) ಅಸಂಲಕ್ಷ್ಯ ಅನುರಣನ
ಸಂಕ್ರಮಿತ ತಿರಸ್ಕೃತ ಕ್ರಮ (ಸಂಲಕ್ಷ್ಯ
ವಾಚ್ಯ ವಾಚ್ಯ ಕ್ರಮ)
|
(೪) ಶಬ್ದಶಕ್ತಿಮೂಲ (೫) ಅರ್ಥಶಕ್ತಿಮೂಲ
ಈ ವಿಭಾಗದ ಉದ್ದೇಶವನ್ನು ಅಲ್ಲಲ್ಲೇ ಒಂದೆರಡು ಮಾತಿನಲ್ಲಿ ಹೇಳಿ,
ಒಂದೆರಡು ನಿದರ್ಶನಗಳ ಮೂಲಕ ವಿವರಿಸಲು ಈ ಮುಂದೆ ಪ್ರಯತ್ನಿಸು
ತ್ತ್ವೇಷೆ.
ಲಕ್ಷಣಾವೃತ್ತಿಯನ್ನು ಆಶ್ರಯಿಸಿ ಹೊರಡುವ "" ಅವಿವಕ್ಷಿತವಾಜ್ಯ''
ಧ್ವನಿ ಎಂಬ ವಿಭಾಗವನ್ನು ಮೊದಲು ತೆಗೆದುಕೊಳ್ಳೋಣ ; ಲಕ್ಷಣೆಯಲ್ಲ
ಅಜಹಲ್ಲಕ್ಷಣಾ, ಜಹಲ್ಲಕ್ಷಣಾ ಎಂಬ ಎರಡು ಭೇದಗಳುಂಟಪ್ಪೆ. (ಗೌಣ
ಲಕ್ಷಣಿಯನ್ನು ಪ್ರತ್ಯೇಕವಾಗಿ ಎಣಿಸದೆ ಜಹಲ್ಲಕ್ಷಣಿಯೊಂದಿಗೇ ಸೇರಿಸಿ
ಬಿಡಬಹುದು; ಏಕೆಂದರೆ ಇದರಲ್ಲಿಯೂ ವಾಚ್ಯಾರ್ಥವು ಪೂರ್ಣವಾಗಿ ತಿರ
ಸ್ಕೃತವಾಗುತ್ತದೆ.) ಈ ಎರಡು ಭೇದಗಳಿಗೆ ಅನುಸಾರವಾಗಿ
ಅರ್ಥಾಂತರಸಂಕ್ರಮಿತವಾಚ್ಯಧ್ಯನಿ, ಅತ್ಯಂತತಿರಸ್ಕ್ಯತವಾಚ್ಯಧ್ಯನಿ ಎಂದು
ಎರಡು ಪ್ರಭೇದಗಳಾಗುತ್ತವೆ.
೧೬. ಧ್ವನಿಪ್ರಭೇದಗಳು ೨೫೩
ಬ ಅರ್ಥಾ೦ತರಸಂಕ್ರಮಿತವಾಚ್ಯ ದಲ್ಲಿ ; ವಾಚ್ಯಾರ್ಥಕ್ಕೆ ಬಾಧೆ
ತಟ್ಟಿದರೂ ಅದನ್ನು ಪೂರ್ಣವಾಗಿ ತಿರಸ್ಕರಿಸುಪುದಿಲ್ಲ ; ಅದನ್ನೂ ಒಳ
ಪಡಿಸಿಕೊಂಡು ಸಮರ್ಪಕವಾದ ಲಕ್ಷ್ಯಾರ್ಥವನ್ನು ಕಲ್ಪಿಸುತ್ತೇವೆ.
("" ಭರ್ಜಿಗಳು ನುಗ್ಗಿ ದುವು '' ಎಂಬ ಉದಾಹರಣಿಯನ್ನು ಇಲ್ಲ ಜ್ಞಾಪಿಸಿ
ಕೊಳ್ಳಬಹುದು.) ಇಲ್ಲಿಯ ಪ್ರಯೋಜನವೇ ಧ್ವನಿ.
ಇದಕ್ಕೆ ಜನ್ನನ " ಯಶೋಧರಚರಿತೆ' ಯಿಂದ ಒಂದು ಉದಾಹರ
ಣಿಯನ್ನು ಕೊಡಬಹುದು. ರಾಣಿ ಅಮೃತಮತಿ ತನ್ನ ಹೃದಯವನ್ನು
ಅಪ್ಪಾವಂಕನೆಂಬ ಕೀಳು ಮಾವುತನಿಗೆ ಸಲ್ಲಿಸಿ, ಅವಕಾಶ ದೊರೆತಾಗಲೆಲ್ಲ
ಈ ಜಾರನ ಸಹವಾಸದಲ್ಲಿರುವಳು. ಅವಳ ಪತಿ ಯಶೋಧರನಿಗೆ ಸಂಶಯ
ಹುಟ್ಟಿ, ತನ್ನ ಮಡದಿಯನ್ನು ಪರೀಕ್ಷಿಸಬೇಕೆಂದು ಒಂದು ರಾತ್ರಿ ಅವನು
ಹುಸಿನಿದ್ದೆ ಯಲ್ಲಿರಲು, ಅರಸನ ತೋಳ್‌ಸೆಖೆಯಿಂ ನುಸುಳ್ಳು ಅರಸಿ
ಇರನಲ್ಲಿಗೆ ಪೋದಳ'. ಬೆನ್ನೊಳೆ ಪೋದಂ ದೋಷದ ಬೆನ್ನೊಳೆ ಸಂಧಿ
ಸುವ ದಂಡದಂತೆ ಅರಸಂ. '' ಅಲ್ಲ, ತಡಮಾಡಿ ಬಂದೆಯೆಂದು ಮುಳಿದು
ಕಾಡಿದ ತನ್ನ ಜಾರನಿಗೆ ಅಮೃತಮತಿ" ನೀನೊಬ್ಬನೇ ನನ್ನ ಪ್ರಿಯ;
ಉಳಿದ ಗಂಡಸರೆಲ್ಲ ಸಹೋದರರು '' ಎಂದು ನಂಬಿಕೆ ಕೊಟ್ಟು ಸಮಾ
ಧಾನ ಪಡಿಸುತ್ತ ದ್ಹಾಳೆ ; ಯಶೋಧರನು ಇದಿಪ್ಟನ್ನೂ ಮರೆಯಲ್ಲ ನಿಂತು
ನೋಡುತ್ತಿದ್ದಾನೆ:
ಆಗಳೀ ಬಾಳ ನಿಮಿರ್ದುದು ತೋಳ"
ತೂಗಿದುದು ಮನಂ ಕನಲ್ಲು ದಿರ್ವರುಮನೆಗಡ್_!
ಬಾಗಂ ಮಾಡಲ" ಧೃತಿ ಬಂ
ದಾಗಳೆ ಮಾಣೆಂಬ ತೆಜದೆ ಪ್ರೇಸಿದನರಸಂ॥ (ii. ೫೩)
ಇಲ್ಲಿ, "" ಆಗ ಕತ್ತಿ ಮೇಲಕ್ಕೆ ಎದ್ದಿತು, ತೋಳು ತೂಗಿತು” ಎಂಬ
ಮಾತನ್ನು ಗಮನಿಸಿ. ಯಶೋಧರನು ಎತ್ತಿದಲ್ಲದೆ ಕತ್ತಿ ಚಮ್ಮಲಾರದು,
ತೋಳು ತೂಗಲಾರದು. ಆದಕಾರಣ, ಯಶೋಧರನು ಕತ್ತಿಯನ್ನು ಎತ್ತಿ
ದನು, ತೋಳನ್ನು ತೂಗಿದನು ಎಂಬುದು ಇಲ್ಲಿಯ ಲಕ್ಕಾರ್ಥ. ಆದರೆ
ಇದು ಎಷ್ಟು ಸಪ್ಪೆ ಮಾತು! ಹೀಗೆ ಹೇಳದೆ ಲಕ್ಷಣೆಯನ್ನು ಆಶ್ರಯಿಸಿ
ದ್ವರಪ್ರ ಯೋಜನವನ್ನು ಗಮನಿಸಿ. ಈ « ಹುಳುಕ'' ರ ವ್ಯವಹಾರವನ್ನು
ನೋಡಿದ ಯಶೋಧರನಲ್ಲಿ ರೋಪವುದಿಸಿ ಎಪ್ಪರಮಟ್ಟಿಗೆ ಅಂಗಾಂಗ
೨೫೪ ಭಾರತೀಯ ಕಾವ್ಯಮಾಮಾಂಸೆ
ಗಳನ್ನು ವ್ಯಾಪಿಸಿತೆಂದರೆ ಅದರ ಪ್ರಭಾವದಿಂದ ಅವನ ಕೈಯಲ್ಲಿದ್ದ ಕತ್ತಿ
ತಾನಾಗಿಯೇ ಎದ್ದಿತು ; ಇನ್ನು ಅವನ ಅರಿವಿಲ್ಲದೆಯೇ ತೋಳು ತಾನಾ
ಗಿಯೇ ಬೀಸಿತು !--ಅಪ್ಪರಮಟ್ಟಿಗೆ ಅವನಲ್ಲ ರೋಷ ಸಂಚಾರವಾಯಿತು
ಎಂಬುದೇ ಇಲ್ಲಿಯ ಧೃನಿ.
ಮೇಲಿನ ವ್ಯಂಗ್ಯಾರ್ಥವು ಅಜಹಲ್ಲಕ್ಷಣಿಯ ಮೂಲಕ ಹೊರಡುವುದ
ರಿಂದ ಇದನ್ನು "" ಅರ್ಥಾ೦ತರಸಂಕ್ರಮಿತವಾಚ್ಯದ್ಯನಿ ' ಯೆಂದು ಕರೆಯು
ವುದು ಯುಕ್ತವೇ ಅದರೂ, ಲಕ್ಷಣಗ್ರಂಥಗಳಲ್ಲಿ ಇನ್ನೊಂದು ರೀತಿಯ
ಉದಾಹರಣಿಯನ್ನು ಕೊಡುವುದೇ ರೂಢಿ. ಆದಕಾರಣ, ಆ ಬಗೆಗೆ
ಸೇರಬಲ್ಲ ಒಂದನ್ನು ಈಗ ಗಮನಿಸೋಣ. ಭಾಸನ "ಊರುಭಂಗ '
ದಲ್ಲಿ ತೊಡೆಮುರಿದು ನೆಲಕ್ಕೆ ಕುಸಿದಿರುವ ದುರ್ಯೋಧನನ ಬಳಿಗೆ ಅವನ
ಚಿಕ್ಕ ಮಗು ದುರ್ಜಯನು ಬಂದು ಎಂದಿನಂತೆ ತೊಡೆಯೇರಲು ಹೋಗು
ತ್ತಾನೆ. ದುರ್ಯೋಧನನು ಅವನನ್ನು ದುಃಖದಿಂದ ತಡೆದು, ಇನ್ನು
ಮುಂದೆ ಈ ಪರಿಚಿತವಾದ ಪೀಠ ನಿನಗೆ ದೊರೆಯುವುದಿಲ್ಲ ಎನ್ನುತ್ತಾನೆ.
ಆಗ,
ದುರ್ಜಯ- ಮಹಾರಾಜನು ಹೋಗುವುದೆಲ್ಲಿಗೆ ?
ದುರ್ಯೋಧನ-ನೂರುಮಂದಿ ತಮ್ಮ ೦ದಿರ ಹಿಂದೆ ಹೋಗುತ್ತೇನೆ.
ದುರ್ಜಯ-ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು.
ದುರ್ಕೋಧನ-ಹೋಗು ಮಗು, ಹೀಗೆಂದು ವೃಕೋದರನನ್ನು ಕೇಳು.
ಇಲ್ಲಿ, ಅರಿಯದ ಹಸುಳೆಯ ಮಾತಿನಿಂದ ಕರುಣರಸ ಪುಷ್ಟಿ ಗೊಳ್ಳುವುದು
ಸುವಿದಿತವಾಗಿದೆ; ಆ ವಿಷಯವಿರಲಿ. ದುರ್ಯೋಧನನ ಕೊನೆಯ ಮಾತನ್ನು
ಗಮನಿಸಿ. "" ಹೀಗೆಂದು ವೈಕೋದರನನ್ನು ಕೇಳು '' ಎಂಬಲ್ಲಿ, “ ವೃಕೋ
ದರ'', ಎಂಬುದು ಆ ಹೆಸರಿನ ವ್ಯಕ್ತಿ ಮಾತ್ರವನ್ನು ನಿರ್ದೇಶಿಸಿ
ನಿಂತರೆ, ವಾಚ್ಯಾರ್ಥವು ಪೂರ್ಣವಾಗಿ ಸಂಗತವಾಗುವುದಿಲ್ಲ. «6 ನನ್ನನ್ನೂ
ಜೊತೆಗೆ ಕರೆದುಕೊಂಡು ಹೋಗು '' ಎಂಬ ಕೇಳಿಕೆಗೆ, ಯಾರೋ ಒಬ್ಬ
ನನ್ನು ಕೇಳು ಹೋಗು '' ಎಂಬ ಇಷ್ಟೇ ಉತ್ತರ ಹೇಗೆ ಸಮಂಜಸವಾ
ದೀತು ? ಆದರೆ ಇಲ್ಲಿ ವೃಕೋದರನು ಕೇವಲ « ಯಾರೋ ಒಬ್ಬ'' ನಲ್ಲ;
ದುರ್ಯೋಧನನ ದೃಷ್ಟಿಯಲ್ಲಾ ದರೂ, ಅವನು ಕ್ರೂರಿ, ಉದ್ಮತ, ಸಮಸ್ತ
`ಕೌರವರನ್ನೂ ನುಂಗಿದವನು. " ವೃಕ್ಕೋದರ'' ಎಂಬ ಶಬ್ಧವು ಇಲ್ಲಿಗೆ
೧೬." ಧ್ವನಿಪ್ರಭೇದಗಳು ೨೫೫
ಸಂಗತವಾಗದೇಕಾದರೆ ಇಷ್ಟು ಅರ್ಥವನ್ನೂ ಅದು ಒಳಕೊಳ್ಳಬೇಕು.
(ಈ ಲಕ್ಷಾರ್ಥವು ಸಿದ್ಧಿಸುವುದಕ್ಕೆ ಹಿಂದಿನ ವಾಕ್ಯಗಳ ಅರ್ಥಜ್ಞಾನ
ಸಹಾಯಮಾಡುತ್ತದೆ.) ಈ ವ್ಯಾಪಾರದ ಪ್ರಯೋಜನವೇನು? ಕೌರವ
ವಂಶದ ಕುಡಿಯನ್ನೂ ಉಳಿಸದೆ ನಾತಮಾಡಜೇಕೆಂಬುದೇ ಭೀಮನ ಛಲ :
ಕುರುಕುಲದ ಹಸುಳೆಯನ್ನು ಕೊಲ್ಲುವುದಕ್ಕೂ ಅವನು ಪಿಂಜರಿಯಲಾರ--
ಇದೇ ಮೊದಲಾದ ಅರ್ಥಪರಂಪರೆ ಧ್ವನಿತವಾಗಿ ಪರ್ಯವಸಾನದಲ್ಲಿ ಕರುಣ
ರಸಕ್ಕೇ ಪೋಪಕವಾಗುತ್ತದೆ.
ಮೇಲಿನ ವಿವರಣಿ ಕೆಲವು ಮಟ್ಟಿಗೆ ಕ್ಲಿಪ್ಪಷೆ೦ದು ತೋರೀತು.
ಲೋಕರೂಢಿಯ ಮಾತಿನಿಂದ ಇನ್ನೊಂದು ನಿದರ್ಶನವನ್ನು ಇಲ್ಲಿ
ಕೊಡೋಣ. " ಕಾಳಿದಾಸನೂ ಕವಿ, ಇವನೂ ಕವಿ '' ಎಂದು ಹುಲುಗವಿ
ಯೊಬ್ಬನನ್ನು ತೋರಿಸಿ ಹೇಳುವುದುಂಟು. ಇಲ್ಲಿ ಕವಿ” ಎಂಬ ಶಬ್ಧ
ಎರಡು ಬಾರಿ ಬಂದದ್ದಕ್ಕೆ ಸಾರ್ಥಕ್ಯವೇನು? ವಾಕ್ಯವು' ಸಂಗತವಾಗ
ಬೇಕಾದರೆ, "ಕಾಳಿದಾಸನು ಶ್ರೇಷ್ಠನಾದ ಕವಿ, ಇವನು ಕವಿನಾಮಧಾರಿ ''
ಎಂದು ಲಕ್ಷ್ಯಾರ್ಥವನ್ನು ಕಲ್ಪಿಸಬೇಕು. ಇಬ್ಬರಿಗೂ ಇರುವ ಮಹದಂತರ
ವನ್ನು ಸೂಚಿಸಿ, ಐರಡನೆಯವನ ವಿಷಯದಲ್ಲಿ ನಮ್ಮ ತಿರಸ್ಕಾರವನ್ನು
ವ್ಯಕ್ತಪಡಿಸುವುದೇ ಇದರ ಪ್ರಯೋಜನ. ಇದೇ ಇಲ್ಲಿಯ ಧ್ಯನಿ.
ಅತ್ಯಂತ ತಿರಸ್ಕೃತ ವಾಚ್ಯಧ್ಯ ನಿಯೆ೨೦ಬ ಹೆಸರೇ ತಿಳಿಸುವಂತೆ, ಅದ
ರಲ್ಲಿ ವಾಚ್ಛಾರ್ಥವು ಸಂಪೂರ್ಣವಾಗಿ ಅಸಂಗತವಾಗುತ್ತದೆ. ಹಿಂದಿನ
ಅಧ್ಯಾಯದಲ್ಲಿ ಕೊಟ್ಟಿರುವ "" ಪತಿಗಳನ್ನನು ಮಾಣು ಧರ್ಮಸ್ಥಿತಿಯ
ಕೊಂಡರು'' ಎಂಬುದು ಇದಕ್ಕೆ ಒಂದು ನಿದರ್ಶನ; ಇದು ಸಾದೃತ್ಯ
ಮೂಲ ಲಕ್ಷಣೆಯನ್ನು ಆಶ್ರಯಿಸಿದ್ದು. ಸಂಬಂದಮೂಲ ಲಕ್ಷಣೆಯ
ನ್ನುಳ್ಳ ಒಂದು ಉದಾಹರಣಿಯನ್ನು ರಾಘವಾಂಕನ * ಹರಿಶ್ಚಂದ್ರಕಾವ್ಯ'
ದಿಂದ ಕೊಡಬಹುದು : ಹಾವು ಕಚ್ಚಿ ಮಡಿದ ರೋಪಿತಾತ್ವನ ಶವವನ್ನು
ನಟ್ಟಿರುಳಿನಲ್ಲಿ ಚಂದ್ರಮತಿ ತ್ಮಶಾನಕ್ಕೆ ತಂದು ಚಿತೆಯಮೇಲಟ್ಟು ದಹನ
ಮಾಡಲು ಹವಣಿಸುತ್ತಿರುವಾಗ ಅಲ್ಲಿ ಕಾವಲುಗಾರನಾಗಿದ್ದ ಹರಿಶ್ಚಂದ್ರನು
ಮಸಣದ ಬಾಡಿಗೆಯನ್ನು ಕೊಡದೆ ಶವ ಸುಢುವವರು ಯಾರೆಂದು ಗರ್ಜಿ
ಸುತ್ತ ಬಂದು ಶವವನ್ನು ಚಿತೆಯಮೇಲಿನಿಂದ ಸೆಳೆದು ಬಿಸುಡುತ್ತಾನೆ.
ಆಗ ಚಂದ್ರಮತಿ,
2೫೬ ಭಾರತೀಯ ಕಾವ್ಯವಿಸಮಾಂಸೆ
ಬಿಸುಡದಿರು ಬಿಸುಡದಿರು ಬೀಡ ಬೇಡಕಟಕಟ
ಹಸುಳೆ ಮೊಂದಹೆನೆಂದು ಬೀಳ್ಬವನನೆತ್ತಿ ತ.
ಕ್ಕಿಸಿಕೊಂಡು ಕುಲವ ಮೋಡದೆ ಬೇಡಿಕೊ೦ಬೆನಿವನೆನ್ನ ಮಗನಲ್ಲ ನಿನ್ನ!
ಸಿಸುವಿನೋಪಾದಿ ಸುಡಲನುಮತವವಿತ್ತು ರ.
ಕ್ಲಿಸು ಕರುಣಿ ಎಂದಡೆಲೆ ಮರುಳೆ ಹೆಣನುಟ್ಟುದ೦
ಮಸಣವಾಡಗೆಯ ಹಾಗವನು ಕೊಟ್ಟಲ್ಲದ್ದೇನೆ೦ದಡ೦ ಬಿಡೆನೆಂದನು ॥
(ಸಂಗ್ರಹ, ಭಃ, ೨೮),
ಇಲ್ಲಿ, "" ಅಕಟಕಟ, ಹಸುಳೆ ನೊ೦ದಹನು'' " ಇವನೆನ್ನ ಮಗನಲ್ಲ;
ನಿನ್ನ ಸಿಸುನಿನೋಪಾದಿ ಸುಡಲನುಮತವನಿತ್ತು ರಕ್ಷಿಸು ಕರುಣಿ '' ಎಂಬ
ಎರಡು ವಾಕ್ಯಗಳನ್ನು ಪರಿಶೀಲಿಸಿ, ಸತ್ತ ಹೆಣಕ್ಕೆ ನೋವಾಗುವುದು
ಅತ್ಯಂತ ಅಸಂಭಾವ್ಯ. ಈ ತವವನ್ನೇ ಅಗ್ನಿಗೆ ಅರ್ಪಿಸಲು ಚಂದ್ರಮತಿ
ಪಿದ್ಧಮಾಡಿಕೊಂಡಿದ್ದಾ ಳೆ! ಆದರೆ ಈ ನಿಮಿಷದಲ್ಲಿ ಎಲ್ಲವನ್ನೂ ಮರೆತು,
«" ಹಸುಳೆ ನೊಂದಹನು '' ಎಂದು, ಆ ಶರೀರದಲ್ಲನ್ನೂ ಜೀವವಿರುವಂತೆ
ಮಾತಾಡುವುದನ್ನು ನೋಡಿದರೆ ತನ್ನ ಮಗನ ವಿಷಯದಲ್ಲಿ ಅವಳಿಗೆ
ಪೋಹಹಪೆಪ್ಟಿತ್ತು; ಆ ಸುಕುಮಾರನಿಗೆ ನೋವುಂಟಾಗುವ ಕಲ್ಪನೆಯನ್ನೂ
ಅವಳು ಸಪಿಸಲಾರಳು ಎಂಬುದು ಸ್ಪಪ್ಪವಾಗಿ ವ್ಯಕ್ತವಾಗುತ್ತದೆ. ."" ಎನ್ನ
ಮಗನಲ್ಲ'' ಎಂಬುದು ವಿಪರೀತ ಲಕ್ಷಣೆಯ ಸಂದರ್ಭ. ಮಗನಿಗೆ ಸರಿ
ಯಾಗಿ ದಹನಕ್ರಿಯೆ ನಡೆದರೆ ಸಾಕು; ನನ್ನ ತಾಯಿತನದ ಅಭಿಮಾನ
ವನ್ನೂ ಮರೆತೇನು ಎನ್ನುವುದು ಅವಳ ಆಶಯ. "" ನಿನ್ನ ಸಿಸುವಿನೋ
ಪಾದಿಯಲಿ '--ಈ ಸತ್ತ ಹಸುಳೆ ತನ್ನ ಮಗನೆಂದು ಹರಿತ್ಚಂದ್ರನಿಗಾ
ಗಲಿ ಈತನೇ ಇವನ ತಂದೆಯೆಂದು ಚಂದ್ರಮತಿಗಾಗಲಿ ಗೊತ್ತಿಲ್ಲ. ಆದ
ಕಾರಣ, ಹರಿಶ್ಚ ೦ದ್ರನಿಗೆ ಅವನ ಔರಸಪುತ್ರ ನನ್ನು ತೋರಿಸಿ ನಿನ್ನ ಮಗು
ವಿನ ಹಾಗೆ ನೋಡಿಕೋ ಎಂದು ಅವನ ಪತ್ನಿ, ಆ ಮಗುವಿನ ತಾಯಿ,
ಬೇಡಿಕೊಳ್ಳುತ್ತಿದ್ದಾಳೆ. ಈ ಮಾತಿನ ಅಸಾಂಗತ್ಯವು ಇಲ್ಲಿಯ ವಿಷಮ
ಘಟನೆಯನ್ನು ನಮ್ಮ ಮನಸ್ಸಿಗೆ ಎಷ್ಟು ಚೆನ್ನಾಗಿ ಮುಟ್ಟಿಸುತ್ತಡೆ |
ಕ ರಕ್ಷಿಸ., ೫ « ಕರುಣಿ” ಎಂಬ ಪದಗಳಲ್ಲಿ ಕೂಡ ಲಕ್ಷಣಿಯೂ ಅದರ
ಪ್ರಯೋಜನವೂ ಸುವಿದಿಕವಾಗಿ ಉಂಟು. ಒಟ್ಟು ಪದ್ಯದ ಬಹುಭಾಗ
ದಲ್ಲೇ ವಾಚ್ಯಾರ್ಥವು ತಿರಸ್ಮಾರಹೊಂದಿ ಲಕ್ಷಣ್‌ನಿವೃತ್ತಿಗೆ ಅವಕಾಶ ಕಲ್ಪಿಸಿ
ಕೊಟ್ಟು, ಅತಿಶಯವಾದ ವ್ಯಂಗ್ಯಾರ್ಥಗಳನ್ನು ಸೂಚಿಸುತ್ತದೆ. ಈ
೧೬. ಧ್ವನಿಪ್ರಭೇದಗಳು ೨೫೭
ಧ್ವನಿಗಳೆಲ್ಲ ಸಾಗರಾಭಿಮುಖವಾದ ಅನೇಕ ನದಿಗಳುತೆ ಕರುಣರಸೆದಲ್ಲಿ
ವಿಶ್ರಾಂತಿಗೊಳ್ಳುವುವೆಂದು ಬೇರೆ ಹೇಳಬೇಕಾಗಿಲ್ಲ.”
ಇನ್ನು ಅಭಿಧಾವೃತ್ತಿಮೂಲವಾದ *" ವಿವಕ್ಷಿತಾನ್ಯಪರವಾಚ್ಛ''
ಧ್ಯನಿಯ ಕಡೆಗೆ ತಿರುಗೋಣ. ಇಲ್ಲಿ ವಾಚ್ಯವು ತಿರಕ್ಕೃತವಾಗುವುದಿಲ್ಲ 4
ಪ್ರಕೃತಕ್ಕೆ ಸಂಗತವಾಗಿಯೇ ಇರುತ್ತದೆ. ಆದರೆ ತನ್ನಲ್ಲೇ ವಿಶ್ರಾಂತಿ
ಗೊಳ್ಳದೆ ಧ್ವನಿಯೊಂದನ್ನು ವ್ಯಕ್ತಪಡಿಸಲು ಉಪಾದೇಯವಾಗಿರುತ್ತದೆ.
ಆದಸಾರಣವೇ ಇದ: ವಿವಕ್ಷಿತ,'' ಮತ್ತು "- ಅನ್ಯಪರ >, ಇದರಲ್ಲಿ
ಅಸಂಲಕ್ಷ್ಯಕ್ರ ಮಧ್ಯನಿ, ಅನುರಣನಧ್ವನಿ ಎಂದು ಎರಡು ಮುಖ್ಯ
ವಿಭಾಗಗಳು.
ವಿಭಾವಾನುಭಾವಾದಿಗಳನ್ನು ಅರಿಯುತ್ತಿದ್ದ ಹಾಗೆಯೇ ರ
ಪ್ರತೀತಿ ಉಂಟಾಗುವುದೆಂದು ಹಿಂದೆ ಆಗಲೇ ಗಮನಿಸಿದ್ದೇವೆ. ಇಲ್ಲ
ವ್ಯ೦ಜಕಗಳಿಗೂ ವ್ಯಂಗ್ಯಕ್ಕೂ ಕಾಲಕ್ರಮದಲ್ಲಿ ಸ್ವಲ್ಪವಾದರೂ ಅಂತರವು
ವಸ್ತುತಃ ಇರಲೇಬೇಕಪ್ಪೆ. ಆದರೆ ಇದು ಎಷ್ಟು ಅಲ್ಪ. ಸೂಕ್ಷ್ಮ ಎಂದರೆ
ವ್ಯಂಜಕ ವ್ಯಂಗ್ಯಗಳ ಪೌರ್ವಾಪರ್ಯವು ಕಣ್ಣಿನಲ್ಲಿ ಕಣ್ಣಿಟ್ಟುಕೊ೦ಡು ನೋಡಿ
ದರೂ ಗ್ತೊತಾಗುವುದಿಲ್ಲ; ಈ ವಿಭಾವಾನುಭಾವಾದಿಗಳ ಅರಿವಿನಿಂದ ರಸದ
ಅವು ಹೇಗೆ ಉಂಟಾಯಿತೆಂದು ವಿಮರ್ಶಿಸಿ ಕ್ರಮವನ್ನು ಗೊತ್ತುಮಾಡು
ವುದಕ್ಕೂ ಸಾಧ್ಯವಾಗುವುದಿಲ್ಲ. ಆದಕಾರಣ ರಸವೇ ಮೊದಲಾದ ಚಿತ್ರ
ಚ
ವೃತ್ತಿ ವಿಶೇಷರೂಪವಾದ ಧ್ವನಿಗಳಿಗೆ ಅಸಂಲಕ್ಷ್ಯಕ್ರಮವೆಂಬ ಹೆಸರು
ಬಂದಿದೆ. ಇಲ್ಲನ ನಿರೂಪಣಿಯಲ್ಲೆಲ್ಲಾ "" ರಸ'' ಶಬ್ದವನ್ನು ಅತಿ ವಿಶಾಲ
ವಾದ ಅರ್ಥದಲ್ಲಿ ಗ್ರಷಿಸಜೇಕೆಂದು ಮತ್ತೊಮ್ಮೆ ಜ್ಞಾಪಕ ಕೊಡುವುದು
ಆಗತ್ಯ. ಇದು ಶೃಂಗಾರ, ವೀರ, ಕರುಣ ಮೊದಲಾದವುಗಳಿಗೆ ಮಾತ್ರ
ವಲ್ಲದೆ ಎಲ್ಲ ಬಗೆಯ ಚಿತ್ತವೃತ್ತಿಗಳಿಗೂ ಅನ್ವಯಿಸುತ್ತದೆ.
ಅಸಂಲಕ್ಷ್ಯಕ್ರಮಧ್ಯನಿಗೆ ಹಿಂದೆ ಉದಾಹರಣಿಯನ್ನು ಕೊಟ್ಟಿದೆ.
ಮುಂದೆ ಕೊಡಲಾಗುತ್ತದೆ. ಆದಕಾರಣ ಅದರ ವಿಚಾರವನ್ನು ಇಲ್ಲಿ
* ಅರ್ಥಾಂತರಸಂಕ್ರಮಿ ತವಾಚ್ಯಕ್ಕೂ ಅತ್ಯಂತತಿರಸ್ಕೃ ತವಾಚ್ಯಕ್ಕೂ ಇರುವ ಭೇದ
ವನ್ನು ಅಭಿನವಗುಪ್ತನು ಹೀಗೆ ಸಂಗ್ರಹಿಸಿ ಹೇಳುತ್ತಾನೆ: ""ಯೋರ್ಡ ಉಪಪದ್ಯ
ಮಾನ್ಯೋಪಿ ತಾವತ್ತೊವ ಅನುಪಯೋಗಾತ್ ಧರ್ಮಾಂತರಸಂಪಲನಯಾ ಅನ್ಯತಾಮಿವ
ಗತ್ಕೊೊಪಿ ಲಕ್ಷ್ಯಮಾಣೊಣನುಗತಧರರ್ಮಾ ಸೂತ್ರನ್ಯಾಯೇನಾಸ್ತೇ ಸ ರೂಪಾಂತರ
ಪರಿಣತ ಉಕ್ತಃ. ; ಯಸ್ತು ಅನುಪಪದ್ಯಮಾನ ಉಪಾಯತಾಮಾತ್ರೇಣ ಅರ್ಥಾಂತರಪ್ರತಿ
ಪತ್ತಿಂ ಕೃತ್ವಾ ಪಲಾಯತ ಇವ ಸ ತಿರಸ್ಕೃತ ಇತಿ.'' (ಧನ್ಯಾ. ಲೋಚನ, ಪು. ೬೧)
K.M. 17
೨೫೮ ಭಾರತೀಯ ಕಾವ್ಯಮಾಮಾಂಸೆ
ಬೆಳಸುವುದು ಅನಾವಶ್ಯಕ. ಒಂದೇ ಒಂದು ನಿದರ್ಶನವನ್ನು ಇಲ್ಲ
ಕೊಟ್ಟು ಮುಂದೆ ಸಾಗುತ್ತೇವೆ. "" ಆ ರವಮಂ...... ನೀರೊಳ
ಗಿರ್ದುಂ ಬೆಮರ್ತ ನುರಗಪತಾಕಂ '' ಎಂಬ ಕಡೆ ರೌದ್ರರಸವು ಅಭಿವ್ಯಕ್ತ
ವಾಗುವುದನ್ನು ನೋಡಿದೆವು; ಕೆಳಗಿನ ಉದಾಹರಣಿಯಲ್ಲಿ «" ಹರ್ಷ ''
ವೆಂಬ ಸಂಸಾರಿಭಾವವು ಆಸ್ಚಾದ್ಯವಾಗುತ್ತದೆ. ಪು, ತಿ. ನರಪಿಂಹಾ
ಚಾರ್ಯರ " ಅಹಲ್ಯೆ' ಎಂಬ ನಾಟಕದಲ್ಲಿ, ರಾಮಪುನೀತೆಯಾದ ಅಹರ್ಯೆ
ತನ್ನ ಪತಿಯಾದ ಗೌತಮನಿಂದ ಸ್ವೀಕೃತಳಾದ ಬಳಿಕ ಹೇಳಿಕೊಳ್ಳುವ
ವಾಕ್ಯ ಗಳು ಇವು:
ಬಯಸುವೆ ನಾ ಗಂಗೆಯ ತೆರ
ಪದದಿ ಕರಗಿ ಹಗಿಯೆ,
ಇಲ್ಲದಿರಲು ಹಗುರವಾಗಿ
ಕಂಪಿನಂತೆ ಸರಿಯೆ,
ಮೈೈಯೆ ಭಾರ ಮನಷಹೆ ಭಾರ
ಬದುಕೆ ಭಾರವೆಂಬ
ಆಸರೆಯೇ ಬೇಡದಂಧ
ನಲವೆ ನನ್ನ ತುಂಬ.
(ಪು. ೧೧೩-೧೧೪)
ಇಲ್ಲಿ ಅವಳ ಹರ್ಷಕ್ಕೆ ಕಾರಣ (ಎಂದರೆ, ವಿಭಾವ) ಏನೆಂಬುದು ಕಥನ
ಸಂದರ್ಭದಿಂದ ಅಗಲೇ ನಮಗೆ ಗೊತ್ತಾಗಿದೆ; ಈ ಮಾತುಗಳು ಹರ್ಷದ
ಅನುಭಾವ. ಇವನ್ನು ಕೇಳುತ್ತಿದ್ದ ಹಾಗೆಯೇ ಅನಳ ಚಿತ್ತ ವೃತ್ತಿಯ
ಅರಿವು ನಮಗುಂಟಾಗಿ, ತನ್ಮಯತೆಯಿಂದ ಹರ್ಷ ಭಾವವನ್ನು ನಾವು
ಆಸ್ವಾದಿಸುತ್ತೇವೆ.
' ಇನ್ನು ಸಂಲಕ್ಷ್ಮಕ್ರಮ ಅಥವಾ ಅನುರಣನದ್ವನಿ ಎಂಬ ಬಗೆಯ
ವಿಚಾರ ಘಂಟೆಯನ್ನು ಬಾರಿಸಿದ ಮೇಲೆ ಅಲೆಯಲೆಯಾಗಿ ಹೊರಡುವ
ನಾದದಂತೆ ವಾಚ್ಯಾರ್ಥಪ್ರ ತೀತಿಯಾದ ಬಳಿಕ ವ್ಯಂಗ್ಯವು ಇಲ್ಲಿ ಅನುರಣನ
ವಾಗುವುದರಿಂದ " ಅನುರಣನ `' ಧ್ವನಿಯೆ.೦ದೂ, ವ್ಯಂಜಕ ವ್ಯಂಗ್ಯ ಗಳಿಗೆ
ಇರುವ ಪ ಪೌರ್ಯಾಪರ್ಯವು ಇಲ್ಲ ಚೂರ ಸಂಲಕ್ಷ ಶ್ರಮ
ಷೆಂದೂ ಹೆಸರು ಕೊಟ್ಟಿದ್ದಾರೆ. ಇದು ಸಂಲಕ್ಷ್ಯಕ್ರಮವಾದ ಜಿ ರಸ
ಧ್ಯನಿಯಲ್ಲ ; ವಸ್ತುಧ್ವನಿಯೋ ಅಲಂಕಾರದ್ದೆನಿಯೋ ಆಗಿರುತ್ತದೆ.
ಇಲ್ಲೂ ಮುಖ್ಯವಾದ ಎರಡು ಒಳಭೇದಗಳಿವೆ. ಮೊದಲನೆಯದು
«" ತಬ್ಧಶಕ್ತಿಮೂಲದ್ವನಿ''. ಇದಕ್ಕೆ ಒಂದು ಉದಾಹರಣಿಯನ್ನು ಮೊದಲು
೧೬. ಧ್ವನಿಪ್ರಭೇದಗಳು ೨೫೯
ಕೊಟ್ಟು ಆ ಬಳಿಕ ಅದರ ವಿಚಾರವನ್ನು ಬೆಳಸುವುದು ಉತ್ತಮ.
"" ಅಂಬಿಕಾತನಯದತ,'' ರ " ಮೂವತ್ತುಮೂರು ಕೋಟಿ' ಎಂಬ ಕವನ
ದಲ್ಲ, ಭರತಮಾತೆ ಕೆಲಸಕ್ಕೆ ಬಾರದ ಕೋಟ್ಯಂತರ ಮಕ್ಕಳನ್ನು ಹಡೆದ
ತನ್ನ ದುಃಖವನ್ನು ತೋಡಿಕೊಳ್ಳುತ್ತಾ ಪೀಗೆ ಹೇಳುತ್ತಾಳೆ:
ಮೂವತ್ತುಮೂರು ಕೋಟೀ ಮೂವತು ಮೂರು ಕೋಟ್ |
ಬಯಕೆಗಳು ಬಸಿರುಗಳು ಹಡೆದದ್ದು ಹಿಂಗಿದ್ದು
ಮೂವತ್ತುಮುರು ಕೋಟಿ |
ಸೂಲಗಳು
ಮೂವತ್ತುಮೂರು ಕೋಟಿ |! (ಗರಿ, ಪು. ೫೧)
ಇಲ್ಲಿ " ಸೂಲಗಳು '' ಎಂಬ ಶಬ್ದವನ್ನು ಗಮನಿಸಿ. ಇದು ಹೆತ್ತ ತಾಯಿಯ
ಮಾತಾಗಿರುವುದರಿ೦ದಲೂ ಬಯಕೆ, ಬಸಿರು ಮೊದಲಾದವುಗಳ ಸಾಹ
ಚರ್ಯವಿರುವುದರಿಂದಲೂ, "` ಸೂಲಗಳು `` ಬಂಬುದಕ್ಕೆ "«ಹೆ೦ಗಗಳು ''
ಎ೦ದು ಧಟ್ಟನೆ ಅರ್ಥವಾಗುತ್ತದೆ. ಮೂವತ್ತುಮೂರು ಕೋಟಿ ಮಕ್ಕ
ಳನ್ನು ನಾನು ಹೆತ್ತೆನು ಎಂಬುದೇ ಇಲ್ಲಿಯ ವಾಚ್ಯಾರ್ಥ. ಹೀಗೆ ಪ್ರಕ
ರಣಬಲದಿಂದ ತಬ್ದದ ವಾಚ್ಯಾರ್ಧವು ನಿಯಂತ್ರಿ ತವಾದ ಬಳಿಕ, ಸೂಲ
ಗಳು ಎಂಬ ಶಬ್ದಕ್ಕಿರುವ ಇನ್ನೊ೦ದು ಅರ್ಥ--*" ಶೂಲಗಳು'' ಎಂಬ
ಅರ್ಥ --ಸ್ಫುರಿಸುತ್ತದೆ ; ಆದರೆ ಅಲ್ಲಿಗೇ ಅದು ನಿಂತಿದ್ದರೆ ಸಂದರ್ಭಕ್ಕೆ
ಅಸಂಬದ್ಧ ವಾಗುತ್ತಿತ್ತು. ಇದನ್ನು ತಪ್ಪಿಸಲು “ ಹೆರಿಗೆ ಗಳು'' ಎಂಬ
ವಾಚ್ಯಾರ್ಥಕ್ಕೂ "*ತೂಲಗಳು'' ಎಂಬುದಕ್ಕೂ ಇಲ್ಲಿ ಸಾದೃಶ್ಯಸಂಬಂಧವು
ಏರ್ಪಟ್ಟು x ಈ ಮೂವತ್ತುಮೂರು ಕೋಟಿ ಹೆನಿಗೆಗಳೂ ಹೆತ್ತ ತಾಯಿ
ಯನ್ನು ಇರಿಯುವ ಮೂವತ್ತುಮೂರು ಕೋಟಿ ತೂಲಗಳು ಎಂಬ ರೂಪ
ಕಾಲಂಕಾರಧ್ವನಿ ಇಲ್ಲಿ ಪ್ರ ತೀತವಾಗುತ್ತದೆ, ಇದು ಪದ್ಯದ ವಿಷಯಕ್ಕೆ
ಎಷ್ಟು ಚೆನ್ನಾಗಿ ಹೊಂದುತ್ತದೆ ; ಮನಸ್ಸು ಇದರ ಭಾವನೆಯಲ್ಲೇ ಹೇಗೆ
ಮಗ್ನವಾಗುತ್ತದೆ ಎಂಬುದನ್ನು ಭಾವಕರು ಬಲ್ಲರು. ”
ಇಷ್ಟು ಅರ್ಥಪ್ರತೀತಿಗೂ « ಸೂಲ'' ಎಂಬ ಶಬ್ದದ ಪ್ರಯೋ
ಗಮೇ ಆಧಾರ; ಇದರ ಬದಲು, ಇದೇ ವಾಚ್ಯಾರ್ಥವುಳ್ಳ “ ಹೆರಿಗೆ”
ಅಥವಾ " ಪ್ರಸವ ' ಎಂಬ ಶಬ್ದವನ್ನು ಉಪಯೋಗಿಸಿದ್ದರೆ ಈ ರೂಪಕ
ಸೂಲ ಎಂಬುದು ಉತ್ತರಕರ್ನಾಟಕದ ಪ್ರಯೋಗ ; ಮೈಸೂರಿನವರು
""ಸೂಲು'' ಎನ್ನುತ್ತಾರೆ. '"ಶೂಲ'' ಎಂಬುದಕ್ಕೆ "" ಸೂಲ'' ಎಂದು ತದ್ಭವಪಾಗು
ತ್ತದೆ. ಈ ಎರಡೂ ಬೇರೆ ಬೇರೆ ಶಬ್ಧಗಳಾದರೂ ಇವೆರಡರ ಉಚ್ಚಾರಣಿ ಒಂದೇ ಆಗಿರು
ವುದರಿಂದ ಮೇಲೆ ನಿರೂಪಿಸಿರುವ ಧ್ವನಿಗೆ ಅವಕಾಶವುಂಟಾಯಿತು.
17-B
೨೬೦ ಭಾರತೀಯ ಕಾವ್ಯಮಾಮಾಂಸೆ
ಧ್ವನಿ ಖಂಡಿತವಾಗಿಯೂ ಹೊರಡುತ್ತಿರಲಿಲ್ಲ; ಎಂದರೆ ಇಲ್ಲಿ ಶಬ್ಧವು
« ಪರಿವೃತ್ತಿ'' ಯನ್ನು ಸಹಿಸುವುದಿಲ್ಲ. ಪೀಗೆ ಇಲ್ಲ ಒಂದು ವಿಶಿಷ್ಟ
ತಬ್ದದ ಪ್ರಯೋಗವೇ ಧ್ವನಿಗೆ ಮುಖ್ಯಾಧಾರವಾಗಿರುವುದರಿಂದ ಇದಕ್ಕೆ
4 ಶಬ್ಬಶಕ್ತಿಮೂಲಧ್ಯನಿ ” ಯೆಂಬ ಹೆಸರನ್ನು ಕೊಟ್ಟಿ ದ್ದಾ ರೆ. ಅರ್ಥದ
ಅಪೇಕ್ಷೆಯೇ ಇಲ್ಲದೆ ಕೇವಲ ಶಬ್ದದಿಂದ ಇಷ್ಟು Gd ರ್ರ ಶೀತವಾಯಿ
ತೆಂದು ಸರ್ವಾತ್ಮನಾ ಇದರ ತಾತ್ಪರ್ಯವಲ್ಲ. ಶಬ್ದ್ಬಪ್ರಯೋಗವು ಇಲ್ಲಿ
ಮೂಲಾಧಾರ; ಈ ಶಬ್ಧವಿಶೇಷದಿಂದ ಹೊರಡುವ ಅರ್ಥವು ವ್ಯಂಗ್ಯಕ್ಕೆ
ದಾರಿಮಾಡಿಕೊಡುತ್ತದೆ ಎಂದಿಪ್ಟೇ ಇಲ್ಲಿಯ ಅಭಿಪ್ರಾಯ.
ಒಂದು ಶಬ್ದಕ್ಕೆ ಅನೇಸ ಅರ್ಥಗಳು ತೋರುನ ಕಡೆ ಇರತಕ್ಕದ್ದು
ಶ್ಲೇಷಾಲಂಕಾರವಲ್ಲವೆ? ಶಬ್ಬಶಕ್ತಿಮೂಲಧ್ಯನಿಯೆಂಬುದನ್ನು ಕಲ್ಪಿಸಿದರೆ
ಶ್ಲೇಷದ ರಾಜ್ಯವನ್ನೇ ಅಪಹರಿಸಿದಂತಾಗುವುದಿಲ್ಲವೆ ?--ಈ ಪ್ರಶ್ನೆ ಇ
ಏಳುವುದು ಸಹಜ. ಇದನ್ನು ಆನಂದವಧನನನೇ ಎತ್ತಿ ವಿಷೆಯಸ
ಪ್ಕಾರಮಾಡಿದ್ದನು. ಆದರೆ ವಿಕಲ್ಪಗಳೆಲ್ಲವೂ ಪರಿಹಾರವಾಗಲಿಲ್ಲ ಅಭಿ
ನವಗುಪ್ತನು ಹಲವು ವಿವರಣಿಗಳನ್ನು ಅನುವಾದಮಾಡುತ್ತಾನೆ. ಈಚೆಗೆ
ಮಮ್ಮಟ, ಅಪ್ಪಯ್ಯದೀಕ್ಷಿತ, ಜಗನ್ನಾ ಥಪಂಡಿತ ಹೊದಲಾದವರು ತಮ್ಮ
ತಮ್ಮ ಅಭಿಪ್ರಾಯಗಳನ್ನು ನಿರೂಪಿಸುತ್ತಾರೆ. ಈ ಜಟಿಲ ಸಮಸ್ಯೆಗೆ ಇಲ್ಲ
ಕೈಹಾಕದೆ, ಸ್ಥೂಲದೃಪ್ಪಿಯಿಂದ ಒಂದೆರಡು ಮಾತನ್ನು ಮಾತ್ರ ಹೇಳ
ಬಹುದು. ಶ್ಲೇಷದಲ್ಲ ಶಬ್ದಕ್ಕೆ ಅನೇಕಾರ್ಥಗಳುಂಟು ಎಂಬುದು ನಿಜ ;
ಅದರೆ ಆ ಅರ್ಥಗಳಲ್ಲಿ ಇದೊಂದೇ ವಾಚ್ಯ ಎಂದು ನಿಯಂತ್ರಿಸುವುದಕ್ಕೆ
ಯಾವ ಸಂದರ್ಭ ಸಾಮಗ್ರಿಯೂ ಇಲ್ಲದಿರುವ ಕಾರಣ ಎಲ್ಲವ?” ವಾಚ
ಆಗುತ್ತವೆ. ಶಬ್ದಶಕ್ಕಿ ಮೂಲಧ್ಯನಿಯಲ್ಲಾದರೆ ಪ್ರಕರಣದಿಗಳ ಬಲ
ದಿಂದ ವಾಚ್ನಾ ್ಯರ್ಥವು ನಿಯಮಿತವಾಗುತ್ತದೆ. ಆ ಬಳಿಕ ಇನ್ನೊ ೦ದು
ಲ್ಲ
ಣಿ
ಸರಿ
10 ಅನೇಕಾರ್ಥಗಳನ್ನು ಹೇಳಬಲ್ಲ ಶಬ್ದವನ್ನು ವಾಕ್ಯದಲ್ಲಿ ಪ್ರಯೋಗಿಸಿದಾಗ ಆದರ
ಅರ್ಥವನ್ನು ನಿಯಮನ ಮಾಡತಕ್ಕದ್ದು ಯಾವುದೆಂಯುದಕೆ. ಉತ್ತರವಾಗಿ ಮಮ್ಮಟನು ಈ
ಕಾರಿಕೆಗಳನ್ನು ಉದಾಹರಿಸುತ್ತಾ'ೆ ;
ಸಂಯೋಗೋ ವಿಪ್ರಯೋಗಶ್ಚ ಸಾಹಚರ್ಯಂ ವಿರೋಧಿತಾ।
ಅರ್ಥಃ ಪ್ರಕರಣಂ ಲಿಂಗಂ ಶೆಬ್ಧಸ್ಕಾನ್ಯಸ್ಯ ಸನ್ನಿಧಿಃ ॥
ಸಾಮರ್ಥ್ಯಮಾಚಿತೀ ದೇಶಃ ಕಾಲೋ ವ್ಯಕ್ತಿಃ ಸ್ಪರಾದಯಃ।
ಶಬ್ದಾರ್ಥಸ್ಕಾನವಚ್ಚೇದೇೇ ವಿಶೇಶ ಸ್ಕೃತಿಹೇತವಃ ॥
(ಕಾವ್ಯಪ್ರಕಾಶ, ,. ೧೪ ವೃತ್ತಿ)
ಕನ್ನಡದಲ್ಲ ಐದರ ವಿವರಣಿ " ಶಾರದಾವಿಲಾಸ ', ಪು. ೧೧೩-೧೪ ರಲ್ಲಿ ಬಂದಿದೆ.
೧೬. ಧ್ವನಿಪ್ರಭೇದಗಳು ೨೬೧
ಅರ್ಥವು ಸ್ಫರಿಸುತ್ತದೆ; ಇದನ್ನು ವ್ಯಂಗ್ಯವೆಂದೇ ಕರೆಯಬೇಕು. ಈ
ಸಂದರ್ಭದಲ್ಲಿ ಧ್ಯನ್ಯಾಲ್ಲೋಕಕಾರನು- ತಬ ಶಕ್ತಿಯಿಂದ ಪ್ರತೀತವಾಗ
ತಕ್ಕ ಅರ್ಥವು "" ಅಲಂಕಾರ'' ಧ್ವನಿಯಾದರೆ ಮಾತ್ರ ಅದನ್ನು ಧ್ವನಿ
ಯೆಂದು ಗಣಿಸಬೇಕು; ಮಿಕ್ಕದ್ದೆಲ್ಲವೂ ಶ್ಲೇಷದ ವಿಷಯ ಎನ್ನುತ್ತಾನೆ.
ಅವನ ಮತದಂತೆ “ ಸೂಲಗಳು ಮೂವತ್ತುಮೂರು ಕೋಟಿ” ಎಂಬುದು
ಈ ಬಗೆಯ ಧ್ವನಿಗೇ ಉದಾಹರಣ. ಮಮ್ಮ ಟನ ಅಭಿಪ್ರಾಯದಲ್ಲಿ ಶಬ್ದ
ತಕ್ತಿಮೂಲವು ಯಾವಾಗಲೂ ಅಲಂಕಾರಧ್ಯನಿಯೇ ಆಗಿರಬೇಕಾಗಿಲ್ಲ;
ಅದು ವಸ್ತುಧ್ಯನಿಯೂ ಆಗಬಹುದು.
ಶ್ಲೇಷದ ತೊಡಕಿಗೆ ಸಿಕ್ಕದೆಯೇ ಶಬ್ಧಶಕ್ತಿಮೂಲಧ್ಯನಿಯನ್ನು
ಕಾಣುವುದು ಅಸಾಧ್ಯವಲ್ಲ "ಗದಾಯುದ್ಧ 'ದ ಒಂದು ವಾಕ್ಯವನ್ನು
ನೋಡೋಣ. ದುರ್ಕೋಧನನು ವೈಶಂಪಾಯನ ಸರೋವರದಲ್ಲಿ ಅಡಗಿ
ಕೊಂಡಿದ್ದಾಗ, ಭೀಮನು ಊರುಭಂಗಾದಿಗಳನ್ನು ಮಾಡುವ ತನ್ನ
ಪ್ರತಿಜ್ಞೆ ಪೂರ್ಣವಾಗಲಿಲ್ಲವೆಂದು ಚಡಪಡಿಸಿ ಅವನನ್ನು ಹುಡುಕಿಕೊಂಡು
ಹೊರಡುತ್ತಾನೆ. ಆ ಪ್ರಸಂಗದ ನಿರೂಪೆಣಿಯಲ್ಲಿ '...... ಆ ಕುರುದರೆ
ಯೊಳ್ ಕುರುಪತಿಯನಜಿಸಿದಂ ಪವನಸುತಂ'' ಎಂಬುದು ರನ್ನನ ಮಾತು
(11, ೨೭). ಇಲ್ಲ ಕುರುಧರೆ, ಕುರುಪತಿ ಎಂಬ ಶಬ್ದಗಳ ವ್ಯಂಜಕಶಕ್ತಿ
ಅತಿತಯವಾಗಿದೆ. ಕುರುರಾಜ್ಯದ ಅಧೀಶ್ಚರನನ್ನು ಅವನ ಆಳಿಕೆಯ
ಭೂಮಿಯಲ್ಲೇ ಭೀಮನು ಅಲ್ಲಿ ಕಾಣದೆ, ಇಲ್ಲಿ ಕಾಣದೆ ಹುಡುಕಾಡ
ಜೇಕಾಗಿ ಬಂತು. ಕುರುಪತಿಗೆ ಇದಕ್ಕಿಂತ ಪೀನದಶೆ ಯಾವುದುಂಟು !
" ಕುರುಪತಿ'` ಎಂಬುದಕ್ಕೆ ಪರ್ಯಾಯಪದವಾದ ದುಗ್ಯೋಧನ ಎಂಬುದನ್ನು
ಉಪಯೋಗಿಸಿದ್ಧರೆ ವಾಚ್ಯಾರ್ಥವೇನೋ ಒಂದೇ ಸಮನಾಗಿರುತ್ತಿತ್ತು ;
ಆದರೆ ಇಲ್ಲಿಯ ಧ್ವನಿಯೆಲ್ಲ ಪೂರ್ಣವಾಗಿ ನಪ್ಪವಾಗುತ್ತಿತ್ತು. ಇಲ್ಲಿ
ಶ್ಲ (ಪಕ್ಕೆ ಯಾವ ಅವಕಾಶವೂ ಇಲ್ಲ. ಆದರೂ ಧ್ವನಿ ಶಬ್ದಶಕ್ತಿಯಿಂದಲ್ಲೇ
ಪ್ರಕಾಶಗೊಂಡಿದೆ,
ಅನುರಣನ ಧ್ವನಿಯ ಇನ್ನೊಂದು ವಿಭಾಗವೇ ಅರ್ಥಶಕ್ತಿಮೂಲ
ಥ್ವನಿ.. ಇದರಲ್ಲಿ ಕಾವ್ಯಮಾರ್ಗದ ದೃಷ್ಟಿಯಿಂದ ಮುಖ್ಯವಾದ ಎರಡು
ಬಗೆಗಳನ್ನು ಮಾತ್ರ ಇಲ್ಲಿ ಗಮನಿಸೋಣ :
೨೬೨ ಭಾರತೀಯ ಕಾಷ್ಯಮಾಮಾಣಸೆ
ಈ ಕೆಳಗಿನದು " ಗಾಥಾಸಪ್ತತತಿ'ಯ ಒಂದು ಪದ್ಯ. ಮೂಲ
ಪ್ರಾಕೃತದಲ್ಲದೆ ; ಅದರ ಸಂಸ್ಕೃತ ಚ್ಯಾಯೆ ಹೀಗೆ:
ಕಪ್ಪ೦ ನ ಯಾಮಿ ಕ್ಷೇತ್ರಂ ಖಾದ್ಯತಾಂ ಶಾಲಿರಪಿ ಕೀರನಿವಹೈಃ |
ಜಾನಂತ್ಕೋಪಿ ಪಧಿಕಾಃ ಪೃಚ್ಛ ೦ತಿ ಪುನಃಪುಮೋ ಮಾರ್ಗಂ ॥ ॥!
[ಅಯ್ಯೋ, ಗದ್ದೆಗೆ ನಾನು ಹೋಗೆನು, ನೆಲ್ಲನು
ತಿಂದುಕೊಳ್ಳಲ ಗಿಳಿವಿಂಡು ;
ಆರಿತರಿತೂ ದಾರಿಹೋಕರು ದಾರಿಯ
ಬೆಸಗೊಳುವರು.ಮತ್ತೆ ಮತ್ತೆ.|
ಹೀಗೆಂದು ಬಹುಶಃ ತನ್ನ ತಾಯಿಯೊಂದಿಗೆ ಹೇಳಿ, ಗದ್ದೆಗೆ ಹೋಗಲೊಳ್ಗಿ
ನೆಂದು ಹಠ ಪಿಡಿಯುವ ಹುಡುಗಿ ಮುಗ್ಗೆ ಯಾಗಿರುವುದು ಅಸೆಂಭವವಲ್ಲ.
ತನಗೇ ಬಹುಶಃ ಅರಿವಿಲ್ಲದ ಅವಳ ಸೌಂದರ್ಯದ ಆಕರ್ಷಣ ಶಕ್ತಿ ಈ
ಮಾತನ್ನು ಕೇಳುವವರಿಗೆ ಥಟ್ಟನೆ ಸುರಿಸುತ್ತದೆ. ದಾರಿಯನ್ನು ತಿಳಿದೂ
ತಿಳಿದೂ ಪಥಿಕರು ಇವಳನ್ನು ಕೇಳುವುದು ಒಂದು ನೆವ ಮಾತ್ರ ; ಅವರಿಗೆ
ಬೇಕಾದದ್ದು ದಾರಿಯಲ್ಲ; ಈ ಚೆಲುವೆಯ ಸಮಾಪದಲ್ಲ ಸಾಧ್ಯವಾದಷ್ಟು
ಹೊತ್ತು ನಿಂತು ಅವಳೊಂದಿಗೆ ನಾಲ್ಕು ಮಾತಾಡುವುದು.
ಮುಂದಿನ ಪದ್ಯ ಕನ್ನಡದ ಜೋಗುಳದ ಹಾಡುಗಳಲ್ಲಿ ಒಂದು :
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ 1
ಕೂಸು ಕಂದಯ್ಯ ಒಳಹೊರಗೆ. ಆಡಿದರೆ
ಬೀಸಣಿಗೆ ಗಾಳಿ ಸುಳಿದಾವು.
ಕಾಲುಬಂದ ಮಗು ಮನೆಯ ತುಂಬ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುಳಿದಾ
ಡುತ್ತಿದ್ದರೆ ಬೀಸಣಿಗೆಯಿಂದ ಗಾಳಿ ಹಾಕಿದಂತೆ ಮನೆಯೊಳಗೆಲ್ಲ ಗಾಳಿ
ಹರಿದಾಡುತ್ತದೆ. ಕವಿಯ ಪ್ರತಿಭೆ ಮಗುವಿನ ಚರೈಯನ್ನು ಇಲ್ಲ ಎಷ್ಟು
ಚೆನ್ನಾಗಿ ರೂಪಿಸಿದೆ ! ಮಗು ಸಂತತವಾಗಿ ಪಿ೦ದಕ್ಕೂ ಮುಂದಕ್ಕೂ ಸುಳಿ
ದಾಡುವುದರ ಸೊಗಸೂ, ಇದರಿಂದ ಮನೆಯವರಿಗೆ ಒದಗುವ ಸುಖಾನು
ಭವವೂ ಇಲ್ಲಿ ಸುವ್ಯಕ್ತ ವಾಗುತ್ತವೆ.
ಈ ಎರಡು ನಿದರ್ಶನಗಳಲ್ಲೂ ವಾಚ್ಯಾರ್ಥಗಳು ವ್ಯಂಜಕಗಳಾ
ಗಿದ್ದರೂ ಇವುಗಳಿಗೆ ಮುಖ್ಯವಾದ ವ್ಯತ್ಯಾಸವೊಂದುಂಟು. ಮೊದಲನೆ
1 ಅವ್ಟೋ ಣ ಆಮಿ ಛೆತ್ತಂ ಬಜ್ಜಉ ಸಾಲೀ ವಿ ಕೀರಣಿವಹೇಹಿಂ |
ಜಾಣಂತಾ ಅವಿ ಪಹಿಅ ಪುಚ್ಛಂತಿ ಪುಣೋಪುಣೋ ಮಗ್ಗ೦ |
(ವೇಬರ್ ಅವರ ಸಂಸ್ಕರಣ, ಪದ್ಯ ೮.೨೨೧)
೧೬. ಧ್ವನಿಪ್ತಥೇದಗಳು ೨೬೩
ಯದು ಲೋಕದಲ್ಲಿ ನಡೆದದ್ದರ ಅಥವಾ ನಡೆಯಬಹುದಾದದ್ದರ ಯಥಾ
ವೆತ್ತಾದ ನಿರೂಪಣೆ. ಅದೇ ಸ್ವತಃ ವ್ಯಂಜಕವಾಗಿರುವುದರಿಂದ ಅದಕ್ಕೆ
ಯಾವ ಬಣ್ಣವನ್ನೂ ಕವಿ ಕಟ್ಟದೆ ಇದ್ದುದನ್ನು ಇದ್ದಂತೆಯೇ ವರದಿ ಮಾಡಿ
ದ್ದಾನೆ. ಈ ಬಗೆಯ ವಸ್ತುವಿನ ವೃ೦ಜಕತ್ಯವನ್ನು ಮನಗಂಡು ವರ್ಣನೆಗೆ
ಆರಿಸಿಕೊಂಡದ್ದೇ ಇಲ್ಲಿ ಕವಿಯ ಕಾರ್ಯ. ಎರಡನೆಯದರಲ್ಲಿ ಹಾಗಲ್ಲ.
"" ಮಗು ಮನೆಯ ತುಂಬ ನಿಲುವಿಲ್ಲದೆ ಓಡಾಡುತ್ತದೆ'' ಎಂದಿಪ್ಪನ್ನು
ಮಾತ್ರ ಹೇಳಿದ್ದರೆ ಖಂಡಿತವಾಗಿ ವ್ಯಂಗ್ಯಪ್ರತೀತಿ ಉಂಟಾಗುತ್ತಿರಲಿಲ್ಲ.
ಈ ಪದ್ಯದಲ್ಲಿ ಮಗುವಿನ ಚಲನೆ ಕವಿಪ್ರತಿಭಾಜನ್ಯವಾದ ಉಕ್ತಿಯಲ್ಲಿ
ರಮ್ಯವಾಗಿ ರೂಪುಗೊಂಡಿದೆ. ಈ ಎರಡು ಬಗೆಯ ಧ್ಯನಿಗಳಿಗೂ ಆಲಂ
ಕಾರಿಕರು ಕ್ರಮವಾಗಿ " ಸೈತಃಸಂಭವಿ”, « ಪ್ರೌಢೋಕ್ತಿನಿಪ್ಪನ್ನ ''
ಎಂದು ಹೆಸರು ಕೊಟ್ಟಿದ್ದಾರೆ. ಲೋಕದಲ್ಲೇ ಗೋಚರವಾಗುವುದನ್ನು
ಇದ್ದಂತೆಯೇ ಕಾಣಿಸುವ ಸ್ವಾಭಾವಿಕ ಮಾರ್ಗ ಮೊದಲನೆಯದರದು ;
ವಸ್ತುಸ್ಥಿತಿಯನ್ನು ರೂಪಾಂತರಗೊಳಿಸಿ ಸೊಗಸನ್ನು ಸೃಷ್ಟಿಸುವ ಪ್ರೌಢ
ಮಾರ್ಗ ಎರಡನೆಯದರದು. ಎರಡೂ ಕವಿಪ್ರತಿಭೆಯಿಂದಲ್ಲೇ ಹೊಮ್ಮಿ
ದ್ರರೂ ಒಂದರಲ್ಲಿ ದೃಷ್ಟಿ ಪ್ರಧಾನ ; ಇನ್ನೊಂದರಲ್ಲಿ ಸೃಷ್ಟಿ ಪ್ರಧಾನ ;
ಎರಡರಿಂದಲೂ ಧ್ವನಿ ಹೊರಡುತ್ತದೆ.
ವೃಂಗ್ಯಪ್ರಭೇದಗಳು ಅನೇಕ; ಅವಕ್ಕೆ ಅಂಗವಾಗಿ ಬರುವ
ವಾಚ್ಯಾಲಂಕಾರಾದಿಗಳ ಪ್ರಭೇದಗಳು ಅನೇಕ. ಇವುಗಳಿಗೆ ಬೇರೆ ಬೇರೆ
ರೀತಿಯಲ್ಲಿ ಪರಸ್ಪರ ಸಂಬಂಧವನ್ನು ಕಲ್ಪಿಸಿ ನೋಡಿದರೆ ಪ್ರಭೇದಗಳ
ಸಂಖ್ಯೆ ಅನಂತವಾಗುತ್ತದೆ :
ತಸ್ಯಾಂಗಾನಾಂ ಪ್ರಭೇದಾ ಯೇ ಪ್ರಭೇದಾ ಸ್ವಗತಾಶ್ಚ ಯೆ |
ತೇಷಾಮಾನ೦ಶ್ಯಮನ್ಯೋನ್ಯಸಂಬ೦ಧಪರಿಕಲ್ಪನೇ ॥
ಬಜ್ ಜು.
ಇವನ್ನು ಲೆಕ್ಕಿಸುವುದೇ ಅಸದಳ; ಇನ್ನು ನಿವರ್ತಿಸುವುದೆಲ್ಲಿ ಬಂತು!
ಇದರ ಮೇಲೆ ಈ ಪರಿಗಣನೆಯಲ್ಲಿ ಒಂದು ಎಲ್ಲೆಯನ್ನು ದಾಟಿದರೆ ಕಾವ್ಯ
ರಹಸ್ಯ ವಿಚಾರಕ್ಕಿಂತ ಬುದ್ಧಿಕೌಶಲ ಪ್ರದರ್ಶನವೇ ಮೇಲುಗೈ ಯಾಗು
ತ್ತದೆ. ಈ ಕಾರ್ಯವನ್ನು ಇಲ್ಲಿಗೇ ಬಿಟ್ಟು ಇನ್ನೊಂದು ದೃಷ್ಟಿಯಿಂದ
ಧ್ವನಿಯ ವ್ಯಾಪಕತ್ಯವನ್ನು ಪರಿಶೀಲಿಸುವುದು ಹೆಚ್ಚು ಪ್ರಯೋಜನಕಾರಿ ;
ಅದು ಮುಂದಿನ ಅಧ್ಯಾಯದ ವಿಷಯ.
ವಾರಾ ಬಜ
ಲಕಿ ವ್ಯಂಜಕಸಾಮಗ್ರಿ
ವರ್ಣಗಳಿಂದ ಹಿಡಿದು ಪೂರ್ಣ ಪ್ರಬಂಧದವರೆಗೆ ಕಾವ್ಯತರೀರದ
ಪ್ರತಿಯೊಂದು ಅಂಶವೂ ವ್ಯ೦ಜಕವಾಗಬಲ್ಲುದು; ಹಾಗೆ ಆದಾಗಲೇ ಕಾವ್ಯ
ಸೌಂದರ್ಯವು ಉತ್ಕರ್ಷದ ಎಲ್ಲೆ ಯನ್ನು ಮುಟ್ಟುವುದು ಎಂದು ಹಿಂದೆಯೇ
ಗಮನಿಸಿದ್ದೇಪೆ. ಈ ವ್ಯ೦ಜಕಗಳು ಹೇಗೆ ಸೊಗಸನ್ನು ಕಾಣಿಸುವುಷೆಂಬು
ದನ್ನು ಕೆಲಪುಮಟ್ಟಿಗೆ ಇಲ್ಲಿ ವಿಚಾರ ಮಾಡೋಣ.
ಅರ್ಥವನ್ನು ತಡೆಯಿಲ್ಲದೆ ಕ್ಲೇಶವಿಲ್ಲದೆ ಸಮರ್ಪಿಸುವುದೇ ಕಾವ್ಯ
ದಲ್ಲಿ ತಬ್ದದ ಕಾರ್ಯ. ಶಬ್ದವು ವರ್ಣಾತ್ಮಕವಾದದ್ದು. ಕೇವಲ ವರ್ಣಕ್ಕೆ
ವಾಚಕತ್ವವಿಲ್ಲದಿದ್ದರೂ, ಎಂದರೆ ಈ ವರ್ಣಕ್ಕೆ ಇದು ವಾಚ್ಯಾರ್ಥ ಎಂಬ
ಸಂಕೇತ ಎಲ್ಲಿಯೂ ಇಲ್ಲದಿದ್ದರೂ, ಅದಕ್ಕೆ ವ್ಯಂಜಕತ್ಯವೇನೋ ಉಂಟು.
ಕೆಲವು ವರ್ಣಗಳು--ಉದಾಹರಣಿಗೆ, ಗ, ಜ, ದ, ಬ ಮೊದಲಾದ ಸರಳ
ಅಲ್ಪಪ್ರಾಣಗಳೂ, ನ, ಮ ಮೊದಲಾದ ಅನುನಾಪಿಕಗಳೂೊ, ಯ, ವಲ
ಮೊದಲಾದ ಅಂತಸ್ಥಗಳೂ--ಕೇಳಲು ಮೃದುವಾಗಿರುತ್ತವೆ; ಬ, ಛ, ಫ,
ಟವರ್ಗದ ವರ್ಣಗಳು, ಶ, ಷ ಮೊದಲಾದವು, ಅದರಲ್ಲೂ ರೇಫಡೊಡನೆ
ಬಂದಿದ್ದರೆ, ಪರುಪವಾಗಿರುತ್ತವೆ. ಇದು ಅನುಭವಸಿದ್ಧವಾದ ವಿಷಯ.
ಮೃದುವಾದ ಅರ್ಥವನ್ನು ಅಭಿವ್ಮಕ್ತ ಪಡಿಸದೇಕಾದ ಸಂದರ್ಭದಲ್ಲಿ ವರ್ಣ
ರಚನೆಯೂ ಮೃದುವಾಗಿದ್ದರೆ ಅರ್ಥಪ್ರತೀತಿಗೆ ವಿಶೇಷ ಸಹಾಯವಾಗು
ತ್ತದೆ. ಅದರ ಬದಲು, ಕಟುವಾದ ವರ್ಣವೋ ವರ್ಣಸಮುದಾಯವೋ
ನಡುನಡುವೆ. ಬಂದರೆ ಪಾಯಸದಲ್ಲಿ ಕಣ್ಣು ಸಿಕ್ಕಿದಂತಾಗಿ ಆಸ್ಚಾದಕ್ಕೆ
ಭಂಗಬರುತ್ತದೆ. ವರ್ಣರಚನೆಯೊಂದರಿಂದಲ್ಲೇ ರಸಾಭಿವ್ಯಕ್ತಿ ಯುಂಟಾ
ಗುವುಡೆಂದು ಈ ಮಾತಿನ ತಾತ್ಪ ರ್ಯವಲ್ಲ. ವಿಭಾವಾನುಭಾವಾದಿಗಳ
ಸಮುಚಿತ ವಿನ್ಯಾಸವೇ ರಸಕ್ಕೆ ವ್ಯಂಜಕ. ಈ ವಿಭಾವಾನುಭಾವಗಳು
ಅನುಗುಣವಾದ ವರ್ಣರಚನೆಯುಳ್ಳ ಶಬ್ದದಿಂದ ಪ್ರತೀತವಾದರೆ, ರಸ
ಪ್ರತೀತಿ ಇನ್ನಷ್ಟು ಬೇಗ, ಚೆನ್ನಾಗಿ ಉಂಟಾಗುತ್ತದೆ. ವರ್ಣಗಳನ್ನು
ವ್ಯಂಜಕಗಳೆಂದು ಕರೆಯುವುದು. ಈ | ದೃಷ್ಠಿ ಯಿಂದ. ಇದರ ಮೇಲೆ,
ಕೇವಲ ಸ್ವರವಿನ್ಯಾಸವೇ ಗಾಯನದಲ್ಲಿ ರಸಾಸ್ವಾದವನ್ನು ಉಂಟುಮಾಡು
ವಂತೆ, ಕಿವಿಗೆ ಮೃದುವೆಂದು ಅಥವಾ ಪರುಪಪೆಂದು ತೋರುವ
೨೬೪
೧೬. ವ್ಯಂಜಕ ಸಾಮಗ್ರಿ ೨೬೫:
ವರ್ಣವಿನ್ಮಾಸವು ಕೂಡ ರಸಕ್ಕೆ ದಾರಿ ತೆರೆಯಬಹುದು 1 ವರ್ಣವಿನ್ಯಾಸದ
ವ್ಯಂಜಕತ್ವಕ್ಕೆ ಒಂದೆರಡು ಉದಾಹರಣಿಗಳನ್ನು ಈಗ ನೋಡೋಣ :
ಶಾಕುಂತಲ ನಾಟಕದ ನಾಲ್ಕನೆಯ ಅಂಕದಲ್ಲಿ ಅತಿರಮ್ಯವಾದ ನಾಲ್ಕು
ಪದ್ಯಗಳಲ್ಲಿ ಒಂದು ಬಸವಪ್ಪಶಾಸ್ತ್ರಿಗಳ ಅನುವಾದದಲ್ಲಿ ಪೀಗೆ ಬಂದದೆ :
ಜಲವನದಾವಳೀಂಟಳೆರೆದಲ್ಲದೆ ನಿಮ್ಮಯ ಪಾತೆಗ೦ಬುವಂ
ತಳಿರ್ಗಳ ಕೊಯ್ಯಳಾವಳೊಲವಿಂ ಮಿಗೆ ಸಿಂಗರದಾಸೆಯುಳ್ಳೊ ಡಂ।
ಅಲರ್ಗಳ ತಾಳೆ ನೀವು ಮೊದಲುತ್ಸವವಾಂತಪಳಾವಳಾ ಶಕುಂ.
ತಳೆ ಪಶಿಸದ್ಮಕ್ಕೆದಿದಪಳಾಕೆಗನುಜ್ಹೆಯನೀವುದೆಲ್ಲರುಂ ॥ (ಪ. ೮೮)
ಇಲ್ಲಿ ಶಕುಂತಲೆಯ ಸ್ನೇಹ ತುಂಬಿದ ಮೃದುಸ್ವಭಾವದ ನೆನಪಿನಿಂದ
ಈ ವಿಯೋಗಕಾಲದಲ್ಲಿ ಕರುಣರಸ ಪೋಷಣಿಯಾಗುವುದಿರಲಿ; ಅದು
ಸಹೃದಯರಿಗೆ ಆನುಭವವಿದಿತವಾದದ್ದು. ಈ ಕೋಮಲ ಕರುಣವನ್ನು
ಇಲ್ಲಿಯ ವರ್ಣರಚನೆ ಕೂಡ ವ್ಯಂಜಿಸುವುದೆಂಬುದನ್ನು ಗಮನಿಸಬೇಕು.
ಕಿವಿಗೆ ಲಲಿತವೆನ್ನಿಸುವ ವರ್ಣಗಳ್ಳೇ ಇಲ್ಲಿ ಹೇರಳವಾಗಿವೆ. ಕರ್ಕತ
ಸೆಂಯೋಗಗಳು ಇಲ್ಲವೇ ಇಲ್ಲ. ಎರಡುಮೂರನೆಯ ಚರಣಗಳ ಆದಿ
ಯಲ್ಲ ತಳಿರ್ಗಳ, ಅಲರ್ಗಳ ಎಂಬ ಕಡೆ ದ್ವಿತ್ವವನ್ನು ತೇಲಿಸುವುದ
ರಿಂದಲೂ ಒಂದು ಮೃದುವಾದ ಬಳುಕು ಬರುತ್ತದೆ. ಇದೆಲ್ಲಕ್ಕೂ ಶ್ರುತಿ
ಯಂತೆ ಚಂಪಕಮಾಲಾವೃತ್ತದ ಲಲಿತಲಯ.
ಇದಕ್ಕೆ ದುರುದಾಹರಣಿಯಾಗಿ, ಪರುಪವರ್ಣವಿನ್ಯಾಸವು ರೌದ್ರ
ಸವನ್ನು ಹೇಗೆ ಪೋಷಿಸುವುದೆಂಬುದನ್ನು ತೋರಿಸಲು "ಪಂಪ
ಭಾರತ 'ದಿಂದ ಒಂದು ಪದ್ಯವನ್ನು ಕೊಡಬಹುದು. ಕೌರವ ಸಭೆಯಲ್ಲಿ
ದ್ರೌಪದಿಗಾದ ಅವಮಾನವನ್ನು ನೋಡಿ ಸ್ಥರಿಸಲಾರದೆ ಭೀಮನು
ಪ.ತಿಜೆ ಮಾಡುತಿ ದಾನೆ:
ಬಖ್‌ನw ೨.0
1 ಅಭಿನವಗುಪ್ತನ ಕೆಲವು ಪಾಕ್ಕಗಳನ್ನು ಈ ಸಂದರ್ಭದಲ್ಲಿ ಗಮನಿಸಬಹುದು :
"" ಸ್ಟುಭಾವತೋ ಹಿ ಕೇಡನ ವರ್ಣಾಃ ಸಂತಾಪಯುಂತೀವ ನಿಕ್ಕಂತಂತೀವ ರೇಫ
ಕಕಾರಾದಾಯ ಇವ ಪರುಪವೃತ್ತಿಪೂರ್ವಕಾಃ, ಅವ್ಯೇತು ನಿರ್ವಾಪಯಂತೀವ ಉಪನಾಗರಿ
ಕೋಟಿತಾಃ. ಲೋಕಗೋಚರ ಏವಾಯಮರ್ಥಃ ಸ್ಲಸಂವೇದ್ಯೋಪಿ.'' (ಅಭಿನವಭಾರತೀ,
11, ಪು. ೩೩೯)
೨೬೬ ಭಾರತೀಯ ಕಾವ್ಯಮಾಮಾಂಸೆ
ಕುಡಿವೆಂ ದುಶ್ಕಾಸನೋರಃಸ್ಥ ಳಮನಗಲೆ ಪೋಟಣ್ಟಾರ್ದು ಕೆನ್ನೆತ್ತರಂ ಪೊ
ಕ್ಕುಡಿವೆ೦ ಪಿ೦ಗಾಕ್ಕನೂರುದ್ವ್ಯಯಮನುರುಗದಾಪಾತದಿಂ ನುಚ್ಚು ನೂಜಿ |
ಗೆ.ಡೆಷೆಂ ತದ್ರತ್ನರಶ್ಮಿ ಪ್ರಕಟಮಕುಟಮಂ ನಂಬು ನಂಜಿನ್ನ ಕಣ್ಣಿ೦
ಕಿಡಿಯು೦ ಕೆಂಡ ಗಳುಂ ಸೂಸಿದಪುವಹಿತರಂ ನೋಡಿ ಪಂಕೇಜವಕ್ಕೆ ॥
(vii. 54)
ಇಲ್ಲಿ ಟ ಡ ಮೊದಲಾದ ಮೂರ್ಧನ್ಯಗಳೇ ಪ್ರಚುರವಾಗಿವೆ; ಸಂಯುಕ್ತಾ
ಕ್ಷರಗಳು ಹಲವು ಬಂದಿವೆ ; ನಡುನಡುವೆ ಸಮಾಸಗಳೂ ಉಂಟು. ಜೊತೆಗೆ
ಮಹಾಸ್ರಗೃರಾವೃತ್ಮದ ನಡೆ ಬೇರೆ. ಇದೆಲ್ಲದರಿಂದ ರಸದ ಪರುಷ
ಸ್ನಭಾವವು ಚೆನ್ನಾಗಿ ಪ್ರತೀತವಾಗುತ್ತದೆ.
ಮೇಲಿನ ಎರಡು ಕಡೆಗಳಲ್ಲೂ ವರ್ಣರಚನೆಯ ವಿಷಯವನ್ನು
ಮುಗಿಸಿದ ಬಳಿಕ ವೃತ್ತಗಳ ವ್ಯಂಜಕತ್ಯವನ್ನೂ ಕುರಿತು ಒಂದೊಂದು
ಮಾತನ್ನು ಹೇಳಿದೆವು. ಪದ್ಯದ ಓಟ, ಚೆರಣವಿನ್ಯಾಸ ಹೊದಲಾದವು ಒಳಗಿನ
ಭಾವವನ್ನು ಅತಿಶಯವಾಗಿ ಸೂಚಿಸಬಲ್ಲುವು. ಇದನ್ನು ಕವಿಗಳು ಬಲ್ಲರು,
ಲಾಕ್ಷಣಿಕರೂ ಅಲ್ಲಲ್ಲಿ ಹೇಳಿರುವುದುಂಟು. ಕನ್ನಡದ ಹೊಸ ಛಂದಸ್ಸಿ
ನಲ್ಲಂತೂ ವ್ಯಂಜಕತ್ಯಕ್ಕೆ ವಿಶೇಷ ಅವಕಾಶವಿದೆ. ತನ್ನ ಉದ್ದೇಶಕ್ಕೆ
ತಕ್ಕಂತೆ ಪಾದ, ಗಣ, ಪ್ರಾಸ, ಯತಿ, ಗುರು, ಲಘು ಒಲ್ಲವನ್ನೂ ತವಿ
ಅಳವಡಿಸಿಕೊಳ್ಳಬಹುದು. ಆದರೆ ಇದರ ವಿಸ್ತಾರವಾದ ಪ್ರತಿಪಾದನೆಗೆ
ಛಂದಶ್ಶಾಸ್ತ್ರದ ಗ್ರಂಥವೇ ಸರಿಯಾದ ಸೃಳವಂದ ಕಾರಣ ಇಲ್ಲ ಜೆಳಸುವ
ಗೋಜಿಗೆ ಹೋಗಿಲ್ಲ. ಗಮನಾರ್ಹವಾದ ಒಂದೇ ಒಂದು ನಿದರ್ಶನವನ್ನು
ಮಾತ್ರ ಕೆಳಗೆ ಕೊಡುತ್ತೇವೆ:
ಆದಿಯಲ್ಲಿ ಒಂದು ಲಘುವಿದ್ದು ಅದರ ಮುಂದೆ ಗುರು ಬರುವಂಥ
ಮಾತ್ರಾಗಣಗಳ ಪ್ರಯೋಗವು (ಡಾ ರಲು ಬದಲಾ ದದ) ಕನ್ನಡ
ಛಂದಸ್ಸಿನಲ್ಲಿ ಅಪ್ರಚುರ; ಇವನ್ನು ತಂದರೆ ಯತಿ ಸಾಮಾನ್ಯವಾಗಿ ಕೆಡು
ತ್ತದೆ. ಆದರೆ ತೆಂಕಣ ಗಾಳಿಯಾಟವನ್ನು ವರ್ಣಿಸುವ ಈ ಪದ್ಯವನ್ನು
ನೋಡಿ ಕ
೧೬. ವ್ಯಂಜಕ ಸಾಮಗ್ರಿ ೨೬೭
ಬೊಬ್ಬೆಯ ಹಬ್ಬಿಸಿ, ಒ೦ದೇ ಬಾರಿಗೆ
ಉಬ್ಬರ ಎಬ್ಬಿಸಿ ಕಡಲನ ನೀರಿಗೆ,
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿ ಸಿ
ಅಬ್ಬ ರದಲಿ ಭೋರ್ ಭೋರೆನೆ ಗುಮ್ಮಿಸಿ,
ಬರುತದೆ | ಮ್ಳೈತೋರದೆ ಬರುತದೆ | ಅದೆ:
ಇಲ್ಲಿ «" ದಡಕ್ಕೆ ” ಎಂಬುದು ವಿಷಮಗಣ, ಆದರೆ ಅದರ ಪ್ರಯೋಗ
ದಿಂದ, ಗಾಳಿ ತೆರೆಗಳನ್ನು ಅಟ್ಟಿ ಕೊಂಡು ಬಂದು ಸಮುದ್ರದ ಕರೆಗೆ
ಅಪ್ಪಳಿಸುವ ರಭಸ ಚೆನ್ನಾಗಿ ವ್ಯಕ್ತವಾಗುವುದಲ್ಲವೆ !
ಈಗ ಶಬ್ದದ ಕಡೆಗೆ ತಿರುಗೋಣ. ಭಾಷೆಯಲ್ಲಿ ಪರ್ಯಾಯಪದ
ಗಳುಂಟೆಂದು ನಮ್ಮ ಸಾಮಾನ್ಯ ಭಾವನೆ. ಗಾತ್ರಗಾತ್ರವಾಗಿ ಮೇಜು
ಗಳನ್ನೂ ಬೀರುಗಳನ್ನೂ ಅಲಂಕರಿಸುವ ಕೋಶ ನಿಘಂಟುಗಳು ಇದನ್ನೇ
ಬಲಪಡಿಸುತ್ತವೆ. ಆದರೆ ಸಜೀವ ವ್ಯವಹಾರವನ್ನುಳ್ಳ ಭಾಷೆಯಲ್ಲಿ
ಸಮಾನಪದಗಳು ನಿಜವಾಗಿಯೂ ಇರುವುದಿಲ್ಲ. ಎರಡು ಶಬ್ಧ ಗಳ
ವಾಚ್ಯಾರ್ಥ ಒಂದೇ ಆಗಿದ್ದರೂ ಅವುಗಳ ವ್ಯಂಜಕತ್ಯ ಮಾತ್ರ ಬೇರೆಬೇರೆ
ಯಾಗಿರುತ್ತಡೆ. ಇದನ್ನು ನಿದರ್ಶಿಸುವುದು ಅತಿ ಸುಲಭ.
" ಕುಮಾರ ಸಂಭವ'ದಲ್ಲ ಗಿರಿಜೆ ಈತ್ಯರನನ್ನೇ ಪತಿಯಾಗಿ ಪಡೆ
ಯುವ ಅನನ್ಯಾಹೇಕ್ಷೆಯಿಂದ ಅತಿ ಕಠಿನವಾದ ತಪಸ್ಸನ್ನು ಕೈಕೊಂಡಿರು
ತ್ತಾಳೆ, ಒಂದು ದಿನ ಅವಳಲ್ಲಗೆ ತೇಜಸ್ವಿಯಾದ ಒಬ್ಬ ಬ್ರಹ್ಮಚಾರಿ
ಬಂದು, ಈ ಸುಕುಮಾರಿ ಇಂಧ ಉಗ್ರ ತಪಸ್ಸಿನಿಂದ ದೇಹವನ್ನು ಏಕೆ
ಶೋಪಿಸುವಳೆಂದು ಕೇಳಿ, ಸಖಿಯರಿಂದ ತಿಳಿದುಕೊಳ್ಳುತ್ತಾನೆ ಕ ರುದ್ರನನ್ನು
ಈಕೆ ಬಯಸುವುದು ಅನುಚಿತವೆಂದು ಪ್ರತಿಪಾದನೆ ಮಾಡುತ್ತಾನೆ. ಆ
ಸಂದರ್ಭದ ಒಂದು ಪದ್ಯ ಇದು:
ದ್ವಯ೦ ಗತಂ ಸಂಪ್ರತಿ ಶೋಚನೀಯತಂ
ಸಮಾಗಮಪ್ರಾರ್ಥನಖಾ ಕಪಾಲಿನಃ | (ಪಿನಾಕಿನಃ-ಪಾರಾಂತರ)
ಕಲಾ ಚ ಸಾ ಕಾಂಶಿಮತೀ ಕಲಾವತಃ
ತೃೈಮಸ್ಯ ಲೋಕಸ್ಯ ಚ ನೇತ್ರಕೌಮುದೀ ॥ (ಇ, ೭೧)
2 ಐದು ಪಂಜೆ ಮಂಗೇಶರಾಯರ ಕೃತಿಯ ಒಂದು ನುಡಿ. ("ಕನ್ನಡದ ಬಾವುಟ,
ಎರಡನೆಯ ಮುದ್ರಣ, ಪು. ೧೧೧)
೨೬೮ ಭಾರತೀಯ ಕಾವ್ಯಮಿಾಮಾಂಸೆ
«" ಕಪೂಲಿಯ (ಪಿನಾಕಿಯ) ಸಮಾಗಮವನ್ನು ಬಯಸಿ ಈಗ ಎರಡು
ವಸ್ತುಗಳು ಶೋಚನೀಯ ಸ್ಥಿತಿಗೆ ಬಂದುವು: ಕಲಾಪೂರ್ಣ [ನಾದ
ಚಂದ್ರ]ನ ಕಾಂತಿಮಯವಾದ ಆ ಲೇಖೆಯೊಂದು, ಈ ಲೋಕದ ಕಣ್ಣುಗಳ
ಬೆಳುದಿಂಗಳಾದ ನೀನೊಬ್ಬಳು.'' 3
ಇಲ್ಲಿ ""ಪಿನಾಕಿನಃ'', « ಕಪಾಲಿನಃ'' ಎಂದು ಎರಡು ಪಾಠ
ಗಳಿವೆ; ಎರಡೂ ಪರಮೇಶ್ವರನನ್ನೇ ಹೇಳತಕ್ಕವು; ಛಂದಸ್ಸಿಗೂ
ಹೊಂದುತ್ತವೆ. ಆದರೆ ವ್ಯಂಜಕತ್ಯದ ದೃಷ್ಟಿಯಿಂದ ಎರಡಕ್ಕೂ ಎಂಥ
ಅಂತರ! ಇಲ್ಲಿ ಕಪಟಬ್ರಹ್ಮ ಚಾರಿ ಈಶ್ವರನನ್ನು ಉಪಹಾಸಮಾಡಿ, ಅವನ
ವಿಷಯದಲ್ಲಿ ಜುಗುಪ್ಪೆಯುಂಟಾಗುವಂತೆ ಮಾತಾಡುತ್ತಿದ್ದಾನೆ. ಶಬ್ದ
ನಿಪ್ಪತ್ತಿಬಲದಿ೦ದ "" ಕಪಾಲಧಾರಿ-ತರೆಯೋಡುಗಳನ್ನು ಧರಿಸಿದವನು''
ಎಂಬ ಅರ್ಥವನ್ನು ಕೊಟ್ಟು ಜುಗುಪ್ಪೆಗೆ ವ್ಯಂಜಕವಾಗುವ 4 ಕಪಾಲ”
೦ಬ ಶಬ್ದವೇ ಇಲ್ಲಗೆ ಅತ್ಯುಚಿತ. ಪಿನಾಕಿ”, . « ಪಿನಾಕಪಾಣಿ ''-
ಈ ಬಗೆಯ ಶಬ್ದಗಳಿಗೆ ವ್ಯಂಜಕತ್ವ ಬರುವುದು ಬೇರೆಯ ಸನ್ನಿವೇಶಗಳಲ್ಲಿ.
3ಈ ಪದ್ಯದ ಸ್ವಾರಸ್ಯವನ್ನು ಕುಂತಕನು ಮನೋಹರವಾಗಿ ವಿಪರಿಸಿದ್ದಾನೆ. ಅದನ್ನು
ಇಲ್ಲ ಅನುವಾದ ಐಕಡುತ್ತೇವೆ : "" ಪರಮೇಶ್ವರವಾಚಕವಾದ ಸಾವಿರ ಶಬ್ದಗಳಿದ್ದರೂ
ಇಬ್ಬ " ಕಪಾಲಿನಃ '' ಎಂಬ ಬೀಭತ್ಸ [ರಸದ] ಅಲಂಬನ ವಿಭಾವವನ್ನು ಹೇಳುವ ಶಬ್ದ
ಪನ್ನು ಜುಗುಪ್ಪಾಸ್ಪದವಾಗುವಂತೆ ಪ್ರಯೋಗಿಸಿರುವುದರಿಂದ ಅತಿಶಯ ವಾದ ವಾಚಕವಕ ತೆ
ಉಂಟಾಗಿದೆ. “ಸಂಪ್ರತಿ”, " ದ್ವಯಂ ''. -ಐವೂ ಅತೀವರಮಣೀಯ. ಏಕೆಂದರೆ
ದುರ್ವ್ಯಸನದೂಷಿತವೆಂದು ಹಿಂದೆ ಅದೊಂದನ್ನೇ [ =ಚದ್ರಕಲೆಯೊಂದೆನ್ನೇ] ಕುರಿತು
ಅಳಬೇಕಾಗಿತು, ; ಈಗ ನೀನು ಕೂಡ ಆ ಚಂದ್ರಕಲೆಯ ಅನುಚಿತೋದ್ಯಮದಲ್ಲಿ ಸಹಾಯ
ಮಾಡಲು ತೊಡಗಿದ್ದೀಯೆ ಎಂದು ಇಲ್ಲಿ ಉಪಹಾನ ಮಾಡಲಾಗಿದೆ. "" ಪ್ರಾರ್ಥನಾ '' ಎಂಬ
ಶಬ್ದವೂ ಅತಿಶಯ ರಮಣೀಯ ; ಏಕೆಂದರೆ, ಕಾಕತಾಳೀಯಯೋಗದಿಂದ ಆ ಸಮಾಗಮ
ವೊದಗಿದ್ದರೆ ಒಂದುವೇಳೆ ದೂರು ತರುತ್ತಿರಲಲ್ಲ. [ತಾನಾಗಿಯೇ] ಅದನ್ನು ಬಯಸಿ.
ಬೇಡುವುದೆಂದರೆ ತುಂಬ ಅಪಖ್ಯಾತಿಯ ಕಳಂಕವನ್ನುಂಟುಮಾಡತಕ್ಕದ್ದು, “ಸಾಚ ಟೆ
"ತ್ವಂ ಚ'' ಎಂಬುವು ಈ ಎರಡೂ ಲಾವಣ್ಯಾತಿಶ ಸ:ದಲ್ಲ ಒಂದರೊಡನೊಂದು ಸ್ಪರ್ಧಿಸು
ತ್ತಿರುವುವೆಂಬ ಅನುಭವದ ವಿಷಯವನ್ನು ಹೇಳಲು ಬಂದಿವೆ, "" ಕಲಾವತಃ'', " ಕಾಂತಿ
ಮತೀ '' ಎಂಬಲ್ಲಿ "" -ಉಳ್ಳ'' ಎಂಬ ಅರ್ಥದ ಪ್ರತ್ಯಯವು ಎರಡರ ಪ್ರಶಂಸೆಯನ್ನೇ ಸೂಚಿ
ಸುತ್ತದೆ. ಹೀಗೆ, ಇಲ್ಲ ಯಾವ ಒಂದು ಶಬ್ದದ ಅರ್ಥವನ್ನು ಕೂಡ ಬೇರೆ ಶಬ್ಧದಿಂದ
ತಿಳಿಸಲು ಸಾಧ್ಯವಿಲ್ಲ'' (" ಪಕ್ರೋಕ್ತಿಜೀವಿತ ', ಪು. ೧೭)--ಕುಂತಕನ ಈ ಅರ್ಥವಿವರಣಿ
ನೇರವಾಗಿ ವ್ಯಂಜನಾಮಾರ್ಗವನ್ನೇ ಅನ:ಸರಿಸತಕ್ಕದ್ದೆ. ಬುದರಲ್ಲ ಯಾವ ಸಂಶಯವೂ
ಇಲ್ಲ. " ವಾಚಕವಕ್ರತೆ '' ಎಂಬ ಪಾರಿಭಾಷಿಕ ಶಬ್ಧವನ್ನು ಬಿಟ್ಟರೆ, ಮಿಕ್ಕದ್ದೆಲ್ಲಾ ಅಭಿನವ
ಗುಪ್ತನ ಲೇಜನಿಯಿಂದಲೇ ಹೊರಡಬಹುದಾಗಿತ್ತು.
೧೬. ವ್ಯಂಜಕ ಸಾಮಗ್ರಿ ೨೬೯
ರನ್ನನ " ಗದಾಯುದ್ಧ 'ದಲ್ಲ ಒಂದುಕಡೆ ಇದು ಉತ್ತಮವಾಗಿ ಬಂದಿದೆ.
ಶ್ಮಶಾನಭೂಮಿಯಾಗಿ ಪರಿಣಮಿಸಿದ್ದ ರಣರಂಗದಲ್ಲಿ ದುರ್ಯೋಧನನು
ನಡೆದು ಬರುತ್ತಾ, ದ್ರೋಣಾಚಾರ್ಯರ ಶವವನ್ನು ಕಂಡು,
ಅಖುಯೆಮೆ ಬಿಲ್ಲ ಬನ್ಮಣಕೆ ಗಾಂಡಿವಿಯಲ್ಲು ಪಿನಾಕಪಾಣಿಯುಂ
ವೆಹೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕೆ (iv. ೪೯)
ಅಂದು ಮೊದಲಾಗಿ ಹೇಳುವನು. ಇಲ್ಲ ದುರ್ಯೋಧನನು ಡ್ರೋಣನ
ಧನುರ್ಧಾ ರಿತ್ಯವನ್ನು ಹೊಗಳುತ್ತಿದ್ದಾನೆ; ಈತನನ್ನು ಎದುರಿಸಲು
ಅರ್ಜುನ ಎಷ್ಟು ಮಾತ್ರದವನು; ಸಾಕ್ಷಾತ್ ಈಶ್ವರನ ಕೈಯಲ್ಲೇ ಸಾಗದು
ಎನ್ನುತ್ತಿದ್ದಾನೆ. ಇಲ್ಲ *" ಗಾಂಡಿವಿ'', « ಪಿನಾಕಪಾಣಿ'' ಎಂಬ ಶೌರ್ಯ
ಸೂಚಕವಾದ ತಬ್ದಗಳೇ ಅತ್ಯುಚಿತ ; ಇವುಗಳಿಂದ ದ್ರೋಣನ ಮಹತ್ವ್ವವು
ಮತ್ತಷ್ಟು ಕಳೆಗೂಡುತ್ತದೆ '
ಈಗ ವ್ಯಾಸ "ಮಹಾಭಾರತ'ದ ಕಡೆಗೆ ಒಮ್ಮೆ ತಿರುಗೋಣ.
ಯುಧಿಷ್ಠಿರನು ಜೂಜಿನಲ್ಲಿ ದ್ರಿ ಪದಿಯನ್ನು ಸೋತ ಬಳಿಕ, ಅವಳನ್ನು
ಸಭೆಗೆ ಎಳೆತರಲು .ದುಶ್ಮಾಸನನು ಅಂತಃಪುರಕ್ಕೆ ಬರುತ್ತಾನೆ ಅವನ
ಒರಟು ಮಾತುಗಳಿಗೆ ದ್ರೌಪದಿ ಹೆದರಿ ಧಿಗ್ಗನೆದ್ದು ಧೃತರಾಪ್ವನ ರಾಣಿಯ
ಸದವರಿದ್ದ ಬಳಿಗೆ ಓಡಿಹೋಗುತ್ತಾಳೆ ;
ತತೋ ಜಷೇನಾಭಿಸಸಾರ ರೋಪಾತ್
ದುಶ್ಯಾಸನನ್ರಾಮಭಿಗರ್ಜಮಾನಃ |
ದೀರ್ಪೇಷು ನೀಲೇಪ್ವಹ ಚೋರ್ಮಿಮತ್ತು
ಜಗ್ರಾಹ ಕೇಶೇಷು ನರೇಂದ್ರಪತ್ನೀಂ ॥
(ಸಭಾಪರ್ವ, ೬೦. ೨೨)
1 'ಕುಮಾರಸಂಭವದಲ್ಲ ಕಾಳಿದಾಸನ "" ಪಿನಾಕಪಾಣಿ '' ಎಂಬ ಶಬ್ಧವನ್ನು ಧ್ವನಿ
ಪೂರ್ಣವಾಗಿ ಪ್ರಯೋಗಿಸಿದ್ದಾನೆ. ಇಂದ್ರನಿಗೆ ಮನ್ಮಥನು ಭರವಸೆ ಕೊಡುತ್ತಾ
"" ಕುರ್ಯಾಂ ಹರಸ್ಕ್ಯಾಪಿ ಪಿನಾಕಪಣಣಿಃ ಧ್ರೊರ್ಯಚ್ಛುತಿಂ ಕೇ ಮಮ ಧನ್ಪಿನೋಸನ್ಯೇ ''
(iii, ೧೨) ಎನ್ನುವನು. ಇಲ್ಲ ಇನ್ನೊಂದು ಸ್ವಾರಸ್ಯವುಂಟು. ತನ್ನ ಮೇಲೆ ಪಪ್ಪಬಾಣ
ವನ್ನು ಬಿಡಲು ಸಜ್ಜಾಗಿದ್ದ ಮದನನಿಗೆ ಎದುರಾಗಿ ಹರನು ಈ ಪಿನಾಕವನ್ನು ಬಾಗಿಸಲಲ್ಲ;
ಹಾಗಾಗಿದ್ದರೆ ಮನ್ಮಥನು ಅವನನ್ನು ಗೆಲ್ಲಲು ಅಗುತ್ತಿತ್ತೋ ಏನೋ. ಹರನು ಮೂರನೆಯ
ಕಣ್ಣನ್ನು ಬಿಟ್ಟನು, ಇವನು ಭಸ್ಮವಾದನು.
೨೭೦ ಭಾರತೀಯ ಕಾವೃಮಾಮಾಂಸೆ
"" ಆಗ ದುಶ್ಶಾಸನನು ರೋಪದಿಂದ ಅಬ್ಬರಿಸುತ್ತಾ ಅವಳ ಹಿಂದೆಯೇ
ವೇಗವಾಗಿ ಸಾಗಿದನು; ನೀಳವಾದ ನೀಲವಾದ ಅಲೆಯಲೆಯಾದ ಕುರುಳು
ಗಳಿಗೆ ಕೈಹಾಕಿ ಆ ನರೇಂದ್ರ ಪತ್ನಿಯನ್ನು ತುಡುಕಿದನು.''
ಇಲ್ಲ "" ನರೇಂದ್ರಪತ್ನೀಂ'' ಎಂಬ ಪದವನ್ನು ಗಮನಿಸಬೇಕು.
ರಾಜಶ್ರೇಷ್ಕರ ಪತ್ನಿ ಈಕೆ; ಇವಳ ಮುಡಿ ಸನ್ನು ಈ ದುಪ್ಪನು ತುಡುಕಿ
ದನೇ ! ಇವನ ಧಾರ್ಜ್ಯ್ಯವೆಷ್ಟು ? ಇಂಥ ಪ್ರಭಾವಶಾಲಿಗಳಾದ ಪತಿಗಳಿ
ದೃರೂ ದ್ರೌಪದಿಗೆ ಈ ದುರವಸ್ಥೆ ತಟ್ಟಬಹುದೇ!-ಎಂಬ ಅರ್ಥ
ಪರಂಪರೆಯೇ ಈ ಪದದ ಪ್ರಯೋಗದಿಂದ ಹೊಳೆಯುತ್ತದೆ. (ಇನ್ನು,
" ಕ್ಷೇಶೇಷು '' ಎಂದು ಸುಮ್ಮನೆ ಹೇಳಿಬಿತದೆ "" ನೀಳವಾದ, ನೀಲವಾದ,
ಅಲೆಯಲೆಯಾದ '' ಎಂದು ವರ್ಣಿಸಿ, ಅಂಥ ಸೊಬಗಿನ ಕೇಶಪಾತಶಕ್ಕೆ
ಈಗ ಒದಗಿದ ದುರ್ಗತಿಯನ್ನು ಶ್ರೋತೃಗಳಿಗೆ ಮನಮುಟ್ಟಿ ಸುವುದಂತೂ
ಮಹಾಕವಿಯ ಪ್ರತಿಭೆಗೆ ಮಾತ್ರ ಸಾಧ್ಯವಾಗುವ ಕಾರ್ಯ.)
ಕಪಾಲಿ, ಪಿನಾಕಿ, ಗಾಂಡಿವಿ, ನರೇಂದ ಪತ್ನಿ ಇಲ್ಲೆಲ್ಲಾ ಶಬ್ದ ದ
ನಿಷ್ಪತ್ತಿ ಧ್ಯನಿಗೆ ಸಹಾಯಕವಾಗಿದೆ. ಪರ್ಯಾಯಪದಗಳು ಇರುವ ಕಡೆ
ಗಳಲ್ಲೆಲ್ಲಾ ಕವಿ ಅವುಗಳ «ನಿರುಕ್ತಿ'' ಯನ್ನು ಗಮನಿಸಿ ಪ್ರಯೋಗಮಾಡ
ತಕ್ಕದು ಅತ್ಯಗತ್ಯ.
ಪರ್ಯಾಯಪದಗಳನ್ನು ಕುರಿತು ವಿಚಾರಮಾಡುವಾಗ, ಹೇಳದೇಕಾದ
ಆಂಶ ಇನ್ನೊಂದಿದೆ. ಹಿಂದೆ ಕೊಟ್ಟಿರುವ ಉದಾಹರಣಿಗಳಲ್ಲಿ ವ್ಯ೦ಜಕತ್ವ
ಸ್ಪಪ್ಪವಾಗಿ ಗೋಚರವಾಗುತ್ತದೆ; ಇಲ್ಲಲ್ಲಾ ರಸಕ್ಕೆ ಅನುಗುಣವಾಗಿರು
ವುದೇ ತಬ್ದದ ವ್ಯಂಜಕತ್ವ ; ಇದೇ ಅದರ ಚಾರುತ್ಯ. ಇನ್ನು ಕೆಲವುವೇಳೆ
ಇದು ಸ್ಫುಟವಾಗದಿದ್ದರೂ, ಈ ಶಬ್ದ ಚೆನ್ನಾಗಿದೆ, ಈ ಶಬ್ದ ಚೆನ್ನಾಗಿಲ್ಲ
ಎಂದು ಹೇಳುವುದುಂಟು. ಉದಾಹರಣಿಗೆ, "“ಎಲರು”, "ಗಾಳಿ '' ಎಂಬ
ಪರ್ಯಾಯಪದಗಳನ್ನು ತೆಗೆದುಕೊಳ್ಳೋಣ. ಇವುಗಳಲ್ಲಿ “ ಎಲರು'' ಸುಂದ
ರಷೆಂದೂ "" ಗಾಳಿ'' ಅಪ್ಪು ಸೊಗಸಲ್ಲಪೆಂದೂ ತೋರಬಹುದು. ಇದಕ್ಕೆ
ಇವುಗಳ ವರ್ಣರಚನೆಯೂ ಒಂದು ಕಾರಣ; ಆದರೆ ಅದಷ್ಟೇ ಕಾರಣ
ವೆಲ್ಳ. "" ಎಲರು'' ಎಂಬುದು ಅನೇಕ ಕಾವ್ಯಗಳಲ್ಲಿ ರಸವ್ಯಂಜಕವಾದ
ಸನ್ನಿವೇಶಗಳಲ್ಲಿ ಪಿಂದಿನಿಂದ ಬಂದಿರುವುದರಿಂದ, ಆ ಸಂಸರ್ಗದ ಬಲವೇ
ಅದಕ್ಕೆ ಚಾರುತ್ವವನ್ನು ಒದಗಿಸುತ್ತದೆ; ಅದನ್ನು ಕೇಳುತ್ತಿದ್ದಹಾಗೆಯೇ
೧೭. ವ್ಯಂಜಕ ಸಾಮಗ್ರಿ ೨೭೧
ಸರಸ ಸನ್ನಿವೇಶಗಳು ಮನಸ್ಸಿಗೆ ಸುರಿಸುತ್ತವೆ. "" ಗಾಳಿ'' ಎಂಬುದು
ಅಷ್ಟರಮಟ್ಟಿಗೆ ಕಾವ್ಯಪ್ರಚುರವಲ್ಲ. ಅಲ್ಲದೆ, ಅದನ್ನು ದಿನಬಳಕೆಯ
ವ್ಯವಹಾರದಲ್ಲಿ ನೀರಸವಾದ ಅನೇಕ ಸಂದರ್ಭಗಳಲ್ಲಿ ಕೇಳಿರುವುದೇ
ಹೆಚ್ಚು. ಹೀಗಾಗಿ, ಸುಕುಮಾರ ಪ್ರಸಂಗಗಳಲ್ಲಿ "" ಗಾಳಿ ” ಗಿಂತ
" ಬಲಲರು '' ಹೆಚ್ಚು ಸಮಂಜಸವಾಗುತ್ತದೆ. ಆದರೆ, ರಭಸವನ್ನು ಸೂಚಿಸು
ವಾಗ, ಉದಾಹರಣಿಗೆ ಪ್ರಚಂಡವಾತವನ್ನು ವರ್ಣಿಸುವಾಗ , " ಗಾಳಿ''
ಎನ್ನುವುದೇ ಸುಂದರ ; ಇಲ್ಲಿ "" ಎಲರು” ಎ೦ದರೆ ನಗೆಗೇಡಾಗುತ್ತದೆ.;
ಮೇಲಿನ ನಿರೂಪಣಿಯಿಂದ, ಒಂದೊಂದು ತಬ್ದವೂ ಒಂದು ರಸಕ್ಕೆ
ಮಾಸಲು ಎಂಬ ಅಭಿಪ್ರಾಯವನ್ನು ಮಾತ್ರ ಹೊಂದಕೂಡದು. ಅಂಥ
ಬಚಿತವಾದ ವಿಭಾಗ ಎಲ್ಲಿಯೂ ಇಲ್ಲ. ಸಂದರ್ಭಾದಿಗಳನ್ನು ಗಮನಿ
ಸಿಯೇ ವ್ಯ೦ಜಕತ್ಯವನ್ನು ನಿರ್ಣಯಿಸಬೇಕು. ಒಂದೇ ಶಬ್ಧವು ಬೇರೆ ಬೇರೆ
ಸನ್ನಿವೇಶಗಳಲ್ಲಿ ಬೇರೆ ಬೇರೆ ರಸಭಾವಗಳಿಗೆ ಪೋಷಕವಾಗಬಲ್ಲುದು ಈ
ಕೆಳಗಿನ ಎರಡು ಕಡೆಗಳಲ್ಲಿ '" ನನ್ನಿಕಾಜಿ '' (ನ ಸತ್ಯವಂತ) ಎಂಬ ಒಂದೇ
ಶಬ್ದದ ಪ್ರಯೋಗವನ್ನು ಗಮನಿಸಿ :
ಮೊದಲನೆಯದು ಪಂಪಭಾರತ ' ದಲ್ಲಿ ವನವಾಸ ದುಃಖಿತೆಯಾದ
ದ್ರೌಪದಿ ಧರ್ಮರಾಯನನ್ನು ಮೂದಲಿಸುವ ಸನ್ನಿವೇಶ. ನಕುಲ ಸಹ
ದೇವರ ದುರವಸ್ಥೆಯನ್ನು ಅವಳು ಅವನಿಗೆ ತೋರಿಸುತ್ತಿದ್ದಾಳೆ :
ಕಾಯುಕ್ಲೇಶದಿನಡವಿಯ
ಕಾಯಂ ಪಣ್ಣುಮನುದಿರ್ಪಿ ತಿ೦ದಗಲದೆ ನಿಂ. |
ದೀ ಯಮಳರಾವ ತೆಜದಿಂ
ನೋಯಿಸರೈ ನಿನ್ನ ನನ್ನಿಕಾಜನ ಮನಮಂ ॥ (vii. ೪೮)
ಇಲ್ಲಿ, ಸತ್ಯವ೦ತನೆಂಬ ಒಂದು ಹೆಸರನ್ನು ಉಳಿಸಿ ಕೊಳುವುದಕ್ಕೋಸ್ಕ ರ
ಇಷ್ಟಕ್ಕೂ ಅವಕಾಶ ಕೊಟ್ಟಿ ದ್ದೀಯೆ! ಬೆನ್ನಲ್ಲ ಬಂದ ತಮ್ಮಂದಿರ ದುರ
5 ಶಬ್ದವಿಶೇಷಾಣಾಂ ತತ್ರಾನ್ಯತ್ರ ಚ ಚಾರುತ್ತಂ ಯದ್ದಿಭಾಗೇನೋಪದರ್ಶಿತಂ
ತದಪಿ ತೈಪಾಂ ವ್ಯಂಜಕತ್ಟೇನ್ಛೊಪ ಅವಸ್ಥಿತಮಿತಿ ಅವಗಂತವ್ಯಂ. ಯತ್ಪ್ವಾಪಿ ನ ತತ್
ಸಂಪ್ರತಿ ಭಾಸತೇ ತತ್ರಾಪಿ ವ್ಯಂಜಕೇ ರಚನಾಂತರೇ ಯದ್ಭೃಪ್ಹಂ ಸೌಪ್ಪವಂ ತೇಷಾಂ
ಪ್ರವಾಹ ಪತಿತಾನಾಂ ತದೇವ ಅಭ್ಯಾಸಾದಪೋದೃತಾನಾಮಪಿ ಅವಭಾಸತೇ ಇತಿ
ಅವಸ್ಥಾತವ್ಯಂ.,,,...'' ಈ ಮೊದಲಾದ ಧ್ವನ್ಯಾಲೋಕದ ವಾಕ್ಯಗಳನ್ನೂ ಇವುಗಳ
ಮೇಲಿನ ಲೋಜನದ ವ್ಯಾಖ್ಯಾನವನ್ನೂ ಗಮನಿಸಬೇಕು (ಪು. ೧೫೯-೬೦),
೨೭೨ ಭಾರತೀಯ ಕಾವೃವಿಸಾಮಾಂಸೆ
3
“ವಸ್ಥೆ ನಿನಗೆ ಅಲ್ಪವಾಗಿ ಕಾಣಿಸಿತು. ಅಸ್ಕೋ, ನಿನ್ನ ನನ್ನಿಕಾಅತನವೆ!
"ಅದಕ್ಕೆ ಬೆಂಕಿಹಚ್ಚಲಿ |--ಎಂಬೀ ವಿಧದ ವ್ಯಂಗ್ಯವು ಹೊಳೆದು ಈ ಶಬ್ದವು
ತಿರಸ್ಕಾರಕ್ಕೆ ಪೋಷಕವಾಗುತ್ತದೆ.
ಎರಡನೆಯದು ರಾಘವಾಂಕನ " ಹೆರಿಶ್ಚಂದ್ರಕಾವ್ಯ 'ದ ಒಂದು
ಸಂದರ್ಭ. ನಡುರಾತ್ರಿ ಯಲ್ಲಿ ರೋಹಿತಾಶ್ಯನ ಶವವನ್ನು ಚಂದ್ರಮತಿ
ಹುಡುಕಿ ತಡಕಿ ಕಂಡು ಗೋಳಾಡಿದ ಬಳಿಕ ಸಂಸ್ಕಾರಕ್ಕೆ ಹೊತ್ತು ಮಾರುವು
“ದೆಂದು ಅದನ್ನು ಎತ್ತಿಕೊಂಡು ಶ್ಮಶಾನದ ಕಡೆಗೆ ಹೊರಡುತ್ತಾಳೆ :
ಇನ್ನಿನಿತಖು೨ದ ಮೇಲೆಮ್ಮೊಡೆಯನಜಲ ಬಂ
ದೆನ್ನನೊಯ್ಮದಡೆ ಬಳಿಕ ಸುಡಹಡೆ ಖೆನೆಂಬುದನು
ಡನ್ನಲ್ಲಿ ತಾನೆ ತಿಳಿದೆದ್ದು ಪುತ್ರನ ಶವವ ಹೊತ್ತು ದೆಸೆದೆಸೆಗೆ ತಿರುಗಿ!
ಮುನ್ನೆಲ್ಲರಂ ಸುಡುನ ಠಶಾವಾವುದೆ೦ದು ನೋ
ಳ್ಪವ್ನೆಗಲ ಹಲವು ಕೆಲವುರಿಯ ಬೆಳಗಂ ಕಂಡು
ನನ್ನಿಕಾಜ ೦ ಕಾವ ಕಾಡತ್ತ ನಡೆವಾಗ ಬಚ್ಟೆಯೊಳವೇವೊಗಳ್ಳೆರು ॥
(ಸಂಗ್ರಹ, vii. ೨೪)
“ಹರಿಶ್ಚಂದ್ರನು ಕಾಯುವ ಕಾಡು” ಎನ್ನೆದೆ, "" ನನ್ನಿಕಾಜಿಂ ಕಾವ ಕಾಡು”
ಎಂದು ಕವಿ ಹೇಳಿರುವುದರ ಸೊಗಸನ್ನು ಇಲ್ಲ ಲಕ್ಷಿಸದೇಕು. ಹರಿಶ್ಚಂದ್ರನ
ಸತ್ಯಸಂಧತೆಯ ಪರಮಾವಧಿಯನ್ನು ಪರೀಕ್ಷಿಸುವ ವಿಷಮಸಮಯ ಈಗ
ಒದಗಲಿದೆ. ಹೆಂಡತಿಮಕ್ಕ ಳನ್ನೂ ತನ್ನನ್ನೂ ಮಾರಿಕೊಳ್ಳುವುದು ಹೆಚ್ಚಲ್ಲ.
ತನ್ನ ಮಗನ ಶವವನ್ನು ದಹನಮಾಡಲು ಅವಕಾಶ ಕೊಡಕೂಡದ ಸಂದರ್ಭ
ಒದಗಿದಾಗ ಅವನು “ಎನುಮಾಡುವನೆಂಬುದರ ಪರೀಕ್ಷೆ ಈಗ ಆಗಲಿದೆ.
ಕಥೆಯ ಗತಿಯನ್ನು ಬಲ್ಲ ವಾಚಕರಿಗೆ ಇದೆಲ್ಲ '" ನನ್ನಿಕಾಜಿ '' ಎಂ ಬ ಶಬ್ದದ
ಪ್ರಯೋಗದಿಂದ ಹೊಳೆದು ಪ್ರಸಂಗದ ವಿಷಮಸ್ಥಿತಿ ಮನಗಾಣುತ್ತದೆ ;
ಇದರಲ್ಲಿಯೂ ಹರಿಶ್ಚಂದ್ರನು ಜಯಶಾಲಿಯಾಗುವನೆಂಬ ಸೂಚನೆಯೂ
ತೋರುತ್ತದೆ. ಈ ಶಬ್ದವನ್ನು ಪ್ರಾಸದ ನಿರ್ಬಂಧಕ್ಕಾಗಿ ಮಾತ್ರ ಕವಿ
ತಂದಿದ್ದಾನೆ ; ಇಷ್ಟೆಲ್ಲ ಅರ್ಥವನ್ನು ಆದರಲ್ಲ ಕಾಣುವುದು ಸರಿಯೆ ಎಂದು
ಯಾರಾದರೂ ಆಕ್ಷೇಪಣಿಯೆತ್ತಬಹುದು. ಆದರೆ ರಾಘವಾಂಕನು ವಿಶೇ
ಪಣ ವಿಶೇಪ್ಯಗಳನ್ನು ಅರ್ಥಪೂರ್ಣವಾಗಿ ಉಪಯೋಗಿಸುವುದರಲ್ಲಿ
ಸಮರ್ಥನೆಂಬುದನ್ನು ಅವರು ಜ್ಞಾಪಿಸಿಕೊಳ್ಳಬೇಕು. "“ ಧೈರ್ಯನಿಧಿ
೧೭. ವ್ಯಂಜಕ ಸಾಮಗ್ರಿ ೨೭೩
ಹರಿತ್ಚಂದ್ರನೈಪನು »» (ಸಂಗ್ರಹ, 11. ೨೦), ""ತೊಳಲಿದಂ ಸತ್ಯನಿಧಿ
ಭೂಪಾಲನು '' (೪॥. ೨೦), " ಬೀದಿಬೀದಿಯೊಳು ಸುಳಿದಂ ಸತ್ಯಸೆಂಪ
ನ್ನನು” (೪. ೪೮)-ಪೀಗೆ ಪಿಂದೆ ಬಂದಿರುವ ಪ್ರಯೋಗಗಳಿಂದ
ಎಎಂಚಕನ ಮನಸ್ಸು ಸಂಸ್ಕೃತವಾಗಿ ಇಲ್ಲ "" ನನ್ನಿಕಾಅ'' ಎಂಬುದರ
ವ್ಯಂಜಕತ್ವವನ್ನು ಥಟ್ಟನೆ ಅರಿತುಕೊಳ್ಳುತ್ತದೆ.
ಸಮುಚಿತವಾದ ಒಂದೇ ಶಬ್ದದ ಪ್ರಯೋಗದಿಂದ ಎಷ್ಟು ಅರ್ಥ
ಹೊಮ್ಮ ಬಹುದೆಂಬುದಕ್ಕೆ ಕನ್ನಡದ ಜನಪದಸಾಪಿತ್ಯದಿಂದ ಒಂದು ನಿದ
ರ್ತನವನ್ನು ಕೊಟ್ಟಲ್ಲದೆ ಮನಸ್ಸು ನಿಲ್ಲದು. ಹಳ್ಳಿಗರ ಹಾಡಾದರೂ ಕನ್ನಡ
ಸಾಷಿತ್ಯದ ಕಂಠಹಾರಗಳಲ್ಲೊಂದಾಗಿರುವ " ಕೆರೆಗೆ ಹಾರ' ಎಂಬ ಕೋಲಾ
ಟದ ಪದದಿಂದ ಇದನ್ನು ಉದ್ಭರಿಸುತ್ತೆ (ವೆ.« ದನ ಕರುಗಳಿಗೆ, ಜನಗಳಿಗೆ
ಉಪಯೋಗವಾಗಲೆಂದು ಕಟ್ಟಿಸಿದ ಕೆರೆಗೆ ಒಂದು ಸೇರೆಯಪ್ಪೂ ನೀರು
ಬಾರದಿರಲು, ಗೌಡನು ಹೊತ್ತಗೆ ತೆಗಿಸಿ ನೋಡುತ್ತಾನೆ; ಬಲಿ ಕೊಟ್ಟ
ಹೊರತು ನೀರು ಬೀಳುವುದಿಲ್ಲವೆ೦ದು ಉತ್ತರ ಹೊರಡುತ್ತದೆ. ಆಗ
ಸಣ್ಣ ಸೊಸೆ ಭಾಗೀರಥಿಯನ್ನು ಒಪ್ಪಿಸಿಕೊಡಬೇಕೆಂದು ಹೇಗೆ ಮಾತು
ಕಥೆ ನಡೆಯಿತು, ಆ ಧೀರೆ ಹೇಗೆ ಕೆರೆಗೆ “ಹಾರ” ವಾದಳು ಎಂಬು
ದನ್ನು ಮೂಲಕವನವನ್ನೇ ಓದಿ ಗ್ರಪಿಸಬೇಕು. ಇಷ್ಟೆಲ್ಲ ನಡೆಯುವಾಗ
ಅವಳ ಗಂಡ ಸುಮ್ಮನಿದ್ದನೆ ಎಂಬ ಪ್ರಶ್ನೆ ಬರುತ್ತದೆ. ಅವನು ದಂಡಿ
ನಲ್ಲಿದ್ದ ನು:
ಗಂಡ ಮಾದೇವರಾಯ ದಂಡಿನಾಗೈದಾನು
ದಂಡಿನಾಗೈದಾನು ಕಂಡನು ಕೆಟ್ಟಕನಸ
ಸೆಲ್ಯ ಸುಟ್ಟಾಂಗಾತು ಕೋಲು ಮುರಿದ್ದಾಂಗಾತು
ಕಟ್ಟಿಸಿದ ವಾಲೆಲ್ಲ ತಟ್ಟನೆ ಬಿದ್ದಾಂಗಾತು
ಗಂಡ ಮಾರೇ ವರಾಯ ಹತ್ತಿದ ಬತ್ತಲೆಗುದರಿ
ಹತ್ತಿದ ಬತ್ತಲೆಗುದುರಿ ಒತ್ತರ ಬಂದಾನ ಮನಿಗೆ
೪000 eee
6 « ಕನ್ನಡದ ಬಾವುಟ, ' ಎರಡನೆಯ ಮುದ್ರಣ, ಫು. ೬೯-೮೩,
7 ಹಾರ ' ಎಂಬುದು "ಅಹಾರ ' ದ ತದ್ಭಪವೆಂದು ತೋರುತ್ತದೆ ; ಇದೇ ಇಲ್ಲಿಯ
ವಾಚ್ಯಾರ್ಥ. ಐದರ ಜೊತೆಗೆ " ಕೊರಳ ಸರ, ಭೂಷಣ ' ಎಂಬ ಅರ್ಥವೂ ಸ್ಫುರಿಸಿ ಸೊಗ
ಸನ್ನು ಹೆಚ್ಚಿಸುತ್ತದೆ.
೫. ೫. 18
೨೭೪ ಭಾರತೀಯ ಕಾವ್ಯಮಾಮಾಂಸೆ
ಇವನಿಗೆ ಕನಸು ಬೀಳುವ ಬಗೆಯನ್ನು ನೋಡಿ: ಕಟ್ಟಿಸಿದ ಮಹಲೇ
ಥಟ್ಟನೆ ಬಿದ್ದಂತಾಯಿತು ! ದಾಂಪತ್ಯ ಜೀವನ ಮುರಿದುಬಿತ್ತೆಂಬುದನ್ನು
ಪರ್ಯಾಯವಾಗಿ ಇನ್ನು ಹೇಗೆ ಇಷ್ಟು ಚೆನ್ನಾಗಿ ಹೇಳಬಹುದು ! ಒಟ್ಟು
ಹಾಡನ್ನೇ ಧ್ವನಿತತ್ತ್ವದ ಎಲ್ಲ ಅಂಶಗಳಿಗೂ ನಿದರ್ಶನವಾಗಿ ಇಟ್ಟು
ಕೊಂಡು ಕಾವ್ಯದ ಸ್ವಾರಸ್ಯವನ್ನೂ ತತ್ತ್ವದ ಸ್ವಾರಸ್ಯವನ್ನೂ ಜೊತೆ
ಗೂಡಿಯೇ ಮನಗಾಣಿಸುವುದು ಸಾಧ್ಯ. ಆದರೆ ಅದು ನಮ್ಮ ಪ್ರಕೃ ತೋ
ದ್ವೇಶಕ್ಕೆ ಮಾರಿದ ವಿಷಯ. ಇಲ್ಲಿ “ಬತ್ತಲೆಗುದರಿ'' ಎಂಬ ಶಬ್ದವನ್ನು
ಲಕ್ಷಿಸಿ. ಈ ಕೆಟ್ಟ ಕನಸನ್ನು ಕಂಡ ಕೂಡಲೆ ಎದೆ ಅಳುಕಿ ಏನೊಂದನ್ನೂ
ಗಮವಿಸದೆ, ಕಡೆಗೆ ಕುದುರೆಗೆ ತಂಗು ತಡಿಗಳನ್ನೂ ಹಾಕದೆ, ಇದ್ದದ್ದು
ಇದ್ದ ಹಾಗೆಯೇ ದೌಡಾಯಿನಿಕೊಂಡು ಬಂದವನ ಕಳವಳವನ್ನೂ ತ್ವರೆ
ಯನ್ನೂ ಈ ಶಬ್ದ ವೃಕ್ತಪಡಿಸುತ್ತದೆ. ಇಂಥ ಒಂದು ಮಾತನ್ನು ಉಪ
ಯೋಗಿಸಿದರೆ ಸಾಕು; ಮಾರುಮಾರುದ್ದ ದ ವರ್ಣನೆಗಳನ್ನು ಕವಿ
ಏಕೆ ಹೊಸೆಯಬೇಕು! ಇಂಥ ವ್ಯಂಜಕದ ಮಹಿಮೆಯನ್ನು ಅನು
ಲಕ್ಷಿಸಿಯೇ,
ವಿಚ್ಛಿತ್ತಿ ಶೋಭಿನ್ಯೈಕೇನ ಧೂಷಣೀವೇವ ಭಾಮಿನೀ |
ಪದದ್ಯೋತ್ಯೇನ ಸುಕಪೇರ್ಥ್ವನಿನಾ ಛಾತಿ ಭಾರತೀ ॥
(ದೈನ್ಯಾ., ಪು. ೧೩೦)
" ರಮಣೀಯವಾಗಿ ಶೋಭಿಸುವ ಒಂದೇ ಆಭರಣದಿಂದ ಕಾಮಿನಿ ಹೇಗೆ
ಕಳೆಗೂಡುವಳೋ ಹಾಗೆ, [ಒಂದು] ಪದವು ಹೊಳೆಯಿಸುವ ಧ್ಯನಿ
ಯಿಂದಲೇ ಸುಕವಿಯ ವಾಣಿ ಕಳೆಗೂಡುತ್ತದೆ ' ಎಂದು ಆನಂದವರ್ಧ
ನನು ಹೇಳಿದ್ದು.
ಇದುವರೆಗೂ ಮುಖ್ಯವಾಗಿ ನಾಮವಾಚಕ ಗುಣವಾಚಕಾದಿಗಳ
ವ್ಯೈಂಜಕ ತ್ವವನ್ನೇ ಗಮನಿಸಿದೆವು. ಒಂದೊಂದು ವೇಳೆ, ಅಪ್ಪುಮಟ್ಟಿಗಾ
ದರೂ ವಾಚ್ಯಾರ್ಥ ವುಳ್ಳ ಶಬ್ದಗಳನ್ನು ಪಯೋಗಿಸುವುದೇ ಕಪ್ಪವಾಗುತ್ತ ದೆ.
ಮಾತಿನಲ್ಲಿ ಪಿಡಿಸಲಾರದ ಅಮಿತಾರ್ಥವನ್ನು ಕೇವಲ ಸರ್ವನಾಮದಿಂದಲ್ಲೇ
ನಮಗೆ ಒದಗಿಸಿಕೊಡಲು ಕವಿ ಹವಣಿಸುತ್ತಾನೆ. ಉದಾಹರಣಿಗೆ, « ತಾಪಸ
ವತ್ಸರಾಜ ನಾಟಕ'ದಲ್ಲಿ, ವಾಸವದತ್ತೆ ಬೆಂಕಿಯಲ್ಲಿ ಬೆಂದುಹೋದಳೆಂದು
ಕೇಳಿ ದುಃಖವುಕ್ಕಿ ವತ್ಸರಾಜನು ಹೀಗೆ ಹಲುಬುವನು :
೧೭. ವ್ಯಂಜಕ ಸಾಮಗ್ರಿ ೨೬೫
ಉತ್ಕಂಪಿನೀ ಧಯಪರಿಸ್ಕಲಿತಾಂಶುಕಾಂತಾ
ತೇ ಲೋಡನೇ ಪ್ರತಿದಿಶ೦ ವಿಮರೇ ಕ್ಷಿಪಂತೀ |
ಕ್ರೂರೇಣ ದಾರುಣತಯಾ ಸಹಸ್ಯೆವ ದಗ್ಕಾ
ಧೂಮಾಂಧಿತೇನ ದಹನೇನ ನ ವೀಕ್ಷಿತಾಸಿ ॥
[ನಡುಕವು ಮಿಗೆ, ಕಡುಭಯದಲ ನೆರೆಜಗುಳಿರೆ ಮೇಲ್‌ಸೆರಗು,
ಆ ಕಂಗಳು ಜೆಳಕಳಿದಿರೆ ಸುಳಿಸುತ ನೀ ದೆಸೆದೆಸೆಗೆ
ಇರೆ, ಕ್ರೂರನು ಸುಟ್ತನಲಾ ಥಟ್ಟನೆ ದಾರುಣವಷ್ಮಿ
ಹೊಗೆಯಲೆ ತಾ ಕುರುಡಾಗುತ, ನಿನ್ನನು ಮೋಡದೆಯೆ 1]
ಹಿಂದೆ ಪ್ರೇಮನಿರ್ಭರ ಜೀವನದಲ್ಲಿ ತನ್ನ ಹೈದಯೇಶ್ವರಿಯ ಕಣ್ಣುಗಳ
ವಿಭ್ರಮ,ವಿಲಾಸವನ್ನು ವತ್ಸರಾಜನು ಫೂರ್ಣವಾಗಿ ಅರಿತಿದ್ದನು ; ಆಗ
ಯಾವುವು ಕ್ಷಣಕ್ಷಣಕ್ಕೂ ಇವನ ಪ್ರೇಮವನ್ನುಕ್ಕಿಸುತ್ತಿ ದ್ಲುವೋ, ಈಗ
ವಿನಾಶಹೊಂದಿರುವುದರಿಂದ ಅವೇ ಇವನ ನೆನಪಿನಲ್ಲ ಸುಳಿದಾಗಲೆಲ್ಲ
ಶೋಕವನ್ನು ಕೆರಳಿಸುತ್ತಿವೆ; ಅಷ್ಟೇ ಅಲ್ಲ. ಮಂದಿರಕ್ಕೆ ಬೆಂಕಿ ತಗುಲಿದಾಗ,
ಈ ತರಳೆ "ನನ್ನ ಯಾರು ರಕ್ಷಿ ಸುವವರು, ಆರ್ಯ ಪುತ್ರನೆಲ್ಲ' ಎಂದು ಅತ್ತಿತ್ತ
ಸುಳಿದು ನಿರಾಶೆಗೊಂಡಾಗ ಅದೇ ಕಣ್ಣುಗಳು ಹೇಗೆ ನಿಪ್ಪ್ರಭವಾದುವೆಂಬು
ದನ್ನು ನೆನೆದಾಗಲಂತೂ ವತ್ನರಾಜನ ಹೃದಯ ಸುಟ್ಟುಹೋಗಿರಬೇಕು !
ಹೀಗೆ, ""ಇಲ್ಲಿ "ತೇ" [ಎ.ಆ] ಎಂಬ ಪದವು ರಸಮಯವಾಗಿದೆಯೆಂಬುದು
ಸಹೃದಯರಿಗೆ ಸ್ಫುಟವಾಗಿಯೇ ಭಾಸವಾಗುತ್ತದೆ.
ಅದು, ಅವು, ಆ, ಅಂತು, ಆಗ, ಅಪ್ಪು- ಈ ಮೊದಲಾದ ಶಬ್ದಗಳ
ವಿಷಯವೆಲ್ಲ ಪೀಗೆಯೇ. ಅವು ರಸವನ್ನು ಶೊಟ್ಟಿಕ್ಕಿಸಬಲ್ಲುವು ಆದರೆ
ಅವು ಬಂದಿರುವ ಸನ್ನಿಪೇತದಲ್ಲಿ ರಸನಿರ್ಧರತೆ ಸಾಧ್ಯವಾಗಬೇಕು. *"ಆ''
ಎಂಬುದು ಉದ್ರೇಕಿಸುವ ನೆನಪಿನಲ್ಲಿ ಹಿಂದಿನ ಅನುಭವವೆಲ್ಲ ಪುಪ್ಪಿ
ಗೊಂಡು ತುಂಬಿರಬೇಕು.” ಇಲ್ಲವಾದರೆ, ಈ ಶಬ್ದಗಳಿಲ್ಲ ಜೇನಿಲ್ಲದ ಬರಿಯ
ಮಲನ ಪದ್ಯವನ್ನು ಆನಂದವರ್ಧನನು ಉದಾಹರಿಸಿದ್ದಾನೆ. (ಧ್ವನ್ಯಾ., ಪು.
೧೩೧). ಇದನ್ನು ಕುರಿತ ಅಭಿನವಗುಪ್ತನ ವ್ಯಾಖ್ಯಾನವು ಸವಿಸ್ತರಪೂ ರಸಪೋಪಕವೂ
ಆಗಿದೆ.
9 ಭವಭೂತಿ ಅಷ್ಟು (= ತಾವಾನ್) ಎಂಬ ಪದವನ್ನು ಧ್ವನಿನಿರ್ಭರವಾಗಿ ಒಂದು
ಕಡೆ ಉಪಯೋಗಿಸಿದ್ದಾನೆ :
18-B
೨೭೬ ಭಾರತೀಯ ಕಾವ್ಯಮಾಮಾಂಹೆ
ಗೂಡುಗಳೇ ಸರಿ. ಹಾ, ಹೋ, ಅಹ, ಅಯ್ಯೋ--ಈ ಮೊದಲಾದ ಭಾವ
ಸೂಚಕಗಳ ವಿಚಾರವೂ ಇಲ್ಲಗೇ ಮುಟ್ಟುತ್ತದೆ.
ಪ್ರಕೃತಿ ಪ್ರತ್ಯಯಗಳ ಸೇರಿ ಪದವಾಗುತ್ತದೆ. ಇದುವರೆಗೆ ಪ್ರಕೃ
ತ್ಯಂಶವನ್ನೇ ಮುಖ್ಯವಾಗಿ ಗಮನಿಸಿದೆವು. ಇದರಂತೆಯೇ, ಲಿಂಗ, ವಚನ,
ವಿಧಕ್ತಿ, ಸಮುಚ್ಚ ಯ ಸನೊದಲಾದ ವ್ಯಾಕರಣ ಪರಿಚಿತವಾದ ಅಂಶಗಳೆಲ್ಲವೂ
ಕೆಲಕೆಲವು ವೇಳೆ ದ್ಯೋತಕವಾಗಬಹುದು. ಇವಕ್ಕೆಲ್ಲ ಇಲ್ಲಿ ಉದಾಹರಣಿ
ಯನ್ನು ಜೆಳಸಲಾರೆವು. ಪಿಂದೆಯೇ ನಾವು ಪರಿಶೀಲಿಸಿರುವ "" ನೀರೊಳ
ಗಿರ್ದುಂ ಜೆಮರ್ತನುರಗಪತಾಕಂ'' ಎಂಬ ಕಡೆ, ""ಉಂ'' ಎಂಬ ಸಮು
ಚ್ಚ ಯಕ್ಕೆ ಎಷ್ಟೊಂದು ವ್ಯಂಜಕಶಕ್ತಿ ಯೊದಗಿದೆಯೆಂಬುದನ್ನು ಸ್ಮರಿಸಿ,
ಬೇರೆ ಕಡೆಗೆ ತಿರುಗುತ್ತೇವೆ.
“ವೈಕಂ ಪದಂ ದ್ವಿಃ ಪ್ರಯೋಜ್ಯಂ ಪ್ರಾಯೇಣ '' 1__""ಒಂದೇ
ಪದವನ್ನು ಪ್ರಾಯಿಕವಾಗಿ ಎರಡುಬಾರಿ ಉಪಯೋಗಿಸಬಾರದು.'' ಕಾವ್ಯ
ದಲ್ಲಿ ಒಂದೇ ಪದವನ್ನು ಮತ್ತೆ ಉಪಯೋಗಿಸಿದರೆ ಔತನದಲ್ಲ ಒಂದೇ
ಭಕ್ಷ್ಯವನ್ನು ಮತ್ತೆ ಬಡಿಸಿದಂತಾಗಿ ಸವಿ ಕಡಮೆಯಾಗುತ್ತದೆ. ಆದರೆ
ವಿಶೇಷಸಂದರ್ಭದಲ್ಲಿ ಪದದ ಪುನರುಕ್ತಿಯೇ ಅತಿಶಯವಾಗಿ ವ್ಯಂಜಕವಾ
ಗುವುದುಂಟು. ಇದಕ್ಕೆ “ಶ್ರೀ'' ಯವರ « ಅಶ್ವತ್ಥಾಮನ್ ' ನಾಟಕದಿಂದ
ಉದಾಹರಣಿಯನ್ನು ಕೊಡಬಹುದು :
ದುರ್ಯೋಧನವಥೆಯ ಸೇಡನ್ನು ತೀರಿಸಿಕೊಳ್ಳಲೆಂದು ಅಶ್ಯತ್ಕಾ
ಮನು ಪಾಂಡವರ ಪಾಳೆಯಕ್ಕೆ ರಾತ್ರಿಯಲ್ಲಿ ನುಗ್ಗಿದಾಗ, ರುದ್ರನ ಮಾಯೆಗೆ
ಪಿಕ್ಕಿ ಅವನು ಪಶುಗಳನ್ನೂ ಹಸುಳೆಗಳನ್ನೂ ಹೆಂಗಸರನ್ನೂ ಶತ್ರುವ್ನೀರ
ರೆ೦ದೇ ಭ್ರಮಿಸಿ ತರಿದೊಟ್ಟುತ್ತಾನೆ. ಮರುದಿನ ಬೆಳಗ್ಗೆ ಅರಿವು ಮರಳಿ
ದಾಗ ತಾನು ಸಾಹಸಕ್ಕ ತ್ಯವೆಂದು ಭಾವಿಸಿ ಮಾಡಿದ್ದ ರ ನಿಜಸ್ಯರೂಪವು
ವಿನಾ ಸೀತಾದೇವ್ಯಾ ಕಿಮಿವ ನ ಹಿ ದುಖುಂ ರಘುಪತೇಃ
ಪ್ರಿಯಾನಾಶೇ ಕೃತ್ಸ್ನಂ ಕಿಲ ಜಗದರಣ್ಯಂ ಹಿ ಭವತಿ|
ಸಚ ಸ್ನೇಹಸ್ತಾವಾನಯಮವಪಿ ವಿಯೋಗೋ ನಿರವಧಿಃ
ಕಿಮಿತ್ಯೇವಂ ಪೃಚ್ಛಸೃನಥಿಗತರಾಎನಯಣ ಇವ 1
(ಉತ್ತರರಾಮಚರಿತ, ೪;. ೩೦)
10 ವಾಮನ ; ಕಾವ್ಯಾಲಂಕಾರಸೂತ್ರ, ॥, 1, ೧.
೧೭. ವ್ಯಂಜಕ ಸಾಮಗ್ರಿ ೨೭೭
ಗೊತ್ತಾಗಲು, ತನಗೆ ತಾನೇ ಹೇಸಿ ತನ್ನ ನಚ್ಚಿನ ದೈವದ ಮೋಸಕ್ಕೆ
ಮುನಿದು ರೋಪಜುಗುಪ್ಪೆಗಳ ಉದ್ರೇಕದಿಂದ ಆಡುವ ಮಾತುಗಳಲ್ಲ
ಇದೂ ಒಂದು :
. * ೬ ಸೊರ್ಕುನುಡಿ ನುಡಿವೆನ್.
ಇಂತಪ್ಪನ್ ಇಲ್ಲಮೆಂದಾದೆನ್,
ಈಗಳೋ ಇಂತಪ್ಪನ್ ಇಬ್ಲಮೆ೦ದೇ ಆದೆನ್!
ಪುಡಿಯೊಳಗೆ ಪಡಿಯ ಪುಡಿಯಾದೆನ:" ಎ.
ನಾಣ ನುಡಿಯಾದೆನ್. (ಪಂಕ್ತಿ ೩೬೪-೮)
ಇಲ್ಲಿ "" ಇಂತಪ್ಪನ್'' ಎಂಬುದರ ದ್ವಿರುಕ್ತಿಯನ್ನು ಗಮನಿಸಿ. ಎರಡು ಕಡೆ
ಗಳಲ್ಲೂ ಇರುವುದು ಒಂದೇ ಪದ, ಒ೦ದೇ ವರ್ಣಾನುಪೂರ್ವಿ; ಅರ್ಥದಲ್ಲಿ
ಮಾತ್ರ ಒಂದಕ್ಕೊಂದಕ್ಕೆ ಸ್ವರ್ಗ ನರಕಗಳ ಅಂತರ. ಮೊದಲಿಗೆ ಅಶ್ವ
ತ್ಥಾಮನು ಯಾರನ್ನೂ ಲೆಕ್ಕಿಸದ ರುದ್ರಾವತಾರ! ಇವನಿಗೆ ಮಹತ್ತ್ವ
ದಲ್ಲಿ ಸರಿಜೋಡಿ ಇನ್ನೊಬ್ಬನಿರಲಿಲ್ಲ. ಈಗಲಾದರೆ. ಪಾಳೆಯದ ಕ್ಷುದ್ರ
ಸೈನಿಕರ ಹಾಸ್ಯ ತಿರಸ್ಕಾರಗಳಿಗೆ ಕೂಡ ಗುರಿಯಾಗುವಂತೆ ಈ ಮೂಕ
ಜಂತುಗಳನ್ನು ಕೊಲೆ ಮಾಡಿದ ಮೇಲೆ._ಅಧೋಗತಿಯಲ್ಲಿ ಇವನಿಗೆ
ಸರಿಜೋಡಿ ಇನ್ನೊಬ್ಬನಿಲ್ಲ. ಹಿಂದಿನ ಅಶ್ಚತ್ಕಾಮನಿಗೂ ಇಂದಿನ ಅತ್ವ
ತ್ಥಾಮನಿಗೂ ಇರುವ ಈ ಅಳೆಯಲಾಗದ ಅಂತರವನ್ನು “ ಇಂತಪ್ಪನ್ ''
ಎಂಬ ಒಂದೇ ಪದ ಎರಡು ಬಾರಿ ಬಂದು ಅತಿ ಗಾಢವಾಗಿ ಮನದಟ್ಟು
ಮಾಡಿಕೊಡುತ್ತದೆ; ಭಿನ್ನ ಪದಗಳನ್ನು ಉಪಯೋಗಿಸಿದ್ದ ರೆ ಈ ಪುಷ್ಟಿ
ಇರುತ್ತಿರಲಿಲ್ಲ. ಇನ್ನು, "" ಪುಡಿಯೊಳಗೆ ಪುಡಿಯ ಪುಡಿಯಾದೆನ್ " ಎಂಬಲ್ಲಿ
ಪುನರುಕ್ತಿ ಇನ್ನೊಂದು ಬಗೆಯ.ಅತಿತಯವನ್ನು ಸೂಚಿಸುತ್ತದೆ. "" ಪುಡಿ''
ಎಂಬುದೇ ಅಲ್ಪ ವಸ್ತು; ಅದರ ಅಲ್ಪಾಂತದಲ್ಲಿ ಅತ್ಯಂತ ಅಲ್ಪಾಂಕವನ್ನು,
ಕನಿಷ್ಕತಮವಾದ ಕಣವನ್ನು ಇಲ್ಲಯ ಪುನುರುಕ್ತಿ ಹೇಳಿ ಅಶ್ವತ್ಥಾಮನಿಗೆ
ಒದಗಿರುವ ತುಚ್ಛತೆಯ ಪರಮಾವಧಿಯನ್ನು ಸೂಚಿಸುತ್ತ ದೆ,
ವಾಕ್ಯದಲ್ಲಿ ಪದಗಳನ್ನು ಜೋಡಿಸುವಾಗ ಸ್ಥಾನವಿಶೇಪದಿಂದಲೂ
ಧ್ವನಿಶಕ್ತಿ ಹೆಚ್ಚಬಹುದು. ವೈಶಂಪಾಯನ ಸರೋವರದಲ್ಲಿ ಅಡಗಿದ್ದ
ದುರ್ಯೋಧನನನ್ನು ಹೊರಕ್ಕೆ ಹೊರಡಿಸಲು ಭೀಮನು ಈ ರೀತಿಯಾಗಿ
ಮೂದಲಿಸುತ್ತಾನೆ :
೨೭೮ ಭಾರತೀಯ ಕಾವ್ಯವಿಇಮಾಂಸೆ
ಕಿಉಯ೦ದಿಂದಿತ್ತ ದುರ್ಳೋಧನನೆಸಿಸಿದ ವಿಕ್ರಾ೦ಲತಮೇನಾದುದೆಬ್ಬ೦-
ದಿಜುವುರ್ಕೆಲ್ಲತೊ ಪಾಂಚಾಳಿಯನೆದವದಟೇನಾದುದೋ ಗಂಡ ಪೇಡ್ ಪೊ. |
ಚ್ಚಉನಂತಾ ಮಾತುಮಿಂತೀಯಿರವನೆ ನಗೆಯಂ ಮಾಡಿದಯ" ಬಂದನೀತಂ
ಪೆಜನಲ್ಲಂ ದುರ್ಜಯಂ ಕೌರವಕುಳನಳಿನೀಕುಂಜರಂ ಭೀಮಸೇನಂ
(ಪಂಪಭಾರಕಶ i. ೩೭)
ದುರ್ಯೋಧನನ ಪಿಂದಿನ ಶೌರ್ಯಾಟೋಪವನ್ನು ಜ್ಞಾಪಿಸಿ, ಇಂದಿನ ಹೇಡಿ
ತನಕ್ಕೂ ಅಂದಿನ ಔದೃತ್ಯಕ್ಕೂ ಎಲ್ಲಿಯ ಸಂಬಂಧವೆಂದು ಭೀಮನು ಉಪ
ಹಾಸ ಮಾಡುತ್ತಿದ್ದಾನೆ. ಪೀಗೆ ಮೂದಲಿಸುವಾಗ, “ಗಂಡ (= ಶೂರ)''
ಎಂಬ ಶಬ್ದ ದ ಪ್ರಯೋಗ ಬಹು ಸಹಜ; ಅದನ್ನು ಭೀಮನ ಮಾತಿನಲ್ಲಿ
ಎಲ್ಲಿ ಉಪಯೋಗಿಸಿದ್ದರೂ ವಿಪರೀತಲಕ್ಷಣಿಯ ಮೂಲಕ ತಿರಸ್ಕಾರವೇ
ಸೂಚಿತವಾಗುತ್ತಿತ್ತು. ಆದರೆ, «ಪಾ೦ಚಾಳಿಯನೆಜೆವದಟೇನಾದುದೋ''
ಎಂಬುದರ ಮುಂಡೆ "" ಗಂಡ '' ಎಂದು ಬಂದಿರುವುದು ಎಲ್ಲಕ್ಕಿಂತ ಹೆಚ್ಚು
ವ್ಯಂಜಕವಾಗಿದೆ ; “ ಹೆಂಗಸಿನ ಮೇಲೆ ಶಕ್ತಿ ತೋರಿಸುವ ತೂರ'' ಎಂದು
ಅರ್ಥವಾಗಿ ತಿರಸ್ಕಾರದ ಪರಮಾವಧಿ ಇಲ್ಲ ವ್ಯಂಗ್ಯವಾಗುತ್ತದೆ. ಪೀಗೆಯೇ
ಈ ಪದ್ಯದಲ್ಲ, «« ಅಂತಾ ಮಾತುಂ ಇಂತೀ ಯಿರವು '' ಎಂಬಲ್ಲಿಯ ನಿರ್ದೇ
ತಕಗಳೂ “ ಕೌರವಕುಳನಳಿನೀಕುಂಜರಂ ” ಎಂಬ ವಿಶ್ನೇಷಣವೂ ಒಳ್ಳೆಯ
ವ್ಯಂಜಕಗಳು. '
ಪ್ರಾರಂಭಿಸಿದ ವಾಕ್ಯವನ್ನು ನಡುವೆಯೇ ಮುರಿದು ಬಿಟ್ಟು,
ಬೇರೊಂದು ಕಡೆಗೆ ತಿರುಗುವುದರಲ್ಲೂ ಒಮ್ಮೊಮ್ಮೆ ಪುಪ್ಪಿಯುಂಟು.
* ಉತ್ತರ ರಾಮಚರಿತ'ದಲ್ಲ, ಸೀತಾ ಪರಿತ್ಯಾಗಮಾಡಿ ಎಷ್ಟೋ ವರ್ಷ
ಗಳಾದ ಬಳಿಕ ರಾಮನು ದಂಡಕಾರಣ್ಯಕ್ಕೆ ನಿಮಿತ್ತಾಂತರದಿಂದ ಬರು
ತ್ತಾನೆ; ಪಿಂದೆ ಸೀತಾರಾಮರ ವನವಾಸಕಾಲದಲ್ಲಿ ಕೆಳದಿಯಾಗಿದ್ದು ಇವರ
ಪ್ರೇಮಾತಿಶಯವನ್ನು ಅರಿತಿದ್ದ ವಾಸಂತಿಯೆಂಬ ವನದೇವತೆ ರಾಮನನ್ನು
ಸಂಧಿಸಿ, ಸೀತೆಯನ್ನು ಕಾಡುಪಾಲು ಮಾಡಿದ್ದಕ್ಕಾಗಿ ಅವನನ್ನು ಉಪಾ
ಲಂಭನ ಮಾಡಲು ಉಪಕ್ರಮಿಸುತ್ತಾಳೆ :
ತ್ಯಂ ಜೀವಿತಂ ತೃಮಸಿ ಮೇ ಹೃದಯಂ ದ್ವಿತ್ಲೀಯಂ
ತ್ವಂ ಕೌಮುದೀ ನಯನಯೋರಮೃತಂ ತ್ವಮಂಗ್ಗೇ |
ಇತ್ಯಾದಿಭಿಃ ಪ್ರಿಯಶತ್ಯೆರನ:ರುಧ್ಯ ಮುಗ್ಧೂಂ
ತಾಮೇವ. _ಶಾಂತಮಥವಾ ಕಿಮಿಹೋತ್ತರೇಣ 1 (;;;: ೨೭)
(ಐತಿ ಮೂರ್ಛತಿ)
೧೭. ವ್ಯಂಜಕ ಸಾಮಗ್ರಿ ೨೬೯
[ನೀನೆ ನನ್ನಯ ಜೀವ, ನೀನೆ ನನಗಿನ್ನೊಂದು ಹೃದಯ,
ನೀನೆ ಬೆಳುದಿ೦ಗಳ ಕಂಗಳಿಗೆ, ಅ೦ಗಗಳಿಗಮೃತ ;
ಇಂತಿಂತು ನೂರು ನಲ್ಫಾತಿನಲಿ ನಲಿಸಿ ಮನವೊಲಿಸಿ
ಮುಗುದೆಯ:ವಳನೆ - ಸಾಕು, ಮಂದಿನಬನೆತ್ತಲೇಕೆ !
(ಮೂರ್ಛೆ ಹೋಗುವಳು]
ಹಿಂದೆ ಯಾರನ್ನು ರಾಮನು ಇಷ್ಟೊಂದು ಪ್ರೇಮದಿಂದ ಒಲಿಸಿದ್ದನೋ
ಅವಳನ್ನೇ ಈಗ ಯಾವ ದಾರುಣ ವಿಪತ್ತಿಗೆ ಈಡುಮಾಡಿದನೆಂಬುದನ್ನು
ತೋರಿಸಲು ವಾಸಂತಿ ತೊಡಗಿದ್ದಾಳೆ. ಆದರೆ ಮಾತು ಅಲ್ಲಿಗೆ ಬರುವ
ಹೊತ್ತಿಗೆ ಅವಳ ಗಂಟಲು ಕಟ್ಟು ತ್ತದೆ, ಅಲ್ಲದೆ ಆದದ್ದೆಲ್ಲ ಆಗಿ ಹೋದ
ಮೇಲೆ, ರಾಮನನ್ನು ಚುಚ್ಚಿ ಆಡುವುದರ ಪ ರ್ರಯೋಜನ ತಾನೆ ಏನು ಎಂದೂ
ಅವಳಿಗೆ ತೋರುತ್ತದೆ. ವಾಕ್ಯದ ಕ್ರಮವನ್ನೇ ಇಲ್ಲಿ ಭಂಗಪಡಿಸಿರುವುದ
ರಿಂದ ವಾಸಂತಿಯೆ ದುಃಖ ಆಕ್ಷೇಪ ಸೌಜನ್ಯಾದಿಗಳು ಇಲ್ಲ ಎಷ್ಟು ಚೆನ್ನಾಗಿ
ಸೂಚಿತವಾಗುತ್ತವೆ! ಇದೆಲ್ಲದರ ಅಪೇಗವನ್ನು ಸಪಿಸಲಾರದೆ ಅವಳು
ಮೂರ್ಛೆ ಹೋಗುವುದೂ ರಸಪೋಪಕವಾಗಿದೆ.
ಇಷ್ಟಕ್ಕೇ ಭವಭೂತಿ ನಿಲ್ಲಿಸಿದ್ದರೆ ಉತ್ತಮವಾಗಿತ್ತು. ಆದರೆ
ತಾನು ಎಷ್ಟು ರಮ್ಯವಾಗಿ ನಿರ್ವಾಹಮಾಡಿದ್ದೇನೆಂಬುದರ ಪರಿಜ್ಞಾ ನ
ಅವನಿಗೆ ಉಂಟಾಗಿ, ಅದನ್ನು ತಿಳಿಸಿದ ಹೊರತು ಅವನಿಗೆ ಮನಸ್ಸು ನಿಲ್ಲ
ಲಿಲ್ಲ. ವಾಸಂತಿ ಮೂರ್ಛೆ ಹೊಂದಿದ ಕೂಡಲೆ ಇದನೆ ೪ ಅದೃ ಶೈಯಾಗಿ
ನಿಂತು ನೋಡುತ್ತಿದ್ದ ತಮಸಾ ಎಂಬ ನದೀದೇವತೆ, "" ಸ್ಥಾನೇ ಖಲು
ವಾಕ್ಯನಿವೃತ್ತಿ 8 ಮೋಹತ್ಚ'' ("" ಮಾತು ನಿಲ್ಲಸಿದ್ಧೂ ಮೂರ್ಛೆ ಹೋದದ್ದೂ
ಸರಿಯಾದ ಜಾಗದಲ್ಲೇ ಆಯಿತು '') ಎಂದು ಅಭಿಪ್ರಾಯ ಪಡುತ್ತಾಳೆ.
ಪದ್ಯದಲ್ಲಿ ವ್ಯಂಗ್ಯವಾಗಿ ಮನೋಹರವಾಗಿದ್ದುದನ್ನು ಪೀಗೆ ಬೆರಳುತೋರಿಸಿ
ಬಯಲಿಗೆಳೆದದ್ದರಿಂದ ಸ್ವಾರಸ್ಯ ಇಳಿದು ಹೋಯಿತು; ಇಲ್ಲ ಕವಿಯೇ
ವ್ಯಾಖ್ಯಾನಕಾರನೂ ಆಗಿಬಿಟ್ಟನು. 1!
11 ಹೀಗೆ, ಒಂದು ಕಡೆ ರಮ್ಯವಾದ ವ್ಯಂಗ್ಯಾರ್ಥವಿದ್ದರೂ, ಅದು ಅಲ್ಲ ಉಂಟೆಂದು
ಕವಿಯೇ ತಿಳಿಸಿಬಿಟ್ಟರೆ, ಲಾಕ್ಷಣಿಕರು ಅದನ್ನು "" ಧ್ವನಿ” ಯೆಂದು ಗಣಿಸುವುದಿಲ್ಲ; ಇದು
ವಾಚ್ಯಾರ್ಥಕ್ಕೇ ಪೋಷಕವಾಗುವುದೆಂದು ಭಾವಿಸಿ '" ಗುಣೀಭೂತವ್ಯಂಗ್ಯ ''ದ ಗುಂಪಿಗೆ
ಸೇರಿಸುತ್ತಾರೆ.
೨೮೦ ಭಾರತೀಯ ಕಾಷ್ಯಮಾಮಾಂಸೆ
ವರ್ಣ, ಪದ ಮೊದಲಾದವೆಲ್ಲ ವಾಕ್ಯದ ಅಂಗಗಳು; ಪುನರುಕ್ತಿ,
ಕ್ರಮಭಂಗ ಮೊದಲಾದವೂ ಕೂಡ ವಾಕ್ಯವಿನ್ಯಾಸದ ಪ್ರಕಾರವಿಶೇಷ
ಗಳು. ಪೂರ್ಣವಾದ ಅರ್ಥ ಧ್ಯ್ವನಿತವಾಗುವುದು ಒಟ್ಟು ವಾಕ್ಯದಿಂದಲ್ಲೇ
ಹೊರತು, ಕೇವಲ ಅಂತಮಾತ್ರದಿಂದ ಅಲ್ಲ. ಆದರೆ, ನಾದಮಪಿಮೆ
ಯಿಂದಲ್ಲೋ, ನಿಷ್ಪತ್ತಿ ಬಲದಿಂದಲ್ಲೋ, ಸಂಸರ್ಗಪ್ರಭಾವದಿಂದಲೋ
ಇವುಗಳಲ್ಲಿ ಯಾವುದಾದರೂ ಒಂದು ಅಂಶವು ವಾಕ್ಯದ ಮಿಕ್ಕ ಭಾಗಗಳ
ಗಿಂತ ಹೆಚ್ಚಾಗಿ ವ್ಯಂಜನಾವ್ಯಾಪಾರದಲ್ಲ ಸಹಾಯಮಾಡುತ್ತದೆ. ಈ
ದೃಷ್ಟಿಯಿಂದಲೇ ವರ್ಣ, ಪದ, ಮೊದಲಾದವನ್ನೆಲ್ಲ ವ್ಯಂಜಕಗಳೆಂದು
ಕರೆಯುವುದು. ಕಾವ್ಯತರೀರದ ಪ್ರತಿಯೊಂದು ಅಂತದ ವ್ಯಂಜಕಸಾಮರ್ಥ್ಯ
ವನ್ನೂ ಮಹಾಕವಿ ಜೆನ್ನಾಗಿ ಉಪಯೋಗಿಸಿಕೊಳ್ಳುತ್ತಾನೆ.
ಒಟ್ಟು ವಾಕ್ಯವೇ ಹೇಗೆ ವ್ಯಂಜಕವಾಗಬಲ್ಲುದೆಂಬುದಕ್ಕೆ ಉದ್ದಕ್ಕೂ
ಉದಾಹರಣಿಗಳು ಬಂದಿವೆ. ಇವನ್ನು ಮತ್ತೆ ನಿರ್ದೇಶಿಸಿ ವಿವರಿಸುವುದು
ಅನಾವಶ್ಯಕ. (ಇದರ ಮೇಲೆ, ಇನ್ನು ಮುಂದೆಯೂ ವ್ಯಂಜಕವಾದ
ವಾಕ್ಯಗಳು ಉದಾಹರಣಿಗಾಗಿ ಬಂದೇ ಬರುತ್ತವೆ.)
ಈಗ ಪ್ರಬಂಧಧ್ಯನಿಯ ವಿಚಾರ. ಪದಗಳು ಹೇಗೆ ಬಿಡಿಯಾಗಿ
ಪ್ರಯೋಗವಾಗುವುದಿಲ್ಲವೋ ಹಾಗೆಯೇ ವಾಕ್ಯವು ಕೂಡ ಲೋಕವ್ಯವ
ಹಾರದಲ್ಲಾಗಲಿ ಕಾವ್ಯದಲ್ಲಾ ಗಲಿ ಬಿಡಿಯಾಗಿ ಬರುವುದಿಲ್ಲ: ಪರಸ್ಪರ
ಸಂಬಂಧವುಳ್ಳ ಅನೇಕ ವಾಕ್ಯಗಳು ಸೇರಿ ಒಂದು ""ಸರ್ಗ'”, "" ಸಂಧಿ '',
$$ ಆಶ್ವಾಸ'', ಅಥವಾ "" ಪ್ರಕರಣ ವಾಗುತ್ತದೆ; ಇಂಥ ಅನೇಕ
« ಸರ್ಗ ''ಗಳನ್ನು ಒಂದು ಕಾವ್ಯ ಒಳಕೊಳ್ಳುತ್ತದೆ. ತತ್ತ್ವತಃ
ವಾಕ್ಯವು ಹೇಗೆ ಅಖಂಡವೋ ಒಟ್ಟು ಕಾವ್ಯವೂ ಹಾಗೆಯೇ ಅಖಂಡ;
ಅದೊಂದು ""ಏಕಘನ.'' ಅದನ್ನು ಭಾಗಗಳಾಗಿ ವಿಂಗಡಿಸುವುದು ಸುಲಭ
ವಾಗಿ ಗ್ರಪಿಸುವುದಕ್ಕಾಗಿ, ಕ್ಲೆ (ತವಿಲ್ಲದೆ ವಿಚಾರ ಮಾಡುವುದಕ್ಕಾಗಿ.
ಒಟ್ಟು ಕಾವ್ಯದಿಂದ ಒಂದು ಧ್ವನಿ ಹೊರಡುತ್ತದೆ ; ಇದನ್ನೇ ಪ್ರಬಂಧಧ್ಯನಿ
ಯೆಂದು ಕರೆಯುವುದು ; ಇದರ ಆಸ್ವಾದವೇ ಕಾವ್ಯದ ಪರಮ
22 ""ಮುಕ್ತಕ '' (ಅಥವಾ ಬಡಿಪದ್ಯ)ದಲ್ಲಿ ಒಂದು ವಾಕ್ಯವೇ ಒಂದು ಪೂರ್ಣ ಕಾವ್ಯ
ವಾಗಿರುವುದುಂಟು; ಆಗ ಅದು ಕೇವಲ ವಾಕೃವೆನಿಸುವುದಿಲ್ಲ.
೧೭. ವ್ಯಂಜಕ ಸಾಮಗ್ರಿ ೨೮೧
ಪ್ರಯೋಜನ. ಕಾವ್ಯತರೀರದ ಬೇರೆಬೇರೆ ಅಂಶಗಳಿಂದ ಹೊರಡುವ
ಧ್ವನಿಗಳೆಲ್ಲವೂ ಇದರ ಅಂಗಗಳಾಗಿ, ಅಂಶಗಳಾಗಿ ಪರಿಣಮಿಸುತ್ತವೆ.
ಇದು ಹೇಗೆಂಬುದರ ವಿಚಾರ ಮುಂದೆ ಒಂದೆರಡು ಅಧ್ಯಾಯಗಳಲ್ಲಿ ವ್ಯಕ್ತ
ವಾಗುವುದರಿಂದ ಇಲ್ಲಿ ಅದರ ನಿರೂಪಣಿಗೆ ಕೈಹಾಕುವುದಿಲ್ಲ.
ಉಕ್ತಿಮಯವಾದ ಕಾವ್ಯದಲ್ಲಿ ಒಮ್ಮೊಮ್ಮೆ ಉಕ್ತಿಯ ಅಭಾವದಿಂ
ದಲ್ಲೇ ಅರ್ಥವಿಶೇಷವು ಧ್ಯನಿತವಾಗುವುದುಂಟು. 3 ಇದಕ್ಕೆ ಕ ಪ್ರತಿಮಾ
ನಾಟಕ 'ದ ಎರಡನೆಯ ಅಂಕದಿಂದ ಒಂದು ಉದಾಹರಣಿಯನ್ನು ಕೊಡ
ಬಹುದು. ಪುತ್ರವಿಯೋಗದಿಂಧ ದಶರಥನು ವಿದೀರ್ಣಹೃದಯನಾಗಿ
ಮರಣತಯ್ಯೆಯಲ್ಲ ಮಲಗಿದ್ದಾನೆ. ರಾಮ ಜಾನಕೀ ಲಕ್ಷ್ಮಣರನ್ನು ವನೆ
ವಾಸಕ್ಕೆ ಕಳುಹಿಸಿಕೊಟ್ಟು ಸುಮಂತ್ರನು ಬರಿಯ ರಥದೊಡನೆ ಹಿಂದಿರುಗಿ
ಅವರು ಬೀಳ್ಕೊಂಡ ಬಗೆಯನ್ನು ವಿಜ್ಞಾಪಿಸುವನು :
ಸುಮಂತ್ರ- -ಶೃಂಗಿವೇರಪುರದಲ್ಲಿ ರಥದಿಂದ ಇಳಿದು ಅಯೋಧ್ಯೆಯ ಕಡೆಗೆ
ತಿರುಗಿಕೊಂಡು, ಅವರೆಲ್ಲರೂ ಮಹಾರಾಜನಿಗೆ ತಲೆಬಾಗಿ ನಮಿಸಿ
ಬಿನ್ನವಿಸತೊಡಗಿದರು : ಬಲು ಹೊತ್ತು ಏನನ್ನೋ ಯೋಚಿಸಿದರು;
ಮಾತನಾಡಲು ತುಟಿಗಳು ಆಲುಗಿದುಪು ; ಕಣ್ಣೀರು ಕೊರಳನ್ನು
ಬಿಗಿಯಲು ಸುಡಿಯದೆಯೇ ವನಕ್ಕೆ ತೆರಳಿದರು.
ದಶರಥ. ಏನು ? ನುಡಿಯದೆಯೇ ವರಕ್ಕೆ ತೆರಳಿದರೆ? (ಇಮ್ಮಡಿಯಾಗಿ ಮೂರ್ಛೆ
ಹೋಗುವನು.)
ಇಲ್ಲ ರಾಮಾದಿಗಳ ""ಅನುಕ್ತಿ''ಯ ಧ್ವನಿಯನ್ನು ನೋಡಿ. ಎಷ್ಟು
ಮಾತಿನಲ್ಲಿ ಹೇಳಿದ್ದರೆ ತಾನೆ ಅವರ ದುಃಖ ಸಂದೇಶ ಇಷ್ಟು ಅತಿಶಯ
ವಾಗಿ ತಿಳಿಯಬರುತ್ತಿತ್ತು! ಅದರ ಧ್ವನಿಯನ್ನು ವಿಮರ್ತಕನೂ ಧ್ಯನಿತ''
ವಾಗಲು ಬಿಡುವುದೇ ಲೇಸು. ಈ ಅನುಕ್ತಿಯ ಮತ್ತೊಂದು ಪ್ರಯೋ
ಜನವನ್ನೂ ಗಮನಿಸಿ. ರಾಮನನ್ನು ಒಮ್ಮೆ ಮುಟ್ಟಿದರೆ ಸಾಕು, ಒಮ್ಮೆ
ಕಂಡರೆ ಸಾಕು; ನನ್ನ ಜೀವ ಉಳಿದೀತು ಎಂದು ಹಂಬಲಿಸುತ್ತಿದ್ದ ದಶ
ರಥನ ಕಿವಿಗೆ ರಾಮನು ಆಡಿದ ಎರಡು ಮಾತಾದರೂ--ಅವು ಏನೇ ಆಗಿ
13 ಅನುಕ್ತಿಯೂ ವ್ಯಂಜಕವಾಗಬಹುದೆಂಬ ವಿಷಸುವನ್ಮು ಧ್ವನ್ಯಾಲೋಕಾದಿ
ಪ್ರಾಚೀನ ಗ್ರಂಥಗಳಲ್ಲಿ ಪ್ರಸ್ತಾವಿಸಿಲ್ಲ. ಆದರೆ ಧ್ವನಿ ತತ್ತ್ರ್ಯದ ವ್ಯಾಪ್ತಿಯನ್ನು ಅನುಕ್ತಿಗೂ
ವಿಸ್ತರಿಸುವುದು ಅನುಚಿತವಲ್ಲವೆಂದು ನಮ್ಮ ಭಾವನೆ.
೨೮೨ ಭಾರತೀಯ ಕಾವ್ಯವಿಸಾಮಾಂಸೆ
ರಲಿ-ಸುಮಂತ್ರನ ಮೂಲಕ ಮುಟ್ಟಿದ್ದ ರೆ, ಅವನ ದುಃಖ ಕೆಲವು ಮಟ್ಟಿ
ಗಾದರೂ ಶಮನವಾಗುತ್ತಿತ್ತು. ಈ " ಅನುಕ್ತಿ'' ಮೊದಲೇ ಅಸದಳವಾ
ಗಿದ್ದ ದುಃಖವನ್ನು ಇಮ್ಮಡಿಸಿ ಕರುಣರಸಕ್ಕೆ ಪೋಪಕವಾಗುತ್ತದೆ.
ಮೇಲಿನ ಉದಾಹರಣಿಯಲ್ಲಿ "" ಅನುಕ್ತಿ ''ಯುಂಟೆಂದು ಹೇಳಿದೆವು.
ಆದರೆ ಸುಮಂತ್ರನ " ಅನುಕ್ಕ್ಟ್ಯೊವ'' ( -ನುಡಿಯದೆಯೇ) ಎಂಬ ಮಾತಿ
ನಲ್ಲಿಯೇ ಅದು ಉಕ್ತಿಗೋಚರವಾಯಿತಲ್ಲ, ವಾಚ್ಯವಾಯಿತಲ್ಲ ಎಂದು
ಯಾರಾದರೂ ಸೂಕ್ಷ್ಮ ದರ್ಶಿಗಳು ಆಕ್ಷೇಪಿಸಬಹುದು. ತುದ್ಧಾಂಗವಾಗಿ
ಉಕ್ತಿಬಾಪಿರವಾದ ಒಂದು ಮೌನವನ್ನು ವಾಲ್ಮೀಕಿರಾಮಾಯಣದಿಂದ
ವಿದರ್ಶಿಸಿ, ಅದರ ಧ್ವನಿಶಕ್ತಿಯನ್ನು ಅರಿತುಕೊಳ್ಳೋಣ.
ಕೈಕೆ ರಾಮನನ್ನು ಕಾಡಿಗೆ ಅಟ್ಟಿದ್ದು ಭರತನಿಗೋಸ್ಕರ; ಅವನಿಗೆ
ರಾಜ್ಯವನ್ನು ನಿಷ್ಕಂಟಕವಾಗಿ ದೊರಕಿಸುವುದಕ್ಕೋಸ್ಕರ. ಮುಗ್ಧೆಯಾದ
ಇವಳ ಮನಸ್ಸಿನಲ್ಲಿ ಮಂಥರೆ ವಿಷಬೀಜವನ್ನು ಬಿತ್ತಿದಳು. ಅದು ಕ್ಷಿಪ್ರ
ದಲ್ಲಿ ಮಹಾವೃಕ್ಷವಾಗಿ ಬೆಳೆದು ಹೃದಯರಸವನ್ನೇ ಪೀರಿ ಅನಾಹುತಪರಂ
ಪರೆಯನ್ನು ಫಲವಾಗಿ ಬಿಟ್ಟಿತು. ಭರತನು ರಾಜನಾಗುವನೆಂಬ ಹರ್ಷ
ದಲ್ಲಿ ಪತಿಮರಣವನ್ನು ಕೂಡ ಈ ಪತ್ರೆ 3ಕಪ್ರಾಣಿ ಲಕ್ಷಿಸುವುದಿಲ್ಲ. ಭರ
ತನು ಅಯೋಧ್ಯೆಗೆ ಹಿಂದಿರುಗಿದಾಗ ಇವಳು ಅವನನ್ನು ಉಲ್ಲಾಸದಿಂದ
ಎದುರುಗೊಂಡು ತಾನು ಅವನಿಗಾಗಿ ಗಳಿಸಿದ ಅಸಮಂಜಸ ಭಾಗ್ಯವನ್ನು
ನಿವೇದಿಸುತ್ತಾಳೆ. ಮಗನು ಮೆಚ್ಚುವನೆಂದು ಕೈಕೆ ಭಾವಿಸಿದ್ದಳು. ಅದಕ್ಕೆ
ಪ್ರತಿಯಾಗಿ ಅವನ ಬಾಯಿಂದ ನಿಂದೆಯ ಸುರಿಷುಳೆ ಇವಳ ಮೇಲೆ ಬೀಳು
ತ್ತದೆ. "" ಪಾಪಿನಿ, ದುಪ್ಪ್ರಚಾರಿಣಿ, ಎಂಥ ಅಕಾರ್ಯವನ್ನು ಮಾಡಿದೆ!
ನೀನು ಜೆಂಕಿಗಾದರೂ ಬೀಳು; ಉರುಲನ್ನಾದರೂ ಹಾಕಿಕೋ, ನಾನು
ರಾಮನನ್ನು ಕರೆತಂದು ಅವನ ದಾಸನಾಗಿ ಬಾಳುತ್ತೇನೆ '' ಎಂದು ಹೇಳಿ
ದುಃಖತಪ್ತನಾದ ಭರತನು ನಡೆದುಬಿಟ್ಟನು, ಬಳಿಕ ಅವನು ಆಡಿದ್ದು
ಮಾಡಿದ್ದನ್ನು ವರ್ಣಿಸುವುದರಲ್ಲೇ ವಾಲ್ಮೀಕಿಕವಿ ಮಗ್ನನಾಗುತ್ತಾನೆ.
ಕೈಕೆ ಏನು ಮಾಡಿದಳು? ತನ್ನ ಆಶೆಯೆಲ್ಲಾ ಹುಡಿಹುಡಿಯಾದದ್ದಕ್ಕೆ
ನೊಂದಳೇ, ತನ್ನ ಅಕಾರ್ಯಕ್ಕಾಗಿ ಪರಿತಾಪದಿಂದ ಬೆಂದಳ್ಳೇ?-ಇದೊಂ
ದನ್ನೂ ವಾಲ್ಮೀಕಿ ಪ್ರಸ್ತಾ ವಿಸುವುದಿಲ್ಲ ; ಕಡೆಗೆ ಮೂರ್ಛೆ ಹೋದಳೆಂದು
ಕೂಡ ಹೇಳುವುದಿಲ್ಲ. ಆಯೋಧ್ಯಾಕಾಂಡದ ಈ ಸನ್ನಿವೇಶದಲ್ಲ ಮಾತ್ರ
೧೭. ವ್ಯಂಜಕ ಸಾಮಗ್ರಿ ೨ಲಿ೩
ವಲ್ಲ; ಒಟ್ಟು ರಾಮಾಯಣದಲ್ಲೇ ಇನ್ನೊ೦ದು ಮಾತು ಕೈಕೆಯ ಬಾಯಿಂದ
ಹೊರಬೀಳುವುದಿಲ್ಲ.'4 ಇಷ್ಟು ಪ್ರಗಾಢವಾದ ಅನುಕ್ತಿಯ ಅರ್ಥವೇ
ನೆಂಬ ವಿಷಯ ಹಾಗಿರಲಿ ; ಇಂಥ ಅನುಕ್ತಿ ಇಲ್ಲಿ ಉಂಟು ಎಂಬುದನ್ನು
ಕೂಡ ಕಪಿ ನಮ್ಮ ಅರಿವಿಗೇ ಪೂರ್ಣವಾಗಿ ಬಿಟ್ಟಿ ದ್ದಾನೆ. ಆದರೆ ಅವಧಾನ
ದೊಡನೆ ರಾಮಾಯಣವನ್ನು ಓದುತ್ತಿರುವಾಗ, ಈ ಅಂಶ ಮನಸ್ಸಿಗೆ ತಿಳಿ
ದೊಡನೆಯೇ ವಾಚ್ಯಸ್ಪರ್ತವೇ ಇಲ್ಲದ ಈ ಕೇವಲ ಅನುಕ್ತಿಯಿಂದ ಹೊಳೆ
ಯುವ ಧೃನಿಯ ಆಳವನ್ನು ಮಾತಿನಲ್ಲಿ ಹೇಗೆ ಮುಟ್ಟಬಹುದು! ಕೈಕೆಯ
ಜೀವನದ ಉತ್ತ ರಭಾಗವೆಲ್ಲ ಈ ಅನುಕ್ತಿಯ ಗರ್ಭದಲ್ಲಿ ಅಡಗಿದೆ.
14 ರಾಮನನ್ಮು ಹುಡುಕಿಕೊಂಡು ಭರತನು ಹೊರಟಾಗ, ಅವನೊಡನೆ ಕೌಸಲ್ಯ
ಸುಮಿತ್ರೆಯರ ಜೊತೆಗೆ ಕೈಕೆಯೂ ಹೋಗುತ್ತಾಳೆ (11, ೮೩. ೬). ರಾಮನ ಸ್ಥಿತಿಯನ್ನು
ಕಂಡು ಮಾತೆಯರು (" ಮಾತರಃ”) ಕಣ್ಣೀರು ಸುರಿಸಿದರು (11, ೧೦೩. ೧೭),
ಅಶ್ರಮದಿಂದ ಹಿಂದಿರುಗುವಾಗ ದುಃಖದಿಂದ ಬೀಳ್ಕೊಂಡರು (;; ೧೧೨. ೩೧)
ಈ ಮಾತೆಯರಲ್ಲ, ದಶರಥನ ಸಮಸ್ತ ಸ್ತ್ರೀಯರಲ್ಲಿ (" ಸರ್ವಾ ದಶರಥಸ್ವಿಯಃ ''
ii. ೧೦೩. ೯), ಕೊಕೆಯೂ ಸೇರಿದ್ದಳೆಂದು ನಂಬಬಹುದು. ಅದರೆ ಕೌಸಲೈಯನ್ನೂ
ಸುಮಿತ್ರೆಯನ್ನೂ ವಾಲ್ಮೀಕಿ ಪ್ರತ್ಯೇಕಿಸಿ ಹೇಳುವ ಹಾಗೆ (೧೦೩ನೆಯ ಅಧ್ಯಾಯದಲ್ಲಿ)
ಕೈೌಕೆಯ ಹೆಸರನ್ನು ಎತ್ತುವುದಿಲ್ಲ.
೧೮. ಗುಣೀಭೂತವ್ಯಂಗ್ಯ, ಚಿತ್ರ
«ನೆ ಸರ್ವತ್ರ ಧ್ವನಿರಾಗಿಣಾ ಭವಿತವ್ಯ೦'': (" ಎಲ್ಲೆಲ್ಲೂ ಧ್ವನಿ
ಯನ್ನು ಹುಡುಕುತ್ತಾ ಹೋಗಬಾರದು '') 1 ಒಂದು ಕಡೆ ತೋರುವ
ವ್ಯಂಗ್ಯಾರ್ಥವು ಪ್ರಧಾನವಾಗಿ, ಮನೋಹರವಾಗಿ, ಆಸ್ವಾದ್ಯವಾಗಿದ್ದರೆ
ಮಾತ್ರ ಅದಕ್ಕೆ ಧ್ವನಿಯೆಂಬ ಹೆಸರು ಬರುತ್ತದೆ. ಆದರೆ ವ್ಯಂಗ್ಯಾರ್ಥಕ್ಕೆ
ಎಲ್ಲ ಕಡೆಯಲ್ಲೂ ಇಷ್ಟು ಪ್ರಾಶಸ್ತ್ಯ ಇರುವುದಿಲ್ಲ. ಅದು ಗುಣೀಧೂತ
ವಾಡುವುದೂ ಉಂಟೆಂದು ಈ ಮೊದಲೇ ಗಮನಿಸಿದೆವು. ಇನ್ನು ಗುಣೀ
ಭೂತ ವ್ಯಂಗ್ಯದ ಸ್ಟರೂಪವೇನೆಂಬುದನ್ನು ಇಲ್ಲ ಸಂಗ್ರಹವಾಗಿ ನಿರೂಪಿಸೆ
ಬೇಕಾಗಿದೆ.
ವಾಚಕನ ಪ್ರತಿಧಾದೃಷ್ಟಿಗೆ' ಸುಲಭಗೋಚರವಾದರೂ ನಿಧಿಯಂತೆ
ನಿಗೂಢವಾಗಿರುವುದು ವ್ಯಂಗ್ಯ ದ ಸೊಗಸು. ಹಾಗಿಲ್ಲದೆ ಅದು ತೀರ
ಸ್ಪಪ್ಟೃವಾದರೆ, ಮೇಲೆದ್ದು ಕಾಣಿಸಿಕೊಂಡರೆ, ಅದಕ್ಕೂ ವಾಚಾ ್ಯಾರ್ಥಕ್ಕೂ
ನಿಜವಾಗಿ ವ್ಯ ತ್ಯಾಸವೆಲ್ಲಂದ ಬಂತು? ತು? ಇದಕ್ಕೆ ವ್ಯ ವ್ಸ ವಹಾರದ Be
ಒಂದು ಉದಾಹರಣಿಯನ್ನು ಕೊಡೋಣ. ಗೋವಿಂದನು ತನ್ನ ಸ್ಮೇಷಿ
ತನ ಕೋಣಿಯ ಬಾಗಿಲನ್ನು ತಟ್ಟುತ್ತಾನೆ. ಅವನು ಒಳಗಿನಿಂದ
"ಯಾರು? '' ಎಂದರೆ, ಇವನು ಒಬ್ಬರು ದೊಡ್ಡ ಮನುಷ್ಯರು
ಬಂದಿದ್ದಾರೆ, ಬಾಗಿಲು ತೆಗೆ'' ಎಂದು ಹೇಳುವುದುಂಟು. ಇಲ್ಲ ಕಂಠಧ್ವನಿ
ಯಿಂದಲೇ ಬಂದವನು ಗೋವಿಂದನೆಂದು ಗೊತ್ತಾಗುವಾಗ, "" ಒಬ್ಬರು
ದೊಡ್ಡ ಮನುಷ್ಯರು ಬಂದಿದ್ದಾರೆ'' ಎನ್ನುವುದಕ್ಕೂ, ""ನಾನು--
ಗೋವಿಂದ-- ಬಂದಿದ್ದೇನೆ '' ಎನು ಮ ಪುದಕ್ಕೂ ಪ್ರೆಯೋಜನದಲ್ಲಿ ಅಂತರ
ಕಡಮೆ. ಇಲ್ಲ ವಿನೋದವೇ ವ್ಯಂಗ್ಯಾರ್ಥವೆಂದು ಇಟ್ಟುಕೊಂಡರೂ
ಅದು ಅತಿ ಸ್ಪಪ್ವವಾಗಿದೆ; ಆದಕಾರಣವೇ ಅಮುಖ್ಯವಾಗುತ್ತದೆ.
ಹೀಗೆಯೇ, “ ನಿನ್ನ ಪಾಲಿಗೆ ಅವನು ಬದುಕಿಯೇ ಇಲ್ಲ'' ಎಂಬ ಮಾತಿ
ನಲ್ಲೂ, ರೂಢಿಬಲದಿಂದ, ವ್ಯಂಗ್ಗಾ ಗ್ಯಾರ್ಥವು ಅತಿ ತಿ ಸ್ಪಷ್ಟವಾಗುತ್ತದೆ ;
ಆದಕಾರಣ ಇ ಇದೂ ಗುಣ್ಣರೊತವ್ಯಂಗ್ಯ ಗ್ಯಕ್ಕೇ ಉದಾಹರಣೆ ಇ] ಇಂಥ
ಕಡೆಗಳಲ್ಲೆ ಲ್ಲಾ ಧ್ವನಿಯನ್ನು ಸಾಧಿಸಲು ಹೊರಡದಾರದು.
1 ಧೈನ್ಯಾ., ಪು. ೨೧೩.
೨೮೪
೧೮. ಗುಣೀಭೂತವ್ಯಂಗ್ಯ, ಚಿತ್ರ ೨೮೫
ಕೆಲವು ವೇಳೆ ಮಾತು ವ್ಯಂಗ್ಯಸೂಚಕವಾಗಿರುತ್ತದೆ ; ಆದರೆ
ಅದನ್ನು ಹೇಳುವಾಗ ಉಪಯೋಗಿಸುವ "“ಕಾಕು''ವಿನಿಂದ * ಅದು ವಾಚ್ಯ
ಸದೃ್ಭಶವೇ ಆಗಿಬಿಡುವುದುಂಟು, " ಪ್ಲೇಣೀಸಂಹಾರ'ದ ಮೊದ೦ನೆಯ
ಅಂಕದಲ್ಲಿ ಭೀಮನು ಸಹದೇವನೊಂದಿಗೆ, "" ಮಥ್ನಾಮಿ ಕೌರವಶತಂ
ಸಮರೇ ನ ಕೋಪಾತ್. . . .' ("" ನೂರ್ವರು ಕೌರವರನ್ನು ಸಮರದಲ್ಲಿ
ನಾನು ಧ್ವಂಸಮಾಡುವುದಿಲ್ಲ? ....'') ಎಂದು ಮೊದಲಾಗಿ ಹೇಳುವನು
(1. ೧೫). ಅವನ ಉದ್ದೇಶ ಈ ಹೇಳಿಕೆಗೆ ಪೂರ್ಣವಾಗಿ ವ್ಯತಿರಿಕ್ತ, ಅದ
ಕಾರಣ ಇಲ್ಲ ವಿಪರೀತಲಕ್ಷಣೆ ಪ್ರವರ್ತಿಸಿ ಅವನ ದೃಢನಿಶ್ಚಯದ ಅತಿ
ತಯವು ವೃಂಗ್ಯವಾಗುತ್ತದೆ. ಆದರೆ ಇದನ್ನು ಉಚ್ಚೆ ರಿಸುವಾಗ, " ನಾನು
ಧ್ವಂಸ ಮಾಡುವುದಿಲ್ಲ ?'' ಎಂಬ ಕಡೆ ಕಾಕುವನ್ನು ತರಲೇಜೇಕು, ಆಗ,
« ಧ್ವಂಸ ಮಾಡುವುದಿಲ್ಲವೋ !--ಮಾಡಿಯ್ದೇ ಮಾಡುತೆ ತ್ತೇನೆ” ಎಂಬ
ಅರ್ಥವು ವಾಚ್ಯದಪ್ಪೇ ಸ್ಪಪ್ವವಾಗಿ ವಾಚಿ [ವೆಂಬಂತೆಯೇ. ಪೃತೀ ಸ್ರತೀತವಾಗುತ್ತ ದೆ.
ಅಗೂಢತೆಯಿಂದ ವ ವ್ಯಂಗ್ಯ. ಮಂಕಾಗುತ್ತ ದೆ; ಅತಿಗೂಢತೆಯಿಂದ
ಅದರ ಇರಷೇ ಗೊತ್ತಾ ಗುವುದಿಲ್ಲ. ಇದತ್ತೊ ೦ದು ಉದಾಹರಣಿಯನ್ನು
" ಸಾಪಿತ್ಯದರ್ಪಣ 'ಕಾರನು ಪೀಗೆ ಕೊಟ್ಟಿದ್ದಾ ನೆ:
ಸಂಧೌೌ ಸರ್ವಸೃಹರಣಂ ವಿಗ್ರೆಹೇ ಪ್ರಾಣನಿಗ್ರಹಃ |
ಅಲ್ಲಾವದೀನನೃಪತ ನ ಸಂಧಿರ್ನ ಚ ವಿಗ್ರಹಃ 1 (11, ೧೪ರ ಕೆಳಗೆ)
" ಸಂಧಿಯಲ್ಲಿ ಸರ್ವಸ್ವವನ್ನೂ ಸೆಳೆಯುವನು : ಯುದ್ಧದಲ್ಲಿ ಪ್ರಾಣವನ್ನೇ
ಉಡುಗಿಸುವನು. ಅಲ್ಲಾವದೀನ್ ದೊರೆಯ ಹತ್ತಿರ ಸಂಧಿಯೂ ಸಾಧ್ಯ
ವಿಲ್ಲ, ಯುದ್ಧವೂ ಸಾಧ್ಯವಿಲ್ಲ. ”
" ಇಲ್ಲಿ ಅಲ್ಲಾವದೀನನೆಂಬ ದೊರೆಯ ಸಂಗಡ ಸಾಮದಾನಾದಿ
ಗಳನ್ನು ಬಿಟ್ಟರೆ ಬೇರೊಂದು ಪ್ರಶಮನೋಪಾಯವೇ ಇಲ್ಲವೆಂಬುದು ವ್ಯಂಗ್ಯ.
ಇದು ವ್ಯತ್ತನ್ನರಿಗೂ ಥಟ್ಟನೆ ಸ್ಫುಟವಾಗುವುದಿಲ್ಲ'' ಎಂದು ವಿಶ್ವನಾಥನು
ವ್ಯಾಖ್ಯಾನ ಮಾಡುತ್ತಾನೆ. (ಆದರೆ ಈ ವ್ಯಂಗ್ಯವು ಕವಿಯ ಮನಸ್ಸಿನಲ್ಲಿ
ಇದ್ದಿ ತೇ, ಇಲ್ಲೊಂದು ಉಭಯಕೋಟಿಕ ಸಮಸ್ಯೆಯನ್ನು ಒಡ್ಡಿ ಬಿಡುವು
ದಷ್ಟೇ ಅವನ ಉದ್ದೇಶವೇ ಎಂಬ ಸಂಶಯಕ್ಕೆ ಎಡೆಯುಂಟು.)
2 “ಕಾಕು ' ಎಂದರೆ, ಭಾವಸೂಚಕವಾಗುವಂತೆ ದನಿಯಛಲ್ಲ ತರುವ ಏರಿಳಿತ, ಉಚ್ಛಾ
ರಣಿಯ " ಪಲುಕು '' (intonation):
೨೮೬ ಭಾರತೀಯ ಕಾವ್ಯಮಿಾಮಾಂಸೆ
ಈಗ ಬೇರೊಂದು ರೀತಿಯ ಸಂದರ್ಭವನ್ನು ಪರಿಶೀಲಿಸೋಣ.
* ಶಾಕುಂತಲ ನಾಟಕ 'ದ ಮೊದಲನೆಯ ಅಂಕದಲ್ಲಿ, ಧೃಂಗಬಾಧೆಯಿಂದ
ಕಥಾನಾಯಿಕೆ ಕಾತರಪಟ್ಟ ಅವಕಾಶವನ್ನುಪಯೋಗಿಸಿಕೊಂಡು ದುಪ್ಯಂ
ತನು ಮೂವರು ಸಖಿಯರಿಗೂ ಕಾಣಿಸಿಕೊಳ್ಳುತ್ತಾನಪ್ಟೆ. ಕುತಲಪ್ರ 3
ಗಳು ನಡೆಯುವಾಗ ಅನಸೂಯೆ, “ಆರ್ಯ ನಾದ ನಾದನಿನ್ನಿ ೦ದ ಯಾವ ರಾಜರ್ಷಿ
ವಂಶವು ಅಲಂಕೃತವಾಗಿರುವುದು? ನಿನ್ ಇಡೋಗದಿಂದ ಯಾವ. ಯಾವ ದೇಶದ
ಜನವು ಕಳವಳ ಪಡುವುದು? ಸುಕುಮಾರನಾದರೂ ನೀನು ಈ ತಪೋವನ
ಪರಿತ್ರ ಮಕ್ಕೆ ಪಾತ್ರನಾಗಲು ಕಾರಣವೇನು? ಎಂದ ?'' ಎಂದು ಕೇಳುತ್ತಾಳೆ. "ನೀನು
ಯಾರು? "ಯಾವ ದೇಶದವನು? ಇಲ್ಲಗೇಕೆ ಬಂದೆ ?'' ಎಂಬ ಪ್ರಶ್ನೆಗಳಿಗೆ
ಉತ್ತರ ಒರ ಪಡೆಯುವುದೇ ಅವಳ ಉದ್ದೇಶ. ಅದರೆ ಅವನ್ನು ವಾಚ್ಯ ವಾಚ್ಮವಾಗಿ
ಕೇಳದೆ, ಪೀಗೆ ವ್ಯಂಗ್ಯವಾಗಿ ಸೂಚಿಸಿದ್ದಾಳೆ. ಈ ಸಂದರ್ಭದಲ್ಲ ವಾಚ್ಯ
le tas tlh
ದಲ್ಲೇ ಚಮತ್ಕಾರ ಹೆಚ್ಚು, ವ್ಯಂಗ್ಕಾ ರ್ಥವು ಸುಂದರವಲ್ಲ, ಆದಕಾರಣ
ಇದು ಗುಣೀಭೂತವೇ ಸರಿ. ಇದನ್ನು ವಾಚ್ಯವಾಗಿಯ್ದೇ' ಹೇಳಿದ್ದ ರೆ
ಒರಟೊರಟಾಗಿ ಕಾಣಿಸುತ್ತಿತ್ತು. ಆದರೆ ಸ್ಕಾರಸ್ಯವುಳ್ಳ 'ಹೇಕೊಂದು
ರೀತಿಯಲ್ಲಿ ಸೂಚಿಸಿದ್ದ ರಿಂದ? ಅದಕ್ಕೆ ಪ್ರಾಧಾನ್ಯ ಬಾರದಿದ್ದರೂ ಅದರ
ಅಸೌಂದರ್ಯ ಇಡಹುಹಾಯಿತು. (ಇದರ ದರ ಜೊತೆಗೆ ಅನಸೂಯೆಯ ಸವಸ ಸಭ್ಯತೆ
ಸೌಜನ್ಯಾ ke ವ್ಯ ಕ್ಷವಾದುವು. ) ಹೀಗೆ ಅಸುಂದರವಾದದ್ದ ರ ರ
ದರ್ಗ ವನ್ನು ಕಡಮೆ ಡು ಗುಣೀಧೂತವೃಂಗ್ಯ ಮಾರ್ಗ ವನು ಅನು
ಸರಿಸಜೀಕಾಗುತ್ತ ದೆ. ವಿದಗೃರ `ಗೋಪಿ? ಗಳಲ್ಲ. ಈ ಬಗೆಯ ಮಾತು
ಕಥೆ ನಡೆಯುವುದು ಯಾರಿಗೆ ಗೊತ್ತಿ ಲ್ಪ!
ಮೇಲಿನ ಉದಾಹರಣಿಯಲ್ಲ ವ್ಹಾಚ್ಯದಷ್ಟು ಸುಂದರವಾಗದೆ ಹೋ
ದದ್ದರಿಂದ ವ್ಯಂಗ್ಯವು ಅಪ್ರಧಾನವಾಯಿತು.. ಇಷ್ಟಕ್ಕೇ ನಿಲ್ಲದೆ, ಅದು
ವಾಚ್ಯಕ್ಕೆ ಅಡಿಯಾಳಾಗ:ವುದೂ ಉಂಟು; ಎಂದರೆ, ಈ ವ್ಯಂಗ್ಯಾರ್ಥವು
ತೋರಿದ ಮೇಲೆ ಅದು ವಾಚ್ಯಾರ್ಥಕ್ಕೇ ಪುಪ್ಪಿ ಕೊಡುವುದೂ )_ ಉಂಟು.
3 ಇದು ಅಲಂಕಾರ ದೃಷ್ಟಿಯಿಂದ ಪರ್ಯಾಯೋಕ್ತಾಲಂಕಾರವಾಗುತ್ತದೆ.
4 ಇನ್ನು ಕೆಲವು ಕಡೆಗಳಲ್ಲಿ ವಾಚ್ಯಕ್ಕೂ ವ್ಯಂಗ್ಯಕ್ಕೂ ಸಮ ಪ್ರಧಾನ್ಯವಿರಬಹುದು,
ಮತ್ತೆ ಕೆಲವು ವೇಳೆ, ವಾಚ್ಯವು ಪ್ರಧಾನವೋ ವ್ಯಂಗ್ಯವು ಪ್ರಧಾನವೋ ಎಂಬ ಸಂದೇಹ
ಬರಬಹುದು... .ಇಂಥವನ್ನೂ ಗುಣ್ಣೀಭೂತವ್ಯಂಗ್ಯವೆಂದೇ ಪರಿಗಣಿಸುತ್ತಾರೆ.
೧೮. ಗುಣೀಭೂತವ್ಯಂಗ್ಯ, ಚಿತ್ರ ೨೮೭
೧೬ನೆಯ ಅಧ್ಯಾಯದ ಪ್ರಾರಂಭದಲ್ಲಿ (ಪು. ೨೪೪) ಕೊಟ್ಟ ಗಿರಾತ
("" ಕರಿದೆನಿಸಿರ್ದ ದಂತಿಘಟೆ ಪಿಂಗಳಮಾದುದು ದಾಣಪಾತದಿ೦
ಈ ಬಗೆಯದು.
ಇನ್ನೊಂದು ನಿದರ್ಶನ:
ಅನುರಾಗವತೀ ಸಂಧ್ಯಾ ದಿವಸಸ್ತತ್ಪುರಃಸರಃ |
ಅಹೋ ದೈವಗತಿಃ ಕೀದೃಕ" ತಥಾಪಿ ನ ಸಮಾಗಮಃ ॥
(ಧ್ವನ್ಯಾ., ಪು. ೩೭)
[ಅನುರಾಗವತಿ ಸಂಧ್ಯೆ, ಆವಳ ಮುಂಗಡೆಯೊಳಿ ಹಗಲ ಚಲನೆ;
ಅಹೆ, ವಿಧಿಯ ಮಾಟ ಪೇ, ಒದಗದಿ೦ತಾದರೂ ನೆರೆವ ಘಟನೆ 1]
ಈ ಪದ್ಯದಲ್ಲಿ, ಸಂಜೆ ಹಗಲುಗಳ ವರ್ತನೆಯ ವರ್ಣನೆಯಿಂದ,
ಪ್ರೇಯಸಿಗೆ ಪ್ರಿಯನಲ್ಲರುವ ತೀವ್ರಾಭಿಲಾಷೆಯೂ ಅವನು ಅತಿ
ಸಮಾಪದಲ್ಲೇ ಇದ್ದರೂ ಸಮಾಗಮಕ್ಕೆ ತಮ್ಮ ಕೈವಿಸಾರಿದ ಕಾರಣದಿಂದ
ಉಂಟಾಗುವ ಅಡ್ಡಿಯೂ ಸ್ಫುಟವಾಗಿ ವ್ಯಂಗ್ಯವಾಗುತ್ತದೆ. ಆದರೆ
ಪ್ರತೀತಿ ಇಲ್ಲಿ ವಿಶ್ರಾಂತಿ ಹೊಂದುವುದಿಲ್ಲ. ಅದು ವಾಚ್ಯಾರ್ಥವಾದ
ಸಂಜೆಹಗಲುಗಳ ಸಂಬಂಧಕ್ಕೇ ಮರಳುತ್ತದೆ. ಈ ವಾಚ್ಕಾ ರ್ಥವನ್ನು
ಹೊಂದಿಸಿಕೊಳ್ಳಲು, ಇದಕ್ಕೆ ಪುಷ್ಟಿ ಕೊಡಲು, ವ್ಯಂಗ್ಗಾ ರದ ಜ್ಞಾ ನೆ
ಅಗತ್ಯವಾಯಿತು. ಇದರ ಬಲದಿಂದ ಸಂಜೆಯನ್ನು ದ್ರ ಯೆಯಾಗಿಯೂ
ಹಗಲನ್ನು ಪ್ರಿಯನಾಗಿಯೂ ಕಲ್ಪಿಸಿಕೊಂಡು, ಇವರಿಬ್ಬ 3 ಸಮಾಗಮಕ್ಕೆ
ಅಡ್ಡಿತರುವ ವಿಧಿಗತಿಯನ್ನು ಪರಿಶೀಲಿಸುವಾಗ ನಿರ್ನೆದಧಾವದ
ಅನುಭವ ನಮಗುಂಟಾಗುತ್ತದೆ. ತನ್ನ ಸೇವಕನ ಮದುವೆಗೆ ಬಂದ
ಪ್ರಭು ಮೆರೆವಣಿಗೆಯಲ್ಲ ಸೇವಕನಿಗೆ ತಾನು ಸಂಗಡಿಗನಾಗಿ ಹೋಗಿ
ಉತ್ಸವದ ವೈಭವವನ್ನು ಹೆಚ್ಚಿ ಸುವಂತೆ ಇಲ್ಲ ವ್ಯಂಗ್ಯವು ವಾಚ್ಯಕ್ಕೆ
ಉಪಸ್ಕಾರಕವಾಗಿ ನಿಲ್ಲುತ್ತದೆ.
ಇಲ್ಲಿ ಇನ್ನೊ೦ದು ಅಂಶವನ್ನು ಮರೆಯಬಾರದು. ಒಂದು ವ್ಯಂಗ್ಯ
ದಿಂದ ಪಪ್ಪಿ ಹೊಂದಿದ ವಾಃ ವಾಚ ೈವು ಸ ಬಳಿಕ ಇನ್ನೊ ೦ದು ವ ೈಂಗ್ಯಕ್ಕೆ ತಾನೇ
ವ್ಯಂಜಕವಾಗಬಹುದು. ರ ಇತ್ ನಮಾಹರಣಿಯಲ್ಲ ಆಗಿರುವುದು
5 ತತ್ರ ಔ ತೇಷಾಂ ಅಧಿಕಾರಿಕ ವಾ [ಚ್ಯಾ] ಪೇಕ್ಷಯಾ ಗುಣೀಭಾವಃ ವಿವಾಹ
ಪ್ರವೃತ್ತಭೃತ್ಯಾನುಯಾಯಿ ರಾಜವತ್.'' (ಧನ್ಯಾ. ಪು. ೨೦೬)
೨೮೮ ಭಾರತೀಯ ಕಾವ್ಯವಿಸಾಮಾಂಸೆ
ಹೀಗೆಯೇ. ಪ್ರಿಯಪ್ರೇಯಸಿಯರ ವೃತ್ತಾಂತ ರೂಪವಾದ ವ್ಯಂಗ್ಯವು
ಹಗಲಿರುಳುಗಳ ವೃತ್ತಾಂತ ರೂಪವಾದ ವಾಚ್ಯಕ್ಕೆ ಪೋಪಕವಾಯಿತು.
`ಈ ವಾಚ್ಯವು ಮುಂದೆ ನಿರ್ದೇದ ಭಾವಕ್ಕೆ ವ್ಯಂಜಕವಾಯಿತು ; ಮೊದಲಿನ
ವ್ಯಂಗ್ಯದಿಂದ ಪೀಗೆ ಪುಷ್ಟಿ ಗೊಳ್ಳದಿದ್ದರೆ ಅದು ಪೀಗೆ ನಿರ್ಮೇದವ್ಯಂಜಕ
ವಾಗುವುದು ಸಾಧ್ಯವೇ ಆಗುತ್ತಿರಲಿಲ್ಲ. ಹಗಲೂ ಇರುಳೂ ಒಂದು
ಗೂಡುವುದಿಲ್ಲ ಎಂದಪ್ಪೇ ವಾಚ್ಯಾರ್ಥವಾಗಿ ನಿಂತಿದ್ದರೆ ಇಲ್ಲ ನಿರ್ಮೇದವೆಲ್ಲ
ತೋರುತ್ತಿತ್ತು? ಹೀಗೆ ಮೊದಲಲ್ಲಿ ತೋರಿದ ವ್ಯಂಗ್ಯದ ದೃಷ್ಟಿಯಿಂದ
ಮಾತ್ರ ಈ ಪದ್ಯವನ್ನು ಗುಣೀಥೂತವ್ಯಂಗ್ಯಪೆಂದು ಕರೆಯುವುದು ;
ಪರ್ಯಂತದಲ್ಲ ಆಸ್ವಾದ್ಯವಾಗುವ ಭಾವದ ದೃಷ್ಟಿಯಿಂದ ಇದು ಧ್ಯನಿಕಾವ್ಯಪೇ
ಸರಿ. ಇಂಥ ಕಡೆಗಳಲ್ಲಿ ಅರ್ಥಪ್ರತೀತಿಯಾಗುವ ಕ್ರಮವನ್ನು ಪೀಗೆ
ತೋರಿಸಬಹುದು :
ಶಬ್ದ. ವಾಚ್ಯ -_ ಮೊದಲನೆಯ es
———ಬರಡನೆಯ ವ್ಯಂಗ್ಯ
ವೃಂಗ್ಯವು ವಾಚ್ಯಕ್ಕೇ ಪೋಷಕವಾಗಬಹುದಾದರೆ, ಇನ್ನೊಂದು
ವ್ಯಂಗ್ಯಕ್ಕೆ ಪೋಷಕವಾಗುವುದು ಏನಾತ್ಚರ್ಯ? ಇಂಥ ಯಉದಾಹರಣಿ
ಗಳನ್ನು ಪಿಂದೆ ಆಗಲೇ ನೋಡಿದ್ದೇವೆ. ಒಂದು ವಸ್ತು (ಅಥವಾ
ಅಲಂಕಾರ) ಧ್ವನ್ತಿ ಇನ್ನೊಂದು ವಸ್ತುವನ್ನೋ "" ಅಲಂಕಾರ ''ವನ್ನೋ
ವ್ಯಂಜಿಸಬಹುದು. ವಸ್ತು ಧ್ವನಿ ಅಲಂಕಾರಧ್ವನಿಗಳೆರಡೂ ಪರ್ಯಂತದಲ್ಲಿ
ರಸಧೃನಿಗೆ ಪೋಷಕವಾಗಬಹುದು. ರಸಭಾವಾದಿಗಳು ಜೇರೊಂದು
ರಸಕ್ಕೋ ಭಾವಕ್ಕೋ ("ವಸ್ತು ''ಎಗೂ ಕೂಡ) ಉಪಸ್ವಾರಕವಾಗಬ
ಹಾಂಗ ವ ಅಡ ಎ ಗುಡ ಛತನೇ
ಆಗುತ್ತರ ದೆ. ರಸವು ಪೀಗೆ ಗುಣೀಧೂತವಾಗುವುದಕ್ಕೆ ಒಂದು ಉದಾಹರಣಿ
ಯನ್ನು ಮಾತ್ರ ಇಲ್ಲ ಗಮನಿಸೋಣ :
೨ ಪಂಪನ " ಆದಿಪುರಾಣ'ದಲ್ಲಿ ಲಲಿಕಾಂಗದೇವನು ಲಯಹೊಂದಿದ
ಬಳಿಕ ಅವನ ಪ್ರಾಣವಲ್ಲಭೆ ಸ್ಟಯಂಪ್ರಭೆ ಪೀಗೆ ದುಃಖಿಸುತ್ತಾಳೆ :
೧೮. ಗುಣೀಭೂತವ್ಯಂಗ್ಯ, ಚಿತ್ರ
ಮದನನ ಕಯ್ದುವೆಲ್ಲಿದನನಂಗನ ಕೈ ಇಡೆಯೆಲ್ಲಿದ೦ ವಿಳಾ
ಸದ ಕಣಿಯೆಲ್ಲಿದರಿ ಚದ.ರ ಪುಟ್ಟಿ ದನೆಲ್ಲದಂ ವಿನೋ!
ದದ ಮೊದಲೆಲ್ಲವಂ ಸೊಬಗಿನ. ಗರವೆ ಲ್ಲಿದನಿಚ್ಚೆ ಮಾಣ್ಮ ನೆ
ಲ್ಲದನೆರ್ದೆ ಜಾಣ್ಮ ನೆನ ರಸನೆಲ್ಲದನೋ ಲಲಿತಾಂಗವಲ್ಲಭ೦॥ (111. ೧೫)
ಈ ಪದ್ಯದ ಮಾತುಗಳೆಲ್ಲ ಶೃ೦ಗಾರರಸಪರವಾದವು ; ಆದರೆ
ಅರ್ಥಪ್ರತೀತಿ ಈ ರಸದ ಅನುಭವಣಲ್ಲಿ ವಿಶ್ರಮಿಸುವುದಿಲ್ಲ. ಸ್ವಯಂಪ್ರಭೆ
ತನ್ನ ಇನಿಯನನ್ನು ಕಳೆದುಕೊಂಡಿರುವುದರಿಂದ, ಅವಳ ಈ ಶಂಗಾರ
ಷಿ Fe
ಬ ಉಕಿ 'ಕ್ರಿಯೆಲ್ಪವುಃ ಕರುಣರಸಕ್ಕೇ ಪೋಪಕವಾಗುತ್ತದಡೆ. ಹೀಗೆ
ಇಲ್ಲ ಒ೦ದು ನರವ ಪ್ರ ರ್ರ ತೀತವಾದರೂ ಅದು ಇನ್ನೊಂದ ೦ದು ಸಾ ಅಂಗ
ವಾಗಿ ಬಂರ ಚ ದು ಗುಣೀಭೂತವ್ಯಂಗ್ಯ ವಾಗುತ್ತದೆ.
ಗುಣ್ ಭೂತವ ೦ಗ್ಯದ ಪ್ರಕಾರಗಳನ್ನೆಲ್ಲಾ ಮಮ ಮ್ಮಟನು _ಪೀಗೆ
ಸಂಗ್ರಪಿಸು ತ್ತಾನೆ :
ಅಗೂಢನುಪರಸ್ಕಾ ೦ಗ೨ ವಾತ್ಯ ದ್ದ 4೦ಗಮಸ್ತುಟಂ!।
ಸಂದಿಗ್ಧ ತುಲ್ಯಪಾ ು ಧಾನ್ಯೇ ಕಾ ಎಸ್ಯಾಕ್ಷಿಪ ಮಸುಂಜರಂ
ವ್ಯಂಗ್ಗ "ಬೇವಂ ಸುಣೀಥೂತವ್ಯ ೦ಗೃ ಶ್ಯಾಪ್ಟ್ ಭಿದಾಃ ಸ್ಮೃತಾಃ।
'(ತಾವ್ಯಪ್ರ ಕಾಶ. y. ೧-೨)
6 ಹೀಗೆ ರಸವು ಅಪ್ರಧಾನವಾಗಿ ಬೇರೊಂದು ಅರ್ಥಕ್ಕೆ ಅಂಗವಾದರೆ, ಅಲ್ಲಿರುವದು
ಅ ರಸದ ದೃಷ್ಟಿಯ೦ದ ರಸವದಲಂಕಾರವೆಂದೂ, ರಸಧ್ವನಿಯಲ್ಲವೆಂದೂ ಧ್ವನಿಪಕ್ಷದವರು
ನಿಯಮನ ಮಾಡುತ್ತಾರೆ. (ರಸವಿದ್ದ ಕಡೆಯಲ್ಲೆಲ್ಲಾ, ಅದು ಪ್ರಧಾನವೇ ಅಪ್ರಧಾನವೇ
ಎ೦ಬುದನ್ನು ಗಮನಿಸದೆ ರಸವದಲಂಕಾರವಂದು ಪ್ರಾಚೀನರು ಹೇಳುತ್ತಿದ್ದರು.)
ಪ್ರಧಾನೇ*ನ್ಯತ್ತ ವಾಕ್ಯಾರ್ಥೇ ಯತ್ರಾಂಗಂ ತು ರಸಾದಯಃ |
ಕಾವೈೇ ತಸ್ಮಿನ್ನಲಂಕಾರೋ ರಸಾಂದಿರಿತಿ ಮೇ ಮತಿಃ ॥
ಧ್ರನ್ಯಾಲೋಕದ ಈ ಕಾರಿಕೆಯನ್ನೂ (|. ೫) ಐದರ ಮೈಲನ ವೃತ್ತಿಯನ್ನೂ ಗಮನಿಸಿ.
ಇದನ್ನು ಕುರಿತು ಅಭಿನವಗುಪ್ತನು ವ್ಯಾಖ್ಯಾನ ಮಾಡುತ್ತಾ, '" ರಸವು ಅಲಂಕಾರ
ವಾಗುತ್ತದೆ ''ಎಂಬ ಹೇ ಕೆಯಲ್ಲತೋರಬಹುದಾದ ಅಸಾಮಂಜಸ್ಯವನ್ನುಪರಿಹರಿಸುತ್ತಾವೆ :
. ಚಂದ್ರ ಮೂದಲಾದ ವಸ್ತುವಿಮೊಂದಿಗೆ ವದನ ಮೊದಲಾದ ಬೇರೊಂದು ವಸ್ತು
ಹೋಲಕೆ ಪಡೆಯುವುದರಿಂದ ರಮಣೀಯವೆಂದು ತೋರಿ, ಅದ ೦ದ ಹೇಗೆ ಅಲಂಕಾರ
ಗೊಳ್ಳುವುದೋ, ಹಾಗೆಯೇ ರಸದಿಂದ ಕೂಡ ವಸ್ತುವಾಗಲಿ ಬೇರೊಂದು ರಸವಾಗಲಿ
ಉಸಸ್ಕಾರ ಹೊಂದಿ ಸುಂದರವಾಗಿ ಭಾಷವಾಗುತ್ತದ. ಹೀಗೆ ವಸ್ತುವಿನಂತೆಯೇ ರಸಕ್ಕೂ
ಅಲಂಕಾರತ್ವವುಂಟೆಂಬುದರಲ್ಲ ವಿರೋಧವೇನಿದೆ ? ಆದರೆ, ಇಲ್ಲ ರರ ಏನುಮಾಡಿ ಸ್ರಕೃತ
ಮಾದ ಅರ್ಥವನ್ನು ಅಲಂಕರಿಸುತ್ತದೆ ಎಂದು ಕೇಳಿದರೆ, ಆ ಪಕ್ಷದಲ್ಲ ಉಪಮೆ ಕೂಡ ಏನು
ಮಾಡಿ ಅಲಂಕರಿಸುತ್ತದೆ (ಎಂದು ಕೇಳಬೇಕಾಗುತ್ತದೆ]. ಇದೇನು, ಪ್ರಸ್ತುತವಾದ
ಅರ್ಹವು ಆದರಿಂದ ಉಪಮಿತವಾಗುವುದಿಲ್ಲವೆ ಎಂದರೆ, -ಆ ಪಕ್ಷದಲ್ಲ ರಸವಿಂದ ಕೂಡ ಆ
ಅರ್ಥವು ಸರಸೀಕೃತಮಾಗುತ್ತದೆ ಎಂಬುದು ಸ್ಟಯಂವೇದ್ಯ....'' ,
* KM. 19
೨೯೦ ಭಾರತೀಯ ಕಾವ್ಯಮಾಮಾಂಸೆ
(೧) ಗೂಢವ್ಲಾದ ವ್ಯಂಗ್ಯ, (೨) ಇನ್ನೊಂದು ವ್ಯಂಗ್ಯಕ್ಕೆ ಅಂಗವಾದದ್ದು R
(೩) ವಾಚ್ಯಾರ್ಥಕ್ಕೆ ಉಪಸ್ಕಾರಕವಾಗಿ ಬರತಕ್ಕದ್ದು x (೪) ಅಸ್ಫುಟವಾ
ದದ್ದು (೫) ವಾಚ್ಯವು ಪ್ರಧಾನವ್ಟೇ ವ್ಯಂಗ್ಯವು ಪ್ರಧಾನವೇ ಎಂಬ ಸಂದೇ
ಹಕ್ಕೆ ಅವಕಾಶಕೆ ಇಡತಕ್ಕದ್ದು, (೬) ವಾಚ್ಯದಪ್ಪೇ ಪ್ರಾಧಾನ್ಯವುಳ್ಳದ್ದು,
(೭) ಕಾಕುವಿನಿಂದ ಗಮ್ಯವಾಗತಕ್ಕದ್ದು » (೮) ಅಸುಂದರವಾದದ್ದು ನ
ಹೀಗೆ ಗುಣೀಭೂತವೈಂಗ್ಯದಲ್ಲಿ ಎಂಟು ಭೇದಗಳು.''
ಮೇಲಿನ ಪರಿಶೀಲನೆಯಿಂದ ಒಂದು ವಿಷಯ ಸ್ಪಪ್ಪವಾಗಿರಬೇಕು.
"" ಗುಣೀಧೂತವ್ಯಂಗ್ಯ'' ಎಂಬ ಶಬ್ದವನ್ನು ಕೇಳಿದ ಮಾತ್ರಕ್ಕೇ ಧ್ವನಿ
ತತ್ನರರು ಹೆದರಬೇಕಾಗಿಲ್ಲ, ಮುಖ ತಿರುಗಿಸಬೇಕಾಗಿಲ್ಲ. ವಾಕ್ಯದ ಒಂದು
ಭಾಗದಲ್ಲಿ ವ್ಯಕ್ತ ವಾಗುವ ವ್ಯಂಗ್ಯವು ಗೌಣವಾಗಬಹುದು ; ವಾಚ್ಯಾರ್ಥಕ್ಕೆ
ಪೋಷಕವಾಗಬಹುದು. ಆದರೆ ವಾಕ್ಯದ ಒಟ್ಟು ತಾತ್ಪರ್ಯವನ್ನು ಪರ್ಯಾ
ಲೋಚಿಸುವಾಗ ಅದು ರಸಾಭಿಮುಖವಾಗಿಯೇ ಹರಿಯಒಹುದು. ಇಲ್ಲೆಲ್ಲಾ
ಎಷ್ಟೋ ವೇಳೆ, ಅಂಶಭಾಗದಲ್ಲಿ ಹೊಳೆಯುವ ವ್ಯಂಗೃದಿಂದ ಸಾಕ್ಷಾತ್ತಾ
ಗಿಯೋ ಪಾರಂಪ ರ್ಯವಾಗಿಯೋ ಈ ಕೊನೆಯ ಧೃನಿಗೇ ಪುಷಿ ಿಯೊದಗು
ತ್ತದೆ, ಪೀಗೆ ಗುಣೀಭೂತವೃಂಗ್ಯವು ಎಷ್ಟೋ ಸಲ _ಕಾವೃದ ಪೈಚಿತ್ರ ತ
ಸಂಪತ್ತನ್ನು ಬೆಳಸುತ್ತದೆ, ಅದರ ಆಸಾ ದವ್ನನ್ನು ಹೆಚ್ಚಿ ್ಲಿಸುತ್ತದೆ. ಇದನ್ನು
ಮನಸ್ತಿನಲ್ಲಿಟ್ಟುಕೊಂಡೇ ಧೃನಿಕ್ರಾರನು ಪೀಗೆ ಹೇಳಿದನು;
ಪ್ರಕಾರೋಟಯಂ ಗುಣೀಭೂತವ್ಯಂಗ್ಯೋಪಿ ಧೈನಿರೂಪತಾಂ!
ಧತ್ತೇ ರಸಾದಿತಾತ್ಸರ್ಯಪರ್ಯಾಲೋಚನಯಾ ಪುನಃ ॥
(ಧ್ವನ್ಯಾ., 11; ೪೧)
ಈ ಗುಣೀಧೂತವ್ಯಂಗ್ಯವೆಂಬ ಪ್ರಕಾರವು ಕೂಡ ರಸವೇ
ಮೊದಲಾದದ್ದನ್ನು ಪರ್ಯಾಲೋಚನೆ ಮಾಡಿದಾಗ ಧ್ವನಿರೂಪವನ್ನೇ
ತಾಳುತ್ತದೆ.''
ಇದು ಅತಿಮುಖ್ಯವಾದ ವಿಷಯವಾಗಿರುವುದರಿಂದ ಇದಕ್ಕೆ ಒಂದು
ನಿದರ್ಶನವನ್ನು ಪ್ರತ್ಯೇಕವಾಗಿ ಕೊಡುವುದು ಆವಶ್ಯಕ. "ಗದಾಯುದ್ಧ _
ದಲ್ಲಿ, ದುರ್ಯೋಧನನು ತಮ್ಮಂದಿರನ್ನೂ ಮಕ್ಕಳನ್ನೂ ಮಿಶ್ರರನ್ನೂ ಬಾಂಧ
ವರನ್ನೂ ಕಳೆದುಕೊಂಡು ಸಂಗ್ರಾಮಧೂಮಿಯಲ್ಲಿ ಸಂಜಖನೊಡನೆ
ನಡೆಯುತ್ತಿದ್ದಾನೆ. ಆಗ ಧೃತರಾಷ್ಟ್ರ ಗಾಂಧೌರಿಯರು ತನ್ನನ್ನು ಹುಡುಕಿ
ಕೊಂಡು ಬರುತ್ತಿರುವರೆಂಬುದನ್ನು ಅರಿತು,
೧೮. ಗುಣೀಭೂತವ್ಯಂಗ್ಯ; ಚಿತ್ರ 8೯
ನ ಕಂದ ನಿಜಾನುಜರೆಲ್ಲಿದ-
ರೆ೦ದೆನ್ನ೦ ಜನನಿ ಬಂದು ಬೆಸಗೊಂಡೊಡದೇ... |
ನೆಂದು ಮಚುಮಾತುಗುಡುವೆಂ
ಕೊಂದರ್ ಕೌಂತೇಯರೆಂದು ಬನ್ನೈಸುವೆನೋ I (1/1. ೭೬)
ಎಂದು ದುರ್ಯೋಧನನು ಹಲುಬಿ ಮೂರ್ಛೆ ಹೋಗುತ್ತಾನೆ. ಇಲ್ಲ " ಕ೦ದ''
ಎಂಬ ಪದವನ್ನು ಪರಿಶೀಲಿಸಿ. ದುರ್ಕೋಧನನ ಮಾನಸಕಲ್ಪನೆಯಲ್ಲಿ
ಗಾಂಧಾರಿ ಬಂದು ಬೆಸಗೊಳ್ಳುವುದು « ಪುತ್ರ'' ಎಂದಲ್ಲ, “ದುರ್ಯೋಧನ”
ಎಂದಲ್ಲ; "" ಕಂದ'' ಎಂದು. ""ಕಂದ'' ಎನ್ನುವುದರ ವಾಚ್ಯಾರ್ಥ
"ಮಗ ಘ' ಎಂದಿಪ್ಟೇ ಆದರೂ, ಅದರಲ್ಲಿ ಆರ್ದ್ರ ಪ್ರೇಮವನ್ನು ವ್ಯಂಜಿ
ಸುವ ಸಾಮರ್ಥ ಕೆ ವಿಶೇಷವಾಗಿದೆ. ತಾನು ತನ್ನ ಎಲ್ಲ ತಮ್ಮಂದಿರನ್ನು,
ಗಾಂಧಾರಿಯ ಮಿಕ್ಕ ಮಕ್ಕಳನ್ನು R ಯುದ್ಧದಲ್ಲಿ ಕೊಲೆಗೆ ಈಡುಮಾಡಿರು
ವಾಗ, ಅವಳು ಬಂದು, "" ಕಂದ, ನಿನ್ನ ತಮ್ಮಂದಿರೆಲ್ಲಿ ?'' ಎಂದು ಕೇಳಿ
ದರೆ ಅವನು ಏನೆಂದು ಉತ್ತರ ಕೊಟ್ಟಾನು? "" ದುರ್ಯೋಧನ, ನಿನ್ನ
ತಮ್ಮಂದಿರೆಲ್ಲ? '' ಎಂದು ಗಾಂಧಾರಿ ಕೇಳಿದ್ದರೆ ಅವನ ಗಂಟಲು ಇಷ್ಟು
ಬಿಗಿಯುತ್ತಿರಲಿಲ್ಲ. $ ಕಂದೆ' ಎಂಬ ಸಂಬೋಧನೆಯಲ್ಲ ವೃಂಗ್ರವಾ
ಗುವ ಅತಿತಯವಾತ್ಚಲ್ಯವು ಆ_ಪದದ ವಾಚ್ಮಾರ್ಥಕ್ಕೇ ಪುಪ್ಪಿ ಕೊಟ್ಟು ಆ
ಮೂಲಕ ದುರ್ಕೋಧನನ ಶೋಕವನ್ನು ಇಮ್ಮಡಿಸುತ್ತದೆ; ಪದ್ಯದ ಕರುಣ
ರಸ್ತದ್ವನಿಗೆ ಪರಮಪೋಷಕೆವಾಗುತ್ತದೆ. ಈ ಪದ್ಯದಲ್ಲಿ ಬಂದಿರುವ
"" ಜನನಿ”, "" ಕೌಂತೇಯರ್'' _ ಮೊದಲಾದ ಪದಗಳ ವಿಷಯವೂ
ಹೀಗೆಯೇ. ಇಲ್ಲೆಲ್ಲೂ ಪದವನ್ನು ಮಾತ್ರ ಗಮನಿಸಿದರೆ ಗುಣ್ಣೀಭೂತ್ರ
ವ್ಯಂಗ್ಯವಾಗುತ್ತದೆ ; ಒಟ್ಟು ವಾಕ್ಯವು ದೃನಿಯಾಗುತ್ತದೆ.
ಪದವನ್ನು ಒಂದು ಮೊಗ್ಗಿಗೆ ಹೋಲಿಸಬಹುದು, ಅದರಲ್ಲಿ,
ನಿಘಂಟಿಗೆ ನಿಲುಕದ, ಲೋಕವ್ಯವಹಾರದಲ್ಲ ಹೊರಸೂಸದ ಪರಿಮಳ
ಕೋತವೊಂದಿರುತ್ತದೆ. ಕವಿ ತನ್ನ ಕಾವ್ಯದೆ ಸರವನ್ನು ಕಟ್ಟಲು ಈ
ನಾತ ತಸ್ಮಾತ್ ವಾಕ್ಯಂ ತತ್ರ ಧ್ವನಿ, ಪದಾನಿ ತು ಗುಣೀಭೂತವ್ಯಂಗ್ಯಾನಿ''
(ಧ್ರನ್ಯಾ., ಪು. ೨೧೫).
ಕೆಲವು ಕಡೆಗಳಲ್ಲಿ ಪದಗಳು ಷೃಂಗೃಸಂಷನ್ನವಾಗಿದ್ದರೂ ಒಟ್ಟು ವಾಕ್ಯದಲ್ಲಿ ಯಾವ
ರಸವೂ ಸ್ಫುಟವಾಗಿ ತೋರದಿರಬಹುದು, ಅದನ್ನು ಅಭಿವ್ಯಕ್ತಪಡಿಸುವ ತಾತ್ಪರ್ಯ ಕವಿಗೆ
ಇಲ್ಲದಿರಬಹುದು; ಅಗ ಗುಣೀಭೂತವ್ಯಂಗ್ಯವೇ ಸಮುದಾಯಧರ್ಮವಾಗುತ್ತದೆ.
(ಧೃನ್ಯಾ., ಪು. ೨೧೫ ನೋಡಿ.)
19-23
೨೯೨ ಭಾರತೀಯ ಕಾವ್ಯಮಾಮಾಂಸೆ
ಮೊಗ್ಗುಗಳನ್ನು ಆರಿಸಿ ಆ ಸುನರಿತು ಜೋಡಿಸಿದಾಗ ಇವೆಲ್ಲ ಚೆನ್ನಾಗಿ
ಅರಳಿ, ಪೂರ್ಣ ಸೌರರವನ್ನು ಬೀರಿ ಮನೋಹರವಾಗುತ್ತವೆ. ಇದರಿಂದ
ಹೂವಿನ ಸರದ ಸೊಬಗು ಅತಿಶಯವಾಗುತ್ತದೆ. ಒಳ್ಳೆಯ ಕಾವ್ಯದಲ್ಲಿ
ಗುಣೀಭೂತವ್ಯಂಗ್ಯವು ರ್ಮೇಸುವುದು ಹೀಗೆ
ಇನ್ನೊಂದು ವಿಷಯ. ವಿಚಾರ ಸೌಲಭ್ಯಕ್ಕಾಗಿ ನಾವು ಒಂದು
ವಾಕ್ಯವನ್ನೋ ಪದ್ಯವನ್ನೋ ನಿದರ್ಶಿಸಿ ಪೃಥಕ್ಕರಿಸಿ ನೋಡುತ್ತೇವೆ.
ಆದರೆ "" ಮುಕ್ತಕ ''ವನ್ನು ಬಿಟ್ಟರೆ ಇನ್ನೆಲ್ಲಯೂ ಒಂದೇ ವಾಕ್ಯಕ್ಕೆ, ಒಂದೇ
ಪದ್ಯಕ್ಕೆ, ಒಂದು ಕಾವ್ಯವಾಗುವುದಿಲ್ಲ. ಪೂರ್ಣಕಾವ್ಯವು ಅನೇಕಾನೇಕ
ವಾಕ್ಯಗಳ ಜೋಡಣಿ ಇದರಲ್ಲಿ ಒಂದೊಂದು ವಾಕ್ಯವನ್ನೇ ಹಿಡಿದು
ನೋಡುವಾಗ, ವ್ಯಂಗ್ಯವು ಗುಣೀಭೂತವೆ೦ ನ ತಾರಕ ಸದು. ಎಷ್ಟೋ
ಸಲ ಸ್ಫುಟವಾಗಿ ತೋರದೆಹೇ ಹೋಗಬಹುದು. ಆದರೆ ಒಟ
ಕಾವ್ಯದ” ದೃಷ್ಟಿಯಿಂದ ನೋಡುವಾಗ ಇದೆಲ್ಲ ಯಾವುದೋ ಒಂದು
ವ ಅರವು ಅನುಭಾವದ ಅಂಶವಾಗಿ ಪ್ರಬಂಧಧ್ಯನಿಗೆ ವ್ಯಂಜಕ
ವಾಗಿರುತ್ತದೆ. ಆದಕಾರಣ ಧೃ್ವನಿವಿಷ್ಠೇಚನೆಯನ್ನು ಬಿಡಿ ಪಠ್ಯಕ್ಕೇ
ಮುಗಿಸಿಬಿಡಬಾರದು.
ಕಾವ ದಲ್ಲಿ ವ್ಯಂಗ ೦ಗೂ ್ಯರ್ಥವು ಪ್ರಧಾನವಾಗಿಲ್ಲದಿದ್ದರೆ ಹೋಗಲಿ ,
ಗೌಣವಾಗಿಯಾದರೂ ವ್ಯಕ್ತ ವಾಗಿದ್ದ ರೆ ಅದು “ಚಿತ್ರ'' ವೆನ್ನಿಸಿಕೊಳ್ಳು
ತ್ತದೆ. ನಿಜವಾಗಿ ತು ಕಾವ ಸವೇ ಆ ಅಲ್ಲ; ಕಾವ್ಯದ € ೬೫365 ಮೂತ್ರ.
ಇಡೇನ., ವ ಸ್ಯ ೦ಗ್ಯದ ಸ್ಪರ್ಶವೇ ಇಲ್ಲದ ಕಾವ್ಯಪ್ಪ ್ರತಾರವರುಪುದನಟಿ
ವಸ್ತು ವ್ಯಂಗ್ಯವಾಗಲಿ ಅಲಂಕಾರವ್ಯಂಗ್ಯವಾಗಲಿ "ಇಲ್ಲದಿದ್ದರೂ ಯಾವುದಾ
ದರೂ ಒಂದು ರಸದ ಸ್ಪರ್ಶ ಉ ಯಲ್ಲಿ ಇದ್ದೇ ಇರಬೇಕಲ್ಲವೆ |
ಏಕೆಂದರೆ, ರಸವು ಚಿತ್ತವೃ ತ್ತಿವಿಶೇಷ. ಓ೦ದಲ್ಲ ಒಂದು ಚಿತ್ತವೃತ್ತಿಯನ್ನು
ಉಂಟುಮಾಡದಂಥ ವಸ್ತುವಿಶೇಷ ಜಗತ್ತಿನಲ್ಲಿ ಯಾವುದಿದೆ? ಈ
ಆಕ್ಷೇಪಣಿಗೆ ಆನಂದವರ್ಧನನ ಉತ್ತರ ಇಷ್ಟೆ: ರಸಾದಿಗಳು ಗೋಚರ
ಬಾಗದ ಕಾವ್ಯಪ್ರಕಾರವಿಲ್ಲ; ನಿಜ ಆದರೆ ಎಲ್ಲ ರಸಭಾವಾದಿಗಳನ್ನು
ನಿರೂಪಿಸುವ ಉದಡ್ದೇಶಷೇ ಇಲ್ಲದೆ ಶಬ್ಧಾಲಂಕಾರವನ್ನಾಗಲಿ ಅರ್ಥಾ
ಲಂಕಾರವನ್ನಾಗಲಿ ಕವಿ ವಿ ರಚಿಸುತ್ತಾನೆ. ನಮೋ, pe ಅವನ ಎಂ ವಿವಕ್ಷೆಯ ದೃಷ್ಟಿ
ಯಿಂದ ಅರ್ಥವು ರಸಾದಿತೊನ್ಯವಾಗಿಜೆಯೆಂದು ಹೇಳುತ್ತೇವೆ. ಎಂದರೆ,
೧೮. ಗುಣೀಭೂತವ್ಯಂಗ್ಯ, ಚಿತ್ರ ೨೯೩
ಕಾವ್ಯದಲ್ಲಿ ಶಬ್ಧಗಳ ಅರ್ಥವು ವವಕ್ಷೆಯನ್ನು ಅವಲಂಬಿಸುತ್ತದೆ. ಕವಿಗೆ
ಪ ಸಶವಿಲ್ಲದಿದ್ದ ರೂ, ವಾಚ್ಕದ ಸಾಮಥ್ಯ ಆ ಕಡೆಗಳಲ್ಲಿ
ರಸಾದಿಗಳ ಪ್ರತ್ತೀತಿಯುಂಟಾದರೆ ಅದು ದುರ್ಬಲವಾಗಿಯೇ ಇರುವುದ
ರಿಂದ ನೀರಸವೇ ಸರಿ. «“ ಚಿತ್ರ''ಒಂಬ ವಿಭಾಗಕ್ಕೆ ಇಂಥ ಕಾವ್ಯಗಳು
ಸೇರುತ್ತವ ಮೆ.
«« ಚಿತ್ರ''ವು ಶಬ್ದ ಚಿತ್ರ, ವಾಚ್ಚ ಚಿತ್ರ ಎಂದು ಎರಡು ಬಗೆ; ವ ವ್ಯಂಗ್ಯ
ಶೂನ್ಯವಾದ ಶಬ್ಕಾ ತಬ್ಬಾಲಂಕಾರಪ್ರ Em ಚಿತ್ರಕ್ಕೂ, ಅಂಥದೇ ಅಥಾ
ಲಂಕಾಕವು ವಾಷ್ಯಚ: ಚಿತ್ರಕೂ ಸಸ ವಿಷಯವಾಗುತ್ತದೆ. ಇಲ್ಲಿ ಒಂದೊಂದು
ಒಗೆಗೆ ಒ ನತು ಉದಾಹರಣಿಯನ್ನು ಕೊಡಬಹುದು. (ಆನಂದವರ್ಧ
ನನು " ಚಿತ್ರ''ಕ್ಕೆ ಉದಾಹರಣಿಗಳನ್ನು " ತೊಡುವುದಿಲ್ಲವೆಂಬುದು ಗಮನಿಸ
ಬೇಕಾದ ಸಂಗತಿ.)
ಕೆಲದೊಳ್ ಪುಳಿ೦ದಿಯಿರೆ ಪೆ.
ರ್ಣಲಿ ಬಂದೊಡಮಂಜನಳ್ಕ ನೊಡ೦ ನೋಡಂ।!
ಚಲದಿ೦ ಕಾಡಂ ಕಂಡಂ
ಸಲೆ ಪಸಿವಂ ಮಣಿದು ತಣಿದು ಬೇಡಂ ಜೀಡಂ॥
(ಗಿರಿಜಾ ಕಲ್ಯಾಣ, |. ೧೧೭)
ಈ ಪದ್ಯದಲ್ಲಿ ಕವಿಗೆ ಮುಖ್ಯವಾಗಿ ಬೇಕಾಗಿರುವದು ಛೇಕಾನು
ಪ್ರಾಸ. "“ನೋಡಂ”', "ಕಾಡ೦'', « ಬೇಡಂ'' ಈ ಮೂರರ ಅವಿಚ್ಛಿನ್ನ
ವಾದ ಪುನರಾವೃತ್ತಿಯನ್ನು ಸಾ `ಸಿದಪ್ಪರಿಂದ ಅವನು ಕೃತಾರ್ಥನಾದನ. ;
ಈ ಪನ್ಯವನ್ನು ಓದಿದವರ ಗಮನ ನೆಲಸು ಫ್ರದೂ ಇಲ್ಲಿಯೇ " ತನ್ನ ಶಬರಿ
ಜೊತೆಯಲ್ಲಿದ್ದರೆ, ಅವನು ಶೆಬ್ದುಲಿಗೂ ಅಂಜುವುದಿಲ್ಲ...'' ಈ ಮೊದರ್ಲದ
ವಾಕ್ಯಗಳಿಂದ ಬೇಡನಿಗೆ ಅವಳಲ್ಲರುವ ಪ್ರೇಮವು ಸೂಚಿತವಾದರೂ.
ಅದು ಈ ಸಂದರ್ಭದಲ್ಲ ದುರ್ಬಲ್ಕ ಅದನ್ನು ನಿರೂಪಿಸುವ ವಿವಕ್ಷೆ ಕವಿಗೆ
ಇಲ್ಲಿ ಇಲ್ಲ; ಆದಕಾರಣ ಈ ಪದ್ಯವನ್ನು " ಶಬ್ದಚಿತ್ರ''ಕ್ಕೆ ಉರ್ದಾ೯ರ-*
ಯಾಗಿ ಇಟ್ಟು ಕೊಳ್ಳಬಹುದು. `ಯಮತ, ಖಡಬಂಧದ, ಮುರಜಬಂದ
ಮೊದಲಾದ ತಬ್ಬಾಲಂಕಾರವೆಲ್ಲ ತಾನೇ ತಾನಾ ಕವಿಯ ಗಮನವನ್ನು
ಸೆರೆಪಿಡಿದಲ್ಲಿ “ ಚತ್ರ''ಕವಿತೆಯೇ ಪ್ರಾಪ್ತವಾಗುತ್ತದೆ.
4 ಯದವ ee ಚಾರು "ತಚ್ಛಿತ ಸಂ” ವ್ಯಂಗ್ಯ ರಹಿತವಾಗಿದ್ದ ರೂ ಯಾವುದು
ರಮ್ಯವೋ ಅದು ಚಿತ್ರ '”. (ಅಪ್ಪ ಯ್ಯದೀಕ್ಷಿತ : ಚಿತ್ರಮಾಮಾಂಸಾ, ಪು. ೪.)
೨೯೪ ಭಾರತೀಯ ಕಾವೈಮಾಮಾಂಸೆ
ವಾಚ್ಛಚಿತ್ರಕ್ಕೆ ಉದಾಹರಣೆ ಕೊಡುವುದು ಹೆಚ್ಚು ಕಪ್ಪೆ. ಏಕಂದರೆ
ಅಲ್ಲಿ ಯಾವುದಾದರೂ ಒಂದು ರಸವೋ ಭಾವವೋ ಉಂಟೆಂದು ವಾದಿಸು
ವುದು ಸುಲಭ. ಆದರೂ * ಚಂದ್ರಪ್ರಭಪುರಾಣ 'ದಿಂದ ತೆಗೆದುಕೊಂಡ
ಈ ಕೆಳಗಿನ ಪದ್ಯದಲ್ಲಿ ಚಿತ್ರಕವಿತೆಯೇ ಇರುವಂತೆ ತೋರುತ್ತದೆ ; ಇದು
ವಿರಹಾಕುಲೆಯಾದ ಒಬ್ಬ ರಾಜಕನ್ಯೆಯ ವರ್ಣನೆ :
ಕರದಿಎ ಮಯ್ಯೊಳ್ ಪನಿತ್ನ
ಕೃರದ೦ತಿರೆ ಸಾ೦ಜನಾ೦ಬುಕಣತತಿ ಕಾಮಂ!
ಬರೆದ ನೃಪಸುತನ ಸೊಬಗಿನ
[ವ] ರಶಾಸನದಂತೆ ವಿರಹೆವಿಹ್ಯಲೆಯಿರ್ಪಳ್॥ (೪. ೧೨೬)
ಇಲ್ಲಿ ರಾಜಕುಮಾರಿ ಸುರಿಸಿದ ಕಣ್ಣೀರು ಕಾಡಿಗೆಯೊಡನೆ ಮಿತ್ರ
ಪಾಗಿ ಮೈಮೇಲೆಲ್ಲಾ ಹನಿಹನಿಯಾಗಿ ಬಿದ್ದಿತಂತೆ ; ಆ ಹನಿಗಳ ವಿನ್ಯಾಸವು
ಅಕ್ಷರಗಳಂತೆ ಕಾಣಿ ಸಲು, ಮನ್ಮಥನು ಇವಳ ಪ್ರಿಯನ ಸೊಬಗನ್ನು ವರ್ಣಿ
ಸುವ ಮಾತುಗಳನ್ನು ಕೊರೆದು ನಿಲ್ಲಿಸಿದ ಶಾಸನದ ಹಾಗೆ ಈ ರಾಜಪ ತ್ರಿ
ಕಾಣಿಸಿದಳಂತೆ !--ಇಲ್ಲ ಪದ್ಮದ ವಕ್ತುವೇನೋ ವಿಪ್ರಲಂಭತಶೃಂಗಾರ;
ಆದರೆ ಕವಿಯ ತಮತ್ಕಾರಾಸಕ್ಷಿಯಲ್ಲಿ ಅದು ಎಲ್ಲೋ ತಲೆಮರಸಿ
ಕೊಂಡಿದೆ. “ ಪ್ರೌಢ ''ವಾಜೊಂದು ಉತ್ಪ್ಪ್ರೇಕ್ಷೆಯನ್ನು ಕಲ್ಪಿಸುವುದ
ದಲ್ಲೇ ಅವ ನ ಚಾತುರ್ಯವೆಲ್ಲ ವೆಚ್ಚವಾಗಿದೆ: ಇದರಿಂದಲೇ ವಾಚಕರ ಮೆಚ್ಚಿ
ಕೆಯನ್ನೂ ಗಳಿಸದೇಕೆಂದು ಅವನ ಆಸೆ.
ಈ " ಚಿತ್ರ ''ವೆಂಬ ವಿಭಾಗವನ್ನು ಅಂಗೀಕರಿಸಲು ಆನಂದವರ್ಧನ
ನಿಗೆ ಮನಸ್ಸೇ ಇಲ್ಲ. ಅದರೆ ಕವಿಗಳು ಈ ರೀತಿಯಾಗಿ ರಚಿಸುವುದನ್ನು
ನೋಡಿ ಇದಕ್ಕೂ ಸ್ನಾನವನ್ನು ಕಲ್ಪಿಸಿದ್ದಾನೆ. ರಸಾಭಿನಿವೇತವಿಲ್ಲದೆ ಕವಿ
ಕಾವ್ಯರಚನೆ ಮಾಡಲೇಬಾರದೆಂದು ಅವನ ಅಭಿಪ್ರಾಯ. ಕಾವ್ಯಾಭ್ಯಾ
ಪಕ್ಕೆ ಇನ್ನೂ ಹೊಸದಾಗಿ ಕೈಹಾಕತಕ್ಕವರು ಮೊದಮೊದಲಲ್ಲ ಮಾತ್ರ
« ಚಿತ್ರ'' ವನ್ನು ಕಟ್ಟಬಹುದು ; ಆದರೆ ಅವರು ಕೂಡ ಕೈಪಳಗಿದ ಮೇಲೆ
ಧ್ವನಿಕಾವ್ಯವನ್ನೇ ಮುಖ್ಯವಾಗಿ ಇಟ್ಟು ಕೊಳ್ಳಬೇಕು.
ಅನಂದವರ್ಧನನು ಕವಿಗಳಿಗೆ ಹೀಗೆ ಎಚ್ಚರಿಕೆ ಕೊಟ್ಟು ಹನ್ನೊ೦ದು
ಶತಮಾನಗಳಾದುವು. ಈಚೆಗೆ ಬಂದವರೆಲ್ಲ ಇದನ್ನು ಗಮನಿನಿದ್ದರೆ
ಒಳ್ಳೆಯ ಕಾವ್ಯ ಒಪ್ಟೊಂದು ಹುಟ್ಟಬಹುದಾಗಿತ್ತು; ಕಡೆಯ ಪಕ್ಷ,
ತೋರಿಕೆಯ ಕಾವ್ಯ ಎಷ್ಟೊಂದು ಹುಟ್ಟದೆ ಇರಬಹುದಾಗಿತ್ತು!
೧೯. ವ್ಯಂಜನಾ ವಿಚಾರ
ಹಿಂದಿನ ಎರಡು ಮೂರು ಅಧ್ಯಾಯಗಳಲ್ಲ, ಅನೇಕ ಉದಾಹರಣೆ
ಗಳನ್ನು ನೋಡಿ ವ್ಯ೦ಗೃಸ್ಟರೂಪವೇನೆಂಬುದನ್ನು ಗಮನಿಸುತ್ತಾಬಂದೆವು.
ಈ ಅನುಭವದಿಂದ ಹೊರಪಡುವ ಕೆಲವು ಅಂಶಗಳನ್ನೂ ಮತ್ತೆ ಕೆಲವು
ವಿಚಾರಗಳನ್ನೊ ಈಗ ಕ್ರೋಡೀಕರಿಸುವುದು ಉತ್ತಮ.
ಇಲ್ಲೆಲ್ಲಾ ವಿಚಾರಸ್ಪಪ್ಪತೆಗೋಸ್ಕರ ವ್ಯಾಖ್ಯಾನಮಾರ್ಗವನ್ನು ಅವ
ಲಂಬಿಸಿ, ವ್ಯಂಗ್ಯಾರ್ಥ ವನ್ನು ಮಾತುಗಳಲ್ಲಿ ಸಂಗ್ರಪಿಸಲು ಪ್ರಯತ್ನಿಸ
ಜೀಕಾಯಿತಪೈ. ಇದರ ಕ್ಲೇಶ ಎಷ್ಟು ಪಿರಿದು, ಫಲ ಎಷ್ಟು ಕಿರಿದುಎ೦ಬು
ದನ್ನು ಸಹೃದಯರು ಆಗಲೇ ಮನಗಂಡಿರಜೇಕು. ಯಾವುದಾದರೂ
ಒಂದು ಸಂದರ್ಭದಲ್ಲಿ ಪ್ರತೀತವಾಗುವ ಧ್ವನಿ ಇಷ್ಟೇ ಎಂದು ಅಳೆಯಲು
ಸಾಧ್ಯವಿಲ್ಲ. ಅದನ್ನು ನಮ್ಮ ಕೈಯಲ್ಲಾದಮಚ್ಟಿಗೆ, ಒಂದಾದ ಮೇಲೆ
ಒಂದರುತೆ ಬಿಡಿಸಿ ವಿವರಿಸುತ್ತಾ ಹೋದರೆ, ರಮ್ಯತೆ ಮಾಯವಾಗುತ್ತಿದೆ.
ವ್ಯಂಗ್ಯಾರ್ಥೆ ವನ್ನು ಆಖಂಡವಾಗಿ ಆಸ್ವಾದಿಸಬೇಕು. ಅದು ಬಿಡಿ ಬಿಡಿ
ಯಾಗಿ ರೂಪಗೊಳ್ಳದೆ ಇರುವಾಗ ಹಾಗೆ ಆಸ್ವಾದಿಸುವುದು ಸಾಧ್ಯ 1 ಆದ
ಕಾರಣವೇ, ವಸ್ತುಧ್ಯನಿ ಅಲಂಕಾರಧ್ವನಿಗಳಲ್ಲಿ ಕೂಡ, ಈ ಅರ್ಥವನ್ನು
ವಾಚ್ಯಮಾಡಿ, ಬಯಲಿಗೆಳೆದು ಸಾರಗುಂದಿಸದೆ ಗೋಪ್ಯವಾಗಿಯೇ ಬಿಟ್ಟಿರ
ವುದು. ಬಾಯಿ:ಮಾತಿನಲ್ಲಿ ಬಿಡಿಸಿ ಹೇಳಿದಾಗಲೂ ಸೊಗಸು ಉಳಿಯುವುದಾ
ಗಿದ್ದರೆ ಕವಿಯೇಕೆ ಧ್ವನಿಮಾರ್ಗವನ್ನು ಅನುಸರಿಸುತ್ತಿದ್ದನು? ವಾಚ್ಛತೆ
ಯನ್ನು ಸಪಿಸ.ವವೆಂದು ತೋರುವ ಧ್ವನಿಪ್ರಕಾರಗಳ ವಿಷಯವೇ ಹೀಗಾ
ಯಿತು ಇನ್ನು ಸ್ವಪ್ನದಲ್ಲಿ ಕೂಡ ವಾಚ್ಛವಾಗಲಾರದ ರಸಧ್ರನಿಯನ್ನು
ಕುರಿತು ಇನ್ನೇನು ಹೇಳಲಾದೀತು! ಅದರ ವಿಭಾವಾನುಭಾವಾದಿ
ಗಳನ್ನು ಅತಿಶಯವಾಗಿ ವರ್ಣಿಸಿ ತಿರುಳಿನ ಅಸ್ವಾದವನ್ನು ರಸಿಕನ ಗ್ರ.
ಕೆಗೆ ಬಿಡುವೆದೊಂನೇ ದಾರಿ.
ಉದಾಹರಣಿಗಳ ಪರಿಶೀಲನೆಯಲ್ಲಿ ಇನ್ನೊಂದು ಅಂಶ ಗೋಚರ
ವಾಗಿರಬೇಕು. ವಸ್ತುಧ್ಯನಿ ಅಲಂಕಾರದ್ವನಿಗಳು ಇಲ್ಲಿ ಉಂಟು ಎಂದು
ನಿರ್ದೇತಿಸುವ ದಕ್ಕಾಗಿಯೇ ಆರಿಸಿಕೊಂಡ ಕಡೆಗಳಲ್ಲಿ ಕೂಡ ಧ್ವನಿಪ್ರತೀತಿ
``: ಧನ್ಯಾ. ಲೋಚನ, ಪು. ೬೨ ನೋಡಿ.
೨೯೫
೨೯೬ ಭಾರತೀಯ ಕಾಷ್ಯಮಾನಾಂಸೆ
ಅಲ್ಲಿಗೇ ನಿಂತುಬಿಡದೆ ಯಾವುವಾದರೂ ಒಂದು ಚಿತ್ತವೃ ಶಕ್ತಿಯಲ್ಲಿ ಪರ್ಯವ
ಸಾನ ಹೊಂದುತ್ತದೆ. ವ್ಯಾಖ್ಯಾನ ಮಾಡುವಾಗ ಎಷ್ಟೋ ಕಡೆಗಳಛಲಿ
ಈ ವಿಷಯವನ್ನು ನಾವೇ ಸೂಚಿಸಿದ್ದೇವೆ. ಹಾಗೆ ತೋರಿಸದೆ ಬಿಟ್ಟ
ಕಡೆಗಳಲ್ಲ ಕಂಡ ವಾಚಕರು ಸ್ವಲ್ಪ ಗಮನಿಸಿ ನೋಡಿದರೆ ಪರ್ಯ೦ತದಲ್ಲಿ
ರಸವಿರುವುದನ್ನು ಕಾಣಬಹುದು. ಓಟದ ಕ್ರೀತೆಯಲ್ಲ ನಿಲುಗಡೆಯ
ಸ್ಥಳವಿರುವಂತೆ ಕಾವ್ಯದಲ್ಲಿ ರಸವಿರುತ್ತದೆ. ಅದನ್ನು ಮುಟ್ಟಿದ ಹೊಸತು
ಪ್ರತೀತಿಗೆ ನಿಲುವಿಲ್ಲ. ಇದೇ ವಿಶ್ರಾಂತಿಸ್ಥಾನ ; ಇದೇ ಅಸ್ಕಾದಸ್ಥಾನ.
ರಸವ್ವಿದ ಕಾವ್ಯವಿಲ್ಲ. "" ನ ಪಿ ತಚ್ಛೂನ್ಯಂ ಕಾವ್ಯಂ ಕಿಂಚಿದನಿ .''
ವಿಭಾವಾನುಭಾವಾದಿಗಳು ವಾಚ್ಯವಾಗಿ ಬಂದಿದ್ದ ರೆ ಅಲ್ಲ ರಸವು ಸಾಕ್ಷಾ
ತ್ತಾಗಿ ಧ್ವನಿತವಾಗುತ್ತದೆ ; ಹಾಗಿಲ್ಲದೆ ಕಾವ್ಯತರೀರದಿಂದ ವಸ್ತುದ್ಯನಿ
ಅಲಂಕಾರಧ್ಯನಿಗಳು ಮೊದಲು ಹೊರಟ ಪಕ್ಷದಲ್ಲಿ, ಇವು ವಿಭಾವಾನುಭಾವ
ಗಳಾಗಿ ಪರಿಣಮಿಸಿ, ರಸವು ಪಾರಂಪರ್ಯವಾಗಿ ಧ್ವನಿತವಾಗುತ್ತದೆ ಎಂದರೆ.
ಕಾವ್ಯದಲ್ಲಿ ವಿಭಾವಾನುಭಾವಗಳ: ಇಲ್ಲವೇ ವಾಚ್ಯವಾಗಿರುತ್ತವೆ, ಇಲ್ಲವೇ
ವ್ಯಂಗ್ಯವಾಗಿರುತ್ತವೆ ಇವುಗಳಿಂದ ರಕಾನುಭವ ಒದಗುತ್ತದೆ.3
ಅಂತೂ ಕಾವ್ಯದಲ್ಲಿ ಇರತಕ್ಕ ದಾರಿಗಳು ಇವೆರಡೇ
ಈ ಅಂಶವನ್ನು ನಾವು ಮನದಟ್ಮು ಮಾಡಿಕೊಳ್ಳತಕ್ಕದ್ದು ಅಗತ್ಯ.
ಇಲ್ಲವಾದರೆ, ಧ್ವನಿಯನ್ನು ಗ್ರಷಿಸುವುದರಲ್ಲಿ ತಪ್ಪು ಹೆತ್ಕ ಖಿಡುವ ದು
ಬಹು ಸುಲಭ. ಕೆಲವ ೦ದಿ ಆಲಂಕಾರಿಕರು ಕೂಡ ಇಳ ಮೋಸಹೋಗಿರು
ವುದುಂಟು. ಧ್ವನಿತತ್ತ್ವವನ್ನು ಹೊಸದಾಗಿ ಅರಿಕ ಸಡಗರದಲ್ಲಿ, ಎ೦ದು
ಪದ್ಯವನ್ನು ಓದಿದಾಗ *" ಇಲ್ಲಿರುವ ಧ್ವನಿಯಾವುದು '' ಎಂದು ವಿಚಾರ
ಮಾಡುವುದು ಸಹಜ, ಆಗ ಮನಸ್ಸು ಸಾ.ಭಾವಿಕವಾಗಿ ಇಲ್ಲೇನಾದರೂ
ವಸ್ತುಧ್ಯನಿ ಅಲಂಕಾರಧ್ಯನಿಗಳುಂಟೇ ಎಂದು ಒಡೆದು ನೋಡಲು ಸವಸ್
ಸುತ್ತದೆ; ಅವು ಗೋಚರಿಸದಿದ್ದರೆ ಕ್ಲೇತಪಟ್ಟಾದರೂ ಹಿಂಡಿ ತೆಗೆಯಲು
ಯತ್ನಿಸುತ್ತದೆ. ರಸಾನು ಭವವು ಸಾಕ್ಷಾತ್ತಾಗಿ, ಅಸ್ಲಿ ಪೈವಸಗಿ ಒದಗಿ
ಪಾದಿರೂಪಪರೃವಸಾನಾತ್ ರಸಾದಿತಾತ್ವರ್ಯಮೇವೇತಿ ಸರ್ವತ್ರ ರಸಧ್ರನೇರೇವ
ಆತ್ಮಭಾವಃ. '' (ಧ್ವನ್ಯಾ. ಲೋಚನ, ಪು. ೭೪). "...ವರ್ಣಾದಿಭಿಃ ಪ್ರಬಂಧಾಂತ್ಯೆಃ
ಸಾಕ್ಷಾದ್ಯಾ ರಸೋ ವ್ಯಜೃತೇ ವಿಭಾವಾದಿಪ್ರತಿಪಾದನದ್ಯಾರೇಣ, ಯದಿಪಾ ವಿಭಾವಾದಿ
ವೃಂಜನದ್ವಾರ(ಣ ಪರಂಪರಯಾ. '' (ಧ್ಹನ್ಯಾ ಲೋಡನ, ಪ. ೧೫೩)
2° ತಜ್ಞ ಯದ್ಯಪಿ ವಸ್ತುವರಾತ್ರಮಪಿ ಭವತಿ ತಥಾಪಿ ತಸ್ಯ ಪುನರಪಿ ವಿಭಾ
೧೯. ವ್ಯಂಜನಾ ವಿಚಾರ ೨೯೭
ದಗೂ ಅದಪ್ಪೇ ಇಲ್ಲಯ ಧ,ನಿಯೆ೦ದು ಅಂಗೀಕರಿಸಲು ಬುದ್ಧಿ ಒಪ್ಪುವು
ದಿಲ್ಲ ಪರನುದ್ಯನಿ ಸುಲಭಗ್ರಾಹ್ಯ ವಾಗಿರುವುದರಿಂದಲ್ಲೋ ಏನೋ
ಅದನ್ನು ಅಲಕ್ಷ್ಯಮಾಡಿ, ಪ್ರತಿಭಾಮಾರ್ಗವನ್ನು ಬಿಟ್ಟು ಕ್ಲಪ್ಪವಾದ ಇತರ
ದಾರಿಗಳಛ ಪ್ರತೀತಿ ಅಲೆದಾಡುತ್ತದೆ ಕಾವ್ಯವನ್ನು ಈ ಬಗೆಯಾಗಿ.
ಪರಿಶೀಲಿಸುವವರಿಗೆ ಒಂದೊಂದು ವಾಕ್ಯವೂ ಒಂದೊಂದು ಒಗಟೆಯಾಗಿ
ಪರಿಣಮಿಸುತ್ತದೆ ; ರಸಾಸ್ವಾದವು ಹಿಂದೆ ಬಿದ್ದು ಬುದ್ಧಿಯ ಕಸರತ್ತು
ವವಿಂದಾಗ. ತ್ಮಡೆ. ಕೆಲಮಂದಿ ವ್ಯಾಖ್ಯಾನಕಾರರೂ ಲಾಕ್ಷಣಿಕರೂ ಈ
ಮುಳ್ಳುದಾರಿಯಲ್ಲಿ ತಾವೂ ತೊಳಲಿ ವಾಚಕರನ್ನೂ ಬಳಲಿಸುವುದುಂಟು.
ನೆನಪಿಗೆ ಬಂದ ಒಂದು ಉದಾಹರ-ೆಯನ್ನು ಇದಕ್ಕೆ ಕೊಟ್ಟರೆ ಸಾಕು:
ಪಶ್ಯ ವಿಶ್ಚಲನಿಪ್ಪ ಇದಾ ಬಿಸಿನೀ ಪತ್ರೆ ರಾಜತೇ ಬಲಾಹಾ ।
ನಿರ್ಮಲ ಮರಕತ ಭಾಜನ ಪರಿಲ್ಮ ತಾ ಶಂಬಶುಕ್ತಿರಿವ ॥3
[ಅದೊ ! ಅಳಾ ಡದೆ ಅಲುಗದೆ ತಾವರೆ.
ಯೆಲೆ ಮೇಲೆಸೆವುನು ಬೆಳ್ಳಕ್ಕಿ,
ತೊಳೆದ ಪಚ್ಚೆ ಸೆರಿವಾಣದೊಳಿರಿಸಿದ
ಶೆಂಬದೆ ಚಿಪ್ಪಿ ನೊಲು.]
ಇದು " ಗಾಥಾಸಪ, ಶತಿ 'ಯ ಬಿಡಿ ಪದ್ಯಗಳಲ್ಲಿ ಒಂದು, ಇದರ ಸಂದರ್ಭ
ಪೇನೆಂಬುದನ್ನು ಕಲ್ಪಿಸುವದಕ್ಕೆ ಸಹೈ ನಯನ ಪ್ರತಿಭೆಯೊಂದ್ವದೆ ಬೇರೆ
ಸಾದನವಿಲ್ಲ... ಸಾಮಾನ ರ ಮನಸ್ಸಿಗೆ ತೋರುವಂತೆ ಇಲ್ಲಿಯ ಸನ್ನಿವೇಶ:
ಇಷ್ಟು : ಹಚ್ಚಗೆ ಹರಡಿರುವ ತಾವರೆ.ಸೆಲೆಯ ಮೇಲೆ ಬೆಳ್ಳಗೆ ಬಲಾಕಾ ಪಕ್ಷಿ
ಯೊಂದು ಯಾವ ವಿಧವಾದ ಚಲನವೂ ಇಲ್ಲದೆ, ಕಡೆದು ಏರಿಸಿದಂತೆ
ಕ.ಳಿತಿಜು,. ಸಸುಮುವಿಳುಪುಗಳ ಪೆೇಳನವೂ, ಸಚೇತನವಾದ ಪಕ್ಷ ಕೂಡ
ಈ ಪ್ರ ಇಂತ ಪರಿಸರಣದಲ್ಲಿ ತಾನೂ ನಿಶ್ಚ ಲ ನಿಪ್ಪ೦ದವಾಗಿ ಕುಳಿತು
ಸ್ಥಾವರ ಜಗತ್ತಿನೊಂದಿಗೆ ಬೆರೆದುಶೋಗಿರುವುದೂ ಇಲ್ಲ ಪ್ರೇಕ್ಷಕನ
ಕಣ ನ್ನೂ ಮನಸ್ಸನ್ನೂ ಒಂದು ನಿಲುಗಡೆಗೆ ತರುತ್ತವೆ. ಇದಕ್ಕೆ ಕವಿ
ಕೊಟ್ಟಿರುವ ಹೋಲಿಕೆಯೂ ಅತಿರಮ್ಯ ೨ತ್ಗುಚಿತ. ಕವಿಶಕ್ತಿಯನ್ನು
ತೋರಿಸಿದಪ್ಪಕ್ಕೇ ಆದರ ಕೆಲಸ ಮುಗಿಯಲಿಲ್ಲ. ಸನ್ನಿವೇಶದ ಪ್ರಶಾಂ.
ಡೆ ಕೊಟ್ಟಿರುವುದು ಸಂಸ್ಕೃತದ ಛಾಯೆ ; ಪ್ರಾಕೃತದ ಮೂಲ ಷೀಗಿದೆ:
ಉಅ ಣಿಚ್ಚಲಣಿಪೃಂದಾ ಭಿಸಿಣೀವತ್ತಮ್ಮಿ ರೇಹಐ ವಲಾಆ |
ಣಿಮ್ಮ ೮ ಮರಗಅ ಭಾಲಣ ಪರಿಟ್ಟಿಆ ಸಂಖಸುತ್ತಿ ವೃ! (ಗಾಥಾಸಪ್ತಶತ್ತಿ ೪)
೨೯೮ ಭಾರತೀಯ ಕಾವೃವಿಕಾಮಾಂಸೆ
'ತತೆಯನ್ನು ದೃಢೀಕರಿಸಿ ಚಿತ್ತವೃತ್ತಿಯ ಉಪತಮಕ್ಕೆ ದಾರಿಮಾಡಿಕೊಡು
ತ್ತದೆ. ನಿಶ್ಚಲ ಪ್ರಕೃತಿಯ ದರ್ಶನವು ಎಷ್ಟೋ ವೇಳೆ ಈ ಬಗೆಯ ಅನು
ಭವವನ್ನು ತಂದು ಕೊಡುವುಡೆ೦ಬುದ. ಭಾವಳರಿಗೆ ಗೊತ್ತು. ಇದನ್ನೇ
ಕವಿ ಇಲ್ಲ ವರ್ಣನೆಯ ಮೂಲಕ ಸಾಧಿಸಿದ್ದಾನೆ. ಇಷ್ಟು ಭಾವವನ್ನು
ನಾವು ಇಲ್ಲಿ ಸವಿದರೆ ಸಾಕೆಂದು ತೋರುತ್ತದೆ. ಆದರೆ ವಿದಗೃರಾದ
ಕೆಲವರು ವ್ಯಾಖ್ಯಾನಕಾರರು ಈ ಕಡೆ ಗಮನಕೊಡದೆ, ಬಹುಶಃ "" ಪಶ್ಯ''
[ಅದೊ!' ಎ೦ಬ ಪದದ ಬಲದಿಂದ, ಒಂದು ಕಾಮುಕ ವ್ಯವಹಾರದ
ಕೋಟೆಯನ್ನೇ ಈ ಪದ್ಯದ ಸುತ್ತ ಕಟ್ಟಿದ್ದಾರೆ. ಕಾಮಿನಿಯೊಬ್ಬಳು ತನ್ನ
ಪ್ರಿಯನಿಗೆ ಪಕ್ಷಿಯನ್ನು ತೋರಿಸಿ ಈ ಪದ್ಯವನ್ನು ಹೇಳುವಳುಂತೆ : « ಈ
ಬಲಾಕೆ ನಿಷ್ಪ೦ದವಾಗಿದೆ : ಆದಕಾರಣ ತಾನು ನಿರಾತಂಕವಾಗಿದೆ ; ಆದ
ಕಾರಣ, ಇದು ನಿರ್ಜನ ಪ್ರದೇಶ ; ಆದಕಾರಣ ಸಂಕೇಶಕ್ಕೆ ಇದು ತಕ್ಕ
ಐನ ಹೀಗೆ ಇಲ್ಲ ವ್ಯಂಗ್ಯಪರಂಪರೆಯೇ ವ್ಯಕ್ತವಾಗುವುದಂತೆ |
ಇನ್ನೊಂದು ರೀತಿಯಾಗಿಯೂ ವ್ಯಾಖ್ಯಾನಿಸಬಹುದು : "" ನೀನು ಸುಳ್ಳು
ಹೇಳುತ್ತಿದ್ದೀಯೆ. ಇಲ್ಲಗೆ ನೀನು ಈ ಮೊದಲೇ ಬಂದಿರಲಿಲ್ಲ. ಬಂದಿದ್ದರೆ
ಈ ಬಲಾಕಾಪಕ್ಷಿ ಹೀಗೆ ನಿಪ್ಪಂದವಾಗರುತ್ತಿತ್ತೆ ?'' ಇತ್ಯಾದಿ!" ಇಷ್ಟೆಲ್ಲ
ಚಾತುರ್ಯದಿಂದ ಯಾವ ನಿಜವಾದ ಆಸ್ಕಾದವನ್ನು ಸಾಧಿಸಿದಂತಾಯಿತು?
ಮೊದಲನೆಯದರಲ್ಲಿ ಸಂಭೋಗ ತ್ವಂಗಾರವೂ ಎರಡನೆಯದರಲ್ಲಿ
ವಿಪ್ರ ಲಂಭ ಶ್ಪ ೦ಗಾರವೂ ಕೊನೆಯ ಧ್ವನಿಯೆ೦ಂದ: ವಾದಕ್ಕಾಗಿ ಉತ್ತರ
ಕೊಡಬಹುದೇನೋ. ಆದರೆ ಈ ಮಾರ್ಗದಲ್ಲಿ ವ್ಯಾಖ್ಯಾನ ಹೊರಟರೆ,
ಎಲ್ಲಿ ಯಾವ ರಸವನ್ನಾದರೂ ಕೊನೆ ಸುಲ್ಲಿ ಕಾಣಿಸಿಬಿಡಬಹುದ |
ಮೇಲಿನದು ಒಂದು ನಿದರ್ಶನ ಮಾತ್ರೆ. ಈ ಬಗೆಯ ವ್ಯಾಖ್ಯಾನ
ಎ. ಕಾಲಗಳಲ್ಲೂ ಎಲ್ಲ ಸಾಪಿತ್ಯಗಳಳೂ ನಡೆಯುತ್ತಿರುತ್ತದೆ. ಕಾವ್ಯ,
ಧ್ವನಿತತ್ತ್ವ್ಯ-ಈ ಎರಡಕ್ಕೂ ಇದರಿಂದ ದೊಡ್ಡ ಅಪಕಾರ.
ದುರ್ವ್ಯಾಖ್ಯಾನದ ನಂಜು ಸೋಕಿ ಕವಿತಾಲತೆ ರಸವೊಣಗಿ
ಹೋಗುವುದಿರಲಿ ಇದಕ್ಕಿಂತ ಶೋಚನೀಯವಾದ ಇನ್ನೊಂದು ಪರಿಸ್ಥಿ
1 " ಕಾವ್ಯಪ್ರಕಾಶ 'ದಲ್ಲಿ (॥, ೨ ವೃತ್ತಿ) ಈ ಪದ್ಯವನ್ನು ವ್ಯಂಗ್ಯದಿಂದ
ಮತ್ತೊಂದು ವ್ಯಂಗೃವು ಹೊರಡುವುದಕ್ಕೆ ಉದಾಹರಣಿಯಾಗಿ ಕೊಟ್ಟು, ಮೇಲಿನ ಗ್ರೀತಿ
ಯಲ್ಲ ವ್ಯಾಖ್ಯಾನಿಸಿದೆ.
೧೯. ವೈಂಜನಾ ವಿಚಾರ ೨೯೯
ತಿಯೂ ಉಂಟು ಕೆಲವು ಪೇಳೆ: ಕವಿ ತನ್ನ ಬುದ್ಧಿ ಚಾತು ರ್ಯವನ್ನು
ಪ್ರದರ್ಶಿಸಲು ಪದ್ಯವನ್ನು ಕಟ್ಟುತ್ತಾನೆ. ಅಲ್ಲಿ ವ್ಯಂಗ್ಯಪರಂಪರೆ
ಯುಂಟೆಂದು ಭಾವಿಸಿ ಅದನ್ನು ಧೃನಿಮಾರ್ಗಕ್ಕೆ ಉದಾಹರಣಿಯಾಗಿ
ತೆಗೆದುಕೊಳ್ಳ್ಕುವವರೂ ಇ್ಲದಿಲ್ಲ. ಇದಕ್ಕೊಂದು ನಿದರ್ಶನವನ್ನು
ನೋಡೋಣ:
" ಎಸಾಂತನಮಾಗಮದ ವೇಳೆಯಲ್ಲ, ರಸಾಕುಲೆಯಾದ ಲಕ್ಷ್ಮಿ ನಾಭಿ
ಕಮಲದ ಬ್ರಹ್ಮನನ್ನು ಕಂಡು ಹರಿಯ ಬಲಗಣ್ಣನ್ನು ಥಟ್ಟನೆ ಮುಚ್ಚಿದಳು ''
-—ಈ ಅರ್ಥವನ್ನು ಕೊಡುವ ಪ್ರಾಕೃತಪದ್ಯವೊಂದುಂಟು 5 ಇಲ್ಲಿಯ
ಗೂಢಾರ್ಥ ಹೀಗೆ: ಇಲ್ಲಿ "" ಹರಿ'' ಎಂಬ ಪದಬಂದ (ಅವನ) ಬಲಗಣ್ಣು
ಸೂರ್ಕಾತ್ಮಕಪೆಂದು ಸೂಚಿತವಾಗುತ್ತದೆ. ಆ ಕಣ್ಣನ್ನು ಮುಚ್ಚುತ್ತಲ್ಲೇ
ಸೂರ್ಯಾಸ್ತಮಯ ; ಅದರಿಂದ (ವಿಷ್ಣುವಿನ ನಾಭಿಯ) ಕಮಲ ಮುಚ್ಚಿ
ಕೊಳ್ಳುತ್ತದೆ; ಅದರೊಳಗಿನ ಬ್ರಹ್ಮನೂ ಮರೆಯಾಗುತ್ತಾನೆ ; ಪೀಗಾಗು
ತ್ತಲೂ ಲಕ್ಷ್ಮಿ ತನ್ನ ರಮಣನೊಂದಿಗೆ ಏಕಾಂತದ ಸ್ವಚ್ಛಂದ ಸುಖವನ್ನು
ಪಡೆಯಲು ಸಾಧ್ಯವಾಗುತ್ತದೆ. -ಈ ಪದ್ಯದ ರಚನೆಯಲ್ಲ ಕವಿ ಚಾತುರ್ಯ
ವುಂಟು; ಅವನ ಮನಸ್ಸಿ ನೆಲ್ಲಿ ಇಷ್ಟು ಅರ್ಥವೂ ಉಂಟು ಎಂಬುದನ್ನು
ಒಪ್ಪಿಕೊಳ್ಳೋಣ. ಆದರೆ ಏನು ಬಂದ ಹಾಗಾಯಿತು? ಇದೊಂದು
ಬುದ್ಧಿ ಚಮಕ್ಕಾರದ ಒಗಟೆ. ಇಲ್ಲಿ ಕಾವ್ಯಸಾರವಾದ ಧ್ವನಿಯಿದೆ, ಅದು
ಈ ಮಾರ್ಗವಾಗಿ ಹೊರಡುತ್ತದೆ ಎಂದು ಭಾವಿಸುವುದು ಅನುಚಿತ ;
*"ಧ್ವನಿ''ಯೆ೦ದರೆ ಒಗಟೆಯನ್ನು ಬಿಡಿಸುವುದಲ್ಲ. ಹಿಂದಿನ ಪದ್ಯದಲ್ಲಿ
ವ್ಯಾಖ್ಯಾನವತದಿಂದ ಉತ್ತಮ ಕಾವ್ಯವು ಒಗಟೆಯ ದುಃಕ್ಕಿತಿಗೆ ಇಳಿ
ದ್ದರೆ, ಇಲ್ಲ ಒಗಟೆ ಉತ್ತಮಕಾವ್ಯದ ಹೋಗನ್ನು ಹಾಕಿಕೊಂಡಿದೆ.
"" ರಸಾಕುಲೆಯಾದ ಲಕ್ಷ್ಮಿ''ಯನ್ನು ಕುರಿತ ಮೇಲಿನ ಪದ್ಯಕ್ಕೆ ಲ್ಲಿ
ಕೊಟ್ಟಿರುವ ಅರ್ಹವಿವರಣಿಯಾಗಲಿ, ಹೂಡಿರುವ ಆಕ್ಷೇಪಣಿಯಾಗಲಿ
ಹೊಸ ಕಾಲದ್ಭೇನೂ ಅಲ್ಲ. ಇದು ಕನಿಷ್ಠಪಕ್ಷ " ವ್ಯಕಿ,ವಿವೇಕ "ಕಾರನ
ಕಾಲದಪ್ಲಾದರೂ ಹಿಂದಿನದು. ಈ ಬಗೆಯ ವ್ಯಾಖ್ಯಾನವನ್ನು ದ್ವನಿ
ಪಕ್ಷದವರು ಯಾರೋ ಮಾಡಿದ್ದರೆಂದು ತೋರುತ್ತದೆ. "ವ್ಯಕ್ತಿವಿವೇಕ '
ದಲ್ಲಿ ಮಪಿಮಭಟ್ಟನು ವ್ಯಂಗ್ಯಾರ್ಥವೆಲ್ಲವೂ ಅನುಮಾನದಲ್ಲೇ ಒಳಪರುವು
5 ಗಾಥಾಸಪ್ತಶತೀ, ವೇಬರ್ ಅವರ ಸಂಸ್ಕರಣ, ಪ. ೮೧೬.
೩೦೦ ಭಾರತೀಯ ಕಾವ್ಯವಸಾಮಾಂಸೆ
ದೆಂದು ಸ್ಥಾಪಿಸ ತ್ತಾ ಈ ಪದ್ಯವನ್ನೂ ಇದರ ಗೂಢಾರ್ಥ ಪರಂಪರೆ
ಯನ್ನು ನಿರ್ದೇಶಿಸಿ, ಇದು ರಶಾಸ್ಕಾದದ ಸಮಾಪಕ್ಕೇ ಹೋಗಲಾ
ರದು; ಈ ಕಾವ್ಯವು ಒಗಟಗೆ ಸಮಾನ (4 ಪ್ರ ಸಳಿಕಾಪ್ರಾಯ. ತ್ರ
ಇದೆಲ್ಲ ಧ್ವನಿಯೆಂದು ಹೇಳಿದರೆ ಅತಿವ್ಯಾಪ್ತಿಯಾಗ.ವುದು ಎಂದು ಆಕ್ಷೇ
ಪಿಸುತ್ತಾನೆ... ಅವನ ಮಾತು ಎಷ್ಟು ಸತ.ಪೆಂಬ ದನ್ನು ತಿ ಹೇಳೆ
ಬೇಕಾಗಿಲ್ಲ. "" ನ ಸರ್ವತ್ರ ಧ್ಯನಿರಾಗಿಣಾ ಭವಿತವ್ಯ೦'' ಎಂದು ಅನಂದ
ವರ್ಧನನು ಗುಣೀಭೂತವ್ಯಂಗ್ಯದ ವಿಚಾರದಲ್ಲಿ ಹೇಳದನಷ್ಟೆ. ಆ ಮಾತಿನ
ಅಭಿಪ್ರಾಯವನ್ನು ಇನ್ನಷ್ಟು ವಿಶಾಲಗೊಳಿಸಿಕೊಂಡು ವ್ಯಾಖ್ಯಾನಕಾರ
ರೆಲ್ಲರೂ ನೆನಪಿನಲ್ಲಿಟ್ಟು ಕೊಳ್ಳುವುದು ಆವಶ್ಯಕ
ಕಾವ್ಯದಲ್ಲಿ ಮಾತ್ರವಲ್ಲ; ದಿನದಿನದ ವ್ಯವಹಾರದ ಮಾತಿನಲ್ಲೂ
ವ್ಯಂಗ್ಯಾರ್ಥವಿರುತ್ತದೆ, ಒ೦ದು ವಿಷಯವನ್ನು ನೇರವಾಗಿ ಹೇಳದ
ಪ್ರಕಾರಾಂತರದಿಎದ ಮನಮ..ಟ್ವಿಸುವ ಕಡೆಗಳಲ್ಲೆಲ್ಲಾ ಅದು ಉಂಟೇ
ಉಂಟು. ಹೀಗೆ ದ್ವನಿ ವಿಶ್ವವ್ಯಾಪಿಯಾಗುವ ಪಕ್ಷಕ್ಕೆ, ಎಲ್ಲೆಲ್ಲೂ ಕ.ವ್ಯ
ವುಂಟಿಂದು ಹೇಳಬೇಕಾದೀತ. 1 ಹೀಗೆ ಭಟ್ಟನಾಯಕನು ಪೂರ್ವಪಕ್ನ
ವನ್ನು ಹೂಡಿದಂತೆ ತೋರುತ್ತದೆ ಇದಕ್ಕೆ ಅಭಿನವಗುಪ್ತನು "ಲೋಚನ'ದ
ಬೇರೆ ಬೇರೆ ಕತೆಗಳಲ್ಲಿ ಉತ್ತರ ಕೊಡುತ್ತಾನೆ.” ಅದೆಲ್ಲದರ ಸಾರವನ್ನು
ಪೀಗೆ ನಿರೂಪಿಸಬಹುದು :
ಧ್ಯ ಎಲ್ಲೆಲ್ಲೂ ಉಂಟೆಂದ ಮಾತ್ರಕ್ಕೆ ಸಾವ್ಯವೂ ಲಲ್ಲೆ ಜೂ
ಉಂಟೆಂದು ಹೇಳಲಾಗುವುದಿಲ್ಲ. ಆತ್ಮ ವಿಶ್ವವ್ಯಾಪಿ. ಆ-ಮಾಶ್ರಕ್ಕೆ,
ಜೀವವೂ ಎಲ್ಲೆಲ್ಲೂ ಉಂಟೆಂದ. ಹೇಳುತ್ತಾರೆಯೇ ? ವಿತಿಪ್ತವಾದ ಸ್ವರೂಪ
ಎಳ್ಳ ಶರೀರದಲ್ಲಿ ಆತ್ಮ ವದ ಪಕ್ಷಕ್ಕೆ ಅಲ್ಲ ಜೀವವುಂಟೆ೨ದು ವ್ಯವಹರಿಸು
ತ್ತೇವೆ. ಹೀಗೆಯೇ ಉಚತವಾನ ಗ.ಣಾಲಂಕಾರಗ-೦ದ ಶಬ್ದಾರ್ಥ
ರೂಪವು ಸುಂದರೆವಾಗಿದ್ದು ಅದರಲ್ಲ ಆ್ಲತ್ಯಭೂತವಾದ ಧ್ಯನಿಯಿದ್ದರೆ ಆಗ
ಕಾವ್ಯವೆಂದು ಕರೆಯುತ್ತೇವೆ. ಇಲ್ಲಿ "" ಉಚಿತ'' ಎಂಬುದನ್ನು ಗಮನಿಸ
6 ವ್ಯಕ್ತಿವಿವೇಕ, ಪ್ರ. ೮೬, ೮೮.
ಇಷ್ಟಾದರೂ ಐದೇ ಪದ್ಯವನ್ನು ವ್ಯಂಗ್ಯಪರಂಪರೆಗೆ ನಿದರ್ಶನವಾಗಿ ಈಚಿನವರು
ಕೊಡುವುದು ತಪ್ಪಲಲ್ಲ. ' ಕಾವ್ಯಪ್ರಕಾಶ ' ದ್ವಲ್ಲ ಇದು ಮತ್ತೆ ತಲೆಯೆತ್ತಿದೆ (೪,೩
ವೃತ್ತಿ). ೆ ೆ
7 ಧೃನ್ಯಾ. ಲೋಔನ, ಪ್ರ. ೧೫, ೧೭, ೨೭.೮.
೧೯. ವ್ಯಂಜನಾ ವಿಚಾರ ೩೦೧
ಬೇಕು. ಅಭಿವ್ಯಕ್ತವಾಗಬೇಕಾದ ರಸಕ್ಕೆ ಅನುಗುಣವಾಗಿಯೇ ಗುಣಾ
ಲಂಕಾರಾದಿಗಳನು ಅಳವಡಿನಿಬೇಕು ; ಇದೇ ಇಲ್ಲಿಯ ಔಚತೃ. ಎಂದರೆ,
ನಾನ ಹಿಂದೆಯೇ ಅರಿ *ರುವಂತೆ ರಸವೇ ಕಾವ್ಯದ ಜೀವಿತ. ಈ ಜೀವ
ವನ್ನುಳ್ಳ ಶಬ್ದಾರ್ಥಗಳ ಸಾವ್ಯ
ಇದೇ ದೃಷ್ಟಿಯನ್ನು ಅವಲಂಬಿಸಿ, ಪ್ರತೀಯಮಾನಾರ್ಥವು
ಲೌಕಿಕ, ಕಾವ್ಯವ್ಯವಹಾರಗೋಚರ ಖ೦ಬುದ ಗಿ ಎರಡು ಬಗೆಯೆಂದು ಅಭಿ
ನವಗುಪನು ಹೇಳುತ್ತಾನೆ. ಯಾವುದನ್ನು ವಾಚ್ಯವಾಗಿ ಹೇಳಲು
ಸಾಧ್ಯವೋ ಅದು ಲೌಕಿಕ. ವಸ್ತುವ್ಯಂಗ್ಯ ಅಲಂಕಾರವ್ಯಂಗ್ಯಗಳನ್ನು
ವಾಚ್ಯವಾಗಿ ಹೇಳುವುದು ಅಯುಕ್ತವಾ-ರೂ ಅಶಕ್ಯವಲ್ಲವೆಂಬುದನ್ನು ನಾವು
ಬಲ್ಲೆ ವಪ್ಟೆ. ಇಷೆರಡರ್ಮ್ಯೂ ಸೌಂ ರ್ಯವಿರಬಹುದು, ಇಲ್ಲದಿರಬಹುದು.
ವ್ಯಂಗ್ಯವಾಗಿ ಹೊಳೆಯುವುದರಲ್ಲೇ ಒ೦ದು ಹೊಗಸುಂಟು. ತೆರೆಯ ಮರೆ
ಯಲ್ಲಿ, ಅತಿಗೂಢವೂ ಅಗೂಢವೂ ಆಗದೆ, ತೋರುವ ವಸ್ತು ಅಪ್ಪು
ಮಾತ್ರದಿಂದಲೇ ಮನಸ್ಸನ್ನ ಕೆಲವು 5.ಟ್ವಿಗ ಸೆಳೆಯುತ್ತದೆ ಆದರೆ
ಸೊಗಸೆನ್ಗ ಇಪ್ಪಕ್ಕೇ ಮುಗಿದರೆ ಏನು ಪ್ರಯೋಜನ? ಆಸ್ವಾದ್ಯವಾದ ತಿರು
ಳೊಂದು ಅದರಲ್ಲಿ ಕಾಣಬಾರದಿದ್ದರೆ ಮನಸ್ಸು ಅಲ್ಲಿಯೇ ಹೇಗೆ ನೆಲಸೀತು?
ಇಪ್ಪಕ್ಕೇ ಪರ್ಯವಸಾನಗೊಳ್ಳುವ ವ್ಯಂಗ್ಯವನ್ನು ನಿಜವಾಗಿಯೂ ಸು:ದರ
ವೆಂದು ಕರೆಯುವುದು ಹೇಗೆ? ಇಂಥದೆಲ್ಲ ಲೌಕಿಕದ ಮಟ್ಟದಲ್ಲೇ ನಿಲ್ಲುತ್ತದೆ
ಆದರೆ ಈ ವ್ಯ ೦ಗ್ಯವು ಇನ್ನೂ ಮುಂದುವರಿದು, ಜೀವಭೂತವಾದ ರಸವನ್ನು
ಪ್ರಕಾಶಗೊಳಿಸಬಲ್ಲ ಸಾಮರ್ಥ್ಯವನ್ನು ಗಳಸಿದರೆ ಮಾತ್ರ ಅದರ ಪದ
ಎಯ್ದೇ ಬೇರೆ. ಕಾವ್ಯದ ಆತ್ಮಾಯತನದಲ್ಲಿ ಇದಕ್ಕೆ ನೆಲೆ ಸಿಕ್ಕುತ್ತದೆ.
ರಸಧ್ವನಿಯಾದರೆ ಕೇವಲ ಆಸ್ಕಾದ ರೂಪವಾದದ್ದು ಅದು
ಮಿಕ್ಕ ಧ್ವನಿಪ್ರಕಾರಗಳಂತೆ ಎಂದೆಂದಿಗೂ ವಾಚ್ಚವಾಗಲಾರದು, ಲರಿಕ
ಕತೆಯ ದುರಎಸ್ಥೆಗೆ ಇಳಿಯಲಾರದು. ಸಮುಚಿತವಾಗಿ ರಚಿಸಿದ ಕಾವ್ಯ
ದಲ್ಲಿ ಮಾತ್ರ ಇದು ಧ್ವನಿತವಾಗಬ, ದು. ಇದೇ ಮುಖ್ಯವಾದ ಧ್ವನಿ.
ರಸಧ್ಯನಿಯ ಜೊತೆಗೆ ವಸ್ತುಧ್ವನಿ ಅಲಂಕಾರ ಧ್ವನಿಗಳನ್ನು ಅಂಗೀ
ಕರಿಸುವುದು ತಪ್ಪಲ್ಲ; ಅವೂ ಉಂಟೆ೦ಒಂದು ಅನುಭವದ ವಿಷಯ.
ಆದರೆ ರಸದೊಂದಿಗೆ ಅವಕ್ಕೂ ಸಮಪ್ರಾಧಾನ್ಯವುಂಟೆಂಬ ಅಭಿಪ್ರಾಯ
ತೋರುವಂತೆ, ಅವೂ ಕಾವ್ಯದ ಆತ್ಮವೆಂದು ಧ್ಯನ್ಯಾಲೋಕದಲ್ಲ ಉಕ್ತ
೩೦೨ ಭಾರತೀಯ ಕಾವೃಮಾವಣಾಂಸೆ
ವಾಗಿರುವುದು ಈ ಪ್ರಸ್ಥಾನದ ಪ್ರತಿಪಂಥಿಗಳ ಬಂಡನೆಗೆ ಅವಕಾಶೆ
ಕೊಟ್ಟಿದೆ; ಉತ್ತರ ಹೇಳಲು ಇದರ ಬೆಂಬಲಕಾರರಿಗೆ ಕಪ್ಪ ಕೊಟ್ಟಿದೆ.
ಧ್ವನಿಯ ವಿಷಯವೇ ಹೀಗಾದ ಮೇಲೆ ಗುಣೀಭೂತವ್ಯಂಗ್ಯ, ಚಿತ್ರ-ಈ
ಬಗೆಗಳ ಮಾತು ಹೇಗೆ ?--ಈ ಕಾರಣದಿ:ದಲ್ಲೇ ಅಭಿನವಗುಪ್ತನು ಧೈರ್ಯ
ವಾಗಿ ಮುಂದುವರಿದು ರಸಧ್ಯನಿಯೊಂದೇ ಕಾವ್ಯದ ಪರಮಾರ್ಥವೆಂದು
ಸಂದೇಹಕ್ಕೆ ಅವಕಾಶಲೇಶವೂ ಇಲ್ಲದಂತೆ ಘೋಷಿಸಿದನು ; ಇದೇ ದೃಷ್ಟಿ
ಯಿಂದಲೇ ತನ್ನ ವ್ಯಾಖ್ಯಾನವನ್ನೂ ರಚಿಸಿದನು. ರಸಕ್ಕೆ ಪ್ರಾಧಾನ್ಯ
ವನ್ನು ಕೊಡದ ಕವಿಗಳು ಇಲ್ಲವೇ ಇಲ್ಲ; ರಸವಿರಷಿತವಾಗದ ಕಾವ್ಯಗಳು
ಹುಟ್ಟಿಯೇ ಇಲ್ಲ ಎಂದು ಈ ಮಾತಿನ ಅರ್ಥವಲ್ಲ. ಆದರೆ ಪೂರ್ಣ
ಪ್ರಯೋಜನದ ದೃಷ್ಟಿಯಿಂದ ಇಂಥ ಕೃತಿಗಳಿಗೆ ಪಿರಿಯ ಸ್ಥಾನ ಎಂದಿಗೂ
ಸಲ್ಲುವುದಿಲ್ಲ; ಅನೇಕ ವೇಳೆ ಅವನ್ನು ಉಪಚಾರಕ್ಕಾಗಿ ಕಾವ್ಯವೆಂ
ಕರೆಯಜೇಕಾಗುತ್ತದೆ.8
"" ಧ್ವನಿ ಸೋತು ಗೆಲ್ಲುತ್ತದೆ'' ಎಂದು ಸಹೃದಯರಾದ ಪರಿಯ
ವಿದ್ಯಾಂಸರೊಬ್ಬರು 9 ಆಗಾಗ ಹೇಳುತ್ತಿದ್ದುದುಂಟು. ಇದರ ತಾತ್ಸರ
ಹೀಗೆ: ಕಾವ್ಯದ ತಿರುಳು ರಸ. ಅನಿರ್ವಚನೀಯವಾದ ಈ ಅರ್ಥವನ್ನು
ವಾಚಕವಾದ ಶಬ್ದಗಳಲ್ಲ ಹೇಳುವುದು ಆಶಕ್ಕ. ಇದೇ ಕವಿಯ ಸೋಲು.
ಆದರೆ ಅದನ್ನು ಮಾತಿನಲ್ಲಿ ಕಟ್ಟಿಕೊಡಲು ಆಗದಿದ್ದರೂ ರಸಿಕನ ಹೃದ
ಯಕ್ಕೆ ಕವಿ ಮುಟ್ಟಿಸುತ್ತಾನೆ; ಬಾಯಲ್ಲ ಹೇಳಲು ಅಶಕ್ತನಾದರೂ ವ್ಯಂಜ
8 " ವ್ಯಕ್ತಿವಿವೇಕ' ಕೈ ವ್ಯಾಖ್ಯಾನ ಬರೆಯುತ್ತಾ (ಪು. ೧೦೩) ರುಯ್ಯಕನು ಧೃನಿ
ಪಕ್ಷದ ಅಭಿಪ್ರಾಯವನ್ನು ಈ ರೀತಿಯಾಗಿ ನಿರೂಪಿಸುತ್ತಾನೆ : "" ಪ್ರಸಿದ್ಧಎಇದ ಲಕ್ಷ್ಯವನ್ನ
ವಲಂಬಿಸಿ ಲಕ್ಷಣವು ಹೊರಡುತ್ತದೆ. ಲಕ್ಷ್ಯದಲ್ಲ ಮುಖ್ಯ, ಗೌಣ ಎಂಬ ಎರಡು ಬಗೆಯ
ಕಾವ್ಯವು ಕಾಣಬರುತ್ತದೆ. ವ್ಯಂಗ್ಯಕ್ಕೆ ಪ್ರಾಧಾನ್ಯವಿರುವುದು ಮುಖ್ಯ, ಗುಣೀಭೂತ
ವೃಂಗ್ಯವೇ ಮೊದಲಾದ ಉಳಿದದ್ದು ಗೌಣ, ಅನಾದಿಕಾ೭ದಿಎದಲೂ ಬಳಕೆಯಲ್ಲಿರುವುದ
ರಿಂದ ಎರಡೂ ಗ್ರಾಹ್ಯವೇ. .....ಎಲ್ಲ ಕಾವ್ಯವೂ ರಸಮಯವಾಗಿರುತ್ತದೆ, ಗುಣೀಭೂತ
ವ್ಯಂಗ್ಯಾದಿಗಳಿಗೆ ಅಸ್ತಿತ್ಛವಿಲ್ಲ ಎನ್ನಲಾಗದು. ಏಕೆಂದರೆ, ರಸವು ಅಸ್ಬುಟವಾಗಿ ಅಥವಾ
ಅಂಗಭೂತವಾಗಿ ಇರುವ ಕಾವ್ಯವೂ ಉಂಟು. ಎಲ್ಲ ಸ್ಫುಟವೂ ""ಅಂಗಿ'ಯೂ ಅದ
ರಸವು ಪ್ರಧಾನವಾಗಿ ತೋರುತ್ತದೆಯೋ ಅದು ಧ್ವನಿಕಾವ್ಯ, ಮಿಕ್ಕದ್ದೆಲ್ಲ ಬೇರೆಯದು. ....
ಇನ್ನೊಂದು ಮತದಂತೆ,,,,,,, ಕಾವ್ಯದಲ್ಲಿ ರಸವು ಅಸ್ಫುಟವಾಗಿದ್ದರೆ ವಸ್ತುಧ್ವನಿ ಅಲಂ
ಕಾರ ಧ್ವನಿಗಳಾಗುತ್ತವೆ; ಸ್ಫುಟವಾಗಿ " ಅಂಗಿ ''ಯಾಗಿದ್ದರೆ ರಸಧ್ಭನಿಯಾಗುತ್ತದೆ.'
—ಅಭಿನವಗುಪ್ತನಷ್ಟು ಧೈರ್ಯವಿಲ್ಲದವರು ಈ ಮತವನ್ನು ಅಶ್ರಯಸಬಹುದು.
9 ಎಂ. ಹಿರಿಯಣ್ಣನವರು : "" Dhvani is failure that succeeds.”
೧೯. ವ್ಯಂಜನಾ ವಿಚಾರ ೩೦೩
ನಾವೃತ್ತಿಯನ್ನಾ ಶ್ರಯಿಸಿ ಅನುಭವಕ್ಕೆ ಒದಗಿಸಿಕೊಡುತ್ತಾನೆ. ಇದೇ
ಕವಿಯ ಗೆಲವು. ಈ ವಿಜಯವನ್ನು ಪಡೆಯಲು ಅವನು ಅನೇಕ ವಿಧಾನ.
ಗಳನ್ನು ಅವಲಂಬಿಸುತ್ತಾನೆ. ಅವನಿಗೆ ಯಾವ ಸಾಧನವೂ ಅಲ್ಪವಲ್ಲ ;
ಯಾವದೂ ಅಗಾಧವಲ್ಲ. ಒಮ್ಮೆ ಕೇವಲ ವರ್ಣರಚನೆಯ ನಾದದಲ್ಲೇ
ರಸಧ್ಯನಿಯನ್ನು ಹೊಮ್ಮಿಸುತ್ತಾನೆ. ಕಸದಂತ ತೋರಿ, ಎಲ್ಲರೂ ಕಡೆ
ಗಣಿಸಿಬಿಟ್ಟ ಪದದಲ್ಲಿ ರಸವನ್ನು ಪಂಡುತ್ತಾನೆ; ಒಂದೊಂದು ಸಲ
ಮಾತನ್ನೇ ಬಳಸದೆ, ಮಾನದಿಂದಲೇ ಪರಮಾರ್ಧವನ್ನು ಸಾಧಿಸುತ್ತಾನೆ.
ಅವನು ಇದ್ದುದನ್ನು ಇದ್ದಂತೆಯೇ ವರದಿ ಮಾಡುವುದುಂಟು; ಇಲ್ಲದ್ದನ್ನು
ಬೇಕೆಂದು ಅದ್ಭು ತವಾಗಿ ಹಬ್ಬಿ ಸುವುದುಂಟು; ಇರುವುದನ್ನು ಇಲ್ಲವೆಂದು
ಅಪಲಪಿಸುವುದುಂಟು ; ಕಲ್ಲು, ಮರ, ಮಣ್ಣು, ನೀರು-ಈ ಜಡವಸ್ತುಗಳಿ
ಗೆಲ್ಲ ಚೈತನ್ಯವನ್ನು ಆರೋಪಿಸಿ, ಎರಾನವನ ನಡೆವಳಿಕೆಯನ್ನು ಅವುಗಳಲ್ಲಿ
ಕಾಣಿಸಿ, ನಮ್ಮ ರಸಾನುಭವದ ಎಲ್ಲೆಯನ್ನು ಸೃಷ್ಟಿಯ ಉದ್ದಗಲಕ್ಕೂ,
ಅದರ ಆಚೆಗೂ ವಿಸ್ತರಿಸುವುದುಂಟು. ಇದೆಲ್ಲವೂ ವ್ಯಂಜನಾವ್ಯಾಪಾರದ
ಬೇರೆ ಬೇರೆ ವಿಧಾನ. ಎ್ಲ್ಲ ಕ್ಕೂ ಗುರಿ ಮಾತ್ರ ಒಂದೇ.--ರಸಾಭಿವ್ಯಕ್ತಿ
ಎಲ್ಲೂ ಕೂಡ ನಾವು ಕವಿವಚನದ ಅಕ್ಷರಾರ್ಥವನ್ನು ಪಿಡಿದು, ಕಂಡ ಹಾಗೆ
ಇದು ಸುಳ್ಳು ; ನಂಬುವುದು ಹೇಗೆ ಎಂದು ತರ್ಕಮಾಡುತ್ತಾ ನಿಂತುಬಿಡ
ಬಾರದು. ಅವನು ರಚಿಸಿರುವ ವರ್ಣಪಟದ ಹಿಂದೆ ಯಾವ ರಮಣ್
ಯತೆ ನಮಗಾಗಿ ಕಾದಿದೆ, ಅವನ ಉಕ್ತಿ ಎತ್ತಕಡೆಗೆ ಕುಡಿನೋಟವನ್ನು
ಹೊರಳಿಸಿ ಸೂಚಿಸುತ್ತಿದೆ ಎ೦ಬುದನ್ನು ಭಾವಕರು ಅರಿತುಕೊಳ್ಳಬೇಕು.
ಧ್ವನಿತತ್ತ್ವದಿ೦ದ ಒಂದು ವಿಷಯ ಚೆನ್ನಾಗಿ ಸ್ಥಾ ಪಿತವಾಗುತ್ತದೆ.
ಯಾವುದನ್ನೇ ಆಗಲಿ ನೇರವಾಗಿ ವಿವರಿಸಿ ಹೇಳದೆ, ಅದರ ಕಾರ್ಯಕಾರಣ
ಗಳನ್ನು ತಿಳಿಸಿ ಸೂಚಿಸಿಬಿಡುವದೇ ಶ್ಣಾ ಫೈ... ರಸದ ವಿಚಾರದಲ್ಲಂತೂ
ಇದರ ಹೊರತು ಜೇರೆ ದಾರಿಯಿಲ್ಲ; ಮಿಕ್ಕ ಅರ್ಥಗಳ ವಿಚಾರವೂ ಇಷ್ಟೇ
ಸರಿ. ಉದಾಹರಣಿಗೆ, ಆಧುನಿಕ ಕಾವ್ಯವಿಮರ್ಶೆಯಲ್ಲಿ ಪ್ರಧಾನವಾಗಿ
ರುವ ಪಾತ್ರಶೀಲಸ್ವಭಾವಗಳ ನಿರೂಪಣಿಯನ್ನು ಗಮನಿಸೋಣ. ಒಬ್ಬರ
ನಡೆನುಡಿಗಳನ್ನು ಕವಿ ಮನಶ್ಮಾಸ್ತ್ರಜ್ಞಾನವನ್ನೆಲ್ಲಾ ಉಪಯೋಗಿಸಿ
ವಿಭಜನೆ ಮಾಡಿ ಪುಟಪುಟಗಳನ್ನೇ ಬರೆದಿಡಬಹುದು. ಆದರೆ ಅದೆ
ಲ್ಲವೂ ಪಾತ್ರದ ಮನಸ್ಸಿನ ಚಹರೆಪಟ್ಟಿಯಾಯಿತೇ ಹೊರತು, ಅದನ್ನು
ಸಿ೦೪ ಭಾರತೀಯ ಕಾವೃಮಾಮಾಂಸೆ
ಓದಿದ್ದರಿಂದ ವಾಚಕನಿಗೆ ಆಶ್ಲಾದವಾಗಲಿ ವಸ್ತುವಿನ ಪ್ರತ್ಯಕ್ಷಜ್ಞಾನವಾ
ಗಲಿ ಲಭಿಸುವುದಿಲ್ಲ. ಆದರೆ, ಅದೇ ಪಾತ್ರದ ಗುಣಶೀಲಗಳನು ವ್ಯಕ್ತ
ಗೊಳಿಸುವ ಒಂದು ಸನ್ನಿವೇಶವನ್ಲೋ ಮಾತನ್ಮೋ ಚರೈಯನ್ನ್ನೇ
ವ್ಯಾಖ್ಯಾನವೇನೂ ಇಲ್ಲದೆ ನಮ್ಮ ಮುಂದೆ ಪ್ರದರ್ಶಿಸಿದರೆ ಸಾಕು:
ಪಾತ್ರದ ಸ್ವಭಾವ ತನ್ನಪ್ಪಕ್ಕೆ ತಾನೇ ನಮ್ಮ ಹೃದಯವನ ನತು ಬುತ್ತದೆ.
« ಪ್ರತಿಮಾನಾಟಕ 'ದ ವರವು ಅಂಕದಿಂದ ಇದಕ್ಕೊಂದು ಉದಾ
ಹರಣಿ : ನಾರುಮಡಿಯನ್ನುಟ್ಟರೆ ತನಗೆ ಒಪ್ಪುವುದೋ ಫೇಗೆ ಒಂದು
ಮೋಡುತ್ತಿದ್ದ ಸೀತೆಯ ಬಳಿಗೆ ಚೇಟಿ ಸಡಗರದಿಂನ ಬರುತ್ತಾಳೆ;
ಚೇಟಿ. -ಭಟ್ಟಿನಿ, ಪ್ರHಿಯವಾರ್ತೆ, ಪ್ರಿಯ ವಾರ್ತೆ
ಸೀತೆ ಏನನ್ನು ಉದ್ದೇಶಿಸಿ ಮಾತಾಡ.ಕ್ತಿದೀಯೆ ?
ಚೇಟಿ. .ಯುವರಣಜನಿಗೆ ರಾಜ್ಯಾಭಿಷೇಕವಂತೆ.
ಸೀತೆ -ಆರ್ಯನವಿಗೆ ಕುಶಲವಪ್ಟೆ ?
ಚೇಟಿ - ಮಹಾರಾಜನೇ ರಾಜ್ಯಾಭಿಪೇಕವನ್ನು ಬೆಳಸುವನು.
ಸೀತೆ. ಹಾಗಿದ್ದರೆ ಎರಡನೆಯ ಪ್ರಿಯವಾರ್ತೆಯನ್ನು ನಾನು ಕೇಳಿನೆ.
ನಿನ್ನ ಉಡಿಯನ್ನು ತೆರೆ,
ಚೇಟಿ -ಭಟ್ಟಿನಿ, ಅಪ್ಪಣೆ. (ಹಾಗೆಯೇ ಮಾಡುವಳು. ಸೀತೆ ಅದರಣ
ಗಳನ್ನು ಕಳಚಿ ಕೊಡುವಳು.)
ಇಲ್ಲಿ ಬಂದಿರುವ ಮೂರು ನಾಲ್ಕು ಮಾತುಗಳಿಂದಲೇ ಸೀತೆಯ ಇದಾತ್ತ
ಪ್ರಕೃತಿ ಎಷ್ಟು ಚೆನ್ನಾಗಿ ವ್ಯಕ್ತವಾಗುತ್ತದೆ! ರಾಮನಿಗೆ ರಾಜ್ಯಾಭಿಸೇಕ
ವಂತೆ ಎಂಬ ಒಳ್ಳೆಯ ಸುದ್ದಿಯನ್ನು ಹೇಳಿದ ಕೂಡಲೆ ಅವಳಿಗೆ ಉಂಟಾಗು
ವುದು ಸಂತೋಪವಲ್ಲ; ಆತಂಕ. ದಶರಥನಿಗೆ ಎನಾದರೂ ಅಶುಭವೊದಗ
ದಿದ್ದರೆ ಈ ಪ್ರಸ್ತಾವ ಏಕೆ ಬರುತ್ತಿತ್ತು ಎಂಬ ಆತಂಕ. ದಶರಥನ
ಒಪ್ಪಿ ರಾಮನಿಗೆ ರಾಜ್ಯವನ್ನು ವಪಿಸಿಕೊಡುವುದಾದಗೆ ಅದರಲ್ಲೇನೂ
ಅವಳಿಗೆ ಅಸಹಜವಾದ ವಿರಕ್ತಿಯಿಲ್ಲ; ಆದರೆ ಅದು ಎರಡನೆಯ ಪ್ರಿಯ.
ನಾಟಕದಲ್ಲಿ ಕವಿಯ ವ್ಯಾಖ್ಯಾ ನಕ್ಕೆ ಅವಕಾಶ ಕಡೆ. ; ಕಥೆ ಕಾವ್ಯ
ಗಳಲ್ಲ ಬೇಕಾದಷ್ಟು ಉಂಟು. ಸಿ ಕಡೆಯ ಪ ಪ್ರವೃತ್ತಿಯನ್ನು ತಡೆಯು
ಪುದು ಗ್ರಂಥಕಾರನಿಗೆ ಕಡಿನವೂ ಹೌದು. ಆದರೆ ಟ್ ತಡೆಯಬೇಕು;
ವಿವರಣಿಯನ್ನು ಕಡಮೆ ಮಾಡಿ ಸೂಚನೆಯನ್ನು ಬೆಳಸಬೇಕು. ಇಲ್ಲ
೧೯. ವ್ಯಂಜನಾ ವಿಚಾರ ೩೦೫
ಇನ್ನೊಂದು ಪ್ರಯೋಜನಪೇನೆಂದಕೆ ಧ್ವನಿಯ ಸಂಕ್ಷೇಪಶಕ್ತಿ ಗುಲಗಂಜಿ
ಯಲ್ಲಿ ಪಟ್ಟೆಯ ಸೀರೆ ಸುನ್ನು ಇಟ್ಟು ಕೊಡುವಂತೆ. ಉತಿತವಾದ ನಾಲ್ಕೇ
ಮಾತುಗಳು ಅಪರಿಮಿತವೂ ಅತಿಸ್ಕಾದುವೂ ಆದ ಅರ್ಥವನ್ನು ಒಪ್ಪಿಸ
ಬಲ್ಲುವು. ಕಾವ್ಯದಲ್ಲಿ ನೀತಿ ಪ್ರತಿಪಾದನೆ ಸಾಗಬೇಕಾದದ್ರೂ ಪೀಗೆಯೆ.* ;
“" ಕಾಂತಾಸಂಮಿತತ್ಯ ''ವನ್ನು ಕವಿ ಮತ್ತೆ ಮತ್ತೆ ನೆನೆಯುತ್ತಿರಬೇಕು.
ಕಾವ್ಯಕ್ಕೆ ವ್ಯಾಖ್ಳಾನಷೇ ಕೂಡದೆಂದು ಧ್ವನಿವಾದದ ಅಭಿಪ್ರಾಯ
ವಲ್ಲ; ಆದರೆ ಅದು ಕವಿಯ ಕೆಲಸವಲ್ಲ. ಗೋಪ್ಯವಾಗಿರುವುದ: ವ್ಯಂಗ್ಯದ
ಒಂದು ಸೊಗರು. ಇದೇ ಅದರ ಪ್ರಾಣಪೆಂದು ಕೂಡ ಅಭಿನವಗುಪ್ತನ:
ಆಗಾಗ ಜ್ಞಾಪಿಸುತ್ತಾನೆ. ತನ್ನ ಉಕ್ತಿಯನ್ನು ಕವಿ ತಾನೇ ವಿವರಿಸಿ,
ಅವರ ಧ್ರನಿಯನ್ನು ಬಯಲಿಗೆಳೆದರೆ ಸ್ವಾರಸ್ಯ ಕುಂದುವುದು ನಿಜ.
ಸಹೃದಯನ ಪ್ರತಿಭೆ ಜಡವಾಗಿ ಬಿದ್ದಿರದೆ ತಾನೂ ಪ್ರಚೋದನೆಗೊಂಡು
ಕವಿಪ್ರತಿಭೆ ಸಾಗಿದ ದಾರಿಯಲ್ಲೇ ತಾನೂ ಮುಂದುವರಿದು ಕವಿ ಕಂಡ
ಅರ್ಥವನ್ನು ತಾನೂ ಕಂಡಾಗ ಮಾತ್ರ ಕಾವ್ಯದ ಆಸ್ಚಾದ ಅಧಿಕವಾಗು
ತ್ತದೆ. ಸಹೃವಯನ ಪ್ರತಿಭೆಗೂ ಕೆಲವುಮಟ್ಟಿನೆ ಕೆಲಸವನ್ನು ` ಕಪಿ
ಉಳಿಸಿರಬೇಕು. ಆದರೆ'ಕಾವೃನಲ್ಸ ಗೂಢವಾಗಿರುವ ಧ್ವನಿ ಎಷ್ಟೋ
ವೆಳೆ ನಮಗೆ ಹೊಳೆಯ ಎವುದಿಲ್ಲವಲ್ಲ; ಅದನ್ನು ತಿಳಿಸಲು ಸಹಾಯಷೇ
ಬೇಡವೆ ?--ುಎಂಬ ಆಕ್ಷೇಪಣಿ ಇಲ್ಲಿ ಏಳಬಹುದು. ನಿಜ, ಸಹಾಯ ಬೇಕಾ
ಗುತ್ತದೆ. ಅದನ್ನು ಒದಗಿಸಲು ವ್ಯಾಖ್ಯಾನಕಾರರೂ ವಿಮರ್ಶಕರೂ
ಮುಂದೆ ಬರುತ್ತಾರೆ. ಕಾವ್ಯಗಳನ್ನು ಅನುಶೀಲನಮಾಡಿ ನಿಶಿತವೂ
ಪರಿಣತಪೂ ಆದ ತಮ್ಮ ಪ್ರತಿಭೆಯ ಬಲದಿಂದ ಅವರು ಕವಿಯ ಆಶಯ
ವನ್ನು ವಿಶದಪಡಿಸುತ್ತಾರೆ. ಒಮ್ಮೊಮ್ಮೆ ಕವಿಗೆ ಗೋಚಂವಾಗದಿದ್ದ
ಸ್ವಾರಸ್ಯಗಳೂ ಅವಂಗೆ ಕಾಣಿಸಬಹುದು. ಇವರ ಸಹಾಯವನ್ನು
ವಾಚಕನು ಪಡೆಯಬೇಕು. ಆದರೆ ಒಂದು ಮಾತು. ವ್ಯೂಖ್ಯಾನಕಾರರ
ವಿವರಣಿಯನ್ನು ಇವನ ಬುದ್ಧಿ ಗ್ರಪಿಸಿ ತಿಳಿದರೆ ಸಾಲದು. ಈ ಹೊಸ
ಅರ್ಥವು ವಾಚಕರ ಪ್ರತಿಭೆಯಲ್ಲಿ ಮತ್ತೆ ಮಿಂಚಿನಂತೆ ಹೊಳೆದು ಅವನ
ಹೃದಯವನ್ನು ತುಂಬಬೇಕು. ಯಾರ ಸಹಾಯದಿಂದಲಾದರೂ ಸರಿಯೆ ;
ವಾಚಕನು ಅದನ್ನು ಸಾಕ್ಷಾತ್ತಾದ ಅನುಭವವಾಗಿ ಪಡೆದಲ್ಲಣೆ ಅವನಿಗೆ
ರಸಾಸಾದ್ಯವಿಲ್ಲ.
K.M. 20
೩೦೬ ಭಾರತೀಯ ಕಾವ್ಯಮಾಮಾಂಸೆ
ಗೋಪ್ಯಮಾನಕೆಯನ್ನು ಕುರಿತು ಕೊನೆಯಲ್ಲಿ ಒಂದು ಮಾತು.
ಒಂದು ಪದ್ಯದಲ್ಲಿ ಒಳ್ಳೆಯ ಧೈನಿಯಿರಬಹುದು. ಅದನ್ನು ಅಭಿವ್ಯಂಜಿಸಿದ
ಮಾತ್ರದಿಂದಲೇ ಕವಿ ತೃಪ್ತನಾಗದೆ, "" ಸಾಭಿಪ್ರಾಯಂ '', *ಸಾಕೂತಂ''
ಈ ಬಗೆಯ ಮಾತುಗಳನ್ನು ಸೇರಿಸಿ, ಇಲ್ಲ ವ್ಯಂಗ್ಯಾರ್ಥವುಂಟೆಂದು
ವಾಚಕರ ಗಮನವನ್ನು ಒಮ್ಮೊಮ್ಮೆ ಸೆಳೆಯುವುದುಂಟು. ತನ್ನ ಉಕ್ತಿ
ಯಲ್ಲಿ ಇಂಥ ಸ್ವಾರಸ್ಯವೊಂದು ಉಂಟೆಂದು ತಾನು ಪೀಗೆ ಅರಿಕೆ ಮಾಡ
ದಿದ್ದ ರೆ, ಅದು ವಾಚಕನ ಕಣ್ಣಿಗೆ ಬಲ್ಲಿ ತಪ್ಪಿಸಿಕೊ೦ಡುಬಿಡುವುದೋ
ಎ೦ಬ ಭಯ ಅವನಿಗೆ. ಈ ಚಾಪಲ್ಯಕೆ A ಶಿಕ್ಷೆಯಾಗಿ ಇಂಥ ಉದಾಹರಣೆ
ಗಳನ್ನು ಆಲಂಕಾರಿಕರು ಗುಣ್ಣೀಭೂತವ್ಯಂಗ್ಯದ ಜಾತಿಗೆ ಸೇರಿಸುತ್ತಾರೆ ;
ಅಲ್ಲಿಯ ವ್ಯಂಗ್ಯಾರ್ಥವು ವಾಚ್ಯಕ್ಕೇ ಅಂಗವಾಯಿತೆಂದು ಭಾವಿಸುತ್ತಾರೆ,
ಮತ್ತೆ ಕೆಲವು ವೇಳೆ ಕವಿ ಸಮುಚಿತವಾದ ವಿಭಾವಾನುಭಾವಗಳನ್ನು ವರ್ಣಿಸಿ
ರಸವನ್ನು ಹೊಮ್ಮಿಸುತ್ತಾನೆ ; ಆದರೆ ಆ ರಸದ ಹೆಸರನ್ನೂ ಜೊತೆಗೆ
ಹೇಳುತ್ತಾನೆ. ಮಲ್ಲಿಗೆಹೊನಿನ ಚಿತ ವನ್ನು ಸುಂದರವಾಗಿ ಬರೆದು, .
ಕೆಳಗಡೆ "" ಮಲ್ಲಗೆಹೂವು '' ಎಂದು ದಪ್ಪ ಅಕ್ಷರದಲ್ಲಿ ಬರೆದಿರಿಸಿದ
ಹಾಗಾಯಿತು. ಈ ಹೆಸರನ್ನು ತಿಳಿಸಿದ್ದರಿಂದ ರಸಾಸ್ಕಾದಕ್ಕೆ ಯಾವ
ಅನುಕೂಲತೆಯೂ ಇಲ್ಲ. ಅದರ ಬದಲು, ಅನಪೇಕ್ಷಿತವಾದ ಸಹಾಯವು
ಅನರ್ಥಕಾರಿಯಾಗುವಂಕೆ, " ಸೃಶಬ್ದವಾಚ್ಯತ್ವ '' ಎಂಬ ರಸದೋಪ
ಇಲ್ಲ ಒದಗುತ್ತದೆ.
ಇದಿಷ್ಟೂ ನಿಜ. ಆದರೆ ಈ ಗೋಪ್ಯಮಾನತೆಯ ನಿಯಮವನ್ನು
ಲಾಕ್ಷಣಿಕರು ಅತಿಕಠಿನವಾಗಿ ಅನ್ಪಯಿಸಬಾರದು. ತನ್ನ ಪದ್ಯದಲ್ಲಿ
ಸ್ವಾರಸ್ಯವುಂಟೆಂದು ಕವಿ ತಾನೇ ಹೇಳಿಕೊಳ್ಳುವುದು ಒಳ್ಳೆಯದಲ್ಲವಾದರೂ,
ಇದು ಮಾನವಸಹಜವಾದ ಚಾಪಲ್ಯ ; ಒಂದೊಂದು ವೇಳೆ ಇದರಿಂದ
ವಾಚಕರಿಗೆ ಉಪಕಾರವೂ ಆದೀತು. ಇದರಮೇಲೆ, 'ಇಲ್ಲಿ ವ್ಯಂಗ್ಯಾರ್ಥದ
ಗೂಢತ್ವ ಎಪ್ಪರಮಟ್ಟಿಗೆ ತೊಲಗುತ್ತದೆಂಬುದನ್ನು ಪರ್ಯಾಲೋಚಿಸಬೇಕು.
ಇಲ್ಲೆ ಲ್ಲಾ ಒಳಗಿನ ತಿರುಳು ಏನೆಂಬುದನ್ನು ಕವಿ ವಿವರಿಸಿ ಹೇಳುವುದಿಲ್ಲ;
ಇಲ್ಲೊಂದು ವ್ಯಂಗ್ಯಾರ್ಥವುಂಟು, ನೀವು ನೋಡಿಕೊಳ್ಳಿ ಎಂದು ಮಾತ್ರ
ನಮಗೆ ಸನೆ # ಮಾಡುತ್ತಾನೆ. (ಆ ಅರ್ಥ ಯಾವುದೆಂದು ಅರಿಯುವ
ಕಾರ್ಯವನ್ನು ನಮಗೇ ಬಿಡುತ್ತಾನೆ.) ಇದನ್ನು ದೊಡ್ಡ ದೋಷವಾಗಿ
ಹ ಯು ತ
೧೯. ವ್ಯಂಜನಾ ವಿಚಾರ ೩೦೩ಓ
ರಸದ (ಅಥವಾ ಭಾವದ) ಹೆಸರನ್ನು ಹೇಳಬಹುದೇ ಬಾರದೇ
ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವುಂಟು. ಧ್ಯನಿಕತ್ರ್ವವು
ಪ್ರಸಿದ್ಧಿಗೆ ಬರುವುದಕ್ಕೆ ಮುಂಚೆ " ಸ್ವತಬ್ದ''ವನ್ನು ತೇ ರಸಕ್ಕೆ
ಪುಷ್ಟಿ ಬರುವುದೆ೦ದು ಆಲಂಕಾರಿಕರೇ ನಂಬಿದ್ದರು.1* ಪುಷ್ಟಿ ಬಾರದಿದ್ದರೆ
ಹೋಗಲಿ ; ಹಾನಿಯೇನೂ ಇಲ್ಲವೆಂದು ಕವಿಗಳು ಉದ್ಮಕ್ಕೂ ಭಾವಿಸಿ
ಕೊಂಡು ಬಂದಂತೆ ತ್ಲೋರುತ್ತದೆ. ಹಾಗೆ ನೋಡಿದರೆ, « ಸೃಶಬ್ದ''
ಎನ್ನುವುದು ಯಾವುದು? ತೃೈಂಗಾರರಸವನ್ನೇ ಚರ್ಚೆಗಾಗಿ ತೆಗೆದು
ಕೊಳ್ಳೋಣ, «ರೆತಿ' «ಆ ಶೃ ೦ಗಾರ'' ಇಷ್ಟು ಮಾತ್ರ ಸ್ವಶಬ್ಧಪೆ ? ಇವು
ಗಳ ಸಮಾನಪದಗಳ ವಿಷ ಸುವೇನು; ಪ್ರೇಮ, ಪ್ರೀತಿ, ಒಲುಮೆ,
ಒಲವು--ಇವನ್ನು ಉಪಯೋಗಿಸಬಹುದೋ ಬಾರದೋ ? ಈ ವಿಷಯ
ವನ್ನು ಲಾಕ್ಷಣಿಕರು ಸ್ಪಪ್ಪಪಡಿಸಿದಂತೆ ಕಾಣಿಸಲಿಲ್ಲ. ಸ್ಥಾ ಯಿಭಾವದ
ವಿಷಯವಿರಲಿ ; ಔತ್ಪು ಕ್ಯ ಚಿಂತೆ, ಸರ್ಪ, ಲಜ್ಜೆ , ವಿಪಾದೆ-ಈ ಮೊದಲಾದ
ಸಂಚಾರಿಭಾವಗಳಲ್ಲಿ ಇನ್ನೂ ಕಪ್ಪ ಒದಗುತ್ತದೆ; ಒಂದು ಮುಖ್ಯ ರಸಕ್ಕೆ
ಅಂಗವಾಗಿ, ಪೋಪಕವಾಗಿ ಬರುವಾಗ ಅವುಗಳ ಹೆಸರುಗಳನ್ನು ಎತ್ತ
ದಿರುವುದು ಅತಿ ಕಠಿನ. ಈ ವಿಷಯದಲ್ಲಿ ಆಲಂಕಾರಿಕರೇ ತಮ್ಮ ನಿಯಮ
ವನ್ನು ಸಡಿಲಿಸಿ, ಒಮ್ಮೊಮ್ಮೆ ಸಂಚಾರಿಧಾವಗಳ ಹೆಸರನ್ನು ಉಪಯೋಗಿಸಿ
ದರೂ ದೋಪವಿಲ್ಲವೆಂದು, ಒಪ್ಪಿಕೊಳ್ಳುತ್ತಾರೆ.!1. -ಮುಖ್ಯವಾಗಿ ಇಂಥ
ವಿಷಯಗಳಲ್ಲೆ ಲ್ಲಾ ನಿಯಮವನ್ನು ಔಚಿತ್ಯವರಿತು, ಔದಾರ್ಯದಿಂದ ಅನ್ನ
ಯಿಸಜೇಕು.
ವ್ಯಂಜನಾವೃತ್ತಿ ಯೆಂಬ ಶಬ್ದ ವ್ಯಾಪಾರವೊಂದು ಬೇರೆ ಉಂಟೆ?
ಧ್ವನಿಪ್ರಸ್ಥಾನದವರು ವ್ಯಂಗ್ಯವೆಂದು ಕರೆಯುವ ಅರ್ಥವನ್ನೆಲ್ಲಾ, ಅಭಿಧಾ
10 ಪ್ರೈಶಬ್ಧ ಸ್ಮ್ಮಾಯಿ ಸಂಚಾರಿ ವಿಭಾವಾಣಭಿನಯಾಸ್ಪದಂ'' (ಉದ್ದೆಟ : ಕಾವಾ
ಲಂಕಾರಸಾರಸಂಗ್ರಹೆ, 1೪, ೩). ಕಾವ್ಯದಲ್ಲಿ ಸ್ರಶಬ್ದೋಪಾದಾನ ಕೆಲವು ವೇಳೆ ಇರ
ಬಹುದು ; ಕೆಲವು ವೇಳೆ ಇಲ್ಲದಿರಬಹುದು ಎಂದು " ದಶರೂಪಕ 'ದ ವ್ಯಾಖ್ಯಾನಕಾರನ
ಅಭಿಪ್ರಾಯ (1೪. ೩೭ ವ್ಯಾಖ್ಯಾನ). ಕೇವಲ " ಸ್ಪಶಬ್ದ '' ವನ್ನು ಉಡ್ಚರಿಸಿದಷ್ಟಕ್ಕೇ
ರಸನಿಪ್ಪತ್ತಿಯಾಗುವುದಿಲ್ಲವೆಂಬುದ್ದೇನೋ ಸ್ಪಷ್ಟವಾಗಿಯೇ ಇದೆ. ಈ ವಿಷಯದಲ್ಲ ಹಿಂದೆ
ಉದಾಹರಿಸಿರುವ ಕುಂತಕನ ಹೇಳಿಕೆಯನ್ನು ಜ್ಞಾಪಿಸಿಕೊಳ್ಳಬಹುದು. (ಪು. ೨೪೮,
ಅಡಿಟಪ್ಪಣಿ 4 ನೋಡಿ.)
1 ನ ದೋಪಃ ಸ್ಪಪದೇನೋಕ್ತಾವಪಿ ಸಂಚಾರಿಣಃ ಕ್ವಚಿತ್” (ಕಾವ್ಯಪ್ರಕಾಶ್ಮ
vii- ೧೫),
20-B
೩೦೮ ಭಾರೆತೀಯ ಕಾವೃಮಾಮಾಂಸೆ
ವೃತ್ತಿ ಲಕ್ಷಣಾವೃತ್ತಿಗಳೆಂದು ಮೊದಲಿನಿಂದಲೂ ಶಾಸ್ತ್ರಕಾರರು ಒಪ್ಪಿ
ಕೆೊ೦ಡಿರುವ ತಬ್ದವ್ಯಾಪಾರಗಳಿಂದಲ್ಲೇ ಸಾಧಿಸುವುದು ಅಶಕ.ವೇ ೫ ಅದು
ಸಾಗದಿದ್ದರೆ, ತಾತ್ಪರ್ಯವೃತ್ತಿಯಲ್ಲ ಇದನ್ನೇಕೆ ಸೇರಿಸಿಬಿಡಬಾರದು ?
ನೀವು ವ್ಯ೦ಗ್ಯವೆಂದು ಕರೆಯುವುದೆಲ್ಲ ಒಂದ. ಬಗೆಯ ಅನುಮಾನವೇ
ಅಲ್ಲವೆ ; ಮಿಕ್ಕ ಅರ್ಥಗಳ ಮಾತು ಹಾಗಿರಲಿ, ರಸವೂ ಕೂಡ ಅನುಮಿತ
ವಾಗುವುದಿಲ್ಲವೆ ?--ಪೀಗೆ ಅನೇಕಾನೇಕ ಪೂರ್ವಪಕ್ಷಗಳು ಧ್ಯನಿತತ್ತ ದ
ಮೇಲೆ ಬರಗಿದುವು.? ಅವುಗಳ ಅರ್ಭಟ ಉಡುಗಜೇಕಾದರೆ ಶತಮಾನ
ಗಳು ಉರುಳಿಹೋಗಬೇಕಾಖುತು. ಇಂದು ಆ ಚರ್ಚೆಯ ಬಹುಬಾಗವು
ಐತಿಹಾಸಿಕ ದೃಷ್ಟಿಯಿಂದ ಮಾತ್ರ ಗಣನೀಯವಾಗಿದೆ. ಸಾವಿರ ವರ್ಷ
ಗಳ ಪಿಂದಿನ ಶಾಸ್ತ್ರ ಕಾರರಿಗೆ ಮುಖ್ಯವೆಂದು ತೋರುತ್ತಿದ್ದ ಸಮಸ್ಯೆಗಳೆಲ್ಲ
ಈಗ ನಮಗೂ ಮುಖ್ಯವೆಂದು ತೋರ ಾರವು.. ಅದೆ ಎಸ್ಟೋ
ಸಂದರ್ಭಗಳಲ್ಲಿ ಅವರಿಗೆ ಹುಟ್ಟು ತ್ತಿದ್ದ ಸಂಶಯಗಳೇ ನಮಗೆ ಹುಟ್ಟುವು
ದಿಲ್ಲ. ಆದಕಾರಣ, ದೀರ್ಫ್ಪ -ಇಲ ನಡೆದು ಇತ್ಯರ್ಧವಾಗಿರುವ ಎಂದು
ವ್ಯವಹಾರದ ವಾಜ್ಕೂಲವನ್ನು ಮತ್ತೆ ಮೊದಲಿನಿಂದ ಕೇಳಿ ವಿಮರ್ಶಿಸು
ವುದು ಸಾಮಾನ್ಯಸಂದರ್ಭಗಳಲ್ಲ ಹೇಗೆ ಅಪ್ರಕೃತವೋ ಹಾಗೆಯೇ
ಇಲ್ಲ ಕೂಡ ಪ್ರತಿಯೊಂದು ಪೂರ್ವಪಕ್ಷವನ್ನೂ ಅದಕ್ಕೆ ಧೃನಿಪ್ರ ಸ್ಫಾನದವರು
ಕೊಡುವ ಸಮಾಧಾನವನ್ನೂ ಉಲ್ಲೇಖಿಸುವುದು ಅಪ್ರಕೃತ. ಇದರ
ಮೇಲೆ ದೊಡ್ಡ ಕಪ್ಟವೊಂದುಂಟು ವ್ಯಂಜನಾವೃತ್ತಿಯುಂಟೆಂಬ ತತ್ತ್ವವು
ನಮ್ಮ ಕಾವ್ಯಮಾಮಾ೦ಂಕೆಯ ತಳಹದಿಯಾದರೂ, ಅದು ಉಂಟೆಂಬುದರ
ಸ್ಥಾಪನೆ ಕಾವ್ಯಮಾಮಾಂಸಕನ ನಿಯತ ಕರ್ತವ್ಯವಲ್ಲ. ಅದು ಮುಖ್ಯವಾಗಿ
ದಾರ್ಶನಿಕರ ವಾದಭೂಮಿ ; ಆ ಗಹನಾರಣ್ಮದಲ್ಲ ಕಾಲಿಡಲು ಶಾಸ್ತ್ರ
ನಿಷ್ಮಾತರಲ್ಲದವರು ಹೆದರತಕ್ಕದ್ದೇ ಸಹಜ. ಆದಕಾರಣ ಈ ವಾದ
12 ಈ ಪೂರ್ವಪಕ್ಷಗಳು ಒಟ್ಟು ಹನ್ಮೆರಡೆಂದು ತಿಳಿಸುವ ಕೆಳಗಿನ ಪದೃಗಳನ್ನು ಅಲಂ
ಕಾರಸರ್ವಸ್ವಕ್ಕೆ ವ್ಯಾಖ್ಯಾನ ಬರೆಯುತ್ತಾ ಜಯರಥನು ಉದಾಹರಿಸುತ್ತಾನೆ :
ತಾತ್ಪರೃಶಕ್ತಿರಭಿಧಾ ಲಕ್ಷಣಾನುಪಿತೀ ದ್ವಿಧಾ |
ಆರ್ಥಾಪತ್ತಿಃ ಕೃಚಿತ್ತಂತ್ರಂ ಸಮಾಸೋಕ್ತ್ಯಾದ್ಯಲಂಕೃಕಿಃ॥
ರಸಸ್ಯ ಕಾರೃತಾ ಭೋಗೋ ಪ್ಯಾಪಾರಾಂತರಬಾಧನಂ !
ದ್ಯಾದಶೇತ್ಸಂ ಧ್ವನೇರಸ್ಯ ಸ್ಮಿತಾ ವಿಪ್ರತಿಪತ್ತಯಃ 1 (ಪು. ೯)
ಇವು ಯಾವಯಾನುವೆಂಬುದು ಖಚಿತವಾಗುವುದಿಲ್ಲ. ಈ ವಿಷಯದಲ್ಲಿ V, Raghavan:
" Bhoja’s Srngara Prakasa ': Vol. I—Part 1, ಪು. ೧೪೯-೧೫೦ ನೋಡಿ.
೧೯. ವ್ಯಂಜನಾ ವಿಚಾರ ೩೦೯
ಗಳನ್ನು ಬೆಳೆಸದೆ,» ಒಂದೆರಡು ಅಂಶಗಳನ್ನು ಮಾತ್ರ ಅಲ್ಲಲ್ಲಿ ಸೂಚಿಸಿ,
ಅಧುನಿಕ ದೃಷ್ಟಿಯಿಂದ ಹೇಳಬಸುದಾದ ಒಂದೆರಡು ಮಾತನ್ನೂ ಸೇರಿಸಿ
ಮುಗಿಸುತ್ತೇವೆ.
ಮೊದಲು ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ವ್ಯಂಜನಾ
ವೃತ್ತಿಯೆಂಬ ವ್ಯಾಪಾರ ಬೇರೆ ಇಲ್ಲವೆಂದು ಈ ಪ್ರತಿಪಂಥಿಗಳೆಲ್ಲರೂ
ವಾದಿಸುತ್ತಾರೆಯೇ ಹೊರತು, * ವ್ಯಂಗೃಪೆಂದು ನೀವು ಕರೆಯುವ
ಅರ್ಥವೇ ನಮಗೆ ಗೋಚರವಾಗುವುದಿಲ್ಲ; ಅವೆಲ್ಲ ಬರಿಯ ಭ್ರಾಂತಿ”
ಎಂದು ಯಾರೂ ಆಕ್ಷೇಪಿಸುವಂತೆ ಕಾಣುವುದಿಲ್ಲ. ಆದಕಾರಣ ಚರ್ಚೆ
ಯೆಲ್ಲವೂ ಆ ಅರ್ಥವು ಪ್ರತೀತವಾಗುವ ಬಗೆಯನ್ನು ರಿತೇ ಹೊರತು, ಆ
ಅರ್ಥದ ಅಸ್ತಿತ್ವವನ್ನು ಕುರಿತಲ್ಲ.
ವಾಚ್ಯಾರ್ಥದಲ್ಲೇ ವ್ಯಂಗ್ಯವನ್ನೂ ಏಕೆ ಸೇರಿಸಿಬಿಡಬಾರದು ;
ಅಭಿಧಾವೃತ್ತಿಯಿಂದಲ್ಲೇ ಇದೂ ಹೊರಡುವುದೆಂದು ಏಕೆ ಹೇಳದಾರದು...
ಎಂಬುದು ಬಹುಮುಖ್ಯವಾದ ಆಕ್ಷೇಪಣಿ, ಇದಕ್ಕೆ ಉತ್ತರವಾಗಿ ಧನಿ
ಪಕ್ಷದವರು ವಾಚ್ಯಕ್ಕೂ ವ್ಯಂಗೃಕ್ಕೂ ಅನೇಕ ವಿಧಗಳಲ್ಲಿ ವ್ಯತ್ಯಾಸ
ಪುಂಟೆ೦ದೂ, ಆದಕಾರಣ ವಾಚ್ಯವು ವ್ಯಂಗ್ಯವನ್ನು ಒಳಕೊಳ್ಳಲಾರದೆಂದೂ
ತೋರಿರಿದರು. ಮೊದಲು ಇವೆರಡಕ್ಕೂ ಸ್ವರೂಪದಲ್ಲೇ ವ್ಯತ್ಯಾಸ :
ಉದಾಹರಣಿಗೆ, ವಾಚ್ಯವು « ಹೋಗು '' ಎಂಬ ವಿಧಿಯಾದರೆ ವ್ಯಂಗ್ಯವು
« ಹೋಗಜೇಡ'' ಎಂಬ ನಿಷೇಧವಾಗಬಹುದು ; ವಾತ್ಯವು ನಿಂದೆ
ಯಾದರೆ ವ್ಯಂಗ್ಯವು ಸ್ತುತಿಯಾಗಬಹುದು ; ಹೀಗೆಯೇ. ವಾಚ್ಯವು ಕೇವಲ
ಶಬ್ದದಿಂದ ಹೊರಡತಕ್ಕದ್ದು : ಶಬ್ದಕ್ಕೆ ಸಂಕೇತಿತವಾದ ಅರ್ಥವೇ ಅದು.
ಅದರೆ ವ್ಯಂಗ್ಯಾರ್ಥವು ಸಂಕ್ಷೇತಸಪಿತವಾದ ಶಬ್ದದಿಂದ ಮಾತ್ರವಲ್ಲದೆ,
ಸಂಕೇತಪವೇನೂ ಇಲ್ಲದ ವರ್ಣರಚನಾವಿಶೇಷದಿಂದ ಹೊರಡಬಹುದು.
ಅಪ್ಪೇ ಅಲ್ಲ. ಈ ಶಬ್ದಕ್ಕೆ ಈ ಅರ್ಥವೆಂಬ ಸಂಕೇತವುಂಟೇ ಹೊರತು,
ಈ ಅರ್ಥಕ್ಕೆ ಇದು ಇನ್ನೊಂದು ಅರ್ಥವೆಂಬ ಸಂಕೇತವನ್ನು ಯಾರೂ
ಕಲ್ಪಿಸಿಲ್ಲ. ಆದರೆ ವಾಚ್ಯಾರ್ಥವು ಇನ್ನೊಂದು ಅರ್ಥಕ್ಕೆ ವ್ಯಂಜಕವಾಗು
ವುನನ್ನು ನಾವು ಬಲ್ಲೆ ವಲ್ಲವೆ ? ಈ ಎರಡನೆ ಖು ಅರ್ಥವನ್ನೂ ವಾಚ್ಯವೆಂದು
ಕರೆಯುವುದು ಹೇಗೆ?
"13 ಈ ವಿಷಯದ ಮೇಲಿನ ಪ್ರೌಢ ಚರ್ಚೆಯನ್ನು ಇರಿಯುವ ಉದ್ದೇಶವಳ್ಳವರು
ಧ್ವನ್ಯಾಲೋಕದ ಮೂರನೆಯ ಉದ್ಧ್ಯ್ಯೋತದ ಉತ್ತರಭಾಗವನ್ನೂ ಕಾವ್ಯಪ್ರಕಾಶದ
ವಿದನೆಯ ಉಲ್ಲಾಸವನ್ನೂ ಓದಬಹುದು.
೩೧೦ ಭಾರತೀಯ ಕಾವ್ಯಮಾಮಾಂಸೆ
ವಾಚ್ಯಾರ್ಥವನ್ನು ತಿಳಿಯಲು ಪಕ್ಕದಲ್ಲಿ ಕೋತವ್ಯಾಕರಣಗಳಿದ್ದರೆ
ಸಾಕು. ವ್ಯಂಗ್ಯಾರ್ಥಜ್ಞಾನಕ್ಕೆ ಬೇಕಾದ ಪರಿಕರವು ಪ್ರತಿಭೆ, ಪಾಂಡಿತ್ಯ
ವಲ್ಲ, ಇದೇ ವಿಷಯವೇ ಇನ್ನೊಂದು ಭೇದವನ್ನೂ ತೋರಿಸುತ್ತದೆ.
ಒಂದು ಮಾತು ಯಾವ ಸೆಂದರ್ಧದಲ್ಲಸೇ ಬರಲಿ, ಯಾರೇ ಅದನ್ನು
ಹೇಳಲಿ, ಭಾಷೆಯ ಪರಿಚಯವುಳ್ಳಿವರಿಗೆಲ್ಲ ಅದರಿಂದ ಒಂದೇ ವಾಚ್ಯಾರ್ಥ
ತಿಳಿಯುತ್ತದೆ. ಶಾಸ್ತ್ರವ್ಯವಹಾರದ ಗಟ್ಟಿಯಾದ ನೆಲಗಟ್ಟೇ ಇದು;
ಒಂದು ಮಾತಿನ ವಾಚ್ಯಾರ್ಥವೇನಾದರೂ ಒಬ್ಬೊಬ್ಬರಿಗೆ ಒಂದೊಂದು
ರೀತಿಯಾಗಿ ತಿಳಿಯಬಂದಲ್ಲಿ ಶಾಸ್ತ ಗ್ರಂಥಗಳಲ್ಲಿ ಅನಿಶ್ಚಯ ಮನೆ ಮಾಡಿ
ಕೊಂಡುಬಿಟ್ಟೀತು. ಆದರೆ, ಹೇಳುವವನೊ ಕೇಳುವವನೂ ಯಾರು?
ಸಂದರ್ಭವೇನು ? ಈ ಮೊದಲಾದದ್ದನ್ನೆಲ್ಲಾ ಅನುಸರಿಸಿ ಒಂದೇ ಮಾತಿನ
ವ್ಯಂಗ್ಯಾರ್ಥವು ಬೇರೆ ಬೇರೆಯಾಗುತ್ತದೆ.--ಈ ಪಟ್ಟಿಯನ್ನು ಇನ್ನು
ಬೆಳಸಜೇಕಾಗಿಲ್ಲ. ವಾಚ್ಯಕ್ಕಿಂತ ವ್ಯಂಗ್ಯವು ಭಿನ್ನೆವೆಂಬುದನ್ನು ಕಾವ್ಯಾ
ಸ್ವಾದಜ್ಜರೆಲ್ಲರೂ ಅನುಭವದಿಂದ ಬಲ್ಲರು.
ಇನ್ನು, ಲಕ್ಷಣಾವೃತ್ತಿಗೂ ವ್ಯಂಜನಾವೃತ್ತಿಗೂ ಅಭೇದವನ್ನು
ಕಲ್ಪಿಸುವುದು ಸಾಧ್ಯವಿಲ್ಲ... ವಾಚ್ಯಾರ್ಥವು ಹೊಂದದಿದ್ದಾಗೆ ಮಾತ್ರ
ಲಕ್ಷಣೆಯನ್ನು ಆತ್ರಯಿಸುತ್ತೇವೆ. ಆದರೆ ಲಕ್ಷಣಿಯ ಪ್ರವೇಶಕ್ಕೆ ಅವ
ಕಾಶವೇ ಇಲ್ಲದಾಗಲೂ ವ್ಯಂಗ್ಯಾರ್ಥ ಹೊರಡುವುದುಂಟಷೈೆ. ಅಭಿಧಾ
ಮೂಲಧ್ಯನಿ ಪ್ರಪಂಚವೆಲ್ಲವೂ ಇದಕ್ಕೆ ನಿದರ್ಶನ. ಲಕ್ಷಣಾಮೂಲಧ್ಯನಿ
ಯಲ್ಲಿ ಕೂಡ, ಲಕ್ಷಾರ್ಥಪೂ ವ್ಯಂಗ್ಯಾರ್ಥವೂ ಬೇರೆ ಬೇರೆ. ಏಕೆಂದರೆ,
ಇಲ್ಲೆಲ್ಲ ಲಕ್ಷ್ಯಾರ್ಥವನ್ನೂ ಅದರಿಂದ ಆಚೆಗೆ ಹೊಳೆಯುವ ಪ್ರಯೋಜನ
ವನ್ನೂ ಬೇರೆ ಬೇರೆಯಾಗಿ ಎಂಗಡಿಸುವುದು ಸಾಧ್ಯ. ಹಿಂದೆ ಅನೇಕ
ಉದಾಹರಣಿಗಳಲ್ಲ ಹೀಗೆ ಬಡಿಸಿ ನೋಡಿದ್ದೇವೆ. ಈ ಪ್ರಯೋಜನವನ್ನು
ಲಕ್ಕ್ಯಾರ್ಥ ದೊಳಗೆ ಅಡಕ ಮಾಡಲಾಗುವುದಿಲ್ಲ.
ತಾತ್ಸರ್ಯವೈತ್ತಿಯನ್ನು ಕುರಿತು ಒಂದು ಮಾತು. ವಾಕ್ಯದ ಅನ್ವಯ
ವನ್ನು ತಿಳಿಸುವುದಪ್ಪೇ ಇದರ ಕಾರ್ಯವೆಂದಪಕ್ಷಕ್ಕೆ, ಇದನ್ನು ಬೇರೆಯಾಗಿ
ಪರಿಗಣಿಸಲೇಬೇಕಾಗಿಲ್ಲ; ಅಭಿಧಾವೃತ್ತಿಯೊಂದನ್ನು ಒಪ್ಪಿಕೊಂಡರೆ ಸಾಕು
ಎಂದು ಪಿಂದೆಯೇ ನೋಡಿದ್ದೇವೆ." ಹಾಗಲ್ಲ, ವಾಕ್ಯದಿಂದ ಹೊರಡುವ
14 ಪು. ೨೨೫.
೧೯. ವ್ಯಂಜನಾ ವಿಚಾರ ೩೧೧
ಸಮಸ್ತಾರ್ಥವನ್ನೂ ಇದು ತಿಳಿಸುತ್ತದೆ ಎಂದು ಇದರ ವ್ಯಾಪ್ತಿಯನ್ನು
ವಿಸ್ತರಿಸಿದಪಕ್ಷಕ್ಕೆ,--ವೈ೦ಜನಾವೃತ್ತಿಗೂ ಇದಕ್ಕೂ ನಿಜವಾದ ಭೇದವೆಲ್ಲ
ಬಂತು? ಹೆಸರಿನಲ್ಲಿ ಮಾತ ತೆ ವ್ಯತ್ಯಾಸ ; ಅಪ್ಲೆ 4
ಇನ್ನು, ಅನುಮಾನವಾದಿಗಳ ಆಕ್ಷೇಪಣೆಯನ್ನು ಕುರಿತು ಎರಡು
ಮಾತನ್ನು ಹೇಳೋಣ. ಸತ್ಯಾರ್ಥವನ್ನು ನಿರ್ಣಯಿಸಲು ಉಪಯೋಗಿ
ಸುವ ಪ್ರಮಾಣಗಳಲ್ಲಿ ಅನುಮಾನವೂ ಒಂದು. ಅದನ್ನು ಅವಲಂಬಿಸಿ
ಯಾರೇ ತರ್ಕಮಾಡಲಿ; ನಿಶ್ಚಿತವಾದ ಅನುಮೇಯವು ತಿಳಿಯಬರಬೇಕು ;
ಅದರ ಪ್ರತೀತಿ ಎಲ್ಲರಿಗೂ ಒಂದೇ ಸಮನಾಗಿರದೇಕು. ವ್ಯಂಗ್ಯಾರ್ಥ
ಪ್ರತೀತಿಯಲ್ಲ ಈ ನಿಶ್ಚಯ ಎಲ್ಲಿದೆ? ಇಲ್ಲ ಇದೇ ವ್ಯಂಗ್ಯ; ಇಷ್ಟೇ ವ್ಯಂಗ್ಯ
ಎಂದು ಸಪ್ರಮಾಣವಾಗಿ ಯಾರು ತೋರಿಸಲಾದೀತು? ಅಲ್ಲದೆ, ಈ
ವ್ಯಂಗೃದ ಪ್ರತೀತಿ ಎಲ್ಲರಿಗೂ ಉಂಟಾಗುವುದೆಂದಾಗಲಿ, ಉಂಟಾದರೂ
ಒಂದೇ ಸಮನಾಗಿ ಉಂಟಾಗುವುದೆಂದಾಗಲಿ ಹೇಳಲು ಸಾಧ್ಯವಿಲ್ಲ.
ಇದಕ್ಕಿಂತ ಮುಖ್ಯವಾದ ಇನ್ನೊ೦ದು ವಿಷಯವನ್ನೂ ಗಮನಿಸಬೇಕು.
ವ್ಯಂಗ್ಯದ ಅರಿವು ಒದಗಿದಾಗ ಅಸ್ಲಾ ದ ಹುಟ್ಟುತ್ತದೆ : ಈ ಆಹ್ಲಾ ದವನ್ನು
ಕೊಡುವ ತಿರುಳನ್ನು ವ್ಯಂಗ್ಯವು ಒಳಕೊಂಡಿರುತ್ತದೆ. "" ಬೆಟ್ಟದಲ್ಲಿ ಜಿಂಕಿ
ಯಿದೆ'' ಎಂದು ಊಹೆ ಮಾಡಿದಾಗ, ಅಲ್ಲ ಅಗ್ನಿಯ ಅಸ್ತಿತ್ವದ ಜ್ಞಾನೆ
ಯಾರಿಗೂ ಆಹ್ಲಾ ದ ಕೊಡುವುದಿಲ್ಲ: ಎಂದರೆ ಅನುಮಾನವು ಚಮತ್ಕಾರ
ಜನಕವಲ್ಲ. ನಾನು ಬುದ್ಧಿವಂತ ; ಈ ಜ್ಞಾ ನವನ್ನು ಪಡೆಯುವಷ್ಟು
ಮಟ್ಟಿಗೆ ನಾನು ಊಹೆ ಮಾಡಬಲ್ಲೆ ಎಂದು ಅನುಮಾನಕಾರನು ತನ್ನ
ಬೆನ್ನನ್ನು ಬೇಕಾದರೆ ತಟ್ಟಿ ಕೊಳ್ಳಬಹುದು. ಆದರೆ ಇಲ್ಲ ನಾವು ವಿಚಾರ
ಮಾಡುತ್ತಿರುವುದು ಈ ಬಗೆಯ ಸ್ವಾಭಿಮಾನದ ಸಂತೋಪವನ್ನಲ್ಲ. ಉತ್ತ
ಮವಾದ ವ್ಯಂಗ್ಯಾರ್ಥವು ಹೊಳೆದಾಗ ನಮಗೆ ಮೈಮೇಲೆ ಎಚ್ಚ ರ
ವೆಲ್ಲಿರುತ್ತದೆ 1? ಅಭಿಮಾನ ಅಹಂಕಾರಗಳೆಲ್ಲವೂ ಅಳಿದು, ಅಭಿವ್ಯಕ್ತ
ವಾದ ವಸ್ತುವಿನಲ್ಲಿ ನಮ್ಮ ಅರಿಷೆಲ್ಲ ಲೀನವಾಗಿ, ಆಸ್ಥಾದವೊಂದೇ
ಹೃದಯವನ್ನು ತುಂಬುತ್ತದೆ... ಅನುಮಾನದಲ್ಲಿ ಕಾರ್ಯ ಪೀಗೆ ನಡೆ
ಯುವುದಿಲ್ಲ.
ಒಟ್ಟಿನಮೇಲೆ ಹೇಳುವುದಾದರೆ, ಅಭಿಧಾವೃತಿ ಲಕ್ಷಣಾನೃತ್ತಿ,
೪
ಅನುಮಾನ ಈ ಮೊದಲಾದವೆಲ್ಲ ಶಬ್ದದ ಅಥವಾ ಅರ್ಥದ ವೃಂಜಕತ್ವಕ್ಕೆ
೩೧೨ ಭಾರತೀಯ ಕಾವ್ಯಮಾಮಾಂಸೆ
ಸಹಾಯಮಾಡುತ್ತವೆ; ಅಪ್ಟೆ.!5 ಆದರೆ ಇವುಗಳಿಂದ ಹೊರಡುವ
ಅರ್ಥವೂ ವ್ಯಂಗ್ಯಾರ್ಥವೂ ಬೇರೆ ಬೇರೆಯೇ ಸರಿ.
ಹದವಾದ ಮನಸ್ಸಿನಿಂದ ಕಾವ್ಯವನ್ಮು ಓದುತ್ತಿರುವಾಗ ಅದರ
ಅರ್ಥವೆಲ್ಲವೂ ಮಿಂಚನೆ ವೇಗದಿಂದ ಒಂದೇ ಬಾರಿಗೆ ಹೊಳೆಯುವಂತೆ
ತೋರುತ್ತದೆ. ಆಗ, ಇದು ಮೊದಲು, ಇದು ಆಮೇಲೆ; ಇದು
ವಾಚ್ಯಾರ್ಥ, ಇಲ್ಲಿ ಹೊಂದುವುದಿಲ್ಲ, ಆದಕಾರಣ ಈ ಲಕ್ಷ್ಯಾರ್ಥವನ್ನು
ಅಂಗೀಕರಿಸಬೇಕು ; ಇಲ್ಲಿ ಲಕ್ಷಣಾವೃತ್ತಿಗೆ ಉದ್ದೇಶವೇನು? ಆಹಾ,
ಇದೇ ಪ್ರಯೋಜನ! _ಪೀಗೆಂದು ಅರ್ಥಸಮುದಾಯವನ್ನು ಬಿಡಿಸಿ
ಬಿಡಿಸಿ ವಿಮರ್ಶಿಸುತ್ತಾ ನಾವು ಅರಿತುಕೊಳ್ಳುವುದಿಲ್ಲ. ಹೆಜ್ಜೆಹೆಜ್ಜೆಗೂ
ಹೀಗೆ ಮಾಡದೇಕಾಗಿದ್ದರೆ ಕಾವ್ಯಾಸ್ಕಾದವು ಸೃಪ್ನದಲ್ಲಿ ಕೂಡ ನಮಗೆ
ಲಭ್ಯವಾಗುತ್ತಿರಲಿಲ್ಲ.. ಹೊಸದಾಗಿ ಒಂದು ಭಾಷೆಯನ್ನು ಕಲಿಯುವಾಗ
ನಿಘಂಟುವ್ಯಾಕರಣಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಬಾಲದೋಥೆಯ
ಪದಪದಗಳನ್ನೂ ಕೂಡಿಸಿಕೊಂಡು ವ್ಯಾಸಂಗಮಾಡುವವನು ಪಡ.ವ ಪರಿ
ಕ್ಲೇಶ ಮಾತ್ರ ನಮಗೂ ಒದಗುತ್ತಿತ್ತು. ಇದು ನಿಜ. ಆದರೆ ಒಬ್ಬನು ಪರಿಣತ
ಪ್ರಜ್ಞ ನಾಗಿದ್ದರೂ ಕೂಡ, ಅವನು ಒಂದು ವಾಕ್ಯದ, ಒಂದು ಪದ್ಯದ
ಪೂರ್ಣಾರ್ಥವನ್ನು ಗ್ರಪಿಸುವಾಗ ಎಲ್ಲವೂ ಒ೦ದೇ ಶಬ್ಧವ್ಯಾಪಾರದಿಂದ
ಹೊರಡುವುದೆ-ದು ಖಂಡಿತ ಭಾವಿಸಬಾರದು. ಮೇಲೆ ನಾವು ವಿಭಜಿಸಿ
ನೋಡಿರುವ ಅಭಿಧಾ ಲಕ್ಷಣಾ ವ್ಯಂಜನಾವ್ಯಾಪಾರಗಳು ಯಥೋಚಿತವಾಗಿ
ಇದ್ದೇ ಇರ.ತ್ತವೆ. ಆದರೆ ಅರ್ಥಪ್ರತೀತಿ ಅತಿಕ್ಷಿಪ್ರವಾಗಿರುವುದರಿಂದ
ಅವುಗಳ ಪೌರ್ಯಾಪರ್ಯ ಗೋಚರವಾಗುವುದಿಲ್ಲ. ಇದಕ್ಕೆ ಒಂದು ಸಾಮ್ಯ
ವನ್ನು ಆಧುನಿಕಹುಗದ ಅನುಭವದಿಂದ ಕೊಡಬಹುದು ವೇಗವಾಗಿ
ಓಡುವ ಕುದುರೆಯನ್ನು ನೋಡಿದಾಗ, ಅದು ನಾಲ್ಕು ಕಾಲುಗಳನ್ನೂ
ಒಟ್ಟಿಗೇ ಎತ್ತಿ ನೆಲಮುಟ್ಟದೆಯೇ ಧೀಂಕಿಡುವಂತೆ ತೋರುತ್ತದೆ. ಆದರೆ
ಸಿನಿಮಾಮಂಎರದಲ್ಲಿ ಇದೇ ತೀವ್ರಚಲನೆಯನ್ನು "" ಮಂದಗತಿ'' ಚಿತ್ರ
15 4 ಕೃಚಿದನುಮಾನೇನ ಅಭಿಪ್ರಾಯಾದ್, ಕ್ವಚಿತ್ ಪ್ರತ್ಯಕ್ಷೇಣ ದೀಖಾಲೋಕಾದ್‌ಿ,
ಕೃಚಿತತ ಕಾರಣೀನ ಗೀತಧೃ್ವನ್ಯಾದೌ, ಕೃಟಿದಭಿಧಯಾ ಏಪಕ್ಷಿತಾನ್ಯಪರವಾಚಜ್ಯಾದ?
ಕೃಚಿದ್ಗುಣವೃತ್ತ್ಯಾ ಅವಿವಕ್ಷಿತವಾಚ್ಕೇ ಅನುಗೃಹ್ಮಮಾಣಂ ವೃಂಜಕಂ ದೃಷ್ಟಂ. ತತ
ಏವ ತೇಭ್ಯಃ ಸರ್ವೇಭ್ಯೋ ವಿಲಕ್ಷಣಂ ಅಸ್ಯ ರೂಪಂ ಸಿಧ್ಯತಿ.” (ಧ್ಹನ್ಯಾ. ಲೋಚನ,
ಪು. ೨೦೪)
೧೯. ವ್ಯಂಜನಾ ವಿಚಾರ ೩೧೩
ದಲ್ಲಿ (slow motion picture) ನೋಡಿದಾಗ, ರೆಕ್ಕೆ ಮೂಡಿದಂತೆ
ಹಾರುವ ಕುದುರೆ ಕೂಡ ತನ್ನ ಕಾಲುಗಳನ್ನು ಒಂದಾದ ಮೇಲೆ ಒಂದ
ರಂತೆ ಎತ್ತಿ ಇಳಿಸುವುದು ಸ್ಪಪ್ಪವಾಗುತ್ತದೆ. ಶಬ್ದವ್ಯಾಪಾರಗಳೂ
ಹೀಗೆಯೇ.
ಇನ್ನೊಂದು ಹೋಲಿಕೆ. ಒಂದೇ ಧಾರೆಯಂತೆ, ಏಕವಾಪಿನಿಯಂತೆ
ಕಾಣಿಸುವುದರ್ಲ ಕೂಡ ಕಣಗಳು ಬಿಡಿಬಿಡಿಯಾಗಿಯೇ ಇರುತ್ತವೆ.
ವಿದ್ಯುಚ್ಛಕ್ತಿಯ ದೀಪವನ್ನು ಉಪಯೋಗಿಸುವವರಿಗೆ ಈ ವಿಷಯ ಗೋಚರ
ವಾಗಿರಬೇಕು. ನೇರವಾಗಿ ನೋಡಿದಾಗ ದಿ*ಪದ ಬುರುಡೆಯಲ್ಲಿ
ಅಖಂಡವಾದ ಉರಿಯ ಎಳೆಗಳು ಕಾಣಿಸುತ್ತವೆ ಅದರೆ ಸ್ವಲ್ಪ ಓರೆಗಣ್ಣಿ
ನಿಂದ ಗಮನಿಸಿದಾಗ, ತಂತಿಯಲ್ಲಿ ವಿದ್ಯುತ್ತು ಅವಿಚ್ಛಿನ್ನವಾಗಿ ಹರಿಯದೆ,
ಹಿಡಿದು, ಬಿಟ್ಟು, ಪಿಡಿದು, ಬಿಟ್ಟು, ಬರುವಂತೆ ಗೊತ್ತಾಗುತ್ತದೆ. ಶಬ್ದ
ವ್ಯಾಪಾರದಲ್ಲೂ ಹೀಗೆಯೇ. ಒಂದು ವ್ಯಾಪಾರವು ಒಂದು ಅರ್ಥವನ್ನು
ತಿಳಿಸಿ ನಿಲ್ಲುತ್ತದೆ : ಒಡನೆಯೇ ಇನ್ನೊಂದು ವ್ಯಾಪಾರ ವರ್ತಿಸಿ ಇನ್ನೊಂದು
ಅರ್ಥವನ್ನು ತಿಳಿಸುತ್ತದೆ.
ಈ ಹೋಲಿಕೆಗಳು 'ತಾನೆ ಏಕೆ? ಕಾವ್ಯಾನುಭವವನ್ನೇ ಜ್ಞಾಪಿಸಿ
ಕೊಳ್ಳೋಣ. ಎಷ್ಟೊ € ಸಲ, ಒಂದು ಪದ್ಮದ ವಾಚ್ಯಾರ್ಥ ಮಾತ್ರ
ಗೊತ್ತಾಗಿರುತ್ತದೆ; ಅದರಲ್ಲಿ ಹೆಚ್ಚಿನ ತಿರುಳು ಇರುವಂತೆಯೇ ತೋರಿರು
ವುದಿಲ್ಲ. ಅರ್ಥಪ್ರತೀತಿ ಅಲ್ಲಿಗೇ ಮುಕ್ತಾಯಗೊಂಡಿರುತ್ತದೆ. ಆದರೆ,
ಸ್ವಲ್ಪ ಕಾಲವಾದ ಬಳಿಕ, ಗುರುಗಳ, ಮಿತ್ರರ ಅಥವಾ ವ್ಯಾಖ್ಯಾನಕಾರರ
ಸಹಾಯದಿಂದಲ್ಲೋ, ತನ್ನ ಅನುಭವವೇ ಇನ್ನಷ್ಟು ಆಳವಾಗಿ ಪ್ರತಿಭೆಯೂ
ಚುರುಕಾದದ್ದರಿಂದಲೋ, ಅಮೂಲ್ಯವಾದ ಭಾವವು ಸುರಿಸುತ್ತದೆ.
ಇದನ್ನು ಕಾಣದ ಹಾಗೆ ನನ್ನ ಕಣ್ಣಿಗೆ ಯಾವ ಪೊರೆ ಕಟ್ಟಿತ್ತು ಎನ್ನಿ ಸುತ್ತ ದೆ.
ಕಾವ್ಯಪ್ರೇಮಿಗಳೆಲ್ಲ ಇದನ್ನು ಬಲ್ಲರು. ಇಲ್ಲಿ ಹೊಸ ಅರ್ಥವು ಗೋಚರ
ವಾದದ್ದು ಪ್ರತ್ಯೇಕವಾದೊಂದು ವ್ಯಾಪಾರದಿಂದ ತಾನೆ.
ಶಬ್ದದಿಂದ ಹೊರಡುವ ಅರ್ಥಪರಂಪರೆಯಲ್ಲಿ ಒಂದೊಂದೂ
ಪ್ರತ್ಯೇಕವಾದ ವ್ಯಾಪಾರದಿಂದ ತಿಳಿ ಯಬರುವುದೆಂದು ಧ್ವನಿ ಪ್ರಸ್ಥಾನದ
ನಿರ್ಣಯ. "ನ ವಿರಮ್ಯ ಶಬ್ದ ವ್ಯಾಪಾರಃ ”_ ಎಂದರೆ, ಶಬ್ದ ದ ಒಂದು
ವ್ಯಾಪಾರವು ಒಮ್ಮೆ ಕೆಲಸಮಾಡಿ ನಿಲ್ಲಿಸಿದ ಬಳಿಕ ಮತ್ತೆ ಅದೇ
ಫಂ೪ ಭಾರತೀಯ ಕಾವ್ಯಮಾಮಾಂಸೆ
ವ್ಯಾಪಾರವೇ ಇನ್ನೊಮ್ಮೆ ಕೆಲಸ ಮಾಡಲಾರದು ; ಮುಂದಿನ ಕಾರ್ಯಕ್ಕೆ
ಬೇರೊಂದು ವ್ಯಾಪಾರವೇ ಒದಗಬೇಕು. ಪೀಗೆ ಹೊರಡುವ ಅರ್ಥ
ಗಳಲ್ಲ ವಾಚ್ಯಾರ್ಥ ಲಕ್ಕಾರ್ಥ ಗಳೆರಡೂ ನಿಯತವಾದವು, ಸರ್ವರಿಗೂ
ಅರಿವಾಗತಕ್ಕವು. ಇವುಗಳಿಂದಾಚೆಗೆ ಬರತಕ್ಕ ಅರ್ಥ ಒಂದೇ ಆಗಿರ
ಬೇಕಾಗಿಲ್ಲ; ಒಂದೇ ರೀತಿಯದೂ ಆಗಿರಬೇಕಾಗಿಲ್ಲ. ಒಂದು ವ್ಯಂಗ್ಯ
ದಿಂದ ಇನ್ನೊಂದು ವ್ಯಂಗ್ಯ, ಅದರಿಂದ ಮತ್ತೊಂದು ವೃಂಗೃ--ಒಂದು
ಬೆಟ್ಟದ ಸಾಲಿನ ಪಿಂದೆ ಇನ್ನೊಂದು, ಅದರ ಪಿಂದೆ ಮತ್ತೊಂದು ಗೋಚ
ರಿಸುವಂತೆ __ ಪ್ರತೀತವಾಗಬಹುದು. ವ್ಯಾಕರಣದಲ್ಲಿ ಏಕವಚನವನ್ನುಳಿದ
ಜೈಲ್ಲ, ಅದು ಏರೆಡಾಗಲಿ, ನಾಲ್ಕಾಗಲಿ, ನೂರಾಗಲಿ, ಬಹುವೆಚನಪೆಂಬ
ಒಂದೇ ಹೆಸರಿನ `ಕೆಳಗೆ ಬರುವಂತೆ, ಇಲ್ಲಿಯೂ ಈ ಪರಂಪರಿತವಾದ
ಅರ್ಥವೆಳ್ಳಕ್ಕೂ ವ್ಯಂಗ್ಯವೆಂದೇ ಹೆಸರು. ಈ ಅರ್ಥಗಳನ್ನು ಸೂಚಿಸುವ
ವ್ಯಾಪಾರ ಶಬ್ದದ್ಮಾಗಿರಲಿ ಅರ್ಥದ್ದಾಗಿರಲಿ, ಅದಕ್ಕೆ ವ್ಯಂಜನಾವೃತ್ತಿ
ಯೆಂಡೇ ಹೆಸರು.
16 ಐದು ಕನ್ನಡವನ್ನು ದೃಷ್ಟಿಯಲ್ಲಟ್ಟುಕೊಂಡು ಹೇಳಿದ ಮಾತು ; ಸಂಸ್ಕೃತದಲ್ಲಿ,
೨೦. ಭಾವ, ವಿಭಾವ, ಅನುಭಾವ
ರಸಪೆಂಬ ಶಬ್ದವನ್ನು ಈ ಗ್ರಂಥದ ಉದ್ಮಕ್ಕೂ ಉಪಯೋಗಿ
ಸುತ್ತಾ ಬಂದಿದ್ದೇವೆ; ಅದೇ ಕಾವ್ಯರಹಸ್ಯವೆಂದು ಪ್ರತಿಪಾದಿಸುತ್ತಾ
ಬಂದಿದ್ದೇವೆ. ಈ ರಸದ ಸ್ವರೂಪಷೇನು, ಇದರ ನಿಪ್ಪತ್ತಿ ಹೇಗೆ, ಇದರ
ಪ್ರಕಾರಗಳು ಯಾವುವು ಎಂಬುದರ ವಿಶದವಾದ ಪರಿಶೀಲನೆಗೆ ಇನ್ನಾ
ದರೂ ತೊಡಗುವುದು ಅತ್ಯಾವಶ್ಯಕ. ಇದಕ್ಕೆ ಪೂರ್ವಭಾವಿಯಾಗಿ'
ಭಾವ ವಿಭಾವ ಅನುಭಾವಗಳ ಸ್ವರೂಪವನ್ನು ಕೆಲವುಮಟ್ಟಿಗೆ ಗಮನಿಸ
ಬೇಕಾಗಿದೆ.
“ಧಾವ'' ದ ಮೂಲಾರ್ಥ ಇರುವಿಕೆ'', ಇದರ ನಿಪ್ಪತ್ತಿಗೆ ಅನು
ಗುಣವಾಗಿ ಸಂಸ್ಕೃತದಲ್ಲಿ ಇದರ ಅರ್ಥಗಳೂ ಅನೇಕವಾಗಿವೆ. ಅಪಟೆ
ಯವರ ನಿಘಂಟಿನಲ್ಲಿ ೩೧ ಅರ್ಥಗಳನ್ನು ಸಂಗ್ರಹಿಸಿದ್ದಾರೆ. ರೂಢಿಯ
ಮಾತಿನಲ್ಲಿ ಕೂಡ ಇದನ್ನು ಎಪ್ಪೊಂ೦ದು ವಿಧವಾಗಿ ಬಳಸುತ್ತೇವೆ : ಸ್ಥಿತಿ,
ಆಶಯ, ಇಂಗಿತ, ತಾತ್ಪರ್ಯ, ಭಾವ(ನಾಮ), ಚಿತ್ತವೃತ್ತಿ, ಇತ್ಯಾದಿ.
ಸಂಸ್ಕೃತದಲ್ಲ, ಪ್ರೀತಿ, ಪದಾರ್ಥ, ಸಂಭಾವಿತನಾದ ಮನುಷ್ಯ, ಈ
ಮೊದಲಾದ ಅರ್ಥಗಳೂ ಇದಕ್ಕೆ ಉಂಟು. ಇಷ್ಟೇ ಸಾಲದೆಂದು,
ಕನ್ನಡದಲ್ಲಿ ಇದು ಬಂಧುವಾಚಕವೂ ಆಗುತ್ತದೆ! ಪೀಗೆ, ಕೇವಲ
« ಇರವಿ'' ನಿಂದ ಪಿಡಿದು, ಇರುವ ಇಲ್ಲದಿರುವ ವಸ್ತು ಅವಸ್ತು
ಗಳಿಲ್ಲಕ್ಕೂ ಈ " ಭಾವ' ತಬ್ದವು ವಾಚಕವಾಗಬಲ್ಲುದು. ಈ ಅರ್ಥಗಳ
ಸಂದಣಿಯಲ್ಲ ನಮಗೆ ಪ್ರಕೃತವಾದದ್ದು « ಚಿತ್ತವೃತ್ತಿ”. ಪ್ರೀತಿ,
ಕ್ರೋದ, ಭಯ, ಆಶ್ನ ರ್ಯ, ಚಿಂತೆ, ಔತ್ಸುಕ್ಯ, ನಾಚಿಕೆ, ಹರ್ಷ ಇಂಥವು
ಚಿತ್ತವೃತ್ತಿಗಳು. ಈ ಮುಂದಿನ ಅಧ್ಯಾಯಗಳಲ್ಲೆಲ್ಲಾ “ ಭಾವ'' ಶಬ್ಧ
ವನ್ನು ಚಿತ್ತವೃತ್ತಿಸಾಮಾನ್ಯ ಆಥವಾ ಚತ್ತವೈತ್ತಿವಿಶೇಷ ಎಂಬುದಿ
ಪೃಕ್ಕೇ ಸಂಜ್ಞೆಯಾಗಿ ನಿಯಮನಮಾಡಿಕೊಳ್ಳದೇಕು. ಅಪ್ಪು ಭಾರವನ್ನು
ಅದು ಸಂದಿಗೃತೆಗೆ ಅವಕಾಶವಿಲ್ಲದಂತೆ ಹೊತ್ತರೆ ಸಾಕಾಗಿದೆ.
ಈ ಧಾವದ (ಅಥವಾ ಚಿತ್ತವೃತ್ತಿಯ) ಸ್ವರೂಪವನ್ನು ಒಂದೆರಡು
ಉದಾಹರಣಿಗಳ ಮೂಲಕ ನೋಡೋಣ. ಒಂದು ಸಂಜೆ ಸಂಚಾರ
೩೧೬ ಭಾರತೀಯ ಕಾವ್ಯಮಾಮಾಂಸೆ
ಹೊರಟು ಯಾವುದೋ ಧ್ಯಾನದಲ್ಲಿ ನಡೆಯುತ್ತಿರುವಾಗ ದಾರಿಯಲ್ಲ ಇದ್ದ
ಕ್ಕಿದ್ದ ಹಾಗೆ ಒಂದು ಹಾವ ಕಾಣಿಸಿಕೊಂಡರೆ ಏನಾಗುತ್ತದೆ? ಮನಸ್ಸಿ
ನಲ್ಲ ಭಯ ತೋರುತ್ತದೆ ; ಅದರ ಪರಿಣಾಮವಾಗಿ ನಾವು ಬೆಚ್ಚು ತ್ತೇವೆ;
ಥಟ್ಟನೆ ಪಿಂದಕ್ಕೋ ಪಕ್ಕಕ್ಕೋ ಸರಿಯುತ್ತೇಷೆ..._ತಂದೆ ಪೇಟೆಯಿಂದ
ಮನೆಗೆ ಬರುವಾಗ ಮಗಳಿಗೆ ಒಂದು ಜೊಂಜೆಯನ್ನು ತಂದು ಕೊಡುವು.
ವುದಾಗಿ ಹೇಳಿದ್ದಾನೆ. ಅವನು ಬರುವ ವೇಳೆಗಿಂತಲೂ ಮೊದಲೇ ಇವ
ಳಿಗೆ ಔತ್ಸುಕ್ಯ ಪ್ರಾರಂಭವಾಗುತ್ತದೆ. ಎಷ್ಟು ಬೇಗ ಬಂದಾನು; ಎಂಥ.
ಬೊಂಬೆಯನ್ನು ತಂದಾನು ಎಂಬ ನಿರೀಕ್ಷೆಯಲ್ಲಿ ಅವಳಿಗೆ ಹೊತ್ತು
ಹೋಗುವುದು ಬಲುನಿದಾನವಾಗಿ ತೋರುತ್ತದೆ. ದಾಗಿಲಲ್ಲಿ ನಿಂತು
ರಸ್ತೆಯ ಕೊನೆಯ ತನಕ ನಿಟ್ಟಿಸಿ ನೋಡುತ್ತಾಳೆ. ದೂರದಲ್ಲಿ ಅವ
ನನ್ನು ಕಂಡ ಕೂಡಲೆ ಏಳುವುದುಬೀಳುವುದನ್ನೂ ಅರಿಯದೆ ಹತ್ತಿರಕ್ಕೆ
ಓಡಿಹೋಗುತ್ತಾಳೆ. .. , ,
ಈ ಎರಡು ಸಂದರ್ಭಗಳಲ್ಲಿ ಕ್ರಮವಾಗಿ ಭಯವೂ ಔತ್ಟುಕ್ಯವೂ
ಭಾವಗಳು. ಇಂಥ ಒಂದು ಭಾವ ಉದಿಸಬೇಕಾದರೆ ಏನಾದರೂ.
ಕಾರಣವಿರಬೇಕು. ಮೊದಲಿನ ಉದಾಹರಣಿಯಲ್ಲ ಸರ್ಪವೇ ಭಯಕ್ಕೆ
ಕಾರಣ; ಅವನ್ನು ನೋಡಿದ ಕೂಡಲೇ ಚತ್ತವು ಕಲಕಿ ಭಯ ಉಕ್ಕು
ತ್ತದೆ. ಇದು ಚಿತ್ತವೃತ್ತಿ, ಮಾನಕ ವ್ಯಾಪಾರ. ಆದಕಾರಣ ಬೇರೊ
ಬ್ಬರಿಗೆ ಗೋಚರವಾಗ.ವುದಿಲ್ಲ. ಆದೆ3 ಇಂಥ ಚಿತ್ತವೃತ್ತಿ ಉ:ಟಾದಾಗ
ಅದರ ಪರಿಣಾಮ ದೆ:ಹದ ಮೇಲೆ ಇಲ್ಲದೆ ಹೋಗುವುದಿಲ್ಲ. ಬೆಚ್ಚುವುದು,
ಸರಿಯುವುದು, ಮುಖ ಬಿಳುಪೇರುವುದು--ಈ ಮೊದಲಾದ ಕ್ರಿಯೆಗಳು
ಯಥೋಚಿತವಾಗಿ ನಡೆಯುತ್ತವೆ ಇನ್ನೊ೦ದು ಉದಾಹರಣಿಯಲ್ಲೂ
ಹಾಗೆಯೇ. ಹೆಣ್ಣುಮಗಳ ಔತ್ತುಕ್ಕಕ್ಕೆ ಬೊಂಬೆ ಇನ್ನೂ ಕೈಸೇರದಿರು
ವುದೇ ಕಾರಣ. ಅವಳ ಓಡಾಟ ಮೊದಲಾದದ್ದೆಲ್ಲ ಅದರ ಕಾರ್ಯ. ಪ್ರತಿ
ಯೊಂದು ಭಾವಕ್ಕೂ ಹೀಗೆ ಏನಾದರೂ ಕಾರಣವುಂಟೇ ಉಂಟು.
ಕಾರಣವಿಲ್ಲದೆ ಅದು ಉದಿಸಲಾರದು. ಉದಿಸಿದ ಮೇಲೆ ಅದರ ಪರಿ
ಣಾಮವಾಗಿ ಯಾವುದಾದರೂ ಕಾರ್ಯ ನಡೆಯುತ್ತದೆ. ಭಾವವು ಮನ
ಸ್ಸಿನ ವ್ಯಾಪಾರವಾದದ್ದರಿಂದ ಕಣ್ಣಿಗೆ ಕಾಣಿಸದಿದ್ದರೂ ಅದರ ಕಾರಣ
ಕಾರ್ಯಗಳು ಗೋಚರವಾಗುವುದರಿಂದ ಅವುಗಳನ್ನು ಅರಿತರೆ, ಇಂಥ ಒಂದು
೨೦. ಭಾವ, ಎಭಾವ, ಅನುಭಾವ ೩೧ಒ
ಭಾವ ಈ ವ್ಯಕ್ತಿಯಲ್ಲ ಉದಿಸಿದೆಯೆಂದು ಊಹೆ ಮಾಡಬಹದು. ಲೋಕ
ವ್ಯವಹಾರದಲ್ಲ ಪ್ರೀತಿ, ಶೋಕ, ಪೊದಲಾದವನ್ನೆಲ್ಲಾ ನಾವು. ಅರಿತು
ಕೊಳ್ಳುವುದು ಪೀಗೆಯೇ.
ಪ್ರಪಂಚದ ನಡುವೆ ಮನುಪ್ಯನು ಬಾಳುವಾಗ ಅವನ ಚಿತ್ತವನ್ನು
ಹೊರಗಿನ ವಸ್ತುಗಳೂ ಘಟನೆಗಳೂ ಕಲಕದಿರುವ ಕ್ಷಣವೆಲ್ಲ? ಅಖಿಲ
ವಿಶ್ವವೇ ಅವನ ಬಗೆ ಬಗೆಯ ಚತ್ತವಿ ಕಾರಗಳಿಗೆ ಕಾನಣಪ:ಂಪರೆ ಯಾಗು
ತ್ತದೆ. ಇದರ ಪರಿಣಾಮನಾಗಿ ಅನೇಕ ಕಾರ್ಯಗಳನ್ನು ಅವನು ಅರಿತೋ
ಅರಿಯದೆಯೋ ಮಾಡುತ್ತಿರುತ್ತಾನೆ ಹೀಗಿರುವುದರಿಂದ ಮಾನವನಲ್ಲಿ
ಉದ್ಭವಿಸುವ ಚಿತ್ತವೃತ್ತಿಗಳು ಇಷ್ಟೇ ಇಂಥವೇ ಎಂದು ವಿಭಜನೆ ಮಾಡಿ
ನಿರ್ಣಯಿಸುವುದು ಕಪ್ಪ. ಆಧುನಿಕ ಮನಶ್ಶಾಕ್ತ್ರದಲ್ಲೇ ಈ ವಿಷಯ
ದಲ್ಲಿ ಏಕಕಂಠತೆ ಇನ್ನೂ ಬಂದಿಲ್ಲ ಮೂಲತತ್ತ್ಯಗಳನ್ನು ಕುರಿತೇ
ತೀವ್ರ ಭೇದಗಳುಂಟು. ಒಬ್ಬನೇ ಮನಶ್ಶಾಸ್ತ್ರ ೨ಜ್ಞನ ಅಭಿಪ್ರಾಯಗಳು
ದಿನಗಳು ಕಳೆದಂತೆಲ್ಲ ವ್ಯತ್ಯಾಸನಾಗುತ್ತಾ ಬಂದಿರುವುದ ೦೬. ಹೀಗೆ
ಇನ್ನೂ ಅನಿರ್ಧಾರದಲ್ಲ ತೊಳಲುತ್ತಿ ರುವ ಆಧುನಿಕವಾದಗಳ ದೃಷ್ಟಿ
ಯಿಂದ ನಮ್ಮ ಪ್ರಾಚೀ ನರ ವಿಷೆಯನಿರೂಪಣಿ, ವಿಭಾಗಕ್ರ ಮ--ವು
ಮೊದಲಾದವನ್ನು ವಿಮರ್ಶಿಸಿ ತಿದ್ದುವ ಕಾರ್ಯಕ್ಕೆ ಇಲ್ಲ ಕೆ ಹಾಕುವುದಿಲ್ಲ ;
ಅಂಥ ps ಈ ಪುಸ್ತಕ ಸರಿಯಾದ ಕ್ಷೇತ್ರವೂ ಅಲ್ಲ. ಭರತನಾಟ
ಶಾಸ್ತ್ರ, ಅದನ್ನು ಆವಲಂಬಿಸಿ ಈಚೆಗೆ ಹುಟ್ಟಿದ ಗ್ರಂಥಗಳು--ಇವನ್ನೇ
ಮುಖ್ಯ ಗ ಮುಂದಿನ ನಿರೂಪೆಣಿಯಲ್ಲಿ ಅನುಸರಿಸಲಾಗುತ್ತದೆ. ಅಲ್ಲಿಯ
ನಿರೂಪಣಿಯ ತಳಹದಿ ಆಧುನಿಕ ಮನಶ್ಮಾಸ್ತ ಕ್ಕೂ ಒಪ್ಪಿಗೆಯಾಗ.ವಂತೆ
ತೋರುತ್ತದೆ; ವಿವರ ವಿಭಾಗಗಳಲ್ಲಿ ಮಾತ್ರ ಭಿನ್ನಾಭಿಪ್ರಾಯಕ್ಕೆ ಅವ
ಕಾಶವುಂಟು.
ಮನುಷ್ಯನ ಚಿತ್ತವೃತ್ತಿಗಳು ಅನೇಕವಾದರೂ ಎಲ್ಲಕ್ಕೂ ಒಂದೇ
ಸಮನಾದ ಪ್ರಾಧಾ ನೈವಿಲ್ಲ. ಹುಟ್ಟಿ ದಂದಿನಿಂದಲೂ ಅವನಲ್ಲ ಕೆಲವು
ಭಾವಗಳು. ' ವಾಸನಾತ್ಮ, ಕವಾಗಿ ನೆಡೆಗೊಂಡಿರುತ್ತ ವೆ. ಮನುಪ್ಯಮಾತ್ರ
ನಾದವನಿಗೆ ದುಃಖ ಡಡ 'ಸುಖ ಬೇಕು. ಇದಕ್ಕನುಗುಣವಾಗಿ ಪ್ರ ಪೃಬ
ವಾದ ಕೆಲವು ಚಿತ್ತವೃತ್ತಿಗಳು ಮೊದಲಿನಿಂದಲೂ ಇವನಲ್ಲಿ ಇದ್ದೇ ಚೆ
ತ್ತವೆ... “ ದುಃಖಡ್ವೇಷಿ ಸುಖಾಸ್ಕಾದನಲಂಪಟನಾಗಿರ್ಪುದು ರತಿ,
೩೧೮ ಭಾರತೀಯ ಕಾವೃಮಾಮಾಂಸೆ
ಆಂ ಭೋಗಿ ತಾಂ ದುಃಖಿಯೆಂದು ನಗುವಂದಮಂ ಮಾಬ್ಬುದು ಹಾಸಂ,
ತನ್ನ ಸುಖೋತ್ಕರ್ಷೆಗೆ ವಿಪತ್ತು ಬರ್ಪುದೆಂದು ಶೋಕಿಪುದೆ ಶೋಕಂ,
ಅಪಾಯಮಂ ಕುಖತು ಕೋಪಿಪುದೆ ಕ್ರೋಧಂ, ಅಪಾಯಶೇತುವಂ
ಪರಿಹರಿಪೆಡೆಯೊಳುತ್ಸಾಹಂ. ಮಾಟ್ಬುದುತ್ಸಾಹಂ, ಅಪಾಯದತ್ತಣಿಂ
ಬೆದಜುವುದು ಭಯಂ, ತಾಂ ಗೆಯ್ಯ ಕಜ್ಜಮೊಳ್ಳಿ ತಲ್ಲೆಂದು ಪೇಸುವುದ್ಳ
ಜುಗುಪ್ಪೆ, ತನ್ನಿಂ ಪೆಅರಿಂದಾದ ಕಾರ್ಯವೈಚಿತ್ರಾ ಹ ದರ್ಶನಾದಿಯಿಂ
ಎಸ್ಕಯಿಪುದು ವಿಸ್ಮಯಂ, ತಾಂ ಬಿಡುವುದಖೊಳ್ ವೈರಾಗ್ಯಪರನಾಗಿ
ಶಾಂತತ್ವಮಂ ಭಜಿಪುದು ಶಮಂ. ಈ ಪೇಟ್ಧ ಚಿತ್ತವೃ ತ್ತಿಗಳಿಂ ತೂನ
ಮಾದ ಜೀವನಿಲ್ಲ.'' ಒಬ್ಬರಲ್ಲಿ ಒಂದು ಚಿತ್ತವೃತ್ತಿ ಅಧಿಕವಾಗಿರುತ್ತದೆ,
ಇನ್ನೊ ೦ದು ಅಲ್ಪವಾಗಿರುತ್ತ ದೆ. ಒಬ್ಬರು ತಮ್ಮ ಚಿತ್ತ ವೃತ್ತಿ ಉಚಿತ
ವಿಷಯದಲ್ಲೇ ಪ್ರವರ್ಶಿಸುವಂತೆ ನಿಯೋಜಿಸಿರುತ್ತಾರೆ; ಇನ್ನೊಬ್ಬರು
ಹಾಗೆ ಮಾಡಿರುವುದಿಲ್ಲ. ಇಷ್ಟೇ ಹೊರತು ಈ ಬಗೆಯ ಸಂವೇದನೆಗಳೇ
ಇಲ್ಲದವರು ಒಬ್ಬರೂ ಇಲ್ಲ. ಒಂದು ಭಾವದ ಗುರಿ ಸಾಧಿಸಿದ ಬಳಿಕ
ಅದು ಲಯವಾಯಿತೆಂದು ತೋರುತ್ತಿರುವಾಗ ಕೂಡ ಅದರ ಸಂಸ್ಕಾರ
ಒಳಗೆ ಸೂಕ್ಷ್ಮವಾಗಿ ಇದ್ದೇ ಇರುತ್ತದೆ; ತಕ್ಕ ಕಾರಣ ಗೋಚರಿಸುವುದೇ
ತಡ, ಮೇಲಕ್ಕೇಳುತ್ತದೆ. ಹೀಗೆ ಮಾನವನ ಜೀವಿತಕ್ಕೇ ಅಂಟಿಕೊಂಡು
ನೆಲೆಯಾಗಿ ನಿಲ್ಲತಕ್ಕ ಭಾವಗಳಿಗೆ "" ಸ್ಥಾಯಿಭಾವ '' ಗಳೆಂದು ಹೆಸರು.
ಭರತನ ಮತದಂತೆ ಇವು ಎಂಟು :
ರತಿರ್ಹಾಸಶ್ವ ಶೋಕಶ್ವ ಕ್ರೋಧೋತ್ಸಾಹ? ಭಯಂ ತಥಾ |
ಜುಗುಪ್ನಾ ಎಸ್ಮಯಶ್ವೇತಿ ಸ್ಥಾಯಿಭಾವ್ಠಾ ಪ್ರಕೀರ್ತಿತಾಃ ॥
(ನಾಟ್ಯಶಾಸ್ತ್ರ ೨, 1. ೧೮)
ಇಲ್ಲಿ ರತಿಯೆಂದರೆ ಪ್ರಿೀಪುರುಪರಿಗೆ ಪರಸ್ಪರವಾಗಿರತಕ್ಕ ಪ್ರೀತಿ. ಮಿಕ್ಕ
ಶಬ್ದಗಳ ಅರ್ಥ ಸ್ಪಷ್ಟವಾಗಿಯೇ ಇದೆ.
ಶಂಕೆ, ಔತ್ಪುಕ್ಕ, ನಾಚಕೆ, ವಿಷಾದ ಮೊದಲಾದ ಭಾವಗಳು ಪೀಗೆ
ಸ್ಕಿ ರವಾಗಿ ನಿಲ್ಲತಕ್ಕವಬ್ಬ. ವಿಶೇಷಕಾರಣದ ಬಲದಿಂದ ಅವು ಏಳುತ್ತವೆ;
1 ಸಾಳ್ವ: "ರಸರತ್ನಾಕರ', ಪು. ೫೧. ಇವನ ನಿರೂಪಣಿಗೆ ಹೇಮಡಂದ್ರನ
"ಕಾವ್ಯಾನುಶಾಸನ ' ಅಧಾರ ; ಇದಕ್ಕೆ ಮೂಲ " ಅಭಿನವಭಾರತಿ.' ಸ್ಮಾಯಿಭಾವಾದಿ
ಗಳ ಸ್ವರೂಪವನ್ನು ಕುರಿತು ಅಭಿನವಗುಪ್ತನು ಬರೆದಿರುವುದು ತುಂಬ ಗಮನಾರ್ಹ
ವಾಗಿದೆ. (ಅಭಿನವ ಭಾರತೀ, 1, ಪು. ೨೬೩.೫ ನೋಡಿ.)
೨೦. ಭಾವ, ವಿಭಾವ, ಅನುಭಾವ ೩೧೯
ಆ ಕಾರಣ ತೊಲಗಿದ ಕೂಡಲೇ ಇವೂ ಲಯವಾಗುತ್ತವೆ. ಸ್ಥಾಯಿ
ಭಾವಗಳಂತೆ ಇವು ಸಂಸ್ಕಾರಶೇಪವನ್ನು ಉಳಿಸಿಯೇ ತೀರುವುವೆಂಬ
ನಿಯತಶ್ಚವಿಲ್ಲ. ಒಂದು ಸ್ಕಾ ಯಿಭಾವವು ನಡೆಯುವ ಕಾಲದಲ್ಲೆ ೀ ಈ
ಎರಡನೆಯ ವರ್ಗದ ಅನೇಕ ಭಾವಗಳು ನಡುನಡುವೆ ಸಂದರ್ಧೋಚಿತ
ವಾಗಿ ಬರುತ್ತವೆ, ಹೋಗುತ್ತವೆ. ಅದಕಕ ಇವಕ್ಕೆ ವ್ಯಭಿಚಾರಿ (ಅಥವಾ
ಸಂಚಾರಿ) ಭಾವಗಳೆಂದು ಹೆಸರು. ಗ ಸ್ಕಾ ಯಿಗೂ ಸಂರ ಇರುವ.
ವ್ಯತ್ಯಾಸವನ್ನು ಇನ್ನೊಂದು ಬಗೆಯಾಗಿ ಮನಗಾಣಿಸಬಹುದು.
“ ಒಬನು ಖಿನನಾಗಿದಾನೆ'' ಎಂದರೆ, "" ಏಕೆ ಖನ್ನನಾಗಿದ್ದಾನೆ ಈ
ಎಂಬ ಪ್ರಶ್ನೆಯನ್ನು ಸನ ಹಾಕುತ್ತ ಕ ೇವೆ. . ಯಾವುದೋ ವಿಶೇಷ
ಕಾರಣವಿ ಡೆ. ಈ ಡಾ ಹುಟ್ಟಲಾರದು. ಆದರೆ, "" ರಾಮನು
ಉತ್ಪಾಹಶಾಲಿ '' ಎಂದು ಹೇಳಿದರೆ, " : ಅವನು ಏಕೆ ಉತ್ಸಾಹಶಾಲಿ? »'
ಎಂದು ಯಾರೂ ಕೇಳುವುದಿಲ್ಲ. ಉತ್ಸಾಹವು ಸ್ಮಾಯಿಯೆಂಬುದನ್ನು
ಇದು ತೋರಿಸುತ್ತದೆ.
“ಸ್ಕಾಯಿಭಾವವನ್ನು ಒಂದು ಸೂತ ಕ್ಲೂ ಸಂಚಾರಿಭಾವಗಳನ್ನು ಅದ
ರಲ್ಲಿ ಪೋಣಿಸಿರುವ ಬಣ್ಣ ಬಣ್ಣದ ಮಣಿಗಳಿಗೂ ಅಭಿನವಗುಪ್ತನು ಹೋಲಿ
ಸುತ್ತಾನೆ:. ಈ ಮಣಿಗಳು ನಿಲ್ಲುವುದಕ್ಕೆ ಸೂತ್ರವೇ ಆಧಾರ; ಇವುಗಳ
ಬಣ್ಣದಿಂದ ಸೂತ್ರಕ್ಕೂ ವರ್ಣವೈಚಿತ್ರ್ಯ ಒದಗುತ್ತದೆ. "ನಾಯಿಯನ್ನು
ಸಮುದ್ರ ಕ್ಕೂ ಸಂಚಾರಿಧಾವಗಳನ್ನು ಅದರಲ್ಲಿ ಏಳುತಾ ಬೀಳುತ್ತಾ ಇರುವ
ತರಂಗಗಳಿಗೂ ಹೋಲಿಸುವುದೂ ಉಂಟು.* ಒಂದು ಉದಾಹರಣೆಯನ್ನು
ನೋಡೋಣ. ಹೆಣ್ಣಿನ ಹೃದಯದಲ್ಲೂ ಗಂಡಿನ ಹೃದಯದಲ್ಲೂ ರತಿ
ಸ್ಥಾಯಿಭಾವವು ವಾಸನಾರೂಪದಲ್ಲ ಮೊದಲಿನಿಂದಲೂ ಇರುತ್ತದೆ.
ಇದನ್ನು ಉದ್ದೋಥನಗೊಳಿಸಬಲ್ಲ ಪುರುಷನೋ ರಮಣಿಯೋ ಗೋಚರ
ವಾದಾಗ ಈ ರತಿ ಪ್ರಕಟವಾಗಿ ಬಹುಕಾಲ ಬಹುದೂರ ಮುಂದುವರಿಯು
2 ಪ್ರಕೃತ ಗ್ರಂಥದಲ್ಲ "" ಸಂಚಾರಿಭಾವ ' ಎಂಬ ಶಬ್ದವನ್ನೇ ಸಾಮಾನ್ಯವಾಗಿ
ಉಪಯೋಗಿಸುತ್ತೇವೆ.
ತಿ ಅಭಿನವಭಾರತೀ, 1, ಪು. ೨೮೪.
4 ಉನ್ಮಜ್ಜಂತೋ ನಿಮಜ್ಮಂತಃ ಸ್ಮಾಯಿನ್ಯಂಬುನಿಧಾವಿವ |
ಊರ್ಮಿವದೃರ್ಧಯಂತೈೇನಂ ಯಾಂತಿ ತದ್ರೂಪತಾಂ ಚ ತೇ!
(ರಸಾರ್ಣವ ಸುಧಾಕರ, ;;. ೩.)
೩೨೦ ಭಾರತೀಯ ಕಾವ್ಯಮಾಮಾಂಸೆ
ತ್ತದೆ. ಈ ಸ್ಥಾಯಿಭಾವ ಎಚ್ಚತ್ತಿರುವ ಕಾಲದಲ್ಲ ನಡುನಡುವೆ ಉದಿಸಿ
ಲಯಿಸುವ ಸಂಚಾರಿ ಭಾವಗಳಿಷ್ಟು! ಪ್ರಿಯನನ್ನೋ ಪ್ರೇಯಸಿಯನ್ನೋ
ಕುರಿತು ಒಮ್ಮೆ ಚಿಂತೆ, ಒಮ್ಮೆ ಔತುಕ್ಯ, ಒಮ್ಮೆ ಹರ್ಷ, ಒಮ್ಮೆ
ವಿಷಾದ--ಪೀಗೆ ಕೊನೆಯಿಲ್ಲ ಮೊದಲಿಲ್ಲ ರತಿಸ್ಮಾಯಿಬಾವವ್ಲೆ ಇವ
ಕೆ ಲ್ಲ ಜನ್ಮ ಭೂಮಿ. ಇತ್ತ ಇವುಗಳಿಂದಲೇ ಅದಕ್ಕೆ ಪುಷ್ಟಿ ವೈಚಿತ್ರ ಗಳು
ಬರುವುದು. |
ಸಂಚಾರಿಭಾವಗಳು ಒಟ್ಟು _ಮೂವತ್ತುಮೂರು. ಅವು ಯಾವು
ವೆಂಬುದನ್ನು ನಾಟ್ಯಶಾಸ್ತ್ರದ ಈ ಶ್ಲೋಕಗಳು ತಿಳಿಸುತ್ತವೆ :
ನಿರ್ಮೇದಗ್ಗಾ ನಿಶಂಕಾಖ್ಯಾಸ್ತಥಾಸೂಯಾ ಮದಃ ಶ್ರಮಃ |
ಆಲಸ್ಯ೦ ಚೈವ ದೈನ್ಯಂ ಚ ಚಿಂತಾ ಮೋಹಃ ಸ್ಕೃತಿರ್ಧ್ಯತಿಃ ॥
ವ್ರೀಡಾ ಚಪಲತಾ ಹರ್ಷ ಆವೇಗ ಜಡತಾ ತಥಾ |
ಗರ್ವೋ ವಿಷಾದ ಔತ್ಸುಕ್ಯ೦ ನಿದ್ರಾಪಸ್ಮಾರ ಏವಚ॥।
ಸುಪ್ತಂ ವಿದೋಧೋಮರ್ಪ್ಷಶಾ ಪ್ಯವಹಿತ್ಯಮಥೋಗ್ರೆತಾ |
ಮತಿರ್ವ್ಯಾ ಧಿಕ್ತಥೋನ್ಮಾದಸ್ತಥಾ ವ.ರಣಮೇವ ಚ॥
ತ್ರಾಸಶ್ವೆ 43ವ ವಿತರ್ಕಶ್ವ ವಿಜ್ಞೆ(ಯಾ ವ್ಯಭಿಚಾರಿಣಃ | (1. ೧೯.೨೧)
ಇವುಗಳಲ್ಲಿ ಒಂದೊಂದೂ ಏತರಿಂದ ಸುಟ್ಟು ಕದೆ, ಹೇಗೆ ಕಾಣಿನಿಕೊಳ್ಳು
ತ್ತದೆ ಎಂಬುದು ಭರತನ ನಾಟ ಶಾಸ್ತ್ರ _ದಲ್ಲಿಯೂ, ಅದನ್ನು ಅನುಸರಿಸುವ
ಗೆ 1೦ಥಗಳಲ್ಲಿಯೂ ಸವಿಸ್ತರವಾಗಿ ಪ್ರತಿಪಾದಿತವಾಗಿದೆ ; ಕನ್ನಡದಲ್ಲಿ
ಮುಖ್ಯವಾಗಿ " ರಸರತ್ನಾಕರ 'ಕಾರನು ಹೇಮಚಂದ್ರನ ಮತನನ್ನು ಅವ
ಲಂಬಿಸಿ ಈ ವಿಷಯವನ್ನು ಉದಾಹರಣಿಗಳೊಡನೆ ನಿರೂಪಿಸುತ್ತಾನೆ. ಇಲ್ಲ
ಆ ವಿವರವನ್ನೆಲ್ಲ ಕೊಡಲು ಸಾಧ್ಯವಿಲ್ಲ; ದಿಗ್ಬರ್ಶನಕ್ಕಾಗಿ ಒಂದೆರಡು
ಮಾತನ್ನು ಮಾತ್ರ ಹೇಳುತ್ತೇವೆ:
(೧) ದಾರಿದ್ರ ಕಿ ಆಪತ್ತು, ತತ್ತ ಪಜ್ಮಾನ, ಈ ಮೊದಲಾದವು
ಗಳಿಂದ ಒದಗುವ ಸ್ಯಾವಮಾನವೇ, ತನ್ನ ವಿಷಯದಲ್ಲಿ ಇಳಿಕೆಯ ಭಾವವೇ,
ನಿರ್ಷೇದ. (೨) ಅತಿಕ್ಷೇಶದಿಂದ ಶಕ್ತಿಯುಡುಗುವುದು ಗ್ಲಾನಿ;
ಇದನ್ನು ಬಳಲಿಕೆಯ ಪರಮಾವಧಿಯೆನ್ನೆ ಬಹುದು. (೩) ಅನರ್ಥವಾದೀ
ತೆಂದು ಶಂಕಿಸ:ವುದೇ ಶಂಕೆ. (೪) ಅಸಹನೆಯೇ ಅಸೂಯೆ. (೫)
ಮದ್ಯಪಾನದಿಂದ ಉಂಟಾಗುವ ಉಲ್ಲಾಸಸಪಿತವಾದ ಮೈಮರವು
೨೦. ಭಾವ, ವಿಭಾವ, ಅನುಭಾವ ೩೨೧
ಮದ. (೬) "" ಮನ8ಶರೀರಖೇದಂ ಶ್ರಮಂ'' ; ಇದು ಪ್ರಯಾಣ,
ವ್ಯಾಯಾಮ ಮೊದಲಾದವುಗಳಿಂದ ಜನಿಸುತ್ತದೆ. (೭) ವ್ಯಾಧಿ, ಗರ್ಭ
ಭಾರ ಮೊದಲಾದವುಗಳಿಂದ ಒದಗುವುದು ಆಲಸ್ಥ; ಯಾವುದೂ ಬೇಡ
ಎನ್ನಿಸುವ ಚಿತ್ತವೃತ್ತಿ ಇದು. (೮) ದುರ್ಗತಿಯಿಂದ ಜನಿಸುವುದು
ದೈನ್ಯ. (೯) "" ಧ್ಯಾನಮೆ ಚಿಂತೆ. ಇದು ಸ್ಮೃತಿಯಿಂ ವ್ಯತಿರಿಕ್ತಂ. ಅನು
ಭೂತ ವಸ್ತುಸ್ಮರಣಮೆ ಸ್ಮೃತಿ; ಆದಂ ಬಿಡದೆ ದ್ಯಾನಿಪುದು ಚಿಂತೆ.?'
(೧೦) " ಚಿತ್ರ ಮೂಢತ್ಯಂ ಷೋಹಂ'', ಎಂದರೆ, ಎಚ್ಚರ ತಪ್ಪುವುದು ;
ಇದು ಸುಖದ ಫಳಿಗೆಯಲ್ಲೂ ಉಂಟಾಗಬಹುದು. (೧೧) ಸ್ಮೃತಿ
ನೆನವು. (೧೨) ಜ್ಞ್ಯಾನ ಷೊದಲಾದವುಗಳಿಂದ ಉಂಟಾಗುವ ಸಂತು
ಪ್ರಿಯೇ ಧೃತಿ. (೧೩) ವ್ರೀಡಾ ಎಂದರೆ ನಾಚಿಕೆ; ಇದು ಚತ್ತದ
ಸಂಕೋಚತ್ಥಿತಿ. (೧೪) "" ಚಿತ್ತಂ ಚಲಿಪುದೆ ಚಾಪಲ್ಯಂ.'' (೧೫)
ಮನಸ್ಸಿನ ಉಲ್ಲಾಸ ಹರ್ಷ. (೧೬) ಉತ್ಪಾತಾದಿಗಳನ್ನು ನೋಡಿ
ದಾಗ ಉಂಟಾಗುವ ಸಂಭ್ರಮ ಅಥವಾ ಗಡಿಬಿಡಿಗೆ ಅವೇಗಪೆಂದು ಹೆಸರು.
(೧೭) ಇಪ್ಪಾನಿಪ್ಟಗಳನ್ನು ನೋಡಿದಾಗ ಕೇಳಿದಾಗ ಉಂಟಾಗುವ
ಪೆರವತತೆ ಜಡತೆ. (೧೮) " ಪರರನವಜ್ಞೆಗೆಯ್ಯುದ್ದೇ ಗರ್ವಂ ''.
(೧೯) ಕಾರ್ಯಭಂಗ, ದೈವದ ವಿಮುಖತೆ ಮೊದಲಾದವುಗಳಿಂದ ಉಂಟಾ
ಗುವ 4" ಮನಃಪೀಡೆಯೆ ವಿಪಾದಂ'. (೨೦) ಕಾಲವಿಳಂಬವನ್ನು
ಸಪಿಸದಿರುವುದು ಔತ್ಬುಕ್ಯ. (೨೧) " ಮನಃಸಂಮಾಳನಂ ನಿದೆ ಶ್ರ”, ಇದು
ಜೊಂಪು. ಮೈಮುರಿಯುವುದು, ಆಗುಳಿಕೆ ಇವೆಲ್ಲ ಇಲ್ಲಿ ಉಂಟು. (೨೨)
« ಅವೇಶರೂಪಂ ಅಪಸ್ಮಾರ೦''; ಇದಕ್ಕೆ ಗ್ರಹಚೇಷ್ಟೆ ಮೊದಲಾದವು
ಕಾರಣ. (೨೩) " ನಿದ್ರಾಗಾಢಾವಸ್ಸೆಯೆ ಸುಪ್ತಿ'. (೨೪) ನಿದ್ರೆ
ಯಿಂದ ಎಚ್ಚರಗೊಳ್ಳುವುದು ವಿಬೋಧ. (೨೫) ಪ್ರತೀಕಾರವನ್ನು
ಮಾಡಬೇಕೆಂಬ ಇಚ್ಛೆ ಅಮರ್ಪ. (೨೬) ನಾಚಿಕೆ, ಭಯ ಮುಂತಾದವು
ಉಂಟಾದಾಗ, ಅವು ತನ್ನ ಶರೀರದಲ್ಲ ಗೋಚವವಾಗದಂತೆ ಮರಸು
ವುದು ಅವಪಿತ್ಯ. (೨೭) ಅತಿ ಕ್ರಿರ್ಯವೇ ಉಗ್ರತೆ. (೨೮) ಶಾಸ್ತಾ
ದಿಗಳ ಸಹಾಯದಿಂದ ಒಂದು ನಿಶ್ಚಯಕ್ಕೆ ಬರುವುದು ಮತಿ. (೨೯)
ಜ್ವರ ಮೊದಲಾದವುಗಳಿಂದ ಉಂಟಾಗುವ ಮನಸ್ಸಿನ ತಾಪವೇ ವ್ಯಾಧಿ.
(೩0) "4 ಚಿತ್ತವಿಪ್ಪವಮೆ ಉನ್ಮಾದಂ'', ಎಂದರೆ ಹುಚ್ಚು.
KM. 91
೩೨೨ ಭಾರತೀಯ ಕಾವ್ಯಮಾಮಾಂಸೆ
(೩೧) "ಮರಣದ ಪೂರ್ವಾವಸ್ಥೆ ಯೆ ಮರಣಂ''; ಪೂರ್ತಿಯಾದ ಮರಣ
ವನ್ನೂ ಇದು ಒಳಕೊಳ್ಳುತ್ತದೆ. (೩೨) ತ್ರಾಸ ಎಂದರೆ ಜೆದರುವುದು.
(೩೩) ಹೀಗೋ ಹಾಗೋ ಎಂದು ವಿಚಾರಮಾಡುವುದು ವಿತರ್ಕ.
ಈ ಸಂಚಾರಿಭಾವಗಳಲ್ಲಿ ಒಂದರಿಂದ ಇನ್ನೊಂದನ್ನು ಸಾಮಾನ್ಯ
ವಾಗಿ ಪ್ರತ್ಯೇಕಿಸಬಹುದಾದರೂ, ಕೆಲಕೆಲವಕ್ಕೆ ವ್ಯತ್ಯಾಸ ಅತಿಸೂಕ್ಷ ಕಿವೆನ್ನ್ನಿ
ಸುತ್ತದೆ. ನಾವು ಸಾಧಾರಣವಾಗಿ ಚಿತ್ತವೃತ್ತಿಗಳೆಂದು ಭಾವಿಸದೆ ಇರ
ತಕ್ಕ ಕೆಲವೂ ಇಲ್ಲ ಸೇರಿರುವಂತಿದೆ. ಇದರಮೇಲೆ ಎಲ್ಲ ಚಿತ್ತವೃತ್ತಿ
ಗಳನ್ನೂ ಈ ಪಟ್ಟಿ ಒಳಕೊಂಡಿದೆಯೆಂದು ಹೇಳುವುದೂ ಸಾಧ್ಯವಿಲ್ಲ. ಈ
ಲೋಪದೋಪಗಳ ವಿಮರ್ಶೆ ಇಲ್ಲ ನಮ್ಮ ಉದ್ದೇಶಕ್ಕೆ ಮಾರಿದ್ದು; ಇದು
ಕೇವಲ ವಿವರಗಳಿಗೆ ಸಂಬಂಧಿಸಿದ್ದಾದ ಕಾರಣ ಬಲುಮಟ್ಟಿಗೆ ಅಪ್ರಕೃತವೂ
ಹಾದು. ಸ್ಥಾಯಿಯಲ್ಲದ ಚತ್ತವೃತ್ತಿಗಳೆಲ್ಲ ಸಂಚಾರಿಗಳಾಗುವುವೆಂದು
ಸ್ಥೂಲವಾಗಿ ಹೇಳಿ ಮುಂದುವರಿಯೋಣ.
ಇನ್ನೊಂದು ವಿಷಯ. ಸ್ಥಾಯಿಗಳಲ್ಲಿ ಯಾವುದಾದರೂ ಒಂದು
ಉದಾಹರಣಿಗೆ, ರತಿ - ಕಾರಣವಶದಿಂದ ಮೇಲಕ್ಕೆದ್ದು ಪ್ರಧಾನವಾಗಿ
ವರ್ತಿಸುತ್ತಿರುವಾಗ, ಚಿಂತೆ, ಆವೇಗ ಮೊದಲಾದವು ಅನರಲ್ಲ ಬಂದು
ಹೋಗುವಂತೆಯೇ, ಉತ್ಸಾಹ, ಹಾಸ ಮೊದಲಾದವೂ ಉದಿಸಿ ಲಯವಾ
ಗುವುದು ಅಸಂಭವವಲ್ಲ. ಇವು ಸೈಭಾವತಃ ಸ್ಥಾಯಿಗಳಾಗಿದ್ದರೂ, ಈ
ಸಂದರ್ಭದಲ್ಲಿ ಪ್ರಧಾನವಾಗದಿರುವುದರಿಂದ, ಇವೂ ಸಂಚಾರಿಗಳ
ಮಟ್ಟಕ್ಕೇ ಇಳಿಯುತ್ತವೆ: ಆದಕಾರಣ, ಒಂದು ಭಾವ ಸ್ಥಾಯಿಯೇ
ಸಂಚಾರಿಯೇ ಎಂಬುದನ್ನು ಸರಿಯಾಗಿ ನಿರ್ಧರಿಸಲು ಸನ್ನಿವೇಶದ ಪರಿ
ಜ್ಞಾನ ಅವತ್ಯಕ.
ಚಿತ್ತವೃತ್ತಿಗಳು ಇಷ್ಟು ಎಂದು ಸ್ಕೂಲವಾಗಿಯಾದರೂ ಲೆಕ್ಕಮಾಡ
ಲಾದೀತು : ಆದರೆ ಅವುಗಳ ಉದಯಕ್ಕೆ ಇದಿಷ್ಟೇ ಕಾರಣ ಎಂದು
ಪಟ್ಟಿ ಹಾಕುವುದಾಗಲಿ, ಇಂಥಿಂಥ ಭಾವಕ್ಕೆ ಇದು ಇದು ಮಾತ್ರವೇ ಕಾರಣ
ಎಂದು ನಿಯಮನಮಾಡುವುದಾಗಲಿ ಯಾರಿಗೂ ಶಕ್ಯವಿಲ್ಲ. ಒಂದೇ
ಕಾರಣದಿಂದ ಒಬ್ಬನಲ್ಲ ಭಯ ಹುಟ್ಟಬಹುದು, ಇನ್ನೊಬ್ಬನಲ್ಲ ಕ್ರೋಧ
ಕ; . ಸ್ಮಾಯಿನ ಏತೇತು ವ್ಯಭಿಚಾರಿಜಪಿ ಭವಂತಿ. '' (ಅಭಿನವಭಾರತೀ,],
ಪು. ೨೭೦.)
೨೦. ಭಾವ, ವಿಭಾವ, ಅನುಭಾವ ೩೨೩
ಹುಟ್ಟಬಹುದು, ಮತ್ತೊ ಬ್ಬನಮನಸ್ಸು ನಿರ್ವಿಕಾರವಾಗಿಯೇ ನಿಲ್ಲಬಹುದು.
ಇನ್ನು, ಕಾರ್ಯಗಳ ವಿಷಯವೂ ಹೀಗೆಯೇ. ಮನುಷ್ಯನ ಅಸಂಖ್ಯವಾದ
ಚರೈಗಳೆಲ್ಲ ಇಲ್ಲ ಸೇರುತ್ತವೆ. ಅಲ್ಲದೆ, ಒಂದೇ ಭಾವದ ಕಾರ್ಯಗಳು ಒಬ್ಬ
ನಲ್ಲ ಅನೇಕವಾಗಿ ಕಾಣಿಸಿಕೊಳ್ಳ ಬಹುದು, ಇನ್ನೊ ಬ್ಬನಲ್ಲ ಕೆಲವು ಮಾತ್ರ
ಗೋಚರಿಸಬಹುದು, ಮೂರನೆಯವನು ಅದೊಂದೂ ಹೊರಗೆ ತೋರ
ದಂತೆ ಅದುಮಿ ಬಿಡಬಹುದು. ಇಷ್ಟೇ ಅಲ್ಲ, ಹಲವು ಚಿತ್ತವೃತ್ತಿಗಳಿಂದ
ಒಂದೇ ಕಾರ್ಯ. _ಉದಾಹರಣಿಗೆ, ಕಣ್ಣೀರು ಸುರಿಸುವುದು--ಸಂಭವಿಸು
ಪುದೂ ಉಂಟು. ಹೀಗಿರುವುದರಿಂದ, ಆಯಾ ವ್ಯಕ್ತಿ ಯ ಸ್ವಭಾವವನ್ನೂ
ಪರಿಸ್ಥಿತಿಯನ್ನೂ ನೋಡಿಕೊಂಡು, ಲೋಕಜ್ಞಾನವನ್ನು ಚೆನ್ನಾಗಿ ಉಪ
ಯೋಗಿಸಿಕೊಂಡು, ಚಿತ್ತವೃತ್ತಿಯ ಕಾರಣಕಾರ್ಯಗಳನ್ನು ಅರಿತುಕೊಳ್ಳ
ಬೇಕು, ಅರ್ಥಮಾಡಿಕೊಳ್ಳಬೇಕು.
ಇದುವರೆಗೂ ಲೌಕಕವ್ಯವಹಾರವನ್ನೇ ಕುರಿತು ವಿಚಾರಮಾಡಿದೆವು.
ಆದರೆ ಲೋಕದ . ಸಂಗತಿಯೆಲ್ಲವೂ ಕಾವ್ಯನಾಟಕಗಳ ಮೂಲವಸ್ತು
ಮಾತ್ರ. ಅದು ಕವಿಪ್ರತಿಭೆಯಲ್ಲ ರೂಪುಗೊಂಡು ಹೊರಬಿದ್ದಾಗ ಹೊಸ
ದೊಂದು ಪ್ರಪಂಚವೇ ನಿರ್ಮಿತವಾಗುವುದಷ್ಟೈ. ಈ ಕಲಾಪ್ರ ಪಂಚದಲ್ಲಿ
"" ಭಾವ'' ದ ಕಾರಣಗಳನ್ನು «" ವಿಧಾವ'' ಗಳೆಂದೂ, ಕಾರ್ಯಗಳನ್ನು
«" ಅನುಭಾವ ''ಗಳೆಂದೂ * ಕರೆಯುವುದೇ ಸಂಪ್ರದಾಯ. : ನಮ್ಮ
ಸ್ಟ 4
ವಿಚಾರಪೆಲ್ಲವೂ ಕವಿಸೃಪ್ಪಿಗೇ ಸಂಬಂಧಪಟ್ಟಿ ರುವುದರಿಂದ ಇನ್ನುಮುಂದೆ
6 ಭಾವದ ಕಾರ್ಯಕ್ಕೆ ಮಾತ್ರ "ಅನುಭಾವ ' ವೆಂದು ಹೆಸರು. ರಸಾನುಭವ ಮಾಡಿ
ದಾಗ ರಪಿಕನಲ್ಲ ಉಂಟಾಗುವ ರೋಮಾಂಚ, ಕಣ್ಣೀರು, ಮುಖವಿಕಾಸ ಮೊದಲಾದವನ್ನು
ಅನು ಭಾವವೆಂಬ ಹೆಸರಿನಿಂದ ಕೆಲವರು ಕರೆಯುವುದುಂಟು. ಉದಾಹರಣಿಗೆ "ರಸರತ್ನಾಕರ'
ದಲ್ಲಿ "" ಭಾವದೆ ಪುಟ್ಟದ ರಸಮಂ! ಭಾವುಕರದನಜುದು ಸೆವವುದೇ ಅನುಭಾವಂ ''
(i. ೪) ಎಂದು ಹೇಳಿದೆ. ಸಂಸ್ಕೃತ ಲಕ್ಷಣಕಾರರ ಮತದಂತೆ ಇದು ತಪ್ಪಾಗುತ್ತದೆ. ಈ
ಬಗೆಯ ಅಭಿಪ್ರಾಯವನ್ನು ಲೊಲ್ಲಟನ್ನೇ ಖಂಡಿಸಿದ್ದನು : « ಅನುಭಾವಾಶ್ವ ನ ರಸಜನ್ಯಾ
ಅತ್ರ ಏಿವಕ್ಷಿತಾಃ, ತೇಷಾಂ ರಸಕಾರಣತ್ಟೇನ ಗಣನಾನರ್ಹತ್ಪಾತ್, ಅಪಿ ತು ಭಾವಾನಾ
ಮೇವ.'' (ಅಭಿನವಭಾರತೀ, 7, ಪು. ೨೭೪).
7 ಕಾರಣಾನೃಥ ಕಾರ್ಯಾಣಿ ಸಹಕಾರೀಣಿ ಯಾನಿ ಚ |
ರತ್ಯಾದೇಃ ಸ್ಮಾಯಿನೋ ಲೋಕೇ ತಾನಿ ಚೇನ್ನ್ಮಾಟ್ಯಕಾವ್ಯಯೋಃ 1
ವಿಭಾವಾ ಅನುಭಾವಾತಶ್ಚ ಕಥ್ಯಂತೇ ವೃಭಿಚಾರಿಣಃ |
ವ್ಯಕ್ತಃ ಸ ತೈೈರ್ವಿಭಾವಾದ್ಯೊಃ ಸ್ಮಾಯಾ ಭಾವೋ ರಸಃ ಸ್ಮೃತಃ!
( ಕಾವ್ಯಪುಕೌಶ, 1೪. ೨೭-೮).
O1-n
೩೨೪ ಭಾರತೀಯ ಕಾವ್ಯಮಾಮಾಂಸೆ
ಈ ಪಾರಿಭಾಷಿಕ ಶಬ್ದಗಳನ್ನೇ ಸಾಮಾನ್ಯವಾಗಿ ಉಪಯೋಗಿಸುತ್ತಾ
ಹೋಗುತ್ತೇವೆ.
ವಿಭಾವಗಳನ್ನು ಆಲಂಬನ ವಿಭಾವ, ಉದ್ದೀಪನ ವಿಧಾವ ಎಂದು
ಅವುಗಳೆ ಪ್ರಭಾವದ ತಾರತಮ್ಯವನ್ನು ಅನುಸರಿಸಿ ಎರಡು ಬಗೆಯಾಗಿ
ವಿಂಗಡಿಸುತ್ತಾ. ರೆ. ಭಾವವು ಆವಿರ್ಧವಿಸುವುದಕ್ಕೆ ಮೂಲಾತ್ರಯವಾದ
ಕಾರಣವೇ ಆಲಂಬನವಿಭಾವ. ಹೀಗೆ ಉದಿಸಿದ ಭಾವವನ್ನು ಪ್ರಬಲ
ಪಡಿಸುವ ಸಾಮಗ್ರಿ ಉದ್ದೀಪನವಿಭಾವ. ಉದಾಹರಣಿಗೆ " ಶಾಕುಂತಲ
ನಾಟಕ 'ದಲ್ಲ ದುಪ್ಯ೦ತನನ್ನು ಕಂಡು ಶಕುಂತಲೆ “ ತಪೋವನ ವಿರೋಧಿ
ಯಾದ ವಿಕಾರಕ್ಕೆ ಒಳಗಾದಳು.'' ಅವಳಲ್ಲ ಪೀಗೆ ಮೇಲಕ್ಕೆದ್ದ ರತಿ
ಭಾವಕ್ಕೆ ದುಪ್ಯಂತನು ಆಲಂಬನವಿಧಾವ ; ಅವನಿಲ್ಲದಿದ್ದರೆ ಈ ಭಾವ ಉಕ್ಕು
ತ್ತಲ್ಲೇ ಇರಲ್ಲಲ್ಲ. (ಇದರಂತೆಯೇ ದುಪ್ಯಂತನಿಗೂ ಶಕುಂತಲೆ ಆಲಂಬನ
ವಿಧಾವ.) ಇವರಿಬ್ಬರ ಹೃದಯದಲ್ಲಿ ಪ್ರೇಮ ಸಂಚಾರವಾಗುತ್ತಲೂ
ಇದನ್ನು ಆತ್ರಮದ ನಿರಾತಂಕವಾದ ಪರಿಸರಣ, ಸಖಿಯರ ಪ್ರೊ ೇತ್ಸಾ ಹ,
ನಡುನಡುವೆ ಒದಗುವ ಅಗಲಿಕೆ--ಈ ಮೊದಲಾದ ಅನೇಕ ಆಂಶಗಳು
ಇನ್ನಷ್ಟು ಕೆರಳಿಸುತ್ತವೆ. ಇವೆಲ್ಲ ಉದ್ದೀಪನ ವಿಭಾವಗಳು.* ಮಿಕ್ಕ
ಭಾವಗಳಿಗೂ ಪೀಗೆಯೇ ಊಹಿಸಿಕೊಳ್ಳಬಹುದು.
ಚಿತ್ತದಲ್ಲಿ ಭಾವವು ಉದ್ರೇಕಗೊಂಡಾಗ ವ್ಯಕ್ತಿಯ ನಡೆನುಡಿಗಳಲ್ಲಿ
ಗೋಚರವಾಗುವ ವಿಕ್ರಿಯೆಗಳೇ ಅನುಭಾವವಷ್ಟೆ. ಅಂಗಾಂಗಗಳ ಚಲನೆ,
ಹೋಗುವುದು, ಬರುವುದು ನಿಬ್ಬುವುದು, ಮಾತಾಡುವುದು, ಮಾತು
ಮರಸುವದು, ಮೈನಡುಕ, ಪುಳಕ, ಕಂಬನಿ--ಈ ಮೊದಲಾದವೆಲ್ಲವೂ
ನುಧಾವಗಳೇ. ಆದರೆ,
ಸ್ತಂಭಃ ಸ್ಟೇದ್ಯೊಥ ರೋಮಾಂಚಃ ಸ್ವರಭೇದ್ಯೋಥ ಪೇಪಧುಃ ।
ಮೈವರ್ಣ್ಯ ಮಶ್ರುಃ ಪ್ರಲಯ ಇತೃಷ್ಟ್ ಸಾತ್ತ್ರಿಕಾ ಮತಾಃ ॥
(ನಾಟ್ಯಶಾಸ್ತ್ರ, ೪;;, ೧೪೮)
ಕವಿಭಾವಗಳನ್ನು ಅಲಂಬನ, ಉದ್ದೀಪನ ಎಂದು ವಿಭಾಗಿಸುವುದು ಕಾಲ್ಪನಿಕ.
ವಿಭಾವ ಸಮುದಾಯವು ಒಟ್ಟುಗೂಡಿ ಭಾವವನ್ನು ಕೆರಳಿಸುತ್ತದೆ. ಆದಕಾರಣವೇ ಭರತ
ಮುನಿ ಈ ವಿಭಾಗವನ್ನು ಎಲ್ಲಿಯೂ ಹೇಳಿಲ್ಲ, ಸೂಚಿಸಿಸೂ ಇಲ್ಲ--ಎಂದು ಆಕ್ಷೇಪಿಸುವ
ವರೂ ಉಂಟು. (ಅಭಿನವಭಾರತೀ, ] ಪು. ೩೦೫ ನೋಡಿ),
೨೦. ಭಾವ, ವಿಭಾವ, ಅನುಭಾವ ೩೨೫
"ಮೈ ಮರವಾಗುವುದು (ಎಂದರೆ ನಿಶ್ಚೇಪ್ಪತೆ), ಬೆವರು, ರೋಮಾಂಚ,
ಧ್ವನಿವಿಕಾರ, ನಡುಕ, (ಮುಖದ) ಬಣ್ಣ ವ ತ್ಯಾನವಾಗುವುದು, ಕಂಬನಿ,
ಮೂರ್ಛೆ''--ಈ ಎಂಟನ್ನು ಪೃತ್ಯೇಕಿಸಿ ಇವಕ್ಕೆ ಸಾತ್ತ್ವಿಕ ಭಾವಗಳೆಂದು
ಹೆಸರು ಕೊಟ್ಟಿದ್ದಾರೆ. ಒಬ್ಬನ ಚಿತ್ತದಲ್ಲಿ ಒಂದು ಭಾವವು ಅಧಿಕವಾಗಿ
ದ್ರೇಕಗೊಂಡಾಗ, ಅವನ ಉದ್ದೇಶ ಪ್ರಯತ್ನಗಳೇನೂ ಇಲ್ಲದೆ ಈ
ಸ ದೇಹವಿಕಾರಗಳು ತಮ್ಮ ಪ್ವಕ್ಕೆ ನನ್ ಸಂಭವಿಸುವುದರಿಂದ,
ಭಾವದ ತೀವ್ರಾವಸ್ಥೆ ಯನ್ನು ವಹಗಿ ಸೂಚಿಸುವ ಈ ಕಾರ್ಯಗಳನ್ನು
ಹೀಗೆ ಪ್ರತ್ಯೇಕಿಸಿದಂತೆ ತೋರುತ್ತದೆ.” ಆದಕಾರಣ ಸಾತ್ತ್ವಿಕ ಭಾವ
ಗಳನ್ನು ಒ೦ದು ವಿಶೇಷರೀತಿಯ ಅನುಭಾವಗಳೆಂದು ಗಣಿಸಿದರೆ ಸಾಕು,
ರಸನಿಪ್ಪತ್ತಿ ಹೇಗೆ ಆಗುವುದೆಂಬುದನ್ನು ನಿರೀಕ್ಷಿಸುವ ಮುಂಡೆ
ಇನ್ನೊಂದು ವಿಷಯವನ್ನು?ಪರಿಪ್ಮಾರ ಮಾಡಿಕೊಳ್ಳಬೇಕು. ಈ ಗ,೦ಥದ
ಮೊದಲನೆಯ ಭಾಗದಲ್ಲಿ ನೋಡಿರುವಂತೆ, ರಸತತ್ತ್ಯವು ತಲೆಯೆತ್ತಿದ್ದು
ಗೀತ ವಾದ್ಯ ಅಭಿನಯಾದಿಗಳಿಂದ ಕೂಡಿದ ನಾಟಕದ ಮಾಮಾಂಸೆಯಲ್ಲ.
ಭರತನ ಸೂತ್ರವೂ ಅದರ ಮೇಲನ ಅನೇಕ ವಿವರಣೆಗಳೂ ಅಭಿನಯ
ಪ್ರಭಾನವಾದ ನಾಟಕವನ್ನೇ ದೃಪ್ಟಿಯಲ್ಲಟ್ಟುಕೊ೦ಒವೆ. ಇಲ್ಲ ನಾವು
ಮುಖ್ಯವಾಗಿ ಪರಿಶೀಲಿಸುತ್ತಿರುವುದು ಶ್ರ ವ್ಯ (ಅಥವಾ ಪಠ್ಯ) ವಾದ ಕಾವ್ಯ.
ಕಾವೃದಲ್ಲಿರುವುದು ಬರಿಯ ಮಾತು. ಇಲ್ಲ ರಂಗಸ್ಥ ಳವಿಲ್ಲ; ಗೀತವಾದ್ಯ
ಗಳಿಲ್ಲ; ವೇಷ ಧರಿಸಿಕೊಂಡು ಬಂದು ತಮ್ಮ ಬೆಡಗು ಬಿನ್ನಾಣಗಳನ್ನು
9 «ಸತ್ತೇ'ದಿಂದ ಉದಿಸಿದ್ದು *ಸಾತ್ರ್ರಿಕ''. ಇಲ್ಲ ಸತ್ತ್ವ ಎಂದರ (ಚಿತ್ತ ತಿ
ಕಾಗ್ಯ್ರಂ'' (ಅಭಿನಪಭಾರತೀ, ], ಪು. ೩೬೭), “ಪ್ರಾಣಾತ್ಮಕಂ ವಸ್ತು'' (ಹೇಮಚಂದ್ರ;
ಕಾವ್ಯಾನುಕಾಸನ, li. ೫೩, ವೃತ್ತಿ ತಿ)" "ಸ್ಪಾತ್ಮ ವಿಶ್ರಾಮಪ್ರ! ಕಾಶಕಾ ಧೀ ಕತ ಚನೆ ಅಂತ
ರೋ ಧರ್ಮಃ" (ಸಾಹಿತ್ಯದರ್ಶಣ. iii. ೧೩೪ ವೃತ್ತಿ)--ಹೀಗೆ ವಿಧ ವಿಧವಾಗಿ ಅರ್ಥಮಾ
ಡುತ್ತಾರೆ. ನಾಟ್ಯಶಾಸ್ತ್ರದಲ್ಲಿ ಬರುವ "ಮನಸಃ ಸಮಾಧೌ ಸತ್ತ್ವನಿಷ್ಟತ್ತಿರ್ಭವತಿ''
(vii, ೧೪೭) ಎಂಬ ವಾಕ್ಯವು ಅಭಿನವಗುಪ್ತನ ಅರ್ಥಕ್ಕೆ ಪುಷ್ಟಿಕೊಡುವಂತೆ ತೋರು
ತ್ತದೆ.
ಸಾತ್ತಿಕಭಾವಗಳೂ ಚಿತ್ತವೃತ್ತಿ ವಿಶೇಷಗಳೇ; ರತಿ ಮೊದಲಾದ ಭಾವಗಳು
ಪ್ರಾಣಭೂಮಿಯನ್ನು ಮಟ್ಟಿ ಕಲುಪಗೊಳಿಸಿದಾಗ ಇವು ಉದ್ಭವಿಸುತ್ತವೆ; ಹೊರಗೆ ಕಾಣ
ಬರುವ ಸ್ತಂಭ, ಪ್ರಲಯ ಮೊದಲಾದವು ಇವುಗಳ ಅನುಭಾವಗಳು ಮಾತ್ರ ಎಂದು ಹೇಮ
ಚಂದ್ರನು ವಿವರಿಸುತ್ತಾನೆ, (ರಸರತ್ನಾಕರ, ಪು. ೧೦೩ ನ್ನೂ ನೋಡಿ.) ಈ ಅಭಿಪ್ರಾಯ
ವನ್ನು ಅವನು ಅಭಿನವಗುಪ್ತನಿಂದಲೇ ಸ್ಟೀಕರಿಸಿರಬಹುದು. ಅದರೆ ನಾಟೃಶಾಸ್ತ್ರದ ಏಳ
ನೆಯ ಅಧ್ಯಾಯದಲ್ಲ ಏಳನೆಯ ಶ್ಲೋಕದಿಂದ ಹಿಡಿದು ಮುಂದಕ್ಕೆ "ಅಭಿನವಭಾರತಿ' ದೊರೆ
ತಿಲ್ಲವಾದಕಾರಣ ಅಭಿನವಗುಪ್ತನ ಮತವೇನೆಂದು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ.
1೩೬ 'ಘಾಕತೇಯ ಕಾವ್ಯಮಾಮಾಂಸೆ ಜಿ ಯುಳಸ್ಟೆ
ಪ್ರದರ್ಶಿಸುವ ನಟ ನಟಿಯರು ಮೊದಲೇ ಇಲ್ಲ. ಹೀಗಿರುವಲ್ಲ ನಾಟ್ಯರಸದೆ"
ವಿವರಣಿ ಕಾವ್ಯರಸಕ್ಕೂ ಹೇಗೆ ಅನ್ವ್ಯಯಿಸುವುದೆಂಬ ಶಂಕೆ ಹುಟ್ಟು ವ ಸಂಭ
ವೆವುಂಟು. ಆದರೆ ದೃ ತೃಕಾವ್ಯ (ಎಂದರೆ ನಾಟಕ), ಶ್ರವ್ಯಕಾವ್ಯ ಏಂಬ
ವಿಭಾಗವು ತತ್ತ್ವತಃ ಕಾಲ್ಪನಿಕವೇ ಸರಿ. ಎರಡೂ ದೃಶ್ಯವೇ, ಎರಡೂ
ಶ್ರವ್ಯವೇ. ಕಾವ್ಯದ ಮಾತುಗಳು ಶ್ರೋತೃವಿನ ಕಿವಿಯ ಮೇಲೆ ಬಿದ್ದ
ಬಳಿಕವೂ ಬರಿಯ ಮಾತುಗಳಾಗಿಯೇ ನಿಂತರೆ ಅವನಿಗೆ ರಸಾಸ್ಟಾದವುಂಟಾ
ಗುವ ಸಂಭವವೇ ಇಲ್ಲ. ಕವಿಯ ವರ್ಣನೆಗೆ ಅನುಸಾರವಾಗಿ ಅವನ
ಮನಸ್ಸಿನಲ್ಲೇ ಒಂದು ರಂಗಭೂಮಿ ನಿರ್ಮಾಣವಾಗಬೇಕು ; ಕಾವ್ಯದ
ಪಾತ್ರಗಳು ಜೀವವುಳ್ಳ ವ್ಯಕ್ತಿಗಳಂತೆ ಅಲ್ಲಿ ಸುಳಿದು ತಮ್ಮ ವಿವಿಧವಾದ
ನಡೆವಳಿಕೆಗಳನ್ನು ಪ್ರದರ್ಶಿಸದೇಕು. ಸಹೃದಯನ ಪ್ರತಿಭೆ ಕವಿಯ
ಮಾತುಗಳನ್ನು ಪೀಗೆ ದೃ ತ್ಯಗಳಾಗಿ, ವ್ಯಕ್ತಿಗಳಾಗಿ, ಅವರ ಚರೈಗಳಾಗಿ
ಪರಿವರ್ತಿಸಿದ ಬಳಿಕ ಕಾವ್ಯದ ವಸ್ತುವೆಲ್ಲವೂ ಸಹೈದಯನ ಒಳಗಣ್ಣಿ ನ
ಮುಂದೆ ಸಾಕ್ಷಾತ್ತಾಗಿ ನಡೆದಂತೆಯೇ ಭಾಸವಾಗುತ್ತದೆ. ಇನ್ನು ಶ್ರವ್ಯ
ಕಾವ್ಯಕ್ಕೂ ದೃಶ್ಯಕಾವ್ಯಕ್ಕೂ ನಿಜವಾದ ಭೇದವೆಲ್ಲಿ ಬಂತು?
ಈ ವಿಷಯವನ್ನು ಭಟ್ಟತೌತನು ಸ್ಪಪ್ಪವಾದ ಮಾತುಗಳಲ್ಲ
ತಿಳಿಸಿದ್ದಾ ನೆ19;
« ಪ್ರಯೋಗತ್ತಮೆನಾಪನ್ನೇ ಕಾವ್ಯೇ ನಾಸ್ಟಾದಸಂಭವಃ ।''
““ ನಾಟ್ಯರೂಪವನ್ನು ತಾಳಿದ ಹೊರತು ಕಾವ್ಲದಲ್ಲಿ ಅಸ್ಚಾದವುಂಟಾಗದು''
ಎಂಬುದೇ ಅವನ ಸಿದ್ಧಾಂತ, ಕೇವಲ ಉಕ್ತಿಯಿಂದಲ್ಲೇ ವಸ್ತುಸಾಕ್ಷಾ
ತ್ಕಾರವನ್ನು ಮಾಡಿಕೊಡುವ ಶಕ್ತಿ ಕವಿಗೆ ಉಂಟೆಂಬುದನ್ನೂ ಆವನು
ಬಲ್ಲನು :
ವರ್ಣನೋತ್ಕಲಕಾಭೋಗಪ್ರಾಢೋಕ್ತ್ಯಾ ಸಮ್ಯಗರ್ಪಿತಾಃ !
ಉದ್ಯಾನಕಾಂತಾಚಂದ್ರಾದ್ಯಾ ಭಾವಾ ಪ್ರತ್ಯಕ್ಷವತ" ಸ್ಪುಟಾಃ [
“ವರ್ಣನೆಯ ವಿಲಾಸ ವಿಸ್ತಾರಗಳನ್ನುಳ್ಳ ಪ್ರೌಢೋಕ್ತಿಯಿಂದ ಚೆನ್ನಾಗಿ
[ಮನಸ್ಸಿಗೆ] ಮುಟ್ಟಿ, ಉದ್ಯಾನ, ಕಾಂತೆ, ಚಂದ್ರ ಮೊದಲಾದ ಪದಾರ್ಥ
ಗಳು ಕಣ್ಣಿದುರಿಗಿರುವಂತೆಯೇ ಸ್ಪಪ್ಟಗೊಳ್ಳುತ್ತವೆ.'' ತನ್ನ ಉಪಾಧ್ಯಾಯನ
10 ಅಭಿನವಭಾರತೀ, 1, ಪು. ೨೯೨ ನೋಡಿ.
೨೦. ಭಾವ, ವಿಭಾವ, ಅನುಭಾವ ೩೨೭
ಈ ಮಾತುಗಳನ್ನು ಅಭಿನವಗುಪ್ತನು ಪ್ರವೇಶಗೊಳಿಸುತ್ತಾ, "" ರಸಗಳು
ನಾಟ್ಯದಲ್ಲಿ ಮಾತ್ರವಲ್ಲ, ಕಾವ್ಯದಲ್ಲೂ ಉಂಟು. ನಾಟ್ಯವಾಡಿದಂತಿರು
ವುದರಲ್ಲೆ ರಸ. ಕಾವ್ಯಾರ್ಥವಿಪಯದಲ್ಲಾದರೆ, ಪ್ರತ್ಯಕ್ಷವಾಗಿದ್ದ ೦ತೆ
ಅನುಭವವೊದಗಿದಾಗಲೇ ರಸವು ಉದಿಸತಕ್ಕದ್ದು''ಎಂದು ಹೇಳುತ್ತಾನೆ.॥
ಕಾವ್ಯ ಶ್ರೇಷ್ಠವೋ ನಾಟ್ಯ ಶ್ರೇಷ್ಠವೋ ಎಂಬ ಚರ್ಚೆಯೂ ಇಲ್ಲಿ
ಬರುತ್ತದೆ. ಅದು ನಮಗೆ ಪ್ರಕೃತಗಲ್ಲಿ ಅನಾವಶ್ಯಕವಾದ ಕಾರಣ,
ಎರಡು ಮಾತಿನಲ್ಲಿ ಸಂಗ್ರಹಿಸಿದರೆ ಸಾಕು. ಕಾವ್ಯವೆಂದರೆ ಮುಖ್ಯವಾಗಿ
ನಾಟಸವೆಂದೇ ಅಭಿನವಗುಪ್ತನ ಅಭಿಪ್ರಾಯ.” ಇದಕ್ಕೆ ವಾಮನನ
ಬೆಂಬಲವೂ ಉಂಟೆಂದು ಅವನು ತೋರಿಸುತ್ತಾನೆ." ಮಾತು ಕಥೆ ವೇಷ
ಭೂಪಣಾದಿಗಳಲ್ಲಿ ಲೋಕವೃತ್ತಕ್ಕೆ ನಾಟ್ಯವು ಹೆಚ್ಚು ಹತ್ತಿರ ಬರುತ್ತದೆ.
ಸಾಮಾನ್ಯ ವ್ಯಕ್ತಿಗಳೂ ಕೂಡ ರಂಗಮಂದಿರವನ್ನು ಪ್ರವೇಶಿಸಿದಾಗ
ಅಲ್ಲಿಯ ಗೀತ ವಾದ್ಯ ಪ್ರಯೋಗಾದಿಗಳ ಪ್ರಭಾವದಿಂದ ಸ್ವಂತ ಸುಖ
ದುಃಖಗಳನ್ನು ಮರೆತು ಸುಲಭವಾಗಿ ರಸಪರವಶರಾಗಬಹುದು. ಕಾವ್ಯ
ವಾಚನದಲ್ಲಾದರೆ, ಒಬ್ಬನಿಗೆ ಸಂಸ್ಕಾರ ಹೆಚ್ಚಾಗಿ ಬೇಕು; ಅವನು
ಒಳ್ಳೆಯ ಸಹೃದಯನಾಗಿರಬೇಕು.
ಇದಕ್ಕೆ ಪ್ರತಿಯಾಗಿ, ಬರಿಯ ನಟರಿಂದ, ಅಭಿನಯದಿಂದ ಎಪ್ಪು
ಸಾಧನೆಯಾದೀತು » ಎರಡು ಕಡೆಗಳಲ್ಲೂ ರಸಾವಿರ್ಭಾವಕ್ಕೆ ಕವಿಯ
ನಿರೂಪಣ ಶಕ್ತಿಯೇ ಮುಖ್ಯ ಕಾರಣ. ಆದ್ದರಿಂದ, ನಟರಿಗಿಂತ ಕವಿ
ಗಳಲ್ಲ, ಅಭಿನಯಕ್ಕಿಂತ ಕಾವ್ಯದಲ್ಲಿ ನಮಗೆ ಗೌರವ ಹೆಚ್ಚು ಎಂದು ಭೋಜ
ರಾಜನು ಅಭಿಪ್ರಾಯಪಡುತ್ತಾನೆ."
1! “ನ ನಾಟ್ಯ ಏವ ರಸಾಃ ಕಾವ್ಯೊಪಿ. ನಾಟ್ಯಾಯಮಾನ ಏಪ ರಸಃ. ಕಾವ್ಯಾರ್ಥ
ವಿಷಯೇ ಪಿ ಪ್ರ ತ್ಯಕ್ಷಕಲ್ಪಸಂವೇದನೋದಯೇ ರಸೋದಯ;ಃ '' (ಅಭಿನವಭಾರತೀ,
7, ಪು. ೨೯೧).
12 ಕಾವ್ಯಂ ತಾವನ್ಮುಖ್ಯತ್ಕೋ ದಶರೂಪಕಾತ್ಮಕಮೇವ ... .'' (ಅಭಿನವಭಾರತೀ,
1, ಪು. ೨೯೨).
13 “ಪಂದರ್ಥೇಷು ದಶರೂಪಕ ಶ್ರೇಯಃ (ಕಾವ್ಯಾಲಂಕಾರ ಸೂತ್ರ, ;,೩.೩೦),
11 “ಅಭಿನೇತೃಭ್ಯಃ ಕವೀನೇವ ಬಹುಮನ್ಯಾಮಹೇ, ಅಭಿನಯೇಭ್ಯಶ್ವಕಾವ್ಯಮೇವ.''
(ಶೈಂಗಾರಪ್ರಕಾಶೆ) 7, Raghavan : Bhoja’s SrngiaraprakiSa» 3701. I—
Part 1, p- 80 ನೋಡಿ. ಈ ನಿಬಂಧದಲ್ಲಿ "ಜKvya and Nitya’ ಎಂಬ ವಿಸ್ತಾ
ರವಾದ ಅಧ್ಯಾಯವೇ ಉಂಟು.
೩೨೮ ಭಾರತೀಯ ಕಾಷ್ಯಮಾಮಾಣಸೆ
ಇದೆಲ್ಲ ಅವರವರ ಪ್ರವೃತ್ತಿಗೆ ಅನುಸಾರವಾಗಿ ಹೋಗತಕ್ಕದ್ದು.
ನಮಗೆ ಶ್ರವ್ಯವಾದ ಕಾವ್ಯವೂ ಬೇಕು, ದೃತ್ಯವಾದ ನಾಟಕವೂ ಬೇಕು.
ಕಾವ್ಯವು ನಾಟ್ಯಾಯಮಾನವಾದಲ್ಲದೆ ಆಸ್ವಾದವಿಲ್ಲ. ನಾಟಕದಲ್ಲಿ ಕೂಡ
ಎಲ್ಲವನ್ನೂ ಅಭಿನಯಿಸಿ ತೋರಿಸಲು ಸಾಧ್ಯವಿಲ್ಲ; ವರ್ಣನೆಯ ಮೂಲಕ,
ಸೂಚನೆಯ ಮೂಲಕ ಎಷ್ಟೋ ವಿಷಯಗಳನ್ನು ಸಾಮಾಜಿಕನ ಊಹೆಗ್ನೇ
ಬಿಡಬೇಕು. ಎರಡಕ್ಕೂ ರಸನಿಪ್ಪತ್ತಿಯೊಂದೇ ಗುರಿ. ಎರಡರಲ್ಲೂ
ನೆಮಗೆ ದೊರೆಯತಕ್ಕದ್ದು ವಿಭಾವಾನುಭಾವಾದಿಗಳು ಮಾತ್ರ. ಕಾವ್ಯದಲ್ಲ
ವರ್ಣನೆಯ ಮೂಲಕವೂ ನಾಟ್ಯದಲ್ಲಿ ಅಭಿನಯದ ಮೂಲಕವೂ ಅವು
ಮುಖ್ಯವಾಗಿ ಗೋಚರವಾಗುತ್ತವೆ. ಇಷ್ಟೇ ವ್ಯತ್ಯಾಸ. ಆದಕಾರಣ,
ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಛತೇ |
ತೇಪಾಮೇವ ಪ್ರಯೋಗಸ್ತು ನಾಟ್ಯ೦ ಗೀತಾದಿರಂಜಿತಂ ॥
ಎಂಬ ಮಹಾವಾಕ್ಯವನ್ನು ಮತ್ತೊಮ್ಮೆ ಸ್ಮರಿಸಿ, ಕಾವ್ಯನಾಟ್ಯಗಳಿಗೆ
ತತ್ತ್ವತಃ ಭೇದವಿಲ್ಲವೆಂಬುದನ್ನು ದೃಢಪಡಿಸಿಕೊಂಡು, ಈ ವಿಭಾವಾನು
ಭಾವಗಳಿಂದ ರಸವು ಹೇಗೆ ನಿಪ್ಪನ್ನವಾಗುವುದೆಂಬುದರ ವಿಚಾರಕ್ಕೆ
ಮುಂದುವರಿಯೋಣ.
15 ಹಿಂದೆ ೮೫ನೆಯ ಪುಟವನ್ನು ನೋಡಿ.
೨೧. ರಸಾನುಭವ... ೧
"" ವಿಭಾವಾನುಭಾವವ್ಯಭಿಚಾರಿಸಂಯೋಗಾದ್ರಸೆನಿಪ್ಪತ್ತಿಃ 'ಥ--
«ವಿಭಾವಗಳು, ಅನುಭಾವಗಳು, ಸಂಚಾರಿ (ಭಾವ) ಗಳು ಇವುಗಳ
ಸಂಯೋಗದಿಂದ ರಸನಿಪ್ಪತ್ತಿಯಾಗುವುದು.''. ಇದೇ ಭರತನ ಪ್ರಖ್ಯಾತ
ವಾದ ಸೂತ್ರ. ಇದು ಹೇಗೆ ಎಂಬುದನ್ನು ತಿಳಿಯಪಡಿಸಲು ಅವನು
ಲೌಕಿಕ ದೃಷ್ಟಾಂತಗಳನ್ನು ಕೊಡುತ್ತಾನೆ: "ಜಿಲ್ಲ ಮೊದಲಾದ ದ್ರವ್ಯ
ಗಳು, ಮಸಾಲೆ, ವನಸ್ಪತಿಗಳು. ಇವುಗಳಿಂದ ಹೇಗೆ " ಪಾಡವ ' ! ಮೊದ
ಲಾದ ರಸಗಳು೦ಟಾಗುವುವೋ ಹಾಗೆಯೇ ಅನೇಕ ಭಾನಗಳಿಂದ ಕೂಡಿದ
ಸ್ಮಾಯಿಭಾವಗಳೂ ರಸತ್ವವನ್ನು ಹೊಂದುತ್ತಷೆ. ಇಲ್ಲ "ರಸ' ಎಂಬ
ಮಾತಿಗೆ ಅರ್ಥ ವೇನು ಎಂದು ಕೇಳಿದರೆ ಹೇಳುತ್ತೇವೆ. _ಆಸ್ಫಾದ್ಯವಾಗು
ವುದರಿಂದ [ರಸ]. ರಸ ಹೇಗೆ ಆಸ್ವಾದ್ಯವಾಗುತ್ತದೆ ? ಬಗೆಬಗೆಯ
ವ್ಯಂಜನಗಳೊಡನೆ ಕಲಸಿದ ಅನ್ನವನ್ನು ಊಟವಮಾಡುತ್ತಾ ಪ್ರಸನ್ನ ಮನ
ಸ್ಮರಾದ ಪುರುಷರು ಹೇಗೆ ರಸಗಳನ್ನು ಅಸ್ವಾದಿಸಿ ಹರ್ಷಾದಿಗಳನ್ನು
ಹೊ೦ದುತ್ತಾರೆಯೋ ಹಾಗೆಯೇ ಬಗೆಬಗೆಯ ಭಾವಾಭಿನಯಗಳಿಂದ
ವ್ಯಂಪಿತವಾಗಿ ವಾಚಿಕಾಭಿನಯ, ಅಂಗಿಕಾಭಿನಸು, ಸಾತ್ತ್ಯಿಕಾಭಿನಯಗ
೪೦ದ ಕೂಡಿದ ಸ್ಮಾಯಿಭಾವಗಳನ್ನು ಪ್ರಸನ್ನ ಮನಸ್ಕರಾದ ಪ್ರೇಕ್ಷಕರು
ಆಸ್ಚಾದಿಸಿ ಹರ್ಷಾದಿಗಳನ್ನು ಹೊಂದುತ್ತಾರೆ. ಆದಕಾರಣ ಇವು ನಾಟ್ಯ
ರಸಗಳೆಂದು ಹೇಳುತ್ತೇವೆ ಇಲ್ಲ ಅನುವಂತ್ಯಗಳಾದ ಎರಡು ಶ್ಲೋಕ
ಗಳುಂಟು :
"* " ಹಲವು ದ್ರವ್ಯಗಳಿಂದ ಕೂಡಿದ ಅನೇಕ ವ್ಯಂಜನಗಳನ್ನು ಅನ್ನಕ್ಕೆ
ಕಲನಿಕೊಂತು ಹೇಗೆ ಊಟಬಲ್ಲವರು ಊಟಮಾಡುತ್ತಾ ಆಸ್ವಾದಿಸು
ತ್ತಾರೋ, ಹಾಗೆಯೇ ಭಾವಾಭಿನಯಗಳಿಂದ ಕೂಡಿದ ಸ್ಥಾಯಿಭಾವ
ಗಳನ್ನು ವಿದ್ಯಾಂಸರು ಮನಸ್ಸಿನಲ್ಲಿ ಆಸ್ವಾದಿಸುತ್ತಾರೆ ; ಆದಕಾರಣ ಇವನ್ನು
ನಾಟ್ಯರಸಗಳೆಂದು ಅರಿಯುತ್ತಾ ರೆ. '' 2
1 "ಪಾಡವ' ಎನ್ನುವುದು ಒಂದು ಬಗೆಯ ಪಾನಕ ಅಥವಾ ಪರಬತ್ತು.
2 ನಾಟ್ಯಶಾಸ್ತ್ರ, ೪; ೩೩ರ ಮುಂದಕ್ಕೆ.
೩೨೯
೩೩೦ ಭಾರತೀಯ ಕಾವ್ಯವಿಸಮಾಂಸೆ
ನಾಟ್ಯಕ್ಕೆ ಸಂಬಂಧಪಟ್ಟ ಒಂದೆರಡು ಪದಗಳನ್ನು ಬಿಟ್ಟರೆ, ಭರತನ
ವಿವರಣಿ ಪಾನೀಯ, ಭೋಜನ ಮೊದಲಾದ ಪ್ರಿಯ ದೃಷ್ಟಾ೦ತಗಳನ್ನೊಳ
ಕೊಂಡು ಸುಲಭವಾಗಿ ಮನಸ್ಸಿಗೆ ಪಿಡಿಯುವಂತೆ ತೋರಿದರೂ ಅದರ
ಅಭಿಪ್ರಾಯ ಇಷ್ಟೇ ಸರಿಯೆಂದು ಖಚಿತವಾಗಿ ಹೇಳುವುದು ಕಪ್ಪ.
ವ್ಯಾಖ್ಯಾಕಾರರ ಬುದ್ಧಿವ್ಯಾಪಾರಕ್ಕೆ ಅಮಿತವಾದ ಅವಕಾಶವನ್ನು ಕೊಡ
ಲೆಂದೇ ಭರತಮುನಿ ಪೀಗೆ ಸ್ಫುಟಾಸ್ಫುಟವಾಗಿ ಬರೆದನೇನೋ ಎನ್ನಿಸು
ತ್ತದೆ. ವಿಭಾವಗಳು, ಅನುಭಾವೆಗಳು, ಸಂಚಾರಿಭಾವಗಳು, ಸ್ಥಾಯಿ
ಭಾವ, ರಸ: ಇಲ್ಲಿ ಪ್ರಸಕ್ತವಾಗಿರುವ ಪದಾರ್ಥಗಳು ಇಷ್ಟು . ಇವುಗಳಲ್ಲ
ಒಂದಕ್ಕೊಂದಕ್ಕೆ ಇರುವ ನಿಪ್ಕೈಪ್ಪವಾದ ಸಂಬಂಧವೇನು ? ವಿಭಾವಾನು
ಭಾವ ಸಂಚಾರಿಭಾವಗಳನ್ನೇನೋ ಒಂದು ಉಂಡೆಯಾಗಿ ಒಟ್ಟಿಗೆ ಗಣಿಸ
ಬಹುದು. ಇವು ತಮ್ಮೊಳಗೇ ಸಂಯೋಗಹೊಂದಿ ರಸವನ್ನುಂಟುಮಾಡು
ತ್ತವೆಯೆ ? ಅಥವಾ ಸ್ಥಾಯಿಭಾವದೊಡನೆ ಕೂಡಿ ರಸವನ್ನುಂಟುಮಾಡು
ತ್ತ್ರಷೆಯೆ? ಭರತೆನ ವಿವರಣಿಯಲ್ಲ ಸ್ಕಾಯಿಭಾವದ ಹೆಸರು ಮತ್ತೆ ಮತ್ತೆ
ಬಂದರೂ ಮೂಲಸೂತ್ರದಲ್ಲ ಕಾಣಿಸುವುದೇ ಇಲ್ಲವಲ್ಲಾ ? ಈ ಸ್ಥಾಯಿ
ಭಾವ ಯಾರದು, ಎಲ್ಲರುತ್ತದೆ? ಇದಕ್ಕೂ ರಸಕ್ಕೂ ಸಂಬಂಧವೇನು
ವ್ಯತ್ಯಾಸವೇನು 1 ರಸ ಹೊಸದಾಗಿ ಹುಟ್ಟುತ್ತದೆಯೋ, ಇದ್ದದ್ದೇ ಕಾಣಿ
ಸಿಕೊಳ್ಳುತ್ತದೆಯೋ 2 --ಈ ಮೊದಲಾದ ಅನೇಕ ಪ್ರಶ್ನೆಗಳು ಉದಿಸುತ್ತವೆ-
ಇವನ್ನೆಲ್ಲಾ ಭರತನು ಪರ್ಯಾಲ್ಲೋಚಿಸಿದ್ದನೆಂದು ನಂಬುವುದೇ ಮೊದಲು
ಕಪ್ಪ. ಅವನ ಸೂತ್ರದಲ್ಲರುವೆ “ಸಂಯೋಗ”, "“ನಿಪ್ಪತ್ತಿ” ಎಂಬ ಶಬ್ದ
ಗಳಿಗೆ ಅನೇಕ ರೀತಿಯಾಗಿ ಅರ್ಥಮಾಡುವುದು ಸಾಧ್ಯ. ಆದಕಾರಣ,
ಭರತನ ಮನೋಗತವನ್ನು ಹೊರಗೆಡಹುವೆವೆಂದು ಹೊರಟು ನಮ್ಮ ಕಲ್ಪನೆ
ಗಳನ್ನು ಅವನಿಗೆ ಆರೋಪಿಸುವ ಗೋಜಿಗೆ ಹೋಗದೆ ಅವನು ಒಡ್ಡಿದ
ಒಗಟೆಯನ್ನು ಪ್ರಾಚೀನ ವ್ಯಾಖ್ಯಾನಕಾರರು ಹೇಗೆ ಹೇಗೆ ಬಿಡಿಸಿರುವರೆಂಬು
ದನ್ನು ಗಮನಿಸೋಣ.
ಅಭಿನವಗುಪ್ತನಿಗೆ ಹಿಂದೆಯೇ ಅನೇಕಮಂದಿ ಇದಕ್ಕೆ ಕೈಹಾಕಿ
ದ್ವರು; ರಸನಿಷ್ಟತ್ತಿಯನ್ನು ಬಗೆಬಗೆಯಾಗಿ ವಿವರಿಸಿದ್ದರು. ಆದರೆ
ಇವರಲ್ಲಿ ಭಟ್ಟಲೊಲ್ಲಟ, ಶ್ರೀ ಶಂಕುಕ, ಭಟ್ಟನಾಯಕ ಈ ಮೂವರ ಅಭಿ
3 ಧೈನ್ಯಾ, ಲೋಚನ, ಪು. ೬೯ ನೋಡಿ.
೨೧. ರಸಾನುಭವ೧ ೩೩೧
ಪ್ರಾಯಗಳು ಮಾತ್ರ, ಅವು ಕೂಡ "ಅಭಿನವಭಾರತಿ' ಯ ಸಹಾಯ
ದಿಂದಲೇ, ಕೆಲವುಮಟ್ಟಿಗೆ ತಿಳಿಯಬರುತ್ತವೆ. ತಂಕುಕನ ವಾದವನ್ನು ಭಟ್ಟ
ತೌತನು ಖಂಡಿಸಿದ್ದನೆಂದೂ ಇದೇ ಬಗೆಯಾಗಿ ಗೊತ್ತಾಗುತ್ತದೆ. ಆದರೆ
ತೌತನ ಸ್ವಂತ ವಿವರಣೆ ಏನೆಂಬುದನ್ನು ಅವನ ಶಿಪ್ಯನು ನಿರೂಪಿಸಿಲ್ಲ. ಅಭಿ
ನವಗುಪ್ತನಿಂದ ಈಚೆಗೆ ಬಂದ ಲಾಕ್ಷಣಿಕರೆಲ್ಲ ಮುಖ್ಯವಾಗಿ ಅವನ ಬರೆವಣಿಗೆ
ಯನ್ನೇ ಆಧಾರವಾಗಿಟ್ಟುಕೊಂಡು ಲೊಲ್ಲಟಾದಿಗಳ ಮತಗಳನ್ನು ನಿರೂಪಿ
ಸುತ್ತಾರೆ; ಅಪ್ಟೇ ಅಲ್ಲದೆ ಅವುಗಳ ಮೇಲೆ ಆಕ್ಷೇಪ ಪ್ರತ್ಯುಕ್ತಿಗಳನ್ನು ಜೆಳ
ಸಿರುವುದೂ ಉಂಟು. ಇವರೆಲ್ಲರೂ ಈಪಿಂದಿನವರ ಗ ಸಂಥಗಳನ್ನು ಸಾಕ್ಷಾ
ತ್ತಾಗಿ ನೋಡಿದ್ದರೇ, ಅಥವಾ ಚರ್ಚೆಯ ವಿಸ್ತಾರಕ್ಕೆ ಸ್ವಬುದ್ಧಿಯನ್ನೇ
ಮುಖ್ಯವಾಗಿ ಅವಲಂಬಿಸಿದರೇ ಎಂದು ಸಂದೇಪಿಸುವುದಕ್ಕೂ ಅವಕಾತ
ವಿದೆ. ಈ ಎಲ್ಲ ವಿವರಗಳಿಗೂ ಇಲ್ಲಿ ಸ್ಥಳವಿಲ್ಲ. ಲೊಲ್ಲಟಾದಿಗಳ ವಾದದ
ಸಾರವನ್ನೂ, ಅಲ್ಲ ಏಳುವ ಮುಖ್ಯವಾದ ಆಕ್ಷೇಪಣಿಗಳನ್ನೂ ಸಂಗ್ರಹ
ವಾಗಿ ಸೂಚಿಸಿ ಅಭಿನವಗುಪ್ತನ ಕಡೆಗೇ ತಿರುಗಬೇಕಾಗುತ್ತದೆ.
) ರಂಗಭೂಮಿಯ ಮೇಲೆ ನಾಟಕಾಭಿನ ಸುವಾಗ:ತ್ತಿ ರುವಾಗ ಸಾಮಾ
ಜಿಕನು ಅದನ್ನು ನೋಡುತ್ತಾ ಕುಳಿತಿರುತ್ತಾನೆ. ಇವನಿಗೆ ರಸಾನುಭವ
ಹೇಗೆ ಉಂಟಾಗುವುದೆಂಬುದೇ ಇವರೆಲ್ಲರೂ ವಿಚಾರಮಾಡುವ ಮುಖ್ಯ
ವಿಷಯ. (ಇದನ್ನೇ ಕಾವ್ಯವನ್ನು ಓದುವಾಗ ಬರುವ ರಸಾನುಧವಕ್ಕೂ
ಯಥೋಚಿತವಾಗಿ ಅನ್ಯಯಿಸಿಕೊಳ್ಳಬಹುದು). ಇಲ್ಲ ಗಣನೆಗೆ ವಿಷಯವಾ
ಗಿರುವ ವ್ಯಕ್ತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು : (೧)
ಕಥಾಪುರುಷರಾದ ರಾಮ, ಸೀತೆ, ಶಕುಂತಲೆ, ದುಪ್ಯಂತ ಮೊದಲಾದವರು.
ಇವರು ನಮ್ಮ ಕಣ್ಣಮುಂದೆ ಈಗ ಇಲ್ಲ. ಕಥೆಯಲ್ಲ ಚಿತ್ರಿಸಿರುವ ರೀತಿ
ಯಲ್ಲಿ ಹಿಂದೆ ಎಂದಾದರೂ ಇದ್ದರೇ, ಅದೇ ರೀತಿ ವರ್ತಿಸಿದರೇ ಎಂಬುದೂ
ಸಂಶಯಾಸ್ಪದ ಮತ್ತು ಅಪ್ರಕೃತ. "ಮೃಚ್ಛಕಟಿಕ 'ಪೇ ಮೊದಲಾದ ಕಲ್ಪಿತ
ಕಥೆಗಳ ಅನೇಕ ಪಾತ್ರಗಳಂತೂ ಹುಟ್ಟಿ ಬಾಳಿದ್ದ ಸಂಭವ ಅತ್ಯಲ್ಪ. ಆದರೆ
ಇವರೆಲ್ಲರ ಹೆಸರುಗಳು ಮತ್ತೆ ಮತ್ತೆ ಕೇಳಿಬರುತ್ತವೆ ; ಇವರ ನಡೆವಳಿಕೆ
ಗಳೆಂದು ಚಿತ್ರಿತವಾಗಿರುವ ಸಂಗತಿಗಳು ಅಭಿನಯದ ಉದ್ದಕ್ಕೂ ಕಾಣಬರು
ತ್ತವೆ... ಈ ವ್ಯಕ್ತಿಗಳಿಗೆ ""ಅನುಕಾರ್ಯ''ರೆಂದು ಸಂಜ್ಞೆ. ಏಕೆಂದರೆ,
ಇ
ಇವರ ಚರೈಗಳನ್ನೇ ನಟರು ಅನುಕರಣಮಾಡುವುದು, ಪ್ರದರ್ಶಿಸುವುದು.
೩೩೨ ಭಾರತೀಯ ಕಾವ್ಯಮಾಮಾಂಸೆ
1೨) "' ಅನುಕಾರ್ಯ ''ರೆಂದು ತಮ್ಮನ್ನು ಕರೆದುಕೊಳ್ಳುತ್ತಾ ಅದಕ್ಕೆ ತಕ್ಕಂತೆ
ವೇಷ ಧರಿಸಿ ರಂಗಭೂಮಿಯ ಮೇಲೆ ಸಾಕ್ಷಾತ್ತಾಗಿ ಓಡಾಡುವ ನಜನಟಿ
ಯರು: ಇವರು "" ಅನುಕರ್ತ ''ರು, (೩) ನಾಟಕಾಭಿನಯವನ್ನು
ನೋಡುತ್ತಾ ಕ-೪೩ರುವ ಸಾಮಾಜಿಕರು, ಪ್ರೇಕ್ಷಕರು. ರಸಾನುಭವ
ಕೈಂದೇ ನಾಟಕ ಮಂದಿರಕ್ಕೆ ಬರುವವರು ಈ ಮೂರನೆಯ ವರ್ಗದವರು. !
"" ವಿಭಾವಾನುಭಾವವ್ಯಭಿಚಾರಿಸಂಯೋಗಾದ್ರಸನಿಪ್ಪತ್ತಿ8'' ಎಂಬು
ದಕ್ಕೆ ಲೊಲ್ಲಟನ * ಮತದಂತೆ ಅರ್ಥ ಹೀಗಾಗುತ್ತದೆ: ಸೂತ್ರದಲ್ಲಿ
""ಸ್ಥಾಯಿಧಾವಕ್ಕೆ'' ಎಂಬ ಪದ ಇಲ್ಲ. ಅದನ್ನು ಮೊದಲು ಅಧ್ಯಾಹಾರ
ಮಾಡಿಕೊಳ್ಳಬೇಕು. ವಿಭಾವ ಅನುಭಾವ ಸಂಚಾರಿಭಾವಗಳೊಡನೆ.
ಸ್ಲಾ ಯಿಭಾವಕ್ಕೆ ಸಂಯೋಗವಾಗಿ ರಸವು ನಿಷ ಎನ್ನವಾಗುತ್ತ ಭನ ವದು
ಹೇಗೆಂಬುದನ್ನು ವಿಶದಪಡಿಸಲು ಶೃಂಗಾರರಸದ ನಿದರ್ಶನವನ್ನೇ ತೆಗೆದು
ಕೊಳ್ಳೋಣ. ಕಹಾನಾಯಿಕೆಯೆಂಬ ಆಲಂಬನವಿಭಾವ, ಉದ್ದಾನ ಜೆಳು
ದಿಂಗಳು ಮೊದಲಾದ ಉದ್ಧೀಪ-ವಿಧಾವಗಳ.... ಇವುಗಳಿಂದ ಕಥಾನಾ
ಯಕನಲ್ಲ ರತಿಸ್ಕಾಯಿಭಾವವು ಉದ್ದವವಾಗುತ್ತ ದೆ. (ಈ ಮಾತುಗಳನ್ನೇ
ಕಥಾನಾಯಿಕೆಗೂ ಯಥೋಚಿತವಾಗಿ ಅನ್ವಯಿಸಿಕೊಳ್ಳಬೇಕು.) ಕಡೆಗಣ್ಣ
ನೋಟ, ಮಂದಗಮನ ಪೊದರಾದ ಅನುಭಾವಗಳಿಂದ ಈ ಸ್ಥಾಯಿ
ಭಾವ ಗಮ್ಯವಾಗುತ್ತ ದೆ. ಔತ್ನುಕ್ಯ, ನಿರ್ವೇದ, ಹರ್ಷ ಮೊದಲಾದ
ಸಂಚಾರಿಭಾವಗಳಿಂದ ಅದು ಪುಷ್ಕಿಗೊಳ್ಳುತ್ತದೆ. ಈ ರೀತಿಯಾಗಿ ವಿಧಾ
ವಾನುಭಾವ ಸಂಚಾರಿಭಾವಗಳಿಂದ ""ಉಪಚಿತ'' ವಾದ ಸ್ಕಾಯಿಭಾವವೇ
ರಸ್ತೇ ಹೀಗೆ ಉದಿಸಿ ಪುಷ್ಟಿಹೊ೦ದುವುದು ಅನುಕಾರ್ಯನ ಸ್ಥಾ ಯಿಭಾವ
ಇವರ ಜೊತೆಗೆ ನಾಟಕರಚನೆವಾಡಿದ ಕವಿಯ ಹೆಸರನ್ನೂ ನಾಲ್ಕನೆಯದಾಗಿ
ಸೇರಿಸಬೇಕಾದದ್ದು ನ್ಯಾಯ. ಆದರೆ ನಾಟಕದ ಪ್ರಸ್ತಾವನೆಯೊಂದನ್ನು ಬಹುಶಃ ಬಟ್ಟರೆ
ಅವನ ಹೆಸರು ಎಲ್ಲಿಯೂ ಕಿವಿಗೆ ಬೀಳುವುದಿಲ್ಲ. ಅವನ ಸ್ವಂತ ಸುಖದುಃಖಗಳು ನಾಟಕಾ
ಭಿನಯಕಾಲದಲ್ಲ ನಮಗೆ ಪ್ರಕೃತವೂ ಅಲ್ಲ ಅವನ ವಿಷಯವನ್ನು ಈಗ ಎತ್ತದೆ, ಅವ
ನಿಗೆ ರಸಾನುಭವವುಂಟೇ ಹೇಗೆ ಎಂಬುದನ್ನು ಈ ಚರ್ಚೆಯ ಕೊನೆಯಲ್ಲ ಗಮನಿಸೋಣ.
5 ಲೊಣ್ಲಟನಂತೆ ಭಾವಿಸ ತಕ್ಕವರು ಅನೇಕರಿದ್ದರು ; ಅವರೆಲ್ಲರಿಗೆ ಪ್ರತಿನಿಧಿಯಾಗಿ
ಲೊಲ್ಲಟನ ಹೆಸರನ್ನು ಇಲ್ಲ ಸ್ವೀಕರಿಸಿದೆ. ಲೊಲ್ಲಟನು ಭರತನ ನಾಟ್ಯಶಾಸ್ತ್ರಕ್ಕೆ ವ್ಯಾಖ್ಯಾನ
ಬರೆಯುವಾಗ ಈ ಮತವನ್ನು ಪ್ರತಿಪಾದಿಸಿದ್ದರಿಂದ ಅವನಿಗೆ ಹೀಗೆ ಪ್ರಾಮುಖ್ಯ ಕೊಡು
ಪುದು ಉಚಿತವೂ ಹೌದು.
6 ತನ ಸ್ಮಾಯೈೇವ ವಿಭಾವಾನುಭಾವಾದಿಭಿರುಪಚಿತೋ ರಸಃ” (ಅಭಿನವ
ಭಾರತೀ, 1, ಪು. ೨೭೪.)
೨೧. ರಸಾನುಭವ--೧ ೩೩೩
ವಷ್ಟೆ ; ಆದಕಾರಣ ಅದರ ಪ್ರಕರ್ಪರೂಪವಾದ ರಸವೂ ಮುಖ್ಯವಾಗಿ
ಅವನಲ್ಲೇ ಇರುತ್ತದೆ. ಈ ಅನುಕಾರ್ಯನ ಪಾತ್ರವನ್ನು ಧರಿಸಿದ ನಟನು
ತನ್ನ ಕೌಶಲದಿಂದ ಅವನಂತೆಯೇ ಕಾಣಬರುವುದರಿಂದ ಇವನಲ್ಲಿಯೂ
ರಸವು ತೋರುತ್ತದೆ.
ಸ್ಥಾ ಯಿಭಾವವೇ ಪ್ರಕರ್ಷಸ್ಥಿ ತಿಯಲ್ಲಿ ರಸವಾಗುವುದೆಂಬ ಅಭಿ
ಪ್ರಾಯ ಲೊಬ್ಗಟನಿಗಿಂತ ಹಿಂದಿನಿಂದಲೂ ಇತ್ತು. *" ಚಿರಂತನಾನಾಂ ಚ
ಅಯಮೇವ ಪಕ್ಷಃ'' ಎಂದು ಅಭಿನವಗುಪ್ತನು ಹೇಳಿ, ಇದಕ್ಕೆ ನಿದರ್ಶನ
ವಾಗಿ ದಂಡಿಯ ಈ ಎರಡು ವಾಕ್ಯಗಳನ್ನು ಉದಾಹರಿಸುತ್ತಾನೆ :
““ ರತಿಃ ಶೃಂಗಾರತಾಂ ಗತಾ! ರೂಪದಾಹುಲ್ಯಯೋಗೇನ'' (ಕಾವ್ಯಾ
ದರ್ಶ, ;;. ೨೮೧) "" ಅಧಿರುಹ್ಯ ಪರಾಂ ಕೋಟಿಂ ಕೋಪೋ ರೌದ್ರಾ
ತೃತಾಂ ಗತಃ |`' (ಕಾವ್ಯಾದರ್ಶ, |. ೨೮೩). ಸ್ಥಾಯಿಭಾವವೇ
ಹೆಚ್ಚಾ ಗಿ ಉಕ್ಕಿ ಪುಪ್ಪಿಹೊಂದಿ ಉಜ್ಜ್ವಲವಾಗಿ ರಸವಾಗುವುದೆಂದು
ಇಲ್ಲಿಯ ಆಶಯ. ಕನ್ನಡದ ಪ್ರಾಚೀನ ಕವಿಗಳಿಗೂ ಇದೇ ಅಭಿಪ್ರಾಯ
ಎದ್ದಿತು. ಉದಾಹರಣೆಗೆ, ರನ್ನನ "ಗದಾಯುದ್ಧ 'ದಲ್ಲ, ಸಂಜಯನು
ದುರ್ಯೋಧನನಿಗೆ * ನವರಸಮನಭಿನವರಸಂಮಾಡಿ '' ತೋರಿಸಿದ್ದರ
ವರ್ಣನೆಯನ್ನು (iv. ೨೩-೩೧) ಗಮನಿಸಬಹುದು. ಇಲ್ಲೆ ಲ್ಲಾ,
ರಸವಿರತಕ್ಕದ್ದು ಮುಖ್ಯವಾಗಿ ಕಥಾಪುರುಷರಲ್ಲಯೇ ಎಂಬ ಅಭಿಪ್ರಾಯ
ಸ್ಫುಟವಾಗುತ್ತದೆ.
ಲೊಲ್ಲಟನ ವಾದದಂತೆ, ಭರತಸೂತ್ರದ “ ಸಂಯೋಗ” ಎಂಬ
ಶಬ್ದ ಕ್ಕೆ ಅರ್ಥಮಾಡುವಾಗ, ಸ್ಥಾ ಯಿಧಾವಕ್ಕೆ ವಿಭಾವಗಳೊಡನೆ ಜನ್ಯ
ಜನಕಧಾವ'' ಎಂದೂ, ಅನುಭಾವಗಳೊಡನೆ ""ಗಮ್ಯಗಮಕಭಾವ'' ಎಂದೂ
ಸಂಚಾರಿ ಭಾವಗಳೊಡನೆ "" ಪೋಪ್ಯಪೋಪಕಭಾವ'' ಎಂದೂ ಅನ್ವಯಿಸಿ
ಕೊಳ್ಳಬೇಕು; ಇದರಂತೆಯೇ 6 ನಿಪ್ಪತ್ತಿ'' ಎಂಬುದಕ್ಕೆ ಕ್ರಮವಾಗಿ
ಕೆ
7 ರಸವದಲಂಕಾರದ ನಿರೂಪಣೆಯಲ್ಲಿ ಎಲ್ಲ ರಸಗಳನ್ನು ಕುರಿತೂ ದಂಡಿ ಈ ಬಗೆಯ
ಮಾತುಗಳನ್ನೇ ಉಪಯೋಗಿಸುತ್ತಾನೆ. ಮೇಲಿನ ಎರಡರ ಜೊತೆಗೆ, '" ಇತ್ಯುತ್ಸಾಹಃ
ಪ್ರಕೃಷ್ಟಾತ್ಮಾ ತಿಷ್ಮನ್ ವೀರರಸಾತ್ಮನಾ '' (|. ೨೮೫) ಎಂಬುದನ್ನೂ ಉದಾಹರಿಸ
ಬಹ'ದು.
8 ಅರೆಬರ್ ಕನ್ನಡಿಸಿದರ್ ಭಯಾನಕರಸಮಂ'', ""
ees
Re ನಿಂದುದವರ್ಗ
ಳೊಳ್ ಶಾಂತರಸಂ ''--ಈ ರೀತಿಯಾಗಿ ಭಟರನ್ನು ಸಂಜಯನು ವರ್ಣಿಸುತ್ತಾನೆ.
೩೩೪ ಭಾರತೀಯ ಕಾವ್ಯಮಾಮಾಂಸೆ
ಉತ್ಪತ್ತಿ, ಜ್ಯಪ್ಪಿ, ಪುಷ್ಟಿ ಎಂದು ಅರ್ಥಮಾಡಬೇಕು : ಪೀಗೆಂಬುದಾಗಿ
ಈಚಿನ. ವ್ಯಾಖ್ಯ ಸಕಾರರು ನಿಷ್ಕರ್ಷಿಸುತ್ತಾರೆ. ಈ ಸೂಕ್ಷ್ಮವನ್ನೆಲ್ಲಾ
ಚು ಹೇಳಿದ್ದನೋ ಇಲ್ಲವೋ ತಿಳಿಯದು. ಲೋಕದಲ್ಲಿ ಸ್ಮಾಯಿ
ಭಾವವು ಸಾಮಾನ್ಯವಾಗಿ ಪ್ರಕರ್ಷಾವಸ್ಥೆಯಲ್ಲರುವುದಿಲ್ಲ; ಆದಕಾರಣ,
ಅದು ಇರುವಂತೆಯೇ ತೋರುವುದಿಲ್ಲ. ನಾಟ್ಯದಲ್ಲಾದರೆ ವಿಧಾವಾನು
ಭಾವ ಸಂಚಾರಿಗಳು ಅತಿಶಯರೂಪದಲ್ಲ ಬರುವುದರಿಂದ ಸ್ಕಾಯಿಭಾವವು
ಅನುಕಾರ್ಯರಲ್ಲ ಶಿಖರಕ್ಕೇರುತ್ತದೆ ; ರಸವಾಗುತ್ತದೆ. ಅದನ್ನು ಸಾಮಾ
ಜಿಕರು ಅರಿತು ಆನಂದಿಸುತ್ತಾರೆ.---ಎಂಬುದಿಷ್ಟೇ ಲೊಲ್ಲಟನ ವಾದದ
ಸಾರವಾಗಿರಬಹುದು.
ಈ ಮತದ ಮೇಲೆ ಆಕ್ಷೇಪಣಿಗಳನ್ನು ಹೂಡುವುದು ಸುಲಭ.
“ ಉಪಚಯ'' ಎಂದರೆ ಪುಷ್ಟಿ, ಪ್ರಕರ್ಷ, ಈ ಪುಷ್ಟಿಯಲ್ಲಿನ ತಾರತಮ್ಯ
ಗಳಿಗೆ ಅನುಸಾರವಾಗಿ ಒಂದೊಂದು ರಸದಲ್ಲೂ ಹಲವು ಭೇದಗಳುಂಟಾಗ
ಬೇಕಾದೀತು. ಇನ್ನೊಂದು ವಿಷಯ. ರತಿಯೇ ಮೊದಲಾದ ಕೆಲವು
ಸ್ಥಾಯಿಭಾವಗಳು ಕಾಲಕ್ರಮದಲ್ಲ ಪುಷ್ಟಿಗೊಳುತ್ತವೆ; ಆದರೆ ಶೋಕ,
ಕ್ರೋಧ ಮೊದಲಾದವು ಮೊದಲಲ್ಲ ತೀವ್ರವಾಗಿದ್ದು ಆ ಬಳಿಕ ಮಂದ
ವಾಗಬಹುದಲ್ಲವೆ? ಇಲ್ಲಿ ರಸಪುಷ್ಚಿ ಹೇಗೆ? ಈ ಬಗೆಯ ಖಂಡನೆಗೆ
ಶಂಕುಕನೇ ಮೊದಲು ವಇಡಿದನು. ಆದರೂ ಈ ಆಕ್ಷೇಪಣಿಗಳಿಗೆ
ಒಂದು ರೀತಿಯಲ್ಲಿ ಉತ್ತರ ಕೊಡುವುದು ಅಸಾಧ್ಯವಲ್ಲ. ಎಲ್ಲಕ್ಕೂ
ಮುಖ್ಯವಾದ ಆಕ್ಷೇಪಣಿ ಬೇರೆ ಇದೆ. ಲೊಲ್ಲಟನ ವಿವರಣಿ ಅಸಮರ್ಪಕ
ಫು ಸಾರತಕ್ಕದ್ದು ಇದು :
ಅನುಕಾರ್ಯರಾದ ಕಥಾಪುರುಷರಲ್ಲೂ, ಅವರನ್ನು ಅನುಕರಣ
ಮಾಡಿ ಅನುಸಂಧಾನ ಬಲದಿಂದ ಅವರಂತೆಯೇ ಭಾಸವಾಗುವ ನಟ
ನಟಿಯರಲ್ಲೂ ರಸವಿರುವುದಾದರೆ, ಇವರ ಕಾರ್ಯಗಳನ್ನು ನೋಡುತ್ತಾ
ಮಾತುಗಳನ್ನು ಕೇಳುತ್ತಾ ದೂರದಲ್ಲ ಸುಮ್ಮನೆ ಕುಳಿತಿರುವ ಸಾಮಾಜಿಕ
ನಿಗೆ ಈ ರಸದ ಅನುಭವ ಒದಗುವುದು ಹೇಗೆ?--ಇದೇ ತಾನೆ ಮುಖ್ಯ
ತಮವಾದ ಪ್ರಶ್ನೆ. ಇಲ್ಲಿ ಸಾಮಾಜಿಕನು ತಟಸ್ಥ; ಕಥಾವೃಕ್ತಿಗಳೂ
೨
ನಟನಟಿಯರೂ ಅವನಿಗೆ ಪರಕೀಯರು. ಅವರಲ್ಲಿ ಪ್ರೀತಿ, ಶೋಕ
*ಕಾವ್ಯಪ್ರಕಾಶ, ತಿರುವೇಂದ್ರಂ ಮುದ್ರಣ, ಪು. ೧೦೪-೫ (ವ್ಯಾಖ್ಯಾನ).
೨೧. ರಸಾನುಭವ-.೧ ೩೩೫%
ಮೊದಲಾದವು ಉತ್ಕ ಟಾವಸ್ಸೆ ಯಲ್ಲಿಷೆಯೆ೦ಂದೇ ಅಂಗೀಕರಿಸೋಣ. ಅವ
ರಲ್ಲಿ ಅವು ಉಂಟೆಂದು ತಿಳಿದ ಮಾತ್ರಕ್ಕೆ ಇವನಿಗೆ ಆಹ್ಲಾ ದವುಂಟಾಗು
ವುದು ಹೇಗೆ? ಲೊಲ್ಲಟನ ವಾದದಂತೆ, ನಟನಟಿಯರು ನಿಜವಾದ ದುಷ್ಯಂತ
ತಶಕುಂತಲೆಯರೆಂದೇ ಆ ಘಳಿಗೆಯ ಮಟ್ಟಿಗಾದರೂ ಸಾಮಾಜಿಕನು
ಭಾವಿಸುತ್ತಾನೆ, ಭ್ರಮಿಸುತ್ತಾನೆ. ಲೋಕದ ಪರಿಸ್ಥಿತಿಗೂ ನಾಟ್ಯಕ್ಕೂ
ಸ್ಥಾಯಿಭಾವದ ಪ್ರಕರ್ಷವೊಂದರಲ್ಲ ಮಾತ್ರ ಭೇದವಿರುವ ಪಕ್ಷಕ್ಕೆ, ನಾಟ್ಯ
ದರ್ಶನದಿಂದ ಅವನು. ಅನಂದಪಟ್ಟರೆ, ಲೋಕದಲ್ಲಿ ಇಂಥ ದೃಶ್ಯವನ್ನು
ನೋಡಿದಾಗಲೂ ಅದೇ ಬಗೆಯಾಗಿ ಆನಂದಪಡಜೇಕಾಯಿತು. ಆದರೆ
ನಿಜವಾದ ಸಂಗತಿಯೇನು? ಲೋಕದಲ್ಲಿ ಇಬ್ಬರು ಪ್ರಣಯಿದಳು ಪ್ರೀತಿ
ಯಿಂದ ವರ್ತಿಸುವುದನ್ನು ನೋಡಿದಾಗ ತಟಸ್ಥನಿಗೆ ಯಾವ ಅನುಭವ
ಬರುತ್ತದೆ? ಅವನು ಸಭ್ಯನಾಗಿದ್ದರೆ ಆ ಕಡೆ ಗಮನೆಕೊಡದೆ ಮುಖತಿರುಗಿಸಿ
ಕೊ೦ಡು ಹೊರಟು ಹೋಗುತ್ತಾ ಪಿ, ಚಪಲನಾಗಿದ್ದರೆ ಬಹುಶಃ ಅಸೂಯೆ
ಪಡುತ್ತಾನೆ. ಹೀಗೆಯೇ ಒಬ್ಬರ ಶೋಕವನ್ನು ಲೋಕದಲ್ಲ ನೋಡಿದಾಗ
ಕನಿಕರಪಟ್ಟು ಸಹಾಯಮಾಡಲು ಮುಂದುವರಿಯುತ್ತಾನೆ ; ಇಲ್ಲವೇ,
ಕಂಡರೂ ಕಾಣದು ಈ ಶೈಕಟವಾಗಿ ದೇಸರವನ್ನು ತೋರಿಸಿಯೋ,
ಜಾರಿಬಿಡುತಾನೆ. ನಾಟಕದಲ್ಲಿ ಪ್ರೇಮದ, ಶೋಕದ ಸನ್ನಿವೇಶಗಳನ್ನು
ನೋಡಿದಾಗ ಈ ಬಗೆಯ ಪ್ರವೃತ್ತಿ ಸಾಮಾಜಿಕನಿಗೆ ಇರುವುದಿಲ್ಲ. ಅವನು
ಯಾವ ಬಗೆಯ ಕಾರ್ಯವನ್ನೂ ಕೈಕೊಳ್ಳದೆ, ಒಂದು ವಿಶೇಷ ರೀತಿಯ.
ತನ್ಮಯತೆಯಿಂದ ಆಹ್ಲಾದವನ್ನು ಪಡೆಯುತ್ತಾನೆ. ಇದು ಹೇಗೆ ಎಂಬ್ಬು
ದರ ) ವಿವರಣ ಲೊಲ್ಲಟನ ವಾದದಲ್ಲ ದೊರೆಯುವುದಿಲ್ಲ.
ಇನ್ನೊಂದು ವಿಷಯವೂ ಅಲ್ಲ ಸ್ತು ಟವಾಗುವುದಿಲ್ಲ. ಅನುಕಾರ್ಯ.
ನಲ್ಲಿ ಸಾಕ್ಷಾತ್ತಾಗಿ, ದಿಟವಾಗಿ, ಇರುವ ರಸವು ಅನುಕರ್ತನಾದ ನಟ
ನಲ್ಲಿಯೂ ಕಾಣಿಸಿಕೊಳ್ಳುತ್ತದೆ ಎಂದು ಲೊಲ್ಲಟನು ಸುಮ್ಮನೆ ಹೇಳಿ
ಬಿಟ್ಟನು. ಇದು ಹೇಗಾಗುತ್ತದೆ; ಕಥಾಪುರುಷನಿಗೂ ನಟನಿಗೂ ಇರುವ
ಸಂಬಂಧದ ಸ್ವರೂಪವೇನು-ಈ ಮೊದಲಾದ ವಿಷಯಗಳನ್ನು ಶಂಕುಕನು
ಹೆಚ್ಚು ಕೌಶಲದಿಂದ ನಿರೂಪಿಸಿದನು. ಒ೦ದು ಉದಾಶರಣಿಯನ್ನು ತೆಗೆದು
ಕೊಳ್ಳೋಣ. ರಾಮನು ಕಥಾಪುರುಷ. ಅವನ ಹೆಸರನ್ನೂ ವೇಷವನ್ನೂ
ತಾಳಿ ಸಟನು ರಂಗಸ್ಥಳಕ್ಕೆ ಬಂದು ಅಭಿನಯಿಸುತ್ತಾನೆ. ಇವರಿಬ್ಬರ
೩೩೬ ಭಾರತೀಯ ಕಾವ್ಯಮಾಮಾಂಸೆ
ಸಂಬಂಧ ಏನೆಂದು ಸಾಮಾಜಿಕನಿಗೆ ಅರಿವಾಗುತ್ತದೆ? ಇಲ್ಲಿ (೧)
“ ರಾಮನೇ ಇವನು'' ಎಂದಾಗಲಿ, « ಇವನೇ ರಾಮ'' ಎಂದಾಗಲಿ
ನಿಶ್ಚಿತ ಜ್ಞಾ ನವಿರುವುನಿಲ್ಲ. “ರಾಮನೇ ಇವನು” ಎಂದರೆ, ಇವನು
ಯಾವಾಗಲೂ ರಾಮನಾಗಿರುವನೇ ಹೊರತು ಜೇರೊಬ್ಬನಾಗಿರುವೆದಿಲ್ಲ
ಎಂದು ಅರ್ಥ; “ಇವನೇ ರಾಮ” ಎಂದರೆ ಇವನಲ್ಲದೆ ಬೇರೆ ಯಾರೂ
ರಾಮನಲ್ಲ ಎಂದು ಅರ್ಥ : ಈ ಎರಡು ಬಗೆಯ ತಿಳಿವಳಿಕೆಯೂ ನಟನ
ವಿಷಯದಲ್ಲಿ ಸಾಮಾಜಿಕನಿಗೆ ಹುಟ್ಟುವುದಿಲ್ಲ. (೨) ಪೀಗೆಂದ ಮಾತ್ರಕ್ಕೆ
ಇದು ಮಿಥ್ಯಾಜ್ಞಾ ನವಲ್ಲ. ಮಿಥ್ಕಾಜ್ಞಾ ನವಾಗಿದ್ದಲ್ಲ, ಮೊದಲು “ಇವನೇ
ರಾಮ ನೆಂಬ ನಂಬಿಕೆ ಬಂದು, ಬಳಿಕ ಪ್ರಮಾಣಾಂತರದಿಂದ “ಇದು
ಸುಳ್ಳು; ಇವನು ರಾಮನಲ್ಲ' ಎಂಬ ನಿಷೇಧವೊದಗುತ್ತಿತ್ತು. ಇಲ್ಲಿ ಈ
ಬಗೆಯ ಭ್ರಮೆ, ಅದರ ನಿರಾಸ ಇವೆರಡೂ ಇಲ್ಲ. (೩) «ಇವನು
ರಾಮನೋ ಅಲ್ಲವೋ” ಎಂದು ನಿರ್ಣಯಿಸಲಾರದೆ ಮನಸ್ಸು ಸಂಶಯ
ಗೊಂಡು ಆ ಕಡೆ ಈ ಕಡ ತೂಗಾಡುವುದೂ ಇಲ್ಲ. (೪) ಕೊನೆಗೆ,
ರಾಮನಿಗೂ ನಟನಿಗೂ ಕೆಲವು ಭಾಗಗಳಲ್ಲಿ ಹೋಲಿಕೆಯನ್ನು (ಉದಾ
ಹರಣಿಗೆ, ಅಣ್ಣತಮ್ಮಂದಿರಿಗೆ ಇರುವಂಥ ಸಾದ್ಯಶ್ಯವನ್ನು) ಕಂಡು «ಇವನು
ರಾಮನ ಹಾಗೆ ಇದ್ದಾ ನೆ” ಎಂಬ ಸಾದೃಶ್ಯಜ್ಞಾ ನವೂ ಹುಟ್ಟು ವುದಿಲ್ಲ.
ಪೀಗೆ ಸಮ್ಯಕ್, ಮಿಥ್ಯಾ, ಸಂಶಯ, ಸಾದೃಶ್ಯ ಎಂಬ ಪ್ರಸಿದ್ಧವಾದ
ನಾಲ್ಕು ಪ್ರಕಾರದ ಜ್ಞಾನಗಳಿಗಿಂತ ವಿಲಕ್ಷಣವಾದ ಬೇರೊಂದು ರೀತಿಯ
ಪ್ರತೀತಿ ಇಲ್ಲಿ ಉಂಟಾಗುತ್ತದೆ. "ಚಿತ್ರ ತುರಗನ್ಯಾಯ ”ವನ್ನು ಇಲ್ಲಿ
ಜ್ಞಾ ಪಿಸಿಕೊಳ್ಳದೇಕು.! (ಚಿತ್ರದ ಕುದುರೆ ಲೋಕದ ಕುದುರೆಯಲ್ಲ. ಆದರೆ
ಚಿತ್ರದ್ದು ಕುದುರೆಯಲ್ಲ ಎಂದೂ ಎನ್ನಿಸುವುದಿಲ್ಲ. ಚಿತ್ರವು ಅಸಮರ್ಪಕ
ವಾಗಿದ್ದರೆ ಮಾತ್ರ, ಇದು ಕುದುರೆ ಹೌದೋ ಅಲ್ಲವೋ ಎಂಬ ಸಂಶಯ
ಹುಟ್ಟುತ್ತಿತ್ತು .. ಇನ್ನು, ಇದು ಕುದುರೆಯಹಾಗಿದೆ ಎಂದು ಹೇಳುವ
ಹಾಗಿಲ್ಲ; ಬೇಕಾದರೆ, ಹೇಸರಗತ್ತೆ ಕುದುರೆಯಂತಿದೆ ಎಂದು ಹೇಳೆ
ಬಹುದು.) ಇದೇ ಬಗೆಯ ಪ್ರತೀತಿಯೇ ನಾಟ್ಕದಲ್ಲಿಯ.ೂ ಹುಟ್ಟ, "ಆ
ರಾಮನು ಈ. ನಟ” ಎಂದು ಸಾಮಾಜಿಕರು ತಿಳಿದುಕೊಳ್ಳುತ್ತಾರೆ.
10 ಶ್ರಂಕುಕನು ಎತ್ತಿ ಹಿಡಿದಿರುವ ಈ ನ್ಯಾಯವನ್ನು ಕಲಾಸಾಮಾನ್ಯಕ್ಕೇ ಅನ್ಬ್ಚಯಿಸ
ಬಹುದು. ಬ್ರಹ್ಮಸೃಷ್ಟಿಗೂ ಕಲಾಸೃಷ್ಟಿಗೂ ಇರುವ ಸಂಬಂಧ ಇದೇ.
೨೧. ರಸಾನುಭವ-೧ ೩೩೭
ಲೋಕದಲ್ಲಿ ಬೇರೆಲ್ಲಿಯೂ ಈ ಸಂಬಂಧ ಗೋಚರವಾಗದ ಮಾತ್ರಕ್ಕೆ
ಇದರ ಅಸ್ತಿತ್ವವನ್ನೇ ನಿರಾಕರಿಸುವುದು ತಪ್ಪು. ಇದು ಅನುಭವಸಿದ್ಧವಾದ
ವಿಷಯ, ಯುಕ್ತ್ವ್ಯಾ ಪರ್ಯನುಯುಶ್ಯೇತ ಸ್ಫುರನ್ನನುಭವಃ ಕಯಾ।''
( ಒಂದು ಅನುಭವ ಸ್ಫುರಿಸಿದಮೇಲೆ ಅದನ್ನು ಯಾವ ಯುಕ್ತಿ ತಾನೆ
ಬಾಧಿಸೀತು ! »')
ನಟನು ಕಾವ್ಯಾನುಶೀಲನ, ಗುರೂಪದೇತ, ಸ್ವಂತ ಅಭ್ಯಾಸ ಇದೆಲ್ಲ
ದರ ಬಲದಿಂದ ಕಥಾಪುರುಷನ ವಿಭಾವಾನುಭಾವಾದಿಗಳನ್ನು ಚೆನ್ನಾಗಿ
ಅನುಕರಣಮಾಡಿ ತೋರ್ಪಡಿಸುತ್ತಾನೆ. ರಂಗದ ಮೇಲೆ ಬರುವ
ನಾಯಿಕೆ ಅವನ ಪ್ರೇಯಸಿಯಲ್ಲ; ಅಲ್ಲಿಯ ಉದ್ಯಾನ ದಿಟವಾದಉದ್ಯಾನ
ವಲ್ಲ ; ನಟನ ಮುಖದ ಮೇಲೆ ಸುಳಿಯುವ ನಗೆಯಾಗಲ, ಅವನ ತುಟ
ಯಿಂದ ಸೂಸುವ ನಿಟ್ಟುಸಿರಾಗಲಿ, ಅವನು ಆಡುವ ಒಲುಮೆಮಾತು
ಗಳಾಗಲಿ ಅವನ ಹೃದಯದ ನೈಜಭಾವದಿಂದ ಹೊಮ್ಮಿದವುಗಳಲ್ಲ. ಎಂದರೆ.
ಇವುಗಳಿಂದ ಸೂಚಿತವಾಗುವ ಸ್ಮಾಯಿಭಾವವೂ ವಸ್ತುತಃ ನಟನಲ್ಲಿರುವು
ದಿಲ್ಲ. ಆದರೆ ಅವನು ಎಷ್ಟು ಕೌಶಲದಿಂದ ಅನುಕರಣ ಮಾಡುತ್ತಾ
ನೆಂದರೆ, ಇದೆಲ್ಲ ಕೃ ತಕಥೆಂದು ಸಾಮಾಜಿಕರಿಗೆ ತೋರುವುದಿಲ್ಲ. ನಟನು
ಕೇವಲ ಅನುಕರಣ ಮಾಡುತ್ತಿರುವ ಸ್ಥಾಯಿಭಾವವನ್ನು'' ಸಾಮಾಜಿಕರು
ನಿಜವಾಗಿಯೂ ಇರುವುದೆಂದೇ ಊಪಿಸುತ್ತಾರೆ, ""ಅನುಮಾನೆ'' ಮಾಡು
ತ್ತಾರೆ. ನಟನಿಂದ ಅನುಕೃತವಾಗಿ ಸಾಮಾಜಿಕರಿಂದ ಅನುಮಿತವಾದ
ಸ್ಥಾಯಿಭಾವಕ್ಕೇ “ ರಸೆ'' ಎಂದು ಹೆಸರು. ವಿಭಾವಾನುಭಾವಗಳು
ಲೋಕವಿಲಕ್ಷಣವಾಗಿ ಸುಂದರವಾಗಿರುವುದರಿಂದ ಇವುಗಳ ಮೂಲಕ ಗಮ್ಯ
ವಾಗುವ ಸ್ಥಾಯಿಭಾವವೂ ಚಮತ್ಕಾರಕಾರಿಯಾಗಿ ಆಸ್ಕಾದವನ್ನು೦ಟು
ಮಾಡುತ್ತದೆ, ಅದ್ಧರಿಂದಲ್ಲೇ ರಸವೆನ್ನಿಸಿಕೊಳ್ಳುತ್ತದೆ.
ನಟನಲ್ಲಿ ಇಲ್ಲದ ಸ್ಮಾಯಿಯನ್ನು ಉಂಟೆಂದು ಅನುಮಾನ ಮಾಡು
ವುದು ಮಿಥ್ಯಾಜ್ಞಾನವಲ್ಲವೆ? ಇದರಿಂದ ಆಸ್ಚಾದ ಹೇಗೆ ಎಂದು ಯಾರಾ
ದರೂ ಕೇಳಿದರೆ, ಅವರಿಗೆ ಶಂಕುಕನ ಉತ್ತರ ಪೀಗೆ : ಜ್ಞಾನ ಮಿಥ್ಯವಾ
ಗಿದ್ದರೇನು? ಮಿಥ್ಯವೆ೦ದು ಗೋಚರವಾಗದಿದ್ದಲ್ಲಿ ಅದರಿಂದ ಕಾರ್ಯ
ದರಾ ತೀಯಮಾನಃ ಸ್ಥಾಯಿಭಾವಃ ಮುಖ್ಯರಾಮಾದಿಗತಸ್ನಾಯ್ಯನುಕರಣ
ರೂಪಃ ಅನುಕರಣರೂಪತ್ವಾದೇವ ಚ ನಾವಾಾಂತರೇಣ ವ್ಯಪದಿಷ್ಟೋ ರಸಃ '` (ಅಭಿನವ
ಭಾರತೀ, 1, ಪು. ೨೭೪.)
K.M. 99
8೩೮ ಭಾರತೀಯ ಕಾವ್ಯಮಾಮಾಂಸೆ
ನೋಡಹುದು. ನಾಟಕದಲ್ಲಿ ವಿಚಾವಾನುಭಾವಾದಿಗಳು ಕೃತಕವೆನ್ನಿಸ
ದಿರುವುದರಿಂದ ಸ್ಥಾಯಿ ಉಂಟೆಂದೇ ಅನುಮಿತವಾಗುತ್ತದೆ ; ಆಸ್ಚಾದ್ಯ
ವಾಗುತ್ತದೆ.
ಹೀಗೆ ತಂಕುಕನ ಮತದಂತೆ ರಸಕ್ಕೂ ವಿಭಾ ವಾನುಭಾವಸಂಚಾರಿ
ಗಳಿಗೂ ಇರುವುದು ""ಗಮೈಗಮಕಭಾವ''. ಧರತಸೂತ್ರದಲ್ಲ “ಸಂಯೋಗ''
ಎಂಬುದಕ್ಕೆ ಇದ್ದೇ ಅರ್ಥ. «“ ನಿಪ್ಪತ್ತಿ »: ಎಂಬುದಕ್ಕೆ « ಅನುಮಿತಿ''
ಎಂದು ಅರ್ಥಮಾಡಬೇಕು. ಇ ಸ್ಮಾಯಿಭಾವ'' ಎಂಬ ಶಬ್ಧ ವನ್ನು
ಅಧ್ಯಾಹಾರ ಮಾಡಿಕೊಳ್ಳಬೇಕಾದ ಆವಶ್ಯಕತೆಯೇ ಇಲ್ಲಲ್ಲ.
ಶ೦ಕುಕನ ವಿವರಣಿಯನ್ನು ಭಟ್ಟತೌತನು ವಿಶೇಷವಾಗಿ ವಿಮರ್ಶೆ
ಮಾಡಿದನು. ಅದರಲ್ಲೂ, ಅನುಕಾರ್ಯನ ಸ್ಥಾಯಿಭಾವವನ್ನು ನಟನು
ಅನುಕರಣ ಮಾಡುತ್ತಾ ನೆ ಎಂಬ ಅಭಿಪ್ರಾ ಯವನ್ನು ಅವನು. ಅನೇಕ
ಪ್ರಕಾರವಾಗಿ ಬಂಡಿಸಿದನು. ಒಬ್ಬನೆ ಚಿತ್ತವೃತ್ತಿಯನ್ನು ಇನ್ನೊಬ್ಬನು
ಅನುಕರಣಮಾಡುವುದು ಹೇಗೆ? ಒಳಗೆ ಕೋಪನಿಲ್ಲ ದಿದ್ದರೂ ಹೊರಗೆ
ಕೋಪಗೊಂಡವನಂತೆ ಒಬ್ಬನು ಕಾಣಬಹುದಲ್ಲವೇ ಎಂದರೆ, ಇಲ್ಲರುವ
ಸಾದೃತ್ಯವೆಲ್ಲ ಬಾಹ್ಯಚರ್ಯೆಯಲ್ಲಿ ; ಹುಬ್ಬು ಗ೦ಟಿಕ್ಕ ಬಹುದು, ಗರ್ಜಿಸ
ಬಹುದು. ಆದರೆ ಒಳಗೆ ಮಾತ್ರ ಒಂದು ಚಿತ್ತವೃತ್ತಿಗೆ ಇರುವುದು
ರಥೇ ದಾರಿ : ಅದು ಇಲ್ಲವೇ ನಿಜವಾಗಿ ಉದಿಸಿರುತ್ತದೆ, ಇಲ್ಲವೇ
ಉನಿಸಿರುವುದಿಲ್ಲ; ಮೂರನೆಯ ಸ್ಥಿತಿ ಸಾಧ್ಯವಿಲ್ಲ. ಇದರ ಮೇಲೆ
ರಾ ಮಾದಿಗಳನ್ನು ಎಂದೂ ನೋಡದೆ ಇರುವ ನಟನಿಗೆ ಅವರ ಭಾವದ
ಅನುಕರಣ ಹೇಗೆ ಸಾಧ್ಯ?-ಈ ಮೊದಲಾದ ಅನೇಕ ಪ್ರಶ್ನೆಗಳನ್ನು
ತೌತನು ಒತ್ತುತ್ತಾನೆ. ಈ ಅನುಕರಣದ ಪ್ರಶ್ನೆ ನಮಗೆ ಅಷ್ಟು ಮುಖ್ಯ
ವಲ್ಲ. ಶಂಕುಕನ ವಾದದ ದೊಡ್ಡ ದೋಷ 'ಜೇರೊಂದು ಇದೆ: ಲೊಲ್ಲ
ಟನ ಮತದಂತೆಯೇ ಇಲ್ಲಿಯೂ ಸಾಮಾಜಿಕನು ತಟಸ್ಥ ನಾಗಿಯ್ಲೇ € ಉಳಿಯು
ತ್ತಾನೆ. ನಟನಲ್ಲ ಸ್ಥಾಯಿ ಉಂಟೆಂದು--ಅದರಲ್ಲೂ, ಇಲ್ಲದ್ದನ್ನು
ಉಂಟೆಂದು. ಅನುಮಾನ ಮಾಡುತ್ತಾ ಕುಳಿತಿರುವುದಷ್ಟೇ ಇವನ
ಕಾರ್ಯ. ಇಲ್ಲ ರಸಕ್ಕೆ ಒಂದು ನೆಲೆಯೇ ಇಲ್ಲ; ಅನುಕಾರ್ಯರಲ್ಲಿ
ಇದ್ದಿ ರಬಹುದಾದದ್ದು ಸ್ಥಾಯಿಭಾವವೇ ಹೊರತು ರಸವಲ್ಲ; ಇದರಮೇಲೆ
ಪ್ರವೃತ್ತಿ ಉಂಟೇ ಉಂಟು. ಇದನ್ನು ಲೌಕಿಕ ದೃಪ್ನಾಂತಗಳಲ್ಲೂ
೨೧. ರಸಾನುಭವ. ೧ ೩೩೯
ಅವರು ಹೇಗೊ ಎದುರಿಗಿಲ್ಲದವರು. ಎದುರಿಗಿರುವ ನಟನಲ್ಲಿ ಅದು
ವಸ್ತುತಃ ಇಲ್ಲ. ತಟಸ್ಸನಾದ ಸಾಮಾಜಿಕನಲ್ಲಂತೂ ಅದು ಇಲ್ಲವೇ
ಇಲ್ಲ. ಇಂಥ ರಸವನ್ನು ಸಾಮಾಜಿಕನು ಸೆವಿಯುವುದು ಹೇಗೆ? ಅಲ್ಲದೆ,
ಸ್ಥಾ ಯಿಭಾವವನ್ನು ಅನುಮಾನಮಾಡಿದ ಮಾತ್ರಕ್ಕೆ ಆಹ್ಲಾ ದವುಂಟಾಗು
ವುದೆಂದು ಹೇಳಿದರೆ ಅನುಭವವಿರುದ್ಧವಾಗುತ್ತದೆ. ಆ ಪಕ್ಷಕ್ಕೆ ಲೋಕ
ವೈವಹಾರದಲ್ಲ ಖೂ ಒಬ್ಬನ ಪ್ರೀತಿಯನ್ನೋ ಕೋಪವನ್ನೋ ನಾವು
ಕಾರ್ಯಕಾರಣಗಳನ್ನು ನೋಡಿ ಅನುಮಾನ ಮಾಡಿದಾಗಲೂ ನಮಗೆ
ಆಹ್ಲಾದವುಂಟಾಗದೇಕಾದೀತು. ಇದರಮೇಲೆ, ವಿಭಾವಾನುಭಾವಾದಿ
ಗಳು ಲೋಕವಿಲಕ್ಷಣವಾಗಿರುವುದರಿಂದ, ವಸ್ತು ಸೌಂದರ್ಯ” ಬಲದಿಂದ
ಇಲ್ಲಿ ಚಮತ್ಕಾರವೊದಗುವುದೆಂದು ಹೇಳಿಬಿಟ್ಟು ಜಾರಿಕೊಳ್ಳುವಹಾಗಿಲ್ಲ.
ಇದು ಹೇಗೆ ಎಂಬುದನ್ನು ವಿವರಿಸಬೇಕಾದದ್ದೇ ಇಲ್ಲಿಯ ಸಮಸ್ಯೆ. ಇದನ್ನು
ಶಂಕುಕನೂ ಬಿಡಿಸಲಿಲ್ಲ.
ಲೊಲ್ಲಟ ಶಂಕುಕರು ಅನಂದವರ್ಧನನಿಗಿಂತ ಹಿಂದೆ ಇದ್ದವರು;
ಇವರು ನಾಟ್ಯರಸದ ನಿಪ್ಪತ್ತಿಯನ್ನೇ ವಿಚಾರ ಮಾಡಿದರು. ರಸವು
ನಾಟ್ಯಕ್ಕೆ ಮಾತ್ರವಲ್ಲ, ಕಾವ್ಯಪ್ರಕಾರಗಳೆಲ್ಲಕ್ಕೂ ಜೀವಿತವೆಂಬ ಅಭಿ
ಪ್ರಾಯ ತಲೆಯೆತ್ತಿದ್ದು ಧ್ವನ್ಯಾಲೋಕದಲ್ಲಿ. ಆನಂದವರ್ಧನನು ರಸ
ನಿಷ್ಪತ್ತಿ ಹೇಗೆಂಬುದನ್ನು ವಿವರಿಸದಿದ್ದರೂ, ಕಾವ್ಯದಲ್ಲಿ ವರ್ಣಿತವಾಗುವ
ವಿಭಾವಾನುಭಾವಗಳಿಂದ ಇದು ಅಭಿವ್ಯಕ್ತವಾಗುತ್ತದೆ, ರಸಕ್ಕೂ ಕಾವ್ಯ
ಶರೀರಕ್ಕೂ ಇರ 5ಕ್ಕದ್ದು ವ್ಯಂಗ್ಯ ವ್ಯಂಜಕ ಸಂಬಂಧ ಎಂದು ನಿರೂಪಿಸಿ
ದೃನು. ಭಟ್ಟನಾಯಕನು ಆನಂದವರ್ಧನನಿಗಿಂತ ಈಚಿನವನು. ಅವನು
ತನ್ನ ಹಿಂದಿನ ರಸನಿಪ್ಪತ್ತಿವಾದಗಳನ್ನೆ ಲ್ಲ ಟೀಕಿಸಿ ತನ್ನದೇ ಒ೦ದು ಹೊಸ
ವಾದವನ್ನು ಹೂಡಿದನು. ಅವನು ಕಾವ್ಯನಾಟ್ಯಗಳೆರಡನ್ನೂ ಗಣನೆಗೆ ತಂದು
ಕೊಂಡು, ಮುಖ್ಯವಾಗಿ ಇವುಗಳಲ್ಲಿರುವ ಉಕ್ತಿಯಿಂದ ಹೇಗೆ ರಸವು ನಿಪ್ಪನ್ನ
ವಾಗುವುದೆಂಬುದನ್ನು ನಿರೂಪಿಸುತ್ತಾನೆ.
ಲೊಲ್ಲಟನ _ ಮತದಲ್ಲೂ ಶಂಕುಕನ, ಮತದಲ್ಲೂ ಇದ್ದ ದೊಡ್ಡ
ದೋಪವೇನೆಂದರೆ--ಅವರಶು. ರಸಕ್ಕೂ ಸಾಮಾಜಿಕನಿಗೂ ಪ್ರತ್ಯಕ್ಷ
ಸಂಬಂಧವನ್ನು ಕಲ್ಪಿಸಲಲ್ಲ. ರಸದೊಂದಿಗೆ ನೇರವಾದ ಸಂಬಂಧವಿಲ್ಲದೆ
ಸಾಮಾಜಿಕನು ಅದರ ಆಸ್ಕಾದನನ್ನು ಹೇಗೆ ಪಡೆಯಬಹುದು ? ಪರಕೀಯ
ರಾದ ಅನುಕಾರ್ಯರಲ್ಲೋ ನಟರಲ್ಲೋ ಅದು ಇರುವ (ಅಥವಾ ಇರು
22-B
೩೪೦ ಭಾರತೀಯ ಕಾವ್ಯಮಾಮಾಂಸೆ
ವಂತೆ ತೋರುವ) ಪಕ್ಷದಲ್ಲಿ, ಇವನು ತಟಸ್ಥ ನಾಗಿರುವುದು ಮಾತ್ರ ಸಾಧ್ಯ.
ಈ ತಟಸ್ಥತೆಯ ದೋಪವನ್ನು ತಪ್ಪಿ ಸಿಕೊಳ್ಳುವುದಕ್ಕೋಸ್ಕರ, ಸಾಮಾಜಿಕ
ನಿಗೆ ರಸವು ಸ್ವಗತ (ಎಂದರೆ, ತನ್ನಲ್ಲಿಯೇ ಇರತಕ್ಕದ್ದು) ಬಂದು ಹೇಳಿ
ದರೂ ಆಕ್ಷೇಪಣಿಗಳು ಏಳುತ್ತವೆ. ಕಾವ್ಯನಾಟಕಗಳಲ್ಲ ಬರುವ ಸಮಸ್ತ
ವಿಭಾವಾದಿಗಳನ್ನೂ ಸಾಮಾಜಿಕನು ತನಗೆ ಸ್ವಂತವಾಗಿ ಸಂಬಂಧಪಟ್ಟ
ವೆಂದು ಭಾವಿಸಿದನೆಂದು ಇಟ್ಟುಕೊಳ್ಳೋಣ. ಆಗ ಅಲ್ಲಿ ಶೋಕಭಾವದ
ವಿಧಾವಾದಿಗಳಿದ್ದರೆ ಇವನಲ್ಲಿಯೂ ಶೋಕವೇ ಉಂಟಾಗಿ ಕರುಣರಸದ
ಆಹ್ಣಾದದ ಬದಲು ದುಃಖವೊದಗದೇಕಾದೀತು. ಇಷ್ಟೇ ಅಲ್ಲ. ಸಾಮಾನ್ಯ
ವ್ಯಕ್ತಿಯಾದ ಸಾಮಾಜಿಕನು ತಾನೇ ಸಮುದ ಕ್ಕೆ ಸೇತುವೆ ಕಟ್ಟಿ ಅಲೌಕಿಕ
ಮಪಿಮೆಯನ್ನು ಪ್ರದರ್ಶಿಸಿದ ರಾಮನೆಂದೂ, ಜಗತ್ಸಾವನೆಯಾದ ಸೀತೆ
ತನ್ನ ಪ್ರಿಯೆಯೆಂದೂ ಭಾವಿಸಿಕೊಳ್ಳಬೇಕಾದೀತು. ಹೀಗೆ ವಿಭಾವಾನು
ಭಾವಾದಿಗಳನ್ನೂ ಅವಕ್ಕೆ ಸಂಬಂಧಪಟ್ಟ ಸ್ಮಾಯಿಭಾವವನ್ನೂ ಪರಗತ
ವೆಂದಾಗಲಿ ಸ್ವಗತವೆಂದಾಗಲಿ ಭಾವಿಸಿ ವೈಯಕ್ತಿಕವಾಗಿ ಅನ್ಯಯಿ ದರೆ
ಇಪ್ಪೆಲ್ಲ ಆಕ್ಷೇಪಣಿ ಹುಟ್ಟುತ್ತದೆ. ಇದನ್ನು ಪರಿಹರಿಸಲು ಭಟ್ಟನಾಯ
ಕನು ಹೀಗೆ ಪ್ರಯತ್ನಮಾಡುತ್ತಾನೆ :
ಲೋಕವ್ಯವಹಾರದಲ್ಲಿ ನಮಗೆ ಪರಿಚಿತವಾದ ತಬ್ದಶಕ್ತಿ ಅಭಿಧಾ
ವ್ಯಾಪಾರವಷ್ಟೆ. (ಇದೇ ಯಥೋಚಿತವಾಗಿ ಲಕ್ಷಣೆಯನ್ನೂ ಒಳಕೊಳ್ಳುತ್ತದೆ.)
ಗುಣಾಲಂಕಾರಾದಿಗಳಿಂದ ಕೂಡಿದ ಕಾವ್ಯದಲ್ಲಯೂ ಅಭಿನೆಯರಂಜಿತವಾದ
ನಾಟ್ಯದಲ್ಲಿಯೂ ಶಬ್ದವ್ಯಾಪಾರ ಇಪ್ಪಕ್ಕೇ ನಿಲ್ಲುವುದಿಲ್ಲ. ಇಲ್ಲಿ "ಭಾವ
ಕತ್ವ,' ""ಭೋಜಕತ್ವ'' ಎಂಬ ಇನ್ನೆರಡು ವ್ಯಾಪಾರಗಳು ಪ್ರವರ್ಶಿಸುತ್ತವೆ.
ಕಾವ್ಯ ನಾಟಕಗಳಲ್ಲಿ ವರ್ಣಿತವಾಗಿರುವ ವಿಭಾವಾದಿಗಳಿಗೆ ಸಾಧಾರಣತ್ವ
ವನ್ನುಂಟುಮಾಡಿ ಅವು ರಸವಿಷಯವಾಗುವಂತೆ ಮಾಡುವುದು ಭಾವತತ್ವ.
ಒಂದು ಉದಾಹರಣಿ ಕೊಟ್ಟು ಈ ಮಾತನ್ನು ಸ್ಪಪ್ಟಪಡಿಸೋಣ. “ಸೀತೆ”
ಜನಕನ ಪುತ್ರಿ, ರಾಮನ ಪತ್ನಿ, ತ್ರೇತಾಯುಗದಲ್ಲ ಬಾಳಿದವಳು, ಇತ್ಯಾದಿ,
ಇತ್ಯಾದಿ. ಕಾವ್ಯನಾಟಕಗಳಲ್ಲಿ, ಉದಾಹರಣಿಗೆ ಭವಧೂತಿಯ "ಉತ್ತರ
ರಾಮಚರಿತ 'ದಲ್ಲಿ, " ವಿಭಾವ'' ವಾಗಿ ಬಂದಾಗ ಅವಳ ಈ ವಿಶಿಷ್ಟವೂ
ವೈಯಕ್ತಿಕವೂ ಆದ ಗುಣಗಳು ತೊಲಗಿ, ಅವಳು ಕೇವಲ ರಮಣಿಯಾಗಿ
ಸಾಧಾರಣರೂಪದಲ್ಲಿ ಗೋಚರವಾಗುವಳು. ಇದರಂತೆಯೇ ರಾಮನೂ
೨೧. ರಸಾನುಭವ....೧ ೩೪೧
ಒಬ್ಬ ವೀರನಾಗುವನು,ಃ: ವಿಭಾವಾದಿಗಳು ಹೀಗೆ ""ಸಾಧಾರಣ''ವಾದ
ಬಳಿಕ, ಇಲ್ಲಿಯ ಸ್ಕಾ ಯಿಭಾವ ಕೂಡ ( ಉದಾಹರಣೆಗೆ, ಶೋಕ) ವ್ಯಕ್ತಿ
ಸಂಪರ್ಕವನ್ನು ಕಳೆದುಕೊಂಡು ಇದು ರಾಮನದು ಅಥವಾ ನಟನದು
ಅಥವಾ ಮತ್ತೊ ಬ್ಬನದು ಎನ್ನುವ ನಿಯಮನಕ್ಕೆ ಅವಕಾಶವೇ ಇಲ್ಲದೆ
ಶೋಕಸಾಮಾನ್ಯವಾಗಿಬಿಡುವುದು. ಈ ಬಗೆಯ ಸಾಧಾರಣೀಕರಣವು
""ಧಾವಕತ್ಯ''ದ_ ತನ ಇದರಿಂದ ""ಭಾವಿತ''ವಾಗುವ ಸ್ಮಾಯಿಭಾವವೇ
ರಸ, ಇಂದ ಮುಂದಕ್ಕೆ ""ಭೋಜಕತ್ವ': (ಅಥವಾ ಭೋಗಕೃತ್ತವ
ಅಥವಾ ಭೋಗೀ*ರಣ) ಎಂಬ ಮೂರನೆಯ ವ್ಯಾಪಾರವು ಪ್ರವರ್ತಿಸು
ತ್ತದೆ. ರಸವು ಇದರ ಬಲದಿಂದ ನಕು? ಫೋಸು
ತ್ತದೆ. ಈಗ ಅವನ ಹೃದಯ ದ್ರವಿಸುತ್ತದೆ, ವಿಸ್ತಾರವಾಗುತ್ತದೆ,
ವಿಕಾಸ ಹೊಂದುತ್ತದೆ. ಈಸಿ ತಿಯಲ್ಲಿ ಆತ್ಮದ ಸತ್ತ್ಯಗುಣವೇ ಪ್ರಧಾನ
ವಾಗುವುದರಿಂದ, ಈ “ಸತ್ತ್ಕೋದ್ರೆ (ಕದ ಮೂಲಕ ಪ್ರ ಕಾಶಸ್ವರೂಪವೂ
ಆನಂದಮಯವೂ ಆದ ವಿಶ್ರಾಂತಿಯುಂಟಾಗುತ್ತದೆ. ಇದೇ ರಸದ
ಭೋಗ ಎನ್ನುವುದು. ಇದು ಲೌಕಿಕವಾದ ಸುಖಾನುಧವಕ್ಕೆ ಎಲಕ್ಷಣ
ವಾದದ್ದು, ಪರಬ್ರಹ್ಮಾಸ್ಕಾದಕ್ಕೆ ಸದೃಶವಾದದ್ದು.
ರಸನಿಪ್ಪತ್ತಿಯನ್ನು ನಿರೂಪಿಸುವಾಗ ಭಟ್ಟನಾಯಕನು ಮುಖ್ಯ
ವಾಗಿ ಸಾಂಖ್ಯತತ್ತ್ವವನ್ನು ಅನುಸರಿಸುತ್ತಾನೆ. "" ಸತ್ತ್ಕೋದ್ರೇಕ''
ಮೊದಲಾದ ಶಬ್ಧಗಳೆಲ್ಲ ಅಲ್ಲ೦ದಲ್ಲೇ ಬಂದವು. ಕಾವ್ಯದಿಂದ ರಸವು
ಭಾವ್ಯವಾಗುವುದೆಂದೂ ಸಾಮಾಜಿಕನು ಆದನ್ನು ತಾನೇ ಭೋಗಿಸುವ
ನೆಂದೂ ಹೇಳದೆ, ಈ ಭೋಗೀಕರಣವನ್ನೂ ಕಾವ್ಯದ ಒಂದು ವ್ಯಾಪಾರಕ್ಕೇ
ಒಪ್ಪಿಸಿರುವುದು ವಿಚಿತ್ರವೆನ್ನಿಸಬಹುದು. ಇದಕ್ಕೂ ಸಾಂಬ್ಯತತ್ತ್ವವೇ
ಕಾರಣ. ಸಾಂಖ್ಯವಾದದಂತೆ ಪುರುಷನು ತಟಸ್ಥ ; ಪ್ರಕೃತಿ ಸಮಸ್ತ
ವಸ್ತುಜಾಲವನ್ನೂ 'ಕೋರ್ಪಡಿಸಿ ಅಲ್ಲಗೇ ನಿಲ್ಲದೆ, ಪುರುಷೂಗೆ ಸುಖದುಃಖ
ಗಳ "ಅನುಭವವನ್ನೂ ತಾನೇ ಉಂಟುಮಾಡುತ್ತದೆ. ಇದನ್ನು ಅನುಸರಿಸಿ
ಭಟ್ಟ ನಾಯಕನು ಕಾವ್ಯದ ಶಬ್ಧವ್ಕಾ ್ಯಪಾರದಿಂದ ವಿಭಾವಾನುಭಾವಗಳು
ಸಾಡಾರಣೀಕೃತವಾಗುವುದರ ಜೊತೆಗೆ, ಅದರಿಂದಲ್ಲೇ ರಸವೂ ಭೋಗ್ಯವಾ
`ಸ ಾಧಾರಣೇಕರಣಂ ಚೈೈತದೇವ ಯತ್ ಸೀೀತಾದಿವಿಶೇಷಾಣಾಂ ಕಾಮಿನೀ
ತ್ಯಾದಿ ಸಾಮಾನ್ಯೋಪಸ್ಥಿತಿಃ ಸ್ಮಾಯ್ಯನುಭಾವಾದೀನಾಂ ಚ ಸಂಬಂಧಿವಿಶೇಷಾನವ
ಚ್ಛನ್ನತ್ವೇನ.” (ಗೋವಿಂದಃ ಕಾವ್ಯಪ್ರದೀಪ, ಪು. ೭೭-೮.)
೩೪೨ ಭಾರತೀಯ ಕಾವ್ಯಮಾಮಾಂಸೆ
ಗುವುದೆಂದು ಹೇಳುತ್ತಾನೆ. 3 ಇಲ್ಲಿ ಸಾಮಾಜಿಕನ ಪ್ರಯತ್ನ ಏನೇನೂ
ಇಲ್ಲ. ನಾಲಗೆಯ ಮೇಲೆ ತಾನಾಗಿಯೇ ಬಿದ್ದು ಸವಿಯನ್ನೂ ತಾನೇ
ಅರಿವು ಮಾಡಿಕೊಡುವ ಜೇನುಹನಿಯಂತೆ ಇಲ್ಲ ಕಾವ್ಯ ನಾಟಕಗಳ ಕಾರ್ಯ.
ಭಟ್ಟನಾಯಕನ ವಾದವು ಲೊಲ್ಲಬ ತಂಕುಕರ ವ್ಯಾಖ್ಯಾನಕ್ಕಿ ತ
ಹೆಚ್ಚು ಸಮರ್ಪಕ ಎಂಬುದರಲ್ಲಿ ಸಂಶಯವಿಲ್ಲ. ಕಾವ್ಯನಾಟಕಗಳಲ್ಲ ವಿ ವಿಭಾ
ವಾದಿಗಳು ವ್ಯೆಯಕ್ತಿಕ ರೂಪದಲ್ಲ ನಿಲ್ಲದೆ ಸಾಧಾರಣೀಕೃ ತವಾಗುವುವೆಂದೂ
ಆದಕಾರಣವೇ ಸಾಮಾಜಿಕನು ಇತ್ತ ಉದಾಸೀನನಾಗದೆ ಅತ್ತ ಸ್ವಕೀಯ
ವಾದ ಸುಖದುಃಖಗಳಲ್ಲಿ ಮಗ್ನನಾಗದೆ ರಸಾಸ್ಕಾದವನ್ನು ಪಡೆಯುವ
ನೆಂದೂ ಪ್ರತಿಪಾದಿಸಿದ್ದು ಅವನ ಮುಖ್ಯ ಕಾರ್ಯ (ಈ ಸಾಧಾರಣ
ಕರಣದ ಸ್ವರೂಪವನ್ಮು ಮುಂದಿನ ಅದ್ಯಾಯದಲ್ಲ ಇನ್ನಷ್ಟು ಪರಿಷ್ಕಾರ
ಮಾಡಿಕೊಳ್ಳೋಣ.) ಆದರೆ ಇದನ್ನು ಸಾಧಿಸಲು, ಭ್ರಾವಕತ್ವ, ಭೋಜಕತ್ಯ
ಎಂಬ ಶಬ್ದವ್ಯಾಪಾರಗಳನ್ನು ಕ ಹೊಸದಾಗಿ ಕಲ್ಪಿಸಿದ್ದು ಸಪ್ರಮಾಣವೆಂದಾ
ಗಲಿ ಆವಶ್ಯಕವೆಂದಾಗಲಿ ತೋರುವುದಿಲ್ಲ. ಇವೆರಡರ ಬದಲು, ಪೂರ್ವ
ಪರಿಚಿತವಾದ ಇದ ವ್ಯಂಜನಾವಾ ್ಯಪಾರವನ್ನೇ ಒಪ್ಪಿ ಕೊಂಡರೆ ಸಾಕು. ವಿಭಾ
ವಾದಿಗಳಿಂದ ರನವು ಅಭಿವ್ಯ ಕ್ರವಾಗುತ್ತದೆ; ರಸದ ಅರಿವೇ ಅದರ ಆಸ್ಕಾದ.
(ಅಭಿನವಗುಪ್ತ ನ ಮತದಂತೆ ಇದರ ನಿರೂಪಣಿ ಮುಂದೆ ಬರುತ್ತ ದೆ. )
ಇಷ್ಟು ಸುಲಭವಾಗಿ ಹೇಳಲು ಅವಕಾಶವಿರುವಾಗ ಭಾವಕತ್ಯವನ್ನೂ
ಭೋಜಕತ್ಯವನ್ನೂ ಏಕೆ ವಿಂಗಡಿಸಬೇಕು? ಇನ್ನೊಂದು ವಿಚಾರ. ಸ್ಥಾಯಿ
ಭಾವವು ಸಾಧಾರಣೀಕೃತವಾಗಿ ಸಹೃದಯನಿಗೆ ಭೋಗ ವಿಷಯವಾಗು
ಪುದಪ್ಪೈ. ಪೀಗೆ_ ಸಾಧಾರಣವಾಗತನೆ [ದ್ದು ಯಾರ ಸ್ಥಾಯಿಭಾವ ಎಂಬು
ದನ್ನು ಭಟ್ಟನಾಯಕನು ಸ್ತ ಪ್ತ ಪಡಿಸಿದ್ದ ಂತೆ ತೋರುವುದಿಲ್ಲ. ಸ್ಫಗತತ್ಯದ
ದೋಷವನ್ನು ಪರಿಹರಿಸುವ 'ಉದೆ ಕೇಶದಿಂದ ಅವನು ಸಾಮಾಜಿಕನಿಗೂ
ಸ್ಥಾಯಿಬಾವಕ್ಕೂ ಆತ್ಮೀಯಸಂಬಂಧವನ್ನು ಹೇಳಲು ಪಿಂಜರಿದಂತೆ
ಕಾಣಿಸುತ್ತದೆ. ಆದರೆ ಸಾಮಾಜಿಕನ ಸ್ಥಾಯಿಯೇ ರಸವಾಗಿ ಪರಿಣಮಿ
ಸಿದ ಹೊರತು ಅವನಿಗೆ ಅಪರೋಕ್ಷವಾದ ಆಸ್ಕಾದ ಹೇಗೆ ಸಂಭವಿಸೀತು ?
3 ಸಾಂಬ್ಯಕ್ಕೂ ಭಟ್ಟನಾಯಕನ ವಾದಕ್ಕೂ ಇರುವ ಸಂಬಂಧವನ್ನು ಇಲ್ಲಿ ಹೆಚ್ಚಾಗಿ
ವಿವರಿಸಲು ಸಾಧ್ಯವಿಲ್ಲ. ಐದರಲ್ಲಿ ಕುತೂಹಲವುಳ್ಳವರು ಖ್ಯ. 131/877೩: ‘ Indian
Aesthetics’ (000, Poona, Vol. 17, pp. 246—9) ನೋಡಬಹುದು.
೨೧. ರಸಾನುಭವ...೧ ೩೪ಎ
ತನಗಿಂತ ಹಿಂದಿನವರ ಮತಗಳ ನ್ಯೂನತೆಗಳನ್ನು ನಿವಾರಿಸಿ,
ಅಲ್ಲಿ ಗಟ್ಟಿಯಾದ ಅಂಶಗಳನ್ನು ಶೋಧಿಸಿ ಸಮನ್ವಯಗೊಳಿಸಿ, ಸಮರ್ಪಕ
ವಾದ ರಸತತ್ತ್ವ್ಯವನ್ನು ರೂಪಿಸುವ ಶ್ರೇಯಸ್ಸು ಅಭಿನವಗುಪ್ತನದಾಯಿತು.
ಈ ಕಾರ್ಯಕ್ಕೆ ಆವಶ್ಯಕವಾದ ಕಲಾನುಭವ, ತೀಕ್ಷ್ಣಪ್ರಜ್ಞೆ ಇವೆರಡೇ ಅಲ್ಲದೆ
ಇವಕ್ಕೆ ಮಿರುಗು ಕೊಡುವ ನಮ್ರತೆಯೂ ಆತನಲ್ಲಿತ್ತು.
“ ಮೇಲುಮೇಲಕ್ಕೇರಿ ಅರ್ಥತತ್ತ್ವವನಿದೋ,
ಬಳಲಿಕೆಯನರಿಯದೆಯೆ ಬುದ್ಧಿ ಕಾಣುತಿದೆ !
ಫಲಸಿದ್ಧಿಯಿದು ಮೊದಲ ಸೂರಿಗಳು ನಿರ್ಮಿಸಿದ
ಸುವಿಚಾರ ಸೋಪಾನ ಸರಣಿಗಳಿಗೆ | ''
ಎಂದು ಪಿಂದಿನವರಿಗೆ ತನ್ನ ಕೃತಜ್ಞತೆಯ ಕಾಣಿಕೆಯನ್ನು ಸಲ್ಲಿಸಿ, ki ತತ್ತ್ವ
ಸಿದ್ಧಿಯ ಮಾರ್ಗದಲ್ಲಿ ಮೊದಲ ಹೆಜ್ಜೆಯನ್ನಿ ಡುವುದು ಗೋಡೆಯಿಲ್ಲದೆ ಚಿತ್ರ
ಬರೆದ ಹಾಗೆ; ಒಂದು ಜಾಡು ಸಿಕ್ಕಿದ ಬಳಿಕ ಸೇತುಬಂಧನ, ನಗರ
ನಿರ್ಮಾಣಾದಿಗಳೂ ಸೋಜಿಗವಲ್ಲ'' ಎಂದು ಹೇಳಿ ಅವರ ಕ್ಲೆ ೇಶವನ್ನು
ಗೌರವಿಸಿ, ತನ್ನ ಕಾರ್ಯದ ಸಾಮಾನ್ಯತೆಯನ್ನು ಸೂಚಿಸಿ, ""ಇಲ್ಲಿ ನಾನು
ವಿದ್ವಾಂಸರ ಮತಗಳನ್ನು ದೂಪಿಸಿಲ್ಲ ; ಅವನ್ನೇ ಶೋಧಿಸಿದ್ದೇನೆ;
ಹಿಂದಿನವರು ಪ್ರತಿಷ್ಠಿಸಿದ್ದನ್ನು ಸರಿಯಾಗಿ ಸಂಯೋಜನೆಗೊಳಿಸಿದರೆ ಹೊಸ
ದೊಂದನ್ನು ಪ್ರತಿಷ್ಠಾಪನೆ ಮಾಡಿದ ಫಲವೇ ಒದಗುತ್ತದೆ'' ಎಂದು
ಮೊದಲಾಗಿ ವಿನಯ ವಾಕ್ಯಗಳನ್ನಾಡಿ, ಅಭಿನವಗುಪ್ತನು ತನಗೆ ಅಭಿಮತ
ವಾದ ರಸತತ್ತ್ವನಿರೂಪಣಿಗೆ ಪೀಠಿಕೆಯನ್ನು ರಚಿಸುತ್ತಾನೆ. :! ಅಷ್ಟೇ ಅಲ್ಲ.
““ ಹಾಗಾದರೆ ಪರಿಶುದ್ಧ ತತ್ತ್ವವನ್ನು ಹೇಳೋಣವಾಗಲಿ '' ಎಂದು ಕೇಳಿ
11 ಊರ್ಧ್ವೋರ್ಧ್ವಮಾರುಹ್ಯ ಯದರ್ಥತತ್ತ್ವಂ ಧೀಃ ಪಶ್ಯತಿ ಶ್ರಾಂತಿಮವೇದಯಂತೀ!
[ಫ] ಲಂ ತದಾದೈ ಸ: ಪರಿಕಲ್ಪತಾನಾಂ ವಿವೇಕ ಸೋಪಾನ ಪರಂಪರಾಣಾಂ 1»
ಚಿತ್ರಂ ನಿರಾಲಂಬನಮೇವ ಮನ್ಯೇ ಪ್ರಮೇಯಸಿದ್ದ್ ಪ್ರಥಮಾವತಾರಂ |
ತನ್ಮಾರ್ಗಲಾಭೇ ಸತಿ ಸೇತ:ಬಂಧಪುರಪ್ರತಿಷ್ಠಾದಿ ನ ವಿಸ್ಮಯಾಯ 1
ತಸ್ಮಾತ್ ಸತಾಮತ್ರ ನ ದೂಷಿತಾನಿ ಮತಾನಿ ತಾನ್ಯೇವ ತು ಶೋದಿತಾನಿ |
ಪೂರ್ಪಪ್ರತಿಷ್ಠಾಪಿತಯೋಜನಾಸು ಮೂಲಪ್ರತಿಷ್ಠಾಫಲಮಾಮನಂತಿ ॥
(ಅಭಿನವಭಾರತೀ, 7, ಪು. ೨೮೦)
ಮೇಲಿನ ಮೊದಲನೆಯ ಪದ್ಯದಲ್ಲ, "" ಫಲಂ ತದಾಡ್ಕೇ್ಮಿ.... ”ಎಂಬುಡೇ ಸರಿಯಾದ
ಪಾಠವೆಂದು ತೋರುತ್ತದೆ. ಧ್ವನ್ಯಾಲೋಕ, ಮದರಾಸು ಸಂಸ್ಕರಣ, ಪು. ೩೦೨
ನ್ನೂ ನೋಡಿ,
೩೪೪ ಭಾರತೀಯ ಕಾವ್ಯವಿಸಾಮಾಂಸೆ
ದವರಿಗೆ "" ಅದು ಆಗಲೇ ಭರತಮುನಿಯಿಂದ ಉಕ್ತವಾಗಿಯೇ ಇದೆ;
ಅಪೂರ್ವವಾದದ್ದೇನೂ ಇಲ್ಲ ' ಎಂದು ಕೂಡ ಉತ್ತರ ಕೊಡುತ್ತಾನೆ.
ಇದೆಲ್ಲವೂ ಅವನ ಬರೆವಣಿಗೆಯ ಸ್ವಾರಸ್ಯವನ್ನೂ ಅವನಲ್ಲಿ ನಮಗೆ ಗೌರವ
ವನ್ನೂ ಹೆಚ್ಚಿ ಸುತ್ತದೆ. ಅಭಿನವಗುಪ್ತನ ಮತವನ್ನು ತಕ್ಕ ಮಟ್ಟಿಗೆ ವಿತದ
ವಾಗಿ ಪ್ರತಿಪಾದಿಸದೇಕಾಗಿರುವುದರಿಂದಲೂ ಅದಕ್ಕೆ ಸಂಬಂಧಿಸಿದ ಕೆಲವು
ವಿಚಾರಗಳನ್ನು ಕ್ರೋಡೀಕರಿಸಬೇಕಾಗಿರುವುದರಿಂದಲೂ ಈ ಕಾರ್ಯಕ್ಕೆಲ್ಲ
ಪ್ರತ್ಯೇಕವಾದ ಅಧ್ಯಾಯವನ್ನು ಆಶ್ರಯಿಸುವುದೇ ಉತ್ತಮ.
೨೨. ರಸಾನುಭವ--೨
ಅಭಿನವಗುಪ್ತನ ಮತವನ್ನು ಗ್ರಪಿಸುವುದಕ್ಕೆ ಪೂರ್ವಭಾವಿಯಾಗಿ,
ಕಾವ್ಯನಾಟಕಗಳಲ್ಲಿ ಗೋಚರವಾಗುವ ಜಗತ್ತಿನ ಸ್ವರೂಪವೇನು ಎಂಬು
ದನ್ನು ನಾವು ಪರಿಷ್ಕಾರ ಮಾಡಿಕೊಳ್ಳಬೇಕು; ವಿಚಾರಸೌಕರ್ಯಕ್ಕಾಗಿ
ನಾಟ್ಯಜಗತ್ತನ್ನೇ ತೆಗೆದುಕೊಳ್ಳೋಣ. ಇದಕ್ಕೂ ವ್ಯಾವಹಾರಿಕ
ಪ್ರಪಂಚಕ್ಕೂ ಏನು ಭೇದ?
ಜೀವನ್ಮುಕ್ತರ ದೃಷ್ಟಿಯಲ್ಲಿ ಹೇಗಾದರೂ ಇರಲಿ; ಸಂಸಾರಿಗಳ
ಗೇನೋ ದಿನಬಳಕೆಯ ಪ್ರಪಂಚವು ವಾಸ್ತವಿಕವೆಂದು ತೋರುವುದು
ಖಂಡಿತ. ಇದರ ಅಸ್ತಿತ್ವ ದಿಟವೆಂದೇ ನಂಬಿ ದಿನದಿನದ ವ್ಯವಹಾರಗಳಲ್ಲಿ
ತೊಡಗುತ್ತೇವೆ; ಇಲ್ಲಿಯ ಮಾನವರೊಂದಡಿಗೆ ವೈಯಕ್ತಿಕವಾದ ಸಂಬಂಧ
ವನ್ನು ಇಟ್ಟುಕೊಳ್ಳುತ್ತೇಷೆ. ಅವರೊಡನೆ ಮಾತಾಡುತ್ತೇವೆ, ಕೆಲಸ
ಮಾಡುತ್ತೇವೆ. ಇಲ್ಲಿ ಕೆಲವರು ನಮಗೆ ಬೇಕಾದವರು ; ಇವರಿಗೆ ಸುಖ
ವಾದರೆ ನಮಗೆ ಸುಖ, .ಇವರಿಗೆ ದುಃಖವೊದಗಿದರೆ ನಮಗೂ ದುಃಖ.
ಮತ್ತೆ ಕೆಲವರು ನಮಗೆ ಆಗದವರು; ಇವರ ದುಃಖದಲ್ಲಿ ನಾವು ಒಂದು
ವೇಳೆ ಪಿಗ್ಗದಿದ್ದರೂ, ಇವರ ಸುಖದಲ್ಲೇನೋ ಆನಂದಪರವತರಾಗುವು
ದಿಲ್ಲ... ಬಹುಮಂದಿ _ಉದಾಸೀನರು ; ಇವರ ಸುಖದುಃಖಗಳನ್ನು ಮನ
ಸ್ಟಿಗೆ ಹತ್ತಿಸಿಕೊಳ್ಳದೆ ನಾವೂ ಉದಾಸೀನರಾಗಿಯೇ ಬಾಳುತ್ತೇವೆ.
ವಸ್ತುಗಳ ವಿಷಯದಲ್ಲೂ ಪೀಗೆಯೇ. ಇವನ್ನು ಮುಟ್ಟಬಹುದು; ಉಪಯೋ
ಗಿಸಬಹುದು ; ಬಯಸಬಹುದು; ಗಳಿಸಬಹುದು ; ದೂರೀಕರಿಸಬಹಸುದು ;
ಒಂದನ್ನೂ ಗಮನಿಸದೆ ಎತ್ತಲೋ ಸಾಗಬಹುದು. ಅಂತೂ ಲೋಕದ ವ್ಯಕ್ತಿ
ಗಳೊಂದಿಗೂ ವನ್ತುಗಳೊಂದಿಗೂ ವ್ಯಾವಹಾರಿಕವಾದ, ವೈಯಕ್ತಿಕವಾದ
ನಿಯತ ಸಂಬಂಧವೊಂದು ನಮಗಿದ್ದೇ ಇರುತ್ತದೆ. ಈ ಸ್ವಕೀಯ, ಪಠ
ಕೀಯ ಎಂಬ ಭಾವನೆಯನ್ನೂ ಇದರಿಂದ ಒದಗುವ ರಾಗದ್ವೇಪಾದಿ
ನಾಟ್ಯಪ್ರಪಂಚದ ಸ್ಥಿತಿ ಬೇರೆ. ಅದು ಕವಿಪ್ರತಿಭೆಯಿಂದ ನಿರ್ಮಿತ
ವಾದದ್ದು; ನಟರ ಚಾತುರ್ಯದಿಂದ ಪ್ರದರ್ಶಿತವಾದದ್ದು. (ಕೇವಲ
ಕಾವ್ಯದಲ್ಲಂತೂ ಈ ನಟರು ಕೂಡ ಇರುವುದಿಬ್ಬ; ನಮ್ಮ ಪ್ರತಿಭೆ ಕಲ್ಪಿ ಸಿದ
೩೪೫
೩೪೬ ಭಾರತೀಯ ಕಾವ್ಯಖಾಮಾಂಸೆ
ರಂಗಭೂಮಿಯಲ್ಲೇ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ.) ಅಲ್ಲಿಯೂ
ಮಾನವರು ಸುಳಿದಾಡುತ್ತಿ ದ್ದ ರೂ, ಮಾತುಕಥೆಗಳು ನಡೆಯುತ್ತಿ ದ್ದ ರೂ,
ಸವಗ 0 ಕೋರಿಬರುತ್ತಿದ್ದ ರೂ ಇವ ರೋಕದ ಬಡೆನಳಿಕೆಗಳುತಕೆ
ದಿಟವಲ್ಲ; "ವಾಸ್ತವಿಕ '' ವಲ್ಲ. ಈ ಮಾತನ್ನು ಕೀಳಾದ ಅರ್ಥದಲ್ಲಿ
ಗ್ರಪಿಸದಾರದು. ಇಲ್ಲಿ " ಅವಾಸ್ತವಿಕ” ಎಂದರೆ ಲೋಕವಿದಿತವಾದ
ನ ವ್ಯ ವಹಾರಕ್ಕೆ ನಿಲುತತಕ್ಕ ದ್ವಲ್ಪ ಎಂದಪೆ 2 ತಾತ್ಪರ್ಯ; ಇದೆಲ್ಲ
ಅವಾಸ ವಿಕವಾದ ಕಾರಣವೇ 4 ಲೋಕೋತ್ತರ'' (ಅಥವಾ ""ಅಲೌಕಿಕ'')
ವೂ ಆಗುತ್ತದೆ. ಅಂತೂ ಆ ಜಗತ್ತಿನ ವ್ಯಕ್ತಿ ಗಳೊಡನೆ ನಾವು ವ್ಯವ
ಹಾರಮಾಡಲಾರೆವು; ಅಲ್ಲಿ ತೋರುವ ವಸ್ತುಗಳನ್ನು ದಿನಚರಿಯ ಉಪ
ಯೋಗಕ್ಕಾಗಿ ಬಳಸಲಾರೆವು. ನಾಟಕವು ಗೋಡರವಾಗುತ್ತಿರುವವರೆಗೆ:
ಕಾವ್ಯವನ್ನು ಓದುತ್ತಿರುವವರೆಗೆ ಮಾತ್ರ ಇದೆಲ್ಲದರ ಅಸ್ತಿತ್ವ. ಕವಿ ನಟ
ಸಹೃದಯರ ಪ್ರತಿಭೆಯೊಂದೇ ಈ ಜಗತ್ತಿನ ಅಧಿಪ್ಮಾನವಾದ ಕಾರಣ
ಇದನ್ನು ಮಾನಸಿಕವಾಗಿ ಪರಿಭಾವಿಸುವುದು ಮಾತ್ರ ಸಾಧ್ಯ.
ಕಲೆಯ ಲೆಯ ಜಗತ್ತನ್ನು ಕೆಲವರು ಕನಸಿನ ಜಗತ್ತಿ ನೊಂದಿಗೆ ಹೋಲಿಸು
ವುದುಂಟು. ಇ ಇದನ್ನು ಪರಿಷ್ಪಾರ: ಮಾಡುವುದು ಅಗತ್ಯ. ಕನಸು ಕೇವಲ
ತೋರಿಕೆ. ಅಲ್ಲಿ ಕಾಣಬರುವ' ವ್ಯಕ್ತಿಗಳಾಗಲ, ಅವರ ನಡೆನುಡಿಗಳಾ
ಗಲಿ, ಎಷ್ಟು ಮಾತ್ರಕ್ಕೂ ವಾಸ್ತವವಲ್ಲ. ಕಲಾಸೃಷ್ಟಿಯೂ ಇದರಂತೆಯೇ
ಒಂದು ತೋರಿಕೆ ; ಇಲ್ಲಿ ಗೋಚರಿಸೆತಕ್ಕದ್ದೂ ಎಲ್ಲಾ ಕಲ್ಪಿತ; ಆದಕಾರಣ
ಇವೆರಡೂ ಸಮಾನ-ಎಂದು _ಆಪಾತತಃ ತೋರಬಹುದು. ಆದರೆ ಈ
ಎರಡು ಜಗತ್ತುಗಳಿಗೂ ದೊಡ್ಡ ವ್ಯ ತಾ ತ್ಯಾಸವುಂಟು. . ಕನಸು ಬರಿಯ
ತೋರಿಕೆಯಾದರೂ ಅದನ್ನು ವ ಹಗ ಲೋಕದ ಹಾಗೆಯೇ
ಅದೂ ವಾಸ್ತವ,, ಲೋಕದ ರೀತಿಯಲ್ಲೇ ಅದೂ ವಾಸ್ತವ ಎಂಬ ಭ್ರಾಂತಿ
ಎಂಎ ಲ್ಲಿ
ನಮ್ಮ ಮುಲ್ಲ ನ ನೆಲೆಗೊಂಡಿರುತ್ತದೆ. ಆದ್ದರಿಂದಲೇ ಕನಸಿನ ವ್ಯಟಿಹಾರದಲ್ಲಿ
ನಾವೂ ಭಾಗವಪಿಸುತೆ ಶ್ಲೀವೆ. ಅಲ್ಲಿಯ ಮಾನವರೊಂದಿಗೆ ವೈಯಕ್ತಿಕ
ಸಂಬ೦ಧವನ್ನು ಜೆಳಸುತ್ತೇವೆ. ಅವರಲ್ಲಿ ಕೆಲವರು ನಮ್ಮ ಸ್ವಂತ ಮಿತ್ರರು ;
ಮತ್ತೆ ಕೆಲವರು ನಮ್ಮ ಸ್ವಂತ ಶತ್ರುಗಳು. ಅಲ್ಲಿ ನದಿ ಅಡ್ಡ ಲಾದ ದಾಟಿ
ಹೋಗುತ್ತೇವೆ. ಹುಲಿ ಅಟ್ಟಿ RR ಬಂದರೆ ತಲ್ಲಣಿಸಿ ಓಡಿಹೊ ಓಡಿತೋಗಲು
ಯತ್ತಿಸುತ್ತೇವೆ. ಹೀಗೆ. ಕನಸು ವ್ಯಾವಹಾರಿಕ ಪ್ರಪಂಚದ ಪ್ರತಿಬಿಂಬ,
೨೨. ರಸಾನುಭವ... ೨ ೩೪೭
ನೆರಳು. ಇದರ ಅನುಧವವಿರುವಷ್ಟು ಕಾಲವೂ ನಮಗೆ ವೈಯಕ್ತಿ ಕವಾದ
ರಾಗ ದ್ವೇಪಾದಿಗಳೆಲ್ಲ ಉಂಟು. ಇತ್ತ, ಕಲಾಪ್ರಪಂಚವೂ ಕಾಲ್ಪ ನಿಕ
ವೆಂಬುದೂ, ಅದನ್ನು ಪರಿಭಾವಿಸುವಾಗ ಅಲ್ಲಿಯ ) ನಡೆನಳಕೆಯೆಲ್ಲ ಸುಸಂ
ಗತವೆನಿಸುವುದೂ ನಿಜ. ಆದರೆ ವಸ್ತುತಃ ಇದು ವ್ಯಾವಹಾರಿಕವಲ್ಲವೆಂದು
ಅರಿತಿದ್ದರೂ ಅದರ ಪರಿಭಾವನೆಗೆ ನಾವಾಗಿಯೇ ಮನಸ್ಸನ್ನು ಒಪ್ಪಿಸಿ
ಕೊಟ್ಟಿರುತ್ತೇವೆ. ಆದ್ದರಿಂದ ಇದು ವಾಸ್ತವವೇ ಮಿಡ್ಯವೇ ಎಲ ಎಂಬವನ್ನು
ನಾವು ವು ಪರಿಗಣಿಸುವುದಿಲ್ಲ "“ಚಿತ್ರತುರಗನ್ಯಾ ಯ''ವನ್ನು ಇಲ್ಲಿ ಜಾ ನಸಿತೊಳ್ಳ
ಬಹುದು. ಆದಕಾರಣ ಇಲ್ಲ ಮೊದಲು ಕನಸಿನ ಭ್ರಾಂತಿಯಾಗರಿ, ಬಳಿಕ
ಅದರ ನಿರಾಸವಾಗಲಿ ಇಲ್ಲ. ಇದಕ್ಕಿಂತ ಮುಖ್ಯವಾದ ವಿಷಯವೇನೆಂದರೆ, '
ಈ ಪ್ರತಿಭಾನಿರ್ಮಿತವಾದ ಜಗತ್ತ ನ್ನು ಮಾನಸಿಕವಾಗಿ ಪ್ರವೇಶಿಸಿ ಅದರ
ಭಾವನೆಯಲ್ಲ ಮಗ್ನರಾಗುಪೆವೇ "ಹೊರತು, ಅಲ್ಲಿಯ ಕಾರ್ಯಕಲಾಪಗಳವ್ಬ
ಯಾವ ಭಾಗವನ್ನೂ ವ್ಯಾವಹಾರಿಕವಾಗಿ ವಪಿಸಲಾರೆವು. ನಾಟಕದಲ್ಲಿ
ಒಂದು ಮನೆಗೆ ಬೆಂಕಿಬಿದ್ದ ೦ತೆ ಕಾಣಿಸಿದರೆ ಅದನ್ನು ಆರಿಸುವುದಕ್ಕಾಗಲಿ
ಅದರಿಂದ ತಪ್ಪಿಸಿಕೊಳ್ಳುವುದಕ್ಕಾಗಲಿ ನಾವು ಯಾವ ಪ್ರಯತ್ನವನ್ನೂ
ಮಾಡುವುದಿಲ್ಲ. ನ. ಅಲ್ಲಿ ಸುಂದರವಾದ ವಸ್ತುಗಳನ್ನು ಕಂಡರೆ ನಮ್ಮ
ಉಪಭೋಗಕ್ಕಾಗಿ ಅವನ್ನು ಉಪಾರ್ಜಿಸಲು ಮುಂದೆ ನುಗ್ಗುವುದಿಲ್ಲ.
ಕನಸಿನಲ್ಲಾದರೆ ದೇ ವು ವಾಸ್ತ ವವಾಗಿ ಬಿದ್ದ ಕಡೆಹುಲ್ಲೇ ಬಿದ್ದಿದ್ದರೂ,
ಅದು ಬೆಂಕಿಯನ್ನು ಈ ಹೋಗಿ ಕೈಸುಟ್ಟು ಕೊಂಡಂತೆಯೂ' ಗುಲಾ
ಬಿಯ ಹೂವನ್ನು ಕತ್ತು ಅದರ ಪರಿಮಳವನ್ನು ಆಘ್ಟಾ ಫ್ರಣಿಸಿದಂತೆಯೂ
ಧಾಸವಾಗುತ್ತ ದ ಇದರ ದುಃಖ ಸುಖಗಳನ್ನು ಮನಸ್ಸು ವೈಯಕ್ತಿಕ
ವಾಗಿಯೇ ಪತೆಯುತ್ತದೆ ;)ಎಚ್ಚೆರಗೊಂಡಮೇಲೂ ಒಮ್ಮೊಮ್ಮೆ ಅಲ್ಲಿ ಪಟ್ಟ
ಭಯದಿಂದ ಎದೆ ಡವಡವನೆ ಹೊಡೆದುಕೊಳ್ಳುತ್ತಿ ರುವುದುಂಟು,
ಲೋಕದಲ್ಲೂ ಅಷ್ಟೇ ಕನಸಿನಲ್ಲೂ ಅಪ್ಟೇ; ನಾನು, ನನ್ನದು
ಎಂಬ ಅಭಿಮಾನ ತಾನೇ ತಾನಾಗಿರುತ್ತದೆ. ಕಲಾಸೃಷ್ಟಿಯನ್ನು ಪರಿ
ಭಾವಿಸುವಾಗ ಅಹಂಕಾರಮಮಕಾರಗಳು ಎತ್ತಲೋ ಸರಿದುಬಿಡುತ್ತವೆ.
ಇನ್ನು ವೈಯಕ್ತಿಕವಾದ ರಾಗದ್ವೇಷಗಳಿಗೆ ಇಲ್ಲ ಅವಕಾಶವೆಲ್ಲ ಬಂತು!
ಲೋಕಕ್ಕೂ ನಾಟಕಕಾವ್ಯಗಳಿಗೂ ಇರುವ ಈ ಭೇದವನ್ನು ಆರಿತು,
ಇನ್ನು ಸಾಮಾಜಿಕನಿಗೆ ನಾಟಕದಲ್ಲಿ ರಸಾಸ್ಕಾದ ಹೇಗೆ ಉಂಟಾಗುವು
೩೪೮ ಭಾರತೀಯ ಕಾವ್ಯಮಾಮಾಂಸೆ
ದೆಂಬುದನ್ನು ಅಭಿನವಗುಪ್ತನ ಮತವನ್ನು ಅನುಸರಿಸಿ ವಿಚಾರ ಮಾಡೋಣ.
ಇಲ್ಲ ಸಾಮಾಜಿಕನಿಗೂ ಒಂದು ಅರ್ಹತೆ, "" ಅಧಿಕಾರ” ಅವಶ್ಯಕ.
ವರ್ಣಿ ತವಾದ ವಸ್ತುವನ್ನು ತನ್ಮಯವಾಗ್ತಿ ನೋಡುವ ನ ನಿರ್ಮಲ ಪ್ರತಿಭೆ
ಅವನಿಗಿರದೇಕು. ಡೆ, ಅವನು ಲೋಕವನ್ನು ತಿಳಿದವನು; ಈ ಲೋಕ್ರ
ವ್ಯವಹಾರದಲ್ಲಿ ಕಾರಣ ಕಾರ್ಯ ಸಾಮಗ್ರಿಯನ್ನು ನೋಡಿದಾಗ ಇಲ್ಲ ಇಂಥ್ರ
ಚಿತ್ತ: ವೃತಿ ಶಿಯುಂಟು ಎಂದು ಊಹೆ ಹೆ ಮಾಡುವುದರಲ್ಲಿ ಪಾಟವ ಹೊಂದಿರ
ತಕ್ಕ ವನು. ಇಂಥವನ ಕಣ್ಣ ಮುಂದೆ ರಂಗಸ್ಥಳದಲ್ಲಿ ನಟನಟಡುರು
ದುಷ್ಯಂತ ಶಕುಂತಲೆ ಮೊದಲಾದವರ ಬೇಷ ಧರಿಸಿ ಅವರ ಕಥೆಯನ್ನು
ಅಭಿನಯಿಸುತ್ತಿರುತ್ತಾರೆ. ಇವರನ್ನೂ ಇವರ ಮಾತುಕಥೆ ನಡೆವಳಿಕೆ
ಗಳನ್ನೂ ನೋಡಿದಾಗ ಸಾಮಾಜಿಕನಿಗೆ ಅವರ ವಿಷಯದಲ್ಲಿ ಯಾವ
ಮನೋಭಾವ ಉಂಟಾಗುತ್ತದೆ 1? ಲ್ಹೋಕದಲ್ಲಾದರೆ, ಪ್ರತಿಯೊಬ್ಬ
ವ್ಯಕ್ತಿಗೂ ಪ್ರತಿಯೊಂದು ವಸ್ತುವಿಗೂ ದೇಶಕಾಲಾದಿ ನಿಯಮವುಟು.
ಉದಾಹರಣಿಗೆ, ತಕುಂತಲೆ” ಇಂದೆ, ಬಲುಪಿಂದೆ, ಕಣ್ಣತಂಜೊಬ್ಬ
ಯಪಿಗಳ « ಆಶ ಶ್ರಮದಲ್ಲಿ ಪಾಲಿತ ಪಾಲತಪುತಿ, ಯಾಗಿ ಜಿಳೆದವಳು, ದುಷ್ಯಂತ ಮಹಾ
ರಾಜನೆಂಬ ಒಬ್ಬ ವಿಶಿಷ್ಟ ವ್ಯಕ್ತಿಯ ಪ್ರೇಯಸಿಯಾಗಿ ಸುಖದುಃಖಗಳನ್ನು
ಕಂಡವಳು. ಹೀಗೆ ತಕುಂತರೆ ದೇಶಕಾಲಾದಿಗಳಿಂದ ನಿಯತಳಾದ ವ್ಯಕ್ತಿ.
ಇವಳು ದುಪ್ಯಂತ್ರನೊಬ್ಬನಿಗೆ ಮಾತ್ರ ಪ್ರೇಯಸಿ ; ಮಿಕ್ಕವರಿಗೆ ರಿಗೆ ಸಂದರ್ರೊ
ಚಿತವಾಗಿ__ಸಖ, ಮಗಳು, ತಾಯಿ; ದುರ್ವಾಸನಿಗೆ ನನಿಗೆ ಅಪರಾಧಿವಿ. ಪೀಗೆ
ಲೋಕ ವ್ಯವಹಾರದಲ್ಲಿ ೩ ಪ್ರ ತಿಯೊಬ್ಬ ರೊಂದಿಗೂ ಅವಳಿಗೆ ಸಂಬಂಧ ನಿಯತ
ವಾದದ್ದು, ನಿಧಷ್ಮವಾದದ್ದು. “(ವರ್ತಮಾನಕಾಲದ ಪ್ರಿ ್ರೀಪುರುಪರಿಗೂ
ಈ ಮಾತನ್ನು ಯಥೋಚಿತವಾಗಿ ಅನ್ವಯಿಸಿಕೊಳ್ಳಬಹುದು.) ಸಾಮಾ
ಜಿಕನು ಲೋಕದಲ್ಲ ಈಕೆಯನ್ನೋ ಇಂಥವಳನ್ನೋ ಕಂಡಿದ್ದರೆ ಅವಳೊಡನೆ
ಅವನ ಸಂಬಂಧವೂ ನಿಯತವಾಗಿರುತ್ತಿತ್ತು. ಆಕೆ ಭುಪಿಪುತ್ರಿಯೆಂದೂ
ರಾಜಪತ್ನಿಯೆಂದೂ ಗೌರವಿಸಿ ತಾಟಸ್ಥ್ಯದಿ೦ದ ದೂರದಲ್ಲೇ ನಮಸ್ಕಾರ
ಮಾಡಿಬಿಡುತ್ತಿದ್ದನು. ಇತ್ತ, ನಟಿಯ ವಿಷಯವೂ ಹೀಗೆಯೇ. ಲೋಕ
ದಲ್ಲ ಅವಳು ಶ್ರೀಮತಿ ಇಂಥವಳೆಂಬ ಒಬ್ಬ ವಿಶಿಷ್ಟ ವ್ಯಕ್ತಿಯಾಗಿರುತ್ತಾಳೆ.
ಅವಳ ಜೀವನದಲ್ಲಿ ನಮಗೆ ಪ್ರವೇಶಎಲ್ಲ; ಅವಳ ನಿಜವಾದ ಪರಿಚಯ
ಕೂಡ ನಮಗಿಲ್ಲ. ಇಲ್ಲಿಯೂ ಅವಳ ವಿಷಯದಲ್ಲಿ ನಮಗೆ ತಟಸ್ಥ ಭಾವವೇ
ಪ್ರಧಾನ.
೨೨. ರಸಾನುಭವ... ೨ ೩೪೯
ಈಗ ರಂಗಧೂಮಿಯ ಮೇಲೆ ನಾಟಕ ನಡೆಯುತ್ತಿರುವಾಗ ಏನಾಗು
ವುದೆಂಬುದನ್ನು ನೋಡೋಣ. ನಮ್ಮ ನಟಿ ಸ್ವಸ್ಟ ರೂಪದಲ್ಲಿ ಅಲ್ಲಿಗೆ ಬರು
ವುದಿಲ್ಲ. ಶಕುಂತಲೆಯ ವೇಪಷಭೂಪಣಗಳನ್ನು ಧರಿಸಿ ಅವಳಂತೆ ಮಾತು
ಕಥೆಗಳನ್ನಾಡುತ್ತಿರುತ್ತಾಳೆ. ಈ ಕಥಾವಾಷಿನಿಯಲ್ಲಿ ಸಾಮಾಜಿಕನ
ಮನಸ್ಸು ಮಗ್ನವಾದಾಗ, ಈಕೆ ಶ್ರೀಮತಿ ಇಂಥವಳೆಂಬ ತಿಳಿವಳಿಕೆ ಮರೆ
ಯಾಗುತ್ತ ಡೆ. ಇ ೬ ದ್ಯಾಪರಯುಗದ ಶಕುಂತಲೆಯೇ ` ಈಕೆಯೆಂಬ
ನಷುತವೃಕ್ತಿಜ್ಞಾನವೊ ” ಮನಸ್ಸಿನಲ್ಲಿ ನೆಲಸುವದಿಲ್ಲ. ಆದಕಾರಣ
ಇವಳು ಹಿಂದಿನ "" ಶಕುಂತಲೆ ''ಯೆಂಬ_ ವ್ಯಕ್ತಿಯೂ ಅಲ್ಲ; ಇಂದಿನ
ನಟಿಯೂ ಅಲ್ಲ. ಇಬ್ಬರೂ ರೂ ಆಗಿಲ್ಲದ. ಕಾರಣನೇ ಇವಳನ್ನು ಕುರಿತು ಪರಿ
ಭಾವಿಸವಾಗ, ಇವರಿಬ್ಬರಿಗೂ ರಿಗೂ ವೈಯಕ್ತಿ ಕವಾಗಿರುವ “ಡೇತಕಾಲ ಸಂಬಂಧ
ಬಿಟ್ಟು. 'ತೋಗುತ್ತ ಡೆ ನಾಟಕದ ವಿಭಾವಾನುಭಾವಗಳೆಲ್ಲಕ್ಕೂ 1 ಈ
ವಿವರಣಿಯನ್ನು ಅನ್ಯಯಸಿಕೊಳ್ಳಬೇಕು. ಈ ವಿಭಾವಾದಿಗಳು ಲೋಕದ
ಕಾರಣಕಾರ್ಯಾದಿಗಳಂತೆ ವ್ಯಾವಹಾರಿಕವಾಗಿಲ್ಲದ್ದರಿಂದಲ್ಲೇ ಈ ದೇಶಕಾಲ
ಸಂಬಂಧತ್ಯಾಗ ಸಾಧ್ಯವಾದದ್ದು ; ಇವು ಕೇವಲ ಅನ್ಯರಿಗೆ ಸಂಬಂಧ
ಪಟ ವು ನನಗೆ ಸಂಬಂಧಪಟ್ಟವೇ ಅಲ್ಲ ಎಂಬ ತಟಸ್ಥ ತೆಯಾಗಲಿ, ಇವು
ನನಗೆ ಮಾತ್ರ ಸಂಬಂಧಪಟ್ಟವು ಅನ್ಯರಿಗೆ ಸಂಬಂಧಪಟ್ಟವೇ ಅಲ್ಲ ಎಂಬ
ಸ್ವಕ್ಲೀಯ ಬುದ್ಧಿಯಾಗಲಿ ಇಲ್ಲ ಸಾಮಾಜಿಕನಿಗೆ ಉದಿಸುವುದಿಲ್ಲ. ೩ೀಗೆ,
ಲೋಕದಲ್ಲಾಗುವಂತೆ ಸಾಮಾಜಿಕನಿಗೆ ಈ ವಿಭಾವಾದಿಗಳೊಂದಿಗೆ ಸಂಬಂಧ
ವಿಶೇಷವು ಉಂಟೆನ್ನಿಸುವುದೂ ಇಲ್ಲ, ಇಲ್ಲವೆನ್ನಿಸುವುದೂ ಇಲ್ಲ. ಆದ
ಕಾರಣ, ನಾಟಕ ಮಂದಿರದಲ್ಲಿ ನೂರು ಜನ ಸಾಮಾಜಿಕರಿದ್ದರೆ ಅಷ್ಟು
ಜನಕ್ಕೂ ಈ ವಿಧಾವಾದಿಗಳು ಒಂದೇ ರೀತಿಯಲ್ಲ " ಸಾಧಾರಣ :'
ವಾಗುತ್ತವೆ.
1 4 ಮುಕುಟಶೀರ್ಷಿಕಾದಿನಾ ತಾವನ್ನಟಬುದ್ಧಿರಾಚ್ಛಾದ್ಯತೇ. ಗಾಢಪ್ರಾಕ್ತನ
ಸಂವಿತ್ಪಂಸ್ಕಾರಾಚ್ಛೆ ಕಾವ್ಯಬಲಾನೀಯಮಾನಮಪಿ ನತತ್ರ ತಾತಾ ಸತ
ಅತ ಏವ ಉಭಯದೇಶಕಾಲತ್ಕಾಗ್ನು,,........... »' (ಅಭಿನವಭಾರತೀ, 1, ಪು. ೨೮೭).
—ಈ ಮಾತುಗಳನ್ನು ಗಮನಿಸಿ.
3 "ಮಮೈವ ಏತೇ ಶತ್ರೋರೇವ ಏತೇ ತಟಸ್ಥಸ್ಕೊವ ಏತೇ, ನ ಮಮ್ಮೊವ
ಏತೇನ ಶತ್ರೋರೇವ ಏತೇ ನ ತಟಸ್ಯಸ್ಗೊವ ಏತೇ ಐತಿ ಸಂಬಂಧವಿಶೇಷ ಸ್ಟೀಕಾರ ಪರಿ
ಹಾರ ನಿಯಮಾನವಸಾಯಾತ್ ಸಾಧಾರಣ್ಯೇನ ಪ್ರತೀತ್ಮೊೋ....,... ” (ಕಾವ್ಯಪ್ರಕಾಶ,
iv. ೫. ವೃತ್ತಿ) ಇದನ್ನು ಗಮನಿಸಿ.
೩೫೦ ಭಾರತೀಯ ಕಂಪೃಮಾಮಾಂಸೆ
ಮಾನವನಲ್ಲಿ ಸ್ಕಾ ಯಿಭಾವಗಳು ವಾಸನಾತ್ಮ ಕವಾಗಿ ಸೂಕ್ಷ್ಮ ರೂಪ
ದಲ್ಲ ಇರುವುವೆಂದೂ ಟಾ ಕಾರಣಸಾಮಗಿ, ಯಿಂದ ರದ ಧೆ
ಗೊಳ್ಳುವುವೆಂದೂ ಹಿಂದೆ ನೋಡಿದ್ದೇವೆ. ಸಾಮಾಜಕನು ಸಾಂಸಾರಿಕ
ವಾದ ಸ್ವಂತ ದುಃಖಗಳನ್ನು ಮರೆತು ನಾಟ್ಯದ ವಸ್ತುವಿನಲ್ಲಿಯೇ ಮನಸ್ಸನ್ನು
ಪೂರ್ಣವಾಗಿ ನೆಲೆಗೊಳಿಸಿ ತನ್ಮಯತೆಯಿಂದ ನೋಡುತ್ತಿರುವಾಗ, ಮೇಲೆ
ನಿರೂಪಿಸಿದಂತೆ ಅಲ್ಲಿಯ ವಿಭಾವಾನುಭಾವಗಳೆಲ್ಲ ಅವಿಶೇಪರೀತಿಯಲ್ಲಿ
ಸಂಬಂಧಪಡುತ್ತವೆ. ಅವನ ಹೃದಯ ಒಂದು ಸ್ವಚ್ಛವಾದ ಕನ್ನಡಿಯಂತಿ
ರುತ್ತದೆ. ಆದಕಾರಣ, "ನಾಟ್ಯದ ವಿಧಾವಾನುಧಾವಗಳಿಗೆ ೪ ಉಚಿತವಾದ
ಧಾವಗಳು ಇವನಲ್ಲ ತಡೆಯಿ ಯಿಲ್ಲದೆ ಉಮೊ (ಧವಾಗುತ್ತ ತ್ತವೆ. ಎಂದರೆ, ಕಥೆ
ಯಲ್ಲ ತೊ ಬಲ್ಲ ತೋರುವ ರ. ರತಿ, ಉತ್ಪಾಹ, ಶೋಕ ಕ ಇತಕ್ಕೆ ಸಂವಾದಿಯಾದ
ವಾಸನೆಗಳು ಯಾವ ವಿಳೆಂಬವೂ ಇಲ್ಲದೆ ಇವನಲ್ಲ ಉಕ್ಕಿ ಅನುಭವವಿಷಯ.
ವಾಗುತ್ತವೆ. ಇದಕ್ಕೇ "" ಹೃದಯಸಂವಾದ'' ಎಂದು ಹೆಸರು.
ಸಾಮಾಜಿಕನಿಗೆ ವಾಸನಾತ್ಮಕವಾದ ಸ೦ಸ್ಕಾರವು ಗಾಢವಾಗಿರಬೇಕಾ
ದದ್ದು ಅತ್ಯಗತ್ಯ, ಯಾವುದಾದರೂ ಒಂದು ಭಾವದ ವಾಸನೆ ಒಬ್ಬನಲ್ಲ
ಧುಬನಲನಾಗಿದ್ದರೆ:: ಆ ಭಾವವೇ, ಪ್ರಧಾನವಾಗಿ ರವ, ಕಥಾವಸ್ತು ವಿನ
ಇವನಿಗೆ ಆಸಕ್ತಿಯೇ ಹುಟ್ಟಲ್ಲಾರದು. ಉದಾಹರಣಿಗೆ, ಚಕ್ಕ ಮಕ್ಕಳಿಗೆ
«« ರತಿ” ವಿಷಯದಲ್ಲಿ ವಾಸನೆ ಇನ್ನೂ ಪ್ರಬಲವಾಗಿರುವುದಿಲ್ಲ.
ಶಾಕುಂತಲ ನಾಟಕವನ್ನು ನೋಡಲು ಅವರನ್ನು ಕರೆದು ಕೊಂಡು
ಹೋದರೆ, ಬಹುತಃ ವಿದೂಷಕನ ಚೇಪೈಗಳನ್ನೂ ಕೊನೆಯಲ್ಲ ಸರ್ವ
ದಮನನ ತುಂಟತನವನ್ನೂ ಮಾತ್ರ ನೋಡಿ ಅವರು ಸಂತೋಷಪಟ್ಟರು.
ನಾಟಕದ ಮುಖ್ಯಭಾಗ ಅವರನ್ನು ಬೇಸರಪಡಿಸುವುದು ಅನಿವಾರ್ಯ. ಇನ್ನು
3 ೨೦ನೆಯ ಅಧ್ಯಾಯದಲ್ಲಿ.
4 ಇಲ್ಲ ತನ್ಮಯವಾಗುವುದೆಂದರೆ ಅರ್ಥವೇನು]? ಇದನ್ನು ಹೀಗೆ ವಿವರಿಸಬಹುದು :
ಸಾಮಾಜಿಕನು ತನ್ನ ಪ್ರತಿಭೆಯ ಬಲದಿಂದ ದುಷ್ಯಂತನ ಕಣ್ಣಿನಿಂದ ಶಕುಂತಲೆಯನ್ನು
ನೋಡುತ್ತಾನೆ; ಶಕುಂತಲೆಯ ಕಣ್ಣಿನಿಂದ ದ:ಷ್ಯಂತನನ್ನು ನೋಡುತ್ತಾನೆ. ಸಖಿಯ
ರಂತೆ, ಕಣ್ಚರಂತೆ ಇಬ್ಬರನ್ನೂ ಪರಿಭಾವಿಸುತ್ತಾನೆ. ಆಯಾ ಸಂದರ್ಭದಲ್ಲ ಅವರವರೊಂದಿಗೆ
ಇವನ ಹೃದಯವು ಸಂವಾದ ಹೊಂದುತ್ತದೆ ; ಅಲ್ಲಿಯ ಭಾವಗಳು ಇಲ್ಲಿಯೂ ಅಭಿವ್ಯಕ
ವಾಗುತ್ತವೆ. ಹೀಗೆ ಎಲ್ಲರೊಂದಿಗೂ ತನ್ಮಯತೆಯನ್ನು ಹೊಂದುವುದರಿಂದಲೇ ಐವನು
ಯಾರೊಬ್ಬರ ಸಾಂಸಾರಿಕ ಸುಖದುಖುಗಳಿಂದಲೂ ಬದ್ಧನಾಗದೆ, ಅವರ ರಾಗದ್ದೇಷ
ಗಳನ್ನು ವ್ಯಾವಹಾರಿಕವಾಗಿ ಅನುಭವಿಸದೆ, ಭಾವದ ತಿರುಳಿನ ಅಸ್ಟಾದವನ್ನು ಮಾತ್ರ
ಪಡೆಯುತ್ತಾನೆ.
೨೨, ರಸಾನುಭವ- ೨ ೩೫೧
ಕೆಲವರಿಗೆ ವಯಸ್ಸು ಅನುಭವಗಳು ಹೆಚ್ಚಾಗಿದ್ದರೂ ಭಾವಾನುಧವ ಶಕ್ತಿ
ದುರ್ಬಲವಾಗಿಯೇ ಇರುತ್ತದೆ. ಅವರಿಗೂ ನಾಟ್ಯಮಂದಿರದ ಕಂಬ
ಗೋಡೆಯ ಕಲ್ಲುಗಳಿಗೂ ಹೆಚ್ಚು ಭೇದವಿರುವುದಿಲ್ಲ. 5
ಈಗ ಇನ್ನೊಂದು ಅಂಶವನ್ನು ಗವನಿಸಬೇಕ:. ಕಾರಣ
ಸಾಮಗ್ರಿ ಲೌಕಿಕವಾಗಿದ್ದರೆ ಸಾಮಾಜಿಕನಲ್ಲ ಉದಿಸಿದ ಭಾವವೂ ಲೌಸಿಕ
ವಾಗಿರುತ್ತಿತ್ತು ; ವ್ಯವಹಾರದಲ್ಲ ಪ್ರವರ್ತಿಸುವಂತೆ ಅವನನ್ನು ಅದು
ಪ್ರಚೋದಿಸುತ್ತಿತ್ತು. ಅದಕ್ಕನುಸಾರವಾಗಿ, ಇದನ್ನು ಪಡೆಯಬೇಕು,
ಅದನ್ನು ತಡೆಯಬೇಕು ಎಂಬ ಸಾಂಸಾರಿಕ ಫಲಾಪೇಕ್ಷೆಯಿಂದ
ಅವನು ಮುಂದುವೆರಿಯುತ್ತಿದ್ದನು. ಲೋಕೋತ್ತರವೂ ಅವ್ಯಾವಹಾರಿಕವೂ
ಆದ ನಾಟಕದಲ್ಲ ಇಂಥ ಪರಿಸ್ಥಿತಿಗೆ ಅವಕಾಶವೇ ಇಲ್ಲ. ಅದನ್ನು
ನ್ಹೋಡುವಾಗ ಸಾಮಾಜಿಕನು ತನ್ನನ್ನು ಶಾನು ಮರೆತು ಅದರ ಸಂದರ್ಧ
ಗಳಲ್ಲೇ ಒಳಹೊಕ್ಕು ಬಿಡುವುದರಿಂದ, ವಾಸನಾರೂಪದಲ್ಲದ್ದ ಇವನ
ಸ್ಮಾಯಿಯೇ ಉದ್ಧೋಧಗೊಂಡು ಗೋಚರವಾದರೂ, ಇದು ತನ್ನ
ಭಾವವೇ ಅನ್ಯರ ಭಾವವೇ ಎಂಬ ಅರಿವೇ ಅವನಿಗೆ ಇರುವುದಿಲ್ಲ. ಪೀಗೆ
ಆದೂ ಕೂಡ ವೈಯಕ್ತಿ ಕತೆಯನ್ನು (ಎಂದರೆ ಯಾರೋ ಒಬ್ಬ ವಿಶಿಪ್ಟ
ವ್ಯಕ್ತಿಗೆ ಸಂಬಂಧಿಸಿದ್ದೆಂಬ ಪ್ರತೀತಿಯನ್ನು) ಕಳೆದ:ಕೊಂಡು ಇವನ ಹೃದಯ
ವನ್ನು ತುಂಬುತ್ತದೆ ; ಅಖಂಡವಾಗಿ ಅಪರಿಮಿತವಾಗಿ ಗೋಚರವಾಗು
ತ್ತದೆ. ಬೇರೊಂದರ ಪರಿಜ್ಞಾನವನ್ನು ಇವನಿಗೆ ತಪ್ಪಿಸಿ ತಾನೇ ತಾನಾಗಿ
ಹೊಳೆದಾಡುತ್ತದೆ. ಇದನ್ನು ಏಕಧ್ಯಾನದಿಂದ ಅರಿಯುವುದು ಬೇರೆಯಲ್ಲ,
ಆಸ್ವಾದಿಸುವುದು ಬೇರೆಯಲ್ಲ. ಈ ಆಸ್ಟಾದವ್ಲೇ ಅದರ ಜೀವ. ೩ೀಗೆ
ಅಭಿವ್ಯಕ್ತವಾಗಿ ಅಸ್ಕಾದ್ಯವಾಗುವ ಭಾವವೇ ರಸ.
ರಸವನ್ನು ಸವಿಯುವ ಕಾಲದಲ್ಲ ಸಾಮಾಜಿಕನ ಮನಸ್ಸು ಮಿಕ್ಕೆಲ್ಲ
ವನ್ನೂ ತನ್ನನ್ನೂ ಮರೆತು ತನ್ನ ಸ್ವಭಾವವಾದ ಚಾಂಚಲ್ಯವನ್ನು ಕಳೆದು
ಕೊಂಡು ರಸದಲ್ಲೇ ಏಕಾಗ್ರವಾಗಿ ನೆಲೆಗೊಂಡಿರುತ್ತದೆ. ಈ ಅನುಭವಕ್ಕೇ
ಲ ಸವಾಸನಾನಾಂ ಸಭ್ಯಾರ್ನಂ ರಸಸ್ಯಾಸ್ಟಾದನಂ ಭವೇತ" |
ನಿರ್ವಾಸನಾಸ್ತು ರಂಗಾಂತಃಕಾಷ್ಟಕುಡ್ಯಾತ್ಮಸಂನಿಭಾಃ 1
ಈ ಶ್ಲೋಕವನ್ನು ಪ್ರಭಾಕರನು (ಕ್ರಿ. ಶ. ೧೫೮೩) ತನ್ನ "ರಸಪ್ರದೀಪ'ದಲ್ಲಿ
(ಪು. ೩೨) "" ತದುಕ್ತಂ ಧರ್ಮದತ್ತೇನ '' ಎಂದು ಉದಾಹರಿಸಿದ್ದಾನೆ.
೩೫೨ ಭಾರತೀಯ ಕಾವ್ಯಮಿಾಮಾಂಸೆ
ಚರ್ವಣಾ, ಚಮತ್ಕಾರ, ಆಸ್ಟಾದ, ಅನಂದ, ವಿಶ್ರಾಂತಿ ಎಂದು
ಬೇರೆದೇರೆಯ ಹೆಸರುಗಳು." ಎಲ್ಲದರ ತಾತ್ಸರ್ಯವೂ ಒಂದೇ.
ರಸಕ್ಕೂ ವಿಭಾವಾನುಭಾವಾದಿಗಳಿಗೂ ಇರುವ ಸಂಬಂಧವೇನು?
ಇದು ಕಾರ್ಯಕಾರಣ ಭಾವವಲ್ಲ. ಆ ಪಕ್ಷದಲ್ಲ ಕುಂಬಾರ, ಅವನ ಚಕ್ರ
ಈ ಮೊದಲಾದ ಕಾರಣಗಳು ನಪ್ಪವಾದರೂ ಅವುಗಳ ಕಾರ್ಯವಾದ ಗಡಿಗೆ
ಮಾತ್ರ ಉಳಿಯುವಂತೆ, ವಿಭಾವಾದಿಗಳು ದೂರ ಸರಿವಾಗಲೂ ರಸವು
ಉಳಿಯದೇಕಾಗುತ್ತಿತ್ತು. ಆದರೆ ನಾಟಕ ಮಂದಿರದಿಂದ ಹೊರ
ಬೀಳುವಾಗ, ಕಾವ್ಯಗ್ರಂಥವನ್ನು ಕೆಳಗಿಟ್ಟಾಗ, ರಸದ ಧಾರೆಯೂ
ಕತ್ತರಿಸಿ ಹೋಗುವುದನ್ನು ಅನುಭವಶಾಲಿಗಳು ಬಲ್ಲರು. ಇದು ಜ್ಞಾ ಪ್ಯ
ಜ್ಞಾ ಪಕ ಸಂಬಂಧವೂ ಅಲ್ಲ. ಆ ಪಕ್ಷದಲ್ಲಿ, ಹಿಂಡೆಯೇ ರಚನೆ ಮಾಡಿ
ಕೋಣಿಯಲ್ಲ ಇಟ್ಟಿದ್ದ ಗಡಿಗೆಯನ್ನು ದೀಪವು ತೋರ್ಪಡಿಸುವಂತೆ,
ಮೊದಲೇ ಸಿದ್ಧವಾಗಿದ್ದ ರಸವನ್ನು ಈ ವಿಭಾವಾದಿಗಳು ನಮಗೆ ಕೇವಲ
ತೋರಿಸತಕ್ಕ ಉಪಕರಣವಾಗುತ್ತಿದ್ದುವು. ಆದರೆ_ವಿಭಾವಾದಿಗಳು
ಗೋಚರವಾದ ಹೊರತು ವಾಸನಾತ್ಮಕವಾದ ಸ್ಥಾಯಿ ಮೇಲಕ್ಕೆ ಏಳುವು
ದಿಲ್ಲ ;ರಸವು ನಿಷ್ಸನ್ನವಾಗುವುದ್ದಿ. ರಸವು ಪ್ರತೀತವಾಗುತ್ತದೆ ಎಂಬ
ಮಾತನ್ನು ಅನೇಕ ಪೇಳೆ ಉಪಯೋಗಿಸುತ್ತೇವಪ್ಟೆ. ಇಲ್ಲಿ “ಪ್ರತೀತ''
ಎಂದರೆ ಮೊದಲೇ ಸಿದ್ಧವಾಗಿದ್ದದ್ದು ತಿಳಿಯಬರುತ್ತದೆ ಎಂದು ಅರ್ಥವಲ್ಲ;
ತಿಳಿಯಬರುವಾಗಲ್ಲೇ ಸಿದ್ಧವಾಗುತ್ತದೆ ಎಂದು ಅರ್ಥ. « ಅನ್ನವನ್ನು
ದೇಯಿಸುತ್ತಾನೆ'' ಎಂಬ ಮಾತನ್ನು ಇದಕ್ಕೆ ಹೋಲಿಸಬಹುದು.: (ಅಕ್ಕಿ
ಬೆಂದು ಅನ್ನವಾಗುತ್ತದೆ; ಬೇಯುವ ಮೊದಲು ಅನ್ನವಿಲ್ಲ. ಲೋಕ
6 “ಲೋಕೇ ಸಕಲವಿಫ್ನುಎನಿರ್ಮುಕ್ಷಾ ಸಂವಿತ್ತಿ [ರೇವ] ಚಮತ್ಕಾರನಿರ್ವೇತರಸನಾ
ಸುಪ್ರದನಭಧೋಗಸಮಾಪತ್ತಿಲಯವಿಶ್ರಾಂತ್ಯಾದಿ ಶಬ್ದೊರಭಿಧೀಯತೇ.'' (ಅಭಿನವಭಾರತೀ,
1, ಪು. ೨೮೧),
7 «ರಸಾಃ ಪ್ರತಿಯಂತೇ ಐತಿ ಓದನಂ ಪಚತೀತಿವದ್ವ್ಯ್ಯವಹಾರಃ'” (ಧೃನ್ಯಾ. ಲೋಚನ,
ಪು. ೬೯.)
ಇನ್ನೊಂದು ವಿಷಯ. ದಾರಿ ನಡೆದು ಮುಗಿಸಿದ ಬಳಿಕ ಗುರಿಯನ್ನು ಮುಟ್ಟುವಂತೆ,
ವಿಭಾವಾದಿಗಳನ್ನು ಅರಿತು ಮುಗಿಸಿದ ಮೇಲೆ ರಸಪ್ರತೀತಿ ಒದಗುವುದೆಂದು ಇಲ್ಲ ಭಾವಿಸ
ಕೂಡದು. ವಿಭಾವಾದಿಗಳ ಪ್ರತೀತಿ ಮೊದಲಾದಂದಿನಿಂದಲ್ಲೇ ರಸಪ್ರತೀತಿಗೂ
ಮೊದಲಾಗುತ್ತದೆ. “ನಪ ಗಮನಕ್ರಿಖಾವತ್ ಫರ್ಯಂತೇ ರಸನಕ್ರಿಯಾ
ನಿಪ್ಪದ್ಯತೆ ಆಪಿ ತು ಪ್ರಥಮ ಏವಾವಸರೇ. ಸ ಚ ವಿಭಾವಸಾಕ್ಷಾತ್ಕಾರಾತ್ಮಕ ಏವ. ''
(ಅಭಿನವಭಾರತ್ತೀ 1, ಪು. ೩೦೬).
೨೨, ರಸಾನುಭವ ೨ ೩೫೩
ಪ್ರಸಿದ್ಧವಾದ ಕಾರ್ಯಕಾರಣಸಂಬಂಧ, ಜ್ಞಾ ಪೈಜ್ಞಾ ಪಕಸಂಬಂಧ ಎಂಬ
ಎರಡು ಬಗೆಗಳಿಗಿಂತ ಈ ರಸನಿಪ್ಪತ್ತಿ ವಿಲಕ್ಷಣವಾಗಿದೆಯಲ್ಲ ; ಇದಕ್ಕೆ
ಬೇರೆ ಎಲ್ಲಿಯಾದರೂ ದೃಪಷ್ಟಾ೦ತವುಂಟೇ ಎಂದು ಯಾರಾದರೂ ಕೇಳಿದರೆ
ಈ ಅಲಾಕಿಕತ್ಚವು ನಮಗೆ ಭೂಷಣಪೇ ಹೊರತು ದೂಷಣವಲ್ಲ ಎಂದು
ಅಭಿನವಗುಪ್ತನ ಉತ್ತರ.* ಇದರ ಮೇಲೆ ಪ್ರತ್ಯಕ್ಷವಾದದ್ದಕ್ಕೆ ದೃಷ್ಟಾಂತ
ವೇಕೆ! ಅಭಿನವಗುಪ್ತನ ಮತದಂತೆ ವಿಭಾವಾದಿಗಳು ವ್ಯ೦ಜನಾವ್ಯಾಪಾರ
ದಿಂದ ರಸವನ್ನು ಅಭಿವ್ಯಕ್ತ ಪಡಿಸುತ್ತವೆ. ಈ ಅಭಿವೃಕ್ತಿಯಲ್ಲ, ವಾಸನಾತ್ಮಕ
ವಾಗಿದ್ದ ಸ್ಥಾಯಿಭಾವ ರಸರೂಪದಲ್ಲ ಪ್ರಕಾಶಗೊಳ್ಳುತ್ತದೆ.
ಹೀಗೆ ವಿಭಾವಾದಿಗಳು ಗೋಚರವಾದಾಗಲೇ ರಸವು ಗೋಚರ
ವಾಗುವುದು; ಅವು ಲಯಿಸಿದ ಕೂಡಲೆ ರಸವೂ ಲಯಿಸುವುದು ; ಅನುಭವ
ಕಾಲದಲ್ಲಿಯೂ ವಿಭಾವಾದಿಗಳೊಂದಿಗೆ ಕೂಡಿಕೊಂಡೇ ಇರುವುದು.
ರಸವನ್ನು ಗ್ರಪಿಸಲು ವಿಭಾವಾದಿಗಳನ್ನು ಪರಾಮರ್ಶಿಸುವುದೊಂದೇ ದಾರಿ;
ಅವುಗಳ ಅರಿವಿಲ್ಲದೆ ರಸದ ಅರಿವಿಲ್ಲ. ರಸದ ಆಸಿಪ್ವHದವನ್ನು ಪಾನಕ
ರಸದ ಆಸ್ವಾದಕ್ಕೆ ಭರತನು ಹೋಲಿಸಿದ್ದನಪ್ಪೆ; ಅದನ್ನು ಈಚಿನ ಲಾಕ್ಷಣಿ
ಕರೂ ಉಪಯೋಗಿಸಿಕೊಳ್ಳುತ್ತಾರೆ. ಪ್ರಾನಕದಲ್ಲ ಸೇರುವ ಜಿಲ್ಲ (ಅಥವಾ
ಸಕ್ಕರೆ), ಹುಳಿ, ಏಲಕ್ಕಿ ಮೊದಲಾದವು ವಿಭಾವಾನುಭಾವಾದಿಗಳಿಗೆ ಸಮ.
ಇವನ್ನು ಒಟ್ಟು ಗೂಡಿಸಿ ಸವಿಯುವಾಗ ಒಂದೊಂದರ ರುಚಿಯೂ ಪೃತ್ಯೇಕ
ವಾಗಿ ಕಾಣಿಸುವುದಿಲ್ಲ. ಎಲ್ಲವನ್ನೂ ಒಳಕೊಂಡು ಎಲ್ಲಕ್ಕೂ ಭಿನ್ನವಾದ
ಒಂದು ಅಬಂಡ ರುಚಿ ನಾಲಗೆಗೆ ದೊರೆಯುತ್ತದೆ. ರಸದ ವಿಷಯವೂ
8" ಕ್ಟ ಅನ್ಯತ್ರ ಐಇತ್ಮಂ ದೃಪ್ತಮಿತಿ ಚೇತ್ ಭೂಷಣಮೇತದಸಿಸ್ಮಾಕಂ ಅಲ್‌ೌಕಿಕತ್ವಸಿದ್ಗ್;
ಪಾನಕರಸಾಸ್ಟಾದೋಪಿ ಕಿಂ ಗುಡಮರೀಚಾದಿಷು ದೃಷ್ಟ ಇತಿ ಸಮಾನಮೇತತ್.''
(ಅಭಿನವಭಾರತೀ, 7, ಪು. ೨೮೬). ಅಭಿನವಗುಪ್ತನನ್ನೇ ಮಮ್ಮಟನು ಅನುವಾದಿಸಿ ಷೀಗೆ
ಹೇಳುತ್ತಾನೆ: «ಕಾರಕ ಜ್ಞಾಪಕಾಭ್ಯಾಂ ಅನ್ಪತ್ ಕ್ಟ ದೃಷ್ಟಂ ಇತಿ ಚೇತ್, ನ ಕೃಚಿತ್
ದೃಷ್ಟಮಿತಿ ಅಲೌಕಿಕಸಿದ್ದೇರ್ಭೂಷಣಮೇತತ್, ನ ದೂಷಣಂ'' (ಕಾವ್ಯಪ್ರಕಾಶ,
iv. ಖೆ ವೃತ್ತಿ).
9 ಶ್ಟೇದಮನ್ಯತ್ರ [ತದ್ದೃಷ್ಟ] ಮಹೋ ನಿಪುಣತಾ ತವ |
ದೃಪ್ಟಾಂತಂ ಯಾಚಸೇ ಯತ್ ತ್ವಂ ಪ್ರತ್ಯಕ್ಷೇಪ್ಯನುಮಾನವತ್!
ಈ ಶ್ಲೋಕವನ್ನು ಪ್ರಭಾಕರನು " ರಸಪುದೀಪ ' ದಲ್ಲ ಉದಾಹರಿಸಿದ್ದಾನೆ (ಪು.೩೬).
೫.೩ 23
೩೫೪ ಭಾರತೀಯ ಕಾವ್ಯಮಾಮಾಂಸೆ
ಹೀಗೆಯೇ. ಇದು ವಿಭಾವ, ಇದು ಅನುಬಾವ ಎಂದು ಬಿಡಿಸಿ ಬಿಡಿಸಿ
ವಿಚಾರ ಮಾಡದೆ, ಆ ಸಮುದಾಯದಿಂದ ಅಭಿವೃಕ್ತವಾಗುವ ಅಖಂಡವೂ
ಲೋಕೋತ್ತರವೂ ಆದ ರಸವನ್ನು ಆಸ್ಪಾದಿಸುತ್ತೇವೆ.
ಅಭಿನವಗುಪ್ತನು “ತೆ « ತಸ್ಮಾತ್. ಸತಾಮತ್ರ ನ ದೂಪಿತಾನಿ
ಮತಾನಿ ತಾನ್ಯೇವ ತು ಶೋಧಿತಾನಿ'' ಎಂದು ಹೇಳಿದನಷ್ಟೆ. ತನಗಿಂತ
ಹಿಂದೆ ಇದ್ದವರ ಮತಗಳಲ್ಲಿ ಸಾರವತ್ತಾದ ಭಾಗಗಳನ್ನು ಅಂಗೀಕರಿಸಿ,
ಅವನು ಯಥೋಚಿತವಾಗಿ ತನ್ನ ಪ ಸೇರಿಸಿಕೊಂಡೇ
ಹೇಗೆ ಹು ಹುಟ್ಟಿ ಬೆಳೆದು ಪುಪಿ pd ವಿಷಯ. ಆ ಅದನ್ನೆ ಲ ಅವನ ನು
ರಸನಿಪ್ಪತ ತ್ತಿಯೆಂದು ಭ್ರಮಿಸಿದನು. ಸ್ಕೂಯ್ಯ ಓಭಾವದ ಪುಷ್ಟಿ, ಯ ವಿಚಾರ
ಅಭಿನವಗುಪ್ತ ನಿಗೂ ; ಸಮ್ಮತವೇ ಸರಿ. 'ತಂಕುಕನು ಕನು ವಿಭಾವಾನುಭಾವಾದಿ
ಗಳಿಂದ ರಸವು ಅನುಮಿತವಾಗು ನಿವುದೆಂದು ಹೇಳಿದನು. ಹೀಗೆ ಅನುಮಿತ
ವಾಗತಕ್ಕದ್ದು ರಸವಲ್ಲ; ಅದು ಕಥಾಪುರುಷನ ಸ್ಕಾ ಯಿಭಾವ ಎಂದು
ಅಭಿನವಗುಪ್ತ ನು ವ್ಯ ವಸ್ಥೆ ಮಾಡಿದನು. ರಂಗಭೂಮಿಯ ನಡೆವಳಿಕೆ
ಗಳನ್ನು ನ್ ಸಾಮಾಜಕನು ಮೊಟ್ಟಮೊದಲು ಮಾಡಬೇಕಾದ
ಕಾರ್ಯವೇ ಈ ಊಹೆ. ಲೋಕದಲ್ಲಿ ಕಾರ್ಕ ಕಾರಣಾದಿಗಳನ್ನು ನೋಡಿ
ಸ್ಮಾಯಿಯನ್ನು ಊಹಿಸುವಂತೆಯೇ ಇಲ್ಲ ವಿಭಾವಾದಿಗಳನ್ನು ನೋಡಿ
ಕಥಾಪುರುಷರೆ ಸ್ಥಾಯಿ ಇಂಥದೆಂನು ಅರಿತುಕೊಳ್ಳುತ್ತಾನೆ; ಅದರೊಂದಿಗೆ
ತಾನೂ ಹೃದಯಸಂವಾದವನ್ನು ಪಡೆಯುತ್ತಾನೆ. ಶಂಕುಕನ ಚಿತ್ರ
ತುರಗನ್ಯಾಯವೂ ಅಭಿನವಗುಪ್ತ ನಿಗೆ ಅಸಮ್ಮತ ವ್ಯವೆಂದ್ದ ತೋರುತ್ತದೆ ;
ಆದರೆ ನಿರ್ಧರವಾಗಿ ಹೇಳುವುದು ಕಪ್ಪ." ಭಟ್ಟ ನಾಯಕನಿಗಂತೂ ಅಭಿ
ನವಗುಪ್ತನು ವಿಶೇಷವಾಗಿ ಖು ಮಣಿ. ಸಾಧಾರಣೀಕರಣ ” ತತ್ತ್ವದ
10 * , . . ವಿಭಾವಾದಿಜೀವಿತಾವಧಿಃ ಪಾನಕರಸನ್ಯಾಯೇನ ಚರ್ವ್ಯಮಾಣಃ...”
(ಕಾವ್ಯಪ್ರಕಾ ತ, | iv. ೫ ವೃತ್ತಿ). ".... ನಪಿ ಅಸ್ಟಾದ್ಯಮಾನೇ ಪಾನಕರಸೇ ಮಧುರಾ
ಷ್ಕಾ ) ದಯೋ ಬಟಾಗನ ಪ್ಪ ಕತ್ಟಿಯಂತೇ. ತದ್ಭತ್ ಐಹಾಪಿ ವಿಭಾವಾದ್ಯಾಕಾರರೂಪಿತೈೊಐ
ರಸಡರ್ವಣಇಣ . , . '' (ಮೇಲಿನದರ ವ್ಯಾಖ್ಯಾ, ತಿರುವೇಂದ್ರಂ ಮುದ್ರಣ, ಪು. ೧೧೬).
11 "ಸ್ಟಾ ಯಿಪ್ರತೀತಿರನುಮಿ ತಿರೂಪಾ ವಾಚ್ಯಾ, ನ ರಸಃ '' (ಅಭಿನವಭಾರತೀ, [
ಪು. ೨೮೫).
12 ಅಭಿನವಭಾರಕೀ, 7, ಪು. ೩೬೩೭ ನೋಡಿ.
]
೨೨. ರಸಾನುಭದ- ೨ ೫ಜಿ
ಮೂಲರೇಖೆಗಳನ್ನು ಅಭಿನವಗುಪ್ತನು ಇಲ್ಲಿಂದಲೇ ಗೃಪಿಸಿರಬಹುದು.
ರಸಾನುಭವವು ಕ ವಿಶ್ರಾಂತಿ ಶಿ]? ರೂಪಪೆಂಬುನೂ ಇಬ್ಬ ರ ಮತಗಳಲ್ಪ್ಲಯೂ
ಕಾಣಿಸಿಕೊಳ್ಳುತ್ತ ಡೌ
ಸಾಧಾರಣೀಕರಣವನ್ನು ಕುರಿತು ಸಂದೇಹಕ್ಕೆ ಅವಕಾತವಿರುವುದ
ರಿಂದ, ಎರಡು ಮಾತನ್ನು ಇಲ್ಲಿ ಜಿಳಸಜೇಕಾಗಿದೆ ವಿಭಾವಾದಿಗಳು
ಸಾಧಾರಣ ಭಾವವನ್ನು ಹೊಂದಿ, ಸೀತೆ ಕೇವಲ ಒಬ್ಬ ಕಾಮಿನಿಯೆಂದೂ
ರಾಮನು ಒಬ್ಬ ವೀರನೆಂದೂ, ಇವರ ರತಿ ರತಿಸಾಮಾನ್ಯವೆಂದೂ
ತಿಳಿಯಬರುವುಡೆಂದರೆ ಅರ್ಥಪೇನು? ರಾಮಾಯಣದ ಸೀತಾಸ್ಕಯಂವರ
ಭಾಗದಲ್ಲ ಸೀತೆ ರತಿಸ್ಕಾಯಿಗೆ ವಿಭಾವ; " ಶಾಕುಂತಲ' ದಲ್ಲಿ ಶಕುಂತಲೆ,
"ಮೃಚ್ಛಕಟಿಕ 'ದಲ್ಲಿ ವಸ೦ತಸೇನೆ, "ರತ್ನಾವಳಿ'ಯಲ್ಲಿ ಸಾಗರಿಕೆ. ಇವರು
ನಾಲ್ಕರೂ ಕಾಮಿನ್ಲೀಮಾತ ಶ್ರವಾಗುವರೆಂದರೆ, ಒಬ್ಬರೊಬ್ಬರಿಗೆ ಶೀಲ
ಸ್ವಭಾವಗಳಲ್ಲಿ ಭೇದವೇ ತೋರುವುದಿಲ್ಲ, ಇದರಂತೆಯೇ ನಾಲ್ವರ ಪ್ರೀತಿ
ಯಲ್ಲೂ ತಾರತಮ್ಯಪೇ ಇಲ್ಲ ಎಂದು ಅರ್ಥವಾಗಲಾರದು. ಆ ಪಕ್ಷದಲ್ಲಿ
ಒಂದು ನಾಟಕಕ್ಕೂ ಮತ್ತೊಂದಕ್ಕೂ ವ್ಯತ್ಯಾಸವೇ ಇಲ್ಲವಾಗುತ್ತದೆ. ಈ
ವಿಚಾರದಲ್ಲಿ ಭಟ್ಟನಾಯಕನ ಮತ ಏನೆಂಬುದನ್ನು ನಿಷ್ಕರ್ಷೆಯಾಗಿ ತಿಳಿ
ಯಲು, ಅವನ "ಹೃದಯದರ್ಪಣ'ವು ನಪ್ಪವಾಗಿರುವುದರಿಂದ ಸಾಧ್ಯವಿಲ್ಲ.
ಆದರೆ ಧೃನಿಪ್ರಸ್ಮಾನದ ಪ್ರಮುಖರ ಅಭಪ್ರಾಯಪೇನೋ ಸ್ಪಪ್ಪವಾಗಿದೆ,
ಸನಶಾಂಣೀಕರಣವೆಂದರೆ ಕಾವ್ಯನ್ರಾಟಕ ಪ್ರಪಂಚದ ಒಬ್ಬ ನಾಯಿಕೆಗೂ
ಸತ್ತು ನಾಯಿಕೆಗೂ ಇರಬ ವೃತ್ತ ನನಲ ಹೊಡದು ನಗಿ ಒಬ್ಬಳು
ಇನ್ನೊಬ್ಬಳ ಪಡಿಯಚ್ಚಾಗಿ ಕಾಣಬರುವಳೆಂದು_ ಅರ್ಥವಲ್ಲ. ಲ್ಲೌಕಿಕ
ವೃವಹಾರದಲ್ಲಿ ಗೋಚರವಾಗುವ ದೇಶಕಾಲಾದಿವಿಶೇಷ ನ ಸಂಬಂಧವನ್ನು.
ಈ ಕಲಾಪ್ರಪಂಚದ ವ್ಯಕ್ತಿಗೆ ತಪ್ಪಿಸಿ ಸಿ_ಎಂದರೆ,. ಈಕೆ ನಮ್ಮ ದಿನ ದಿನಬಳ
ಕೆಯ ಜಗತ್ತಿಗೆ ತನಡವಳು ಇಂಥ ಒ ಒಬ್ಬ ಐತಿಹಾಸಿಕ ಅಥವಾ ಪೌರಾಣಿಕ
ಅಥವಾ ಕಾಲ್ಬನಿಕ ವ್ಯಕ್ತಿ ಎಂಬ ನಿಯತತ್ಯವ ನ್ನು ತಪ್ಪಿ ಸಿ__ಸಾಮಾಜಿಕರೆಲ
ರಿಗೂ ಸಾಧಾರಣ « ವಿಭಾವ `'ವಾಗುವಂತೆ ಏರ್ಪಡಿಸತಕ್ಕದ್ದೇ ಇಲ್ಲಿಯ
ಸೂಧಾರಣೀಕರಣ.13 ನಾಟ್ಯಪ್ರಪೆಂಚದ ಸೀತೆಗೂ ಶಕುಂತಲೆಗೂ
MENS
13 ಪೆಂಬಂಧ ವಿಶೇಷಸ್ಟೀಕೌರ ಪರಿಹಾರನಿಯಮಾನಧ್ಯವಸಾಯಾತ್ ಸಾಧಾರ
ಣ್ಯೀನ ಪ್ರತೀತ್ಯಃ...... » (ಕಾವ್ಯಪ್ರಕಾಶ, ೪. ೫ ವೃತ್ತಿ); ""ವಿಭಾವತ್ವಾದಿಪ್ರಕಾರೇಣ
ಭಾನಮೇವ ಸಾಧಾರಣ್ಯೀನ ಭಾನಂ `' (ಪ್ರಭಾಕರ : ರಸಪುದೀಪ, ಪು. ೩೧).
23-B
೩೫೬ ಭಾರತೀಯ ಕಾವ್ಯವಿಸಾಮಾಂಸೆ
ವಸಂತಸೇನೆಗೂ ಸಾಗರಿಕೆಗೂ ಸೂಕ್ಷ್ಮ ವೃತ್ಯಾಸಗಳು ಉಳಿದೇ ಇರು
ತ್ತವೆ; ಒಬ್ಬೊಬ್ಬಳೂ ಅನೇಕ ಗುಣಸಮುದಾಯದಿಂದ ಕೂಡಿದ ಪ್ರತ್ಯೇಕ
ವ್ಯಕ್ತಿ. ಹೀಗಿಲ್ಲದಿದ್ದರೆ ವೈಚಿತ್ರ್ಯವೆಲ್ಲಿ? ಅದಕ್ಕೂ ಮೊದಲು, ಇವರು
ಮಾನವರೆಂಬ ಸಂಭಾವ್ಯತೆ ಎಲ್ಲಿ? ಸಂಭಾವ ತೆಯೇ ಇಲ್ಲದ ಯಂತ್ರದ
ಜೊಂಜೆಗಳಾಗಿಬಿಟ್ಟರೆ ಸಾಮಾಜಿಕನಿಗೆ ಇವರ 'ನಡೆವಳಕೆಗಳಲ್ಲ ಹೃದಯ
ಸಂವಾದ ಹೇಗೆ ಉಂಟಾದೀತು; ರಸಪ್ರತೀತಿ ಹೇಗೆ ಒದಗೀತು?
ರಸವು ಗೋಚರಿಸುವಷ್ಟು ಕಾಲವೂ ವಿಭಾವಾದಿಗಳು ಗೋಚರವಾ
ಗಲೇ ಬೇಕಷ್ಟೆ. ಕವಿ ಪ್ರತಿಯೊಂದು ಪಾತ್ರಕ್ಕೂ ಸೂಕ್ಷ್ಮ ಗುಣಗಳನ್ನು
ಕಲ್ಪಿಸಿ, ಒಂದೊಂದೂ ವಿಶೇಪರೀತಿಯಲ್ಲಿ ವರ್ತಿಸುವಂತೆ ಮಾಡಿರುತ್ತಾನೆ.
ಇದೆಲ್ಲವೂ ಸಾಮಾಜಿಕ ಗೋಚರವಾಗುತ್ತಲೇ ಇರುತ್ತದೆ. ಹೀಗಿರುವಾಗ
ಆ ಪಾತ್ರದಲ್ಲಿ ವಿಶೇಷಗುಣಶೂನ್ಯವಾದ ಸ್ತ್ರೀತ್ವದ ಅಥವಾ ಪುರುಪತ್ಚದ
ಅಸ್ಥಿ ಪಂಜರ ಮಾತ್ರ ಕಾಣಬರುವ ಸ೦ಭವವೆಲ್ಲ? ಇನ್ನು, ವಿಭಾವಾದಿಗಳ
ಸ್ವರೂಪಕ್ಕನುಸಾರವಾಗಿಯೇ ರಸದ ಆಸ್ಕಾದದಲ್ಲೂ ವೈಚಿತ್ರ್ಯವೆ೦ಟಾಗು
ತ್ತದೆ. ನಾಯಕನಾಯಿಕೆಯರು ಉದಾತ್ತವ್ಯಕ್ತಿಗಳಾದರೆ ಸಾಮಾಜಕನಿಗೆ
ಪ್ರತೀತವಾಗುವ ಶೃಂಗಾರವೂ ಉದಾತ್ತವಾಗಿಯೇ ಇರುತ್ತದೆ; ಅವರು
ಸಾಮಾನ್ಯ ವ್ಯಕ್ತಿಗಳಾದರೆ ಶೈ ಶ್ಲಂಗಾರವೂ ಆ ಮಟ್ಟಕ್ಕೇ ಇಳಿಯುತ್ತದೆ.
ಕಾವ್ನವನ್ನು ಓದುವವನೆಲ್ಲರಿಗೂ ನಾಟಕವನ್ನುನೋಡುವವರೆಲ್ಲರಿಗೂ
ರಸಾನುಭವವು ನಿಯತವಾಗಿ ಡೊರೆಯುವುದೆಂದು ಹೇಳಲು ಸಾಧ ವಿಲ್ಲ.
ಸಾಮಾಜಿಕನಲ್ಲಿ ನೆಲೆಗೊಂಡಿರುವ ಭಾವವು ವಿಭಾವಾದಿಗಳ ಮೂಲಕ
ಅಡ್ಡಿತಡೆಗಳಿಲ್ಲದೆ ಗೋಚರವಾಗಿ ಆಸ್ವಾದ್ಯವಾದರೆ ರಸವೆನಿಸಿಕೊಳ್ಳುತ್ತದೆ.
ಚದರ ರಸ್ತ: ಗೋಡರವಾಗಲು ಅನೇಕ ಎಫ್ನುಗಳುಂಟು, ಇವುಗಳ
ಕೆಲವು ಮುಖ್ಯವಾಗಿ ಸಾಮಾಜಿಕನ ಹೋಪದಿಂದ ಘಟಿಸತಕ್ಕ ವು; ಮತ್ತೆ
ಕೆಲವು ಕವಿನಟಾದಿಗಳ ದೋಪದಿಂದ ಘಟಿಸತಕ್ಕವು. ಇವು ಸಮುಚಿತ
ವಾದ ವಿಭಾವಾದಿಗಳಿಂದ ನಿವಾರಣಿಯಾದಲ್ಲದೆ ರಸವು ಗೋಚರಿಸ
14 ಅತ್ರ ಜನಕತನಯಾತೃರಾಮಪರಿಗ್ರಹತ್ಪಾದಿ ವಿರುದ್ಧಧರ್ಮಪರಿಹಾರೇಣ
ಲಲಿತೋಜ, ನಲಶುಚಿದರ್ಶನೀಯತ್ಸಾದಿ ವಿಶಿಪ್ಲ ಏವ ಶ್ರುತಃ ” ನೀತಾದಿವಿಭಾವೋ
ಯೋಷಿತ್ಸಾಮಾನ್ಯಂ ತಾದೃಶಮೇವ ಜ್ಞಾಪಯತಿ ; ನ ಪುನಃ ಸ್ಕ್ಯೀಜಾತಿಮಾತ್ರಂ,,,,,,''
(ರಸಾರ್ಣವಸುಧಾಕರ, ಪು. ೨೦೮).
೨೨. ರಸಾನುಭವ... ೨ ೩೫೭
ಲಾರದು. ಹೀಗೆ, ಅಭಿನವಗುಪ್ತನ ಮತದಲ್ಲಿ ವಿಚ್ಮನಿವಾರಣಿ ರಸ
ನಿಪ್ಪತ್ತಿಗೆ ಅತಿ ಮುಖ್ಯ. ಈ ವಿಘ್ನಗಳು ಯಾವುವು; ಇವನ್ನು ತೊಲಗಿಸು
ವುದು ಹೇಗೆ ಎಂಬುದನ್ನು ಕುರಿತು ಅವನು ಹೇಳಿರುವುದರ ತಿರುಳನ್ನು
ನಾವು ಗ್ರಪಿಸಿ ಅರ್ಥಮಾಡಿಕೊಳ್ಳುವುದು ಅಗತ್ಯ. ಇದರಲ್ಲಿ ಕೆಲವು
ಭಾಗ ಈ ಮೊದಲೇ ಪ್ರಾಸಂಗಿಕವಾಗಿ ಅಲ್ಲಲ್ಲಿ ಬಂದಿದೆ.
ರಸನಿಪ್ಪತ್ತಿಗೆ ಇರುವ ಅಡ್ಡಿ ತಡೆಗಳು ಈ ಏಳ್ಳು_ (೧) ಸಂಭಾ
ವನಾವಿರಹ, (೨) ದೇಶಕಾಲವಿಶೇಪಾವೇಶ, (೩) ನಿಜಸುಖಾದಿವಿವಶ್ರೀ
ಭಾವ, (೪) ಪ್ರತೀತ್ಯುಪಾಯವೈಕಲ್ಯ, (೫) ಸ್ಭು ಟತ್ಪಾಭಾವ, (೬) ಅಪ್ರ
ಧಾನತಾ, (೭) ಸೆಂಶಯಯೋಗ. ಇವುಗಳಲ್ಲಿ ಒಂದೊಂದನ್ನೂ ಕುರಿತು
ಕೆಲಕೆಲವು ಮಾತುಗಳನ್ನು ಹೇಳಬಹುದು.
ಈ ವಿಫ್ಲಸಪ್ತಕದಲ್ಲ ಅಸಂಭಾವ್ಯತೆಯೇ ಮೊದನೆಯ ವಿಘ್ನ. ಇದರ
ಪ್ರಸ್ತಾವ ನಮ್ಮ ಗ್ರಂಥದ ೧೨ನೆಯ ಅಧ್ಯಾಯದಲ್ಲಿ ಆಗಲೇ ಬಂದಿದೆ
(ಪು. ೧೮೪_೫). ನಾಟಕದಲ್ಲಿ ಪ್ರದರ್ಶಿಸುವ ಕಥಾವಸ್ತು, ನಡೆ, ನುಡಿ ಮೊದ
ಲಾದ ಪ್ರತಿಯೊಂದೂ ನಂಬಲು ಅರ್ಹವಾ? ರಬೇಕು; ಅಲ್ಲಿಯ ನಿರೂಪಣಿ
ಸಂಭವವೆಂದು ತೋರಬೇಕು. ನಾಟಕದ ಯಾವ ಪಾತ್ರವನ್ನಾದರೂ
ಸಂಗತಿಯನ್ನಾದರೂ ಕುರಿತು, ಪೀಗೆ ಇರುವುದುಂಟೆ, ಪೀಗೆ ಆಗುವುದುಂಟೆ
ಎಂಬ ಸಂದೇಹ ಹುಟ್ಟಿದರೆ ತೀರಿತು, ಮನಸ್ಸು ಅಲ್ಲ ನೆಲೆಗೊಳ್ಳದೆ
ಹಿಮ್ಮೆಟ್ಟುತ್ತದೆ. ನಂಬಿಕೆಯೇ ಹುಟ್ಟದಿದ್ದ ಮೇಲೆ ಹೃದಯಸಂವಾದ
ಹೇಗೆ ಉಂಟಾದೀತು?
ಎರಡನೆಯ ವಿಘ್ನವನ್ನು 4 ೦ದಿನ ಮತ್ತು ಈ ಅಧ್ಯಾಯಗಳಲ್ಲಿ ತಕ್ಕ
ಮಟ್ಟಿಗೆ ಗಮನಿಸಿದ್ದೇವೆ. ಅದರೆ ಅದು ಬಹು ಮುಖ್ಯವಾಗಿರುವುದರಿಂದ
ಇಲ್ಲಿಯೂ ನಾಲ್ಕು ಮಾತು ಹೇಳುವುದು ಅಗತ್ಯ, ಸಾಮಾಜಿಕನು ನಾಟ್ಯ
ಮಂದಿರಕ್ಕೆ ಪ್ರವೇಶಿಸಿದಾಗ ಅದಕ್ಕೆ ಉಚಿತವಾದ ಮನೋವೃತ್ತಿ ಯನ್ನು
ಹೊಂದದೆ, ದೇಶಕಾಲಗಳ ಪರಿಮಿತಭಾವನೆಯನ್ನು ತ್ಯಜಿಸದೆ, ವ್ಯಾವ
ಹಾರಿಕ ಪ್ರಪಂಚದಂತೆಯೇ ಅದನ್ನು ಪರಿಗಣಿಸಿದರೆ ಅವನ ಭಾವವು
ಸಾಂಸಾರಿಕ ಭಾವವಾಗಿಯೇ ಉಳಿಯು ವುದ: ಖಂಡಿತ. ಇವನು ರಂಗ
ಸ್ಥಳದಲ್ಲಿ ನಡೆಯುವ ಒಂದೊಂದು ಸಂಗತಿಯನ್ನೂ ತನ್ನ ಸ್ವಂತಕ್ಕೇ ಅನ್ಯ
ಯಿಸಿಕೊಳ್ಳಲು ತೊಡಗುತ್ತಾನೆ. ಅಲ್ಲಿ ರಮ್ಯವಾಗಿ ಕಾಣಿಸುವುದನ್ನು
ನಾಲ ಭಾರತೀಯ ಕಾವೃಮಾಮಾಂಸೆ
ತನಗಾಗಿ ಬಯಸಿ ಬಾಯಿಬಿಡುತ್ತಾನೆ.! ಅಲ್ಲ ಅನಿಷ್ಟವಾದದ್ದು ನಡೆದರೆ
ತನಗೋ ತನ್ನ ಮನೆಯವರಿಗೋ ಕಪ್ಪ ತಟ್ಟಿದಂತೆ ಗೋಳಾಡುತ್ತಾನೆ,
ರೇಗುತ್ತಾನೆ. ಕೆಲ ಮಂದಿ ಸಾಮಾಜಿಕರು ಇನ್ನೊಂದು ಹೆಜ್ಜೆ ಮುಂದು
ವರಿಯುವುದೂ ಉಂಟು. ಕೆಲವು ವರ್ಷಗಳ ಹಿಂದೆ ಹೆರಿಕ್ಸ ೦ದ್ರ ನಾಟಕ
ವನ್ನು ಒಂದು ಕಡೆ ಅಭಿನಯಿಸುತ್ತಿ ದ್ಹಾಗ, ನಕ್ಷತ್ರಕನು ಹರಿಶ್ಚಂದ್ರನಿಗೆ
ಕೊಟ್ಟ ಚಿತ್ರಹಿಂಸೆಯನ್ನು ನೋಡಲಾರದೆ ಒಬ್ಬ ಪ್ರೇಕ್ಷಕನು ರಂಗ
ಭೂಮಿಯ ಮೇಲಕ್ಕೆ ಹಾರಿ ಬಂದು ನಕ್ಷತ್ರ ಕಪ್ಪೇಷಧಾರಿಯಾದ ನಟನನ್ನು
ಚೆನ್ನಾಗಿ ಹೊಡೆದು ತನ್ನ ಉದ್ವೇಗವನ್ನು ತೀರಿಸಿಕೊಂಡನಂತೆ. ಇದು
ಬಂಡಿತ ರಸಾನುಭವವಲ್ಲ!
ಕಥಾವಸ್ತುವೂ ಈ ಬಗೆಯ "“ ದೇಶಕಾಲ ವಿಶೇಪಾವೇಶ ''ಕೈ ಅವ
ಕಾತಕೊಡಬಾರದು. ನಾಟ್ಯವು ಆದಿಯಲ್ಲಿ ನಿರ್ಮಿತವಾದಾಗ ಒಂದು
ಪ್ರಸಂಗ ನಡೆಯಿತೆಂದು "ನಾಟ್ಗಶಾಸ್ತ್ರ'ದ ಮೊದಲನೆಯ ಅಧ್ಯಾಯದಲ್ಲಿ
ಒಂದು ಐತಿಹ್ಯವು ನಿರೂಪಿತವಾಗಿದೆ. ಭರತನೂ ಅವನ ಪರಿವಾರದವರೂ
ಅಭಿನಯಿಸಿದ ಮೊಟ್ಟಮೊದಲನೆಯ ವಸ್ತು ಅಮೃತಮಥನದ ಕಥೆ -ದೇವತೆ
ಗಳು ಅಸುರರನ್ನು ಜಯಸಿದ ವಿಷಯ, ದೇವನಾನವರೇ ಪ್ರೇಕ್ಷಕರು.
ನಾಟಕವನ್ನು ನೋಡಿ ದೇವತೆಗಳೆಲ್ಲರೂ ಸಂತೋಷಪಟ್ಟರು. ಆದರೆ
ದೈತ್ಯ ದಾನವರು ಅದರ ವಿಷಯವನ್ನು ಸ್ಕಕೀಯವಾಗಿ ಅನ್ವಯಿಸಿಕೊಂಡು,
ನಮ್ಮ ಅಪಜಯವನ್ನು ಹೀಗೆ ಪ್ರದರ್ಶಿಸಿ ಪೀಯಾಳಿಸಿದರಲ್ಲಾ ಎಂದು
ರೇಗಿ ನಾಟೃಕ್ಕೆ ವಿಘ್ನ್ನವನ್ನು ತಂದರಂತೆ. ಆ ತೊಂದರೆಯನ್ನು ಅಡಗಿಸಿದ
ಬಳಿಕ, ಬ್ರಹ್ಮನು ದೈತ್ಯಾದಿಗಳನ್ನು ಸಮಾಧಾನಗೊಳಿಸಿ, ಇದು
ಕೇವಲ ದೇವಾಸುರರ ಕಥೆಯ ಅನುಕರಣವಲ್ಲ. ನಾಟ್ಯವು ತ್ರೈ ಲ್ಲೋಕ್ಯದ
ಭಾವಾನುಕೀರ್ತನ.... ಸುಖದುಖಃಸಮನ್ವಿತವಾದ ಲೋಕಸ್ಟಭಾವವೇ
ನೇನುಂಟೋ ಅದರ ಅಭಿನಯವೇ ನಾಟ್ಯ.'' ಎಂದು ಮೊದಲಾಗಿ ವಿವರಿ
ಸಿದನಂತೆ.. ಇದರಿಂದ ದೈತೃದಾನವರಿಗೆ ಎಪ್ಪರ ಮಟ್ಟಿಗೆ ಸಮಾಧಾನ
ವಾಯಿತೋ ತಿಳಿಯದು. ನಾಟಕಕಾರನಿಗೇನೋ ಒಂದು ಎಚ್ಚರಿಕೆಯನ್ನು
15 ನಾಟ್ಯದಲ್ಲ ಪ್ರದರ್ಶಿತವಾಗುವ, ಕಾವ್ಯದಲ್ಲ ವರ್ಣಿತವಾಗುವ ಕೆಲವು ವಿಷಯಗಳು
ಸಾಮಾಬಿಕರಲ್ಲಿ ಲೌಕಿಕಭಾವಗಳನ್ನೇ ಕೆರಳಿಸುವಂತಿರುವುಮುಂಟು. ಉದಾಹರಣಿಗೆ,
ಸುಂದರಿಯಾದ ನಟಿಯೊಬ್ಬಳ ವಿಲಾಸಗಳು ವ್ಯಾಮೋಹವನ್ನು ಉದ್ರೇಕಿಸಬಹುದು.
ಇಂಥ ಕಡೆಗಳಲ್ಲಿ ಕವಿಯ ಮತ್ತು ನಟರ ಉತ್ತರನಾಂಿತ್ಯವೂ ಇಲ್ಲದಿಲ್ಲ.
೨೨. ರಸಾನುಭಸ--೨ ೩೫೯
ಇದು ಕೊಡುತ್ತದೆ. ತನ್ನ ಕಾಲದ ಸಂಗತಿಗಳನ್ನು ಕುರಿತು
ಅವನು ನಾಟಕರಚನೆ ಮಾಡಿದರೆ ಬೇರೆಯ ಹಲವು ಉದ್ದೇಶಗಳು
ಸಾಧಿತವಾಗಬಹುದು. ಸಮಾಜ ಸುಧಾರಣಿಯಾಗಬಹುದು; ಸಮಾಜ
ಕ್ರಾಂತಿ ಕೂಡ ಒದಗಬಹುದು. ಆದರೆ ಪ್ರೇಕ್ಷಕರಲ್ಲಿ ಕೆಲವರಾದರೂ
ಅದನ್ನು ಸ್ವಂತ ವಿಷಯಕ್ಕೇ ಅನ್ವಯಿಸಿಕೊಂಡು ರಾಗದ್ಯೇಷಗ್ರಸ್ತರಾಗಿ
ನಿಜವಾದ ರಸಾಸ್ವಾದವನ್ನು ಪಡೆಯದೆ ಹೋಗುವ ಸಂಭವವುಂಟು.
ಇದನ್ನು ಅಭಿನವಗುಪ್ಪನು ಜ್ಞಾಪಿಸುತ್ತಾನೆ.
ಇದಿಷ್ಟೂ ಸೆಕಗತತ್ಯದ ದೋಷ. ಇನ್ನು ಕೆಲವು ಮಂದಿ
ಸಾಮಾಜಿಕರಿಗೆ, ರಂಗಸ್ಥಳೆದ ಚರೈಯೆಲ್ಲ ಪರಕ್ಷೀಯ.ರ ವ್ಯವಹಾರ ;
ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನಿಸಿ, ತನ್ಮ ಪುತೆಯೇ ಹುಟ್ಟದೆ ಅವರು
ಉದಾಸೀನರಾಗಿದ್ದು ಬಿಡಬಹುದು. ಆಗ ಭಾವವೂ ಇಲ್ಲ; ರಸವೂ
ಇಲ್ಲ.
ಲೋಕವೂ ನಾಟ್ಯವೂ ಬೇರೆ ಬೇರೆ ಜಗತ್ತುಗಳೆಂದು ಸಾಮಾಜಿಕನು
ತಿಳಿದುಕೊ೦ಡಲ್ಲಿ ಈ ದೋಪಗಳ: ಪರಿಹಾರವಾಗುತ್ತಷೆ. ಅದಕ್ಕೆ ಅನು
ಕೂಲವಾಗುವಂತೆ ನಾಟ್ಯಮಂದಿರದಲ್ಲೂ ಏರ್ಪಾಡುಗಳಿರಬೇಕು. ಮ೦ಟ
ಪದ ಅಲಂಕಾರ, ಗೀತ, ವಾದ್ಯ, ನೃತ, ಪೆ.ದಲಾದವೆೆ ಸಾಧಾರಣ
ಕರಣಕ್ಕೆ ಸಹಾಯಮಾಡುತ್ತವೆ.
ಮೇಲಿನದಕ್ಕೆ ಸಂಬಂಧಪಟ್ಟಂತೆಯೇ ಇನ್ನೊಂದು ವಿಘ್ನವುಂಟು
(«ನಿಜಸುಖಾದಿವಿವಶ್ಲೀಭಾವ'”) ಸಾಮಾಜಿಕನ ಸ್ವಂತ ಸುಖದುಃಖಗಳ್ಳೇ
ಅವನ ಮನಸ್ಸನ್ನೆಲ್ಲಾ ಆವರಿಸಿ ಬೇರೊ೦ದರ ಕಡೆಗೆ ತಿಶುಗಲು ಅವಕಾಶ
ವನ್ನೇ ಕೊಡದಿರಬಹುದು ನಾಟ್ಛಮಂ೦ದಿರದಲ್ಲಿ ಕುಳಿತಿರುವಾಗಲೂ
ಅವನು ತನಗೆ ಲೋಕವ್ಯವಹಾರದಲ್ಲಿ ಸಂಭವಿಸಿದ ಯಾವುದೋ ಒಂದು
ಲಾಭವನ್ನೋ ನಪ್ಪವನ್ನೋ ಚಿಂತಿಸುತ್ತಾ ಇದ್ದರೆ ರಸಾನುಭವವನ್ನು
ಪಡೆಯುವುದು ಹೇಗೆ ? ಅವನು ತನ್ನತನವನ್ನು ಮರೆತು ವಿಭಾವಾದಿಗಳ
ಕಡೆಗೇ ಪುನಸ್ಸನ್ನು ಪೂರ್ಣವಾಗಿ ಹರಿಸಬೇಕು, ಹೃದಯಸಂವಾದವನ್ನು
ಪಡೆಯಬೇಕು. ಇದಕ್ಕೂ ನಾಟ್ಯಮಂದಿರದ ಅಲಂಕಾರ ಗೀತ
ವಾದ್ಯಾದಿಗಳೇ ಸಹಾಯಕ. ಸರ್ವರಿಗೂ ಒಂದೇ ರೀತಿಯಲ್ಲಿ ಅನುಭವಾ
ಸ್ಪದವಾದ ಇವನ್ನು ನೋಡುತ್ತಾ ಕೇಳುತ್ತಾ ಅವನು ಸ್ವಂತ ಸುಖದುಃಖ
೩೬೦ ಭಾರತೀಯ ಕಾಪ್ಯವಿಾಮಾಂಸೆ
ಗಳನ್ನು ಮರೆಯುತ್ತಾನೆ. ಕದಡಿದ್ದ ಅವನ ಮನಸ್ಸು ತಿಳಿಯಾಗುತ್ತದೆ;
ತಾತ್ಕಾಲಿಕವಾಗಿಯಾದರೂ ಅವನು ಸಹೃದಯನಾಗುತ್ತಾನೆ.
""ಪ್ರತೀತ್ಯುಪಾಯ ವೈಕಲ್ಯ'' ಎಂದರೆ ಭಾವವನ್ನು ಥಟ್ಟನೆ ಗ್ರಪಿ
ಸಲು ಕಾರ್ಯಕಾರಣ ಸಾಮಗ್ರಿ ಸಾಲದಿರುವುದು; «ಸು ಟತ್ಯಾಭಾವ''
ಎಂದರೆ ಈ ಸಾಮಗ್ರಿ ಇದ್ದರೂ ಎದುರಿಗಿದ್ದ ೦ತೆ, ಎದುರಿಗೆ ನಡೆದಂತೆ,
ಸಾಕ್ಷಾತ್ಕಾ ರವಾಗದಿರುವುದು.. ಇವು ನಾಲ್ಕನೆಯ ಮತ್ತು ಐದನೆಯ
ವಿಘ್ನಗಳು. ವಿಭಾವಾನುಭಾವಾದಿಗಳೆಲ್ಲವೂ ಸಮಗ್ರವಾಗಿ ಕಣ್ಣಿಗೆ ಕಟ್ಟು
ವಂತೆ ಪ್ರದರ್ಶಿತವಾಗಬೇಕಾದದ್ದು ಅತ್ಯಾವಶ್ಯಕ ಇದನ್ನು ವಿವರಿಸಿ ಹೇಳ
ಬೇಕಾಗಿಲ್ಲ. ಇದೆಲ್ಲವೂ ಅತಿಶಯರೂಪದಲ್ಲಿದ್ದು ಭಾವವನ್ನು ವ್ಯಂಜಿಸ
ಬೇಕೆಂದು ಮಾತ್ರ ಸೂಚಿಸಬಹುದು.
«ಅಪ್ರಧಾನತೆ'' ಆರನೆಯ ವಿಘ್ನ. ಯಾವುದು ನಿಜವಾಗಿಯೂ
ಪ್ರಧಾನವಲ್ಲವೋ, ಆಗಕೂಡದೋ ಅದನ್ನು ವಿಸ್ತರಿಸುವುದೇ ಅಪ್ರಧಾನ
ತೆಯ ದೋಪ. ಮಾನವನ ಮನಸ್ಸು ಅಮುಖ್ಯವಾದದ್ದರಲ್ಲಿ ನೆಲೆಗೊಳ್ಳುವು
ದಿಲ್ಲ; ಮುಖ್ಯವಾದದ್ದರ ಕಡೆಗೆ ಓಡುವುದೇ ಅದರ ಸ್ಪಭಾವ. ವಿಭಾವಾನು
ಭಾವಾದಿಗಳು ರಸದ ಪ್ರತೀತಿಗೆ ಉಪಾಯ ಮಾತ್ರ. ಆದಕಾರಣ
ಸ್ಥಾಯಿ ಭಾವಕ್ಕೆ ಪ್ರಾಮ:ಖ್ಯಕೊಡುವಂತೆ ಅವನ್ನು ವರ್ಣಿಸಜೇಕು; ಅಭಿನ
ಯಿಸೆದೇಕು; ಎಂದರೆ ಮುಖ್ಯವಸ್ತು ಮರೆಯಾಗುವಂತೆ ಅವನ್ನು ಜೆಳಸ
ಬಾರದು. ಸಂಚಾರಿಭಾವಗಳ ಮಾತೂ ಹೀಗೆಯೇ. ಅವೂ ಔಚಿತ್ಯವನ್ನು
ಮಾರಬಾರದು. ಇನ್ನು ಸ್ಕಾಯಿಭಾವಗಳಲ್ಲೂ ಪುರುಷಾರ್ಥಗಳ ದೃಷ್ಟಿ
ಯಿಂದ ಮುಖ್ಯ ವಾದವು ಕೆಲವು; ಅಮುಖ್ಯವಾದವು ಕೆಲವು. ಉತ್ತಮ
ಪ್ರಕೃತಿಯ ನಾಯಕನಾಯಿಸೆಯರಲ್ಲಿ ಅತಿಶಯವಾಗಿರತಕ್ಕ ವು ಕೆಲವು;
ಪಾಮರರಲ್ಲಿ ಪ್ರಚುರವಾಗಿರತಕ್ಕವು ಕೆಲವು. ಉದಾಹರಣಿಗೆ, ಭಯ
ಜುಗುಪ್ಸೆಗಳು ಉತ್ತ ಮವ್ಯಕ್ತಿಗಳಲ್ಲಿ ಪ್ರಧಾನವಾಗಿರುವುದಿಲ್ಲ. ಇದನ್ನೆಲ್ಲ
ಅರಿತು ಔಚಿತ್ಯವನ್ನು ಮಾರದಂತೆ ನಿರೂಪಿಸಬೇಕು.
ಕೊನೆಯ ವಿಘ್ನ ""ಸಂಶಯಯೋಗ'', ಒಂದು ಭಾವಕ್ಕೆ ಇಂಥಿಂಥವೇ
ವಿಭಾವಾನುಭಾವಸಂಚಾರಿಗಳೆಂದಾಗಲಿ, ಯಾವುದಾದರೂ ಒಂದು
ವಿಧಾವ (ಅಥವಾ ಅನುಭೂವ ಅಥವಾ ಸಂಚಾರಿಭಾವ) ನಿರ್ದಿಷ್ಟವಾದ
ಒಂದು ಭಾವಕ್ಕೆ ಮಾತ್ರ ಸೇರಿದ್ದೆ ಂದಾಗಲಿ ಯಾವ ನಿಯಮವೂ ಇಲ್ಲ.
೨೨. ರಸಾನುಭವ. ೨ ೩೬೧
ಉದಾಹರಣಿಗೆ, ಒಂದೇ ವಸ್ತು ಭಯಕ್ಕೂ ಕ್ರೋಧಥಕ್ಕೂ ಕಾರಣವಾಗ
ಬಹುದು ; ಕಣ್ಣೀರು ಶೋಕನನ್ನೂ ತೋರಿಸಬಹುದು, ಹರ್ಷವನ್ನೂ
ತೋರಿಸಬಹುದು ; ಔತ್ಸುಕ್ಕ ರತಿಯಲ್ಲೂ ಮೂಡಬಹುದು, ಉತ್ಸಾಹ
ದಲ್ಲಿಯೂ ಮೂಡಬಹುದು. ಇದನ್ನು ೨೦ನೆಯ ಅಧ್ಯಾಯದಲ್ಲಿ ಲಕ್ಷಿಸಿ
ದ್ವೇಷೆ.. ಆದಕಾರಣ ವಿಭಾವಾನುಭಾವಾದಿಗಳನ್ನು ಜೊತೆಗೊಳಿಸಿ ಕಥೆ
ಕಟ್ಟುವಾಗ, ಪ್ರಕೃತವಾದ ಭಾವವನ್ನು ಇವು ಸಂದೇಹಕ್ಕೆ ಅವಕಾಶವಿಲ್ಲ
ದಂತೆ ಸೂಚಿಸುತ್ತವೆಯೇ ಎಂಬುದನ್ನು ಕವಿ ಎಚ್ಚರಿಕೆಯಿಂದ ಗಮನಿಸ
ಬೇಕು. ಕೆಲವು ಸಂದರ್ಭಗಳಲ್ಲಿ, ವಿಭಾವವೋ ಅನುಭಾವವೋ ಒಂದು
ಮಾತ್ರ ವರ್ಣಿತವಾಗಿದ್ದರೂ ಪ್ರಕರಣಬಲದಿಂದ ಇನ್ನೊಂದು ಥಟ್ಟನೆ
ಸ್ಫುರಿಸುವುದರಿಂದ ಅಲ್ಲ ದೋಷಷೇನೂ ಇರುವುದಿಲ್ಲ. ಅಂತೂ,
ಇವೆಲ್ಲವೂ ಏಕಾಗ್ರವಾಗಿ ಒಂದೇ ಗುರಿಯನ್ನು ಸಾಧಿಸಲು ಒಂದರೊಡ
ನೊಂದು ಹೊಂದಿಕೊಳ್ಳುವುದೇ ಇವುಗಳ ಸಂಯೋಗ. ಈ ಸಂಯೋಗ
ದಿಂದ ಉಂಟಾಗುವ ರಸದ ಅಭಿವ್ಯಕ್ತಿಯೇ ಅದರ ನಿಪ್ಪತ್ತಿ.
ಪಟ್ಟ ನಾಯಕನು” ನಾಂಬ್ವತತ್ತ್ವವನ್ನವಲಂದಿಸಿ ರಸನಿಷತ್ತಿಯನ್ನು
ವಿವರಿಸ.ವನೆಂದು ಹಿಂದೆ ನೋಡಿದೆವಷ್ಟೆ. ಅಭಿನವಗುಪ್ತನ ನಿರೂಪಣಿ
ಬಲುಮಟ್ಟಿಗೆ ವೇದಾಂತ ತತ್ತ್ವದ ದಾರಿಯನ್ನು ಅನುಸರಿಸುವಂತೆ ತೋರು
ತ್ರ ದೆ ಪೇದಾಂತದ ಮೇರೆಗೆ, ಆತೆ ವು ನ್ವಯಂಶ ಕಾತವುಳ್ಳದ್ದು. ಆನಂದ
ಸ್ವರೂಪಿಯಾದದ್ದು.' ಆದರೆ * ಆತ್ಮ ವನ್ನು ಅವಿದ್ಯೆ ಅವರಿಸಿರುತ್ತದೆ ;.
ಕಾಮಕರ್ಮಗಳು ಪ್ರ ಬಲವಾಗಿರುತ್ತ ಈ. ಹೀಗಿರುವುದರಿಂದ ಆತ್ಮವು
ಸಂಸಾರಿಗೆ ಸೃಸ್ವರೂಪದಲ್ಲಿ ಗೋಚರ ಗೋಚರವಾಗುವುದಿಲ್ಲ. ಇದೆಲ್ಲವೂ ಕ್
ದಾದರೂ ಒಂದು ರೀತಿಯಲ್ಲಿ ಭಂಗವಾದರೆ_ಆಅತ್ಮವು_ಸ್ವಪ್ರಕಾಶದಿಂದ
ಬೆಳಗಿ ಅನ೨ದಮಯವಾಗಿ ಅನುಭವಕ್ಕೆ ಬರುತ್ತದೆ. . ಈ ತತ್ತ್ಯಕ್ಕೂ
ಅಭಿನವಗುಪ್ತ ಗುಪ್ಪನ ನಿರೂಪಣಿಗೂ ಹೋಲಿಕೆಯನ್ನು ಕಾಣಬಹುದು.
" ಸರ್ವಥಾ ರಸನಾತ್ಮಕವೀತವಿಫ್ಲಪ್ರತೀತಿಗ್ರಾಹ್ಯೋ ಭಾನ ಏವ ರಸಃ.
16 ಅಭಿನವಗುಪ್ತನಿಗೆ ಸಮ್ಮತವಾದ "" ಅಭಾಸವಾದ '' ಕ್ಕೂ ವೇದಾಂತಕ್ಕೂ
ಹೋಲಿಕೆಯುಂಟು, ಭೇದವೂ ಉಂಟು. ಅಭಾಸವಾದದಂತೆ ರಸಾನುಭವದ ರಹಸ್ಯವೇ
ನೆಂಬುದನ್ನು ನಿರೂಪಿಸುವುದಾಗಲಿ ವೇದಾಂತಕ್ಕೂ ಇದಕ್ಕೂ ಇರುವ ಭೇದಗಳನ್ನು ಗಮನಿ
ಸುವುದಾಗಲಿ ಇಲ್ಲ ಸಾಧ್ಯವಾಗಿಲ್ಲ.
೩೬೨ ಭಾರತೀಯ ಕಾವ್ಯವಿಸಿಮಾಂಸೆ
ತತ್ರ ವಿಘ್ನಾಪಸಾರಕಾ ವಿಭಾವಾದಿಪ್ರಭೃತಯಃ '' ' ಎಂದು ಅವನ
ಹೇಳಿಕೆ. ಇದುವರೆಗೆ ನಾವು ಪರಿಶೀಲಿಸಿದ ಸಪ್ತವಿಪ್ನಗಳ್ಳೇ ಇಲ್ಲಿಯ
ತಡೆಗಳು; ಇವು. ತೊಲಗಿದ ಕೂಡಲೆ, ಮೊದಲಿನಿಂದಲೂ ವಾಸ
ನಾತ್ಮಕವಾಗಿರುವ ಭಾವವು ಶುದ್ಧಸ್ಕರೂಪದಲ್ಲ ಗೋಚರವಾಗಿ ಆನಂದಾ
ನುದನವನ್ನು ಕೊಡುತ್ತದೆ. ಬ್ರಹ್ಮಾಸ್ವ್ರಾದದಂತೆಯ್ಯೇ ರಸಾಸ್ಟಾದವೂ
ಕೇವಲ ಭಾವನೆ ಯಿಂದ ಉಂಟಾಗತಕ್ಕೆದ್ದು ; ಅದರಂತೆಯೇ ಇಲ್ಲಿಯೂ
ಬೇರೊಂದರ ಅ ತಲೆಹಾಕುವುದಲ್ಲ. ಅಲ್ಲಿಯಹಾಗೆ ಇಲ್ಲ ಕೂಢ
ತೆ Radha ಸುತ್ತ.
ಬಿಡುಗಡೆಹೊಂದಿ ಅಪೂರ್ವವಾದ ವಿಶ್ರಾ ತಿಯನ್ನು ಅನುಭವಿಸು 5: ತ ಷಃ
ರಸಾಸಖ್ಯದವೂ ಒಂದು ಬಗೆಯ ಸಮಾಧಿಸ್ಕ ತಿ. ಹೀಗಿರುವುದರಿಂದ
ಅದಕ್ಕೆ “ಬ ಶಿಹ್ಮಾನ್ಯಾದ ಸೆ: ಸಡೃತ ” ಏಂಬ ಹೊಗಳಿಕೆ ಸಾರ್ಥಕವಾಗು
ತ್ತದೆ.
ಆದರೆ ಇನ್ನೊಂದು ವಿಷ ಸುವನು ಇಲ್ಲಿ ಮರೆಯಬಾರದು.
ಬ್ರಹ್ಮಾನಂದದಲ್ಲ ಅವಿದ್ಯೆ, ಕಾಮ, ಕರ್ಮ--ಈ ಮೂರೂ ಹರಿಯಬೇಕು.
ರನಂನುಥವದಲ್ಲ ಕಾಮವೂ ಕರ್ಮವೂ ತೊಲಗಿರುವುವೆಂದು . ನಾವು
ಬಲ್ಲೆ ವು. ಸಾಂಸಾರಿಕವಾದ ರಾಗದ್ವೇಷಾದಿಗಳಾಗಲಿ, ಇಷ್ಟವಾದದ್ದನ್ನು
ಗಳಿಸುವ. ಮತ್ತು ಇಪ್ಪ ವಲ್ಲದ್ದ ನ್ನು ಅಳಿಸುವ ಕಾರ್ಯಪ ಪ್ರವೃತ್ತಿ ಚ ಈ
ಸ್ಕಿತಿಯಲ್ಲಿರುವುದಿಲ್ಲ. ಲಾಕಿಕಭಾನಕ್ಕೂ ರಸಕ್ಕೂ” ಇದೇ ವೃತ್ಯಾಸ
ಪೆಂಬುದನ್ನು ಗಮನಿಸಿದ್ದೇವೆ. ಅದರೆ ದೃಢವಾದ ತತ್ತ್ವಜ್ನಾನ ಮಾತ್ರ
ಸಹ್ಯ ದಯನಿಗೆ ಇನ್ನೂ ದೊರೆತಿರುವುದಿಲ್ಲ; "ಅವನ _ ಅವಿದ್ಯೆ ಇನ್ನೂ ಹರಿ
ದಿರುವುದಿಲ್ಲ. ಜೀವ ವನ್ಮುಕ್ತನಾದಲ್ಲಿ ಅವಿದ್ಯೆಯೂ ನಿವೃತ್ತಿಯಾಗಿ _ ಸೃಷ್ಟಿ
ಯೆಲ್ಲ ಬ್ರಹ್ಮ ಮೆಯವಾಗಿ' ಕಾಣಿಸುತ್ತಿ! ಪತ ದೆ. “ದೇಹಾಭಿಮಾನವು
ಹರಿದು, "ಪರಮಾತ್ಮನ "ಅರಿವಾದ ಬಳಿಕ, ಎಲ್ಲೆಲ್ಲ ಮನಸ್ಸು ಹರಿದರೆ
ಅಲ್ಲಲ್ಲ ಸಮಾಧಿಸ್ಥಿ ತಿಯೊದಗುತ್ತ ಡೆ”, ಆನಂದಾನುಭವ ನಿರಂತರವಾಗಿರು
ತ್ತದೆ. ಅದರೆ ಸಹ್ಯ ದಯನಿಗೆ' ಮಾತ್ತ ವಿಭಾವಾದಿಗಳು | ಗೋಚರಿಸಿದ
17 ಎಂತೂ ವಿಘ್ನಗಳು ತೊಲಗಿ ಅರಿವಾಗುವ ಅಸ್ಪಾದಮಯವಾದ ಭಾವವೇ ರಸ.
ಇಲ್ಲವಿಫ್ನುಗಳನ್ನು ನಿವಾರಿಸತಕ್ಕವು ಎಭಾವಾದಿಗಳು.'' (ಅಭಿನವಭಾರತೀ, 7, ಪ ೨೮೧),
18 ದೇಹಾಭಿಮಾನೇ ಗಲಿತೇ ವಿಜ್ಞಾತೇ ಪರಮಾತ್ಮನಿ!
ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಸಮಾಧಯಃ॥ (ವಾಕ್ಯಸುಭಾ, ೩೦)
೨೨. ರಸಾನುಭವ ೨ ಕ ೩೬೩
ಹೊರತ ಅವನ ಕಾಮಕರ್ಮಗಳ ಬಂಧನ ಹರಿಯೆವುದಿಲ್ಲ. ಅಪ್ರ
ಎಲ್ಲಹಾವರೆಗೆ ೆಗೆ ಇರುತ್ತವೋ ಅಲ್ಲಿಯವರೆಗೆ ಮಾತ್ರ ಅನಂದಾನುಭವ.”
'` `` ರಸಾನುಭವವು ಸುಖ್ಯೆಕಸ್ಟ ರೂಪವಾದದ್ದೆಂದು. ಇದುವರೆಗೂ
ಹೇಳುತ್ತಾ ಬಂದೆವು ; ಆದಸಾರಣವೆ ಇದನ್ನು "ಆಸ್ಪಾದ'', "ಆನಂದ''
ಎಂದು ಕರೆಯುವರೆಂದೂ ನೋಡಿದೆವು. ಸ್ಥಾಯಿಭಾವವು ರತಿ,
ಉತ್ಸಾಹ, ಹಾಸ ಮೊದಲಾದಪುಗಳಂಕೆ ಸುಖಾತ್ಮಕವಾಗಿದ್ದಾಗ ರಸವೂ
ಸುಖಸ್ವರೂಪವೆಂಬುದನ್ನು ಒಸ್ಟಬಹುದು; ಅದರೆ, ಶೋಕ, ಜುಗುಪ್ಪೆ
ಮೊದಲಾದವುಗಳಿಂತೆ ಅದು ದುಃಖದಾಯಕವಾಗಿರುವಾಗ ಅದರ
ರೂಪಾಂತರವಾದ ರಸವನ್ನು ಸುಖಮಯವೆಂದು ಕರೆಯುವುದು ಹೇಗೆ 1-
ಎಂಬ ಪ್ರಶ್ನೆ ಅನೇಕರನ್ನು ಬಾಧಿಸಿದೆ. ಈ ವಾದವನ್ನು ಸ್ಪಪ್ಟೋಕಿ,
ಗಳಲ್ಲ ಹೂಡಿ ರಸಗಳನ್ನು ಸುಖಾತ್ಮಕ, ದುಃಖಾತ್ಮಕ ಎಂದು ಎರಡು
Wogan SEE ¢ ನಾಟ್ಯ ದರ್ಪಣ 'ಕಾರರಾದ ರಾಮಚಂದ್ರ
ಮ ರಾಲ್
ಗುಣಚಂದ್ರಸೂರಿಗಳು. ಅವರ ಕೆಲವು ವಾಕ್ಯಗಳನ್ನು ಮೊದಲು ಅನು
ವಾದ ಮಾಡಿ ಅದರ ವಿಮರ್ಶೆಗೆ ತೊಡಗಬಹುದು :
"" ರಸವು ಸಾಕ್ಷಾತ್ಮಾರರೂಪವಾಗಿ ಅನುಭವಕ್ಕೆ ಬರತಕ್ಕದ್ದು,
ಯಥಾಸಂಭವವಾಗಿ ಸುಖದುಃಖ ಸ್ವಭಾವಗಳನ್ನು ಹೊಂದಿ ಆಸ್ಕಾದ್ಯ
ವಾಗುವುವೇ ರಸ. ಅಲ್ಲಿ, ಇಷ್ಟವಾದ ವಿಭಾವಾಡಿಗಳಿಂದ ರೂಪಸಂಪನ್ನ
ವಾಗಿ ಗೊತ್ತಾಗತಕ್ಕ ಶೃಂಗಾರ, ಹುಸ್ಯ, ವೀರ, ಅದ್ಭುತ, ಶಾಂತ
ಈ "ಐದು ಸುಖಾತ್ಮಕ, ಅನಿಷ್ಟ ವಾದ ವಿಭಾವಾದಿಗಳಿಂದ ದೊರೆಯುವ
ಕರುಣ, ರೌದ್ರ, ಬೀಭತ್ಸ, ಭಯಾನಕ ಎಂ ಎಂಬ ನಾಲ್ಕು ದುಃಖಾತ್ಮಕ. ಎಲ್ಲ
ರಸಗಳೂ ಸ ಗಳೂ ಸುಖಾತ್ಮ ಕವೆಂದು ಹೇಳುವುದು ಅನುಭವವಿರುದ್ಧ. ಮ ಮುಖ್ಯವಾದ
[ಎಂದರೆ ತ್ರ ತೋಕಗೋಚರವಾದ[ವಿಭಾವಗಳಿಂದ ಪುಷ್ಟಿ ಗೊಂಡದ್ದ ರ ವಿಷೆಯ
19 ರಸಾನುಭವ ಕಾಲದಲ್ಲ ಸೂ ಸಹೃದಯನಿಗೆ ಅವಿದ್ಯೆ ಹರಿದಿರುವುದಿಲ್ಲ; ಸೂಕ್ಷ್ಮ
ರೂಪದಲ್ಣ ಇದ್ದೇ ಇರುತ್ತದೆ. ವೇದಾಂತಕ್ಕೂ ಅಭಿನವಗುಪ್ತನ ತತ್ತ್ವಕ್ಕೂ ಇರುವ
ಸಂಬಂಧನನ್ನು ವಿಶದವಾಗಿ ತಿಳಿದುಕೊಳ್ಳಲು 71, riyanna . ‘Indian
Aesthetics’ (POC, Poona, Vol. 11, 240-1) ನೋಡಿ. Pancapagesa
Sastri : The 7111108011) of Aesthetic Pleasure, pp. 242-3: ಇಲ್ಲಿಯೂ
ಇದರ ವಿಚಾರ ಬಂದಿದೆ; ಆತ್ಮದ ಅವರಣಗಳಿಗೂ ರಸವಿಫ್ನುಗಳಿಗೂ ಇರುವ ಸಾದೃಶ್ಯ
ವನ್ನು ಈ ಲೇಖಕರು ನಿರೂಪಿಸಿದ್ದಾ ರೆ.
೩೬೪ ಭಾರತೀಯ ಕಾವೃಮಾಮಾಂಸೆ
ಹಾಗಿರಲಿ ; ಕಾವ್ಯನಾಟ್ಯಗಳ ವಿಭಾವಗಳಿಂದ ಪುಪ್ಪಿಗೊಂಡ ಭಯಾನ
ಕವೋ ಬೀಭತ್ಸವೋ ಕರುಣವೋ ರೌದ್ರವೋ ಕೂಡ, ರಸಾಸ್ವಾದ ಮಾಡುವ
ವರನ್ನು ಅನಿರ್ವಚನೀಯವಾದೊಂದು ಕ್ಲೇಶಸ್ಸಿತಿಗೆ ಒಯ್ಯುತ್ತದೆ. ಆದ
ಕಾರಣವೇ ಭಯಾನಕಾದಿಗಳಿಂದ ಸಮಾಜವು ಉದ್ವೇಗಗೊಳ್ಳುತ್ತದೆ.
ಸುಖಾಸ್ಕಾದದಿಂದ ಉದ್ಯೇಗ ಸಂಭವಿಸುವುದುಂಟೆ ? ಇವುಗಳಲ್ಲಿಯೂ
ಚಮತ್ಕಾರ ಕಾಣಬರುವುದಲ್ಲ--ಎಂದರೆ, ಅದು ಒದಗುವುದು ರಸಾ
ಸ್ವಾದ ನಿಂತಾಗ ; ವಸ್ತುಸ್ಥಿತಿಯನ್ನು ಯಥಾವತ್ತಾಗಿ ಪ್ರದರ್ಶಿಸುವ
ಕವಿನಟರ ಶಕ್ತಿಕೌಶಲದ ಮೂಲಕ. ಶತ್ರು [ತಮ್ಮ] ತಲೆಯನ್ನು ಕತ್ತರಿಸು
ಇಗ ಕೂಡ ಅವನ ಪ್ರಹಾರಕೌತಲವನ್ನು ನೋಡಿ ಶೌರ್ಯಾಭಿಮಾನಿಗಳು
ವಿಸ್ಮಯಪಡುವುದಿಲ್ಲವೆ ? ಕವಿನಟರ ಶಕ್ತಿಯಿಂದ ಉಂಟಾಗಿ ಸರ್ವಾಂಕ
ಗಳಲ್ಲಿಯೂ ಅಹ್ವಾ ದಕಾರಿಯಾದ ಇದೇ [ಬಗೆಯ] ಚೆಮತಾರದಿಂದ ಬುದ್ಧಿ
ವೆಂತರು ಮೋಸಹೋಗಿ, ದುಃಖಾತ್ಮಕವಾಗಿದ್ದರೂ ಕರುಣಾದಿಗಳಲ್ಲಿ
ಪರಮಾನಂವರೂಪತ್ವವನ್ನು ಕಾಣುತ್ತಾರೆ. ಇದರ ಆಸ್ವಾದಕ್ಕೇ ಆಸೆ
ಪಟ್ಟು ಪ್ರೇಕ್ಷಕರೂ ಕೂಡ ಇತ್ತಕಡೆ ಪ್ರವರ್ಶಿಸುತ್ತಾರೆ. ಕವಿಗಳಾದರೋ
ಸುಖದುಾತ್ಮಕವಾದ ಸಂಸಾರಕ್ಕೆ ಅನುರೂಪವಾಗಿ ರಾಮಾದಿಗಳ ಕೆ
ಯನ್ನು ರಚಿಸುವಾಗ ಸುಖದುಃಖಾತ್ಯ ಕವಾದ ರಸಗಳಿಂದ ಅನುವಿದೃವಾ
ಗಕವಂತಹೇ' ಕಟು ಬು ವರು ಪಾನಕದ ಮಾಧುರ್ಯಕ್ಕೆ ಖಾರದ ರುಚ
ಹೇಗೋ ಹಾ ಹಾಗೆಯೇ ಸುಜಗಳು ದುಃಖದ _ಆಸ್ವಾದದಿಂದ ಇನ್ನಷ್ಟು ಸವಿ
ಯಾಗುತ್ತವೆ. ಅಲ್ಲದೆ ಸೀತೆಯನ್ನು ಅಪಹರಿಸಿದ್ದು, ಕಾಕನು
ಕೇಶಾರಪರೆಗಳನ್ನು ಸೆಳೆದದ್ದು, ಹರಿಶ್ಚಂದ್ರನು ಚಂಡಾಲನಿಗೆ ವಾಸನಾ
ದದ್ದು , ರೋಪಿತಾಶೈನ ಸಾವು, ಲಕ್ಷ್ಮಣನನ್ನು ಶಕ್ತಾ $ಯುಧ ಭೇದಿಸಿದ್ದು |
["ಮಾಲತೀ ಮಾಧವ ' ದಲ್ಲಿ] ಮಾಲತಿಯನ್ನು ಕೊಲ್ಲಲು ತೊಡಗಿದ್ದು
ಈ ಮೊದಲಾದವುಗಳ ಅಭಿನಯವನ್ನು ನೋಡುವ ಸಹೃದಯರಿಗೆ
ಸುಖಾಸ್ಕಾದವೆನ್ನುವುದು ತಾನೆ ಯಾವುದು? .... ಬಂಧುವಿನಾಶಾದಿ
ಗಳಿಂದ ದುಃಖಗೊಂಡವರಿಗೆ ಕರುಣದ ವರ್ಣನೆಯಲ್ಲಿ ಅಥವಾ ಅಭಿನಯ
ದಲ್ಲಿ ಯಾವ ಸುಖಾಸ್ಕಾದ ಉಂಟಾಗುವುಡೋ ಅದು ಕೊಡ ದಿಟವಾಗಿ
ದುಃಖವೇ ಸರಿ. ದುಃಖಿತನು [ಬೇರೆಯ] ದುಃಖಶರ ವೃತಾ ೦ತದಿ ವೃತ್ತಾಂತದಿಂದ
ಸುಖವುಂಟೆಂದು ಭಾವಿಸುತ್ತಾನೆ; ಸಂತೋಪದ ವಾರ್ಕೆಯಿಂದ ಉಮ್ಮಳಿ
೨೨. ರಸಾನುಭವ-..೨ ೩೬೫
ಸುತ್ತಾನೆ. ಆದ್ದರಿಂದ ಕರುಣಾದಿಗಳು ದುಃಖಾತ್ಮಕಗಳೇ ಸರಿ.
ವಿಪೇ ಪ್ರಲಂಭ ಕೃಂಗಾರವಾದಕೆ ತಾಪಗೊಳಿಸುವುದರಿಂದ ದುಃಖರೂಪ
ವಾದರೂ, ನಾದರೂ, ಸಂಭೋಗಪೊದಗಬಹುದೆಂಬ ಪ್ರತ್ವಾಶೆಯನು ಒಳಕೊಂಡಿರು
ಪ್ರದರಿಂದ ಸುಖಾತ್ಮಕ...'' 20
ಈ ಬರೆವಣಿಗೆ ಸ್ವಾರಸ್ಯವಾಗಿದೆ ; ಆಕರ್ಷಕವಾಗಿಡೆ. ಆದರೆ
ಇದುವರೆಗೆ ನಾವು ಮಾಡಿರುವ ವಿಚಾರವನ್ನು ನೆನಪಿಗೆ ತಂದುಕೊಂಡರೆ
ಇದು ಸಿದ್ಧಾಂತವಾಗಿ ನಿಲ್ಲಲಾರದೆಂದು ಸ್ಪಪ್ಪವಾಗುತ್ತದೆ. ಇಲ್ಲಿ ಎದ್ದು
ಕಾಣುವ ದೊಡ್ಡ ದೋಪವೇನೆಂದರೆ ಲೋಕಕ್ಕೂ ಕಾವ್ಯನಾಷ್ಠ
BR aE
ಪೃಪಂಚಕ್ಕೂ, ಲೌಕಕಭಾವಕ್ಕೂ ಕಾವ್ಯನಾಟ್ಯರಸಕ್ಕೂ ಇರವ ಇಸ. ಬಹು
ತೆಯ ರೆ ನ hor sr ಶ್ರ
ಮುಖ್ಯವಾದ ಭೇದನನ್ನೇ ೫. 1 ನಾಟ್ಯದಪನಾ ಕಾರರು ಗಮನಿಸಿಲ್ಲ.
ನಾಟ ಇತು ಸಾತುವಾಗ, ಕಾವೃವನ್ನು ಓದುವಾಗ, ಮ
fe ರ ್ಟೂ ರರ ಅರಚಿ es!
ಸಾಂಸಾರಿಕ ಶೋಕವೂ ಅಲ್ಲ, ಸಾಂಸಾರಿಕ ರತಿಯೂ ಅ ಅಲ್ಲದೆ,
ವಾಸನಾತ್ಮಕವಾಗಿ. ಇದ್ದದ್ದು ದು ಮೊದಲು ಲೌಕಿಕಭಾವದ ರೂಪದಲ್ಲಿ ಉಕ್ಕಿ
ಕೆಲಪು ತಾಲ ಹಾಗೆಯೇ. ಇದ್ದು ಆ ಬಳಿಕ" ರಸವಾಗಿ ಮಾರ್ಪಾಡು
ಹೊಂದುವುದೂ ಇಲ್ಲ. ವಿಭಾವಾದಿಗಳು ಮೊದಲಿನಿಂದಲೂ ಅವ್ಯಾ ವ
ಹಾರಿಕವಾಗಿರುವ ಕಾರಣ, ಅವುಗಳ ಸಂಬಂಧದಿಂದ ಅಭಿವ ಕ್ತವಾಗುವ
ರಸವೂ ಕೂಡ ಲೌಕಿಕದಶೆಯನ್ನು ಮೊದಲಲ್ಲಾಗಲ, ಮಧ್ಯದಲ್ಲಾಗಲಿ,
ಕೊನೆಯಲ್ಲಾಗಲಿ ಮುಟ್ಟಲಾರದು. ಲೋಕದ ರತಿಯಲ್ಲ ಉಪಭೋಗದ
ಆಶೆಯೂ, ಲೋಕದ ಶೋಕದಲ್ಲಿ ಆದು ತಪ್ಪಿಹೋಯಿತೆಂಬ ವ್ಯಥೆಯೂ
ಬೆರೆದಿರುತ್ತ ವೆ. ಆದರೆ ರೆ ಕಾವ್ಯನಾಜಕಗಳಲ್ಲ ಇ ಈ ಆಶೆಯೂ ಇಲ್ಲ, ಈ
ವ್ಯಥೆಯೂ ಇಲ್ಲ; ಪ ಪ್ರವೃತ್ತಿ ನಿವೃ ಶ್ತಿರೂಪವಾದ ಕಾರ ವೂ ಇಲ್ಲ. ಹೀಗೆ
ಕಾಷಾಕರ್ಷ್‌ಗಳಲ್ಲದ : A ದುಃಖವೆಲ್ಲ ಬಂತು ?
ಇದರ ಮೇಲೆ ದುಃಖ ಎಂದರೇನು? ಬತ್ತದ ಚಾಂಚೆಲ್ವವೇ
ದುಃಖ; ಚಿತ್ತಕ್ಕೆ ನೆಲೆ ಸಿಕ್ಕದೆ. ಅದು ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ವಿಕಿಪ
pe ಹಾರಿ 1 ಬ್ರಿ BE
ಅಲೆದಾಡು ತಿ ರುವುದೇ ದುಃಖ. ರಸ ಯಾವುದೇ ಆಗಿರಲಿ; ಅದರ
ವಾಗಿ ದ \
20 ನಾಟ್ಯದರ್ಪಣ, ಪು. ೧೫೯.
2। "'ಅವಿಶ್ರಾಂತಿರೂಪತ್ಯೊವ ದುಃಖಂ. ತತ ಏವ ಕಾಪಿಲ್ಫೊಃ ದುಃಖಸ್ಯ ಚಾಂಚಲ್ಯ
ಮೇವ ಪ್ರಾಣತ್ಟೇನ ಉಕ್ತಂ.” (ಅಭಿನವಭಾರತ್ತೀ 1, ಪು. ೨೮೩)
೩೬೬ ಭಾರತೀಯ ಕಾಪವ್ಯಮಾಮಾಂಹೆ
ಅನುಭವ ಕಾಲದಲ್ಲ ಚಿತ್ತವು ತಾನು ತನ್ನದು ಅನ್ಯರದು ಎಂಬುದೆಲ್ಲ
ವನೂ ಪೂರ್ಣವಾಗಿ ಎ ಮರೆತು ಧಾವನಾಕಾಣ ದಲ್ಲಿ ಎಕೂಗ್ರವಾಗಿ ಮ ಮಗ್ನ
ವಾಗಿರುತ್ತದೆ. ಏಕಾಗ ತೆಯಲ್ಲಿ ಮುಃಖವುಂಚೆಂದು ಇತು
ಹೇಗೆ? : ರುಣ ಭಯಾನಕ ಮೊದಲಾದವುಗಳಲ್ಲಿ ರಸವು ಪ್ರತೀತವಾಗು
ವಾಗ ದುಃಖಪಡುಪೆಷೆಂದೂ, ಅದು ನಿಂತಾಗ ಕವಿನಟರ ಕೌಶಲಾದಿ
ಗಳನ್ನು ಮೆಚ್ಚಿ ಆನಂದಿಸುವೆವೆಂದೂ ಹೇಳುವುದು ಅನುಭವಸ ಮ್ಮತವಲ್ಲ;
ಆ ಕ್ಷಕ್ಕ ಶೃ ನಾ ವೀರ ಮೊದಲಾದ ಸುಖಾತ್ಮಕವಂದ ರಸೆಗಳನ್ನುಳ್ಳಿ
ಕಾವ್ಯನಾಟಕಗಳನ್ನು ಮಾತ್ರವೇ ನೋಡಿ ಅನ್ಲಯ ಕೌಶಲಪ್ರದರ್ಶನ
ದಿಂದಲ್ಲೇ ಏಕೆ ಆನಂದಿಸಬಾರದು ? ಅಲ್ಲಿ ದುಃಖದ ಮಿಶ್ರಣವಿಲ್ಲದಿರುವುದ
ರಿಂದ ಆನಂದವು ದ್ವಿಗುಣವಾಗಬೇಕಲ್ಲವೆ? ಆದರೆ ರೆ ಎಷ್ಟೋ ಮಂದಿ
ರಸಜ್ಞ ರ ಅನುಧವದ. ವಿಷಯವೇನೆಂದರೆ, ಕರುಣವು ಹೃ ದಯವನ್ನು
ತಟ್ಟು ಡಷ್ಟು ಶೃಂಗಾರವೀಲಾದಿಗಳೂ ತಟ್ಟಲಾರವು.* ಕರುಣರಸದಲ್ಲಿ
ಅಷ್ಟೊಂದು ಕ್ಲೇಶವಿದ್ಧರೆ ಜನರೇಕೆ ಹರಿತ್ವಂದ್ರ ನಾಟಕವನ್ನು ನೋಡಲು
ಮತ್ತೆ ಮತ್ತೆ ಹೋಗುತ್ತಿ! ದ್ದರು; ನೀತಾವನವಾನದ ತಥೆಯನ್ನು ಮತ್ತೆ
ಮತ್ತೆ ಪುರಃ ಸ್ರರಾಣ ತೇಳಿತುತ್ತದ್ದರು? ದುಡ್ಡು ಕೊಟ್ಟು ಚೇಳಿನ ಬ ಯಲ್ಲಿ
ಕುಟುಕಿಸಿಕೊಳ್ಳುತ್ತಾರೆಯೇ?
ಹಾಗಾದರೆ ಇಲ್ಲಿಯ ಆನಂದ ಯಾವುದು? ಹರಿತ್ಚಂದ್ರನ
ದುರವಸ್ಥೆಯನ್ನೂ ಸ್ಲೀತೆಯ್ದ ಸಂಕಟವನ್ನೂ ನೋಡಿ ನಾವು ಉಲ್ಲಾಸದಿಂದ
ಕುಣಿದಾಡುತ್ತೇವೆಯೇ ?_ ಎಂದು ಪ್ರಶ್ನೆ ಹಾಕಬಹುದು. ಇಲ್ಲ ಆನಂದ
ವೆ೦ದರೆ ಉಪಭೋಗದಿಂದ, ಇಪ್ಪ ಸಾಧನೆಯಿಂದ. _ರೋಕವ್ಯ (ವಹಾರಡ್ಡಾ
ಒದಗುವ ಸುಖವಲ್ಲ. ಮದ್ಯಪಾನ ಮಾಡಿದವನು ಪಡೆಯುವ ಸುಖದಿಂದ
ಬ್ರಹ್ಮಜ್ಞಾ. ಜ್ಞಾನಿ ಪಡೆಯುವ ಸುಖದ ವರೆಗೆ ಎಲ್ಲ ಸುಖದ ಶಿರುಳೂ ಒಂದೇ
ಎಂಬುದನ್ನು" ಒಪ್ಪಿ ಕೊಂಡರೂ, ಸುಖದ ಸಾಧನಸಾಮಗ್ರಿ, ಸುಖಾನು
ಭವದ ಕಾಲಪರಿಮಾಣ, ಅದರಿಂದ ಮನಸ್ಸಿಗಾಗುವ ಸಂಸ್ಕಾರ,
22 ಶೃಂಗಾರೇ ವಿಪ್ರಲಂಭಾಖ್ಯೇ ಕರುಣ ಚಿ ಪ್ರಕರ್ಷವತ್ ॥
ಮಾಧುರ್ಯಮಾರ್ದ್ವತಾಂ ಯಾತಿ ಯತಸ್ತತ್ರಾಧಿಕಂ ಮನಃ ॥
ಎಂಬ ಧ್ವನ್ಯಾಲೋಕದ ಕಾರಿಕೆಯನ್ನೂ (॥. ೯), " ಸಂಥೋಗಶೃಂಗಾರಾತ್
ಮಧುರತರೋ ವಿಪ್ರಲಂಭಃ ತತ್ಕೋಪಿ ಮಧುರತಮಃ ಕಡುಣ'' ಎಂಬ ಅಭಿನವ
ಗುಪ್ತನ ಉಕ್ತಿಯನ್ನೂ ಇಲ್ಲ ಗಮನಿಸಬಹುದು,
೨೨. ರಸಾನುಭವ ..೨ ೩೬೩
ಮುಂದಿನ ಪರಿಣಾಮ- ಈ ಮೊದಲಾದವುಗಳನ್ನು ಅನುಸರಿಸಿ ಸುಖವು
ನೀಚವಾಗುತ್ತದೆ, ಉತ್ತಮವಾಗುತ್ತದೆ; ಗ್ರಾಹ್ಯವಾಗುತ್ತ ದೆ, ಡೆ, ತ್ಯಾಜ್ಯ
ವಾಗುತ್ತದೆ ದೆ. ಕಾವ್ಯ ನಾಟಕಗಳಿಂದ. ತೂತು ತ ಈಗಾಗಲೇ
ನೋಡಿರುವಂತೆ, ವಿಷಯನುಬವಲ್ಲ; ; ಅದು ಭಾವನಾಲಭ ವಾದದ್ದು.
ಚಿತ್ತವಿಶ್ರಾಂತಿಯೇ ಅದರ ಮುಖ್ಯ ಲಕ್ಷಣ. ಚ ರಸಾಸ್ವಾದ ಕಾಲದಲ್ಲ
ಮನಸ್ಸು ಲೌಕಿಕವಾದ ಕ್ಲೇಶಕಾಪ್ಟಣ್ನಾ ದಿಗಳನ್ನು ಮರೆತು ಅಪೂರ್ವವೂ
ಸಂಪೂರ್ಣವೂ ! ಅದ. _ವಿಶ್ಟಾ ೦ತಿಯನ್ನು 1 ಪಡೆಯುತ್ತದೆ. ಕರುಣರಸದ
ಅನುಭವದಲ್ಲೂ ಈ ವಿಶ್ರಾ ತಿ ಉಂಟೇ ಉಂಟು. "ಆದಕಾರಣವೇ ಅದು
ಆನಂದಮಯ.
ಕರುಣ ರಸಾನುಭವಕಾಲದಲ್ಲಿ ಸಾಮಾಜಿಕನ ಕಣ್ಣು ಹನಿಗೂಡುವು
ದಷ್ಟೆ ; ; `ಇದು ಶೋಕದ ಸಂಕಟದಿಂದ ಉದಿಸಿದ ಲವ. ಎಂದು ಕೆಲವರು
ಕೇಳುವುದುಂಟು. ಇದು. ಆನಂದಾತ್ರು ವೇ ಹೊರತು _ದುಃಖಾಶು ವಲ್ಲ
ವೆಂದು ಕೆಲವರು ಉತ್ತರ ಹೇಳುವುದೂ ಉಂಟು. ಅದರೆ ಮೇಲಿನ
ಆಕ್ಷೇಪಣಿಗೆ `ಇದು ಸರಿಯಾದ ಸಮಾಧಾನವಲ್ಲವೆಂದು ಹೇಳಜೇಕಾಗು
ತ್ತದೆ. ಇದು ಅನಂದಬಾಪ್ಟವಾಗಿದ್ದರೆ ಎಲ್ಲ ರಸಗಳ ಅನುಭವಕಾಲದಲ್ಲೂ
ಇಂಥ ಬಾಪ್ಟವೇ ಉಕ್ಕಜೇಕಾಗಿತ್ತು. ಆದರೆ ಇತರ ಅನೇಕ ರಸ
ಗಳನ್ನು ಆಸ್ಕಾದಿಸುವಾಗ ಯಾವ ಕಣ್ಣೀರೂ ಸುರಿಯುವುದಿಲ್ಲವೆಂಬು
ದನ್ನು ರಸಿಕರು ಬಲ್ಲರು. ವಸ್ತುಸ್ಥಿತಿಯೇನೆಂದರೆ, ಕಾವ್ಯ ನಾಟಕಗಳನ್ನು
ಸಹೃ ದಯನು ಅನುಶೀಲನಮಾಡುವ. ಕಾಲದಲ್ಲಿ, ತಮಟತವಾ ದ ವಿಭಾ
EEE ಅವನ ಚಿತ್ತವೃತ್ತಿ ಶಿ ರಸರೂಪದಲ್ಲಿ ಎಚ್ಚೆ ರಗೊಂಡಾಗ
ಆ ಚಿತ್ತವೃತ್ತಿಗೆ ಅನುಗುಣವಾದ ಕಂಬನಿ, ರೋಮಾಂಚ ಮೊದಲಾದ
ಕೆಲವು ಅನಿವಾರ್ಯವಾದ ಶಾರೀರಕ ಕ್ರಿಯೆಗಳು ತಮ್ಮಪ್ಪಕ್ಕೆ ತಾವೇ
ಉಂಟಾಗುತ್ತವೆ. ಆದರೆ ಈ ಕಂಬನಿ ಲೌಕಿಕದು8ಖದಿಂದ ಉದಿಸಿತೆಂದಾ
ಗಲಿ, ಈ ರೋಮಾಂಚ ಲೌಕಿಕಪುಖದಿಂದ ಎದ್ದಿತೆಂದಾಗಲ ಹೇಳಿದರೆ,
ರಸದ ಅವ್ಯಾವಹಾರಿಕ ಸ್ವರೂಪವನ್ನೇ ನಾವು ಮರೆತಂತಾಗುತ್ತದೆ.
ಚ "“ ಹ್ಲಾದಃ ಸ್ಪವಿಶ್ರಾಂತಿಲಕ್ಷಣ ಅನಂದಃ '' (ಕಾವ್ಯಪ್ರಕಾಶ, ತಿರುವೇಂದ್ರಂ
ಸಂಸ್ಕರಣ, ಪು. ೫, ವ್ಯಾಖ್ಯಾ).
೩೬೮ ಭಾರತೀಯ ಕಾವ್ಯಮಾಮಾಂಸೆ
ಹಿಂದೆ. ನಾವು ನೋಡಿರುವಂತೆ, ವಿಭಾವಾನುಭಾವಾದಿಗಳ ಅರಿವು
ರಸಾನುಭವ ಕಾಲದಲ್ಲಿ ಉದ್ದೆ ಕ್ಕೂ ಇರುವುದರಿಂದ, ಅವುಗಳ ಸ್ವರೂಪಕ್ಕೆ
ಅನುಗುಣವಾಗಿ ಸ್ಥಾ ಯಿಭಾವದಲ್ಲರುವಂತೆಯೇ ರಸದಲ್ಲಿಯೂ ವೈಚಿತ್ರ್ಯ
ವೊದಗುತ್ಮದೆ. ಆದಕಾರಣಪೇ ಕರುಣ, ವಿಪ ಶೈ ಲಂಭತೃಂಗಾರ ಈ
ಮೊದಲಾದ ರಸಗಳಲ್ಲ ಚಿತ್ತವು ಕರಗಿಹೋದಂತೆ ಅನುಭವವಾಗುತ್ತದೆ ;
ವೀರರೌದ್ರಾದಿಗಳ್ಲ ಇದಕ್ಕೆ ಪ್ರತಿಯಾಗಿ ಚಿತ್ತವು ದೀಪ್ತವಾಗುತ್ತದೆ.
ಈ ದೃಷ್ಟಿಯಿಂದಲೇ ಧ್ವನಿಪ್ರಸ್ಥಾನದವರು ಮಾಧುರ್ಯ, ಓಜಸ್ಸು ಎಂಬ
ಗುಣಗಳನ್ನು ವ್ಯವಸ್ಥಾ ಪನೆಮಾಡಿರುವುದನ್ನು 2! ಇಲ್ಲ ಸ್ಮರಿಸಬಹುದು. ೫
ಈ ಚರ್ಚೆಯನ್ನು ಇನ್ನು ಬೆಳಸದೆ, ಲೋಕದಲ್ಲಿ ದುಃಖಗೊಳಿಸುವ
ಕಾರಣಸಾಮಗ್ರಿ ಕಾವ್ಯದಲ್ಲಿ ಆಹ್ಲಾದಕಾರಿಯಾದ ವಿಭಾವಾದಿಯಾಗಿ
ಪರಿಣಮಿಸುವುದೆಂಬುದನ್ನು ಸ್ಮರಿಸುವ ಕನ್ನಡ ಪದ್ಯವೊಂದನ್ನು ಉದಾ
ಹರಿಸಿ ವಿರಮಿಸೋಣ :
ಕಡುಪಿ೦ ಕೂರಾನೆ ಕಾಟ್ಮಿರ್ಚಡವಿ ಬಜಸಿಡಿಲ್ ಬಳ್ಳಿಮಿ೦ಚೆ೦ಬಿವೆಲ್ಲಂ
ಪಡೆಗು೦ ನೋಬ್ಬರ್ಗೆ ಮೇಣುಬೈಗದೊದವನವೇ ಮತ್ತ ಮೊಳ್ಳ ಬ್ಬದೊಳ" ಬಂ!
ದೊಡನೊಳ್ಳ೦ ಪೆತ್ತು ಮಾಯ್ಕು೦ ಸಹೃದಯಹೈದಯಾಹ್ಲಾ ದಮಂ ನಾಡೆ
ದೊಡಮಳ್ಳೇ೦ ಕಬ್ಬಿಗರ" ತಾಮಘಟತಪಟನಾನೂತನಟ್ರಣ್ಮರಲ್ಲೇಲ್
(ಚಿಕ್ಕದೇವರಾಜ ವಿಜಯ, |. ೫)
ಇದುವರೆಗಿನ ವಿಚಾರವೆ ಸಾಮಾಜಿಕನ ಅನುಭವವನ್ನು ಕುರಿ
ತದ್ದೆ € ಆಯಿತು. ಇನ್ನುಳಿದವರು. _ಕಥಾಪುರುಷಪರು, ನಟನಟಿಯರು,
ಮತ್ತು ಕವಿ. ಕಥಾಪುರುಪರಿಗೆ ರಸಾಸ್ಟಾದವುಂಟೇ ಇಲ್ಲವೇ. ಎಂಬ
ಪ ಕತೆ ಗೇ ಅವಕಾತವಿಲ್ಲ. ಏಕೆಂದರೆ ಕೆಂದರೆ, ಅವರು ಸಾಂಸಾರಿಕ ಭಾವಗಳಿಂದ
ಟಸ್ ಟೂ
ಪ್ರಚೋಔತರಾಗಿ ಕಾರ್ನಗಳನ್ನು ಮಾಡುವುದರಿಂದ ಕಥೆ
ನುನ ನಗೋ ಬಂದರ ಅವರು. ತಸ ಅಥ್ಯಾಸಾ
ಯಶ್ರವೂ ಆದ ಕೌಶಲದಿಂದ, ಅಂತರಂಗದಲ್ಲಿ ಯಾವ_ಭಾವವೂ
ದ್ರೇಕಗೊಳ್ಳಿದಿದ್ದರ ದಿದ್ದರೂ ಅದನ್ನುಳ್ಳವರಂತೆ ಅಭಿನಯಿಸಬಲ್ಲರು. ತಾವು
2 ನಾ ೧೩೬ನೆಯ ಪುಟವನ್ನು ನೋಡಿ.
25 ಕೆಲವು ರಸಗಳು ದುಃಖಾತ್ಮಕವೇ ಹೇಗೆ ಎಂಬ ವಿಪಯದಲ್ಲಿ ಹೆಚ್ಚಿನ ಚರ್ಚೆಗೆ,
P. Pancapagesa Sastri: The Philosophy of Aesthetic Pleasure,
ಪು. 196-203 ನೋಡಿ.
೨೨. ರಸಾನುಭವ ೨ ೩೬೯
ವಹಿಸಿರುವ ಪಾತ್ರದ ಚಿತ್ತವೈತ್ತಿಯನ್ನು ಬಲುಮಟ್ಟಿನ ತನ್ಮಯತೆಯಿಂದ
ಅನುಭನಸವಾಗಲೂ ಅಂ ಅದು ವಿಶ್ರಾ ್ರಾಂತಿರೂಪ ಶಿರೂಪವಾದ ರಪಾಸ್ವಾದವಾಗ:
ವುದಿಲ್ಲ; ನಟರಿಗೆ ಭಾವದ ಉತ್ಕ | ಬಾವನ್ನ ಎವಸ್ಥ್ಸೆಯಲ್ಲ ಕೂಡ ಅಭಿನಯವನ್ನು
ಕುರಿತ ವ್ಯಗ್ರತೆ ಇದ್ದೇ ಇರುತ್ತ ದೆ. 26 ಇದರ ವಿಸ್ತಾರವಾದ “ಚರ್ಚೆ ನಮಗ
ಅಪ್ರಕೃತ, ತ,
ಕವಿಯ ಅನುಭವದ ವಿಚಾರವನ್ನು ಪೀಗೆ ಒಂದೆರಡು ಮಾತಿನಲ್ಲಿ
ಮುಗಿಸುವ ಹಾಗಿಲ್ಲ. ಏಕೆಂದರೆ ಸಾಮಾಜಿಕನ ರಸಾನುಭವಕ್ಕೆ ಕವಿಯ
ರಸಾನುಭವಷೇ ಮೂಲಾಧಾರ.
ಯಥಾ ಬೀಹಾದ್ಭವೇದ್ವ ಹೋ ವೃಕ್ಷಾತ್ ಪುಪ್ಪ೦ ಫಲಂ ಯಥಂ।
ತಥಾ ಮೂಲಂ ರಸಾಃ ಸರ್ವೇ ತೇಭ್ಯೋ ಬಾವಾ ವ್ಯನಸ್ಕಿತಾಃ॥
(ನಾಟ್ಯಶಾಸ್ತ್ರ, ೪;. ೪೨)
"" ಹೇಗೆ ಬೀಜದಿಂದ ಮರವೂ, ಹೇಗೆ ಮರದಿಂದ ಹೂವೂ ಹಣ್ಣೂ
ಉಂಟಾಗುವುವೋ ಹಾಗೆ ರಸಗಳೇ ಮೂಲ; ಎಲ್ಲ ಭಾವಗಳೂ
ಅವುಗಳಿಂದ ವ್ಯವಸ್ಥಿ ತವಾಗುತ್ತವೆ.''..- ನಾಟ್ಯಶಾಸ್ತ್ರ ಅದ ಈ ಶ್ಲೋಕಕ್ಕೆ
ವ್ಯಾಖ್ಯಾನ ಮಾಡುತ್ತಾ ಅಭಿನವಗುಪನು ಹೀಗೆ ಬರೆಯುತ್ತಾನೆ:
ಕವಿಗತವಾದ ರಸವು ಮೂಲಬೀಜದಂತೆ : ಏಕೆಂದರೆ ಕವಿ ಸಾಮಾಜಕ
ನಿಗ ಸಮ. ಆದ್ದರಿಂದಲೇ ಅನಂದವರ್ಧನಾಚಾರೃನು_" ಕವಿ ರಸಿಕೆ
ನಾದರೆ ಕಾವ್ಯದಲ್ಲಿ ವಿಶ್ವಪ್ಠೇ ರಸಮಯವಾಗುತ್ತದೆ ; ಅವನು ವಿರಕ್ತ
ನಾದರೆ ಅದೆಲ್ಲವೂ ನೀರಸವಾಗುತ್ತದೆ' ಎಂದು ಹೇಳಿದ್ದು. ಆದಕಾರಣ
ತು ಸಭ ಾದವಿಲ್ಲವೆಂದೇ ಲಾಕ್ಷಣಿಕರು ಸ್ವಷ್ಟವಾಗಿ ಹೇಳಿಬಡುತ್ತಾರೆ :
- ಕಿಂಚಿನ್ನ ರಸಂ ಸ್ಪದತೇ ನಟಃ |
ಸಾಮಾಜಿಕಾಸ್ತು ಲ೫ತೇ ರರ್ಸಾ ಪಾತ್ರಂ ನಟೋ ವುುತಃ॥
*(ಸಂಗೀತರತ್ನಾ ಕರ, ಭಃ. ೧೩೭ ೧)
ಅದರೆ ಕಾಳಿದಾಸನ ಅಭಿಪ್ಪಾ ಪ್ರಯ ಬೇರೆಯಾಗಿರುವಂತಿದೆ ; ಮಾಲವಿಕೆಯ ನಾಟ್ಯದ.
ಸೊಗಸನ್ನು ವರ್ಣಿಸುವಾಗ " " ತನ್ಮಯತ್ನ ಕಂ ರಸೇಷು '' ಎಂಬ ಮಾತನ್ನು ಉಪಯೋಗಿಸಿ
ದ್ಲಾನೆ. ಮಾಲವಿಕಾಗಿ ಮಿತ್ರ, 1]. ಲಿ).
1 ತೈಂಗಾರೀ ಚೇತ್ ಕವಿಃ ಕಾವ್ಯೇ ಜಾತಂ ರಸಮಯಂ ಜಗತ್!
ಸ ಏವ ವೀತರಾಗಶ್ಟೇತ್ ನೀರಸೆಂ ಸರ್ವಮೇವ ತತ್ ॥
(ಧ್ರನ್ಯಾ., ಪು. ೨೨೨),
ಅಭಿನವಗುಪ್ತನು ಈ ಶ್ಲೋಕದ ಪ್ರತೀಕವನ್ನು ಮಾತ್ರ ಅಭಿನವಭಾರತಿಯಲ್ಲಿ
ಉದ್‌ಹರಿಸಿದ್ದಾನೆ. ಶ್ಲೋಕವು ಮುಖ್ಯವಾಗಿರುವುದರಿಂದ ಅದರ ಪೂರ್ಣಾನುಬಾದ
ವನ್ನು ಮೇಲೆ ಕೊಟ್ಟಿದ್ದೇವೆ. ಇಲ್ಲ "“"ಶೈಂಗಾರಿ' ಎಂಬುದಕ್ಕೆ ಸ್ತ್ರೋೀವೈ್ಯಸೆನಿ ಎಂದು
ಅರ್ಥವಲ್ಲ ; ಶ್ಲಂಗಾರ ಶಬ್ದವು ರಸಕ್ಕೆ ಉಪಲಕ್ಷಣ. --ಈ ವಿಷಯವನ್ನು) ಧೃನ್ಯಾಲೋಕ
ಲೋಚನದಲ್ಲ ಅಭಿನವಗುಪ್ತನೇ ವಿಶದಪಡಿಸಿದ್ದಾನೆ.
೫.1೬, v4
೩೭೦ ಭಾರತೀಯ ಕಾವ್ಯಮಾಮಾಂಸೆ
ಕಾವ್ಯವು ವೃಕ್ಷದಂತೆ. ನಟರ ಅಭಿನಯವೇ ಮೊದಲಾದ ವ್ಯಾಪಾರವು
ಅದರ ಹೂವಿನಂತೆ. ಅಲ್ಲಿಯ ಹಣ್ಣಿನಂತೆ ಸಾಮಾಜಿಕರ ರಸಾಸ್ವಾದ.
ಆದ್ದರಿಂದ ವಿಶ್ವವೇ ರಸಮಯ.” ಅಭಿನವಗುಪ್ತನೆ ತಾತ್ಪರ್ಯ ಪೀಗೆ:
ಸಾಮಾಜಿಕನು ನಾಟಕವನ್ನು ನೋಡಿ ರಸಪರವತನಾಗುವಂತೆ, ಕವಿ
ರೋಕವೃತ್ತ ತ್ತವನ್ನು ತೋಡಿ ಪರವತನಾಗುತ್ತಾನೆ. ಸರಿಯಾದ ಕಣ್ಣ
ನಿಂದ 5 ಪರಿಧಾವಿಸುವವಂಣೆ 'ಕೋಕಪೇ ಒಂದು ಸುಂದರವಾದ ನಾಟಕ,
ಸುಂದರವಾದ ಕಾವ ೫. ಇಲ್ಲಿ ತಾನು ಅನುದವಿಸಿದ ರಸವನ ರಸವನ್ನು ಅಭಿವ್ಯಕ್ತಿ
ಗೊಳಿಸುವ ಇತಯ ಕಪಿ _ವಿಭಾವಾನುಭಾವಾದಿಗಳನ್ನು ಆರಿಸಿ
ಜೋದಧಿನಿ ಕಾವ್ಯನಾಟಕಗಳನ್ನು ರಚಿಸುತ್ತಾನೆ. ಆದಕಾರಣ ಈ ಎಲ್ಲ
ರಸಾನುವಪಕ್ಕಾ ಅವ ಉ: ಉದ್ದೆಮೆ' ಸ್ವಾನ. ಕವಿ ರಸಮಗ್ನ ದೃಷ್ಟಿ
ಯಿದ. ಜಗತ್ತನ್ನು ಪರಿಭಾವಿನಿದ್ದುದೆ * ಕಾವ [ನಂಟಕಗಳೇ "ಡಿಸ
ಲಾಠವು.
ಇಲ್ಲ ಒಂದು ಪ್ರಶ್ನೆ ತಲೆಯೆತ್ತುತ್ತದೆ: ಕವಿಯ ಸಾಂಸಾರಿಕ ಭಾವ
ಯಾವಾಗಲೂ ಕಾವ್ಯರೂಪವನ್ನು ತಾಳುವುದೇ ಇಲ್ಲವೇ ? ಅವನು ಎಷ್ಟೋ
ವೇಳೆ ತನ್ನ ಹೃದಯದ ಹಂಬಲನ್ನು ಪ್ರೇಯಸಿಗೆ ಪದ್ಯದಲ್ಲಿ ನಿವೇದಿಸು
ತ್ತಾನೆ; ಮನಸ್ಸಿನ ಸಂಕಟವನ್ನು ಹಾಡಿನಲ್ಲಿ ತೋಡಿಕೊಳ್ಳುತ್ತಾನೆ. ಈ
ಸ್ವವಿಷಯದ ವರ್ಣನೆಗೆ ಲಾಕಿಕಭಾವವೇ ಪ್ರೇರಕವಲ್ಲವೆ ?. ಇದಕ್ಕೆ
ಉತ್ತರ ಕೊಡುವುದು ಕಠಿನ. ಪ್ರತಿಭಾಶಾಲಿಯಾದ ಕವಿಗೆ ಚಿತ್ರ ಕಲ್ಪನೆ
ಗಳೂ ವಾಗ್ವಿಲಾಸಗಳೂ ವಿಧೇಯವಾಗಿರುತ್ತದೆ; ಪ್ರಯತ್ನ ವಿಭ್ಞದೆಯೇ
ಅವು ಹೊಮ್ಮುತ್ತವೆ. ಪ್ರೇಮವೋ ಶೋಕವೋ ಪ್ರಬಲವಾದಾಗ
ಸಾಮಾನ್ಯವ್ಯಕ್ತಿಯ ಬಾಯಿಂದ ಸಾಮಾನ್ಯರೀತಿಯ ಚ ತುಗಳನ್ನಾಡಿ
ಸುತ್ತದೆ; ಕವಯ ಬಾಯಿಂದ ರಮ್ಯವಾದ ಮಾತುಗಳನ್ನಾಡಿಸುತ್ತದೆ.
ಹೀಗೆ ಕರುಳಿನ ಕೂಗಾಗಿ ಹೊರಬಿದ್ದ ಮಾತು, ಎಂದರೆ ಕವಿಯ ಲೌಕಿಕ
ಭಾವದ ಕಾರ್ಯ, ಆ ಬಳಿಕ ಪರಿಭಾವಿಸತಕ್ಕವರಿಗೆ ಒಳ್ಳೆಯ ಕಾವ್ಯವಾಗಿ
ಗೋಚರಿಸಿ ರಸಾಸ್ಟಾದವನ್ನುಂಟುಮಾಡಬಹುದು. ಅದೇಕೆ ; ಭಾವಾ
ವೇಶದಲ್ಲಿ ಹೊರಟ ಮಾತುಗಳನ್ನು ವಕ್ತೃವೇ ಆ ಬಳಿಕ ಗಮನಿಸಿ, ಇದು
ಒಳ್ಳೆಯ ಕಾವ್ಯವೆಂದು ಸಾಮಾಜಿಕನಂತೆ ಸವಿದು ಮೆಚ್ಚಬಹುದು.
28 ಈ ಗ್ರಂಥದ ೧೨ನೆಯ ಅಧ್ಯಾಯವನ್ನು ನೋಡಿ.
೨೨. ರಸಾನುಭವ... ೨ ೩೭೧
ಬೇಡನ ಬಾಣದಿಂದ ಕ್ರೌಂಚಪಕ್ನಿಗಳ ಜೋಡಿಯಲ್ಲಿ ಒಂದು ಹತವಾಗಲು
ಇನ್ನೊಂದು ಕೂಗಿಕೊಂಡ ಸನ್ನಿವೇಶವನ್ನು ಕಂಡಾಗ ವಾಲ್ಮೀಕಿಗೆ ಆದದ್ದು
ಹೀಗೆಯೇ ಎಂದು ತೋರುತ್ತದೆ. ಶೋಕಭರದಲ್ಲ,
ಮಾ ನಿಷಾದ ಪ್ರತಿಷ್ಠಾ೦ ತ್ವಮಗಮಃ ಶಾಶ್ವಶೀಃ ಸಮಾಃ |
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಪಿತಂ ॥7
ಎ೦ಬ ಉಕ್ತಿ ಅನನ ಬಾಯಿಂದ ಹೊರಟಿತು. ಆ ಬಳಿಕ ಪೀಗೇಕೆ
ಆಯಿತು ಎಂದು ಚಿಂತಿಸಿ ನೋಡುವಾಗ ತನ್ನ ಮಾತು ಲಯಬದ್ಧವಾಗಿ
ಶ್ಲೋಕವಾಗಿರುವುದು ಅವನಿಗೆ ಗೊತ್ತಾಯಿತು.“
ಆದರೆ ಹೀಗೆ ಕೇವಲ ಲೌಕಿಕಭಾವವೇ ಕಾವ್ಯರೂಪದಲ್ಲಿ ಹೊಮ್ಮು
ವುದು ಅಪೂರ್ವ. ಭಾವದ ಅತಿ ತೀವ್ರಾವಸ್ಥೆ ಯಲ್ಲಿ ಎಷ್ಟೋ ವೇಳೆ
ಮಾತೇ ಹೊರಡುವುದಿಲ್ಲ; ಒಂದು ಪೇಳೆ ಹೊರಟರೂ ಏನನ್ನು ಹೇಳು
ತ್ರಿದ್ದೇನೆಂಬುದರ ಅರಿವು ಆಡ`ವವವಿಗೆ ಇರುವುದಿಲ್ಲ. ಆದರೆ ಕವಿ ಕಾವ್ಯ
ಬರೆಯುವಾಗ. ಪ್ರತಿಬೆಯ ಉಜ್ಜ್ಯಲಸ್ಸಿ ತಿಯಲ್ಲ ಆವೇತಗೊಂಡು ಬರೆ
ಯುವಾಗ ಕೂಡ, ತಾನು ಏನನ್ನು ರಚಿಸುತ್ತಿದ್ದೇನೆ ಎಂಬುದನ್ನು ಲಕ್ಷಿ
ಸದೆ, ಅದರ ರೂಪದ ಕಡೆಗೆ ಗಮನ ಕೊಡಡೆ, ಬರೆಯುವುದಿಲ್ಲ. ಇದರ
ಮೇಲೆ, ಭಾವನಾದೃಷ್ಟಿಯಿಂದ ಲೋಕವೃತ್ತವನ್ನು ವೀಕ್ಷಿಸುವಂತೆಯೇ ಶಿ
ಸ್ವಕೀೀಯವೃತ್ತವನ್ನೂ ವೀಕ್ಷಿಸುವ ಶಕ್ತಿ ಕವಿಗೆ ಉಂಟು. ಅವನು ತನ್ನ
ಹೃದಯವನ್ನೇ ತಾನು ಒಳಹೊಕ್ಕು ನೋಡಬಲ್ಲನು. ತನ್ನ ಪ್ರೇಮ
ಶೋಕಗಳನ್ನೇ, ಹರ್ಪವಿಷಾದಗಳನ್ನೇ ರಸವಾಗಿ ಸವಿಯಬಲ್ಲನು; ಆ
ಸವಿಯನ್ನು ತನ್ನ ಕಾವ್ಕನಾಟಕಗಳ ಮೂಲಕ ಒದಗಿಸಿಕೊಡಬಲ್ಲನು.
ಹೀಗೆ ಕೃತಿಗಳು ಹೊಮ್ಮುವುದು ಮುಖ್ಯವಾಗಿ ಕವಿಯ ರಸಾನುಭವ
ದಿಂದ---ಅವುಗಳ ಪರಿಭಾವನೆಯಿಂದ ಸಾಮಾಜಿಕರಿಗೆ ರಸಾನುಭವ.
"" ತೇನ ರಸಮಯಡೇವ ವಿಶ್ವಂ.''
9 ರಾಮಾಯಣ, ಸ. ೨. ೧೫. ಇಲ್ಲ ಶೋಕವೇ ಶ್ಲೋಕವಾಯಿತೆಂಬ ಅಭಿಪ್ರಾಯ
ವನ್ನು ಕಾಳಿದಾಸನೂ ಅನುಮೋದಿಸುತ್ತಾನೆ: "",.,ನಿಷಾದನಿದ್ಯಾಂಡಜದರ್ಶನೋತ್ಸಃ
ಶ್ಲೋಕತ್ಪಮಾಪದ್ಯತ ಯಸ್ಯ ಶೋಕಃ” (ರಘುವಂಶ, ೪೪. ೭೦).
30 ಈ ವಿವರಣಿಯನ್ನು ಅಭಿನವಗುಪ್ತನು ಒಪ್ಪುವುದಿಲ್ಲ. ಇಲ್ಲ ವಾಲ್ಮೀಕಿಗೆ ಕ್ರೌಂಚ
ಪಕ್ಷಿಯೇ ವಿಭಾವವಾಯಿತು ; ಅದರ ಕೂಗೇ ಅನುಭಾವವಾಯುತು ; ಹೈದಯಸಂವಾದ ಬಲ
ದಿಂದ ಅವನು ಕರುಣ ರಸವನ್ನೇ ಸವಿದನು; ಅದು ತುಂಬಿ ಹೊರಸೂಸಿದಾಗ ಅಪ್ರಯತ್ನ
ವಾಗಿ ಹೊರಟದ್ದು ಈ ಶ್ಲೋಕ ಎ೦ದು ಅವನ ಅಭಿಪ್ರಾಯ (ಧನ್ಯಾ. ಲೋಚನ, ಪು.
೨೬).
4-1
೨೩. ರಸಪ್ರಭೇದಗಳು
ಎಲ್ಲ ರಸಗಳ ಸಾರವೊ ಒಂದೇ ಆದರೂ, ಅನುಭವಕಾಲದಲ್ಲಿ
ವಿಭಾವಾನುಭಾವಾದಿಗಳು ಸಂವಲತವಾಗಿಯೇ ಇರುವುದರಿಂದ ಒಂದೊ೦ಂ
ದರ ರುಚಿಯಲ್ಲೂ ಮೈಚಿಶ್ರ್ಯವುಂಟಾಗುತ್ತದೆ. ಬೇಲದ ಹಣ್ಣಿನ ಪಾನಕ,
ನಿಂಬೆಯ ಹಣ್ಣಿನ ಪಾನಕ, ಸೊಗದೆಯ ಬೇರಿನ ಷರಬತ್ತು--ಈ ಎಲ್ಲವೂ
ಪಾನಕಗಳೇ ; ಎಲ್ಲವೂ ಸಿಹಿಯೇ. ಆದರೆ ಒಂದೊಂದರ ಸವಿಯಲ್ಲೂ
ವೈಚಿತ್ರ್ಯವು೦ಟಲ್ಲವೆ ? ಇದೇ ದೃಷ್ಟಿಯಿ೦ದ ರಸಗಳನ್ನು ವಿಂಗಡಿಸಬಹುದು.
ಭರತನು ಎಂಟು ಸ್ಥಾ ಯಿಭಾವೆಗಳಿಗೆ ಸಮನಾಗಿ ಎಂಟು ರಸಗಳನ್ನು
ವಿಂಗಡಿಸುತ್ತಾನೆ ;
ಶೃ೦ಗಾರಹಾಸ್ಯಕರುಣಾ ರೌದ್ರವೀರಭಯಾನಕಾಃ |
ಬೀಭತ್ಪಾ. ದ್ದು ತಸಂಜ್ಲಿ ಚೇತ್ಯಪ್ಣಾ ನಾಟ್ಯೇ ರಸಾಃ ಸ್ಕೈತಾಃ ॥
(vi ೧೬)
N U- 3
ಶೃಂಗಾರಕ್ಕೆ ಸ್ಥಾಯಿಭಾವ ರತಿ; ಹಾಸ್ಫಕ್ಕೆ ಹಾಸ; ಕರುಣಕ್ಕೆ ಶ್ರೋಕ,
ರೌದ್ರಕ್ಕೆ ಕೊ ೀಧ, ವೀರಕ್ಕೆ ಉತ್ಸಾಹ, 'ಧೆಯಾನಕಕ್ಕೆ ಭಯ, ದೀಪಕ್ಕೆ
ಜುಗುಷೆ, ಅದ್ಸೆ ತಕ್ಕೆ ವಿಸ್ಮಯ. ನಾಟ ಸದಲ್ಲ ಪರಿಗಣಿತವಾಗುವ ರಸ
ಗಳು ಒಡಕು ಇವುಗಳಲ್ಲಿ ಒಂದೊಂದಕ್ಕೂ ಬಣ್ಣ " ಯಾವುದು, ಅದಿ
ದೈವ ಯಾವುದು, ವಿಭಾವಾನುಭಾವಗಳೂ ನಾಸಾ ಯಾವುವು,
ಅಭಿನಯಕ್ರಮವೇನು-ಈ ಮೊದಲಾದದ್ದನ್ನು ಭರತನು ವಿಸ್ತರಿಸು
ತ್ತಾನೆ. ಈಚಿನ ಲಾಕ್ಷಣಿಕರು ಇವುಗಳಲ್ಲಿ ಮ.ಖ್ಯವಾಗಿ ಶೃಂಗಾರದ
ಪ್ರಕಾರಗಳು, ಅಲ್ಲಿ ಬರುವ ನಾಯಕ ನಾಯಿಕೆಯರ ಪ್ರಭೇದಗಳು, ಅವರ
ಹಾವಭಾವಗಳು-ಇತ್ಯಾದಿ ವಿವರಣೆಯನ್ನು ಬೆಳಸುತ್ತಾರೆ. ಈ ವಿಷ
ಯದ ಪ್ರತಿಪಾದನೆಗೆ ಪ್ರಕೃತಗ್ರ೦ಥದಲ್ಲಿ ಅವಕಾಶವಿಲ್ಲ. ಕನ್ನಡದಲ್ಲಿಯೇ
* ಶೃ೦ಗಾರರತ್ನಾಕರ `, « ರಸರತ್ನಾಕರ' ಮೊದಲಾದ ಗ್ರಂಥಗಳಲ್ಲಿ
ಅನೇಕ ವಿವರಗಳು ದೊರೆಯುತ್ತವೆ ; ಕುತೂಹಲವುಳ್ಳವರು ನೋಡಬಹುದು.
ಇಲ್ಲಿ ನಾವು ಒಂದೊಂದು ರಸಕ್ಕೂ ಯಥೋಚಿತವಾಗಿ ಉದಾಹರಣಿ
ಕೊಟ್ಟು ವಿಶೇಪಾಂಶವೇನಾದರೂ ಇದ್ದಲ್ಲ ಒಂದೆರಡು ಮಾತು ಹೇಳು
ತ್ತೇವೆ.
ಎ೭೨
೨೩. ರಸಪ್ರಭೇದಗಳು ೩೭೩
ಈ ರಸಗಳಲ್ಲಿ ಮೊದಲನೆಯದು ಶೃಂಗಾರ ; ಪಟ್ಟಿ ಯಲ್ಲಿ ಮಾತ್ರವಲ್ಲ,
ಜನಪ್ರಿಯತೆಯಲ್ಲಿ ಕೂಡ. ಪ್ರೀಪುರುಪರಿಗಿರುವ ಪರಸ್ಪರ ಪ್ರೇಮವೇ
ರತಿ. ಇದನ್ನು ಅರಿಯದ ಮಾನವರಿಲ್ಲ ; ಪಶುಪಕ್ಷಿಗಳಲ್ಲೂ ಈ ಆಕರ್ಷಣೆ
ಯುಂಟ್ಲೇ ಉಂಟು. ರತಿಭಾವ ಹೀಗೆ ಸಕಲ ಹೃದಯ ಸಂವಾದಿಯಾಗಿರು
ವುದರಿಂದ ರಸಗಳಲ್ಲ ಶೃಂಗಾರಕ್ಕೆ ಪ್ರಮುಖಸ್ಕಾನ ದೊರೆತಿದೆ.
ಸಂಭೋಗ ಶೃಂಗಾರ, ವಿಪ್ರಲಂಭ ಶೃಂಗಾರ ಎಂದು ಇದರಲ್ಲಿ
ಎರಡು ಬಗೆ. ಒಂದರ ವಸ್ತು ಪ್ರಿಯರ ಸೇರಿಕೆ, ಇನ್ನೊ೦ದರದು ಅಗ
ಲಕೆ. ಅಗಲಿಕೆಯಲ್ಲ ಕೂಡ ಮುಂಡೆ ಸೇರುವ ಪ್ರತ್ಯಾಶೆ ಅಧಿಕವಾಗಿಯೋ
ಅಲ್ಪವಾಗಿಯ್ಲೋ ಇದ್ದೇ ಇರುತ್ತದೆ. ಸಂಭೋಗದಲ್ಲ ಕೂಡ ಅಗಲಿಕೆಯ
ಶಂಕೆ ಬೆರೆದೇ ಇರುತ್ತದೆ. ಆದ್ದರಿಂದ ಒಬ್ಬಾಕೆ ಕಾಂತನನ್ನು ಕುರಿತು
ಹೀಗೆ ಹೇಳುತ್ತಾಳೆ :
"6 ಕಾಣದಿರೆ ಕಾ೦ಜೊ೦ದು ಹಂಬಲು.
ಕಂಡೆರಗಲಕೆಯಂಜಿಕೆ ;
ಕಾಣದಿರೆ ಸುಖವಿಲ್ಲ ನಿನ್ನನು,
ಕಂಡರೂ ಸುಬವಿಲ್ಲವು! '' 2
ಸಂಭೋಗ ಶೃಂಗಾರದಲ್ಲಿ ಪರಸ್ಪರ ದರ್ಶನ, ಸಲ್ಲಾಪ, ಸಮಾ
ಗಮ-ಈ ಮೊದಲಾದಷೆಲ್ಲ ಸೇರುತ್ತವೆ. ಇದರ ನಿರೂ”ಣಿಯಲ್ಲ ಅತ್ಲೀ
ಲತೆಯ ದೋಪ ಸಂಘಟಿಸದಂತೆ ಕವಿ ಎಚ್ಚರದಿಂದ ಇರಬೇಕಾದ್ದು
ಆವಶ್ಯಕ... ಈ ವಿಷಯವನ್ನು ಹಿಂದೆ ಒಂದು ಅಧ್ಯಾಯದಲ್ಲಿ ಗಮನಿಸಿ
ದ್ಹೇಷೆ.. " ಅಮರುಶತಕ 'ದಿಂದ ಅನುವಾದಿಸಿರುವ ಕೆಳಗಿನ ಪದ್ಯವನ್ನು
ಸಂಭೋಗ ಶೃಂಗಾರಕ್ಕೆ ಉದಾಹರಣಿಯಾಗಿ ಕೊಡಬಹುದು :
«« ಬರಿಯೆ ಶಯ್ಯಾಗೃಹದ ಸುತ್ತಲೂ ಮೋಡಿ, ಮೆ.
ಛ್ಲನೆ ಶಯೆನದಿಂದಿನಿಸು ಮೇಲಕೆದ್ದು,
ನಿದ್ದೆಯನು ನಟಸಿ ಮಲಗಿದ್ದ ಹೃದಯೇಶ್ಚರನ
ವದನದಲಿ ನಿಡುಹೊತು ನೋಟವಿರಿಸಿ,
7 ಪ್ರತ್ಯಾತ ಎಳ್ಳಷ್ಟೂ ಇಲ್ಲದೆ, ಅಗಲಿಕೆ ನಿರಂತರಷಾದರೆ ಕರುಣರಸದ ವಿಷಯವಗು
ತ್ತದೆ. ಮುಂದೆ ಪು. ೩೭೭೯ನ್ನು ನೋಡಿ.
2 ಅದೃಷ್ಟೇ ದರ್ಶನೋತ್ಕಂಠಾ ದೃಷ್ಟೇ ವಿಚ್ಛೇದಭೀರುತಾ |
ನಾದೃಷ್ಟೇನ ನ ದೃಷ್ಟೇನ ಭವತಾ ಲಭ್ಯತೇ ಸುಖಂ! (ಸು ಭಾಷಿತಾವಲಿ, ೧೦೪೩)
೩೭೪ ಭಾರತೀಯ ಕಾವ್ಯಮಾಮಾಂಸೆ
ಬಳಿಕ ನಿಶ್ಯಂಕೆಯಲಿ ಮನಸಾರ ಮುತ್ತಿಡಲು
ಕೆನ್ನೆಯಲಿ ಪುಳಕವೆದ್ದು ದನು] ಕಂಡು,
ನಾಚಿ ಮೊಗಬಾಗಿಸಿದ ಬಾಲೆಯನು ನಗುನಗುತ
ಪ್ರಿಯನು ನಿಲುವಿಲ್ಲದೆಯೆ ಚುಂಬಿಸಿದನು.
(ಅಮರುಶತಕ, ೮೨ ರ ಅನುವಾದ)
ಇಲ್ಲಿ ಚುಂಬನ ವೃತ್ತಾಂತವೇ ಮುಖ್ಯವಾಗಿ ಬಂದಿದ್ದರೂ ಅಶ್ಲೀಲತೆಯ
ಎಲ್ಲೆಯನ್ನು ಕವಿ ಸೋಶಿಲ್ಲ. ಈ ಚಿಕ್ಕ ಪದ್ಯ ದಲ್ಲಿ ಶಂಕೆ, ಹರ್ಷ, ನಾಚಕೆ
ಮೊದಲಾದ ಅನೇಕ ಸಂಚಾರಿಭಾವಗಳು ಹೃದ್ಯವಾಗಿ ಬಂದು ರಸಕ್ಕೆ
ಪುಪ್ಪಿ ಕೊಟ್ಟಿವೆ.
ಪ್ರಥಮ ಸಮಾಗಮವು ಸಿದ್ಧಿಸುವ ಮೊದಲು, ಅಭಿಲಾಷೆ ಪ್ರಧಾನ
ವಾಗಿ ಪ್ರಿಯರನ್ನು ಸೊರಗಿಸಬಹುದು. '" ಶಾಕುಂತಲ' ನಾಟಕದ
ಮೊದಲ ಮೂರು ಅಂಕಗಳಲ್ಲ ಇದು ಗೋಚರವಾಗುತ್ತದೆ. ಸಮಾ
ಗಮವು ಕೈಗೂಡಿದ ಬಳಿಕ ಮಾನಕಲಹ, ಪ್ರವಾಸ, ಶಾಪ ಈ ಮೊದ
ಲಾದವುಗಳಿಂದ ಅಗಲಿಕೆಯೊದಗಬಹುದು. ಇವುಗಳಲ್ಲಿ ಶಾಪಜನ್ಯೆ
ವಾದದ್ದು ಶಾಕುಂತಲದ ಉತ್ತರಭಾಗದಲ್ಲಿ 1. ಇವೆಲ್ಲ
ವಿಪ್ರಲಂಭ ತೃಂಗಾರದ ಪ್ರಕಾರಗಳು. ಮಾನವಿಪ್ರಲಂಭೆಕ್ಕೆ ಮಾತ್ರ
ಈ ಕೆಳಗೆ ಒಂದು ಉದಾಹರಣಿಯನ್ನು ಕೊಟ್ಟಿದೆ. ಇದೂ ಅಮರು
ಶತಕ 'ದಿ೦ದಲೇ ಅನುವಾದಮಾಡಿದ್ದು (ಪದ್ಯ ೫೭). ಪ್ರಿಯನು ಮಾಡಿದ
ಯಾವುದೋ ತಪ್ಪಿತಕ್ಕಾಗಿ ಕಾಂತೆ ಕೋಪಗೊಂಡಿದ್ದಾಳೆ. ಅವರಿಬ್ಬರ
ಸಂವಾದ ಹೀಗೆ ಜರುಗುತ್ತದೆ :
"ಬಾಲೆ ! » ಏನದು ನಾಥ? ' " ಮುನಿಸನುಳಿ ಮಾನಿನಿ | '
" ಮುನಿದು ಮಾಡಿರುವುದೇನು ?
" ಎದೆದೇಗೆ ನಮ್ಮಲ್ಲ! ' " ನಿಮ್ಮ ತಪ್ಪೇನಿಲ್ಲಿ?
ತಪ್ಪೆಲ್ಲವೂ ನನ್ನದು. '
" ಅಂತಿರಲು ನುಡಿವಾಗ ಬಿಕ್ಕಳಿಸುತೇಕಳುವೆ ? '
"ಅರ ಮುಂದಳುತಿರುವುದು? '
"ನನ್ನ ಮುಂದಿದೊ | ' "ನಿನಗೆ ನಾನಾರು? ' * ನಲ್ಲೆ. ' "ನಾ.
ನಲ್ಲವೆಂದಳುತಿರುವುದು | ?
ಇಲ್ಲ, ಮಾನದ ಮಂಜು ಕಂಬನಿಯಾಗಿ ಕರಗಿ ಹರಿದು, ಸಮಾಗಮಕ್ಕೆ
ಮತ್ತೆ ದಾರಿಯುಂಟೆಂಬುದಕ್ಕೆ ತಾನೇ ಸೂಚನೆಯಾಗುತ್ತದೆ.
೨೩, ರಸಪ್ರಭೇದಗಳು ೩೭೫
೩) ಹಾಸ್ಯಮಾಮಾಂಸೆ ಪರಮಕಪ್ಪ. ಹಾಸ್ಯದಲ್ಲಿ ಹಲವು ಬಗೆ
ಗಳುಂಟು. ಸನ್ನಿವೇಶದಲ್ಲಿ, ಸ್ವಭಾವದಲ್ಲಿ, ಮಾತುಕಥೆಯಲ್ಲ ಎಲ್ಲದ
ರಲ್ಲೂ ಅದು ಉಕ್ಕಬಹುದು. ಮೃದುಹಾಸ್ಯವುಂಟು, ಕಟುಹಾ ಸ್ಯವುಂಟು,
ಕುತ್ಸಿತಹಾಸ್ಯವುಂಟು. ಉದ್ದೆ €ಶಪೂರ್ವಕವಾದದ್ದು೦ಟು, ಅರಿವಿಲ್ಲದೆ
ಆಕಸ್ಮಿ ಕವಾಗಿ ಹೊಮ್ಮು ವುದುಂಟು. ಈ ಬಹುರೂಪಿಯಾದ ಹಾಸ್ಯದ
ಮೂಲವೇನು, ಇದರ ಸೊಗಸೇನು ಎಂಬುದರ ವಿಮರ್ಶೆಗೆ ತೊಡಗಿದ
ಆಧುನಿಕತತ್ತ್ವಜ್ಞರೇ ಒಂದು ನಿಶ್ಚಿತವಾದ ನೆಲೆಗೆ ಇನ್ನೂ ಬಂದಿಲ್ಲ,
ನಮ್ಮ ಪ್ರಾಚೀನ ಕಾವ್ಯಮಾಮಾಂಸಕರಾದರೂ ಇದರ ಆಳವನ್ನು ಪರಿ
ಶೋಧಿಸಿರುವರೆಂದು ಹೇಳಲು ಸಾಧ್ಯವಿಲ್ಲ... ಭರತನು "“ ವಿಕಾರವಾದ
ಅನ್ಯರ ವ್ಲೇಪಾಲಂಕಾರಗಳು, ನಾಚಿಕೆಗೇಡಿನ ಸ್ವಭಾವ, ವಿಸಯಚಾಪಲ್ಯ
ಕುಚೇಷ್ಟೆ, ಕೆಟ್ಟ ಮಾತು, ಅಂಗವೈಕಲ್ಯ, ಇನ್ನೊಬ್ಬರ ಮೇಲೆ ದೋಪಾ
ರೋಪಣ್ ಮೊದಲಾದ ವಿಭಾವಗಳಿಂದ ಇದು ಉದಡಿಸುತ್ತದೆ. . . . ಇದು
ಆತ್ಮಸ್ಥ, ಪರಸ್ಕೃ್ರ ಎಂದು ಎರಡು ಬಗೆ. ತಾನೇ ನಗುವಾಗ ಇದು
ಆತ್ಮಸ್ಥ ; ಅನ್ಯರನ್ನು ನಗಿಸುವಾಗ ಪರಸ್ಭ'' ಎಂದು ಹೇಳಿ * ಕೆಲವು *" ಆನು
ವಂತ್ಯ ” ವಾದ ಆರೈಗಳನ್ನು ಉದಾಹರಿನುತ್ತಾನೆ. ಇವುಗಳಲ್ಲಿ,
ಸೈ ತಮಧ ಹಿತಂ ವಿಹಸಿಶಮುಪಹಸಿತಂ ಚಾಪಹಸಿತಮತಿಹಸಿತಂ |
ದದ ಭೇದ್ ಸ್ಯಾತಾಮುತ್ತ ಮಮಧ್ಯಾಧಮಪ್ರಕೃತಾ ॥
(vi. ೬5)
ಎಂಬುದು ಗಮನಾರ್ಹವಾಗಿ ಪರಿಣಮಿಸಿದೆ. ಇದರ ಮೇರೆಗೆ ಹಾಸ್ಯವು
ಆರು ವಿಧವೆಂದು ಈಚಿನ ಲಾಕ್ಷಣಿಕರು ಅಂಗೀಕರಿಸುತ್ತಾರೆ. ಉತ್ತಮ
ಪ್ರಕೃತಿ (ಎಂದರೆ ಸ್ವಭಾವ) ಉಳ್ಳವರಲ್ಲಿ ಸ್ಮಿತ ಹಸಿತಗಳೂ, ಮಧ್ಯಮ
ಪ್ರಕೃತಿಯವರಲ್ಲಿ ವಿಹಸಿತ ಉಪಹಸಿತಗಳೂ ಅಧಮ ಪ್ರಕೃತಿಯವರಲ್ಲಿ
ಅಪಹಸಿತ ಅತಿಹಸಿತಗಳೂ ಗೋಚರಿಸುತ್ತವೆ. ಒಂದಕ್ಕೂ ಇನ್ನೊ೦ದಕ್ಕೂ
ಇರುವ ವ್ಯತ್ಯಾಸವೆಲ್ಲ..ತುಟಿ ಎಪ್ಪರಮಟ್ಟಿಗೆ ತೆರೆದಿರುತ್ತದೆ, ಹಲ್ಲುಸಾಲಿನ
ಎಷ್ಟು ಭಾಗ ಗೋಚರಿಸುತ್ತದೆ, ಕಣ್ಣು ಷ್ಟು ಅಗಲವಾಗಿ ಅರಳುತ್ತದೆ ;
ಶಬ್ದ ಕೇಳಿಬರುತ್ತದೆಯೇ, ಕಣ್ಣೀರು ಹರಿಯುತ್ತದೆಯೇ, ಮೈಯ ಅಂಡ
3 ನಾಟ್ಯಶಾಸ್ತ್ರ, ೪, ೫೬.
೩೭೬ ಭಾರತೀಯ ಕಾವ್ಯಮಾಮಾಂಸೆ
ಗಳು ಕಂಪಿಸುತ್ತವೆಯೇ ಎಂಬ ವಿವರಗಳನ್ನು ಅವಲಂಬಿಸಿದೆ. ಮುಗುಳು
ನಗೆ, ಅರಳುನಗೆ, ತುಂಬುನಗೆ, ಬಿರುನಗೆ, ಹುಚ್ಚುನಗೆ, ಹುಚ್ಚುಹುಚ್ಚು
ನಗೆ-ಎಂದು. ಬೇಕಾದರೆ . ಇವನ್ನು ಇರೆಯಬಹದು, ಹಾಸ್ಕರನ ಸವನ್ನು
ಬೇರೆ ಬೇರೆ ಸ್ವಭಾವದ ಜನರು “ ಅನುಥವಿಸುವಾಗ ಅವರ ಶರೀರದಲ್ಲಿ
ಉಂಟಾಗುವ ವೈಪರೀತ್ಯಗಳನ್ನು ಮಾತ್ರ ಇವು ತಿಳಿಸುವುವೇ ಹೊರತು
ಹಾಸ್ಕರಸದ ಒಳರಹಸ್ಯವೇನೆಂಬುದರ ವಿಚಾರ ಇವುಗಳಿಂದ ಮುಂದು
ವರಿಯುವುದಿಲ್ಲ.
ಇನ್ನೊಂದು ವಿಷಯ. ಭರತನು *" ಶೃಂಗಾರಾನುಕೃತಿರ್ಯಾತು
ಸ ಹಾಸ್ಯಸ್ತು ಪ್ರಕೀರ್ತಿತಃ” (೪1. ೪೫)--" ಶೃಂಗಾರದ ಅನುಕರ
ಣವೇ ಹಾಸ್ಯ :: ಎಂದು ಹೇಳುತ್ತಾನೆ. ಇದು ತೃಂಗಾರಸಂಭೂತ
ವೆಂದು ಭಾವಿಸಿದ್ದರಿಂದಲ್ಲೇ ಆ ರಸವಾದ ಕೂಡಲೇ ಇದನ್ನು
ಅವನು ಪ್ರತಿಪಾದಿಸಿರುವುದು. € ತೈ ೦ಗಾರ ಪ್ರಧಾನವಾದ ನಾಟಕಗಳಲ್ಲಿ
ವಿದೂಪಕನು ನಿಯತವಾಗಿ ಬರುವುದರಿಂದಲೂ, ( ನಾಯಕ ನಾಯಿಕೆಯರ
ನಡೆವಳಿಕೆಗಳನ್ನು ವಿದೂಪಕನು ಅನುಕರಿಸಿದಾಗ ನಗೆ ಹುಟ್ಟುವುದರಿಂದಲೂ
ಈ ಬಾವನೆ ಬೆಳೆಯಿತೇನೋ. ಆದರೆ ಕೇವಲ ಶೃಂಗಾರದ ಸನ್ನಿವೇಶ
ಗಳ ಅನುಕರಣದಿಂದಲ್ಲೇ ಹಾಸ್ಯ ಉದಿಸ ಸುವುದಿಲ್ಲ. (ಎ ರಸಗಳೂ ಶಿದಕ್ಕೆ
ವಿಷಯವೇ. ಇದನ್ನು ಅಭಿನವಗುಪ್ತ ನು ತನ್ನ ವ್ಯಾಖ್ಯಾನದಲ್ಲಿ ಸ್ನಪ್ಪ ಪಡಿಸಿ
ಹಾಸ್ಯದ ಜೀವಾಳೆಷೆನ್ನ ಬಹುದಾದ ಒಂದು: ಅಂಶವನ್ನು ಈ ಸಂದರ್ಭದಲ್ಲ
ಹೊಲಗೆಡಹುತ್ತಾ ನೆ. ಅನೌಚಿತ್ಯವೇ ಹಾಸ್ಯದ ಮೂಲ. "" ಅನೌಚಿಕ್ಯ
ಪ್ರವೃತ್ತಿಯಿಂದ ಉಂಟಾಗತಕ್ಕದ್ದೇ ಹಾಸ್ಕದ ವಿಧಾವ. ಈ ಅನೌಚತ್ಯವು
ಎಲ್ಲ ರಸಗಳ ವಿಭಾವಾನುಭಾವಾದಿಗಳಲ್ಲೂ ಒದಗುವುದು ಸಾಧ್ಯ. ಆದ್ದ
ರಿಂದ ಸಂಚಾರಿಗಳಲ್ಲೂ ಇದೇ ಸಂಗತಿ.” ಪೀಗೆ ಜಗತ್ತಿನ ಸಮಸ್ತ
ವಸ್ತುಗಳೂ ಕ್ರಿಯೆಗಳೂ ಅನ್‌ೌಚಿತ್ಯದಿಂದ ಪ್ರವರ್ತಿಸಿದಾಗ ಹಾಸ್ಯಕ್ಕೆ
4
ನ ಅನ್‌ಚಿತ್ಯಪ್ರವೃತ್ತಿಕೃತಮ್ಮೇವ ಹಿ ಹಾವ್ಯವಿಭಾವತ್ವಂ, ತಚ್ಚ ಅನೌಚಿತ್ಯಂ
ಸರ್ವರಸಾನಾಂ ವಿಭಾವಾನುಭಾವಾದೌ ಸಂಭಾವ್ಯತೇ. ತೇನ ವ್ಯಭಿಚಾರಿಣಾಮಪಿ
ಏಷ್ಕೆವ ವಾರ್ತಾ'' (ಅಭಿನವ ಭಾರತೀ, 1, ಪು. ೨೯೭).
ಹಾಸ್ಯವೇ ಅನುಚಿತವಾಗಿ ಪ್ರವರ್ತಿಸಿ ಹಾಸ್ಯಾಭಾಸವಾಗಲೂ ಬಹುದೆಂದು ಅಭಿನವ
ಗುಸ್ತನು ಸೂಚಿಸುತ್ತಾನೆ.
೨೩, ರಸಪ್ತಭೇದಗಳು ೩೭೭
ಅವಕಾತಮಾಡಿಕೊಡಬಹುದು. ಅನೌಚಿತ್ಯ » ಎಂಬುದರ ಅರ್ಥವೇ
ನೆಂದು ಅಭಿನವಗುಪ್ತನು ಖಚಿತಪಡಿಸದಿದ್ದರೂ ಆಧುನಿಕರ ವಿಚಾರಗಳು
ಅವನು ಹೊರಟ ದಾರಿ ಸರಿಯೆಂಬುದನ್ನು ಸಮರ್ಥಿಸುತ್ತವೆ.
ಹಾಸ್ಯದಲ್ಲಿ ಅನೇಕಾನೇಕ ವಿಧಗಳಿರುವುದರಿಂದ ಅದಕ್ಕೆ
ಯಾವದೋ ಒಂದು ಉದಾಹರಣಿಯನ್ನು ಕೊಟ್ಟರೆ ಸಾಲದು ; ಹೆಚ್ಚಿನ
ವಿಸ್ತರಣಕ್ಕೆ ಇದು ಸ್ಥಲವಲ್ಲ. " ರಾಮಾಶ್ವಮೇಧ :ದಲ್ಲಿ ಮುದ್ದಣ
ಮನ್ನೋರಮೆಯರ ಸಂವಾದದಲ್ಲಿ ಒಳ್ಳೆಯ ಹಾಸ್ಯಕ್ಕೆ ನಿದರ್ಶನಗಳು
ದೊರೆಯುವುಷೆಂದು ಸೂಚಿಸಿ ಕರುಣರಸದ ಕಡೆಗೆ ತಿರುಗೋಣ.
3) ಶೋಕಸ್ಕಾಯಿಯನ್ನುಳ್ಳದ್ದು ಕರುಣರಸ.* ಇಲ್ಲ "ಕರುಣ '' ಎಂಬ
ಶಬ್ದವನ್ನು ನೋಡಿ, ಇನ್ನೊಬ್ಬರಿಗೆ ಶೋಕಬಂದಾಗ ನಾವು ತೋರಿಸುವ
ಕರುಣೆ (ಆಥವಾ ದಯೆ, ಅಥವಾ ಮರುಕ) ಈ ರಸದೆಂದು ಭ್ರಮಿಸ
ಎರದು. ಈ ಬಗೆಯ ತಪ್ಪನ್ನು ಶಂಕುಕನೇ ಮಾಡಿದ್ದನಂತೆ. ಕರು
ಣಿಯೇ ಬೇರೆ, ಕರುಣರಸವೇ ಬೇರೆ. ಕಾವ್ಕನಾಟಕಗಳಲ್ಲಿ ಪಾತ್ರಗಳ
ಶೋಕವನ್ನು ನೋಡಿದಾಗ ಅವರಿಗೆ ಸಹಾಯ ಮಾಡದೇಕೆಂಬ ಲೌಕಿ
ಕೇಚ್ಮಾರೂಪವಾ ದ ದಯೆ ಹುಟ್ಟಿದರೆ, ಅದು ಹೇಗೆ ರಸವಾಗುತ್ತದೆ? ಕರುಣ
ರಸದಲ್ಲಿ ಹೃದಯಸಂವಾದ ಬಲದಿಂದ ಶೋಕವನ್ನೇ ಕೇವಲರೂಪದಲ್ಲ
ನಾವು ಅನುಭವಿಸುತ್ತೇವೆ
ಹಿಂದೆಯೇ ಸೂಚಿಸಿದಂತೆ, ಪ್ರಿಯಪ್ರೇಯಸಿಯರಿಗೆ ಒದಗಿದ ನಿರಂತ
ರವಾದ ಆಗಲಿಕ ಕರುಣದ ಒಂದು ವಸ್ತುವಾಗುತ್ತದೆ. ಅದು ಪಿಪ್ರಲಂಭ
ಶೃಂಗಾರದ ಮುಂದಿನ ಮೆಟ್ಟಲು. ವಿಪ್ರಲಂಭವ ""ಸಾಪೇಕ್ಷಭಾವ'' ವೆ೦ದೂ
ಕರುಣವು " ನಿರಹೇಕ್ಷಭಾವ ವೆಂದೂ ಭರತನು ನಿರೂಪಿಸುತ್ತಾನೆ
(೪1. ೫೧). ಇಲ್ಲಿ, "" ಸಾಪೇಕ್ಷ'' ಎಂದರೆ ಅವಲಂಬನ (ಅಥವಾ
ಆಶ್ರಯ)ದಿಂದ ಸಮೇತವಾದದ್ದು ; ಆದಕಾರಣ ಪುನಃಸಮಾಗಮದ
ಪ್ರತ್ಯಾಶೆಯುಳ್ಳದ್ದು. "" ನಿರಪೇಕ್ಷ'' ಎಂದರೆ ಅವಲಂಬನರಪಿತವಾದದ್ದು.
ವಿಪ್ರಲಂಭಕ್ಕೂ ಕರುಣಕ್ಕೂ ನಡುವೆ ಇರುವ ಎಲ್ಲೆಯ ಗೆರೆಯನ್ನು ಲಾಕ್ಷಣಿ
5 ಇದು "" ಕರುಣಾರನ ''ವಲ್ಲ; ""ಶೋಕರಸ'' ಎಂದು ಕರೆಯುವುದೂ ಅಶಾಸ್ಟ್ರೀಯ,
6 ಅಭಿನವಭಾರತೀ, 1, ೩೧೮.
೩೭೮ ಭಾರತೀಯ ಕಾವ್ಯಮಾಮಾಂಸೆ
ಕರು ಅತಿ ಸೂಕ್ಷ್ಮವಾಗಿ ಎಳೆಯುತ್ತಾರೆ. (ಪ್ರಿಯ`ಪ್ರೇಯಸಿಯರಲ್ಲಿ
ಒಬ್ಬರಿಗೆ ಮರಣ ಸಂಭವಿಸಿದ ಬಳಿಕ ವಿಯೋಗವು ನಿರವಧಿಯಾದದ್ದರಿಂದ
ಮುಂದಿನ ವಲಾಪಾದಿಗಳಲ್ಲೆ ಲ್ಲಾ ಕರುಣವೇ ರಸವೆಂದು ಸಾಮಾನ್ಯವಾಗಿ
ಭಾವಿಸುತ್ತೇವಷ್ಟೆ) ಬಾಣನ " ಕಾದಂಬರಿ'ಯಲ್ಲಿ ಹೇಗೆ? ಇಲ್ಲಿ ಚಂದ್ರಾ
ಪೀಡನು ಪ್ರಾಣತ್ಯಾಗಮಾಡಿ ಜನ್ಮಾಂತರವನ್ನೆ ತ್ತಿ ನೀಗಿ, ಮತ್ತೆ ಉಜ್ಜೀ
ವಸಿ ಕಾದಂಬರಿಯನ್ನು ಹೊಂದುತ್ತಾನೆ. ಮಹಾಶ್ವೇತೆ ಪುಂಡರೀಕರ
ವೃತ್ತಾಂತ ಇನ್ನೂ ಅಪೂರ್ವವಾದದ್ದು. ಚಂದ್ರಾಪೀಡನ ಮೃತದೇಹ
ವಾದರೂ ಕಾದಂಬರಿಯ ಎದುರಿಗಿರುತ್ತದೆ ; ಮಹಾಶ್ವೇತೆಗೆ ಆ ಸಮಾ
ಧಾನವೂ ಇಲ್ಲ. ಇದಲ್ಲದೆ, ಜನ್ಮಾ ೦ತರ ಹೊಂದಿ ತನ್ನ ನ್ನು ಮತ್ತೆ
ಕಾಮಿಸಿ ಬಂದ ಪ್ರಿಯನನ್ನು ಅವನು ಯಾರೆಂದು ಅರಿಯದೆ ಅವಳು ಶಪಿಸಿ
ಬಿಡುತ್ತಾಳೆ. ಕಥೆಯ ಕೊನೆಯಲ್ಲಿ ಮಾತ್ರ ಇವರಿಬ್ಬರ ಸಮಾಗವು.
ಆದರೆ ಕಾದಂಬರಿಯಂತೆ ಇವಳಿಗೂ ಪ್ರಿಯನು ಮತ್ತೆ ದೊರೆಯುವನೆಂಬ
ಆತ್ಯಾಸನ ಉಂಟ. ಇಲ್ಲಿ ಯಾವ ರಸ? ಕರುಣವೇ, ಎಪ್ರಲಂಭ ತೃಂಗಾ
ರವೇ ? ರಘುವಂಶದಲ್ಲಿ, ಇಂದುಮತಿಯನ್ನು ಕಳೆದುಕೊಂಡ ಅಜಮಹಾ
ರಾಜನು ಹೃ ದಯವಿದ್ರಾವಕವಾಗಿ ಗೋಳಾಡುತ್ತಾನೆ ;7 ಯಾರ ಸಮಾ
ಧಾನೋಕ್ತಿಯೂ ಮನಸ್ಸಿಗೆ ನಾಟದೆ, ಅವನು ಗಂಗಾ ಸರಯೂ ನದಿಗಳ
ಸಂಗಮತೀರ್ಥದಲ್ಲ ತನ್ನ ದೇಹವನ್ನು ಬಿಟ್ಟು, ಸ್ವರ್ಗವನ್ನು ಅಮರ
ನಾಗಿ ಪ್ರವೇಶಿಸಿ, ಅಪ್ಪ ರೆಯಾಗಿ ತನ್ನ ಪೂರ್ವರೂಪವನ್ನು ಪಡೆದಿದ್ದ
ಪ್ರೇಯಸಿಯನ್ನು ಹೊಂದುತ್ತಾ ನೆ.* ಗೆ ಇಲ್ಲ ಇಬ್ಬರಿಗೂ ಮರಣ
ವೊದಗುತ್ತದೆ ; ಅದರೆ ಪ್ರೇಮ ಅದರ ಎಲ್ಲೆಯನ್ನು ದಾಟಿ ಮತ್ತೆ ಕೂಡಿ
ಸುತ್ತದೆ. ಇಲ್ಲಿಯ ರಸ ಯಾವುದು?
ಈ ವಿಷಯವಾಗಿ ಲಾಕ್ಷಣಿಕರಲ್ಲೆ € ಭಿನ್ನಾಭಿಪ್ರಾಯವುಂಟು.
« ರಘುವಂಶದಲ್ಲ, ಇಂದುಮತಿಯ ಮರಣದಿಂದ ಅಜನಲ್ಲಿ ಕರುಣವೇ ಸರಿ,
ಕಾದಂಬರಿಯಲ್ಲಾದರೆ ಮೊದಲು ಕರುಣ; ಆಕಾಶವಾಣಿ ನುಡಿದ ಬಳಿಕ
7 ರಘುಪಂಶ, ॥॥ಃ1, ೪೩-೭೦.
8 ತೀರ್ಥೇ ತೋಯವ್ಯತಿಕರಭವೇ ಜಹ್ಮುಕನ್ಯಾಸರಯ್ವೋಃ
ದೇಹನ್ಯಾಸಾದಮರಗಣನಾಲೇಖ್ಯಮಾಸಾದ್ಯ ಸದ್ಯಃ |
ಪೂರ್ವಾಕಾರಾಧಿಕತರರುಚಾ ಕಾಂತಯಾ ಸಂಗತ್ಕೋಸ
ಲೀಲಾಗಾರೇಪ್ವರಮತ ಪುನರ್ನಂದನಾಭ್ಯಂತರೇಷು ॥ ih ೯೫)
೨೩. ರಸೆಪ್ರಭೇದಗಳು ೩೭೯
ಪ್ರವಾಸ ಶೃಂಗಾರ ” ಎಂಬುದು ಧನಿಕನ ಅಭಿಪ್ರಾಯ. (ದಶರೂಪಕ,
iv. ೬೭ ವ್ಯಾಖ್ಯಾನ). "" ಸ್ವಲ್ಪಕಾಲದಲ್ಲಿಯೇ [ಮೃತನು] ಹಿಂದಿರುಗು
ವಂತಿದ್ದರೆ ಮರಣದ ಪ್ರವೇಶವು ಶೃಂಗಾರಕ್ಕೆ ಅತ್ಯಂತ ವಿರೋಧಿಯಾಗ
ಲಾರದು ; ದೀರ್ಪಕಾಲವೇನಾದರೂ ಪಿಡಿಯುವುದಾದರೆ ನಡುವೆ
ಶೃಂಗಾರದ ಪ್ರವಾಹಕ್ಕೆ ವಿಚ್ಛೇದ ಬರ.ತ್ತದೆ (ಎಂದು ಅನಂದವರ್ಧ ನನು
ನಿರೂಪಿಸುತ್ತಾನೆ (ಧ್ವನ್ಯಾ., ಪು. ೧೬೫). ಇದನ್ನು ಕುರಿತು ವ್ಯಾಖ್ಯಾನ
ಮಾಡುವಾಗ, ಅಜನು'ದೇಹ ತೊರೆದ ವಿಷಯದ ಪದ್ಯವನ್ನೇ ಉದಾ
ಹರಿಸಿ, "" ಇಲ್ಲಿ ಮರಣವು ಸ್ಭು ಟವಾಗಿ ರತಿಗೆ ಅಂಗವಾಗಿ ಬಂದಿದೆ. ಆದ
ಕಾರಣವೇ ಶ್ರೇಷೃಕವಿ " ಮರಣ' ಎಂಬ ಪದವನ್ನು ಉಪಖೋಗಿಸಿಲ್ಲ.
[: ದೇಹನ್ಯಾಸ' ಎಂದು ಅದನ್ನು ಕರೆದಿದ್ದಾನೆ.] ಆ ಪದವೇನಾದರೂ
ಬಂದಿದ್ದ ರೆ ಪುನರ್ಮಿಲನವು ಅತಿಪರಿಮಿತಕಾಲದಲ್ಲೆ € ಒದಗಿದ್ದರೂ
ಶೋಕಷೇ ಉದಿಸುತ್ತಿತ್ತು..... ” ಎಂದು ಮೊದಲಾಗಿ ಅಭಿನವಗುಪ್ತನು
ಅಭಿಪ್ರಾಯಪಡುತ್ತಾನೆ. ಬಹುಶಃ ಈ ಬಗೆಯ ವಿಚಾರಕ್ಷೇಶವನ್ನು ಪರಿ
ಹರಿಸಲೆಂದೋ ಏನೋ, ಕೆಲವರು " ಕರುಣವಿಪ್ರಲಂಭ'' ಪೆಂಬುದ ಗಿ
ಶೃ೦ಗಾರರಸದ ಒಂದು ಪ್ರಕಾರವನ್ನು ಕಲ್ಪಿಸಿದರು. ಅದರ ಲಕ್ಷಣವು
" ಸಾಷಿತ್ಯದರ್ಪಣ'ದಲ್ಲ ಹೀಗೆ ಬಂದಿದೆ :
ಯೂನೋರೇಕತರಸ್ಮಿ ನ್ ಗತವತಿ ಲೋಕಾಂತರಂ ಪುನರ್ಲಭ್ಯೇ।
ವಿಮನಾಯತೇ ಯದೇಕಃ ತದಾ ಭವೇತ್ ಕರುಣವಿಪ್ರಲಂಭಾಖ್ಯಃ॥
(iii. ೨೦೯)
`` ಯುವಕರಲ್ಲಿ [ಎಂದರೆ ಪ್ರಿಯರಲ್ಲಿ] ಒಬ್ಬನು(ಳು) ಲೋಕಾಂತರಕ್ಕೆ
ನಡೆದರೂ ಮತ್ತೆ ದೊರೆಯುವಂತಿರತಕ್ಕ ಸಂದರ್ಭದಲ್ಲ, ಇನ್ನೊ ಬ್ಬಳು (ನು)
ಉಮ್ಮಳಿಸುವಾಗ, ಕರುಣವಿಪ್ರಲಂಭವಾಗುವುದು. ” "ಇದು ಹೇಗೆ
ಎಂದರೆ, ಕಾದಂಬರಿಯಲ್ಲ ಪುಂಡರೀಕಮಹಾಶ್ಮೇತೆಯರ ವೃತ್ತಾಂತದಲ್ಲಿ
[ಕಾಣಬರುತ್ತದೆ]. ಮರಳಿ ಲಭ್ಯವಾಗದಿದ್ದರೂ ಬೇರೆ ದೇಹವನ್ನು
ಧರಿಸಿ ಲಭ್ಯವಾದರೂ, ಅಲ್ಲ ಕರುಣವೇ ರಸ..... “(ವೃತ್ತಿ )-
ಲಾಕ್ಷಣಿಕರ ವಿಚಾರಸೂಕ್ಷ್ಮ ತೆಯನ್ನು ತೋರಿಸಲೆಂದು ಮೇಲಿನ
ನಿರೂಪಣಿಯನ್ನು ಕೆಲವು ಮಟ್ಟಿಗೆ ಬೆಳಸಿದೆವು. ಇದರಿಂದ, ಕರುಣರಸದ
ವ್ಯಾಪ್ತಿ ಕೇವಲ ಪ್ರಿಯಪ್ರೇಯಸಿಯರ ಅಗಲಿಕೆಯಪ್ಪರಲ್ಲೇ ನಿಜ್ಜುವುದೆಂದು
೩೮೦ ಭಾರತೀಯ ಕಾವ್ಯಮಾಮಾಂಸೆ
ಭಾವಿಸಬಾರದು. ಎಲ್ಲ ರೀತಿಯ ಶೋಕವೂ ಕರುಣದ ವಿಷಯ, ಶಾಪ
ಕ್ಲೇಶಾದಿಗಳಿಗೆ ಒಳಗಾದ ಆಹ್ತೇಪ್ಟರ ವಿಯೋಗ, ಸಂಪತ್ತಿನ ನಾಶ್ಮ
ಕೊಲೆ, ಸೆರೆ, ಈ ಮೊದಲಾದವೆಲ್ಲ ಇದಕ್ಕೆ ವಿಭಾವಗಳು. ಇಪ್ಪ ವಿಯೋಗ,
ಅನಿಷ್ಟಸಂಯೋಗ.....ಎ೦ದು ಇವನ್ನು ಸಂಗ್ರಹಿಸಬಸುದು. ರತಿಸಂಬಂಧ
ವಿಲ್ಲದ ಕರುಣಕ್ಕೆ " ಕಾದಂಒರಿ 'ಯಿಂದಲ್ಲೇ ಒಂದು ಉದಾಹರಣೆಯನ್ನು
ಕೊಡೋಣ. ಶಾಪವಶದಿಂದ ಗಿಳಿಯಾಗಿ ಹುಟ್ಟಿದ್ದ ಪುಂಡರೀಕನನ್ನು ಅವನ
ಜನ್ಮ ಜನ್ಮದ ಮಿತ್ರನಾದ ಕಪಿಂಜಲನು ಕಂಡ ಸಂದರ್ಭ ಇದು. ತಮ್ಮಿ
ಬರ ಆಗಿನ ವರ್ತನೆಯನ್ನು ಗಿಳಿಯೇ ವರ್ಣಿಸುತ್ತಿದೆ :
ದೊರೆಕೊ೦ಡತ್ತು ಭವದ್ಭಯಾ೦ತರದೊಳೀಗಳ್ ಕಂಣ್ಮಿ ಕಂಡೇನೊ ಚೆ.
ಚ್ಚರಮೆಟ್ಟಪ್ಪುವ ಕುಳ್ಳಿರಲ್ ಕುಡುವ ನಿನ್ನೀ ಸೇದೆವಟ್ಟಂಗಮಂ ।
ಕರದಿಂ [ದೊ] ತ್ತಿ ಬಬಲ್ಕೆಯ೦ ಕಳೆವುದರ್ಕಾ೦ ಮೋಂತೆನಿಲ್ಲಣ್ಣ ನೀಂ
ಬರೆಯುಂ ಪಾಪಿಯೆನೇವೆನೆಂದು ಪಿರಿದು೦ಲ ಶೋಕಾಂಧನಾಗಿರ್ಪ್ಸಿನಂಗ
ಎತ್ತಿ ಕರಂಗಳಿಂದೆ ನಿಜಬಾಸ್ಪನಿರುದ್ಧೆಮೆನಿಪ್ಪ ಕನ್ನುಳಿಂ.
ದೊತ್ತಿ ಶರೀರದೊಳ್ ಪುಗಿಸಿಕೊ೦ಡಪನೆ೦ಬಿನವಾದಮಪ್ಪು ಶು೦|
ಚಿತ್ತದಲಂಪಿನಿ೦ ಕಿಜುಳನ೦ತಿರಲೆನ್ನಯ ಮಾಯ್ದ ಕಾಲ್ಗಳ೦
ನೆತ್ತಿಯೊಳಿಟ್ಟುಕೊಂಡಬುತಮಿರ್ದನಟಲೈನಶು೦ ಕಪಿಂಜಲಂ |
(ಸಂಗ್ರಹ, ;/]||, ೧೪-೧೫)
ಇದು ಮಿತ್ರರಿಬ್ಬರ ಶೋಕದ ವೃತ್ತಾಂತ; ಇದರ ಮನೋಹರತೆ ಯಾವ
ಪ್ರಿಯಪ್ರೇಯಸಿಯರ ವೃತ್ತಾಂತಕ್ಕೂ ಕಡಮೆಯಿಲ್ಲ. ಇಲ್ಲಿಯ ಅನುಭಾವ
ಗಳಿಂದ -- ಅದರಲ್ಲೂ, ಒಂದು ಕೈಪಿಡಿಯಲ್ಲಿ ಅಡಗುವಂಥ ಗಿಳಿಯಾಗಿ
ಮಾರ್ಪಟ್ಟಿದ್ದ ತನ್ನ ಗೆಳೆಯನನ್ನು ಹೇಗೆ ಆದರಿಸಬೇಕೆಂದು ತೋರದೆ
ಕೊನೆಗೆ ಕಪಿಂಜಲನು ಅವನ ಕಾಲುಗಳನ್ನು ತನ್ನ ತಲೆಯ ಮೇಲೆ
ಇಟ್ಟುಕೊಂಡು ಚಿಕ್ಕಹುಡುಗನಂತೆ ಅತ್ತನೆಂಬುದರಿಂದ__ಕರುಣ ಕೋಡಿ
ವರಿಯುತ್ತದೆ.
ನಮ್ಮ ಸಾಹಿತ್ಯದಲ್ಲಿ ಬಲುಮಟ್ಟಿಗೆ ಅಪೂರ್ವವಾದ ಒಂದು
ಪ್ರಸಂಗವನ್ನು ಉಲ್ಲೇಖಿಸುವ ಈ ಮುಂದಿನ ಉದಾಹರಣಿಯನ್ನು ಗಮ
ನಿಸದೇಕು ಇದು ನೇಮಿಚಂದ್ರನ " ಅರ್ಧನೇವಿಪುರಾಣ'ದಲ್ಲಿ ಶೃಶಾನ
ವರ್ಣನೆಯ ಭಾಗದಲ್ಲಿ - ರುತ್ತದೆ. ಸ್ವಭಾವಸಹವೂಸಗಳ ದೋಪದಿಂದ
೨೩. ರಸಪ್ರಭೇದಗಳು ೩೮೧
ಕೆಟ್ಟದಾರಿಗೆ ಬಿದ್ದು ಎಳಹರೆಯದಲ್ಲೇ ಶೂಲಕ್ಕೇರಿದ ಮಗನ ಮುಂದೆ
ಅವನ ತಾಯಿ ಪೀಗೆ ಹಲುಬುತ್ತಾ ಳೆ :
ಅಂಗಡಿಯಾನೆ [ಯೆ] ಬೀದಿಯ
ಜಂಗಮಲಲನೆಯರ ಕಣ್ಣ ಪುಣ್ಯಮೆ ನನ್ನ] ol
ಜಂಗಮ ವಿಷಮಂ ೬ಡಿದಾ
ವಂ ಗೆಡ ಪಿತೃವನಕೆ ತಂದು ತುಡಿಸಿದ ಬ೦ಟಂ॥
ಊಡಿದೆನೋದಲಿಟ್ಟೆ ನುಡಗಲ್ವುದುಮಣ್ಣನ ಕೂಸುದಂಣೆನಾಂ
ಬೇಡೆನೆ ಮಾಯ ಕಳ್ಳರೊಡನಾಡಿಯೆ ಪೆತ್ತ ಬಸಿರ್ಗೆ ಸ೦ತಸಂ!
ಮಾಡಿವೆಯಂದಿದೇಂ ಮಗನೆ ಪಣ್ಣನೆ ನುಣ್ಮೊಗದಲ್ಲ ಮಾಸೆಗಳ್
ಮೂಡದ ಮ:ನ್ನ ನಿನ್ನ ಷೆಗಲೊಳ" ಪೊಸಸೂಲಮಿದೆಂತು ಮೂಡಿತೋ॥
(v.49)
ಕರುಣವು ಅತಿ ಸುಕುಮಾರವಾದ ರಸ, ಇದರ ಅನುಭವ ಕಾಲ
ದಲ್ಲಿ ಹೃದಯ ಅಧಿಕವಾಗಿ ಕರಗುತ್ತದೆ. ಸಂಸ್ಕೃತ ಕವಿಗಳಲ್ಲಿ ಭವ
ಭೊತಿಯಂತೂ " ಕರುಣವೊಂಡೇ ರಸ» ಎಂದು ಸೂಚಿಸುವಷ್ಟು ದೂರ
ಹೋದನು. ತೃಂಗಾರವೀರಗಳಲ್ಲ ಮಾತ್ರ ಒಂದನ್ನು “ನಾಟಕ''ದ
ಮುಖ್ಯರಸವಾಗಿ ಆರಿಸಿಕೊಳ್ಳದೇಕೆಂಬ ನಿಯಮವನ್ನೂ ಮಾರಿ " ಉತ್ತರ
ರಾಮಚರಿತ 'ವನ್ನು ರಚಿಸಿದನು. ಇದರಲ್ಲಿ ನಿರವಧಿಯೆಂದೇ ನಾಟಕದ
ಕೂನೆಕೊನೆಯವರೆಗೂ ತೋರುವ ಸೀತಾರಾಮರ ವಿಯೋಗದುಃಖ
ವನ್ನು ಮಾತ್ರವಲ್ಲದೆ ನಂಟರ, ಇಷ ಎರ ಎಲ್ಲರ ಶೋಕವನ್ನೂ ಭವಭೂತಿ
ಅತಿಗಾಢವಾಗಿ, ಒಮ್ಮೊಮ್ಮೆ ಅತಿಯಾಗಿ, ನಿರೂಪಿಸಿದ್ದಾ ನೆ. ಕನ್ನಡದಲ್ಲಿ
"ಗದಾಯುದ್ಧದ ಕೆಲವು ಭಾಗಗಳು, ಮುಖ್ಯವಾಗಿ ದುರ್ಯೋಧನನ ಮಿತ್ರ
ಎಲಾಪದ ಪದ್ಯಗಳು, ಕರುಣರಸಕ್ಕೆ ಪ್ರಖ್ಯಾತವಾದ ಉದಾಶರಣಿ.
)ಕ್ರೋಧವು ಉದ್ಭತಪ್ರಕೃತಿಯುಳ್ಳವರಲ್ಲ ಬೀಗ ಉದ್ರೇಕಗೊಳ್ಳು
ತ್ತದೆ; ಕೆಲವರಂತೂ ಸ್ವಭಾವತಃ ಕೋಪತ್ಲೀಲರು. ತತ್ರುವೇನಾದರೂ
9 ಮೇಲಿನ ಎರಡನೆಯ ಪದ್ಯವನ್ನು ಕರುಣರಸಕ್ಕೆ ಉದಾಹರಣಿಯಾಗಿ ಸಾಳ್ವನು
* ರಸರತ್ನಾಕರ'ದಲ್ಲ ಉದಾಹರಿಸಿದ್ದಾನೆ (1. ೧೦೩); ಅಮುಖ್ಯವಾದ ವಪಾಠಭೇದ
ಗೆಳುಂಟು.
10 "ಏಕೋ ರಸಃ ಕರುಣ ಏವ.,,'(ಉತ್ತ,ರರಾಮಚರಿತ, ;;;. ೪೮). ಇದು ಉತ್ತರ
ರಾಮಚರಿತದ ಮೂರನೆಯ ಅಂಕಕ್ಕೇ ಪ್ರಧಾನವಾಗಿ ಅನ್ಪಯಸುವುದಾದರೂ ಕರುಣವೇ
ಪರಮರಸವೆಂಬ ಧ್ವನಿಯೂ ಭವಭೂತಿಯ ಮನಸ್ಸಿನಲ್ಲ ಇಲ್ಲದಿಲ್ಲ.
ವಿಶೇಷವಾಗಿ ಅನ್ಯಾಯಮಾಡಿದ್ದರೆ ಅವನ ರಕ್ತ ವನ್ನು ಕುಡಿದರೂ ತೃಪ್ತಿ
ಯಿಲ್ಲವೆನ್ನುವಪ್ಪರಮಚ್ಟಿಗೆ ಅದು ಅಂಥವರ ಚಿತ್ತವನ್ನು ಆಕ್ರಮಿಸುತ್ತದೆ.
ಕ್ರೋದಾತ್ಮಕವಾದ, ರಾದ್ರರಸದಲ್ಲಿ ಹೃದಯಸಂವಾದವನ್ನು ಪಡೆಯು
ವುದು ತಾಮಸಪ್ರಕ್ಕತಿ ಸುವರಿಗೇ ಸಹಜವೆಂದು ಅಭಿನವಗುಪ್ತನು ಸೂಚ
ಸುತ್ತಾನೆ. ಆದರೆ ಮೃದುಸ್ವಭಾವದ ಸುಸಂಸ್ಕೃತರು ಕೂಡ ರೌದ್ರದ
ಸವಿಯನ್ನು ಅರಿಯಬಲ್ಲರು; ಕಥಾಪುರುಷರ ಕ್ರೋಧಕ್ಕೆ ಯೋಗ್ಯವಾದ
ಕಾರಣವಿರಬೇಕು; ಅಷ್ಟೆ. ಭಾರತಕಥೆಯಲ್ಲ ದ್ರೌಪದಿಗೆ ದುಶ್ಶಾಸನನು
ಎಸಗಿದ ಅವಮಾನವನ್ನು ಕಣ್ಣಾರ ಕಂಡು, ಅಣ್ಣನ ಕಟ್ಟುಪಾಡಿನಿ ದ
ಅದಕ್ಕೆ ಅಲ್ಲಿಯೇ ಪ್ರತೀಕಾರಮಾಡಲು ಸಾಧ್ಯವಿಲ್ಲದೆಹೋಗಿ ಭೀಮನು
ಮಾಡಿದ ರಕ್ತಪಾನಪ್ರತಿಜ್ಞೆಯನ್ನು ಅವರು ಅನುಮೋದಿಸದಿದ್ದರೂ ಅರ್ಥ
ಮಾಡಿಕೊಳ್ಳಬಲ್ಲರು ; ಆ ಪ್ರಸಂಗದಲ್ಲಿ ತನ್ಮ ಯತೆಯನ್ನೂ ಹೊಂದ
ಬಲ್ಲರು. ರಂಗಸ್ಥಳದಲ್ಲ ಪ್ರತ್ಯಕ್ಷವಾಗಿ ರಕ್ತಪಾನ ನನ್ನು ತೋರಿಸಿದರೆ
ರೌದ್ರರಸದ ಬದಲು ಜುಗುಪ್ಪಾಭಾವವೇ ತಲೆದೋರಬಹುದು. ಆದರೆ
ಕಾವ್ಯದಲ್ಲಿ ಉಚಿತವಾದ ವರ್ಣನೆಯ ಮೂಲಕ ಗೋಚರವಾದರೆ ವಿರಸ
ಪೆನ್ನಿಸುವುದ್ದಿ.'' ಸಮರ್ದನಾದ ಕವಿ ಎಂಥ ಸಾಮಗ್ರಿಯಲ್ಲಾ ದರೂ
ರಸವನ್ನು ಒರಿನಬಲ್ಲನು. ಪಂಪನು ಇದೇ ಪ್ರಸಂಗವನ್ನೇ ವರ್ಣಿಸಿ
ಕೊನೆಯಲ್ಲಿ ಹೇಳುವ ಈ ಮಾತನ್ನು ನೋಡಿ:
«« ಆದ ಮುಳಿಸಿ೦ದಮೆಲ್ಟ೦
ತದು೦ ಕುಡಿಯಲೈೈ ತಕ್ಕ ಪಗೆವನ ರುಧಿರಾ. |
ಚೊ ನೀದೆಮ ನೆ ಕುಡಿದು ಮಾಣ್ಣಿ ವೈ.
ಕೋದರನೇನಾವ ತ್ರೊದೊಳಂ ದೋಷಿಗನೇ॥'' (xi. ೧೫೯)
- -ಹೀಗೆಂದು ಉಭಯಬಲದವರೂ ಕೊಂಡಾಡಿದರಂತೆ ! ಇಂಥ ಕಾರ್ಯಕ್ಕೆ
ಭೀಮನು ಕೈಹಾಕಬೇಕಾಗಿದ್ದರೆ ದುಶ್ಶಾಸನನ ಕೃತಿ ಎಷ್ಟು ಹೀನವಾಗಿರ
ಬೇಕು ; ಅದು ಭೀಮನನ್ನು ಎಪ್ಪರಮಟ್ಟಿಗೆ ರೇಗಿಸಿರಬೇಕು ! ಆಗ ಕೂಡ
ಭೀಮನ ಮಿತಿ ಎಷ್ಟು ಶ್ರೇಷ್ಠ ! "" ಈ ಶತ್ರುವಿನ ರಕ್ತದ ತಿಳಿನೀರನ್ನು
ಮಾತ್ರ ಕುಡಿದು ಅಲ್ಲಿಗೇ ನಿಲ್ಲಿಸಿಬಿಟ್ಟನು [''_ಇದರ ಪರಿಭಾವನೆಯಲ್ಲಿ
ನಾವು ಮಗ್ನರಾಗ ಶ್ರೇಪೆ; ಭೀಮನ ಕ್ರೋಧವು ಉಚಿತ ಎಂಬುದನ್ನು
ಆರಿತು ಅಕಲುಪಿತವಾದ್ಮರಳಿದ್ರರಸಾಸ್ಟಾದವನ್ನು ಪಡೆಯುತ್ತೇವೆ.
೨೩. ರಸಪ್ರಭೇದೆಗಳು ೩೮೩
ರೌದ್ರಕ್ಕೆ ಸ್ಥಾಯಿ ಕ್ರೋಧ, ವೀರಕ್ಕೆ ಸ್ಥಾಯಿ ಉತ್ಸಾಹ. ಯುದ್ಧ
ವರ್ಣನೆ ಮೊದಲಾದವುಗಳಲ್ಲಿ ರಸ ಯಾವುದೆಂಬ ಸಂಶಯ ಒಮ್ಮೊಮ್ಮೆ
ಬರುವುದುಂಟು. ಸ್ಮಾಯಿಯನ್ನು ಜ್ಞಾ ಪಿಸಿಕೊಂಡರೆ ಅದು ಸಾಮಾನ್ಯ
ವಾಗಿ ಪರಿಹಾರವಾಗುತ್ತದೆ. ಕ್ರೋಧವು ಉದ ತರ ಸ್ನಭಾವ; ಉತ್ಸಾ
ಹವು ಉತ್ತಮಪ್ರಕೃತಿಯವರ, ಉದಾತ್ತರ ಸೃಭಾವ. ಈ ಉತ್ಸಾಹ
ಯಾವಾಗಲೂ ಯುದ್ದಾಜಿಮುಖವೇ ಆಗಬೇಕೆಂಬ ನಿರ್ಬಂಧವಿಲ್ಲ. ಅದು
ತ್ಯಾಗ, ಸನ್ಮಾರ್ಗಪ್ರವೃತ್ತಿ, ಪರೋಪಕಾರ--ಈ ಮೊದಲಾದ ರೀತಿ
ಗಳಲ್ಲೂ ಪ್ರವರ್ತಿಸಬಹುದು. ಭರತನು ದಾನವರ, ಧರ್ಮವೀರ, ಯುದ್ಧ
ವೀರಎಂದು ವೀರರಸವನ್ನು ಮೂರು ಪ್ರಕಾರವಾಗಿ ವಿಂಗಡಿಸುತ್ತಾನೆ;
ದಯಾವೀರವನ್ನು ಇವುಗಳ ಶೊತೆಗೆ ಕೆಲವರು ಸೇರಿಸುತ್ತಾರೆ. ಪಂಪನು
ಅರ್ಜುನನ ಬಾಯಲ್ಲಿ ಆಡಿಸುವ ಈ ಕೆಳಗಿನ ಮಾತು ಉತ್ಸಾಹದ ಅನೇಕ
ಮುಖಗಳನ್ನು ಸಂಗ್ರಹಿಸುತ್ತ ಡೆ:
ಒಶ್ತಿ ತುಂಬಿ ನಿಂದ ರಿಪುಭೂಜಸಮಾಜದ ಬೇರ್ಗಳಂ ನಭ-
ಕೈತ್ತದೆ ಬ೦ದು ತನ್ನ ಮಖೆವೊಕ್ಕೊಡೆ ಕಾಯದೆ ಜಾಗದೊಳ್ಟಿನ. ।
ಚೊ ತ್ತದೆ ಮಾಣ್ಣು ಬಾಟ್ವ ಪುಟುವಾನಸನೆಂಬನಜಾಂಡಮೆಂಬುದೆೊಂ-
ದತ್ತಿಯ ಪಣ್ಣೊಳಿರ್ಪ ಪುಟುವಲ್ಲದೆ ಮಾನಸನೇ ಮುರಾಂತಕಾ॥
(ಪ೦ಪಭಾರತ, ೪. ೭%)
ಅರ್ಜುನನ ಚರಿತೆಯಲ್ಲಿ ಮುಖ್ಯವಾಗಿ ಯುದ್ಧವೀರವನ್ನೂ ಅವನಿಗೆ ಪ್ರತಿ
ನಾಯಕನಾದ ಕರ್ಣನ ಚರಿತೆಯಲ್ಲಿ ದಾನವೀರವನ್ನೂ ಸವಿಯಬಹುದು.
ಧರ್ಮರಾಯನಲ್ಲಿ ಕಾಣಬರತಕ್ಕದ್ದು ಧರ್ಮವೀರವೆನ್ನುತ್ತಾರೆ. ಪಂಪ
ಭಾರತದ ಈ ಕೆಳಗಿನ ಪದ್ಯ (೩ ೮೫) ಇದಕ್ಕೋ ದು ನಿದರ್ಶನ
ವಾಗಬಹುದು: ವೈಶಂಪಾಯನ ಸರೋವರದ ತಡಿಯಲ್ಲಿ ಗದಾಯುದ್ಧವು
ಇನ್ನೇನು ಮೊದಲಾಗಲಿರುವಾಗ ಧರ್ಮರಾಯನು ದುರ್ಯೋಧನನಿಗೆ ಈ
ವೆ”ತುಗಳನ್ನು ಹೇಳುತ್ತಾನೆ :
ಬಿಸುಡಿನ್ನಪ್ಪೊಡಮೇವಮಂ ಧರಣಿಯಂ ಪಚ್ಚಾಳ್ಯಮೇನಪ್ಪುದೀ
ಕಿಸುರೊಳ್ ಕೆಮ್ಮ ನೆ ಪಾಪಕರ್ಮ ಚಲಮಂ ಕೆೊಂಡಾಡದೆಮ್ಮ ಯ್ವರುಂ ಜಿನ.|
ಕಯ್ಯುತ್ತಿರೆ ನೀನೆ ಮೇಣರಸುಗೆಯೇ ಸೋದರ್ಯದಿ೦ದೊಳ್ಳಿತೇ
ವಸುಧಾಮಂಡಳಮಿ೦ಂಬುಕಯ್ದುದಿದನಾಂ ಕಯ್ಯೊಡ್ಡಿದೆ೦ ಬೇಡಿದೆ೦॥
ಇಲ್ಲಿಯ ಧರ್ಮವೀರದಲ್ಲಿ ದಾನದಯಾವೀರಗಳ ಸ್ಪರ್ಶವೂ ಇಲ್ಲದಿಲ್ಲ ;
ಒಂದರಿಂದ ಮತ್ತೊಂದನ್ನು ಗೆರೆಯೆಳೆದಂತೆ ಪ ತ್ಯೇಕಿಸಿ ಶುದ್ಧ ರೂಪದಲ್ಲಿ
೩೮೪ ಭಾರತೀಯ ಕಾವೃಮಾಮಾಂಸೆ
ಕಾಣಿಸುವುದು ಕಪ್ಪ. ಜೋಧಿಸತ್ತ್ಪನ ಅನೇಕ ಕಥೆಗಳಲ್ಲಿ ದಯಾವೀರವೇ
ಮುಖ್ಯವಾಗಿ ತೋರುತ್ತದೆ. ಹರ್ಪಚಕ್ರವರ್ತಿಯ "ನಾಗಾನಂದ
ನಾಟಕ ' ದಲ್ಲಿ ದಯಾವೀರವೇ ರಸವೆಂದು ಕೆಲಮಂದಿ ಲಾಕ್ಷ ಕರ ಮತ;
ಇಲ್ಲಿಯದು ಶಾಂತರಕ ಎಂದು ಮತ್ತೆ ಕೆಲವರು ಹೇಳತ್ತಾರೆ. ದಯಾ
ವೀರವು ಶಾಂತರಸದ ಒಂದು ಪ ರ್ರೈಕಾರ ಎಂದು ಇನ್ನು ಕೆಲವರು ಸಮ
ನ್ವಯ ಮಾಡಲು ತೊಡಗಿರುವುದೂ ಉಂಟು.
ಓ) ಭಯವು ಮಾನವನ ಸಹಜ ಪ್ರವೃತ್ತಿಗಳಲ್ಲಿ ಒಂದೆಂದು ತೋರಿ
ದರೂ, ನಾಗರಿಕ ಸಂಸ್ಕಾರ ಬೆಳೆದಂತೆಲ್ಲ ಅವನು ಅದನ್ನು ತಡೆಯಲು
ಅಭ್ಯಾಸ ಮಾಡುತ್ತಾನೆ ; ಅದನ್ನು ಪ್ರದರ್ಶಿಸುವುದು ಅವಮಾನವೆಂದು
ಭಾವಿಸುತ್ತಾನೆ. ಉತ್ತಮ ಪ್ರಕೃತಿಯ ವೀರರಿಗೆ ಅದು ಸಹಜವಲ್ಲವೆಂದೇ
ನಮ್ಮ ಲಾಕ್ಷಣಿಕರ ಅಭಿಪ್ರಾಯ. ಸಾಮಾನ್ಯ ಜನರಲ್ಲಿ ಯಾವುದು ಭಯ
ವನ್ನು ಹುಟ್ಟಿಸುವುದೋ ಅದು ವೀರರಿಗೆ ಕೋಪವನ್ನು ಬರಿಸುತ್ತದೆ.
ಪ್ರಾಕೃತ ಮನುಷ್ಯರು, ಸ್ತ್ರೀಯರು, ಪಶುಮೃ ಗಾದಿಗಳು--ಇವನ್ನು ಆಶ್ರಯಿ
ಸಿಯೇ ಕವಿಗಳು ಭಯಾನಕ ರಸವನ್ನು ಸಾಮಾನ್ಯವಾಗಿ ನಿರೂಪಿಸುವುದು.
" ಶಾಕುಂತಲ'ದ ಮೊದಲನೆಯ ಅಂಕದಲ್ಲಿ ದುಷ್ಯಂತನ ರಥವನ್ನು ಕಂಡು
ಭಯಗೊಂಡು ಓಡುವ ಜಿಂಕೆಯ ವರ್ಣನೆ ಪ್ರಸಿದ್ಧವಾಗಿದೆ :
ಕೊರಲಂ ತಾಂ ಕೊಂಕುಗೆಯ್ಯುತ್ತಡಿಗಡಿಗೊಡನೈ ತರ್ಪ ತೇರಲ್ಲಣಂ ನ-
ಟ್ವಿರೆ ನೋಟ೦ ಬಾಣಪಾತಕ್ಕಗಿದಿರುಕಿಪುತಂ ಪೃಷ್ಠಮಂ ಮಾರ್ಗದೊಳ" ತೀ. |
ಎರೆ ನೀಡು೦ ಬಿಟ್ಟ ಬಾಯಿ೦ ಶ್ರಮದುದಿರ್ವರೆಮೆಬ್ಬಿರ್ದ ದರ್ಭಾಂಕುರಂಗಳ್
ಧರೆಯಲ್ಲೋರೊರ್ಮೆ ಕಾಲಟ್ಟಹಹ ನಿರುಕಿಸ್ಯೆ ಬಾನೊಳೇ ಪಾರಿ ಪೋಕುಂ ॥
(1, ೭ : ಬಸವಪ್ಪ ಶಾಸ್ತ್ರಿಗಳ ಅನುವಾದ)
ನಿರ್ಮಲ ಪ್ರತಿಬಾಶಾಲಿಗಳಾದ ಸಾಮಾಜಿತರಿಗೆ, ಒಂದು ವಾಕ್ಯವನ್ನು
ಕೇಳಿ ಅರ್ಥ ಮಾಡಿಕೊಳ್ಳುತ್ತಿದ್ದ ಹಾಗೆಯೇ, ವರ್ಣಿತವಸ್ತು ಎದುರಿಗಿಲ್ಲ
ದಿದ್ದರೂ ಕಣ್ಣಿಗೆ ಕಟ್ಟಿದಂತಾಗಿ ರಸಾನುಭವ ಹೇಗೆ ಒದಗುವುದೆಂಬುದಕ್ಕೆ
ಅಭಿನವಗುಪ್ತನು ಇದನ್ನೇ ಮುಖ್ಯ ನಿದರ್ಶನವಾಗಿ ಕೊಟ್ಟು ವಿವರಿಸಿ
ದಾ ವೆ.
`` 3 ನಾಗಾನಂದದ ಪ್ರಧಾನರಸ ಯಾವುದು ಎಂಬ ವಿಷಯದಲ್ಲಿ ಹೆಚ್ಚಿನ ಚರ್ಚೆಗಾಗಿ
ಮುಂಡೆ ಪು. ೪೧೪ ನ್ನು ಮೋಡಿ.
13 ಅಭಿನವಭಾರತೀ, 7, ಪು. ೨೮೦.
೨೩. ರಸಪ್ರಭೇದಗಳು ೩೮೫
~Y ಜುಗುಪ್ಸಾ ಮೂಲವಾದ ಬೀಭತ್ಸವು ಹೇಗೆ ರಸವಾಗಬಹುದೆಂಬ
ಸಂಶಯ ಒಮ್ಮೊಮ್ಮೆ ಬರಬಹುದು. ಕರುಣದಲ್ಲಿ ಆಸ್ಚಾದವಿರುವ ಪಕ್ಷಕ್ಕೆ
ಬೀಭತ್ಸದಲ್ಲೂ ಉಂಟು. ಆದರೆ ಮನಸ್ಸು ಶೋಕದಲ್ಲಿ ಮಗ್ಮವಾಗು
ವಷ್ಟು ಸುಲಭವಾಗಿ ಜುಗುಪ್ಸೆಯಲ್ಲಿ ಆಗಲಾರದು ; ಇಲ್ಲಿ ಉದ್ಯೇಗ ಬಲು
ಹೆಚ್ಚು. ಜುಗುಪ್ಪಿತವಾದದ್ದರ ವರ್ಣನೆಯನ್ನು ಕೇಳಿದಾಗ (ಅಥವಾ
ಓದಿದಾಗ) ಕೂಡ ಲೋಕದಲ್ಲಿ ಪ್ರತ್ಯಕ್ಷವಾಗಿ ಕಂಡು ಅನುಭವಿಸಿದಂತೆಯ್ಕೆ
ಅನೇಕ ವೇಳೆ ಆಗಿ ಮನಸ್ಸು ಪಿಮ್ಮೆಟ್ಟುತ್ತದೆ. ಇಂಥ ಸಂದರ್ಭಗಳಲ್ಲಿ
ಅದು ಲಾ*ಕಛಾವದ ಮಟ್ಟದಲ್ಲೇ ನಿಂತಿತೆಂದೂ ರಸಸ್ಥಿತಿಯನ್ನು ಮುಟ್ಟ
ಲಿಲ್ಲವೆಂದೂ ಸ್ಪಪ್ಪವಾಗಿ ಹೇಲಳಿಬಿಡುವುದೇ ಉಚಿತ. ಲಾಕ್ಷಣಿಕರು
ಸಾಮಾನ್ಯವಾಗಿ ಬೀಭತ್ಸ ತೆ ಉದಾಹರಣಿಯೆಂದು ಕೊಡುವ ಪದ್ಯಗಳ
ವಿಷಯದಲ್ಲಿ ಇದೇ ಅಭಿಪ್ರಾಯ ಹುಟ್ಟುತ್ತದೆ ಆದರೆ ಕವಿ ಸಮರ್ಥನಾದರೆ,
ವೆರ್ಣನೆಯನ್ನು ಅತಿಯಾಗಿ ಬೆಳಸದೆಹೋದರೆ, ಬೀಭತಶ್ಸರಸವನ್ನು ಮನ
ಗಾಣಿಸಬಲ್ಲನು ಆರ್ಯತೂರನು " ಜಾತಕಮಾಲಾ 'ಕಾವ್ಯದ ಕುಂಭ
ಜಾತಕದಲ್ಲಿ ಮದ್ಯದ ಅನರ್ಥಗಳನ್ನು ವರ್ಣಿಸುವಾಗ ಬೀಭತ್ಸವನ್ನು
ಅಸ್ವಾದವಿಷಯ ವಾಗಿ ಮಾಡಿದ್ದಾ ನೆ.
ಒಂದು ವಸ್ತು ಬುಗುಪ್ಪಿತಪ್ಲೇ ಅಲ್ಲವೇ ಎಂಬುದು ನೋಡುವ
ಕಣ್ಣಿ ನ ಮೇಲೆ, ನಿರೂಪಿಸುವ ವಿಧಾನದ ಮೇಲೆ ನಿರ್ಣಯವಾಗುತ್ತದೆ.
ಯಾವುದನ್ನು ಶೃಂಗಾರದ ಅಂಗವೆಂದು ಜನರು ಸಾಮಾನ್ಯವಾಗಿ ಭಾವಿಸು
ತ್ತಾರೋ ಅದನ್ನು ಕವಿ ಬೀಭತ್ಸದ ಅಂಗವಾಗಿ ಪರಿವರ್ತಿಸಿರುವುದುಂಟು.
ಭರ್ತೃಹರಿಯ ಶೃಂಗಾರತತಕದಲ್ಲಿ ದೊರೆಯುವ ಈ ಪದ್ಯವನ್ನು (ಸಂಖ್ಯೆ
೬೦) ನೋಡಿ:
ಕಶ್ಚು೦ಬತಿ ಕುಲಪುರುಷೋ ವೇಶ್ಯಾಧರಪಲ್ಲವಂ ಮನೋಜ್ಞ ಮಪಿ!
ಚಾರಭಟಚೋರಚೇಟಕವಿಟನಟ ನಿಷ್ಕ್ರೀವನಶ೦ಾವಂ ॥
[ಮನಸು ಸೆಳೆದರೂ ಕುಲಜನದಾವನು
ಚುಂಬಿಸುವನು ಬೆಲೆವೆಣ್ಣಿನ ಪಲ್ಲವ-
ಕೋಮಲದಧರವನು .-
ಚಾರ ಜೋರ ಭಟ ವಿಟ ನಟ ಚೇಟಕ-
ರುಗುಳಿನ ಪಡಿಗವರು ! ]
ಈ ಪದ್ಯ ನ್ಯಾಯವಾಗಿ " ವೈರಾಗ್ಯತತಕ 'ದಲ್ಲಿ ಬರಬೇಕಾಗಿತ್ತು.
KM. 25
೩೮೬ ಭಾರತೀಯ ಕಾವೃಮಾಮಾಂಸೆ
ಪಂಪನ ಆದಿಪುರಾಣ 'ದಲ್ಲಿ, ನೀಳಾ೦ಜನೆಯ ನಾಟ್ಯವನ್ನು
ನೋಡಿದ ಬಳಿಕ ಆದಿನಾಥನು ವಿರಕ್ತಿಹೊಂದಿ ಸಂಸಾರವನ್ನು ತೊರೆದು
ತಪಸ್ಸಿಗೆ ನಡೆಯುವುದಕ್ಕೆ ಪೂರ್ವಭಾವಿಯಾಗಿ ಹೇಳಿಕೊಳ್ಳುವ ಮಾತು
ಗಳಲ್ಲ ಈ ಕೆಳಗಿನದನ್ನು ಲಕ್ಷಿಸಿ :
ತನುಗೆ ಪೋಖೆ ತುಡುಗೆ ನವಲೇ-
ಪನಮೆ ಮಳಲ ಗೀತಮಡಣ್ರೆ ನೃತ್ಯಂ ಬಗೆಯ- |
ಲೈನಗೆ ದಲುನ್ಮತ್ತವಿಳಾ-
ಸನಮಿಂತಿನಿತಯೊಳಮೊ: ದಯೊಳ್ ಪುರುಳುಂಟೇ ॥ (x. ೫೫)
—ಮೇಲಿನ ಎರಡು ಪದ್ಯಗಳೂ ಬೀಧತ್ಸವು ರಸವಾಗಿದೆಯೆಂದೇ
ಹೇಳಬೇಕಲ್ಲವೆ ?
4) ಶೃಂಗಾರದಂತೆಯೇ, ಬಹುತಃ ಇನ್ನೂ ಒಂದುಪಾಲು ಹೆಚ್ಚಾಗಿ,
ವ್ಯಾಪಕವಾದ ರಸ ಅದ್ಭುತ. ಅದಕ್ಕೆ ಆಧಾರವಾದ ವಿಸ್ಮಯವನ್ನು
ಎಲ್ಲರೂ ಅನುಭವಿಸುತ್ತಾರೆ; ಸಚೇತನ ಪ್ರಾಣಗಳ ಚರೈಯನ್ನು ನೋಡಿ
ಮಾತ್ರವೆಲ್ಲ, ಅಚೇತನವಾದ ಪ್ರಕೃತಿಯಲ್ಲೂ ಪಡೆದಿರುತ್ತಾರೆ. ಮಗು
ಕಣ್ಣು ತೆರೆದಾಗಿನಿಂದ ಕೌತುಕಕ್ಕೆ ಮೊದಲಾಗುತ್ತದೆ; ಜೀವಮಾನದ
ಕೊನೆಯತನಕ ನೆಲೆಗೊಂಡೇ ಇರುತ್ತ ದೆ. ಸೃಷ್ಟಿಯಲ್ಲಿ ಎಲ್ಲೆಲ್ಲೂ--ಬೆಟ್ಟ
ದಲ್ಲಿ, ನದಿಯಲ್ಲಿ, ಮರದಲ್ಲಿ, ಹೂವಿನಲ್ಲಿ, "ರೆ ಯಲ್ಲಿ, ಮೃ ಗಳಲ್ಲ
ಮಾನವನಲ್ಲಿ ಎತ್ತ ಕಣ್ಣು "ಹರಿದರೆ ಅತ, ಮನುಪ್ಯ ನು ವೈಚಿತ್ರ, ವನ್ನು
ಕಾಣಬಲ್ಲನು, ವಿಸ್ಕ ಯವರು ನ್ನ್ನ ಪಡೆಯಬಲ್ಲನು. ಕಾವ್ಯ ನಾಟಕಗಳಲ್ಲಿ
ಅತಿಶಯೋಕ್ತಿ, ಉತ್ತೆ ಕ್ಷೆ ಮೊದಲಾದ ಪಲಕಾರಗಳಗೆ ವಿಶೇಷ
ಪ್ರಾಧಾನ್ಯವುಂಟು. ಅತಿತಯೋಕ್ತಿಯಂತೂ ಒಂದಲ್ಲ ಒಂದು ಬಗೆಯಲ್ಲಿ
ಎಲ್ಲ ಅಲಂಕಾರಗಳ ತಳಹದಿ. ಈ ಅಲಂಕಾರಗಳು ವಿಪಿಶವಾಗಿ ಬಂದರೆ
ಅದ್ಭು ತರಸಕ್ಕೆ ಎಷ್ಟೋ ವೇಳೆ ಪೋಪಕವಾಗುತ್ತಷೆ. ಹೆಬ್ಬಿದಿರಿನ
ಅತಳ್ಳಿ ಸತ್ಯವನ್ನು ಮನಗಾಣಿಸುವ ಕೆಳಗಿನ ಪದ್ಯದಲ್ಲಿ ಉತ್ಪ್ರೇಕ್ಷೆ ಅದ್ಭುತ
ರಸಕ್ಕೆ ಅಂಗವಾಗಿ ಬ೦ದಿರುವುದನ್ನು ನೋಡಬಹುದು :
ಐವಂಬುನಿಧಿಕೂಪದಿ೦ದಮರನಂದನಕ್ಕೇತಮೆ-
ತ್ತುವಲ್ಲಿ ಗಣೆಯಾಗಲುಂ ಕಡಲ ಗುಣ್ಬನಾರಯ್ಯಲುಂ |
ದಿವಕ್ಕಡರಲೇಣಿಯಂ ಸಮೆಯಲುಂ ವಲಂ ಬಾಡ್ಕೆಯೆಂ-
ಬವೊಲ್ ದೆಳೆದು ನಿಂದ ಪೆರ್ವಿದಿರ ಸ.ರ್ವಗುರ್ಪೆತ್ತಲು೦ ॥
(ಕಾವ್ಯಾವಲೋಕನ, ೧೯೩)
೨೩. ರಸಪ್ರಭೇದಗಳು ೩೮೭
ಈ ಅಕಂಭವವಾದ ವರ್ಣನೆಗಳು ತಾನೆ ಎಕೆ? ಕೆಳಗಿನ ಸ್ವಭಾವೋಕ್ತಿಯೇ
ಅದ್ಭುತರಸವನ್ನು ಆಸ್ಕಾದಕ್ಕೆ ತರಲಾರದೆ ?--
ನನ್ನಯ್ಯನಂಥೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಲಿ“ ಆಡುವಇಗ
ಸಂನ್ಯಾಸಿ ಜಪವ ಮರೆತನು | (ಜೋಗುಳದ ಹಾಡು)
ಅದ್ಭುತವನ್ನು ಒಂದು ಬಗೆಯ ಶೇಷ ರಸವೆಂದು ಕರೆಯಬಹುದು.
ಒಂದು ಸಂದರ್ಭದಲ್ಲ ಗೋಚರವಾಗುವ ರಸ ಯಾವುದೆಂದು ನಿರ್ಣಯಿ
ಸಲು ಕಷ್ಟವಾದಾಗ ಅಲ್ಲಿಯದು ಬಹುಶಃ ಅದ್ಭುತರನವಾಗಿರುತ್ತದೆ.
ಕೆಲವರು ಲಕ್ಷಣಕಾರರು ಇನ್ನೂ ಮುಂದೆ ಹೋಗಿ ಅದ್ಭುತವೊಂದೇ ರಸ
ವೆಂದು ಹೇಳುತ್ತಾರೆ :
ರಸೇ ಸಾರತ್ವಮತ್ಕಾರಃ ಸರ್ವತ್ರಾಪ್ಯನ:ಧೂ ಸುತೇ!
ತಚ್ಚಮತ್ಕಾರಸಾರತ್ಟೇ ಸರ್ವತ್ಪಾಪ್ಯದ್ಭುತೋ ರಸಃ |
ತಸ್ಮಾ ದದ್ಬು ತಮೇವಾಹೆ ಕೃತೀ ನಾರಾಯಣೋ ರಸಂ ॥
"«"ರಠದ ಸಾರವಾದ ಚೆಮತ್ಕಾರವು ಎಲ್ಲೆಲ್ಲಿಯೂ ಅನುಭವಕ್ಕೆ ಬರುತ್ತದೆ.
ಈ ಚಮತ್ಕಾರವನ್ನೇ ಸಾರವಾಗಿ ಉಳ್ಳದ್ದರಿಂದ ಎಲ್ಲೆಲ್ಲೂ ಅದ್ಭುತರಸ
ವುಂಟು. ಆದಕಾರಣ ವಿದ್ವಾಂಸನಾದ ನಾರಾಯಣನು ಅದ್ಭುತವೊಂದೇ
ರಸವೆಂದು ಹೇಳುವನು.” ಇವು ಧರ್ಮದತ್ತನೆಂಬಾತನ ವಾಕ್ಯಗಳೆಂದು
ಸಾಹಿತ್ಯದರ್ಪಣಕಾರನು ಉದಾಹರಿಸುತ್ತಾನೆ.!*
ಅದ್ಭುತವೇ ಏಕಮಾತ್ರ ರಸವೆಂದು ಸಾಧಿಸುವುದು ಕಪ್ಪ.
ವಿಸ್ಮಯವೇ ಪ್ರಧಾನವಾಗಿ ಮಿಕ್ಕ ಚಿತ್ತವೃತ್ತಿಗಳು ಆಪ್ರಧಾನವಾದಾಗ
ಅದೇ ರಸಪೆನ್ನಬಹುದು. ಆದರೆ ರತಿಯೋ ಶೋಕವೋ ಧಯವೋ
ಮುಖ್ಯವಾಗಿ ನಿಲ್ಲುವ ಪ್ರಸಂಗಗಳು ಜಗತ್ತಿನಛಿ ಎಪ್ಪಿಲ್ಲ! ಅಲ್ಲೆ ಲ್ಸ ಅದ್ಭುತ
ರಸವನ್ನೇ ಹೇಗೆ ಸಾಧಿಸುವುದು? ಅದ್ಭುತದಲ್ಲ ದೊರೆಯುವ
1 ಪಾತಿತ್ಯ ದರ್ಪಣ, i, ೩ ವೃತ್ತಿ. ಈ ನಾರಾಯಣನು ತನ್ನ ವೃದ್ಧವಿತಾಮಹ
ನೆಂದು ವಿಶ್ವನಾಥನೇ ತಿಳಿಸುತ್ತಾನೆ. ಧರ್ನುದತ್ತನದೆಂದು ಪ್ರಭಾಕರನ " ರಸಪ್ರುದೀಪ'
ದಲ್ಲಿ ಉಕ್ತವಾಗಿರುವ ಇನ್ನೊಂದು ಶ್ಲೋಕವನ್ನು ಈ ಮೊದಲೇ ಉದಾಹರಿಸಿದೆ
(ಪು. ೩೫೧, ಅಡಿಟಪ್ಪಣೆ 5).
25-3
೩೮೮ ಭಾರತೀಯ ಕಾವ್ಯಮಾಮಾಂಸೆ
4 ಚಮತಾ ತರೆ ವ್ರ ಚಿತ್ತ ವಿಸ್ತಾರರೂಪವಾದದ್ದು 15 ವಿಪ ಲಂಭ
ತೃ ೦ಗಾರ, ಕರುಣ ಮೊದಲಾದವುಗಳಲ್ಲಿ ಉಂಟಾಗುವುದು ಚಿತ್ತದ ದ್ರುತಿ
(ಎಂದರೆ ಚಿತ್ತ ಇಲ್ಲ ಕರಗಿಹೋಗುತ್ತದೆ). ಈ ಅನುಭವದಲ್ಲ ಸ್ಪಷ್ಟ
ವಾಗಿ ಭೇದವಿರುವಾಗ ಎಲ್ಲ ರಳಗಳನ್ನೂ ಅದ್ಭುತದಲ್ಲೇ ಅಡಕಮಾಡು
ವುದು ಹೇಗೆ? "" ರಸೇ ಸಾರಶ್ಚಮತ್ಕಾರಃ'' ಎಂಬ ಮಾತಿಗೆ, ಎಬ್ಲ
ರಸಗಳಲ್ಲಿಯೂ ಅಸ್ವಾದರೂಪವಾದ ಸೊಗಸೇ ಸಾರ ಎಂದಿಷ್ಟೇ ಅರ್ಥ
ಮಾಡಬೇಕು. ಚಮತ್ಕಾರ, ಆಸ್ಕಾದ ಆನಂದ, ವಿಶ್ರಾಂತಿ--ಇವೆಲ್ಲಕ್ಕೂ
ಒಂದೇ ತಾತ್ಪರ್ಯವೆ೦ದು ಆಗಲೇ ನೋಡಿದ್ದೇವೆ.
ಚವ'ತ್ಕಾರ ಎಂಬ ಶಬ್ದದ ಅರ್ಥ ಈಚೆಗೆ ಸಂಕುಚಿತವಾಗಿ ಅದು
ದುರ್ದಶೆಗೆ ಇಳಿದಿದೆ. ಒಂದು ಬಗೆಯ ಕೈಚಳಕವನ್ನು ನೋಡಿ ಅಲ್ಪ
ಸಾರವಾದ ವಿಸ್ಮಯವನ್ನು ಅನುಭವಿಸುವುದಕ್ಕೆ ಚಮತ್ಕಾರ ಏಂಬ ಹೆಸರು
ಬಂದುಬಿತ್ಚಿದೆ. ಇದಕ್ಕೆ ಕವಿಕರ್ಮದಲ್ಲೇ ಉದಾಹರಣಿಯುಂಟು.
ಕೆಲವವೇಳೆ, ಸಾಮಾಜಿಕರನ್ನು ಬೆರಗುಪಡಿಸದೇಕೆಂದು ಚಿತ್ರಕಾವ್ಯ
ಗಳನ್ನು ಕವಿ ಕಟ್ಟುತ್ತಾನೆ. ಈತ ಎಷ್ಟು ಸಮರ್ಥ; ದುಪ್ಕರವಾದ
ಯಮಕ, ಶ್ನೆ €ಷ, ಚಿತ್ರಬಂಧ ಮೊದಲಾದವುಗಳನ್ನು ಎಷ್ಟೊಂದು ಕೌಶಲ
ದಿಂದ ಅಳವಡಿಸಿದ್ದಾ ನೆ ಎಂದು ನಾವು ವಿಸ್ಮಯಪಡಬಹುದು 16 ಆದರೆ
ಕಾವ್ಯದ ಅರ್ಥವು ಭಾವವಿರಪಿತವಾಗಿರುವುದರಿಂದ ನಮಗೆ ಅದರೊಂದಿಗೆ
ಹೃ ದಯಸಂವಾದವು ಲಭಿಸುವುದಿಲ್ಲ; ರಸಾನುಭವವು ಒದಗುವುದಿಲ್ಲ.
ಇಲ್ಲನ ಕ್ಷಣಿಕ ಪಿಸ್ಮಯವು ಲೌಕಿಕಭಾವವಾಗಿ ಉಳಿದೀತೇ ಹೊರತು
ಅದ್ಭುತರಸವಾಗಲಾರದು. ಎಲ್ಲಿ ಕಾವ್ಯದ ಪಾತ್ರಗಳಿಗೇ ಸಮುಚಿತ
ಇದ ಕಾರಣಗಳಿಂದ ವಿಸ್ಮಯವೊದಗಿದ್ದರ ನಿರೂಪಣೆ ಬರುತ್ತದೋ
15 "ಚಮತ್ಕಾರಃ ಚಿತ್ತವಿಸ್ತಾರರೂಪೋ ವಿಸ್ಮಯಾಪರಪರ್ಯಾಯಃ' (ಸಾಹಿತ್ಯದರ್ಪಣ,
1. ಓ ವೃತ್ತಿ).
15 ಒಂದು ಅಕ್ಕಿಯ ಕಾಳಿನ ಮೇಲೆ ಒಬ್ಬರ ಹೆಸರುವಿಳಾಸಗಳನ್ನು ಪೂರ್ತಿಯಾಗಿ
ಕೊರೆಯುವುದು, ಅಂಗೆ ಸುಷ್ಟು ಅಗಲದ ಕಾಗದದ ಮೇಲೆ ಭಗವದ್ಗೀತೆಯನ್ನು ಸಮಗ್ರ
ಪಾಗಿ ಬರೆಯುವುದು... ಈ ಬಗೆಯ ದುಷ್ಕರ ಕಾರ್ಯಗಳಿಗೆ ಚಿತ್ರಕವಿತ್ಯವನ್ನು ಹೋಲಿಸಬಹುದು.
ತನ್ನ ಸೂಕ್ಷ್ಮಲಪಿಯನ್ನು ಓದಲು ಸಹಾಯವಾಗಿ ಒಂದು ಭೂತಗನ್ನಡಿಯನ್ನೂ ಲಿಪಿ
ಕಾರನು ಒದಗಿಸುವಂತೆ, ಕವಿಯೋ ಅವನ ಅಭಿಮಾನಿಯೋ ಒಂದು ವ್ಯಾಖ್ಯಾನವನ್ನೂ
ರಚಿಸಿ ಸಾಮಾಜಿಕರಿಗೆ ಸಹಾಯವಾಡಬೇಕಾಗುತ್ತದೆ.
೨೩. ೮ಸಪ್ರಭೇದಗಳು ೩೮೯
ಆಥವಾ ಕವಿಹೃದ್ಧ ತವಾದ ವಿಸ್ಮಯ.ವೇ ಎಲ್ಲಿ ಸಮ:ಚಿತವಾಗಿ ಅಭಿವ್ಯಕ್ತ
ವಾಗುತ್ತದೋ ಅಲ್ಲಿ ಮಾತ್ರ ಸಾಮಾಜಿಕನಿಗೆ ಅದ್ಭುತರಸದ ಅನುಭವ
ವಂಟಾಗುವುದೆಂದು ಹೇಳಿದರೆ ಬಸುತಃ ತಪ್ಪಾಗಲಾರದು. ಅಂತೂ ಈ
ವಿಷಯದ ಪರಿಪ್ಕಾರ ಆವತ್ಯಕ.
ಭರತನು "" ರಸ” ವೆಂಬ ಹೆಸರಿನಿಂದ ಕರೆಯುವ ಆಸ್ಕಾದಗಳ
ವಿಷಯವನ್ನೇ ಇದುವರೆಗೂ ಗಮನಿಸಿದ್ದಾಯಿತು. ರಸಗಳು ಇಷ್ಟು
ಮಾತ್ರವೇ? ಬೇರೆಯ ಚಿತ್ತವೃತ್ತಿಗಳಿಗೂ ಈ ಗೌರವ ಸಲ್ಲಬೇಡಸೇ!
ಎಂಬ ವಿಚಾರ ಬಹಳ ಪಿಂದಿನಿಂದಲ್ಲೇ ಪತ್ರಿರಂಭವಾಯಿತು. ಬಹುಶಃ
ಎಲ್ಲಕ್ಕೂ ಮೊದಲಿನಿಂದ, ಎಬ್ಲಕ್ಕೂ ಮುಖ್ಯವಾಗಿ, "" ಶಾಂತ''ವನ್ನು ರಸ
ವಾಗಿ ಪರಿಗಣಿಸಬೇಕೇ ದೇಡಪೇ ಎಂಬುದರ ಚರ್ಚೆ ನುದೀರ್ಪವಾಗಿ
ನಡೆಯಿತು. ಅದರ ವಿಷಯವನ್ನು ಪ್ರತ್ಯೇಕವಾಗಿ ಮುಂದಿನ ಅಧ್ಯಾಯ
ದಲ್ಲಿ ನಿರೂಪಿಸುತ್ತವೆ. ಅಭಿನವಗುಪ್ತನ ಕಾಲಕ್ಕೆ ಈ ವಿಚಾರ ಒಂದು
ನೆಲೆಗೆ ಬ:ದಿತು. ಅವನು ಶಾಂತರಸವನ್ನು ಒಪ್ಪಿ ಅದಕ್ಕೆ ಅಗ್ರಸ್ಥಾನ
ವನ್ನು ಕೊಟ್ಟನು; ನವರಸಗಳು ಪೀಗೆ ಪ್ರತಿಷ್ಠಿತವಾದ ಬಳಿಕ ರಠ
ಮಂದಿರದ ಬಾಗಿಲನ್ನು ಮುದ್ರಿಸಿಬಿಟ್ಟನು. ಜೀರೆ ಬೇರೆ ಲಾಕ್ಷಣಿಕರು
ಅದುವರೆಗೆ ಇನ್ನೂ ಕೆಲವು ರಸಗಳಿಗೆ ಅವಕಾಶವುಂಟೆ೨ದು ಪ್ರತಿಪಾದಿ
ಸಿದ್ದ 52. ಅದೆಲ್ಲವನ್ನೂ ಅವನು ಖಂಡಿಸಿದನು. ಈ ಸಂದರ್ಭದಲ್ಲ,
ಅವನ ಕೆಲವು ವಾಕ್ಯಗಳ ಆಶಯವನ್ನು ಕನ್ನಡಿಸಿ ಕೊಡಬಹುದು :
"« ರಸಗಳು ಈ ಒಂಬತ್ತೇ. ಏಕೆಂದರೆ, ಪುರುಷಾರ್ಥಗಳಿಗೆ ಉಪ
ಯುಕ್ತವಾಗಿರುವುದರಿಂದಲೋ ಅಧಿಕವಾದ ರಂಜನೆಯುಳ್ಳವಾಗಿರುವುದ
ರಿಂದಲೋ ಅಂತೂ ಇವಿಷ್ಟು ಮಾತ್ರವೇ ಉಪದೇಶಾರ್ಕವಾಗಿರತಕ್ಕ ವು.
ಆದಕಾರಣ, "ಬೇರೆ ರಸಗಳಿರುವುದು ಸಾಧ್ಯವಾದರೂ ವಿದ್ಯತ್ಸ ಮಾಜ
ಇವಿಷ್ಟೇ ಪ್ರಸಿದ್ಧವಾ ಗಿರುವುದರಿಂದ ಇಪ್ಪಕ್ಕೇ ಸಂಖ್ಯೆಯನ್ನು ನಿಯಮನ
ಮಾಡಿದೆ'' ಎಂದು ಕೆಲವರು ಹೇಳಿರುವುದಕ್ಕೆ ಇಲ್ಲ ಉತ್ತರ ಕೊಟ್ಟ
ದು ಲೊಲ್ಲಟನ ಮತವೆಂದು ತೋರುತ್ತದೆ. V, Raghavan: The
Nuinber of Rasas, ಪ. ೧೧೬-೧೬ ನೋಡಿ.
೩೯೦ ಭಾರತೀಯ ಕಾವ್ಯವಿಸಾಮಾಂಸೆ
ದಾಯಿತು. ಈ ವಿಷಯವನ್ನು ಭಾವಾಧ್ಯಾಯದಲ್ಲೂ ಹೇಳುತ್ತೇವೆ."
ಆರ್ದ್ರತೆಯನ್ನು ಸ್ಥಾಯಿಯಾಗಿ ಉಳ್ಳ ಸ್ನೇಹರಸವುಂಚೆಂಬುದು ನಿಜವಲ್ಲ.
ಸ್ನೇಹ ಎಂದರೆ ಗಾಢವಾದ ಪ್ರೀತಿ. ಅದರ ಎಲ್ಲ ಬಗೆಯೂ ರತಿ, ಉತ್ಸಾಹ
ಮೊದಲಾದವುಗಳಲ್ಲೇ ಪರ್ಯವಶಾನಗೊಳ್ಳುತ್ತದೆ. ಹೇಗೆಂದರೆ--ಬಾಲ ಕನಿಗೆ
ತಂದೆತಾಯಿಗಳ ಮೇಲಿನ ಸ್ನೇಹವು ಭಯದಲ್ಲ ನೆಲೆಗೊಳ್ಳುತ್ತದೆ ;
ಯುವಕರಿಗೆ ಮಿತ್ರರ ಮೇಲರತಕ್ಕದ್ದು ರತಿಯಲ್ಲಿ; ಲಕ್ಷ್ಮಣಾದಿಗಳಿಗೆ
ಅಣ್ಣನ ಮೇಲಿದ್ದ ಸ್ನೇಹ ಧರ್ಮವೀರದಲ್ಲಿ. ಹೀಗೆಯೇ ಪಿರಿಯವನಿಗೆ
ಪುತ್ರಾದಿಗಳಲ್ಲಿರುವುದನ್ನೂ ಅರಿತುಕೊಳ್ಳಬೇಕು. ಆಸೆಯೇ ಸ್ಥಾಯಿ
ಭಾವವಾದ ಲೌಲ್ಯರಸವನ್ನು ನಿರಾಕರಿಸುವುದರಲ್ಲೂ ಇದೇ ಸರಣಿಯನ್ನು
ಅನುಸರಿಸಬೇಕು, ಏಕೆಂದರೆ ಅದು ಹಾಸದಲ್ಲೋ ರತಿಯಲ್ಲೋ ಅಂತೂ
ಒಂದರೊಳಗೆ ಪರ್ಯವಸಾನವಾಗುತ್ತದೆ. ಭಕ್ತಿಯ ವಿಷಯದಲ್ಲೂ ಹೀಗೆಯೇ
ಹೇಳತಕ್ಕದ್ದು.''!1
ಭರತನು ಹಾಕಿದ ಗೆರೆಯನ್ನು ಮಾರಲಾರದೆ, ಅಭಿನವಗುಪ್ತನು
ಯಾವುದಾದರೂ ಒಂದು ಬಗೆಯಲ್ಲಿ ಪ್ರತಿಪಕ್ಷದವರ ಬಾಯನ್ನು ಕಟ್ಟು
ವಂತೆ ಇಲ್ಲಿ ತೋರುತ್ತದೆ. ಲೌೌಲ್ಕರಸದ ವಿಷಯ ಹಾಗಿರಲಿ. ಸ್ನೇಹೆ,
ವಾತ್ಸಲ್ಯ, ಭಕ್ತಿ - ಇವಿಪ್ಪನ್ನಾದರೂ ತೆರೆದ ಹೃದಯದಿಂದ ಪರಿಶೀಲಿಸ
ಜೀಕು. ಲೋಕದಲ್ಲಿ ಸ್ತ್ರೀಪುರುಷರ ರತಿಯಂತೆಯೇ, ಮಿತ್ರರ ಪರಸ್ಪರ
ಸ್ನೇಹ, ತಂದೆತಾಯಿಗಳಿಗೆ ಮಕ್ಕಳಲ್ಲರುವ ವಾತ್ಸಲ್ಯ, ದೇವರಲ್ಲಿಯೂ
ಪೂಜ್ಯರಲ್ಲಯೂ ಉದಿಸುವ ಭಕ್ತಿ--ಈ ಮೊದಲಾದವೂ ಕೂಡ ಮುಖ್ಯ
ವಾದ ಚಿತ್ತವೃತ್ತಿಗಳು; ಪುರುಪಾರ್ಥ ಸಾಧಕವಾದವು ; ಜೀವಮಾನದ
ಉದ್ದಕ್ಕೂ ನೆಡೆದುಬರತಕ್ಕವು ; ಅತಿಶಯವಾದ ಅಹ್ಲಾ ದವನ್ನು ಸಾಮಾ
ಜಿಕರಿಗೆ ಕೊಡತಕ್ಕವು. ಕಾವ್ಯನಾಟಕಗಳಲ್ಲಿ ಇವನ್ನೇ ಪ್ರಧಾನ ವಿಷಯ
ವಾಗಿ ನಿರೂಪಿಸುವುದು ಸಾಧ್ಯ ; ಇದಕ್ಕೆ ಎಲ್ಲ ಸಾಪಿತ್ಯಗಳಲ್ಲೂ ಉದಾ
ಹರಣೆಗಳು೦ಟು. ಇನ್ನೊಂದು ಮುಖ್ಯ ವಿಷಯವೇನೆಂದರೆ, ರತಿಯಲ್ಲಿ
15 ಈ ಅಧ್ಯಾಯದ ಮೇಲಿನ ಅಭಿನವಭಾರತೀಯ" ಭಾಗ ದೊರೆತಿಲ್ಲವೆಂದು ಹಿಂದೆಯೇ
ನಾವು ಗಮನಿಸಿದ್ದೇವೆ (ಪು, ೩೨೫, ಅಡಿಟಿಪ್ಪಣಿ 9).
19 ಅಭಿನವಭಾರತೀ, ], ಪ. ೩೪೧. ೨, ಸಪಾಳ್ಜನು ರಸರತ್ನಾಕರದಲ್ಲ ಇದರ
ಆಶಯವನ್ನೇ ಅನುವಾದ ಮಾಡುತ್ತಾನೆ (ಪು. ೯).
೨೩, ರಸಪ್ರಭ್ಛೇದಗಳು ೩೯೧
ಕಾಮ (ಎಂದರೆ ವಿಷಯೋಪಭೋಗದ ಆಸಕ್ತಿ) ಸೇರಿಕೊಂಡೇ ಇರು
ತ್ತದೆ. ಸ್ನೇಹದಲ್ಲಾಗಲಿ ವಾತ್ಸಲ್ಯದಲ್ಲಾಗಲಿ ಈ ಅಂತವಿರುವುದಿಲ್ಲ.
ಸ್ಲೇಹವನ್ನೇ ಗಮನಿಸೋಣ. ಪುರುಷರಲ್ಲೇ ಒಬ್ಬರಿಗೊಬ್ಬರಿಗೆ ಸ್ನೇಹವೂ
ಸ್ತ್ರೀಯರಲ್ಲೇ ಒಬ್ಬರಿಗೊಬ್ಬರಿಗೆ ಸ್ನೇಸವೂ ಹುಟ್ಟಿ ಹಬ್ಬುವುದಿರಲಿ; ಸ್ತ್ರೀ
ಪುರುಷರಿಬ್ಬರಿಗೆ ಕೂಡ ಕಾಮ ಸ್ಪರ್ಶವಿಲ್ಲದ ಪರಸ್ಪರ ಸ್ನೇಹ ಉಂಟಾಗು
ವುದು ಆರಂಭವವಲ್ಲ. ಉದಾಹರಣಿಗೆ, ಮಹಾಶ್ವೇತೆಗೂ ಚಂದಾ
ಖೀಡನಗೂ ಬೆಳೆದ ಅವ್ಕಾಜಮೈಶ್ರಿ ಇಂಥದು. ಈ ಬಗೆಗಳೆನ್ನೆಲ್ಲಾ
ರತಿಯಲ್ಲಿ ಅುತರ್ಭಾವ ಮಾಡಿ, ಇಲ್ಲೆ ಲ್ಲಾ ಆಸ್ಪಾದ್ಯವಾಗುವುದು
« ತೈಂಗಾರ'' ಎಂದು ಹೇಳಲಾನೀತೆ? "" ತೃಂಗಾರ''ಕ್ಕೆ ಈ ವ್ಯಾಪ್ತಿ
ಯನ್ನು ಕೊಡಲು ಯಾರು ಒಪ್ಪುತ್ತಾರೆ? ಆದರೆ, ಗೆಳೆಯ-ಗೆಳತಿ, ತಂಡೆ-
ಮಗ, ತಾಯಿ-ಮಗಳು : ಈ ಮೊದಲಾದ ಆಲಂಬನ ಭೇದಗಳನ್ನು ಅನ್ನು
ಸರಿಸಿ ಪ್ರೇಮದ ಪ್ರತಿಯೊಂದು ಪ್ರಕಾರದಲ್ಲೂ ವೈಚಿತ್ರ್ಯವುಂಟಾಗುತ್ತದೆ;
ಇದರಲ್ಲಿ ಒಂದೊಂದಕ್ಕೂ ಬಗೆಗಳನ್ನು ಕಬ್ಬಿಸತ್ತಾ ಹೋದರೆ ಪ್ರೇಮ
ಮೂಲಕವಾಗುವ ರಸಗಳೇ ಅಪರಿವಿ;ತವಾಗುವುವಲ್ಲ ಎಂಬ ಆಕ್ಷೇಪಣೆ
ಇಲ್ಲ ತಲೆಯೆತ್ತಬಹುದು. ಇದನ್ನು ಒಪ್ಪಿಕೊಳ್ಳಲೂಬೇಕು. ಆದರೂ,
« ಪಕಾಮ''ವಾದ ರತಿ, "" ಅಕಾಮ''ವಾದ ಸ್ನೇಹ (ಅಥವಾ ಪ್ರೀತಿ)
ಇವೆರಡನ್ನಾದರೂ ಪ್ರತ್ಯೇಕಿಸಿ ಎರಡನೆಯದಕ್ಕೆ ಸ್ವತಂತ್ರ ಸ್ಥಾ ನವನ್ನು
ಕೊಡುವುದು ಅಗತ್ಯಪೆನ್ನಿಸುತ್ತದೆ ಇದನ್ನು ಬಹುಶಃ ಗಮನಿಸಿಯೇ
ರುದ್ರಟನು ಸ್ನೇಹವನ್ನು ಸ್ಥಾಯಿಯಾಗಿ ಉಳ್ಳಿ "" ಪ್ರೇಯಾನ್'' ಎಂಬ
ಹತ್ತನೆಯ ರಸವನ್ನು ಪ್ರತಿಪಾದಿಸಿದ್ದನು ೩ ಆರ್ದ್ರವಾದ ಅಂತಃಕರಣ
ವನ್ನುಳ್ಳದ್ದೇ ಸ್ನೇಹ. ಈ ಸ್ನೇಹದಲ್ಲಿಯೇ ವಾತ್ಸಲ್ಯ, ಮಿಕ್ಕ ಬಗೆಯ
ಪ್ರೀತಿಗಳು ಇವನ್ನೆಲ್ಲಾ ಜೇಕಾದರೆ ಸೇರಿಸಬಹುದು. ಮಕ್ಕಳಿಗೆ ತಂದೆ
ತಾಯಿಗಳಲ್ಲರುವ ಪ್ರೀತಿ ಕೇವಲ ಭಯವಷೆ೨ದಾಗಲಿ,೩ ತಮ್ಮನಿಗೆ ಅಣ್ಣನೆಲ್ಲ
ಉಂಟಾಗತಕ್ಕದ್ದು ಧರ್ಮವೀರಪೆಂದಾಗಲಿ ಹೇಳುವುದು ಸರಿಯೆನಿ
ಸುವುದಿಲ್ಲ.
`` ಕಾವ್ಯಾಲಂಕಾರ, ೩೪. ೧೭-೧೯; "" ಸ್ನೇಹಪ್ಪಕ್ಕತಿಃ ಪ್ರೇಯಾನ್.''
21 ಇದರಲ್ಲಿ ಭಯವೂ ಕೆಲವು ಮಟ್ಟಗೆ ಮಿಳಿತವಾಗಿರಬಹುದೆಂದು ಮಾತ್ರ ಒಪ್ಪಲಾ
ದೀತು.
೩೯೨ ಭಾರತೀಯ ಕಾವ್ಯಮಾಮಾಂಸೆ
ವಿಚಾರಾರ್ಹವಾದ ಇನ್ನೊಂದು ""ರಸ'' ಭಕ್ತಿ. ಭಾರತೀಯರ
ಮನೋವೈತ್ತಿಯನ್ನೂ ಸಾಪಿತ್ಯವನ್ನೂ ನೋಡಿದರಂಶೂ ಇದಕ್ಕೆ ಪ್ರತ್ಯೇಕ
ಸ್ಕಾ ನವೊಂದು ಅವಶೃಕವೆ ನ್ನ್ನ ಸುತ್ತ ದೆ. ಪರಮಾತ್ಮನಲ್ಲಿ, ಆರಾಧ್ಯ
ದೈವದಲ್ಲಿ ಪರಮ ಪ್ರೇ: ಮರೂಫವಾದ ಭಾವವೇ ಇದರ ಆಧಾರ.» ಆದರೆ
ಇದರಲ್ಲೂ ಪಿಷಯಸುಖದ ಸಂಪರ್ಕವಿಲ್ಲ. ಇಷ ದೈವವನ್ನು ಕುರಿತು ಭಕ್ತನು
ಮಗುವಿನಂತೆ, ತಾಯಿಯಂತೆ, ದಾಸನಂತೆ, ಮಿತ್ರ ನಂತೆ, ಪ್ರಿಯೆಯಂತೆ ಬಗೆ
ಬಗೆಯ ಮನೋವೃತ್ತಿಯನ್ನು ತಾಳಬಹುದು ಹೀಗೆ ಭಕ್ತಿಯದು ಸಂಕೀರ್ಣ
ಸ್ವಭಾವ. ಭಕ್ತಿಯನ್ನೇ ಮುಖ್ಯವಾಗಿಟ್ಟುಕೊಂಡು ಹೊಸದೊಂದು ಲಸ
ಪ್ರಸ್ಥಾನವೇ ಈಚೆಗೆ ಹೊರಟಿತು. ಬಂಗಾಳ ದೇಶದಲ್ಲಿ ಚೈತನ್ಯ ಪಂಥದ
ವೈಷ್ಣವರು ಇದನ್ನು ವಿಸ್ತರಿಸಿದರು. ಅವರ ಮತದಂತೆ ಭಗವಂತನಲ್ಲಿ
ನೆಲೆಗೊಳಿಸುವ ರತಿಯೇ ಎಲ್ಲಕ್ಕೂ ಪ್ರಧಾನ; ಶ್ರೀಕೃಷ್ಣನಲ್ಲಿ ರಾಥಗಿದ್ದ
ಭಾವ ಇಂಥದು. ಈ ರಶಿಯನ್ನುಳ್ಳೆದ್ದು ಮಧುರ ಅಥವಾ ಉಜ್ಜ್ಜಲ
ರಸ. ಇದರ ಜೊತೆಗೆ ಭಕ್ತಿಯ ವಿವಿಧ ಭಾವಗಳನ್ನನುಸರಿಸಿ, ಶಾಂತೆ,
ವಾತ್ಸಲ್ಯ ಮೊದಲಾದ ಕೆಲವು ಮುಖ್ಯ ಭಕ್ತಿರಸಗಳೂ, ಹಾಸ್ಯ, ಅದ್ಭುತ
ಮೊದಲಾದ ಇನ್ನು ಕೆಲವು ಗೌಣರಸಗಳೂ ಆಗುತ್ತವೆ. ಇದರ ಪ್ರತಿ
ಪಾದನೆ ನಮ್ಮ ಉದ್ದೇಶಕ್ಕೆ ಮಾರಿದ್ದು.
ಮಮ್ಮ ಟನು ಇ ಪುರುಷರ ಪರಸ್ಪ ರ ಪ್ರೇಮದ ಅಭಿವ್ಯಕ್ತಿಯನ್ನು
ಮಾತ್ರ ಶೃಂಗಾರರಸಡಂದು ಕರೆದು, ಮಿಕ್ಕ ಬಗೆಯ ಪ್ರೀತಿ ಯಾರನ್ನೇ
ಕುರಿತದ್ಧಾಗಿರಲಿ ಅದರ ಅಭಿವ್ಯಕ್ತಿಗೆ "" ಭಾವ” ಎಂದು ಹೆಸರು ಕೊಡು
ತ್ತಾನೆ: ಈಚಿನ ವಿಶ್ವನಾಥ, ಜಗನ್ನಾಥ ಮೊದಲಾದವರೂ ಇದೇ
ಸರಣಿಯನ್ನು ಅನುಸರಿಸುತ್ತಾರೆ. ಈ ಮತದಂತೆ, ದೇವರು, ಗುರುಗಳು,
ಫಾ ತೃಸ್ಕಿನ್ ಪರಮಪ್ರೇಮರೂಪಾ '' (ನಾರದಭಕ್ತಿಸೂತ್ರ, |. ೨).
ಚ ಈ ಪಂಥದ ಭಕ್ತಿರಸಶಾಸ್ಕದಲ್ಲ ಆಸಕ್ತಿಯುಳ್ಳವರು ರೂಪಗೋಹಸ್ಟಾಮಿಯ "ಭಕ್ತಿ
ಸ ' ಮತ್ತು " ಊಜ್ಜ್ರಲನೀಲಮಣಿ ' ಎಂಬ ಗ್ರಂಥಗಳನ್ನೂ, ಎಸ್. ಕೆ. ದೇ
ಅವರ ‘Ihe Bhakti-rasa 58607೩ of Rengal Vaisnavism ' ಎ೦ಬ ಲೇಖನ
ವನ್ನೂ (1/10, 1111) ನೋಡಬಹುದು,
244 ರತಿರ್ದೇವಾದಿವಿಷಯಾ,, ,ಭಾವಃ ಪ್ರೋಕ್ತಃ '' (ಕಾವ್ಯಪ್ರಕಾಶ, ;1, ೧೨-೩);
"೬ ದಿಶಬ್ಮಾನ್ಮುನಿಗುರುನೃಪಪುತ್ತಾದಿವಿಷಯಾ. ಕಾಂತಾವಿಷಯು ತು ವ್ಯಕ್ತಾ ತೃಂಗಾರಃ''
'ವೃತ್ತಿ). ಚ
೨೩. ರನಪ್ರಭೇದಗಳು ೩೯೩
ಮುನಿಗಳು, ರಾಜ, ಹಿರಿಯರು_ಈ ಸಮಸ್ತರಲ್ಲ ಹುಟ್ಟುವ ಭಕ್ತಿ
ಗೌರವಗಳೂ, ಬಂಧುಮಿತ್ರಾದಿಗಳಲ್ಲ ಹುಟ್ಟುವ ಪ್ರೀತಿ ಸ್ನೇಹ ವಾತ್ಸಲ್ಯಾದಿ
ಗಳೂಖ « ಭಾವ''ದೆ ವಿಷಯಷೇ ಆಗುತ್ತವೆ. ಇದು ಪರಿಭಾವನೆಯಿಂದ
ಆಸ್ವಾದ್ಯವಾದ "" ಭಾವೆ'' ; ಸಾಂಸಾರಿಕ ಭಾವವಬ್ಲ. ಇದಕ್ಕೆ ""ರಸ'
ಪೆಂಬ ಹೆಸರನ್ನು ಈ ಆಲಂಕಾರಿಕರು ಕೂಡಲು ಒಪ್ಪದೆ ಇದ್ದುದರಿಂದ,
"" ಭಾವ'' ಶಬ್ಧವೇ ತನ್ನ ಮಿಕ್ಕ ಅರ್ಥಭಾರದ ಜೊತೆಗೆ ಇದರ ವಾಚ
ಕತ್ಸವನ್ನೂ ವಹಿಸಬೇಕಾಯಿತು
ಅಂತೂ "" ರಸ''ಗಳು ಎಷ್ಟು, ಯಾವುವು ಎಂಬ ಪಿಷಯದಲ್ಲಿ
ಅನೇಕಾನೇಕ ಮತಗಳು ಈ ಶಾಸ್ತ್ರದ ಚರಿತ್ರೆಯಲ್ಲಿ ಉದ್ದಕ್ಕೂ ತಲೆ
ಹಾಕುತ್ತಾ ಬಂದಿವೆ. ಅವುಗಳಲ್ಲಿ ಕೆಲವು ವಿಚಾರಕ್ಷಮ, ಮತ್ತೆ ಕೆಲವು
ಅವಿಚಾರಿತರಮಣೀಯ. ಮಾನವನ ಚಿತ್ತದಲ್ಲಿ ಮೊದಲಿನಿಂದಲೂ
ಸ್ಥಾಯಿಯಾಗಿರತಕ್ಕ ವಾಸನೆಗಳು ಯಾವುವು; ಇವುಗಳ ಸ್ವರೂಪವೇನು?
ಇವು ಯಾವ ಯಾವ ಭಾವಗಳ ರೂಪದಲ್ಲಿ ಹೊಮ್ಮುತ್ತವೆ ? ಈ ಭಾವ
ಗಳಲ್ಲಿ ತಾರತಮ್ಯಗಳು ಎಪ್ಪರಮಚ್ಟಿಗೆ ಉಂಟು? “ಮಿಳಿತ ಭಾವ''ಗಳ
(blended emotions) ವಿಷಯವೇನು?--ಈ ಭಾವಸಮುದಾಯದಲ್ಲ
ಯಾವುವು ನಾಗರಿಕ ಜೀವನದಲ್ಲಿ ಪ್ರಧಾನವಾಗತಕ್ಕವು, ಮುಖ್ಯ
ಪುರುಪಾರ್ಥಗಳಿಗೆ ಸಂಬಂಧಪಡತಕ್ಕವು ? ಯಾವುವನ್ನು ಕವಿಗಳೂ
ನಾಟಕಕಾರರೂ ಪ್ರಧಾನವಾಗಿ ಪ್ರತಿಪಾದನೆ ಮಾಡಿದ್ದಾರೆ? ಈ ಮೊದ
ಲಾದ ಪ್ರಶ್ನೆಗಳನ್ನೆಲ್ಲಾ ಆಧುನಿಕ ಮನಶ್ಶಾಸ್ತ್ರ್ರದ ದೃಷ್ಟಿಯಿಂದ ಪರಿ
ಶೀಲಿಸಿ, ಭರತನ ಸ್ಕಾ ಯಿಭಾವ ಸಂಚಾರಿಭಾವ ರಸಗಳ ಪಟ್ಟಿಗಳನ್ನು ಪರಿ
ಪ್ಮರಿಸಿದ ಹೊರತು ಈ ವಿಷಯದಲ್ಲಿ ಶಾಸ್ತ್ರಿ «ಯವಾದ ನಿರ್ಣಯಕ್ಕೆ
ಬರಲು ಸಾಧ್ಯವಿಲ್ಲ ಇದರ ಜೊತೆಗೆ, ರಸಾನುಭವದ ಮೇಲೂ ಆಧುನಿಕ
ವಿಜ್ಞಾನವು ಹೊಸ ಜೆಳಕನ್ನು ಬರಬಹುದು ; ಅಲ್ಲಂದ ಉಪಯುಕ್ತವಾದ
ಅನೇಕ ಸೂಕ್ಷಾಂಶಗಳನ್ನು ತಾನೂ ನಂಗ್ರಹಿಸಲೂ ಬಹುದು. ಇದೆಲ್ಲದರ
ಶೋಧನೆಯನ್ನು ಕೈಕೊಳ್ಳತಕ್ಕವರಿಗೆ ಪರಿಪಕ್ಕವಾದ ಅಭಿರುಚಿಯೂ
ಕಲಾನುಭವವೂ ಸಂಸ್ಕೃತ ಲಕ್ಷಣಗ್ರಂಥಗಳ ಗಾಢವಾದ ಪರಿಚಯವೂ
25 ಸಾಹಿತ್ಯದರ್ಪಣಕಾರನು ಪುತ್ರಾದಿವಿಷಯಕವಾದ ವಾತ್ಸಲ್ಯವನ್ನು ಪ್ರತ್ಯೇಕಿಸಿ
ಹತ್ತನೆಯ ರಸಪಾಗಿ ಹೇಳಿ, ಇದು " ಮುನೀಂದ್ರ ಸಮ್ಮತ ' ವೆನ್ನುತ್ತಾನೆ (111 ೨೫೧).
೩೯೪ ಭಾರತೀಯ ಕಾಪ್ಯಮಾಮಾಂಸೆ
ಮನಶ್ವಾಸ್ತ್ರದ ಜ್ಞಾನದ ಜೊತೆಗೆ ಅಗತ್ಯವಾಗಿ ಇರಬೇಕು. ಇಂಥ
ಸ೦ಶೋಧಕನಿಗಾಗಿ ಈ ಕಾರ್ಯ ಇನ್ನೂ ಕಾದಿದೆ.೬ ಈ ವಿಷಯವೆಲ್ಲ
ನಿರ್ಣಯವಾಗುವ ತನಕ ಯಾವ ಯಾವ ಚಿತ್ತ ವೃತ್ತಿಗಳು ಕಾವ್ಯನಾಟಕ
ಗಳಲ್ಲಿ ಪ್ರಧಾನವಾಗಿ ಪುಷ್ಟಿಗೊಂಡು ಅಭಿವ್ಯಕ್ತವಾಗುವುವೋ ೬ವನ್ನೆಲ್ಲ
" ರಸ ''ಗಳೆಂದು ಕರೆಯುವುದು ಉಚಿತ.
ಕಾವ್ಯದಲ್ಲಿ ಆಸ್ಚಾದ್ಯವಾಗತಕ್ಕವು. ಈ ಮುಖ್ಯ ಚತ್ತವೃತ್ತಿಗಳು
ಮಾತ್ರವೇ ಅಲ್ಲ. ಎಲ್ಲ ಬಗೆಯ ಚತ್ತ ವೃತ್ತಿಗಳೂ--ಅವು ಸ್ಕಾಯಿ
ಯಾಗಿರಲ, ಸಂಚಾರಿಯಾಗಿರಲಿ,-_ ಸರಿಯಾಗಿ ಪ್ರತಿಪಾದಿತವಾದಾಗ ಈ
ಸವಿಯನ್ನು ಕೊದಬಲ್ಲುವು.' ಸ೦ಚಾರಿಭಾವಗಳು ಎರಡು ಕ್ಷಣ ಒಟ್ಟಿಗೆ
ನಿಲ್ಲದೆ ಮಿಂಚಿನಂತೆ ಚಂಚಲವಾಗಿ, ಹೊಳೆದ ಕೂಡಲೆ ಆಳಿಯುತ್ತಾ,
ಸ್ಥಾಯಿಸೂತ್ರದ ನಡುವೆ ಕಾಣಿಸಿಕೊಂಡು ಮರೆಯಾಗುತ್ತಾ ತಮ್ಮ
ಚಲನವಲನಗಳಿ೦ದ ಸ್ಥಾಯಿಯ ವೈಚಿತ್ರ್ಯವನ್ನೇ ಪೋಷಿಸಬಹುದು, ಆದರೆ
ಬಷ್ಟೋವೇಳೆ ಇವುಗಳ ಸೊಗಸು ಎದ್ದು ಕಾಣಿಸುತ್ತದೆ. ಸ್ಥಾಯಿಯ
26 ಪಿ. ಎಸ್. ನಾಯ್ಡು ಅವರು ಮನಶ್ಯಾಸ್ಮದ ದೃಷ್ಟಿಯಿಂದ ರಸಮಾಸಣಂಸೆಗೆ
ತೊಡಗಿ ಕೆಲವು ಲೇಖನಗಳನ್ನು ಬರೆದಿದ್ದಾರೆ : "The Rasa Doctrine and the
Concept of Suggestion in Hindu Aesthetics’ (Journal of the
Annamalai University, X. 1)» ‘The Concept of Suggestion
in Hindu Aesthetics” (Festschrift 7101. 0. 37. Kane, 1941). ರಸದ
ಲಕ್ಷಣವನ್ನು ಅವರು ಹೀಗೆ ಕೊಡುತ್ತಾರೆ: "““"ಔasn’ may then be defined
as the mental counterpart of the totality of experience generated
in a cultured person by sympathetic induction of blended emotions
belonging to the sentimonts by exitan's of a purely wsthetic
origin.’ ಇದಕ್ಕೂ ಅಭಿನವಗುಪ್ತನ ತತ್ತ್ಯಕ್ಕೂ ಹೆಚ್ಚಿನ ಭೇದವೇನೂ ಇರುವಂತೆ
ತೋರುವುದು ಆದರೆ ಈ ಲೇಖಕರು ಅಭಿನವಭಾರತಿಯನ್ನು ಅವಲೋಕಿಸಿ ಅದರ
ಅಮೂಲ್ಯವಾದ ವಿಷಯಸಂಪತ್ತನ್ನು ಉಪಯೋಗಿಸಿಕೊಂಡಿದ್ದಾರೆಂಬುದಕ್ಕೆ ತಕ್ಕಷ್ಟು ನಿದ
ರ್ಶನ ಅವರ ಲೇಜನಗಳಲ್ಲ ಕಾಣಬರುವುದಿಲ್ಲ... K ೫೫, Watave : ‘The Psycho-
logy of the Rasa Theory’ (ABORI, Silver Jubilee Volume’
pp. 666-677); D.D Vadekar: " The Concept of Sthayi-bbava in
Indian Poetics (A Psrchological Scrutiny) ' (ABORI, XVIV,
pp. 207-214) — ಕ ಲೇಖನಗಳು ಗಮನಾರ್ಹವಾಗಿವೆ. ಮಾಟವೇ ಅವರು "ರಸ
ವಿಮರ್ಶ ' ಎ ಬ ಒಂದು ಗ್ರಂಥವನ್ನೇ ೭ರೆದಿದ್ದಾರೆ; ಅದರೆ ಆದು ಮರಾಠಿಖ:ಲ್ಲರು
ವುದರಿಂದ ಅದರ ಉಪಯೋಗವನ್ನು ಪಡೆಯಲು ಪ್ರಕೃತ ಗ್ರಂಥ *ರ್ತನಿಗೆ ಆಗಿಲ್ಲ.
21 ಇದನ್ನು ರುದ್ರಟನು ಅಗಲೇ ಒಪ್ಪಿದ್ದನು. (ಕಾವ್ಯಾಲಂಕಾರ ;;. ೪)
೨೩, ರಸಪ್ರಭೇದಗಳು ೩೯೫
ಭಿತ್ತಿಯ ಮೇಲೆ ಇವು ಚಿತ್ರರೇಬೆಗಳಂತೆ ಅತಿಶಯ ಷೈಚಿತ್ರ ದಿಂದ
ಗೋಚರಿಸುತ್ತಷೆ.೬. ಒಂದೊಂದು ಸಲ ಈ ಸಂಚಾರಿ ಭಾವಗಳೆ ನಿರೂ
ಪಣಿಯನ್ನೇ ಕವಿ ಪ್ರಧಾನವಿಷ ಸುವಾಗಿ ಆರಿಸಿಕೊಳ್ಳುವುದೂ ಉಂಟು.
ಚಿಂತೆ, ವಿಷಾದ, ಲಜ್ಜೆ, ಔತ್ಪು ಕ್ಕ ಈ ಮೊದಲಾದವನ್ನು ಕುರಿತು
ಏನ್ಟೊ ೦ದು ಲಘುಕಾವ್ಯಗಳು ಹುಟ್ಟಿಲ್ಲ! « ಸೇಚಾರಿಭಾವಗಳು ಸೃತಂತ್ರ,
ಸರತುತ್ರ ಎಂದು ಎರಡು ಬಗೆ. ಇನ್ನೊಂದು ಭಾವಕ್ಕೆ ಪೋಷಕವಾಗಿ
ಬಂದಾಗ ಪಶತುತ್ರನೆನಿಸಿಕೊಳ್ಳುತ್ತ ವೆ. ಹಾಗ್ಗಿದಿದ್ದಾಗ ಸ್ವತಂತ್ರ
ವಾಗುತ್ತವೆ” ಎಂದು "ರಸಾರ್ಣವ ಸುಧಾಕರ 'ಕಾರನು ಸ್ಪಪ್ಪವಾಗಿಯೇ
ಹೇಳುತ್ತಾನೆ. ಇದೆಲ್ಲ ಕವಿಯ ಉದ್ದೇಶವನ್ನು ಅವಲಂಬಿಸುತ್ತದೆ.
ಅವನು' ಇಪ್ಪಪಟ್ಟರೆ ಸಂಚಾರಿಭಾವವನ್ನೇ ಪ್ರಧಾನವಾಗಿ ನಿರೂಪಿಸಿ
ಕೆಲವು ಕಾಲವಾದರೂ ಸಾಮಾಜಿಕನ ಚಿತ್ತವು ಅದರಲ್ಲಿ ನೆಲೆಗೊಳ್ಳುವಂತೆ
ಮಾಡಬಲ್ಲನು.
ಹೀಗೆ ಆಸ್ಚಾದ್ಯವಾಗುವ ಭಾವದಲ್ಲಿ ಆಲಂಕಾರಿಕರು--
ಭಾವೋದಯ, ಭಾವಶಾಂತಿ, ಭಾವಸಂಧಿ, ಭಾವಶಬಲತೆ ಎಂಬ ನಾಲ್ಕು
ದಶೆಗಳನ್ನು ವಿಂಗಡಿಸುತ್ತಾರೆ. ಭಾವಸ್ಥಿತಿಯಂತೂ ಉಂಟೇ ಉಂಟು.
ಹೊಸದಾಗಿ ಒಂದು ಭಾವ ಉದಿಸುವುದೇ ಭಾವೋದಯ ; ಏರಿದ್ದ ಭಾವ
ಲಯ ಹೊಂದುವುದು ಭಾವಶಾಂತಿ ; ಭಿನ್ನಕಾರಣಗಳಿಂದ ಉಂಟಾದ
ಎರಡು ಭಾವಗಳ ಮಿಲನ ಭಾವಸಂಧಿ. ಒಂದನ್ನು ಒತ್ತರಿಸಿ ಮತ್ತೊಂದ
2 ಸಾಹಿತ್ಯ ದರ್ಪಣಕಾರನು ಪಾನಕರಸದ ಹೋಲಕೆಯನ್ನು ಉಪಯೋಗಿಸಿಕೊಂಡು
ಪಾನಕದಲ್ಲ ಮೆಣಸು ಮೊದಲಾದದ್ದೆಲ್ಲ ಒಟ್ಟುಗೂಡಿದ್ದರೂ, ಒಮ್ಮೊಮ್ಮೆ ಯಾವುದಾದರೂ
ಒಂದರ ರುಚಿ ಎದ್ದು ಕಾಣುವಂತೆ, ರಸದಲ್ಲಿಯೂ ಸಂಚಾರಿಗಳ ಸವಿ ಎದ್ದು ತೋರಬಹು
ದೆಂದು ನಿರೂಪಿಸುತ್ತಾನೆ. (ಸಾಪಿತ್ಯದರ್ಪಣ, ॥॥1. ೨೬೧-೨)
“ಮುಖ್ಯೇ ರಸೇಪಿ ತೇಂಗಿತ್ರ೦ ಪ್ರಾಪ್ನುವಂತಿ ಕದಾಚನ '' ಎಂದು
ಮಮ್ಮಟನೂ ಅಂಗೀಕರಿಸುತ್ತಾನೆ. (ಕಾವ್ಯಪ್ರಕಾಶ, ೪. ೧೪)
49 ಸ್ಯಾತಂತ್ರ್ಯಾತ್ ಪಾರತಂತ್ರ್ಯಾಚ್ಛ ದ್ರೇಧಾಮಾ ವೃಭಿಚಾರಿಣಃ 1
ಪರಪೋಷಕತಾಂ ಪ್ರಾಪ್ತಾಃ ಪರತಂತ್ರಾ ಇತೀರಿತಾಃ |
ತದಭಾವೇ ಸ್ಟತಂತ್ರಾಃ ಸ್ಕುರ್ಭಾವಾ ಇತಿಚ ತೇ ಸ್ಮೃತಾಃ 1 (ಪು. ೧೪೦),
ಈ ಬಗೆಯ ವಿಭಾಗಕ್ಕೆ ಭೋಜರಾಜನ ತತ್ತ್ವದಿಂದ ಸ್ಫೂರ್ತಿಬಂದಂತೆ ತೋರುತ್ತದೆ.
“To (011೧818೫ the vyabhicirins are always paratantra ; to
Bhoja they are svatantra and paatantra according as they are
Rasa or Bhava.” (V. Raghavan : " The Number of Rasas '', ಐ. ೩28,
foot-note 1)
ರ್ಷಿ೬ ಭಾರತೀಯ ಕಾವ್ಯವಿಾಇಮಾಂಸೆ
ರಂತೆ ಅನೇಕ ಭಾವಗಳು ಒದಗುವುದು ಭಾವಶಬಲತೆ. ಈ ಕೆಳಗೆ ಭಾವ
ಶಬಲತೆಗೆ ಮಾತ್ರ ಒಂದು ಪ್ರಸಿದ್ಧವಾದ ಉದಾಹರಣಿಯನ್ನು ಅನು
ವಾದಿಸಿ ಕೊಟ್ಟಿದೆ :
ಸಲ್ಲದೆಸಕವಿದೆಲ್ಲಿ ನನ್ನ ಶಶಿಕುಲವೆಲ್ಲ ೪.
ಇನ್ನೊಮ್ಮೆ ನಾನವಳ ಕಾಣಲಹುದೆ ?
ನನ್ನ ವಿದ್ಯೆಗೆ ದೋಷಶಮನವಲ್ಲವೆ ಫಲವು?
ಅಹ, ಮುನಿದಾಗಳೂ ಸೊಗಸು ಮೊಗವು |
ಶುಭ್ರಚ೦ತದ ಕುಶಲಮತಿಗಳೇನೆನ್ನುವರು )- -
ಕನಸಿನೊಳಗೂ ದೊರೆಯಳವಳು ನನಗೆ |
ಮನಸೆ, ನೆಮ್ಮದಿ ಹೊಂದು |___ಅವ ತರುಣನಿಗವಳ
ತ ಟಿಸವಿಯನಿೀ೦ಟುವಾ ಸುಕ್ಕತವು೦ಟೋ |
ಇಲ್ಲಿ ವಿತರ್ಕ, ಔತ್ಪುಕ್ಕ, ಮತಿ, ಸ್ಮರಣ, ಶಂಕೆ, ದೈನ್ಯ, ಧೃತಿ, ಚಿಂತೆ
ಏಂಬ ಭಾವಗಳು 'ತಟರಿತವಾಗಿಸುವುಡಂರ ಮಮ್ಮಟನು ನಿರ್ದೇಶಿಸು
ತ್ತಾನೆ.30
ಇನ್ನು ರಸಾಭಾಸ ಭಾವಾಭಾಸಗಳ ಕಡೆಗೆ ತಿರುಗುತ್ತವೆ. ಕನ್ನಡ
ದಲ್ಲಿ "" ರಸಾಭಾಸ'' ಎಂಬ ಶಬ್ದವನ್ನು « ರಸಭ೦ಗ ': ಎಂಬ ಪೀನಾರ್ಥ
ದಲ್ಲಿ ಉಪಯೋಗಿಕುವುದುಂಟು. ಕಾವ್ಯಮಿಾಮಾಂಸೆಯಲ್ಲ ಇದರ
ಪ್ರಯೋಗ ಬೇರೆ ಬಗೆಯದು. "" ಆಭಾಸ '' ಎಂದರೆ ತೋರಿಕೆ. ರಸ
ವಲ್ಲದಿದ್ದರೂ ರಸದಂತೆ ತೋರತಕ್ಕದ್ದು, ರಸಸದೃಶವಾದದ್ದು ರಸಾ
ಭಾಸ ; « ಭಾವಾಭಾಸ ''ಕ್ಕೂ ಇದೇ ರೀತಿಯಾಗಿ ನಿಪ್ಪತ್ತಿ. ಈ ಆಭಾ
ಸಕ್ಕೆ “ ಅನೌಚಿತ್ಯ ''ಪ್ರವರ್ತನೆಯೇ ಕಾರಣ. ಇಲ್ಲ ಅನಇಚಿತ್ಯ
ಪೆಂದರೇನು ? ಇದನ್ನು ಆಲಂಕಾರಿಕರು ಬಗೆಬಗೆಯಾಗಿ ನಿರೂಪಿಸುತ್ತಾರೆ.
"ರಸಾರ್ಣವಸುಧಾಕರ 'ಕಾರನ ಮತದಂತೆ ಅನೌಚಿತ್ಯವು ಅಸಿತ್ಯತ್ಯ
ದಿಂದ ಉಂಟಾದದ್ದು, ಅಯೋಗ್ಯತ್ವದಿಂದ ಉಂಟಾದದ್ದು ಎಂದು ಎರಡು
30 ಕಾವ್ಯಪ್ರಕಾಶ, ;, ೧೩ ವೃತ್ತಿ.
"" ಕ್ಟಾಕಾರೃಂ ಶಶಲಕ್ಷ್ಮಣಃ ಕ ; ಚ ಕುಲಂ... ಎಂಬ ಮೂಲಪದ್ಯವು ಶುಕ್ರಾ
ಚಾರ್ಯನ ಮಗಳಾದ ದೇವಯಾನಿಯನ್ನು ನೋಡಿ ವ್ಯಾಮೋಹಗೊಂಡ ಯಯಾತಿಯ
ಉಕ್ತಿಯೆಂದು ಕೆಲಮಂದಿ ವ್ಯಾಖ್ಯಾನಕಾರರ ಅಭಿಪ್ರಾಯ. ಇದನ್ನು ಒಪ್ಪದೆ ಬೇರೆಯ
ಸನ್ನಿವೇಶಗಳಿಗೆ ಅನ್ವಯಸುವವರೂ ಉಂಟು. (ಕಾವ್ಯಪ್ರಕಾಶ, ವಾಮನಾಚಾರ್ಯ
ರುಳಕೀಕರರ ವ್ಯಾಖ್ಯಾನ, ಪ್ರ. ೧೨೬ ನೋಡಿ.)
೨೩. ರಸಪ್ರಭೇದಗಳು ೩೯೭
ವಿಧ. ರಸವೋ ಭಾವವೋ ಅಚೇಶನವಸ್ತುಗಳನ್ನು ಅವಲಂಬಿಸಿ ಪ್ರತಿ
ಪಾದಿತವಾದರೆ ಅಲ್ಲಿ ಅಸತ್ಯತ್ಯವುಂಚಾಗುತ್ತ ದೆ. ನೀಚ ಮನುಪ್ಯರು,
ತಿರ್ಯಗ್ಯಂತುಗಳು--ಈ ಮೊದಲಾದನನ್ನು'ಅವಲಂಬಸಿದರೆ ಅಯೋಗ್ಯತ್ವ
ವೊದಗುತ್ತದೆ.'' 1! ಉತ್ತಮ ಪ್ರಕೃತಿಯುಳ್ಳ ಸ್ತ್ರೀಪುರುಷರ ವಿಷಯವಾಗಿ
ಒಂದು ರಸ ಅಭಿವ್ಯತ್ತವಾದಾಗಲೇ ಅದಕ್ಕೆ ಪರಿಪುಪ್ಪಿ. ಮಿಕ್ಕ ಕಡೆಗಳಲ್ಲಿ
ವಾಸ್ತವವಾಗಿ ಇಲ್ಲದ್ದನ್ನೋ ಪ್ರಾಕೃತಾವಸ್ಥೆ ಯಲ್ಲಿರುವುದನ್ನೋ ವರ್ಣಿಸಿ
ದರೆ ಅಷ್ಟೊಂದು ಆಹ್ಲಾದಕಾರಿಯಾಗಲಾರದು. ಆದಕಾರಣ ಇದು
ರಸದ ಆಭಾಸ ಮಾತ್ರ. _ಪೀಗೆಂಬುದು ಲಕ್ಷಣಕಾರರ ಅಭಿಪ್ರಾಯ. ಆದರೆ
ಇದನ್ನು ವಿರೋಧಿಸುವವರೂ ಪಿಂದೆಯೇ ಇದ್ದರು.» ಮಾನವ ಜಾತಿಯ
ವಿಷಯ ಹಾಗಿರಲಿ. ತಿರ್ಯಗ್ವಂತುಗಳಲ್ಲೇ ಪ್ರೇಮ ಕ್ರೋಧಾದಿಗಳ
ವರ್ಣನೆ ಒಳ್ಳೆಯ ಆಸ್ಕಾದವನ್ನು ನಮಗೆ ಕೊಡಲಾರದೆ? "ಕುಮಾರ
ಸಂಭವ'ದ ಮೂರನೆಯ ಸರ್ಗದಲ್ಲಿ ಹರನು ತಪೋನಿಷ್ಕನಾಗಿ ಕುಳಿತಿದ್ದ
ಆಶ್ರಮವನ್ನು ಮನ್ಮಥನು ಹೊಕ್ಕಾಗ, ಅಲ್ಲಿಯ ಪ್ರಾಣಿವರ್ಗದಲ್ಲ
ಉಂಟಾದ ಪ್ರೇಮಸಂಚಾರವನ್ನು ಕಾಳಿದಾಸನು ವರ್ಣಿಸುತ್ತಾನೆ.
ಆ ಸಂದಭ-ದಿಂದ ಒಂದು ಪದ್ಯವನ್ನು" ಉದಾಹರಿಸಿದರೆ ಸಾಕು :
ಮಧು ದ್ವಿಕೇಫಃ ಕುಸುಮ್ಯೊಕಪಾತ್ರೇ
ಪಪೌ ಪ್ರಿಯಾಲ ಸ್ವಾಮನುವರ್ತಮಾನಃ |
ಶೃಂಗೇಣ ಚ ಸ್ಪರ್ಶನಿಮಾಲತಾಕ್ಷೀಂ
ಮೃಗೀಮಕಂಡೂಯತ ಕೃಪ್ಣಸಾರಃ ॥ (;;;, ೩೬)
31 ಅಭಾಸತಾ ಭವೇದೇಪಾನುನೌಚಿತ್ಯ ಪ್ರವರ್ತನಾತ್ |
ಅಸತ್ಯತ್ಪಾದಖೋಗ್ಯತ್ಪಾದನ್‌ೌಚಿತ್ಯಂ ದ್ವಿಧಾ ಭವೇತ್ ॥
ಅಸತ್ಯತ್ಪಕೃತಂ ತತ್ ಸ್ಯಾದಚೇತನಗತಂ ತು ಯತ್ |
ಅಯೋಗ್ಯತ್ಸಕೃತಂ ಪ್ರೋಕ್ತಂ ನೀಚತಿರ್ಯಜ್ನರಾಶ್ರಯಂ |
(ರಸಾರ್ಣವ ಸುಧಾಕರ, ಪು. ೧೪೧-೨)
32 ಉದಾಹರಣಿಗೆ, ಏಕಾವಳೀಕಾರನಾದ ವಿದ್ಯಾಧರನು, '" ತಿರೃಗ್ಯಂತುಗಳಲ್ಲನದು
ರಸಾಭಾಸವೆಂದು ಹೇಳುವುದು ವಿಚಾರಕ್ಷಮವಲ್ಲ, ಅಲ್ಲಿಯೂ ರಸವೇ ಉಂಟು”
ಎಂದು ಅಭಿಪ್ರಾಯಪಟ್ಟಿದ್ದನು. ಅವನ ಉಕ್ತಿಯನ್ನು ಸಿಂಗಭೂಪಾಲನು ಹಾಸ್ಯ
ಪೂರ್ವಕವಾಗಿ ಅನುವಾದಿಸಿ ನಿರಾಕರಿಸುತ್ತಾನೆ (ರಸಾರ್ಣವ ಸುಧಾಕರ, ಪು. ೨೦೬).
33 ರಸಾರ್ಣವ ಸುಧಾಕರದಲ್ಲಿ ಈ ಪದ್ಯವೇ ರಸಾಭಾಸಕ್ಕೆ ಒಂದು ಉದಾಹರಣೆ
ಯಾಗಿ ಬಂದಿದೆ. (ಪು. ೨೦೫),
೩೯೮ ಭಾರತೀಯ ಕಾವ್ಯವಿಸಾಮಾಂಸೆ
[ಮಧುವನೊಸೆದೀಂಟದುದು ತುಂಬಿ
ಕುಪುಮದೊಂಡೇ ಪುಟದಲಿ,
ಸಾರಿ ನಲ್ಲೆಯ ಬೆನ್ನಲಿ.
ಶೃ೦ಗದಲಿ ಸಾರಂಗವೆಳಸಿ
ತುರಿಸಿದುದು ಮಿಗವೆಣ್ಣನು,
ಮುಟ್ಟೆ ಮುಚ್ಚಿರೆ ಕಣ್ಣನು.]
ಇಲ್ಲಿಸು ನಯವೂ ಆರ್ದ್ರತೆಯೂ ಯಾವ ನಾಗರಿಕ: ಪ್ರೇಮಚರೈಗಿಂತ
ಕೀಳಾಗಿತೆ? ಇತ್ತ ರೌದ್ರಾವೇಶಕ್ಕೆ, ಕಾಡಾನೆಗಳ ಹೋರಾಟವನ್ನು
ವರ್ಣಿಸುವ ಈ ಪದ್ಯವನ್ನು ನೋಡಿ.
ಸೊವಡೊಂದೊಯ್ಯವೆ ಬಂದು ಪೊಯ್ಯೆ ಮುನಿಸಿಂದಾರಯ್ದು ಕೆಂಪುಣ್ಯಿ ಪೊ.
ಣ್ಮುವಿನ೦ ಬಿಚ್ಚನೆ ಬಿಟ್ಟ ದಿಟ್ಟಗಳಿನೆಯ್ದೆಂದೋವದಾವೇಗದಿಂ |
ಕಿವಿಯಂ ನಿಚ್ಚಳಮಪ್ಪಿನಂ ತೆಖೆದು ನಿಂದೋರೊಂದಯೊಳ್ ತಾಗಿ ಪೋ.
ರ್ವವಪು ಕಾಡಾನೆಗಳೊರ್ಮೆಗೊರ್ಮೆ ಶಬರರ* ಜೀಯಯ್ಯಭಾಷ್ಟೆಂಬಿನಂ |
(ಕಾವ್ಯಾವಲೋಕನ, ೩೪)
ಇದರಂತೆಯೇ ಪಾಮರ ಜನಗಳಲ್ಲೂ ಪ್ರೇಮ ಶೋಕ ಕ್ರೋಧಾದಿಗಳು
ಸೂಕ್ಕಾತಿಶಯಶೂಪದಲ್ಲ ವ್ಯಕ್ತವಾಗಬಹುದು. ಪ್ರಾಕೃತ ಭಾಷೆಯಲ್ಲಿ
ರುವ " ಗಾಧಾಸಪ್ತಶತಿ 'ಯನ್ನೂ ಕನ್ನಡದ ಹಳ್ಳಿಗರ ಹಾಡುಗಳನ್ನೂ
ಬಲ್ಲವರಿಗೆ ಇದರ ಸ್ಕಾರಸ್ಯವನ್ನು ಮನದಟ್ಟು ಮಾಡಿಕೊಡಬೇಕಾದದ್ದು
ಅನಾವಶ್ಯಕ.
ಇನ್ನು ಅಚೇತನ ವಸ್ತುಗಳಿಗೆ ಸಜೇತನದ ಭಾವಗಳನ್ನು ಆರೋ
ಪಿಸಿ ವರ್ಣಿಸುವ ವಿಷಯ. ಇದರಲ್ಲೇನೋ ಭಾವವು ತೋರಿಕೆಯೆಂಬುದು
ವಿಜ. ಆ ದೃಷ್ಟಿಯಿಂದ ""ರಸಾಭಾಸ, ಭಾವಾಭಾಸ '' ಎನ್ನುವುದು ಅನು
ಚಿತವಲ್ಲ. ಆದರೆ ಈ ""ಆಭಾಸ''ಗಳು ದೋಷವೆಂದು ಮಾತ್ರ ಭಾವಿಸ
ಕೊಡದು." ಈ ಬಗೆಯ ನಿರೂಪಣಿ ಕವಿಗಳ ದಿನಚರ್ಯೆ. ಸಾಹಿತ್ಯದ
35 « ಇವು ರಸಾಭಾಸಂಗಳ್ ; ಇವು ದೋಷಮಲ್ತು.'' (ರಸರತ್ನಾಕರ, ಪು. ೧೦೦.
೨೩. ರಸಪ್ರಭೇದಗಳು ೩೯೯
ಎಷ್ಟೋ ಭಾಗ ಈ ಬಗೆಯ “ಆಭಾಸ” ದ ವಿಷಯವೇ ಆಗಿದೆ ;5 "ಮೇಘ
ಸಂದೇತ'ಕ್ಕೆ ಇಡೇ ಜೀವಿತ. ವರ್ಣನೆಗಳು ಸರಸವಾಗುವುದು ಇದರಿಂದ;
ರೂಪಕ, ಉತ್ಪ್ರೇಕ್ಷೆ ಮೊದಲಾದ ಅನೇಕ ಅಲಂಕಾರಗಳಿಗೆ ಪರ್ಯವಸಾನ
ಇಲ್ಲಿ ; 3 “ಜಗದ್ಲಾ ೨ವೆಪ್ರಖ್ಯಂ ನಿಜರಸಭರಾತ್ ಸಾರಯತಿ” ಎಂಬ
ಪ್ರಶಂಸೆ ಸಾರ್ಥಕವಾಗುವುದು ಈ ಮೂಲಕ.
ಈ ಬಗೆಯ "“ತೃಂಗಾರಾಭಾಸಕ್ಕೆ, ಕೃಷ್ಣನ ಜಲಕ್ರೀಡೆಯನ್ನು
ವರ್ಣಿಸುವ ಈ ಮನೋಹರವಾದ ಪದ್ಯ ಒಂದು ನಿದರ್ಶನ :
ತೋಳ ಘಟ್ಟಣಿಗುಚ್ಚಳಿಸುತ್ತುಂ ಸೂಕುವ ಶೀಕರವಾರಿ ಮು.
ಶ್ರಾಳಿಯಿಂದಭಿಷೇಕಮೆ ಗೆಯ್ಟುಂತೊಪ್ಲೆ ಕಳಿಂದಜೆಯಂ ಮಮೋ-!
ಲೀಳೆಯಿಂ ಪುಗೆ ತನ್ನದಿ ಕೃಷ್ಣ೦ಗಾಟಿಸಿದಂತಿರೆ ಲ್ಲೋಲಕ.
ಲ್ಲೋಳ ಕೋಮಲ ಹಸ್ತದೆ ಪೊಯ್ದೆ ಳ್ ಮುಂದಲೆಯಂ ಕಮಲಾಕ್ಷನಾ [|
(ಕಾವ್ಯಾವಲೋಕನ, ೯೩೩)
ಆಲಂಕಾರಿಕರು ಶೃಂಗಾರಾಭಾಸವನ್ನು ನಿರೂಪಿಸುವಾಗ, ಅದರ
ಇನ್ನೂ ಕೆಲವು ಬಗೆಗಳನ್ನು ಹೇಳುತ್ತಾರೆ. ರತಿಭಾವವು ಪರಸ್ಪ ರಾಲಂಬನ
ಪುಳ್ಳದ್ದು. ಅದು ಹೆಣ್ಚಿನಲ್ಲೋ ಗಂಡಿನಲ್ಲೋ ಒಂದು ಕಡೆ ಮಾತ್ರ
ಇದ್ದು ಇನ್ನೊಂದು ಕಡೆ ಹುಟ ದೆ ಹೋದರೆ, ಅಗ ರಸಾಭಾಸವೊದಗು
ತ್ತದೆ. ಒಬ್ಬ ಳೇ ಹೆಂಗಸು ಹಲವರನ್ನು ಕಾಮಿಸಿದರೂ, ಪುರುಷನ
ಪ್ರೇಮವು*' ಮುನಿಪತ್ನಿ, ಗುರ.ಪತ್ನಿ ಮೊದಲಾದವರಲ್ಲ ಪ್ರವರ್ತಿಸಿದರೂ
ರಸಾಭಾಸಷೇ. ಇದರಂತೆ ಗುರುಹಿರಿಯರ ಮೇಲೆ ಒಬ್ಬನು ಕೋಪಗೊಂಡರೂ
ಅವರನ್ನು ಹಾಸ್ಯ ಮಾಡಿದರೂ ರೌದ್ರಾಭಾಸ ಹಾಸ್ಯಾಭಾಸಗಳಾಗುತ್ತವೆ.
35 ರಸವದಲಂಕಾರದ ಚರ್ಚೆಯಲ್ಲಿ ಅನಂದವರ್ಧನನೂ ಕುಂತಕನೂ ಇದರ ಪ್ರಸ್ತಾವ
ವನ್ನು ಎತ್ತುತ್ತಾರೆ. ಧೃನ್ಯಾ., ಪು. ೭೫.೬, ವಕ್ರೋಕ್ತಿಜೀವಿತ, ಪು. ೧೬೨-೩.
ದಂಡಿಯ ಮತಡುತೆ ಒಂದು ವಕ್ತುವಿನ ಧರ್ಮಗಳನ್ನು ಇನ್ನೊಂದರಲ್ಲ ಅಧಾನ
ಮಾಡಿ ವರ್ಣಿಸುವ "" ಸಮಾಧಿಗುಣ ”ಪೂ ತಿರುಳಿನಲ್ಲಿ ಇದೇ ವಿಷಯವನ್ನೇ ಕುರಿತದ್ದು,
ಈ ಗುಣವೇ ಕಾವ್ಯಸರ್ಪಸ್ಪವೆಂದೂ ಎಲ್ಲ ಕವಿಗಳೂ ಇದೊಂದರಿಂದಲೇ ಉಪಜೀವಿಸುವ
ರೆಂದೂ ದಂಡಿ ಇದರ ಪ್ರಶಸ್ತಿಯನ್ನು ಸಾರುತ್ತಾನೆ. (ಕಾವ್ಯಾದರ್ಶ, 1. ೯೩-೧೦೦)
36 "ಸಮಾಸೋಕ್ತಿ ಅರ್ಥಾಂತರನ್ಯಾಸಂ ರೂಪಕಂ ಉತ್ಪ್ರೇಕ್ಷಾದಿಗಳ್ ಈ
ರಸಾಭಾಸಕ್ಕೆ ಜೀವಿಅಂ ” (ರಸರತ್ನಾಕರ, ಪು. ೧೦೩)
31 ಅದರೆ ಒಬ್ಬ ಪರುಪನಿಗ ಹಲವು ಮಂದಿ ಸ್ತ್ರೀಯರಲ್ಲಿ ಪ್ರೀತಿಯದ್ದರೆ ಅದು
ರಸವೇ ಸರಿ, "" ರಸಾಭಾಸ ''ವಲ್ಲ ಎಂಬುದು ಲಕ್ಷಣಕಾರರ ಮತ,
೪೦೦ ಭಾರತೀಯ ಕಣವ್ಯಮಾಮಾಂಸೆ
ಉತ್ತಮ ಪ್ರಕೃತಿಯವನಲ್ಲಿ ಭಯಾನಕಾಭಾಸ. ಪೀಗೆಯೇ * ಇಲ್ಲೆಲ್ಲ ಅನಾ
ಚಿತ್ಯವೇ ""ಆಭಾಸ''ಕ್ಕೆ ಕಾರಣ.
ಈಗ ಒಂದು ಪ್ರಶ್ನೆ ಹುಟ್ಟುತ್ತದೆ. ಹಾಸ್ಯರಸದ ಸ್ವರೂಪವನ್ನು
ನಿರೂಪಿಸುವಾಗ, ಅನಾಚಿತ್ಯ ಪ್ರವೃತ್ತಿಯೇ ಅದರ ಮೂಲಷೆಂದೂ, ಅದು
ಎಲ್ಲ ರಸಭಾವಗಳ ವಿಭಾವಾನುಭಾವಗಳಲ್ಲೂ ಕಾಣಬರಬಹುದೆಂದೂ
ಗಮನಿಸಿಡೆವು. ಆ ಪಕ್ಷಕ್ಕೆ ಹಾಸ್ಯರಸಕ್ಕೂ ರಸಾಭಾಸ ಭಾವಾಭಾಸಗಳಿಗೂ
ಸೀಮಾರೇಖೆಯೆಲ್ಲ ಈ ಪ್ರಶ್ನೆ ಅಭಿನವಗುಪ್ತನ ಕಾಲಕ್ಕೇ ಎದ್ದಿತ್ತು.
ಅವನು ಶೃಂಗಾರಾಭಾಸದ ಒಂದು ಪ್ರಕಾರವನ್ನು, ಎಂದರೆ ಸ್ಟ್ರೀಪುರುಪರಲ್ಲಿ
ಒಬ್ಬರಿಗೆ ವಿರಕ್ತಿಯೂ ಇನ್ನೊಬ್ಬ ರಿಗೆ ಅನುರಕ್ತಿಯೂ ಇರುವ ವಿಷಯವನ್ನು,
ತೆಗೆದುಕೊಂಡು ವಿಚಾರಮಾಡುತ್ತಾನೆ. ರಾವಣನಿಗೆ ಸೀತೆಯಲ್ಲದ್ದ
ವ್ಯಾಮೋಹ ಇದಕ್ಕೆ ಪ್ರಖ್ಯಾತವಾದ ಉದಾಹರಣಿ :
ದೂರಾಕರ್ಪಣಮೋಹೆಮಂತ್ರ ಇವ ಮೇ ತನ್ನಾನ್ನಿ ಯಾತ ಶ್ರುಪ೦
ಚೇತಃ ಕಾಲಕಲಾಮಪಿ ಪ್ರಕುರುತೇ ನಾವಸ್ಥಿತಿ೦ ತಾಂ ವಿನಾ |,
[ದೂರದಿಂದಲೆ ಸೆಳೆವ ಮೋಹಮಂತ್ರವೊ ಎನಿಸಿ
ಅವಳ ಹೆಸರೆನ್ನ ಕಿವಿಯನು ತಾಗಲು,
ಕ್ಷಣದನಿತು ಕಾಲವೂ ನನ್ನ ಚೀತಸ ತಡೆದು
ನಿಲ್ಲಲಾರದು ಅವಳ ಬಳಿಯನುಳಿದು... ]
ರಾವಣನ ಈ ಉಕ್ತಿಯನ್ನು ಪರಿಭಾವಿಸುವಾಗ ಒದಗುವ ಅನುಭವ
ಯಾವುದು? " ಶೃಂಗಾರದ ಅನುಕರಣವೇ ಹಾಸ್ಯ'' ಎಂದು ಭರತನು
ನಿರೂಪಿಸಿದ್ದರೂ ಅದು ಮುಂದೆ ಒದಗತಕ್ಕದ್ದು ಕ ಹಾಸ್ಯವನ್ನು ಸವಿಯುವ
ಸಮಯ ಇದಲ್ಲ (""ಅತ್ರ ತು ನ ಹಾಸ್ಯಚರ್ವಣಾವಸರಃ''). ಇಲ್ಲಿ
ರಾವಣನಲ್ಲರುವುದು ““ರತ್ಯಾಭಾಸ''- ಎಂದು ಅಭಿನವಗುಪ್ತನು ಧ್ವನ್ಯಾ
58 ಹೆಚ್ಚಿನ ವಿವರಗಳಿಗೆ ಸಾಹಿತ್ಯದರ್ಪಣ, ಸ. ೨೬೩-೬ ನೋಡಿ.
೨೩. ರಸಪ್ರಭೇದಗಳು ೪೦೧
ಲೋಕ ಲೋಚನದಲ್ಲಿ ಸ್ಪಪ್ಪಪಡಿಸುತ್ತಾನೆ. ರಾವಣನ ಚಿತ್ತವೃತ್ತಿ ಅನು
ಚಿತವಾಗಿ ಪ್ರವರ್ತಿಸಿದ್ದ ರೂ ಪ್ರಗಾಢವಾಗಿರುವುದರಿಂದ, ತತ್ಕಾಲದಲ್ಲಿ
ಅದನ್ನು ಆಸ್ಕಾದಿಸುವುದರಲ್ಲೇ ನಾವು ಮಗ್ನರಾಗುತ್ತೇವೆ; ಆಗ ರಾವಣ
ನನ್ನು ನೋಡಿ ನಗುವುದಿಲ್ಲ ಇದೇ ವಾದವನ್ನೇ ಮಿಕ್ಕ ರಸಾಭಾಸ
ಭಾವಾಭಾಸಗಳಿಗೂ ಅನ್ಯಯಿಸಬಹುದೆ೦ಂದು ತೋರುತ್ತದೆ. ಒಂದು
ಚಿತ್ತವೃತ್ತಿಯ ಗುರಿಯಾಗಲಿ ಪ್ರವೃತ್ತಿಯ ದಾರಿಖಾಗಲಿ ಅನುಚಿತವಾಗಿ
ದ್ದರೂ ಆ ವ್ಯಕ್ತಿಯಲ್ಲಿ ಅದರ ಅನುಭವ ಉತ್ಕಟವಾಗಿದ್ದರೆ, ತೀವ್ರವಾಗಿದ್ದರೆ
ಅಲ್ಲಿ ಆಸ್ಕಾದವಿಷೆಯವು " ಆಭಾಸ ''ವೇ ಹೊರತು ಹಾಸ್ಯವಲ್ಲ ಎಂದು
ಸ್ಥೂಲವಾಗಿ ಹೇಳಬಹುದು.
ಹಾಸ್ಯರಸ, ರಸಾಭಾಸ (ಮತ್ತು ಭಾವಾಭಾಸ), ರಸಭಂಗ--ಈ
ಮೂರರಲ್ಲಿಯೂ "" ಅನೌಚಿತ್ಯ ”ದ ಪ್ರಸಕ್ತಿ ಬರುತ್ತದೆ. ಇವುಗಳಲ್ಲಿ
ಒಂದೊಂದಕ್ಕೂ ವ್ಯತ್ಯಾಸ ಎಲ್ಲ, ಅದನ್ನು ಅರಿತುಕೊಳ್ಳುವ ಬಗೆ ಹೇಗೆ
ಎಂಬುದರ ಪರಿಷ್ಕಾರ ಅಗತ್ಯ. ರಸಾಭಾಸವೂ ರಸದಂತೆಖೇ ಆಸ್ಚಾದ್ಯ
ವಾಗುವುದರಿಂದಲೂ, ಆಲಂಕಾರಿಕರು ರಸಾಭಾಸವೆಂದು ಗಣಿಸುವ
ಅನೇಕ ಪ್ರಕಾರಗಳಲ್ಲಿ ಯಾವ ಕುಂದೂ ನಿಜವಾಗಿ ಇಲ್ಲದಿರುವುದರಿಂದಲೂ
ಈ ವಿಭಾಗವನ್ನು ಪ್ರತ್ಯೇಕವಾಗಿ ಎತ್ತದೆ, ರಸದೊಳಗೇ ಸಮಾವೇಶ
39 ಧ್ವವ್ಯಾ. ಲೋಚನ, ಪು. ೬೬. ಅಭಿನವ ಭಾರತಿಯಲ್ಲೂ (1, ಪು. ೨೯೬-೭) ಇದೇ
ಉದಾಹರಣಿ, ಇದೇ ಚರ್ಚೆ ಬರುತ್ತದೆ. ಪದ್ಯದ ಉತ್ತರಾರ್ಧವನ್ನೂ ಅಭಿನವಗುಪ್ತನು
ಇಲ್ಲ ಕೊಡುತ್ತಾನೆ ("" ಏತ್ಛೊರಾಕುಲಿತನ್ಯ ವಿಕ್ಷತರತೇರಂಗ್ಫೈರನಂಗಾಕುಲ್ಕೆಃ ಸಂಪದ್ಯೇತ
ಕಥಂ ತದಾಪ್ತಿಸುಖಮಿತ್ಯೇತನ್ನ ವೇದ್ಮಿ ಸ್ಫುಟಂ''). " ಈ ಮೊದಲಾದ ೦ಾವಣವಾಕ್ಯದ
ಮಟ್ಟಿಗೆ ಹೇಳುವುದಾದರೆ ಇಲ್ಲ ರತ್ಯಾಭಾಸನೇ ಹೊರತು ಹಾಸವು ಪ್ಪುರಿಸುವುದಿಲ್ಲ''
ಎಂದು ಅಭಿನವಗುಪ್ತನು ಒಪ್ಪಿಕೊ೦ಡು, ಅದರೂ ಈ ವಿಭಾವಾನುಭಾವಾದಿಗಳು
[ಮುಂದೆ] ಹಾಸೃಕ್ಕೆ ದಾರಿ ಮಾಡುತ್ತವೆಂದು ಇಲ್ಲ ಸೂಚಿಸುತ್ತಾನೆ.
ರುಯ್ಯಕನ ಅಲಂಕಾರಸರ್ವಸ್ಪದಲ್ಲಿ ಮೇಲಿನ ಪದ್ಮವು ರಸಾಭಾಸ ಭಾವಾಭಾಸ
ಮೂಲವಾದ ಊರ್ಜಸ್ಟ್ಯಲಂಕಾರಕ್ಕೆ ಉದಾಹೆರಣಿಯಾಗಿ ಬಂದಿದೆ. " ಅತ್ರ ರಾವಣಸ್ಯ
ಅಭಿಲಾಪಶೃಂಗಾರಃ ಔತ್ಸುಕ್ಯಂ ಚ ವೃಭಿಚಾರಿಭಾವಃ ಅನಾಚಿತ್ಯೇನ ಪ್ರವೃತ್ತಾ''
(ಅಲಂಕಾರ ಸರ್ಪಸ್ಟ, ಪು. ೨೧೧).
40 ಜನ್ನನ "ಅನಂತನಾಥ ಪುರಾಣ'ದಲ್ಲ ಬಂದಿರುವ ಚಂಡಶಾಸನನ ವ್ಯಾಮೋಹ
ವೃತ್ತಾಂತವು ಶೃಂಗಾರಾಭಾಸಕ್ಕೆ ಇನ್ನೊಂದು ಒಳ್ಳೆಯ ಉದಾಹರಣಿ. ಈ ವಿಷಯ
ವಾಗಿ "ಜನ್ನನ ಕಾವ್ಯಗಳಲ್ಲಿ ಪ್ರಣಯನಿರೂಪಣಿ ' ಎಂಬ ಲೇಖನವನ್ನು ನೋಡಬಹುದು
(ತೀ. ನಂ. ಶ್ರೀಕಂಠಯ್ಯ : " ಕಾವ್ಯಸಮಿಸಾಕ್ಷೆ ?).
KM. 26
೪೦೨ ಭಾರತೀಯ ಕಾವ್ಯಮಾಮಾಂಹೆ
ಗೊಳಿಸುವುದು ಉತ್ತಮವೆಂದು ತೋರುತ್ತದೆ. ಆದರೆ ಇದರ ವ್ಯವಸ್ಥೆ
ಈ ಗ್ರಂಥದ ವ್ಯಾಪ್ತಿಗೆ ಮಾರಿದ್ದು.
ಅಂತೂ ರಸ, ರಸಾಭಾಸ, ""ಭಾವ'', ಭಾವಾಭಾಸ, ಭಾವೋದಯ,
ಭಾವಶಾಂತಿ, ಭಾವಸಂಧಿ, ಭಾವತಬಲತೆ._ಈ ಎಲ್ಲ ಚಿತ್ತವೃತ್ತಿಗಳೂ
ಕಾವ್ಯನಾಟಕಗಳಲ್ಲಿ ಅಭಿವ್ಯಕ್ತವಾಗಿ ಸಾಮಾಜಿಕನಿಗೆ ಆಸ್ಕಾದ ಕೊಡ
ಬಹುದು. ಪ್ರಾಧಾನ್ಯ » ತಾಸ ರೈ ಪ್ರಾಮಾಣ್ಯ ಈ ಮೊದಲಾದವುಗಳ
ದೃಷ್ಟಿಯಿಂದ ಇವುಗಳಲ್ಲಿ ಒಂದು ಬಗೆಗೆ «« ರಸ” ಎಂಬ ಹೆಸರು ಮುಖ್ಯ
ವಾಗಿ ಬಂದಿದೆ. ಆದರೆ ರಸಶಬ್ದದ ವ್ಯಾಪ್ತಿ ಇಪ್ಪಕ್ಕೇ ನಿಲ್ಲುವುದಿಲ್ಲ.
ಸಾಮಾನ್ಯ ದೃಷ್ಟಿಯಿಂದ ಕಾವ್ಯನಾಟಕಗಳಲ್ಲಿ ಸಾಮಾಜಿಕನು ಸವಿಯುವ
ಉಲ್ಲ ಚಿತ್ತವೃತ್ತಿಗಳಿಗೂ “ರಸ'' ಎಂದೇ ಸ್ಥೂಲವಾದ ಹೆಸರು. "ವಾಕ್ಯಂ
ರಸಾತ್ಮಕಂ ಕಾವ್ಯಂ'' ಎಂಬ ಲಕ್ಷಣದಲ್ಲಿ ಬರುವ «ರಸ ತಬ್ದಕ್ಕೆ ಇದೇ
ವಿಶಾಲಾರ್ಥ.
ರಸಧಾವೌ ತದಾಭಾಸೌ ಭಾವಸ್ಕ ಪ್ರಶಮೋದಯ?।
ಸಂಧಿಃ ಶಬಲತಾ ಚೇತಿ ಸರ್ಪೇ ಪಿ ರಸನಾದ್ರಸಾಃ |
(ಸಾಹಿತ್ಯದರ್ಪಣ, i; ೨೫೯-೬೦)
೨೪. ಶಾಂತರಸ
ಇದುವರೆಗಿನ ಶೋಧನೆಗಳಿಂದ ಗೊತ್ತಾಗಿರುವ ಮಟ್ಟಿಗೆ ಹೇಳು
ಪುದಾದರೆ, ಭರತನ "ನಾಟ್ಯಶಾಸ, ೨'ದಲ್ಲಿ ಪ್ರತಿಪಾದಿತವಾಗಿದ್ದ ವು
ಎಂಟೇ ರಸಗಳು. ಒ೦ಬತ್ತನೆಯದಾಗಿ ಶಾಂತರಸವನ್ನು ಹೇಳುವ ಭಾಗವು
ಕೆಲವು ಮಾತ್ರಕೆಗಳಲ್ಲಿ ದೊರೆತರೂ ಅದು ಪ್ರಕ್ಷಿಪ್ತೆವೆಂದೇ ಹೇಳ
ಬೇಕು. ದೇವೇಂದ್ರನ ಎದುರಿಗೆ ಅಪ್ಸರೆಯರು “ಅಪ್ಪರಸಾಶ್ರಯ”
ವಾದ ನಾಟಕವನ್ನು ಭರತನಿಂದ ನಿಯುಕ್ತರಾಗಿ ಆಡಿದರೆಂಬ ಕಥಾಸಂಗತಿ
ಕಾಳಿದಾಸನ "ವಿಕ್ರಮೋರ್ವಶೀಯ'ದಲ್ಲಿ ಬರುತ್ತದೆ. ಶಾಂತವೆಂಬ ನವಮ
ರಸವನ್ನು ಭರತನು ಅಂಗೀಕರಿಸಿದ್ದಲ್ಲಿ ಭರತನ ಗ್ರಂಥವನ್ನು ಬಲ್ಲವನಾ
ಗಿದ್ದ ಕಾಳಿದಾಸನು ಅದನ್ನು ಇಲ್ಲ ಸೂಚಿಸದಿರುತ್ತಿರಲಿಲ್ಲ. 'ಅಮರೆ
ಕೋಶದಲ್ಲಿ ಹೇಳಿರುವುದೂ ಎಂಚೇ ರಸಗಳು. ಅಲ್ಲಿಂದ ಮುಂದಕ್ಕೆ
ಬಂದರೆ, ದಂಡಿ "ಕಾವ್ಯಾದರ್ಶ'ದಲ್ಲಿ ರಸವದಲಂಕಾರವನ್ನು ನಿರೂಪಿಸು
ವಾಗ ಒಂದೊಂದು ರಸದ ಹೆಸರು ಹೇಳಿ ಉದಾಹರಣೆಯನ್ನು ಕೊಡು
ತ್ತಾನೆ. ಆದರೆ ಅಲ್ಲ ಶಾಂತದ ಸುಳಿವಿಲ್ಲ. ಈಗ ದೊರೆಯುವ ಸಂಸ್ಕೃತ
ಲಕ್ಷಣಗ್ರಂಥಗಳೊಳಗೆ ಶಾಂತರಸವು ಮೊದಲು ತಲೆಯಿಕ್ಕಿರುವುದು
ಉದ್ಭಟನ "ಕಾವ್ಯಾಲಂಕಾರ ಸಾರಸಂಗ್ರಹ'ದಲ್ಲಿ.: ಅಲ್ಲಿ ಅವನು ಅದರ
ವಿಷಯವಾಗಿ ಏನನ್ನೂ ಚರ್ಚಿಸದೆ, ಸುಮ್ಮನೆ ಹೆಸರು ಹೇಳಿ ಮುಂದಕ್ಕೆ
ಸಾಗುತ್ತಾನೆ. ರುದ್ರಟನಲ್ಲ ಇದರ ಮುಂದಿನ ಹೆಜ್ಜೆ ಕಾಣಿಸುತ್ತದೆ.
ಮಿಕ್ಕ ರಸಗಳಂತೆ ಇದಕ್ಕೂ ಸ್ಥಾಯಿಭಾವಾದಿಗಳನ್ನು ಹೇಳುತ್ತಾನೆ;
ಅವನ ಮತದಂತೆ ಶಾಂತಕ್ಕೆ ಸಮ್ಯಗ್‌ಜ್ಞಾ ನವು ಸ್ಥಾಯಿ. ಸಂಚಾರಿ
1 " ಅಣುಹಿಗದಾರಸುತ್ತೆ ' (ಅನುಯೋಗದ್ಪಾರ ಸೂತ್ರ) ದಲ್ಲ "“ಪ್ರಶಾಂತ''ರಸವು
ಉಕ್ತವಾಗಿದೆಯೆಂದೂ ಇದರ ಕಾಲವು ಬಹುಶಃ ಕ್ರಿ. ಶ. ೫ನೆಯ ಶತಮಾನವೆಂದೂ ಈ
ಮೊದಲೇ ನೋಡಿದ್ದೇವೆ (ಪು. ೨೮, ಆಡಿ ಟಿಪ್ಪಣಿ, 18). ಇದರಲ್ಲಿ ಪ್ರಶಾಂತದ
ಲಕ್ಷಣವನ್ನು ಈ ರೀತಿಯಾಗ್ಲಿಹೇಳಿದೆ:
ನಿರ್ದೋಪಮನಃಸಮಾಧಾನ ಸಂಭವೋ ಯಃ ಪ್ರಶಾಂತಭಾವೇನ |
ಅವಿಕಾರಲಕ್ಷಣಃ ಸ ರಸಃ ಪ್ರಶಾಂತ ಇತಿ ಜ್ಞಾತವ್ಯಃ 1! (ಛಾಯಾ)
" ಅಣುಓಗದಾರಸುತ್ತ' ವು ಪ್ರಾಕೃತಗ್ರಂಥ ; ಇದು ಜೈೊನಕ್ಕತಿಯೆಂಬುದು ಗಮನಾರ್ಹ
ವಾದ ವಿಷಯ.
೪೦೩ 26-B
೪೦೪ ಭಾರತೀಯ ಕಾವ್ಯಮಾಮಾಂಸೆ
ಭಾವಗಳಿಗೆ ಪರಿಪೋಪವುಂಟಾದಾಗ ಸ 44 ಪೊರ” ಗಳಾಗುವು
ವೆಂದು ರುದ್ರಟನ ಮತ; ಆದ್ದರಿಂದ “ಶಾಂತ''ಕ್ಲೂ ಒಂದು ಸ್ಕಾ ನವನ್ನು
ಅವನು ಕೊಟ್ಟಿರುವುದು ಹೆಚ್ಚಲ್ಲ ಎಂದು ತೋರಿದರೂ ಅವನ ನಿರೂಪಣಿ
ಯಲ್ಲಿ ತಾರತಮ್ಯವುಂಟು. ಪ ರ್ರಷಿದ್ಧವಾದ ಎಂಟು ರಸಗಳ ಜೊತೆಗೆ
«" ಶಾಂತ'', "" ಪ್ರೇಯಾನ್'' ಈ ಎರಡನ್ನೇ ಅವನು ಉದ್ದೇಶಪೂರ್ವಕ
ವಾಗಿ ಸೇರಿಸಿ ಅವುಗಳೊಂದಿಗೆ ಸಮಾನಪದವಿಯನ್ನು ಕೊಡುತ್ತಾನೆ.
ನಿರ್ವೇದವಪೇ ಮೊದಲಾದ ಸಂಚಾರಿಭಾವಗಳಿಗೆ ಈ ಗೌರವವನ್ನು ಸಲ್ಲಿಸಿಲ್ಲ
ಬಳಿಕ ಆನಂದವರ್ಥನನು ಬಂದನು. ದಧೃನ್ಯ್ಯಾಲೋಕದಲ್ಲ ಶಾಂತ
ರಸಕ್ಕೆ ಹೆಚ್ಚಿನ ಮಹತ್ತ್ಯ ಬರುತ್ತದೆ. ಈ ರಸವು ಸರ್ವರ ಅನುಭವಕ್ಕೂ
ಬರತಕ್ಕೆ ದ್ವಲ್ಲ, ಇದನ್ನು ಹೇಗೆ ಒಪ್ಪಿ ಕೊಳ್ಳುವುದು ಎಂದು ಆಕ್ಷೇಪಿಸಿದವ
ರನ್ನು ಖಂಡಿಸಿ, ಜನಗಣತಿಯ ಆಧಾರದ ಮೇಲೆ ರಸದ ಅಸ್ತಿತ್ವವನ್ನು
ನಿರ್ಣಯಿಸಕೂಡದೆಂದು ಅವನು ಸೂಚಿಸುತ್ತಾನೆ. ದಯಾವೀರದಲ್ಲಿ
ಇದನ್ನು ಅಂತರ್ಭಾವ ಮಾಡಲಾಗದೆಂದು ನಿಷೇಧಿಸುತ್ತಾನೆ. ಅಷ್ಟೆ ಸ
ಅಲ್ಲ. ಮಹಾಭಾರತದಲ್ಲಿ ಇದೇ ಪ್ರಧಾನರಸವೆಂದು ಪ್ರತಿಪಾದಿಸಿ ಅದರ
ಪ್ರಾಶಸ್ತ್ಯವನ್ನು ಸ್ಥಾಪಿಸುತ್ತಾನೆ.
ಆದರೆ ಶಾಂತಕ್ಕೆ ವಿರೋಧಿಗಳು _ ಮೊದಲಿನಿಂದಲೂ ಇದ್ದರು ;
ಇವರು ಮುಖ್ಯವಾಗಿ ನಾಟ್ಯಲಕ್ಷಣಕಾರರು. ಧನಂಜಯ ಧನಿಕರನ್ನು ಇವ
ರಲ್ಲ ಪ್ರಮುಖರೆಂದು ಭಾವಿಸಬಹುದು. ಶಾಂತರಸಕ್ಕೆ ಅಭಿನಯ
ಪ್ರಧಾನವಾದ ನಾಟ್ಯದಲ್ಲ ಪುಷ್ಟಿಯಿಲ್ಲವೆಂದು ಹೇಳಿ ಅಪ್ಪಕ್ಕೇ ಬಿಡದೆ
ಕಾವ್ಯದಲ್ಲೂ ಅದಕ್ಕೆ ಸ್ಥಾನವನ್ನು ನಿರಾಕರಿಸಲು ಇವರು ಪ್ರಯತ್ನ
ಪಟ್ಟರು. ಸುಖ ದುಃಖ ರಾಗ ಡ್ವೇಪಾದಿಗಳಲ್ಲಿ ಯಾವುದೂ ಸನ್ಮಔರುವ;
ತಮಸ್ವಿತಿಯೇ ಶಾಂತರಸದಲ್ಲಿ ಪ್ರಧಾನವಾದರೆ ಅದು ಮೋಕ್ಷಾವಸ್ಥೆ ಯಲ್ಲಿ
ಮಾತ್ರ ದೊರೆಯತಕ್ಕದ್ದು. ಅದರ ಸ್ವರೂಪವು ಅನಿರ್ವಚನೀಯವಾದ '
ಕಾರಣ, ನಾಟ್ಯಕ್ಕೆ ಹೇಗೋ ಹಾಗೆಯೇ, ತಬ್ದಮಯವಾದ ಕಾವ್ಯಕ್ಕೂ
ಅದು ವಿಷಯವಾಗಲಾರದು. ಇಂಥದನ್ನು ಆಸ್ವಾದಿಸುವ ಸಹೃದಯರು"
ಯಾರುಂಟು __ ಎಂದು ಅವರು ವಾಹ ಮಾಡುತ್ತಾರೆ.3 '`
2 ಧೃನ್ಯಾ., ಪು. ೧೭೬-೮ ನೋಡಿ.
ತಿ ದಶರೂಪಕ, ೪. ೩೫ ಮುಂದಕ್ಕೆ ನೋಡಿ.
೨೪. ಶಾಂತರಸ ೪ಂ೫
ಅಭಿನವಗುಪ್ಶನು ಸರಿಸುಮಾರು ಈ ವೇಳೆಯಲ್ಲೇ ಜೀವಿಸಿದ್ದವನು.
ಬೂ ೧ ಲ
ಈ ರಸದ ವಿಷಯದಲ್ಲಿ ಹುಟ್ಟಿದ್ದ ವಿಕಲ್ಪಗಳನ್ನೂ ವಿವಾದಗಳನ್ನೂ
ಕ್ರೋಡೀಕರಿಸಿ ತಾನೂ ದೀರ್ಫವಾಗಿ ವಿಚಾರಮಾಡಿ ಅನೇಕರ ಆಕ್ಷೇಪಣಿ
ಗಳಿಗೆ ಉತ್ತರಕೊಟ್ಟು ಇದರ ಸ್ವರೂಪವನ್ನು ಪರಿಷ್ಕರಿಸಿ ಎಲ್ಲ ರಸಗಳಿ
ಗಿಂತಲೂ ಪಿರಿಯ ಸ್ಥಾನವನ್ನು ಇದಕ್ಕೆ ಕೊಟ್ಟನು. ಈ ಕಾರ್ಯವು
ಅಭಿನವಗುಪ್ತನ ಗುರುವಾದ ತೌತನ " ಕಾವ್ಯಕೌತುಕ 'ದಲ್ಲಿಯೂ ಆಭಿನವ
ಗುಪ್ತನೇ ಅದರ ಮೇಲೆ ಬರೆದ " ವಿವರಣ 'ದಲ್ಲಿಯೂ ಆಗಲೇ ಬಹುಮಟ್ಟಿಗೆ
ನಡೆದಿತ್ತು. ಈ ಕೃತಿಗಳು ಈಗ ದೊರೆಯದಿರುವುದರಿಂದ, "ಅಭಿನವ
ಭಾರತಿ'ಯ ಶಾಂತರಸ ಪ್ರಕರಣವೊಂದೇ ನಮಗೆ ಅಭಿನವಗುಪ್ತನ
ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಮುಖ್ಯಸಾಧನವಾಗಿದೆ. ಅಭಿನವ
ಗುಪ್ತನ ಕಾಲದಿಂದೀಜೆಗೆ ಈ ವಿಚಾರದಲ್ಲಿ ವಾದ ಬಲುಮಟ್ಟಿಗೆ ನಿಂತು
ಹೋಯಿತು. ಲಕ್ಷಣ ಗ್ರಂಥಗಳಲ್ಲಿ ಶಾಂತರಸವು ಸುಪೃತಿಷ್ಠಿತವಾಯಿತು.
ಶಾಂತರಸವುಂಟೆ, ಇದ್ದ ರೆ ಇದರ ಸ್ವರೂಪವೇನು ಎಂಬ
ವಿಚಾರದಲ್ಲಿ ಕಾಣಬರುವ ಅಭಿಪ್ರಾಯಗಳು ದಿಗ್ಭ ಎಮೆಗೊಳಿಸುವಪ್ಪು
ವಿಪುಲವಾಗಿವೆ ; ಪರಸ್ಪ ರ ವಿರೋಧಿಗಳಾಗಿವೆ. ಶಾಂತರಸ ಇಲ್ಲವೆ
ಇಲ್ಲವೆಂದವರು ಕೆಲವರು. ಇದು ಪ್ರಧಾನೆವಾಗಿ ಬರಲಾರದು ;
ಅಂಗವಾಗಿ ಮಾತ್ರ ಬರಬಹುದು ಎಂದವರು ಕೆಲವರು. ಕಾವ್ಯದಲ್ಲಿ ಇದು
ಪ್ರಧಾನವಾಗಿ ಬಂದರೆ ಬರಲಿ, ನಾಟಕದಲ್ಲಿ ಇದಕ್ಕೆ ಎಡೆಯಿಲ್ಲ ಎಂದು
ನಿಯಮನ ಮಾಡಿದವರು ಕೆಲವರು. ಇದಕ್ಕೆ ಸರ್ವತ್ರ ಪ್ರಪೇಶವುಂಟು,
ಪಾ ಫ್ರಧಾನ್ಯವುಂಟು ಎಂದು ದಾರಿಮಾಡಿಕೊಟ್ಟವರು ಕೆಲವರು--ಪೀಗೆ ಇದರ
ಸ್ಥಾನವನ್ನು ಕುರಿತೂ ಅನೇಕಾನೇಕ ಅಭಿಪ್ರಾಯಗಳು ಕಾಣಬರುತ್ತವೆ.
ನಮಗಿರತಕ್ಕ ಮಿತಾವಕಾಶದಲ್ಲಿ ಇದೆಲ್ಲದರ ಸವಿಸ್ತರವಾದ ವಿವೇಚನೆ
ಸಾಧ್ಯವಿಲ್ಲ.5. ಮುಖ್ಯವಾಗಿ ಅಭಿನವಗುಪ್ತನ ನಿರೂಪಣಿಯನ್ನು ಅವ
ಲಂಬಿಸಿ ನಾಲ್ಕು ಮಾತನ್ನು ಹೇಳುತ್ತೇವೆ.
"4 ಧೃನ್ಯಾ, ಲೋಚನ, ಪು ೧೭೮ ನೋಡಿ.
5 ಈ ವಿಚಾರದಲ್ಲಿ ಶೋಧನಾತ್ಮಕವೂ ಬಹುವಿಷಯಗರ್ಭಿತವೂ ಅದ ಗ್ರಂಥ
ವಿ. ರಾಘವನ್ ಅವರ "The Number of Rasas’ ಎಂಬುದು. ಶಾಂತರಸವನ್ನು
ಕುರಿತು ಅನೇಕ ಹೊಸ ಸಂಗತಿಗಳು ಐದರಿಂದ ತಿಳಿಯಬರುತ್ತವೆ ; ಅದರ ಚರಿತ್ರೆಯೂ
ಸವಿಸ್ತರವಾಗಿ ಇಲ್ಲ ಪ್ರತಿಪಾದಿತವಾಗಿದೆ. ಈ ಗ್ರಂಥಕ್ಕೆ ಎಂ. ಹಿರಿಯಣ್ಣನವರು ಬರೆದಿರುವ
ಮುನ್ನುಡಿಯೂ ಅತಿ ಮುಖ್ಯ. ನಮ್ಮ ಗ್ರಂಥದ ಈ ಅಧ್ಯಾಯವನ್ನು ಬರೆಯುವಾಗ
ಇವೆರಡರಿಂದಲೂ ತುಂಬ ಉಪಕಾರವಾಗಿದೆ.
೪೦೬ ಭಾರತೀಯ ಕಾವ್ಯಮಾಮಾಂಸೆ
ರಸವೆಂದ ಮೇಲೆ ಅದಕ್ಕೊಂದು ಸ್ಥಾಯಿಭಾವ ಇರಬೇಕಪ್ಪೆ.
ಶಾಂತವು ರ ರಸವಾಗಬೇಕಾದರೆ, ಅದರ ಸ ಸ್ಥಾಯಿ ಯಾವುದು ಎಂಬುದೇ
ಎಲ್ಲಕ್ಕಿಂತ ಮುಖ್ಯವಾದ ಪ್ರಶ್ನೆ, ಎಲ್ಲಕ್ಕಿ ತ ತೊಡಕಾದ ಪ್ರಶ್ನೆ. ಈ
ರಸವು ವು ಮೋಕ್ಷಕ್ಕೆ ಸಂಬಂದಿನಿದ್ದೆ ೦ಬುದನ್ನು ಹೆಚ್ಚು ಕಡಮೆ ಎಲ್ಲರೊ
ಒಪ್ಪುತ್ತಾರೆ. ಇದರ ವಿರೋಧಿಗ ಳು ತೊಡಲು ಒಪ್ಪತಾ ಕ ಮೋಕ್ಷ
ಸಂಬಂಧಿಯಾದ ಕಾರಣದಿಂದಲೇ ಇದು ಸಂಸಾರಿಗಳ ಅನುಭವಕ್ಕೆ ಬರುವು
ದಿಲ್ಲ; ಕಾವ್ಯನಾಟಕಗಳಲ್ಲ ಇದನ್ನು ಪ್ರತಿಪಾದಿಸಲು ಶಕ್ಕವಲ್ಲ ಎಂಬ ವಾದ
ವನ್ನು ಆಗರ ಗಮನಿಸಿದೆವು. ಆದರೆ ಈ ಆಕ್ಷೇಪಣಿ ಚ ಧರ್ಮ,
ಆರ್ಥ, iid ಮೋಕ್ಷವೂ ಒ ಒಂದು ಪುರುಪಾರ್ಥ ; ಇದ್ದೇ ಪರಮ
ಪುರುಷಾರ್ಥ. ಸಂಸಾರದಲ್ಲಿ ತೊಳಲೆ ಬಳಲಿ ಬೇಗುದಿಗೊಂಡ ಯಾವ
ಮನುಷ ನಿಗೆ ಹ ಹ್ಗ ಒಳೆಹೈ ದಯದಲ್ಲಾ ದರೂ ಇರುವದಿಲ್ಲ?
ರತಿ, ಉತ್ಸಾಹ ಮೊದಲಾದ ಸ್ಕಾ ಯಿಥಾವಗಳು ಧರ್ಮಾರ್ಥಕಾಮಗಳಲ್ಲಿ
ಒಂದಕ್ಕೋ ಹಲವಕ್ಕೋ ಮುಖ್ಯವಾಗಿ ಸಂಬಂಧಪಟ್ಟವು. ಇವಕ್ಕೆ
ರಸತ್ವಪುಂಟಾಗಬಹುದಾದರೆ,. ಪರಮಪುರುಪಾರ್ಥಕ್ಕೆ ಉಚಿತವಾದ ಚಿತ್ತ
ವೃತ್ತಿಗೆ ರಸತ್ಯ ಏಕೆ ಒದಗಲಾರದು ? ಆ ರೀತಿಯಲ್ಲಿ ಮೋಕ್ಷಕ್ಕೆ ಹೊಂದಿಕೆ
ಯಾಗುವ ಚಿತ್ತ ವೃ ತ್ರಿ ತ್ರಿಯೇ ಶಾಂತೆರಸದ ಸ್ಥಾಯಿಭಾವ. ಇದು ಯಾವುದು?
ಪ್ರ ಗೆ ಉತ್ತರ ಕೊಡುವುದರಲ್ಲೇ ಮತಗಳಿಗೆ ಹೋರಾಟ.
ಚ ವಾದಿಸಿದವರಲ್ಲಿ ಅನೇಕರು ಇದಕ್ಕೊಂದು ಸ್ಥಾಯಿ
ಭಾವವನ್ನೇ ಭರತನು ಹೇಳಿಲ್ಲವಲ್ಲಾ ಎಂದು ಆಕ್ಷೇಪಿಸುತ್ತಿದ್ದರು.
ಇದಕ್ಕೆ ಉತ್ತರಕೊಡಲು ಕೆಲವರು ಭಾವಗಳ ಪಟ್ಟಿಯಲ್ಲಿ ತಡಕಿ ನೋಡಿ
«« ನಿರ್ವೇದ''ವನ್ನು ಕಂಡರು. ಸ್ಥಾಯಿಭಾವಗಳಾದ ಕೂಡಲೆ, ಸಂಚಾರಿ
ಭಾವಗಳ ಸಾಲಿನ ಮೊದಲಲ್ಲ ನಿರ್ಮೇದವು ಬ ಬರುತ್ತ ದೆ. ಇದರ,
ವಿಭಾವಗಳಲ್ಲ ತತ್ತ ಕ್ರ್ಯೈಜ್ಞಾನ ನವೂ ಒಂದು. ಸರಿ. ತತ ತ್ರಿಕ ನದಿಂದ
ಉದಿಸುವ ನಿರ್ವೇದವೇ ಶಾಂತರಸದ ಸ್ಥಾಯಿಭಾವ ; ಈ ೮॥ ಅಭಿಪ್ರಾ ಯ
ವಿಲ್ಲದಿದ್ದ ರೆ ಮಂಗಳೆಪ್ರಿಯನಾದ ಭರತಮುನಿ ನಿರ್ವೇದವೆಂಬ
ಅಮಂಗಳಕರವಾದ ಭಾವವನ್ನು ಸಂಚಾರಿಭಾವಗಳ ಅಗ್ರದಲ್ಲ ಏಕೆ
ಹೇಳುತ್ತಿದ್ದನು? ಇದು ಸ್ಥಾಯಿ, ಸಂಚಾರಿ ಎರಡೂ ಆಗುತ್ತದೆ
ಆಂದು ಈ ರೀತಿಯಾಗಿ ವಾದಿಸಿ ಗಂಟುನಂಟುಗಳೆರಡನೂ. ಉಳಿಸಿ
೨೪. ಶಾಂತರಸ ೪೦೬
ಕೊಳ್ಳಲು ನೆ ನೋಡಿದರು. ಇಲ್ಲ, ಭರತನ ಅನುಮೋದನೆಯನ್ನು ಸ್ಕಾಪಿ
ಸಲು ಇವರು ತುಂಬ ಕ್ಲೇತಪಟ್ಟಿದ್ದಾರೆಂಬುದು ವಿದಿತವಾಗುತ್ತ 0 ದೆ.
ಆದರೆ, ಭರತನ ಒಪ್ಪಿಗೆಯ ಮೇಲೆಯೇ ಒಂದು ರಕವುಂಟೇ ಇಲ್ಲವೇ
ಎಂಬುದು ನಿರ್ಣಯವಾಗಲಾರದ ಕಾರಣ ಅದರ ವಿಮರ್ಶೆ ನಮಗೆ ಅಪ್ರ
ಸಕ್ತ. ನಿರ್ಮೇದವು ಶಾಂತರಸಕ್ಕೆ ನಿಜವಾಗಿ ಯೂ ಸ್ಥಾಯಿಯಾಗಬಲ್ಲುದೇ
ಎಂಬುದನ್ನು ವಿಚಾರ ಮಾಡೋಣ. ನಿರ್ಮೇದ ಎಂದರೆ ಮನಸ್ಸು ಇಳಿ
ಮುಖವಾಗಿರುವುದು; ಎಲ್ಲದರಲ್ಲಿ, ತೆನ್ನಲ್ಲಿ ಕೂಡ, ಜೇಸರಗೊಂಡಿರುವುದು.
ಇದು ನಿಜವಾದ _ವಿರಕಿ ಯಲ್ಲ. ಒಂದು ಪೇಳೆ ಇದನ್ನೇ ವೈ ರಾಗ್ಯವೆಂದು
ಬೇಕಾದರೂ ಅಂಗೀಕರಿಸೋಣ. ವಿರಕ್ತಿ ತತ್ತ್ಯಜ್ನಾ ನಕ್ಕೆ ಕಾರಣ;
ತತ್ತ್ವಜ್ಞಾನ ವಿರಕ್ತಿ? ಗೆ ಕಾರಣವಲ್ಲ. ಎತ್ತದೆ ತತ ್ರೈಜ್ಞಾ ನದ ಮುಂದಿನ
ಮೆಟ್ಟಲೇ ಮೋಕ್ಷ. ಪೀಗಿರುವುದರಿಂದ, ನಿರ್ವೆ ದಕ್ಕೆ ತ ತತ್ತ ,ಎಬ್ಲಾನವು
ಹೇಗೆ ವಿಧಾವವಾದೀತು?
ಬಹುದೆಂದು ಕೆಲವರ ಸ ; ಈ ಎಂಟೂ ಎಂಟೂ ಒಟ್ಟಿಗೆ ಗತೇ ಸ್ಯ ಸ್ಥಾ ಯಯಾಗಲಿ
ಎಂದು ಇನ್ನು ಕೆಲವರ ಅಭಿಪ್ರಾಯ. ಯ, ಈ ವಾದಗಳನ್ನು ವಿಶದವಾಗಿ
ವಿಮರ್ಶೆ ಮಾಡುವುದು ಅನಾವಶ್ಯಕ. ಇವುಗಳಲ್ಲಿ ಆತ್ಮವಿಷಯಕವಾದ
ರತಿ, ಪೆರೋಪಕಾರೇಚ್ಛೆಯ ಉತ್ಸಾಹ, ಸಂಸಾರವನ್ನು ಕುರಿತ
ಜುಗುಪ್ಸೆ ಈ ಮೂರನ್ನು ಮಾತ್ರ ಕೆಲವು ಮಟ್ಟಿಗೆ ಪರ್ಯಾಲೋಚಿಸೆ
ಬಹುದು. ಆದರೆ ಇವೆಲ್ಲವೂ ಶಾಂತರಸಕ್ಕೇ ಸಂಚಾರಿಭಾವಗಳಾಗುವು
ವೆಂದು ಮುಂದೆ ಸ್ಪಪ್ಪವಾಗುತ್ತದೆ.
ಹಾಗಾದರೆ ಇಲ್ಲ ಸ್ಥಾಯಿ ಯಾವುದು? "" ತೃಪ್ಹಾಕ್ಷಯ ಸುಖದ
ಪರಿಪೋಷವೇ ಶಾಂತರಸದ ಲಕ್ಷಣ 'ಪೆಂದು ನಂಡವರಾನನ
ಅಭಿಪ್ಪಾಯ.* « ಶಮ''ವು ಸ್ಥಾಯಿಯೆಂದು | ಹಲವರ ವರ ಮತ;
6 «:ಶಾಂತಶ್ಚ ತೃಷ್ಣಾಕ್ವಯಸುಖಸ್ಯ ಯಃ ಪರಿಪೋಪಃ ತಬ್ಲಕ್ಷಣೋ ರಸಃ ಪ್ರತೀಯತ
ಏವ” (ಧ್ವನ್ಯಾ. ಪು.. ೧೭೯),
೪೦೮ ಭಾರತೀಯ ಕಾವ್ಯವಿಸಾಮಾಂಸೆ
ಶಾಸ್ತ್ರ'ದ ಪ್ರಕ್ಷಿಪ್ತಭಾಗವೂ ” ಇದನ್ನೇ ಅನುಮೋದಿಸುತ್ತದೆ. ತತ್ತ್ವ
ಜ್ಞಾನವೇ ಮೋಕ್ಷಸಾಧನವಾದ ಕಾರಣ ಅದೇ ಶಾಂತರಸದ ಸ್ಥಾಯಿ
ಯೆಂದು ಅಭಿನವಗುಪ್ತನು ನಿರೂಪಿಸುತ್ತಾನೆ. ತತ್ತ್ಯಜ್ಞಾನ'' ಎಂಬ
ಶಬ್ದವನ್ನು ಕೇಳಿದ ಕೂಡಲೆ, ಇದು ಚಿತ್ತವೃತ್ತಿಯೇ ಅಲ್ಲ; ಇದು ಸ್ಥಾಯಿ
ಯಾಗುವುದು ಹೇಗೆ? ಇದನ್ನು ರಸವಾಗಿ ಆಸ್ಪ್ರಾದಿಸುವುದು ಹೇಗೆ? ಎಂಬ
ಶಂಕೆ ಥಟ್ಟನೆ ಹುಟ್ಟುತ್ತದೆ. ಆದಕಾರಣ ಅಭಿನವಗುಪ್ತನ ಆಶಯವನ್ನು
ವಿವರಿಸುವುದು ಅವಶ್ಯಕ.
ತತ ಜ್ವಾನದಂದರೆ ಅತ್ವಜ್ಞಾ; ನವ ಹೊರತು ಬೇರೆಯಲ್ಲ"
ಆತ್ಮನು ತನ್ನನ್ನು ಅರಿಯುವುದೇ ಆತ್ಮ ಜ್ಞಾ ನ; ಮಿಕ್ಕದ್ದೆಲ್ಲ ವಿಷಯ
NN ರಿ ರಿ
ಜ್ಞಾನ. ಜ್ಞಾನ, ಆ ಆನಂದ ಮೊದಲಾದ "ಪರಿತುದ 'ರಿಶುದ್ಧ ಧರ್ಮಗಳನ್ನು ಳ್ಳ,
ವಿಷೆಯೋಪಥೋಗರಪಿತವಾದ ಆತ್ಮನೇ ಸ್ಕಾಯಿ. ** ತಮ "ವು ಆತ್ಮನ
ಸ್ವಭಾವ. ಆದ್ದರಿಂದ ಈ ಸ್ಥಾಯಿಯನ್ನು ತಮಪೆಂಬ ಹೆಸರಿನಿಂದ
ಕರೆದರೂ ದೋಪವಿಲ್ಲ. ಈ ಆತ್ಮವೆಂಬ _ಸ್ನಾಯಿ ನಮಗೆ ಬಳಕೆಯಾಗಿರುವ
ರತಿ, ಹಾಸ _ಮೊದಲಾದವುಗಳಂತಲ್ಲ. ಅವು ಸಂಚಾರಿಭಾವಗಳಿಗೆ ಭಿತ್ತಿ
ರೂಪವಾಗಿದ್ದರೆ, ಇದು ಸ್ಥಾಯಿಗಳಿಗೇ ಸ್ಥಾಯಿ. ಸಮಸ್ತ್ವಭಾವಗಳೂ
ಈ. ಹ ಭಿತ್ತಿಯ ಭಿತ್ತಿಯ ಮೇಲೆ ಗೋಚರವಾಗುತ್ತವೆ. ಕಾರಣಸಾಮಗ್ರಿ ಒದಗಿ
ದಾಗ ಇದರಲ್ಲೆ € ಉದಿಸುತ್ತವೆ. ಅದು ಲಯಿನಿದಾಗ' ಇದರತ್ತ
ಲಯಿಸುತ್ತವೆ :
ಸ್ಟಂ ಸ್ವಂ ನಿಮಿತ್ತಮಾಸಾದ್ಯ ಶಾಂತಾದುತೃದ್ಯತೇ ರಸಃ |
ಪುನರ್ನಿಮಿತ್ತಾಪಾಯೇ ತು ಶಾಂತ ಏವ ವಿಲೀಯತೇ ॥*
ಈ ಸಂದರ್ಭದಲ್ಲಿ ಇನ್ನೊ೦ದು ಹೋಲಿಕೆಯನ್ನು ಕೊಡಬಹುದೆಂದು
ತೋರುತ್ತದೆ. ಆಕಾತದಲ್ಲ ಬಗೆಬಗೆಯ ರೂಪಗಳನ್ನು ತಾಳಿ ಮೋಡ
7 ಭರತನಾಟ್ಯ ಶಾಸ್ತ್ರದ ಕೆಲವು ಪಾಠಸಂಪ್ರದಾಯಗಳಲ್ಲ ಮಾತ್ರ ದೊರೆಯುವ,
“ಅಥ ಶಾಂತೋ ನಾಮ ಶಮಸ್ಮಿಯಿಭಾವಾತ್ಮಕೋ ಮೋಕ್ಷಪ್ರವರ್ತಕ್ಕು,,.., » ಎಂದು
ಪ್ರಾರಂಭವಾಗುವ, ಶಾಂತರಸ ಪ್ರಕರಣವು( 11, ೧೦೩-೮) ಮೂಲಗ್ರಂಥದ ಭಾಗವಲ್ಲ
ವೆಂದು ಊಹಿಸಲು ಪ್ರಬಲವಾದ ಕಾರಣಗಳಿವೆ. (17, Raghavan: The "27068 of
Rasas’, ಪು. ೧೫೬ ನೋಡಿ.)
8 ನಾಟ್ಯಶಾಸ್ತ್ರ, ೪ ೧೦೮. ರಸವು ತನ್ನ ತನ್ನ ನಿಮಿತ್ತವೊದಗಿದಾಗ ಶಾಂತ
ದಿಂದ ಉದಿಸುತ್ತದೆ ; ಅ ನಿಮಿತ್ತ ತೊಲಗುತ್ತಲೂ ಮತ್ತೆ ಶಾಂತದಲ್ಲಿಯೇ ಲಯಸುತ್ತದೆ. ''
೨೪. ಶಾಂತರಸ ೪೦೯
ಗಳು ಆಡುತ್ತವೆಯಪೈ ; ಓಮ್ಮೆ ಘೋರವಾಗಿ ಜಗತ್ತನ್ನೇ ನುಂಗುವಂತೆ
ಗರ್ಜಿಸಿ, ಮತ್ತೊಮ್ಮೆ ಸೌಮೃವಾಗಿ ವಿಲಾಸದೊಡನೆ ಸುಳಿದು, ಕಪ್ಪಿನ
ರಾಶಿಯಾಗಿ ಒಮ್ಮೆ ಹೆಪ್ಪುಗಟ್ಟಿ ಸ ಮತ್ತೊಮ್ಮೆ ಅನೇಕ ವರ್ಣಗಳಿಂದ
ರಂಜಿಸಿ. ವೈಚಿತ್ರ್ಯ ಮಯವಾಗಿ ತೋರಿ, ಹರಿದು ಸಾಗುತ್ತಿರುವುವಷ್ಟೆ.
ಇವುಗಳಿಗೆಲ್ಲ ಪಿನೆ ರೆಯಾಗಿರತಕ್ಕದ್ದು ಆಕಾಶ; ಏಕಾಕಾರವಾದ ಪ್ರ ಶಾಂತ
ವಾದ ಆಕಾಶ. ತೋಡಣಕು. ಮುಷ್ಛಕೊ ಚಿ ಕೊಂಡಾಗ ಗ ಇದು ಖು ಇದೆಯೆಂದೇ
ಅನ್ನಿಸುವುದಿಲ್ಲ. ಅವುಗಳ ನಡುವೆ ಬಿರುಕು. ಬಿಟ್ಟಾಗ ಈ ಭಿತ್ತಿ ಕ್ಷಣಕಾಲ
ಶುಭ್ರವಾಗಿ ಹೊಳೆಯುತ್ತರ ದೆ. ಆತ್ಮಕ್ಕೂ ಮಿಕ್ಕ ಸಾ ಸ್ಮಾಯಿಧಾವಗಳಿಗೂ
ಇರುವ ಸಂಬಂಧ ಈ ರೀತಿಯದೆಂದು ವಿಚಾರಸೌಕರ್ಯಕ್ಕಾಗಿ ಭಾವಿಸ
ಬಹುದು.
ಸಾಮಾನ್ಯ ಜೀವನದಲ್ಲಿ ಚಿತ್ತವೃತ್ತಿಗಳ ಏಳುಬೀಳು ಗೊತ್ತಾಗು
ತ್ತದೆ. ಅವಕ್ಕೆ ಆಸರೆಯಾಗಿರುವ ಆತ್ಮನ ನೆಲೆ ಗೊತ್ತಾಗುವುದಿಲ್ಲ.
ಆದಕಾರಣ ಅಜ್ಞಾನದ ಸೋಪಾನದಲ್ಲೆ € ನಿಂತಿರುವ ವಿವರಣಕಾರನೂ
ವಾಚಸರೂ ಈ ಬಗೆಯ 'ಉಪಮಾನಗಳ ಮೂಲಕವೇ ಶಾಂತರಸದ ಈ
ಎಲಕ್ಷಣ "" ಸ್ಕಾಯಿ''ಯ ಸ್ವರೂಪವನ್ನು ಗ್ರಷಿಸಬೇಕಾಗಿದೆ. ಆತ್ಮವು
ನಮಗೆ ನಿಲುಕದ್ದಾದರೂ, ಅದನ್ನು ಎಂದಾದರೂ ಅರಿತು ಸ್ವಸ್ವರೂಪದ
ಪ್ರಶಾಂತತೆಯನ್ನು ಅನುಭವಿಸದೇಕೆಂಬುದೇ ಮಾನವಹೃದಯದ ಒಳ
ಆಸೆ, ಶಾಸ್ತ್ರದ ಉಪದೇಶ, ಮತಾಚರಣಿಯ ಸಾಧನೆ. ಈ ವಸ್ತುವಿನ
ನಿರೂಪಣಿ ಸರ್ವಥಾ ಕಲೆಗೆ ಒಳಪಟ್ಟದ್ದೇ ಸರಿ. ಅದನ್ನು ಅನುಸರಿಸಿ
ಶಾಂತರಸವೂ ಉಂಟೆಂದೇ ಹೇಳಬೇಕು. ಇದರ ಪ್ರತಿಪಾದನೆಯೂ
ಆಸ್ಕಾದವೂ ಸುಲಭವಲ್ಲವೆಂಬುದು ನಿಜ; ಅನೇಕರಿಗೆ ಅಸಾಧ್ಯವೇ ಆಗಿರ
ಬಹುದು. ಆದರೆ ಒಬ್ಬ ನಿಗಾದರೂ ಆತ್ಮಜ್ಞಾ ನವು ಅಸಂಭವವಲ್ಲದಿದ್ದ ರೆ
ಶಾಂತರಸದ ಆಸ್ಕಾದೆವೂ ಅಸಂಭವವಲ್ಲ. ಇದರಮೇಲೆ, ಇದು ಅಪ್ಪು
ದುರ್ಲಭವೂ ಅಲ್ಲವೆಂಬುದು ಮುಂದಿನ ವಿವರಣಿಯಿಂದ ಗೊತ್ತಾಗದಿರದು.
ಅಭಿನವಗುಪ್ತನು ಸೂಚಿಸುವಂತೆ, ಯಮ ಯಮ ನಿಯಮಾದಿಗಳು ಶಾಂತ ಶಾಂತ
ರಸದ ಅನುಭಾವಗಳು, ಪರಮೇಶ್ಯರಾ ರಾನುಗ್ರಹವೇ ಮೊದಲಾದ ವ
ಗಳು. ಲೌಕಿಕವೂ ಅಲಾಕಿಕವೂ ಆದ ಎಲ್ಲ ಚಿತ್ತವೃತ್ತಿ ನ
೪೧೦ ಭಾರತೀಯ ಕಾವ್ಯವಿಕಾಮಾಂಸೆ
ಸಂಚಾರಿಭಾವಗಳು. ರತಿ, ತಿ, ಉತ್ಪಾಹ ಮೊದಲಾದವು ಇಲ್ಲಿ ಬಂದಾಗ
ಅವು ಉಪತಮನವಾಗುತ್ತಿರುವಂತೆ ವ್ಯಕ್ತವಾಗಣೇಕು. ಆದರೆ, ಶೃಂಗಾರ
ದಲ್ಲಿ ಔತ್ಸುಕ್ಯವೂ ರೌದ್ರದಲ್ಲಿ ಉಗ್ರ ತೆಯೂ ಕರುಣವೀರ ಭಯಾನಕಾದ್ಭು ತ
ಗಳಲ್ಲಿ ನಿರ್ವೇದ ಧೃತಿ ತ್ರಾಸ ಫಗ ಹೇಗೆ ಮುಖ್ಯ ಸಂಚಾರಿಗಳಾ
ಗುತ್ತಪೆಯೋ ಹಾಗೆ ಶಾಂತದಲ್ಲ ರಾಗಕ್ಕೆ ಪ್ರತಿಕ್ಷಿಗಳಾದ ಜುಗುಪ್ಸೆ
ಮೊದಲಾದವು ಮುಖ್ಯ ಸಂಚಾರಿಗಳಾಗುತ್ತವೆ.
ಶಾಂತವನ್ನೇನೋ ಒಂದು ರಸವೆಂದು ಅಂಗೀಕರಿಸೋಣ. ಎಲ್ಲ
ಚಿತ್ತವೃತ್ತಿಗಳೂ ಪ್ರ ಪ್ರತಮನಸೆೊಸಪ ಸ್ಥ ಸ್ಥಿ ತಿ ಇದಾಗುವ ಪಕ್ಷಕ್ಕೆ ಇದನ್ನು
ಅಭಿನಯಿಸುವುದು ಹೇಗೆ, ನಿರೂಪಿಸುವುದು ಹೇಗೆ? ಎಲ್ಲಿಯೋ ಅಪೂರ್ವ
ವಾಗಿ: ಒಬ್ಬ ಯೋಗಿಯನ್ನು ವರ್ಣಿಸುವಾಗ ಬೇಕಾದರೆ ಇದನ್ನು ಅಂಗ
ವಾಗಿ ತರಬಹುದು. ಕಾವ್ಯನಾಟಕಗಳಲ್ಲಿ ಇದನ್ನೇ ಪ್ರಧಾನರಸವಾಗಿ
ನಿರೂಪಿಸುವುದು ಸಾಧ್ಯ ವೇ 1. ಇದಕ್ಕೆ ಉತ್ತರ ರ ಮೇಲಿನ ; ನಿರೊಪಣ್
ಯಲ್ಲೇ ಅಡಗಿದೆ. ಸಮಸ್ತ ಚಿತ್ತ ವ ತ್ತಿ ಧೂ “ಇದರಲ್ಲಿ ಸಂಚಾರಿಧಾವ
ಶಾರಿ ಹೆ ರಾ ಸರತೆ
ಗಳಾಗುವುಪೆಂದಮೇಲೆ ಇಲ್ಲಿ ಲಿ ವೈಚಿತ್ರ್ಯ ಕೆ ನು ಕಡಸ? ಇನ್ನೊಂದ
ಅಂಶವನ್ನು ನೆನಪಿನಲ್ಲಿಡಬೇಕು. ಕಾವ್ಯ ದಲ್ಲಾ; ಗಲಿ ' ನಾಟಕದಲ್ಲಾ ಗಲಿ
ಸ್ಥಾಯಿಭಾವ ಮೊದಲಿನಿಂದಲೂ ಪ್ರಕಷ ನಿ ಸ್ಲಿತಿಯಲ್ಲಿ ತಾನೇ ತಾನಾಗಿ
ಒಂದೇ ರೂಪದಲ್ಲಿರುವುದಿಲ್ಲ.. ಅದು ಅಂಕುರಿಸಿ, ಪಲ್ಲವಿಫಿ, ಅಡ್ಡಿ ಗಳನ್ನು
ಎದುರಿಸಿ ಜಯಿಸಿ, ಕಟ್ಟಕಡೆಗೆ ಪರಿಪೂರ್ಣವಾಗಿ ಫಲಿಸುತ್ತ ದೆ. ಸ್ಕಾ ಹಗೆ
ಅನುಸಾರವಾಗಿ ತಾನೆ ರಸವಿರುವುದು. ಆದ್ದರಿಂದ ಪ ಪ್ರತಿಯೊಂದು
ರಸಕ್ಕೂ "" ಪರ್ಕ ೈಂತಭೂಮಿ ''ಯೊ೦ದುಂಟು. ಮೊದಲಲ್ಲೂ ಮಧ್ಯದಲ್ಲೂ
ಮಿಕ್ಕ ಬಾತ್, ಬೇಕಾದಷ್ಟು ಬಂದು ಹೋಗುತ್ತಿರುತ್ತವೆ. ಶ್ರಾಂತರನ
ದಲ್ಲಿಯೂ ಹಾಗೆಯೇ ಆಗುತ್ತದೆ. ಪ್ರಾರಂಭದಿಂದಲೂ ಅದು ಪರಿಪಕ್ಯ
ದಶೆಯಲ್ಲರುವುದಿಲ್ಲ; ಇರಬೇಕಾಗಿಯೂ ಇಲ್ಲ. ಸಂಸಾರದಲ್ಲಿರುವವನಿಗೆ
ಜಿಹಾಸೆಯುಂಟಾಗಿ ಅವನು ಆತ್ಮ ಜ್ಞಾ ನವನ್ನು ಸಾಧಿಸುವವರೆಗಿನ ಮೆಟ್ಟಲು
ಮೆಟ್ಟಲನ್ನೂ ಕಾವ್ಯನಾಟಕಗಳಲ್ಲ '್ರತಿಪಾದಿಸಬಹುದು. ಇಲ್ಲ ರತಿ ರತಿ,
ಶೋಕ; ಉತ್ಸಾಹ. ಹ, ಜುಗುಪ್ಪೆ ಈ ಮೊದಲಾದ ಬಗೆಬಗೆಯ ಭಾವಗಳು
ತಮ್ಮ ತಮ್ಮ ಸ್ಥಾ ನಕ್ಕೆ ಅನುಗುಣವಾಗಿ ಪುಪಿ ಫುಪ್ಪಿಗೊಳ್ಳಬಹುದು ; ; ಕೊನೆಯ
ಸಹ
ಗುರಿಯ ಕಡೆಗೆ ಮಾತ್ರ ಗಮನ ಸಂತತವಾಗಿದ್ದರೆ ಸಾಕು. ಎಲ್ಲ ) ಧಾವಗಳಿ
೨೪. ಶಾಂತರಸೆ ೪೧೧
ಲಯಿಸಿದಾಗ ಗ ಕಡೆಯಲ್ಲಿ ಶಾಂತರಸದ ಪ್ರ ರ್ಮ್ “ಜಸತ” ದೆ.
ಇದರ ಅಭಿನಯ ಮಾತ್ರ ಕಪ್ಪವಾದೀತು, ವರ್ಣನೆಗೆ ಮಾರಿಹೋದೀತು.
ಆದರೆ ಧ್ಯಾನಿಬುದ್ಧನ “ಅಗ ಹಗಳನ್ನು ಶಿಲ್ಪಿ ಕಡೆಯಬಹುದಾದರೆ ಆ
ದ ತೃವನ್ನು ನ ನಾಟಕರಂಗದಲ್ಲಯೂಕ್ಷ ಕ್ಷಣಕಾಲ ) ತೋರಿಸಬಹುದು ; ಕವಿಯೂ.
ನಾಲ್ಕು ಪದ್ಯಗಳಲ್ಲಿ ವರ್ಣಿಸಬಹುದು. ಈ ಸ್ಥಿತಿಯನ್ನು ಸೂಚಿಸಿದರೆ
ಸಾಕು ; ಕೊನೆಯ ತೆರೆ ಬಿದ್ದರೂ ಬಾಧಕವಿಲ್ಲ.
ಇದಿಷ್ಟೂ ಲಾಕ್ಷಣಿಕರ ವಿಚಾರವಾಯಿತು.* ಇತ್ತ ಕವಿಗಳೂ ನಾಟಕ
ಕಾರರೂ ಏನು ಮಾಡುತ್ತಿದ್ದರೆಂಬುದನ್ನು ಕೊಂಚಮಟ್ಟಿಗೆ ಗಮನಿಸ
ಬೇಕು. ಶಾಂತರಸದ ಪ್ರತಿಪಾದನೆ ಕಾವ್ಯ ನಾಟಕಗಳ ಅಂಗವಾಗಿ ಹಿಂದಿ
ನಿಂದಲೂ ಬಂದಿದೆ. ಖುಪ್ಯಾತ್ರಮಗಳ ವರ್ಣನೆ ವಿಪಿತವಾಗಿ ಬಂದಿರುವ
ಕಡೆಗಳಲ್ಲೆಲ್ಲಾ ಇದರ ಶಾಂತಿಯನ್ನು ಕ್ಷಣಕಾಲವಾದರೂ ಸವಿಯಬಹುದು.
ಆದರೆ ಇದು "" ಅಂಗ''ರಸದ ವಿಷಯ, ಶಾಂತರಸವು "" ಅಂಗಿ''ಯಾಗಿ,
ಪ್ರಧಾನವಾಗಿ, ನಿರೂಪಿತವಾಗಿದೆಯೇ ಹೇಗೆ ಎಂಬುದು ಬೇರೊಂದು
ಪ್ರಶ್ನೆ. " ಮಹಾಭಾರತ 'ದಲ್ಲಿ ಶಾಂತರಸವೇ ಪರ್ಯಂತದಲ್ಲಿ ಪ್ರಧಾನವಾಗು
ತ್ತದೆ; ಪ್ರಾಪಂಚಿಕ ವ್ಯವಹಾರದ ನಿರೂಪಣಿ ಅದರ ಉದ್ದಕ್ಕೂ ಬಂದಿ.
ದ್ದ ರೂ, ಇದೆಲ್ಲದರ ಅಸಾರತ್ವವೂ ವಿಶದವಾಗಿ ವೈರಾಗ್ಯವನ್ನೇ ಹುಟ್ಟಿ ಸು
ತ್ತದೆ; ಈ ವೈರಾಗ್ಯವೇ ಮೋಕ್ಷಕ್ಕೆ ದಾರಿ; ಮಹಾಭಾರತದ | ಕೊನೆಯಲ್ಲಿ
"ಹರಿವಂತ ' ಬಂದಿರುವುದೂ ನಡುನಡುವೆ ಭಗವಂತನ ವಿಷಯವು
ಪ್ರತಿಪಾದಿತವಾಗಿರುವುದೂ ಗ್ರಂಥದ ಗುರಿ ಏನೆಂಬುದನ್ನು ತೋರಿಸು
ತ್ತವೆ. -ಈ ರೀತಿಯಾಗಿ" ಅನಂದವರ್ಧನನು ಪ ್ರತಿಪೂದಿಸುತ್ತಾ ವೆ
(ಕ ಚಿತುನ್ಸ ಮುದ್ರ ಮುದ್ರಿತವಾದ ಭೂಮಿಯ ಒಡೆತನವನ್ನು ಭೋಗಿಸಿದ
ದುರ್ಯೋಧನನು “ಕೊನೆಗೆ 'ಫೊಡೆಮುರಿದು ಬಿದ್ದು, ಪರಿಜನರೊಬ್ಬ ರೂ ಇಲ್ಲದೆ,
ಜೀವವಿರುವಾಗಲೇ ತೋಳಗಳಿಗೆ ತುತ್ತಾದನು ; ಜಗತ್ತ ನ್ನೇ ಜಯಿಸಿದ.
9 ಕನ್ನಡದ ಆಲಂಕಾರಿಕರೆಲ್ಲರೂ ಶಾಂತರಸವನ್ನು ಅಂಗೀಕರಿಸುತ್ತಾರೆ ; ಅದರ
ಲಿಷಯದಲ್ಲ ಭಿನ್ನಾಭಿಪ್ರಾಯವೇ ಇಲ್ಲ. « ಕವಿರಾಜಮಾರ್ಗ ' ವು (ಕ್ರಿ. ಶ. ಸು. ೮೫೦)
ದಂಡಿಯ ಕಾವ್ಯಾದರ್ಶವನ್ನೇ ಮುಖ್ಯವಾಗಿ ಅನುಸರಿಸಿದ್ದರೂ ಈ ವಿಚಾರದಲ್ಲಿ ಅದಕ್ಕಿಂತ
ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಕನ್ನಡದ ಪ್ರಾಚೀನಾಲಂಕಾರಿಕರೆಲ್ಲ ಜೈನರು.
10 ಧ್ವನ್ಯಾ., ೪. ೫ ವೃತ್ತಿ ನೋಡಿ.
೪೧೨ ಭಾರತೀಯ ಕಾವ್ಯಮಾಮಾಂಸೆ
ಅರ್ಜುನನು ಗೊಲ್ಲರಿಗೆ ಸೋತುಹೋದನು ; ವೃಷ್ಟಿಕುಲದವರು ಜೊಂಡು
ಗಳಿಂದ [ಹೊಡೆದಾಡಿ] ನಾಶಹೊಂದಿದರು ; ಇದೆಲ್ಲವನ್ನೂ ದೀರ್ಫಕಾಲ
ವಿಚಾರಮಾಡಿ ಶಾಂತಿಯ ಕಡೆಗೆ ಮನಸ್ಸು ಕೊಡಿ'' ಎಂದು ಕ್ಷೇಮೇಂದ್ರನ:
ತನ್ನ " ಭಾರತಮಂಜರಿ 'ಯ ಕೊನೆಯಲ್ಲ: ಬೋಧಿಸ್ಸಿ ಶಮವೇ ಮಹಾ
ಭಾರತದ ಸಾರವೆಂದು ವ್ಯಕ್ತಪಡಿಸುತ್ತಾನೆ. ಆದರೆ, ಮಹಾಭಾರತದ
ನಿದರ್ಶನವನ್ನು ತೆಗೆದುಕೊಳ್ಳುವುದು ಕಪ್ಪ. ಆಧುನಿಕ ಸಂಶೋಧನೆಯನ್ನು
ಒಪ್ಪಿಕೊಂಡರೆ, ಅದು ಒಬ್ಬ ಕತೃ ೯ವಿನ ಕೃತಿಯಲ್ಲ, ಒಂದು ಕಾಲದಲ್ಲಿ
ರೂಪುಗೊಂಡದ್ದಲ್ಲ. ಈಗಿನ ರೂಪದಲ್ಲೇನೋ ಅದು ಮೋಕ್ಷಾಭಿಮುಖ
ವಾಗಿ, ಶಾಂತಪರ್ಯವಸಾಯಿಯಾಗಿ ಇದೆಯೆಂದು ಹೇಳಬಹುದಾದರೂ,
ಮೊದಲಿನಿಂದಲೂ ಇದೇ ಗುರಿ ಅದಕ್ಕಿದ್ದಿತೆ೦ದು ಹೇಳಲು ಸಾಧ್ಯವಿಲ್ಲ.
ಶಾಂತರಸವನ್ನು ಪ್ರಚಾರಕ್ಕೆ ತಂದ ಶೀರ್ತಿ ಬೌ ಬೌದ್ದ ೈ ಜೈನಕವಿ ವಿಗಳಿಗೆ
ಮೊದಲು ಸಲ್ಲಚೇಕೆಂದು ತೋರುತ್ತದೆ. "" " ಪ್ರಶಾ: ಶಾಂತ ದ ಹೆಸರು
ಮೊದಲು ಬಂದದ್ದು ಜೈನಗ್ರಂಥದಲ್ಲೆಂದು ನೋಡಿದೆವು. ನಿವೃತ್ತಿ
ಮಾರ್ಗವನ್ನು ಮುಖ್ಯ ವಾಗಿ ಪ್ರತಿಪಾದಿಸತಕ್ಕೆ ಮತಗಳು ಇವು.
ತೀರ್ಥ ೦ಕರರ ಮತ್ತು ಬುದ್ಧನ ಚರಿತೆಗಳಲ್ಲಿ ತತ್ತ್ವ ಸಾಧನೆಯ ವಿಷಯವೇ
ಮುಖ್ಯವಸ್ತು. ಕನ್ನಡದಲ್ಲಿ ಯಾವ ಶೈನಪುರಾಣವನ್ನು ಚಿ ನೋಡಲಿ,
ಅದರಲ್ಲಿ ಕವಿಯ ಮುಖ್ಯೋದ್ದೇಶವೇನೋ ಶಾಂತರಸದ ಪ ್ರತಿಪಾದನೆಯೇ
ಆಗಿರುತ್ತದೆ. ಅದರ ಸಾಧನೆಯಲ್ಲಿ ಅವನು ನಿಯತವಾಗಿ ಜಯಶಾಲಿ
ಯಾಗುವನೇ ಇಲ್ಲವೇ ಎಂಬುದು ಬೇರೆಯ ಮಾತು. ಆದರೆ ಈ ಕಠಿನ
ಕಾರ ದಲ್ಲಿ ಸಿದ್ಧಿ ಹೊಂದಿದವರೂ ಉಂಟು. ಪಂಪನ "ಆದಿಪುರಾಣ 'ದಲ್ಲಿ,
ಕೆಲ ಎಕ ಸಾ ನಾತಿಕೆ ಮವನ್ನು ಆಗಾಗ ಮಾಡಿದ್ದ! ರೂ
ಒಟ್ಟಿ ನಮೇಲೆ ಶಾಂತವು ಮುಖ್ಯ ರಸವಾಗಡ್ ಚೆನ್ನಾ ಗಿಯೇ. ಪ್ರ ಪ್ರತಿಪಾದಿತ
ವಾಗಿದೆಯೆಂದು ಒಪ್ಪಬೇಕು. ಆದಿನಾಥನ ಜನ್ಮಾವಳಿಯ ಥೆಗಳಲ್ಲ
ಭೋಗದ ಅಸಾರತೆಯೂ, ಆತನ ಪುತ್ರರಾದ ಭರತಬಾಹುಬಲಿಗಳ
11 ರತ್ನೋದಾರಚತುಸ್ಸಮುದ್ರರತನಾಂ ಭುಕ್ತ್ವಾ ಭುವಂ ಕೌರವೋ
ಭಗ್ನೋರುಃ ಪತಿತಃ ಸ ನಿಪ್ಪರಿಜನೋ ಜೀವನ್ ವೃಕೈೊರ್ಭಕ್ಷಿತಃ |
ಗೋಪೈೆರ್ವಿಶ್ಚಜಯಾ ಜಿತಃ ಸ ವಿಜಯಃ ಕಕ್ಷೆಃ ಕ್ಷಿತಾ ವೃಷ್ಟಯ..
ಸ್ತಸ್ಮಾತ್ ಸರ್ವಮಿದಂ ವಿಚಾರ್ಯ ಸುಚಿರಂ ಶಾಂತ್ಯೊ ಮನೋ ದೀಯತಾಂ!
(ಪು. ೮೫೧)
೨೪. ಶಾಂತರಸ ೪೧೩
ಕಥೆಯಲ್ಲಿ ವಿಭವ ವಿಜಯಗಳ ವಿಫಲತೆಯೂ, ಇವರೆಲ್ಲರಿಗೆ ವೈರಾಗ್ಯವೊದಗಿ
ಕೇವಲಜ್ಞಾನವು ಲಭಿಸಿದ ಪ್ರಕಾರವೂ ಆದಿಪುರಾಣದಲ್ಲಿ ರಮ್ಯವಾಗಿ
ನಿರೂಪಿತವಾಗಿದೆ.12
ಆದರೆ ಈ ಮಾರ್ಗದ ಕವಿಗಳಲ್ಲಿ _ ಅಗ್ರಸ್ಥಾನ ನ ಸಲ್ಲತಕ್ಷದ್ದು ಅಶ್ವ
ಘೋಪನಿಗೆ. ಅವನು ಕೃತಿರಚನೆ ಮಾಡಿದ್ದು "" ಉಪಶಾಂತಿ”
ಗಾಗಿ. " ಸಾರಿಪುತ್ರಪ್ರಕರಣ'ಪ್ಲೇ ಮೊದಲಾದ ಅವನ ನಾಟಕಗಳ
ಚೂರುಗಳು ಮಾತ್ರ ಈಗ ದೊರೆಯುವುದರಿಂದ, ಅವುಗಳ ವಿಷಯ.
ವಾಗಿ ಏನನ್ನೂ ಹೇಳುವಂತಿಲ್ಲ. ಆದರೆ ಅವನ "ಸೌಂದರನಂದ',
" ಬುದ್ಧಚರಿತ' ಎಂಬ ಕಾವ್ಯಗಳಿಂದ ಈ ರಸದ ಪ್ರತಿಪಾದನೆಯಲ್ಲಿ ಅವನ
ಸಾಮರ್ಥ್ಯ ಎಪ್ಟೆಂಬುದನ್ನು ಅರಿತುಕೊಳ್ಳಬಹುದು. " ಬುದ್ಧಚರಿತ'
ವಂತೂ ಶಾಂತರಸದ ಆಧಾರಸ್ತಂಭ." ಇದು ರಸದಿಂದ ತುಂಬಿ
ತುಳುಕುವ ಕಾವ್ಯ, ಇಲ್ಲಿಯ ಸ್ತ್ರೀವಿಲಾಸವರ್ಣನೆಯಾಗಲಿ ಶೋಕಪ್ರತಿ
ಪಾದನೆಯಾಗಲಿ ಸಾಂಸಾರಿಕ ಅನುಭವಗಳ ನಿರೂಪಣಿಯಾಗಲಿ ಯಾವ
ಸಹೃದಯರನ್ನಾದರೂ ಮೆಚ್ಚಿಸಬಲ್ಲುವು. ಕವಿ ಅವನ್ನು ಹೃದ್ಯವಾಗಿ ವಿಸ್ತರಿ
ಸಿದ್ಧಾನೆ. ಆದರೆ ಏಲ್ಲವಸ್ನೂ ಸಿದ್ಧಾರ್ಥನ ವೈರಾಗ್ಯಕ್ಕೂ ತತ್ತ್ವಜ್ಞಾನದ
ಪ್ರಯತ್ನಕ್ಕೂ ಅಂಗವಾಗಿ ಅಳವಡಿಸಿದ್ದಾನೆ. ಕಾವ್ಯ ಇಷ್ಟು ಸುಂದರ
ವಾಗಿದ್ದ ರೆ ಶಾಂತರಸವನ್ನು ಯಾವ ರಸಿಕನು ತಾನೆ ಆದರಿಸುವುದಿಲ್ಲ !
ಅದು ಇಲ್ಲಪೆಂದು ಅಪಲಾಪಿಸುವ ಲಾಕ್ಷಣಿಕರಿಗೆ "ಬುದ್ಭಚರಿತ'ವೇ ಉತ್ತರ.
12 ಈ ವಿಚಾರದಲ್ಲಿ ಹೆಚ್ಚಿನ ವಿಷರಗಳಿಗೆ, ತೀ. ನಂ. ಶ್ರೀಕಂಠಯ್ಯ: "ಪಂಪ ',
ಅಧ್ಯಾಯ ೨ನ್ನು ನೋಡಿ.
23 " ಇತ್ಯೇಷಾ ವ್ಯಪಶಾಂತಯೇ ನ ರತಯೇ ಮೋಕ್ಷಾರ್ಥಗರ್ಭಾ ಕೃತಿಃ
ತ್ರೋತ್ನಣಾಂ ಗ್ರಹಣಾರ್ಥಮನ್ಯಮನಸಾಂ ಕಾವ್ಯೋಪಚಾರಾತ್ ಕೃತಾ |,
(ಸೌಂದರನಂದ, xviii. ೬೩)
14 ಸಂಸ್ಕೃತದಲ್ಲಿ ಬುದ್ಯಚರಿತವು ಸಮಗ್ರವಾಗಿ ದೊರೆಯುವುದಿಲ್ಲ; ೧೪ನೆಯ
ಸರ್ಗದಲ್ಲ ಸ್ವಲ್ಪದೂರ ಸಾಗಿ ನಿಂತುಹೋಗುತ್ತದೆ. ಅದರೆ ಟಬೆಟನ್ ಮತ್ತು ಚೀಣೀ
ಭಾಷೆಗಳಲ್ಲಿ ಸಮಗ್ರಕೃತಿಯ ಅನುವಾದ ದೊರೆಯುತ್ತದೆ; ಅಶ್ವಘೋಪಷನ ಕಾವ್ಯದ್ವಯ
ವನ್ಮು ಸಂಪಾದಿಸಿ ಇಂಗ್ಲಿ ಪಿಗೆ ಭಾಷಾಂತರಿಸಿರುವ ಇ. ಎಚ್. ಜ್ಜಾಸ್ಟನ್ ಅವರು ಈ
ಸಾಮಗ್ರಿಯ ಆಧಾರದಿಂದ ಬುದ್ಧಚರಿತದ ಉತ್ತರಭಾಗವನ್ನೂ ಇಂಗ್ಲಿಷಿಗೆ ಭಾಷಾಂತರಿಸಿ
ಕೊಟ್ಟಿದ್ದಾರೆ (Acta Orientalia, Vol. XV).
೪೧೪ ಭಾರತೀಯ ಕಾವ್ಯಮಾಮಾಂಸೆ
ಈ ಹಿಂದೆಯೇ ಸೂಚಿಸಿರುವಂತೆ ಹರ್ಷನ "ನಾಗಾನಂದ ನಾಟಕ'
ದಲ್ಲ ಪ್ರಧಾನರಸ ಶಾಂತವೆ ಅಲ್ಲವೆ ಎಂಬುದನ್ನು ಕುರಿತು ತುಂಬ ಚರ್ಚೆ
ನೆಡೆದಿದೆ. ಶಾಂತರಸದ ಕಡೆಗೆ ಲಾಕ್ಷಣಿಕರ ಗಮನ ತಿರುಗುವುದಕ್ಕೂ
ನಾಗಾನಂದವೇ ಪ್ರೇರಕವಾಗಿರಬಹುದೆಂಬ ಅಭಿಪ್ರಾಯವೂ ಉಂಟು."
'ಅದಕಾರಣ ಇದರ ವಿಷಯವಾಗಿ ಎರಡು ಮಾತನ್ನು ಇಲ್ಲಿ ಹೇಳುವುದು
ಅವತ್ಯಕ. ನಾಗಾನಂದದ ನಾಯಕನು ಜೋಧಿಸತ್ತ್ಯನಾದ ಜೀಮೂತ
ವಾಹನ. ಈತನು ವೃದ್ಧರಾದ ತಂದೆತಾಯಿಗಳ ಶುಶ್ರೂಷೆಯ ಸಲುವಾಗಿ
ರಾಜ್ಯವನ್ನು ಬಿಟ್ಟು ಅವರೊಂದಿಗೆ ಬಂದು ತಪೋವನದಲ್ಲಿ ನಿಲ್ಲುತ್ತಾನೆ.
ಅಲ್ಲಿ ಈತನಿಗೂ ಸಿದ್ಧರಾಜಪುತ್ರಿಯಾದ ಮಲಯವತಿಗೂ ಪರಸ್ಪರಾನು
ರಾಗವುದಿಸಿ, ಕೆಲವು ತೊಡಕುಗಳು ಪರಿಹಾರವಾಗಿ, ಮದುಷೆಯಾಗುತ್ತಡೆ.
ವಿವಾಹೋತ್ಸವದ ಸಡಗರ ಇನ್ನೂ ಮುಗಿಯುವುದಕ್ಕಿಲ್ಲ; ಅಪ್ಪರಲ್ಲೆ
ಈತನು ಒಂದು ದಿನ ಸಮುದ್ರದ ಅಲೆಯೇರುವುದನ್ನು ನೋಡುವುದಕ್ಕೆ
ಹೋಗಿದ್ದಾಗ, ತೀರದಲ್ಲ ಬೆಟ್ಟದಂತೆ ಬಿದ್ದಿದ್ದ ಎಲುಬಿನ ರಾಶಿಯನ್ನು
ಕಾಣುತ್ತಾನೆ ; ಅದೆಲ್ಲವೂ ಗರುಡನಿಗೆ ಆಹಾರವಾಗಿ ಪ್ರತಿದಿನವೂ ಸರದಿಯ
ಮೇಲೆ ಬಂದು ಜೀವತೆತ್ತ ನಾಗಕುಲದವರ ಅವಶೇಷಪೆಂದು ತಿಳಿದು
ಅತಿಶಯವಾಗಿ ಮರುಗಿ, ಅಂದಿನ ಸರದಿಗಾಗಿ ಬಂದ ತಂಬಚೊಡನೆಂಬ
ನಾಗನಿಗೆ ಪ್ರತಿಯಾಗಿ ತನ್ನ ದೇಹವನ್ನು ಗರುಡನಿಗೆ ಒಪ್ಪಿಸುತ್ತಾನೆ.
ಕೊನೆಯಲ್ಲಿ ಮಲಯವತಿಯ ಇಷ್ಟ ದೈವವಾದ ಗೌರಿಯ ಪ್ರಸಾದದಿಂದ
ಜೀಮೂತವಾಹನನು ಉಜ್ಜೀವಿಸಿ ವಿದ್ಯಾಧರ ಚಕ್ರವರ್ತಿಯೂ ಆಗುತ್ತಾನೆ.
ಇತ್ತ ಇಂಥ ಮಹಾಪುರುಷನ ದೇಹವನ್ನು ತಾನು ಕಿತ್ತು ತಿಂಡೆನೆಂದು
ಅರಿತ ಗರುಡನಿಗೆ ತೀವ್ರ ಪಶ್ಚಾತ್ತಾಪವುದಿಸಿ ಅವನು ತೆಗೆದುಕೊಂಡು
ಬಂದ ಅಮೃತದ ಸೇಚನೆಯಿಂದ ನಾಗಕುಲವೆಲ್ಲ ಮತ್ತೆ ಬದುಕಿ ಅನಂದ
ಮಗ್ನವಾಗುತ್ತದೆ.
ಈ ನಾಟಕದಲ್ಲಿ ಶಾಂತರಸವು ಕಾಣಬರುವುದೆಂದು ಅನಂದವರ್ಥನನ
ಅಭಿಪ್ರಾಯ ;:7 ತೃಪ್ಹಾಕ್ಷಯಸುಖಪೇ ಈ ರಸದ ಸ್ವರೂಪವೆಂಬ ಆತನೆ
15 ಪು. ೩೮೪,
26 Y, Raghavan: The Number of 8885, ಪು. ೨೪.
17 ಧೃನ್ಯಾ., ಪ. ೧೭೬.
೨೪. ಶಾಂತರಸ ೪೧೫
ಆಶಯದ ದೃಷ್ಟಿಯಿಂದ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಲ್ಲ.
ಜೀಮೂತವಾಹನನಿಗೆ ರಾಜ್ಯೋಪಭೋಗದ ಮೇಲೆ ಆಸ್ಕೆಯಿಲ್ಲವೆಂದು
ನಾಟಕದ ಪ್ರಾರಂಭದಲ್ಲೇ ವ್ಯಕ್ತ ವಾಗಿ, ನಡುವೆ ಸೂಚಿತವಾಗುವ
ಮತಂಗನೆಂಬವನ ರಾಜ್ಯಾಕ್ರಮಣ ಪ್ರಸಂಗದಿಂದ ಮತ್ತಷ್ಟು ದ ೈಢಪಡು
ತ್ತದೆ. ಇತ್ತ Ho ಪ್ರ ಣಯ ವೃತ್ತಾಂತವು ಅತಿದೀರ್ಪವಾಗಿ,
ಬಲುಮಟ್ಟಿಗೆ ಅನಾವಶ್ಯಕವಾಗಿ, ಬೆಳೆದಿದೆಯೆಂಬುದು ನಿಜ ಆದರೆ
ಇದರಿಂದ ನಾಟಕದ ಮುಖ್ಯವಸ್ತುವಿಗೆ ಪ್ರಯೋಜನನವಿಲ್ಲದಿಲ್ಲ. ಮಲಯ
ವತಿ ಗೌರಿಯ ಆದೇಶದಂತೆ ಜೀಮೂತವಾಹೆನನ ಕೈಪಿಡಿದದ್ದರ ಫಲವಾಗಿ
ತಾನೆ ಕೊನೆಯಲ್ಲ ಆ ದೇವಿಯ ಅನುಗ್ರಹದಿಂದ ಅವಳ ಸೌಮಂಗಲ್ಕ
ವುಳಿದು ರಾಜ್ಯಸಂಪತ್ತು ಲಭಿಸಿದ್ದು ; ಇಡು ಹಾಗಿರಲಿ. ಮದುವಣಿಗನಿಗೆ
ಅತ್ತೆ ಸಂತಸ ಕಳಿಸಿದ. ಕೆಂಪು ವಸ್ತ್ರಗಳು ಹೊತ್ತಿಗೆ ಸರಿಯಾಗಿ
ಕೈಸೇರಿದ್ದರಿಂದಲೇ, ಜೀಮೂತವಾಹನನು ಅತ್ತ ಗೋಕರ್ಣಿಶ್ವರನ
ವಂದನೆಗಾಗಿ ಹೋಗಿದ್ದ ಶಂಬಚೂಡನಿಗೆ ಪ್ರತಿಯಾಗಿ ವಧ್ಯಶಿಲೆ
ಯನ್ನೇರಿ ಕುಳಿತು, ಈ ವಸ್ತ್ರಗಳೇ ವಧ್ಯಚಿಹ್ನೆಯೆಂದು ಧ್ರಮಿಸಿ ತನ್ನಮೇಲೆ
ಎರಗಿದ ಗರುಡನಿಗೆ ಶರೀರವನ್ನು ಒಪ್ಪಿಸಲು ಸಾಧ್ಯವಾದದ್ದು. ಅಷ್ಟೇ
ಅಲ್ಲ. ಪರಪಿತಸಾಧನೆಯ ತನ್ನ ಉದ್ದೇಶವನ್ನು ಸಫಲಗೊಳಿಸಿದ ಆ
ವಧ್ಯಶಿಲೆಯ ಸ್ಪರ್ತವು ತನ್ನ ಕಾಂತೆ ಮಲಯವತಿಯ ಶೀತಲ ಸ್ಪರ್ಶ
ಕ್ಕಿಂತಲೂ ಹೆಚ್ಚು ಸುಖಕೊಡುತ್ತಿದೆ; ಮಲಯವತಿಯ ಮಾತೂ ಹಾಗಿರಲಿ;
ಚಿಕ್ಕಂದಿನಲ್ಲಿ ತಾನು ತಾಯ ತೊಡೆಯಲ್ಲ ಹಾಯಾಗಿ ಮಲಗಿದ್ದಾಗ ಕೂಡ
ಈ ಸುಖ ತನಗೆ ಲಭಿಸಲಿಲ್ಲ__ಎಂದು ಈ ಸಂದರ್ಭದಲ್ಲಿ ಜೀಮೂತ
ವಾಹನನು ಹೇಳುವುದನ್ನೂ ಗಮನಿಸಬೇಕು.
ಆದರೆ ಜೀಮೂತವಾಹನನಲ್ಲ ಉದ್ದಕ್ಕೂ ಕಾಣಬರುವ ಭಾವವು
ತೃ ಪ್ಹಾಕ್ಟಯಪೆನ್ನುವುದಕ್ಕಿಂತ ಅದು ಪರೋಪಕಾರದ ಪರಮೋತ್ಸಾಹ
ವೆಂದೂ ಅದರ ಸಲುವಾಗಿ ಅವನು ಮಿಕ್ಕೆಲ್ಲ ಸುಖವನ್ನೂ ಕಡೆಗಣಿಸಿ
18 ನ ತಥಾ ಸುಖಯತಿ ಮನ್ಯೇ ಮಲಯವತೀ ಮಲಯಚೆಂದನರಸಾರ್ದಾ |
ಅಭಿವಾಂಛಿತಾರ್ಥಸಿದ್ಮೈಿ ವಧ್ಯಶಿಲೇಯಂ ಯಥಾ ಸೃಷ್ಟಾ!
ಆಥವಾ ಕಿಂ ಮಲಯವತ್ಯಾ....
ಶಯಿತೇನ ಮಾತುರಂಕೇ ವಿಸ್ರಬ್ಧಂ ಶ್ರೊಶವೇ ನ ತತ್ ಪ್ರಾಪ್ತಂ |
ಲಬ್ಮಂ ಸುಖಂ ಮಯಾಸ್ಯಾ ವಧ್ಯಶಿಲಾಯಾ ಯದುತ್ಸಂಗೇ॥ಔ (17, ೨೨-೨೩).
೪೧೬ ಭಾರತೀಯ ಕಾವ್ಯಮಾಮಾಂಸೆ
ತ್ಯಾಗಮಾಡಲು ಸಿದ್ಧನಾದನೆಂದೂ ಹೇಳುವುದು ಕೆಚ್ಚು ಉಚಿತವಲ್ಲವೆ ?
ಜೀಮೂತವಾಹನನು ಸರ್ವಸಂಗಪರಿತ್ಯಾಗ ಮಾಡಿದ ಸಂನ್ಯಾಸಿಯೇನೂ
ಅಲ್ಲ. ರಾಜ್ಯದಲ್ಲಾಗಲಿ ಮಲಯವತಿಯಲ್ಲಾಗಲಿ ಇವನಿಗೆ ಎಮುಖತೆಯೂ
ಇಲ್ಲ. ನಾಟಕದ ಕೊನೆಯಲ್ಲ ಇವನು ಪ್ರೇಯಸಿಯನ್ನು ಮತ್ತೆ ಕೂಡು
ತ್ತಾನೆ; ಚಕ್ರವರ್ತಿ ಪದವಿಯನ್ನು ಪತೆಯುತ್ತಾನೆ* ಈತನು
ಈ ಜನ್ಮ ದಲ್ಲನ್ನೂ ಬೋಧಿಸತ್ತ್ವ, ಬುದ್ಧನು ಎಂಬುದನ್ನು ಮರೆಯ
ಬಾರದು. " ದಶರೂಪಕ 'ದ ಟೀಕೆಯಲ್ಲಿ ಧನಿಕನು ಹೂಡುವ ಆಕ್ಷೇಪಣೆಯ
ಸಾರವೂ ಇಷ್ಟೇ. ಒಬ್ಬನೇ ವ್ಯಕ್ತಿಯಲ್ಲಿ ವಿಷಯಾನುರಕ್ತಿ, ವಿಷಯವಿರಕ್ತಿ
ಇವೆರಡೂ ಹೇಗೆ ಒಟ್ಟಿಗೇ ಇರುತ್ತವೆ? ಜೀಮೂತವಾಹನನಲ್ಲ ದಯಾ
ವೀರದ ಉತ್ಸಾಹವೇ ಸ್ಥಾಯಿ ಎಂದು ಅವನು ನಿರೂಪಿಸುತ್ತಾನೆ.
ಮೇಲಿನ ಅಕ್ಷೇಪಣಿಯ ತಿರುಳನ್ನು ಅಭಿನವಗುಪ್ತನು ಬಲ್ಲನು.
ಅಭಿನವಭಾರತಿಯ ಶಾಂತರಸಪ ಥೈ ಕರಣದಲ್ಲ ಅವನು ನಾಗಾನಂದದ
ವಿಚಾರವನ್ನು ಅಲ್ಲಲ್ಲೇ ಎತ್ತಿದ್ದಾನೆ. ಈ ನಾಟಕದಲ್ಲ ಶಾಂತರಸವು
ಪುಪ್ತಿ ಗೊಂಡಿದೆಯೆಂಬ ಅಭಿಪ್ರಾಯದ ಕಡೆಗೇ ಅವನ ವಿವೇಚನೆ ಹೆಚ್ಚಾಗಿ
ಓಲುತ್ತದೆ. ಅದರೆ ಅಭಿನವಗುಪ್ತನೇ ಪ್ರೆತಿಪಾದಿಸಿರುವಂತೆ, ತಮವು
ಅಂತ್ಮದಲ್ಲ ಸರ್ವಚಿತ್ತವೃ ವೃತ್ತಿಗಳ ಪ ಗಳ ಪ್ರದ್ಧ ೦ಸ, ಅದರ ರ ಸ್ವರೂಪವು " ಆತ್ಮ
ಜ್ಞಾ ನೆ. «ಜೀಮೂತವಾಹನನು ಯ.ತಿಯಲ್ಲದಿದ ದರೂ ಅವನಲ್ಲಿ ತತ್ತ ವೆ
ಜಾ ್ಲಾ ನವುಂಚೇ 6 ಉಂಟು. ಸ್ವಾರ್ಥದ ಉದೆ ೀತವಿಲ್ಲದೆ ಪರಪಿತಸಾಧನೆ
ಗಾಗಿ ಉಪದೇಶದಾನಾದಿಗಳಿಂದ ತೊ! ಮೊದಲುಗೊಂಡು ಡು ದೇಹತ್ಯಾ ಗದವರೆಗೂ
ಏನೇನು ಕಾರ್ಯಾ! ಚರಣಿಯುಂಟ್ಟೋ 'ಅದ್ದೆವೂ ಅತ್ವ: 'ಆತ್ತತತ_ ತತ ತ್ರ್ಯಜ್ಞಾ: ನವನ್ನು
ಪಡೆಯದವರಲ್ಲ ೩ ಸಂಭಾವ ಶವೇ ಅಲ್ಲ'' ಎಂದು ಸು ಅಭಿನವಗುಪ್ತ. ನು ವಾದಿಸು
ತ್ತಾ ಷಿ ' ಇದನ್ನು ಪೂರ್ಣವಾಗಿ ಒಪ್ಪಬಹುದೆ ; ಜೀಮೂತವಾಹನನಲ್ಲಿ
ಆತ್ಮಜ್ಞಾ. ವೆ ಪ್ರಧಾನವಾದ ಶಮಭಾವವು ಗೋಚರಿಸುತ್ತೆಡೆಯೆ ; ಅವನಲ್ಲಿ
ಜವ ಒಂದುವೇಳೆ ನಾಯಕನ ಮರಣದಲ್ಲಿಯೇ ಮುಗಿದಿದ್ದು ಅದಕ್ಕೆ ತಕ್ಕಂತೆ
ಮಿಕ್ಕ ಅಂಶಗಳಲ್ಲೂ ಮಾರ್ಪಾಡುಗಳಾಗಿದ್ದರೆ ಶಾಂತಂಸವೇ ಇದರಲ್ಲಿ ಪ್ಪ ಕಾಶ *ಫಡೆಯು
ತ್ತಿದಿ ತೋ ಏನೋ. ಅದರೆ ನಾಟಕದ ಈಗಿನ ರೂಪದಲ್ಲಿ ಇಂಥ ಊಹಾಪೋಹದಿಂದ ಫಲ
ಕಡಮೆ.
2 ದಶರೂಪಕ, ಪು, ೯೩.
2! ಅಭಿನವಭಾರತೀ, 1, ಪು. ೩೩೯.
೨೪. ಶಾಂತರಸ ೪೧೭
ಮುಖ್ಯವಾಗಿ ಕಾಣಬರುವುದು ವಿಷೆಯವಿಮುಖವಲ್ಲದ ಉಜ್ಜ ಪಲಿವೂ ವಿಶ್ಯ
ವ್ಯಾಪಿಯೂ ಆದ ದಯೋತ್ಸಾಹವಲ್ಯವೆ--ಎಂಬುದನ್ನು ಸಹೃದಯರ ವಿಷೇ
ಚನೆಗೇ ಬಿಡುವುದು ಮೇಲು. ಪರೋಪಕಾರೇಚ್ಛೆ ಯ ಉತ್ಸಾಹವು
ಶಾಂತರಸಕ್ಕೆ ಒ೦ದು ಸಂಚಾರಿಭಾವ ಮಾತ್ರ; ಅದೇ ಶಾಂತದ ಸ್ಥಾಯಿ
ಯಲ್ಲ ಎಂಬುದನ್ನೂ ಇಲ್ಲಿ ಜ್ಞಾಪಿಸಬಹುದು.*
ಕೊನೆಯಲ್ಲಿ ಒಂದು ಮಾತು. ನಾಗಾನಂದದ ಮುಖ್ಯರಸವು
ಶಾಂತವಾಗಿರಲಿ ಅಲ್ಲದಿರಲಿ, ಇದೊಂದರ ನಿರ್ಣಯದ ಮೇಲೆಯೇ,
ಶಾಂತರಸವುಂಟೆ, ಅದನ್ನು ಕಾವ್ಯನಾಟಕಗಳಲ್ಲಿ ಪ್ರಧಾನವಾಗಿ ಪರಿ
ಪೋಪಿಸ.ವುದು ಸಾಧ್ಯವೆ ಎಂಬುದರ ನಿರ್ಣಯವು ಸರ್ವಾತ್ಮನಾ ಅವ
ಲಂಬಿ ಕುವುದಿಲ್ಲ. ಅದೇ ಬೇರೆಯ ಪ್ರಶ್ನೆ. ಅದರ ಎರಡು ಭಾಗಗಳಿಗೂ
«ಹೌದು'' ಖಂಬುದೇ ಖಚಿತವಾದ ಉತ್ತರವೆಂದು ಈ ಅಧ್ಯಾಯದಲ್ಲ
ಆಗಲೆ ನೋಡಿದ್ದೇವೆ.
೫ ನಾಗಾನಂದ ನಾಟಕಕ್ಕೆ ವ್ಯಾಖ್ಯಾನ ಬರೆದಿರುವ'ಶಿವರಾಮನು ಪ್ರಸಕ್ತ ಸಮಸ್ಯೆ
ಯನ್ನು ಉತ್ತಮ ರೀತಿಯಲ್ಲ ವಿವೇಚನೆ ಮಾಡಿದ್ದಾನೆ. (ತಿರುವೇಂದ್ರಂ ಮುದ್ರಣ,
ಪು ೧೫-೨೧)
“ಶಾಂತೋ ವಾಸ್ತು ವೀರೋ ವಾ..... ದಯೋತ್ಪಾಹಸ್ಯ ವಿಷಯೇಪೃನಾಸ್ಥಾ
ಧರ್ಮಾದಿಷು ನಿರ್ಬಂಧಃ, ಅನ್ಯತ್ರ ವಿಷ ಖನಿವೃತ್ತಿಃ ಮೈೌತ್ರ್ಯಾದಿನಿರ್ಬಂಧ ಇತಿ ದಯೋ
ತ್ಲಾಹತಮಯೋಃ ನಾತೀವ ಭೇದಃ '' ಎಂದು ಅವನ ಅಭಿಪ್ರಾಯ.
KM. 2?
೨೫. ಔಚಿತ್ಯ
ಒಂದು ಕೃತಿಯನ್ನು ಕುರಿತು ವಿಚಾರಮಾಡುವಾಗ, ಅದರ ಕಥಾ
ವಸ್ತು, ಪಾತ್ರಗಳು, ಶೈಲಿ (ಅಥವಾ ರೀತಿ) ಈ ಮೂರನ್ನೂ ಪರಿಶೀಲಿ
ಸುವುದು ಈಗಿನ ಪದ್ಧ ತಿಯಾಗಿದೆ. ಎಷೊ ಸೀ ಷೇಳೆ ಕೃತಿವಿಮರ್ಶೆ
ಇಪ ಕ್ಕೇ ನಿ೦ ತುಬಿಡುತ. ದೆ. ಆದರೆ ಇವಕ್ಕೆಲ್ಲ ನಿಯಾಮಕ ತ ತತ್ತ್ವವು ರಸ.
ಪ್ರ ಮಿಕ್ಕ ಅಂಶಗಳಂತೆ ರಸವು ಕಣ್ಣಿ ಗೆ ಕಾಣುವುದಲ್ಲ, ದಲ, ಎಡಿತಕೆ ಸಿಕು ಡಿತಕ್ಕ ಸಿಕ್ಕುವು
ದಲ್ಬ; ಅದಕೆ ಇವೆಲ್ಲಕ್ಕೂ ಅದೇ ಜೀವಿತ; ಅದಿಲ್ಲದೆ ಕಾವ ವ್ಯವ ಇಲ್ಲ ಇಲ್ಲ.
ವಸ್ತು, ಪಾತ್ರ, ಶೈಲಿ ಇವೆಲ್ಲವೂ ಅಂಗಗಳು ; ರಸವು :"" ಅಂಗಿ. ''
ವಿಮರ್ಶೆಯ ಸೌಕರ್ಯಕ್ಕೋಸ್ಕರ ಇವುಗಳಲ್ಲಿ ಒಂದೊಂದನ್ನೂ ಬೇರೆ
ಬೇರೆಯಾಗಿ ವಿಂಗಡಿಸಿದರೂ, ಯಾವುದೊಂದಕ್ಕೂ ಪ ಕ್ರಧಾನ್ಯವಿಲ್ಲ,
ಸ್ವಾತಂತ್ರ್ಯವಿಲ್ಲ. ರಸದೃಪ್ಪಿಯಿಂದಲ್ಲೇ ಕವಿ ಇವನ್ನು ಪುಷಿ ಗೊಳಿಸಬೇಕು,
ಸಹೃದಯನು ಪರಿಭಾವಿಸಜೇಕು, ವಿಮರ್ಶಕನು ಪರಿಶೀಲಿಸಬೇಕು.
ಕಾವ್ಯದ ಸಾರವಾದ ರಸವು ಸರಿಯಾಗಿ ಅಭಿವ್ಯಕ್ತವಾಗಬೇಕಾದರೆ
ಕಾವ್ಯದ ಅಂಶಗಳಲ್ಲಿ ಪ್ರತಿಯೊಂದೂ ಅದಕ್ಕೆ ಅನುಗುಣವಾಗಿಯೇ ಇರ
ಬೇಕಷ್ಟೆ. " ಅಂಗಿ''ಗೂ ಅಂಗಕ್ಕೂ ಇರುವ ಈ ಅನುಗುಣ್ಯವೇ
ಹೊ೦ಂದಿಕೆಯೇ-- ಔಚಿತ್ಯ. ಕಾವ್ಯದ ಸಮಸ್ತಾಂಶಗಳ ಪರಿಶೀಲನೆಗೂ ಇದೇ
ಲ್ ಹ
ಒರೆಗಲ್ಲು... ವರ್ಣವಿನ್ಯಾಸವಾಗಲಿ, ತಬ್ಬಪ್ರಯೋಗವಾಗಲಿ, ಉಕ್ತಿ
ಚಮತ್ಕಾರವಾಗಲಿ, ಕಥಾವಸ್ತುವಾಗಲಿ, ಪಾತ್ರಪೋಷಣಿಯಾಗಲಿ,
ಬೇರೊಂದು ಅಂಶವಾಗಲಿ ರಸಕ್ಕೆ ಉಚಿತವಾಗಿದ್ದರೆ ಗ್ರಾಹ್ಯವಾಗು
ತ್ತದೆ; ರಸಕ್ಕೆ ಅನುಚತ: ನುಚತವಾಗಿತ್ದತೆ. ದೂಷ್ಯವಾಗುತ್ತದೆ. ತ
ಇವುಗಳ ಸು ಅನಇಔಚಿತ್ತ ೌಚಿ ತ್ರ್ಯವೇ ಇವುಗಳ ದೋಪ.. ಉದಾಹರಣಿಗೆ
ತೃಂಗಾರರಸದಲ್ಲಿ ತ್ರುತಕಟುವಾದ ವರ್ಣರಚನೆ_ದೋಪವಾಗುತ್ತದೆ,
1 “ ಮುಖ್ಯಾರ್ಥಹತಿರ್ದೋಪೋ ರಸಶ್ಕ ಮುಖ್ಯಃ,,,,,, ” ಎಂದು ಕಾವ್ಯಪ್ರಕಾಶ
ದಲ್ಲ (111, ೧) ಹೇಳಿರುವುದನ್ನು ನೆನಪಿಗೆ ತಂದುಕೊಳ್ಳಬಹುದು. "" ಹತಿಃ ಅಪಕರ್ಷಃ '
(ವೃತ್ತಿ).
೪೧೮
೨೫. ಔಚಿತ್ಯ ೪೧೯
ರಣದ್ರರಸದಲ್ಲಿ ಅದೇ ಗುಣವಾಗುತ್ತದೆ. ಹೀಗೆ ಗುಣ ದೋಷಗಳು
ರಸಾಹೇಕ್ಷವಾದವು.
ರಸದ ಸ್ವಭಾವ ಬಲು ಸೂಕ್ಷ್ಮ... ವ್ಯಂಜಕಸಾಮಗ್ರಿ ಉಚಿತವಾ
ಗಿದ್ಧಾಗ ಅದು ನಿರಂತರಧಾಕೆಯಾಗಿ ಪ ಅನಾಚಿತ್ರ ಭಪೇನಾ
ದರೂ ನಡುವೆ ತರೆ ಹಾಕಿದರೆ ಾಕಿದರೆ ಥಟ್ಟನೆ ಕತ್ತರಿಸಿ ಹೋಗುತ್ತದೆ: ಲ
ಅನಾಚಿತ್ಯಾದೃತೇ ನಾನ್ಯದ್ರಸದಂಗಳ್ಯ ಕಾರಣಂ |
ಪ್ರಸಿದ್ಸೌಿಚಿತ್ಯಬಂಧಸ್ತು ರಸಸ್ಯ್ಕೋಪನಿಷತ್ ಪರಾ (ಧೈನ್ಯಾ., ಪು ೧೪೫)
ನವನು ಬಿಟ್ಟರೆ ಶಸ ದಂಗೆ ಬೇರೊಂದು ಕಾರಣವಿಲ್ಲ ಮೋರ
ಶಾಸ್ತ್ರ ಸ್ಟ್ರಗಳಲ್ಲಿ ಪ್ರಸಿದ್ಧವಾಗಿರುವ ಔಚಿತ್ಯವನ್ಮರಿತು ಅಂಗಗಳನ್ನು ಅಳವಡಿ
ಸುಪ್ರದ್ದೇ₹ ರಸದ ಪರಮರಹಸ್ಯ,''
ಕಾವೆ ವು ವು ನಾಲ್ಕಾರು ವಾಕ್ಯಗಳಲ್ಲಿ, ಒಂದೆರಡ: ಪದ್ಧ ಗಳಲ್ಲಿ ಅಡಕ
ವಾಗಿರತಕ್ಕದ್ದಾದರೆ ಅದರ ರಚನೆ ಸುಲ್ಲಿ ತೊಡಕು ಕಡಮೆ. ರಸವನ್ನೇ
ನಿರಂತರವಾಗಿ “ದೃಷ್ಟಿ ಯಲ್ಲಟ್ಟುಕೊಂಡು ಅದಕ್ಕೆ ಹೊಂದದ ಅಂಗಗಳನ್ನು
ನಿರ್ದಾಕ್ಷಿಣ್ಯವಾಗಿ "ಹೊರದೂಡಿ ಕವಿ ರಚನೆ ಮಾಡಬಹುದು. ಈ ದೃಷ್ಟಿ
ಯಿಂದ ಮುಕ್ತ ಕದ ರಚನೆ ಸರಳ, ದೊಡ್ಡ ಕಾವ್ಯದಲ್ಲಿ (ಅಥವಾ ನಾಟಕ
ದಲ್ಲಿ) ವಸ್ತುರಚನೆಯೇ ಮೊದಲು ತೊಡಕಾಗುತ್ತದೆ. ಇನ್ನು ರಸನಿರ್ವಾಹ
ಕಪ್ಪ ವಾಗುವುದು ಏನಾತ್ಚರ್ಯ! ಆದರೆ ರಸದ ಏಕಾಗೆ 'ತೆಯನು ೩ ಸಾಧಿಸಿ
ದಲ್ಲದೆ ಕವಿಗೆ ನಿದ್ದಿಯಿಲ್ಲ. ಒಟ್ಟು ಪ್ರಬ೦ಧವೇ ರಸವ್ಯಂಜಕವಾಗುವಂತೆ
ಅವನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಇದು ಹೇಗೆ ಎಂಬುದರ
ವಿವರಣಿ "ಧ್ವನ್ಯಾಲೋಕ 'ದಲ್ಲಿ, ಬಲುಮಟ್ಟಿಗೆ ಮೂರನೆಯ ಉದ್ದೊ 8
ದಲ್ಲಿ, ವಿವರವಾಗಿ ಬಂದಿದೆ. ಅದರ ಸವಿಸ್ತರವಾದ ಅನುವಾದಕ್ಕೆ ಇಲ್ಲ
ಕೈಹಾಕದೆ, ಮುಖ್ಯವಾಗಿ ಕಥಾವಸ್ತು, ಅಲಂಕಾರಗಳು, ಅಂಗರಸ
ಗಳು- ಇವುಗಳ ವಿನ್ಯಾಸ ಹೇಗಿದ್ದರೆ ಉಚಿತವೆಂಬುದರ ದಿಗ್ಬರ್ತನವನ್ನು
ಮಾತ್ರ ಇಲ್ಲ ಮಾಡುತ್ತೇವೆ.
2 ರಾಜಶಲಖರನ ಈ ಕೆಳಗಿನ ಉಕ್ತಿ ಇಲ್ಲ ಜ್ಞಾಪಕಕ್ಕೆ ಬರುತ್ತದೆ:
ಮುಕ್ತಕೇ ಕವಯೋಕನಂತಾಃ ಸಂಘಾತೇ ಕವಯಃ ಶತಂ |
ಮಹಾಪ್ರಬಂಥೇ ತು 'ಕವಿರೇಕೋ ದೌ ದುರ್ಲಭಾಸ್ರಯಃ 1
ಕಾವ್ಯವಿಕಾಮಾಂಸಾ, ಪು. ೫೪)
27%
೪೨೦ ಭಾರತೀಯ ಕಾವ್ಯಮಾಮಾಂಹೆ
ಕಥಾವಸ್ತು ಪ್ರಸಿದ್ಧವಾದ ಆಕರ ಗ್ರಂಥಗಳಿಂದ ಬಂದದ್ದಾಗಿರಲಿ
ಕವಿಯೇ ಹೊಸದಾಗಿ ಕಲ್ಲಿಸಿದ್ದಾಗಿರಲಿ, ವಿಭಾವಾದಿಗಳ ಔಚಿತ್ಯದಿಂದ
ಮನೋಹರವಾಗಿರುವಂತೆ ಕಥಾಶರೀರವನ್ನು ರಚಿಸಬೇಕು. ವಿಭಾವಾದಿ
ಗಳ ವಿಷಯವನ್ನು ಹಿಂದೆಯೇ ಗಮನಿಸಿದ್ದೇವೆ. ಇವುಗಳ ಜೊತೆಗೆ ಅನಂದ
ವರ್ಧನನು ಕಥಾಪುರುಷರ ಪ್ರಕೃತಿಯನ್ನೂ (ಎಂದರೆ ಸ್ವಭಾವವನ್ನೂ)
ಗಣನೆಗೆ ತೆಗೆದುಕೊಳ್ಳುತ್ತಾನೆ. ಈ ಪ್ರಕೃತಿ ಉತ್ತಮ, ಮಧ್ಯಮ,
ಅಧಮ ಎಂದೂ, ದಿವ್ಯ, ಮಾನುಷ ಎಂದೂ ಬಗೆಬಗೆಯಾಗಿದೆ. ಒಬ್ಬರ
ನಡೆವಳಿಕೆಯಲ್ಲಿ ಉಚಿತವೆನ್ನಿಸುವ ಕಾರ್ಯಗಳು ಇನ್ನೊಬ್ಬರಲ್ಲಿ ಉಚತವೆನ್ನಿ
ಸುವುದಿಲ್ಲ. ಸಾಮಾನ್ಯನಾದ ಪ್ರದುವಿಗೆ ದೇವತೆಗಳ ಮಹಿಮೆಯನ್ನು
ಆರೋಪಿಸಿದರೆ ಅತ್ಯನುಚಿತವಾಗುತ್ತ ಡೆ, ಉತ್ತಮ ಪ್ರಕ್ಕತಿಯವನಲ್ಲಿ
ಅಧಮನಿಗೆ ಯೋಗ್ಯವಾದ ರತಿವರ್ಣನೆಯನ್ನು ಅನ್ವಯಿಸಲಾದೀತೆ ?
ಉತ್ಸಾಹ, ವಿಸ್ಮಯ ಮೊದಲಾದ ಭಾವಗಳ ವಿಷಯವೂ ಪೀಗೆಯೇ.
ಮಹಾಕವಿಗಳು ಕೂಡ ಇಲ್ಲಿ ಒಮ್ಮೊಮ್ಮೆ ತಪ್ಪು ಮಾಡಿರುವುದುಂಟು ;
ಅವರ ಪ್ರತಿಭೆಯ ತೇಜಸ್ಸಿನಲ್ಲಿ ಅದು ಮುಚ್ಚಿ ಹೋಗಿ ಕಾಣಿಸದೆ ಇರ
ಬಹುದು, ಅಪ್ಪೆ. ಕಥಾವಸ್ತುವನ್ನು ತಾನಾಗಿಯೇ ಕಲ್ಪಿಸಿದಾಗಲಂತೂ
ಅತಿಶಯವಾದ ಎಚ್ಚರಿಕೆಯಿಂದ ಕವಿ ಔಚಿತ್ಯವನ್ನು ಪಾಲಿಸಬೇಕು. ಅನವ
ಧಾನದಿಂದ ದಾರಿತಪ್ಪಿ ಜಾರಿದರೆ, ಅವ್ಯತ್ನನ್ನವೆಂಬ ಅಪಕೀರ್ತಿ ಅವನಿಗೆ
ತಟ್ಟುತ್ತದೆ.
ಪ್ರಸಿದ್ಧ ವಸ್ತುವನ್ನು ಆರಿಸಿಕೊಳ್ಳುವವನು ಗಮನಿಸಜೀಕಾದ
ಕೆಲವು ವಿಷಯಗಳುಂಟು. ಇತಿಹಾಸ, ಪುರಾಣ, ಕಥೆ ಮೊದ
ಲಾದವು ಅನೇಕವಾಗಿಷೆ. ಅವುಗಳೊಳಗೆ ಯಾವ ಕಥಾವಸ್ತುವಿನಲ್ಲಿ
ವಿಭಾವಾದಿಗಳ ಔಚಿತ್ಯವುಂಟೋ ಅದನ್ನು ಮಾತ್ರ ಕವಿ ಆರಿಸಿಕೊಳ್ಳ
ಬೇಕು. ಆರಿಸಿಕೊಂಡ ಇತಿವೃತ್ತದಲ್ಲಿ ರಸಕ್ಕೆ ಅನುಗುಣವಲ್ಲದ ಭಾಗವೇ
ನಾದರೂ ಇದ್ದರೆ ಅದನ್ನು ಕವಿ ತೊಲಗಿಸಿ, ರಸಕ್ಕೆ ಉಚಿತವಾದ ಕಥಾ
ಪ್ರಸಂಗವನ್ನು ತಾನೇ ಹೊಸದಾಗಿ ಜೋಡಿಸದೇಕು. ಅನೇಕ ಮಹಾ
ಕವಿಗಳು ಪೀಗೆ ಮಾಡಿದ್ದಾರೆ. 'ಶ್ರಾಕುಂತಲನಾಟಕ'ದಲ್ಲಿ ಕಾಳಿದಾಸನು
ತೈಂಗಾರರಸದ ಪರಿಪೋಷಕ್ಕಾಗಿ, ದುರ್ವಾಸರ ಶಾಪನನ್ನು ಹೆ .ಸದಾಗಿ
ಕಲ್ಪಿಸಿ, ಅದರ ಪ್ರಭಾವದಿಂದ ದುಷ್ಯೆಂತನು ಶಕುಂತಲೆಯನ್ನು ನಿರಾಕರಿಸಿ
೨೫. ಔಚಿತ್ಯ ೪೨೧
ದನೆಂದು ನಿರೂಪಿಸಿ, ಕಥಾಪ್ರವಾಹವನ್ನು ಹೊಸದಿಕ್ಕಿಗೇ ತಿರುಗಿಸಿರುವು
ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.: ""ಬರಿಯ ಇತಿವೃತ್ತವನ್ನೇ ಯಥಾ
ವತ್ತಾಗಿ ಕವಿ ನಿರೂಪಿಸಿಬಿಟ್ಟ ಮಾತ್ರಕ್ಕೆ ಏನೂ ಪ್ರಯೋಜನವಿಲ್ಲ.
ಹೇಗೂ ಪಿಂದಿನ ಇತಿಹಾಸದಲ್ಲಿಯೇ ಅದು ಆಗಲೇ ಸಿದ್ಧವಾಗಿಯೇ ಇರು
ತ್ತದೆ.'' « ರಸವನ್ನೇ ಗಮನದಲ್ಲಿಟ್ಟುಕೊಂಡು ಅದರ ಸಾಧನೆಗೆ ಉಪ
ರಣವಾಗಿ ಅವನು ಕಥೆಯನ್ನು ನಿರೂಪಿಸಬೇಕು.
ಇಲ್ಲಿ ಒಂದು ಎಚ್ಚರಿಕೆ. ರಾಮಾಯಣವೇ ಮೊದಲಾದ ಗ್ರಂಥ
ಗಳಲ್ಲ ರಸವು ಸಿದ್ಧ ರೂಪದಲ್ಲಿಯೇ ದೊರೆಯುತ್ತದೆ ; ಅದನ್ನು ಆಸ್ಚಾ
ದಿಸುವುದೊಂದು ಮಾತ ಮೇ ಉಳಿದಿರುವ ಕೆಲಸ. ಇಲ್ಲಿ ಕವಿ ಸ್ವಕಲ್ಪನೆ
ಯನ್ನು, ಅದರಲ್ಲೂ ಮೂಲರಸಕ್ಕೆ ವಿರೋಧವಾಗಿ, ಜೆರಸಬಾರದು.5
ಉದಾಹರಣಿಗೆ, ಕಥೆಯನ್ನು ಮಾರ್ಪಡಿಸುತ್ತೇನೆಂದು ಹೊರಟು ರಾಮ
ನನ್ನು ಧೀರಲಲಿತನಾಯಕನನ್ನಾಗಿ ಮಾಡಿ ಕೂರಿಸಿಬಿಟ್ಟರೆ ಎಷ್ಟೊಂದ್ಳು
ಅಸಮಂಜಸ!
ಕೆಲಮಂದಿ ಕವಿಗಳು ಪ್ರತಿಭೆಯನ್ನು ಉಚ್ಛೃಂಬಲವಾಗಿ ಹರಿಯ
ಬಿಟ್ಟರೆ, ಮತ್ತೆ ಕೆಲವರು ಶಾಸ್ತ್ರದ ಸೆರಗನ್ನೇ ಹಿಡಿದುಕೊಂಡು ಹೆಜ್ಜೆ ಹಾಕು
ತ್ತಾರೆ... ನಾಟ್ಯಲಕ್ಷಣಗ್ರಂಥಗಳಲ್ಲಿ ಕಥಾವಸ್ತುವನ್ನು "" ಸಂಧಿ''ಗಳಾ
ಗಿಯೂ, ಸಂಧಿಗಳನ್ನು ಮತ್ತೆ ಸಂದ್ಧಂಗಗಳಾಗಿಯೂ ವಿಂಗಡಿಸಿ,
ಇಂಥಿ೦ಥವು ಇಲ್ಲಿಲ್ಲ ಬರಬೇಕೆಂದು ವಿಧಿಸಿರುತ್ತಾರೆ. ಲಕ್ಷಣ ಗ್ರಂಥವಿರು
3 ಇಂಥ ಹೊಸ ಕಲ್ಪನೆ, ಮಾರ್ಪಾಡು ಮೊದಲಾದವನ್ನು ಕುಂತಕನು ಪ್ರಕರಣ
ಪಕ್ರತೆಯೆಂದು ಕರೆದು, ಹಲವು ಬಗೆಯ ಉದಾಹರಣಿಗಳನ್ನು ಕೊಟ್ಟಿದ್ದಾನೆ. ದುರ್ವಾಸರ
ಶಾಪದ ವೃತ್ತಾಂತವೂ ಇವುಗಳಲ್ಲ ಒಂದು. (ವಕ್ರೋಕ್ತಿಜೀವಿತ, ಪು. ೨೨೨ ರಂದೆ
ಮುಂದಕ್ಕೆ ನೋಡಿ.)
4 ೬ ನ ಹಿ ಕವೇರಿತಿವೃತ್ತಮಾತ್ರನಿರ್ವಹಣೀನ ಕಿಂಚಿತ್ಚ್ರಯೋಜನಂ. ಇತಿಹಾಸಾ
ದೇವ ತತ್ಸಿದ್ಯೇಃ''__ಧೃನ್ಯಾ. ಪು. ೧೪೮.
ಈ ಅಭಿಪ್ರಾಯವನ್ನು ಕುಂತಕನೂ ಅನುಮೋದಿಸುತ್ತಾನೆ ;
ನಿರಂತರರಸೋದ್ಗಾರಗರ್ಭಸಂದರ್ಭನಿರ್ಭರಾ ಃ |
ಗಿರಃ ಕವೀನಾಂ ಜೀವಂತಿ ನ ಕಥಾಮಾತ್ರಮಾಶ್ರಿತಾ 1
(ವಕ್ರೋಕ್ತಿಜೀವಿತ, ಪು. ೨೨೫.)
5 ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ |
ಕಥಾಶ್ರಯಾ ನ ತೆ ರ್ಯೋಜ್ಯಾ ಸ್ವೇಚ್ಛಾ ರಸವಿರೋಧಿನೀ! (ಧೃನ್ಯಾ. ಪು.೧೪೮)
—ಧೃನ್ಯಾ. ಲೋಚನವನ್ನೂ ನೋಡಿ.
೪೨೨ ಭಾರತೀಯ ಕಾವೃಮಾಮಾಂಸೆ
ವುದು ದಿಕ್ಟೂಚನೆಗೆಂದು ಕವಿ ತಿಳಿದುಕೊಳ್ಳದೆ, ಅದರ ನಿಯಮಗಳನ್ನು
ಅಕ್ಷರಶಃ ಪಾಲಿಸಿ ತನ್ನ ಕೃತಿಯನ್ನು ಸಲಕ್ಷಣವೆನ್ನಿಸಲು ಹೊರಟರೆ, ಅದು
ಒಂದೊಂದು ಬಾರಿ ಅವಲಕ್ಷಣವಾಗುವುದೂ ಉಂಟು. ಇದಕ್ಕೆ ಒಂದು
ನಿದರ್ಶನ " ವ್ಲೇಣೀಸಂಹಾರ' ದಂಥ ಪ್ರಖ್ಯಾತ ನಾಟಕದಲ್ಲಿಯೇ ದೊರೆ
ಯುತ್ತದೆ. ಇದರ ಎರಡನೆಯ ಅಂಕದಲ್ಲಿ, ದುರ್ಯೋಧನನು ತನ್ನ ಪತ್ನಿ
ಭಾನುಮೆತಿಯ ಬಳಿಗೆ ಬಂದು ಅವಳು ದುಃಸ್ವಪ್ನವೊಂದನ್ನು ಸಖಗೆ
ವರ್ಣಿಸಿ ಹೇಳುತ್ತಿರುವುದನ್ನು ತಪ್ಪಾಗಿ ಅರ್ಥಮಾಡಿಕೊಂಡು ಮೊದಲು
ಈರ್ಪ್ಯಾಪರವತನಾಗುತ್ತಾವೆ ; ಸತ್ಯಾಂತವನ್ನು ತಿಳಿದ ಬಳಿಕ ಅವ
ಳೊಂದಿಗೆ ವಿಹರಿಸಲು ಇಚ್ಛೆ ಪಡುತ್ತಾನೆ. ಭಾರತ ಮಹಾಯುದ್ಧ
ಪಾ ೨)ರಂಭವಾಗಿದೆ ; ಅದರ ಪೊಳಗು ಈ ಪ್ರಸಂಗವು ನಡೆಯುವಾಗ ಕೂಡ
ಕೇಳಿಬರುತ್ತಿದೆ. ಇಂಥ ಸಂದರ್ಭದಲ್ಲಿ ಹಿಂದಿನ ಕಥೆಗೆ ಸಂಬಂಧವಿಲ್ಲದ,
ಮುಂದಿನ ವೃತ್ತಾಂಶಕ್ಕೆ ಪ್ರಯೋಜನವಿಲ್ಲದ, ಈ ಪ್ರಣಯವಿಲಾಸವನ್ನು
ಭಟ್ಟನಾರಾಯಣನು ತಂದಿರುವುದು ಅತ್ಯನುಚಿತ. " ವಿಲಾಸ''ಷೆಂಬ 6
ಸಂಧ್ಯಂಗವನ್ನು ನಿರೂಪಿಸಲು ಈ ಸಂದರ್ಭವನ್ನು ಅವನು ಕಲ್ಪಿಸಿದ
ನೇನೋ.” ಆದರೆ ಪ್ರಸ್ತುತವಾದ ವೀರರಸದ ಭಂಗವೊಂದೇ
ಇದರ ಫಲ. : ಶಾಸ್ತ್ರದ ಅನುಸರಣಿ ರಸಕ್ಕೆ ಪೋಪಕವಾಗಬೇಕು ;
ವಿರೋಧಿಯಾಗಬಾರದು.
ಇನ್ನು ಕವಿಗಳಿಗೆ ಪರಮಪ್ರಿಯವಾದ ಅಲಂಕಾರಗಳ ಕಡೆಗೆ ತಿರು
ಗೋಣ. ಅಲಂಕಾರವನ್ನು ಕೇವಲ ವೈಚಿತ್ರ್ಯಕ್ಕಾಗಿ ಕವಿ ತರಬಹುದು,
ಅಥವಾ ರಸಕ್ಕೆ ಉಪಕಾರವಾಗಿ ಅದು ಬರಬಹುದು. ಎರಡನೆಯ
ಮಾರ್ಗವೇ ಶ್ರೇಯಸ್ಕರ. “ಅಲಂಕೃತೀನಾಂ ಶಕ್ತಾವಪ್ಯಾನುರೂಪ್ಯೇಣ
ಯೋಜನಂ.” (ಧ್ಯನ್ಯಾ 1% ೧೪ ) : ಅಲಂಕಾರರಚನೆ ಮಾಡುವ
ಶಕ್ತಿ ತನಗೆ ದೇಕಾದಪ್ಪಿದ್ದರೂ ಕವಿ ಅದನ್ನು ಪಿಡಿತದಲ್ಲಿಟ್ಟು ಕೊಂಡು
6 « ರತ್ಯರ್ಥೇಹಾ ವಿಲಾಸಃ ಸ್ಯಾತ್ ' (ದಶರೂಪಕ |. ೩೨.) ಇದು " ಪ್ರತಿ
ಮುಖ'' ಸಂಧಿಯ ಮೊದಲನೆಯ ಅಂಗ.
7 ವೇಣೀಸಂಹಾರದಿಂದ ಈ ನಿದರ್ಶನವನ್ನು ಅನಂದವರ್ಧನನೇ ಕೊಡುತ್ತಾನೆ
(ಧ್ವನ್ಯಾ., ಪು. ೧೫೦), ಯುಕ್ತವಲ್ಲದ ಕಡೆಗಳಲ್ಲಿ ಒಂದು ರಸವನ್ನು ತರುವುದು ಸರಿ
`ಯಲ್ಲವೆಂದು ಹೇಳುವಾಗಲೂ ಮತ್ತೆ ಈ ನಿದರ್ಶನದ ಕಡೆಗೇ ಅನಂದವರ್ಧನನು ಬೆರಳನ್ನು
ತೋರಿಸುತ್ತಾನೆ (ಧೃನ್ಯಾ., ಪು. ೧೬೩).
೨೫. ಔಚಿತ್ಯ ೪೨೩
ರಸಕ್ಕೆ ಅನುರೂಪವಾಗುವಂತೆ ಅವುಗಳನ್ನು ಯೋಚಿಸಬೇಕು. ಆಗ
ಮಾತ್ರ ಅಲಂಕಾರವೆಂಬ ಹೆಸರು ನಿಜವಾಗಿಯೂ ಅನ್ಯರ್ಥವಾಗುತ್ತದೆ.ಃ
ತಬ್ಮಾಲಂಕಾರಗಳ ವಿಷಯದಲ್ಲಂತೂ ಹೆಚ್ಚು ಎಚ್ಚ ರಿಕೆ ಆವಶ್ಯಕ.
ಅನುಪ್ರಾಸವನ್ನೇ ಗಮನಿಸೋಣ. ಒಂದು ಅಥವಾ ಅನೇಕ ವ್ಯಂಜನಗಳಿಗೆ
ಪುನರುಕ್ತಿಯುಂಟಾದರೆ ಅನುಪ್ರಾಸಪೆನಿಸಿಕೊಳ್ಳುತ್ತದೆ ; ಈ ಪುನರುಕ್ತಿ
ಯಲ್ಲ ಮಿತಿ ಅತ್ಯಾವಶ್ಯಕ. ಒ೦ದೇ ವ್ಯಂಜನಪೇ ಪದ್ಯದ ಉದ್ದಕ್ಕೂ,
ಅದರಲ್ಲೂ ಶೃಂಗಾರವು ಪ್ರಧಾನರಸವಾಗಿದ್ದಾಗ, ಆವೃತ್ತ ವಾದರೆ ಹೊಗ
ಸಿನ ಬದಲು ಬೇಸರವೇ ಪ್ರಯೋಜನವಾಗುತ್ತದೆ; ರಸ ಹಾರಿಹೋಗು
ತ್ತದೆ. " ಒಂದೇ ರೂಪದ ವರ್ಣಾವೃತ್ತಿಯನ್ನು ಬಿಟ್ಟು ವೈವಿಧ್ಯದ
ಹೊಗಸುಳ್ಳ ಅನುಪ್ರಾಸವನ್ನು ತಂದರೆ ದೋಪವಾಗುವುದಿಲ್ಲ.'' 9
ಹಿತವಾದ ಅನುಪ್ರಾಸಕ್ಕೆ ಒಂದು ಉದಾಹರಣಿಯನ್ನು ಕೊಡ
ಬಹುದು:
ತಡಿಖಾಉ ಬಂದು ತೆಂಕಣ
ಬಡಗಣ ಕಡಲೊಂದನೊಂದು ತಾಗುವ ತೆಅಬಂ |
ಬಿಡೆ ಗಜಜು ಮಿಕ್ಕು ತಕ್ಕಿಂ
ಪಡೆಯೆರಡುಂ ದೆಸಗೆ ಮಸಗಿ ತಾಗಿದುದೆತ್ತಂ॥ (ಕಬ್ಬಿಗರ ಕಾವ, ೨೬೪)
ಇಲ್ಲ ತ, ಡ, ಬ, ಸ ಮೊದಲಾದ ಅನೇಕ ವ್ಯಂಜನಗಳ ಮಿತವಾದ ಪುನರಾ
ವೃತ್ತಿ ಒಂದರೊಡನೊಂದು ಹೆಣೆದುಕೊಂಡು ಬಂದಿರುವುದರಿಂದ ಪದ
ಕಿವಿಗೆ ಇಂಪಾಗಿ ಕೇಳಿಸುತ್ತದೆ.
ಯಮಕಾಲಂಕಾರವನ್ನಂತೂ ಕವಿ ಎಷ್ಟು ದೂರದಲ್ಲಟ್ಟಿದ್ದ ರೈ
ಅಷ್ಟು ಒಳ್ಳೆಯದು. ತೃ೦ಗಾರದಲ್ಲಿ, ಅದರಲ್ಲಯೂ ವಿಪ್ರಲಂಭ ಶೃಂಗಾ
ರದಲ್ಲ, ತನಗೆ ಶಕ್ತಿಯಿದ್ದರೂ ಕವಿ ಯಮಕವನ್ನು ತರಲೇ ಕೂಡದು.
8 ಧೈನ್ಯಾತ್ಮಭೂತೇ ಶೃಂಗಾರೇ ಸಮಾಕ್ಷ್ಯ ವಿನಿವೇಶಿತ ಃ |
ರೂಪಕಾದಿರಲಂಕಾರವರ್ಗ ಏತಿ ಯಥಾರ್ಥತಾಂ! (ಧೃನ್ಯಾ., i. ೧೮)
9 “ ಏಕರೂಪತ್ಪಾನುಬಂಧಂ ತ್ಯಕ್ತ್ವಾ ವಚಿತ್ರಾನುಪ್ರಾಸೋಷನುಬಧ್ಯಮಾನೋ
ನ ದೋಪಾಯ.” (ಧೃನ್ಯಾ. ಲೋಡನ, ಪು, ೮೫)
೪೨೪ ಭಾರತೀಯ ಕಾವ್ಯಮಾಮಾಂಸೆ
ಅದರಿಂದ ದೊಡ್ಡ ಪ್ರಮಾದ. ಯಮಕವು ಬಂದ ಕಡೆಯಲ್ಲೆ ಲ್ಲಾ
ತಾನೇ ಪ್ರಧಾನವಾಗಿ ಗಮನವನ್ನು ಸೆಳೆಯುತ್ತದೆ. ಅಪ್ರಯತ್ನವಾಗಿ
ಕವಿಯೂ ಅದನ್ನು ಕಲ್ಪಿಸಲಾರನು. ಅಂತೂ ಯಮಕದಿಂದ ರಸಕ್ಕೆ
ಎಚ್ಛೇದವೊದಗುವುದು ಖಂಡಿತ.
ಅಲಂಕಾರಗಳನ್ನು ಹದವರಿತು ಉಪಯೋಗಿಸುವುದು ಹೇಗೆ 1
ಧ್ವನ್ಯಾಲೋಕದ ಈ ಪಂಕ್ತಿಗಳು ಉತ್ತರಕೊಡುತ್ತವೆ :
ವಿವಕ್ಷಾ ತತ್ಪರತ್ವೇನ ನಾಂಗಿತ್ರೇನ ಕಥಂಚನ |
ಕಾಲೇ ಚ ಗ್ರಹೆಣತ್ಕಾಗೌ ನಾತಿನಿರ್ವಹಣ್ಕಿಪಿತಾ ॥
ನಿರ್ವ್ಯ್ಯೂಢಾವಪಿ ಚಾಂಗತ್ಯೇ ಯತ್ನೇನ ಪ್ರತ್ಯವೇಕ್ಷಣಂ |
ರೂಪಕಾದೇರಲಂಕಾರವರ್ಗಸ್ಕಾಂಗತ್ವಸಾಧನಂ ॥ (;;: ೧೯-೨೦)
ಇದರ ತಾತ್ಪರ್ಯ ಇಷ್ಟು: ರಸತತ್ಸರವಾಗಿರುವಂತೆಯೇ, ಎಂದರೆ
ರಸಕ್ಕೆ ಪೋಪಕವಾಗಿರುವಂತೆಯೇ, ಅಲಂಕಾರವನ್ನು ರಚಿಸಬೇಕು ;
ತಾನೇ ಪ್ರಧಾನವಾಗುವಂತೆ ಕಲ್ಪಿಸಬಾರದು. ಸಮಯವರಿತು ತರ
ಬೇಕು, ಸಮಯವರಿತು ಬಿಡಬೇಕು. ಅದನ್ನು ತಂದಾಗಲೂ ಅತಿಯಾಗಿ
'ಬೆಳಸಬಾರದು. ಒಂದು ವೇಳೆ ವಿಸ್ತರಿಸಿದರೂ ರಸಕ್ಕೆ ಅಂಗವಾಗಿಯೇ
ವಿಲ್ಲುವಂತೆ ನೋಡಿಕೊಳ್ಳಬೇಕು.
ಈ ಎಲ್ಲ ಬಗೆಗಳಿಗೂ ಉದಾಹರಣಿ ಕೊಡುತ್ತಾ ಹೋಗದೆ,
ಅಲಂಕಾರವು ಹೇಗೆ ರಸೆಪೋಷಕವಾಗುವುದೆಂಬುದಕ್ಕೆ ಏರಡು ನಿದರ್ಶನ
ಗಳನ್ನು ಮಾತ್ರ ತೋರಿಸುತ್ತೇವೆ. ಮೊದಲನೆಯದು ಜನ್ನನ " ಯಶೋ
ಧರ ಚರಿತೆ'ಯಿಂದ ಆರಿಸಿದ್ದು. ಅಪ್ಪವಂಕನ ಗಾಯನಕ್ಕೆ ಉಪಾಯನ
ವಾಗಿ ತನ್ನ ಹೃದಯವನ್ನೇ ತೆತ್ತಿದ್ದ ಅಮೃತಮತಿಯ ಬಳಿಗೆ ಅವಳ ದೂತಿ
ಹಿಂದಿರುಗಿ ಬಂದು ತಾನು ಕಂಡ ಅವನ ಘೋರವಿಕಾರ ರೂಪವನ್ನು
10 ಧ್ವನ್ಯಾತ್ಮ ಭೂತೇ ಶೃಂಗಾರೇೇ ಯಮಕಾದಿನಿಬಂಧನಂ |
ಶಕ್ತಾವಪಿ ಪ್ರಮಾದಿತ್ವಂ ವಿಪ್ರಲಂಭೇ ವಿಶೇಷತಃ ॥
(ಧೃನ್ಯಾ., i ೧೬)
ಯಮಕದಲ್ಲ ಸ್ಮಾನನಿಯಮಕ್ಕೆ ಒಳಪಟ್ಟ ವರ್ಣವಿನ್ಯಾಸ ವೈೊಚಿತ್ರ್ಯವನ್ನು ಬಿಟ್ಟರೆ
ಬೇರೆ ಯಾವ ಹೊಗಸೂ ಐಲ್ಲದಿರುವುದರಿಂದ ಅದರ ವಿಚಾರವನ್ನು ತಾನು ಬೆಳಸುವುದಿಲ್ಲ
ವೆಂದು ಕುಂತಕನು ತನ್ನ ಅಭಿಪ್ರಾಯವನ್ನು ಖಚಿತವಾಗಿಯೇ ತಿಳಿಸುತ್ತಾನೆ (ವಕ್ರೋಕ್ತಿ
ಜೀವಿತ, 1. ಒ ಮತ್ತು ವೃತ್ತಿ).
೨೫. ಔಚಿತ್ಯ ೪.೨೫
ಬಗೆಬಗೆಯಾಗಿ ವರ್ಣಸುತ್ತಾಳೆ. ಅದರೆ ಅಮೃತಮತಿಯ ಮನಸ್ಸು
ಅವನಲ್ಲಿ ಒಮ್ಮೆ ನಟ್ಟದ್ದು ಮತ್ತೆ ಹಿಂಕಿರುಗಲಾರದೆ ಹೋಗಿದೆ ;
ಎಂದೊಡೆ ದೂದವಿಗವಳಿ೦-
ತೆಂಡಳ್ ಗರಗರಿಕೆ ಕೊರಲೊಳೀಕ್ಷಣದೊಳ್ ವಾ.।
ರ್ಬಿಂದು ವಿಂಡುಕರ್ದೆಯೊಳೊದವೆ ಪು.
೪೦ದನ ಕಣಿಗಟ್ಟ ನಿಂದ ವರಹರಿಣಿಯ ವೋಲ್ ॥ (ಸಂಗ್ರಹ, ;;. ೨೩)
ಪ್ರೇಮದ ಉದ್ರಿಕ್ತ ಸ್ಥಿತಿಯಿಂದ ಅಮೃತಮತಿಗೆ ಒದಗಿರುವ
ಅಸಹಾಯ ಸ್ಥಿತಿಯನ್ನೂ ಅದರಲ್ಲಿ ಅವಳು ಕೈಕೊಂಡ ಧೃತಿಯನ್ನೂ
ಇಲ್ಲಿಯ ಉಪಮೆ ಎಷ್ಟು ಚನ್ನಾಗಿ ವ್ಯಕ್ತಪಡಿಸುತ್ತದೆ !
ಇನ್ನೊ೦ದು ರಮ್ಯವಾದ ಉಪಮೆಯನ್ನು "ಕುಮಾರವ್ಯಾಸ ಭಾರತ”
ದಿಂದ ಉದಾಸರಿಕಬಹುದು. ಕುರುಸೇನೆಯನ್ನೆ ದುರಿಸಿ ಯುದ್ಧಮಾಡು
ತ್ತಿರುವಾಗ ಅರ್ಜುನನ ರಥದ ಕುದುರೆಗಳು ಬಲು ಬಳಲುತ್ತಪೆ. ಆಗ
ಅವನು ರಣರಂಗದಲ್ಲೇ ಬಾಣದಿಂದ ನೆಲವನ್ನು ಸೀಳಿ ಉದಕವನ್ನು ಬರಿಸಿ
ಕುದುರೆಗಳನ್ನು ತಣಿಸುವನು. ಕೃಷ್ಣನೂ ಅವನೂ ಶ್ರಮಪರಿಹಾರ
ಮಾಡಿಕೊಳ್ಳಲು ಕೊಳಕ್ಕೆ ಇಳಿಯುವರು. ಆಗ ಕುರುಸೇನೆ ಸುಮ್ಮ
ವಿದ್ವಿತೆ ?—
ಮೊಗಕೆ ಭಾಣವ ಕಟ್ಟ ನೆಳಲಲಿ
ಬಿಗಿದು ಫಲುಗುಣ ಸಹಿತ ಕೊಳನನು
ನಗುತ ಹೊಕ್ಕನು ಮೋಡುತಿದ್ದುದು ಕೂಡೆ ಕುರುಸೇನೆ !
ಬಿಗಿದ ಕತ್ತಲೆ ದೂರದಲಿ ದೀ_
ವಿಗಯ ಸುತ್ತಲು ಕಟ್ಟಿ ನಿ೦ದವೊ.
ಲಗಣಿತದ ಪ್ರತಿಸುಧಟರಿದ್ದುದು ನರನ ಬಳನಿನಲಿ॥
(ದ್ರೋಣಪರ್ವ, x. ೩೬ )
ಕೃಷ್ಣಾರ್ಜುನರ ಅನುಪಮತೇಜಸ್ಪನ್ನು ಸೂಚಿಸಲು ಇದಕ್ಕಿಂತ
ಒಳ್ಳೆಯ ಹೋಲಿಕೆ ದೊರೆಯಲಾರದು. ಕೌರವೆಸೇನೆಯ ವೀರಭಟರು
ಈ ಸಮಯದಲ್ಲಿ ಮೇಲೆ ಬೀಳದೆ ಹೇಗೆ ಸುಮ್ಮನಿದ್ದರೆಂಬುದು ಈ ಹೋಲಿ
ಕೆಯಿಂದಲ್ಲೇ ನಮಗೆ ಅರ್ಥವಾಗತಕ್ಕದ್ದು.
ಕವಿ ರಸದ ಮೇಲೆ ಗಮನವಿಡದೆ ಅಲಂಕಾರದಲ್ಲೇ ಮನನಟ್ಟು
ರಚನೆಮಾಡಿರುವುದಕ್ಕೆ ನಿದರ್ಶನವಾಗಿ ಅಭಿನವಗುಪ್ತನು ಕೊಟ್ಟಿರುವ
೪೨೬ ಭಾರತೀಯ ಕಾವ್ಯಮಾಮಾಂಸೆ
ಪದ್ಯವನ್ನು ಇಲ್ಲಿ ಉದಾಹರಿಸಬಹುದು. " ಯಥಾ ಸ್ವಪ್ನವಾಸವದ
ತ್ತಾಖ್ಯೇ ನಾಟಕೇ'' ಎಂದು ಅವನು ಇದನ್ನು ಪ್ರವೇಶಗೊಳಿಸುತ್ತಾ ನೆ.
ಸಂಚಿತಪಕ್ಷ ಒಕಪಾಟಂ ನಯನದ್ವಾರಂ ಸ್ವರೂಪತಡನೇನ |
ಉದ್ರಾಟ್ಯ ಸಾ ಪ್ರವಿಷ್ಟಾ ಹೃದಯಗೃಹಂ೦ ಮೇ ನೃಪತನೂಜಾ॥
(ಧೃನ್ಯಾ. ಲೋಚನ, ಪು. ೧೫೨)
[ಕೂಡಿದೆವೆಗಳ ಕದದ ಕಣ್ಣ ಬಾಗಿಲನು
ತನ್ನ ರೂಪಿನ ಕೀಲಿಕ್ಕೆಯಿಂದ ತೆರೆದು
ಒಳಹೊಕ್ಕಳವಳೆನ್ನ ಹೃದಯಸದನವನು
ನೆಟ್ಟನೆ ನೃಪಾಲತನಯೆ.]
ಇಲ್ಲಿ ರೂಪಕಾಲಂಕಾರದ ಚಮತ್ಕಾರವು ತಾನೇತಾನಾಗಿ ವಿಜೃಂಭಿಸಿ
ತೃಂಗಾರರಸವನ್ನು ಪಿಂದಕ್ಕೆ ನೂಕಿಬಿಟ್ಟಿದೆ. ರಾಜಪುತ್ರಿಯ ರೂಪವು
ಬೀಗದಕ್ಕೆಯೆಂದೂ ಅದರಿಂದ ಅವಳು ನಖುನದ್ಯಾರದ ಕದವನ್ನು ತೆರೆದ
ಳೆಂದೂ ಕಲ್ಪಿಸಿರುವುದರ ಪರಿಭಾವನೆಯಲ್ಲೇ ಮನಸ್ಸು ತಡೆದುನಿಲ್ಲುತ್ತದೆ.
ಹೀಗೆಂದ ಮಾತ್ರಕ್ಕೆ ಇಂಥ ರೂಪಣವು ಎಲ್ಲ ಕಡೆಗಳಲ್ಲೂ ಅನುಚಿತ
ವಾಗುವುದೆಂದು ಸರ್ವಥಾ ಅರ್ಥವಲ್ಲ. ಈ " ಸ್ಪಪ್ನವಾಸವದತ್ತ'ಕಾರನಿ
ಗಿಂತ ಹಿಂದೆಯೇ ಅಶ್ಯಫೋಪನು ಇದೇ “ಕ್ಲೀಲಿಕೈ''ಯ (ಸಾತಡನ,
ತಾಡ) ಹೋಲಿಕೆಯನ್ನು "ಬುದ್ಧಚರಿತ`ದಲ್ಲಿ ಪ್ರಯೋಗಿಸಿದ್ದನು. ಅದರೆ
ಆ ಸಂದರ್ಭವೇ ಬೇರೆ. ಮುಂದೆ ಬುದ್ಧನಾಗಿ ಲೋಕಕ್ಕೆ ಸದ್ಭರ್ಮವನ್ನು
ಬೋಧಿಸತಕ್ಕವನಾದ ಸಿದ್ಧಾರ್ಥನು ಶುದ್ಧೋದನನ ಮಗನಾಗಿ ಹುಟ್ಟಿ
ದ್ದಾನೆ ; ತಪೋಬಲದಿಂದ ಈತನ ಜನನ ವೃತ್ತಾಂತವನ್ನು ತಿಳಿದು ಅಸಿತ
ನೆಂಬ ಮಹರ್ಷಿ ಬಂದು ರಾಜನ ಸತ್ಕಾರವನ್ನು ಕೈಕೊಂಡು, ಶಿಶುವನ್ನು
ನೋಡುತ್ತಾನೆ; ಕಂಬನಿದುಂಬುತ್ತಾನೆ. ಆಗ ಪುತ್ರಸ್ನೇಹದಿಂದ
1 ಸೃಷ್ತವಾಸವದತ್ತ ವೆಂಬ ಹೆಸರಿನ ನಾಟಕವನ್ನು ಅಭಿನಪಗುಪ್ತನು ನೋಡಿದ್ದ
ನೆಂಬುದು ಈ ಅವತರಣಿಕೆಯಿಂದ ಸ್ಪಷ್ಟವಾಗುತ್ತದೆ. ಅದರೆ ಭಾಸಕವಿಯದೆಂದು ಈಗ
ಪುಡುರವಾಗಿರುವ ಅದೇ ಹೆಸರಿನ ನಾಟಕದಲ್ಲಿ ಈ ಪದ್ಯ ದೊರೆಯುವುದಿಲ್ಲ. ಅಭಿನವ
ಗುಪ್ತನು ನಾಟಕದ ಕರ್ತೃವಿನ ಹೆಸರನ್ನು ಹೇಳಿಲ್ಲವೆಂಬುದೂ ಇಲ್ಲ ಗಮನಿಸಬೇಕಾದ
ಸಂಗತಿ. ಐದು ಭಾಸನ ಕೃತಿಯೆಂದು ಅವನು ಬಲ್ಲವನಾಗಿದ್ದರೆ, ಬೇರೊಂದು ಕಡೆ
""ಮಹಾಕವಿನಾ ಭಾಸೇನ...... ಎಂದು (ಅಭಿನವಭಾರತೀ, 7, ಪು. ೩೨೦)
ಅವನ ಹೆಸರನ್ನು ಗೌರವದಿಂದ ಉಲ್ಲೇಖಿಸಿದವನು ಇಲ್ಲಿ ಅಪ್ರಸಿದ್ಧ ನೊಬ್ಬನ ಕೃತಿಯಿಂದ
ಉದಾಹರಣಿಯನ್ನು ಎತ್ತಿಕೊಂಡವನಂತೆ "" ಪ್ಪಪ್ನವಾಸವದತ್ತಾಖ್ಯೇ'' (" ಸ್ಪಪ್ನವಾಸವ
ದತ್ತವೆಂಬಹೆಸರಿನ ') ಎಂದು ಬರೆಯುತ್ತಿದ್ದನೇ ಎಂಬ ಆಲೋಚನೆಯೂ ಮೂಡುತ್ತದೆ.
೨೫. ಔಚಿತ್ಯ ೪೨ಒ
ಪರ್ಯಾಕುಲನಾಗಿ ತಂದೆ ಕಾರಣವನ್ನು ಕೇಳಲು, ಈತನಿಗೇನೂ ಕೇಡಿಲ್ಲ;
ಸಾವಿನ ಹೊಸಿಲಲ್ಲರುವ ನಾನು ಈತನ ಉಪದೇಶವನ್ನು ಕೇಳದಂತೆ
ವಂಚಿತನಾದೆನಲ್ಲಾ ಎಂದು ನನಗಾಗಿ ದುಃಖಸುತ್ತಿದ್ದೇನೆಂದು ಅಸಿತನು
ಉತ್ತರಕೊಟ್ಟು, ಈತನು ಜೀವಲೋಕಕ್ಕೆ ಹೇಗೆ ತಾರಕನಾಗುವನೆಂಬು
ದನ್ನು “ಜ್ಞಾನದ ಹಡಗು'', " ಧರ್ಮದ ಮಳೆ'' ಈ ಮೊದಲಾದ
ರೂಪಕಗಳ ಪರಂಪರೆಯಿಂದ ವರ್ಣಿಸುವಲ್ಲಿ ಈ ಕೆಳಗಿನ ಪದ್ಯವೂ
ಬರುತ್ತದೆ :
ತೃಷ್ಣಾರ್ಗಲಂ ಮೋಹೆತವ1ಕಪಾಟಂ
ದ್ವಾರಂ ಪ್ರಜಾನಾಮಪಯಾನಹೇತೋಃ :
ವಿಪಾಟಯಿಪ್ಯತ್ಯಯಮಂತ್ರ ಶಮೇನ
ಸದ ರ್ಮತಂಡೇನ ದುರಾಸದೇನ | (;,೭೪)
[ತ್ಯಷ್ಮೆಯಗುಳಿಯ ಭ್ರಾಂತಿಯುಂಥಕಾರದ ಕದದ
ಬಾಗಿಲನು ಜೀವಿಗಳು ಹೊರಗೆ ಬರಲೆಂದು
ತೆರೆಬಡುವನ್ನೆ ಪಡೆಯಲರಿದಾದ ಸದ್ಧರ್ಮ.
ದುತ್ತಮದ ಕೀಲಿಕ್ಕೆಯಿಂದಲಿವನು.]
ಇಲ್ಲಿಯ ರೂಪಕದ ಪರಿಣಾಮವೇ ಬೇರೆ. ಜೀವಲೋಕಕ್ಕೆ ಈತನಿಂದ
ಹೇಗೆ ಬಿಡುಗಡೆ ದೊರೆಯುವುದೆಂಬುದನ್ನು ಮನಸ್ಸಿಗೆ ಚೆನ್ನಾಗಿ ನಾಟಿಸಿ
ಕಥಾನಾಯಕನಲ್ಲ ಭಕ್ತಿಶ್ರದ್ಧೆಗಳನ್ನು ಉಕ್ಕಿ ಸುತ್ತದೆ.
ಅಲಂಕಾರ ಪ್ರಯೋಗದ ವಿಷಯದಲ್ಲಿ ಧ್ವನ್ಯಾಲೋಕದ ಉಪದೇಶ
ಸಾರ ಇಷ್ಟೇ :
ರಸಾಕ್ಷಿಪ್ತತಯಾ ಯಸ್ಯ ಬಂಧಃ ಶಕ್ಯಕ್ತಿಯೋ ಧವೇತ್ |
ಅಸೃಥಗೃತ್ನನಿರ್ವರ್ತ್ಯ $ ಸೋ ಲಂಕಾರೋ ಧೈನೌ ಮತಃ ॥
(ಠೃನ್ಯಾ, i. ೧೭)
«" ಕವಿ ರಸಮಗ್ಗ ನಾಗಿರುವ ಸ್ಥಿತಿಯಲ್ಲಿಯೇ ಯಾವುದರ ರಚನೆ ಶಕ್ಕವೋ,
ಯಾವುದನ್ನು ನಿರ್ಮಿಸಲು ಪ್ರತ್ಯೇಕವಾದ ಪ್ರಯತ್ನ ಜೇಕಿಲ್ಲವೋ,
ಅದೇ ಧ್ವನಿಕಾವ್ಯದಲ್ಲ ಅಲಂಕಾರವೆನಿಸಿಕೊಳ್ಳವುದು.''!: ಸೃಷ್ಟಿಗೊಂಡ
2 ಮಹಿಮಭಟ್ಟನೂ ಈ ಅಭಿಪ್ರಾಯವನ್ನೇ ಅನುಮೋದಿಸುತ್ತಾನೆ :
ನ ಚಾಲಂಕಾರನಿಪ್ಪತ್ತ್ವೈತ್ರಿ ರಸಬಂಧೋದ್ಯತಃ ಕವಿಃ |
ಯತತೇ ತೇ ಪಿ ತತ್ಪಿದ್ಧಿನಾಂತರೀಯಕಸಿದ್ದಯಃ !
(ವ್ಯಕ್ತಿವಿವೇಕ, ಪು: ೩೪೨)
೪೨೮ ಭಾರತೀಯ ಕಾವ್ಯಪಸಾಮಾಂಸೆ
ಬಳಿಕ ಆ ಅಲಂಕಾರವು ಅತಿಶಯ ಮನೋಹರತೆಯಿಂದ ನಮ್ಮನ್ನು
ಬೆರಗುಪಡಿಸಬಹುದು. ಆದರೆ ಕವಿ ರಸಮಗ್ಗ ನಾಗಿರುವಾಗಲ್ಲೇ ಬೇರೆಯ
ಪ್ರಯತ್ನ ವಿಲ್ಲದೆ ಅದು ರಚಿತವಾಗಿದ್ದರೆ ಆ ರಸದ ಲಹರಿಯೊಂದಿಗೇ ನಮ್ಮ
ಹೃದಯವನ್ನೂ ಪ್ರವೇಶಿಸಿ ಅಧಿಕವಾದ ಆಸ್ವಾದವನ್ನು ಕೊಡುತ್ತಿದೆ.
ಇದೇ ಸಂದರ್ಭದಲ್ಲಯೇ ವರ್ಣನೆಗಳನ್ನು ಕುರಿತು ಎರಡು
ಮಾತನ್ನು ಹೇಳೆಬೇಕು. ಅಪ್ಪಾದಶವರ್ಣನೆಗಳಿಲ್ಲದೆ ಮಹಾಕಾವ್ಯ
ವಾಗದು ಎಂಬ ಭಾವನೆ ಕವಿಗಳಲ್ಲಿ ಮೊದಲು ಹುಟ್ಟಿ, ಈ ವರ್ಣನೆ
ಗಳನ್ನು ಜೆಳಸಿದರಾಯಿತು, ಇನ್ನೇನೂ ಇಲ್ಲದಿದ್ದರೂ ಕಾವ್ಯಕ್ಕೆ ಚ್ಯುತಿ
ಯಿಲ್ಲ ಎಂಬ ಭ್ರಮೆಯಲ್ಲಿ ಪರ್ಯವಸಾನಗೊಂಡಂತೆ ಕಾಣಿಸುತ್ತದೆ. ಮುಖ್ಯ
ರಸಕ್ಕೆ ಲಕ್ಷ್ಯವನ್ನೇ ಕೊಡದೆ ವರ್ಣನಂಮೈಬರಿಯಲ್ಲೇ ತಮ್ಮ ಶಕ್ತಿ
ಸಂಪತ್ತನ್ನೆಲ್ಲಾ ಸೂರೆಗೈದು, "" ಪದಿನೆಂಟು ಬ[ಣ್ಣನೆ]ಯೆಂದು ಬವಣಿ
ಗೊಂಡು | ಪದಗೆಟ್ಟು ಬಯಲಬಣ್ಣಿಸಿ '', ಹೊನ್ನಮ್ಮನಂಥ ಕಬ್ಬಿಗಿತಿಯ
ಹಾಸ್ಯೋಕ್ತಿಗೆ ಪಾತ್ರರಾಗಬಲ್ಲ ಕವಿಗಳುಂಟು. ಈ ಶಕ್ತಿ ಕೂಡ
ಇಲ್ಲದೆ ಅಲ್ಲಂದ ಇಲ್ಲಿಂದ ಕೆಲವು ಕಲ್ಪನೆಗಳನ್ನು ಲರವಲಾಗಿ ತಂದು
ಮೆರನಿ, ಚರ್ವಿತಚರ್ವಣದಲ್ಲೇ ಕೃತಾರ್ಥರಾದ ಕವಿಗಳೂ ಉಂಟು.
ನಾಟಕಕ್ಕಿ೦ತಲೂ ಕಾವ್ಯದಲ್ಲಿ ವರ್ಣನೆಯ ಹುಚ್ಚು ಬಹಳವಾಗಿ ಬೆಳೆಯಿತು.
ಆದರೆ ಇಂಥ ವರ್ಣನಗ್ರಹಗ್ರಸ್ತರಿಗೆ ಲೊಲ್ಲಟನು ಹಿಂದೆಯೆ ಎಚ್ಛರಿಕೆ
ಕೊಟ್ಟನು:
ಮಜ್ಜನ ಪುಪ್ಪಾವಚಯನ ಸಂಧ್ಯಾಚಂದ್ರೋದಯಾದಿ ವಾಕೃಮಿಹ |
ಸರಸಮಪಿ ನಾತಿ ಬಹುಲ೨ ಪ್ರಕೃತರಸಾನನ್ವಿ ಶಂ ರಚಯೇತ್॥
ಯಸ್ತು ಸರಿದದ್ದಿಸಾಗರಪುರತುರಗರಥಾದಿವರ್ಣವೇ ಯತ್ನಃ।
ಕವಿಶಕ್ತಿ ಖ್ಯಾತಿಫಲೋ ಎತತಧಿಯಾ೦ಂ ಮೋ ಮತಃ ಸ ಇಹ॥ 13
13 ಈ ಪದ್ಯಗಳು ಅಪರಾಜಿತಿಯವೆಂದು ರಾಜಶೇಖರನು ಉದಾಹರಿಸುತ್ತಾನೆ.
(ಕಾವ್ಯಮಾಮಾಂಸಾ, ಪು. ೪೫). ಇವುಗಳಲ್ಲ ಎರಡನೆಯದನ್ನು ಲೊಲ್ಲಟನದೆಂದು ಹೇಮ
ಚಂದ್ರನು "ಕಾವ್ಯಾನುಶಾಸನ' ದಲ್ಲ ಉದಾಹರಿಸಿರುವುದರಿಂದ (ಪುಟ. ೨೫೭),
ಅಪರಾಜಿತಿಯೆಂಬುದು ಲೂಲ್ಲಟನ ಇನ್ನೊಂದು ಹೆಸರೆಂದು ವ್ಯಕ್ತಪಡುತ್ತದೆ. ಈ ವಷಯ
ದಲ್ಲ ಕಾವ್ಯವಿನಾಮಾಂಸೆಯ ಟಿಪ್ಪಣಿ, ಪು. ೧೮೮.೯ ನ್ನು ನೋಡಬಹುದು.
ದುಷ್ಕರವಾದ ಯಮಕ, ಚಕ್ರಬಂಧ ಮೊದಲಾದ ಶಬ್ಧಚಿತ್ರಗಳ ವ್ಯಾಮೋಹವನ್ನು
ಖಂಡಿಸುವ ಲೊಲ್ಲಟನ ಇನ್ನೊಂದು ಪದ್ಯವನ್ನೂ ಇಲ್ಲ ಉದಾಹರಿಸಬಹುದು. ಇದು
ಕಾವ್ಯಾನುಶಾಸನದಲ್ಲಿ "" ಯಸ್ತು ಸರಿದದ್ರಿ,.,,,, '' ಎಂಬುದರ ಕೆಳಗೇ ಬಂದಿದೆ.
ಯಮಕಾನುಲೋಮತದಿತರ ಚಕ್ರಾದಿಭಿದ್ಯೋತಿರಸವಿರೋಡಿನ್ಯಃ |
ಆಭಿಮಾನಮಾತ್ರಮೇತತ್ ಗಡ್ಡರಿಕಾದಿಪ್ರವಾಹೋ ವಾ!
೨೫. ಔಚಿತ್ಯ ೪೨೯
« ಜಲಕೇಳಿ, ಹೂವು ಕೊಯ್ಯುವುದು, ಸಂಜೆ, ಚಂದ್ರೋದಯ
ಮೊದಲಾದವನ್ನು ಕುರಿತ ಉಕ್ತಿ ಯನ್ನು, ಅದು ರಸವತ್ತಾ ಗಿದ್ದ ರೂ
ಪ್ರಸ್ತುತ ರಸಕ್ಕೆ ಸಂಬಂಧಪಡದಿದ್ದರೆ, ಹೆಚ್ಚಾಗಿ ಬೆಳಸಬಾರದು. ನದಿ,
ಬೆಟ್ಟ, ಸಾಗರ, ನಗರ, ಕುದುರೆ, ತೇರು ಮೊದಲಾದವುಗಳ ವರ್ಣನೆಗೆ
ಕೈಹಾಕುವುದರಿಂದ ಕವಿಶಕ್ತಿಯುಂಟೆಂಬ ಖ್ಯಾತಿಯೇನೋ ಲಭಿಸಬಹುದು ;
ಆದರೆ ವಿಶಾಲಮತಿಗಳಿಗೆ ಇದು ಇಲ್ಲಿ [ಎಂದರೆ ಪ್ರಬಂಧದಲ್ಲಿ] ತಕ್ಕದ್ದಲ್ಲ.'?
ದೊಡ್ಡ ಕಾವ್ಯಗಳಲ್ಲಿ ಇಂಥ ವರ್ಣನೆಗಳು ಪ್ರಸ್ತುತವಾದ ಕಥಾ
ಸಂವಿಧಾನಕ್ಕೆ ಹೊಂದಿಕೊಂಡು ಅಂಗವಾಗಿ ಬಂದಾಗ ಮಾತ್ರ ಅವು
ಸೌಂದರ್ಯ ಸಂಪತ್ತಿಗೆ ಆಕರವಾಗುತ್ತವೆ. " ಪ್ರಬಂಧೇಷು ಜಲಕೇಲಿ
ಕುಸುಮಾವಚಯ ಪ್ರಭೃತಿ ಪ್ರಕರಣಂ ಪ್ರಕ್ರಾಂತ ಸಂವಿಧಾನಕಾನುಬಂಧಿ
ನಿಬಧ್ಯಮಾನಂ ನಿಧಾನಮಿವ ಕಮನೀಯ ಸಂಪದಃ ಸಂಪದ್ಯತೇ '' ಎಂದು
ಕುಂತಕನು ಈ ಅಂಶವನ್ನು ವ್ಯಕ್ತ ಪಡಿಸಿ ಹೇಳಿ,” ಇದಕ್ಕೆ ಉದಾಹರಣ
ಯಾಗಿ " ರಫುವಂಶ'ದ ಹದಿನಾರನೆಯ ಸರ್ಗದಲ್ಲ ಬಂದಿರುವ ಕುಶನ
ಜಲಕ್ರೀಡೆಯ ವರ್ಣನೆಯನ್ನು ನಿರ್ದೇಶಿಸುತ್ತಾನೆ. ಜಲಕೇಳಿಯ ವೇಳೆ
ಯಲ್ಲಿ ಕುತನು ಧರಿಸಿದ್ದ ದಿವ್ಯವಾದ. ವಲಯವು ಜಾರಿಬಿದ್ದ ಮುಂದಿನ
ಕಥೆಗೆ ದಾರಿ ಮಾಡಿಕೊಡುವುದರಿಂದ ಈ ವರ್ಣನೆ ಸಮಯೋಚಿತವಾಗಿ
ರಮ್ಯತೆಯನ್ನು ಹೆಚ್ಚಿ ಸಿಕೊಳುತ್ತದೆ. ಇಂಥ ವರ್ಣನಾಚಿತ್ಯವನ್ನು ಆನಂದ
ವರ್ಧನನೂ ಸೂಚಿಸುತ್ತಾನೆ. ಪ್ರಸ್ತುತ ರಸಕ್ಕೆ ನೇರವಾಗಿ ಸಂಬಂಧ
ಪಡದ ಒಂದು ವಿಷಯವನ್ನು ವಿಸ್ತರಿಸಿ ವರ್ಣಿಸಿದಲ್ಲಿ- ರಸಭಂಗವಾಗು
ವುದು ಖಂಡಿತ. ವಿಪ್ರೆಲಂಭಶೃಂಗಾರವು ಪ್ರಸಕ್ತವಾಗಿರುವಾಗ ಅದರ
ಬೆಳೆವಳಿಗೆಯನ್ನು ಗಮನಿಸದೆ, ನಾಯಕನ ಪ್ರಯಾಣಕಾಲದಲ್ಲಿ
ಅಡ್ಡಲಾಗಿ ಸಿಕ್ಕಿದ ಒಂದು ಬೆಟ್ಟವನ್ನು ಯಮಕಾದಿ ಅಲಂಕಾರ
ಗಳೊಡನೆ ಸವಿಸ್ತರವಾಗಿ ವರ್ಣಿಸುವುದರಲ್ಲಿ ಮೈಮರೆತ ಕವಿಗಳೂ
ಉಂಟು |
ಇನ್ನು ಅಂಗರಸಗಳ ವಿಚಾರಕ್ಕೆ ತಿರುಗೋಣ. ಕಾವ್ಯದಲ್ಲ ಯಾವು
ದಾದರೂ ಒಂದು ರಸಕ್ಕೆ ಮಾತ್ರ ಪ್ರಾಧಾನ್ಯವಿರದೇಕೆಂದು ಹೇಳುತ್ತಾ
4 ಪಕ್ರೋಕ್ತಿಡೀವಿತ, ಪು, ೨೩೧.
15 ಧೃನ್ಯಾ., ಪು. ೧೬೨ ನೋಡಿ.
೪೩೦ ಭಾರತೀಯ ಕಾವ್ಯಮಾಮಾಂಸೆ
ಬಂದಿದ್ದೇವೆ ಪೀಗೆಂದರೆ, ಮೊದಲಿನಿಂದ ತುದಿಯವರೆಗೂ ಒಂದೇ ರಸವೇ
ನಿರಂತರವಾಗಿ ಕಾಣಿಸಿಕೊಳ್ಳಬೇಕು, ಬೇರೆಯ ರಸಗಳ ಸಂಪರ್ಕಪಷೇ
ಕೂಡದು ಎಂದು ಅರ್ಥವಲ್ಲ. ಈ ಪರಿಸ್ಥಿತಿ ಸಾಧ್ಯವೂ ಅಲ್ಲ ; ಇಷ್ಟವೂ
'ಅಲ್ಲ. ಕಥಾವಸ್ತು ಸಂಕೀರ್ಣವಾಗಿರುವಾಗ ಅದರಿಂದ ಅನೇಕ ರೀತಿಯ
ಚಿತ್ತವೃತ್ತಿಗಳು ಅಭಿವ್ಯಕ್ತವಾಗುವುದು ಅನಿವಾರ್ಯ ಮತ್ತು ಅವಶ್ಯಕ.
ಆದರೆ, ಇಪ್ಪನ್ನು ಗಮನಿಸಬೇಕು. ಕಥಾಭಾಗಗಳು ಅನೇಕ ವಾಗಿದ್ದರೂ
ಅವುಗಳಲ್ಲಿ ಒಂದು ಕಾರ್ಯ ಮಾತ್ರ ಎಲ್ಲಕ್ಕೊ ಮಿಗಿಲಾಗಿ ನಿಂತು, ಕೃ ತಿಯ
ಉದ್ದಕ್ಕೂ ವ್ಯಾಪನೆಗೊಂಡು ಮಿಕ್ಕ ಛದರಿಂದಲೂ ಪುಷ್ಟಿಗೊಳ್ಳುವ ಹಾಗೆ
ಕಾವ್ಯನಾಟಕಗಳಲ್ಲ ಒಂದೇ ರಸ ಪ್ರಧಾನವಾಗಿ, ವ್ಯಾಪಕವಾಗಿ ಬರ
ಬೇಕು; ಇದೇ ನಮ್ಮ ಕಾವ್ಯಮಾಮಾಂಸೆಯ ಪರಮೋಪದೇಶ.
ಪ್ರಾಸಂಗಿಕವಾಗಿ ಎಷ್ಟು ರಸಡಳಾದರೂ ಬರಬಹುದು. ಆದರೆ ಅವು
ಇದಕ್ಕೆ ಪೋಪಕವಾಗದೇಕೇ ಹೊರತು ಇದನ್ನು ಮರೆಗೊಳಿಸಬಾರದು.
ಈ ವಿಚಾರಕ್ಕೆ ನಿದರ್ಶನವಾಗಿ "ಮೃಚ್ಛಕಟಿಕ ಪ್ರಕರಣ 'ವನ್ನು
ಗಮನಿಸೋಣ. ಅಲ್ಲಿ ಚಾರುದತ್ತ-ವಸಂತಸೇನೆಯರ ಪ್ರೇಮ
ಕಥೆಯೇ ಪ್ರಧಾನವಸ್ತು. ಆದರೆ ನಾಟಕದಲ್ಲಿ ಬರತಕ್ಕ ಕಥೆ ಇದೊಂದೇ
ಅಲ್ಲ. ಆರ್ಯಕ-ಪಾಲಕರ ರಾಜಕೀಯ ವೃತ್ತಾಂತ, ಶರ್ನ್ವಿಲಕ_ಮದನಿಕೆ
ಯರ ಪ್ರಣಯವಿಚಾರ, ಕಡೆಗೆ ಸಂವಾಹಕನ ಜೂಜು ಸಂನ್ಯಾಸಗಳ
ಸಂಗತಿ, ಈ ಮೊದಲಾದವೂ ಸೇರಿಕೊಂಡಿವೆ. ಶಕಾರನ ನೀಚತನ ಕ್ರೂರ
ತನಗಳ ಪ್ರಸಂಗಗಳಂತೂ ಉದ್ದಕ್ಕೂ ಕಾಣಿಸಿಕೊಳ್ಳುತ್ತವೆ. ಇವೆಲ್ಲ
ಎಷ್ಟೆಪ್ಟೇ ಬಂದರೂ "" ಆಧಿಕಾರಿಕವಸ್ತು'' ಎಲ್ಲಿಯೂ ಕಣ್ಣುಮರೆಯಾಗು
ವುದಿಲ್ಲ. ಅದಕ್ಕೆ ಅಂಗವಾಗಿಯೇ, ಅದಕ್ಕೆ ಪುಪ್ಪಿಕೊಡುವಂತೆಯೇ,
ವೈಚಿತ್ರ್ಯವನ್ನು ಹೆಚ್ಚಿಸುವಂತೆಯೇ ಈ ಎಲ್ಲ ವೃತ್ತಾಂತಗಳೊ ಹೆಣಿದು
ಕೊಂಡು ಬಂದು ಸ್ಟಾರಸ್ಯವನ್ನು ಅಧಿಕಗೊಳಿಸುತ್ತವೆ. ಪೀಗೆ ಇತಿವೃತ್ತ
ದಲ್ಲಿ ವಿಷಯಸಂಕೀರ್ಣತೆಯಿದ್ದರೂ ಐಕ್ಯಸಾಧನೆಯಾಗಿರುವಂತ, ರಸ
ಪುಷ್ಟಿಯೂ ಆಗಿದೆ. ಶೃಂಗಾರವೇ ಇಲ್ಲಿಯ ಪ್ರಧಾನ ರಸ, ಬೇರೆ ಬೇರೆ
16 ಕಾರ್ಯಮೇಕಂ ಯಥಾ ವ್ಯಾಪಿ ಪ್ರಬಂಧಸ್ಯ ವಿಧೀಯತೇ !
ತಥಾ ರಸಸ್ಯಾಪಿ ವಧೌ ವಿರೋಥೋ ನೈವ ವಿದ್ಯತೇ 1 (ಧ್ಚನ್ಯಾ., 111, ೨೩)
೨೫. ಔಚಿತ್ಯ ೪೩೧
ಪ್ರಸಂಗಗಳಿಗೆ ಅನುಗುಣವಾಗಿ ವೀರ, ರೌದ್ರ, ಹಾಸ್ಯ, ಬೀಭತ್ಸ ಮೊದ
ಲಾದವೆಲ್ಲ ಬಂದಿದ್ದರೂ ಅವು ಮುಖ್ಯನದಿಗೆ ಸೇರುವ ಉಪನದಿಗಳಂತೆ,
ರಾಜನನ್ನು ಅನುಸರಿಸಿ ಸೇವಿಸುವ ಪರಿವಾರದವರಂತೆ ತೃಂಗಾರಕ್ಕೇ
ವಿಧೇಯವಾಗಿ ಬರುತ್ತವೆ ; ಅದರ ಕಳೆಯನ್ನೇ ಹೆಚ್ಚಿಸುತ್ತವೆ.
ನಾನಾರಸಗಳು ಒದಗುವ ಕೃತಿಯಲ್ಲಿ ಒಂದಕ್ಕೆ ಪ್ರಾಧಾನ್ಯ
ಕೊಟ್ಟು ಸ್ವಾರಸ್ಯವನ್ನು ಜೆಳಸಿಕೊಳ್ಳಬೇಕಾದರೆ ರಸವಿರೋಧಿಗಳಾದ
ಅಂಶಗಳನ್ನು ಪರಿಹರಿಸುವುದು ಅಗತ್ಯ. ಮೊದಲು ಒಂದು ವಿಷಯ
ವನ್ನು ಗ್ರಹಿಸಬೇಕು. ರಸಗಳಲ್ಲ ಪರಸ್ಪರ ಮೈತ್ರಿಯೂ ವಿರೋಧವೂ
ಉಂಟು. ಎಂದರೆ, ಕೆಲವು ರಸಗಳು ಒಂದರೊಡನೊಂದು ಹೊಂದಿಕೊಳ್ಳು
ತ್ತವೆ, ಮತ್ತೆ ಕೆಲವು ಹೊಂದಿಕೊಳ್ಳುವುದಿಲ್ಲ. ಉದಾಹರಣಿಗೆ, ಶೃಂಗಾ
ರವೂ ವೀರವೂ ಒಡನಾಡಿಗಳಂತೆ ಜೊತೆಗೂಡಿ ಹೋಗಬಲ್ಲುವು. ಒಬ್ಬನೇ
ನಾಯಕನನ್ನುಆಶ್ರಯಿಸಿ ಈ ಎರಡು ರಸಗಳನ್ನೂ ಪೋಷಿಸಬಹುದು ;
ನಾಟಕದ ಕೊನೆಮುಟ್ಟುವ ವೇಳೆಗೆ, ಅಗಲಿದ್ದ ಕಾಂತೆಯೊಡನೆ ಅವನಿಗೆ
ಸಮಾಗಮವುಂಟಾಯಿತೆಂದೂ ಕಳೆದುಕೊಂಡಿದ್ದ ರಾಜ್ಯವು ಕೈಸೇರಿತೆಂದೂ
ಚಿತ್ರಿಸಬಹುದು. ಆದರೆ ತೃರಿಗಾರಕ್ಕೆ ಬೀಭತ್ಸದ ಸ್ಪರ್ಶವಾದರೆ (ಎಂದರೆ,
ಒಂದೇ ವಿಭಾವದಿಂದ ಒಬ್ಬನಲ್ಲ ರತಿ, ಜುಗುಪ್ಸೆ ಈ ಎರಡೂ ಹುಟ್ಟಿ ಹಬ್ಬು
ವಂತೆ ವರ್ಣಿತವಾದರೆ), ಹಾಲಿಗೆ ಉಪ್ಪು ಬಿದ್ದಂತೆ ರಸವು ಒಡೆದು ಹೋಗುವ
ಸ೦ಭವಷೇ ಅಧಿಕ. ವೀರಭಯಾನಕಗಳೆ ವಿಷಯವೂ ಪೀಗೆಯೇ. ಒಬ್ಬ
ನಾಯಕನಲ್ಲಿಯೇ ಉತ್ಸಾಹಭಯಗಳೆರಡನ್ನೂ ನಿರೂಪಿಸಿದರೆ ಮನೋಹರ
ವಾಗುವುದಿಲ್ಲ. ಆದರೆ ನಾಯಕನಲ್ಲ ಬಂದೂ ಅವನ ಶತ್ರುವಿನಲ್ಲಿ
ಇನ್ನೊಂದೂ ಏಕಕಾಲದಲ್ಲಿಯೇ ಇರುವುವೆಂದು ಕಲ್ಪಿಸಬಹುದು. ಆಗ
ವಿತೋಧವಿರುವುದಿಲ್ಲ. ರಸವು ಕೆಲವು ದೂರ ಪುಪ್ಪಿಗೊಂಡು ಬಂದಿದ್ದ ರೆ
ವಿರೋಧಿ ರಸಗಳು ತಲೆಹಾಕಿದರೂ ತೊಂದರೆಯಾಗುವುದಿಲ್ಲ. ಅವು
ಕೆಲವು ಕಾಲ ಮಾತ್ರ ಸುಳಿದು ಮರೆಯಾಗುವುದರಿಂದ ಮುಖ್ಯರಸದ ಸವಿ
ಯನ್ನೇ ಇನ್ನಷ್ಟು ಹೆಚ್ಚಿಸುತ್ತವೆ. ಒಮ್ಮೊಮ್ಮೆ ಶತ್ರುವೇ ಸಾಮಂತನಾ
ದಂತೆ ಅವು ಇದಕ್ಕೇ ಅಂಗವಾಗುವುದೂ ಉಂಟು. ಇದೆಲ್ಲದರ ವಿಸ್ತಾರ
ವಾದ ನಿರೂಪಣಿಗೆ ಇಲ್ಲ ಅವಕಾಶವಿಲ್ಲ. ಭೋಜನರಸಗಳ ಸಾಮ್ಯ
4 ಳೆ
ಇಲ್ಲಗೆ ಚೆನ್ನಾಗಿ ಅನ್ವಯಿಸುವುದೆಂದು ಹೇಳಿದರೆ ಸಾಕು. ಅಲ್ಲಿಯಂತೆಯೇ
೪೩೨ ಭಾರತೀಯ ಕಾವ್ಯಮಾಮಾಂಸೆ
ಇಲ್ಲಿಯೂ ವಿರೋಧವುಂಟು, ಮೈತಿ ಯುಂಟು ; ವಿರೋಧಿಗಳ ಸಂಮಿಳ
ನವೂ ಉಂಟು. ವೈವಿಧ್ಯದಿಂದಲ್ಲೇ ಸವಿ ಹೆಚ್ಚು ವುದೂ ಉಂಟು.
ರಸನಿರೂಪಣಿಯಲ್ಲ ಸಾಮಾನ್ಯವಾಗಿ ಗಮನಿಸದೇಕಾದ ಒಂದೆರಡು
ಅಂಶಗಳನ್ನು ಸೂಚಿಸಿ ಈ ಭಾಗವನ್ನು ಉಪಸಂಸರಿಸಬಹುನು. ರಸದ
ಪ್ರವಾಹವನ್ನುಥಟ್ಟನೆ ಯಾವುದೋ ಅಪ್ಪಾ ಸಂಗಿಕವಾದ ಕಾರಣಕ್ಕಾಗಿ ನಿಲ್ಲಿ
ಸದಾರದು; ಇದ್ದ ಕ್ಕಿದ್ದ ಹಾಗೆ ಅನಾವಶ್ಯಕವಾಗಿ ಒಂದು ರಸವನ್ನು ದುಮು
ಕಿಸಬಾರದು. ಇಲ್ಲೆಲ್ಲಾ ಪೌರ್ಯಾಪರ್ಯ ಸಂಬಂಧವನ್ನು ಚೆನ್ನಾಗಿ ಪರ್ಯಾ
ಲೋಚಿಸದೇಕು. ಇದರ ಜೊತೆಗೆ ಇನ್ನೊಂದು ವಿಷಯ. ಯಾವ ರಸದ
ಪರಿಪೋಷಕ್ಕೂ ಮಿತಿ ಉಂಟು. ಒಂದು ನೆಲೆಗೆ ಮುಟ್ಟಿದ ಮೇಲೆ ಅದನ್ನು
ಲಂಬಿಸದಾರದು. ಉದಾಹರಣಿಗೆ, ಕರುಣಮಯವಾದ ಸನ್ನಿವೇಶಗಳಲ್ಲಿ
ವಿಲಾಪವನ್ನು ಅತಿಯಾಗಿ ಬೆಳಸಿದರೆ, ರಸವು ಬಾಡಿ ಸೊರಗಿ ಹೋದ
ಹೂವಿನಂತಾಗುತ್ತದೆ. ಮಹಾಕಪಿಗಳಿಂದ ಕೂಡ ಒಮ್ಮೊಮ್ಮೆ ಇಂಥ
ತಪ್ಪು ಸಂಘಟಿಸುವುದುಂಟು, " ಕುಮಾರಸಂಭವ ' ದ ರತಿವಿಲಾಪ ಭಾಗ
ದಲ್ಲಿ (ಸರ್ಗ ೪) ಕರುಣರಸವು ಪರಿಪೋಷಹೊಂದಿದ ಮೇಲೆಯೂ
ಮತ್ತೆ ಮತ್ತೆ ದೀಪ್ತವಾಗಿದೆಯೆಂದು ಹಿಂದಿನ ಆಲಂಕಾರಿಕರೇ
ಸೂಚಿಸಿದ್ದಾರೆ. 1೫ "" ಅತಿಸರ್ವತ್ರ ವರ್ಜಯೇತ್''” ಎಂಬುದೇ
ಎಲ್ಲ ಕಡೆಗಳಂತೆ ಇಲ್ಲಿಗೂ ಅನ್ವಯಿಸುವ ಸೂತ್ರ.
17 ಧ್ವನ್ಯಾ, ಲೋಚನ, ಪು. ೧೬೪ ನೋಡಿ.
18 ಕಾವ್ಯವು ಒಂದು ಬಿಡಿಪದ್ಯದಷ್ಟು ಚಿಕ್ಕದಾಗಿರಲಿ, ಹಲವು ಸರ್ಗ (ಅಥವಾ ಅಂಕ)
ಗಳಿಂದ ಕೂಡಿ ದೀರ್ಪುಕೃತಿಯಾಗಿರಲಿ, ಅಲ್ಲಿ ರಸಶರಿಪೋಷವನ್ನು ಮಾಡಬೇಕೆಂದು
ಬಯಸುವ ಕವಿ ಅದಕ್ಕೆ ವಿರೋಧಿಯಾದ ಅಂಶಗಳನ್ನೆಲ್ಲ ಪ್ರಯತ್ನಪೂರ್ವಕವಾಗಿ ಪರಿಹಾರ
ಮಾಡಬೇಕು. ಧೃನ್ಯಾಲೋಕದಭಿ,
ಪ್ರಬಂಧೇ ಮುಕ್ತಕೇ ವಾಪಿ ರಸಾದೀನ್ ಬಂಧುಮಿಚ್ಛತಾ |
ಯತ್ನಃ ಕಾರ್ಯಃ ಸುಮತಿನಾ ಪರಿಹಾರೇ ವಿರೋಧಿನಾಂ | (111, ೧೭)
ಎಂಬ ಕಾರಿಕೆಯಿಂದ ಈ ವಿಷಯವನ್ನು ಪ್ರವೇಶಗೊಳಿಸಿ ೩೧ನೆಯ ಕಾರಿಕೆಯವರೆಗೂ
ಸೋದಾಹರಣವಣಗಿ ಸವಿಸ್ತರವಾಗಿ ನಿರೂಪಿಸಿದೆ. ರಸವಿರೋಧಿಗಳ ಪರಿಹಾರ, ಪ್ರಧಾನ
ರಸದ ಪರಿಪೋಪ, ಅಂಗರಸಗಳ ನಿಯಮನ.--ಇದೆಲ್ಲವೂ ಇಲ್ಲಿ ಬಂದಿದೆ. ಹೆಚ್ಚಿನ ವಿವರ
ಗಳಿಗೆ ಈ ಭಾಗವನ್ನು ವೃತ್ತಿವ್ಯಾಖ್ಯಾನ ಸಮೇತವಾಗಿ ನೋಡುವುದು ಅವಶ್ಯ. ಇಲ್ಲ
ಉಕ್ತವಾಗಿರುವ ಹಲವು ಅಂಶಗಳನ್ನು ""ರಸದೋಷ ''ಗಳಲ್ಲ ಈಚಿನ ಆಲಂಕಾರಿಕರು ಪಟ್ಟಿ
ಮಾಡಿ ನಿರೂಪಿಸಿದ್ದಾರೆ. (ಕಾವ್ಯಪ್ರಕಾಶ, ಸ, ೧೨, ಮುಂ., ಸಾಹಿತ್ಯದರ್ಶಣ,
vii ೧೨. ಮುಂ. ನೋಡಿ.)
೨೫. ಔಚಿತ್ಯ ೪೩೩
ಕಾವ್ಯದ ಎಲ್ಲ ಅಂಶಗಳನ್ನೂ ಏಕಾಯತ್ತದೃಷ್ಟಿಯಿಂದ ಗ್ರಥನ
ಮಾಡಜೇಕೆಂಬ ತತ್ತ್ವ, ಹೊಸದೇನೂ ಅಲ್ಲ. ಅದರ ತಳಹದಿ ಭರತನ
ನಾಟ್ಯಶಾಸ್ತ್ರದಲ್ಲಿಯೇ ಬಂದಿದೆ. ಗುಣದೋಷಗಳು ಸಾಪೇಕ್ಷಪೆಂಬ ಅರಿವು
ದಂಡಿ ಭಾಮಹಾದಿಗಳ ಕೃತಿಗಳಲ್ಲಿಯೇ ಗೋಚರವಾಗುತ್ತದೆ. ರುದ್ರಟನು
" ಔಚಿತ್ಯ''ವೆಂಬ ಶಬ್ದವನ್ನೇ ಉಪಯೋಗಿಸುವುದಲ್ಲದೆ, ರಸದೋಪಗಳಲ್ಲಿ
ಕೆಲವನ್ನೂ ಹೇಳುತ್ತಾನೆ. ಆದರೆ ಔಚಿತ್ಯತತ್ತ್ವವು ಪೂರ್ಣರೂಪವನ್ನು
ತಾಳಿ ಕಾವ್ಯದ ಒಳಗನ್ನೂ ಕೊರಗನ್ನೂ ವ್ಯಾಪಿಸಿದ್ದು ಧ್ವನ್ಯಾಲೋಕದಲ್ಲಿ.
ಕಾವ್ಯಕ್ಕೆ ರಸವು ಜೀವಿತವಾದರೆ ರಸಕ್ಕೆ ಔಚಿತ್ಯವು ಜೀವಿತಪೆನಿಸಿತು.
ಈ ಔಚಿತ್ಯ ಏಪೆ ಷ್ಟು ಅಂಶಗಳಿಗೆ ಅನ $ಯಿಸುವುದೆಂಬುದನ್ನು ಮನಗಾಣ
ಬೇಕಾದರೆ ಕ್ಷೇಮೇಂದ್ರನ " ಔಚಿತ್ಯವಿಚಾರಚರ್ಜೆ 'ಯನ್ನು ಓದ
ಬಹುದು. ತತ್ತ್ಯನಿರೂಪಣಿಯ ದೃಷ್ಟಿಯಿ೦ದ ಹೊಸ ವಿಷಯ ಅದರಲ್ಲಿ
ಯಾವುದೂ ಇಲ್ಲದಿದ್ದರೂ, ಉವಾಸರಣಿಗಳೊ ಅವುಗಳ ವಿಮರ್ಶೆಯೂ
ಅಲ್ಲ ವಿಪುಲವಾಗಿ ಬಂದಿವೆ.
ಇಪ್ಪಾದರೂ "" ಔಚಿತ್ಯ''ವು ಕೇವಲ ಸೂತ್ರಗಳಿಗೆ ಸಿಕ್ಕತಕ್ಕದ್ದ ಲ್ಸ
ಅದರ ಅರಿವಿಗೆ ಆಧಾರವೆಲ್ಲ--ಲೋಕಸ್ಟಭಾವ, ಸಾಮಾಜಿಕ ವ್ಯವಹಾರ,
ಕವಿಪ್ರತಿಭೆ, ಸಹೃದಯಾನುಭವ. ಲಕ್ಷಣಕಾರನಿಗೂ ಇವೇ ಪರಮ
ಪ್ರಮಾಣ.
ಅನೇಕ ಮಂದಿ ಗಾಯಕರೂ ವಾದನಕಾರರೂ ಸೇರಿ ನುಡಿಸುವ
ಮೇಳಸಂಗೀತವನ್ನು ಬಲ್ಲೆ ವಷ್ಟೆ. ಅದರಲ್ಲಿ ಒಂದೊಂದು ವಾದ್ಯದ (ಅಥವಾ
`ಕಂಠದ) ಸ್ವರ ಸ್ವರವೂ ಒಟ್ಟುಗೂಡಿ ಒಂದೇ ಗುರಿಯನ್ನು ಪಿಡಿದು
ಸಾಗಿ, ವೈವಿಧ್ಯಮಯವಾದರೂ ಏಕಾತ್ಮಕವಾದ ಗಾನರಸವನ್ನು ಸೂಸು
ತ್ತವೆ. ಕಾವ್ಯದ ರೀತಿಯೂ ಹಾಗೆಯೇ. ಅದರ ವರ್ಣಗಳಿಂದ, ಪದ
"ಗಳಿಂದ, ವಾಕ್ಯಗಳಿಂದ, ಕಥಾವಸ್ತುವಿನಿಂದ, ಪಾತ್ರಸಂಮಿಳನದಿಂದ,
ಅಲಂಕಾರಾದಿವಿನ್ಯಾಸವಿಂದ ಅಂಶಧ್ಯನ್ನಿಗಳು ಅಭಿವ್ಯಕ್ತ ವಾಗುತ್ತವೆ. ಇವು
-ಬಹುರೂಪಿಗಳಾದರೂ, ಔಚಿತ್ರವೆಂಬ ನಿಯಮವು ಇವುಗಳಫ್ಸರಬಖಸುದಾದ
ವಿರೋಧಗಳನ್ನು ಸಮನ್ವಯಿಸಿ, ಒ೦ದರಿಂದ ಮತ್ತೊಂದನ್ನು ಪುಷ್ಟಿ
ಗೊಳಿಸಿ, ಎಲ್ಲವನ್ನೂ ಏಕಾಭಿಮುಖವಾಗಿ ತಿರುಗಿಸಿ, ಇಲ್ಲಯ ವಿವಿಧ
ವೈಚಿತ್ರ್ಯದಿಂದಲ್ಲೇ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಹೀಗೆ ಒಟ್ಟು
K.M. 28
೪೩೪ ಭಾರತೀಯ ಕಾವ್ಯಖಾಮಾಂಸೆ
ಕಾವ್ಯದಿಂದ ಅಭಿವೃಕ್ತವಾಗುವೆ ಅಬಂಡಧ್ಯನಿಯೇ "" ಪ್ರಬಂಧರಸ '' ;
ಇದೇ ಪರ್ಯಂತರಸ, ಇದರ ಆಕರ ಕವಿಯ ಪ್ರತಿಭೆ: ಇದರ ನಿಕೇತನ:
ಸಹೃದಯನ ಹೃದಯ.
"" ಸರಸೃತ್ಯಾಸ್ತತ್ಸೃಂ ಕವಿಸಹೃದಯಾಖ್ಯಂ ವಿಜಯತೇ ''!
2
11
25-17
ಕನ್ನಡದಲ್ಲಿ ಕಾವ್ಯಲಕ್ಷಣಗ್ರಂಥಗಳು
ಕನ್ನಡ ಸಾಪಿತ್ಯದಲ್ಲಿ ಈಗ ದೊರೆಯುವ ಅತ್ಯಂತ ಪ್ರಾಚೀನ ಕೃತಿ
ಒಂದು ಕಾವ್ಯಲಕ್ಷಣ ಗ್ರಂಥ. ಸುಮಾರು ಹನ್ನೊಂದು ಶತಮಾನಗಳ
ಕೆಳಗೆ ರಚಿತವಾದ "ಕವಿರಾಜಮಾರ್ಗ'ವೇ ಇದು. ಲಕ್ಷ ಕಿ ಮೊದಲು,
ಲಕ್ಷಣ ಆಮೇಲೆ ಎಂಬ ಸಾಮಾನ್ಯನಿಯಮ ಇಲ್ಲಿ ಮೇಲುನೋಟದ ಮಟ್ಟಿ
ಗಾದರೂ ವ್ಯತ್ಕಾಸಹೊಂದಿ, ಕವಿರಾಜಮಾರ್ಗಕ್ಕೆ ಹಲವು ಕಾರಣಗಳಿಂದ
ಒದಗಿರುವ ವಿಶೇಷ ಪ್ರಶಸ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. “ಈ ಗ್ರಂಥದ
ರಚನೆಗೆ ಎಷ್ಟೋ ಶತಮಾನಗಳ ಹಿಂದಿನಿಂದಲೂ ಕನ್ನಡದಲ್ಲಿ ಬರೆವಣಿಗೆ
ನಡೆಯುತ್ತಿದ್ದಿತು. ಕ್ರಿ. ತ. ೫ನೆಯ ಶತಮಾನದ ಹಲ್ಮಿಡಿಯ ಶಾಸನವೂ
ಅಲ್ಲಿಂದೀಚೆಯ ಅವಿಚ್ಛಿನ್ನ ಶಾಸನಪರಂಪರೆಯೂ ಇದಕ್ಕೆ ಒಂದು ಸಾಕ್ಷಿ;
ಕನ್ನಡದಲ್ಲಿ ಆಗಲೇ ಗದ್ಯಪದ್ಯಕಾರರು ಇದ್ದರೆಂದು ಕವಿರಾಜಮಾರ್ಗ
ದಲ್ಲಿಯೇ ಉಕ್ತ ವಾಗಿರುವುದು ಇನ್ನೊಂದು ಸಾಕ್ಷಿ. ಆದರೆ ಪಿಂದಿನ ಆ
ಕವಿಕೃತಿಗಳೆಲ್ಲವೂ ಈಗ ಕಣ್ಣುಮರೆಯಾಗಿವೆ: ಓಲೆಗರಿಯ ಪುಸ್ತಕಗಳನ್ನು
ಹುಡುಕಿಕೊಂಡು ವಿದಾಂಸರು ನಾಡಿನ ಮೂಲೆಮೂಲೆಗೂ ಅಲೆದಿದ್ದರೂ
ಆ ಪ್ರಾಚೀನಕ್ಕೃತಿಗಳಲ್ಲ ಒಂದಾದರೂ ಇದುವರೆಗೆ ಸಿಕ್ಕಿಲ್ಲ. ಇತ್ತ, ಪಿಂದಿನ
ಶಾಸನಗಳೊಳಗೆ ಅಲ್ಲಲ್ಲಿ ಮಿನುಗುವ ಬಿಡಿ ಪದ್ಯಗಳನ್ನು ಬಿಟ್ಟರೆ, ಮಿಕ್ಕ
ಬರೆಹವನ್ನು ಕಾವ್ಯ'' ಎಂದೇನೂ ಕರೆಯುವ ಹಾಗಿಲ್ಲ. "ಹೀಗಾಗಿ,
ಈಗ ಉಪಲಭ್ಯವಾಗಿರುವ ಕನ್ನಡ ಕಾವ್ಯರಾಶಿಗೆ ಕವಿರಾಜಮಾರ್ಗವೇ
ಪೀಠಿಕೆಯಾಗುತ್ತದೆ.
"ಈ ಗ್ರಂಥದ ಕರ್ತ ಯಾರೆಂಬ ವಿಷಯದಲ್ಲಿ ಪ್ರಬಲವಾದ
ಸಂದೇಹವಿದೆ ; ಬೇಕಾದಷ್ಟು ವಾದವಿವಾದ ನಡೆದಿದೆ. ಕ್ರಿ.ಶ. ೮೧೪ ರಿಂದ
೮೭೭ರ ವರೆಗೆ ರಾಜ್ಯವಾಳಿದ ರಾಷ್ಟ್ರಕೂಟಚಕ್ರವರ್ತಿ ನೃಪತುಂಗನ
ಕೃತಿ ಇದೆಂದು ಆಪಾತತಃ ತೋರಿದರೂ, ಒಳಹೊಕ್ಕು ಮೋಡಿದರೆ,
ಇದು ನಿಜವಾಗಿ " ನೈಪತುಂಗದೇವಾನುಮತ ” ಮಾತ್ರ; ಇದನ್ನು
ವಿರಚಿಸಿದವನು ನೃಪತುಂಗನ ಆಸ್ಥಾನದ ಸಭಾಸದರಲ್ಲಿ ಒಬ್ಬನು-ಬಹುತಃ
೪೩೭
೪೩೮ ಭಾರತೀಯ ಶಾವ್ಯಮಾಮಾಂಸೆ
3 ೨ೀವಿಜಯನೆಂಬ ಕವಿ ಎಂಬ ನೆಲೆಗೆ ಅಭಿಪ್ರಾಯ ಮುಟ್ಟುತ್ತದೆ.
«ಶ್ರೀವಿಜಯರ ಕವಿಮಾರ್ಗಂ . . . '' ಎಂದು ದುರ್ಗಸಿಂಹನೂ (ಕ್ರಿ.ಶ.
೧೦೩೧) “ಶ್ರೀವಿಜಯರ . . . . ಸುಮಾರ್ಗಂ'' ಎಂದು ಕೇಶಿ
ರಾಜನೂ (ಕ್ರಿ. ತೆ. ಸು. ೧೨೬೦) ಗೌರವದೊಡನೆ ಸ್ಕರಿಸಿರುವ ಶ್ರೀವಿಜ
ಯನು ಈತನೇ ಆಗಿಸಬಹುದು. ಕವಿರಾಜಮಾರ್ಗದ ಕರ್ತೃ ಯಾರೆಂದು
ಕೊನೆಮಾತಾಗಿ ಹೇಳುವುದು ಕಪ್ಪವಾದರೂ, ಆತನು ಜೈನಮತದವ
ನೆಂದು ಊಹಿಸಲು ತಕ್ಕಷ್ಟು ಆಧಾರವು ಗ್ರಂಥದಲ್ಲಿಯೇ ದೊರೆಯುತ್ತದೆ ;
ಹಾಗೆಯೇ ಇದರ ರಚನೆಯ ಕಾಲ ಕ್ರಿ. ಶ ೯ನೆಯ ಶತಮಾನದ ಮಧ್ಯ
ಭಾಗವೆಂದು ಸ್ಕೂಲವಾಗಿ ಹೇಳಲು ಯಾವ ಅಡ್ಡಿಯೂ ಇಲ್ಲ.
“ಕವಿರಾಜಮಾರ್ಗವು ಕನ್ನಡದಲ್ಲಿ ಕಾವ್ಯರಚನೆಮಾಡಜೇಕೆನ್ನುವ ಕವಿ
ಗಳಿಗಾಗಿ ಬರೆದ ಒಂದು ಕೈಪಿಡಿ. ಇದರಲ್ಲಿ ದೋಪಾದೋಪಾನುವರ್ಣನ
ನಿರ್ಣಯಂ, ತಬ್ದಾಲಂಕಾರವರ್ಣನನಿರ್ಣಯಂ, ಅರ್ಥಾಲಂಕಾರ
ಪ್ರಕರಣಂ ಎಂದು ಮೂರು ಪರಿಚೆ ೇದಗಳಿವೆ. ಇದರ ಪ್ರಧಾನವಸ್ಮು
ಸಾರಾ ದಾದರೂ ಇಲ್ಲಿಯ ವಿಷಯಸಂಪತ್ತು ಅಪ್ವಕ್ಕೇ
ಮುಗಿಯುವುದಿಲ್ಲ. ಕನ್ನಡ ಭಾಷೆ ಛ೦ದಸ್ಸು, ಸಾಹಿತ್ಯ ಈ ಮೊದ
1 ತವಿರಾಜಮಾರ್ಗಕಾರನ ಹೆಸರು "" ಕವೀಶ್ಚರ '' ಎಂದು ಒಂದು ಅಭಿಪ್ರಾಯ
ಪುಂಟು ; ಶ್ರೀವಿಜಯನು ಕವಿಮಾರ್ಗವೆಂಬ ಗ್ರಂಥವನ್ನು ಬರೆದನೆಂದೂ ಅದನ್ನೇ ಅನು
ಸರಿಸಿ ಬಹುಶಃ ಅವನ ಶಿಷ್ಯನೊಬ್ಬನು ಕವಿರಾಜಮಾರ್ಗವನ್ನು ಬರೆದನೆಂದೂ ಭಾವಿಸು
ವವರೂ ಉಂಟು.
ಈ ಗ್ರಂಥವ ಕರ್ತೃತ್ವವನ್ನು ಕುರಿತ ಚರ್ಚೆಯಲ್ಲಿ ಮುಖ್ಯವಾದ ಲೇಖನಗಳನ್ನು ಈ
ಮುಂಡೆ ನಿರ್ದೇಶಿಸಿದೆ: ಕೆ. ಬ. ಪಾರಕ ಅವರಿಂದ ಸಂಪಾದಿತವಾದ "ಕವಿರಾಜ
ಮಾರ್ಗ 'ದ ಪ್ರಸ್ತಾವನೆ (೧೮೯೮); ]. F. Fleet : Notes on Indian History
and Epigraphy—Kavisvara’s Kavirajamirga’ (1A, 2೩೫೫111, pp.
956 18); ರಾ. ನರಸಿಂಹಾಚಾರ್ಯ; ಕರ್ಣಾಟಕ ಕವಿಚರಿತೆ, | (ಪರಿಷ್ಕೃತ ಮುದ್ರಣ);
ಪು. ೧೯-೨೦; ನಾ. ಶ್ರೀ. ರಾಜಪುರೋಹಿತ : " ಕವಿರಾಜಮಾರ್ಗ ಗ್ರಂಥದ ಕರ್ತೃವು
ಯಾರು ?'` (ಪರಿಪತ್ಪೃತ್ರಿಕೆ, 371, ಪು ೯೬-೧೧೩), ಎ. ಅರ್. ಕೃಷ್ಣಶಾಸ್ತಿ ಲ;
“ವಸ್ತುಕೋಶೆ''ದಲ್ಲ ಟಿಪ್ಪಣಿ (ಪ್ರಬುದ್ಧಕರ್ಣಾಟಕ, 111. ೩); ನಾ. ಶ್ರೀ ರಾಜ
ಪುರೋಹಿತ ಮತ್ತು ಟಿ. ಎಸ್. ವೆಂಕಣ್ಣಯ್ಯ: "' ಪತ್ರವ್ಯವಹಾರ” (ಪರಿಷತ್ಪತ್ರಿ ತ್ರಿಕ
17711. ಪು. ೬೩-೬೮ ಮತ್ತು ೫೬೬-೦೯೪), ನಾ. ಶ್ರೀ. ರಾಜಪುರೋಹಿತ : "ನೃಪ
ತುಂಗನೇ ಕವಿರಾಜಮಾರ್ಗ ಗ್ರಂಥದ ಕರ್ತ್ವವು (ಪರಿಪತ್ವತ್ತಿಕೆ 77711. ಪು. ೧೧೧-೧೩೦),
ಲ. ವೆಂಕಟರಾವ್ ಮತ್ತು ಎಚ", ಶೇಪಯ್ಯಂಗಾರ್ ಅವರಿಂದ ಸಂಪಾದಿತವಾದ ಕವಿ
ರಾಜಮಾರ್ಗದ ಅವತರಣಿಕೆ (೧೯೩೦); ಮುಳಿಯ ತಿಮ್ಮಪ್ಪಯ್ಯ: "ಕವಿರಾಜಮಾರ್ಗ
ವಿವೇಕ ' (೧೯೪೮), ಪು. ೭೬.೧೧೨.
ಪರಿಶಿಷ್ಟ ೪೩
ಲಾದವುಗಳ ವಿಚಾರ ಇಲ್ಲಿ ಬೇಕಾದಷ್ಟು ಬರುತ್ತದೆ ; ಇವುಗಳ ಚರಿತ್ರೆ
ಯನ್ನು ನತ ಸುಸವರಿಗ ಇಲ್ಲಿ ಅಮೂಲ್ಯವಾದ ಸಾಮಗ್ರಿ ದೊರೆಯು
ತ್ತದೆ. ಇನ ್ಲಿಡವು "" ಕಾವೇರಿಯಿಂದಂ ಆ PER ವರಂ ಇರ್ದ
ನಾಡು” ಎಂಬ ಪ್ರಸಿದ್ಧವಾದ ಉಕ್ತಿ ಇಲ್ಲಿಯದು. ಈ ಗ್ರಂಥದ ಭಾಷ್ಟ
ಹೆಳಗನ್ನಡವಸ್ಟೆ; ಈ ಹಳಗನ್ನಡವನ್ನು ಬಳಸುತ್ತಿ ದ್ವವರಿಗೇ "“ಪಬಗನ್ನಡ”'
ವೆನ್ನಿಸಿ ಆ ಕಾಲಕ್ಕಾಗಲೆ ರೂಢಿ ತಪ್ಪುತ್ತಿ ದ್ಧ ಪ್ರಾ ಚೀನತರವಾದ ಭಾಪಾ
ರೂಪವು ಇದ್ದಿತೆಂದ್ಯೂಃ ಅಂದಿನ ಕನ್ನಡ ಮಾತಿನಲ್ಲಿ ಪಾ ತೀಯ
ಭೇದಗಳು ಆಗಲೆ ಇದ್ದುವೆಂದೂ ಇಲ್ಲಿಯ ಹೇಳಿಕೆಗಳಿಂದ ಸ್ಪಪ್ಪ
ವಾಗುತ್ತದೆ.
ದೋಸಮನೆ ಗುಣದ ಪೋಲು.
ದ್ಭಾಸಿಸ ಕನ್ನಡದೊಳೆೊಲ್ಲು ಪೂರ್ವಾಚಾರ್ಯರ್ |
ದೇಸಿಯೆನೆ ನಿಜುಸಿ ಖಂಡ.
ಪ್ರಾಸಮನತಿಶಯಮಿದೆ೦ದು ಯತಿಯೆಂ ಮಿಕ್ಕರ್ ॥ (1. ೭೫)
ಎಂದು ಈತನು ಹೇಳಿ,”ಕನ್ನಡದಲ್ಲ ಹಿಂದಿನಿಂದಲೂ ಕವಿಗಳು ಪ್ರಾಸವನ್ನು
ಆದರಿಸಿದ್ದನ್ನೂ "" ಯತಿ''ಯನ್ನು ಮಿರಿದ್ದನ್ನೂ ಉಲ್ಲೇಖಸುತ್ತಾನೆ,
ಪ್ರಾಸಭೇದಗಳನ್ನು ಸವಿಸ್ತರವಾಗಿ ನಿರೂಪಿಸುತ್ತಾನೆ. ಈಚೆಗೆ ಅಪ್ರ
ಚುರವಾದ ಚತ್ತಾಣ, ಬೆದಂಡೆ ಎಂಬ ₹ ಕಾವ್ಯಜಾತಿಗಳು ಆ ಕಾಲಕ್ಕೆ
ಕನ್ನಡದಲ್ಲಿ ಇದ್ದುವೆಂದು ಕವಿರಾಜಮಾರ್ಗದಿಂದ ಗೊತ್ತಾಗುತ್ತದೆ ; ಇವು
ಗಳ ಲಕ್ಷಣವೂ ಅಲ್ಲಿ ಉಕ್ತವಾಗಿದೆ.
“ಕವಿರಾಜಮಾರ್ಗವು ರಚಿತವಾಗುವ ವೇಳೆಗೆ ಸಂಸ್ಕೃತದಲ್ಲಿ
ಭಾಮಹ, ದಂಡಿ, ವಾಮನ, ಫಟ ಟ--ಇವರ ಗ್ರಂಥಗಳು ನಿಸ 'ಂದೇಹ
ವಾಗಿ ಪ್ರಚುರವಾಗಿಮ್ದ ವ್ರ. ಇವಿರಾಜಮಾರ್ಗಕಾರನು ಉದ್ಭಟ ವಾಮ
ಗಾಂ: ಕೃತಿಗಳನ್ನು ನೋಡಿದ್ದಂತೆ ತೋರುವುದಿಲ್ಲ. ಭಾಮಹನ " ಕಾವ್ಯಾ
2 ಇದು ಪ್ರಾಚೀನತಮ ಕನ್ನಡ ಶಾಸನಗಳಲ್ಲಿ ಕಾಣಬರುವ ಭಾಷೆ; ಇದನು
« ಪೂರ್ವದ ಹಳಗನ್ನಡ''ವೆಂದು ಕರೆಯುವುದು ಈಗ ರೂಢಿಯಾಗಿದೆ.
3 ಚತ್ತಾಣ (=ಚಿತ್ರಾಯತನ), ಬೆದಂಡೆ (-ಮೈದಂಡಿಕ) ಎಂಬ ಪದ್ಯಬಂಧ
ಜಾತಿಗಳು, ನಮಗೆ ತಿಳಿದ ಮಟ್ಟಿಗೆ, ಸಂಸ್ಕೃತದ ಅಲಂಕಾರ ಗ್ರಂಥಗಳಲ್ಲಿ ಕೂಡ
ಎಲ್ಲಿಯೂ ಉಕ್ತವಾಗಿಲ್ಲ. ಇವುಗಳ ಸ್ವರೂಪದ ವಿವೇಚನೆಗೆ ಪ್ರಕೃತ ಗ್ರಂಥದಲ್ಲಿ
ಅವಕಾಶವಿಲ್ಲ.
ನ
೪೪೦ ಭಾರತೀಯ ಕಾವ್ಯಮಾಮಾಂಸೆ
ಲಂಕಾರ 'ದ ಪರಿಚಯ ಅವನಿಗಿತ್ತು; ಅಲ್ಲಂದ ಕೆಲವು ವಿಷಯಗಳನ್ನೂ
ಗ್ರಪಿಸಿದ್ದಾನೆ. “ಆದರೆ ಅವನ ಒಲವೆಲ್ಲ ದಾಕ್ಷಿಣಾತ್ಯನಾದ ದಂಡಿಯ:
"ಕಾವ್ಯಾದರ್ಶ'ದ ಕಡೆಗೆ. ಅದರ ದಾರಿಯನ್ನೇ ತಾನೂ ಬಲುಮಟ್ಟಿಗೆ.
ಅನುಸರಿಸಿರುವುದಲ್ಲದೆ, ಅಲ್ಲಿಯ ಲಕ್ಷ್ಯ ಲಕ್ಷಣಗಳನ್ನೇ ತನ್ನ ಗ್ರಂಥದಲ್ಲಿ
ಎಷ್ಟೋಕಡೆ ಭಾಪಾಂತರಿಸಿಯೋ ಅಲ್ಬವ್ಯತ್ಯಾಸದೊಡನೆ ರೂಪಾಂತರಿ:
ಸಿಯೋ ಕೊಟ್ಟಿದ್ದಾನೆ. “ಕಾವ್ಯಕ್ಕೆ ಸೊಗಸನ್ನುಂಟುಮಾಡುವುದೆಲ್ಲವೂ
"ಅಲಂಕಾರ ''ಪೆಂದು ದಂಡಿಯಂತೆಯೇ ಕವಿರಾಜಮಾರ್ಗಕಾರನೂ
ಭಾವಿಸುತ್ತಾನೆ. “ಅವನಿಗೆ ಪರಮಪ್ರಿಯವಾದೆ ದಶಗುಣಗಳನ್ನು ಇವೆನೂ
ಹೇಳಿ ಅವನ ವೈದರ್ಭ ಗೌಡಮಾರ್ಗಗಳಿಗೆ ದಕ್ಷಿಣೋತ್ತರಮಾರ್ಗ
ಗಳೆಂದು ಹೆಸರಿಟ್ಟು ನಿರೂಪಿಸಿದ್ದಾನೆ.1 *: ಪದ್ಯಂ ಗದ್ಯಂ ಚ ಮಿತ್ರಂ ಚ
ಎಂದು ಹೇಳುವ ದಂಡಿಯಂತೆಯೇ (;. ೧೧) ಇವನೂ « ಗದ್ಯ ಪದ್ಯ
ಸಮ್ಮಿತ್ರಿತ'' ಎಂದು ಕಾವ್ಯ ಪ್ರಕಾರಗಳನ್ನು ಹೇಳಿದ್ದಾನೆ. ಆದರೆ.
" ವಿಮಲೋದಯ ನಾಗಾರ್ಜುನ ಸಮೇತ ಜಯಬಂಧು ದುರ್ವಿನೀತಾದಿ''
ಕನ್ನಡದ ಗದ್ಯಕವಿಗಳನ್ನೂ “ ಪರಮ ಶ್ರೀವಿಜಯ ಕವೀಶ್ವರ ಪಂಡಿತ
ಚಂದ್ರಲೋಕಪಾಲಾದಿ'' ಪದ್ಯಕವಿಗಳನ್ನೂ ನಾಮನಿರ್ದೇಶಮಾಡಿ
ಹೇಳಿರುವಂತೆ " ಮಿಶ್ರ''ಕವಿಗಳ ಹೆಸರನ್ನಷ್ಟೇ ಅಲ್ಲ, "ಚ೦ಪೂ'' ಎಂಬ
ಆ ಕಾವ್ಯಪ್ರಕಾರದ ಹೆಸರನ್ನು ಕೂಡ ಹೇಳದಿರುವುದನ್ನು ನೋಡಿದರೆ,
ಮುಂದೆ ಒಂದನೆಯ ಗುಣವರ್ಮ (ಕ್ರಿ. ತ.ಸು. ೯೦೦), ಪಂಪ (ಕ್ರಿ. ಶೆ.
೯೪೧) ಮೊದಲಾದ ಹಿರಿಯ ಕವಿಗಳೆ ಕೈಯಲ್ಲಿ ಸುಪ್ರತಿಪ್ಠಿತವಾಗಿ ಹಳ
ಗನ್ನಡ ಕಾವ್ಯದ ಪ್ರ ಧಾನರೂಪವಾಗಿ ನಿಂತ ಚಂಪು ಕವಿರಾಜಮಾರ್ಗದ
ಕಾಲದಲ್ಲಿ ಇನ್ನೂ ಬೇರೂರಿರಲಿಲ್ಲವೇನ್ಲೋ ಎನ್ನಿಸುತ್ತದೆ. ಶ್ರೀವಿಜಯನು
ಚೆಂದ್ರಪ್ರಭತೀರ್ಥಂಕರನ ಚರಿತ್ರೆಯನ್ನು ಚಂಪೂಕಾವ್ಯವಾಗಿ ರಚಿಸಿದ
4 ಕೊನೆಯಲ್ಲ ಮಾತ್ರ, ನೋಹ್ಪೆಂ, ಬರಿಸುವೆಂ--ಈ ಬಗೆಯ ರೂಪಗಳು ದಕ್ಷಿಣ
ಮಾರ್ಗದವೆಂದೂ ನೋಡುವೆಂ, ಬರಿಪೆ೦--ಎಂಬುವು ಉತ್ತರ ಮಾರ್ಗದವೆಂದೂ, ಬರಿಪ್ಪೆಂ-
ಎಂಬುದು ಉತ್ತರೋತ್ತರದ್ದೆಂದೂ ಹೇಳಿ, ಅ ಕಾಲದಲ್ಬದ್ದಿರಬಹುದಾದ ಪ್ರಾಂತೀಯ
ಭೇದಗಳನ್ನು ಸೂಚಿಸಿದ್ದಾನೆ (11. ೧೦೨ ಮುಂ).
ಪರಿಶಿಷ್ಟ “೪೧
ನೆಂದು ಈಚಿನ ಹೇಳಿಕೆಯೊಂದುಂಟು.: ಇದು ದಿಟವಾದರೆ, " ಕವಿರಾಜ
ಮಾರ್ಗ'ದ ಕತ್ಸ ೯ವೇ ಬಹುಶಃ ಕನ್ನಡದಲ್ಲಿ “ ಚಂಪು''ವಿನ ಆದ್ಯ ಪ್ರವರ್ತ
ಕನೆಂದೂ ಹೇಳಜೇಕಾಗಬಹುದು.
“ಅಲಂಕಾರಗಳ ನಿರೂಪಣೆಯಲ್ಲಿ ಕಾವ್ಯಾದರ್ಶಕ್ಕೂ ಕವಿರಾಜ.
ಮಾರ್ಗಕ್ಕೂ ಸಂವಾದವೇ ಹೆಚ್ಚು; ವ್ಯತ್ಯಾಸಗಳು ಅಲ್ಪ. ಶಾಸ್ತ್ರದ
ಬೆಳೆವಳಿಗೆಯ ದೃಷ್ಟಿ ಯಿಂದ ಮುಖ್ಯವಾದ ರಡು ವ್ಯತ್ಯಾಸಗಳನ್ನು ಮಾತ್ರ
ಇಲ್ಲ ಗಮನಿಸಬಹುದು. “ದಂಡಿಯಂತೆ ಕವಿರಾಜಮಾರ್ಗಕಾರನೂ ರಸ
ಗಳನ್ನು ರಸವದಲಂಕಾರದಲ್ಲಿ ಒಳಪಡಿಸಿದ್ದಾನೆ : ಆದರೆ ಅಲ್ಲಿ ಎಂಟುರಸ
ಗಳು ಮಾತ್ರ ಉಕ್ತವಾಗಿದ್ದರೆ, ಇಲ್ಲಿ--
ರಾದ್ದು ತ ಕರುಣಾ ಶೃ೦-
ಗಾರ ಭಯಾನಕ ಸರೌದ್ರ ಬೀಭತ್ಸಮಹಾ.!
ಸಾರತರ ಹಾಸ್ಯ ಶಾಂತಾ
ಇರಂ ನವವಿಧವಿಕಲ್ಬಮಾ ರಸಮಾರ್ಗಂ ॥ (111. ೧೮೯)
ಎಂದು ಒಂಬತ್ತನ್ನು ಸ್ಪಪ್ಟವಾಗಿ ಹಳ್ಳಿ ಮಿಕ್ಕವುಗಳ ಜೊತೆಗೆ ಶಾಂತ
ರಸಕ್ಕೂ ಉದಾಹರಣಕೊಡುತ್ತಾನೆ. ಶಾಂತರಸ ''ದ ಜಿತ ಜು
ನೆನೆದರೆ, ಇಲ್ಲ ಅದು ಹೊಸದಾಗಿ ಸೇರಿರುವುದಕ್ಕೆ ಈ ಗ್ರ೦ಹಕಾರನು
ಜೈನನಾಗಿದ್ದುದು ಕಾರಣವಾಗಿರಬಹುದೆನ್ನಿ ಸುತ್ತದೆ. ಉದ್ಭ ಟನ ನಿರೂ
ಪಣಿಯನ್ನು ನೋಡಿಕೊಂಡು ಈತನು ಬರೆದನೆಂದು ಹೇಳಲು ಸಾಕಾದಷ್ಟು
ಆಧಾರವಿಲ್ಲ. ್ ಕಾವ್ಯಮಾಮಾಂಸಾ ಶಾಸ್ತ್ರದ ದೃ ಪ್ವಿಯಿಂದ ಬಹುಮುಖ್ಯ
ವಾದ ಇನ್ನೊಂದು ವಿಷಯವೆಂದರೆ " ಧ್ವನಿ''ಯ ಪ್ರಸ್ತಾವ ಕವಿರಾಜ
ಮಾರ್ಗದಲ್ಲಿ ಬಂದಿರುವುದು. ಇದರ ವಿಚಾರ ಮುಂದೆ ಪ್ರತ್ಯೇಕವಾಗಿ
ಬರುತ್ತದೆ.
ಕಾವ್ಯಾದರ್ಶದ ಲಕ್ಷ $ ಲಕ್ಷಣಗಳನ್ನು ಕಪಿರಾಜಮಾರ್ಗಕಾರನು
ಬಲುಮಟ್ಟಿಗೆ ಅವಲಂಬಿಸಿ ಅಲ್ಲಿಯ ಉಕ್ತಿಗಳನ್ನೇ ಹಲವು ವೇಳೆ ಕನ್ನಡಕ್ಕೆ
5 ಮಂಗರಸನ "ನೇಮಿಔನೇಶಸಂಗತಿ', ]. ೨೨-೪, ಕವಚರಿತೆ, 1, ಪು. ೧೩ನ್ನೂ
ನೋಡಿ.
ರಂ. ಶ್ರೀ. ಮುಗಳಿಯವರ " ಚಂಪುವಿನ ಮೂಲ ' (ಪರಿಪತ್ನತ್ರಿಕೆ, ೫೫11. ೧)
ಎಂಬ ಲೇಖನದ ಪ್ರತಿಷಇದನೆಗೂ ನಮ್ಮ ನಿರೂಪಣಿಗೂ ಕೆಲವುಮಟ್ಟಿಗೆ ಅಭಿಪ್ರಾಯ
ಭೇದವುಂಟು.
6 ಮುಂಡೆ ಪಟ೪ಖಲ ಮುಂ. ನೋಡಿ,
೪೪೨ ಭಾರತೀಯ ಕಾವ್ಯಮಿಾಮಾಂಸೆ
ಅನುವಾದಿಸುತ್ತಾನೆಂದು ಹಿಂದೆ ಹೇಳಿತಪ್ಪೆ. ಅನುವಾದದಲ್ಲಿ ಮೂಲದ
ವಾಕ್ಯಗಳ ಸೊಗಸು ತಪ್ಪದೆ ಬಂದಿದೆಯೆಂದು ಎಲ್ಲ ಸಂದರ್ಭಗಳಲ್ಲೂ ಹೇಳ
ಲಾಗುವುದಿಲ್ಲ. ಸಂಸ್ಕ ತ ಸಮಾಸಗಳನ್ನು ಹೆಣಿದು ಕಂದಪದ್ಯ ದಲ್ಲಿ
ಅಳವಡಿಸುವಾಗ ಒಮ್ಮೊಮ್ಮೆ ಅರ್ಥಕ್ಸೆ (ತಕ್ಕ ಆಸ್ಪದಕೊಟಿ ರುಪುದಹ
ಉಂಟು. ಆದರೆ ಒಟ್ಟಿನಲ್ಲಿ ಕವಿರಾಜಮಾರ್ಗದ ಬರೆವಣಿಗೆ ಲಲಿತ
ವಾಗಿಡೆಯೆ೦ದೇ ಒಪ್ಪಬೇಕು.
ಇದರ ಅನುವಾದ ರೀತಿಗೆ ಒಂದೆರಡು ಉದಾಹರಣಿಗಳನ್ನು ಕೊಡ
ಬಹುದು. "" ಉದಾರಗುಣ ''ದ ಲಕ್ಷಣ ಕಾವ್ಯಾದರ್ಶದಲ್ಲಿ ಪೀಗೆ
ಬಂದಿದೆ -_
ಉತ್ಕರ್ಷವಾನ" ಗುಣಃ ಶಶ್ಚಿದುಕ್ತೇ ಯಸ್ಮಿನ್ ಪ್ರತೀಯತೇ |
ತದ.ದಾರಾಹ್ಟೆಯಂ ತೇನ ಸನಾಥಾ ಕಾವ್ಯಪದ್ಧತಿಃ ॥ (. ೭೬)
ಕವಿರಾಜಮಾರ್ಗಕಾರನು ಇದನ್ನೇ ಬಲುಮಟ್ಟಿಗೆ ಅನುಸರಿಸಿ ಪೀಗೆ
ಕನ್ನಡಿಸುತ್ತಾನೆ. _
ಮಿಗೆ ವಸ್ತುಗತಸ್ಥಿತಿಯಂ
ಬಗೆದಗ್ಗಳಮಾಗಿ ಪೇಜ್ಹೊಡಕ್ಕುಮಂದಾರಂ |
ಬಗೆವೊಡೆ ಕಾವ್ಯದ ಪದವಿಯ
ನೆಗಣೆಗದು ಮೂಲಮದಅ ಪಾಂಗಿಂತಕ್ಕುಂ ॥ (11. ೭೯)
ಕಾವ್ಯದಲ್ಲಿ ಎಳ್ಳಷ್ಟೂ ದೋಪವಿರಕೂಡದು ಎಂಬುದನ್ನು ದಂಡಿ ಹೀಗೆ
ಹೇಳುತ್ತಾ ನೆ.
ತದಲ್ಪಮಪಿ ನೋಪೇಕ್ಷ್ಯ ೦ ಕಾವ್ಯೇ ದುಷ್ಪ೦ ಕಥಂಚನ |
ಸಾ ದ್ವಸಃ ಸುಂನ ರಮ ಸ್ಟಿತ್ರೇಣೈಕೇನ' ದುರ್ಭಗಂ ॥ (1, ೭)
ಇವಿರಾಜಮಾರ್ಗಕಾರನು ಇಲ್ಲಿ ತೊನ್ನಿನ ಹೋಲಿಕೆಯನ್ನು ತೊರೆದು,
ಹೆಣ್ಣಿನ ದುಸ್ಸಹವಾಸದ ಮಾತನ್ನು ಎತ್ತಿ, ವಿಷಯವನ್ನು ಸಮರ್ಥಿಸು
ತ್ತಾನೆ
ಗೀತಿಕೆ 1 ದೋಸಮೇನಾನುಂ ಸ್ವಲ್ಪಮಾದೊಡೆಂ
ಮಾಸಿಸಿರ್ಕುಮಣಂ ಕೃತಿವಧುವಂ |
ಪೇಸದೆ ದುರ್ಜನದೊಳಾನ ಪರಿಚೆಯಂ
ಮಾಸಿ ಕಿಡಿಸುವವೊಲೊಪ್ಪುವ ಕುಲವಧುವಂ | (ಸ. ೧೧೨)
ತಾನು ಹೇಳುವುದನ್ನು ಮನಮುಟ್ಟಿಸಲು ಕವಿರಾಜಮಾರ್ಗಕಾರನು
ಅಲ್ಲಲ್ಲೇ ಲೋಕಾನುಭವದ ಹೋಲಿಕೆಗಳನ್ನು ಕೊಡುವುದುಂಟು. ಉದಾ
ಪರಿಶಿಪ್ವ ೪೪೩
ಹರಣಿಗೆ ಲಘುಸ್ಟರದಲ್ಲಿ ಕೊನೆಯಾಗುವ ಪದದ ಮುಂದೆ ಒತ್ತಕ್ಕರದಿಂದ
ಮೊದಲಾಗುವ ಪದವನ್ನು ಇರಿಸಿ ("" ಬರಿಸಿ ಕ್ಲಿತಿಪಶಿಯಂ ಬ ಎಂಬಂತೆ)
ರಚನೆಮಾಡಿದರೆ, « ಕೂಸಿನ ತಲೆಯೊಳ" ಬಿಣ್ಬೊಖೆಯನಿಟ್ಟವೋಲ"
ಅಸುಖಕರಂ '' ಎಂದು ಹೇಳಿರುವುದು (1೬. ೬) ಮನೋಹರವಾಗಿದೆ.
ಇಂಥ ಉಕ್ತಿಗಳು ಈ ಗ್ರಂಥದಲ್ಲಿ ಇನ್ನೂ ಹಲವಿಷೆ.
ಕವಿರಾಜಮಾರ್ಗಕಾರನ ಸೃತಂತ್ರಶೈಲಿ ಹೇಗಿರುವುದೆಂಬುದಕ್ಕೆ
ನಿದರ್ಶನವಾಗಿ, ಉಕ್ತನಿಪುಣತೆಯ ದೃಷ್ಟಿಯಿಂದ ಗ್ರ೦ಥಕಾರರ ತಾರ
ತಮ್ಯವನ್ನು ನಿರೂಪಿಸುವ ಕೆಲವು ಪದ್ಯಗಳನ್ನು ಇಲ್ಲ ಉದ್ಭರಿಸಿ ಕೊಡ
ಬಹುದು :
ವೆನೆನೆನೆದು ಪೆಜಿರ ಮಾತುಗ.
ಳನೆ ನೆಗಟ್ಟಿರೆ ಕೃತಿಯೊಳದು ವ[ಲಂ] ನಗದ ಗುಹಾ. |
ಧ್ವ ನಿಯಪೊಲನರ್ಥವಚರ೦
ತನಗಣಾಗಿಸಲಖಿಯ ನುಚಿತ ವಾಕ್ಚತುರತೆಯಂ I
ಕುಖಶಂತು ಹೆಚಿರ ಬಗೆಯಂ
ತೆಯೆದಿರೆ ಷೆಜಿರ್ಗ ಜುಪಲಾರ್ಪ್ಷವಂ ಮಾತೆಖುವಂ ॥
ಶಿಖಿನಖಸೊಳೆ ಪಿರಿಮಮರ್ಥಮ್ಗ
ನಖಿಪಲ್ ನೆಖೆವಾತನಾತನಿಂದಂ ನಿಪುಣಂ ॥
ನುಡಿಯಂ ಛಂದದೊಳೊಂದಿರೆ
ತೊಡರ್ಚಲಜಿ ವಾತನಾತನಿಂಬಂ ಜಾಣ೦ಂ |
ತಡೆಯದೆ ಮಹಾಧೃಕೃತಿಗಳ..
ನೊಡರಿಸಲಾರ್ಪಾತನೆಲ್ಲರಿಂದ೦ ಬಲ್ಬಂ ॥
ವಾತಯಿವರ್ ಕೆಲಬರ್ ಜಗ-
ತೀತಳಗತಮನುಜರೊಳಗೆ ಮಾಶಜುವವರೊಳ್ |
ನೀತಿಪಿದರಮಲಕವಿತಾ._
ನೀತಿಯು ತರ್ ಕೆಲೆ ಪರಮಠವಿವೃಷಧರ್ಕಳ್ I (i. ೧೪-೧೭)
ಕನ್ನಡನಾಡಿನ ಜನಗಳ ಸಹಜವಾದ ಸಾಹಿತ್ಯನಿಪುಣತೆಯನ್ನು ಶ್ಲಾಘಿಸುವ
ಪದ್ಯಗಳಲ್ಲ ಒಂದನ್ನಾದರೂ ಇಲ್ಲಿ ಉದಾಹರಿಸಬೇಕೆನ್ನಿಸುತ್ತದೆ :
ಬ ೧ ಸ ಎ pf)
ಪದನಯಿದು ನುಡಿಯಲುಂ ನುಡಿ.
ದುಡನಯಹಿನಾರಯಲುಮಾರ್ಸರಾ ನಾಡವರ್ಗಳ್ |
ಚದುರರ್ ನಿಜನಿಂ ಕುಖಿತೋ.
ದದೆಯು೦ ಕಃವೃಪ್ರಯೋಗಪರಿಣಶಮತಿಗಳ" ॥ (i. ೩೮)
೪೪ ಭಾರತೀಯ ಕಾವ್ಯಮಾಮಾಂಸೆ
ಕವಿರಾಜಮಾರ್ಗವು ದಾರಿಮಾಡಿಕೊಟ್ಟ ಬಳಿಕ ಕೆಲವು ಕಾಲ
ಕನ್ನಡ ಸಾಪಿತ್ಯವಾಪಿನಿ ತುಂಬುಹೊಳೆಯಾಗಿ ಹರಿಯಿತು. ಕ್ರಿ. ತ. ಹತ್ತ
ನೆಯ ಶತಮಾನವನ್ನು ನಮ್ಮ ಸಾಹಿತ್ಯದ ಸ್ವರ್ಣಯುಗವೆಂದು ಕರೆಯುವು
ದುಂಟು. ಆ ಮುಂದೆಯೂ ಹಳೆಗನ್ನಡದಲ್ಲಿ ಉದ್ದ ೦ಥಗಳು ಹುಟ್ಟಿ
ದುವು. ಆದರೆ ಈ ಕಾಲದಲ್ಲೆಲ್ಲ ನಮ್ಮವರು ಕಾವ್ಯನಿರ್ಮಾಣದಲ್ಲಿ ಮಗ್ನ
ರಾಗಿದ್ದರ್ಲೇ ಹೊರತು ಅದರ ಲಕ್ಷಣವಿಪೇಚನೆಗೆ ಮನಸ್ಸುಕೊಟ್ಟಂತೆ
ತೋರುವುದಿಲ್ಲ. “ಅಂತೂ ಕವಿರಾಜಮಾರ್ಗದಿಂದ ಸುಮಾರು ಮೂರು
'ಶತಮಾನಗಳನ್ನು ದಾಟಿ ಬಂದ ಹೊರತು ಕಾವ್ಯಸ್ಯರೂಪವನ್ನು ತಕ್ಕ
ಮಟ್ಟಿಗೆ ಸಮಗ್ರವಾಗಿ ಪ್ರತಿಪಾದನೆಮಾಡುವ ಇನ್ನೊಂದು ಗ್ರಂಥ ಕಣ್ಣಿಗೆ
ಬೀಳುವುದಿಲ್ಲ. “ಈ ಎರಡನೆಯ ಕೃತಿಯೇ ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯ
ನೆನ್ನಬಹುದಾದ ನಾಗವರ್ಮನ * ಕಾವ್ಯಾವಲೋಕನ '.
ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ದರಾದ ನಾಗವರ್ಮರು ಎಷ್ಟು ಮಂದಿ
ಎಂಬ ವಿಷಯವಾಗಿ ತುಂಬ ಚರ್ಚೆ ನಡೆದಿದೆ. ಅದರಲ್ಲಿ ಪ್ರವೇಶಿಸು
ವುದಕ್ಕೇ ಇಲ್ಲಿ ಎಡೆಯಿಲ್ಲ. ವಿದ್ಯಾಂಸರಿಗೆ ಬಹುಮತವಾದ ನಿರ್ಣಯ
ವನ್ನು ಮಾತ್ರ ಇಲ್ಲಿ ಸೂಚಿಸಬಹುದು. “ಛಂದೋಂಬುಧಿ” ಯನ್ನು
ರಚಿಸಿದವನೂ " ಕಾದಂಬರಿ ' ಯನ್ನು ಕನ್ನಡಿಸಿದವನೂ ಒಬ್ಬ ವ್ಯಕ್ತಿ;
ಈತನೇ ಮೊದಲನೆಯ ನಾಗವರ್ಮ ; ಇವನ ಕಾಲ ಕ್ರಿ. ಶತ. ೧೦ನೆಯ
ತತಮಾನದ ಕೊನೆ ಮತ್ತು ೧೧ರ ಆದಿಭಾಗ. ಈ ನಾಗವರ್ಮನೇ
ಬೇರೆ, " ಕಾವ್ಯಾವಲೋಕನ ' ಮೊದಲಾದ ಗ್ರಂಥಗಳ ಕರ್ತೃವೇ ಬೇರೆ;
'ಈ ಎರಡನೆಯ ನಾಗವರ್ಮನ ಕಾಲ ಕ್ರಿ. ತ. ೧೨ನೆಯ ಶತಮಾನದ
ಮಧ್ಯ ಮತ್ತು ಉತ್ತರಭಾಗ. ಇವರಿಬ್ಬರಲ್ಲದೆ " ಚಂದ್ರಚೂಡಾಮಣಿ
ಶತಕ ' ವೆಂಬ ಗ್ರಂಥವನ್ನು ರಚಿಸಿದ ನಾಗವರ್ಮನು ಬೇರೆ ಇದ್ದಾನೆ!
7 ಈ ವಿಷಯದಲ್ಲಿ ನೋಡಬಹುದಾದ ಗ್ರಂಥಗಳು ಮತ್ತು ಲೇಖನಗಳು. ರಾ. ನರ
ಸಿಂಹಾಚಾರ್ಯ : ಕಾವ್ಯಾವಲೋಕನದ ಪೀಠಿಕೆ, " ಕವಿಚರಿತೆ, 1 ನಾಗವರ್ಮನ ವಿಚಾರ,
" ಕವಿಚರಿತೆ, 111 '- ಅವತರಣಿಕೆ ; ಎ. ವೆಂಕಟಸುಬ್ಬಯ್ಯ ; "ಕೆಲವು ಕನ್ನಡ ಕವಿಗಳ
ಜೀವನ ಕಾಲವಿಚಾರ', " ನಾಗವರ್ಮನ ಕೃತಿಗಳು ' (ಪ್ರಬುದ್ಧಕರ್ಣಾಟಕ, 77. ೩),
ಟ್ಲಿ ಎಸ್. ವೆಂಕಣ್ಣಯ್ಯ : ಕರ್ಣಾಟಕ ಕಾದಂಬರೀ ಸಂಗ್ರಹದ ಪೀಠಿಕೆ; ಮಂ. ಗೋವಿಂದ
ಪೈ: "ನಾಗವರ್ಮರು ಎಷ್ಟು ಮಂದಿ? ' (ಪರಿಷತ್ಪತ್ರಿಕೆ, ₹೫. ೧-೨). -
ಪರಿಶಿಷ್ಟ ೪೪೫
ಇಲ್ಲಿ ನಮಗೆ ಪ್ರಸಕ್ತನಾದ ಎರಡನೆಯ ನಾಗವರ್ಮನು ಜಗದೇಕ
ನೆಂಬ ದೊರೆಯ ಬ « ಕಟಕೋಪಾಧ್ಯಾಯ '' ನಾಗಿದ್ದವನು, " ಅಭಿ
ನವಶರ್ವವರ್ಮ '' ನೆಂದು ಹೆಸರು ಪಡೆದಿದ್ದ ವನು, ಪ್ರ ಸಿದ್ಧಕವಿಯಾದ
ಜನ್ಮನಿಗೆ ಉಪಾಧ್ಯಾಯನಾಗಿದ್ದವನು.
": ಛಂದೋವಿಚಿತಿಯೆಲಂಕೃತಿ
ಸಂದಭಿಧಾನ . ಕೋತಮೆಂಬಿವು ವಾಕ್‌ಶ್ರಿ ೬!
ಸುಂದರಿಗೆ ರತ್ನ ಮಂಡನ.
SLES ನಾಗವರ್ಮನ ಕೃತಿಗಳ್ |
ಎಂದು " ಕಾವ್ಯಾವಲೋಕನ ' ದ ಕೊನೆಯಲ್ಲ (ಪದ್ಯ ೯೬೫) ಉಕ್ತ
ವಾಗಿದೆ. ಈ ಕೃತಿಗಳಲ್ಲಿ " ಛಂದೋವಿಚಿತಿ' ದೊರೆತಿಲ್ಲ; ಅಲಂಕೃತಿ
ಯೆಂಬುದು ಪ ಸತ್ತ ಕೃತಿಯಾದ "ಕಾವ್ಯಾವರೋಕನೆ'. ": ಅಭಿಧಾನ.
ಕೋಶ''ವು1 ಸಂಸ್ಕೃತ ಪದಗಳ ಕನ್ನಡ ಅರ್ಥವನ್ನು ತಿಳಿಸುವ ಪದ್ಯ
ರೂಪದ ನಿಘಂಟು ; "ವಸ್ತುಕೋಶ ' ಹೆಂದು ಇದರ ಹೆಸರು. ಇವಲ್ಲದೆ,
ನಾಗವರ್ಮನು ಸಂಸ್ಕೃತ ಭಾಷೆಯಲ್ಲಿ ಸೂತ್ರವೃತ್ತಿಗಳ ರೂಪದಲ್ಲಿ ಬರೆ
ದಿರುವ " ಕರ್ಣಾಟಕ ಭಾಪಾಭೂಷಣ' ವು ಕನ್ನ ಡ ಭಾಷೆಯ ವಾ, ಕರಣ
ವನ್ನು ತಿಳಿಸುತ್ತದೆ. 11
ರ ಈತನು ಪಶ್ಚಿಮಚಾಳುಕ್ಯರ ಮೂರನೆಯ ಜಗದೇಕಮಲ್ಲ (ಕ್ರಿ. ಶ. ೧೧೬೩.
೧೧೮೪) ಎಂದು ಮಂ. ಗೋವಿಂದ ಪೊ ಅನರು ಅಭಿಪ್ರಾಯಪಡುತ್ತಾರೆ.
9 ಮೊದಲನೆಯ ನಾಗವರ್ಮನ "ಛಂದೋಂಬುಧಿ ' ಯ ಈಚಿನ ಪಾತಗಳಲ್ಲ ಎರಡ
ನೆಯ ನಾಗವರ್ಮನ " ಛುದೋಪವಿಚಿತಿ' ಯ ಕೆಲವು ಭಾಗಗಳ ಸೇರಿಹೋಗಿರುವ ಸಂಭ
ವವುಂಟು. (ಎ. ವೆಂಕಟರಾವ್ ವ.ತ್ತು ಎಚ್. ಶೇಷಯ್ಯಂಗಾರ್ : "ವಸ್ತುಕೋಶ'ದ
ಮುನ್ನುಡಿ, ಪು. ಇ: ನೋಡಿ).
10 “ಅಭಿಧಾನ. ಕೋಶ” ಎಂಬ ಕಡೆ ಅಕ್ಷರ ಲೊಃಪವಾಗಿವೆ; ಛಂದಸ್ಸು
ಕೆಟ್ಟಿದೆ " ಅಭಿಧಾ [ವಸು] ಕೋಶ '' ಎಂದು ಐಲ್ಲಯ' ಪಂಠವಾಗಿರಬೇಕೆಂದು ಕೆಲವರು
ಊಹಿಸುತ್ತಾರೆ. '" ಅಭಿಧಾನಕೋಶ '' "" ಅಭಿಧಾನವಸ್ತುಕೋಶ ', "" ವಸ್ತುಕೋಶ ''___
ಹೀಗೆ ಮೂರು ರೂಪವಾಗಿ ಗ್ರಂಥದ ಕಾಂಡಾಂತ್ಯಗದ್ಯಗಳಲ್ಲ ಅದರ ಹೆಸರು ಕಾಣಬರು
ತ್ತದೆ.
11 “ ಏಮಗನುಕೂಲಮಕ್ಕೆ ಗುಣವರ್ಮನ ಜಾಣ್ಣುಡಿ ಪಂಪನಿಂಪು ಪೊನ್ನನ ಬಗೆ
ನಾಗವರ್ಮನ ಬಹುಜ್ಮತೆ ರನ್ನನ ಶತಿ -ಈ ಕವಿಗಳಲ್ಲೆ ಜಿನೇಂದ್ರ ಪುರಾಣಕತ್ಕ ೯
ಗಳ್ 1'' ಎಂಬ ಜನ ಅನಂತನಾಧಪುರಾಣದ ಪದ್ಯದಿಂದ (;. ೩೫) ನಾಗವರ್ಮನು
ಜನಪುಗಾಣವನ್ನು ರಚಿಸಿದ್ದ ತೆ ಗೊತ್ತಾಗುತ್ತದೆ. ಈತನು ಜನ್ನನ ಉಪಾಧ್ಯಾಯನಾದ
ಎರಡನೆಯ ನಾಗೆವರ್ಮನಾಗಿರಬೇಕೆಂಡು ಊಹಿಸುವುದು ಸಾಧ್ಯ. ಅದರೆ ಇಲ್ಲ ಕವಿಗಳ
ಹೆಸರನ್ನು ಬಲುಮಟ್ಟಿಗೆ ಕಾಲಾನುಕ್ರಮದಲ್ಲಿಯೇ ಹೇಳಿರುವುದರೆಂದ ರನ್ನನಿಗಿಂತ (ಕ್ರಿ ಶ.
೯೯೩) 'ಜೆತಿತವನಲ್ಲದೆ ಬೇರೊಬ್ಬ ನಾಗವರ್ಮನನ್ನು ಜನ್ನನು ನಿರ್ದೇಶಿಸಿರಬಹುದೇ ಎನ್ನಿ
ಸುತ್ತದೆ. ಇನ್ನು ಒಂದನೆಯ” ನಾಗವರ್ಮನು ಜೈನನಲ್ಲವೆಂದು ತೋರುವುದರಿಂದ ಈ
ವಿಷಯ ಸಂದೇಹದಿಲ್ಲಯೇ ಉಳಿಯುತ್ತದೆ,
೪೪೬ ಭಾರತೀಯ ಕಾವ್ಯಮಾಮಾಂಸೆ
“ಕಾವಾ ್ಯಿವಲೋಕನದಲ್ಲ ಶಬ್ದಸ್ಕ ತಿ, ಕಾವ್ಯಮಲವ್ಯಾವೃತ್ತಿ, ಗುಣ
ವಿವೇಕ, ರೀತಿಕ್ರಮ ರಸನಿರೂಪಣ, ಕವ ನಿಸಮಯ ತು ಐದು ಅಧಿಕರಣ
ಗಳಿವೆ. ಸೂತ್ರಗಳಿಗೆಲ್ಲ ಪ್ರಾಚೀನ ಕನ್ನಡ ಕಾವ್ಯಗಳಿಂದ ಉದಾಹರಣಿ
ಗಳನ್ನು ಆಯ್ದು ಕೊಟ್ಟಿರುವುದು ನಾಗವರ್ಮನ ವಿಶೇಪಗುಣ. (ಇದ
ರಿಂದ ಕನ್ನಡದ ಹಿ೦ದಿನ ಅನೇಕ ಕವಿಕಾವ್ಯಗಳ ವಿಷಯವನ್ನು ತಿಳಿಯಲು
ಸಹಾಯವಾಗಿದೆ.) ಒಮ್ಮೊಮ್ಮೆ ನಾಗವರ್ಮನು ಸಂಸ್ಕ ಎತೆಲಕ್ಷಣ ಗ್ರಂಥ
ಗಳಲ್ಲ ಕಾಣಬರುವ ಉದಾಹರಣ ಪದ್ಯಗಳನ್ನು ಕನ್ಮಡಿಸಿಕೊಟ್ಟಿ ರುವಂತೆ
ತೋರಿದರೂ ಇಂಥವು ಬಲು ಕಡಮೆ. * ಶಬ್ಧ ಸ್ಮ ಂತಿ' ಯಲ್ಲಿ ನಾಗ
ವರ್ಮನು ಕನ್ನಡ ವ್ಯಾಕರಣವನ್ನು ಸಂಗ್ರಹವಾಗಿ, ಆದರೆ ಸಾಧಾರ
ವಾಗಿ, ಹೇಳಿದ್ದಾನೆ. " ಶಬ್ದಸ್ಥೃತಿ ' ಕಾವ್ಯಾವಲೋಕನದ ಒಂದು ಭಾಗ
ವಾಗಿದ್ದರೂ ಅದನ್ನೇ ಪ್ರತ್ಯೇಕಿಸಿ ತೆಗೆದುಕೊಂಡರೆ ಕನ್ನಡಕ್ಕೊಂದು
ಸ್ವತಂತ್ರವ್ಯಾಕರಣವಾಗುತ್ತದೆ. “ನಮಗೆ ದೊರೆತಿರುವ ಕನ್ನಡ ವ್ಯಾಕರಣ
ಗಳಲ್ಲ ಇದೇ ಮೊದಲನೆಯದು; ಇದನ್ನೂ ನಾಗವರ್ಮನ ಇನ್ನೊಂದು
ಕೃತಿಯಾದ ಭಾಪಾಭೂಪಣವನ್ನೂ ಉಪಯೋಗಿಸಿಕೊಂಡೇ ಕೇಶಿರಾಜನು
ತನ್ನ ವಿಸ್ತಾರವಾದ "ಶಬ್ದಮಣಿದರ್ಪಣ ' ವನ್ನು ಬರೆದಿರುವುದು. ವಿಷಯ
ಸಂಗ್ರಹ, ಪ್ರಯೋಗಸಂಪತ್ತು ಈ ಎರಡರಲ್ಲೂ ಕೇಶಿರಾಜನು ನಾಗ
ವರ್ಮನಿಗೆ ತುಂಬ ಯಣ್‌ಯಾಗಿದ್ದಾನೆ.
ನ್ನು ಅಲಂಕಾರಶಾಸ್ತ್ರ ವಿಷಯಕ್ಕೆ ತಿರುಗೋಣ. ನಾಗವರ್ಮನು
ಕವಿರಾಜಮಾರ್ಗದ ಹೆಸರನ್ನು ಹೇಳಿಲ್ಲ. ಅದರ ಪರಿಚಯ ಅವನಿ
ಇರಲೇ ಇಲ್ಲವೆಂದು ಸಾಧಿಸಲಾಗದಿದ್ದ ರೂ, ಅದರ ಉಪಯೋಗವನ್ನು
ಅವನು ಹೆಚ್ಚಾಗಿ ಪೆಡೆದಿಲ್ಲವೆಂದು ದೃಢವಾಗಿ ಹೇಳಬಹುದು. *ಧ್ವನಿ
ತತ್ತ್ತವೂ ಅವನನ್ನು ಸೋಂಕಲಿಲ್ಲ ; ಧ್ವನಿಯನ್ನು ಒಂದು ಅಲಂಕಾರ
ವೆಂದಾದರೂ ಗಣಿಸಿ ಹೆಸರಿಸುವಪ್ಟ್ರು ದೂರ ಕೂಡ ಅವನು ಹೋಗ
ಲಿಲ್ಲ. ದೃನಿಪ್ರ ತಿನಾದನೆಮಾಡುವ ಗ್ರ೦ಥಗಳನ್ನು ಅವನು ನೋಡಿಯೇ
ಇಲ್ಲವೆಂದು ತೋರುತ್ತದೆ. “ನಾಗವರ್ಮನಿಗೆ. ಪರಿಚಿತರಾಗಿದ್ದವರೆಲ್ಲ
ಸಂಸ್ಕೃತದ ಪ್ಲಾ ಿಿಚ್ನೀನಾಲಂಕಾರಿಕರು :
ವಾಮನನುಂ ರುದ್ರಟನು೦
ಭಾಮಹನುಂ ದಂಡಿಯುಂ ಮನಂಗೊಳಿ ಪೇಟ್ಟಂ. |
ಕೀ ಮಹಿಗೆ ನೆಗಹೆ ಪೇಟ್ಕಂ
ದಾಮೋದರತನಯನೀ ವಚೋಲಂಕೃತಿಯಂ ॥ (ಪದ್ಯ ೯೬೧)
ಪರಿಶಿಷ್ಟ ೪೪೭
ಇವರ ಜೊತೆಗೆ ರಾಜಶೇಖಬರನಿಗೂ ನಾಗವರ್ಮನು ಖಣಿ; “ಅವನ
ಪ್ರಭಾವದಿಂದಲೇ ಇರಬೇಕು, " ಕವಿಸಮಯ” ದ ನಿರೂಪಣಿಗೆ ನಾಗ
ವರ್ಮನು ತನ್ನ ಗ್ರಂಥದಲ್ಲಿ ಒಂದು ಅಧಿಕರಣವನ್ನೇ ವಿನಿಯೋಗಿಸಿ
ದನು!--ಈ ಸಂಸ್ಕೃತ ಲಾಕ್ಷಣಿಕರ ಉಕ್ತಿಗಳನ್ನೂ ಅಭಿಪ್ರಾಯ
ಗಳನ್ನೂ ನಾಗವರ್ಮನು ತನ್ನದೇ ಆದ ರೀತಿಯಲ್ಲಿ ಬಳಸಿಕೊಂಡಿದ್ದಾನೆ,
ಸಂಯೋಜನಮಾಡಿಕೊಂಡಿದ್ದಾನೆ. ಉದಾಹರಣಿಗೆ, ವಾಮನನ ಮತ
ವನ್ನು ಅನುಸರಿಸಿ, "« ನಿರತಿಶಯ ಕಾವ್ಯಶ್ಲೋಬಾಕರಂಗಳಾಗಿರ್ಪ ಧರ್ಮ
ಮವು ಗುಣಮಕ್ಕುಂ'' ಎನ್ನುತ್ತಾನೆ (ಪದ್ಯ ೪೯೯) ; ಆದರೆ, ಸಂತ್ಣಿಪ್ಪ
( ಶ್ಲೇಷ), ಅರ್ಥವ್ಯಕ್ತಿ ಮಧುರ ಮೊದಲಾದ ಈ ಹತ್ತು ಗುಣಗಳ
ಲಕ್ಷಣಗಳನ್ನು ದಂಡಿಯ ಮತದ ಮೇರೆಗೆ ಹೇಳುತ್ತಾನೆ; ಇವು ದಕ್ಷಿಣ
ಮಾರ್ಗದಲ್ಲಿ ನಿಯತಪೆಂದೂ ಉತ್ತ ರಮಾರ್ಗದಲ್ಲ ವಿಪರ್ಯಯ ಹೊಂದುವು
ವೆಂದೂ ವ್ಯವಸ್ಥೆ ಮಾಡುತ್ತಾನೆ. ಆ ಬಳಿಕ " ವೈದರ್ಭಗೌಡ ಮಾರ್ಗ
ವಿಭೇದಂ ಬಗೆವೊಡೆ ಗತಾನುಗತಿಕಂ ”` ಎಂದು ಭಾಮಹನ ಉಕ್ತಿಗೆ
ಹೊಳಲುಗೊಟ್ಟರೂ, "" ಒಲ್ಲು ಆದರಿಪರ್ ಕೆಲಬರ್” ಎಂದೂ ಹೇಳು
ತ್ತಾನೆ (ಪದ್ಯ ೫೨೨). ಆ ಮುಂದೆ ಗುಣಪಿಷೇಕಾಧಿಕರಣದಲ್ಲಿಯೇ
ತಬ್ದಾಲಂಕಾರ ಅರ್ಥಾ-ಲಂಕಾರಗಳ ವಿಚಾರವೂ ಬರುತ್ತದೆ. ಇಲ್ಲ
ನಾಗವರ್ಮನು ರುದ್ರಟನನ್ನು ಅನುಸರಿಸಿ ಅರ್ಥಾಲಂಕಾರಗಳನ್ನು
ವಾಸ್ತವ, ಉಪಮೆ, ತ್ಲೆ €ಪ, ಅತಿಶಯ ಎಂದು ವರ್ಗೀಕರಣಮಾಡಿ, ಅವು
ಗಳ ಲಕ್ಷಣಗಳನ್ನು ರುದ್ರಟನಂತೆಯೇ ಕೊಡುತ್ತಾನೆ.
ರೀತಿಕ್ರಮರಸನಿರೂಪಣೆಯೆ೦ಂಬ ನಾಲ್ಕನೆಯ ಅಧಿಕರಣವು
ಕಾವ್ಯಾವಲೋಕನದ ಅತಿ ಮುಖ್ಯ ಭಾಗಗಳಲ್ಲಿ ಒಂದು. “ಇದರಲ್ಲಿ
"" ಪದರಚನಾತಿಶಯಂ ಲೀತಿ'' ಎಂದು (ಪದ್ಯ ಒ೮೧) ನಾಗವರ್ಮನು
ವಾಮನನನ್ನು ಅನುಸರಿಸಿ ರೀತಿಯ ಸಾಮಾನ್ಯ ಲಕ್ಷಣವನ್ನು ಹೇಳಿದರೂ,
ವೈದರ್ಭ, ಗೌಡ, ಪಾಂಚಾಲ ಎಂದು ರೀತಿಗಳನ್ನು ವಿಂಗಡಿಸುವಾಗ
ರುದ್ರಟನ ನಿರೂಪಣಿಯನ್ನೂ ಮನಸ್ಸಿನಲ್ಲಿಟ್ಟು ಕೊಂಡು, ಸಮಾಸ
2 ಹೇಮಡಂದ್ರನು " ಕಾಪ್ಯಾನುಶಾಸನ ' ವನ್ನು ಬಹುಶಃ ಕ್ರಿ. ಶ. ೧೧೪೦ರಲ್ಲಿ.
ರಚಿಸಿರಬೇಕೆಂದು ವಿದಾಂಸರು ಊಹಿಸುತ್ತಾರೆ [P, V. Kane: History of
Sanskrit Poetics, (೧೯೫೧ರ ಮುದ್ರಣ), ಪು. ೨೭೯ ಮೋಡಿ]. ಇವನಿಂದ ನಾಗ
ವರ್ಮನು ಸ್ಫೂರ್ತಿಪಡೆದಿರುವ ಸಂಭವ ಇಲ್ಲವೆಂದೇ ಹೇಳಬೇಕು.
೪೮ ಭಾರತೀಯ ಕಾವ್ಯಮಾಮಾಂಸೆ
ಪ್ರಾಚುರ್ಕ, ಗುಣಗುಂಫನ, ರಸದೃಪ್ಪಿ ಈ ಎಲ್ಲಕ್ಕೂ ಸ್ಥಾನಕೊಡುತ್ತಾನೆ.
ಇವನ ಮತದಂತೆ ರೀತಿಗಳು ಮೂರು ಮಾತ್ರ; ರುದ್ರಟನು ಹೇಳುವ
ಲಾಟೀಯಾ ಎಂಬುದರ ಹೆಸರು ಕೂಡ ಇಲ್ಲ ಬರುವುದಿಲ್ಲ.
ಭಾವಂ ವಿಭಾವಮೆಸೆವನು_
ಭಾವಂ ಸಂಚಾರಿಭಾವಮೆ೦ದಿಂತಿವಖಂ. ।
ದಃವಿಷ್ಠೃತಮಕ್ಕು೦ ರಸ.
ವಾವುದ.ಮೆ೦ದಯಿಗೆ ಧರತಶಾಸ್ತ್ರ ೃತ್ರಮದಿಂ ॥ (ಪದ್ಯ ೭೯೮
ಎಂದು ನಾಗವರ್ಮನು ರಸನಿಪ್ಪತ್ತಿಯನ್ನು ಹೇಳುವಾಗ, (ಸ್ಥಾಯಿ) ಭಖ
ವನ್ನೂ ವಿಭಾವಾವಿಗಳ ಜೊತೆಗೆ ಹೆಸಂಸುವುದನ್ನು ಗಮನಿಸನೇಕು. ರಸ
ಗಳು « ಎಂಟೆ. ವಲಂ'' ಎಂದು (ಪದ್ಯ ೭೯೩) ಮೊದಲಲ್ಲಿ ಹೇಳಿ,
ಅದ್ಭುತರಸವಾದ ಬಳಿಕ ಕೊನೆಯಲ್ಲ ಶಾಂತಕ್ಕೆ ಲಕ್ಷಣವನ್ನೂ ಉದಾಹರಣಿ
ಗಳನ್ನೂ ಕೊಡುತ್ತಾನೆ :
ಸಮಭಾವಪ್ರಭವಂ ಶಾಂ
ತಮಕ್ಕುಮಂತಾ ಸಮತ್ಪಮುಂ 3 ವರ್ಶಿಸುಗುಂ |
ಸಮನಿಸಿ ಸಮ್ಯಗ್‌ಜ್ಞಾನಂ
ತಮಮಂ ರಾಗಮುಮನಲೆದು ತೊಲಗಿಸೆ ಮನದಿಂ ॥ (ಪದ್ಯ ೮೨೮)
ಈ ಲಕ್ಷಣ ರುದ್ರಟನದನ್ನು ಬಲುಮಟ್ಟಿಗೆ ಹೋಲುತ್ತದೆ.
ನಾಲ್ಕನೆಯ ಅಧಿಕರಣದ ಮೊದಲಲ್ಲ ಬರುವ,
ರೀತಿ ವಿರೂತವತ್ತುಕೃಶಿ ಗೊಪ್ಪುವ ಮೆಯ್ ರಸಭಾವವೃತ್ತಿ ನಿ_
ರ್ಣೀತಿಯೆ ಜೀವಮಂತದಯಿನನ್ವಿ ತನಪ್ಪ ಕವೀಶ್ವರಂ ಬುಥ. ।
ವ್ರಾತಮೊಬಿಲ್ಬು ಬಿಚ್ಚ ಟಿಸಿ ನಚ್ಚುವಳಂಕೃತಿ ಕೂಡದಿರ್ದೊಡ೦
ರೀಕಿಯೊಳೊಂದೆ ಪೇಟ್ಟುದು ರಸಂ ಬಿಡೆ ಬಂಧುರಕಾವ್ಯಬಂಧಮಂ ॥
(ಪದ್ಯ ೭೮೦)
ಎಂಬ ಪದ್ಯವು ಕಾವ್ಯಾವಲೋಕನದ ಉಪದೇಶಸಾರ. ರೀತಿ ಕಾವ್ಯದ
ತರೀರ, ರಸ ಅದರ ಜೀವ. ಇದೇ ಈ ಉಕ್ತಿಯ ತಿರುಳು. " ರೀತಿ'',
13 ಇಲ್ಲಿಯ ಪಾಠವು ""[ಶ] ಮಭಾವ . . . [ಶ] ಮತ್ಪಮುಂ ''- ಎಂದು ಇರಬೇ
ತಲ್ಲವೆ 1
14 ಪಸ್ತುಕೃತಿ'' ಎಂದರೆ ಕಥಾವಸ್ತುವನ್ನುಳ್ಳ ಪ್ರಬಂಧಕಾವ್ಯವೆಂದು ತೋರು
ತ್ತದೆ; ""ವಸ್ತುಕಾವ್ಯ'', ""ಪಸ್ತುಕ'' ಎಂದು ಕರೆಯುವುದೂ ಇದೇ ಆಗಿರಬೇಕು.
ಪರಿಶಿಷ್ಟ ೪೪೯
"" ರಸೆ'' ಎಂಬ ಮಾತುಗಳನ್ನು ವಿಶಾಲಾರ್ಥದಲ್ಲಿ ಗೃಷಿಸಿದರೆ ಆಧುನಿಕರು
ಕೂಡ ನಾಗವರ್ಮನ ಅಭಿಪ್ರಾಯವನ್ನು ಒಪ್ಪಬಹುದು. ” ವಾಮನನು
«" ರೀತಿ ಕಾವ್ಯದ ಆತ್ಮು'' ಎಂದು ಹೇಳಿದ್ದನ್ನು ನಾಗವರ್ಮನು ಅಂಗೀಕರಿ
ಸದೆ, ಅದು ಕಾವ್ಯದ ಶೆರೀರ ಎಂದು ಹೇಳಿ ಅದಕ್ಕೆ ಸಮಂಜಸವಾದ
ಸ್ಥಾನವನ್ನು ಕೊಟ್ಟದ್ದು ಭಾರತೀಯ ಕಾವ್ಯಮಾವರಾಂಸೆಗ್ಗ ಅವನ
ಕಾಣಿಕೆಯೆನ್ನ ಬಹುದು; ಅವನಿಗಿಂತ ಹಿಂದೆ. ಸಂಸ್ಕೃತದಲ್ಲಿ ಕೂಡ
ಯಾರೂ ಹೀಗೆ ಹೇಳಿಲ್ಲ. ಪಂಡಿತರಿಗೆ ಅಲಂಕಾರಗಳು ಪರಮಪ್ರಿಯ
ವೆಂದೂ ಅವುಗಳನ್ನೇ ಅವರು ನಚ್ಚಿ ಕೊಂಡಾಡುವರೆಂದೂ ನಾಗ
ವರ್ಮನು ಬಲ್ಲನು ; ಅವರ ಆ ಪ್ರವೃತ್ತಿಯನ್ನು ಅವನು ಇಲ್ಲ ಟೀಕಿಸಿಯೂ
ಇದ್ದಾನೆ. “ಇಂಥ ಅಲಂಕಾರಗಳಿಗೆ ಹೆಚ್ಚು ಗಮನಕೊಡದೈ ರೀತಿಯ
ಮೇಲೆ ಕಣ್ಣಿಟ್ಟು ರಸವುಕ್ಕುವಂತೆ ಕಾವ್ಯರಚನೆ ಮಾಡಬೇಕೆಂಬುದು ನಾಗ
ವರ್ಮನ ಸದುಪದೇಶ.
4 ಉದಯಾದಿಕ್ಯಾಲಂಕಾರ :'ಪು ೭೨ ಪದ್ಯಗಳಿಂದ ಕೂಡಿದ ಪುಟ್ಟ
ಗ್ರಂಥ. ಇದನ್ನು ಬರೆದ ಉದಯಾದಿತ್ಯನು ಒಬ್ಬ ದೊರೆ. ಇವನ
ಕಾಲ ಕ್ರಿ. ತ. ಸುಮಾರು ೧೧೫೦ ಆಗಿರಬಹುದೆಂದು ಕವಿಚರಿತಕಾರರು
ಊಹಿಸುತ್ತಾರೆ. 1: ಉದಯಾದಿತ್ಯನು ಕಾವ್ಯಾವಲೋಕನಕಾರನಿಗಿ೦ತ
ಹಿಂದಿನವನೋ ಈಜೆಯವನೋ ನಿರ್ಧರಿಸಿ ಚು ಸಾಧ್ಯವಿಲ್ಲ; ಬಹುಶಃ
ಈಜೆಯವನೇ ಆಗಿರಬಹುದು.
ಉದಯಾದಿತ್ಯನ ಗ $ಂಹದಲ್ಲ ನೂತನ ವಿಷ%ುವೇನೂ ಇಲ್ಲ.
ಅವನು ದಂಡಿಯನ್ನೇ ಬಲುಮಟ್ಟಿಗೆ ಅನುಸರಿಸುತ್ತಾನೆ. "" ರೀತಿ'' ಗಳ
ವಿಷಯದಲ್ಲಿ ರುದ್ರಟನ ಮತವನ್ನು ಅಂಗೀಕರಿಸುತ್ತಾನೆ ; ಆದರೆ ವೈದರ್ಭ,
ಪಾಂಚಾಲ, ಗೌಡ ಎಂದು ನಾಗವರ್ಮನಂತೆಯೇ ಇವನೂ ಮೂರಕ್ಕೇ
ನಿಲ್ಲಿಸುತ್ತಾನೆ.
ಕನ್ನಡದೊಳ್ ಚ೦ಪೂಕೃತಿ
" ಸನ್ನುತತರವಚನಕಾವ್ಯಮೆನಿಕು೦ ಚತ್ತಾ.!|
ಣಂ ನೆಟೆ ಮೈದಂಡಕಷೆ.ವೆ
ಸನ್ನುತಿಯಂ ಸರ್ಗಬಂಧಕೃತಿ ತಳೆದಿರ್ಕುಂ ॥ (ಪದ್ಯ ೬)
15 ಕವಿಚರಿತೆ,1, ಪು. ೧೬೦.
KM. 29
೪೫೦ ಭಾರತೀಯ ಕಾವ್ಯಮಾಮಾಂಸೆ
ಏಂಬ ಪದ್ಯವು ಗಮನಾರ್ಹವಾಗಿದೆ. ಇವನ ಕಾಲಕ್ಕೆ ಚಂಪೂ ಜಾತಿ
ರೂಢಮೂಲವಾಗಿತ್ತೆಂದು . ಇದರಿಂದ ಚೆನ್ನಾಗಿ ಗೊತ್ತಾಗುತ್ತದೆ.
ಉದಯಾದಿತ್ಯನಿಂದ ಈಚೆಯ ಆಲಂಕಾರಿಕರು ಯಾರೂ ಚತ್ತಾಣ ಬೆದಂಡೆ
ಗಳನ್ನು ಹೇಳಿಲ್ಲ.
*ಕವಿಕಾಮದೇವನ "ಶೃಂಗಾರರತ್ಮಾ ತರ'ವು ಕನ್ನಡದಲ್ಲಿ ರಸವಿಷಯ
ವನ್ನು, ಅದರಲ್ಲೂ ಶೃಂಗಾರರಸದ ವಿಷಯವನ್ನು, ನಾಯಕ ನಾಯಿಕೆ
ಯರ ಪ್ರಭೇದಗಳು, ಶೃಂಗಾರಜೇಷ್ಟೆಗಳು ಮೊದಲಾದ ಪರಿಕರಗಳೊಡನೆ
ವಿಸ್ತಾರವಾಗಿ ಪ್ರತಿಪಾದಿಸುವ ಗ್ರಂಥಗಳಲ್ಲಿ ಮೊದಲನೆಯದು; * ರಸ
ವಿಷ್ಠೇಕ' ಎಂಬುದು ಇದರ ಇನ್ನೊಂದು ಹೆಸರು. ಇದರಲ್ಲಿ ನವರಸ
ವ್ಯಾವರ್ಣನ, ಭಾವಭೇದ ನಿರ್ಣಯ, ನಾಯಕ ನಾಯಿಕಾವಿಕಲ್ಪವಿಸ್ತರ,
ಸಖಸಖೀ ಸಂಭೋಗವಿಪ್ರಲಂಭಪ್ರಮಾವಿಸ್ತರ ಎಂಬ ನಾಲ್ಕು ಪರಿಚ್ಛೇದ
ಗಳಿವೆ. ಇದರಲ್ಲಿನ ಉದಾಹರಣಿಗಳು ಕವಿಕಾಮನಿಂದಲ್ಲೇ ರಚಿತವಾದ
ವೆಂದು ತೋರುತ್ತದೆ ; ಕೆಲವು ಪದ್ಯಗಳಲ್ಲಿ ಆತ್ಮಸ್ತುತಿಯೂ ಬಂದಿದೆ.
ಅವನಿಗೆ ನಿರರ್ಗಳವಾಗಿ ಪದ್ಯರಚನೆಮಾಡುವ ಶಕ್ತಿಯಿದ್ದಿತಂತೆ.
“ ಜಗದೊಳ್ ಸನ್ನಿದಮಾದ ನಾಬ್ನುಡಿಗಳಂ ಛಂದಕ್ಕೆ ಬರ್ಪಂತು ನೆಟ್ಟಗೆ
ಮಾತಾಡುವ ಬಲ್ಮೆ ಚಿತ್ತದೊಳೊಜಲ್ಜಿರ್ದರ್ಥಮಂ ಕೂಡೆ ನಾಲಗೆಯಿಂ
ರಂಜಿಸುವೊ೦ದು ಬಿನ್ನಣ೦'' ತನಗೆ ಅನನ್ಯಸೂಧಾರಣವಾಗಿ ಇದ್ದಿ ತೆಂದು
ತಾನೇ ಹೇಳಿಕೊಂಡಿದ್ದಾನೆ (1.೯). ಶೃಂಗಾರರತ್ನಾಕರದ ಕಾಲ ಕ್ರಿ. ಶೆ.
ಸುಮಾರು ೧೨೦೦ ಆಗಿರಬಹುದು ; ಇನ್ನೂ ಕೆಲವು ವರ್ಷ ಹಿಂದೆಯೇ
ಇದು ರಚಿತವಾಗಿರುವುದೂ ಅಸಂಭವವಲ್ಣ 16
“ತನಗೆ ಹಿಂದಿನ ಗ್ರಂಥಕಾರರೆಂದು ಕವಿಕಾಮನು ಕೊಟ್ಟಿರುವ
ಪಟ್ಟಿಯಲ್ಲಿ (1.೧೫) ನಮಗೆ ಪರಿಚಿತರಾದ ಆಲಂಕಾರಿಕರು ಯಾರೂ
ಇಲ್ಲ; ವಾತ್ಸ್ಯಾಯನನೇ ಮೊದಲಾದ ಕಾಮಶಾಸ್ತ್ರ ಪ್ರಣೀತರ ಹೆಸರು
ಗಳೇ ಅಲ್ಲಿ ಪ್ರಚುರವಾಗಿರುವಂತೆ ತೋರುತ್ತದೆ. ಅವರಿಂದ “ ನೆಗಜ್ಡ
16 ಕವಿ ಕಾಮನು " ಸ್ತನಶತಕ ' ವೆಂಬ ಗ್ರಂಥವನ್ನೂ ರಚಿಸಿಹ್ಹನಂತೆ
ಪರಿಶಿಷ್ಟ - ೪೫೧
ವಡೆದೀ ಶೃಂಗಾರಂ ಈಗಳ್ ಕರಂ ದೊರೆವೆತ್ತತ್ತೆನೆ ಬೇಖೆ ವಿಸ್ತರಿಸಿದಂ
ಶೈಂಗಾರರತ್ಕಾ ಕರಂ '' ಎಂದ್ರು ಹೇಳಿ ತನ್ನ ನಿರೂಪಣಿಯಲ್ಲ ನವ್ಯತೆ
ಯುಂಟೆಂದು ಸೂಚಿಸುತ್ತಾ ನೆ. "ಅವನು ಹೇಳುವ ರಸನಿಪ್ಪ ್ತಿಯಲ್ಲಿ ಕೆಲವು
ವಿಲಕ್ಷಣಾಂತಗಳಿವೆ :
'" . * ಚಿತ್ತದಿಂ ಕಾ.
ಣ್ಚುದು ಭಾವಂ ಧಾವದಿ೦ ಪುಟ್ಟು ಗುಮಷೊದವಿ ರಸಂಗಳ್ ರಸವ್ಯಕ್ತಿ ಯೆಂವೆಣ।
ಟ್ಬುದು ವಕ್ತ ೦ ವಕ್ತ್ರವಿಕ್ಷೇಪಣವಿಳಸನದಿಂದೀಗಳಿಂತೀಿ ರಸಂ ಪು.
ಟ್ರಿದುದೆ ೨ಬೀ ಭೇದಮಂ ಭಾವಿಸುವುದು ಕವಿಕಾಮೋಕ್ತಿಯಿ೦ದಿಂಗಿತಜ್ಞರ್॥
(1.೨೮)
ಇಂಥ ರಸ ಹುಟ್ಟಿದೆಯೆ೦ಂದು ಮುಖದ ಚಲನೆ, ವಿಲಾಸ ಮೊದಲಾದವು
ಗಳಿಂದ ಅರಿತುಕೊಳ್ಳಬೇಕೆಂದು ಕವಿಕಾಮನು ಹೇಳಿ, ರಸಾನುಭವದ
ಬಾಹ್ಯಚಿಹ್ನೆ ಗಳಿಗೆ ಇಲ್ಲಿ ಪುರಸ್ಕಾರ ಕೊಟ್ಟಿರುವಂತೆ ಮೇಲುನೋಟಕ್ಕೆ
ಚಾ ಗತ ದೆ. “ಆದರೆ, ": ಭಾವದಿಂ ಪುಟ್ಟುಗುಂ ಒದವಿ ರಸಂಗಳ್'',
«" ಮುದಮಂ ಭಾವಿಸೆ ಚಿತ್ತವೃತ್ತಿ ಸಮಸಂದಾರಾಗದಿಂದೆಯ್ಸೆ ಪು। ಟ್ವಿದ
ವಕ್ತಾ ೨ಬ್ವಮಂತದೆವಲಂ ಶೃಂಗಾರಂ . ೬ ೪ (i60೦) ಈ ಮೊದಲಾದ
ಉಕ್ತಿಗಳನ್ನು ಪರಿಭಾವಿಸಿದರೆ, ನಾಯಕ ನಾಯಿಕೆಯರ ಭಾವವು
ಪುಷ್ಟಿಗೊ೦ಡು ಅವರ ಮುಖಚರೈಯಲ್ಲಿ ಅದರ ಕಾರ್ಯವು ಚೆನ್ನಾಗಿ ಗೋಚರ
ವಾದಾಗ ರಸವು ಉಂಟಾಗುವುದೆಂದು ಕವಿಕಾಮನು ಅಭಿಪ್ರಾಯಪಡು
ವಂತೆ ತೋರುತ್ತದೆ. "ಇದು ಲೊಲ್ಲಟನ ಮತದ ಹತ್ತಿರಕ್ಕೆ ಬರುತ್ತದೆಂದು
ಬೇರೆ ಜ್ಞಾ ಪಿಸಬ್ಲೇಕಾಗಿಲ್ಲ.. ಕವಿಕಾಮನು ಸ್ಥಾಯಿಭಾವ ಸಂಚಾರಿಭಾವಗ
ಳನ್ನು ಹೇಳಿದ್ದರೂ, ವಿಭಾವಾನುಭಾವಗಳನ್ನು ತನ್ನೆ ಗ್ರಂಥದಲ್ಲಿ ಎಲ್ಲಿಯೂ
ಹೆಸರಿಸಿ ಕೂಡ ಸದಿಸುವುದು ವಿಚಾರಾರ್ಹವಾಗಿದೆ. “ಇದರಮೇಲೆ
ಅವನು ತೃಂಗಾರರನದನ್ಲಿ ವಾಗ್ಧೃತ್ತಿ, ನೈಪಥ್ಯ (ಅಥವಾ ರೂಪ),
ಕ್ರಿ ಸಾ, ಸಂಕೀರ್ಣ, ವ್ಯಸ್ತ ಎಂದು ಐದು ಬಗೆಗಳನ್ನೂ ಮಿಕ್ಕ ರಸಗಳಲ್ಲಿ
ಮೊದಲ ಮೂರು ಬಗೆಗಳನ್ನೂ ವಿಂಗಡಿಸುತ್ತಾನೆ. ಅವಕ್ಕೆ ಲ
ಉದಾಹರಣಿಗಳನ್ನು ಕೊಡುತ್ತಾನೆ. “ಇವುಗಳಲ್ಲಿ ವಾಗ್ಯೃತ್ತಿ, ರೂಸ,
ಕ್ರಿಯಾ ಬಂದರೆ ಆಯಾ ಅಂಶಗಳೇ ನಿರೂಪಣಿಯಲ್ಲ ಪ್ರಧಾನವಾ
ಗಿರುವುದು; ಸಂಕೀರ್ಣ ಎಂದರೆ ಇವುಗಳ ಮಿಶ್ರಣವಿರುವುದು ; ವ್ಯಸ್ತ
ವೆಂದರೆ ತೃಂಗಾರದಲ್ಲಿ ಹಾಸ್ಕ್ಯ ರೌದ್ರ ಮೊದಲಾದ ಬೇರೆಬೇರೆ ರಸಗಳು
29-B
೪೫೨ ಭಾರತೀಯ ಕಾವ್ಯವಸಾಮಾಂಸೆ
ಬೆರೆದಿರುವುದು. 17 “ಈ ಬಗೆಯ ವಿಭಾಗವು ಸಂಸ್ಕ ತೆ ಅಲಂಕಾರ ಗ್ರಂಥ
ಗಳಲ್ಲಿ ಇರುವಂತೆ ಕಾಣಲಿಲ್ಲ. ಕವಿಕಾಮನ ಅಭಿಪ್ರಾಯದಮೇಲಿನ ಟೀಕೆ
ಯಾಗಿ ಸಾಳ್ವನು * ರಸರತ್ನಾಕರ' ದಲ್ಲ ಹೇಳಿರುವುದನ್ನು ಇಲ್ಲಿ ಎತ್ತಿ
ಕೊಟ್ಟರೆ ಸಾಕು:
“ ವಾಗ್ಬೈತ್ತಿಶೃಂಗಾರಮೆಂದೊಡೆ ಅನ:ಭಾವಂ; ವಸ್ತ್ರ್ರಭೂಷಣ ಗಂಧ
ಮಾಲ್ಯಾನುಲೇಪನ ರೂಪನೇಪ ಥ್ಯಶೃ೦ಗಾರಮೆ೦ದೊಡೆ ಉದ್ದೀಪನವಿಭಾವಂ ;
ಕ್ರಿಯಾತ್ಮಕಶೃ೦ಗಾರಮೆ೦ದೊಡೆ ಅದುವುಂ ಅನುಭಾವಂ ; ಸ-ಕೀರ್ಣಶೃ೦ಗಾರ
ಮೆಂದೊಡೆ ಅದು ವಿಭಾವಾನುಭಾವಂಗಳ ನೆರವಿ; ವೈಸ್ತಶೃಂಗಾರವೆ.೦ದೊಡೆ
ಅದು ರಸಸಂಕರ೦, ವಿಭಾವಾನುಭಾವಂಗಳನೆ ಈ ಪೆಸರಿ೦ದೆಂದೊಡೆ ಅವು೦
ತಾವನಂತಕಂಗಳ್ ಇನಿತಖಂ ನೆಖೆಯವು. ಅಲ್ಲಿ ಎಭಾವಾದಿಗಳ್ ಆ
ರಸಪೋಪಕ೦ಗಳಲ್ಲದೆ ತಾವೆ ರಸಂಗಳಲು . ಮಿಕ್ಕ ರಸಂಗಳ್ ವಾಗ್ರೂಪಕ್ರಿಯಾತ್ಮ
ಕಮೆಂದು ಮೂಯಿಂದೆನೆಂದೊಡೆ ಅವು ವಿಭಾವಾನುಭಾವಂಗಳ್. ಅಲ್ಲದೆ ಪಿಂತೆ
ಪೇಟ್ಜ ಅಜಾರೃರಾರ:೦ ಇಂತೆ ನಿರೂಪಿಸಿದುದಿಲ್ಲಂ.'' (ರಸರತ್ನಾಕರ, ಪು ೩೩):
ಕವಿಕಾಮನು ವಿಭಾವಾನುಭಾವಗಳನ್ನು ಹೇಳದಿದ್ದ ಕಾರಣದಿಂದಲೇ,
ವಾಕ್‌ನೇಪಥ್ಯಕ್ರಿ ಯಾತ್ಮ ಕವೆಂದು ರಸಪ್ರಕಾರಗಳನ್ನುಹೇಳಿದಂತೆ ತೋರು
ತ್ತದೆ.
ಕವಿಕಾಮನ ಬರೆವಣಿಗೆಗೆ ನಿದರ್ಶನವಾಗಿ ""ಅದ್ಭುತಶೃಂಗಾರ''ದ
ಉದಾಹರಣಿಯನ್ನು ಇಲ್ಲಿ ಕೊಡಬಹುದು. ಅವನ ಅತಿಶಯವಾದ
ಅವಧಾನಶಕ್ತಿಗೆ 'ಜಿರಗುಗೊ೦ಡ ಪ್ರೇಯಸಿಯ ಉಕ್ತಿ ಇದೆಂದು ಭಾವಿಸ
ಬೇಕು:
ಎಸಕಂಬೆತ್ತ ಮತಿಪ್ರಕಾಶಮದನಿನ್ನೇನೆಂದಪೆಂ ಚೇಟಿ ನಾ.
ಲ್ಪ ಸೆಯೊಳ್ ನಾಲ್ವರ ಕಂಠದೊಳ" ಬರೆಯೆ ಕಬ್ಬಂಬೇಲ ಪಿನೊಲ್ಪ ತ್ತಲಾ!
ಡಿಸುವಂ ವೆತ್ತಮನಿತ್ತಲೋದಿದೊಡೆ ತಪ್ಪಂ ಪೇಟ್ಗುದೆಂ ತಿರ್ದಿಯಾ.
ಲಸುವಂ ಗೀತಮನೆನ್ನುಮಂ ನಗಿಸುವಂ ಶೃಂಗಾರರತ್ನಾಕರಂ ॥ (;.೫೮)
ದಂಡಿಯ " ಕಾವ್ಯಾದರ್ಶ 'ವು. ಆದಿಯಿಂದಲೂ ನಮ್ಮ ಆಲಂಕಾ
ರಿಕರಮೇಲೆ ತನ್ನ ಪ್ರಭಾವವನ್ನು ಬೀರಿದೆಯೆಂದೂ, ಅದನ್ನು ಅವರು
17 ವ್ಯಸ್ತಶೈಂಗಾರಕ್ಕೆ ಕವಿಕಾಮನು ಕೊಡುವ ಉದಾಹರಣೆಗಳನ್ನು ನೋಡಿದರೆ,
ಇಲ್ಲಿ ಒಂದು ರಸಕ್ಕೆ ಮತ್ತೊಂದು ಅಂಗವಾಗಿ ಬಂದಿದೆಯೆನ್ನ ಬೇಕಾಗುತ್ತದೆ.
ಉದಾಹರಣಿಗೆ, "" ಹಾಸ್ಯಶೃಂಗಾರ '' ದಲ್ಲಿ ಹಾಸ್ಯರಸವು ಪ್ರಧಾನವಾಗಿ ಶೃಂಗಾರವು
ಅದಕ್ಕೆ ಅಂಗವಾಗಿದೆ.
ಪರಿಶಿಷ್ಠ ೪೫೩
ಉಂ
ಹೆಚ್ಚಾಗಿ ಬಳಸಿಕೊಂಡಿದ್ದಾರೆಂದೂ ಈಗಾಗಲೆ ನೋಡಿದ್ದೇವೆ. ದಂಡಿ
ದಕ್ಷಿಣದೇಶದವನಾಗಿದ್ದುದೂ ಅವನ « ಪದಲಾಲಿತ್ಯ''ವೂ ಇದಕ್ಕೆ ಕಾರಣ
ವಾಗಿರಬಹುದು. ಹೀಗಿದ್ದರೂ ಕ್ರಿ. ಶ. ಸು. ೧೫೦೦ರಲ್ಲಿದ್ದ ಮಾಧವ
ನಿಗಿಂತ ಹಿಂದೆ ಯಾರೂ « ದಂಡ್ಕಳಂಕಾರ ''ವನ್ನು ಕ್ರಮವಾಗಿ ಕನ್ನಡಕ್ಕೆ
ಭಾಷಾಂತರಿಸಿದಂತೆ ಕಾಣಬರುವುದಿಲ್ಲ. ಈ ಮಾಧವನು ಹಿರಿಯೂರ
ಪ್ರಭುವಾಗಿದ್ದ ೦ತೆಯೂ ಭರತಶಾಸ್ತ್ರ, ಛಂದಸ್ಸು, ಅಲಂಕಾರ, ವ್ಯಾಕರಣ
ಮೊದಲಾದ ಹಲವು ವಿದ್ಯೆಗಳಲ್ಲಿ ಪರಿಣತನಾಗಿದ್ದ ೦ತೆಯೂ ಅವನ ಗ್ರಂಥ
ದಿಂದ ಗೊತ್ತಾಗುತ್ತದೆ. ಈತನ ಕೃತಿಯಾದ " ಮಾಧವಾಲಂಕಾರ 'ದಲ್ಲಿ 13
ಮೂರು ಪರಿಚ್ಛೇದಗಳಿವೆ; ಇದರಲ್ಲಿ ಕಾವ್ಯಾದರ್ಶವನ್ನು ಒಟ್ಟಿನಮೇಲೆ
ಲಲಿತವಾದ ಕನ್ನಡದಲ್ಲಿ ಭಾಪಾಂತರಿಸಿದ್ದಾನೆ. ಇದರಿಂದ ಒಂದು ಪದ್ಯ
ವನ್ನು ತೆಗೆದು ಕೆಳಗೆ ಕೊಟ್ಟಿದೆ
ಪದದಿಂದೆ ಶಬ್ದದೀಪ೦
ವಿದಿತಂ ಬೆಳಗದೊಡೆ ಸಕಲಲೋಕನಿವಾಸಂ |
ಪುದಿಯೆದವೇ೦ ಮಾಣ್ಬುದೆ ಕೇಳ್
ಪೊದಳ್ಳ ಜ್ಞಾನಾಂಧಕಾರದಿಂದನವರತ೨ ॥ ((. ೨೦)
(--ಕಾವ್ಯಾದರ್ಶ, [, ೪)
ಕನ್ನಡ ಆಲಂಕಾರಿಕರ ಮಾಲೆಯಲ್ಲಿ ಕವಿರಾಜಮಾರ್ಗಕಾರನನ್ನೂ
ನಾಗವರ್ಮನನ್ನೂ ಬಿಟ್ಟು ಮುಂದೆ ಬಂದರೆ ಸಾಳ್ಮನೇ ಪ್ರಮುಖವ್ಯಕ್ತಿ.
ಆ ಇಬ್ಬರೂ ತಮಗೆ ಉಪಲಭೃವಾಗಿದ್ದ ಸಂಸ್ಕೃತ ಲಕ್ಷಣ ಗ್ರಂಥಗಳನ್ನು
ಅವಲೋಕಿಸಿ, ಅವುಗಳ ವಿಷಯವನ್ನು ವಿಚಾರಪರತೆಯಿಂದ ಸಂಯೋ
ಜಿಸಿ, ಗಣ್ಯವೂ ಉಪಯುಕ್ತವೂ ಆದ ಗ್ರಂಥಗಳನ್ನು ಬರೆದರು,
ಇಪ್ಪಾದರೂ ಬಾರತೀಯ ಕಾವ್ಯಮಾಮಾಂಸೆಯಲ್ಲ ಕ್ರಾಂತಿಯನ್ನುಂಟು
ಮಾಡಿದ ಧೃನಿತತ್ತ್ಯವಾಗಲಿ ರಸಾಭಿವ್ಯಕ್ತಿರಹಸ್ಕವಾಗಲಿ ಕನ್ನಡಕ್ಕೆ ಇಳಿಯ
ಲಿಲ್ಲ. ಸಾಳ್ಯನು ತನ್ನ ಪಿಂದಿನವರಷ್ಟು ಸ್ವತಂತ್ರಮತಿಯೆಂದು ಹೇಳಲಾ
ಗೆದಿದ್ದರೂ " ಧ್ವನ್ಯಾಲೋಕ' ವನ್ನೂ " ಅಭಿನವ ಭಾರತಿ' ಯನ್ನೂ
ಸಾಕ್ಷಾತ್ತಾಗಿ ಪರಿಚಯವಣಾಡಿಕೊಂಡಿದ್ದನೆಂದು ಭಾವಿಸಲು ನಿದರ್ಶನ
18 ಪರಿಚ್ಛೇದಾಂತ್ಯದ ಗದ್ಯಗಳಲ್ಲಿ "" ಮಾಧವ ಪ್ರಣೀತಾಲಂಕಾರನಿದಾನ,''
“ ಮಾಧವ ಪ್ರಣೀತಾಲಂಕಾರ '' ಎಂದು ಇದರ ಹೆಸರು ದೊರೆಯುತ್ತದೆ. ಈ ಗ್ರಂಥ
ಇನ್ನೂ (೧೯೫೨) ಇಚ್ಚಾಗಿಲ್ಲ; ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯವರು ಐದರ
ಪ್ರಕಟನೆಯನ್ನು ಕೈಕೊಂಡಿದ್ದಾರೆಂದು ತಿಳಿಯಬರುತ್ತದೆ.
೪೫೪ ಭಾರತೀಯ ಕಾವ್ಯವಿಸಾಮಾಂಸೆ
ಗಳು ಇಲ್ಲದಿದ್ದರೂ, ತನ್ನ ಕಾಲದಲ್ಲಿ ಪ್ರಸಿದ್ಧವಾಗಿದ್ದ ಸಂಸ್ಕೃತ ಗ್ರಂಥ
ಗಳಿಂದ ರಸಥ್ಯನಿಗಳ ವಿಷಯವನ್ನು ಸಂಗ್ರಹಿಸಿ, ತಕ್ಕಮಟ್ಟಿಗೆ ವಿಶದವಾಗಿ
ಪ್ರ ತಿಪಾದಿಸಿ, ಈ ಭಾಗದಲ್ಲಿ ಕನ್ನಡಿಗರ ಜ್ಞಾ ನವನ್ನು ಬೆಳಸಿದ ಯತಸ್ಸು
ಅವನಿಗೆ ಸಲ್ಲಬೇಕು. ಕವಿರಾಜಮಾರ್ಗದಿಂದ ಕಾವ್ಯಾವಲೋಕನಕ್ಕೆ
ಬರಲು ಮೂರು ಶತಮಾನಗಳು ಸಂದರೆ, ಆ ಮುಂದೆ ರಸರತ್ನಾಕರ
ಶಾರದಾವಿಲಾಸಗಳನ್ನು ಎದುರುಗೊಳ್ಳಲು ಮತ್ತೆ ನಾಲ್ಕು ಶತಮಾನಗಳು
ಹಿಡಿದುವು !
ಸಾಳ್ಯನ ಕಾಲ ಕ್ರಿ. ಶ. ಸು. ೧೫೫೦. ಇವನು " ಸಾಳ್ವ ಭಾರತ '
ವೆಂಬ ಪಟ್ಟದೀಕಾವ್ಯವನ್ನೂ " ವೈದ್ಯಸಾಂಗತ್ಯ' ವನ್ನೂ ಬರೆದಿದ್ದಾನೆ.
ಲಕ್ಷಣಶಾಸ್ತ್ರ ವಿಷಯದಲ್ಲಿ ಇವನ ಹೆಸರಾದ ಕೃತಿ " ರಸರತ್ನಾಕರ'.
ಇದರಲ್ಲಿ ಶೃಂಗಾರಪ್ರ ಪಂಚವಿವರಣಂ, ನವರಸಪ್ರಪಂಚವಿವರಣಂ,
ನಾಯಕನಾಯಿಕಾವಿವೆರಣಂ, ವ್ಯಭಿಚಾರಿಭಾವವಿವರಣಂ ಎ೦ಬ ನಾಲ್ಕು
ಪ್ರಕರಣಗಳಿವೆ. ಪ್ರಕರಣಗಳ ಹೆಸರಿನಿಂದಲೇ ಅವುಗಳ ವಿಷಯವ್ಯಾಪ್ಲಿ
ಯೇನೆಂಬುದು ತಕ್ಕಮಚ್ಟಿಗೆ ಗೊತ್ತಾಗುತ್ತದೆ. ಸಾಳ್ವನು ಎಲ್ಲ ರಸ
ಗಳನ್ನೂ ರಸಾಭಾಸಭಾವಾಭಾಸಾದಿಗಳನ್ನೂ ನಿರೂಪಿಸಿದ್ದರೂ ಮಿಕ್ಕ
ಅನೇಕ ಲಾಕ್ಷಣಿಕರಂತೆ--ತನಗೆ ಹಿಂದಿನ ಕವಿಕಾಮನಂತೆ--ತೃಂಗಾರಕ್ಕೇ
ಪ್ರಾಶಸ್ತ ತೊಟ್ಟು, ಆ ರಸಕ್ಕೆ ಸಂಬಂಧಪಟ್ಟಹಾಗೆ ಆಲಂಬನಗುಣ
ಚೇಪ್ಟೆ, ಅಲಂಕಾರ, ತಟಸ್ಥ ಎಂಬ ಉದ್ದೀಪನ ಚತುಪ್ಪಯದ ವಿವರ
ಗಳನ್ನೂ ಮಾನ, ಈರ್ಷೈ ಮೊದಲಾದ ವಿಪ್ರಲಂಭ ಪ್ರಕಾರಗಳನ್ನೂ
ಚಕ್ಷುಃಪ್ರೀತ್ಮಿ ಚಿಂತೆ ಮೊದಲಾದ ದಶಾವಸ್ಥೆ ಗಳನ್ನೂ ಪ್ರತಿಪಾದಿಸುತ್ತಾನೆ;
ನಾಯಕ ನಾಯಿಕೆಯರ ಬಗೆಗಳನ್ನೂ, ಕಡೆಗೆ ಸಂಚಾರಿಭಾವಗಳನ್ನು ಕೂಡ,
ಬಲುಮಟ್ಟಿಗೆ ಶ್ವಂಗಾರರಳದ ದೃಷ್ಟಿಯಿಂದಲೇ ನಿರೂಪಿಸುತ್ತಾನೆ. ಲಕ್ಷಣ
ಗಳನ್ನೂ ಪ್ರಭೇದಗಳೆನ್ನೂ ಪಟ್ಟಿಯ ರೂಪದಲ್ಲಿ ಕೊಟ್ಟು ಸುಮ್ಮನಾಗದೆ:
ಅಲ್ಲಲ್ಲೇ ""ವಿಚಾರ'' ವನ್ನೂ ಸೇರಿಸಿರುವುದು ಸಾಳ್ವನ ಅಭಿನಂದನೀಯ
ವಾದ ಗುಣ. ಉದಾಹರಣಿಗೆ, ರಸನಿಪ್ಪತ್ತಿ (ಪು. ೩-೫), ಸ್ಥಾಯಿ
ವ್ಯಭಿಚಾರಿವಿವೇಕ (ಪು. ೫೦-೫೨) ಇವನ್ನು ನಿರ್ದೇಶಿಸಬಹುದು.
ಇಲ್ಲೆಲ್ಲಾ ಅವನು ಹೇಮಚಂದ್ರನ ಕಾವ್ಯಾನುಶಾಸನವನ್ನು ಅನುಸರಿಸಿದ್ದಾ
ನೆಂಬುದೂ ಅಲ್ಲಿಯ ಅನೇಕ ವಾಕ್ಯಗಳನ್ನು ಕನ್ನಡಿಸಿ ಕೊಟ್ಟಿದ್ದಾ ನೆಂಬುದೂ
ಪರಿಶಿಪ್ಟ ೪೫೫%
ನಿಜ” ಆದರೆ ಹೇಮ”ಂದ್ರನೊಬ್ಬನ ಅವಲಂಬನೆದಿಂದಲ್ಲೇ ಸಾಳ್ಯನು
ತೈಪ್ತೆ ನಾಗಿಲ್ಲ ;
"" ಅನಾರ್ಯರೆಂದೆ ತಿಳಿದಮೃ.
ತಾನೆಂದಿಯ ರುದ್ರಥಟ್ಟ ವಾ ತೆಖದಿ೦ ವಿ.|
ದ್ಯಾನಾಥ ಹೇಮಚಂದ್ರರ
ಭೂನುತಮಾರ್ಗಾದಿಯಂದಮಂ ವಿರಚಿಸಿದೆ೦॥
" ಇಂತು ನಾಗವರ್ಮ ಕವಿಕಾಮಾದಿಗಳ ಮಾರ್ಗದಿಂ ರಸಭಾವಾಧಾಸಂ
ಗೆಳನೆಲ್ಲಾ ವಿದ್ಭಶ್ಚಧೆಗಮುಭಯಭಾಷೆಗಮಿಪ್ತಮಪ್ಪ೦ತು ಕನ್ಮಡಿಸಿದೆ೦ '' (ಪು. ೨)
ಎಂದು ಗ್ರಂಥಾರಂಭದೆಲ್ಲ ಅವನ ಜೊತೆಗೆ ಇತರ ಲಾಕ್ಷಣಿಕರಿಗೂ
ತನ್ನ ಕೃತಜ್ಞತೆಯನ್ನು ಸಲ್ಲಿಸಿ ಅವಗ ಕೃತಿಗಳಿಂದ ಉಪಯೋಗಪಡೆದಿರುವು
ದಲ್ಲದೆ, ತನ್ನ ಗ್ರಂಥದಲ್ಲಿ ಅವರ ಹೆಸರೆತ್ತಿಯೂ ಎತ್ತದೆಯೂ
ಅಭಿಪ್ರಾಯಗಳನ್ನು ಅಲ್ಲಲ್ಲ ಅನುವಾದಮಾಡಿರುವುದೂ ಉಂಟು.
ಈ ಲಾಕ್ಷಣಿಕರಲ್ಲಿ ಅಮೃತಾನಂದನು (ಅಥವಾ ಅಮೃತಾನಂದ
ಯೋಗಿ) "ಅಲಂಕಾರಸಂಗ್ರಹ' ವೆಂಬ ಗ್ರಇಥವನ್ನು ಸಂಸ್ಕೃತದಲ್ಲಿ
ಬರೆದಿದ್ದಾನೆ; ಈತನ ಕಾಲ ಕ್ರಿ. ಶ ೧೪ನೆಯ ಶತಮಾನದ ಉತ್ತರಾರ್ಧ
ವೆಂದು ತೋರುತ್ತದೆ. ೫ ಅಮೃತಾನಂದನ ಗ್ರಂಥವನ್ನು "ಅಮೃತಾ
ನಂದೀಯ' ವೆಂದೂ ವೈವಹರಿಸುವುದುಂಟು. ರುದ್ರಭಟ್ಟನು " ರಸಕಲಿಕೆ
ಯ ಕರ್ತೃ ; "ಮತ್ತಂ ರುದ್ರಭಟ್ಟನ ರಸಕಳಿಕೆಯ ಪದ್ಮತಿಯಿಂ ಶೃಂಗಾ
ರೋದ್ದೀಪನಂ ಚತುಪ್ಮಮಾದುದು'' ಎಂದು ಗ್ರಂಥದ ಹೆಸರನ್ನೂ
ಒಂದು ಕಡೆ (ಪು. ೧೧) ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ್ರ ಯಾವ
19 ಹೇಮಚಂದ್ರನ ಉಕ್ತಿಗಳಿಗೆ " ಅಭಿನವಭಾರತಿ' ಅಧಾರ,
20 ಮನ್ನ (ಅಥವಾ ವ್ರ, ಮನ್ಮ) ನೆಂಬ ರಂಜನು ಒಮ್ಮೆ ಸಭೆಯಲ್ಲಿ ಅಮೃತಾನಂದ
ಕವಶ್ಚರನನ್ನು,
ವರ್ಣಶುದ್ಧಿಂ ವಾಕ್ಯಶುದ್ಧಿಂ ರಸಾನ್ ಭಾವಾನನಂತರಂ |
ನೇತೃಭೇದಾನಲಂಕಾರಾನ್ ದೋಖಾನಪಿ ಚ ತದ್ಗುಣಾನ್ 1
ನಾಟ್ಯಧರ್ವಾನ್ ರೂಪಕೋಪರೂಪಕಾಣ್‌ಂ ಭಿದಾ ಅಪಿ |
ಚಾಟುಪ್ರಬಂಧಭೇದಾಂಶೈ ಸಂಕೀರ್ಣಾಂಸ್ತತ್ರ ತತ್ತತು !
ಸಂಚಿತ್ಯೊಕತ್ರ ಕಥಯ ಸೌಕರ್ಯಾಯ ಸತಾಮಿತಿ | (1, ಒಮು.)
ಹೀಗೆ ಸಾಹಿತೃಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹಲವು ಕಡೆಗಳಿಂದ ಸಂಗ್ರಹಿಸಿ
ಒಂದುಗೂಡಿಸಿ ಗ್ರಂಥರಚನೆಮಾಡುವಂತೆ ಪ್ರಚೋದಿಸಿದನಂತೆ. ಅಮೃತಾನಂದನು ಹಿಂದಿನ
ಕಾವ್ಯನಾಟಕಗಳಿಂದೆ ಉನಾಹರಣಿಗಳನ್ನು ಕೊಟ್ಟರುವುದಲ್ಲದೆ, ಈ ಮನ್ಮಭೂಪತಿಯ
ಸ್ತುತಿಪರವಾದ ಕೆಲವು ಪದ್ಯಗಳನ್ನೂ ಸೇರಿಸಿದ್ದಾನೆ.
೪೫೬ ಭಾರತೀಯ ಕಾವ್ಯಮಿಾಮಾಂಸೆ
ರುದ್ರಭಟ್ಟನನ್ನು ಸಾಳ್ವನು ಉಡ್ಜೇಶಿಸಿದ್ದಾನೆಂಬುದು ಗೊತ್ತಾಗುತ್ತದೆ. 2
ವಿದ್ಯಾನಾಥನ ಗ್ರಂಥವಂತೂ " ಪ್ರತಾಪರುದ್ರೀಯ '.
ಕನ್ನಡದ ಗ್ರಂಥಗಳಲ್ಲಿ ಸಾಳ್ವನು ಸಹಜವಾಗಿಯೇ ಕವಿಕಾಮನ
ತೃಂಗಾರರತ್ನಾಕರಕ್ಕೆ ಬುಣಿಯಾಗಿದ್ದಾನೆ; ಅಲ್ಲಂದ ಕೆಲವು ಸೂತ್ರ
ಗಳನ್ನೂ ಉದಾಹರಣಿಗಳನ್ನೂ ತೆಗೆದುಕೊಂಡಿದ್ದಾನೆ. ಕವಿಕಾಮನ
ಅಭಿಪ್ರಾಯಗಳನ್ನು ಒಮ್ಮೊಮ್ಮೆ ಟೀಕಿಸಿರುವುದೂ ಉಂಟು.೫ ಉದಾಹರ
ಣಿಯ ಪದ್ಯಗಳನ್ನು ತಾನೇ ಸ್ವಂತವಾಗಿ ರಚಿಸದೆ, ನಾಗವರ್ಮನಂತೆ
ಹಿಂದಿನ ಕೃತಿಗಳಿಂದ ಉದ್ಧರಿಸಿ ಕೊಟ್ಟಿದ್ದಾನೆ; ಇವುಗಳಲ್ಲಿ ಹಲವು
ಮನೋಹರವಾಗಿವೆ. ಸಾಳ್ಯನು ತನ್ನ ಭಾರತವನ್ನು ನಡುಗನ್ನಡದಲ್ಲಿ
ಪಟ್ಟದಿಯಲ್ಲಿ ರಚಿಸಿದ್ದರೂ, ರಸರತ್ನಾಕರದಲ್ಲಿ ಸೂತ್ರವೃತ್ತಿ ವಿಚಾರಗಳೆಲ್ಲ
ವನ್ಮೂ ಹಳಗನ್ನಡದಲ್ಲಿ ಬರೆದು, ವೃತ್ತಕಂದಗಳಲ್ಲಿ ರಚಿತವಾದ ಪದ್ಯ
ಗಳನ್ನು ಮಾತ್ರ ಉದಾಹರಿಸಿರುವುದು ವಿಚಾರಾರ್ಹವಾಗಿದೆ.
ಕನ್ನಡದಲ್ಲಿ " ಸಾಪಿತ್ಯಸಂಜ್ಞೀವನ 'ವೆಂಬ ಲಕ್ಷಣ ಗೃ೦ಥವಿದ್ದಂತೆ
ಸಾಳ್ವನ ಉಕ್ತಿಯಿಂದ ಗೊತ್ತಾಗುತ್ತದೆ (ಪು. ೪೯); ಇವರ ಕರ್ತೃವಿನ
ಹೆಸರು ಗಣೇತ್ವರಾಗ್ನಿ. ರಸಗಳ ಪರಸ್ಪರ ವಿರೋಧವನ್ನು ಕುರಿತು
ಹೇಳುತ್ತಾ ಸಾಳ್ವನು ಈ ಗ್ರಂಥದ ಹೆಸರನ್ನು ಎತ್ತಿ, ಅಭಿಪ್ರಾಯವನ್ನು
ಉಲ್ಲೇಖಿಸಿ, ಅದರಿಂದ ಎರಡು ಸೂತ್ರಪದ್ಯಗಳನ್ನೂ ಉದ್ಭರಿಸಿಕೊಟ್ಟಿ
೧ ಲಿ ಛ 60
ದ್ದಾನೆ. ಈ ಹೆಸರಿನ ಲಾಕ್ಷಣಿಕನಿಗಾಗಲಿ ಅವನ ಕೃತಿಯಾಗಲಿ ಇದ್ದು
ದಕ್ಕೆ ಸಾಳ್ವನ ಹೇಳಿಕೆಯೇ ಏಕಮಾತ್ರಸಾಕ್ಷಿ. ವಿರಳವಾದ ಕನ್ನಡ
ಲಾಕ್ಷಣಿಕರ ಪಂಕ್ತಿಗೆ ಈತನನ್ನು ಸೇರಿಸಲು ಸಾಳ್ವನಿಂದ ಆಗಿರುವ ಉಪ
ಕಾರಕ್ಕಾಗಿ ನಾವು ಅವನಿಗೆ ಕೃತಜ್ಞ ರಾಗಿರಜಬೇಕಾಗಿದೆ.
21 ಹಿಂಡೆ ಪುಟ ೩೨ರಲ್ಲಿ 95ನೆಯ ಅಡಿಟಿಪ್ಪಣಿಯನ್ನು ಮೋಡಿ.
2 ಹಿಂದೆ ಪುಟ ೪೫೨ನ್ನು ಮೋಡಿ.
ಚ ರಸರತ್ನಾಕರದ ಸಂಪಾದಕರು ""ಗಣೀತಶ್ಚರಇದಿನಿಕ್ಕತ ಸಾಹಿತ್ಯಸಂಜೀವನದಲ್ಲಿ
ಜ್ ” ಎಂಬ ಪಾಠವನ್ನು ಅಂಗೀಕರಿಸಿ, "" ಹಸ್ತಲಿಖತಪ್ರತಿಗಳಲ್ಲ ಗಣೇಶತ್ಸರಾಜ್ಲಿ
ಗಣೇತ್ವರಾಗ್ನಿ ಎಂಬ ಭಿನ್ನಪಾಠಗಳುಂಟು, ಗಣೀಶ್ವರಗಣಿ ಎಂದಿರಬಹುದು '' ಎಂದು
ಅಡಿಟಪ್ಪಣಿಯಲ್ಲಿ ಸೂಚಿಸಿದ್ದಾರೆ. ಅವತರಣಿಕೆಯಲ್ಲಿ (ಪು. ೬೪111) ಸಾಹಿತ್ಯಸಂಜೀವನ
ಕಾರನ ಹೆಸರನ್ನು "“ಗಣೇಶ್ವರಾಜ್ಞಿ (ಗ್ನಿ) '' ಎಂದು ಕೊಟ್ಟಿದ್ದಾರೆ. "" ಗಣೀಶ್ಚರಾಗ್ನಿ''
ಎಂಬುದೇ ಸರಿಯಾದ ಹೆಸರೆಂದು ತೋರುತ್ತದೆ. ತಿಮ್ಮನು ತನ್ನ 'ಅಲಂಕಾರ ರಸ ಸಂಗ್ರಹ'
ಸಲ್ಲಿ ಸಾಳ್ಮನ ರಸರತ್ನಾಕರದ ಈ ಭಾಗದಿಂದ ಅನುವಾದ ಮಾಡುತ್ತಾ "" ಗಣೀಶ್ಚರಾಗ್ನಿ
ಕೃತ ಸಾಹಿತ್ಯಸಂಜೀವನದಲ್ಲ ...... '' ಎಂದು ಹೇಳಿರುವುದು ಇದಕ್ಕೆ ಪೋಪಕವಾಗು
ದೆ
AOD
ಪರಿಶಿಷ್ಟ ೪೫೭
ರಸರತ್ನಾಕರದಲ್ಲ ಸಾಳ್ಳನು ಹೇಳಿರುವುದೆಲ್ಲವೂ ಲಾಕ್ಷಣಿಕ ಸಮ್ಮತ
ವೆನ್ನಲಾಗುವುದಿಲ್ಲ. ಉದಾಹರಣೆಗೆ, " ಭಾವದೆ ಪುಟ್ಟಿದ ರಸಮಂ
ಭಾವುಕರದನಖಿದು ಸಪಿವುದೇ ಅನುಭಾವಂ'' ಎಂಬಲ್ಲಿ (ಸೂತ್ರ ೪) ""ಅನು
ಭಾವ ''ದ ಲಕ್ಷಣವು ಎಲಕ್ಷಣವಾಗಿದೆಯೆಂದು ಹಿಂದೆಯೇ ನೋಡಿದ್ದೇವೆ.
ಹಾಗೆಯೇ, ಸಾಳ್ವನು "" ಆ ರಸಂಗಳನಭಿನಯಿಪನೊಳಂ ಸಭ್ಯರೊಳಂ
ಪಸೋತ್ಪತ್ತಿಯಕ್ಕು೦'' (ಪು. ೭) ಎನ್ನುತ್ತಾನೆ; ಆದರೆ ನಟನಿಗೆ ರಸಾ
ನುಭವ ಇಲ್ಲಷೆಂದೇ ಲಾಕ್ಷಣಿಕರ ಸಾಮಾನ್ಯಾಭಿಪ್ರಾಯ.೫ ಒಂದೊಂದು
ಕಡೆ ಸಾಳ್ವನ ಮಾತು ನಾವು ಕೋರುವಷ್ಟು ನಿಪ್ಕೃಪ್ಪವಾಗಿ ಇರುವುದಿಲ್ಲ
ವೆಂದೂ ಅನ್ನಿಸಬಹುದು. ಆದರೂ, ಗ್ರಾಹ್ಯವೂ ಅರ್ಥಪೂರ್ಣವೂ
ಆದ ಹಲವು ಉಕ್ತಿಗಳು ಸಾಸ್ಯನ ಗ್ರಂಥದಲ್ಲುಂಟು. ನಾವು ಹಿಂದೆಯೇ"
'ಉದಾಹರಿಸಿರುವ "ಸಮಾಸೋಕ್ತಿ ಅರ್ಥಾಂತರನ್ಯಾಸಂ ರೂಪಕಂ
ಉತ್ಸ್ರೇಕ್ಷಾದಿಗಳೀ ರಸಭಾವಾಭಾಸಕ್ಕೆ ಜೀವಿತಂ'' ಎಂಬ ಅವನೆ ವಾಕ್ಯ
ವನ್ನು (ಪು. ೧೦೩) ಇಲ್ಲ ನೆನಪಿಗೆ ತಂಮು ಕೊಳ್ಳಬಹುದು. ಒಟ್ಟಿನ ಮೇಲೆ
ಶಾಸ್ತ್ರಸಂಪ್ರದಾಯವನ್ನು ಅನುಸರಿಸಿ ರಸವಿಷಯದಲ್ಲಿ ಅನೇಕ ವಿವರ
ಗಳನ್ನು ಸಂಗ್ರಹಿಸಿ ಅಕ್ಲಿಪ್ಪವಾಗಿ ನಿರೂಪಿಸಿ ಸಾಳ್ಯನು ಶ್ಲಾಘನೆಗೆ ಪಾತ್ರ
ನಾಗಿದ್ದಾನೆ.
ಇಂದುವರಮಾರುವಾ ತೆಲಿ
ದಿಂದೆಂ ಕನ್ನಡದೊಳಾರೃರಾ ಎಂಬಿನಮೊ.. |
ಳ್ಛಿಂದೆ ವಿವರಿಸಿದುದಿಲ್ಲೆವೆ
ಚಂದದೆ ಬಿಚ್ಚಟಿಸಿ ರಚಿಸಿದಂ ಕವಿಸಾಳ್ಯ೦ ॥ (ಪು. ೧೦೬)
ಎ೦ದು ಅವನು ಹೇಳಿಕೊಂಡಿರುವುದನ್ನು ಒಪ್ಪಬೇಕು. ಇಪ್ಪರ ಮೇಲೆ,
*" ಪರಿಭಾವಿಸುವೊಡೆ ರಸವಿಸ್ತರಮಂ ವಿವರಿಸುಹೆನೆಂಬನಾವನುಮೊಳನೇ ''
(ಪು. ೩೨) ಎಂದು ಹೇಳುವ ಸಾಳ್ಯನಿಗೆ ತನ್ನ ಕೆಲಸದ ಅಪಾರತೆಯ
ಅರಿವೂ ಇದೆ.
" ಶಾರದಾವಿಲಾಸ 'ವೆಂಬ ಗ್ರಂಥವೊಂದ:೦ಟು. ಈಗ ದೊರೆತಿರು
ವುದು ""ಧ್ವನಿವ್ಯಂಗ್ಯಪ್ರಕರಣ ''ವೆಂಬ ಇದರ ಎರಡನೆಯ ಪ್ರಕರಣ
ಮಾತ್ರ. ಹಿಂದುಮುಂದಿನ ಭಾಗಗಳು ನಪ್ಪವಾಗಿರುವುದರಿಂದ ಕವಿಯ
2 ಹಿಂದೆ ಪುಟ ೩೪೩, ಅಡಿಟಿಪ್ಪಣಿ 6.
25 ಹಿಂದೆ ಪುಟ ೩೬೮೯ ನೋಡಿ.
26 ಹಿಂದೆ ಪುಟ ೩೯೯, ಅಡಿಟಪ್ಪಣಿ 86 ನೋಡಿ.
೪೫ಲ ಭಾರತೀಯ ಕಾವ್ಯಮಾಮಾಂಸೆ
ವಿಚಾರವನ್ನಾಗಲಿ ಗ್ರಂಥದ ವಿಷಯಸಂಪತ್ತು ಎಏನಿದ್ದಿತೆಂಬುದನ್ನಾಗಲಿ
ಖಚಿತವಾಗಿ ತಿಳಿಯಲು ಅವಕಾಶವಿಲ್ಲವಾಗಿದೆ. ಆದರೂ, ಈ ವಿಷಯದಲ್ಲಿ
ನಾವು ಸಂಪೂರ್ಣ ಅಜ್ಞಾನದಲ್ಲಿರದೇಕಾಗಿಲ್ಲ. ಶಾರದಾವಿಲಾಸದ
ಕೆಲವು ಉದಾಹರಣ ಪದ್ಯಗಳಲ್ಲಿ ಸಾಳ್ವಮಲ್ಲನೆಂಬ ಅರಸನ ಉಲ್ಲೇಖ
ದೊರೆಯುತ್ತದೆ; ಶಾರದಾನಿಲಾಸದ ಕರ್ತೃ ತನ್ನ ಪೋಷಕನನ್ನು
ಈ ರೀತಿಯಾಗಿ ಹೊಗಳಿದ್ದಾನೆಂದು ಊಷಿಸಲು ಅವಕಾಶವಿದೆ.
ಇತ್ತ, ಸಾಳ್ವಮಲ್ಲ, ಅವನ ಹೋದರಳಿಯನಾದ ಸಾಳ್ವದೇವ ಇವರಿಬ್ಬರ
ಇಪ್ಪದ ಮೇರೆಗೆ ತಾನು "ಭಾರತ 'ವನ್ನು ಬರೆದದ್ದಾಗಿ ಕವಿಸಾಳ್ಳನು
ಹೇಳುತ್ತಾನೆ. ಈ ಕವಿಯೇ ರಸರತ್ನಾಕರದ ಕರ್ತವೆಂಬುದನ್ನೂ, ರಸ
ರತ್ನಾಕರದಲ್ಲಿರುವಂತೆಯೇ ಶಾರದಾವಿಲಾಸದಲ್ಲೂ ಹೇಮಚೆಂದ್ರನ ಕಾವ್ಯಾ
ನುಶಾಸನದ ಪ್ರಭಾವವು ವಿಶೇಷ ನಾಗಿರುವುದನ್ನೊ ನೆನೆದರೆ, ಶಾರದಾ.
ವಿಲಾಸವನ್ನೂ ಕವಿಸಾಳ್ಯನೇ ಬರೆದಿರುವುದು ಅ ಕಂಭಾವ್ಯವಲ್ಲವೆನಿಸುತ್ತದೆ.
ಈ ವಿಷಯದಲ್ಲಿ ಕವಿಚರಿತಕಾರರ ಮತ್ತು ಈ ಎರಡು ಗ್ರಂಥಗಳ ಸಂಪಾ
ದಕರ ಊಹೆಯನ್ನೇ ನಾವೂ ಅನುಸರಿಸಿ ಇವು ಏಕಕರ್ತೃಕಪೆಂದು ಒಪ್ಪ
ಬಹುದು. ೫ ರಸವಿಚಾರವನ್ನು ತಾನು ಬಲ್ಲ ಮಟ್ಟಿಗೆ ಸವಿಶ್ತರವಾಗಿ ರಸ
ರತ್ನಾ ಕರದಲ್ಲಿ ಹೇಳಿದ ಕವಿಸಾಳ್ವನು ಧೃನಿಯನ್ನು ಕುರಿತು ಕನ್ನಡದಲ್ಲಿ
ನಿರೂಪಣಿಯಿಲ್ಲದಿರುವುದನ್ನು ಮನಗಂಡು ಆ ಕೊರತೆಯನ್ನು ಪರಿಹರಿಸಲು.
ಶಾರದಾವಿಲಾಸದಲ್ಲಿ ಪ್ರಯತ್ನ ಮಾಡಿದನೆಂದು ತೋರುತ್ತದೆ.
ಶಾರದಾವಿಲಾಸ ವಿಷಯನಿರೂಪಣಿಗೆ ತೊಡಗುವ ಮೊದಲು,
ಧ್ವನಿಪ್ರತಿಪಾದನೆ ಕನ್ನಡದಲ್ಲಿ ಅದುವರೆಗೆ ಎಪ್ಪರಮಟ್ಟಿಗೆ ನಡೆದಿತ್ತೆ೦ಬು
ದನ್ನು ಕುರಿತು ಒಟ್ಟಾಗಿ ಎರಡು ಮಾತನ್ನು ಇಲ್ಲ ಹೇಳಬೇಕು. “ಧ್ವನಿ''
ಯ ಹೆಸರು ಕವಿರಾಜಮಾರ್ಗದಲ್ಲೇ ಕಾಣಿಸಿಕೊಳ್ಳುತ್ತದೆಯಪ್ಟೆ. ಅದನ್ನು
ಕುರಿತ ಅಲ್ಲಿನ ಏಕಮಾತ್ರ ಪದ್ಯವು ಹೀಗಿದೆ
ಧ್ವನಿಯೇ ಬುದಳ೦ಕಾರಂ
ಧ್ರನಿಖಸುಗು ಶಬ್ದದಿ: ದಮರ್ಥದೆ ದೂಪ್ಯಂ |
ನೆನೆವುದಿದನಿ೦ತು ಕಮಳದೊ..
ಳನಿಮಿಷಯುಗಮೊಪ್ಪಿ ತೋರ್ಪುದಿಂತಿದು ಚೋದ್ಯ೦॥ (1;1, ೨೦೯)
21 ಹೆಚ್ಚಿನ ವಿವರಗಳಿಗೆ, ಕವಿಚರಿತೆ, [ರಲ್ಲಿ ಸಾಳ್ಬನನ್ನು ಕುರಿತ ಭಾಗವನ್ಮೂ, ಎ.
ವೆಂಕಟರಾವ್ ಮತ್ತು ಎಚ್. ಶೇಷಯ್ಯಂಗಾರ್ ಸಂಪಾದಿಸಿರುವ ರಸರತ್ನಾಕರದ ಅವತರ:
ಣಿಕೆಯನ್ನೂ ನೋಡಬಹುದು. ಈ ಸಂಪಾದಕರು ಶಾರದಾಎಲಾಸವನ್ನು ತಮ್ಮ ಗ್ರಂಥದ
ಒಂದನೆಯ ಪರಿಶಿಪ್ಸವಾಗಿ ಮುದ್ರಿಸಿದ್ದಾರೆ ; ಅದರಲ್ಲಿ ೧೩೦, ೧೩೧ನೆಯ ಪುಟಗಳ ಅಡಿ
ಟಪ್ಪಣಿಗಳನ್ನೂ ನೋಡಿ.
ಪರಿಶಿಪ್ಪ ೪೫೯
ಕನ್ನಡದ ಕವಿರಾಜಮಾರ್ಗವೂ ಸಂಸ್ಕೃತದ ಧ್ಯನ್ಯಾಲೋಕವೂ ಬಹುಶಃ
ಏಕಕಾಲದಲ್ಲಿ ರಚಿತವಾದವೆಂಬುದನ್ನೂ, ಕನ್ನೆಡನಾಡಿಗೂ ಕಾಶ್ಮೀರಕ್ಕೂ
ಇರುವ ಸಾವಿರಾರು ಮೈಲಿಗಳ ದೂರವನ್ನೂ ನೆನೆದರೆ, ಧ್ವನಿಯ
ಮಾತು ಇಷ್ಟೊಂದು ಬೇಗ ಕನ್ನಡದ ಗ್ರ ೦ಥದಲ್ಲಿ ಬಂದಿರುವುದು ಹೋಜಿಗ
ಪೆನಿಸುತ್ತದೆ. ಆನಂದವರ್ಧನನಿಗೆ ಪಿಂದೆಯೇ ಧ್ವನಿಯ ಪ್ರಸ್ತಾವ ಎದ್ದಿ
ತ್ರೆ೦ಂಬ ವಾದಕ್ಕೆ ಇದು ಪುಪ್ಪಿಕೊಡುತ್ತದೆ. ಕವಿರಾಜಮಾರ್ಗಕಾರನು
ಧ್ವನ್ಯಾಲೋಕವನ್ನು ನೋಡಿದ್ದನೆಂಬುದಕ್ಕೆ ಯಾವ ನಿದರ್ಶನೆವೂ ಅವನ.
ಗ್ರಂಥದಲ್ಲಿ ದೊರೆಯುವುದಿಲ್ಲ. ಅಲಂಕಾರಗಳ ಮಾಲೆಸು ಕೊನೆಯಲ್ಲಿ
ಭಾವಿಕಾಲಂಕಾರವಾದ ಬಳಿಕ್ಕ ಈ "" ದೃನ್ಯಳೆಂಕಾರ'' ವನ್ನು ಸೇರಿಸಿ
ಅದರ ಲಕ್ಷ್ಯಲಕ್ಷಣವನ್ನೆ ಲ್ಲಾ ಒಂದೇ ಕ೦ದಪದ್ಯದಲ್ಲಿ ಅವನು ಮುಗಿಸಿಬಿಟ್ಟಿ
ದ್ಬಾನೆ.. ಅವನ ಉಕ್ತಿಗೆ ಸರಿಯಾಗಿ ಅರ್ಥವಾಗದೆ, ಧ್ವನಿಯೆಂದರೆ
ಏನೆಂದು ಅವನು ಭಾವಿಸಿದ್ದ ನೆಂಬುದು ಸ್ಪಪ್ಪ ವಾಗಿ ಗೊತ್ತಾಗದೆ, ಪೇಚಾ
ಟಕ್ಕೆ ಕಾರಣವಾಗಿದೆ. "“ಧ್ಯನಿಯೆಂಬುದು ಅಳಂಕಾರಂ'' ಎಂಬುದರ
ಅಭಿಪ್ರಾಯವೇನೋ ಸ್ಪಷ್ಟ; ಕವಿರಾಜಮಾರ್ಗಕಾರನ ಭಾಗಕ್ಕೆ ಇದು
ಮೂವತ್ತೈದರ ಜೆತೆಗೆ 'ಮೂವತ್ತಾರನೆಯ "" ಅಲಂಕಾರ”'. ಇದರೆ
ಸ್ವರೂಪವೇನು? ಧ್ಯ್ವನಿಯಿಸುಗುಂ ಶಬ್ದದಿಂದೆ, ಅರ್ಥದೆ ದೂಪ್ಯ೦ಂ''.__
ಅರ್ಥ ದಿಂದ ಧ್ವನಿತವಾದರೆ ದೋಪವಾಗ.ತ್ತದೆ--ಎಂದರೇನು? ಸಂಸ್ಕೃತ.
ಲಕ್ಷಣಗ್ರಂಥಗಳಲ್ಲ ನಮಗೆ ಪರಿಚಿತವಾಗಿರುವ ಯಾವ ವಿವರಣಿಯನ್ನೂ
ಇಲ್ಲಿಗೆ ಹೊಂದಿಸಲು ಆಗುವುದಿಲ್ಲ. ಒಂದು ವೇಳೆ "ತಬ್ದಶಕ್ತಿಮೂಲ
ಧ್ವನಿ' ಯನ್ನೇನಾದರೂ ಕವಿರಾಜಮಾರ್ಗಕಾರನು ಮನಸ್ಸಿನಲ್ಲಿ ಇಟ್ಟು
ಕೊಂಡಿರಬಹುದೆ? ಉದಾಹರಣಿಯಿಂದಲಾದರೂ ವಿಷಯಪರಿಷ್ಕಾರವಾ.
ದೀತೆ, ನೋಡೋಣ ಎಂದರೆ, “ನೆನೆವುದು ಇದಂ ಇಂತು'' ಎಂಬ ಪ್ರಷೇ
ಶಿಕೆಯೊಡನೆ, "““ಕಮಳದಡದೊಳ್ ಅವಿಮಿಷಯುಗಂ ಒಪ್ಪಿ ತೋರ್ಪದು, ಇಂತು
ಇದು ಚೋದ್ಯಂ'' ಎಂದು ಉದಾಹರಣೆಕೊಡುತ್ತಾನೆ. ಇದು ತೊಡಕನ್ನು
ಬಿಡಿಸುವ ಬದಲು ಇನ್ನಷ್ಟು ಜಟಿಲಗೊಳಿಸುತ್ತದೆ. ""ಅಂದವಾದ ಮುಖ:
ದಲ್ಲಿ ಹೊಳೆಯುವ ಎರಡು ಕಣ್ಣು ಗಳಿವೆ'' ಎನ್ನುವುದಕ್ಕಿಂತ “ಕಮಲದಲ್ಲಿ
ಜೋಡಿಮಾನುಗಳು ಒಪ್ಪಿ ತೋರುತ್ತವೆ'' ಎಂದು ಹೇಳುವುದರಲ್ಲಿ ಚಮ
ತ್ಕಾರ ಹೆಚ್ಚು. ಆದರೆ ಇಪ್ಪಕ್ಕೇ ಅದು ಪರ್ಯವಸಾನವಾದರೆ, ಈಚಿನ.
ಖ೬೦ ಭಾರತೀಯ ಕಾವ್ಯಮಾಮಾಂಸೆ
ಅಲಂಕಾರಿಕರು ಹೇಳುವ "" ರೂಪಕಾತಿತಯೋಕ್ತಿ'' ಯನ್ಮೇ ೫ ಕವಿರಾಜ
ಮಾರ್ಗಕಾರನು " ಧ್ವನ್ಯಳೆಂಕಾರ''ವೆಂದು ಕರೆದನೆನ್ನಬೇಕಾಗುತ್ತದೆ.
ಆದರೆ ಅದಕ್ಕೆ ಅನ್ವಯವಾಗುವಂಥ ಲಕ್ಷಣ ಮೇಲೆ ಉಕ್ತವಾಗಿಲ್ಲ. ಅಷ್ಟೇ
ಅಲ್ಲ, ""ಧ್ಯನಿಯಿಸುಗುಂ ಶಬ್ದದಿಂದೆ'' ಎಂಬ ವಾಕ್ಯಕ್ಕೂ ಉಪಪತ್ತಿ ತಪ್ಪಿ
ಹೋಗುತ್ತದೆ. “ಸ್ಥಿ ತಸ್ಯ ಗತಿಶ್ಚಿಂತನೀಯಾ'' ಎಂದುಕೊಂಡು ಪರ್ಯಾ
ಲೋಚನೆ ಮಾಡುವಾಗ, ಮುಂದಕ್ಕೆ ಇನ್ನೊಂದು ಹೆಜ್ಜೆ ಹೊಳೆಯುತ್ತದೆ.
ಉದಾಹರಣವಾಕ್ಯ ದಲ್ಲಿ ಮಾನ, ಮತ್ಸ್ಯ ಮೊದಲಾದ ಪರ್ಯಾಯ ಪದ
ಗಳನ್ನು ಉಪಯೋಗಿಸದೆ, (ಅನಿಮಿಷ (= ಎಷೆಯಿಕ್ಕದ್ದು) ಎಂಬು
ದನ್ನು ಕವಿ ಉಪಯೋಗಿಸಿದ್ದಾನೆ. ಇದರ ಸ್ಫಾರಸ್ಯವೇನು? ವಾಸ್ತವ
ವಾಗಿ "" ನಿಮೇಷ''ವುಳ್ಳಿ (ಎಂದರೆ ಎವೆಯಿಕ್ಕುವ) ಮಾನವಿಸೊಬ್ಬಳೆ
ಕಣ್ಣು ಗಳಿಗೆ ಅವುಗಳ ಸ್ವಭಾವಕ್ಕೆ ಅತ್ಯ೦ತ ವ್ಯತಿರಿಕ್ತವಾದ « ಅನಿಮಿಪ''
ಅಂಬ ಶಬ್ದ ಇಲ್ಲ ಸೂಚಕವಾಗುತ್ತದೆ; ದೇವತೆಗಳು ""ಅನಿಮಿಷ'' ರಾಗಿರು
ವುದರಿಂದ, ಅವಳು ಮಾನವಿಯಲ್ಲ, ದೇವಿ ಎಂಬ ಅರ್ಥವೂ ಇಲ್ಲ ಸ್ಸು ರಿಸ
'ಬತುದು. ಇದೇ ಇಲ್ಲಿಯ ""ಚೋದ್ಯ''ವಾಗಿರಬಹುದೆ? ಇದು “ಶಬ್ದ''
ಶಕ್ತಿಯಿಂದ ಧ್ವನಿಸುವುದೆಂಬುದನ್ನೂ ಲಕ್ಷಿಸಜೇಕು.
ಈಗ ನಾವು ಊಪಿಸಬಲ್ಲ ಮಟ್ಟಿಗೆ ಹೇಳುವುದಾದರೆ, ಧ್ವನ್ಯಾ
ಲೋಕವನ್ನು ಮಾತ್ರಮ್ಲ ಧ್ವನಿಕಾರಿಕೆಗಳನ್ನು ಕೂಡ ರಹಸ
ಕಾರನು ನೋಡಿರಲಾರನು. ಅವನ ಭಾಗಕ್ಕೆ ಧ್ಯನ «ಪ್ರವಾದ ಮಾತ್ರ''
'ವಾಗಿದ್ದಿರಬೇಕು. ಕಾಶ್ಮೀರದಲ್ಲಿ ಧ್ವನಿಯೆ೦ಬ ಕೂಗು ಈಚೆಗೆ ಎದ್ದಿದೆ ;
ಇದನ್ನು « ಕಾವ್ಯಶೋಭಾಕರ'' ವೆಂದು ಗಣಿಸುತ್ತಿದ್ದಾರೆ..ಎಂದು
ಯಾರಿಂದಲೋ ಕೇಳಿ, ಹಾಗಾದರೆ ತನ್ನ: ಅಲಂಕಾರಗಳ ಪಟ್ಟಿಗೆ ಇದನ್ನೂ
ಸೇರಿಸದೇಕೆಂಬ ಸ್ವಾಭಾವಿಕವಾದ ಆಶಯ.ದಿಂದ ಕವಿರಾಜಮಾರ್ಗಕಾರನು
ತನಗೆ ತಿಳಿದುಬಂದ ಸ್ವಲ್ಪ ವಿಷಯದ ಅವಲಂಬನದಿಂದ ಅದನ್ನು ಕುರಿತು
ಪಖಂದು ಮಾತನ್ನು ಹೇಳಿದನೆಂದು ತೋರುತ್ತದೆ. ಅವನ ಭಾವತಿಗೂ
2 ರೂಪಕಾತಿಶಯೋಕ್ತಿಃ ಸ್ಯಾನ್ನಿಗೀರ್ಯಾಧೃವಸಾನತಃ |
ಪಶ್ಯ ನೀಲೋತ್ತ್ವಲದ್ವಂದ್ಯಾನ್ನಿಸ್ಪರಂತಿ ಶಿತಇಃ ಶರಾಃ 8
(ಕುವಲಯಾನಂದ, ಪು. ೬೮)
ಪರಿಶಿಷ್ಟ ೪೬೧:
ಧ್ವನಿಯ ತಿರುಳಿಗೂ ಎಷ್ಟು ದೂರಸೆಂದು ಯಾರಿಗಾದರೂ ಹೊಳೆಯ
ದಿರದು.2
ಕವಿರಾಜಮಾರ್ಗವನ್ನು ಬಿಟ್ಟು ಬಂದರೆ, ಕನ್ನಡದಲ್ಲಿ ಧ್ವನಿಯ
ಮಾತು ಮತ್ತೆ ಕಿವಿಗೆ ಬೀಳುವುದು ಒಂದು ಲಕ್ಷ 5ಗುಂಥದಲ್ಲ ಪಂಪನೆ:
" ಆದಿಪುರಾಣ'ದಲ್ಲಿ (ಕ್ರಿ. ತ. ೯೪೧), ಜಯಾರ್ಧಷೆಂಬ ಪರ್ವತದ
ವರ್ಣನೆಯಲ್ಲಿ ಈ ಪದ್ಯ ಬರುತ್ತದೆ :
` ಧ್ಯನಿಯೆನಿಸಿದಳಂಕಾರ_
ಧ್ವನಿಯೆಸೆವಿನಮೆಸೆವುದಲ್ಲಿ ಮಧುರವಿಪಂಚೀ .
ಧ್ವ್ಯನಿಯೊಡವೇಕರಾಗ.
ಧ್ವಸಿಯೆ ನೆ ಸೊಗಯಿಪುದು ಕಿನ್ನರಥ್ವನಿ ನಗದೊಳ್ ॥ (ಬ. ೧೧೯)
ಆ ಬೆಟ್ಟದಲ್ಲಿ ಕನ್ನರರು ಬಾಜಿಸುವ ಮಧುರವಾದ ವೀಣಿಯ ಧ್ವನಿ
ಯೊಂದಿಗೆ ಅವರು ಹಾಡುವ ಅನೇಕ ರಾಗಗಳ ಧ್ವನಿಯೂ ಕಲೆತು ಕೇಳಿ:
ಬರುವಾಗ, ಆ ಗಾಯನವಾದನಕಾಲದಲ್ಲಿ ಕಿನ್ನರ ಸ್ತ್ರೀಪುರುಷರ ಬಳೆ
ಕಡಗ ಮೊದಲಾದ ಅಲಂಕಾರಗಳು ಅಲುಗಾಡಿ ಅವುಗಳ ಧೃನಿಯೂ
ಇಂಪಾಗಿ ಕೇಳಿಸುತ್ತಿದ್ದಿತು; ಹೀಗೆ ಇಲ್ಲಿ ಮೂರು ಧ್ವನಿಗಳ ಮಿಳನವು-
ಮನೋಹರವಾಗಿದ್ದಿ ತು--ಎಂಬುದು ಇಲ್ಲಿ ಕವಿಯ ಮುಖ್ಯಾಶಯ. ಇದರ:
ಜೊತೆಗೆ, ಧ್ಯನಿಪ್ರಕಾರಗಳಲ್ಲಿ ಒಂದಾದ "" ಅಲಂಕಾರ ಧ್ಯನಿ”ಯ
೫ ಕೆ. ಕೃಷ್ಣಮೂರ್ತಿಯವರು "ಅನಂದವರ್ಧನನ ಕಾವ್ಯವಖಾಮಾ-ಸೆ 'ಯಲ್ಲಿ
4" ಧ್ವನಿಯೆಂಬುದಳಂಕಾರಂ . . . .'' ಎಂಬ ಪದ್ಯದ ವಿಷಯವನ್ನು ಪ್ರಸ್ತಾ ಎಸಿದ್ದಾರೆ.
"" ಧ್ವನಿಖ:ಸುಗುಂ ಶಬ್ದದಿಂದಮರ್ಥದೆ ದೂಪ್ಯಂ'' ಎಂಬುದಕ್ಕೆ ಅವರು "“ ಮುಖ್ಯವಾದ.
ಅರ್ಧವು ಅಸಂಗತ, ಅತ ಏಪ ದೂಷ್ಯ, ಎನ್ನುವಂತಿದ್ದರೂ ಧೃನಿಯೆಂಬ ವ್ಯಾಪಾರಾಂತರ
ದಿಂದ ಶಬ್ದವು ಅರ್ಥಾಂತರವನ್ನು ಬೋಧಿಸುವುದರಲ್ಲಿ ಇರುವ ಚಮತ್ಕಾರವೇ ಈ
ಅಲಂಕಾರದ ಲಕ್ಷಣ'' ಎಂದು ಅರ್ಥ ಮಾಡುತ್ತಾರೆ (ಪು. ೫೧). ಇಷ್ಟು ಅರ್ಥವು ಮೂಲ
ವಾಕ್ಯದಿಂದ ಹೊರಡಲಾರದೆಂದು ನಮಗೆ ತೋರುತ್ತದೆ.
"" ಇಂತಿಷ್ಟು ಅಲಂಕಾರಗಳನ್ನು ಈ ಗ್ರಂಥದಲ್ಲಿ ವಿವರಿಸುವೆನೆಂದು ಮೊದಲು
ಪ್ರತಿಜ್ಞೆ ಮಾಡುವ ಪದ್ಯಗಳ (ಕವಿರಾಜಮಾರ್ಗ, ||. ೧-೬) ಧ್ವನಿಯ ಪ್ರಸ್ತಾಪವೇ
ಬರುವುದಿಲ್ಲ” ಎಂಬುದರ ಕಡೆಗೆ ಕೆ. ಕೃಷ್ಣಮೂರ್ತಿಯವರು ಗಮನವನ್ನೆಳೆದು ಉಪಕಾರ:
ಮಾಡಿದ್ದಾರೆ. ಇದರಿಂದ ಧ್ವನಿಯನ್ನು ಕುಸಿತ ಪದ್ಯವು ಪ್ರಕ್ಷಿಪ್ರವೇನಾದರೂ ಅಗಿರಬಹುದೆ
ಎಂಬ ಆಲೋಡನೆ ಮನಸ್ಸಿನಲ್ಲಿ ಸುಳಿದುಹೋಗುತ್ತದೆ. ಆದರೆ ಕವಿರಾಜಮಾರ್ಗದಲ್ಲಿ
ಈ ಪದ್ಯಕ್ಕೆ ನೇರವಾಗಿ ಹಿಂದೆ (11, ೨೦೮ರಲ್ಲ) ಹೇಳಿರುವ ಭಾವಿಕಾಲಂಕಾರವೂ
ಪ್ರತಿಜ್ಞಾಪದೃಗಳಲ್ಲಿ ಉಕ್ತವಾಗಿಲ್ಲವೆಂಬುದನ್ನು ನೆನೆದರೆ ಈ ಸಂದೇಹ ನಿವಾರಣಿಯಾಗ.
ಬಹುದು.
೪೬೨ ಭಾರತೀಯ ಕಾವ್ಯಮಾಮಾಂಸೆ
ಪ್ರತೀತಿ ಇಲ್ಲಿಯ ಉಕ್ತಿಬಲದಿಂದ ಸಹಜವಾಗಿ ನಮಗೆ ಉಂಟಾಗುತ್ತಿದೆ.
“ಪಂಪನ ಮನಸ್ಸಿನಲ್ಲಿ ಈ ಪಾರಿಭಾಷಿಕ ಶಬ್ದವೂ ಇದ್ದಿತೆ ? ಇವೆ,
« ಧ್ವನಿಯೆ೦ಬುದಳಂಕಾರಂ ಧ್ವನಿಯಿಸುಗುಂ ಶಬ್ದದಿಂದೆ'' ಎಂದು ಕವಿ
ರಾಜಮಾರ್ಗದಲ್ಲಿ ಉಕ್ತವಾಗಿರುವುದನ್ನು ನೆನಪಿನಲ್ಲಿಟ್ಟು ಕೊಂಡು,
« ಧ್ವನಿಯೆನಿಸಿದ ಅಲಂಕಾರದ ಧ್ವನಿ ಏಸೆವಿನೆ೦''. ಎಂಬುದರಿಂದ
`ಕಾವ್ಯಾಲಂಕಾರ ದೇಹಾಲಂಕಾರಗಳೆರಡನ್ನೂ ಒಟ್ಟಿಗೆ ಪ್ರತೀತಿಗೆ: ತರು
“ವುದು ಮಾತ್ರವೇ ಪಂಪನ ತಾತ್ಟ ರ್ಯವಾಗಿದ್ದಿತೆ ? 3. ಇದನ್ನು ನಿರ್ಣಯಿ
ಸುವುದು ಸುಲಭವಲ್ಲ. ಪಂಪನಿಂದ ಸುಮಾರು ಎರಡು ಶತಮಾನಗಳ
ಈಚೆಗಿದ್ದ ಕಾವ್ಯಾವಲೋಕನಕಾರನೇ ಧ್ವನಿಯ ಮಾತನ್ನು ಎತ್ತದಿರು
'ವುದನ್ನು ನೋಡಿದರೆ, ಪಂಪನ ಕಾಲಕ್ಕಾಗಲೆ ಧ್ವನ್ಯಾಲೋಕವು ಕನ್ನಡ
ನಾಡಿನಲ್ಲಿ ಪ್ರ ಚುರವಾಗಿದ್ದಿ ತೆಂದು ನಂಬುವುದು ಕಪ್ಪ. ಸರಿಯಾದ
ಇತರ ಪ್ರಮಾಣಗಳಿಗಾಗಿ ನಾವು ಕಾದಿರಬೇಕಾಗಿದೆ.
ಈಗ ಇನ್ನೊಬ್ಬ ಕನ್ನಡಕವಿ ನೇಮಿಚಂದ್ರನ ಕಡೆಗೆ (ಕ್ರಿ. ಶೆ. ಸು.
೧೧೭೦) ತಿರುಗೋಣ. ಅವನು ತನ್ನ "ಲೀಲಾವತಿ 'ಯಲ್ಲ. .
ಲಲಿತಂ ಪ್ರತೀಯಮಾನ್ನೋ
ಪಲಕ್ಷಿತಂ ವಾಚ್ಯಮಾದೊಡೊಪ್ಪದು ಕೃತಿ ಪೆ.!
ರ್ಮೊಲೆಯಂ ಮೆಖೆದೊಡೆ ಸಲೆ ಕ.
ಣ್ಮಲರಂ೦ ಮೆಯೆಸುದೊಡೆ ಯುವತಿಯೇನೆ.ಪ್ಪುವಳೇ ॥ (1 ೬೬)
ಎಂದು ತನ್ನ ಅಭಿಪ್ರಾಯವನ್ನು ವೃಕ್ತಪಡಿಸುತ್ತಾನೆ. ಪ್ರತೀಯಮಾನ
ದಿಂದ ಉಪಲಕ್ಷಿತವಾಗುವ ಕೃತಿ ಸೊಬಗುಳ್ಳದ್ದು, ವಾಚ್ಯವಾದತಿ ಅದು
30 ಇಲ್ಲ ಬಡಿಸಿರುವಂತೆ "" ಅಲಂಕಾರಧ್ವನಿ'' ಎಂಬುದನ್ನು ಷಷ್ಮೀತತ್ಪುರುಷ
ವೆಂದು ಗ್ರಹಿಸಿದರೆ ಏಕದೇಶಾನ್ಹಯವಾಗುವುದಿಲ್ಲವೆ ಎಂಬ ಅಕ್ಷೇಪಣ್ ಏಳಬಹುದು.
“ ಗಮಕತ್ಪಾತ್ ಸಮಾಸಃ'' ಎಂದು ಅದಕ್ಕೆ ಸಮಾಧಾನವನ್ನೂ ಹೇಳಬಹುದು.
3 ಕೆ. ಕೃಷ್ಣಮೂರ್ತಿಯವರು ಮೇಲೆ ಉಕ್ತವಾದ ಲೇಖನದಲ್ಲಿ ಪಂಪನ ಪದ್ಯಕ್ಕೆ
'ಧ್ವವ್ಯಾಲೋಕದ ಪೂರ್ಣ ಪ್ರಕ್ರಿಯೆಯನ್ನು ಅನ್ಪಯಿಸಿ, "" ಆ ಬೆಟ್ಟದಲ್ಲ ಕಿನ್ನರರು ಸಪ್ತ
ತಂತ್ರೀ ವೀಣಿಗಳನ್ನು ಬಾರಿಸಿಕೊಂಡು ಹಾಡುತ್ತಿರುವಾಗ ಆನೇಕ 'ಬೇರೆ ಜರೆ ರಾಗ
ಚ್ಛಾಯೆಗಳು ಏಕಕಾಲದ್ಲು ವ್ಯಂಗೃವಾಗುತ್ತಿದ್ದುವು; ವ್ಯಂಗ್ಯಾರ್ಜದ ಚಮತ್ಕಾರವೇ
“ಪ್ರಧಾನವಾಗಿ "ಧೃನಿ' ಕಾವ್ಯ (ತ್ತಮ ಕಾವ್ಯ) ವೆನ್ನಿಸಿಕೂಳ್ಳಲು ಯೋಗ್ಯವಾದ
"ಅಲಂಕಾರ ಧ್ವನಿಯಲ್ಲಿ ವಿಧವಿಧವಾದ ಅಲಂಕಾರಾಂತರಗಳು ಅಭಿವ್ಯಕ್ತಮಾ ಸುವಂತೆ ''
ಎಂದು ಅರ್ಥ ಹೇಳಿ, "" ಈ ಅರ್ಥವೇ ಪಂಪನ ಮನಸ್ಸಿನಲ್ಲಿದ್ದಿ ರಬೇಕಂಬುದು ಸುನಿಶ್ಚಿತ ''
ಎಂಬ ನಿರ್ಧಾರಕ್ಕೆ ಬಂದಿದ್ದಾರೆ ( ಪು. ೫೨, ೫೩). ಆದರೆ ಇದು ಇಷ್ಟು '" ಸುನಿಶ್ಚಿತ''
“ವೆಂದು ನಮಗೆ ತೋರುವುದಿಲ್ಲ. ಅವರ ವಿವರಣಿಯಲ್ಲ "“ಅಲಂಕಾರ ಧೃನಿ'' ಯೆಂಬುದರ
-ಮಾಚ್ಛಾರ್ಥಕ್ಕೇ ಲೋಪ ಬಂದಿರುವುದನ್ನೂ ಗಮನಿಸಬೇಕು.
ಪರಿಶಿಷ್ಟ ೪೬೩
ರುಚಿಸುವುದಿಲ್ಲ ಎಂದು ನೇಮಿಚಂದ್ರನು ಇಲ್ಲಿ ಧ್ಯನಿತಾರ್ಥಕ್ಕೇ
ಪ್ರಾಶಸ್ತ್ಯ ಕೊಟ್ಟಿದ್ದಾನೆ. * ಶೃಂಗಾರಕಾರಾಗೃಹ''ನೆಂಬ ತನ್ನ
ಬಿರುದಿಗೆ ಅನುಗುಣವಾಗಿ ಅವನು ಕೊಟ್ಟಿರುವ ಹೋಲಿಕೆ ಕಣ್ಣ ನೋಟದ
ಅತಿಶಯ ಸೂಚಕಗ.ಣವನ್ನು ನೆನೆಪಿಗೆ ತಂದ. ಅವನ ಹೇಳಿಕೆಗೆ ಪುಷ್ಟಿ
ಕೊಡುತ್ತದೆ. "" ಪ್ರತ್ಲೀಯಮಾನ'', " ವಾಚ್ಯ '' ಎಂಬ ಪಾರಿಭಾಷಿಕ
ತಬ್ದಗಳನ್ನು ಪ್ರಯೋಗಿಸಿರುವುದನ್ನೂ, "ಅರ್ಥನೇಮಿಪುರಾಣ 'ದ
ಆಶ್ಕಾಸಾಂತ್ಯ ಗದ್ಯದಲ್ಲಿ ಈ ಕವಿ ತನ್ನನ್ನು 6s ವೃಂಗ್ಯಭಂಗೀನಿಧಾನ
ದೀಪವರ್ಶಿ '' ಎಂದು ವಿಶೇಪಿಸಿಕೊಂಡಿರುವುದನ್ನೂ ನೋಡಿದರೆ ನೇಮಿ
ಚಂದ್ರನಿಗೆ ಧೃನಿಪರಿಭಾಷೆ ಸ ಪರಿಚಯ ಚೆನ್ನಾಗಿ ಇದ್ದಿತೆಂದೆ ಹೇಳ
ಜೀಕು.
ಇಪ್ಪಾದರೂ, ದಧ್ವನಿವಿಷಯವನ್ನು ಪ್ರತಿಪಾದಿಸುವ. ಒಂದು
ಗ್ರಂಥ ಕನ್ನಡದಲ್ಲಿ ಹುಟ್ಟಬೇಕಾದರೆ ಕ್ರಿ.ಶ. ೧೬ನೆಯ ಶತಮಾನ ಒದಗ
ಬೇಕಾಯಿತು. ಶಾರದಾವಿಲಾಸಷೇ ಈ ಗ್ರಂಧ; ಇದರ ಕರ್ತೃ
ರಸರತ್ನಾಕರಕಾರನಾದ ಕವಿ ಸಾಳ್ಯನಾಗಿರಬಹುದೆಂದೂ ಇದರ ಎರಡ
ನೆಯ ಪರಿಚ್ಚೇದ ಮಾತ್ರ ಈಗ ದೊರೆಯುವುಡೆಂದೂ ಆಗಲೆ ನೋಡಿ
ಲ
ದ್ಹೇವೆ.. ಶಾರದಾವಿಲಾಸಕಾರನ. ಧ್ವನಿಪ್ರಕ್ರಿಯೆಯನ್ನು ಚೆನ್ನಾಗಿ
ಬಲ್ಲನು. ಸಂಸ್ಕೃತದ «ಕಾವ್ಯಪ್ರಕಾಶ, " ಕಾವ್ಯಾನುಶಾಸನ '
ಮೊದಲಾದ ಗ್ರಂಥಗಳನ್ನು ಅವನು ಮನನ ಮಾಡಿದ್ದಾನೆ. ಈಗ ದೊರೆ
ತಿರುವ ಅವನ ಗ್ರಂಥಭಾಗವನ್ನು ನೋಡಿದರೆ, ಅವನು ಒಟ್ಟು ಕೃತಿ
ಯನ್ನು ಈ ಆಧಾರಗ್ರ೦ಂಥಗಳ ಸರಣಿಯಲ್ಲಿ ರಚಿಸಿರಬೇಕೆಂದು ತೋರು
ತ್ತದೆ. ಅಲ್ಲಿಯ ವಿಭಾಗವಿವರಣಕ್ರಮಗಳನ್ನು ತಾನೂ ಅನುರರಿಸು
ತ್ತಾನೆ; ಅವನ ಉದಾಹರಣಿಗಳಂತೂ ಬಲುಮಟ್ಟಿಗೆ ಸಂಸ್ಕೃತ ಲಕ್ಷಣ
ಗ್ರಂಥಗಳಿಂದ ಆಯ್ದುಕೊಂಡ ಸಂಸ್ಕೃತ ಪ್ರಾಕೃತ ಪದ್ಯಗಳ ಕನ್ನಡ
ರೂಪಾಂತರಗಳು, ಇಷ್ಟೇ ಅಲ್ಲದೆ, ಶಬ್ದದ ಸಂಕ್ಷೇ ೬ ತಾರ್ಥವನ್ನು
ರಿತು ಪ್ರಸ್ತಾವಿಸುತ್ತಾ, " ತದ್ವಿಸ್ತರಮು ಗ್ರಂಥವಿಸ್ತರಭಯದಿಂ
ಪೇಟ್ಲುದಿಲ್ಲ, ಬೇಕಾದವರ್ ಕಾವ್ಯಪ್ರಕಾಶಿಕೆ ಸಾಪಿತ್ಯಸುಧಾರ್ಣವಂ
ಮುಂತಾದುವಯೊಳ್ ನೋಡಿಕೊಳ್ಳುದು'' ಎಂದು (ಪು. ೧೧೦) ಎರಡು
ಗ್ರಂಥಗಳನ್ನು ಹೆಸರಿಸಿದ್ದಾ ವೆ. ಇವುಗಳಲ್ಲಿ " ಕಾವ್ಯಪ್ರಕಾಶಿಕೆ '
೪೬೪ ಭಾರತೀಯ ಕಾವ್ಯಮಾಮಾಂಸೆ
ಮಮ್ಮಟನ ಕಾವ್ಯಪ್ರಕಾತವಲ್ಲದೆ ಬೇರೆಯಲ್ಲ ; "ಸಾಹಿತ್ಯ ಸುಧಾರ್ಣವ
ಯಾವುದೋ ತಿಳಿಯದು.
“ಧ್ವನಿ ವ್ಯಂಗ್ಯ ಪ್ರಕರಣ'ದಲ್ಲಿ ಶಾರದಾವಿಲಾಸಕಾರನು ಉತ್ತಮ.
ಮಧ್ಯಮ ಅಧಮ ಕಾವ್ಯಗಳನ್ನು ವಿಂಗಡಿಸಿ ಹೇಳಿ, ಬಳಿಕ ವಾಚ್ಯ ಲಕ್ಷ್ಯ
ವೃಂಗ್ಯಾರ್ಥಗಳನ್ನೂ ಅವುಗ?ಗೆ ಸಂಬಂಧಪಟ್ಟ ತಬ್ದವೃತ್ತಿಗಳನ್ನೂ
ವಿವರಿಸುತ್ತಾನೆ. ವ್ಯಂಗ್ಗದಲ್ಲಿ ಶಬ್ದ್ಬಮೂಲ, ಅರ್ಥಮೂಲ, ಅರ್ಥಾಂತರ
ಸಂಕ್ರಮಿತವಾಚ್ಯ, ಅತ್ಯ೦ತ ತಿರಸ್ಕ ತೆವಾಚೈ ಮೊದPಾದ ಪ್ರಕಾ ರಗಳು,
ವಾಚ್ಯವ್ಯಂಗ್ಯವಿವೇಕ, ವಾಚ್ಯಲಕ್ಷ ಗಳಿಂದ ವ್ಯ ೦ಗೃದ ಪ್ರತೀತಿ, ವೃಂಗ್ಯ
ದಿಂದ ವ್ಯಂಗೃದ ಪ್ರತೀತಿ ವಸ್ತುವೃಂಗ್ಯ ಅಲಂಕಾರವ್ಲಂಗ್ಯ ಮೊದಲಾ
ದವುಗಳ ಪರಸ್ಪರ ವ್ಯ೦ಜಕಶ್ಚ--ಈ ಮೊದಲಾದವನ್ನೆಲ್ಲಾ ಸುಪ್ರದಾಯದ.
ಮೇರೆಗೆ ನಿರೂಪಿಸುತ್ತಾನೆ. "" ರಸಧ್ಯನಿ 'ಯೆ ಎಷಯ ಈ ಪರಿಚ್ಛೇದ
ದಲ್ಲಿ ಬಂದಿಲ್ಲ; ಬಹುಶಃ ಮುಂದಿನದರಲ್ಲಿ ಬರಲಿದ್ದಿತೋ ಏನೋ.
ಶಾರದಾವಿರಾಸದ ನಿರೂಪಣ ಪದ್ಧ ತಿಯನ್ನು ಪರಿಚಯಮಾಡಿ
ಕೊಡಲು ಒಂದು ಉದಾಹರಣಿಯನ್ನು ಈ ಕೆಳಗೆ ಕೊಟ್ಟಿದೆ:
“ ವಿಧಿನಿಷೇಧಂಗಳಲ್ಲ ವಿಧ್ಯ೦ತರಮೆ:೦ತೆ೦ದೊಡೆ.
ಎಲೆ ಎಲೆ ಪಾಂಥ ಪೋದಪೆಯದೆಲ್ಲಗೆ ಮದ್ಭಥುವಿರ್ಪ ತಾಣಕೀ
ಪ್ರೊಲದೊಳೆ ಪೋಗದನ್ಯಪಥದೊಳ್ ಗಮಿಖಿಲ್ಲಿಯೆ ಪೋಪೆಯಪ್ಪೊಡೀ!
ನೆಲೆಯ ತಳಾಜನಾತ್ಮ ಭವೆ ಪೂರ್ಣಸುಧಕರಬಿ೦ಬವಕ್ಕೆ) ನಿ.
ರ್ಮಲತರಗಾತೈ ಚಾರುಸರಸೀಜದಳಾಯ ತನೇತ್ರೆಯಿರ್ದಪಳ್ ॥
ವಿ॥ ಇಲ್ಲಿ ಈ ಮಾರ್ಗದಲ್ಲಿ ಪೋಗಬೇಡ ಮತ್ತೊಂದು ಮಾರ್ಗದಲ್ಲಿ ಪೋಗು
ಎಂಡು ವಿಧಿನಿಷೇಧಂಗಳ೦ ಪೇಟ್ಟುದಯ೨ ಎಲೆ ಸೊಬಗನಪ್ಪಾತನೆ ಸ್ತ್ರೋಯ
ರೂಪಂ ನೆನೆದು ಕಾಣ್ಜಲ್ಲ ತತ್ತ ರನನದಾತನೆ ಈ ಗ್ರಾಮದ ತಳಾಜಿನ ಮಗಳು೦
ನೀನಸಶ್ಯಂ ಕಾಣ್ಣುದರ್ಕೆ ಯೋಗ್ಯಳೆಂಬ ವಿಧ್ಯ೦ಂತರ೦ ತೋಯಿಸಲ್ಪಟ್ಟಿತು 1132
(ಪು. ೧೨೦).
ಸಾಳ್ವನಿಂದ ಈಚೆಗೆ, ರಾಯಣನ ಮಗನಾದ ತಿಮ್ಮ (ಅಥವಾ
ತಿಮ್ಮಯ್ಯ) ಎಂಬಾತನು " ಅಲಂಕಾರರಸಸಂಗ್ರಹ "ದಲ್ಲ ರಕವಿಚಾರ
3 ಇದನ್ನು ಹೇಮಚಂದ್ರನ " ಕಾವ್ಯಾನುಶಾಸನ 'ದಲ್ಲ " ಕೃಚಿತ್ ವಿಧಿನಿಷೇಧ
ಯೋರ್ವಿಧ್ಯಂತರಂ ಯಥಾ . , .'' ಎಂದು ಮೊದಲಾಗುನ ಭಾಗದೂಡನೆ (ಪು. ೩೮)
ಹೋಲಸಿದರೆ ಶಾರದಾವಿಲಾಸಕಾರನು ಸಂಸ್ಕೃತ ಗ್ರಂಥಗಳನ್ನು ಉಪಯೋಗಿಸಿ
ಕೂಂಡಿರುವ ರೀತಿ ವಿದಿತವಾಗುತ್ತದೆ.
ಪರಿಶಿಷ್ಟ ೪೬೫
ವನ್ನು ನಿರೂಪಿಸಿದನು. ಇವನು ಕ್ರಿ.ಶ.ಸು. ೧೬೦೦ರಲ್ಲಿ ಇದ್ದಿರ
ಬಹುದೆಂದು ಕವಿಚರಿತಕಾರರು ಊಪಿಸುತ್ತಾರೆ.3 "ವಿರಾಜತೇ ರಾಯಣ
ತಿಮ್ಮಣಾರ್ಯೋ ಭಾಪಾದ್ಯಯಾನಿರ್ಮಿತೆಕಾವ್ಯಶೇಷಃ '' ಎಂದು ತನ್ನೆ
ಗ್ರ೦ಥದಲ್ಲಿ ಇವನು ಹೇಳಿಕೊಂಡಿರುವುದರಿ೦ದ, ಇವನು ಕನ್ನಡ ಸಂಸ್ಕ ತೆ
ಗಳೆರಡರಲ್ಲೂ ಕಾವರಚೆನೆ ಮಾಡಿದ್ದಿ ರಬಹುದು.
ಅಲಂಕಾರರಸಸಂಗ್ರಹದಲ್ಲಿ ಸ್ಫೋಪಜ್ಞ ವಾದ ಭಾಗ ಅತ್ಯಲ್ಪ ;
' ಮುಖ್ಯವಾಗಿ ಇದೊಂದು ಪಂಕಲನ. ಸೂತ್ರ, ವೃತ್ತಿ ಮೊದಲಾದವನ್ನು
ಕೂಡ ತಿಮ್ಮನು ಹಿಂದಿನ ಕನ್ನಡ ಸಂಸ್ಕೃತ ಲಕ್ಷಣಗ್ರಂಥಗಳಿಂದ ಹಾಗೆ
ಹಾಗೆಯೇ ತೆಗೆದುಕೊಂಡಿದ್ದಾನೆ.' ಅಲ್ಲಿ ದೊರೆಯುವ ಕನ್ನಡ
ಸಂಸ್ಕೃತ ಉದಾಹರಣ ಪದ್ಯಗಳನ್ನು ಭೇದವಿಲ್ಲದೆ ತನ್ನ ಗ್ರಂಥದಲ್ಲಿ ಎತ್ತಿ
ಕೊಡುತ್ತಾನೆ. ಕವಿಕಾಮನ ಶೃ೦ಗಾರರತ್ನಾಕರಕ್ಕೂ ಸಾಳ್ವನ ರಸರತ್ನಾ
ಕರಕ್ಕೂ ಇವನು ಅತ್ಯ೦ತವಾಗಿ ಮಣಿ ; ನಾಗವರ್ಮನ ಪರಿಚಯವೂ
ಇವನಿಗೆ ಇಲ್ಲದಿಲ್ಲ... ಸಂಸ್ಕೃತದಲ್ಲಿ ಅಮ್ಮ ತಾನಂದೀಯ ಸಿಂಗಭೂಪಾ
'ಲೀಯಗಳಿಂದ ವಿಶೇಷವಾಗಿ ಉದ್ಧರಿಸುತ್ತಾನೆ. ಎಕಾವಳಿ, ರಸಕಳಿಕೆ
ಇವುಗಳ ಹೆಸರೂ ಬರುತ್ತದೆ.
ತಿಮ್ಮ ನ ಗ್ರಂಥದಲ್ಲಿ ತಾನೇ ಆರಿಸಿಕೊಟ್ಟ ಕೆಲವು ಉದಾಹರಣಿ
ಗಳುಂಟು. ಎತ್ತೆ ನೋಡಿದರೂ ವೃತ್ತಕಂದಗಳೇ ತುಂಬಿಕೊಂಡಿರು
ವಾಗ ಇವುಗಳ ನಡುವೆ ಎರಡು ಪಟ್ಟದಿಗಳೂ ಒಂದು ಶ್ರಿಪದಿಯೂ ಕಾಣಿ
ಸಿಕೊಳ್ಳುವುದು ಗಮನಾರ್ಹವಾಗಿದೆ. ಈ ಅಪೂರ್ವದ ಪದ್ಯಗಳಲ್ಲಿ
33 ಕವಿಚರಿತೆ, 1], ಪು. ೩೨೦. ಗ್ರಂಧದ ಹೆಕರನ್ನು ಕವಿಚರಿತೆಯಲ್ಲಿ
* ವಪರಸಾಲಂಕಾರ' ಎಂದು ಕೊಟ್ಟಿದೆ. ತಿಮ್ಮನ ಗ್ರಂಥ ಅಚ್ಚಾಗಿಲ್ಲ. ನಾವು ನೋಡಿದ
ಮಾತೃಕೆಯೊಳಗೆ ಪ್ರಕರಣಾಂತ್ಯ ಗದ್ಯದಲ್ಲಿ ಐವರ ಹೆಸರು " ಅಲಂಕಾರ ರಸಸಂಗ್ರಹೆ'
ಎಂಬ ರೂಪದಲ್ಲಿಯೇ ಇದೆ.
5 “ ಅನಾರ್ಯರೆಂದೆ ತಿಳಿದಮೃತಾನಂದಿಯ . . . '' ಎಂಬ ರಸರತ್ನ್ಮಾಕರದ ಪದ್ಯ
ವನ್ನು ಕೂಡ ತಿಮ್ಮನು ತನ್ನ ಗ್ರಂಥಕ್ಕೆ ಸೇರಿಸಿಕೊಳ್ಳದೆ ಬಿಟ್ಟಿಲ್ಲ!
K.M. 30
೪೬೬ ಭಾರತೀಯ ಕಾವ್ಯಮಾಮಾಂಸೆ
ಒಂದನ್ನು ಇಲ್ಲಿ ಉದಾಹರಿಸಬಹುದು. » « ಚಕ್ಷುಃಪ್ರೀತಿ'' ಗೆ ಲಕ್ಷ್ಯ
ವಾಗಿ ಬಂದಿರುವ ವಾರ್ಥಕಪಟ್ಟದಿ ಇದು :
ಪಟ್ಟದಿ | ಈ ರಮಣಿ ರಿಸಿಗುವರಿಗು೦ತಾದಳಿನುತಿರೆ ವಿ
ಚಾರಿಸುತೆ ಬಾಲಮೂಲವ[ಕು] ಲಾವಾಲಕ್ಕೆ
ವಾರಿಸೇಚನವೆಸಪ ಪೆಣ್‌ಮೈವೆಳಗುವೊಳೆಯ ತಿಳಿವೊನಲ
ಪೊಕ್ಕು ಪರಿದು |
ಆ ರಾಯನೀಕ್ಷಣರುಪ೦ ಚರಣಕಮಠಮಂ
ಸೇರಿ ಪೊಕ್ಕುಳ್ಳುಳಿಯೊಳಾಳ್ಕು ತೋಳ್ತೆರೆಗಳೊಳ್
ಚಾರಿವರಿದಾನನಾಬ್ದ ಕೆ ನೆಗೆದು ಕಚನಿಚಯ ಜಲ :€ಲಿಯೊಳ್
ಪೊರಳ್ನುದು ॥
ಶಕುಂತಲೆ ಗಿಡಬಳ್ಳಿಗಳಿಗೆ ನೀರೆರೆಯುತ್ತಿರುವಾಗ ದುಪ್ಯಂತನು ಮರೆಯಿಂದ
ಅವಳನ್ನು ನೋಡಿದ ಸನ್ನಿವೇಶಕ್ಕೆ ಈ ಪದ್ಯ ಅನ್ವಯಿಸುತ್ತದೆ. ಕಾಳಿ
ದಾಸನ ಶಾಕುಂತಲನಾಟಕವನ್ನು ಅವಲಂಬಿಸಿ ಯಾರೋ ಬರೆದಿದ್ದ
ಪಟ್ಟದೀಕಾವ್ಯದಿಂದ ತಿಮ್ಮನು ಈ ವರ್ಣನೆಯ ಪದ್ಯವನ್ನು ಆರಿಸಿಕೊಂಡಿರ
ಬೇಕು. '`
ಮೈಸೂರು ರಾಜ್ಯವನ್ನು ಕ್ರಿ.ಶ. ೧೬೭೨ರಿಂದ ೧೭೦೪ರ ವರೆಗೆ
ಆಳಿ ಪ್ರಖ್ಯಾತಿ ಪಡೆದ ಚಿಕ್ಕದೇವರಾಜನ ಆಶ್ರಯದಲ್ಲಿ ಕನ್ನಡ ಸಾಪಿತ್ಯಕ್ಕೆ
ಹೊಸ ಲವಲವಿಕೆ ಉಂಟಾಯಿತು ; ಹಳಗನ್ನಡವು ಗ್ರಂಥಗಳಲ್ಲ ಕಲವು
ಮಟ್ಟಿಗೆ ಮತ್ತೆ ರೂಢಿಗೆ ಬಂದಿತು. ಈ ರಾಜನು ತಾನೇ ಕವಿಯಾಗಿ
ದ್ವ ದು ಮಾತ್ರವಲ್ಲದೆ ಅನೇಕ ಮಂದಿ ವಿದ್ಯಾಂಸರಿಗೆ ಪೋಷಕನೂ ಗ್ರಂಥ
ರಚನೆಗೆ ಪ್ರೋತ್ಸಾಹಕನೂ ಆಗಿದ್ದನು. ಕನ್ನಡದಲ್ಲಿ ದೊರೆತಿರುವ ಮೊದ
ಲನೆಯ ನಾಟಕವಾದ " ಮಿತ್ರವಿಂದಾಗೋವಿಂದ ' ವನ್ನು ಸಿಂಗರಾರ್ಯನು
ಬರೆದದ್ದು ಈತನ ಆಸ್ಥಾನದಲ್ಲದ್ದುಕೊಂಡು. "ಹದಿಬದೆಯ ಧರ್ಮ'
ವನ್ನು ಬರೆದಾಕೆ ಈತನ ರಾಣಿಯ ಸೇವೆಯಲ್ಲಿದ್ದ ಸಂಚಿಯ ಹೊನ್ನಮ್ಮ ;
3 ರಣಾವೇಗ ” ಕೈ ಉದಾಹರಣೆಯಾಗಿ ತಿಮ್ಮನು ಕೊಟ್ಟಿರುವ “ಬೀಡಿ.
ಮೊಳಗಿ: ಬಹಳ ಕಳವಳಂ ಪಸರಿಸಲು . . .'' ಎಂದು ಮೊದಲಾಗುವ ಇನ್ನೊಂದು ಪಟ್ಟ
ದಿಯೂ ಪಾರ್ಥಕವೆಂಡೇ ತೋರುತ್ತದೆ ; ಆದರೆ ಅದರ ಮೂರನೆಯ ಮತ್ತು ಆರನೆಯ
ಪಾದಗಳಲ್ಲಿ ಗಣಗಳ ಸುಖ್ಯ ನ್ಯೂನವಾಗಿದೆ, ಇವನು ಉದಾಹರಿಸಿರುವ ತ್ರಿಪದಿ ಜನ್ನನ.
ಅನಂತನಾಥಪುರಾಣದಿಂದ ಬಂದದ್ದು (111. ೨೬).
ಪರಿಶಿಷ್ಟ ೪೬೭
ಈ ದೊರೆಯ ಪ್ರೋತ್ಸಾಹದಿಂದ ತಾನು ಅದನ್ನು ರಚಿಸಿದ್ದಾಗಿ ಆಕೆಯೇ
ಹೇಳಿದ್ದಾಳೆ. ಚಿಕ್ಕದೇವರಾಜನ ಮಿತ್ರನೂ ಮಂತ್ರಿಯೂ ಆಗಿದ್ದ ತಿರು
ಮಲಾರ್ಯನು (ಕ್ರಿ.ಶ. ೧೬೪೫-೧೭೦೬) « ಅಪ್ರತಿಮವೀರಚರಿತ ' ವೆಂಬ
ಅಲಂಕಾರಗ್ರಂಥವನ್ನು ಬರೆದಿದ್ದಾನೆ. ತಿರುಮಲಾರ್ಯನ ಇತರ ಕೃತಿ
ಗಳಲ್ಲ " ಚಿಕದೇವರಾಜ ವಿಜಯ' ವೆಂಬ ಚ೦ಪೂಕಾವ್ಯವೂ " ಚಿಕದೇವ
ರಾಯ ವಂಶಾವಳಿ ' ಯೆಂಬ ಗದ್ಯಗ್ರಂಥವೂ ಮುಖ್ಯವಾದವು. ಚಿಕ್ಕ
ದೇವರಾಜನ ಕೃತಿಯೆಂದು ಮೇಲುನೋಟಕ್ಕೆ ತೋರುವ "ಗೀತ
ಗೋಪಾಲ' ವೆಂಬ ಉತ್ಕೃಪ್ಪವಾದ ಕನ್ನಡ ಗೀತಾವಳಿ ಕೂಡ ನಿಜವಾಗಿ
ತಿರುಮಲಾರ್ಯನ ರಚನೆಯೆ೦ದೇ ತೋರುತ್ತದೆ.
ಅಪ್ರತಿಮವೀರಚರಿತೆಯಲ್ಲಿ ತಿರುಮಲಾರ್ಯನು ಮಮ್ಮಟನನ್ನು ಅನು
ಸರಿಸಿ ಕಾವ್ಯಲಕ್ಷಣವನ್ನೂ, ವಾಮನನ ಮತದ ಮೇರೆಗೆ ಶಬ್ದ್ಬಗುಣ ಅರ್ಥ
ಗುಣಗಳನ್ನೂ, ವಿದ್ಯಾನಾಥನ ಪ್ರತಾಪರುದ್ರೀಯದ ಪ್ರಕಾರ ರೀತಿ
ತಯ್ಯಾಪಾಕಾದಿಗಳನ್ನೂ ಕೆಲವು ಶಬ್ಧಾಲಂಕಾರಗಳನ್ನೂ ಸಂಗ್ರಹವಾಗಿ
ಹೇಳುತ್ತಾನೆ. ಇವನ ಗ್ರಂಥದ ಬಹುಭಾಗ ಅರ್ಥಾಲಂಕಾರಗಳಿಗೆ ಮಾಸ
ಲಾಗಿದೆ. ಇದರಲ್ಲಿ ಕುವಲಯಾನಂದವನ್ನು ಅವಲಂಬಿಸಿ ಅಲ್ಲಿ ಉಕ್ತವಾಗಿ
ರುವ ಅರ್ಥಾಲಂಕಾರ ರಸಾಲಂಕಾರಾದಿಗಳನ್ನೆಲ್ಲ ಅದೇ ಸರಣಿಯಲ್ಲಿ
ನಿರೂಪಿಸಿದ್ದಾನೆ. ಆದ್ಧರಿಂದ" ರಸವತ್, ಪ್ರೇಯಸ್ ಮೊದಲಾದ
ಅಲಂಕಾರಗಳಿಗೆ ಇವನು ಕೊಡುವ ಲಕ್ಷಣಗಳು ಧೈನಿತತ್ತ್ಯಕ್ಕೆ ಅನುಗುಣ
ವಾಗಿವೆ. ಇಪ್ಪಾದರೂ ಧ್ಯನಿವಿವರಣ್‌ಗಾಗಲಿ ರಸವಿಚಾರಕ್ಕಾಗಲಿ ತಿರು
ುಲಾರ್ಯನು ಕೈಹಾಕಿಲ್ಲ; ದೋಷನಿರೂಪಣಿಗೂ ತನ್ನ ಗ್ರಂಥದಲ್ಲಿ ಜಾಗ
ಕೊಟ್ಟಿಲ್ಲ.
ಅಪ್ರತಿಮವೀರಚರಿತೆಯಲ್ಲಿ ತಾನು “ ಸಕ್ಕದದಿ೦ ಲಕ್ಕಣಮಂ
ಲಕ್ಕಮನೊಳ್ಗನ್ನಡಂದಳಿಂ '' ವಿವರಿಸಿರುವುದಾಗಿ ತಿರುಮಲಾರ್ಯನೇ ಹೇಳಿ
ದ್ದಾನೆ (1. ೧೪). ಸಂಸ್ಕೃತದ ಆಧಾರಗ್ರಂಥಗಳಿಂದ ಸೂತ್ರಗಳನ್ನು
ಉದ್ಭರಿಸಿಕೊಟ್ಟು ಅವಕ್ಕೆ ಕನ್ನಡದಲ್ಲ ವೃತ್ತಿಯನ್ನು ಬರೆದು, ತನ್ನ ಸ್ವಾಮಿ
ಯಾದ ಅಪ್ರತಿಮವೀರ `' ಚಿಕ್ಕದೇವರಾಜನ ಮಹಿಮೆ ಪ್ರಭಾವ ಮೊದ
ಲಾದವನ್ನು ಕೀರ್ತಿಸುವ ಸ್ವಂತ ಪದ್ಯಗಳನ್ನು ಲಕ್ಷ್ಯವಾಗಿ ಕೊಡುವುದು
ತಿರುಮಲಾರ್ಯನ ಪದ್ಧತಿ. ಅನೇಕ ಪದ್ಯಗಳಲ್ಲಿ ಮೈಸೂರು ಚರಿತ್ರೆಗೆ
ಸೇರಿದ ಸಂಗತಿಗಳು ಬರುತ್ತವೆ ; ಚಿಕ್ಕದ್ದೇವರಾಜನನ್ನು ಎದುರಿಸಿ ಸೋತ
ಅಥವಾ ಮಡಿದ ಶತ್ರುರಾಜರ ವೃತ್ತಾಂತ ಅಲ್ಲ ಉಲ್ಲಖತವಾಗಿದೆ. ಈ
80-8
೪೬೮ ಭಾರತೀಯ ಕಾವ್ಯಮಾಮಾಂಸೆ
ಗ್ರಂಥದ ರೀತಿಗೆ ನಿದರ್ಶನವಾಗಿ ಪರ್ಯಾಯೋಕ್ತಾಲಂಕಾರದ ಒಂದು
ಪ್ರಕಾರದ ನಿರೂಪಣಿಯನ್ನು ಇಲ್ಲಿ ಎತ್ತಿ ಕೊಡಬಹುದು :
ಸೂ ॥ “ ಪರ್ಯಾಯೋಕ್ತ೦ ತು ಗಮ್ಯಸ್ಯ ವಚೋ ಭಂಗೃಂತರಾಶ್ರಯಂ ॥
ಪೇಟತಕ್ಕರ್ಥಮಂ ಪ್ರಕಾಶಮಾಗಿ ಪೇಟದೆ ಪೆಜತೊಂದು ತೆಜಣದೊಳಂದ
ಮಾಗಿ ಪೇಣೆಯದು ಪರ್ಯಾಯೋಕ್ತ ೦. ಎಂತೆವೆ--
ಒರ್ವಗೆಯೊ೦ದಾನೆಯ ಮೇ.
ಲರ್ವರುವಿ:ರೆ ಕೂಪುಖಾನ ಚೆನಬಸವರದೆಂ- |
ತೊರ್ವನ ಹೆಂಡಿರ ಮೆಯ್ನಿರ್ಲಿ
ಯೊರ್ವನ ಸತಿಯೋಪ್ಪ ದಿ೦ಪು ಬಖಯಿದಾಯ್ದಕಟಾ ॥ (ಪು. ೬೩)
ಇದಉಖೊಳ್ ಒಂದಾವೆಯೇಖುಿ ಬ೦ದಿರ್ಕೇರಿಯ ಕೂಪಖಾನನ ಹರಣವಟಿ
ದುದಂ ಚೆನ್ನ ಬಸವನ ಪಲ್ ಮುಖಿದುದಂ ವಾಚ್ಯಮಾಗಿ ಪೇಟವೆ ಒರ್ವನ ಪೆಂಡಿಶ
ಮೆಯ್ದಿರಿಯು೦ ಒರ್ವನ ಸತಿಯೋಪ್ಮದಿಂಪುಂ ಒಉದಾಯ್ತೆಂದು ಪ್ರಕಾರಾಂತರ
ದಿ೦ ಪೇಟ್ಡುದಯಿಂದೆ ಇದು ಪರ್ಯಾಯೋಕ್ತ೦.
ಅಪ್ಪಯ್ಯದೀಕ್ಷಿತನು ಅರ್ಥಾಲಂಕಾರಗಳನ್ನು ವ್ಯವಸ್ಥೆಗೊಳಿಸಿ
" ಕುವಲಯಾನಂದ : ವನ್ನು ರಚಿಸಿದ ಬಳಿಕ ಆ ಗ್ರಂಥದ ಪ್ರಭಾವ ಕನ್ನಡ
ಅಲಂಕಾರಿಕರ ಮೇಲೂ ಚೆನ್ನಾಗಿಯೇ ಬಿದ್ದಿತು. ತಿರುಮಲಾರ್ಯನ ಅಪ್ಪ
ತಿಮವೀರಚರಿತದಲ್ಲಿ ಅಲಂಕಾರನಿರೂಪಣಿ ಅಪ್ಪಯ್ಯದೀಕ್ಷಿತನ ನೆರಳಿ
ನಲ್ಲೇ ಸಾಗಿತೆಂದು ಮೇಲೆ ಗಮನಿಸಿದ್ದೇವೆ. " ತೊರಗಲ್ ಸೀಮೆಗ
ರಸಾದ ಲಿಂಗಭೂವರನ ಸತ್ತುತ್ತ ಜಾಯೇಂದ್ರ ” ನು "ಕುವಲಯಾ
ನಂದಾಲಂಕಾರಶಾಸ್ತ್ರ' ಎಂಬ ಹೆಸರಿನಿಂದ ಅಪ್ಪಯ್ಯದೀಕ್ಷಿತನ ಕೃತಿಯನ್ನು
ಸಂಗ್ರಹಿಸಿ ಕನ್ನಡಕ್ಕೆ ಇಳಿಸಿದನು. ಈತನಿಗೆ ಜಾಯಗೊಂಡ ದೇಸಾಯಿ
ಎ೧ಬ ಹೆಸರೂ ಉಂಟು. ಈತನು ಚತುರನೂ ಪಂಡಿತನೂ ಆಗಿದ್ದ
ನೆಂದೂ, ಕ್ರಿ.ಶ. ೧೭೩೨ರಲ್ಲಿ ದೇಶಗತಿಯ ವಪಿವಾಟ ಮಾಡತೊಡಗಿ,
೧೭೬೦ರಲ್ಲಿ ದೈವಾಧೀನನಾದನೆಂದೂ ತಿಳಿಯಬರುತ್ತದೆ. "ಕುವಲಯಾ
ನಂದಾಲಂಕಾರ' ಶಾಸ್ತ್ರದ ರಚನೆಯಕಾಲ ೧೭೩೪; ಅದೇ ವರ್ಷದಲ್ಲೇ
ಜಾಯೇಂದ್ರನು ಸವದತ್ತಿಯ ಕಿಲ್ಲೆಯನ್ನೂ ಕೆಟ್ಟಿಸಿದನಂತೆ.3
ಎಪಿ ೧ £3 ಚೆ
36 ಜಾಯೇಂದ್ರನ ಕಾಲ ಮೊದಲಾದವುಗಳ ವಿಷಯವಾಗಿ-ಕವಿಚರಿತೆ, 111,
ಪು. ೩೮.೯, ೪೭೩, ಅವತರಣಿಕೆ, 1x೫೪ ; "ಕೊಕಟನೂರ ದೇಶಗತಿಯ ಬಾಡ'
(ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಸಾಸಿತ್ಯ ಸಮಿತಿ ಪತ್ರಿಕೆ, 1],
೩ ಮತ್ತು ೪); ಮಂ. ಗೋವಿಂದ ಪೈ: "ಕನ್ನಡ ಕವಿ ಲಕ್ಷ್ಮೀಶನ ಕಾಲದ ಮರುವಿಚಾರ '
(" ಪ್ರೀ ಪಂಜೆಯವರ ನೆನಪಿಗಾಗಿ ', ಪು, ೧೮೨-೩) ಇವನ್ನು ನೋಡಬಹುದು.
ಕವಿಡರಿತೆಯಲ್ಲ ಜಾಯೇಂದ್ರನ ಗ್ರಂಥನ ಹೆಸರನ್ನು "ಕರ್ಣಾಟಕ ಕುವಲಯಾ
ನಂದ '' ಎಂದು ಕೊಟ್ಟಿದ್ದಾರೆ. ಈ ಗ್ರಂಥವು ಮುದ್ರಿತಪಾಗಿಲ್ಲ,
ಪರಿಶಿಷ್ಟ ೪೬೯
ಜಾಯೇಂದ್ರನು ಈ ಗ್ರಂಥದಲ್ಲಿ ಧ್ವನಿ, ಗುಣೀಭೂತ ವ್ಯಂಗ್ಯ,
ತಬ್ದಚಿತ್ರ ಇವುಗಳನ್ನು ಅಪ್ಪಯ್ಯದೀಕ್ಷಿತನ " ಚಿತ್ರ ಮಾಮಾಂಸೆ'ಯ
ಪ್ರಾರಂಭ ಭಾಗದ ಸರಣಿಯಲ್ಲಿ ಆತಿಸಂಕ್ಷಿಪ್ತವಾಗಿ ತಿಳಿಸಿ, . ಬಳಿಕ
ಅರ್ಥಚತ್ರರೂಪವಾದ ಆಅರ್ಥಾಲಂಕಾರಗಳನ್ನು ನಿರೂಪಿಸಿದ್ದಾನೆ;
ಕುವಲಯಾನಂದದಲ್ಲಿ ಉಕ್ತವಾಗಿರುವ ರಸವತ್ ಮೊದಲಾದ ಅಲಂಕಾರ
ಗಳನ್ನು ಹೇಳಿಲ್ಲ. ಈತನು ಲಕ್ಷಣವನ್ನು ವಿವಿಧ ಪಟ್ಟದಿಗಳಲ್ಲೂ ಇತರ
ಪದ್ಯಜಾತಿಗಳಲ್ಲೂ, ವಿವರಣ, ಲಕ್ಷ $ಲಕ್ಷಣಸಮನ್ಯೆಯ ಮೊದಲಾದ
ವನ್ನು ಗದ್ಯದಲ್ಲೂ ಬರೆದಿದ್ದಾನೆ. ಉದಾಹರಣಿಗಳನ್ನು ಸಂಸ್ಕೃತದಿಂದ
ಭಾಷಾಂತರಿಸಿ ಕೊಡುವುದರ ಜೊತೆಗೆ ಸೌಂದರಪುರಾಣ, ಜೈಮಿನಿಭಾರತ,
ಭಾವಚಿಂತಾರತ್ನ, ಚಿತ್ರಭಾರತ, ರಾಘವಾಂಕಕಾವ್ಯ ಮೊದಲಾದ ಪಟ್ಟದೀ
ಕಾವ್ಯಗಳಿಂಜಲೂ ತೆಗೆದುಕೊಟ್ಟಿ ದ್ದಾನೆ ಡಿ ತಿಮ್ಮನ ಅಲಂಕಾರರಸಸಂಗ್ರ ಹೆ
ದಲ್ಲಿ ಕಾಣಿಸಿಕೊಂಡ ಅಂಕುರವು ಹೀಗೆ ಜಾಯೇಂದ್ರನ ಗ್ರಂಥದಲ್ಲಿ ಪೂರ್ಣ
ವಾಗಿ ಫಲಿಸಿ ಪಟ್ಟದೀಕಾವ್ಯಗಳ ಪದ್ಯಗಳು ಲಕ್ಷ ಸಿಂಹಾಸನದಲ್ಲಿ ಪ್ರತಿಷ್ಠಾ
ಪಿತವಾದುವು.
ಜಾಯೇಂದ್ರ ವಿರಚಿತವಾದ "" ರಸಮಂಜರಿ'' ಎಂಬ ಇನ್ನೊಂದು
ಗ್ರಂಥವಿದೆ. (ಇದಕ್ಕೆ * ತೃಂಗಾರತಿಲಕ ' ವೆಂಬ ಹೆಸರೂ ಉಂಟೆಂದು
ಕವಿಚರಿತಕಾರರು ಹೇಳುತ್ತಾರೆ.) ಇದರಲ್ಲಿ ಉದಾಹರಣಿಗಳನ್ನು
ಭಾಮಿನಿ, ಪರಿವರ್ಧಿನಿ ಮೊದಲಾದ ಪಟ್ಟದಿಗಳಲ್ಲೂ, ಟೀಕೆ ವಿವರಣಿ
ಗಳನ್ನು ಗದ್ಯದಲ್ಲೂ ಗ್ರಂಥಕಾರನು ಬರೆದಿದ್ದಾನೆ. ರಸಮಂಜರಿಯ
ಬಹುಭಾಗವು ನಾಯಕ ನಾಯಿಕೆಯರ. ಮುಖ್ಯವಾಗಿ ನಾಯಿಕೆಯರ--
ಅನೇಕ ಪ್ರಭೇದ ವಿಭೇದಗಳನ್ನು ಲೆಕ್ಕದ ಮೇರೆಗೆ ನಿರೂಪಿಸಿ ಉದಾಹರಿಸು
ವುದಕ್ಕೇ ಮುಡಿಪಾಗಿದೆ. ಸಬಿ, ದೂತಿ ಮೊದಲಾದವರ ಲಕ್ಷಣ, ಸಾತ್ತ್ವೀಕ
ಭಾವಗಳು, ಶೃಂಗಾರದ ದಶಾವಸ್ಥೆ ಗಳು. _ಈ ವಿಷಯವೂ ಇಲ್ಲ ಬರು
ತ್ತದೆ. ಕೊನೆಯಲ್ಲ ಮಿಕ್ಕ ರಸಗಳ ಮಾತು ಒಂದೊಂದು ಪದ್ಯಕ್ಕೆ
ಮುಗಿಯುತ್ತದೆ. "" ಆ ಸಂಸ್ಕೃತ ರಸಮಂಜರಿಯೊಳು ಪೇಳ್ವ ಸ್ತ್ರೀ
ಪುರುಷ ಲಕ್ಷಣ ಷೊದಲಾದ ರೀತಿ''ಯನ್ನು ಸಂಕ್ಷೇಪವಾಗಿ ಕನ್ನಡದಲ್ಲಿ
ಉದಾಹರಣಿ ಕೊಟ್ಟು ಹೇಳುವುದಾಗಿ ಜಾಯೇಂದ್ರನು ತನ್ನ ಕೃತಿಯ
೪೭೦ ಭಾರತೀಯ ಕಾವ್ಯಮಿಾಮಾಂಸೆ
ಆರಂ೦ಭಧಾಗದಲ್ಲಿ ತಿಳಿಸುತ್ತಾನೆ. ಇಲ್ಲಿ ಉಕ್ತವಾಗಿರುವ ಸಂಸ್ಕೃತ ರಸ
ಮಂಜರಿ ಭಾನುದತ್ತನ ಗ್ರಂಥವಲ್ಲದೆ ಜೇರೆಯಲ್ಲ.*
ಈಗ ಕ್ರಿ. ಶ. ೧೯ನೆಯ ಶತಮಾನಕ್ಕೆ ಬರುತ್ತೇವೆ. ಮೈಸೂರಿನ
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಳಿಯ ಲಿಂಗರಾಜನೆಂಬಾ
ತನು (೧೮೨೩-೧೮೭೪) ಚಂಪು, ಸಾಂಗತ್ಯ, ಪಟ್ಟದಿ, ಯಕ್ಷಗಾನ,
ಹಾಡು ಈ ಮೊದಲಾದ ಹಲವು ರೂಪಗಳಲ್ಲಿ ಸಾಪಿತ್ಯರಚನೆ ಮಾಡಿದನು.
ಈತನ ಕೃ ತಿಗಳ ಸಂಖ್ಯೆ ಐವತ್ತರ ಹತ್ತಿರಕ್ಕೆ ಬರುತ್ತದೆ ; ಇವುಗಳಲ್ಲಿ "ನರ
ಪತಿಚರಿತ ' ವೆಂಬ ಅಲಂಕಾರಗ್ರಂಥವೂ ಒಂದು. ಲಿಂಗರಾಜನು ಬಾಲ್ಯ
ದಿಂದಲೂ ಕೃ ಷ್ಲರಾಜ ಒಡೆಯರ ಪೋಪಣಿಯಲ್ಲದ್ದು ಆ ದೊರೆಯ
ಇಬ್ಬರು ಪುತ್ರಿಯರನ್ನು ಮದುವೆಯಾಗಿದ್ದನು. ಇದರಿಂದ "" ಅಳಿಯ ''
ಎಂಬ ಉಪಪದ ಈತನ ಹೆಸರಿಗೆ ಸೇರಿತು. ತಾನು ವರಿಸಿದ ಸತಿಯರು
ಮೂರು ಮಂದಿ, ಅವರಲ್ಲ ಕವಿತಾಸತಿ ಒಬ್ಬಳು, ಕೃಷ್ಣರಾಜತನುಸಂಭವೆ
ಯರು ಮುಕ್ಕಿಬ್ಬರು; ಇವರೆಲ್ಲರೊಡಗೂಡಿ ಸುಖದಿಂದ ಇರುವಾಗ,
« ವಿತತಾಭಧರಣವಿಧೂಪಿತ.
ಸುತನುಗಳಾಮಿರೆ ಸುಸೂಕ್ಷ್ಮ ವಿಷಮಾಲ್ಪಾಲಂ. |
ಕೃತಿಯಿ೦ದೊಪ್ಪುವ ಕವಿತಾ
ಸತಿಯೊಳಗೀ ನಿಮ್ಮ ಮನಮದೇನೆರಗುಗುಮೋ | '? (1. ೧೮)
37 ಜಾಯೇಂದ್ರನ ರಸಮಂಜರಿ ಮುದ್ರಿತವಾಗಿಲ್ಲ. ಡಿ. ಎಲ್. ನರಸಿಂಹಾ
ಚಾರ್ಯರ ಬಳಿ ದೊರೆತ ಇದರ ಹಳೆಯ ಕಾಗದದ ಪ್ರತಿಯಲ್ಲಿ ಮೊದಲನೆಯ ಹಳೆ ನಪ್ಪ
ಪಾಗಿರುವುದರಿಂದ ಕೃತಿಯ ಮತ್ತು ಕವಿಯ ವಿಷಯವಾಗಿ ಹೆಚ್ಚಿನ ಅಂಶಗಳನ್ನು
ತಿಳಿಯಲು ಅವಕಾಶವಿಲ್ಲವಾಯಿತು. ಗ್ರಂಥದ ಕೊನೆಯಲ್ಲ "ಇತಿ ಶ್ರೀ ಜಾಯೇಂದೃ
ವಿರಚಿತ ರಸಮಂಜರಿ ಸಂಪೂರ್ಣಂ '' ಎಂದಿದೆ. ಐದರಲ್ಲಿ ಒಟ್ಟು ೧೨೭ ಪದ್ಯಗಳಿವೆ.
38 ಭಾನುದತ್ತನು ವಿದೇಹ ದೇಶದವನು. ಇವನ ಕಾಲ ಕ್ರಿ.ಶ. ೧೫ನೆಯ ಶತ
ಮಾನದ ಉತ್ತ ರಾರ್ಥವಾಗಿರಬಹುದು. ರಸವಿಷಯಕವಾದ ಇವನ ಗ್ರಂಥಗಳು ಎರಡು :
(೧, ರಸಮಂಜರೀ, (೨) ರಸತರಂಗಿಣೀ. ಇವುಗಳಲ್ಲ, ನಾಯಿಕೆಯರ ನಿರೂಪಣಿಯನ್ನೇ
'ಪೃಥಾನ ವಿಷಯವಾಗಿ ಉಳ್ಳ ರಸಮಂಜರಿ ಹೆಡ್ಚು ಪ್ರಸಿದ್ಧವಾಗಿದೆ.
ಭಾನ:ದತ್ತನ ಅನೇಕ ಅಭಿಪ್ರಾಯಗಳನ್ನು ಖಂಡಿಸಿ ನಾಯಕಾನಾಯಿಕಾ ವಿಚಾರ
ವನ್ನು ವಿಸ್ತಾರವಾಗಿ ಪ್ರತಿಪಾದಿಸುವ " ಶೃಂಗಾರ ಮಂಜರೀ' ಎಂಬ ಸಂಸ್ಕೃತ ಗ್ರಂಥ
ವನ್ನು ಇತ್ತೀಚಿಗೆ ಎ. ರಾಘವನ್ ಅವರು ಸಂಪಾದಿಸಿ ಒಳ್ಳೆಯ ಅವತರಣಿಕೆಯೊಡನೆ
ಪ್ರಕಟಸಿದ್ದಾರೆ. ಈ ಗ್ರಂಥವನ್ನು ಬರೆದಾತನು ಸಂತ ಅಕ್ಜರ್ ಷಹ ಎಂಬ ಮುಸ್ಲಿಮ್
ಕವಿ; ತೆಲುಗಿನಲ್ಲಿ ತಾನು ಬರೆದ ಗ್ರಂಥವನ್ನು ಸಂಸ್ಕೃತಕ್ಕೆ ಪರಿಪರ್ತಿಸಿರುನುದಾಗಿ
ಅತನೇ ಹೇಳಿಕೊಂಡಿದ್ದಾನೆ. ಈತನ ಕಾಲ ಕ್ರಿ. ಶೆ. ಸು. ೧೬೪೬ ೧೬೭೮,
ಪರಿಶಿಷ್ಟ ೪೭೧
ಎಂದು ಕಿರಿಯರಸಿ ಸುರು ಸವತಿಮತ್ಸರದಿಂದ ಪರಿಹಾಸಗರ್ಭಿತವಾಗಿ
ನುಡಿದರಂತೆ. ಆಗ,
"- ಆ ಕಾಂತೆಯಲಂಕೃತಿಗಳ
ಸಾಕಲ್ಪದೆ ತಿಳಿಹುದಿಂತು ಪಳಿಯೆಲ್ ಕುಂದೇಂ |
ಆಕೆಯಸಮ ಲಲಿತೋದಾ-
ರೈಕಾವಳಿ ಭೂಪಿತಾಂಗಿಯೆಂದಾರರಿಯರ್ ॥ ” (i. ೧೯೮)
ಎಂದು ಲಿಂಗರಾಜನು ಅವರಂತೆಯೇ ತಾನೂ ಅಲಂಕಾರಗಳ ಹೆಸರು
ಗಳನ್ನೇ ಉಪಯೋಗಿಸಿ ಚಮತ್ಕಾರವಾಗಿ ಉತ್ತರಕೊಡಲು, ತಮ್ಮ
ಪ್ರಿಯನಿಗೆ ಇಪ್ಪವಾದ ಅಲಂಕಾರಗಳು ಯಾವುವೆಂದು ತಿಳಿಯುವ ಇಚ್ಛೆ
ಈ ಇಬ್ಬರು ಪತ್ನಿಯರಿಗುಂಟಾಯಿತು, ಅವರ ಅಪೇಕ್ಷೆಯನ್ನು ಸಲ್ಲಿಸಲು
ಒಂದೊಂದು ಅಲಂಕಾರಕ್ಕೂ ಲಕ್ಷಣಹೇಳಿ ಲಕ್ಷ್ಯವಾಗಿ ಅವರ ತಂದೆಯಾದ
ಕೃಷ್ಣನರಪತಿಯ ಗುಣಗಳನ್ನು ವರ್ಣಿಸುವ ಪದ್ಯಗಳನ್ನು ಅಳಿಯ ಲಿಂಗ
ರಾಜನು ರಚಿಸಿದನಂತೆ !
ಈ ಗ್ರಂಥದಲ್ಲಿ ಅನುಪ್ರಾಸವೆ ಮೊದಲಾದ ಶಬ್ಧಾಲಂಕಾರ
ಗಳನ್ನೂ "' ಉಪಮೆ '' ಯಿಂದ *' ಹೇತು” ವಿನವರೆಗೆ ಅರ್ಥಾಲಂಕಾರ
ಗಳನ್ನೂ ಈತನು ಹೇಳಿದ್ದಾನೆ. ನಿರೂಪಣಿ ಕುವಲಯಾನಂದವನ್ನು
ಅನುಸರಿಸುತ್ತದೆ.
ಕ್ರಿ.ಶ... ಹತ್ತೊಂಬತ್ತನೆಯ ಶತಮಾನ ಮುಂದುವರಿದಂತೆಲ್ಲ,
ಇಂಗ್ಲಿ ಪ್ ವಿದ್ಯಾಭ್ಯಾಸ ದೇಶದಲ್ಲಿ ಹರಡಿತು, ಹಬ್ಬಿ ತು; ಹೊಸ ರೀತಿಯೆ
ಶಾಲೆಗಳೂ ಕಾಲೇಜುಗಳೂ ಸ್ಥಾಪಿತವಾದುವು. ಅವುಗಳಲ್ಲಿಯೂ ಬೇರೆ
ಕಡೆಗಳಲ್ಲಿಯೂ ಕನ್ನಡವನ್ನು ಓದುವ ವಿದ್ಯಾರ್ಥಿಗಳ ಉಪಯೋಗಕ್ಕಾಗಿ
ವ್ಯಾಕರಣ, ಛಂದಸ್ಸು ಅಲಂಕಾರ ಮೊದಲಾದವನ್ನು ಸಂಗ್ರಹಿಸಿ ಹೇಳುವ
ಗ್ರಂಥಗಳು ಹುಟ್ಟತೊಡಗಿದುವು. ಅಂಥ “ ಕೈಪಿಡಿ » ಗಳಿಗೆ ಒಂದು
ನಿದರ್ಶನವಾಗಿ, ಚೆನ್ನ ಪಟ್ಟಣದ ಚಾವಲಿ ರಾಮಸ್ವಾಮಿಶಾಸ್ತ್ರಿ ಎಂಬಾತನು
ರಚಿಸಿದ " ಕರ್ಣಾಟಕ ಛಂದೋಲಂಕಾರ ಸಾಹಿತ್ಯಲಕ್ಷಣ ಸಂಗ್ರಹ
ಎಂಬುದನ್ನು ಕುರಿತು ಎರಡು ಮಾತನ್ನು ಹೇಳಬಹುದು. ಈ ಬಗೆಯ
89. ಇದು ೧೮೮೫ರಲ್ಲಿ ಮದರಾಸಿನಲ್ಲಿ ಮುದ್ರಿತವಾಗಿದೆ. ಈ ಗ್ರಂಥದ ಹೆನೆರಾ
ಗಲಿ ಗ್ರಂಥಕಾರನ ಹೆಸರಾಗಲಿ ಕವಿಚರಿತೆಯಲ್ಲ ಉಕ್ತವಾಗಿಲ್ಲ.
೪೭೨ ಭಾರತೀಯ ಕಾವ್ಯಮಿಾಮಾಂಸೆ
ಗ್ರಂಥಗಳಲ್ಲಿ ಬಹುಶಃ ಇದೇ ಮೊದಲನೆಯದು. ಈ ಗ್ರಂಥಕಾರನು
ನೀಲಗಿರಿಯಲ್ಲಿ ಕನ್ನಡ ಪಾಠಗಳನ್ನು ಹೇಳುತ್ತಿರುವಾಗ "" ಕರ್ಣಾಟ
ವಿದ್ಯಾರ್ಥಿಗಳಾದ ದೊಡ್ಡ ಮನುಷ್ಯರು ಕೆಲವರು '' ಇಂಥದೊಂದು
ಗ್ರಂಥವನ್ನು ಬರೆಯಬೇಕೆಂದು ಈತನನ್ನು ಪ್ರೇರಿಸಿದರಂತೆ. ಇದರಲ್ಲ
«" ಪ್ರಾಚೀನ ಪುಸ್ತಕಗಳಿಂದ ಸಂಗ್ರಹಿಸಿದ ವಿಷಯಗಳನ್ನು ಸೇರಿಸಿ ಕೆಲವು
ಭಾಗಕ್ಕೆ ಅರ್ಥಸಂಗ್ರಹ ವಿವರಣಾದಿಗಳನ್ನು ರ್ಪಡಿಸಿರು '' ವುದಾಗಿ
" ಉಪೋದ್ಭಾತ ' ದಲ್ಲಿ ಹೇಳಿದೆ. |
ಇದರಲ್ಲಿ ಗ್ರಂಥಕಾರನು "ಛೆಂದೋಂಬುಧಿ"ಯನ್ನು ಬಲುಮಟ್ಟಿಗೆ
ಅನುಸರಿಸಿ ಛಂದಸ್ಸನ್ನು ಐದು ಪ್ರಕರಣಗಳಲ್ಲ ಹೇಳಿ, ೪ ಶಬ್ನಾಲಂಕಾರ,
ಅರ್ಥಾಲಂ೦ಕಾರ, ಸಾಹಿತ್ಯಲಕ್ಷಣ, ನಾಟಕ, ಕಾವ್ಯ ನಣದೋಪ, ರಸ. _
ಎಂಬ ವಿಷಯಗಳನ್ನು ಒಂದೊಂದು ಪ್ರಕರಣದಲ್ಲಿ ನಿರೂಪಿಸಿದ್ದಾನೆ.
ಸಾಪಿತ್ಯಲಕ್ಷಣ ಪ್ರಕರಣದಲ್ಲ _ನಾಯಕನಾಯಿಕೆಯರ ಗುಣಪ್ರಭೇದಾದಿ
ಗಳು, ಕಾವ್ಯಲಕ್ಷಣ, ಶಬ್ದವೃತ್ತಿಗಳು, ಅರ್ಥನಿರ್ಣಯಕಗಳು, ಕೈತಿಕಿ
ಮೊದಲಾದ ವೃತ್ತಿಗಳು, ರ್ಲೀತಿಶಯ್ಯಾಪಾಕಗಳು, ಹದಿನೆಂಟು ವರ್ಣನೆ
ಗಳು_ ಇವನ್ನೆಲ್ಲಾ ಹೇಳಿದ್ದಾನೆ. ಕನ್ನಡದ ಲಕ್ಷಣವಾಬ್ಮ ಯದಲ್ಲಿ ನಾಟಕ
ಲಕ್ಷಣ ಮೊಟ್ಟ ಮೊದಲಿಗೆ ಕಾಣಿಸಿಕೊಂಡಿರುವುದು ಇಲ್ಲ. ಈತನ ವಿಷಯ
ಪ್ರತಿಪಾದನೆ ಬಲುಮಟ್ಟಿಗೆ ಟಿಪ್ಪಣಿಯ ರೂಪದಲ್ಲಿ ಸಂಕ್ಷಿಪ್ತವಾಗಿಗೆ ;
ಪಗ್ರಿಢವಿಚಾರಕ್ಕಾ ಗಲಿ ಚರ್ಜೆಗಾಗಲಿ ಕೈಹಾಕಿಲ್ಲ. ಉದಾಹರಣಿಗಳನ್ನು
ಕೆಲವುವೇಳೆ ಪಿಂದಿನ ಗ್ರಂಥಗಳಿಂದ ತೆಗೆದೂ, ಕೆಲವುಷೇಳೆ ಸಂಸ್ಕೃತ
ದಿಂದ ಸಂಗ್ರಪಿಸಿಯೂ, ಕೆಲವುಪೇಳೆ ಸ್ವಂತವಾಗಿ ಕಲ್ಪಿಸಿಯೂ ಈತನು
ಕೊಟ್ಟಿದ್ದಾನೆ. ಲಕ್ಷ್ಯಲಕ್ಷಣಗಳಲ್ಲ ಬಹುಭಾಗ ಹೊಸಗನ್ನಡ ಗದ್ಯ
ದಲ್ಲಿಯೇ ಇರುವುದು ಗಮನಾರ್ಹವಾಗಿದೆ. ಕಾವ್ಯಾವಲೋಕನ, ಜಗ
ನ್ನಾಥವಿಜಯ, ಗಿರಿಜಾಕಲ್ಯಾಣ, ರಾಜಶೇಖರವಿಲಾಸ, ಕುಮಾರ
ವ್ಯಾಸಭಾರತ, ಚೆನ್ನಬಸವಪುರಾಣ, ಜೈಮಿನಿಭಾರತ ಇಂಥ ಪ್ರಸಿದ್ಧ
ಗ್ರಂಥಗಳಿಂದ ಮಾತ್ರವಲ್ಲದೆ, ಕಾಮರಾಜವಿಜಯ, ಕಬ್ಬಗಳ ಕವಳಿಗೆ,
40 ಶ್ಲೋಕದ ಒಂದು ವಿಶೇಷ ಪ್ರಕಾರಕ್ಕೆ ಉದಾಹರಣಿಯಾಗಿ ಈತನು ತನ್ನನ್ನೇ
ಕುರಿತು ರಚಿಸಿರುವ ಪದ್ಯವನ್ನು ಇಲ್ಲ ಕೊಡಬಹುದು :
ಚಾವಲ್ಲೀ ಗೃಹನಾಮ ಶ್ರೀ | ರಾಮಸ್ವಾಮಿ ಮನೀಷಿಗಳ್ |
ಭಾವಲಕ್ಷಣ ಸಾಹಿತ್ಯ ಛಂದಸ್ಸಂಗ್ರಹಕಾರಿಗಳ್ 1 (ಪು. ೨೪)
ಪರಿಶಿಷ್ಟ ೪೭೩
ತಶಿರೇಖಾಪರಿಣಯ, ತೃಂಗಾರರಂಗ_ ಈ ಮೊದಲಾದ ಅಪ್ರಚುರ ಗ್ರಂಥ
ಗಳಿಂದಲೂ 4! ಈತನು ಉದಾಹರಣಿಗಳನ್ನು ಆರಿಸಿಕೊಂಡಿದ್ದಾನೆ.
ಈ ಗ್ರಂಥದಿಂದ ಕೆಲವು ಭಾಗಗಳನ್ನು ಉದ್ಭರಿಸಿ ಕೆಳಗೆ ಕೊಟ್ಟಿದೆ:
ಅನ್ಯೋನ್ಯಭ.೦೨ ॥ ಎರಡು ವ್ಯಕ್ತಿಗಳಿಗೆ ಪರಸ್ಪರ ದ್ರಮ ಹೆ.ಟ್ರುವಿಕೆ॥
ಉ॥ ಅಳಿಪಲಾಶ ಮುಕುಳಗೆತ್ತು | ಗಿಳಿಯ ತುಂಡಕಾಗಿ ಬರಲು | ಗಿಳಿಯು
ಜಂಬುಫಲವಿದೆನುತ |ಲಳಿಯನೆಳಸಿತು ॥ ಅಲಂಕಾರರತ್ನಾವಳಿ 12 |
(ಪು. ೫೬)
ವ್ಯಂಜಕಕ್ಕೆ | ಒ೦ದು ವಾಕ್ಯವನ್ನು ಪ್ರಕೃತೋಚಿತವಾಗಿ ಪ್ರಯೋಗಿಸುವುದ
ರಿ೦ದ ಗೂಢಮಾದ ಮತ್ತೊಂದರ್ಥವು ಕೇಳಿದವರ ಮನಸ್ಸಿಗೆ ತಾನಾಗಿ ತಿಳಿಯೆ
ಬರುವಂತೆ ಮಾಡುವುದು. ಕೆಲವರಿದನ್ನು ಅನ್ಯಾ ಪದೇಶಪೆಂತಲೂ ಹೇಳ:ವರು,
ಉದಾ. (ಬಾಯಿ ಬಿಡದಿದ್ದರೆ ಕೋಗಿ ಯೆಂದು ಹೇಗೆ ತಿಳದೀತು) ಈ ಮಾತಿ
ನಿಂದ ಕಲತ ವಿದ್ಯೆಯನ್ನು ಬಹಿರಂಗಗೊಳಿಸದಿದ್ದರೆ ವಿದ್ಯಾಂಸನೆಂದು ತಿಳಿಯಲ್ಪಡ
ಲಾರನೆಂಬ ಅರ್ಥ ತೋರುತ್ತೆ. ಹೀಗೆ ತೋರುವುದೇ ವ್ಯಂಗಾರ್ಥವು ಈ
ಯರ್ಥವನ್ನು ಕೊಡುವ ಮಾತೇ ವ್ಯಂಜಕಶಬ್ಬವು. (ಪು. ೬೪)
ರೀತಿಯೆಂದರೆ ಮಾತಾಡುವ ಬಗೆ. ಇದು ಸ೦ಸ್ಕ್ಯತದಲ್ಲ ವಿಇರ್ಭದೇಶದ್ದು,
ವೈದರ್ಭಿರೀತಿ ; ಗೌಡದೇಶದ್ದು | ಗನೌಿಡೀರೀೀತಿ ; ಪಾ೭ಚಾಲದೇಶದ್ದು, ಪಾಂಜಾ
ಲೀ ರೀತಿ ಎಂಬ ಹಾಗೆಯೇ ಕನ್ನಡೆದಲ್ಬಯೂ ಮೈಸೂರು, ಮಂಗಳೂರು, ಧಾರ್ಯಾಡ
ವೆಂಬ ಕನ್ನಡದ ಮೂರು ಬಗೆಗಳುಂಟು. (ಪು. ೬೭)
ರಸಿಕರು ॥ ರಸಲಕ್ಷಣವಂ ತಿಳಿದು ಶ್ರಾವ್ಯದೃಶ್ಯಕಾವ್ಯಗಳಿಂದ ಆತ್ಮಾನಂದ
ಸ್ವರೂಪವಾದ ರಸವನ್ನು ಗ್ರಹಿಸಲ'ಠ್ಯ ಜ್ಞಾನಿಗಳು, ಇವರೇ ಪಂಡಿತರು ॥ ಇವರೇ
ರಸಜ್ಜ. ರು. ರಸಾನುಭವವೇ ಕಾವ್ಯಕ್ಕೆ ಫಲೀಭೂತ ಪ್ರಯೋಜನವು॥ (ಪು, ೯೫)
ಸಾಂಪ್ರದಾಯಿಕವಾದ ಅಲಂಕಾರಶಾಸ್ತ್ರ್ರಗ್ರಂಥಗಳ ಪೆಂಕ್ತಿ
ಯಲ್ಲಿ ಕೊನೆಯದಾಗಿ "" ಅಲಂಕಾರ''ಗಳ ನಿರೂಪಣಿಗೇ ಮಾಸಲಾಗಿ
ಹೊರಬಿದ್ದ ಎರಡು ಪದ್ಯಾನುವಾದಗಳನ್ನು ನಿರ್ದೇಶಿಸಬಹುದು : (೧)
ಸಿದ್ಧಾಂತಿ ಶಿವಶಂಕರತಾಸ್ತ್ರಿಯ "ಕರ್ಣಟಕ ಚಂದ್ರಾಲೋಕ' (೧೮೯೭);
4! ಈ ಗ್ರಂಥಗಳಲ್ಲಿ ಯಾವುವೂ ಕವಿಡರಿತೆಯಲ್ಲ ಉಕ್ತವಾಗಿಲ್ಲ. '
12 "ಅಲಂಕಾರ ರತ್ನಾವಳಿ'ಯ ಹೆಸರು ನಮಗೆ ಗೋಚರವಾಗುವುದು ಇಲ್ಲಿ ಮಾತ್ರ.
ಈ ಉದಾಹರಣಿ "ಕುವಲಯಾನಂದ'ದಲ್ಲನ " ಪಲಾಶಕುಸುವಭ್ರಾಂತ್ಯಾ,,.' ಎಂಬುದರ:
ಅನುವಾದ ; ಇದು ಭೋಗಪಟ್ಟದಿಯ ಅರ್ಥವೆಂಬುದನ್ನೂ ಗಮನಿಸಬಹುದು.
೪೪ ಭಾರತೀಯ ಕಾವ್ಯಮಾಮಾಂಸೆ
ಇದರಲ್ಲಿ ಸಂಸ್ಕೃತ ಚಂದ್ರಾಲೋಕದ ಅರ್ಥಾಲಂಕಾರ ಭಾಗವನ್ನು ೨೦೦
ಕಂದಪದ್ಯಗಳಲ್ಲಿ ಕನ್ನಡಿಸಿ, "ಅಲಂಕಾರ ಚಂದ್ರಿಕೆ' ಎಂಬ ತಾತ್ಸರ್ಯಟೀಕಾ
ವಿವರಣವನ್ನು ಕೊನೆಯಲ್ಲ ಕೊಟ್ಟಿದೆ. (೨) ಅಕ್ಕಲೆ ಲಕ್ಷ್ಮೀನರಸಿಂಹ
ಶಾಸ್ತ್ರಿಯ «ಕರ್ಣಾಟಕ ಚಂದ್ರಾಲೋಕ ' (೧೯೦೫); ಇದರಲ್ಲಿ ಕೆಲವು
ತಬ್ದಾಲಂಕಾರಗಳನ್ನೂ ಪ್ರಾರಂಭದಲ್ಲಿ ಹೇಳಿದೆ. "ಕನ್ನಡಿಗರಾದ
ಅಲಂಕಾರ ವಿದ್ಯಾರ್ಥಿಗಳು ಅಲಂಕಾರ ವಿದ್ಯಾರ್ಥಿಗಳೇ ಆದರಲ್ಲಾ !”
ಎಂದು ಮರುಗಿ ಅವರಿಗಾಗಿ ವಿಷಯವನ್ನು ಸುಲಭಪಡಿಸಬೇಕೆಂಬ
ಉದ್ದೇಶದಿಂದ ರಚಿಸಿದ ಅನುವಾದ ಇದು. ಲಕ್ಷ್ಯಲಕ್ಷಣಗಳು ಕಂದ
ಪದ್ಯದಲ್ಲೂ ವೃತ್ತಿ ವಿವರಣೆಗಳು ಹೊಸಗನ್ನಡಗದ್ಯದಲ್ಲೂ ಇವೆ.
ಈ ಎರಡು ಅನುವಾದಗಳೂ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಟ್ಟು
ಕೊಂಡಿವೆ. ನಮ್ಮ ಅಲಂಕಾರಗ್ರಂಥಗಳಲ್ಲಿ ಶೃಂಗಾರಪರವಾದ ಉದಾ
ಹರಣಿಗಳೇ ತುಂಬಿರುವುದೂ, ಅವು ಕೆಲವು ವೇಳೆ ಅತಿರೇಕಕ್ಕೆ ಹೋಗು
ವುದೂ ಎಲ್ಲರಿಗೂ ತಿಳಿದ ವಿಷಯ. ಇಂಥ ಉದಾಹರಣಿಗಳನ್ನು ತಮ್ಮ
ಅನುವಾದಗಳಲ್ಲಿ ಹಾಗೆಯೇ ಇಟ್ಟುಕೊಳ್ಳುವುದು ಸರಿಯಲ್ಲವೆಂದು ಈ
ಗ್ರಂಥಕರ್ತರಿಗೆ ತೋರಿತು. ಮೊದಲನೆ ಯಾತನು ಅವತೃವೆನಿಸಿದ
ಕಡೆಗಳಲ್ಲಿ ಪರ್ಯಾಯೋದಾಹರಣಿಗಳನ್ನು ಕಲ್ಪಿಸಿ, ಅವನ್ನು ಅನುಬಂಧ
ರೂಪದಲ್ಲಿ ಬೇರೆಯಾಗಿ ಕೊಟ್ಟಿ ದ್ಧಾನೆ ; ಮೂಲದ ಉದಾಹರಣಿಗಳನ್ನೂ
ಉಳಿಸಿಕೊಂಡಿದ್ದಾನೆ. ಎರಡನೆಯಾತನಾದರೆ,
ಇದು ತಚ್ಚ ಎ೦ಗಾರಾಭಾ.
ಸಮದಾಹರಣದೆ ಜರಕ್ಕೆ ಸೊಗಸದೆನುತ್ತ೦ |
ಸದುದಾಹರಣ:ಗಳನೇ
ಪುದುಂಗೊಳಿಸಿ ಪೇಳ್ಳೆನಬಿಲ ಪಠನ್ನೀಯುಮೆನಲ: ॥ (ii: ೧)
ವಂದು ಅರ್ಥಾಲಂಕಾರ ಪ್ರಕರಣದ ಪ್ರಾರಂಭದಲ್ಲಿ ತಿಳಿಸಿ, ತನಗೆ
ಸಮ್ಮತವಾದ ಯಉದಾಹರಣಿಗಳನ್ನೇ ಗ್ರಂಥಶರೀರದಲ್ಲಿ ಅಳವಡಿ
ಸಿದ್ಧಾನೆ. ರುಚಿಪರಿವರ್ತನೆಯ ದೃಷ್ಟಿಯಿಂದ ಇದು ಗಮನಾರ್ಹವಾದ
ಸಂಗತಿ
ಕ್ರಿ. ಶ. ೯ನೆಯ ಶತಮಾನದ ಮಧ್ಯದಿಂದ ಮೊದಲುಮಾಡಿದ ಈ
*"ಚರಿತ್ರೆ'ಯನ್ನು ೨೦ನೆಯ ಶತಮಾನದ ಪ್ರಾರಂಭಕ್ಕೆ ತಂದು ಇನ್ನು
ಪರಿಶಿಷ್ಟ ೪೭೫
ನಿಲ್ಲಿಸಬಹುದು... ಕನ್ನಡ ಲಕ್ಷಣ ಗ್ರಂಥಗಳಲ್ಲಿ ಉಕ್ತವಾಗಿರುವ ವಿಷಯ
ಗಳ ಎಲ್ಲ ಮೂಲರೇಖೆಗಳೂ ಬಲುಮಟ್ಟಿಗೆ ಎಲ್ಲ ವಿವರಗಳೂ ಸಂಸ್ಕೃತ
ದಿಂದಲ್ಲೇ ಬಂದವು. ಅಲ್ಲಿ ಕಾಲದಿಂದ ಕಾಲಕ್ಕೆ ತತ್ತ್ವದಲ್ಲೂ ವಿಚಾರ
ದಲ್ಲೂ ಪ್ರತಿಪಾದನೆಯಲ್ಲೂ ಉಂಟಾದ ಪರಿವರ್ತನೆಗಳ ಛಾಯೆ ಒಮ್ಮೆ
ಸ್ಫುಟವಾಗಿ ಒಮ್ಮೆ ಅಸ್ತುಟವಾಗಿ ಕನ್ನಡ ಗ್ರಂಥಗಳಲ್ಲೂ ಸ.ಳಿಯುತ್ತದೆ.
ಕನ್ನಡದಿ ಪೇಳ್ಗು ವೆಲ್ಸವು
ನನ್ನವೆ ಸಕ್ಕದದಲಿರ್ದುದದರಿಂ ಪೆರತೇಂ |
ಇನ್ನೊರೆವರಾರುವುದನೇ
ಚೆನ್ನಾಗಿಯೆ ನೋಡೆ ಕನ್ನಡವು ಕನ್ನಡಿಯೇ ॥
ಎಂದು ಚಾವಲಿ ರಾಮಸ್ಕಾಮಿಶಾಸ್ತಿ, ಛಂದಸ್ಸಿನ ವಿಷಯದಲ್ಲಿ
ಹೇಳಿರುವುದು, 4« ಅಲ್ಲಿ ಗಿಂತ ಚೆನ್ನಾಗಿ ಅಲಂಕಾರಶಾಸ್ತ್ರ, ವಿಷಯಕೆ
ಒಪ್ಪುತ್ತದೆ. ಬೆಟ್ಟಕ್ಕೆ ನಿಲುವುಗನ್ನಡಿ ಪಿಡಿದು ತೋರಿಸುವ ಕೆಲಸವನ್ನು
ನಮ್ಮವರು ಮಾಡಿದ್ದಾರೆಂದು ಹೇಳೆಬಹುದು. ಸಂಸ್ಕೃತದ ಗ್ರಂಥ
ವಿಸ್ತಾರವನ್ನೂ ವಿಷಯವಮೈವಿಧ್ಯವನ್ನೂ ನಿರೂಪಣಮೈಖರಿಯನ್ನೂ ನೋಡಿ
ದರೆ, ಕನ್ನಡದ ಸಾಧನೆ ಅಲ್ಪವೆನಿಸುವುದು ಸಹಜ. ಆದರೆ ಪೀಗಾಗಲು
ಕಾರಣವಿಲ್ಲದಿಲ್ಲ. ನಮ್ಮ ದೇಶದಲ್ಲಿ ಹಿಂದೆ ಎಲ್ಲ ಶಾಸ್ತ್ರಗಳಿಗೂ ಸಂಸ್ಕೃ
ತವೇ ನೆಲೆವೀಡಾಗಿದ್ದಕಾರಣ, ಎಲ್ಲ ವಿದ್ಯಾ೦ಸರೂ ಸಂಸ್ಕೃತವನ್ನು ಅರಿ
ತಿರಲೇ ಬೇಕಾಗಿದ್ದಕಾರಣ, ಲಕ್ಷಣ ಗ್ರಂಥಗಳನ್ನು ಕನ್ನಡದಲ್ಲಿ ಓದಿ
ಕೊಂಡು ವಿಷಯಗ್ರಹಣಮಾಡಬೇಕಾದ ಅವಶ್ಯಕತೆ ವಿದ್ಯಾವಂತರಿಗೆ
ಸಾಮಾನ್ಯವಾಗಿ ಇರುತ್ತಿರಲಿಲ್ಲ. ಆದ್ದರಿಂದ ಈ ಬಗೆಯ ಶಾಸ್ತ್ರೈಗ್ರಂಥ
43 ವಿದ್ಯಾರ್ಥಿಗಳ ಬೇರೆ ಬೇರೆ ದರ್ಜೆಗಳಿಗೆ ಅನುಗುಣವಾಗಿ ೧೯ನೆಯ ಶತಮಾನದ
ಉತ್ತರಭಾಗದಲ್ಲಿ ರಚಿತವಾದ ಲಕ್ಷಣ ಸಂಗ್ರಹಗಳು ಕೆಲವುಂಟು. ಇವುಗಳ ವಿಷಯವನ್ನು
ಇಲ್ಲಿ ವಿಸ್ತರಿಸುವುದು ಅನಾವಶೃಕವೆಂದು ಭಾವಿಸಿ ಬಟ್ಟದೆ.
ಕವಿಚರಿತೆಯ ಮೂರು ಸಂಪುಟಗಳಲ್ಲಿ ಬೇರೆಲ್ಲಿಯೂ ಉಕ್ತವಾಗಿಲ್ಲದ ಗ್ರಂಥಗಳ
ಪಟ್ಟಿಯನ್ನು ಕವಿಚರಿತೆ, 111ರ ಅನುಬಂಧದಲ್ಲ (ಪು. ೪೧೮-೪೩೩) ಕೊಟ್ಟದ್ದಾರೆ. ಇದ
ರಲ್ಡಿ__ಕವಿಸಮಯ, ಕುವಲಯಾನಂದ ಟೀಕೆ, ರಸಚಂದ್ರಿಕೆ, ರಸರತ್ನಸಮುಡ್ವಯ,
ರಸಸಾರಸಂಗ್ರಹಟೀಕೆ, ತೃಂಗಾರಮಂಜರಿಯ ಟೀಕೆ ಎಂಬ ಹೆಸರುಗಳು ದೊರೆಯುತ್ತವೆ.
ಈ ಗ್ರಂಥಗಳು ಕಾವ್ಯಮಾಮಾಂಪೆಗೆ ಸಂಬಂಧಪಟ್ಟವೆಂದು ತೋರುತ್ತದೆ. ಅದರೆ ಇವು
ಗಳನ್ನು ಕುರಿತ ಹೆಚ್ಚಿನ ಸಂಗತಿಯೇನೂ ತಿಳಿಯುವುದಿಲ್ಲ.
44 ಕರ್ಣಾಟ ಛಂದೋಲಂಕಾರ ಸಾಹಿತ್ಯಲಕ್ಷಣ ಸಂಗ್ರಹ, ಪು. ೪೦-೪೧.
೪೭೬ ಭಾರತೀಯ ಕಾವ್ಯಮಾಮಾಂಸೆ
ಗಳು ಕನ್ನಡದಲ್ಲಿ ಹುಟ್ಟುವುದು ವಿರಳವಾಯಿತು, ಬಲುಮಟ್ಟಿಗೆ ಅನಪೇಕ್ಷಿ
ತವೂ ಆಯಿತು. ಹೀಗೆ ಉತ್ತೇಜನವೇ ಇಲ್ಲದಿದ್ದರೂ, ಕೆಲವುಮಂದಿ
ಕನ್ನಡ ವಿದ್ಯಾಂಸರಿಗಾದರೂ ಸ್ಫೈಭಾಷೆಯ ಈ ಅರಕೆಯನ್ನು ಪೂರ್ಣ
ಮಾಡಬೇಕೆಂಬ ತೀವ್ರಾಸಕ್ತಿ ಹುಟ್ಟಿ ಕೆಲವು ಒಳ್ಳೆಯ ಲಕ್ಷಣ ಗೃಂಥಗಳು
ಕಾಲಕಾಲಕ್ಕೆ ತಲೆದೋರಿದ್ದು ಸಮಾಧಾನದ ವಿಷಯ, ಅರ್ವಾಚೀನ
ವಾದ ಒಂದು ಚಿಕ್ಕ ಪುಸ್ತಕವನ್ನು ಬಿಟ್ಟರೆ ನಾಟಕಲಕ್ಷಣವನ್ನು ಯಾರೊ
ಬ್ಬರೂ ಹೇಳಿಯೇ ಇಲ್ಲವೆಂಬುದು ನಿಜ; ಧೃನಿಸ್ಟರೂಪವನ್ನೂ ರಸ
ಸ್ವರೂಪವನ್ನೂ ತಳಮುಟ್ಟಿ ನಿರೂಪಿಸುವ ಪ್ರಥಮಶ್ರೇಣಿಯ ಗ್ರಂಥಗಳು
ಇಲ್ಲವೆಂಬುದು ನಿಜ. ಆದರೂ ಮಿತನಿರೀಕ್ಷೆಯಿಂದ ನಾವು ಹೊರಟರೆ,
ಭಾರತೀಯ ಕಾವ್ಯಮಾಮಾಂಸೆಯ ತಕ್ಕಮಟ್ಟಿನ ಪರಿಚಯವನ್ನು ಕನ್ನಡದ
ಲಕ್ಷಣಗ್ರ೦ಥಗಳಿಂದ ಕ್ಲೇತವಿಲ್ಲದೆ ಪಡೆಯಬಹುದು.
ಇಪ್ಪತ್ತನೆಯ ಶತಮಾನದಲ್ಲಿ ಇಂಗ್ಲಿಪಿನ ನಿಕಟಸಂಪರ್ಕದಿಂದ
ಅಲ್ಲಿಯ ಸಾಹಿತ್ಯ ರಾತಿಯ ಪರಿಚಯವೂ ವಿಮರ್ಶನ ದೃಷ್ಟಿಯೂ ನಮ್ಮಲ್ಲಿ
ಬಲಿಯಿತು. ಇತ್ತ ಸಂಸ್ಕೃತ ಗ್ರಂಥಗಳ ಪರಿಶೋಧನೆಯೂ ಪರಿಶೀಲ
ನೆಯೂ ಹೊಸಮಾರ್ಗದಲ್ಲಿ ನಡೆಯಿತು. ಇದೆಲ್ಲದರ ಫಲ ಕನ್ನಡದ ಬರೆ
ವಣ್‌ಗೆಯಲ್ಲೂ ಗೋಚರವಾಗತೊಡಗಿದೆ. ಎಣಕೆಗೆ ಮಿತವಾದರೂ ಗುಣ
ದಲ್ಲಿ ಉತ್ತಮವಾದ ಕೆಲವು ಸ್ವತಂತ್ರ ಗ್ರ ೦ಥಗಳೂ ಸಾರಸಂಗ್ರಹಗಳೂ
ವಿಮರ್ಶೆಗಳೂ ಲೇಖನಗಳೂ ಈಗಾಗಲೆ ಹೊರಬಿದ್ದಿವೆ ; ಕಾವ್ಯಮಾ
ಮಾಂಸೆಯ ಕ್ಷೇತ್ರವೇ ವಿಸ್ತರಿಸಿದೆ. ಆದರೆ ಈ ಸಮಕಾಲೀನ ರಚನೆಗಳ
ವಿಚಾರಕ್ಕೆ ನಮ್ಮ “ಚರಿತ್ರೆಯಲ್ಲಿ ಅವಕಾಶವಿಲ್ಲ. ಇವುಗಳನ್ನು ಓದಿ
ಯಥಾಮತಿಯಾಗಿ ನಾವು ಪಡೆದಿರುವ ಪ್ರಯೋಜನಕ್ಕಾಗಿ ಒಟ್ಟು ಕೃ ತಜ್ಞ ತೆ
ಯನ್ನು ಮಾತ್ರ ಇಲ್ಲಿ ಸಲ್ಲಿಸಬಹುದು.
ಈ ಗ್ರಂಥದಲ್ಲಿ ಉದಾಹರಿಸಿರುವ ಅಥವಾ ಸ್ಮರಿಸಿರುವ
ಲಾಕ್ಷಣಿಕರು ಮತ್ತು ಲಕ್ಷಣಗ್ರಂಥಗಳು
(ಸೂಚನೆ... -ಅವಶ್ಯವೆಂದು ತೋರಿದ ಕಡೆಗಳಲ್ಲಿ ಮಾತ್ರ ಮುದ್ರಣ, ಪ್ರಕಾಶಕರು,
ದೊರೆಯುವ ಸ್ಥಳ ಮೊದಲಾ ವನ್ನು ನಿರ್ದೇಶಿಸಿದೆ.)
೧. ಸಂಸ್ಕೃತ
ಅಪ್ಪಯ್ಯದೀಕ್ಷಿತ-__ಕುವಲಯಾನಂ೦ದ (ರಸಿಕರಂಜನೀ ವ್ಯಾಖ್ಯಾನದೊಡನೆ, ಕುಂಭ
ಕೋಣಂ, ೧೮೯೨)
ಚಿತ್ರಮಾಮಾಂಸಾ
ಅಭಿನವಗುಪ್ತ ಅಭಿನವಭಾರತೀ (ಭರತನ ನಾಟ್ಯಶಾಸ್ತ್ರದ ಮೇಲನ
ವ್ಯಾಖ್ಯಾನ): ೮08-1701. 1 (ಅಧ್ಯಾಯಗಳು ೧-೭) ;
Vol. I1 (ಅಧ್ಯಾಯಗಳು ೮.೧೮) ; ಮಿಕ್ಕ ಸಂಪುಟಗಳು
ಪ್ರಕಟವಾಗಿಲ್ಲ.
ಕಾವ್ಯಕೌತುಕ ವಿವರಣ (ಗ್ರಂಧ ದೊರೆತಿಲ್ಲ)
ಧ್ವನ್ಯಾಲೋಕ ಲೋಚನ (ಅನಂದವರ್ಧನನ ಧ್ವನ್ಯಾಲೋಕದ
ಮೇಲಿನ ವ್ಯಾಖ್ಯಾನ) ೧-೩ ಉದ್ದೋೋತಗಳು : ನಿರ್ಣಯ
ಸಾಗರ ಪ್ರೈಸ್ಟಿನ ೧೯೧೧ನೆಯ ಇಸವಿಯ ಮುದ್ರಣ. ೪ನೆಯ
ಉದ್ವ್ಯೋತ ; Journal of the Department of
Letters, Calcutta University, Vol. IX, pp. 25-49
ಅಮೃ ತಾನಂದ(ಯೋಗಿ) ಅಲಂಕಾರ ಸಂಗ್ರಹ(--ಅಮೃತಾನಂದೀಯ)
ಆನಂದವರ್ದನ._ ಧ್ವನ್ಯಾಲೋಕ
(೧) ನಿರ್ಣಯಸಾಗರ ಪೈಸ್ಲಿನ ೧೯೧೧ನೆಯ ಇಸವಿಯ
(ದ್ವಿತೀಯ) ಮುದ್ರಣ : ಅನ್ಯಥಾ ಹೇಳಿದ್ದ ಹೊರತು ನಮ್ಮ
ಗ್ರಂಥದಲ್ಲನ ನಿರ್ದೇಶಗಳು ಈ ಮುದ್ರಣವನ್ನೇ ಉದ್ದೇ
ಶಿಸಿದವು.
(೨) ಮೊದಲನೆಯ ಉದ್ಮ್ಯೋತ ಮಾತ್ರ. ಕುಪ್ಮಸ್ಟಾಮಿ
ಶಾಸ್ತಿ) ರಿಸರ್ಚ್ ಇ೯ಸ್ತಿಟ್ಯೂಟನ ಪ್ರಕಟನೆ, ೧೯೪೪
(= ಮದರಾಸು ಸಂಸ್ಕರಣ). ಇದರಲ್ಲಿ "ಲೋಚನ 'ದ
ಮೇಲಿನ ಟೀಕೆಯಾದ ಉತ್ತುಂಗೋದಯನ "ಕೌಮುದಿ
ಯೂ ಇದೆ.
(೩) ಶ್ರೀರಾಮ ಪಾರಕನ " ಬಾಲಪ್ರಿಯಾ' ವ್ಯಾಖ್ಯಾನ ಮೊದ
ಲಾದಪುಗಳೊಡನೆ, Ks. ಕ
ಉದ್ದ ಟ.__ಕಾವ್ಯಾಲಂಕಾರಸಾರಸಂಗ್ರಹ (ಪ್ರತೀಹಾರೇಂದುರಾಜನ ವ್ಯಾಖ್ಯಾನ
ದೊಡನೆ)
೪೭೭
೪೭೬೮ ಭಾರತೀಯ ಕಾವ್ಯಮಿಮಾಂಹೆ
ಭಾಮಹವಿವರಣ (ಗ್ರಂಥ ದೊರೆತಿಲ್ಲ)
ಕುಂತಕ_ ವಕ್ರೋಕ್ತಿ ಜೀವಿತ (ಎಸ್. ಕೆ. ದೇ ಅವರ ಎರಡನೆಯ ಮುದ್ರಣ)
ಕೃ ಪ್ಸಬ ))ಹ್ಮತಂತ್ರ ಪರಕಾಲಯತೀಂದ್ರ--ಅಲಂಕಾರಮಣ್‌ಹಾರ
ಕ್ಷೇಮೇಂದ್ರ--ಔಚಿತ್ಯವಿಚಾರಚರ್ಚಾ
ಕವಿಕಂಠಾಭರಣ
ಗೋವಿಂದ _ಕಾವ್ಯಪ್ರದೀಪ
ಜಗನ್ನಾಥ--ಚಿತ್ರಮಾಮಾಂಸಾ ಖಂಡನ
ರಸಗಂಗಾಧರ (ನಿರ್ಣಯಸಾಗರ ಪ್ರೆಸ್ಸಿನ ೧೯೩೦ರ ಮುದ್ರಣ)
ಜಯದೇವ__ಚಂದ್ರಾಲ್ಲೋಕ
ದಂಡೀ- -ಕಾವ್ಯಾದರ್ಶ
(೧) ಎಸ್. ಕೆ. ಬೆಳ್ಳಲ್ಕರ್ ಅವರ ಮುದ್ರಣ, ೧೯೨೪.
(೨) ಎಂ. ರಂಗಾಚಾರೃರ ಮುದ್ರಣ, ಮದರಾಸು.
ಧನಂಜಯ. ದಶರೂಪಕ (ಧನಿಕನ ವ್ಯಾಖ್ಯಾನದೊಡನೆ)
ಪ್ರಕಾತವರ್ಷ--ರಸಾರ್ಣವಾಲಂಕಾರ
ಪ್ರಭಾಕರ. _ರಸಪ್ರದೀಪ
ಭಟ್ಟತೌತ__ ಕಾವ್ಯಕೌತುಕ (ಗ್ರಂಧ ದೊರೆತಿಲ್ಲ)
ಭಟ್ಟ ನಾಯಕ_ಹೃದಯದರ್ಪಣ (ಗ್ರಂದ ದೊರೆತಿಲ್ಲ)
ಭರತ-- ನಾಟ್ಯಶಾಸ್ತ್ರ)
(೧) ೫೩6 ಮುದ್ರಣ.
(೨) G೦8 ಮುದ್ರಣ (ಅಭಿನಪಭಾರತಿಯೊಡನೆ): 170]. 1 (ಅಧ್ಯಾಯಗಳು
೧-೭), 1701. II (ಅಧ್ಯಾಯಗಳು ೮.೧೮); ಮಿಕ್ಕ. ಸಂಪುಟಗಳು
ಅಚ್ಚಾಗಿಲ್ಲ.
(೩) ನಿರ್ಣಯಸಾಗರ ಪ್ರೆಸ್ ಮುದ್ರಣ.
ಭಾನುದತ್ತ-._. ರಸತರಂಗಿಣೀ
ರಸಮಂಜರೀ
ಭಾಮಹ. _ಕಾವ್ಯಾಲಂಕಾರ
ಭೋಜರಾಜ-ಶೃಂಗಾರಪ್ರ ಕಾಶ (ಗ್ರಂಧದ ಬಹುಭಾಗ ಅಚ್ಚಾಗಿಲ್ಲ)
ಸರಸ್ವತೀ ಕಂಠಾಭರಣ
ಮಮ ಕಾವ್ಯಪ್ಪ ರ್ರಕಾಶ
(೧) ಮೈೊಸೂರು. ಓರಿಯೆಂಟಲ್ ಲೈೊಬ್ರೆರಿಯ ಮುದ್ರಣ್ಮ " ಸಂಕೇತ '
ವ್ಯಾಖ್ಯಾನಯೊಡನೆ.
ಪರಿಶಿಷ್ಟ ೪೭೯
(೨) TSS ಮುದ್ರಣ, ಸಂಪ್ರದಾಯ ಪ್ರಕಾಶಿನೀ ಮತ್ತುಸಾಪಿತ್ಯ ಚೂಡಾ
ಮಣ ವ್ಯಾಖ್ಯಾನಗಳೊಡನೆ, ಎರಡು ಸಂಪುಟಗಳಲ್ಲಿ,
(೩) ಬೊಂಬಾಯಿ ಸರ್ಕಾರದ ಪ್ರಕಟನೆ ವಾಮನಾಚಾರ್ಯ ರುಳಕೀಕರರ
ವ್ಯಾಖ್ಯಾನದೊಡನೆ.
(೪) ೧, ೨ಮತ್ತು ೧೦ನೆಯ ಉಲ್ಲಾಸಗಳು ಮಾತ್ರ--ಎ. ಬಿ. ಗಜೇಂದ್ರ
ಗಡಕರರ ಪೀಠಿಕೆ ಮತ್ತು ವಿಸ್ತಾರವಾದ ಟಪ್ಪಣಿಗಳೊಡನೆ.
ತಬ್ದವ್ಯಾಪಾರವಿಚಾರ
ಮುಕುಲಭಟ್ಟ-- ಅಭಿಧಾವೃತ್ತಿಮಾತೃ ಕಾ
ಮಹಿಮಭಟ್ಟ. ವೈ ಕ್ತಿವಿವೇಕ (ರುಯ್ಯಕನ ವ್ಯಾಖ್ಯಾನದೊಡನೆ)
(೧) TSS ಮುದ್ರಣ.
(೨) ೫5೮ ಮುದ್ರಣ (ನಮ್ಮ ಗ್ರಂಥದ ನಿರ್ದೇಶಗಳಲ್ಲನ ಪುಟಸಂಖ್ಯೆ
ಗಳು ಈ ಮುದ್ರಣಕ್ಕೆ ಅನ್ವಯಿಸುತ್ತವೆ.)
ರಾಜಶೇಖರ. ಕಾವ್ಯಮಾಮಾ೦ಸಾ (608, ೧೯೩೪ರ ಮುದ್ರಣ)
ರಾಮಚಂದ್ರ ಮತ್ತು ಗುಣಚಂದ್ರ. -ನಾಟ್ಯದರ್ಪಣ
ರುದ್ರಟ_ _ಕಾವ್ಯಾಲಂಕಾರ
ರುದ್ರಭಟ್ಟ 0 ೦ಗಾರತಿಲಕ
ರುದ್ರಭಟ್ಟ —ರಸಕಲಿಕಾ (1೦81-7೫ 1020 ಸಂಜೈಯ ಕ್ಯೊಬರೆಹದ ಪ್ರತಿ)
ರುಯ್ಯಕ--ಅಲಂಕಾರಸರ್ವಸ್ಥ
(೧) ನಿರ್ಣಯಸಾಗರ ಪ್ರೆಸ್ ಮುದ್ರಣ ; ಜಯರಥನ ವ್ಯಾಖ್ಯಾನದೊಡನೆ.
(೨) 766 ಮುದ್ರಣ, ಸಮುದ್ರಬಂಧನ ವ್ಯಾಖ್ಯಾನದೊಡನೆ. (ಸೂತ್ರಗಳ
ಕರ್ತೃ ರುಯ್ಯಕನೆಂದೂ "ಸರ್ವಸ್ಯ'ದ ಕರ್ತೃ ಅವನ ಶಿಷ್ಯನಾದ
ಮಂಖುಕನೆಂದೂ ಇದರಲ್ಲಿ ಉಕ್ತವಾಗಿದೆ.)
ನಾಟಕಮಾಮಾಂಸಾ (ಗ್ರಂಥ ಡೊರೆತಿಲ್ಲ)
ಸಾಹಿತ್ಯವಿಸಾಮಾಂಸಾ (ಗ್ರಂಥ ದೊರೆತಿಲ್ಲ)
ರೂಪಗೋಸ್ಟಾಮಿ-_ಉಜ್ಜ್ಯಲ ನೀಲಮಣಿ
ಭಕ್ತಿರಸಾಮೃತಸಿಂಧು
ಲೊಲ್ಲಟ--ಭರತನಾಟ್ಯಶಾಸ್ತ್ರ್ರದ ವ್ಯಾಖ್ಯಾನ (ಗ್ರಂಥ ದೊರೆತಿಲ್ಲ)
ವಾಗ್ಭಟ 1. ವಾಗೃಟಾಲಂಕಾರ
ವಾಗ್ಭಟ 11- -ಕಾವ್ಯಾನುಶಾಸನ
ವಾಮನ. _ಕಾವ್ಯಾಲಂಕಾರ ಸೂತ್ರವೃತ್ತಿ
ವಿದ್ಯಾಧರ--ಏಕಾವಲೀ
ವಿದ್ಯಾನಾಥ--ಪ್ರತಾಪರುದ್ರಯಶೋಭೂಷಣ (ಎಪ್ರತಾಪರುದ್ರೀಯೆ
ಲಂ ಭಾರತೀಯ ಕಾವ್ಯಮಾಮಾಂಸೆ
ವಿಶ್ವನಾಥ--ಸಾಪಿತ್ಯದರ್ಪಣ
ಶಂಕುಕ___ಭರತನಾಟ್ಯಶಾಸ್ತ್ರ ದ ವ್ಯಾಖ್ಯಾನೆ (ಗ್ರಂಥ ದೊರೆತಿಲ್ಲ)
'ಶಾರದಾತನೆಯ-ಭಾವಪ್ರಕಾತನ
ಶಾರ್ಜಡೇವ-ಸಂಗ್ನೀತರತ್ನಾಕರೆ (ಅನಂದಾಶ್ರಮದ ಮುದ್ರಣ)
ಸಂತ ಅಕ್ಸರ್‌ಪಹೆ-ಶೃಂಗಾರಮಂಜರ್ಲೀ
ಸಾಗರನಂದ್ದೀ _ನಾಟಕಲಕ್ಷಣರತ್ನ ಕೋಶ
ಸಿಂಗಭೂಪಾಲ. _ರಸಾರ್ಣವಸುಧಾಕರ (= ಸಿಂಗಭೂಪಾಲ್ಲೀಯ)
ಹೇಮಚಂದ್ರ. _ಕಾವ್ಯಾನುಶಾಸನೆ (ನಿರ್ಣಯಸಾಗರ ಪ್ರೆಸ್ಸಿನ ೧೯೩೪ರ ಮುದ್ರಣ
? - ಅಗ್ನಿಪುರಾಣ (ಅಲಂಕಾರ ಭಾಗ)
? .ಅಣುಓಗದಾರಸುತ್ತ (ಎ ಅನುಯೋಗದ್ದಾರ ಸೂತ್ರ)
(ಪ್ರಾಕೃತಭಾಷೆಯ ಗ್ರಂಥ)
? --ಸಾಹಿತ್ಯಮಾಮಾಂಸಾ (788 ಮುದ್ರಣ)
೨. ನ್ನಡ
ಉದಯಾದಿತ್ಯ..ಉದಯಾದಿತ್ಯಾಲಂಕಾರ (ಕರ್ಣಾಟಕ ಕಾವ್ಯಮಂಜರಿ,
೧೮೯೪)
ಕವಿಕಾಮದೇವ. _ಶೃ೦ಗಾರರತ್ನಾಕರ (ಕರ್ಣಾಟಕ ಕಾವ್ಯಮಂಜರಿ, ೧೮೯೪)
ಗಣೀಶ್ವರಾಗ್ನಿ-_-ಸಾಹಿತ್ಯಸಂಜ್ಲೀವನ (ಗ್ರಂಥ ದೊರೆತಿಲ್ಲ)
ಜಾಯೇಂದ್ರ (ನಜಾಯಗೊಂಡ ದೇಸಾಯಿ) -ಕುವಲಯಾನಂದಾಲಂಕಾರ
ತಾಸ್ತ್ರ [ರ್ ಕರ್ಣಟತ ಕುವಲಯಾನಂದ) (13. ೦೫೫ -
KA 300 ಸಂಖ್ಯೆಯ ಕೈ ಬರೆಹದ ಪ್ರತಿ)
ರಸಮಂಜರಿ (- ಶೃ ೦ಗಾರತಿಲಕ) (ಶ್ರೀ ಡಿ. ಎಲ್. ನರಸಿಂಹಾ
ಚಾರ್ಯರ ಬಳಿ ದೊರೆತ ಕೈಬರೆಹದ ಪ್ರತಿ)
ತಿಮ್ಮ (ತಿಮ್ಮ ಯ್ಯ)___ಅಲಂಕಾರರಸಸಂಗ್ರಹೆ (ಇನವರಸಾಲಂಕಾರ)
(ಮೈಸೂರು ಶಾಸನದ ಇಲಾಖೆಯವರ ಬಳಿ ದೊರೆತ ಓಲೆ
ಗರಿಯ ಪ್ರತಿ)
ತಿರುಮಲಾರ್ಯ. ಅಪ್ರತಿಮವೀರಿಚರಿತ (ಕರ್ಣಾಟಕ ಕಾವ್ಯಮಂಜರಿ, ೧೮೯೩ ;
ಪರಿಷ್ಕೃತ ದ್ವಿತೀಯ ಮುದ್ರಣ, ೧೯೩೧)
ಪರಿಶಿಷ್ಟ ೪೮೧
ನಾಗವರ್ಮ 11.__ಕಾವ್ಯಾವರೋಕನ
(೧) ರಾ. ನರಸಿಂಹಾಚಾರ್ಯರಿಂದ ಸಂಪಾದಿತ, ೧೯೦೩.
(೨) ಮೇಲಿನದರ ಪರಿಷ್ಕೃತ ದ್ವಿತೀಯ ಮುದ್ರಣ, ಮೈೊಸೂರು
ಓರಿಯೆಂಟಲ್ ಲೈಬ್ರೆರಿ, ೧೯೩೯.
(೩) ಪಿ. ಶಿ. ಬಸವನಾಳ ಮತ್ತು ಕೇಪು ಶಂಕರನಾರಾಯಣ
ಐಪರಿಂದ ಸಂಪಾದಿತ, ೧೯೩೯,
ಮಾಧವ ಮಾಧವಾಲಂಕಾರ (Mys OR 1-.-1೭0 48 ಸೆಂಖ್ಯಯ ಕ್ವೊ ಬರೆಹದ
ಪ್ರತಿ)
ರಾಮಸ್ವಾಮಿತಾಸ್ತ್ರಿ, ಚಾವಲಿ ಕರ್ಣಾಟಕ ಛಂದೋಲಂಕಾರ ಸಾಹಿತ್ಯ
ಲಕ್ಷಣ (ಮದರಾಸಿನ ಗ್ರಂಥರತ್ನಾಕರ ಮುದ್ದಾಕ್ಷರ ಶಾಲೆ, ೧೮೮೫)
ಲಕ್ಷ್ಮೀನರಸಿಂಹಶಾಸ್ತ್ರಿ, ಅಕ್ಕಲೆ_ಕರ್ಣಟಕ ಚಂದ್ರಾಲೋಕ (ಕರ್ಣಾಟಕ
ಗ್ರಂಥಮಾಲೆ, ೧೯೦೫)
ಲಿಂಗರಾಜ, ಅಳಿಯ. _ನರಪತಿ ಚರಿತ (ಕರ್ಣಾಟಕ ಗ್ರಂಥಮಾಲೆ)
ಶಿವತಂಕರಶಾಸ್ತ್ರಿ, ಸಿದ್ಧಾಂತಿ ಕರ್ಣಾಟಕ ಚಂದ್ರಾಲೋಕ (ಬೆಂಗಳೂರು
ಸಿಟಿ ಬುಕ್ ಡಿಪೋ ಮುದ್ಪಾಕ್ಟರಶಾಲೆ, ೧೮೯೭)
ಶ್ರೀವಿಜಯ (1)-_-ಕವಿರಾಜಮಾರ್ಗ
(೧) ಕೆ. ಬಿ. ಖಾಠಕರಿಂದ ಸಂಪಾದಿತ, ೧೮೯೮
(೨) ಎ. ವೆಂಕಟರಾವ್ ಮತ್ತು ಎಚ್. ಶೇಷಯ್ಯಂಗಾರ್
ಅವರಿಂದ ಸಂಪಾದಿತ, ೧೯೩೦
ಪಾಳ್ಚ. -ರಸರತ್ನಾಕರ (ಎ. ವೆಂಕಟರಾವ್ ಮತ್ತು ಎಚ್. ಶೇಷಯ್ಯಂಗಾರ್
ಅವರಿಂದ ಸಂಪಾದಿತ, ೧೯೩೨)
ಸಾಳ್ವ (2)-._ಶಾರದಾವಿಲಾಸ (ಎ. ವೆಂಕಟರಾವ್ ಮತ್ತು ಎಚ್. ಶೇಷಯ್ಯಂಗಾರ್
ಅವರಿಂದ ಸಂಪಾದಿತ, ೧೯೩೨)
--ಅಲಂಕಾರ ರತ್ನಾವಳಿ (ಗ್ರಂಥ ದೊರೆತಿಲ್ಲ)
೫. 2, 31
ಪಯುಕ್ತ ಲೇಖನಾವಳಿ
[ಸೂಚನೆ.. -ಮುಖ್ಯವಾದ ಕೆಲವು [ಪುಸ್ತಕಗಳ ಮತ್ತು ಲೇಖನಗಳ ಹೆಸರುಗಳನ್ನು
ಮಾತ್ರ ಇಲ್ಲ ಕೊಟ್ಟಿದೆ. ನಾವು ಉಪಯೋಗಮಾಡಿಕೊಂಡಿರುವ ಲೇಖನಾದಿಗಳನ್ನು ಬಹು
ಮಟ್ಟಿಗೆ ಗ್ರಂಥದೊಳಗೇ, ಮುಖ್ಯವಾಗಿ ಅಡಿಟಪ್ಪಣಿಗಳಲ್ಲಿ, ನಿರ್ದೇಶಿಸಿರುವುದ೦ಂದ,
ಅವುಗಳಲ್ಲ ಹಲವನ್ನು ಇಲ್ಲ ಮತ್ತೆ ಹೆಸರಿಸುವ ಗೋಜಿಗೆ ಹೋಗಿಲ್ಲ.]
೧. ಗೆ ಕ ಂಥಗಳು
5, 10, DE: Studies in the Histor, of Sau:krit Puctics, 2
Volumes (==Sunskrit Poetics)
P. V. KANE: History of Alankiara Literature, 1923 (Printed
as Introduction to his edition of the Sihityadarpana}
(=Alankiara Literature)
A.B. KEITH: History of Sauskrit Literature (=:Sauskrit
Literature)
Sanskrit Drama
2. 0. LAHIRI: Conecopts of Riti and Guna iv Sanskrit Poetics
(=Riti and Guna)
J- NOBEL: The Foundations of Indian Poetry
P. PANCAPAGESA SASTRI: The Philosophy of Aosthetic
Pleasure
V. RAGHAVAN: Bloja’s Srngiira Prakiii1, Vol. 1-- Parts
1 and 2
The Number ೦! Rasus
Some Concepts ೦! Alankira 673688 (-=Some Concepts)
K. 5. RAMASWAMI SASTRI: 7೧6141 Aesthetics
P. S. SUBBARAMA PATTAR: Studies in Dhvanyaloka
A. SANKARAN: Soe Aspests ೦. Litorary Criticism in
Sanskrit (=Rasa an! 1೧1೬71)
ಆತ್ಮ ರಾಮಶಾಸ್ತ್ರಿ ಓಡ್ಡಮನೆ : ನಾಟಕಕಲೆ
ಎ. ಆರ". ಕೃಷ್ಣಶಾಸ್ತ್ರೀ ಮತ್ತು ಕಾನಕಾನಹಳ್ಳಿ ವರದಾಚಾರ್ :
"ಕನ್ನಡ ಕೈಪಿಡಿ' ಯ ೧ನೆಯ ಸಂಪುಟದಲ್ಲಿ ಮೂರನೆಯ ಭಾಗ
("ಅಲಂಕಾರ')
೪೮೨
ಪರಿಶಿಪ್ಟ ೪೮೩.
ಡಿ. ವಿ. ಗುಂಡಪ್ಪ : ಜೀವನಸೌಂದರ್ಯ ಮತ್ತು ಸಾಪಿತ್ಯ
ರವೀ೦ದ್ರನಾಥ ಠಾಕೂರ: ಸಾಪಿತ್ಯ (ಎ. ಎ೯. ನರಸಿಂಹಯೃನವರ ಅನುವಾದ)
ಹಾಸನ ನರಸಿಂಹಶಾಸ್ತ್ರಿ : ಸಾಹಿತ್ಯಾಲಂಕಾರ
ರಾ. ನರಸಿಂಹಾಚಾರ್ಯ : ಕರ್ಣಾಟಕ ಕವಿಚರಿತೆ(- ಕವಿಡೆರಿತೆ)--ಮೂರು
ಸಂಪುಟಗಳು
ಎಸ್. ವಿ. ರಂಗಣ್ಣ : ಶೈಲ
ಮಂ. ಆ. ರಾಮಾನುಜಯ್ಯಂಗಾರ್ : ಕವಿಸಮಯ
ಮಾಸ್ತಿ ವೆಂಕಟೇಶ ಅಯ್ಯಂಗಾರ್ : ಸಾಹಿತ್ಯ
೨. ಲೇಖನಗಳು
೮, K. DE: The Theory of Rasa in Sanskrit 3006108 (Sir Asutosh
Mookerjyee Silver Jubilee Volumes, Vol. 188 : Orientalia
-—Part 9)
21. HIRIYANNA: Indian Acstbeties (POC, Poona, Vol. 2)
What to expect of Poetry (Mysore University Magazine,
December, (1923)
Art Experience (The Ayan Path; January 1941)
V. RAGIIAVAN: Writers quoted in the Abhinavabharaii
(10811, 01. 1:1)
1. W. THOMAS: The Making of a Sanskrit Poet (R. G.
Bhandarkar Com. Volume)
ಎ. ಆರ್. ಕೃಷ್ಣಶಾಸ್ತ್ರೀ: ಅಲಂಕಾರ ಶಾಸ್ತ್ರದ ಚರಿತ್ರೆ (೧)
(ಪ್ರಬುದ್ಧ ಕರ್ಣಾಟಕ, 1. ೨)
"ಗೆಳೆಯರ ಗುಂಪಿ'ನ ಒಬ್ಬ ಗೆಳೆಯ: ಪ ತಿಭೆ (ಪರಿಪತ್ನತ್ರಿಕೆ, 7111. ೩)
ತೋಗೆರೆ ನಂಜುಂಡಶಾಸ್ತ್ರೀ: ರಸನಿರೂಪಣಂ (ಪರಿಷತ್ಪತ್ರಿಕೆ, ೪1. ೩)
ಎಸ್. ವಿ. ರಂಗಣ್ಣ : ಸಾಹಿತ್ಯದ ಸ್ವರೂಪ (ಪ್ರಬುದ್ಧಕರ್ಣಾಟಕ,
ಸಾಹಿತ್ಯದ ಆವಶ್ಯಕತೆ ( .... ೫೪1೪)
ಜಿ. ಪಿ. ರಾಜರತ್ನಂ : ಕನ್ನಡ ಕಪಿಕಾವ್ಯಪ ಸಂಗ (ಪರಿಷತ್ಪತ್ರಿಕೆ, ೫1೪. ೩)
ಕರ್ಪೂರ ಶ್ರೀನಿವಾಸರಾವ್ : ಸಾಹಿತ್ಯಶಾಸ್ತ್ರ ವಿಚಾರ
೧... ಕವಿಗಳ ಸಾಮ್ರಾಜ್ಯ (ಪರಿಷತ್ಪತ್ರಿಕೆ, 1111, ೪)
ಕ ಸಾಪಿತ್ಯಶಾಸ್ತ್ರ ದ ಪೂರ್ವವೃತ್ತಾಂತ ( , ೫11. ೧)
೪೮೪ ಭಾರತೀಯ ಕಾವ್ಯಮಾಮಾಂಸೆ
೩. ಕಾವ್ಯಸ್ವರೂಪವಿಚಾರ (ಪರಿಷತ್ಪತ್ರಿಕೆ, ೫111, ೩)
೪. ಕಾವ್ಯಗಳ ನಿಪ್ಪತ್ತಿಯೂ ಪ್ರಯೋಜನವೂ( » 11 ೩)
೫. ಶಬ್ದದ ಅಭಿಧಾಶಕ್ತಿ ( ೫» ೩೧)
೬. ಶಬ್ದದ ಲಕ್ಷಣಾಶಕ್ತಿ (» ೫೩)
ಡಿ. ವಿ. ಶೇಷಗಿರಿರಾವ್ : ಕನ್ನಡದಲ್ಲಿ ಕಾವ್ಯಮಾರ್ಗ ("ನಂಭಾವನೆ')
ka
[೧೯೪೨ರಿಂದ ಈಚೆಗೆ ಪ್ರಕಟಿತವಾದ ಲೆಲುನಾನಿಗಳಲ್ಲ ಮುಖ್ಯವಾದ ಕೆಲವನ್ನು
ಈ ಕೆಳಗೆ ನಿರ್ದೇಶಿಸಿದೆ. ಈ ವೇಳೆಗಾಗಲೆ ನಮ್ಮ ಗ್ರಂಥವನ್ನು ಬರೆದು ಮುಗಿಸಿ ಅಚ್ಛಿಗೆ
ಕಳಿಸಿದ್ದ ಕಾರಣ, ಇವುಗಳಿಂದ ಹೆಚ್ಚಿನ ಉಪಯೋಗ ಪಡೆಯಲು ಸಹಜವಾಗಿಯೇ ಅವಕಾಶ
ವಿಲ್ಲವಾಯಿತು. ಗ್ರಂಥದ ಆಯಾ ಭಾಗಗಳು ಅಚ್ಚಾದ ಬಳಿಕ ಹೊರಬಿದ್ದವುಗಳನ್ನಂತೂ
ಅಲ್ಲಲ್ಲ ಸ್ಮರಿಸುವುದು ಕೂಡ ಅಶಕ್ಯವಾಯಿತು.]
5. KUPPUSWAMI SASTRI: Highways and Byways of Literary
Criticism in Sanskrit ((1945)
5, ೫, DASGUPTA and 5. K.DE: A History of Sanskrit Liter-
ature: Classical Period. Vol. 1 (1947)
. K. ©. PANDEY: Comparative Aostheticss Vol. 1—Indian
Aesthetics, 1950)
P. V- KANE: History of Sanskrit Poeties (1951)
ಐದೇ ಲೇಖಕರ History of Alankiva Litevaburs ಎ೦ಬ ಗ್ರಂಥದ ವಿಸ್ತರಿ
ಸಿದ ಪರಿಷ್ಕರಣ)
31, HIRIYANNA: The Problem of the Rasavadalamkira
(POC, Bombay)
Art Experience (Radhakrishnan; Co nparative 5611108 10
Philosophy presented ia honourof his sixtieth biithday
(1951)
ಕೌಲಗಿ ಶೇಷಾಚಾರ್ಯ 5 ಲಂಕಾರಶಾಸ ರ್ರಿ, (ಪಿ.ವಿ. ಕಾಣೇ ಅವರ ist ry
of Alankiira Literature ಎ೦ಬ ಗ್ರಂಥದ ಮರಾಠೀ ಭಾಷಾಂತರದ ಎರಡ
ನೆಯ ಭಾಗದ ಕನ್ನಡ ಅನುವಾದ)
ಡಿ. ವಿ ಗುಂಡಪ್ಪ : ಸಾಪಿತ್ಯಶಕ್ತಿ (೧೯೫೧)
ಕೆ. ಕೃಷ್ಣಮೂರ್ತಿ : ಆನಂದವರ್ಧನನ ಕಾವ್ಯವಿಸಮಾಂಸೆ ಮತ್ತು
ಕನ್ನಡ ಧ್ವನ್ಯಾಲೋಕ (೧೯೫೨)
(ಈ ಗ್ರಂಥದ ೨ನೆಯ ಪರಿಶಿಪ್ಟದಲ್ಲಿ, ಇದೇ ಲೇಖಕರು ಕಾಪ್ಯವಿಕಾಮಾಂಸೆ
ಯನ್ನು ಕುರಿತು ಇಂಗ್ಲಿಪಿನಲ್ಲ ಬರೆದು ಪ್ರಕಟಿಸಿರುವ ಅನೇಕ ಲೇಖನಗಳ
ಪಟ್ಟಿಯನ್ನು ಕೊಟ್ಟಿದ್ದಾರೆ.)